ಉತ್ತಮ ಗುರು ಪೂರ್ಣಿಮಾ ಶುಭಾಶಯಗಳನ್ನು (guru purnima wishes in kannada) ಹುಡುಕುತ್ತಿರುವಿರಾ? ಜುಲೈ 21 ರಂದು ಈ ವರ್ಷದ ಗುರು ಪೂರ್ಣಿಮೆ ಸಮೀಪಿಸುತ್ತಿದ್ದಂತೆ, ನಮ್ಮ ಜೀವನದಲ್ಲಿ ಪ್ರಬುದ್ಧ ಶಕ್ತಿಗಳಿಗೆ ನಮ್ಮ ಪ್ರೀತಿ, ಗೌರವ ಮತ್ತು ಮೆಚ್ಚುಗೆಯನ್ನು ತಿಳಿಸಲು ಶುಭಾಶಯಗಳು, ಸಂದೇಶಗಳು ಮತ್ತು ಉಲ್ಲೇಖಗಳ ಹೃತ್ಪೂರ್ವಕ ಸಂಗ್ರಹವನ್ನು ಈ ಗುರುಪೂರ್ಣಿಮೆಯ ಶುಭಾಶಯಗಳ ಸಂಗ್ರಹ ಲೇಖನದಲ್ಲಿ ಅನ್ವೇಷಿಸೋಣ.
ಗುರು ಪೂರ್ಣಿಮಾ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಮತ್ತು ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ವಾರ್ಷಿಕವಾಗಿ ಹುಣ್ಣಿಮೆಯ ದಿನದಂದು (ಪೂರ್ಣಿಮಾ) ಹಿಂದೂ ತಿಂಗಳ ಆಷಾಢದಲ್ಲಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜೂನ್ ಅಥವಾ ಜುಲೈನಲ್ಲಿ ಬರುತ್ತದೆ.
ಈ ಮಂಗಳಕರ ದಿನವು ನಮ್ಮನ್ನು ಜೀವನದ ಹಾದಿಯಲ್ಲಿ ಬೆಳಗಿಸುವ ಮತ್ತು ಮಾರ್ಗದರ್ಶನ ಮಾಡುವ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಮರ್ಪಿಸಲಾಗಿದೆ.
“ಗುರು” ಎಂಬ ಪದವು ಸಂಸ್ಕೃತ ಪದಗಳಾದ “ಗು” ಅಂದರೆ ಕತ್ತಲೆ ಮತ್ತು “ರು” ಎಂದರೆ ಹೋಗಲಾಡಿಸುವವರಿಂದ ಹುಟ್ಟಿದೆ. ಇದು ಗುರುವನ್ನು ಅಜ್ಞಾನದ ಅಂಧಕಾರವನ್ನು ತೆಗೆದುಹಾಕುವ ಮತ್ತು ಜ್ಞಾನದ ದೀಪವನ್ನು ಬೆಳಗಿಸುವ ವ್ಯಕ್ತಿ ಎಂದು ಸೂಚಿಸುತ್ತದೆ.
ವೇದಗಳ ಸಂಕಲನಕಾರ ಮತ್ತು ಮಹಾಕಾವ್ಯ ಮಹಾಭಾರತದ ಲೇಖಕರಾದ ಮಹಾನ್ ಋಷಿ ವೇದವ್ಯಾಸರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಗುರು ಪೂರ್ಣಿಮೆಗೆ ಅಪಾರ ಮಹತ್ವವಿದೆ.
ಈ ಹಬ್ಬವನ್ನು ಭಾರತ, ನೇಪಾಳ ಮತ್ತು ಭೂತಾನ್‌ನಾದ್ಯಂತ ಹಿಂದೂಗಳು, ಬೌದ್ಧರು ಮತ್ತು ಜೈನರು ವ್ಯಾಪಕವಾಗಿ ಆಚರಿಸುತ್ತಾರೆ
ಭಕ್ತರು ಈ ದಿನದಂದು ಪ್ರಾರ್ಥನೆ ಸಲ್ಲಿಸುತ್ತಾರೆ, ಗುರು ಪೂಜೆ ಮಾಡುತ್ತಾರೆ, ಆಶೀರ್ವಾದ ಪಡೆಯುತ್ತಾರೆ ಮತ್ತು ಗುರುಗಳಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ.
ಗುರು ಪೂರ್ಣಿಮೆಯು ವ್ಯಕ್ತಿಯ ಜೀವನದಲ್ಲಿ ಗುರುಗಳ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ ಮತ್ತು ಗುರುಗಳಿಂದ ಶಿಷ್ಯರಿಗೆ ಜ್ಞಾನ ಪ್ರಸಾರದ ಪ್ರಾಚೀನ ಸಂಪ್ರದಾಯವನ್ನು ಆಚರಿಸುತ್ತದೆ.
ಜುಲೈ 21 ರಂದು ಈ ವರ್ಷದ ಗುರು ಪೂರ್ಣಿಮೆ ಸಮೀಪಿಸುತ್ತಿದ್ದಂತೆ, ನಮ್ಮ ಜೀವನದಲ್ಲಿ ಪ್ರಬುದ್ಧ ಶಕ್ತಿಗಳಿಗೆ ನಮ್ಮ ಪ್ರೀತಿ, ಗೌರವ ಮತ್ತು ಮೆಚ್ಚುಗೆಯನ್ನು ತಿಳಿಸಲು ಶುಭಾಶಯಗಳು, ಸಂದೇಶಗಳು ಮತ್ತು ಉಲ್ಲೇಖಗಳ ಹೃತ್ಪೂರ್ವಕ ಸಂಗ್ರಹವನ್ನು ಈ ಲೇಖನದಲ್ಲಿ ಅನ್ವೇಷಿಸೋಣ.
ನಿಮ್ಮ ಮಾರ್ಗದರ್ಶಕರಿಗೆ, ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅತ್ಯುತ್ತಮ ಗುರು ಪೂರ್ಣಿಮಾ ಶುಭಾಶಯಗಳನ್ನು ಅನ್ವೇಷಿಸಿ. ನಮ್ಮ ಹೃತ್ಪೂರ್ವಕ ಸಂದೇಶಗಳು ಮತ್ತು ಉಲ್ಲೇಖಗಳ ಸಂಗ್ರಹವು ಈ ಮಂಗಳಕರ ದಿನದಂದು ನಿಮ್ಮ ಮೆಚ್ಚುಗೆಯನ್ನು ತಿಳಿಸಲು ಸಹಾಯ ಮಾಡುತ್ತದೆ.
Table of Contents
Happy Guru Purnima Wishes in Kannada
ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣಾ ಮುಕುತಿ ಎಂಬ ಮಾತಿದೆ, ಮನುಕುಲಕ್ಕೆ ದಾರಿದೀಪವಾಗಿ ನಿಲ್ಲುವ ಗುರುಗಳಿಗೆಲ್ಲ ನಮಿಸುತ್ತಾ ಗುರುಪೂರ್ಣಿಮೆಯ ಶುಭಾಶಯ ಕೋರೋಣ.
ಗುರುʼ ಎಂದರೆ ʻಲಘುʼ ಅಲ್ಲ; ಗುರುವೇ ದೇವರು ವೇದಗಳನ್ನು ಬೋಧಿಸಿದ ಮಹಾಗುರುವಾದ ವೇದ ವ್ಯಾಸರ ಜಯಂತಿಯನ್ನು ಗುರುಪೂರ್ಣಿಮೆ ಎಂದು ಆಚರಿಸುವ ಮೂಲಕ ಸಮಸ್ತ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸುವ ಪರಿಪಾಠ ಬೆಳೆದುಬಂದಿದೆ. ಇಂದು ಗುರುಪೂರ್ಣಿಮಾ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ ಆಚಾರ್ಯ ದೇವೋ ಭವ ಎನ್ನುವಂತೆ ಹಿಂದೂ ಸಂಸ್ಕೃತಿಯಲ್ಲಿ ದೇವರಿಗಿಂತಲೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಿದ್ದಾರೆ. ಗುರುಗಳ ಸ್ಮರಣೆ ಮೂಲಕ ಕೃತಜ್ಞತೆ ಅರ್ಪಿಸುವ ಪರ್ವವೇ ಗುರುಪೂರ್ಣಿಮಾ. ನಿತ್ಯಾನಂದ ಧ್ಯಾನಪೀಠದ ಬಳಿ ಜ್ಞಾನೋದಯವಾಯ್ತು ನಿಮಗೆಲ್ಲಾ ಗುರುಪೂರ್ಣಿಮದ ಶುಭಾಶಯ ಹೇಳಿಲ್ಲ ಅಂತಾ ಸೋ ಸರ್ವರಿಗೂ ಪವಿತ್ರ ಗುರುಪೂರ್ಣಿಮೆಯ ಶುಭಕಾಮನೆಗಳು….
ಗುರು ಪೂರ್ಣಿಮೆಯ ಪುಣ್ಯದಿನದಂದು ಪರಮ ಪೂಜ್ಯರನ್ನ ನೆನೆಯುತ್ತಾ ನಾಡಿನ ಸಮಸ್ತೆ ಜನತೆಗೆ ಗುರು ಪೂರ್ಣಿಮೆಯ ಶುಭಾಶಯ ತಿಳಿಸುತ್ತೇನೆ. “ಹರ ಮುನಿದರು ಗುರು ಕಾಯ್ವನು”
ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಭಯವೇನು ಗುರುವೇ ! ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ !!
ಗುರುವೇ ಶಕ್ತಿ ಗುರುವಿನಿಂದ ಮುಕ್ತಿ ❤️
ಗುರುಪೂರ್ಣಿಮೆಯ ಶುಭಾಶಯಗಳು 🙏
ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ. ಅಸ್ಮದಾಚಾರ್ಯಪರ್ಯನ್ತಾಂ ವನ್ದೆ ಗುರುಪರಂಪರಾಂ. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
ಮಾತು ಕಲಿಸಿದ ಮೊದಲ ಗುರು ಅಮ್ಮನಿಗೆ, ಜೀವನ ಪಾಠ ಕಲಿಸಿದ ಗುರು ಅಪ್ಪನಿಗೆ, ವಿದ್ಯಾ ಬುದ್ಧಿ ಕಲಿಸಿದ ಗುರುಗಳಿಗೆ ವಂದಿಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು ❤️🙏
ಜೈ ಶ್ರೀ_ಗುರುದೇವ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||
ಸಮಸ್ತ ಲೋಕಕ್ಕೂ ಮಾರ್ಗದರ್ಶನ ಮಾಡುವ ಗುರು ವೃಂದಕ್ಕೆ ಗುರುಪೂರ್ಣಿಮೆಯ ಭಕ್ತಿ ಪೂರ್ವಕ ಪ್ರಣಾಮಗಳು 🙏
ಗುರುವನ್ನು ‘ಗುರುಮಾವುಲಿ’ ಎಂದು ಕರೆಯುತ್ತಾರಲ್ಲವೇ !
ಸದ್ಗುರುವು ತಾಯಿಗಿಂತಲೂ ಎಷ್ಟೋ ಪಟ್ಟು ನಿಸ್ವಾರ್ಥಿ ಮತ್ತು ಕೋಮಲ ಹೃದಯ ಉಳ್ಳವರಾಗಿರುತ್ತಾರೆ. ಸದ್ಗುರುವಿನ ಉಪಕಾರ ತೀರಿಸಲು ಬರುವುದಿಲ್ಲ. ಎಲ್ಲಾ ಸಂಬಂಧಗಳೂ ಸಂಕುಚಿತ ಮತ್ತು ಸಾಪೇಕ್ಷ ವಾಗಿರುತ್ತವೆ. ನಿರಪೇಕ್ಷ ಪ್ರೇಮದ ಮತ್ತು ನಿರತಿಶಯ ಆನಂದದ ಸರ್ವ ಸಮಾನರಾದ ಸದ್ಗುರುಗಳು ಸರ್ವೋತ್ಕೃಷ್ಟ ತವರುಮನೆಯಾಗಿದ್ದಾರೆ. ಸರ್ವೇ ಜನಾಃ ಸುಖಿನೋ ಭವಂತುಃ *ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು. ಗುರುಪೂರ್ಣಮೆಯ ಈ ಶುಭಸಂದರ್ಭದಲ್ಲಿ ಎಲ್ಲ ಸದ್ಭಕ್ತರಿಗೆ ಶುಭಾಷಯಗಳು. 🌷🌷🌷🌷🌷🌷🌷🌷🌷🌷
ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೆ ನಮಃ ಸರ್ವರರಿಗೂ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಗುರುಗಳ ಆಶೀವಾ೯ದ ಸದಾ ಇರಲಿ…
Kannada Language Guru Purnima Wishes in Kannada
ಗುರುಪೂರ್ಣಿಮೆಯ ಶುಭಾಶಯಗಳು. ಆತನ ಕೃಪೆ ಅನವರತವೂ ಹರಿಯುತ್ತಿರಲಿ. 🙏
ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||
ಸರ್ವರಿಗೂ ಗುರುಪೂರ್ಣಿಮೆಯ ಶುಭಾಷಯಗಳು.
ಗುರಿಯ ಅರಿಯದೆ ತಿರುಗುತ್ತಿದ್ದೆನು ಮರೆತು ತನುವಿನ ಪರಿವೆಯ ಗುರುವು ದೊರೆಯದೆ ಮರುಗುತ್ತಿದ್ದೆನು ಪಡೆದೆ ಸದ್ಗುರು ಭಗವೆಯ ಗುರುಪೂರ್ಣಿಮೆಯ ಶುಭಾಶಯಗಳು
ಗುರುತ್ವ ತುಂಬಿ ಗುರುವಾಗಿಸಿದ ಸಕಲ ಗುರುಗಳಿಗೂ, ಶಿಷ್ಯ ಬಳಗಕ್ಕೂ ಗುರುಪೂರ್ಣಿಮೆಯ ನಮನ…
ಅಜ್ಞಾನ ವೆಂಬ ಅಂಧಕಾರ ದಿಂದ ಜ್ಞಾನ ವೆಂಬೆ ಬೆಳಕಿನೆಡಗೆ ಕೊಂಡೊಯ್ದ ಗುರುವಿಗೆ ಶಿರಶಾಷ್ಟಾಂಗ ನಮಸ್ಕಾರ, ಗುರುಪೂರ್ಣಿಮೆಯ ಶುಭಾಶಯಗಳು🙏🙏
ನಾವ್ ಏನೇ ಕೇಳಿದ್ರು ಇಲ್ಲಾ ಅಂತ ಹೇಳ್ದೆ, ಎಲ್ಲದಕ್ಕೂ ಉತ್ತರ ಕೊಡೋ. ಗುರು ಗೂಗಲ್ ಬಾಬಾಗೆ ಕೂಡ ಗುರುಪೂರ್ಣಿಮೆಯ ಶುಭಾಶಯಗಳು.🙏😂
ಅಜ್ಞಾನದಿಂದ ಸುಜ್ಞಾನದೆಡೆಗೆ ಕತ್ತಲಿನಿಂದ ಬೆಳಕಿನೆಡೆಗೆ ಬಾಲ್ಯದಿಂದ ಮುಪ್ಪಿನವರೆಗೂ ಅನುಭವಗಳನ್ನು ವಿದ್ಯೆಯನ್ನು ಜೀವನದ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು
ಬದುಕಿನ ಹಲವು ಆಯಾಮಗಳನ್ನು ಎದುರಿಸುವ ಆತ್ಮಬಲ ನೀಡುವ ಎಲ್ಲ ಗುರುಗಳಿಗೂ ಗುರುಪೂರ್ಣಿಮೆಯ ಶುಭಾಶಯಗಳು.
ನಮ್ಮೆಲ್ಲರಲ್ಲಿ ಜೀವನದ ಮೌಲ್ಯಗಳು ಹಾಗೂ ಆತ್ಮ ವಿಶ್ವಾಸದ ಬೀಜಗಳನ್ನು ಬಿತ್ತಿದ ಗೌರವಾನ್ವಿತ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ. ಗುರುಪೂರ್ಣಿಮೆಯ ಶುಭಾಶಯಗಳು!
ಗುರುಭ್ಯೋ ನಮಃ |
ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ ಜೀವನದಲ್ಲಿ ಸರಿಯಾದ ದಾರಿತೋರುವ ಪ್ರತಿಯೊಬ್ಬರೂ ಗುರುಗಳೇ, 🙏 ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮೆಯ ಶುಭಾಶಯಗಳು🙏💐
ನಾಡಿನ ಸಮಸ್ತ ಜನತೆಗೆ “ಗುರುಪೂರ್ಣಿಮೆಯ” ಶುಭಾಶಯಗಳು💐
ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ |
ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ||
ನಾರಾಯಣಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮಾದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||🙏🏻🙏🏻
ಮುಂದೆ ಗುರಿ, ಹಿಂದೆ ಗುರುವಿದ್ದರೆ ಜಯ ನಮ್ಮದೇ.. ಈ ವಿಜಯಕ್ಕೆ ಕಾರಣೀಭೂತರಾದ ನನ್ನೆಲ್ಲಾ ಗುರುಗಳಿಗೂ ಗುರುಪೂರ್ಣಿಮೆಯ ಶುಭಾಶಯಗಳು 🙏
“ನೀನೊಬ್ಬ ಜೊತೆಗಿರಲು ಜಗವೆಲ್ಲ ಎದುರಾಗೆ ಭಯವೇನು ಗುರುವೇ…” ಗುರುಪೂರ್ಣಿಮೆಯ ಶುಭದಿನದಂದು ನಮ್ಮೆಲ್ಲರನೂ ನಿರತ ಹರಸಿ ಮುನ್ನಡೆಸುತ್ತಿರುವ ಕುಲಗುರುಗಳಿಗೆ, ಶ್ರೀಗುರುಪರಂಪರೆಗೆ ಪ್ರಾಣ ಪ್ರಣಾಮಗಳು ✨🙏🏻✨ ಗುರುಬಂಧುಗಳೆಲ್ಲರಿಗೂ ಗುರುಪೂರ್ಣಿಮೆ’ಯ ಶುಭಾಶಯಗಳು💐
ಗುರುಬ್ರಹ್ಮ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ.
ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು. ಗುರುಪೂರ್ಣಿಮೆಯ ಶುಭಾಶಯಗಳು
“ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ
“ಪ್ರತಿಯೊಬ್ಬರ ಜೀವನದ ಪ್ರತಿ ಘಟ್ಟದಲ್ಲೂ ಒಬ್ಬೊಬ್ಬ ಗುರುವಿನ ಸತ್‌ಸಂಗವು ದೊರೆತೇ ಇರುತ್ತದೆ, ಅಂತಹ ಎಲ್ಲಾ ಗುರುಗಳಿಗೂ ಶತ ಶತ ಕೋಟಿ ನಮನಗಳು.
Guru Purnima Quotes in Kannada
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪರಮಾತ್ಮನ ಸ್ಥಾನವನ್ನು ಕಲ್ಪಿಸಲಾಗಿದೆ. ಬದುಕನ್ನು ರೂಪಿಸಲು ಮಾರ್ಗದರ್ಶನವನ್ನು ನೀಡುವ ಎಲ್ಲಾ ಗುರುಗಳಿಗೆ ಗೌರವದಿಂದ ನಮಿಸುತ್ತಾ ಸಮಸ್ತರಿಗೂ ಗುರುಪೂರ್ಣಿಮೆಯ ಶುಭಾಶಯಗಳು
ಬದುಕಲ್ಲಿ ಹೇಗೆ ಬದುಕಬೇಕು ಎಂದು ಉದಾಹರಣೆಯಾದ ಉತ್ತಮರಿಗೆ ಸಾಷ್ಟಾಂಗ ಹೇಗೆ ಬದುಕಬಾರದು ಎಂಬುದಕ್ಕೆ ಉದಾಹರಣೆಯಾದ ಅಧಮರಿಗೆ ಧನ್ಯವಾದ ಗುರುಪೂರ್ಣಿಮೆಯ ಶುಭಾಶಯಗಳು
ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನ ಜ್ಯೋತಿಯನ್ನು ಬೆಳಗಿಸುವ ಗುರುವೇ ಪ್ರತ್ಯಕ್ಷ ದೇವರು. ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ವಿಶೇಷ ಸ್ಥಾನವಿದೆ. ಗುರುವಿನ ಕರುಣೆಯೇ ಯಶಸ್ಸನ್ನು ಸಾಧಿಸುವ ಶಕ್ತಿ. ಸೂಕ್ತ ಮಾರ್ಗದರ್ಶನದ ಮೂಲಕ ಜೀವನವನ್ನು ಹಸನಾಗಿಸುವ ಗುರುವಿಗೆ ಶತಕೋಟಿ ಪ್ರಣಾಮಗಳು. ಎಲ್ಲರಿಗೂ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಪಠ್ಯಪುಸ್ತಕದಲ್ಲಿರುವ ಜ್ಞಾನದಿಂದ ಹಿಡಿದು, ಬದುಕಿನ ಮಾರ್ಗವನ್ನು ತೋರಿಸುವ ತನಕ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಗುರುಗಳ ಪಾತ್ರ ಮಹತ್ವವಾಗಿರುತ್ತದೆ. ಗುರುಪೂರ್ಣಿಮೆಯ ದಿನದಂದು ಬದುಕಿನ ಪ್ರತಿ ಮಜಲುಗಳನ್ನು ಎದುರಿಸಲು ಧೈರ್ಯ ತುಂಬಿ, ನನ್ನನ್ನು ತಿದ್ದಿ ತೀಡಿದ ಎಲ್ಲರಿಗೂ ನಮನಗಳು.
ಅಕ್ಷರಾಭ್ಯಾಸ ಮಾಡಿಸಿದಾತ ಶಾಲಾ ಗುರು🙏 ಸಮಚಿತ್ತ ಬದುಕಿಗಾಗಿ ಭಗವಾ ಗುರು ನನ್ನೆಲ್ಲ ಪ್ರೀತಿಯ ಸಹೋದರ ಮತ್ತು ಸಹೋದರಿಯರಿಗೆ ಗುರುಪೂರ್ಣಿಮೆಯ ಹಾರ್ದಿಕ ಹಾರ್ದಿಕ ಶುಭಾಶಯಗಳು 🚩🙏🚩
ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾದದ್ದು. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸನ್ಮಾರ್ಗದಲ್ಲಿ ಮುನ್ನಡೆಸುವ ಗುರುವನ್ನು ನೆನೆದು ಕೃತಜ್ಞತಾಪೂರ್ವಕವಾಗಿ ನಮಿಸುವ ದಿನವಿಂದು. ನನ್ನೆಲ್ಲಾ ಗುರುಗಳಿಗೆ ನಮಿಸುತ್ತಾ, ನಾಡಿನ ಸಮಸ್ತ ಜನರಿಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಸರ್ವರಿಗೂ ಗುರುಪೂರ್ಣಿಮೆಯ ಹಾರ್ದಿಕ ಶುಭಾಷಯ.ಅರಿವೇ ಗುರು!ನನಗೆ ಜ್ಞಾನೋದಯ ಮಾಡಿ, ಜೀವನದಲ್ಲಿ ತಲೆಎತ್ತಿ ಬದುಕೋ ಚೈತನ್ಯ ನೀಡಿ,ಮಾರ್ಗದರ್ಶನ ಮಾಡಿದ ಎಲ್ಲಾಗುರುಗಳ ಪಾದಕ್ಕೂ ಶರಣು🙏
ಸರಿಯಾದ ಮಾರ್ಗದರ್ಶನವಿಲ್ಲದೆ ಜೀವನ ಪಯಣ ಅಪೂರ್ಣ. ನಾನು ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ತೋರಿ ಆಶಿರ್ವಾದಿಸಿದ ಎಲ್ಲಾ ಗುರುಗಳಿಗೂ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಸುಜ್ಞಾನವೆಂಬ ಬೆಳಕಿನೆಡೆಗೆ ನಡೆಸಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಗುರುವೆಂಬ ಮಹಾಶಕ್ತಿಗೆ ‘ಗುರುಪೂರ್ಣಿಮೆ’ ದಿನದಂದು ಅನಂತ ಪ್ರಣಾಮಗಳು. ಗುರು ಕೃಪೆಯಿಂದ ಸರ್ವರ ಬಾಳು ಬೆಳಗಲಿ.
ಗುರು ಎಂದರೆ ವ್ಯಕ್ತಿಯಲ್ಲ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆಯುವ ಶಕ್ತಿ ಗುರು ಎಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದ ದಾರಿ ತೋರಿಸುವ ಪ್ರತಿಯೊಬ್ಬರು ಗುರುಗಳೇ ಇಂತಹ ಎಲ್ಲ ಗುರುವೃಂದಕ್ಕೆ ಗುರುಪೂರ್ಣಿಮೆಯ ಶುಭಾಶಯಗಳು.
ಮಾತು ಕಲಿಸಿದ ಮೊದಲ ಗುರು ಅಮ್ಮನಿಗೆ, ಜೀವನ ಪಾಠ ಕಲಿಸಿದ ಮೊದಲ ಗುರು ಅಪ್ಪನಿಗೆ, ವಿದ್ಯಾಬುದ್ಧಿ ಕಲಿಸಿದ ಗುರುಗಳಿಗೆ ವಂದಿಸುತ್ತಾ, ಸಮಸ್ತ ಗುರುವರೇಣ್ಯರಿಗೆ ಗುರುಪೂರ್ಣಿಮೆಯ ಶುಭಾಶಯಗಳನ್ನು ತಿಳಿಸುತ್ತೇನೆ.💐🙏🏼 ನಮ್ಮ ಹಿಂದೆ ಗುರು, ಮುಂದೆ ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.
ಜೀವನದಲ್ಲಿ ಪ್ರೇರಣೆಯಾಗಿ, ಮಾರ್ಗದರ್ಶಕರಾಗಿ, ಶಿಕ್ಷಕರಾಗಿ ಪಾಠ ಮಾಡಿದ ಪ್ರತಿಯೊಬ್ಬರು ಗುರು ಸಮಾನರು. ಅವರೆಲ್ಲರಿಗೂ ನನ್ನ ನಮನ ಮತ್ತು ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”, ನಾನು ಈ ಸ್ಥಾನಕ್ಕೇರಲು ಕಾರಣಕರ್ತರಾದ ನನ್ನಲ್ಲಾ ಗುರುಗಳಿಗಳೂ ಅನಂತ ಅನಂತ ಧನ್ಯವಾದಗಳು. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
‘ಗುರುಭಕ್ತಿ ಮುಕ್ತಿ ಮೋಕ್ಷ ಕಾರಣ ಇಹಪರಂ, ಗುರು ಘನತರದ ಮಹಿಮೆಯನು ಗುರುಬಸವನೆ ಬಲ್ಲ.’ ನಮಗೆ ವಿದ್ಯೆಯನ್ನು, ಅರಿವನ್ನು ನೀಡುವ, ಒಳಿತು, ಕೆಡಕುಗಳನ್ನು ತಿಳಿಹೇಳುವ ಗುರುಗಳಿಂದಲೇ ಬದುಕಿಗೆ ಸಾರ್ಥಕತೆ. ಅಂತಹ ಗುರುಗಳ ಆಶೀರ್ವಾದ, ಮಾರ್ಗದರ್ಶನಗಳು ಸದಾ ನಮ್ಮೆಲ್ಲರ ಮೇಲಿರಲಿ. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
Guru Purnima Wishes in Kannada Images
ಈ ಗುರು ಪೂರ್ಣಿಮೆಯ ಶುಭದಿನದಂದು, ನಮ್ಮ ಗುರುಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಮತ್ತು ಜ್ಞಾನದ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುವ ಅಮೂಲ್ಯವಾದ ಪಾತ್ರವನ್ನು ವಹಿಸಿದ ಗುರುಗಳ, ಮಾರ್ಗದರ್ಶಕರ ಶ್ರಮವನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ. ಈ ಸಂಗ್ರಹಣೆಯಲ್ಲಿ ಹಂಚಿಕೊಂಡಿರುವ ಹೃತ್ಪೂರ್ವಕ ಶುಭಾಶಯಗಳು, ಸಂದೇಶಗಳು ಮತ್ತು ಉಲ್ಲೇಖಗಳು (guru purnima quotes in kannada) ಗುರುಗಳು ತಮ್ಮ ಶಿಷ್ಯರ ಮೇಲೆ ಬೀರುವ ಆಳವಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಈ ಮಂಗಳಕರ ದಿನದಂದು ನಿಮ್ಮ ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ನಿಮ್ಮ ಕೃತಜ್ಞತೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಲು ಈ ಪದಗಳು ನಿಮ್ಮನ್ನು ಪ್ರೇರೇಪಿಸಲಿ.
ಗುರು ಪೂರ್ಣಿಮೆ ಕೇವಲ ಒಂದು ದಿನದ ಹಬ್ಬವಲ್ಲ. ಆದರೆ ನಮ್ಮ ಜೀವನದುದ್ದಕ್ಕೂ ಗುರು-ಶಿಷ್ಯ ಸಂಬಂಧವನ್ನು ಗೌರವಿಸಲು ನೆನಪಿಸುವ ದಿನ. ನಮ್ಮ ಗುರುಗಳು ನೀಡಿದ ಬೋಧನೆಗಳು ಮತ್ತು ಮೌಲ್ಯಗಳನ್ನು ಸಾಕಾರಗೊಳಿಸಲು ಮತ್ತು ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕವಾಗಿ ಬೆಳೆಯಲು ಪ್ರಯತ್ನಿಸೋಣ. ಗುರು ಪೂರ್ಣಿಮಾ ಶುಭಾಶಯಗಳ (guru purnima wishes in kannada) ಈ ನಮ್ಮ ಸಂಗ್ರಹವು ಅರ್ಥಪೂರ್ಣ ಮತ್ತು ಸ್ಪೂರ್ತಿದಾಯಕವೆಂದು ನೀವು ಕಂಡುಕೊಂಡರೆ, ಅದನ್ನು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಹ ಅನ್ವೇಷಕರೊಂದಿಗೆ ಹಂಚಿಕೊಳ್ಳಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಇದನ್ನೂ ಓದಿ: –
- ಗುರು ಪೂರ್ಣಿಮೆ ಸಂಪೂರ್ಣ ಮಾಹಿತಿ: Guru Purnima in Kannada
- 100+ Teachers Day Quotes in Kannada (ಶಿಕ್ಷಕರ ದಿನಾಚರಣೆ Wishes)
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.