Deepavali Wishes in Kannada | ದೀಪಾವಳಿ ಶುಭಾಶಯಗಳು

Happy Deepavali Wishes in Kannada

ದೀಪಾವಳಿ ಶುಭಾಶಯಗಳ ಸಂಗ್ರಹ (happy deepavali wishes in kannada): ಈ ಶುಭಾಶಯಗಳೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಹೃತ್ಪೂರ್ವಕ ಸಂದೇಶಗಳೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ.

ದೀಪಾವಳಿ, ಇದು ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿದೆ. ಇದು ಕೆಟ್ಟದರ ಮೇಲಿನ ವಿಜಯವನ್ನು ಸೂಚಿಸುವ ಹಬ್ಬವಾಗಿದೆ. 

ಈ ಹಬ್ಬವನ್ನು ಮನೆ ಸುತ್ತಲೂ ದೀಪಗಳನ್ನು (ಸಾಮಾನ್ಯವಾಗಿ ಮಣ್ಣಿನ ದೀಪಗಳು) ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ದೀಪಾವಳಿಯು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕಾರ್ತಿಕ ಮಾಸದಲ್ಲಿ ಬರುತ್ತದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಶುಭಾಶಯಗಳ ವಿನಿಮಯವು ಸಂಪ್ರದಾಯಗಳಲ್ಲಿ ಒಂದಾಗಿದೆ. ಹತ್ತಿರದ ಮತ್ತು ದೂರದ ನಮ್ಮ ಪ್ರೀತಿಪಾತ್ರರಿಗೆ ನಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸುವುದು ಅಭ್ಯಾಸವಾಗಿದೆ.

ಈ ಲೇಖನದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ನೀವು ಪ್ರೀತಿಸುವವರಿಗೆ ಕಳುಹಿಸಲು ದೀಪಾವಳಿ ಶುಭಾಶಯಗಳ (deepavali wishes in kannada) ವಿಶೇಷ ಸಂಗ್ರಹವನ್ನು ನಾವು ಸಂಗ್ರಹಿಸಿದ್ದೇವೆ.

ನಿಮ್ಮ ಆತ್ಮೀಯ ಕುಟುಂಬಕ್ಕೆ ನೀವು ಶುಭಾಶಯಗಳನ್ನು ಕಳುಹಿಸುತ್ತಿರಲಿ, ಸ್ನೇಹಿತರಿಗೆ ಆತ್ಮೀಯ ಶುಭಾಶಯ ಕಳುಹಿಸುತ್ತಿರಲಿ ಅಥವಾ ಸಹೋದ್ಯೋಗಿಗಳೊಂದಿಗೆ ಹಬ್ಬದ ಉತ್ಸಾಹವನ್ನು ಹಂಚಿಕೊಳ್ಳುತ್ತಿರಲಿ, ನಮ್ಮ ದೀಪಾವಳಿ ಶುಭಾಶಯಗಳ ಸಂಗ್ರಹವು (happy deepavali in kannada wishes) ನಿಮಗೆ ಸಹಾಯ ಮಾಡುವುದು ಖಂಡಿತ.

Happy Deepavali Wishes in Kannada | ದೀಪಾವಳಿ ಶುಭಾಶಯಗಳು

ದೀಪದಿಂದ ದೀಪ ಬೆಳೆಯುವಂತೆ, ಪ್ರೀತಿಯಿಂದ ಪ್ರೀತಿ ಹರಡುವಂತೆ, ದ್ವೇಷ, ಕೋಪ, ನಶಿಸಲಿ, ಪ್ರೀತಿ ಮೂಡಲಿ.  ದೀಪಾವಳಿ ಹಬ್ಬದ ಶುಭಾಶಯಗಳು.

 

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿ ಬೆಳಕನ್ನು ತರಲಿ. ಈ ಭೂಮಿಯ ಮೇಲೆ ಇರುವಷ್ಟು ದಿನ ಎಲ್ಲರನ್ನೂ ಪ್ರೀತಿಸೋಣ,ಎಲ್ಲರ ಜೊತೆ ಚೆನ್ನಾಗಿ ಇರೋಣ,ಯಾರಿಗೂ ಕೆಟ್ಟದನ್ನು ಬಯಸದೇ ಇರೋಣ ಯಾಕೇ ಅಂದರೇ ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗಲೇಬೇಕು. ಈ ದೀಪಾವಳಿ ಹಬ್ಬ ಎಲ್ಲರ ಬಾಳಿನಲ್ಲಿ ಸದಾ ಬೆಳಕನ್ನು ಚೆಲ್ಲಲಿ.

 

ನನ್ನ ಪ್ರೀತಿಯ ಸ್ನೇಹಿತರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬೆಳಕಿನ ಹಬ್ಬ ದೀಪಾವಳಿಯು ತಮಗೂ ಹಾಗೂ ತಮ್ಮ ಕುಟುಂಬದವರಿಗೂ ಇನ್ನೂ ಹೆಚ್ಚಿನ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ, ಐಶ್ವರ್ಯ, ಸಿರಿ ಸಂಪತ್ತನ್ನು ನೀಡಿಲಿ.

 

ದಯವಿಟ್ಟು ದಿವಾಳಿ ಅಂತೇಳಿ ಹೇಳೋದು ಬೇಡ ನಮ್ಮದು ದೀಪಾವಳಿ ಶುಭಾಶಯ ಆಗಿರಲಿ.. ಸಮಸ್ತ ಕನ್ನಡಿಗರಿಗೂ ದೀಪಾವಳಿ ಹಬ್ಬದ ಸಿಹಿ ಹಾರೈಕೆಗಳು.

 

ಧರ್ಮ ದೀಪವ ಹಚ್ಚಿ ಅಧರ್ಮವ ತೊಲಗಿಸುವ, ಪ್ರೀತಿಯ ಸೇವೆಯ ದೀಪವ ಹಚ್ಚಿ ಮತಾಂತರವ ತೊಲಗಿಸುವ, ಗೋ ರಕ್ಷೆಯ ದೀಪ ಹಚ್ಚಿ ಗೋಮಾತೆಯ ರಕ್ಷಿಸುವ, ರಾಷ್ಟ್ರ ರಕ್ಷೆಯ ದೀಪ ಹಚ್ಚಿ ಭಯೋತ್ಪಾದನೆ ತೊಲಗಿಸುವ, ಸ್ವದೇಶ ದೀಪವ ಹಚ್ಚಿ ಮೌಡ್ಯಾಂಧತೆಯ ತೊಲಗಿಸುವ, ಧರ್ಮರಕ್ಷಣೆಯ ದೀಪವನು ಹಚ್ಚಿ ಮನ ಮನೆಗಳನ್ನು ಬೆಳಗಿಸುವ ಬನ್ನಿ, ಎಲ್ಲರಿಗೂ ಈ ದೀಪಾವಳಿ ಶುಭತರಲಿ ದೀಪಾವಳಿ ಹಬ್ಬದ ಶುಭಾಶಯ.

 

ದೀಪಾವಳಿ ದೀಪಾವಳಿ ಜೀವನವೆಲ್ಲಾ ನಗುತಿಲಿರಿ ಅನುದಿನ ಹರುಷದಿಂದರಿ ಈ ಗೆಳೆತನ ಸದಾ ಜೊತೆಯಾಗಿರಲಿ ದೀಪಾವಳಿ ಹಬ್ಬದ ಶುಭಾಶಯ.

 

ಬದುಕಿಗೆ ದಾರಿದೀಪ ಅಭಿವೃದ್ಧಿಗಾಗಿ ಆಶಾದೀಪ ಸಾಧನೆಗೆ ಸ್ಫೂರ್ತಿ ದೀಪ ನಗು ನಲಿವಿಗೆ ನಂದಾದೀಪವಾಗಲಿ ಈ ದೀಪಾವಳಿ ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕನ್ನು ತರಲಿ ಎಲ್ಲರಿಗೂ ಅಂಧಕಾರವನ್ನು ತೊಲಗಿಸಿ ಎಲ್ಲರ ಮನಸ್ಸಲ್ಲೂ ಮನದಲ್ಲೂ ಅದ್ಭುತವಾದ ದೀಪವನ್ನು ಬೆಳಗಿಸುವ ಶಕ್ತಿ ಭಗವಂತ ಕೊಡಲಿ ಅಂತ ನಾನು ಈ ಸಂದರ್ಭದಲ್ಲಿ ಶುಭಾಶಯ ಕೋರುತ್ತಿದ್ದೇನೆ ಸರ್ವರಿಗೂ ನನ್ನ ಎಲ್ಲಾ ಆತ್ಮೀಯ ಹಿತೈಷಿ ವರ್ಗದವರಿಗೂ ಸ್ನೇಹಿತರಿಗೂ ಬಂಧುಗಳಿಗೂ ದೀಪಾವಳಿ ಹಬ್ಬದ ಶುಭಾಶಯಗಳು

 

ದೀಪಾವಳಿ ಹಬ್ಬದ ಶುಭಾಶಯ ಗಳು ಖುಷಿಯಾಗಿ ಹಬ್ಬ ಆಚರಿಸಿ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

 

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ. ಎಲ್ಲರ ಬದುಕಿನಲ್ಲಿ ದೀಪಾವಳಿ ಹಬ್ಬ ನಿರಾಸೆಯ ಕಾರ್ಮೋಡ ತೊಡೆದು ಚೈತನ್ಯ ತುಂಬಲಿ. ಎಲ್ಲರ ಜೀವನದಲ್ಲಿ ದೀಪಗಳ ಬೆಳಕು ಸದಾ ಬೆಳಗಲಿ. ಮಹಾಲಕ್ಷ್ಮೀ ದೇವಿ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಸಂಪತ್ತು, ಶಕ್ತಿ, ಆಯುರಾರೋಗ್ಯ ಕರುಣಿಸಲಿ.

Happy Diwali Wishes in Kannada | ದೀಪಾವಳಿ ಹಬ್ಬದ ಶುಭಾಶಯಗಳು

ನನ್ನ ಎಲ್ಲಾ ಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಆ ಭಗವಂತನ ಕೃಪೆ ನಮ್ಮ ನಿಮ್ಮೆಲರ ಮೇಲಿರಲಿ.

 

ದೀಪಾವಳಿ ಹಬ್ಬದ ಶುಭಾಶಯ. ದೀಪಾವಳಿಯು ಮನೆ ತುಂಬ ದೀಪವನ್ನು ಬೆಳಗುವ ಮೂಲಕ ಜ್ಞಾನ ,ಭಕ್ತಿ,ಶ್ರದ್ದೆ,ಪರೋಪಕಾರ,ವಿವೇಕ,ಪ್ರಿತಿ,ಅದರ,ಸ್ನೇಹ,ಶಾಂತಿ,ಸೌಂಹಾರ್ದಗಳ ದೀಪಗಳನ್ನು ಮನ-ಮನೆಗಳಲ್ಲಿ ಬೆಳಗುವಂತಾಗಲಿ ದೇವರ ದಯೆಯೊಂದಿರಲಿ ಗುರುಗಳ ಅನುಗ್ರಹವಾಗಲಿ. ತಮಗೂ ಹಾಗೂ ತಮ್ಮ ಕುಟುಂಬದ ವರಿಗೂ ದೀಪಾವಳ ಹಬ್ಬದ ಶುಭಾಶಯಗಳು.

 

ದೀಪಾವಳಿ ಹಬ್ಬದ ಪುಟ್ಟ ಸಂಭ್ರಮಗಳೂ ಮನಸ್ಸಿಗೆ ಅದೆಷ್ಟೊಂದು ಸಂತೃಪ್ತಿ ನೀಡುತ್ತದೆ. ಮನೆ ತುಂಬಾ ದೀಪಗಳ ಬೆಳಕಿನ ಚಿತ್ತಾರ ಮೂಡಿಸುವುದು. ಮನೆಯ ಮುಂದಿನ ರಂಗೋಲಿ , ಬಾಗಿಲಿಗೆ ಹಾಕುವ ತೋರಣ ಹೂವುಗಳ ಅಲಂಕಾರ.‌ ಕೆಮ್ಮಣ್ಣು ಸುದ್ದೆ , ಹಿಡಿದು ಎಳೆದ ರಂಗೋಲಿ…. ಸಂಜೆಗೆ ಹೊಸ ಬಟ್ಟೆಯ ಸರಬರ ಸದ್ದು… ರಸ್ತೆಯಲ್ಲಿ ಕಂಡ ಪರಿಚಿತರಿಗೆಲ್ಲಾ ಹಬ್ಬದ ಶುಭಾಶಯ ಹೇಳುತ್ತಾ ಮತ್ತೆ ಮೂಡುವ ಮುಗುಳ್ನಗು. ಅಲ್ಲಲ್ಲಿ ಪಟಾಕಿಗಳ ಸದ್ದು , ಬೆಳಕಿನೋಕುಳಿ ….. ಎಲ್ಲಾ ದೀಪಾವಳಿಯೇ ಪ್ರೀತಿಯಿಂದ ಆವಾಹಿಸಿಕೊಂಡವರಿಗೆ .

 

ಅಜ್ಞಾನ ಅಂದಕಾರ ತೊಡೆದು ಜ್ಞಾನದ ದೀಪ ಹಚ್ಚೋಣ ದ್ವೇಷ ಅಸೂಹೆ ಬಿಟ್ಟು ಪ್ರೀತಿಯ ಜ್ಯೋತಿ ಬೆಳಗೋಣ, ಜಾತಿ, ಧರ್ಮ ಕುಲ, ಮತ ಎನ್ನದೆ ಸಂತಸದಿಂದ ಬೆಳಕಿನ ಹಬ್ಬ‌ಆಚರಿಸೋಣ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಗಳು

 

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಜ್ಞಾನದ ಬೆಳಕೇ ಗುರು. ಭಗವಂತ ಗುರುವೆಂಬ ಜ್ಞಾನದ ಬೆಳಕು ಎಲ್ಲರಮೇಲೆಯೂ ಬೀರಲಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ

 

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯ. ದೀಪ ಹಚ್ಚೋಣ. ಪ್ರೀತಿ ವಿಶ್ವಾಸ ಹಾಗೂ ಮಾನವೀಯತೆಯ ದೀಪ ಹಚ್ಚೋಣ.

 

ದೀಪಾವಳಿ ಹಬ್ಬದ ಶುಭಾಶಯ. ನನ್ನೆಲ್ಲ ಆತ್ಮೀಯ ಸ್ನೇಹಿತ ಬಂಧುಗಳಿಗೆ ಈ ಬೆಳಕಿನ ಹಬ್ಬ ನಿಮ್ಮೆಲ್ಲ ಕನಸನ್ನು ನನಸು ಮಾಡಲಿ ಬಾಳಲ್ಲಿ ಬೆಳಕನ್ನು ತರಲಿ.

 

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಶ್ರೀ ದೇವಿ ಎಲ್ಲರ ಜೀವನದಲ್ಲಿಯೂ ಬೆಳಕನ್ನು ತರಲಿ.

 

ನನ್ನ ಸಮಸ್ತ ಬಂಧು ಬಾಂಧವರಿಗೆ ಸಹೋದರ, ಸಹೋದರಿಯರಿಗೆ ದೀಪಾವಳಿ ಹಬ್ಬದ ಶುಭಾಶಯ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಹಾಗೂ ನಮ್ಮ ಎಲ್ಲಾ ಆಸೆ ಆಮಿಷ ಗಳು ಈಡೇರಿಸುವಂತೆ ಆ ತಾಯಿ ಆರೋಗ್ಯ, ಆಯಸ್ಸು, ಐಶ್ವರ್ಯ, ಸಂತೋಷ, ನೆಮ್ಮದಿ ಕೊಡಲಿ ಪ್ರಾರ್ಥನೆ ಮಾಡುತ್ತೇವೆ.

 

ಈ ಜೀವನದ ಕತ್ತಲು ಬೆಳಕಿನ ಯುದ್ಧದಲ್ಲಿ ಬೆಳಕಿನ ಜಯವಾಗಲಿ. ಬೆಳಕ ದಾರಿ ಎಲ್ಲರದ್ದಾಗಲೆಂದು ಬಯಸುತ್ತಾ ನಾಡಿನ‌ ಸಮಸ್ತ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರುತ್ತೇನೆ.

 

ದೀಪಾವಳಿ ಹಬ್ಬದ ಶುಭಾಶಯ.. ಕತ್ತಲನ್ನು ಕರಗಿಸಿ ಸುತ್ತ ಬೆಳಕು ಚೆಲ್ಲುವ ದೀಪದಂತೆ ನಿಮ್ಮ ಮನಸ್ಸಿನಲ್ಲಿ ಇರುವ ಗೋಂದಲ ದೂರವಾಗಿ ಶಾಂತಿ ನೆಮ್ಮದಿ ಗುರಿ ಮುಟ್ಟುವ ಛಲ ನಿಮ್ಮದಾಗಲಿ…!!

 

ಅಯೋಧ್ಯೆಯ ಸೂರ್ಯ-ಚಂದ್ರ ರಾಮ-ಲಕ್ಷ್ಮಣರು ಸೀತಾಮಾತೆ ಸಹಿತ ಮರಳಿ ಊರಿಗೆ ಕಾಲಿಟ್ಟ ಸುದಿನ ಪ್ರತಿಯೊಂದು ಮನೆ-ಮನಗಳಲ್ಲಿ ಬೆಳಗಿದ ಆ ಸಂಭ್ರಮದ ಬೆಳಕಿನಂತೆ ನಮ್ಮೆಲ್ಲರ ಬಾಳಲ್ಲೂ ಬೆಳಕು ತುಂಬಿರಲಿ! ದೀಪಾವಳಿ ಹಬ್ಬದ ಶುಭಾಶಯ.

 

ಬೆಳಕನ್ನು ತುಂಬುವ ದೀಪಾವಳಿಯು ನನ್ನ ಸ್ನೇಹಿತರ ಕುಟುಂಬಗಳಲ್ಲಿ ವಿಜಯವೆಂಬ ದೀಪವ ಬೆಳಗಲೆಂದು, ನಿಮ್ಮ ಜೀವನದ ಕತ್ತಲೆಲ್ಲಾ ತೊಡೆದು ಉಜ್ವಲಮಯವಾಗಲೆಂದು ಮಹಾಲಕ್ಷ್ಮಿಯನ್ನು ಪ್ರಾರ್ಥಸುವೆನು.. ದೀಪಾವಳಿ ಹಬ್ಬದ ಶುಭಾಶಯ

 

ನಾಡಿನ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕತ್ತಲು ಅಳಿದು ನಂಬಿಕೆ ಹಾಗೂ ಸಂತೋಷದ ದೀಪ ಎಂದೂ ಬೆಳುಗುತ್ತಿರಲಿ

 

ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲೀಂದ್ರನ ರಾಜ್ಯಕ್ಕೆ ಹೊನ್ನೋ ಹೊನ್ನು. ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯ.

 

ನಾಡಿನ ಸಮಸ್ತ ಕೋಟಿ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ದೀಪಗಳ ಹಬ್ಬ ದೀಪಾವಳಿಯು ಸರ್ವರ ಬಾಳಿನಲ್ಲಿ ಅಜ್ಞಾನದ ಕತ್ತಲೆಯನ್ನು ಓಡಿಸಿ ಸುಜ್ಞಾನದ ಬೆಳಕನ್ನು ಮೂಡಿಸಿ ಸುಖ ಶಾಂತಿಯನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ.

 

Dear all wishing you happy and safe Deepavali ಖುಷಿಯಾಗಿ, ಸುರಕ್ಷಿತವಾಗಿ ದೀಪಾವಳಿ ಆಚರಿಸಿ. ದೀಪಾವಳಿ ಹಬ್ಬದ ಶುಭಾಶಯ.

 

ಹಣತೆ ಹಚ್ಚುತಾ ಬೆಳಕ ಬೀರಿ.. ಸಿಹಿಯ ಹಂಚುತಾ ಪ್ರೀತಿ ತೋರಿ, ನಾವೆಲ್ಲರೂ ಸೇರಿ ನಲಿವ ಆಶಯ ಇದುವೇ ದೀಪಾವಳಿ ಹಬ್ಬದ ಶುಭಾಶಯ

 

ದೀಪಾವಳಿ ಹಬ್ಬದ ಶುಭಾಶಯ. ದೀಪಗಳು ನಿಮ್ಮ ಕತ್ತಲ ಕಷ್ಟವ ಅಳಿಸಿ ಬೆಳಕಿನ ವೈಭವ ತರಲಿ.

 

ನಾನು, ನನ್ನದು ಎಂಬ ಅಹಂಕಾರವನ್ನೆಲ್ಲ ಮರೆತು, ಪರಮಾತ್ಮನೇ ಎಲ್ಲ ನಿನ್ನದು ಎಂದು ತಿಳಿದು ಮತಗಳ ಬೇಧ ಮರೆತು ಬೆಳಕಿನ ಹಬ್ಬವನ್ನು ಆಚರಿಸೋಣ. ದೀಪಾವಳಿ ಹಬ್ಬದ ಶುಭಾಶಯ

 

Different Deepavali Wishes in Kannada

ದಯವಿಟ್ಟು ದಿವಾಳಿ ಅಂತೇಳಿ ಹೇಳೋದು ಬೇಡ ನಮ್ಮದು ದೀಪಾವಳಿ ಶುಭಾಶಯ ಆಗಿರಲಿ.. ಸಮಸ್ತ ಕನ್ನಡಿಗರಿಗೂ ದೀಪಾವಳಿ ಹಬ್ಬದ ಸಿಹಿ ಹಾರೈಕೆಗಳು… ಬೆಳಗಲಿ ಸತ್ಯ ನಿಷ್ಠೆ ದಯೆ ಕರುಣೆ ಪ್ರೀತಿ ಸಮೃದ್ಧಿಯ ಬೆಳಕು ದೂರಾಗಲಿ ಸ್ವಾರ್ಥ ಮೋಸ ಅಸೂಯೆ ಎಂಬ ಕೊಳಕು ಎಲ್ಲರಿಗೂ ಕನ್ನಡದ ದೀಪಗಳ ಹಬ್ಬದ ಶುಭಾಶಯಗಳು.

 

ನನ್ನೆಲ್ಲಾ‌ ಆತ್ಮೀಯರಿಗೂ ಪ್ರೀತಿಯ ಮನವಿ ದಯೆಯಿಟ್ಟು ಎಲ್ಲಾರೂ ಕನ್ನಡದಲ್ಲಿ ದೀಪಾವಳಿ ಶುಭಾಶಯ ಹೇಳಿ ಹಬ್ಬದ ಅರ್ಥ, ಗಮ್ಯತೆ, ಹೆಚ್ಚಿಸಿ Style ಆಗಿ ಇಂಗ್ಲೀಷ್ ನಲ್ಲಿ “ದೀವಾಳಿ” ಅಂತ ವಿಶ್ ಮಾಡುತ್ತಾ ನಮ್ಮ ದೇಶ, ಜನ, ಹಬ್ಬದ ಸೊಬಗನ್ನು ಇನ್ನಷ್ಟೂ ದೀವಾಳಿ ಮಾಡ್ಬೇಡಿ ಪರಿಚಸರಸ್ನೇಹಿ ದೀಪಾವಳಿ ನಮ್ಮದಾಗಿರಲಿ.

 

ಸಮಸ್ತ ಜನತೆಗೆ ನರಕ ಚತುದರ್ಶಿ, ಬಲಿಪಾಡ್ಯಮಿ,ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯ. ಜ್ಞಾನದ ಬೆಳಕು ಮನಸನು ಬೆಳಗಲಿ, ಹಣತೆಯ ಬೆಳಕು ಮನೆಯನು ಬೆಳಗಲಿ – ಹಣತೆಗಳ ಹಬ್ಬ ದೀಪಾವಳಿಯು ಸಕಲ ಸಂಪತ್ತು, ಶ್ರೇಯಸ್ಸು ತರಲಿ, ತಮ್ಮೆಲ್ಲರ ಬಾಳಲ್ಲಿ ಕತ್ತಲು ದೂರವಾಗಿ ಬೆಳಕು ಉಜ್ವಲವಾಗಿ ಬೆಳಗಲೆಂದು ಸಮಸ್ತ ನಾಡಿನ ಜನತೆಗೆ ಶುಭವಾಗಲಿ ಎಂದು ಹಾರೈಸುವೆ.

 

ಸಾಕು ಕತ್ತಲೆಯ ಸಹವಾಸ, ಮಾಡೋಣ ಬನ್ನಿ ಎಲ್ರೂ ಬೆಳಕಿನ ಪ್ರವೇಶ ಎಲ್ರಿಗೂ ದೀಪಾವಳಿ ಹಬ್ಬದ ಶುಭಾಷಯ

 

ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಬೆಳಕಿನ ಹಬ್ಬಕ್ಕೆ ಎಲ್ಲಾ ಪ್ರೀತಿ ಪಾತ್ರರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

 

ಆತ್ಮೀಯ ಹಿಂದುಗಳೇ ಉದ್ದ ಆದರೂ ಪರವಾಗಿಲ್ಲ. “ದೀಪಾವಳಿ ಶುಭಾಷಯ” ಅಂತಾನೇ ಹೇಳಿ. ಮೊದಲೇ ದಿವಾಳಿ ಆಗಿದ್ದೇವೆ..ಇನ್ನೂ ಹಾಗೇ ಆಗಿ ಸಾಯೋಕೆ ಇಷ್ಟ ಇಲ್ಲ.

 

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಈ ದೀಪಾವಳಿ ಹಬ್ಬವು ಎಲ್ಲಾ ಕತ್ತಲೆಯ ಕಷ್ಟಗಳನ್ನು ಕಳೆದು ಬೆಳಕು ತುಂಬಿ ಆಯುರಾರೋಗ್ಯ ಐಶ್ವರ್ಯಗಳನ್ನು ಆ ಮಹಾಲಕ್ಷ್ಮಿ ತಮಗೆಲ್ಲಾ ಕೋಡಲೆಂದು ಹಾರೈಸುವೆ. ಗುರಿ ಎಂಬುದೊಂದು ನಕ್ಷತ್ರ . ಕೈಯೊಳಗಿಟ್ಟುಕೊಳ್ಳಲು ಪ್ರಯತ್ನಿಸಿದರೆ ಸೋಲು ಆದರೆ ನಕ್ಷತ್ರವನ್ನು ‘ದಾರಿದೀಪ’ ಎಂದುಕೊಂಡು ನಡೆದರೆ ಸೇರುವ ಗುರಿ ನಿಶ್ಚಿತ.

 

ಅಚ್ಚುಕಟ್ಟಾಗಿ “ದೀಪಾವಳಿ” ಅಂತ ಶುಭಾಶಯ ಹೇಳಿದ್ರೆ… ಯಾರ ಮನೆ ಗಂಟು ಹೋಗೊಲ್ಲ… “ದಿವಾಳಿ” ಅರ್ಥ ಇಷ್ಟೇ.. ದಿವಾಳಿಯಾಗೋದು, ದಿವಾಳಿತನ… ಎಂಬ ಸಹಸ್ರ ಅರ್ಥ ಸಿಗುತ್ತೆ…. ವಿಚಾರ ಮಾಡಿ ದೀಪಾವಳಿ ಹಬ್ಬಕ್ಕೆ ಶುಭಾಶಯಗಳು ತಿಳಿಸಿ ಎಂದೂ ಈ ಮೂಲಕ ಮನವಿ…. ದೀಪವು ನಿನ್ನದೆ, ಗಾಳಿಯು ನಿನ್ನದೆ,ಆರದಿರಲಿ ಬೆಳಕು ಕಡಲು ನಿನ್ನದೆ,ಹಡಗು ನಿನ್ನದೆ,ಮುಳುಗದಿರಲಿ ಬದುಕು.. ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ ನೆರಳು,ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ಕಡಲು ನಿನ್ನದೆ, ಹಡುಗು ನಿನ್ನದೆ, ಮುಳುಗದಿರಲಿ ಬದುಕು”… ನಾಡಿನ ಸಮಸ್ತ ಜನತೆಗೆ ಹಾಗೂ ಹಿರಿಯರಿಗೂ ಕಿರಿಯರಿಗೂ ಎಲ್ಲಾ ಬಂಧು ಮಿತ್ರರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು ನಿಮ್ಮ ಬದುಕಲ್ಲಿ ಈ ದೀಪಾವಳಿಯಿಂದ ಬೆಳಕು ಪಸರಿಸಲಿ..

 

ದೀಪಾವಳಿ ಹಬ್ಬದ ಶುಭಾಶಯಗಳು…. ಎಲ್ಲರಿಗೂ ದೀಪಾವಳಿ ಶುಭಾಶಯಗಳು… ಹೇಳಬೇಡಿ ದಿವಾಳಿ ಶುಭಾಶಯ… ದೀಪಾವಳಿ ಅಂದರೆ ಬೆಳಗು… ದಿವಾಳಿ ಅಂದರೆ ಕೊರಗು.. ಯಾಕೆ ಬೇಕು ನಮಗೂ ನಿಮಗೂ… ಆಗೋದು ಬೇಡ ಬೆರಗು.. ಕೆಲವರು ಯೋಚನೆ ಕೊಳಕು… ಬಿಟ್ಟು ಬೆಳಗಲಿ ಬೆಳಕು…. ಧನ್ಯವಾದಗಳು….

 

ದಿವಾಳಿ ಹಬ್ಬ ಅಲ್ಲ, ಇದು ದೀಪಾವಳಿ ಹಬ್ಬ.. ನಿಮ್ಮ ಈ ದಿವಾಳಿ ಶುಭಾಶಯದಿಂದ ಇತರರ ಮನೆ ಮನಗಳು ದಿವಾಳಿಯಾಗದಿರಲಿ.‌ ದೀಪಾವಳಿ ಅಂತ ಅಂದವಾಗಿ ಟೈಪ್ ಮಾಡಿ ಶುಭಾಶಯ ಕೋರಿ. ದಿವಾಳಿ ಅಂತ ಯಾವುದೇ ಕಾರಣಕ್ಕೂ ಕನ್ನಡದಲ್ಲಾಗಲಿ. ಇಂಗ್ಲೀಷಿನಲ್ಲಾಗಲಿ ವಿಶ್ ಮಾಡಬೇಡಿ. ಈ ತಪ್ಪು ನಮ್ಮ ಭೌದ್ಧಿಕ ದಿವಾಳಿತನವನ್ನಾ ಸೂಚಿಸುತ್ತೆ. ಯಾರೋ ಇಂಗ್ಲೀಷ್ ಭಾಷೆ ಪಿತ್ತ ನೆತ್ತಿಗೇರಿದವರು ಅಥವಾ ವಿದೇಶಿ ವ್ಯಾಮೋಹದಿಂದ ಮಾನಸಿಕವಾಗಿ ಬಳಲುತ್ತಿರುವವರಷ್ಟೇ ಇಂತಹ ತಪ್ಪು ಮಾಡುತ್ತಾರೆ ಅಂದ್ರೆ, ನಮಗೇನಾಗಿದೆ ಅಲ್ವಾ.? ಯಾರೋ ಅವಿವೇಕಿಗಳು ಈ ಮೂಲಕ ನಮ್ಮ ಭಾರತೀಯ ಪರಂಪರೆ. ಭಾಷೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದೆನಿಸುತ್ತೆ! ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಸವಿ ಶುಭಾಶಯಗಳು. 

 

ಇದು ದಿವಾಳಿ ಅಲ್ಲ ಸ್ವಾಮಿ ದೀಪಾವಳಿ. ದಿವಾಳಿ ಅಂದ್ರೆ ನಿರ್ಗತಿಕ, ಪಾಪರ್ ಅಂತ.!! ಗೊತ್ತಿದ್ದೂ ದಿವಾಳಿ ಶುಭಾಶಯ ಅಂದ್ರೆ ನಾನೂ ಹಂಗೇ ಹೇಳ್ತೀನಿ “ಬೇಗ ನಿರ್ಗತಿಕನಾಗು..!!” “ಬೇಗ ಪಾಪರ್ ಎದ್ದೋಗು” ಅಂತ. ಎಲ್ಲ ಕನ್ನಡ ಮನಸುಗಳಿಗೆ ದೀಪಾವಳಿ ಶುಭಾಶಯಗಳು. ಹಚ್ಚೋಣ ಕನ್ನಡ ದೀಪ ನಮ್ಮ ಮನಗಳಲ್ಲಿ – ಮನೆಗಳಲ್ಲಿ.

 

ದಿವಾಳಿ ಯಿಂದ ದೀಪಾವಳಿ ಕಡೆಗೆ…ಬದುಕಿನ ಬಂಡಿ ಸಾಗಲಿ ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. . ಕಷ್ಟ ಕರಗಲಿ… ಬಾಳು ಬೆಳಗಲಿ… ಎಲ್ಲರಿಗೂ ದೀಪಾವಳಿ ಶುಭಾಶಯ…

 

ಎಲ್ಲಾ ಹಿರಿ-ಕಿರಿಯರು, ಸ್ನೇಹಿತ-ಸ್ನೇಹಿತೆಯರಿಗೆ ದೀಪಾವಳಿಯ ಶುಭಾಶಯಗಳು. ಫೇಸ್ಬುಕ್ ಮಾತ್ರ ನನಗೆ ದಿವಾಳಿ ಶುಭಾಶಯ ಹೇಳ್ತಿದೆ… ಥತ್ತೇರಿಕೆ!

ಇದನ್ನೂ ಓದಿ: –

Deepavali Wishes in Kannada HD Images

ದೀಪಾವಳಿಯು ಭಾರತದಲ್ಲಿನ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಶ್ರೀರಾಮನು ತನ್ನ ಹದಿನಾಲ್ಕು ವರ್ಷಗಳ ವನವಾಸದಿಂದ ಹಿಂದಿರುಗಿದ ಸಂದರ್ಭದಿಂದ ಆಚರಿಸಲಾಗುಟ್ಟಿದೆ ಎನ್ನುವುದು ಒಂದು ನಂಬಿಕೆ . ಬೆಳಕಿನ ಹಬ್ಬ ಎಂದೂ ಕರೆಯಲ್ಪಡುವ ದೀಪಾವಳಿಯು ಕೆಡುಕಿನ ಮೇಲೆ ಒಳಿತಿನ ವಿಜಯದ ಹಬ್ಬ. 

ಈ ದೀಪಾವಳಿ ಶುಭಾಶಯಗಳ ಸಂಗ್ರಹ (deepavali wishes in kannada) ಈ ಸಂತೋಷದಾಯಕ ಹಬ್ಬದ ಸಮಯದಲ್ಲಿ ನಿಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎಂದು ನಾವು ಭಾವಿಸುತ್ತೇವೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.

Leave a Reply

Your email address will not be published. Required fields are marked *