ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ | Desha Suttu Kosha Odu

Desha Suttu Kosha Odu Meaning in Kannada

ಈ ಲೇಖನದಲ್ಲಿ ದೇಶ ಸುತ್ತು ಕೋಶ ಓದು ಗಾದೆಯ ಸಾರಾಂಶವನ್ನು (desha suttu kosha odu in kannada) ನೋಡೋಣ. ಈ ಲೇಖನದಲ್ಲಿ ನಿಮಗಾಗಿ ಈ ಪ್ರಸಿದ್ಧ ಗಾದೆಯ ಅರ್ಥವನ್ನು ವಿವಿಧ ರೂಪದಲ್ಲಿ ನೀಡಿದ್ದೇವೆ. ಇವು ನಿಮಗೆ ಪರೀಕ್ಷೆಗಳಲ್ಲಿ ಬರೆಯಲು, ಭಾಷಣ ಸ್ಪರ್ಧೆಗಳಲ್ಲಿ ಭಾಗವಿಸಲು ಅಥವಾ ಇತರೆ ಯಾವುದೇ ಸಂದರ್ಭಗಳಲ್ಲಿ ಸಹಾಯ ಮಾಡುತ್ತವೆ..

Desha Suttu Kosha Odu Gade Vistarane in Kannada | ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ

ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ.

ನಾವು ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬೇಕಾದರೆ ದೇಶದ ವಿವಿಧ ಮಹತ್ವದ ಸ್ಥಳಗಳಿಗೆ ನೇರವಾಗಿ ಭೇಟಿ ನೀಡಿ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಕೋಶಗಳನ್ನು ಅಂದರೆ ವಿವಿಧ ಪುಸ್ತಕಗಳನ್ನು ಓದಿ ಕೂಡ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು. 

ಕೆಲವೊಂದು ವಿಷಯಗಳನ್ನು ಕೇವಲ ಓಡುವುದರಿಂದ ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನೇರವಾಗಿ ವಿಷಯಗಳಿರುವ ಸ್ಥಳಕ್ಕೆ ಹೋಗಿ ತಿಳಿಯಬಹುದಾಗಿದೆ. 

ಜೇನು ಸವಿದರೆ ಮಾತ್ರ ಅದರ ಸಿಹಿ ಗುಣ ಗೊತ್ತಾಗುತ್ತದೆ. ಅದಕ್ಕಾಗಿ ಜ್ಞಾನ ಸಂಪಾದಿಸಲು ವಿಧ್ಯಾರ್ಥಿಗಳಿಗೆ ಪ್ರವಾಸಗಳನ್ನು ಏರ್ಪಡಿಸಲಾಗುತ್ತದೆ. 

ಉದ್ದೇಶಪೂರ್ವಕವಾಗಿ ದೇಶವನ್ನು ಸುತ್ತುವುದರಿಂದ ಜ್ಞಾನವಿಕಾಸವಾಗುತ್ತದೆ. ಅದೇ ರೀತಿ ನಮ್ಮವರು ತಾವು ಕಂಡ ಅನುಭವಗಳನ್ನೊಳಗೊಂಡ ಸಾಹಿತ್ಯವನ್ನು ಬರೆದಿಟ್ಟುಕೊಂಡು ಹೋಗಿದ್ದಾರೆ. ಅಂತಹ ಸಾಹಿತ್ಯವನ್ನು ಓಡುವುದರಿಂದಲೂ ಜ್ಞಾನವನ್ನು ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಜ್ಞಾನವಿಕಾಸಕ್ಕಾಗಿ ದೇಶದ ವಿವಿಧ ಸ್ಥಳಗಳಿಗೆ ಹೋಗಬಹುದು, ಇಲ್ಲವೇ ವಿವಿಧ ಕೋಶಗಳನ್ನು ಓದಬೇಕು. 

Desha Suttu Kosha Odu Gadhe Meaning in Kannada | ದೇಶ ಸುತ್ತು ಕೋಶ ಓದು ಗಾದೆ ಅರ್ಥ

ದೇಶ ಸುತ್ತು ಕೋಶ ಓದು ಈ ಗಾದೆಯು ಜೀವನವನ್ನು ಹೇಗೆ ಸಂಪೂರ್ಣವಾಗಿ ಸಾರ್ಥಕವಾಗಿ ಅನುಭವಿಸುವ ಗುಟ್ಟನ್ನು ಹೇಳುತ್ತದೆ. ಜೀವನಾನುಭವವನ್ನು ಪಡೆಯಲು ಈ ಎರಡು ಕಾರ್ಯಗಳನ್ನು ಮಾಡುವುದು ಉತ್ತಮ. 

ಒಂದು, ಬೆೇರೆ ಬೇರೆ ಪ್ರದೇಶವನ್ನು ಸಂದರ್ಷಿಸಿ ಅಲ್ಲಿನ ಸಮಾಜ, ಜನರ ಜೀವನ ಶೈಲಿಯನ್ನು ಅನುಭವಿಸುವುದು. ಇನ್ನೊಂದು ಬೇರೆ ಬೇರೆ ವಿಚಾರಗಳ ಬಗ್ಗೆ ಪುಸ್ತಕಗಳನ್ನುಓದುವುದು.

ಬೇರೆ ಸ್ಥಳವನ್ನು ಭೇಟಿ ನೀಡಿದಾಗ, ಅಲ್ಲಿಯ ಜನರಂತೇ ನಾವೂ ಸ್ವಲ್ಪ ದಿನ ಬದುಕುವುದು. ಕಾಡಿನ ಪ್ರದೇಶಕ್ಕೆ ಹೋಗಿ, ಅಲ್ಲಿನ ಜೀವನ ರೀತಿಯಲ್ಲಿ ಬದುಕುವುದು. ಗುಡ್ಡ ಪ್ರದೇಶಕ್ಕೆ ಹೋಗಿ, ಗುಡ್ಡದ ಅನುಭವ ಪಡೆಯುವುದು. ಕರಾವಿಳಿಗೆ ತೆರಳಿ ಅಲ್ಲಿನ ಅನುಭವವನ್ನು ಆನಂದಿಸುವುದು. ಹೀಗೆ ಹಲವಾರು ಸ್ಥಳವನ್ನು ನೋಡಿ, ಅಲ್ಲನ ವೈಶಿಷ್ಠ್ಯತೆಯನ್ನು ಅನುಭವಸಿದರೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ. ನಮ್ಮ ಯೋಚನಾ ರೀತಿ ಬದಲಾಗುತ್ತದೆ. ನಾವು ಕೂಪ ಮಂಡೂಕಗಳಾಗದೇ ಲೋಕದ ಜ್ಞಾನ ಪಡೆಯುತ್ತೇವೆ.

ಈ ಭೂಮಿಯ ಎಲ್ಲಾ ಊರು, ದೇಶಗಳನ್ನು ಭೇಟಿ ಮಾಡುವುದು ಅಸಾಧ್ಯ. ಹಾಗಾದರೆ ಏನು ಮಾಡುವುದು? ಕೈ ಕಟ್ಟಿಕೊಂಡು ಕುಳಿತುಕೊಳ್ಳುದೆ?

ಇಲ್ಲ! ಅಂಥಾ ದೇಶ ಬಗ್ಗೆ ಕೋಶ (ಪುಸ್ತಕ) ವನ್ನು ಓದುವುದು ಆ ಪ್ರದೇಶವನ್ನು ನೋಡಿದಷ್ಟೆ ಒಳ್ಳೆಯದು. 

ಪ್ರವಾಸ ಕಥನ, ಜೀವನ ಚರಿತ್ರೆಗಳು ನಮ್ಮ ಅನುಭವಗಳ ಬೇಳವಣಿಗೆಗೆ ಸಾಧ್ಯವಾಗುತ್ತವೆ. ನಮ್ಮ ತಪ್ಪುಗಳಲ್ಲದೇ ಬೇರೆಯವರ ತಪ್ಪುಗಳಿಂದ ಕಲಿಯುವ ಅವಕಾಶ ಸಿಕ್ಕಂತಾಗುತ್ತದೆ. ದೇಶ ಸುತ್ತಿ, ಕೋಶ ಓದಿದರೆ, ನಾವು ಜೀವನವನ್ನು ನೋಡುವ ರೀತಿಯೇ ಬದಲಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.

Desha Suttu Kosha Odu | ದೇಶ ಸುತ್ತು ಕೋಶ ಓದು ಗಾದೆ ವಿವರಣೆ

ಎಲ್ಲಾ ಸ್ಥಳಗಳಲ್ಲಿ ಓಡಾಡಿದರೆ ಅಲ್ಲಿನ ರೀತಿ ನೀತಿ ಒಳ್ಳೆಯದು, ಕೆಟ್ಟದ್ದು, ಯಾವ ರೀತಿಯ ಜನಗಳಿರುತ್ತಾರೆ ಎಂಬುದು ಅನುಭವವಾಗುತ್ತದೆ. ಈ ರೀತಿಯ ಅನುಭವ ನಮ್ಮ ಸುಖ ಜೀವನಕ್ಕೆ ನಾಂದಿಯಾಗುತ್ತದೆ.

ಅದೇ ರೀತಿ ಎಲ್ಲಾ ರೀತಿಯ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ.

ಮನುಷ್ಯನು ಜ್ಞಾನವನ್ನು ಪಡೆಯಲು ಕೆಲವನ್ನು ಬಲ್ಲವರಿಂದ ಕಲಿಯಬೇಕು. ಕೆಲವನ್ನು ಶಾಸ್ತ್ರಗಳನ್ನು ಕೇಳಿ ತಿಳಿಯಬೇಕು. ಕೆಲವನ್ನು ಮಾಡುವವರನ್ನು ನೋಡಿ ಕಲಿಯಬೇಕು.

ಹಾಗೆಯೇ ದೇಶವನ್ನು ಸುತ್ತಿ ಅನುಭವವನ್ನು ಪಡೆಯಬೇಕು. ಅಂದರೆ ಒಂದು ಕೋಶವನ್ನು ಓದಿ ಪಡೆಯುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ನೋಡಿದಾಗ ಜ್ಞಾನ ಇನ್ನೂ ವೃದ್ಧಿಯಾಗುತ್ತದೆ.

ಮನುಷ್ಯನ ಬುದ್ಧಿಶಕ್ತಿಯ ಬೆಳವಣಿಗೆಗೆ ಪುಸ್ತಕಗಳಲ್ಲಿರುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಅನುಭವ ಪಡೆಯುವುದು ಒಳ್ಳೆಯದು.

ಶಾಸ್ತ್ರ ಜ್ಞಾನಕ್ಕಿಂತ ಲೋಕಜ್ಞಾನ ಮುಖ್ಯ ಎಂದು ಬಲ್ಲವರು ಹೇಳುತ್ತಾರೆ. ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬಂತೆ ಪುಸ್ತಕಗಳನ್ನು ಓದುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಜ್ಞಾನವನ್ನು ವೃದ್ಧಿಗೊಳಿಸಬೇಕು.

ಪುಸ್ತಕದಲ್ಲಿ ನಾವು ಒಂದು ವಿಷಯದ ಬಗ್ಗೆ ಓದುತ್ತೇವೆ. ನಾವು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಪವಾಸ ಕೈಗೊಂಡಾಗ ನಾವು ಓದಿದ್ದಕ್ಕಿಂತ ಹೆಚ್ಚಿನ ಜ್ಞಾನ ಲಭಿಸುತ್ತದೆ. ಅಲ್ಲಿನ ಸ್ಥಳ, ಪರಿಸರ, ಅಲ್ಲಿನ ಜನರ ಆಚಾರ-ವಿಚಾರ, ವೇಷ-ಭೂಷಣಗಳು, ಭಾಷೆ, ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ನಮಗೆ ಅರಿವುಂಟಾಗುತ್ತದೆ.

ಹಾಗೆಯೇ ಇತಿಹಾಸದಲ್ಲಿ ‘ಹೊಯ್ಸಳರು’ ಪಾಠವನ್ನು ಕೇಳಿದಾಗ ಪಡೆದ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಬೇಲೂರು, ಹಳೇಬೀಡು ಸ್ಥಳಗಳನ್ನು ನೋಡಿ ಪಡೆಯುತ್ತೇವೆ.

ಆಗ ಬಾವಿಕಪ್ಪೆಗಳಂತಿರದೆ ನಾವು ವಿಶಾಲವಾಗಿ ಚಿಂತಿಸುತ್ತೇವೆ. ಇದರಿಂದ ಹೆಚ್ಚಿನ ಅರಿವು ಉಂಟಾಗುತ್ತದೆ. ಇದೇ ದೇಶ ಸುತ್ತು ಕೋಶ ಓದು ಎಂಬುದರ ಅರ್ಥವಾಗಿದೆ.

ಗಾದೆ: ದೇಶ ಸುತ್ತಬೇಕು, ಕೋಶ ಓದಬೇಕು | Desha Suttabeku Kosha Odabeku

ಇದು ಒಂದು ಗಾದೆ ಮಾತು. ಗಾದೆಗಳನ್ನು ಜೀವನಾನುಭವದ ಸಾರವೆನ್ನುತ್ತಾರೆ. ಈ ಗಾದೆಯು ಈ ಹೇಳಿಕೆಯನ್ನು ಸಮರ್ಥಿಸುವಂತಿದೆ. ಜ್ಞಾನವನ್ನು ಗಳಿಸಬೇಕೆಂದಿರುವವನು ಪುಸ್ತಕಗಳನ್ನು ಓಡಿದರಷ್ಟೇ ಸಾಲದು, ಹಲವು ದೇಶಗಳನ್ನು ಸುತ್ತಬೇಕು. 

ಬೇರೆ ಬೇರೆ ಜನರ ಸಂಪರ್ಕ ಮಾಡಬೇಕು. ಅವರ ಆಚಾರ, ವ್ಯವಹಾರ, ಆಹಾರ, ಅಭ್ಯಾಸಾದಿಗಳನ್ನು ತಿಳಿಯಲು ಪ್ರಯತ್ನಿಸಬೇಕು. ಆಯಾ ಪ್ರದೇಶಗಳ ಪ್ರಾಕೃತಿಕ ಸಂಪತ್ತು, ಮಳೆ, ಬೆಳೆ, ಹವಾಗುಣ, ಜನಜೀವನದ ರೀತಿನೀತಿಳನ್ನು ಅಭ್ಯಸಿಸಬೇಕು. ಆಯಾದೇಶಗಳ ಪ್ರದೇಶ ಪರಿಚಯ, ಇತಿಹಾಸಗಳ ಓದುವಿಕೆಯೊಂದಿಗೆ, ಇಂತಹ ಸುತ್ತಾಟ ಮಾಡುವುದರಿಂದ ಕಲಿಕೆಗೆ ಉತ್ತಮ ತಳಹದಿ ಲಭಿಸುತ್ತದೆ. ಅದಕ್ಕಾಗಿ ದೇಶ ಸುತ್ತಬೇಕು.

ಅದರಂತೆಯೇ ನಮ್ಮ ಶಬ್ಧ ಸಂಪತ್ತನ್ನು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಕೋಶಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು. ಅದು ಶಬ್ಧಕೋಶ (ನಿಘಂಟು) ಆಗಬಹುದು. ಇಲ್ಲವೇ ವಿಶ್ವಕೋಶ ಆಗಬಹುದು. ಅವುಗಳ ಓದುವಿಕೆಯಿಂದ ನಮ್ಮ ಜ್ಞಾನಾಭಿವೃದ್ಧಿಯಾಗುತ್ತದೆ. ಹೀಗಾಗಿ ಇದೊಂದು ಮಾರ್ಗದರ್ಶಕ ಗಾದೆಯಾಗಿದೆ.

Desha Suttu Kosha Odu in Kannada | ದೇಶ ಸುತ್ತು ಕೋಶ ಓದು in Kannada

ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಈ ಗಾದೆಯ ಮಹತ್ವವನ್ನು ಹೇಳುತ್ತದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳಿಲ್ಲದ ದೇಶವಿಲ್ಲ; ಭಾಷೆಯಿಲ್ಲ. ಈ ಗಾದೆಯೂ ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ. 

ಗಾದೆಗಳನ್ನು ಬುದ್ಧಿ ಹೇಳುವಾಗ, ವಿಚಾರಗಳನ್ನು ಸ್ಪಷ್ಟಪಡಿಸುವಾಗ, ಹೋಲಿಸುವಾಗ, ತಪ್ಪುಗಳನ್ನು ತಿದ್ದುವಾಗ ಬಳಸುತ್ತಾರೆ. ಮೇಲಿನ ಗಾದೆ ಜ್ಞಾನ ಸಂಪಾದನೆಗೆ, ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳಲು, ಯಾವ ಮಾರ್ಗ ಅನುಸರಿಸಬೇಕು ಎಂದು ತಿಳಿಸುತ್ತದೆ. ಬೇರೆ ಬೇರೆ ಸ್ಥಳಗಳಿಗೆ ಭೇಟಿಕೊಟ್ಟರೆ ನಮ್ಮ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಜ್ಞಾನ ಸಂಪಾದನೆಯಾಗುತ್ತದೆ.

ಹೀಗೆ ಸಂಪಾದಿಸುವ ಜ್ಞಾನದಿಂದ ನಮ್ಮ ವ್ಯಕ್ತಿತ್ವ ಎತ್ತರಕ್ಕೆ ಬೆಳೆಯುತ್ತದೆ. ಪರಿಪೂರ್ಣ ವ್ಯಕ್ತಿಗಳಾಗಿ ಬದುಕು ಸಾರ್ಥಕವಾಗುತ್ತದೆ ಎನ್ನುವುದು ಈ ಗಾದೆಯ ವಿಶೇಷ ಅರ್ಥವಾಗಿದೆ. 

ದೇಶ ಸುತ್ತಿ ನೋಡು ಕೋಶ ಓದಿ ನೋಡು ಗಾದೆ ವಿಸ್ತರಣೆ | Desha Sutti Nodu Kosha Odi Nodu

ದೇಶ ಸುತ್ತಿ ನೋಡು ಕೋಶ ಓದಿ ನೋಡು ಇದು ಒಂದು ಜನಪ್ರೇಯವಾದ ಗಾದೆ. ಹಿರಿಯರ ಅನುಭವದ ಮಾತೇ ಗಾದೆ. ವೇದ ಸುಳ್ಳಾದರೂ ಗಾದೆ ಸುಳ್ಳಗದು ಎನ್ನುವ ಮಾತಿನಂತೆ ಪ್ರತಿಯೊಂದು ಗಾದೆಯು ಸಂದರ್ಭಕ್ಕನುಸಾರ ಉಪಯೋಗಿಸಲ್ಪಡುತ್ತದೆ. 

ಗಾದೆಗಳನ್ನು ತಿದ್ದಿ ಬುದ್ದಿ ಹೇಳುವಾಗ, ಹೋಲಿಸುವಾಗ ಬಳಸುತ್ತಾರೆ. ಗಾದೆಗಳು ಚಿಕ್ಕ ಚಿಕ್ಕ ವಾಕ್ಯದಲ್ಲಿದ್ದರೂ ದೊಡ್ಡ ಅರ್ಥವನ್ನು ಕೊಡುತ್ತದೆ. ನಮ್ಮ ಹಿರಿಯರು ತಮ್ಮ ಜೀವನದ ಅನುಭವದಿಂದ ಗಾದೆಗಳನ್ನು ಹೇಳಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ನಮ್ಮ ಹಿರಿಯರು ಮಾತನಾಡುವಾಗ ಗಾದೆಗಳ ಉದಾಹರಣೆಯೊಂದಿಗೆ ನಮಗೆ ತಿಳಿ ಹೇಳುತ್ತಾರೆ.

ಮನುಷ್ಯ ಕಲಿಯುವುದು ತನ್ನ ಅನುಭವಗಳಿಂದ. ಅದನ್ನು ಹೆಚ್ಚಿಸಿಕೊಳ್ಳಬೇಕಾದರೆ ಬೇರೆ ಬೇರೆ ಊರುಗಳನ್ನು ತಿರುಗಿ ಅಲ್ಲಿನ ಜೀವನ ಪದ್ಧತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಾವು ಒಂದೇ ಊರಲ್ಲಿ ಜೀವಿಸಿದರೆ ನಮಗೆ ಯಾವುದೇ ಜೀವನದ ಅನುಭವ ಆಗುವುದಿಲ್ಲ. ಪ್ರತಿಯೊಬ್ಬ ಜೀವಿಯು ಅನುಭವಿ. ಅನುಭವದಿಂದ ಕಲಿತ ಪಾಠ ಜೀವನದುದ್ದಕ್ಕೂ ಸಹಾಯಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯಿಂದ ಕಲಿಯುವುದು ಇದ್ದೇ ಇರುತ್ತದೆ. ಆದ್ದರಿಂದ ದೇಶ ಸುತ್ತಬೇಕು.

ಒಂದು ಒಳ್ಳೆಯ ಪುಸ್ತಕ ಸಾವಿರ ಮಿತ್ರರಿಗೆ ಸಮ. ಪುಸ್ತಕಗಳನ್ನು ಓದಿದಷ್ಟೂ ನಮಗೆ ಜ್ಞಾನ ಹೆಚ್ಚಾಗುತ್ತದೆ. ಒಂದು ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕಾದರೆ, ಅದರ ಬಗ್ಗೆ ಕುರಿತಾದ ಪುಸ್ತಕಗಳನ್ನು ಚೆನ್ನಾಗಿ ಓದಿ ಅರ್ಥೈಸಿಕೊಳ್ಳಬೇಕು. ಅದೇ ಹಲವು ವಿಚಾರ ತಿಳಿದುಕೊಳ್ಳಬೇಕಾದರೆ ವಿವಿಧ ವಿಷಯಗಳ ಬಗ್ಗೆ ಓದಬೇಕು. ನಮಗರಿವಿಲ್ಲದಂತೆ ನಾವು ಜಾನರಾಗುತ್ತೇವೆ. ಕೆಲವೊಮ್ಮೆ ಪುಸ್ತಕಗಳಿಂದ ನಮ್ಮ ಪ್ರಶ್ನೆಗಳಿಗೆ ಸಿಕ್ಕ ಉತ್ತರ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಹುದು. 

ಕೆಲವರಿಗೆ ಬೇರೆ ಊರುಗಳಿಗೆ ಹೋಗಲು ಅವಕಾಶವಿರುವುದಿಲ್ಲ ಅಥವಾ ಹಣದ ಕೊರತೆ ಇಂದ ಬೇರೆ ಬೇರೆ ಜಾಗಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಊರಿನ ಬಗ್ಗೆ ಪುಸ್ತಕವನ್ನಾದರೂ ಓದಿ ತಿಳಿದುಕೊಳ್ಳಬೇಕು.

ಆದ್ದರಿಂದ ಜ್ಞಾನ ಸಂಪಾದನೆಗೆ ಜೀವನದ ಅನುಭವಕ್ಕೆ ದೇಶ ಸುತ್ತಬೇಕು ಅಥವಾ ಕೋಶ (ಪುಸ್ತಕ) ಓದಬೇಕು. 

ಇದನ್ನೂ ಓದಿ: 

ನಮ್ಮ ಈ ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ (Desha Suttu Kosha Odu) ಗಾದೆಯ ಅರ್ಥದ ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಗಾದೆಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತಿರಿ.