ಗಣೇಶ ಚತುರ್ಥಿ ಹಬ್ಬ ಯಾರಿಗೆ ಇಷ್ಟ ಇಲ್ಲ ಹೇಳಿ? ಹಿಂದೂಗಳು ಆಚರಿಸುವ ಈ ಹಬ್ಬವು ಕುಟುಂಬ, ಸ್ನೇಹಿತರು ಮತ್ತು ಊರಿನವರೆಲ್ಲ ಒಟ್ಟಾಗಿ ಸೇರಿಸುವ ಅದ್ಭುತ ಹಬ್ಬವಾಗಿದೆ. ಈ ಶುಭ ಸಂದರ್ಭದಲ್ಲಿ ಒಂದು ಸಂತೋಷಕರ ಸಂಪ್ರದಾಯವು ಪ್ರೀತಿಪಾತ್ರರೊಂದಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಹಂಚಿಕೊಳ್ಳುವುದು. ನೀವು ಹತ್ತಿರದ ಅಥವಾ ದೂರದ ಸ್ನೇಹಿತರು ಮತ್ತು ಕುಟುಂಬಕ್ಕೆ ನಿಮ್ಮ ಆತ್ಮೀಯ ಶುಭಾಶಯಗಳನ್ನು ಪ್ರತಿ ವರ್ಷ ಕಳುಹಿಸುವವರಾದರೆ ನಾವು ನಿಮಗಾಗಿ ಗಣೇಶ ಚತುರ್ಥಿ ಶುಭಾಶಯಗಳ (ganesh chaturthi wishes in kannada) ಅದ್ಭುತ ಸಂಗ್ರಹವನ್ನು ಸಂಗ್ರಹಿಸಿದ್ದೇವೆ.
ಈ ಲೇಖನದಲ್ಲಿ ಈ ವಿಶೇಷ ಹಬ್ಬದ ಸಮಯದಲ್ಲಿ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ವ್ಯಕ್ತಪಡಿಸಲು ನಿಮಗೆ ಸಹಾಯ ಮಾಡಲು ನಾವು ವಿವಿಧ ಗಣೇಶ ಚತುರ್ಥಿಯ ಹೃತ್ಪೂರ್ವಕ ಸಂದೇಶಗಳನ್ನು (wishes for ganesh chaturthi in kannada) ಅನ್ವೇಷಿಸುತ್ತೇವೆ. ಈ ಗಣೇಶ ಚತುರ್ಥಿಯನ್ನು ನಿಜವಾಗಿಯೂ ಸ್ಮರಣೀಯವಾಗಿಸೋಣ!
Table of Contents
Happy Ganesh Chaturthi Wishes in Kannada | ಗಣೇಶ ಚತುರ್ಥಿಯ ಶುಭಾಶಯಗಳು, ಸಂದೇಶಗಳು
ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣಪತಿ ಯು ನಮ್ಮ-ನಿಮ್ಮ ಎಲ್ಲಾ ಸದಿಚ್ಛೆಗಳನ್ನು ಇಡೇರಿಸಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ. ಸರ್ವೇ ಜನಾಃ ಸುಖಿನೋ ಭವಂತುಃ.
ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ ಗಳು ನನ್ನ ಎಲ್ಲ ಸ್ನೇಹಿತರಿಗೆ.
ನನ್ನ ಎಲ್ಲಾ ಸ್ನೇಹಿತರಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಗಳು
ಎಲ್ಲಾ ನನ್ನ ಆತ್ಮೀಯ ಹಿಂದೂ ಸಹೋದರರಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಗಳು. ಸೌಹಾರ್ದತೆಯ ಪ್ರತೀಕ ವಾಗಿರಲಿ ಈ ಹಬ್ಬ.
ನಾಡಿನ ಸಮಸ್ತ ಹಿಂದುಭಾಂದವರಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ. ಶ್ರೀಗಣೇಶ ದೇವರ ಕೃಪೆಯಿಂದ ದೇಶದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲಿ.
ನಿಮಗೂ ನಿಮ್ಮ ಕುಟುಂಬದವರಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಶುಭಾಶಯ. ಆ ದೇವತೆಗಳು ಸಕಲ ಸಂಪತ್ತು ಸಂತೋಷ ಸಂಭ್ರಮ ವನ್ನು ದಯೆಪಾಲಿಸಲಿ.
ಮುಖಪುಟದ ಎಲ್ಲಾ ಆತ್ಮಿಯ ಸ್ನೇಹಿತರಿಗೇ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ..! ವಿಘ್ನೇಶ್ವರನಿಗೇ ನಮೋ ನಮಃ.
ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ನೆಮ್ಮದಿ, ಯಶಸ್ಸು, ಸಮೃದ್ಧಿ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಪ್ರಾರ್ಥನೆ. ಗಣೇಶ ಚತುರ್ಥಿ ಹಬ್ಬದ ಶುಭಾಶಯ Happy Ganesh Chaturthi.
ಗಣೇಶ ಚತುರ್ಥಿಯ ಶುಭಾಶಯಗಳು.. ಎಲ್ಲರಿಗೂ ಶುಭವಾಗಲಿ.
ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯ. ಎಲ್ಲರಿಗೂ ಒಳಿತಾಗಲಿ, ತೊಂದರೆಗಳು ಅಡೆತಡೆಗಳು ತೊಲಗಲಿ
ಗೌರಿ ಗಣೇಶ ಚತುರ್ಥಿ ಹಬ್ಬದ ಶುಭಾಶಯ.
ಕಷ್ಟಗಳ ನಿವಾರಕ, ಸಿದ್ಧಿ-ಬುದ್ಧಿದಾಯಕ ಶ್ರೀಗಣೇಶ. ಶಿವ ಪಾರ್ವತಿಯರ ಪುತ್ರನಾದ ಗಣೇಶನು ಗಣಗಳ ಒಡೆಯ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಮೊದಲು ಪೂಜೆ ಎಂಬುದು ಸನಾತನ ಧರ್ಮದ ಉಲ್ಲೇಖ ಎಂದು ಹಿರಿಯರು ಹೇಳುವರು. ಸಮಸ್ತ ನಾಡಿನ ಜನತೆಗೆ ಗಣೇಶ ಹಬ್ಬದ ಶುಭಾಶಯ.
ಗಣೇಶ ಎಲ್ಲರ ಇಷ್ಟಾರ್ಥಗಳನ್ನು ನೆರವೇರಿಸಲಿ..! ಎಲ್ಲಾ ಆಪ್ತಬಂಧುಗಳಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ. ಶುಭವಾಗಲಿ..!
ಗಣೇಶ ಚತುರ್ಥಿಯ ಶುಭಾಶಯಗಳು ಆದರೆ ಯಾರೂ ಮರೀದೆ ಚಂದ್ರನ ದರ್ಶನ ಮಾಡಬಾರ್ದೂ.
ನಿಮಗೂ ನಿಮ್ಮ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಗೌರಿ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು!
ಹಿಂದೂ ಹಬ್ಬ ಗಣಪತಿ ಹಬ್ಬದ ಶುಭಾಶಯ. ಹಿಂದೂ ಭೂಮಿಯಲ್ಲಿ ಹುಟ್ಟೋಕು ಪುಣ್ಯ ಮಾಡಿರಬೇಕು. ನಮ್ಮ ಹಿಂದೂ ಹಬ್ಬ ನಮ್ಮ ಹೆಮ್ಮೆ.
ಭಾದ್ರಪದ ಮಾಸದ ಮೊದಲ ಹಬ್ಬ ಗೌರಿ ಹಬ್ಬ… ಗೌರಿ ಸಮ್ರದ್ಧಿಯ ಸಂಕೇತ, ಗಣಪತಿ ಶುಭ ಹಾಗೂ ಲಾಭದ ಸಂಕೇತ. ಎಲ್ಲಿ ಸಮ್ರದ್ಧಿ ಇರುತ್ತದೊ ಅಲ್ಲಿ ಶುಭ ಹಾಗೂ ಲಾಭ ಇರುತ್ತದೆ. ಅರ್ಥಾತ್ ಎಲ್ಲಿ ಮಳೆ ಬಿದ್ದು ಬೆಳೆ ಸಮ್ರದ್ಧವಾಗಿದೆಯೊ ಅಲ್ಲಿ ಶುಭ ಹಾಗೂ ಲಾಭ ನೆಲೆಸುತ್ತದೆ… ಆದ್ದರಿಂದಲೇ ಗೌರಿ ಬಂದ ಮೇಲೆ ಗಣಪತಿ ಬರುವುದು ಇದನ್ನು ಸಂಕೇತಿಸುತ್ತದೆ…. ಭಾದ್ರಪದ ಮಾಸ ಬೆಳೆ ಕೈಗೆ ಬರುವ ಕಾಲ ಹಾಗಾಗಿ ಕಣಜ ತುಂಬಾ ತುಂಬಿದ ಧವಸ ಧಾನ್ಯ ಸಮ್ರದ್ಧತೆಯನ್ನು ಹಾಗೂ ಗ್ರಹಿಣಿ ಮುಂದಿನ ಒಂದು ವರುಷ ಆ ಧವಸ ಧಾನ್ಯದಿಂದ ಮನೆ ನಿಭಾಯಿಸುವ ನಿಟ್ಟಲ್ಲಿ ಮಂಗಳಗೌರಿಯನ್ನು ಪೂಜಿಸಿ ಸಮ್ರದ್ಧತೆಯನ್ನು ಸಂಕೇತಿಸುತ್ತಾರೆ…. ಶ್ರಾವಣದ ತನಕ ಹೊಲದಲ್ಲಿ ಬೆಳೆಗಾಗಿ ಕೆಲಸ ಮಾಡುವ ಹೆಂಗಸರ ಗಾಜಿನ ಬಳೆಗಳು ಒಡೆದು ಹೋಗುವುದು ಸಹಜ, ಮತ್ತೆ ಬಳೆ ತೆಗೆಯಲು ಸಮ್ರದ್ಧ ಫಸಲು ಬರಬೇಕು ಹಾಗಾಗಿ ಗೌರಿ ಹಬ್ಬದಂದು ಮಹಿಳೆಯರು ಬಳೆತೊಡುತ್ತಾರೆ…. ಈ ಗೌರಿ ಹಬ್ಬ ಬರೀ ಆರ್ಥಿಕ ಸಮ್ರದ್ಧತೆ ತರದೆ, ಕ್ರಿಷಿ, ಆರೊಗ್ಯ, ಮನಸ್ಥಿತಿಯಲ್ಲೂ ಸಮ್ರದ್ಧತೆ ತರಲಿ….. ಗೌರಿ ಗಣೇಶ ಹಬ್ಬದ ಶುಭಾಶಯ… ಹಬ್ಬವನ್ನು ಅರಿತು ಆಚರಿಸೋಣ..
ಓಂ ಗಂ ಗಣಪತಯೇ ನಮಃ.
ಭಾದ್ರಪದ ಶುಕ್ಲದ ಚೌತಿ ಗಣೇಶ ಹಬ್ಬದ ಸಂಭ್ರಮ. ಆತ್ಮೀಯರೇ,ತಮಗೂ-ತಮ್ಮ ಕುಟುಂಬ ವರ್ಗಕ್ಕೂ ವಿಘ್ನೇಶ್ವರ ಅಷೈಶ್ವರ್ಯ ಸುಖ ಶಾಂತಿ ನೆಮ್ಮದಿ ಆರೋಗ್ಯ ಭಾಗ್ಯ ಅನವರತ ಕರುಣಿಸಲಿ ಎಂದು ಹಾರೈಸುತ್ತಾ…..ಹಾರ್ದಿಕ ಶುಭಾಶಯ ಗಳನ್ನು ಅರ್ಪಿಸುತ್ತಿದ್ದೇನೆ. ಸರ್ವೇ ಜನಃ ಸುಖಿನೋ ಭವಂತುಃ. ಗಣಪತಿ ಬಪ್ಪಾ ಮೋರಯ.
ಎಲ್ಲರನ್ನ ಒಗ್ಗೂಡಿಸಿ, ಜಾತಿಧರ್ಮ ಮರೆತು ಸಾರ್ವಜನಿಕವಾಗಿ ಆಚರಿಸುವ ಹಬ್ಬ ಗಣೇಶ ಹಬ್ಬವಂತೆ. ನನ್ನ ಬಂದು ಮಿತ್ರರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಎಲ್ಲ ಪ್ರೀತಿಯ ಸ್ನೇಹಿತರಿಗೆ ಗೌರಿ ಗಣೇಶ ಹಬ್ಬದ ಶುಭಾಶಯ…! ಗಣೇಶ ಹಬ್ಬ ಅಂದರೆ ಬಾಲ್ಯ ನೆನಪಾಗುತ್ತೆ. ಈಗ ಮಗನ ಸಂಭ್ರಮ ನೋಡಿ ಖುಷಿ. ನಿಮ್ಮೆಲ್ಲರ ಬಾಲ್ಯದ ಸಂಭ್ರಮ ಮರುಕಳಿಸಲಿ ಎಂದು ಹಾರೈಸುತ್ತೇನೆ.
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ. ಈ ಹಬ್ಬ ಸರ್ವರ ಬದುಕಿನಲ್ಲಿ ಭರವಸೆ ಮೂಡಿಸಲಿ.. ಸಕಲ ಇಷ್ಟಾರ್ಥಗಳನ್ನೂ ವರಸಿದ್ಧಿ ವಿನಾಯಕ ಈಡೇರಿಸಲಿ ಎಂದು ಪ್ರಾರ್ಥಿಸುವೆ. ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಂಕಲ್ಪಿಸೋಣ.. ಜಲಮೂಲ ಸಂರಕ್ಷಿಸೋಣ…
ಗಣೇಶ ಇಷ್ಟಾರ್ಥ ಈಡೇರಿಸಲಿ.
ಶುಕ್ಲಾಂಬರಧರಂ ವಿಷ್ಣುಂ|
ಶಶಿವರ್ಣಂ ಚತುರ್ಭುಜಂ|
ಪ್ರಸನ್ನ ವದನಂ ಧ್ಯಾಯೇತ್|
ಸರ್ವ ವಿಘ್ನೋಪ ಶಾಂತಯೇ||
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ. ಈ ಹಬ್ಬ ಸರ್ವರ ಬದುಕಿನಲ್ಲಿ ಭರವಸೆ ಮೂಡಿಸಲಿ. ಸಕಲ ಇಷ್ಟಾರ್ಥಗಳನ್ನೂ ವರಸಿದ್ಧಿ ವಿನಾಯಕ ಈಡೇರಿಸಲಿ ಎಂದು ಪ್ರಾರ್ಥಿಸುವೆ. ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಂಕಲ್ಪಿಸೋಣ. ಜಲಮೂಲ ಸಂರಕ್ಷಿಸೋಣ…
ಸಮಾಜದ ಸಮಾನತೆ ಹಾಗೂ ವಿಚಾರವಂತಿಕೆ ಮೂಡಿಸಲು ಸಮುದಾಯಗಳನ್ನ ಒಗ್ಗೂಡಿಸಿ ಹಿಂದೂಗಳನ್ನೆಲ್ಲ ಜಾಗೃತಿಗೊಳಿಸಲೆಂದೆ ಪ್ರಾರಂಭವಾದ ಹಬ್ಬ ಗಣೇಶಹಬ್ಬ ಇಂದು ನಮ್ಮೇಲ್ಲರ ಹಬ್ಬವಾಗಿದೆ ದೇವರನ್ನೇ ಭೂಲೋಕದಲ್ಲಿ ಕುರಿಸಿ ಮೆರೆಸಿ ಕುಣಿದು ಕುಪ್ಪಳಿಸಿ ನಲಿಯುವ ಹಬ್ಬ….ನೆಂಟರನ್ನ ಕರೆದು ಸಿಹಿ ಊಟ ಉಣಬಡಿಸುವ ಸಂತೃಪ್ತಿ… ತಾಯಿ ಮನೆಗೆ ಮಗಳ ಪಯಣ ಗೌರಿ ಬಂದಳು ಎಂಬ ಸಂಭ್ರಮಕ್ಕೆ ತವರು ನಲಿವ ಸಂತಸ… ಹೊಸ ಉಡುಗೆ ತೊಟ್ಟು ನಕ್ಕು ನಲಿದು ಎಲ್ಲಾರಲೊಂದಾಗೊ ಗೌರಿ ಗಣೇಶ ಹಬ್ಬದ ಶುಭಾಶಯ ಆತ್ಮೀಯರೆ… ಆಚರಣೆ ಪರಿಸರಸ್ನೇಹಿಯಾಗಿರಲಿ ಬದುಕು ಸರಳವಾಗಿರಲಿ ಪ್ರೀತಿ ಸ್ನೇಹ ಮತ್ತು ಆತ್ಮೀಯತೆ ಅಪಾರವಾಗಿರಲಿ. ಒಟ್ಟಾರೆ ಈ ದಿನದಿಂದ ಎಲ್ಲಾರು ಸುಖಶಾಂತಿ ಸಹಬಾಳ್ವೆಯಿಂದ ಭಯ ಮುಕ್ತ ಜೀವನ ನಡೆಸುವಂತಾಗಲಿ.
ಸರ್ವರಿಗೂ ಗೌರಿ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ನಾಡಿಗೆ ಒಳ್ಳೆಯದು ಮಾಡಲಿ. ಅವನ ಕೃಪೆ ನಿಮ್ಮ ಮೇಲಿರಲಿ
ನಾಡಿನ ಸಮಸ್ತ ಜನತೆಗೆ ಬಾಂಧವ್ಯ ಬೆಸೆಯುವ ಗೌರಿ ಗಣೇಶ ಹಬ್ಬದ ಶುಭಾಶಯ.
ಖುಷಿಗಳನ್ನು ಹಂಚಲು ಹಬ್ಬ ಒಂದು ನೆಪವಷ್ಟೇ.. ಬದುಕು ಸಿಹಿಯ ಹೂರಣವಾಗಲಿ, ಸದಾ ಶುಭವಾಗಲಿ.. ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ.. ಎಲ್ಲರಿಗೂ ಒಳಿತಾಗಲಿ, ರಾಷ್ಟ್ರಕ್ಕೆ ಕಲ್ಯಾಣವಾಗಲಿ.
ಗೆಳೆಯರೇ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಖುಷಿ ಖುಷಿಯಾಗಿ ಗಣೇಶ ಹಬ್ಬವನ್ನು ಮಾಡಿ.
ವಿಘ್ನ ನಿವಾರಕ ಗಣಪ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಗಣಪತಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಇಷ್ಟಾರ್ಥಗಳು ಸಿದ್ಧಿಸುವಂತೆ ಶ್ರೀ ಗಣೇಶ ಅನುಗ್ರಹಿಸಲಿ. ಕಷ್ಟಗಳೆಲ್ಲವು ದೂರವಾಗಿ ನಿಮ್ಮ ಜೀವನದ ಹಾದಿ ಸುಗಮವಾಗಲಿ. ನಿಮ್ಮ ಮನೆ ಮನಗಳಲ್ಲಿ ಸಂತೋಷದ ಮಳೆ ಸುರಿಯಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಹಬ್ಬದ ಶುಭಾಶಯಗಳು.
ಶರಣು ಶರಣಯ್ಯ ಶರಣು ಬೆನಕ. ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ. ವಿನಾಯಕ ನಿಮಗೆ ಸಕಲ ಐಶ್ವರ್ಯ, ಆರೋಗ್ಯ ನೀಡಿ ಹಾರೈಸಲಿ ಎಂದು ಪ್ರಾರ್ಥಿಸುತ್ತೇನೆ.
ಮೂಷಿಕ ವಾಹನ ಮೋದಕ ಹಸ್ತ. ಚಾಮರ ಕರ್ಣ ವಿಳಂಬಿತ ಸೂತ್ರ. ವಾಮನ ರೂಪ ಮಹೇಶ್ವರ ಪುತ್ರ. ವಿಘ್ನ ವಿನಾಯಕ ಪಾದ ನಮಸ್ತೆ. ಗಣೇಶನ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದವರ ಮೇಲಿರಲಿ. ಗಣೇಶ ಚತುರ್ಥಿಯ ಶುಭಾಶಯಗಳು.
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
Ganesh Chaturthi Wishes in Kannada Images
ನಾವು ನಮ್ಮ ಗಣೇಶ ಚತುರ್ಥಿ ಶುಭಾಶಯಗಳ ಸಂಗ್ರಹವನ್ನು (happy ganesh chaturthi wishes in kannada collection) ಮುಕ್ತಾಯಗೊಳಿಸುತ್ತಿದ್ದಂತೆ, ಹೃದಯಪೂರ್ವಕ ಶುಭಾಶಯಗಳು ಬಂಧಗಳನ್ನು ಬಲಪಡಿಸಬಹುದು ಮತ್ತು ಸಂತೋಷವನ್ನು ಹರಡಬಹುದು ಎಂಬುದನ್ನು ನೆನಪಿಡಿ.
ಪ್ರೀತಿಪಾತ್ರರನ್ನು ಸಂಪರ್ಕಿಸಲು ಮತ್ತು ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ಈ ಸರಳ ಸಂದೇಶಗಳನ್ನು ಬಳಸಿ. ಗಣೇಶನ ಆಶೀರ್ವಾದವು ನಿಮ್ಮೊಂದಿಗೆ ಸಾದಾ ಇರಲಿ ಮತ್ತು ನಿಮ್ಮ ಆಚರಣೆಯು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ! ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಶುಭಾಶಯಗಳು.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.