ಆತ್ಮೀಯ ಓದುಗರೇ, ಅತ್ಯುತ್ತಮ ಜೀವನ ಉಲ್ಲೇಖಗಳ ಸಂಗ್ರಹಣೆಗೆ ಸ್ವಾಗತ. ಈ Baduku Kannada Quotes ಬದುಕು ಕನ್ನಡ ಕ್ವೋಟ್ಸ ಸಂಗ್ರಹದಲ್ಲಿ ಸ್ವಯಂ ಅನ್ವೇಷಣೆ, ಪ್ರತಿಬಿಂಬ ಮತ್ತು ಬೆಳವಣಿಗೆಯ ಪ್ರಯಾಣವನ್ನು ಪ್ರಾರಂಭಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಪ್ರತಿಯೊಂದು baduku quotes in kannada ನಿಮಗೆ ಖಂಡಿತವಾಗಿ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಅರ್ಥಪೂರ್ಣ ಜೀವನವನ್ನು ನಡೆಸುವುದು ಎಂದರೆ ಏನು ಎಂಬುದರ ಸಾರದ ಮೇಲೆ ಬೆಳಕು ಚೆಲ್ಲುತ್ತದೆ.
ಜೀವನವು ಅನುಭವಗಳು, ಭಾವನೆಗಳು ಮತ್ತು ಅನಿಶ್ಚಿತತೆಗಳೊಂದಿಗೆ ನಾವೆಲ್ಲರೂ ಕೈಗೊಳ್ಳುವ ಪ್ರಯಾಣವಾಗಿದೆ. ದಾರಿಯುದ್ದಕ್ಕೂ ಬದುಕಿನ ತಿರುವುಗಳನ್ನು ನ್ಯಾವಿಗೇಟ್ ಮಾಡಲು ನಾವು ಮಾರ್ಗದರ್ಶನ ಮತ್ತು ಸ್ಫೂರ್ತಿಯನ್ನು ಹುಡುಕುತ್ತೇವೆ. ಅತ್ಯಂತ ಆಳವಾದ ಮತ್ತು ಚಿಂತನ-ಪ್ರಚೋದಕ ಉಲ್ಲೇಖಗಳಲ್ಲಿ ನಾವು ಬುದ್ಧಿವಂತಿಕೆಯ ನಿಧಿಯನ್ನು ಕಂಡುಕೊಳ್ಳುತ್ತೇವೆ.
ಈ baduku kannada quotesಗಳು ಮಾನವ ಅನುಭವದ ಮೇಲೆ ವೈವಿಧ್ಯಮಯ ದೃಷ್ಟಿಕೋನಗಳನ್ನು ನೀಡುತ್ತವೆ.ಈ ಬದುಕು quotesಗಳು ನಿಮ್ಮೊಂದಿಗೆ ಅನುರಣಿಸಲಿ. ನಿಮ್ಮ ಹೃದಯವನ್ನು ಸ್ಪರ್ಶಿಸಲಿ ಮತ್ತು ನಿಮ್ಮ ಆತ್ಮದೊಳಗೆ ಕಿಡಿ ಹೊತ್ತಿಸಲಿ.
Table of Contents
Best Baduku Kannada Quotes (ಬದುಕು Quotesಗಳು)
ಸುಖ ಎಲ್ಲರನ್ನೂ ನಮ್ಮವರೆಂದು ಹೇಳುತ್ತದೆ. ಆದರೆ ದುಃಖ ಅರ್ಹರನ್ನು ಮಾತ್ರ ನಮ್ಮವರೆಂದು ಹೇಳುತ್ತದೆ.
ಒಂದು ಕನಸು ನುಚ್ಚು ನೂರಾದ ನಂತರವೂ ಮತ್ತೊಂದು ಕನಸನ್ನು ಕಾಣುವ ಧೈರ್ಯವೇ ಬದುಕು.
ಶ್ರೀಮಂತನೆಂದು ಬೀಗಬೇಡ. ರಾತ್ರಿ ಅರಳುವ ಹೂವಿಗೂ ಗೊತ್ತಿಲ್ಲ. ಬೆಳಿಗ್ಗೆ ಸ್ಮಶಾನಕ್ಕೂ ದೇವಸ್ಥಾನಕ್ಕೋ ಎಂದು.
ಅರ್ಥವಾಗದ ಬದುಕು
ಮರೆಯಲಾಗದ ನೆನಪುಗಳು
ಮರೆತಂತೆ ನಟಿಸುವ ಜನಗಳು
ನಾನು ನನ್ನದು ಎನ್ನುವ ಸ್ವಾರ್ಥಿಗಳ ಬದುಕು
ಈ ಬದುಕಿನ ನಡುವೆ ಸಾಗುತ್ತಿರುವ ನಮ್ಮ ಜೀವನ ಶೂನ್ಯ.
ಮುಗಿಲೆತ್ತರಕ್ಕೆ ಚಾಚಿಕೊಂಡಿದೆ ಆಸೆಗಳ ರಾಶಿ
ಎಟುಕಲಾರದಷ್ಟು ಜಿಗಿದಿದೆ ನೋವಿನ ಕ್ರಾಂತಿ
ಆಸೆಗಳ ಬುತ್ತಿಯಲಿ ಮಿನುಗಿದೆ ಕಷ್ಟಗಳ ಭ್ರಾಂತಿ
ಕೈ ಚಾಚಿದಷ್ಟು ಬರಿದಾಗಿದೆ ಕನಸಿನ ರೀತಿ
ಬರಿದಾಗಿದೆ ಮನಸು
ಮರೆಯಾಗಿದೆ ಹೊಳಪು
ನುಚ್ಚು ನೂರಾಗಿದೆ ಕನಸು
ಬದುಕಾಗಿದೆ ನಿಶ್ಶಬ್ಧ.
ಬದುಕೊಂದು ನಾಟಕ ಎಂದರಿತಾಗ ನೆಪವಿಲ್ಲದೆ ನಟನಾಗಿಬಿಡು.
ಸಾಧಿಸುವ ತನಕ ಕಿವುಡನಾಗು
ಸಾಧಿಸಿದ ಬಳಿಕ ಮೂಕನಾಗು.
ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ಬಂದಂತೆ ಬದುಕಬೇಕು
ನುಡಿದಂತೆ ನಡೆಯಬೇಕು
ಗೆದ್ದರೆ ಬಾಗಬೇಕು
ನಮ್ಮ ವಾದ ಸಾರಿದರು ಸುಮ್ಮನಾಗಬೇಕು
ನಮ್ಮ ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು.
ಮಸಣಕ್ಕೆ ಹೊರಟ ತೇರಿಗೆ ಎಷ್ಟೇ ಹೂವಿಂದ ಅಲಂಕಾರ ಮಾಡಿದರು ವ್ಯರ್ಥ. ಹಾಗೆಯೇ ಮನುಷ್ಯತ್ವ ಅರಿಯದ ಜನರಿಗೆ ಎಷ್ಟೇ ಪ್ರೀತಿ ತೋರಿಸಿದರು ವ್ಯರ್ಥ.
ನಿಮ್ಮ ಸಮಸ್ಯೆ ಹಡಗಿನಷ್ಟೇ ದೊಡ್ಡದಿರಬಹುದು. ಆದರೆ ಅದನ್ನು ಪರಿಹರಿಸುವ ಸಾಧ್ಯತೆ ಸಮುದ್ರದಷ್ಟೇ ವಿಶಾಲವಾಗಿದೆ ಎಂಬುದನ್ನ ಮರೆಯಬಾರದು. ಯಾವತ್ತೂ ಸಮಸ್ಯೆಯ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸುವ ಬದಲು ಪರಿಹಾರದ ಬಗ್ಗೆ ಯೋಚಿಸಬೇಕು.
ಪ್ರತಿಭೆ ಮತ್ತು ರೂಪ ದೇವರ ಕೊಡುಗೆ
ಕೀರ್ತಿ ಮತ್ತು ಹಣ ಮನುಷ್ಯನ ಸ್ರಷ್ಟಿ
ಅಹಂಕಾರ ಮತ್ತು ವ್ಯಕ್ತಿತ್ವ ನಾವೇ ರೂಪಿಸಿಕೊಳ್ಳಬಹುದು.
ಜೀವನದಲ್ಲಿ ಆಯ್ಕೆ ಮುಖ್ಯ.
ಸಾಧಿಸಬೇಕೆಂಬ ಸಂಸ್ಕೃತಿಯನ್ನು ಮೂಡಿಸಲು ಬದುಕು ಕಲಿಸುವ ಕಷ್ಟದಿಂದ ಮಾತ್ರ ಸಾಧ್ಯ.
ಬದುಕಬೇಕು ಯಾರಿಗೂ ನೋವು ಬಯಸದೆ ನೋವಿದ್ದರೂ ತಿಳಿಸದೆ.
ದೊಡ್ಡ ದೊಡ್ಡ ಮಾತನಾಡುವುದರಿಂದ ಪ್ರಬುದ್ಧರಾಗುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಮಾತ್ರ ಪ್ರಬುದ್ಧರಾಗುತ್ತೇವೆ.
ಬದುಕು ಎಲ್ಲ ಪಾಠಗಳನ್ನು ಕಲಿಸಿದರು ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಪಾಠ ಮಾತ್ರ ಅರ್ಥವೇ ಆಗ್ತಿಲ್ಲ ಇನ್ನು.
ಯೋಗ್ಯತೆಗೆ ತಕ್ಕಂತೆ ಅವರವರ ಬದುಕುಗಳು ಇರುತ್ತವೆ.
ಎತ್ತ ಸಾಗಿದೆ ಈ ಮೌನ
ವಿಧಿಯ ಆಟಕ್ಕೆ ಶರಣಾಗುವ ಮುನ್ನ
ಬದುಕು ಕಟ್ಟಿತು ನಯನ
ಬಾಳ ತೋರಣ
ಜೋತು ಇದ್ದು ನಗುತಿಹೆ ಅತ್ತ
ಸೋತು ನುಂಗಿದ ನೋವಿಗೆ
ಕುರುಡಾಗಿದೆ ಜೀವನ
ಕಾಣದ ಕಣ್ಣಿಗೂ
ಕರಗದ ಹೃದಯಕ್ಕೂ
ಹರಿದ ಕಾಗದದ ಉಳಿದ ಬದುಕಿಗೆ
ಬಿಳಿಯ ವಸ್ತ್ರಕೆ ಸೆರಗೊದ್ದಿತು ಈ ಮೌನ.
ಕನಸು ನಿಜವಾಗಿರಲ್ಲ ಖುಷಿ ಕೊಡುತ್ತೆ.
ಬದುಕು ಖುಷಿ ಕೊಡಲ್ಲ ನಿಜವಾಗಿರುತ್ತೆ.
ಬದುಕು ಸುಂದರ ಎನ್ನುವುದು ಬರೀ ಕಾಲ್ಪನಿಕ
ಅದನ್ನು ಸುಂದರ ಮಾಡುವುದು ನಮ್ಮ ಕಾಯಕ.
ಬದುಕಿನ ಸಂತಸಕ್ಕೆ ಸಂಪತ್ತು ಇರಲೇಬೇಕೆಂದಿಲ್ಲ
ಜೀವನದಲ್ಲಿ ಸಂತೃಪ್ತಿ ಇರಬೇಕು.
ಆಗ ಮಾತ್ರ ಜೀವನ ಆನಂದಮಯ..
ಸಂಪತ್ತು ಇಲ್ಲದೆ ಬದುಕಲಿಕ್ಕೆ ಆಗುವುದಿಲ್ಲ ಎಂಬುದು ನಮ್ಮ ಭ್ರಮೆ.
ಮನಸ್ಸಿಗೆ ಶಾಂತಿ ನೆಮ್ಮದಿ ಇದ್ದರೆ ಅದೇ ಸ್ವರ್ಗಸುಖ.
ಕಂಡದ್ದನ್ನು ಬಯಸುವುದೇ ಕಾಮ
ಬಯಸಿದ್ದು ಸಿಗದಾಗ ಉಂಟಾಗುವುದೇ ಕ್ರೋಧ.
ದೊರೆತರೂ ಇನ್ನಷ್ಟು ಬೇಕೆಂಬುದೇ ಲೋಭ.
ಇನ್ನಷ್ಟು ದೊರೆತಾಗ ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದಾಗ ತನ್ನ ಬಳಿ ಮಾತ್ರ ಇದೆ ಎಂಬ ಜಂಭವೇ ಮದ
ತನ್ನಲಿರುವುದು ಬೇರೆಯೊಬ್ಬನಲ್ಲಿದೆ ಎಂದು ತಿಳಿದು ಬಂದಾಗ ಉಂಟಾಗುವುದೇ ಮತ್ಸರ.
ಇದೇ ನಮ್ಮ ಜೀವನದ ಆರು ಶತ್ರುಗಳು.
ನಮ್ಮಿಚ್ಛೆಯ ಪಾತ್ರಗಳು ಸಿಗದೇ ಹೋಗುವ ನಾಟಕದ ಹೆಸರೇ “ಬದುಕು”
ನೀನು ಏನು ಎಂದು ತಿಳಿಯಬೇಕಾದರೆ ಸಹಾಯ ಮಾಡಿ ನೋಡು
ಇನ್ನೊಬ್ಬರು ಏನೆಂದು ತಿಳಿಯಬೇಕಾದರೆ ಸಹಾಯ ಕೇಳಿ ನೋಡು.
ಬದುಕುವುದಾದರೆ ಹೀಗೆ ಬದುಕು
ನಾಲ್ಕು ಜನ ನಿನ್ನನ್ನು ನೋಡುತ್ತಾರೆ ಎಂದು ಬದುಕಬೇಡ
ನಿನ್ನನ್ನು ತಿರಸ್ಕರಿಸಿ ಬಿಟ್ಟು ಹೋದ ನಾಲ್ಕು ಜನ ತಿರುಗಿ ನೋಡುವಂತೆ ಬದುಕು.
ಯಾವುದೇ ವಿಷಯ ಆಗಲಿ. ನಮ್ಮ ಜೀವನಕ್ಕೆ ಬರುವ ಮುಂಚೆ ಮತ್ತು ಅದು ನಮ್ಮ ಜೀವನದಿಂದ ದೂರ ಹೋದ ಮೇಲೆ ಮಾತ್ರ ನಮಗೆ ಅದರ ಮಹತ್ವ ಅರ್ಥವಾಗುವುದು.
ಪರರ ಮೆಚ್ಚಿಸುವ ಚಿಂತೆ ನನಗಿಲ್ಲ
ಪರಮಾತ್ಮ, ನೀ ಮೆಚ್ಚಿದರೆ ಸಾಕು
ದಾರಿ ನನ್ನದು.
ದಯೆ ನಿನ್ನದು.
ಬರ್ತಾರೆ, ಇರ್ತಾರೆ, ಹೋಗ್ತಾರೆ. “ಇಷ್ಟೇ ಜೀವನ”.
ನಾನೇ ಸರಿ ನಂದೇ ಸರಿ ಎನ್ನುವ ಅಹಂಕಾರದ ಪೊರೆ ಎಲ್ಲಿಯವರೆಗೆ ಕಳಚುವುದಿಲ್ಲವೋ ಅಲ್ಲಿಯವರೆಗೆ ಅವರ ತಪ್ಪುಗಳು ಬೇರೆಯವರ ನೋವುಗಳು ಅವರ ಅರಿವಿಗೆ ಬಾರದು.
ನೀವು ಬದುಕುತ್ತಿರುವ ಜೀವನವನ್ನು ಪ್ರೀತಿಸಿ ಮತ್ತು ನೀವು ನಿಜವಾಗಿಯೂ ಪ್ರೀತಿಸುವ ಜೀವನವನ್ನು ಜೀವಿಸಿ.
ಮೂರ್ಖರ ಸಂತೆಯಲ್ಲಿ ಮೌನವಾಗಿರಬೇಕು
ಬುದ್ದಿವಂತರ ಜೊತೆಯಲಿ ಬುದ್ಧನಂತಿರಬೇಕು
ಸಾಧು ಸಂತರ ಜೊತೆಯಲ್ಲಿ ಸೌಮ್ಯವಾಗಿರಬೇಕು.
ಸಂಬಂಧಿಗಳ ಜೊತೆಯಲ್ಲಿ ಸಂಸ್ಕಾರದಿಂದಿರಬೇಕು
ದೀನರ ಜೊತೆಯಲಿ ಧರ್ಮರಾಯನಂತಿರಬೇಕು
ಹೀಗೆಯೇ ಮಿಂಚಿ ಒಂದು ದಿನ ಮರೆಯಾಗಿ ಬಿಡಬೇಕು.
ಆ ಮಿಂಚನ್ನು ಇಡೀ ಪ್ರಪಂಚವೇ ಬೆರಗಾಗಿ ನೋಡಬೇಕು ಅಷ್ಟೇ
ಜವಾಬ್ದಾರಿ ಇಲ್ಲದವನು ಮುಂಜಾನೆ ಏಳಲೂ ನೂರು ಬಾರಿ ಯೋಚಿಸುತ್ತಾನೆ
ಜವಾಬ್ದಾರಿ ಇದ್ದವನು ನಿದ್ರೆಯಲ್ಲಿ ಸಹ ಎದ್ದಿರುತ್ತಾನೆ.
ಇಂದಿನ ಸಂಬಂಧಗಳು ಸೂರ್ಯಕಾಂತಿ ಹೂವುಗಳಂತೆ
ಎಲ್ಲಿ ಹೆಚ್ಚು ಲಾಭ ಸಿಗುತ್ತದೋ ಆ ಕಡೆ ತಿರುಗಿ ಬಿಡುತ್ತದೆ.
ಯಾರು ನಿನ್ನವರು, ಯಾವುದು ನಿನ್ನದು ಎಂಬುದು ಅರ್ಥವಾಗುವುದು ಸಮಯ ಬಂದಾಗ ಮಾತ್ರ.
ಕಾಲ ಯಾರ ಸ್ವತ್ತು ಅಲ್ಲ. ನೊಂದವರಿಗೂ ನೋಯಿಸಿದವರಿಗೂ ಒಂದಲ್ಲ ಒಂದು ದಿನ ಮಾಡಿದ ಕರ್ಮಕ್ಕೆ ತಕ್ಕ ಫಲ ಕಾದಿರುತ್ತೆ.
ಚಿಂತೆ ಮಾಡಿ ಯಾಕೆ ಕೊರಗಬೇಕು. ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು
ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ
ಅನಿಸಿದ್ದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ
ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ
ಕಣ್ಣೀರೇ ಬರದಿದ್ದರೂ ನಗುವಿನ ಆನಂದ ತಿಳಿಯುತ್ತಿರಲಿಲ್ಲ.
ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.
ಬೀಗಿ ಹಾಳಾಗುವುದರ ಬದಲು ಬಾಗಿ ಎಲ್ಲರೊಳಗೊಬ್ಬನಾಗಿ ಬಾಳಿ ಬದುಕುವುದನ್ನು ಕಲಿ.
ಸರಳತೆಯ ಬದುಕೇ ಸರ್ವಶ್ರೇಷ್ಠ ಬದುಕೆಂಬುದ ತಿಳಿ.
ನಿನ್ನಲ್ಲಿ ಎಷ್ಟೇ ಒಳ್ಳೆಯತನ ಇದ್ದರು ಜನ ಗುರುತಿಸುವುದಿಲ್ಲ. ಬದಲಾಗಿ ಒಂದು ಸಣ್ಣ ತಪ್ಪು ಹುಡುಕಿ ಅದಕ್ಕೆ ಬಣ್ಣ ಹಚ್ಚಿ ಬಿಂಬಿಸುತ್ತಾರೆ.
ಜೀವನದಲ್ಲಿ ಯಾರ ಬಗ್ಗೆನೂ ಯೋಚನೆ ಮಾಡದೇ ನಿನ್ನ ಕುಟುಂಬವೇ ಎಲ್ಲಾ ಎಂದು ತಿಳಿದು ಬದುಕು. ಅದೇ ನಿಜವಾದ ಬದುಕು.
ಸಿಗದ ಖುಷಿಗೆ ಆಸೆ ಪಡುವುದು ಮೂರ್ಖತನ. ಸಿಗುವ ಖುಷಿಯಲ್ಲೇ ಕನಸು ಕಟ್ಟಿ ಬದುಕುವುದು ಜೀವನ.
ಏನೆ ನಡೆದರೂ ಯೋಚನೆ ಮಾಡುತ್ತಾ ನಿಲ್ಲಬೇಡ. ಏನು ನಡೆದರೂ ಅದು ನಮ್ಮ ಒಳ್ಳೆಯದಕ್ಕೆ ನಡೆಯುತ್ತದೆ.
ಎಲ್ಲವನ್ನು ಗಮನಿಸು ಆದರೆ ಏನು ಗೊತ್ತಿಲ್ಲದವನಂತೆ ಇರು.
ಇಲ್ಲಿ ಬಣ್ಣ ಹಚ್ಚಿದ್ರೆನೇ ಚೆಂದ. ಚಿತ್ರಕ್ಕಾಗಲಿ ಮುಖಕ್ಕೆ ಆಗಲಿ.
ಎಡವಿದ ಕಾಲಿಗಿಂತ ಎಡವಿದ ನಾಲಿಗೆ ಅಪಾಯ.
ಎಡವಿದ ಕಾಲಿಗಿಂತ ಎಡವಿದ ನಾಲಿಗೆ ಅಪಾಯಬರುವುದೆಲ್ಲವನ್ನು ಸ್ವಾಗತಿಸು ಬಂದದ್ದೆಲ್ಲವ ಅನುಭವಿಸು. ತಾತ್ಕಾಲಿಕ ಬದುಕಿನಲ್ಲಿ ಎಲ್ಲವೂ ಕ್ಷಣಿಕ. ಇಲ್ಲ್ಯಾವುದು ಶಾಶ್ವತವಲ್ಲ. ಶಾಶ್ವತವಲ್ಲದ ಬದುಕಿನಲ್ಲಿ ಏನನ್ನು ಶಾಶ್ವತವಾಗಿ ಪಡೆಯಲಾಗುವುದಿಲ್ಲ. ಬದುಕೊಂದು ವಿಸ್ಮಯ. ನಾವಿಲ್ಲಿ ಕೇವಲ ಹುಡುಕಬೇಕಷ್ಟೆ ನಮ್ಮ ಮುಂದಿನ ದಾರಿಯ.
ನಾಲ್ಕು ಜನಕ್ಕೆ ಸಹಾಯ ಮಾಡುವ ಗುಣ ನಿನ್ನದಾದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ. ನೀನು ನಂಬಿದ ದೇವರು ನಿನ್ನ ಹುಡುಕುತ್ತ ನಿನ್ನ ಮನೆಗೆ ಬರುವನು.
ಕನಸಿಗೂ ನನಸಿಗೂ ಒಂದೇ ವ್ಯತ್ಯಾಸ. ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು. ನನಸು ಆಡಲು ನಿದ್ದೆಯಿಲ್ಲದ ಶ್ರಮ ಬೇಕು.
ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವು ಅಲ್ಲ. ಅತಿಯಾದ ಅಹಂಕಾರವು ಅಲ್ಲ. ನೊಂದ ಮನಸ್ಸಿನ ನಿರ್ಧಾರವಷ್ಟೇ.
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ. ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ. ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡ.
ನಂಬಿಕೆ ಇರಲಿ. ಸಮಯ ಎಲ್ಲವನ್ನು ಬದಲಾಯಿಸುತ್ತದೆ.
ಗೌರವ ಗಳಿಸಬೇಕೆಂದರೆ ನೀನು ಮೊದಲು ಎಲ್ಲರನ್ನು ಗೌರವದಿಂದ ಕಾಣು.
ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ. ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತೋರುತ್ತದೆ. ನಂಬಿಕೆ, ತಾಳ್ಮೆ ನಿಮ್ಮಲ್ಲಿದ್ದರೆ ಅದರ ಫಲ ಮುಂದೊಂದು ದಿನ ಸಿಹಿಯನ್ನು ನೀಡುತ್ತದೆ.
ಚಿಂತಿಸಿ ಬಡವನಾಗಬೇಡ. ದುಡಿದು ದೊಡ್ಡವನಾಗು.
ಎಲ್ಲರಿಗೂ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರನ್ನು ಎಲ್ಲರಿಗೂ ವಿವರಿಸಲು ಹೋಗಬಾರದು.
ಸಮಯಕ್ಕೆ ಸಿಗದ ವಸ್ತುಗಳು
ಸಮಯಕ್ಕೆ ಆಗದ ಬಂಧುಗಳು
ಸಮಯವನ್ನೇ ನೀಡದ ಸಂಬಂಧಗಳು
ಭಾವನೆಯನ್ನೇ ಅರಿಯದ ಬಂದುಗಳು
ಬತ್ತಿ ಹೋದ ನದಿಯಲ್ಲಿ ಬಟ್ಟೆ ಒಗೆದಂತೆ.
Top Baduku Kannada Quotes Images
ಅಸ್ತಿತ್ವದ ಸ್ವರಮೇಳದಲ್ಲಿ, ನಮ್ಮ ಹೃದಯ ಮತ್ತು ಮನಸ್ಸಿನೊಂದಿಗೆ ಪ್ರತಿಧ್ವನಿಸಿದ ಅತ್ಯುತ್ತಮ Baduku Kannada Quotesಗಳ ಸಂಗ್ರಹವನ್ನು ನಾವು ಈ ಲೇಖನದಲ್ಲಿ ಅನ್ವೇಷಿಸಿದ್ದೇವೆ. ಈ ಬದುಕಿನ ಉಲ್ಲೇಖಗಳು ರಾತ್ರಿಯ ಆಕಾಶದಲ್ಲಿ ಮಾರ್ಗದರ್ಶಿ ನಕ್ಷತ್ರಗಳಂತೆ, ನಮ್ಮ ಮಾರ್ಗವನ್ನು ಬೆಳಗಿಸಿ, ನಮ್ಮ ಪ್ರಯಾಣದ ಉದ್ದಕ್ಕೂ ಬುದ್ಧಿವಂತಿಕೆ, ಒಳನೋಟ ಮತ್ತು ಸ್ಫೂರ್ತಿಯನ್ನು ನೀಡುತ್ತವೆ.
ಇದನ್ನೂ ಓದಿ:
- 100+ Jeevana Life Quotes in Kannada with Images (ಜೀವನ Quotes)
- 150+ Kannada Quotes About Life with Images
- 100+ Kannada Quotes About Trust (ನಂಬಿಕೆ Quotes ಕನ್ನಡದಲ್ಲಿ)
- 100+ Believe Quotes in Kannada (ನಂಬಿಕೆ ಉಲ್ಲೇಖಗಳು)
- 100+ Attitude Quotes in Kannada
ತತ್ವಜ್ಞಾನಿಗಳು, ಕವಿಗಳು ಮತ್ತು ಚಿಂತಕರ ಧ್ವನಿಯ ಮೂಲಕ, ಜೀವನದ ಸಂಕೀರ್ಣತೆ ಮತ್ತು ಸೌಂದರ್ಯವನ್ನು ಆವರಿಸುವ ಪದಗಳ ಶಕ್ತಿಯನ್ನು ನಾವು ಈ ಲೇಖನದ baduku quotes in kannada ಸಂಗ್ರಹದಲ್ಲಿ ನೋಡಿದ್ದೇವೆ.
ಈ ಉಲ್ಲೇಖಗಳು ವರ್ತಮಾನವನ್ನು ಸ್ವೀಕರಿಸಲು, ಪ್ರತಿಕೂಲತೆಯಲ್ಲಿ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ನಮ್ಮ ಅಸ್ತಿತ್ವವನ್ನು ರೂಪಿಸುವ ಕ್ಷಣಿಕ ಕ್ಷಣಗಳನ್ನು ಪಾಲಿಸಲು ನಮಗೆ ನೆನಪಿಸುತ್ತವೆ.
ನಮ್ಮ ಈ ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಇದೇ ರೀತಿಯ ಕನ್ನಡ ಕ್ವೋಟ್ಸ ಗಳ ಸಂಗ್ರಹಕ್ಕೆ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತೀರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.