Appa Amma Quotes in Kannada (ಅಪ್ಪ ಅಮ್ಮ Quotes)

Best Appa Amma Quotes in Kannada

ಈ ಲೇಖನದಲ್ಲಿ ಅಮ್ಮಂದಿರು ಮತ್ತು ಅಪ್ಪಂದಿರ ಮಹತ್ವ ತಿಳಿಸುವ ಉಲ್ಲೇಖಗಳನ್ನು (appa amma quotes in kannada) ಸಂಗ್ರಹಿಸಿ ನಿಮಗಾಗಿ ನೀಡಿದ್ದೇವೆ. ನಿಮ್ಮ ಅಪ್ಪ ಅಮ್ಮ ನಿಮಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನಮಗೆ ಸಹಾಯ ಮಾಡುತ್ತದೆ. ಅವರ ಪ್ರೀತಿ ಏಕೆ ತುಂಬಾ ಮಹತ್ವದ್ದಾಗಿದೆ ಮತ್ತು ಪ್ರತಿಯಾಗಿ ನಾವು ಯಾವಾಗಲೂ ಅವರಿಗೆ ಪ್ರೀತಿ ಮತ್ತು ಗೌರವವನ್ನು ಏಕೆ ತೋರಿಸಬೇಕು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. 

ಇಡೀ ಜಗತ್ತಿನಲ್ಲಿ ನಿಮ್ಮನ್ನು ಹೆಚ್ಚು ಪ್ರೀತಿಸುವ ನಿಮ್ಮ ತಾಯಿ ಮತ್ತು ತಂದೆ ನಿಮ್ಮ ಜೀವನವನ್ನು ಉತ್ತಮಗೊಳಿಸಲು ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರ ಪ್ರೀತಿ, ಕಾಳಜಿಯು, ಅವರು ನಮಗೆ ಕಲಿಸುವ ಜೀವನ ಪಾಠಗಳು ನಮ್ಮನ್ನು ಅತ್ಯುತ್ತಮ ವ್ಯಕ್ತಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಈ ಲೇಖನದ ಕೊನೆಯಲ್ಲಿ ಹಲವು ಅಮ್ಮ ಅಪ್ಪ ಕುರಿತ ಕವನಗಳನ್ನು (amma appa kavana in kannada) ಸಹ ನೀಡಿದ್ದೇವೆ. ನೋಡುವುದನ್ನು ಮರೆಯದಿರಿ. 

Appa Amma Quotes in Kannada (Father and Mother Quotes in Kannada) | ತಂದೆ ತಾಯಿಯ ಬಗ್ಗೆ ನುಡಿಮುತ್ತುಗಳು

 

ಅಪ್ಪ – ಅಮ್ಮ. ಕಷ್ಟ ಕಾಲವಿದ್ದಾಗ ದೇವರು ಕೈ ಬಿಡಬಹುದು ಆದರೆ ಹೆತ್ತ ತಂದೆ ತಾಯಿ ಎಂದಿಗೂ ಕೈ ಬಿಡುವುದಿಲ್ಲ. ಅವರೇ ನಿಜವಾದ ದೇವರು.

 

ಹೆತ್ತ ಅಮ್ಮ ಅಪ್ಪನನ್ನು ಅವರಿರೋವರೆಗೂ ನೋಡಿಕೊಂಡ್ರೆ , ಅದರ ಒಳ್ಳೇ ಫಲ ನಿಮಗೆ ಬಂದೇ ತೀರೋದು . ‌. ನಮ್ಮ ಜೊತೆ ಅಪ್ಪ ಅಮ್ಮ ಇರೋದಲ್ಲ . . ಅವರ ಜೊತೆ ನಾವಿರೋದು ಈ ಹುಟ್ಟು , ಹೊಟ್ಟೆ , ಗಂಟು , ಬಟ್ಟೆ , ಜೀವ , ಜೀವನ ಎಲ್ಲಾ ಅವರ ಭಿಕ್ಷೆ . . ನೆನಪಿರಲಿ ಅಷ್ಟೇ.

 

ನನ್ನ ಬೆಳವಣಿಗೆ ಹಿಂದೆ, ಅಪ್ಪನ ತ್ಯಾಗ, ಪ್ರೀತಿ ಇದೆ. ನನ್ನ ಪ್ರೀತಿಯ ತಂದೆ ಅಂದ ತಕ್ಷಣವೇ ನೆನಪಾಗುವ ಮೊದಲ ಪದವೇ ತ್ಯಾಗಮಯಿ. ತಮ್ಮ ಜೀವನವನ್ನೆಲ್ಲ ನಮಗೋಸ್ಕರ ಬಿಸಿಲು, ಮಳೆ, ಚಳಿ ಯಾವುದಕ್ಕೂ ಬಗ್ಗದೇ ಹಗಲು-ಇರುಳು ಎನ್ನದೆ ದುಡಿದ ಅಪ್ಪ ನನ್ನ ಪಾಲಿಗೆ ಸರ್ವಸ್ವ. ತನಗೇನು ಬೇಕು ಎನ್ನುವುದಕ್ಕಿಂತ ನಮಗೆ ಏನು ಬೇಕು ಅಂತ ಯೋಚಿಸುತ್ತ, ಪ್ರೀತಿ ಕೂಟ್ಟು ಬಾಳಿ ನಮಗೆಲ್ಲ ದಾರಿದೀಪವಾಗಿ ಮರೆಯಾದ ಶ್ರಮಜೀವಿ ನಮ್ಮ ಅಪ್ಪಾ.

 

ಕಷ್ಟದ ಸಾವಲನ್ನು ಎದರಿಸುವ ಸಾಹುಕಾರ… ಮಗಳ ಭವಿಷ್ಯಕ್ಕೆ ಹಗಲು ರಾತ್ರಿ ದುಡಿದ ಕರುಣಾಕರ.. ಕರುಣೆಯ ಕರ್ಣ ಅಪ್ಪನ ಪ್ರೀತಿಗೆ ಸಾಟಿಯಿಲ್ಲ.

 

ಅಪ್ಪ‌ನ‌ ಹೆಗ‌ಲು ಹ‌ಗ‌ಲು ಇರುಳು ದುಡಿದು ದುಡಿದು ಸೊರ‌ಗಿವೆ ಅಪ್ಪ‌ನ‌ ಎರ‌ಡು ಹೆಗ‌ಲು ಬ‌ರ‌ಗಾಲ‌ವೆಂಬ‌ ಸಿಡಿಲು ಬ‌ಡಿದು ಕಾಡಿವೆ ಅಪ್ಪ‌ನ‌ನು ಮ‌ಳೆ, ಮುಗಿಲು ಜೋತುಬಿದ್ದಿದೆ ಮೈಯ‌ಮೇಲಿನ‌ ತೊಗ‌ಲು ಆದ‌ರೂ ಹೆದ‌ರುವ‌ದಿಲ್ಲಾ ಬಿಟ್ಟು ಹೋಗ‌ಲು ಸ‌ಲಿಕೆ ಗುದ್ದ‌ಲಿ ಹೆಗ‌ಲಿಗೆ ಹಾಕಿ, ರಾತ್ರಿ ಕ‌ತ್ತ‌ಲು ಬೆಳ‌ತ‌ನ‌ಕ‌ ಇಳೆಗೆ ಬೆಳೆಗೆ ನೀರು ಹಾಯಿಸ‌ಲು ತೇರಿನ‌ ಕ‌ಳ‌ಸ‌ ಕಾಣ‌ಲು ಹೆಗ‌ಲು ದೂರ‌ದ‌ ಜಾತ್ರೆಗೆ ಹೋಗ‌ಲು ಹೆಗ‌ಲು ಸೊಂಟ‌ವು ಸೋತ‌ರೆ ಅಪ್ಪ‌ನ‌ ಹೆಗ‌ಲು ಹ‌ಗ‌ಲು ಇರುಳು ನೊಗ‌ ಹೊತ್ತ‌ ಅಪ್ಪ‌ನ‌ ಹೆಗ‌ಲು.

 

ಒಂಬತ್ತು ತಿಂಗಳು ಹೊತ್ತು ಹೆತ್ತಿ, ಸರಿಯಾಗಿ ಏನು ತಿನ್ನೋಲ್ಲ ಅಂತ ಬರಿ ಹೊಟೇಲ್ ಇಡ್ಲಿ ತಿನ್ನಿಸಿ, schoolಗೆ ಬಿಟ್ಟಿ, ದಾರಿ ಉದ್ದಕ್ಕೂ ಅಳ್ತಾ, ಅವಗವಾಗ ಸ್ಕೂಲ್ ಹತ್ತಿರ ಬಂದು ಚಾಕ್ಲೆಟ್, ತಿಂಡಿ ಗಿಂಡಿ ಕೊಟ್ಟು, ಅಪ್ಪನ ಹತ್ತಿರ ಹಠ ಹಿಡಿದು ಬರ್ತ್ಡೇ ಆಚರಿಸಿ, ಹೆತ್ತೋರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಸ್ವಲ್ಪ ಬೆಳ್ಳಗೆ ಇದೀನಿ ಅಂತ ದಿನ ಕೆಂಪು ನೀರು ಮಾಡಿ ದೃಷ್ಟಿ ತೆಗೆದು, ದಿನಾ ನಾಲ್ಕ್ ಬಾರಿಸಿ ಪಾಠ ಹೇಳಿಕೊಟ್ಟಿ, ನಮಗೆ ಇಷ್ಟ ಪಟ್ಟಿದ್ದನ್ನ ದುಡ್ಡು ಕೂಡಿಟ್ಟು, ಇಲ್ಲ ಅಪ್ಪನಿಗೆ ಅರ್ಥ ಮಾಡಿಸಿ ಕೊಡಿಸಿ… ಅಪ್ಪನ ಜೊತೆ ಜಗಳ ಆಡಿ ಪಾಠದ ಜೊತೆ ಇತರೆ ಕಲೆಗಳಿಗೂ ಸಪೋರ್ಟ್ ಮಾಡಿ, ಕೊನೆಗೆ ಅಪ್ಪ ಇಲ್ಲವಾದಾಗ ಸ್ವಾವಲಂಭಿಯಾಗಿ ಮನೆ ಜವಾಬ್ಧಾರಿ ತಗೊಂಡು ಮಕ್ಕಳ ಭವಿಷ್ಯ ರೂಪಿಸಿ, ಮಗ ಎಲ್ಲಿ ಲೈನ್ ಹೊಡಿತಾನೋ ಅಂತ ಕಾವಲು ಕಾದಿ, ಕೊನೆಗೆ ಇಷ್ಟ ಪಟ್ಟಿದ ಹುಡುಗಿಯ ಜೊತೆನೇ ಮದುವೆ ಮಾಡಿ, ನನ್ನಂತ ಹಠಮಾರಿ, ಸೋಮಾರಿ, ಕೋಪಿಷ್ಟನನ್ನ ಸಹಿಸಿಕೊಂಡು ಒಂದ್ ರೆಂಜ್ಗೆ ತಂದ ನಿಮಗೆ, ತಾಯಂದಿರ ದಿನದ ಶುಭಾಷಯಗಳು… ಎಲ್ಲರ ಅಮ್ಮನ ಕಥೆ ಅಲ್ವಾ ಇದು… ಹಳೆ ಪದಗಳು, ಹಳೆ ಕವಿತೆ, ಯಾಕೆಂದರೆ ಯುಗಗಳು ಕಳೆದರು ತಲೆಮಾರುಗಳು ಬದಲಾದರು ಬದಲಾಗದ ಬಂಧ ಈ ತಾಯಿ ಸಂಬಂಧ…

 

ಅಪ್ಪ ಇರುವವರಿಗೂ ಬೆವರಿನ ಬೆಲೆ ಗೊತ್ತಾಗುವುದಿಲ್ಲ.

ಅಮ್ಮ ಇರುವವರಿಗೆ ಹಸಿವಿನ ಬೆಲೆ ಗೊತ್ತಾಗುವುದಿಲ್ಲ.

 

ನನ್ನ ಜೀವನದ ರಥ ನನ್ನ ತಂದೆಯಾದರೆ ಅದರ ಸಾರಥಿ ನನ್ನ ತಾಯಿ. ನನ್ನನ್ನ ನವ ಮಾಸ ಹೊತ್ತು ಹೆತ್ತ ನಿನಗೆ ತಾಯಂದಿರ ದಿನಾಚಾರಣೆಯ ಶುಭಾಶಯಗಳು.. ನನ್ನ ಪ್ರತಿ ಹೆಜ್ಜೆಗೂ ಜೊತೆಗಿದ್ದವಳು ನೀನು .. ಶಾಲೆ, ಕಾಲೇಜು, ಇನ್ಸ್ ಟಿಟ್ಯೂಷನ್, ನನ್ನ್ ವರ್ಕ್ ಪ್ಲೇಸ್, ನನ್ನ ಪ್ರತಿ ಕಾರ್ಯಕ್ರಮಕ್ಕೆ ನನ್ನ ಜೊತೆಯೇ ಬಂದು ನನ್ನೊಟ್ಟಿಗೆ ನನ್ನ ನೆರಳಿನಂತೆ ನಿಂತವರು ನೀನು ಹಾಗೂ ಅಪ್ಪ.. ಇಂಥಹ ಯೋಗ ಭಾಗ್ಯ ಸಿಕ್ಕಿದ ನಾನೆ ಪುಣ್ಯವತಿ.. ಲೋಕಾಪವಾದ ಸೀತೆಗೂ ಬಿಡಲಿಲ್ಲ.. ನಾನೇನು ಅಂಥ ನನ್ನ ನೋಡಿದ ನೀನು ಹಾಗೂ ಅಪ್ಪ ನನ್ನ ಕೈ ಬಿಡದೆ ನನ್ನ ಪ್ರತಿ ಯಶಸ್ಸಿನ ಹಾದಿಗೆ ಸೇತುವೆ ಆದಿರಿ. ಆಡಿಕೊಂಡವರು ಜೀವನಕ್ಕೆ ಬರುವುದಿಲ್ಲ ಎಂಬ ಧೈರ್ಯ ತುಂಬಿದವರು ನೀವು. ನಾನು ಇನ್ನೊಬ್ಬರಿಗೆ ನಾನು ಏನೆಂದು ನಿರೂಪಿಸುವುದು ಅನಗತ್ಯ ನನಗೆ ನನ್ನ ಹುಟ್ಟಿನಿಂದ ಕಂಡವರಿಗೆ ಗೊತ್ತು, ನನ್ನ ಆತ್ಮೀಯರಿಗೆ ಗೊತ್ತು ಮಿಗಿಲಾಗಿ ನನ್ನ ಹೆತ್ತವರಿಗೆ ಗೊತ್ತು ನನ್ನ ಬಗ್ಗೆ ಸಾಕು ನನಗೆ. ನನ್ನ ಪ್ರತಿ ನಿಲುವಿಗೂ, ನನ್ನ ಪ್ರತಿ ಹೆಜ್ಜೆಗೂ ಜೊತೆ ಇರುವ ನನ್ನ ಅಮ್ಮ ಅಪ್ಪನಿಗೆ ಕೋಟಿ ನಮನ.. ನನ್ನ ಆಯುಷ್ಯವನ್ನೂ ಸಹ ನನ್ನ ಅಪ್ಪ ಅಮ್ಮನಿಗೇ ದೇವರು ಕೊಟ್ಟು ನೂರು ಕಾಲ ನೆಮ್ಮದಿಯಿಂದ ಇರುವಂತಾಗಲಿ..

 

ಹೆತ್ತ ತಾಯಿ ಇರದಿದ್ದರೆ ರಸ್ತೆ ಬದಿಯಲ್ಲಿ ಇರುವ ಯಾರನ್ನಾದರೂ ಅಮ್ಮ ಕರೆದು ಸಂಬಂಧ ಬೆಳಸಬಹುದು ಆದರೆ ಅಪ್ಪ ಎನ್ನುವ ಕೂಗು ದೂರವಾದರೆ ಹೃದಯ ಒಡೆದು ಹೋಗುವತೆ ಅತ್ತರು ಅಷ್ಟು ದಿಕ್ಕುಗಳು ಕದಲುವಂತೆ  ಕಣ್ಣೀರು ಇಟ್ಟರು ಬರುವುದಿಲ್ಲ. ಏಕೆಂದರೆ ಆ ಕೂಗು ಕೇವಲ ತಂದೆಗೆ ಮಾತ್ರ.

 

ಅಮ್ಮ – ಈ ಪದಕ್ಕೆ ಸರಿಸಮಾನವಾದ ಪದ ಇನ್ನಾವುದೂ ಇಲ್ಲ, ಪದಕ್ಕಷ್ಟೇ ಅಲ್ಲ. ಅವಳು ತೋರುವ ಆ ನಿಸ್ವಾರ್ಥ ಮತ್ತು ನಿಷ್ಕಲ್ಮಶ ಪ್ರೀತಿ,ಕಾಳಜಿ,ವಿಶ್ವಾಸ ಮತ್ತು ಹಾರೈಕೆಯು ಈ ಜಗತ್ತಿನ ಯಾವ ವ್ಯಕ್ತಿಯಿಂದಲೂ ನೀಡುವುದು ಅಸಾಧ್ಯ. ಎಲ್ಲರಿಗೆ ಹೇಗೆ ಅವರ ತಾಯಿ ಅಚ್ಚುಮೆಚ್ಚೋ ಹಾಗೆ ನನಗೂ ಕೂಡಾ ಆಕೆ ನನ್ನ ದೇವತೆಯೇ ಸರಿ. ನನಗೆ ಅವಳು ಜನ್ಮ ನೀಡುವ ಮುನ್ನ ಅವಳ ಒಡಲೇ ಸ್ವರ್ಗ, ಈಗ ಅವಳ ಮಡಿಲೇ ಸ್ವರ್ಗ. ನನ್ನ ಪ್ರತಿ ಹಂತದ ಏಳ್ಗೆಗೆ ಅವಳ ಕೊಡುಗೆ ಅಪಾರ,ಅನನ್ಯ ಬಣ್ಣಿಸಲು ನನ್ನಲ್ಲಿ ಪದಕುಂಜದ ಕೊರತೆ ಎನ್ನುವ ಭಾವ, ಇದು ಪ್ರತಿ ತನ್ನ ಮಕ್ಕಳಲ್ಲಿ ಮೂಡುವ ಸಹಜ ಭಾವ ಏಕೆಂದರೇ ದೇವರನ್ನು ಪೂಜಿಸಲು ಮಾತ್ರ ಸಾಧ್ಯ.. ಅಮ್ಮಾ, ನಾನು ನಿನಗೆ ಹಿಡಿಸದ ಎಷ್ಟೋ ಕಾರ್ಯಗಳಿಗೆ ಅಣಿಯಾಗಿದ್ದೆನೆ, ಅವುಗಳನ್ನು ತಿದ್ದಿಕೊಂಡು ಮುಂದೆ ಸಾಗುವೆ, ಅದಕ್ಕಿಂತ ಮುಖ್ಯವಾಗಿ ನಿಮ್ಮ ಬಳಿ ನನಗೆ ಇರಲು ದೊರೆತ ಸಮಯ ತೀರಾ ಕಡಿಮೆ ಆದ್ದರಿಂದ ಬರುವ ದಿನಗಳಲ್ಲಿ ನಿಮ್ಮನ್ನು ಬಿಟ್ಟು ಕ್ಷಣ ಅಗಲದೇ ಇರುವೆನೆಂದು ಈ ಸಮಯದಲ್ಲಿ ಶಪಥ ಮಾಡುವೆ ಮತ್ತು ನನ್ನ ಭವಿಷ್ಯದ ಕಾಳಜಿ ಬಿಡಿ ಈ ದೇಶಕ್ಕೆ ಏನೋ ಒಂದು ಕೊಡುಗೆ ನನ್ನಿಂದ ಶತಸಿದ್ಧ, ಶತಾಯಗತಾಯ ಅದನ್ನು ನಾನು ಮಾಡೇ ತೀರುವೆ ನಿಮ್ಮ ಪ್ರೋತ್ಸಾಹ ಮತ್ತು ಆಶಿರ್ವಾದ ಜೊತೆಗಿದ್ದರೆ ಸಾಕು… ಈ ಜನ್ಮ ಧನ್ಯ. ನೂರು ದೇವರ ಪೂಜಿಸುವ ಮುನ್ನ ಹೆತ್ತ ತಾಯಿಯ ಪೂಜಿಸು.

 

ಹೆತ್ತ ತಾಯಿ ಆಶೀರ್ವಾದ ಒಂದಿದ್ದರೆ ಸಾಕು ಹಂಗಿಸುವರ ಮುಂದೆ ವಿಶ್ವಗೆದ್ದು ಇತಿಹಾಸ ನಿರ್ಮಿಸಬಹುದು. ಅಷ್ಟು ದೊಡ್ಡ ಶಕ್ತಿ ತಾಯಿ ಆಶೀರ್ವಚನ. ಅದಕ್ಕೆ ನಾನೊಬ್ಬ ನಿದರ್ಶನ. ಸಾಮಾನ್ಯ ಮನೆತನದಿಂದ ಬಂದ ನನಗೆ ದೊರೆತ ಇಂದಿನಸ್ಥಿತಿ ಅಪ್ಪಅಮ್ಮನಿಗೆ ಅರ್ಪಣೆ. ಅಮ್ಮ ಅಪ್ಪ ನನ್ನದೇವರು. ಅವರ ಪಡೆದ ನಾನೆ ಧನ್ಯ.

 

ತಾಯಿ… ಸದಾ ನಮ್ಮನ್ನು ಕಾಯಿ..

 

ಸಾಸಿವೆ ಡಬ್ಬ ದಿನಸಿ ಡಬ್ಬದಲ್ಲಿ ಕೂಡಿಟ್ಟ ಹಣ ಅಮ್ಮ ಖರ್ಚು ಮಾಡುವುದು ಮಕ್ಕಳಿಗೆ ಮಾತ್ರ. ದೇವರನ್ನು ಹುಡುಕಬೇಕಾಗಿಲ್ಲ …ತಾಯಿಯೇ ದೇವರು.

 

ಕರುಳಿನ ಸಂಬಂಧ ಮನೆಯಲ್ಲಿ ಕೆಲಸವಿಹುದು ನೂರಾರು ಬಿಡುವಿಲ್ಲ ತಾಯಿಗೆ ದಿನದಲ್ಲಿ ಚೂರು ಹೆತ್ತ ಕಂದನ ಹಾಗೆ ಸುಮ್ಮನೆ ಬಿಡುವಳೇ ಎದೆಹಾಲನು ಕುಡಿಸಿ ಮಲಗಿಸದಿರುವಳೇ ಲಘು ಬಗೆಯಲಿ ಎಲ್ಲಾ ಕೆಲಸವ ಮುಗಿಸಿ ಗಡಿಬಿಡಿಯಲಿ ಎರಡು ತುತ್ತು ತಾ ಸೇವಿಸಿ ಕೂತಳು ಬುಟ್ಟಿ ತುಂಬಿದ ಅಕ್ಕಿ ಆರಿಸಲು ಭತ್ತ…ಕಲ್ಲನು ಹುಡುಕುತ ಸ್ವಚ್ಛ ಮಾಡಲು ತೊಟ್ಟಿಲಲ್ಲಿ ಮಗುವು ಮಿಸುಕಾಡಿದ ಸದ್ದು ಮೆಲ್ಲ ಬಂದಳು ತೊಟ್ಟಿಲು ತೂಗಲು ಎದ್ದು ಎಷ್ಟು ತೂಗಿದರು ಮಗು ಮತ್ತೆ ಮಲಗಿತೇ ಒದ್ದೆ ಲಂಗೋಟಿಯಲ್ಲಿರೇ ನಿದ್ದೆಯು ಹತ್ತಿತೇ ತಾಯ ನೋಡಿ ಫಳ್ಳನೇ ನಕ್ಕಿತು ಹಸುಕೂಸು ಇರಲಾರದು ಕಂದ ತೊಟ್ಟಿಲಲ್ಲಿ ಘಳಿಗೆ ತುಸು ಎತ್ತಿ… ಮಗುವ ಗಟ್ಟಿ ಅಪ್ಪಿ ಮುತ್ತಿಟ್ಟಳು ಅಮ್ಮ ಒದ್ದೆ ವಸ್ತ್ರವ ತೆಗೆದು ಹೊಸತು ತೊಡಿಸಿದಳಮ್ಮ ಆಹಾ… ನೋಡಿ ತಾಯಿ ಮಗುವಿನ ಬಾಂಧವ್ಯ ಎನಿತು ಸೊಗಸು…ನೋಡಲು ಇಬ್ಬರ ವಾತ್ಸಲ್ಯ ಮೊರದಲ್ಲಿಹ ಅಕ್ಕಿ ಆರಿಸುವ ಕೆಲಸವ ಮರೆತು ಮುದದಿ ನಕ್ಕಳು ತಾಯಿ ಮಗುವೊಂದಿಗೆ ಬೆರೆತು.

 

ಹೆತ್ತ ತಾಯಿ ಪ್ರೀತಿ ದೂರ ಆದ್ರೆ ಯಾರನ್ನಾದರು ಅಮ್ಮ ಎಂದು ಕರೆದು ಆ ಪ್ರೀತಿ ಜೋಡಿಸಬಹುದು ಆದರೆ ಅಪ್ಪನ ಪ್ರೀತಿ ಹಾಗಲ್ಲ ಒನ್ ಸಲ ದೂರ ಆದ್ರೆ ಅಪ್ಪ ಅನ್ನೋ ಕೂಗು ತಿರುಗಿ ಬರಲ್ಲ ಯಾಕೆಂದರೆ ಆ ಕೂಗು ನಮಗೆ ರಕ್ತ ಹಂಚಿದವರಿಗೆ ಮಾತ್ರ ಮೀಸಲು.

 

ತಂದೆ-ತಾಯಿ ಮತ್ತು ಗುರುಗಳಿಗೆ ಗೌರವವನ್ನು ನೀಡುವುದರಿಂದ, ನಮ್ಮ ಜೀವನದಲ್ಲಿ ದೈವಿಕ ಗುಣಗಳು ವಿಕಸಿತವಾಗುತ್ತವೆ.

 

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ… ಧನವ ನೀಡುವ ಧರ್ಮದಾತ ವಿದ್ಯೆ ಕಲಿಸುವ ಪಾಠಶಾಲೆ ನೀತಿ ಹೇಳುವ ಈ ಸಮಾಜ ತಂದೆ ಪ್ರೀತಿಯ ತೋರ್ವರೇ. ತಾಯಿ ಮಮತೆಯ ಕೊಡುವರೆ….

 

ನನಗೆ ತಾಯಿ ಬದುಕು ನೀಡಿದರೆ, ತಂದೆ ಬದುಕುವ ಕನಸುಗಳನ್ನು ತುಂಬಿದ್ದಾರೆ. ನನ್ನ ಕೈ ಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿದ್ದಾರೆ. ನನ್ನೊಬ್ಬ ಉತ್ತಮ ವ್ಯಕ್ತಿಯನ್ನಾಗಿಸಿದ್ದಕ್ಕೆ ಧನ್ಯವಾದಗಳು.

 

ಮಕ್ಕಳಿಗೆ ಮೊದಲು ಜಗತ್ತು ತೋರಿಸುವವಳು ತಾಯಿ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳ ಜಗತ್ತು ಬೇರೆಯೇ ಆಗುತ್ತದೆ. ಅದು ಸಹಜ. ಆದರೆ ಆ ಜಗದೊಳಗೂ ಅಮ್ಮನನ್ನು ಜತೆಗಿರಿಸುವವರೇ ನಿಜವಾದ ಮಕ್ಕಳು. ಆ ಅದೃಷ್ಟ ನನ್ನದು. ತಂದೆತಾಯಿ ವಯಸ್ಸಾಗುತ್ತಾ ಹೋದಂತೆ ಮಕ್ಕಳಂತಾಗುತ್ತಾರೆ ಎನ್ನುವ ಮಾತಿದೆ. ಆ ಮಗುಮನದ ಮುಂದೆ ಜಗವೇ ಸೋತಿದೆ. ಬಾಲ್ಯದ ಅಂಬೆಗಾಲು, ಹಠ ಎಲ್ಲವನ್ನು ಮತ್ತೆ ಅವರಲ್ಲಿ ಕಾಣಬಲ್ಲೆ. ಅವರ ಸೇವೆಯ ಭಾಗ್ಯ ಅದೃಷ್ಟವೆಂದುಕೊಳ್ಳಬಲ್ಲೆ. ಇದು ಒಂದು ದಿನದ ಮಾತಲ್ಲ; ದಿನವೂ ನೋಡಿ ಕೊಂಡಾಗಲೇ ದಿನಾಚರಣೆ ಅರ್ಥಪೂರ್ಣ.

 

ಜೀವನದಲ್ಲಿ ನೀನು ಏನು ಸಾಧನೆ ಮಾಡಿದ್ದೀಯಾ ಎಂದು ಕೇಳಿದರೆ ಕೋಟಿ ರೂಪಾಯಿ ಸಂಪಾದಿಸಿದ್ದೀನಿ ಎಂದು ಹೇಳುವವನಿಗಿಂತ ತಂದೆ-ತಾಯಿ ಕಣ್ಣಲ್ಲಿ ಕಣ್ಣೀರು ಬರದ ಹಾಗೆ ನೋಡಿಕೊಂಡಿದ್ದೀನಿ ಅಂತ ಹೇಳುವವನೇ ನಿಜವಾದ ಶ್ರೀಮಂತ.

 

ತಂದೆ ತಾಯಿ ಬೆಲೆ ನೀ ತಿಳಿಯೋ ಮನುಜ ಜಗತ್ತಿನಲ್ಲಿ ತಳಕು ಪಳಕು ಮಳೆ ಆದರೆ ಅಪ್ಪ ನೀನೇ ನನ್ನ ಬಾಳ ಕೋಡೆ ಅಮೃತ ಕುಡಿಯಲು ಸಿಗಲ್ಲ ನಿಜ ಆದರೆ ತಾಯಿ ಎದೆ ಹಾಲು ಕುಡಿದ ಮೇಲೆ ಅಮೃತ ಕುಡಿದಂತೆ ತಾನೇ.

 

Amma Appa Quotes in Kannada (Mom Dad Quotes in Kannada)

ಹೆತ್ತ ತಾಯಿ ಆಶೀರ್ವಾದ ಒಂದಿದ್ದರೆ ಸಾಕು ಹಂಗಿಸುವರ ಮುಂದೆ ವಿಶ್ವಗೆದ್ದು ಇತಿಹಾಸ ನಿರ್ಮಿಸಬಹುದು.. ಅಷ್ಟು ದೊಡ್ಡ ಶಕ್ತಿ ತಾಯಿ ಆಶೀರ್ವಚನ.. ಅದಕ್ಕೆ ನಾನೊಬ್ಬ ನಿದರ್ಶನ.. ಸಾಮಾನ್ಯ ಮನೆತನದಿಂದ ಬಂದ ನನಗೆ ದೊರೆತ ಇಂದಿನಸ್ಥಿತಿ ಅಪ್ಪಅಮ್ಮನಿಗೆ ಅರ್ಪಣೆ..ಅಮ್ಮ ನನ್ನದೇವರು..ಅಪ್ಪ ನನ್ನ ಭಾಗಕ್ಕೆ ಶಿವ.. ಅವರ ಪಡೆದ ನಾನೆ ಧನ್ಯ..ತಾಯಿದೇವರು..

 

ಅಮ್ಮ ಇದ್ದಾಗಲೇ ಅಮ್ಮನ ಬೆಲೆ ತಿಳಿಯುತ್ತದೆ, ಅಪ್ಪ ಇಲ್ಲದಿದ್ದಾಗ ಅಪ್ಪನ ಬೆಲೆ ತಿಳಿಯುತ್ತದೆ!

 

ಹುಟ್ಟಿಸಿದಾಕ್ಷಣ ಅಪ್ಪ ಎನಿಸಿಕೊಳ್ಳಲಾರ, ಹಡೆದಾಕ್ಷಣ ಅಮ್ಮ ಆಗುವುದಿಲ್ಲ, ಅಮ್ಮ ಅಪ್ಪಗಳ ಕಷ್ಟಗಳಿಗೆ ಆಗದವರು ಮಕ್ಕಳೇ ಅಲ್ಲಾ…..

 

ಯಾರು ನಿಮ್ಮನ್ನು ದೂರ ತಳ್ಳಿದರು ಹೆತ್ತ ತಾಯಿ ಮಾತ್ರ ಎಂದೆಂದಿಗೂ ನಿಮ್ಮನ್ನು ದೂರ ತಳ್ಳುವದಿಲ್ಲ….. ತಾಯಿ ಪ್ರೀತಿಯೇ ಅಂತಹದ್ದು.

 

ಹೆತ್ತ ತಾಯಿ ಭಾವನೆ ಗಳೊಂದಿಗೆ ನೆಡೆದರೆ, ತಂದೆಯು ವಾಸ್ತವ ಕಲ್ಪನೆಗಳೊಂದಿಗೆ ನಡೆಯುತ್ತಾನೆ.

 

ಅಮ್ಮನ ಮಡಿಲು, ಅಮ್ಮನ ಪಾದ ಮುಟ್ಟಿದರೆ ತೀರ್ಥ ಸ್ಥಳದಷ್ಟೆ ಮನಸ್ಸಿಗೆ ಶಾಂತಿಸಿಗುವುದು.

 

ಹೆತ್ತ ತಾಯಿ ತಂದೆಗಳ ಚಿತ್ತವನು ನೋಯಿಸಿ ಮತ್ತೆ ದಾನವ ಮಾಡಿ ಫಲವೇನು?

 

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..” ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು… ಅಂದರೆ, ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಹುಟ್ಟಿರುವ ಈ ದೇಶ ಸ್ವರ್ಗಕ್ಕಿಂತಲೂ ದೊಡ್ಡದು… ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು…

 

ಹೆತ್ತ ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ ಮತ್ತೆ ತಂದೆಯು ಹೊರಗೆ ಮಾರಿದರೆ ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ ಕತ್ತಲೆಯು ಬೆನ್ಹತ್ತಿ ಕರಡ್ಯಾಗಿ ಕಚ್ಚಿದರೆ ಯಾರೇನು ಮಾಡುವರು ಅವನಿಯೊಳಗೆ. (ಶ್ರೀಪುರಂದರದಾಸರು)

 

ಜೀವನದಲ್ಲಿ ಕಳೆದುಕೊಂಡಿದ್ದನ್ನ ಮರಳಿ ಪಡೀಬಹುದು ಆದ್ರೆ ತಂದೆ ತಾಯಿಯನ್ನ ಕಳೆದುಕೊಂಡರೆ ಮತ್ತೊಂದು ಜನ್ಮ ಎತ್ತಿ ಬರಬೇಕು. ಯಾವಾಗಲು ತಂದೆ ತಾಯಿಯನ್ನ ಕಡೆಗಣಿಸಬೇಡಿ.

 

Amma Appa Kavana in Kannada (ಅಮ್ಮ ಅಪ್ಪ ಕವನಗಳು)

ದೈವಮಯಿ 

ತಾಯಿ ದೇವರ ಸಮಾನ ಎಂದರು ಕೆಲವರು 

ಇಲ್ಲಾ ಅವರೇ ದೇವರು ಎಂದರು ಹಲವರು 

ತಾನು ನೋವುಂಡು ಈ ಜೀವಕ್ಕೆ ಹುಟ್ಟು ಕೊಟ್ಟಳು 

ಈ ಉಸಿರಿಗೆ ತನ್ನಿಷ್ಟದ ಮುದ್ದಿನ ಹೆಸರಿಟ್ಟಳು

ಶಾಲೆಗಿಂತ ಮೊದಲೇ ಮನೆಯಲ್ಲೇ ಗುರುವಾದಳು

ತನಗೆ ಅಕ್ಷರಜ್ಞಾನ ಇಲ್ಲದಿದ್ದರೂ ಲೋಕಜ್ಞಾನ ತಿಳಿಸಿಕೊಟ್ಟಳು

ನಮ್ಮ ಗೆಲುವಿಗೆ ಮೊದಲ ನಗೆ ನಕ್ಕವಳು 

ನಮ್ಮ ಸೋಲಿಗೆ ಹೆಗಲು ಕೊಟ್ಟು ಸಂತೈಸಿದವಳು 

ನಮ್ಮ ಸುಖ – ನಗೆ – ನಲಿವು ನೋಡಿ , ತನ್ನ ನೋವು ಆಯಾಸ ಮರೆತವಳು

ಹಸಿವು ಹುಟ್ಟೋ ಮುನ್ನವೇ ಅಂತರಾಳ ತಿಳಿದು  

ಇರುವುದರಲ್ಲೇ ಮಾಡಿ ಆ ಹಸಿವು ನೀಗಿಸಿದವಳು 

ಮಗನ ಪಕ್ಕ ಹೆಂಡತಿ ಬಂದರೂ ಆಕೆಗಿನ್ನೂ ಇವ ಚಿಕ್ಕ ಮಗುವೇ

ತಾನಿರುವವರೆಗೂ ಸರಿ, ಹೋದಮೇಲೆ ಮಗನ ಗತಿಯೇನು ಎಂದು ಒಡಲಾಳದಲ್ಲೇ ದುಃಖಿಸೋ ಕರುಣಾಮಯಿ ಈ ತಾಯಿ.

 

ಅಮ್ಮನ ಮಡಿಲು ಮಾತೇ ಮುಗಿದು ಮೌನ ಮೂಡಿತು 

ಮಾತೆ ನಿನ್ನ ನೆನೆಯಲು… ಸೋಲು ಸೋತು ಮರೀಚಿಕೆ ಆಯ್ತು ಮಡಿಲು ನನ್ನದಾಗಲು… 

ಅಮ್ಮ…ಅಮ್ಮ…ನಿಂಗ್ಯಾರು ಸಮ, 

ಅಮ್ಮ…ಅಮ್ಮ…ಬರಿ ಪ್ರೀತಿ ಜಮಾ…
ನವಮಾಸ ಹೊತ್ತು, ವನವಾಸ ಕಳೆದು, ಇಳೆಗೆ ತಂದ, ಈ ಮಧುರ ಬಂಧ… 

ಹೊಸ ಶ್ವಾಸ ಕೊಟ್ಟು, ನಿಟ್ಟುಸಿರು ಬಿಟ್ಟು, ಬೆಳೆಸಿದೆ ನನ್ನ, ನಾ ಬಳಸಿದೆ ನಿನ್ನ… ಅಮ್ಮ…ಅಮ್ಮ…ಇದ್ಯಾವ ಕ್ರಮ, 

ಅಮ್ಮ…ಅಮ್ಮ…ಬರಿ ಮಾತೃ ಪ್ರೇಮ… 

ಅಂಧಕಾರದಿಂದ ಬೆಳಕಿನೆಡೆಗೆ ತಂದೆ, 

ಕೈ ತುತ್ತು ಕೊಟ್ಟು, ಚಂದ್ರನ ಅಡ ಇಟ್ಟು… 

ಕನಸುಗಳ ಬೆಳಸಿ, ಬೆನ್ನ ಹಿಂದೆ ನಿಂತೆ, ಸಾಧಿಸುವ ಛಲ ಕೊಟ್ಟು, 

ಗೆಲುವಿನ ಗುರಿ ಇಟ್ಟು… ಅಮ್ಮ…ಅಮ್ಮ…ಸೃಷ್ಟಿಕರ್ತ ಬ್ರಹ್ಮ, 

ಅಮ್ಮ…ಅಮ್ಮ…ಅದೊಂದು ಭ್ರಮ… 

ಆ ಲಾಲಿಹಾಡು, ಬೆಚ್ಚಗಿನ ಗೂಡು, ನೀ ಕಾಣದಾದರೆ, 

ನಂಗೆಲ್ಲಿ ಆಸರೆ… ಭೂಮಿತಾಯಾಣೆ, 

ನನ್ನ ದೈವ ನೀನೆ, ಅವಳಿಗೂ ಸಾಟಿ, ನಿನ್ನ ಪ್ರೀತಿ ದಾಟಿ… 

ಅಮ್ಮ…ಅಮ್ಮ…ನಿಂಗ್ಯಾರು ಸಮ, 

ಅಮ್ಮ…ಅಮ್ಮ…ಬರಿ ಪ್ರೀತಿ ಜಮಾ…

 

ಅಪ್ಪನ ಹೆಗಲು

ಧರೆಗೆ ಇಳಿದು ಬರುವ ಕಂದನ ನೆನೆನೆನೆದು 

ತಾಯಿ ತನ್ನ ಪ್ರಸವ ವೇದನೆಯನ್ನು ಸಹಿಸುವಳು 

ಮಗುವಿನ ಅಳುವಿನ ಧ್ವನಿಯ ಕೇಳಲು ಕಾತರಿಸಿ 

ತಂದೆ ದವಖಾನೆಯ ಬಾಗಿಲ ಬಳಿ ಚಡಪಡಿಸುವನು. 

ಅಮ್ಮನ ಅಪ್ಪುಗೆಯ ಮೊದಲ ಮುತ್ತು 

ಮನದ ಕಡಲಲ್ಲಿ ಹುಟ್ಟುವ ಸ್ವಾತಿ ಮುತ್ತು 

ಅಪ್ಪನ ಹೆಗಲ ಮೇಲೆ ಹತ್ತಿ ಆಡುವ ಆಟ 

ಜಗತ್ತನ್ನೇ ಗೆದ್ದು ಬೀಗುವ ಹುಡುಗಾಟ. 

ಅಮ್ಮ ಅಕ್ಕರೆಯ ಒಲುಮೆ 

ಅಪ್ಪ ನಂಬಿಕೆಯ ಚಿಲುಮೆ 

ಅಮ್ಮ ಕರುಣೆಯ ಕಡಲು 

ಅಪ್ಪ ಭರವಸೆಯ ಮುಗಿಲು ಸುಖದ ತೊಟ್ಟಿಲು 

ಅಮ್ಮನ ಮಡಿಲು ಗೆಲುವಿನ ಮೆಟ್ಟಿಲು 

ಅಪ್ಪನ ಹೆಗಲು ಅಮೃತ ಸಮಾನ

ಅಮ್ಮನ ಕೈತುತ್ತು ಪ್ರೀತಿಯ ಸಿಂಚನ 

ಅಪ್ಪನ ಮುತ್ತು ಅಮ್ಮ ಬೇಡಿದ್ದನ್ನು ಕರುಣಿಸುವ ಕಾಮಧೇನು 

ಅಪ್ಪ ಬೇಡದೆ ಸಕಲವನ್ನೂ ದಯಪಾಲಿಸುವ ಕಲ್ಪತರು

ಅಮ್ಮ ದಾರಿ ತೋರುವ ದೀಪ 

ಅಪ್ಪ ಕೈಹಿಡಿದು ನಡೆಸುವ ಪ್ರದೀಪ 

ಅಮ್ಮನ ಮಮಕಾರದ ಕಂಬನಿ 

ಅಪ್ಪನ ಶ್ರಮದ ಬೆವರ ಹನಿ 

ಅಮ್ಮ ಬೆಳದಿಂಗಳ ಚಂದಿರ 

ಅಪ್ಪ ದಿನ ಬೆಳಗುವ ನೇಸರ. ‌‌ 

 

ಅಪ್ಪನೆಂದರೆ ಅದ್ಬುತ 

ಮಮತೆಯೆಂದರೆ ನೆನಪಾಗುವುದು ಅಮ್ಮನ ಮಡಿಲು 

ಮರೆಯುತ್ತೇವೇಕೆ ತಲೆಯಿಟ್ಟು ಅತ್ತ ಅಪ್ಪನ ಹೆಗಲು ? 

ಸುಡುವ ಸೂರ್ಯನ ಬಿಸಿಲ ದೂರುತ್ತೇವೆ 

ತಂಪೆರೆವ ಚಂದ್ರನನು ಹೊಗಳುತ್ತೇವೆ 

ಚಂದಿರನ ಬೆಳಕದು ಸೂರ್ಯನಾ ಪ್ರತಿಫಲನ 

ಈ ನಿಜವ ಆ ಕ್ಷಣದಿ ಮರೆತೆವೆಕೆ? 

ದೇವಕಿ ಯಶೋದೆಯರ ವಾತ್ಸಲ್ಯದೆದುರು 

ಬುಟ್ಟಿಯಲಿ ಮಗುವಿಟ್ಟು 

ಕಪ್ಪನೆಯ ರಾತ್ರಿಯಲಿ 

ಉಕ್ಕುತಿಹ ನದಿಯ ದಾಟಿ 

ಬೆಚ್ಚನೆಯ ಮಡಿಲಲ್ಲಿ 

ಕಂದನನು ಮಲಗಿಸಿದ 

ವಸುದೇವ ಮಂಕಾದನೆ ? 

ಕೌಸಲ್ಯೆಯಾ ದುಖಃಕ್ಕೆ ಮರುಗುವಾಗ 

ಸುಮಿತ್ರೆಯ ನೋವಿಗೆ ಕರಗುವಾಗ 

ಪುತ್ರವಿಯೋಗದಲಿ ಪ್ರಾಣವನೆ ತ್ಯಜಿಸಿದಾ 

ದಶರಥನು ನೆನಪಾಗನೆ? 

ಅಮ್ಮನೆಂದೂ ಮೈದಡವಿ ಹರಿವ 

ಮಮತೆಯ ಹೊಳೆ 

ಅಪ್ಪನೂ ಅಲ್ಲವೇ ವಾತ್ಸಲ್ಯದ ಜೀವ ಸೆಲೆ? 

ಅಮ್ಮನ ಪ್ರೀತಿಯ ಗುಣಗಾನವೇ ಎಲ್ಲ 

ಅದರಲ್ಲಿ ಕೊಂಚವಾದರೂ ಅಪ್ಪನಿಗೆಕಿಲ್ಲ ? 

ನೆನಪಿಟ್ಟೆವು ಅಮ್ಮ ಪ್ರೀತಿಯಿಂದ 

ಬಾಯಿಗಿಟ್ಟ ತುತ್ತು 

ಮರೆಯಿತೆ ಅಪ್ಪನ ಬೆವರಿನ ಹನಿಯು 

ಅದರಲ್ಲಿ ಬೆರೆತಿದ್ದು ? 

ಜೀವನವಿಡೀ ಮಕ್ಕಳ ಹಿಂದೆ 

ಅಪ್ಪನ ಹೆಮ್ಮೆಯ ಕಣ್ಣು 

ಒಮ್ಮೆ ತಿರುಗಿ ನೋಡುವೆವೆ 

ಪ್ರೀತಿಯಿಂದ ಅವನನ್ನು ? 

ಬಿದ್ದಾಗ ಕೈ ಹಿಡಿದು ಎತ್ತಿದವ ಕಣ್ಣೊರೆಸಿ ಮುದ್ದಿಟ್ಟವ 

ನಾನಿರುವೆನೆಂದು ಧೈರ್ಯ ತುಂಬಿದವ 

ಮುಂದುವರೆಂದು ಹುರಿದುಂಬಿಸಿದವ 

ಸಾಧಿಸೆಂದು ಬೆನ್ನು ತಟ್ಟಿದವ ಅಪ್ಪ…

 

ಅಪ್ಪನ ಹೆಗಲು ಸ್ವರ್ಗಕಿಂತ ಮಿಗಿಲು 

ತನ್ನ ಕಂದನ ಎತ್ತಿಕೊಂಡು ಮುದ್ದಾಡುವ ಮಾಯಗಾರ 

ಕೇಳಿದ್ದನೆಲ್ಲಾ ಪ್ರಶ್ನಿಸದೆ ಕೊಡಿಸುವ ನನ್ನ ಸಾಹುಕಾರ 

ಎಲ್ಲಾರ ಸಲಹಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತ ಯಜಮಾನ ಇವನು 

ತನ್ನ ಕುಡಿಯ ಅಪ್ಪಿಕೊಂಡು ಮುದ್ದಾಡುವ ಪ್ರೇಮಿ ಇವನು 

ತನ್ನವರಿಗಾಗಿ ಹಗಲಿರುಳು ದುಡಿಯುವ ಏಕೈಕ ಶ್ರಮಿಕನು 

ತನ್ನ ಆಸೆಗಳ ಅಡಗಿಸಿ ತನ್ನವರ ಆಸೆಗಳ ಪೂರೈಸುವನು 

ತನ್ನ ಮಕ್ಕಳ ಹೆಗಲ ಮೇಲೆ ಕೂರಿಸಿ ಹೊಸ ಪ್ರಪಂಚ ತೋರುವನು 

ಮಕ್ಕಳ ಸಂತೋಷದಲ್ಲಿ ತನ್ನ ನೋವುಗಳ ಮರೆತು ನಲಿವನು 

ಮಕ್ಕಳ ಒಳ್ಳೆಯ ಜೀವನ ರೂಪಿಸಲು ಕೆಲವೊಮ್ಮೆ ಗದರಿಸುವನು 

ತನ್ನ ಜೀವನ ಮರೆತು ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ‌ನೆಡೆಸುವನು 

ಏನೆ ಹೇಳಿದರೂ ಅಪ್ಪ ಅಂದರೆ ನಮ್ಮ ನೋಡಿಕೊಳ್ಳುವ ಆಕಾಶ 

ತನ್ನ ಮಕ್ಕಳ ಯಶಸ್ಸು ನೋಡಿ ಹೆಮ್ಮೆ ಪಡುವ ಮರೆಯಲಾಗದ ಮಾಣಿಕ್ಯ,

 

ಅಪ್ಪನ ಹೆಗಲು

ಅಪ್ಪನ ಹೆಗಲದುವೆ 

ತಣ್ಣನೆ ಹಾಸಿಗೆಯಂತೆ

ಅದುವೆ ಮೆತ್ತನೆ 

ಹಾಸಿನ ಮೇಲಿನ ನಿದ್ದೆಯಂತೆ

ಅಪ್ಪನ ಕೈಗಳದುವೆ 

ಜೋಗುಳದ ತೊಟ್ಟಿಲಂತೆ

ಅವೇ ಬಿಸಿಲಿಗೇ 

ಸವಾಲೊಡ್ಡುವ ನೆರಳಂತೆ

ಅಪ್ಪನ ಕರಗಳದುವೆ 

ಕೆರೆಮೇಲ ತೆಪ್ಪದ ಪಯಣದಂತೆ 

ಅವೇ ಆಕಾಶದಿ 

ತೇಲಾಡಿಸುವ ಉಯ್ಯಾಲೆಯಂತೆ 

ಅಪ್ಪನ ನೋಟವದು 

ಹದ್ದಿನ ನೋಟದಂತೆ

ನೀ ನೋಡುವೆ ಅವನ 

ಕಣ್ಣಲಿ ಪಕ್ಷಿನೋಟದಂತೆ

ಅಪ್ಪನ ಕಿವಿಗಳದುವೆ 

ತೀವ್ರ ವ್ಯಾಘ್ರದಂತೆ

ಅದುವೇ ಶಬ್ಧ 

ಕಾವಲು ಕಾಯ್ವ ರಕ್ಷಕನಂತೆ

ಅಪ್ಪನ ಬೆನ್ನದು 

ಹೊನ್ನ ಸಿಂಹಾಸನದಂತೆ

ಅದುವೇ ನಿನಗೆ 

ರತ್ನದ ಪಲ್ಲಕ್ಕಿಯಂತೆ.

 

ಅಪ್ಪನ ಹೆಗಲೊಂದು ಏರೋಪ್ಲೇನು 

ಹತ್ತಲು ವೀಸಾ ಪಾಸ್ಪೋರ್ಟ್ ಬೇಕೇನು 

ಸೀಟಬೆಲ್ಟ್ ಆಗಿಹುದು ತೂತು ಬನೀನು 

ಭದ್ರತೆಗಾಗಿ ಕಾಲು ಅದರಲ್ಲಿ ಹಾಕಿಹೆನು

ಎಷ್ಟೇ ಎತ್ತರಕೆ ನಾ ಹಾರಿದರೇನು 

ಮುಟ್ಟಲು ಆದೀತೆ ಮುಗಿಲಬಾನು 

ಸೃಷ್ಟಿಯ ಸೊಬಗ ಸವಿಯಲು 

ನಾನು ಅಪ್ಪನ ಹೆಗಲೋಂದೆ ಸಾಕಲ್ಲವೇನು 

ಕೂಡಿಸಬೇಕಿಲ್ಲ ಕಾಸಿಗೆ ಕಾಸನು 

ಮಾಡಿಸಬೇಕಿಲ್ಲ ಸೀಟ್ಗೆ ರಿಜರ್ವೇಷನ್ನು 

ದೇಶ ಸಂಚಾರ ಮಾಡಲು ನಾನು 

ಅಪ್ಪನ ಹೆಗಲೊಂದೇ ಸಾಕಲ್ಲವೇನು 

ಇಂಧನವಿಲ್ಲದ ವಾಹನ ನಮ್ಮದು 

ಅಪಘಾತವಿಲ್ಲದೆ ತಾ ಸಂಚರಿಸುವುದು 

ಸ್ವಂತದ ನಿಲ್ದಾಣ ನಮ್ಮಿಬ್ಬರಿಗಿಹುದು 

ಸಾಕೆನಿಸಲು ವಿಶ್ರಾಂತಿ ಪಡೆಯುವುದು.

 

ಅಪ್ಪನೆನ್ನುವ ಪ್ರೀತಿ ಜಗತ್ತು ಮುಚ್ಚಿಟ್ಟ ಕೊಪ್ಪರಿಗೆಯಂತೆ. ಹೊರಗಿನ ಗಟ್ಟಿ ಕವಚದೊಳಗಿನ ಮೃದು ಬಾದಾಮಿಯಂತೆ!. 

ಕಾಣದಷ್ಟೂ ದೂರವನ್ನು ಅಪ್ಪನ ಹೆಗಲು ಎತ್ತರಿಸಿ ಕಾಣಿಸಿದ.

ಅಪ್ಪನ ಹೆಗಲೇರಿ ಕುಳಿತವರಿಗೆ ದೊಡ್ಡ ಬೆಟ್ಟವು ಸಣ್ಣ ಬೆಟ್ಟದಂತೆ ಕಂಡ ಅನುಭವ ಹಲವರ ಮಡಿಲೊಳಗಿದೆ. 

 

ಅಮ್ಮನ ಮಡಿಲಲ್ಲಿ ಮಲಗಿದ್ದಾಗ 

ಸ್ವರ್ಗದಲ್ಲಿ ಇರವ ರೀತಿ ತೆಲಾಡುತಿದ್ದೆ.

ಸುಂದರವಾದ ಕನಸುಗಳನ್ನ ಕಂಡಿರುವೆ 

ಆ ಕನಸುಗಳನ್ನ ನನಸಾಗಿಸಲು ಮುನ್ನುಗ್ಗುತಿರುವೆ.

ಅಪ್ಪನ ಹೆಗಲ ಮೇಲೆ ಕುಳಿತು ಊರೆಲ್ಲಾ 

ಸುತ್ತುತ್ತಿರುವಾಗ ಪ್ರಪಂಚವನ್ನೆ ಸುತ್ತಿದಷ್ಟೂ 

ಖುಷಿ ಪಡುತಿದ್ಧೆ ಈಗ ಇಡಿ ಪ್ರಪಂಚವನ್ನೆ 

ಸುತ್ತುತ್ತಿರುವೆ ಆಗ ಇದ್ದಷ್ಟು ಖುಷಿ ಇವಾಗಿಲ್ಲಾ.

ಅಪ್ಪನ ಹೆಗಲು ಅಮ್ಮನ ಮಡಿಲು ಸ್ವರ್ಗಕ್ಕಿಂತಾ ಮಿಗಿಲು.. ಅಂತ ಯಾವಾಗಲೂ ನನ್ನ ಮನಸು ಹೇಳುತ್ತಿರುತ್ತೆ..

 

ಅಪ್ಪನ ನೆನಪಿನ ಹಾದಿಯಲ್ಲಿ 

ಅಪ್ಪಾ ಯಾಕೊ ಮರೆಯಾಗಿ ಹೊದೆ 

ನಮ್ಮನ್ನು ಬಿಟ್ಟು ಕಾಣದೂರಿಗೆ! 

ನೆನಪು ಕಾಡುತ್ತಿವೆ ಮನಸಲ್ಲಿ ನಿತ್ಯ ನೆನಯುತ್ತಿದೆ ಹೃದಯ ಅನೂದಿನವು!! 

ಕಣ್ಣೀರು ಹರಿಯುತ್ತಿವೆ ಹಗಲು ರಾತ್ರೀ ಯಾರಿಗು ಕಾಣದೆ ನಿತ್ಯ! 

ಪೂಜಿಸುವದು ಮನಸು ಸದಾ ನಿನ್ನನ್ನೆ ಅನೂದಿನ ಅನುಕ್ಷಣವು!! 

ನಾನು ಅಪ್ಪನಾಗಿ ಮೆರೆಯುತ್ತಿದ್ದರು ನನಗಪ್ಪ ನೀನಾಗಿರುವೆಯಲ್ಲವೆ! 

ನೀ ಕೊಟ್ಟ ಪ್ರೀತಿ ವಾತ್ಸಲ್ಯ ಮರೆಯದೆ ನಾ ನೀಡುವೆ ಮಕ್ಕಳಿಗೆ ಅನುಗಾಲವು!! 

ನಿನ್ನಂತೆ ನಾ ದಾನಿಯಾಗುವೆನೊ ತಿಳಿಯದಾದರು ಸ್ವಾರ್ಥಿಯಾಗಲಾರೆ! 

ನಿನ್ನ ನಿಸ್ವಾರ್ಥ ತ್ಯಾಗಮಯ ಬದುಕು ಸದಾ ನನಗೆ ಸ್ಪೂರ್ತಿಯಾಗಿದೆ!! 

ಬದುಕಿನ ಬಂಡಿ ಜೊಕಿಲೆ ಹೊಡಿಸುವೆನು ನಿತ್ಯ ನಿನ್ನ ನೆನಪಿನ ಹಾದಿಯಲ್ಲಿ! 

ಅವಸರವಸರ ಮಾಡಿದರು ಹಾದಿ ತಪ್ಪಿ ನಾ ಹಳ್ಳಕ್ಕೆ ಬಿಳಲಾರೆನು ಅಪ್ಪಾ!! 

ಇದನ್ನೂ ಓದಿ:

Father Mother Quotes in Kannada Images

ಈ ಮೇಲಿನ ಕವಿಗಳು, ಚಿಂತಕರು ತಂದೆ ಮತ್ತು ತಾಯಿಯ ಕುರಿತು ಬರೆದ ಉಲ್ಲೇಖಗಳ (amma appa quotes in kannada) ಸಂಗ್ರಹದ ಮೂಲಕ ಪೋಷಕರ ಪ್ರೀತಿಯ ಆಳವಾದ ಪ್ರಭಾವವನ್ನು ನಾವು ಅನ್ವೇಷಿಸಿದ್ದೇವೆ. ಬುದ್ಧಿವಂತಿಕೆ ಮತ್ತು ಭಾವನೆಯಿಂದ ಸಮೃದ್ಧವಾಗಿರುವ ಈ ಪದಗಳು, ಪೋಷಕರು ಮತ್ತು ಅವರ ಮಕ್ಕಳ ನಡುವೆ ಇರುವ ಮುರಿಯಲಾಗದ ಬಂಧಗಳನ್ನು ನಮಗೆ ನೆನಪಿಸುತ್ತವೆ.

ಪೋಷಕರ ಪ್ರೀತಿ ನಮ್ಮ ಜೀವನದ ಅತ್ಯಂತ ಅಡಿಪಾಯವಾಗಿದೆ. ಇದು ನಮ್ಮನ್ನು ರೂಪಿಸುತ್ತದೆ, ನಮ್ಮನ್ನು ಪೋಷಿಸುತ್ತದೆ ಮತ್ತು ನಮ್ಮ ಪ್ರಯಾಣದ ಏರಿಳಿತಗಳ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತದೆ. ನಮ್ಮ ಹೆತ್ತವರ ಪ್ರೀತಿ ನಿರಂತರವಾಗಿರುತ್ತದೆ, ಜೀವನವು ಕಠಿಣವಾಗಿದ್ದರೂ ಸಹ ಶಕ್ತಿ ಮತ್ತು ಸೌಕರ್ಯದ ಮೂಲವಾಗಿದೆ.

ನಾವು ಈ ಜಗತ್ತಿಗೆ ಬಂದ ಕ್ಷಣದಿಂದ ನಮ್ಮ ಪೋಷಕರು ನಮಗೆ ಎಲ್ಲವನ್ನೂ ನೀಡಿದ್ದಾರೆ. ಅವರು ತ್ಯಾಗ ಮಾಡಿದ್ದಾರೆ, ಅವರು ನಮ್ಮನ್ನು ಹುರಿದುಂಬಿಸಿದ್ದಾರೆ ಮತ್ತು ನಾವು ನಮ್ಮಲ್ಲಿ ನಂಬಿಕೆ ಇಲ್ಲದಿದ್ದರೂ ಅವರು ನಮ್ಮನ್ನು ನಂಬಿದ್ದಾರೆ. ಅವರು ಪ್ರೀತಿಯಿಂದ ಇದೆಲ್ಲವನ್ನೂ ಮಾಡಿದ್ದಾರೆ ಮತ್ತು ನಾವು ಆ ಪ್ರೀತಿಯನ್ನು ಕೃತಜ್ಞತೆ, ಗೌರವ ಮತ್ತು ಕಾಳಜಿಯೊಂದಿಗೆ ಹಿಂದಿರುಗಿಸುವುದು ಮುಖ್ಯ.

ಈ ಅಪ್ಪ-ಅಮ್ಮ ಕುರಿತ ಉಲ್ಲೇಖಗಳ (appa amma quotes in kannada) ಸಂಗ್ರಹವು ನಮಗೆ ನೀಡಲಾದ ಅಮೂಲ್ಯ ಉಡುಗೊರೆಯ ಸೌಮ್ಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ನಮ್ಮ ನಂಬಿಕೆ. ನಾವು ಯಾವಾಗಲೂ ನಮ್ಮ ಹೆತ್ತವರನ್ನು ಹತ್ತಿರದಲ್ಲಿಟ್ಟುಕೊಳ್ಳೋಣ ಮತ್ತು ಅವರು ನಮಗೆ ನೀಡಿದ ಪ್ರೀತಿಯನ್ನು ಪಾಲಿಸೋಣ.

ನಮ್ಮ ಈ father and mother quotes in kannada ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. 

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.