ಈ ಲೇಖನದಲ್ಲಿ ಉತ್ತಮ ಗೆಳೆತನ ಕವನಗಳನ್ನು (new kannada friendship kavanagalu) ಸಂಗ್ರಹಿಸಿ ನಿಮಗಾಗಿ ನೀಡಿದ್ದೇವೆ. ನಿಮ್ಮ ದೋಸ್ತಿಯ ಮಹತ್ವವನ್ನು ಹಂಚಿಕೊಳ್ಳಲು ನೀವು ಬಯಸಿದ್ದರೆ ಈ ಲೇಖನ ಖಂಡಿತ ನಿಮಗೆ ಸಹಾಯ ಮಾಡುತ್ತದೆ.
ಸ್ನೇಹವು ಜೀವನದಲ್ಲಿ ಅತ್ಯಂತ ಪಾಲಿಸಬೇಕಾದ ಸಂಬಂಧಗಳಲ್ಲಿ ಒಂದಾಗಿದೆ. ಅನುಭವಗಳನ್ನು ಹಂಚಿಕೊಳ್ಳಲು ಮತ್ತು ವಿಶ್ವಾಸವಿಡಲು ನಿಕಟ ಸ್ನೇಹಿತರನ್ನು ಹೊಂದಿರುವುದು ಅಪಾರ ಸಂತೋಷ ಒದಗಿಸುತ್ತದೆ. ಸ್ನೇಹಿತರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ, ನಮ್ಮನ್ನು ನಾವು ಹಾಗೆಯೇ ಸ್ವೀಕರಿಸುತ್ತಾರೆ ಮತ್ತು ನಮ್ಮಲ್ಲಿರುವ ಉತ್ತಮವಾದದ್ದನ್ನು ಹೊರತರುತ್ತಾರೆ.
ನಿಜವಾದ ಸ್ನೇಹದ ಬಂಧವು ನಮಗೆ ಕಷ್ಟದ ಸಮಯಗಳನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಒಳ್ಳೆಯ ಸಮಯವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.
ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯಲ್ಲಿ ಸ್ನೇಹದ ಮೌಲ್ಯವನ್ನು ಇತಿಹಾಸದುದ್ದಕ್ಕೂ ಶ್ಲಾಘಿಸಲಾಗಿದೆ. ಕವಿಗಳು, ಬರಹಗಾರರು ಮತ್ತು ಚಿಂತಕರು ಸ್ನೇಹದ ಬಗ್ಗೆ ತಮ್ಮ ಒಳನೋಟಗಳನ್ನು ಗೆಳೆತನ ಕವನಗಳ (friendship kavanagalu kannada) ಮೂಲಕ ಹಂಚಿಕೊಂಡಿದ್ದಾರೆ ಅದು ಅದರ ಸಾರ ಮತ್ತು ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಸೆರೆಹಿಡಿಯುತ್ತದೆ.
ಈ ಸ್ಪೂರ್ತಿದಾಯಕ ಸ್ನೇಹದ ಕವನಗಳ ಸಂಗ್ರಹದಲ್ಲಿ (friendship kannada kavanagalu) ನಮ್ಮ ಜೀವನದಲ್ಲಿ ಈ ವಿಶೇಷ ಬಂಧಗಳ ಭಾವನೆ, ಮತ್ತು ಮಹತ್ವವನ್ನು ಸುಂದರವಾಗಿ ಸಂಯೋಜಿಸುತ್ತವೆ. ನಮ್ಮ ಸ್ನೇಹವನ್ನು ಪೋಷಿಸಲು ಮತ್ತು ನಮ್ಮ ಪಕ್ಕದಲ್ಲಿ ನಡೆಯುವ ಅಮೂಲ್ಯ ಜನರನ್ನು ಪ್ರಶಂಸಿಸಲು ಇವುಗಳು ನಮ್ಮನ್ನು ಪ್ರೇರೇಪಿಸುತ್ತದೆ.
Table of Contents
New Kannada Friendship Kavanagalu | ಗೆಳೆತನ ಕವನಗಳು
ಕತ್ತಲೆಯಲ್ಲಿ ಕರಗುವ ಕನಸಿಗೆ ಬೆಳುಕು ತರುವುದು ಗೆಳೆತನ
ನೋಯುವ ನೋವಿನ ಮನಸ್ಸಿಗೆ ಓಲುವ ತುಂಬುವುದು ಗೆಳೆತನ
ಬೆಂಕಿಯಂತೆ ಬೇಯುವ ಭಾವನೆಗೆ ಜೀವ ತುಂಬುವುದು ಗೆಳೆತನ
ಏಕಾಂತದಲ್ಲಿರುವ ಒಂಟಿತನಕ್ಕೆ ಹೊಸತನವೇ ಗೆಳೆತನ
ಒಲವಿನ ಗೆಳೆಯಾ ,
ನನ್ನ ಬದುಕಿಗೆ ಗ್ರಹಣ ಮುಸುಕಿದಾಗ
ಜೊತೆಗೆ ನಿಂತವನು ನೀನು ಮಾತ್ರ
ನಾನು ಬಿದ್ದಾಗ ಮುಗ್ಗರಿಸಿದಾಗ
ಕೈಪಿಡಿದೆತ್ತಿದವನು ನೀನೊಬ್ಬನೇ !
ನಮ್ಮ ಸ್ನೇಹ ಕೃಷ್ಣಕುಚೇಲರಂತಲ್ಲ
ಕಾರಣ ಇಬ್ಬರೂ ಬಡವರೇ
ದುರ್ಯೋಧನ ಕರ್ಣರಂತೆಯೂ ಅಲ್ಲ
ಅವರೆಂದೂ ನಮ್ಮಹಾಗೆ ಬೈಟು
ಚಹಾ ಕುಡಿದು ಸುತ್ತಲಿಲ್ಲ ಬೈಕಿನಲ್ಲಿ
ನನ್ನ ದೋಷವನ್ನೆಲ್ಲ ತಿಳಿದೂ
ಆತ್ಮಸಖನಾಗಿಯೇ ಉಳಿದಿರುವೆ
ನನಗಿರುವ ಗೆಳೆಯರ ಪಟ್ಟಿಯಲ್ಲಿ
ನೀನೇ ಮೊದಲನೆಯವನು ‘ಸಂತೋಷ’
ದ ಕಡಲಾಗಿ ಎದೆದಡವ ತಾಕಿದವನು
ಮತ್ತೊಂದು ಜನುಮವೊಂದಿದ್ದರೆ
ಗೆಳೆಯರಾಗಿಯೇ ಹುಟ್ಟೋಣ
ಈ ಜನುಮದಲ್ಲಿ ಬಾಕಿ ಉಳಿಸಿದ ತಾಣ
ಗಳ ಒಟ್ಟಾಗಿಯೇ ನೋಡೋಣ
ಸಾಗುತಿರಲಿ ಹೀಗೇ ಬದುಕ ಪಯಣ
ಸ್ನೇಹ ಒಂದು ಸುಂದರ ಕವನ
ಬರೆದರು ಮುಗಿಯದ ಕಥನ
ಮರೆತರು ಮರೆಯಲಾಗದ ಸ್ಪಂದನ
ಬಿಟ್ಟರು ಬಿಡಲಾಗದ ಬಂಧನ
ಅದುವೇ ಗೆಳೆತನ
ಬದುಕು ಒಂದು ಸುಂದರ ಕವನ…..!!
ಎಷ್ಟೇ ಗೀಚಿದರು ಮುಗಿಯದ ಕಥನ….!!
ಬದುಕಿನಲ್ಲಿ ಇರಲೇಬೇಕು ಗೆಳೆತನ..!!
ಇಲ್ಲವಾದರೆ ಇಡೀ ಜೀವನ ವ್ಯಥನ…!
ನಿಮ್ಮೊಡನಿರೆ ಅರಳಿದೆ ಅನು ಕ್ಷಣ…
ನನ್ನೆದೆಯಲಿ ಮುಗಿಯದ ಮಗುತನ…..
ಇದ್ದಂತೆಯೆ ಉಳಿಯಲಿ ಕೊನೆತನ ನಮ್ಮ ಈ ಗೆಳೆತನ
ಆರಕ್ಕೇರದಿದ್ದರೂ…
ಮೂರಕ್ಕಿಳಿಯಲು
ಬಿಡದವರಿಗೆ||
ಕುಂಟುತ್ತಾ
ನಡೆಯಬೇಕಾದಾಗಲೂ..
ನಂಟು ಉಳಿಸಿಕೊಂಡವರಿಗೆ||
ಸಂಕಟಬಂದಾಗ
ವೆಂಕಟರಮಣನಂತೆ
ಕಾದವರಿಗೆ||
ಗಳಿಸಿದ್ದೇನಿಲ್ಲವೆಂದಾಗ…
ಉಳಿವುದು ಗೆಳೆತನ,
ವಿಶ್ವಾಸಗಳಷ್ಟೇ..
ಎಂಬರಿವು ಮೂಡಿಸಿದವರಿಗೆ||
ಪ್ರತಿದಿನವೂ ಅಂದಿನ ಹೊಸತನದೊಂದಿಗೆ
ಮುಂಚೂಣಿಯಲಿರುವ
ಹುಚ್ಚಿಗೆ ಕೆಚ್ಚುತುಂಬಿ
ಮುನ್ನಡೆಸಿದವರಿಗೆ,||
ಹರಸಿದ ಹಿರಿಕರಿಗೆ
ಹಾರೈಸಿದ ಹಿತೈಷಿಗಳಿಗೆ..
ಗಳಿಸಿದವಿಶ್ವಾಸ
ಕಳೆಯದಂತೆ
ಎಳೆದು ಹಿಡಿದವರಿಗೆ..||
ಸ್ವತಂತ್ರತೆಯ ಮೀರಿದ
ತಾಂತ್ರಿಕ ದಾರಿಯಲ್ಲಿ…
ಮತ್ತೆ…ಮತ್ತೆ…
ಎಡವಿದಾಗೆಲ್ಲಾ ಹಿಡಿದೆತ್ತಿ
ಭರವಸೆಯಿಟ್ಟು
ಭರವಸೆತುಂಬಿದ
ಸಕಲರಿಗೆ…||
ತಲೆಬಾಗಿ
ಮತ್ತೆ ಮೈಕೊಡವಿ
ತಲೆಯೆತ್ತಿ ಸಾಗುವಾಗ…
ಸಹಕಾರ ಸ್ಮರಿಸಿ
ಸಹಕಾರ ಬೇಡಿ
ಮುನ್ನಡೆವ …ಸಮಯವಿಂದು.||
ಮನಸೆಂಬ ಮಂದಿರದಲ್ಲಿ
ಕನಸೆಂಬ ಸಾಗರದ
ನೆನಪೆಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಅಮರ ಸ್ನೇಹ.
ಕಲೆಗಾರ ನಾನಲ್ಲ
ಕವಿಗಾರ ನಾನಲ್ಲ
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು ಗೊತ್ತಿಲ್ಲ
ಆಸ್ತಿಯೂ ನನಗಿಲ್ಲ
ಆಸೆಯೂ ನನಗಿಲ್ಲ
ನಿಮ್ಮ”ಸ್ನೇಹ-ಪ್ರೀತಿ” ಬಿಟ್ಟು,
ಬೇರೇನು ಬೇಕಿಲ್ಲ.
Friendship is Greater than Everything.
ಇರಬೇಕು ಪ್ರೀತಿ ಪ್ರೇಮದ
ಜೊತೆ ನಿಷ್ಕಳಂಕ ಸ್ನೇಹ
ಬೇಡ ಸ್ನೇಹದ ಜೊತೆ
ಆಡಂಬರದ ಮೋಹ
ನೀನು ನನಗಿದ್ದರೆ ನಾನು
ನಿನಗೆ ಎಂಬ ಮಂತ್ರವು
ಇರಲಿ ಜೊತೆಯಲ್ಲಿ
ಅನುಗಾಲವು
ಆಗಲೇ ನಮ್ಮ ಇಹದ
ಬದುಕು ಸುಂದರವು
ಅವನು ಜೀವಕ್ಕೆ ಜೀವ ಕೊಡುವ ಗೆಳೆಯ
ಅಧಿಕಾರದ ದಾಹವಿಲ್ಲ, ಸಿರಿ ಸಂಪತ್ತಿನ ಚಿಂತೆ ಇಲ್ಲ.
ಇವೆಲ್ಲವನ್ನು ಮೀರಿದ್ದು, ನಮ್ಮ ಸ್ನೇಹ.
ಹೇಗೆ ವರ್ಣಿಸಲಿ ಈ ನನ್ನ ಸ್ನೇಹಿತನ ಸ್ನೇಹವನ್ನು
ಅಕ್ಷರಗಳಲ್ಲಿ ಹೇಗೆ ಕಟ್ಟಿಹಾಕಲಿ ಈ ನನ್ನ ಗೆಳೆಯನ ಗೆಳೆತನವನ್ನು.
ನನ್ನ ಕಷ್ಟ ಕಾಲದಲ್ಲಿ ಸ್ನೇಹವೆಂಬ ವಜ್ರದ ರಕ್ಷಾ ಕವಚ ನೀಡಿದವನು ನನ್ನ ಗೆಳೆಯ.
ಗೆಳೆತನದಲ್ಲಿ ಸ್ವಾರ್ಥ ಬಯಸದೆ ಸದಾ ನನ್ನ ಬೆನ್ನ ಹಿಂದೆ ನೆರಳಾಗಿ ನಿಂತವನು ನನ್ನ ಗೆಳೆಯ.
ನಮ್ಮ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಸ್ನೇಹಕ್ಕೆ ಸಾಕ್ಷಿಯಾದವನು ನನ್ನ ಗೆಳೆಯ.
ಇದನ್ನೂ ಓದಿ: –
- 100+ Friendship Quotes in Kannada with Images
- 100+ Happy Friendship Day Quotes in Kannada (ಸ್ನೇಹಿತರ ದಿನದ ಶುಭಾಶಯಗಳು)
Best Friendship Kannada Kavanagalu | ದೋಸ್ತಿ ಕವನಗಳು
ಚುಚ್ಚುವುದು ಸೂಜಿಯ ಗುಣ. ಆದರೆ ದಾರದ ಜೊತೆ ಗೆಳೆತನ ಮಾಡಿದಮೇಲೆ ಸೂಜಿಯು ಬದಲಾಗಿ ಎಲ್ಲವನ್ನೂ ಜೋಡಿಸಲು ಮುಂದಾಗುತ್ತದೆ.
ಅದಿಕ್ಕೆ ಹೇಳಿರುವುದು ನಮ್ಮ ಹಿರಿಯರು ನೀವು ಒಳ್ಳೆಯವರ ಜೊತೆ ಸ್ನೇಹ ಬೆಳೆಸಿದರೆ ನಿಮಗೆ ಒಳ್ಳೆಯದೇ ಆಗುತ್ತೆ ಅಂತ.
ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ,
ಆ ಕಣ್ಣೀರನ್ನು ಒರೆಸುವ ಜೀವವೊಂದು ಜೊತೆಗಿದ್ದರೆ,
ಆ ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತೆ,
ಅದೇ ಕಂಡ್ರಿ ನಿಜವಾದ ಗೆಳೆತನ….
ಗೆಳೆತನ ಅಂದರೆ ಬರೀ ದುಡ್ಡಿಗೆ ದೌಲತಗೆ ಇರಲ್ಲ,
ಎಲ್ಲಾ ಸಮಯದಲ್ಲಿ ಒಂದೇ ರೀತಿಯಾಗಿ ಇರ್ತೀವಿ ಅಲ್ಲಾ ಅದು ದೊಡ್ಡದು.
ಈ ಪ್ರೀತಿ, ವಿಶ್ವಾಸಕ್ಕೆ ನಾವು ಸದಾ ಜೊತೆ ಜೊತೆಯಾಗಿ ಓಡಾಡುತ್ತೇವೆ
ಇದೆ ನಮ್ಮ ಗೆಳೆತನ.
ಗೆಳೆತನ ಅನ್ನೋದು ಕೈಗೂ ಕಣ್ಣಿಗೂ ಇರೋ ಸಂಬಂಧದ ತರ ಇರಬೇಕು
ಕೈಗೆ ಪೆಟ್ಟಾದರೆ ಕಣ್ಣು ಅಳುತ್ತೆ ಕಣ್ಣು ಅಳ್ತಾ ಇದ್ರೆ ಕೈ ಕಣ್ಣೀರನ್ನು ಒರೆಸುತ್ತೆ ಇದು ನಿಜವಾದ ಸ್ನೇಹ. ಜೀವನ ಸಾಕೆಂದು ಎದ್ದು ಹೋಗೋಕೆ ಇದು ಶಾಲೆಯಲ್ಲಿ ಕೇಳುವ ಪಾಠವಲ್ಲ
ಜೀವನವಿದು ಅರ್ಥವಾಗದಿದ್ದರೂ ಕೂತು ಕೇಳಬೇಕು.
ಒತ್ತಡದ ಬದುಕು ಸ್ವಾರ್ಥಕ್ಕೆ ಬಲಿಯಾಗಿದೆ ಮರೆಯಲಾರದ ಗೆಳೆತನ ಅಂದ್ರೆ ಬಾಲ್ಯದ್ದು ಗಂಡು, ಹೆಣ್ಣುಗಳ ಭೇಧ ವಿಲ್ಲದ ಕಲ್ಮಶವಿಲ್ಲದ ಮನಸ್ಸು ಹಂಚಿ ತಿಂದರೆ ಸಿಹಿ. ಸೇರಿ ಆಡಿದರೆ ಖುಷಿ ಜಗಳ ಆಡಿದರೆ ಕ್ಷಣಿಕ ಸಂಧಾನಕ್ಕೆ ಗೆಳೆಯರ ಗುಂಪು ಒಂದಾದ ಮೇಲೆ ದಿಗ್ವಿಜಯ ಸಾಧನೆ ಬೆಳಗಾಗುವುದೆ ತಡ ಒಬ್ಬರ ಮನೆ ಮುಂದೆ ಮತ್ತೊಬ್ಬರು ಆಟ, ಪಾಠ, ಜಗಳ, ಸುತ್ತಾಟ ಇಲ್ಲಿ ಯಾವುದು ಬೇಧವಿಲ್ಲದದಿನಚರಿ ಇದುವೇ ಮರೆಯಲಾಗದ ಗೆಳೆತನ.
ನಮ್ಮ ಸ್ನೇಹವು ಸದಾ ಕಾಲ ಹೀಗೆ ಯಾರೆಷ್ಟೇ ತುಳಿದರು ಮತ್ತೆ ಚಿಗುರಬೇಕೆಂಬ ಧೈರ್ಯ ಜೊತೆಯಲ್ಲಿ ಇರಲಿ.
ಗೆಳೆತನದ ಜೊತೆ ಮಂದಸ್ಮಿತ ಪ್ರೀತಿಯ ಜೊತೆ ಗೌರವ ಭಾವನೆಗಳ ಜೊತೆ ಸ್ಪಂದನೆ ನಂಬಿಕೆಯ ಜೊತೆ ಆತ್ಮವಿಶ್ವಾಸ ನಿನ್ನ ಮುಗ್ಧ ಮನಸಿನ ಜೊತೆ ನಾನು ನನ್ನ ಸ್ನೇಹಕ್ಕಿಂತ ಮಿಗಿಲಾದ ಉಡುಗೊರೆ ಬೇಕೇನು?
ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ. ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ
ನಮ್ಮನ್ನು ಹೊಗಳುತ್ತಿರುವ ಸಾವಿರಾರು ಜನರಿಗಿಂತ, ತಪ್ಪು ಮಾಡಿದಾಗ ತಿದ್ದುವ ಒಬ್ಬ ಒಳ್ಳೆಯ ಮಿತ್ರನಿದ್ದರೆ ಸಾಕು. ಹೊಗಳುವ ಜನ ಸಿಕ್ತಾರೆ, ಆದರೆ ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ.
ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದುಕೊಂಡು ಹೋಗುತ್ತಾರೆ. ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ. ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ಹೊಂದಿಕೊಂಡು ಹೋಗುವವನೇ ನಿಜವಾದ ಸ್ನೇಹಿತ.
ಅಪರಿಚಿತರ ಗೆಳತನ ದೊಡ್ಡದಲ್ಲ. ಆದರೆ ಇರುವ ಗೆಳಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು.
ಗೆಳೆತನದ ನಡುವೆ ಅಪೇಕ್ಷೆ ಇಣುಕಿದೆ ಅಂದರೆ ಗೆಳೆತನ ಮುರಿದುಬಿತ್ತು ಎಂದೇ ಅರ್ಥ!
ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, ಬೇರೆಯವರನ್ನು ಸಾಯಿಸುವುದು ಪ್ರೀತಿ, ಆದರೆ ಸಾಯೋರನ್ನು ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ.
ಡೈಲಿ ಮೆಸೇಜ್ ? ನೋ
ಡೈಲಿ ಕಾಲ್ ? ನೋ ನೋ
ಆಗಾಗ ಭೇಟಿ ? ನೋ ನೋ ನೋ
ಸಿಕ್ಕಾಗ ಮಾತ್ರ ನಾನ್ ಸ್ಟಾಪ್ ಮಾತು. ಅದೇ ಆತ್ಮೀಯತೆ.. ಅದೇ ಸ್ನೇಹ
ಪುಟ್ಟ ಪುಟ್ಟ ಕೈಗಳನ್ನು ಹಿಡಿದು ಬೆಳೆದು ನಿಂತು ಸದಾ ಜೊತೆಯಲ್ಲಿ ಹರೆಯಕ್ಕೆ ಬಂದಾಗ ನಮ್ಮ ಸುಖ ದುಃಖ ಹಂಚಿಕೊಳ್ಳುತ್ತಾ ನಗುವಿನೊಡನೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಕಳೆಯುವ ಕ್ಷಣಗಳು ಮರೆಯಲಾಗದು ಸುಮಧುರ ನೆನಪುಗಳು. ಈ ಓಡನಾಟಕ್ಕಿರುವ ಸುಂದರ ಹೆಸರೇ ಸ್ನೇಹ.
ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, ಬೇರೆಯವರನ್ನು ಸಾಯಿಸುವುದು ಪ್ರೀತಿ, ಆದರೆ ಸಾಯೋರನ್ನು ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ.
ಅಣ್ತಮ್ಮ,
ಈ ಗೆಳೆತನ ಅನ್ನೋದು
Ginger-Garlic ಪೇಸ್ಟ್ ತರ ಇರ್ಬೇಕು
ಜಜ್ಜಿಹೋದರು ಸಹ ಜೊತೆಯಲ್ಲೇ ಜಜ್ಜಿಹೋಗ್ಬೇಕು..,!
ಹೇಳಿ ಕೇಳಿ ಸ್ನೇಹ ಹುಟ್ಟಲ್ಲ
ಹುಟ್ಟಿದ ಮೇಲೆ ಕೈ ಬಿಡೋಕಾಗಲ್ಲ
ಬೇರೆಯವರ ಸ್ನೇಹ ಹೆಂಗೋ ಗೊತ್ತಿಲ್ಲ
ನಮ್ಮ ಸ್ನೇಹಕ್ಕೆ ಮಾತ್ರ ಅಂತ್ಯವೇ ಇಲ್ಲಾ.
ಅರಮನೆ ಕಟ್ಟುವಂತ ಸಿರಿತನ ಇಲ್ಲದಿದ್ದರೇನಂತೆ, ಕಣ್ಣೀರು ಒರೆಸುವಂತ ಗೆಳೆತನ ಇದ್ದರೆ ಸಾಕು.
ಜೀವನದಲ್ಲಿ ಕಟ್ಟುವ ಅರಮನೆಗೆ ಹೋಗಲು ದೃಢ ನಿರ್ಧಾರವೇ ಸರಿತನ. ಆದರೆ ಸ್ನೇಹ ಮತ್ತು ಸಹಾನುಭೂತಿಯ ಕೊಡುಗೆಯನ್ನು ಕೈಗೊಳ್ಳದಿದ್ದರೆ ಆ ಅರಮನೆ ನಗುತ್ತದೆ. ಗೆಳೆತನವೇ ನಮ್ಮ ಆತ್ಮಕ್ಕೆ ಒರೆಸಿಕೊಳ್ಳುವ ಕಣ್ಣೀರು. ಗೆಳೆತರ ಸಾನ್ನಿಧ್ಯದಲ್ಲಿ ಅನುಭವಿಸುವ ಆನಂದ ಅನಮ್ನಿತ ಕಣ್ಣೀರನ್ನು ಬರೆಯುತ್ತದೆ.
ಪ್ರೀತಿ ಅನ್ನೋದು ಹ್ರದಯದಲ್ಲೀ ಇರಬೇಕು .. ಸಂಬಂದ ಅನ್ನೋದು ರಕ್ತದಲ್ಲೀ ಇರಬೇಕು. ಸ್ನೇಹ ಅನ್ನೋದು ಮನಸಲ್ಲೀ ಇರಬೇಕು. But ಸ್ನೇಹಿತರು ಮಾತ್ರ ಯಾವಾಗಲೂ ಜೋತೇಯಲ್ಲೀ ಇರಬೇಕು.
ಈ ಜಗತ್ತಿನಲ್ಲಿ ಸಾವಿರಾರು ಬೆಲೆಬಾಳುವ ವಸ್ತುಗಳಿವೆ,
ಎಲ್ಲದಕ್ಕು ಒಂದು ಬೆಲೆಯೂ ಇದೆ,
ಆದರೆ ನಮ್ಮ ಈ ಸ್ನೇಹ ಮಾತ್ರ ಅದೆಲ್ಲಕ್ಕಿಂತ ಅತ್ಯಮೂಲ್ಯವಾದದ್ದು.
ಹಾರುವ ಹಕ್ಕಿ ನೀರಲ್ಲಿ ಈಜಬಹುದು
ಆದರೆ ಈಜುವ ಮೀನು ಯಾವತ್ತೂ ಹಾರುವುದಿಲ್ಲ
ಅದೇ ರೀತಿ ಮಾಡಿದ ಸ್ನೇಹ ದೂರ ಆಗಬಹುದು
ಆದರೆ ಸ್ನೇಹದ ನೆನಪು ಮಾತ್ರ ದೂರ ಆಗುವುದಿಲ್ಲ.
ಹವಾ ಇಟ್ಟಿರುವವರಿಗೆ ಮಾತ್ರ ಇರುತ್ತೆ
ಉಸಿರು ನಿಂತ್ ಮೇಲು ಹೆಸರು ಭೇಕು
ಅಂಧ್ರೆ ಧಮ್ ಭೇಕಲೆ…
ಮನಸ್ಸಿದ್ರೆ ಬರುತ್ತೆನೆ ಅನ್ನೂದು ಪ್ರೀತಿ
ದುಡ್ಡಿದ್ರೆ ಬರುತ್ತೆನೆ ಅನ್ನೂದು ಸಂಬಧ
ಏನೂ ಭೇಡ ನಾನಿದ್ದೇನೆ ಬಾ ಅನ್ನೂದೇ
ನಮ್ ಸ್ನೇಹ.
ನಮ್ಮನ್ನು ನೋಡಿ ಯಾರಾದರೂ ಕುದಿಯಲಿ
ಕೊನೆವರಿಗೂ ನಮ್ಮ ಸ್ನೇಹ ಬಿಡುವ ಮಾತೆ ಇಲ್ಲ.
ಬಾರದಿರಲಿ ನಮ್ಮ ನಡುವೆ ಅಂತರ
ಇರಲಿ ನಮ್ಮ ಸ್ನೇಹ ನಿರಂತರ, ಅಜರಾಮರ.
ಸ್ನೇಹ ಅತಿಯಾಗಿ ಮಾತನಾಡುವುದಿಲ್ಲ,
ಸ್ನೇಹ ಎಂದೂ ಪುರಾವೆ ಕೇಳುವುದಿಲ್ಲ,
ಸ್ನೇಹಕ್ಕೆ ಸುಖಾಂತ್ಯವೂ ಇರುವುದಿಲ್ಲ,
ಏಕೆಂದರೆ ಸ್ನೇಹ ಎಂದೂ ಅಂತ್ಯ ಕಾಣುವುದೇ ಇಲ್ಲ,
ನಿರ್ಮಲ, ನಿಸ್ವಾರ್ಥ ಮತ್ತು ನಿಜ ಸ್ನೇಹಿತ ಇರುವತನಕ.
ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ
ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ನಮ್ಮ ಈ ಸಂಗ್ರಹ (new kannada friendship kavanagalu) ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇನ್ನೂ ಯಾವುದಾದರೂ ಉತ್ತಮ ದೋಸ್ತಿ ಕವನಗಳು (friendship kavanagalu kannada) ನಿಮ್ಮ ಬಳಿ ಇದ್ದರೆ ಅವುಗಳನ್ನು ಕಾಮೆಂಟ್ ಮಾಡಿ.