ಔಪಚಾರಿಕ ಪತ್ರಗಳು ಎಂದರೇನು (formal letter meaning in kannada), ಪರಿಣಾಮಕಾರಿ ಔಪಚಾರಿಕ ಪತ್ರವನ್ನು (formal letter in kannada) ಬರೆಯಲು ಅಗತ್ಯವಾದ ಅಂಶಗಳು, ಸರಿಯಾದ ಸ್ವರೂಪ ಮತ್ತು ಪ್ರಮುಖ ಸಲಹೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಶೈಕ್ಷಣಿಕ ಹಾಗೂ ಇನ್ನೂ ಅನೇಕ ಸಂದರ್ಭಗಳಿಗಾಗಿ ಔಪಚಾರಿಕ ಪತ್ರ ಬರೆಯುವ ಕಲೆಯನ್ನು ಈ ಉದಾಹರಣೆ ಪತ್ರಗಳೊಂದಿಗೆ ಕರಗತ ಮಾಡಿಕೊಳ್ಳಿ.
ಔಪಚಾರಿಕ ಪತ್ರಗಳು ವೃತ್ತಿಪರ, ಶೈಕ್ಷಣಿಕ ಮತ್ತು ಅಧಿಕೃತ ಸಂದರ್ಭಗಳಲ್ಲಿ ಸಂವಹನದ ಅತ್ಯಗತ್ಯ ವಿಧಾನವಾಗಿದೆ. ನೀವು ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿರಲಿ, ಪ್ರಸ್ತಾವನೆಯನ್ನು ಸಲ್ಲಿಸುತ್ತಿರಲಿ, ದೂರು ದಾಖಲಿಸುತ್ತಿರಲಿ ಅಥವಾ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿರಲಿ, ಔಪಚಾರಿಕ ಪತ್ರವನ್ನು ಹೇಗೆ ಬರೆಯುವುದು ಎಂಬುದು ನಿರ್ಣಾಯಕ ಕೌಶಲ್ಯವಾಗಿದೆ. ಈ ಪತ್ರಗಳು ನಿರ್ದಿಷ್ಟ ಸ್ವರೂಪವನ್ನು ಅನುಸರಿಸುತ್ತವೆ ಮತ್ತು ಮಾಹಿತಿಯನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಸಾರುವ ವೃತ್ತಿಪರ ಧ್ವನಿಯನ್ನು ಬಳಸುತ್ತವೆ.
ಇಂದಿನ ಡಿಜಿಟಲ್ ಯುಗದಲ್ಲಿ, ಇಮೇಲ್‌ಗಳು ಮತ್ತು ತಕ್ಷಣದ ಸಂದೇಶ ಮಾಧ್ಯಮಗಳು ನಮ್ಮ ಸಂವಹನವನ್ನು ಆಳುತ್ತಿವೆ. ಔಪಚಾರಿಕ ಪತ್ರ ಬರವಣಿಗೆಯ ಕಲೆ ಹಳೆಯದಾಗಿ ಕಾಣಬಹುದು. ಆದಾಗ್ಯೂ, ಕಾನೂನು ಪತ್ರ ವ್ಯವಹಾರ, ಅಧಿಕೃತ ವಿನಂತಿಗಳು ಮತ್ತು ಪ್ರಮುಖ ಘೋಷಣೆಗಳಂತಹ ವಿವಿಧ ಸಂದರ್ಭಗಳಲ್ಲಿ ಔಪಚಾರಿಕ ಪತ್ರಗಳು ಇನ್ನೂ ಪ್ರಮುಖ ಸ್ಥಾನವನ್ನು ಹೊಂದಿವೆ.
ಔಪಚಾರಿಕ ಪತ್ರ ಬರವಣಿಗೆಯ ರಚನೆಯ ಕಲೆಯ ಪ್ರಾವೀಣ್ಯತೆ ಪಡೆಯುವುದು ಇತರರು ನಿಮ್ಮನ್ನು ಮತ್ತು ನಿಮ್ಮ ಸಂದೇಶವನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಚೆನ್ನಾಗಿ ರಚಿಸಲಾದ ಔಪಚಾರಿಕ ಪತ್ರವು ಅವಕಾಶಗಳಿಗೆ ಬಾಗಿಲುಗಳನ್ನು ತೆರೆಯಬಹುದು, ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಬಲವಾದ ವೃತ್ತಿಪರ ಸಂಬಂಧಗಳನ್ನು ಕಟ್ಟಬಹುದು. ಈ ಲೇಖನದಲ್ಲಿ ನಾವು ಔಪಚಾರಿಕ ಪತ್ರ ಬರವಣಿಗೆಯ ಸೂಕ್ಷ್ಮತೆಗಳನ್ನು ಅನ್ವೇಷಿಸುತ್ತೇವೆ. ವಿವಿಧ ಉದ್ದೇಶಗಳಿಗಾಗಿ ಪರಿಣಾಮಕಾರಿ ಔಪಚಾರಿಕ ಪತ್ರಗಳನ್ನು ಬರೆಯಲು ನಿಮ್ಮನ್ನು ಮಾರ್ಗದರ್ಶನ ಮಾಡಲು ನಾವು ಹಲವು ಉದಾಹರಣೆಗಳನ್ನು ಸಹ ಒದಗಿಸುತ್ತೇವೆ.
Table of Contents
ಔಪಚಾರಿಕ ಪತ್ರಗಳು ಎಂದರೇನು? | Formal Letter in Kannada
ಔಪಚಾರಿಕ ಪತ್ರವು ಅಧಿಕೃತ, ವೃತ್ತಿಪರ, ವ್ಯಾಪಾರ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಲಾಗುವ ಒಂದು ರೀತಿಯ ಲಿಖಿತ ಸಂವಹನವಾಗಿದೆ. ಉದ್ಯೋಗ ಅರ್ಜಿಗಳು, ದೂರಿನ ಪತ್ರಗಳು, ರಾಜೀನಾಮೆ ಪತ್ರಗಳು, ಸಂಪಾದಕರಿಗೆ ಪತ್ರಗಳು, ಅಧಿಕಾರಿಗಳೊಂದಿಗೆ ಅಧಿಕೃತ ಸಂವಹನ ಇವೆಲ್ಲವೂ ಕೆಲವು ಔಪಚಾರಿಕ ಪತ್ರಗಳಿಗೆ ಉದಾಹರಣೆಗಳಾಗಿವೆ.
ಔಪಚಾರಿಕ ಪತ್ರ ಉದಾಹರಣೆಗಳು | Formal Letter Format in Kannada
ನಿಮಗೆ ಔಪಚಾರಿಕ ಪತ್ರಗಳನ್ನು ಬರೆಯುವುದು ಹೇಗೆ (how to write formal letter in kannada) ಎಂಬುದು ತಿಳಿಯದಿದ್ದರೆ, ಈ ಕೆಳಗಿನ ಕೆಲವು ಉದಾಹರಣೆಗಳು ಸಹಾಯ ಮಾಡುತ್ತದೆ. ಇವು ನಿಮ್ಮ ಕನ್ನಡ ಪರೀಕ್ಷೆಗಳಿಗೆ ಸಹ ಸಹಾಯ ಮಾಡುತ್ತದೆ.
ನಿಮ್ಮ ಬಡಾವಣೆಯಲ್ಲಿರುವ ರಸ್ತೆಗಳನ್ನು ದುರಸ್ತಿಪಡಿಸುವ೦ತೆ ಕೋರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ಪತ್ರವೊ೦ದನ್ನು ಬರೆಯಿರಿ.
ದೇವಗಿರಿ ಬಡಾವಣೆ
ಉತ್ತರ ಕನ್ನಡ
ದಿನಾ೦ಕ: 12 ಜನವರಿ 2024
ಇವರಿಗೆ,
ಅಧ್ಯಕ್ಷರು,
ಜಿಲ್ಲಾ ಪಂಚಾಯತ್,
ಕುಮಟಾ, ಉತ್ತರ ಕನ್ನಡ ಜಿಲ್ಲೆ,
ಮಾನ್ಯರೇ,
ವಿಷಯ: ಬಡಾವಣೆಯ ರಸ್ತೆ ರಿಪೇರಿ ದುರಸ್ತಿಯ ಬಗ್ಗೆ.
ನಮ್ಮ ಬಡಾವಣೆಯ ಯಾವ ರಸ್ತೆಗಳೂ ಸುಸ್ಮಿತಿಯಲ್ಲಿಲ್ಲ. ರಸ್ತೆ ಪೂರ್ತಿ ಹಾಳಾಗಿರುವುದರಿ೦ದ ಬಾಡಿಗೆಯ ಯಾವ ವಾಹನಗಳ ಚಾಲಕರೂ ನಮ್ಮ ಬಡಾವಣೆಗೆ ಬರಲು ಒಪ್ಪುತ್ತಿಲ್ಲ.
ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು, ಪೇಟಿಯಿಂದ ವಸ್ತುಗಳನ್ನು ತರಲು ತು೦ಬಾ ತೊಂದರೆಯಾಗುತ್ತಿದೆ. ದೀಪಗಳೂ ಸರಿಯಾಗಿಲ್ಲದೆ ರಾತ್ರಿಯ ವೇಳೆ ನಡೆದು ಬರಲೂ ಕಷ್ಟವಾಗುತ್ತಿದೆ. ಅನೇಕ ಬಾರಿ ಈ ವಿಚಾರವಾಗಿ ಮನವಿ ಸಲ್ಲಿಸಿದ್ದರೂ ಯಾವ ಕ್ರಮವನ್ನೂ ಈವರೆಗೆ ತಾವು ಕೈಗೊ೦ಡಿಲ್ಲವೆಂದು ತಿಳಿಸಲು ವಿಷಾದವಾಗುತ್ತಿದೆ. ತಾವು ಒಮ್ಮೆ ಈ ಬಡಾವಣೆಗೆ ಭೇಟಿಕೊಟ್ಟು ಇಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಬೇಕೆ೦ದೂ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆ೦ದೂ ಮತ್ತೊಮ್ಮೆ ಕೇಳಿಕೊಳ್ಳುತೇ.ನೆ.
ವ೦ದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಸಂತೋಷ್
ನಿಮ್ಮ ಊರಿಗೆ ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ಮಾಡುವಂತೆ ಕೋರಿ ಅಧ್ಯಕ್ಷರು, ಬೆ೦ಗಳೂರು ವಿದ್ಯುತ್ ಸರಬರಾಜು ನಿಗಮ ಬೆ೦ಗಳೂರು, ಇವರಿಗೆ ಮನವಿ ಪತ್ರವೊ೦ದನ್ನು ಬರೆಯಿರಿ.
ದಿನಾ೦ಕ: ಮಾರ್ಚ್ 16, 2023
ಇವರಿ೦ದ,
ರಾಜೇಶ ಗೌಡ
ರಾಜಾಜಿನಗರ
ಬೆ೦ಗಳೂರು ಗ್ರಾಮಾ೦ತರ ಜಿಲ್ಲೆ
ಇವರಿಗೆ,
ಅಧ್ಯಕ್ಷರು
ಬೆ೦ಗಳೂರು ವಿದ್ಯುತ್ ಸರಬರಾಜು ನಿಗಮ
ಬೆ೦ಗಳೂರು.
ಮಾನ್ಯರೆ,
ವಿಷಯ: ನಮ್ಮ ಊರಿನ ವಿದ್ಯುತ್ ವ್ಯತ್ಯಯವನ್ನು ಸರಿಪಡಿಸುವ ಬಗ್ಗೆ.
ರಾಜಾಜಿನಗರವು ಬೆ೦ಗಳೂರು ಗ್ರಾಮಾ೦ತರ ಜಿಲ್ಲೆಯ ಪ್ರಮುಖ ಹಳ್ಳಿಗಳಲ್ಲಿ ಒ೦ದಾಗಿದೆ. ಇಲ್ಲಿಯ ಬಹುಪಾಲು ಜನರು, ವಿದ್ಯುತ್ತಿನಿ೦ದ ಚಲಿಸುವ ಯಂತ್ರವನ್ನು ಬಳಸಿ ನಡೆಯುವ ಉಧ್ಯಮದಲ್ಲಿ ತೊಡಗಿದವರಾಗಿದ್ದು, ನಮ್ಮ ಹಳ್ಳಿಯಲ್ಲಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುವುದರಿಂದ ಅವರಿಗೆಲ್ಲಾ ಬಹಳ ತೊ೦ದರೆಯಾಗಿದೆ. ಜೊತೆಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೂ ಬಹಳ ಇದ್ದು, ಅದರಲ್ಲಿಯೂ ವಿಶೇಷವಾಗಿ ಎಸ್.ಎಸ್.ಎಲ್.ಸಿ. ತರಗತಿಯಲ್ಲಿಓದುದುತ್ತಿರುವ ವಿದ್ಯಾರ್ಥಿಗಳ ಇಡೀ ಜೀವನದ ಭವಿಷ್ಯವು ಪರೀಕ್ಷೆಯ ಮೇಲೆ ನಿಂತಿದೆ. ಆದ್ದರಿ೦ದ 24 ಗಂಟೆಗಳ ಕಾಲವೂ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕಾಗಿ ಕಳಕಳಿಯ ವಿನ೦ತಿ.
ವಂದನೆಗಳೊಂದಿಗೆ,
ನಿಮ್ಮ ವಿಶ್ವಾಸಿ
ರಾಜೇಶ ಗೌಡ
ನಿಮ್ಮ ಬಡಾವಣೆಯ ದಾರಿದೀಪ ಸರಿಪಡಿಸುವ೦ತೆ ಕೋರಿ ನಗರಸಭೆ ಅಧ್ಯಕ್ಷರಿಗೊ೦ದು ಪತ್ರ ಬರೆಯಿರಿ.
ಕನಕಪುರ ಬಡಾವಣೆ
ಬೆಂಗಳೂರು
ದಿನಾ೦ಕ: 21 ಜುಲೈ 2023
ಇವರಿಗೆ,
ಅಧ್ಯಕ್ಷರು
ನಗರಸಭೆ
ಬೆಂಗಳೂರು
ಮಾನ್ಯರೆ,
ವಿಷಯ: ಬೀದಿಯ ದೀಪಗಳ ಅವ್ಯವಸ್ಥೆಯನ್ನು ಕುರಿತು.
ನಾನು ವಾಸಿಸುತ್ತಿರುವ ಕನಕಪುರ ಬಡಾವಣೆಯಲ್ಲಿ ರಸ್ತೆ ದೀಪಗಳು ಕೆಟ್ಟು ಹಲವು ದಿನಗಳಾಗಿವೆ. ರಸ್ತೆಗಳು ಹಾಗೂ ಗುಂಡಿಗಳಿ೦ದ ತುಂಬಿರುವುದರಿಂದ ರಾತ್ರಿಯ ಕತ್ತಲೆಯಲ್ಲಿ/ಓಡಾಡುವವರು ಬಿದ್ದು ಎದ್ದು ಕೈಕಾಲು ಮುರಿದುಕೊಳ್ಳುವಂತಾಗಿದೆ. ಈ ವಿಷಯವಾಗಿ ಸ೦ಬ೦ಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಯಾವ ಉಪಯೋಗವಾಗಿಲ್ಲ.
ಅದರಿ೦ದಾಗಿಯೇ ತಮಗೇ ನೇರವಾಗಿ ಈ ವಿಚಾರವನ್ನು ತಿಳಿಸಬೇಕಾದ ಪರಿಸ್ಥಿತಿಯೊದಗಿದೆ. ದಯವಿಟ್ಟು ತಾವು ಒ೦ದು ದಿನ ರಾತ್ರಿ ಈ ನಮ್ಮ ಬಡಾವಣೆಗೆ ಭೇಟಿಕೊಟ್ಟು, ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ತಮ್ಮಿಂದಾದರೂ ಈ ಬಡಾವಣೆಯ ಜನರ ಬಹುದಿನಗಳ ಬವಣೆ ನೀಗಬಹುದೆ೦ದು ಆಶಿಸುತ್ತೇನೆ.
ಇ೦ತೀ ತಮ್ಮ ವಿಶ್ವಾಸಿ
(ಸಹಿ)
ನಿಮ್ಮ ಗ್ರಾಮದಲ್ಲಿ ಒ೦ದು ಗ್ರಂಥಾಲಯ ಸ್ಥಾಪಿಸುವಂತೆ ಕೋರಿ, ನಿಮ್ಮ ಕೇತ್ರದ ಶಾಸಕರಿಗೆ ಒ೦ದು ಮನವಿ ಪತ್ರ ಬರೆಯಿರಿ.
ಸಾಗರ
13 ಜೂನ್ 2023
ಇವರಿಂದ,
ಚಂದ್ರಶೇಖರ
ತೀರ್ಥಕ ಗ್ರಾಮ
ಸಾಗರ
ಶಿವಮೊಗ್ಗ ಜಿಲ್ಲೆ
ಇವರಿಗೆ,
ಶಾಸಕರು,
ಹೊಸನಗರ
ಶಿವಮೊಗ್ಗ ಜಿಲ್ಲೆ
ಮಾನ್ಯರೇ,
ವಿಷಯ: ನಮ್ಮ ಗ್ರಾಮದಲ್ಲಿ ಗ್ರಂಥಾಲಯವನ್ನು ಆರಂಭಿಸುಪ೦ತೆ ಮನವಿ.
ತಾವು ಈ ಕೇತ್ರದ ಶಾಸಕರಾಗಿ ಆಯ್ಕೆಗೊಂಡ ನ೦ತರ ಕ್ಷೆತ್ರದ ಜನರಿಗಾಗಿ ಹಲವು ಉಪಯುಕ್ತ ಕಾರ್ಯಕ್ರಮ ಗಳನ್ನು ಕೈಗೊ೦ಡಿರುವುದಕ್ಕಾಗಿ ತಮಗೆ ಅಭಿನ೦ದನೆಗಳು. ನಮ್ಮ ಗ್ರಾಮವು ಜಿಲ್ಲೆಯ ಪ್ರಗತಿಪರ ಗ್ರಾಮಗಳಲ್ಲಿ ಒಂದು ಎ೦ಬ ವಿಚಾರ ತಮಗೆ ಕೂಡ ತಿಳಿದಿದೆ. ಇಲ್ಲಿ ಸಾಕಷ್ಟು ಜನರು ವಿದ್ಯಾವಂತರಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ವ್ಯಾಸ೦ಗ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ಈ ಎಲ್ಲರಿಗೂ ಉಪಯೋಗವಾಗುವ, ಎಲ್ಲರ ಅಭಿರುಚಿಗೆ ಪೂರಕವಾಗುವ ಪುಸ್ತಕಗಳುಳ್ಳ ಗ೦ಥಾಲಯವೊಂದು ಈ ಪ್ರದೇಶಕ್ಕೆ ಅವಶ್ಯವಾಗಿ ಬೇಕಾಗಿದೆ. ತಾವು ದಯವಿಟ್ಟು ಮನಸ್ಸು ಮಾಡಿ ಈ ಊರಿನಲ್ಲಿ ಸಾರ್ವಜನಿಕ ಗ೦ಥಾಲಯವೊಂದನ್ನು ಸ್ಥಾಪಿಸುವ ಏರ್ಪಾಡು ಮಾಡಬೇಕಾಗಿ ಕೇಳಿಕೊಳ್ಳುತೇನೆ. ಆ ಮೂಲಕ ನಮ್ಮ ಹಳ್ಳಿಯ ಜನರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಪತ್ರಿಕೆಗಳನ್ನೂ ನಾನಾ ಬಗೆಯ ಪುಸ್ತಕಗಳನ್ನೂ ಓದುವ, ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಒದಗಿಸುವಿರಾಗಿ ಆಶಿಸುತ್ತೇವೆ.
ನನ್ನ ಈ ಮನವಿಯನ್ನು ಪೂರೈಸುವಿರಾಗಿ ಆಶಿಸುವ,
ತಮ್ಮ ವಿಶ್ವಾಸಿ,
ಚಂದ್ರಶೇಖರ
ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಕೋರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೊ೦ದು ಮನವಿ ಪತ್ರ ಬರೆಯಿರಿ.
ಬಚ್ಚಗಾವ್
ಶಿರಸಿ ತಾಲೂಕು,
ಉತ್ತರ ಕನ್ನಡ ಜಿಲ್ಲೆ
ದಿನಾ೦ಕ : ೧೨ ಮೇ ೨೦೧೩
ಇವರಿಗೆ,
ಅಧ್ಯಕ್ಷರು,
ಜಿಲ್ಲಾ ಪಂಚಾಯತ್
ಉತ್ತರ ಕನ್ನಡ.
ಮಾನ್ಯರೇ,
ವಿಷಯ: ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ.
ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವುಂಟಾಗಿದೆ. ಇದ್ದ ಎರಡು ಕೊಳವೆ ಬಾವಿಗಳೂ ಬರಿದಾಗಿವೆ. ಕೆರೆಯಲ್ಲಿ ನೀರಿಲ್ಲ. ಕಳೆದ ವರ್ಷ ಸರಿಯಾಗಿ ಮಳೆ ಬಾರದ ಕಾರಣ ಇ೦ಥ ಪರಿಸ್ಥಿತಿ ಉ೦ಟಾಗಿದೆ. ಊರಿ೦ದ ನಾಲ್ಕು ಕಿ.ಮೀ. ದೂರದಲ್ಲಿ ಹರಿಯುತ್ತಿದ್ದ ಹಳ್ಳವೂ ಒಣಗಿ ಹೋಗಿದೆ.
ಮುಂಜಾನೆಯೇ ಅಲ್ಲಿಗೆ ಹೋಗಿ ಮರಳನ್ನು ಬಗೆದು ಹೊ೦ಡವನ್ನು ಮಾಡಿ ಒಸರಿಬರುವ ನೀರನ್ನು ಸ೦ಗ್ರಹಿಸಿ ತ೦ದು ಶೋಧಿಸಿ ಬಳಸುವ ಸ್ಥಿತಿ ಈ ಗ್ರಾಮಸ್ಥರದ್ದಾಗಿದೆ. ಪಂಚಾಯಿತಿಯವರು ಈ ವಿಚಾರದಲ್ಲಿ ಏನೂ ಮಾಡಲಾಗದೆ ಕೈ ಚೆಲ್ಲಿದ್ದಾರೆ. ದಯಮಾಡಿ ತಾವಾದರೂ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊ೦ಡು, ಕೊಳವೆಬಾವಿಗಳನ್ನು ತೋಡಿಸುವ ಅಥವಾ ಟ್ಯಾಂಕರ್ ಮೂಲಕ ಬೇರೆ ಸ್ಥಳಗಳಿ೦ದ ನಮ್ಮ ಊರಿಗೆ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ತಮ್ಮಿಂದ ನಮ್ಮ ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರಕುವುದೆಂದು ವಿಶ್ವಾಸಿಸುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ರಾಮು
(ಬಚ್ಚಗಾವ್ ಗ್ರಾಮಸ್ಥರ ಪರವಾಗಿ)
ನಿಮ್ಮನ್ನು ರಮಾ/ರಾಮ ಎ೦ದು ಭಾವಿಸಿಕೊಂಡು ಬೆ೦ಗಳೂರಿನ ನೆಹರೂ ತಾರಾಲಯದ ವೀಕ್ಷಣೆಗೆ ಸಮಯಾವಕಾಶ ಮತ್ತು ಅನುಮತಿ ಕೋರಿ ತಾರಾಲಯದ ನಿರ್ದೇಶಕರಿಗೆ ಪತ್ರವೊ೦ದನ್ನು ಬರೆಯಿರಿ.
111, ಮೂರನೇ ಅಡ್ಡರಸ್ತೆ
ಜಯನಗರ,
ಬೆಂಗಳೂರು
ದಿನಾ೦ಕ: 15 ಏಪ್ರಿಲ್ 2024
ಇವರಿಗೆ,
ನಿರ್ದೆಶಕರು
ನೆಹರೂ ತಾರಾಲಯ
ರಾಜಭವನ ರಸ್ತೆ
ಬೆ೦ಗಳೂರು.
ಮಾನ್ಯರೇ,
ತಮ್ಮತಾರಾಲಯದಲ್ಲಿ ಆಕಾಶವನ್ನು ವೀಕ್ಷಿಸಿ ನಭಪ ವೈಚಿತ್ರ್ಯ ವೈಶಿಷ್ಟ್ಯಗಳನ್ನು ನೋಡಬೇಕೆಂ೦ಬುದು ನನ್ನ ಬಹುದಿನಗಳ ಆಸೆಯಾಗಿದೆ. ಆದರೆ ಪ್ರದರ್ಶನಗಳ ಸಮಯ ಮತ್ತು ಪ್ರವೇಶ ಶುಲ್ಕಗಳ ಬಗ್ಗೆ ನನಗೆ ತಿಳಿದಿಲ್ಲ. ದಯವಿಟ್ಟು ಆ ವಿವರಗಳೊಂದಿಗೆ, ವೀಕ್ಷಣೆಗೆ ಅವಕಾಶ ಕೊಡುವ ದಿನ ಹಾಗೂ ಅನುಮತಿ ಪತ್ರವನ್ನು ಕಳುಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ತಮ್ಮ ಉತ್ತರಕ್ಕಾಗಿ ಸ್ವವಿಳಾಸವಿರುವ ಅ೦ಚೆಯ ಲಕೋಟಿಯನ್ನು ಇದರೊಂದಿಗೆ ಇರಿಸಿದ್ದೇನೆ.
ತಮ್ಮ ಉತ್ತರವನ್ನು ಕಾಯುತ್ತಿರುವ,
ತಮ್ಮ ವಿಶ್ವಾಸಿ,
ರಮಾ/ರಾಮ
ನಿಮ್ಮನ್ನು ಮೈಸೂರಿನ ಜಯಚಂದ್ರ ವಿದ್ಯಾಲಯಯ ‘ಸುರೇಶ’ ಎ೦ದು ಭಾವಿಸಿಕೊ೦ಡು. ನಿಮ್ಮ ಶಾಲೆಯಲ್ಲಿ ಆಚರಿಸಿದ ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸುವಂತೆ ‘ವಿಜಯವಾಣಿ’ ದಿನಪತ್ರಿಕೆಯ ಸ೦ಪಾದಕರಿಗೆ ಮನವಿ ಪತ್ರ ಬರೆಯಿರಿ,
ಸುರೇಶ ಬಿ
ಹತ್ತನೇ ತರಗತಿ ‘ಸಿ’ ವಿಭಾಗ
ಜಯಚಂದ್ರ ವಿದ್ಯಾಲಯ
ಬೆಂಗಳೂರು ಗ್ರಾಮಾಂತರ
ದಿನಾ೦ಕ: 21 ಜನವರಿ 2023
ಇವರಿಗೆ,
ಸಂಪಾದಕರು
ವಿಜಯವಾಣಿ ದಿನಪತ್ರಿಕೆ
ನಂ.11, ನೆಹರೂ ರಸ್ತೆ
ಬೆ೦ಗಳೂರು- 560001.
ಮಾನ್ಯರೇ,
ನಮ್ಮ ಶಾಲೆಯಲ್ಲಿ ನವೆ೦ಬರ್-ತಿ೦ಗಳು ಪೂರ್ತಿಯಾಗಿ ನಡೆದ ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮಗಳ ವರದಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ಜೊತೆಗೆ ಉದ್ವಾಟನೆ ಮತ್ತು ಮುಕ್ತಾಯ ಸಮಾರ೦ಭಗಳ ಎರಡೆರಡು ಛಾಯಾಚಿತ್ರಗಳೂ ಇವೆ. ಇದನ್ನು ತಮ್ಮ ಪ್ರತಿಷ್ಠಿತ ದಿನಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟಿಸಬೇಕೆಂದು ಕೋರುತ್ತೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಸುರೇಶ ಬಿ
ಮಾತೃಭಾಷೆ ನಮ್ಮ ಉಸಿರಾಗಲಿ ಮುಖ್ಯಮಂತ್ರಿ ಚ೦ದ್ರು ಕರೆ
ಜೀವನೋಪಾಯಕ್ಕಾಗಿ ಜಗತ್ತಿನ ಯಾವ ಭಾಷೆಯನ್ನು ಬೇಕಾದರೂ ಬಳಸಬಹುದು. ಆದರೆ ಮಾತೃಭಾಷೆಯಾದ ಕನ್ನಡವು ಉಸಿರಾಟದ೦ತೆ ನಮ್ಮ ಜೀವನದ ಅವಿಭಾಜ್ಯ ಅ೦ಗವಾಗಬೇಕು ಎ೦ದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚ೦ದ್ರುರವರು ಕರೆ ನೀಡಿದರು.
ಅವರು ನಗರದ ಜಯಚಂದ್ರ ವಿದ್ಯಾಲಯಯಲ್ಲಿ ನವೆ೦ಬರ್ ತಿಂಗಳಿಡೀ ನಡೆದ ‘ಕನ್ನಡ ರಾಜ್ಯೋತ್ಸವ’ ಸಮಾರೋಪ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಲೆಯು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ತಿಂಗಳಿಡೀ ಉಪನ್ಯಾಸ, ಚಲನಚಿತ್ರ, ಸುಗಮ ಸಂಗೀತ, ವಸ್ತುಪ್ರದರ್ಶನ ಮುಂತಾದ ಕಾರಕ್ರಮಗಳನ್ನು ಆಯೋಜಿಸಿದ್ದರ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸ೦ದರ್ಭದಲ್ಲಿ ಅವರು ಚರ್ಚೆ, ಭಾಷಣ, ಪ್ರಬ೦ಧ, ಭಾವಗೀತೆಗಳ ಗಾಯನ ಮು೦ತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಖ್ಯಾತ ಉದ್ಯಮಿ ಗಣೇಶ್ ಸಿದ್ದೆಶ್ವರ ಕಳೆದ
ಮೂರು ವರ್ಷಗಳಿಂದ ಪ್ರತಿ ನವೆಂಬರ್‌ನಲ್ಲಿ ಆಯೋಜಿಸಲ್ಪಟ್ಟಿರುವ ಈ ಕಾರ್ಯಕ್ರಮವನ್ನು ಮುಂದಿನ ವರ್ಷದಿಂದ ತಮ್ಮ ಶಾಲೆಯ ಬೆ೦ಗಳೂರು ಶಾಖೆಯಲ್ಲಿಯೂ ಮಾಡಲಾಗುವುದು ಎಂದು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಸೂರಜ್ ಗಾವಂಕರ್ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ನ೦ತರ ಶಾಲಾ ವಿದ್ಯಾರ್ಥಿಗಳು ‘ಕನ್ನಡ ಸ೦ಭ್ರಮ’ ಎ೦ಬ ಸಾ೦ಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಔಪಚಾರಿಕ ಪತ್ರಗಳ ಕುರಿತ ಮಾಹಿತಿ (formal letter in kannada)ಯ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.