100+ Attitude Quotes in Kannada

Attitude Quotes in Kannada

WhatsApp, Facebook, Instagram, ಅಥವಾ Twitter ನಂತಹ ನಿಮ್ಮ ಮೆಚ್ಚಿನ ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ನೀವು ಹಂಚಿಕೊಳ್ಳಬಹುದಾದ ನಮ್ಮ ಅತ್ಯುತ್ತಮ Attitude Quotes in Kannada ಸಂಗ್ರಹವನ್ನು ಅನ್ವೇಷಿಸಿ ನಿಮಗಾಗಿ ಇಲ್ಲಿ ನೀಡಿದ್ದೇವೆ.

Attitude ಎಂಬುದು ವ್ಯಕ್ತಿಯ ಮನಸ್ಥಿತಿ ಮತ್ತು ಜೀವನದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಚಿಂತನೆ ಮತ್ತು ನಡವಳಿಕೆಯ ವಿಧಾನವಾಗಿದೆ. ಇದು ವ್ಯಕ್ತಿಯ ಕ್ರಿಯೆಗಳು ಮತ್ತು ಇತರರೊಂದಿಗಿನ ಸಂವಹನಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. 

ಕನ್ನಡವು ಸುದೀರ್ಘ ಇತಿಹಾಸ ಮತ್ತು ವಿಶಿಷ್ಟವಾದ ಸಾಂಸ್ಕೃತಿಕ ಗುರುತನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿದ್ದು, ಭಾರತದಲ್ಲಿ ಲಕ್ಷಾಂತರ ಜನರು ಮಾತನಾಡುತ್ತಾರೆ. ಧನಾತ್ಮಕ ಮತ್ತು ಆತ್ಮವಿಶ್ವಾಸದ ಮನೋಭಾವವನ್ನು ಬೆಳೆಸಿಕೊಳ್ಳಲು ನೀವು kannada attitude quotes ಗಳನ್ನು ಹುಡುಕುತ್ತಿದ್ದರೆ, ನೀವು ಅದನ್ನು ನಮ್ಮ ಈ ಲೇಖನದಲ್ಲಿ ಕಾಣಬಹುದು.

Best Attitude Quotes in Kannada

ನೂರಕ್ಕೂ ಹೆಚ್ಚು kannada attitude quotes ಕೆಳಗಿನ ಭಾಗದಲ್ಲಿ ನೋಡೋಣ. ಈ quotes on attitude in kannada collection ನಿಮ್ಮನ್ನು ಧನಾತ್ಮಕವಾಗಿರಲು ಸಹಾಯ ಮಾಡುತ್ತವೆ ಮತ್ತು ಅದರ ಸಹಾಯದಿಂದ ನೀವು ವರ್ಷದ 365 ದಿನಗಳು ಆಶಾವಾದಿಗಳಾಗಿರಬಹುದು.

Money Attitude Quotes in Kannada

ನಾನ್ ಬೆಲೆ ಕೊಡೋದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾತ್ರ. ವ್ಯಕ್ತಿ ಹತ್ರ ಇರೋ ದುಡ್ಡಿಗಲ್ಲ. ದುಡಿದೇನು ತಲೆಹಿಡುಕನು ಮಾಡ್ತಾನೆ. 

 

ಬೇರೆಯವರ ಬಗ್ಗೆ ಯೋಚನೆ ಮಾಡೋದು ಬಿಡು ಹುಚ್ಚ ಆಗ್ತೀಯಾ. ನಿನ್ನ ಬಗ್ಗೆ ಯೋಚನೆ ಮಾಡು Rich ಆಗ್ತೀಯಾ. 

 

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ. ಒಂದು ಸೌಂದರ್ಯ ಇನ್ನೊಂದು ಹಣ. ನಮ್ ಪುಣ್ಯ ಅವೆರಡು ನಮ್ ಹತ್ರ ಎರಡು ಇಲ್ಲ. ಇರೋದೊಂದೇ ಈ ಬಿಕನಾಸಿ ನಗು. 

 

ನಡೆಯದಿದ್ದರೆ ದಾರಿ ಸಾಗದು. ದುಡಿಯದಿದ್ದರೆ ಬದುಕು ಸಾಗದು.

 

ದುಡ್ಡು ಮಿತ್ರನ್ನ ಶತ್ರು ಮಾಡುತ್ತೆ. ಶತ್ರುನಾ ಮಿತ್ರನ್ನಾಗಿ ಮಾಡುತ್ತೆ. ಆದರೆ ನಂಗೆ ಅದರ ಭಯ ಇಲ್ಲ ಯಾಕಂದ್ರೆ ಅದು ನನ್ನತ್ರ ಇಲ್ಲ.

 

ದುಡ್ಡು ಎಲ್ಲರಿಗೂ ಸಿಗುತ್ತೆ. ಆದರೆ “ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ!

 

ಈ ಕಾಲ್ದಾಗ ಮನದ ಮೇಲೆ ನಿಂತಿರುವ ಸಂಬಂಧಗಳಿಗಿಂತ ಧನದ ಮೇಲೆ ನಿಂತಿರುವ ಸಂಬಂಧಗಳೇ ಹೆಚ್ಚು!

 

ದುಡ್ಡಿರಬೇಕು ಇಲ್ಲಾಂದ್ರೆ ದುಡಿತವಿರಬೇಕು. ಎರಡು ಇಲ್ಲಾಂದ್ರೆ ಈ ಪ್ರಪಂಚದಲ್ಲಿ ಯಾರು ನಮಗೆ ಬೆಲೆ ಕೊಡಲ್ಲ.

 

ಕೆಲವರು ಸಂಬಂಧಕ್ಕೆ ಬೆಲೆ ಕೊಟ್ಟು ಜೊತೆಗೆ ಇದ್ದಾರೆ ಅಂದ್ಕೊಂಡಿದ್ದೆ. ಆದರೆ ಈ ದುಡ್ಡಿಗೆ ಬೆಲೆ ಕೊಟ್ಟಿದ್ದು ಅಂತ ಇವಾಗ ಅರ್ಥ ಆಗ್ತಿದೆ.. ಯಾವ್ ಸಂಬಂಧಕ್ಕೂ ಇಲ್ಲಿ ಬೆಲೆ ಇಲ್ಲ. ದುಡ್ಡಿಗೆ ಮಾತ್ರ ಸಂಬಂಧಗಳು. ಇದೆ ಸತ್ಯ. ಇದೆ ವಾಸ್ತವ.

 

ದುಡ್ಡ್ ಕೊಟ್ರೆ ಸಿನಿಮಾ ನೋಡಬೋದು. ದುಡ್ಡ್ ಮಾಡು ನಾಟ್ಕ ನೋಡಬೋದು.

 

ಈ ಹಣದ ಮರ್ಮನೇ ಅರ್ಥ ಆಗೋದಿಲ್ಲ. ಹಣ ಇದ್ದೋರಲ್ಲಿ ಗುಣ ಇರೋದಿಲ್ಲ. ಗುಣ ಇದ್ದೋರಲ್ಲಿ ಹಣ ಇರೋದಿಲ್ಲ. ಹಣ-ಗುಣ ಎರಡು ಇದ್ದೋರಿಗೆ ಈ ಭೂಮಿಯ ಋಣ ಇರೋದಿಲ್ಲ.

 

ಸ್ನೇಹ ಪ್ರೀತಿ ಸಂಬಂಧಗಳೆಲ್ಲ ದುಡ್ಡಿದ್ರೆ ಮಾತ್ರ ಅಂತ ಕೇಳ್ತಿದ್ದೆ. ನಂಬಿರಲಿಲ್ಲ. ಆ ಮಾತು ನಿಜ ಅಂತ ಪ್ರೋವ್ ಮಾಡ್ಕೊಳ್ಳೋ ಟೈಮ್ ಬಂದಿದೆ, ಮಾಡದೆ ಬಿಡೋದಿಲ್ಲ.

 

 

Love Attitude Quotes In Kannada

ಒಂದು ಸಲ ಬೇಡ ಅಂತಾ ಅಂದ್ಕೊಂಡ್ರೆ ಯಾವನೇ ಆಗ್ಲಿ ಯಾವಳೇ ಆಗ್ಲಿ ಮತ್ತೆ ತಿರುಗಿ ನೋಡೋ ಮತ್ತೆ ಇಲ್ಲ. 

ನೀನು ಸಿಗಲಿಲ್ಲ ಅಂತಾ ನಾನೇನು ಆತ್ಮಹತ್ಯೆ ಮಾಡಿಕೊಂಡು ಸಾಯಲ್ಲ. ಏಕೆಂದರೆ ನೀನಿಲ್ಲದೆ ಬದುಕಲ್ಲ ಅನ್ನೋಕೆ ನೀನೇನು ಆಕ್ಸಿಜನ್ ಅಲ್ಲ.

ನೀನು ನನ್ನನ್ನು ತಿರಸ್ಕರಿಸಿದೆ ಅಂತಾ ನನಗೇನು ಬೇಜಾರಿಲ್ಲ. ಏಕೆಂದರೆ ಬಡವರಿಗೆ ಕಾಸ್ಟ್ಲಿ ಐಟಂಗಳನ್ನು ಪಡೆದುಕೊಳ್ಳುವ ಯೋಗ್ಯತೆ ಇರುವುದಿಲ್ಲ ಅಂತಾ ನನಗು ಗೊತ್ತಿದೆ.

 

ಮುಖಕ್ಕೆ ಕೇಜಿ ಲೆಕ್ಕದಲ್ಲಿ ಮೇಕಪ್ ಮಾಡೋ ಹುಡುಗಿರೆ ಇಷ್ಟೆಲ್ಲಾ ಗಾಂಚಾಲಿ ತೊರ್ಸಬೆಕಿದ್ರೆ ಇನ್ನೂ ಮುಖಕ್ಕೆ 1 ಗ್ರಾಮ್ ಪೌಡರ್ ಹಚ್ದೆ ಬಿಸಿಲಲ್ಲಿ ಒಡಾಡೊ ಹುಡುಗರು ನಾವು ಇನ್ನೆಷ್ಟ್ ಗಾಂಚಾಲಿ ತೊರ್ಸಬೇಕು. ಮೇಕಪ್ ಮಾಡೋರು ಈ ಪೊಸ್ಟನ ನೋಡ್ಕೊಂಡು ಉರ್ಕೊಳಿ. ಮೇಕಪ್ ಮಾಡೋದಿಲ್ಲಾ ಅನ್ನೋರು ಕಮೆಂಟ್ ಮಾಡ್ಕೊಳ್ಳಿ.

 

ನಾನು ಅಷ್ಟು ಸುಲಭವಾಗಿ ಯಾರನು ಕಳ್ಕೊಳಲ್ಲ. ಯಾರ್ನಾದ್ರು ಕಳ್ಕೊಂಡಿದೀನಿ ಅಂದ್ರೆ ಆ ನನ್ ಮಕ್ಳು ಅದ್ಕೆ ಲಾಯಕ್ಕು ಅಂತ ಅರ್ಥ 

 

ನಾನು ಅಹಂಕಾರಿಗಳಿಗೆ ದುರಹಂಕಾರಿ.

Nanu ahankarigalige durahankari kannada attitude quotes

 

ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡುವುದಿಲ್ಲ. ಮೋಸ ಮಾಡಿದವರನ್ನು ಯಾವತ್ತೂ ಮರೆಯುವುದಿಲ್ಲ.

 

ನಗ್ತಾ ನಗ್ತಾನೇ ಉರ್ಸ್ಬೇಕು ಕೆಲವು ಜನಗಳನ್ನ. ಯಾಕಂದ್ರೆ ಅವ್ರು ಭ್ರಮೆಲಿ ಇರ್ತಾರೆ, ಅವ್ರ ಬಿಟ್ರೆ ನಮ್ಗ್ ಬೇರೆ ಜೀವನನೇ ಇಲ್ಲ ಅಂತ. 

 

ಸೂಪರಾಗಿ ಇರೋ ಹುಡ್ಗೀರು ಸೈಲೆಂಟ್ ಆಗಿ ಇರ್ತಾರೆ. ಸುಮಾರಾಗಿ ಇರ್ತಾರಲ್ಲ ಅವ್ರ್ಗೆ ಗಾಂಚಾಲಿ ಜಾಸ್ತಿ.

ನನಗೆ ಬೆಟ್ಟದಷ್ಟು ಪ್ರೀತಿ ತೋರ್ಸೋದು ಗೊತ್ತು. ಆ ಪ್ರೀತಿಗೆ ಬೆಲೆ ಸಿಗ್ಲಿಲ್ಲ ಅಂದ್ರೆ ಬದ್ಕೋದು ಗೊತ್ತು. 

single attitude quotes in kannada

 

ನಿನ್ನನ್ನು ನಿರ್ಲಕ್ಷಿಸಿದವರ ಎದುರು ನಿರೀಕ್ಷೆಗೂ ಸಿಗದ ಹಾಗೆ ಬದುಕು. 

money attitude quotes in kannada

ನಾವಾಗಿಯೇ ಪದೇ ಪದೇ ಮಾತನಾಡಿಸಿ ಗೌರವ ಕಳೆದುಕೊಳ್ಳುವುದಕ್ಕಿಂತ ಮೌನವಾಗಿದ್ದು ನಮ್ಮ ಸ್ವಾಭಿಮಾನ ಉಳಿಸಿಕೊಳ್ಳುವುದು ಲೇಸು. 

self respect attitude quotes in kannada for girls

ನಿನ್ನ ಯೋಗ್ಯತೆಗೆ ತಕ್ಕಂತೆ ನೀನು ಯೋಚನೆ ಮಾಡ್ತಿಯಾ ನನ್ನ ಯೋಗ್ಯತೆಗೆ ತಕ್ಕಂತೆ ನಾನು ಯೋಚನೆ ಮಾಡ್ತೀನಿ. ಇದೇ ನನಗು ನಿನಗೂ ಇರುವ ವ್ಯತ್ಯಾಸ. 

 

Actually  ನಾನು ಯಾರನ್ನು Avoid ಮಾಡಲ್ಲ. ಅವರು Start  ಮಾಡ್ತಾರೆ ನಾನು Continue  ಮಾಡ್ತೀನಿ ಅಷ್ಟೇ. 

Cool attitude quote in kannada

ಒಂದ್ ಸಲ ಹೇಳ್ಬೇಕು ಎರಡ್ ಸಲ ಹೇಳ್ಬೇಕು. ಅರ್ಥ ಮಾಡ್ಕೊಂತಿಲ್ಲ ಅಂದ್ರೆ ಬಿಟ್ ಬಿಡ್ಬೇಕು. ಯಾಕಂದ್ರೆ ಪದೇ ಪದೇ ಹೇಳ್ತಿದ್ರೆ ಹೇಳೋ ಪದಕ್ಕೂ ಅರ್ತ ಇರಲ್ಲ. ಹೇಳೋ ವ್ಯಕ್ತಿಗೂ ಬೆಲೆ ಇರಲ್ಲ. 

Self respect attitude quotes in kannada

ನಂಗೆ ಯಾರ್ ರಿಪ್ಲೈ ನು ಬೇಕಾಗಿಲ್ಲ. ಯಾರ್ ಜೊತೆ ಮಾತಾಡೋ ಅವಶ್ಯಕತೆ ನು ಇಲ್ಲ. ನನಗೆ ಮರ್ಯಾದೆ ಸಿಗದೇ ಇರೋ ಜಾಗದಲ್ಲಿ ನನ್ ನೆರಳು ಕೂಡ ಹೇಳತ್ತೇ ಅಲ್ಲಿ  ಇರೋಕೆ ಹೋಗ್ಬೇಡ ಅಂತ. 

 

ಸಿಂಗಲ್ ಆಗಿ ಇದ್ರೂ ಹ್ಯಾಪಿ ಆಗಿರೋಕೆ ಧಮ್ ಬೆಕೋಲೆ!

single attitude quotes in kannada 2

ಲೇ ಬಿತ್ರಿ.. ನೀ ಏನ ಊರಿಗೆ ಒಬ್ಬಾಕೆ ಸುಂದರಿ ಅಲ್ಲ. ನಿನ್ನ ನಂಬ್ಕೊಂಡ್ ನಾವೇನ್ ಕುಂತಿಲ್ಲ. ಪ್ರೀತೀಲ್ ನಿಯತ್ತು ಇಲ್ಲಾಂದ್ರೆ ನೀ ನಮ್ಮ್ ಕಾಲಾಗ್ ಚಪ್ಪಲ್ಲ. 

 

ನನಗೂ ಸಿಟ್ಟಿದೆ. ನಿನಗಿಂತ ನನಗೆ ನನ್ನ ಆತ್ಮಗೌರವ ಹೆಚ್ಚಿದೆ. 

 

ನನ್ನ ಪ್ರೀತಿಸುವವರು ಯಾರು ಇಲ್ಲ ನಿಜ. ನಾನು ಒಂಟಿ ಆಗಿರಬಹುದು. ಆದರೆ ನಾನು ಯಾವತ್ತೂ ಬಣ್ಣ ಬದಲಿಸಲ್ಲ.

 

ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಯೋಚನೆ ಮಾಡ್ಕೊಂತಾ ಬೇಜಾರ್ ಮಾಡ್ಕೊಳೂರು ನಾವಲ್ಲ. ಬಿಟ್ಟ ಹೋದವರ ಮುಂದೆ ನಿಂತು ಬೆಳೆದು ಮೇರಿಯೋರು ನಾವು.

ಇದನ್ನೂ ಓದಿ:

Friendship Attitude Quotes in Kannada Language

ಸಮಯ ಯಾವತ್ತೂ ಒಂದೇ ರೀತಿ ಇರಲ್ಲ. ಇಂದು ನಿನ್ನ ಸೋಲನ್ನು ನೋಡಿ ಆಡಿಕೊಂಡವರು ನಾಳೆ ನಿನ್ನ ಗೆಲುವನ್ನು ನೋಡಿ ಆಡಿಕೊಳ್ಳುತ್ತಾರೆ.

 

ಯಾರು ಇತರರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕಿರುತ್ತಾರೆ. ಉಳಿದವರು ಬದುಕಿದ್ದು ಸತ್ತಂತೆ.

 

ನೀವು ಧನಾತ್ಮಕವಾಗಿದ್ದಾಗ ಅದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ.

 

ಚಿಕ್ಕವರಿದ್ದಾಗ ಶಿಕ್ಷಕರ ಮತ್ತೆ ಕೇಳಲಿಲ್ಲ. ಈಗ ದೊಡ್ಡವನಾಗಿದಿನಿ.  ಸಿಕ್ ಸಿಕ್ಕವ್ರ್ ಮಾತು ಕೇಳ್ತೀವಾ?!

 

ತಪ್ಪು ಮಾಡಿದ್ರೆ ತಲೆ ಬಗ್ಗಿಸ್ತೀನಿ. ತಪ್ಪು ಮಾಡಿಲ್ಲ ಅಂದ್ರೆ ಬ್ರಹ್ಮ ಬಂದ್ರು ಬಿಡಲ್ಲ. 

 

ಮೌನವಾಗಿದ್ದೇನೆ ಕಾಯುತ್ತಾ ನನ್ನ ಸಮಯಕ್ಕೆ. 

 

ನಟನೆಯ ಬದುಕು ಯಾವತ್ತೂ ನೆಮ್ಮದಿ ಕೊಡುವುದಿಲ್ಲ.

 

ಕೆಲವು ಸಾರಿ ದ್ವೇಷಿಸೋರಿಗೆ ದಂಡಿಸಬೇಕು ಅನ್ನೋ ಅವಶ್ಯಕತೆ ಇಲ್ಲ. ನಮ್ಮ ನಗು ಮೌನ ಮತ್ತು ನಿರ್ಲಕ್ಷವೇ ಸಾಕು.

 

ತೋಳ್ ತುಂಬಾ ತಾಕತ್ ಇದ್ರೂ ತಕರಾರ್ ಮಾಡಲ್ಲ. ಎದೆ ತುಂಬಾ ನೀಯತ್ತು ಇದ್ರೂ ಗುಲಾಮ ಆಗಿರಲ್ಲ. ಗೂಳಿ ಸೈಲೆಂಟ್ ಆಗಿದೆ ಅಂತ ಗಾಂಚಾಲಿ ಮಾಡಕ್ ಬಂದ್ರೆ ಗುದ್ದೋ ಏಟಿಗೆ ಗೂಗಲ್ ಅಲ್ಲಿ ಹುಡ್ಕಿದ್ರು ಟ್ರೀಟ್ಮೆಂಟ್ ಸಿಗಲ್ಲ!!

 

ಸಾವಿರ ಜನ ಸಾವಿರ ಮಾತಾಡ್ತಾರೆ ಅಂತಾ ತಲೆ ಕೆಡಿಸಿಕೊಂಡು ಕುಳ್ಳಬಾರದು. ನಾವು ಏನಂತ ನಮಗೆ ಗೊತ್ತಿದ್ರೆ ಸಾಕು ಅಷ್ಟೇ ಜೀವನ.

positive attitude quotes in kannada

ಇನ್ಮೇಲೆ ಯಾರ್ ಬಗ್ಗೆನೂ ತಲೆ ಕೆಡ್ಸ್ಕೊಳೋ ಮಾತೆ ಇಲ್ಲ. ಯಾಕಂದ್ರೆ ಅವರ ಲೈಫ್ ಹೇಗೆ ಅವರಿಗೆ ಅಷ್ಟು ಮುಖ್ಯನೋ ನಮ್ಮ ಲೈಫ್ ನಮಗೂ ಕೂಡ ಅಷ್ಟೇ. 

 

ನಾಟಕ ಮಾಡೋಕ್ ನಂಗ್ ಬರಲ್ಲ. ಸುಳ್ಳು ಹೇಳಿ ಮೋಸ ಮಾಡೋಕು ಬರಲ್ಲ. ಬಕೆಟ್ ಹಿಡಿಯೋಕೆ ಮೊದಲೇ ಬರಲ್ಲ. ನನಗೆ ಗೊತ್ತಿರೋದು ಒಂದೇ! ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳೋದು. 

 

ಸೋತಿದ್ದೀನೀ ನಿಜ. ಆದರೆ ಒಂದು ದಿನ ಗೆದ್ದೇ ಗೆಲತೀನಿ. 

 

ಎಲ್ರು ನಮಗೆ ಬೈಕೊಂಡೆ ಓಡಾಡ್ತಿರ್ಬೇಕು. ಯಾಕಂದ್ರೆ ಇವತ್ತಿನ ಕಾಲದಲ್ಲಿ ಬೈಸ್ಕಳೋರ್ಗೆ  ಬೆಲೆ ಜಾಸ್ತಿ!

 

ಒಳ್ಳೆಯವರಾದ್ರು ಸರಿ, ಕೆಟ್ಟವರಾದ್ರು ಸರಿ ನಾನ್ ಕೊಡೊ ಬೆಲೆ ಕೊಟ್ಟೆ ಕೊಡ್ತೀನಿ. ಅದನ್ನ ಉಳಿಸ್ಕೊಳ್ಳೋದು ಬಿಡೋದು ನಿಮಿಗ್ ಬಿಟ್ಟಿದ್ದು.

 

Attitude ಅಂತ ಬಂದ್ರೆ ನಿಮ್ ಅಪ್ಪ ನಾನು.

 

 

ಎಲ್ಲಾನು ಇದೆ ಅಂತ ಮೆರೆಯಬೇಡ. ಮೇಲೆ ಇರೋನು ಕೊಟ್ಟು ನೋಡ್ತಾನೆ. ಕಿತ್ಕೊಂಡು ನೋಡ್ತಾನೆ. 

 

ಮಾತನಾಡೋರು ಸಾವಿರ ಮಾತನಾಡಲಿ. ನಿನ್ನ ವಿಚಾರ ಯಾವತ್ತ್ತು ಬದಲಾಗಬಾರದು. 

 

ಫಸ್ಟ್ ನೀನ್ ಕರೆಕ್ಟಾಗ್ ಇದ್ದೀಯ ಅಂತ ನೋಡ್ಕೋ ಆಮೇಲೆ ನನ್ನ ಬಗ್ಗೆ ಮಾತಾಡು. 

 

ಮಾತಿಗೆ ಮಾತು, ಗೌರಕ್ಕೆ ಗೌರವ, ತಿರಸ್ಕಾರಕ್ಕೆ ತಿರಸ್ಕಾರ. ಇದು ಅಹಂ ಅನಿಸಿದರೂ ಅದು ಆತ್ಮ ಗೌರವಕ್ಕೆ ಅಗತ್ಯ. 

 

ಮಾತನಾಡೋಕೆ ಧೈರ್ಯ ಇಲ್ಲ ಅಂತಲ್ಲ. ನಾನ್ ವಯಲೆಂಟ್ ಆದ್ರೆ ನನ್ನ ಮುಂದೆ ಯಾರು ನಿಲ್ಲಲ್ಲ. 

 

ಆದಷ್ಟು ಜಗಳದಿಂದ ದೂರ ಇರ್ತೀನಿ. ಕಾರಣ ಇಲ್ಲದೆ ಯಾರಾದ್ರೂ ಮೈಮೇಲೆ ಬಂದ್ರೆ ಯಾರನ್ನೂ ಉಳಿಸಲ್ಲ!

 

ನಂಬಿಕೆ, ಪ್ರೀತಿ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರೇ ಹುಡುಗರು!

 

ನಾನು ನನ್ನ ಬಳಿ ಏನಿದೆಯೋ ಎಷ್ಟಿದೆಯೋ ಅದರಲ್ಲೇ ಖುಷಿಯನ್ನು ಹುಡುಕುತ್ತೇನೆ. ಯಾಕಂದ್ರೆ ನನ್ನ ಬಳಿ ಇರೋದು ಬೇರೆಯವರ ಬಳಿ ಇರಲು ಸಾಧ್ಯವಿಲ್ಲ. ಬೇರೆಯವರ ಬಳಿ ಇರೋದು ನನಗೆ ಬೇಕಾಗಿಲ್ಲ. 

 

ಸಮಯ ಯಾರ ಸ್ವತ್ತು ಅಲ್ಲ, ನೆನಪಿಡು ಇವತ್ತು ನಿನ್ನದು ನಾಳೆ ನನ್ನದು. 

 

ಅಹಂಕಾರ ಇರಲೇ ಬೇಕು. ನಮ್ಮ ಸ್ವಾಭಿಮಾನವನ್ನು ಪರೀಕ್ಷೆ ಮಾಡುವವರಿಗೆ ಪಾಠ ಕಲಿಸಲು. 

 

I’m sorry . ನಾನು ಬದಲಾದೆ, ನಿನ್ನಿಂದ. ಕೇವಲ ನನಗಾಗಿ.

 

ಹಾಕೋ ಬಟ್ಟೆಗಿಂತ ಆಡುವ ಮಾತುಗಳು ಬಳಸಲು ಶಬ್ಧಗಳು ಬ್ರಾಂಡೆಡ್ ಆಗಿರಲಿ.

 

ನಮ್ಮ ಹುಡುಗರ ಜೀವನ ಕುಕ್ಕರ್ ಇದ್ದಂಗೆ, ಕೆಳಗಡೆ ಉರಿತ ಇದ್ರೂ ಮೇಲೆ ವಿಸಿಲ್ ಹೊಡಿತಾ ಇರ್ತಾರೆ.

 

ಆಡಿಕೊಳ್ಳೋರಿಗೆ ಉತ್ತರಿಸಬೇಡಿ. ಚೆನ್ನಾಗಿ ಉರಿಸಿ. 

 

ನಾನು ದುರಹಂಕಾರನ ನಾಯಿ ತರ ಕಟ್ಟಿ ಸಾಕಿರೋದು. ನೀಯತ್ತು ಕಳ್ಕೊಂಡವರಿಗಷ್ಟೇ ಅದು ಸಾಕಿರೋದು. 

 

ನನಗೆ ಕೆಟ್ಟದ್ ಮಾಡಿ ನೀವ್ ಚೆನ್ನಾಗಿರೋಕೆ ಆದ್ರೆ ನನ್ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಚ್ಚರಿಕೆ. 

 

ಬಿಟ್ಟು ಬಿಡು ನಿನ್ನ ಅರಿಯದೆ ಇರುವ ಜನರ ಚಿಂತೆ. ಸಮಯವೇ ತಿಳಿಸುವುದು ಅವರಿಗೆ ನಿನ್ನ ಬೆಲೆ ಏನೆಂದು. 

 

ಯಾರ ಮುಂದೇನು ಹೇಳಿಕೊಳ್ಳಬೇಡಿ ನನಗೆ ಯಾರು ಇಲ್ಲ ಅಂತ. ಹೆಮ್ಮೆಯಿಂದ ಹೇಳಿಕೊಳ್ಳಿ ನನ್ನಹಾಗೆ ಯಾವನು ಇಲ್ಲ ಅಂತ. 

 

Don’t worry. ನಮ್ಮ ಬೆಲೆ ಗೊತ್ತಾದ್ಮೇಲೆ ವಾಪಾಸ್ ಬಂದೆ ಬರ್ತಾರೆ. 

 

ಯೋಚನೆಯನ್ನು ಕೊಂದು ಬಿಡು. ಇಲ್ಲಾಂದ್ರೆ ಯೋಚನೆ ನಿನ್ನನ್ನು ಕೊಲ್ಲುತ್ತದೆ. 

 

ಮುಂದ್ ಏನ್ ಆಕ್ತಿನೋ ಗುತ್ತಿಲ್ಲ. ಏನ್ ಆಗೋದಿಲ್ಲ ಅಂತ ತಿಳ್ಕೋಬ್ಯಾಡ್ರಿ. ಏನಾದ್ರೂ ಆಕ್ತಿನ್ ನಾ ಬಾಲ್ ಖತರ್ನಾಕ್ ಅದಿನಿ. 

 

ಈಗ ಯಾವುದಕ್ಕೂ ಒತ್ತಾಯ ಇಲ್ಲ. ಬರುವುದಾದರೆ ಬರಲಿ. ಇರುವುದಾದರೆ ಇರಲಿ. ಹೋಗುವುದಾದರೆ ಹೋಗಲಿ. 

 

ಅವಕಾಶಕ್ಕಾಗಿ ಕಾಯಬೇಡಿ. ಅವಕಾಶವನ್ನು ನೀವೇ ಹುಟ್ಟು ಹಾಕಿ. 

 

ಒಳ್ಳೆಯ ಯೋಚನೆಗಳು ಫಲಿತಾಂಶವನ್ನು ಕೊಡುತ್ತದೆ. ಅದಕ್ಕಾಗಿ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ. 

 

ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ. ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ. 

 

ಕಷ್ಟ ಕಾಲ್ದಾಗ ದೋಸ್ತಿ ಮರೆತು ದುಶ್ಮನ್ಗಿರಿ ಮಾಡಾಕ್ ಬರ್ತಿ. ದೋಸ್ತಾ, ದುಶ್ಮನ್ಗಿರಿ ನೇ ಮಾಡು. ನಂಗ್ ಸಂತೋಷ ಐತಿ. ಆದ್ರೆ ಚಮಚಾಗಿರಿ ಮಾಡೋಕ್ ಹೋಗ್ಬೇಡ. ಯಾಕಂದ್ರೆ ನಮ್ಮ್ ಹಿಂದ್ ಮಾತಾಡೋ ಚೋದಿಮಕ್ಳ್ ನಮ್ಮ್ ಮುಂದೆ ನಂದೇನು ಹರ್ಕೊಳ್ಳೋಕೂ ಅಗುದಲ್ಲ. 

 

ಯಾರನ್ನು ನಂಬಿಸೋ ಅವಶ್ಯಕೆತೆನು ನಂಗಿಲ್ಲ. ನನ್ನ ನಂಬು ಅಂತ ನಾನು ಯಾವತ್ತೂ ಯಾರಿಗೂ ಒತ್ತಾಯನು ಮಾಡಲ್ಲ. 

 

ನೀನು ನನ್ನೊಂದಿಗೆ ಹೇಗೆ ವರ್ತಿಸುತ್ತೀಯಾ ಅನ್ನೋದರ ಮೇಲೆ ನನ್ನ attitude ಡಿಸೈಡ್ ಆಗತ್ತೆ. ನೀನು ಗುಡ್ ಆದರೆ ನಾನು ಬೆಸ್ಟ್ ಆಗುವೆ, ನೀನು bad ಆದರೆ ನಾನು ಡ್ಯಾಡ್  ಆಗುವೆ. 

 

ಯಾರೋ ಏನ್ ಏನೋ ಹೇಳ್ತಾರೆ ಅಂತ ತಲೆ ಕೆಡುಸ್ಕೊಳೊ attitude ನಂದಲ್ಲ. ನಾನ್ ಇರೋದೇ ಹಿಂಗೆ.

 

ನಾನ್ ಯಾರ್ ಯಾರ್ ಕಣ್ಣಿಗೆ ಕೆಟ್ಟವನಾಗಿ ಕಾಣ್ತಾ ಇದ್ದಿನೋ, ದಯವಿಟ್ಟು ನಿಮ್ಮ ಕಣ್ಣುಗಳನ್ನು ದಾನ ಮಾಡಿ ಬಿಡಿ, ಯಾಕಂದ್ರೆ ನಾನು change ಆಗೋ ಮಗಾನೇ ಅಲ್ಲಾ.

 

ಬ್ರಹ್ಮ ಕೊಟ್ಟಿರೋ ಲೈಫ್ ಇದು. ಅವನಜ್ಜಿ ನಾಲ್ಕೇ ದಿನ ಬದುಕಿದ್ರು ದೌಲತ್ತಲ್ಲಿ ಬದುಕ್ಬೇಕು..

 

Look ಸೈಲೆಂಟ್, style ವೈಲೆಂಟ್, ನಾವು ಯಾವಾಗ್ಲೂ different.

 

ಏನ್ ಜನ ಗುರು. ಮಾತಾಡ್ದೆ ಇದ್ರೆ ego ಅಂತಾರೆ, ಜಾಸ್ತಿ ಮಾತಾಡಿದ್ರೆ flirt ಅಂತಾರೆ, ಕಮ್ಮಿ ಮಾತಾಡಿದ್ರೆ attitude ಅಂತಾರೆ.

 

ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ.

 

ನನ್ ಲೈಫಲ್ಲಿ ಯಾರೇ ಬರ್ಲಿ, ಯಾರೇ ಹೋಗ್ಲಿ. ನನ್ ಮುಖದಲ್ಲಿ ಸ್ಮೈಲ್, ನನ್ ಲೈಫ್ ನಲ್ಲಿ style ಹೀಗೆ ಇರುತ್ತೇ.

 

ಸಣ್ಣ ಸಣ್ಣವರಿಗೆಲ್ಲಾ ಸಾರ್ ಅನ್ನುತ್ತಾ ಕೂತ್ಕೊಂಡ್ರೆ ನಾವು ಸಣ್ಣವರಾಗೇ ಇರ್ತೀವಿ. ಇನ್ನೇನಿದ್ದರೂ ದೊಡ್ಡವರಿಗೆ ದಂಡಂ ದಶಗುಣಂ ನಾವೇ ಅವ್ರ ಜಾಗದಲ್ಲಿರೋದು..

 

ನಾವು ಮೇರಿತಿದಿವಿ ಅಂದ್ರೆ ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.

 

ಊರ್ ಜನ ನೂರ್ ಮಾತಾಡ್ತಾರೆ ಅಂತ ನಾವ್ ಅವ್ರ್ ಅವ್ರು ಅಂದ್ಕೊಂಡಹಾಗೆ ಬದುಕೋಕೆ ಆಗಲ್ಲ, ಯಾಕಂದ್ರೆ ನಮ್ಮ್ ಲೈಫ್ ನಮ್ಮಿಷ್ಟ. ಅವರಿಗೆ ಬೇಕಾಗಿರೋದು ಮಾತು. ಚೆನ್ನಾಗಿದ್ರು ಮಾತಾಡ್ತಾರೆ ಕೆಟ್ಟರು ಮಾತಾಡ್ತಾರೆ..

 

ಬರಿಯೋಕೆ ಒಂದಳ್ಳೇ Quotes ಇಲ್ಲ ಅಂದ್ರೆನು? ಹಾಕೋ photoಲೀ ಒಂದ್ ಒಳ್ಳೇ look ಇದ್ರೆ ಸಾಕು, ದುಷ್ಮನ್ ಗಳೇ ನಮ್ ಬಗ್ಗೆ status ಬರಿಬೇಕು.

 

ಎಲ್ರಿಗೂ ಒಂದ್ ಖದರ್ ಇರಬೇಕು. ಅದು ನಮ್ಮ ಹತ್ತಿರ ಸಲ್ಪ ಜಾಸ್ತಿನೇ ಇದೆ. ಬೆಟ್ಟ ಎತ್ತೋ ತಾಕತ್ ಇಲ್ಲದಿದ್ದರು, ಬಂಡೆ ಹೊಡಿಯೋ power ಇದೆ, ಎದುರಾಳಿ ಎಷ್ಟೆ strong ಇದ್ರೂ, ನುಗ್ಗಿ ಹೋಡಿಯೋ ಗಟ್ಟಿತನ ಇದೆ.

 

ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ ಒಂದು ಹುಲಿನಾ ಬೇಟೆ ಆಡೋಕೆ ಆಗುತ್ತಾ?? ಹುಲಿ ಯಾವತ್ತಿದ್ರೂ ಹುಲಿನೇ.

 

ಒಳ್ಳೆತನ ಅನ್ನೋದು ತುಂಬಾ costly ಮಗಾ. ಅದು ಎಲ್ರೂ ಹತ್ರಾನೂ ಇರಲ್ಲ.

 

ಕಂಡ ಕಂಡವರನ್ನೆಲ್ಲಾ ನೋಡಿ ಉರ್ಕೊಳ್ಳೋ ಅಭ್ಯಾಸ ನನಗಿಲ್ಲ. ನನ್ನನ್ನ ನೋಡಿ ಬೇರೆಯವರು ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ

 

ಸತ್ಯ ನುಡಿದವನ ಬೆನ್ನು ಬೆತ್ತಲು. ಹಾಗೆ ನನ್ನ ಎದುರು ಹಾಕಿಕೊಂಡವನು ಬಾಳು ಯಾವಾಗಲೂ ಕತ್ತಲು.

 

ಎಷ್ಟು ಜನರ ಮಧ್ಯೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ. ಎಷ್ಟು ಜನರ ಮನಸ್ಸಿನಲ್ಲಿ ಇರ್ತೀವಿ ಅನ್ನೋದು ಮುಖ್ಯ.

 

ಭಯ ಇರೋನು ಭೂಮಿಗೆ ಭಾರ ಆಗ್ತಾನೆ, ಧೈರ್ಯ ಇರೋನು ಜೀವನಾನೇ ಆಳ್ತಾನೆ.

 

ಊರ ಜನ ನೂರ ಮಾತಾಡಿದ್ರೂ ನಾನು ನನ್ನ ದಾರಿಲೇ ಬದುಕೋದು. ಯಾರ್ ಏನ್ ಕಿತ್ಕೊಳ್ತೀರೋ ಕಿತ್ಕೊಳಿ.

 

ಆಟ ಯಾವುದು ಅಖಾಡ ಯಾರದು ಅನ್ನೊದ್ ಮುಖ್ಯ ಅಲ್ಲ ಗುರು. ಆಡೊ ಆಟ ಗೊತ್ತಿರಬೇಕು ನೋಡೊ ನೋಟ ಖಡಕ್ ಆಗಿರಬೇಕಷ್ಟೆ.

 

 

ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ ಹುಲಿ ತರಾ ಮೆರಿಬೇಕು. ಇಲ್ಲಾ ಮುಚ್ಚಕೊಂಡು ಇರಬೇಕು. ಅದನ್ನಾ ಬಿಟ್ಟು ನಮ್ಮನ್ನ ನೋಡಿ ಉರ್ಕೊಬಾರದು.

Single Attitude Quotes in Kannada

Block ಮಾಡೋಕೆ ನಂಗು ಬರುತ್ತೆ ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ Block ಮಾಡೋದ್ರಲ್ಲಿ ಇಲ್ಲ.

 

ದುಬಾರಿ ದುನಿಯಾದಲ್ಲಿ ದರ್ಬಾರ್ ಮಾಡೊ ಧೈರ್ಯ ಇದ್ದೋನೆ “The King Maker”

 

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ ಅಷ್ಟೆಲ್ಲಾ ಧಿಮಾಕ್ ಇರಬೇಕಾದ್ರೆ, ರಾಜಮಾರ್ಗದಲ್ಲಿ ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಗತ್ತು ಇರಬೇಡ.

 

ನಾನ್ ಇರೋದೇ ಹಿಂಗೇ. ಮಾತನಾಡೋದೇ ಹಿಂಗೇ. ಇಷ್ಟ ಆದ್ರೆ ಇರು ಇಲ್ಲಾಂದ್ರೆ ಹೋಗ್ತಿರು. 

 

ನನ್ನ ಲೈಫ್ನಲಿ ನನ್ಗೆ ಬೇಕಾಗಿರೋದು ಇಬ್ರೆ. ಒಂದು ನಾನ್ ಪ್ರೀತ್ಸೋರು, ಇನ್ನೊಂದು ನನ್ನ ಪ್ರೀತ್ಸೋರು.

love attitude quotes in kannada 2

ನನಗೆ ಸಲ್ಪ ಕೊಬ್ಬು ಜಾಸ್ತಿ ಯಾಕಂದ್ರೆ ನಾನು ನೀಯತ್ತಾಗಿ ಇರ್ತೀನಿ ಅದಕ್ಕೆ.

 

 

ನಾವು ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ ಮತ್ತು ಅದರೊಂದಿಗೆ ನಾವು ಬದಲಾಗಬೇಕೆ ಅಥವಾ ಬೇಡವೇ ಎಂಬುದು ನಮ್ಮ ಆಯ್ಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬದುಕುತ್ತಿಲ್ಲ ಎಂದು ಅವರು ಭಾವಿಸುವ ಸಮಯ ಬರುತ್ತದೆ. ಈ ಲೈಫ್ ಆಟಿಟ್ಯೂಡ್ ಉಲ್ಲೇಖಗಳು ಆ ನಿಜವಾದ ಸಾಮರ್ಥ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು ಮತ್ತು ನೀವು ನಿಜವಾಗಿಯೂ ಇಷ್ಟಪಡುವ ಈ attitude quotes in Kannada collection ಅನ್ನು ನಾವು ನಿಮಗಾಗಿ ಮಾಡಿದ್ದೇವೆ.

ಈ attitude quotes in kannada ಉಲ್ಲೇಖಗಳು ವಿವಿಧ ಲೇಖಕರು ಮತ್ತು ವ್ಯಕ್ತಿಗಳಿಂದ ಮೂಲವಾಗಿವೆ. ನೀವು ಸ್ಥಳೀಯ ಕನ್ನಡ ಮಾತನಾಡುವವರಾಗಿರಲಿ ಅಥವಾ ಈ ರೋಮಾಂಚಕ ಭಾಷೆಯನ್ನು ಅನ್ವೇಷಿಸಲು ಸರಳವಾಗಿ ಆಸಕ್ತಿ ಹೊಂದಿರಲಿ, kannada attitude quotesಗಳು ನಿಮ್ಮನ್ನು ಗೆಲ್ಲುವ ಮನಸ್ಥಿತಿಯನ್ನು ಬೆಳೆಸಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಪ್ರೇರೇಪಿಸುತ್ತವೆ ಎಂದು ನಾವು ಭಾವಿಸುತ್ತೇವೆ.

ನಮ್ಮ ನೂರಕ್ಕೂ ಹೆಚ್ಚು attitude quotes kannada ಸಂಗ್ರಹವು ಗೆಲ್ಲುವ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಬಯಸುವ ಯಾರಿಗಾದರೂ ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಸಬಲೀಕರಣದ ಮನೋಭಾವವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂದು ನಾವು ಭಾವಿಸುತ್ತೇವೆ. 

ಇನ್ನೂ ಯಾವುದಾದರೂ ಉತ್ತಮ Kannada attitude quotes ಗಳನ್ನು ನಾವು ಮಿಸ್ ಮಾಡಿದ್ದಾರೆ ಅವುಗಳನ್ನು ನಮಗೆ ತಿಳಿಸಿ. ನಾವು ಅದನ್ನು ಈ ಲೇಖನದಲ್ಲಿ ಸೇರಿಸುತ್ತೇವೆ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.