100+ Kannada Quotes About Trust (ನಂಬಿಕೆ Quotes ಕನ್ನಡದಲ್ಲಿ)

If you are looking for Kannada quotes about trust then you landed on the right page. In this article, we will give you more than 100 nambike quotes in Kannada with images. 

ಹೆಚ್ಚು ಸುಲಭವಾಗಿ ನಂಬಲು ನಿಮಗೆ ಸಹಾಯ ಮಾಡುವ ಅತ್ಯುತ್ತಮ trust quotes in Kannada ಇಲ್ಲಿವೆ. ಆದ್ದರಿಂದ ನೀವು ಹೊಸ ಸಂಬಂಧವನ್ನು ಪ್ರಾರಂಭಿಸುತ್ತಿದ್ದರೆ, ಇತರರನ್ನು ಹೆಚ್ಚು ನಂಬಲು ಬಯಸುತ್ತಿದ್ದರೆ ಅಥವಾ ನೀವೇ ನಂಬಲರ್ಹರಾಗಿರಲು ಬಯಸುತ್ತಿದ್ದರೆ, ನೀವು ಇಲ್ಲಿ ನಂಬಿಕೆಯ quotes ಗಳನ್ನು ಕನ್ನಡದಲ್ಲಿಕಾಣಬಹುದು.

ನಂಬಿಕೆಯು ಸಂಬಂಧಗಳನ್ನು ಬಂಧಿಸುವ ಅಂಟು. ನಂಬಿಕೆಯಿಲ್ಲದೆ, ಯಾವುದೇ ಸಂಬಂಧವು ಉಳಿಯುವುದು ಅಸಾಧ್ಯ.

ಒಂದು ವೇಳೆ, ನೀವು ಯಾರೊಬ್ಬರಿಂದ ಮೋಸಗೊಂಡಿದ್ದರೆ, ಯಾರೊಂದಿಗಾದರೂ Kannada quotes about trustಗಳನ್ನು ಹಂಚಿಕೊಳ್ಳಲು ಬಯಸಿದರೆ ಅಥವಾ ನಿಮ್ಮ ಸಂಗ್ರಹಕ್ಕಾಗಿ ಕೆಲವು trust quotes in kannadaಗಳನ್ನು ಹುಡುಕುತ್ತಿದ್ದರೆ; ನೀವು ಸರಿಯಾದ ಪುಟದಲ್ಲಿದ್ದೀರಿ.

ನೂರಾರು ಗಂಟೆಗಳ ಕಾಲ ಹುಡುಕಿದ ನಂತರ ನಮ್ಮ ಸಂಪಾದಕರು ಸಂಗ್ರಹಿಸಿದ ಕೆಲವು ಉತ್ತಮ nambike quotes in Kannada ಇಲ್ಲಿವೆ.

Kannada Quotes About Trust

Relationship Kannada Quotes About Trust

ನಂಬಿಕೆ ಓದುವುದಕ್ಕೆ ಮೂರು ಅಕ್ಷರಗಳೇ ಇರಬಹುದು. ಆದರೆ ಅದನ್ನು ಸಂಪಾದಿಸುವುದು ತುಂಬಾ ಕಷ್ಟ. ಏಕೆಂದರೆ ಅದು ಹಣಕ್ಕಿಂತಲೂ ದುಬಾರಿ 

 

Nambike oduvudakke muru aksaragale irabahudu

adare adannu sampadisuvudu tumba kasta

ekendare adu hanakkintalu  dubari

 

ನಂಬಿಕೆ ಅನ್ನೋದು ಉಸಿರು ಇದ್ದ ಹಾಗೆ. ಒಮ್ಮೆ ಹೋದ್ರೆ ಮತ್ತೆ ಬರಲ್ಲ 

Nambike annodu usiru idda hage

omme hodre matte baralla

 

ಮನಸ್ಸಿನ ಜೊತೆ ಆತ ಆಡಿ ಪರವಾಗಿಲ್ಲ ಆದರೆ ನಂಬಿಕೆ ಜೊತೆ ಯಾವತ್ತೂ ಆಡಬೇಡಿ

Manassina jote ata adi paravagilla adare nambike jote yavattu adabedi

ಅತಿಯಾದ ಕಾಳಜಿ, ಅತಿಯಾದ ನಂಬಿಕೆ, ನಮ್ಮ ಮನಸ್ಸಿನ ನೋವಿಗೆ ಕಾರಣ

Atiyada kalaji, atiyada nambike, namma manassina novige karana

 

ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ

Dehada mele biluva pettiginta nambikeya mele biluva pettu hecchu novu koduttade

 

ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ ವಿಶ್ವಾಸ ಪ್ರೀತಿ ಮತ್ತೆ ಬರುವುದಿಲ್ಲ

 

Kaduva badatana nale hogabahudu, illada siritana munde barabahudu, adare omme kaledukonda nambike visvasa priti matte baruvudilla

 

ಕೆಲವರು ಸುಳ್ಳು ಹೇಳುತ್ತಿದ್ದರೂ ಅದು ನಮಗೆ ಗೊತ್ತಿರತ್ತೆ, ಆದರೂ ನಾವು ಗೊತ್ತಿಲ್ಲದವರಂತೆ ಸುಮ್ಮನೆ ಇರ್ತೇವೆ, ಯಾಕೆಂದರೆ ಇವತ್ತಲ್ಲ ನಾಳೆ ಬದಲಾಗುತ್ತಾರೆ ಅನ್ನೋ “ನಂಬಿಕೆ” ಇಂದ

 

Kelavaru sullu heluttiddaru adu namage gottiratte, adru namage gottilladavarante summane irteve, ivattalla nale badalaguttare anno “nambike” inda

 

ನಂಬಿಕೆಗೆ ಸಮಯ ಬೇಕು, ಸಮಯದ ಮೇಲು ನಂಬಿಕೆ ಇರಬೇಕು 

Nambikege samaya beku, samayada melu nambike irabeku

 

ನಂಬಿಕೆ ಅನ್ನೋದು ಒಂದು ಬಿಳಿ ಹಾಳೆ ಇದ್ದ ಹಾಗೆ, ಒಂದು ಸಲ ಮುದುರಿದರೆ ಮತ್ತೆ ಪರಿಪೂರ್ಣ ಆಗುವುದಿಲ್ಲ 

Nambike annodu ondu bili hale idda hage, ondu sala muduridare matte paripurna aguvudilla

 

ನಂಬಿಕೆ ಕಳಚಿ ಬಿದ್ದಾಗ ಕಣ್ಣಿಗೆ ಎಲ್ಲೆಲ್ಲೂ ಸ್ವಾರ್ಥವೇ ಎದ್ದು ಕಾಣುತ್ತದೆ 

Nambike kalachi biddaga kannige ellellu svarthave eddu kanuttade

 

ನಂಬಿಕೆಗಳು ಸುಳ್ಳಾದಾಗ ಮನಸ್ಸು ಕಠಿಣ ನಿರ್ಧಾರ ಮಾಡುತ್ತದೆ ಅದು ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ 

Nambikegalu sulladaga manassu katina nirdhara maduttade adu dhanatmaka athava runatmakavagiruttade

 

ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಹಚ್ಚಿಕೊಂಡು ಅಭಿನಯ ಮಾಡುವ ಕಲಾವಿದರನ್ನು ನಂಬಬಹುದು. ಆದರೆ ನಂಬಿಕೆ ಅನ್ನೋ ಬಣ್ಣ ಬಡ್ಕೊಂಡು ನಾಟಕ ಮಾಡುವವರನ್ನು ನಂಬಬಾರದು

Dinakkondu, ksanakkondu banna haccikondu abhinaya maduva kalavidarannu nambabahudu, adare nambike anno banna badkondu nataka maduvavarannu nambabaradu

 

ಯಾರಲ್ಲೂ ಅತಿಯಾದ ನಂಬಿಕೆ ಇಡಬೇಡಿ ಏಕೆಂದರೆ ಈಗಿನ ಕಾಲದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ ಅದನ್ನು ಕಳೆದುಕೊಳ್ಳುವವರೇ ಜಾಸ್ತಿ 

Yarallu atiyada nambike idabedi ekendare igina kaladalli nambikeyannu ulisikolluvavariginta adannu kaledukolluvavare jasti

ನಂಬಿಕೆ ಕಳಚಿ ಬಿದ್ದಾಗ ಅವರ ಯೋಗ್ಯತೆಯು ಸಹ ಕಳಚಿ ಬೀಳುತ್ತದೆ. ಕೆಲವರ ಯೋಗ್ಯತೆಯೇ ಇಷ್ಟು. ಇಂತವರನ್ನು ನಂಬಿ ಮೋಸ ಹೋದೆವಲ್ಲ ಎಂದು ಕೊರಗುವ ಬದಲು ಇಂತಹ ಜನರ ಮುಖವಾಡ ಈಗಲಾದರೂ ಕಳಚಿ ಬಿತ್ತಲ್ಲ ಎಂದು ಸುಮ್ಮನಿರುವುದೇ ಲೇಸು 

Nambike kalachi biddaga avara yogyateyu saha kalachi biluttade. kelavara yogyateye istu. inthavarannu nambi mosa hodevalla endu koraguva badalu intaha janara mukhavada igaladaru kalaci bittalla endu summaniruvude lesu

ನಂಬಿಕೆಯ ಗಾಜು ಒಡೆದರೆ ಮತ್ತೆ ಸರಿಪಡಿಸಲು ಬಹಳ ಕಷ್ಟ. ಸರಿಪಡಿಸಿದರೂ ಮನಸ್ಥಿತಿ ಮೊದಲ ತರಹ ಇರಲ್ಲ

Nambikeya gaju odedare matte saripadisalu bahala kasta

saripadisidaru modala taraha iralla

 

Top Kannada Quotes About Trust

ನಂಬಿಕೆ ಕಳಚಿ ಬಿದ್ದಾಗ ಮನಸ್ಸಿನ ಬೇಸರ ಹೇಳತೀರದು. ನಾವು ನಂಬಿದವರೇ ನಮಗೆ ಮುಳುವಾದಾಗ ಅದಕ್ಕಿಂತ ದೊಡ್ಡ ಆಘಾತ ಬದುಕಿನಲ್ಲಿ ಇನ್ನೇನಿದೆ

Nambike kalachi biddaga manassina besara helatiradu

navu nambidavare namage muluvadaga adakkinta dodda badukinalli innenide

ನಂಬಿಕೆ ಕಳಚಿ ಬಿದ್ದಾಗ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಮನಸ್ಸಿಗೆ ಎಲ್ಲವು ಭಾರ ಆದ ಹಾಗೆ ಯಾವುದು ಬೇಡ ಅನಿಸುತ್ತದೆ/ ಆಗ ಭರವಸೆಯ ಬೆಳಕು ಆರಿ ಹೋದ ಹಾಗೆ ಮತ್ತು ವಿಶ್ವಾಸವು ನೆಲಕ್ಕಚ್ಚಿದ ಹಾಗೆ 

Nambike kalaci biddaga akasave taleya mele bidda hage manassige ellavu bhara ada hage yavudu beda anisuttade. Aga bharavaseya belaku ari hoda hage mattu visvasavu nelakkaccida hage

ನಂಬಿಕೆ ಸಂಬಂಧಗಳ ಬುನಾದಿಯಾಗಿರಬಹುದು ಆದರೆ ಎಲ್ಲರೂ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಪ್ರೀತಿ ಭಾವನೆಯ ಅನುಬಂಧವೇ ಆಗಿರಬಹುದು. ಆದರೆ ಎಲ್ಲರಿಗು ನೈಜ ಪ್ರೀತಿ ದೊರೆಯುವುದಿಲ್ಲ 

Nambike sambandhagala bunadiyagirabahudu

adare ellaru nambikege arharagiruvudilla

priti bhavaneya anubandhave agirabahudu

adare ellarigu naija priti doreyuvudilla

ಬದುಕಿನಲ್ಲಿ ನಂಬಿಕೆ ದ್ರೋಹ ಬಗೆದು ನಿಮ್ಮನ್ನು ಬಿಟ್ಟು ಹೋದವರಿಗೋಸ್ಕರ ಪಶ್ಚಾತಾಪ ಪಡುವ ಬದಲು ಅವರು ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ ಪರಿಪರಿಯಾಗಿ ಪಶ್ಚಾತಾಪ ಪಡುವ ಹಾಗೆ ಏನನ್ನಾದರೂ ಸಾಧಿಸಿ

Badukinalli nambike droha bagedu nimmannu bittu hodavarigoskara pascatapa paduva badalu avaru nimagagi nimma snehakkagi paripariyagi pascattapa paduva hage enannadaru sadhisi

ಭಾವನೆಗಳೇ ಇಲ್ಲದ ನಿನ್ನಲ್ಲಿ ಪ್ರೀತಿ ಹೇಗೆ ಸಾಧ್ಯ . ನಂಬಿಕೆಯೇ ಇಲ್ಲದ ನಿನ್ನಲ್ಲಿ ಸ್ನೇಹವಿರಲು ಹೇಗೆ ಸಾಧ್ಯ 

Bhavanegale illada ninnalli priti hege sadhya

nambikeye illada ninnalli snehaviralu sadhya

ನಂಬಿಕೆಯ ಮೇಲೆ ಹಗಲು ದರೋಡೆ ನಡೆಯುತ್ತಲೇ ಇದೆ. ಆದರೆ ನಂಬಿ ಮೋಸ ಹೋದವರೆಲ್ಲ ಹಗಲುಕುರುಡರಲ್ಲ 

Nambikeya mele hagalu darode nadeyuttale ide

adare nambi mosa hodavarella hagalukurudaralla

ನಂಬಿಕೆ ಜೀವ ತೆಗೆಯುವ ಸಾಧನ ಆಗಬಾರದು. ಬಾಳು ಮುನ್ನಡೆಸುವ ದಾರಿದೀಪ ಆಗಬೇಕು

Nambike jiva tegeyuva sadhana agabaradu

balu munnadesuva daridipa agabeku

ಅನ್ಯರ ಮೇಲಿನ ನಂಬಿಕೆಯೇ ನಿನ್ನ ನಾಶ ಮಾಡುವ ನಂಜು ಅದಕ್ಕೆ ನೀ ನಿನ್ನ ನಂಬು

Anyara melina nambikeye ninna nassha maduva nan̄ju adakke ni ninna nambu

ಮುಂಜಾನೆಯಲಿ ನಂಬಿಕೆಯಿತ್ತು ಮುಸ್ಸಂಜೆಯಲಿ ಅನುಮಾನಿಸಿದರು. ಸರಿಸಮ ಸಮಬಲದ ಪ್ರತಿಷ್ಠೆಯಲ್ಲಿ ವ್ಯಕ್ತಿತ್ವವ ಮರೆತು ಹಣದ ವ್ಯಕ್ತಿಗೆ ಮಹತ್ವ ನೀಡಿದರು. ಯೋಚನೆಗಳಲ್ಲಿ ತಪ್ಪುಗಳ ಹುಡುಕಿ ನನ್ನದೇ ವಾದ ಸರಿಯೆಂದರು. ಬಿಡುವಿಲ್ಲದ ಬಡಜೀವದ ಆಸೆಗಳ ಆರೈಕೆ ಪೂರೈಸುವವರಿಲ್ಲ. ಒಂಟಿತನದ ಭಾವನೆಗಳ್ಳಿ ಜೊತೆಯಾಗುವ ಜೀವವಿಲ್ಲ

Mun̄janeyali nambikeyittu mussan̄jeyali anumanisidaru

sarisama samabalada pratistheyalli vyaktitvavannu maretu hanada vyaktige mahatva bandide

yocanegalalli tappugalannu huduki nannade vada sariyendaru

biduvillada badajivada asegala puraisuvavarilla

ontitanada bhavanegalli joteyaguva jivavilla

ನಂಬಿಕೆ ಕಳಚಿ ಬಿದ್ದಾಗ ಸೈರಿನಿಂದ ಕಂಗೊಳಿಸುವ ಮರವು ತಾಯಿಬೇರಿನಿಂದ ಬೇರ್ಪಟ್ಟು ಉರುಳಿ ಬಿದ್ದಂತಾಗುವುದು

Nambike kalaci biddaga sairininda kaṅgolisuva maravu tayiberininda berpattu uruli biddantaguvudu

ಒಬ್ಬರ ಮೇಲೆ ನಂಬಿಕೆ ಕಳೆದುಕೊಂಡಾಗ ಮನವು ನೋವಿನಲ್ಲೇ ನೊಂದು ಸೊರಗುವುದು. ಅತಿಯಾದ ನಂಬಿಕೆ ಪಾತಾಳಕ್ಕೆ ತಳ್ಳುವುದು. ಯಾರನ್ನು ನಂಬಲು ಭಯವಾಗುವುದು. ಜೀವನದಲ್ಲಿ ಅತಿ ದೊಡ್ಡ ಪಾಠವನ್ನೇ ನಂಬಿಕೆ ದ್ರೋಹ ಕಲಿಸಿಕೊಡುತ್ತದೆ

Obbara mele nambike kaledukondaga manavu novinalle nondu soraguvudu

atiyada nambike patalakke talluvudu

yarannu nambalu bhayavaguvudu

jivanadalli ati dodda pathavanne nambike droha kalisikoduttade

ಮೌನದೊಳಗಿನ ಮಾತನ್ನು ಆಲಿಸುವ ತಾಳ್ಮೆ ಬೇಕಂತಿಲ್ಲ, ನಂಬಿಕೆಯೊಂದು ಭದ್ರವಾಗಿದ್ದರೆ ಸಾಕು

Olagina matannu alisuva talme bekantilla, nambikeyondu bhadravadare saku.

ಒಬ್ಬ ವ್ಯಕ್ತಿಯನ್ನು ಪದೇ ಪದೇ ಕ್ಷಮಿಸಬಹುದು. ಆದರೆ ಪದೇ ಪದೇ ನಂಬಲಾಗದು

Obba vyaktiyannu pade pade ksamisabahudu

adare pade pade nambalagadu

ನನ್ನ ನಿನ್ನ ಸಂಬಂಧ ನಂಬಿಕೆ ಎಂಬ ಸೇತುವೆಯ ಕೊನೆಯ ಕೊಂಡಿ ಕಳಚುವ ವರೆಗೆ ಮಾತ್ರ. ಆ ಕೊಂಡಿ ಕಳಚಿದ ಮೇಲೆ ಸೇತುವೆಯು ಉಳಿಯದು ಸಂಬಂಧ ಉಳಿಯದು. ತನ್ನನ್ನೇ ನಂಬದವ ಇತರರ ನಂಬಿಕೆಗೆ ಅರ್ಹನಲ್ಲ 

Nanna ninna sambandha nambike emba setuveya koneya kondi kalacuvavarege matra

a kondi kalacida mele setuveyu uliyadu samandhavu uliyadu

tannanne nambadava itarara nambikege arhanalla

ಬೇರೆಯವರ ತಾತ್ಸಾರದ ಮಾತುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಮ್ಮ ಮೇಲೆ ನಾವು ನಂಬಿಕೆ ಇತ್ತು ಬದುಕಬೇಕು ಅಷ್ಟೇ

Bereyavara tatsarada matugala bagge cintisuvudannu bittu namma mele navu nambike ittu badukabeku aste.

New Kannada Quotes About Trust

ಒಂದು ಮನಸ್ಸು ಇನ್ನೊಂದು ಮನಸ್ಸಿನ ಮೇಲೆ ನಂಬಿಕೆ ಇಟ್ಟರೆ ಮಾತ್ರ ಅಲ್ಲಿ ಬೆಳಕು, ಇಲ್ಲದಿದ್ದರೆ ಬರಿ ಕತ್ತಲೆಯ ತುಣುಕು

Ondu manassu innondu manassina neke nambike ittare mamatra alli belaku, illadiddare bari kattaleya tunuku

ಉಸಿರಾಡಲು ಆಮ್ಲಜನಕ ಎಷ್ಟು ಮುಖ್ಯವೋ ಬದುಕಲು ನಂಬಿಕೆಯ ಬುನಾದಿ ಕೂಡ ಅಷ್ಟೇ ಮುಖ್ಯ 

Usiradalu amlajanaka estu mukhyavo badukalu nambikeya bunadi kuda aste mukhya

ತಿಳುವಳಿಕೆ ಹಾಗು ನಂಬಿಕೆ ಜೊತೆಗಿದ್ದರೆ ಸಂದೇಹಕ್ಕೆ ಆಸ್ಪದವಿಲ್ಲ 

Tiluvalike mattu nambike jotegiddare sandehakke aspadavilla

ನಿನ್ನ ಮೇಲೆ ಇತ್ತ ನಂಬಿಕೆ ನೀರಲ್ಲಿ ಕೈಬಿಟ್ಟಿತೆಂದು ನೋವಿದೆಯೇ ಹೊರತು ಹಣೆಬರ ಮೋಸ ಮಾಡಿತು ಎಂದಲ್ಲ

Ninna mele itta nambike niralli kaibittitendu novideye hanebara mosa maditu endalla

ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಮಾಡಿದ ತಪ್ಪು, ಒಮ್ಮೆ ಆಡಿದ ನಾಟಕ, ಒಮ್ಮೆ ಕಳೆದುಕೊಂಡ ನಂಬಿಕೆ ಪ್ರತಿದಿನದ ಅನುಮಾನಕ್ಕೆ ಕಾರಣವಾಗುವುದು 

Omme helida sullu, omme madida tappu, omme adida nataka, omme kaledukonda nambike pratidinada anumanakke karanavaguvudu

ನಂಬಿಕೆಯ ಗಾಜು ಒಡೆದರೆ ಮತ್ತೆಂದೂ ಜೋಡಿಸಲಾಗದು. ಜೋಡಿಸಿದರೂ ಮೊದಲಿನಂತೆ ಇರಲ್ಲ . ಒತ್ತಾಯಪೂರ್ವಕವಾಗಿ ಜೋಡಿಸಿದ ಗುರುತುಗಳು ಎಂದೂ ಮಾಸಲಾರದು, ಆ ಗುರುತುಗಳು ಆಗಾಗ ಸಂಬಂಧಗಳ ನಡುವಿನ ಬಲಹೀನತೆಯನ್ನು ಜ್ಞಾಪಿಸುತ್ತಲೇ ಇರುವುದು.

Nambikeya gaju odedare mattendu jodisalagadu. Jodisidaru modalinante iralla. Ottayapurvakavagi jodisida gurutugalu masalaradu, a gurutugalu agaga sambandhagala naduvina balahinateyannu jñapakavagisuvudu.

ಒಬ್ಬ ವ್ಯಕ್ತಿ ನಿನ್ನನು ಎಷ್ಟು ನಂಬಿರಬೇಕೆಂದರೆ ನಿನ್ನ ಸುಳ್ಳನ್ನು ಸಹ ಸತ್ಯವೆಂದು ನಂಬುವಷ್ಟು, ಆದರೆ ನೀನು ಆ ವ್ಯಕ್ತಿಯ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಎಡವಬಾರದಷ್ಟೇ

Obba vyakti ninnanu estu nambirabekendare ninna sullannu saha satyavendu nambuvastu, adare ninu obba vyaktiya nambikeyannu ulisikolluvalli edavabaradaste

ನೀ ಅಂದುಕೊಂಡಂತೆ ಇರುವುದಿಲ್ಲ ಎಲ್ಲರೂ, ಅರಿಯದೆ ನಂಬಬೇಡ ನೀ ಯಾರನ್ನೂ

Ni andukondante ellaru iruvudilla, ariyade ni yarannu

ಯಾರನ್ನು ನಂಬುವುದು ಯಾರನ್ನು ದೂರುವುದು ಎಲ್ಲರು ಇಲ್ಲಿ ಮುಖವಾಡ ಧರಿಸಿ ನಟಿಸೋ ನಾಟಕಗಾರರೇ ಆಗಿರುವಾಗ

Yarannu nambuvudu yarannu duruvudu ellaru illi mukhavada dharisi natiso natakagarare agiruvaga

ನಂಬಿಕೆ ಗಳಿಸಿದರೆ ಸಾಲದು, ಉಳಿಸಿಕೊಳ್ಳುವ ಯೋಗ್ಯತೆಯು ಇರಬೇಕು

Nambike galisidare saladu, ulisikolluva yogyateyu irabeku

ಜೀವನದಲ್ಲಿ ಎಲ್ಲರನ್ನು ಪ್ರೀತಿಸು, ಆದರೆ ಎಲ್ಲರನ್ನು ಎಂದಿಗೂ ನಂಬಬೇಡ 

Jivanadalli ellarannu pritisu, adare ellarannu nambabeda

ನಂಬಿಕೆ ಕಳಚಿ ಬಿದ್ದಾಗ ಪುನಃ ಚಿಗುರೊಡೆಯಲು ವರುಷಗಳೇ ಆಗಬಹುದು

Nambike kalaci biddaga antimavagi cigurodeyalu varusagale agabahudu

ಅತಿಯಾದರೆ ಅಮೃತವು ವಿಷವಾಗಬಹುದು. ಅಳತೆ ಮೀರಿ ನಂಬಿದರೆ ಹೂವು ಅಂದುಕೊಂಡಿದ್ದು ಹಾವಾಗಬಹುದು. ಎಲ್ಲವು ಒಂದು ಮಿತಿಯಲ್ಲಿದ್ದರೆ ಬಾಳು ಸುಗಮವಾಗಿ ಸಾಗುವುದು

Atiyadare amr̥tavu visavaguttade

alate miri nambidare huvu andukondiddu havagirabahudu

ellavu ondu mitiyalliddare balu sugamavagi saguvudu

ನಂಬಿಸೋರ ಹತ್ತಿರ ಇರುವ ಕಲೆ ನಂಬುವವರ ಹತ್ತಿರ ಇರೋಲ್ಲ

Nambisora hattira iruva kale nambuvavara hattira irolla

ನಂಬಿಕೆಯನ್ನು ಗಳಿಸಲು ಮತ್ತು ಉಳಿಸಿಕೊಳ್ಳಲು ಸಾವಿರ ದಾರಿಗಳಿರಬಹುದು. ಆದರೆ ನಂಬಿಕೆ ಕಳೆದುಕೊಳ್ಳಲು ಒಂದೇ ಒಂದು ದಾರಿ ಸಾಕು

Nambikeyannu galisalu mattu ulisikollalu savira darigalirabahudu

adare nambike kaledukollalu onde dari saku

Best Kannada Quotes About Trust

ನಂಬಿಕೆ ಎಂಬ ಗಾಜು ಒಡೆದರೆ ಮುಗಿಯಿತು, ನಾವು ಎಷ್ಟೇ ನಂಬಿಕೆಯಿಂದ ಇದ್ದರು ಅನುಮಾನ ಎಂಬ ಗಾಜಿನ ಅಂಚು ಚುಚ್ಚುತ್ತಲೇ ಇರುತ್ತದೆ

Nambike emba gaju odedare mugiyitu, navu estu nambikeyinda ibbaru anumana emba gajina an̄cu cuccuttale iruttade

ಈ ಸಮಾಜದಲ್ಲಿ ನಂಬುವಷ್ಟು ಒಳ್ಳೆಯವರು ಇಲ್ಲ, ನಂಬದೆ ಇರುವಷ್ಟು ಕೆಟ್ಟವರು ಇಲ್ಲ, ಎಲ್ಲರು ಅವರವರ ಅವಶ್ಯಕೆತೆಗಳಿಗೆ ಅನುಕೂಲಗಳಿಗೆ ಬದಲಾಗುತ್ತಲೇ ಇರುತ್ತಾರೆ. ಅದು ಮನುಷ್ಯನ ಹುಟ್ಟು ಗುಣ

Ee samajadalli nambuvastu olleyavaru illa, nambade iruvastu olleyavaru illa, ellaru avara agatyategalige anukulavagadante iruttare. Adu manusyana huttu guna

ಸ್ನೇಹ, ಕುಟುಂಬ ಸಂಬಂಧ, ಅಥವಾ ವ್ಯಾಪಾರ ಅಥವಾ ವೈಯಕ್ತಿಕ ಪಾಲುದಾರಿಕೆ, ಈ ಎಲ್ಲಾ ಬಂಧವು ನಂಬಿಕೆಯ ಮೇಲೆ ನಿಂತಿದೆ.  ನಂಬಿಕೆಯಿಲ್ಲದೆ, ನಿಮಗೆ ಏನೂ ಇಲ್ಲ.  ನಂಬಿಕೆ ಇದ್ದರೆ ನೀವು ಉತ್ತಮ ಕೆಲಸಗಳನ್ನು ಮಾಡಬಹುದು.  

Sneha, Kutumba sambandha athava vyapara athava vayaktika paaludaarike, ee yella bandhavu nambikeya mele ninitide. Nambikeyillade nimage enu illa. Nambike iddare neevu uttama kelasagalannu maadabahudu.

ಅಂದ ಚೆಂದ ಮೂರು ದಿನದ ಕಂತೆ. ಗುಣ, ನಂಬಿಕೆ ಜೀವನ ಪೂರ್ತಿಯ ಸಂತೆ.

Andha chendha mooru dinada kanthe

Guna, nambike jeevana poorthiya santhe.

ನಂಬಿಕೆ ರಕ್ತದೊತ್ತಡ ಇದ್ದಂತೆ.  ಅದು ಮೌನವಾಗಿರುತ್ತದೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ಆದರೆ ಅದು ದುರುಪಯೋಗಪಡಿಸಿಕೊಂಡರೆ ಅದು ಮಾರಕವಾಗಬಹುದು.

Nambike rakthadotthada iddante.

Adu mounavaagiruttade mattu aarogyakke atyagatya.

Aadare adu durapayogapadisikondare adu maarakavaagabahudu.

ನಿಮ್ಮನ್ನು ನಂಬಿ, ಆಗ ನಿಮಗೆ ಹೇಗೆ ಬದುಕಬೇಕು ಎಂದು ತಿಳಿಯುತ್ತದೆ

Nimmannu nambi, aaga nimage hege badukabeku endu tiliyuttade.

ನೀವು ಯಾರನ್ನಾದರೂ ನಂಬಬಹುದೇ ಎಂದು ಕಂಡುಹಿಡಿಯಲು ಉತ್ತಮ ಮಾರ್ಗವೆಂದರೆ ಅವರನ್ನು ನಂಬುವುದು

Neevu yarannaadaru nambabahude endu kanduhidiyalu utthama maargavendare avarannu nambuvudu.

ನಂಬಿಕೆಯು ಹೂದಾನಿಯಂತೆ. ಒಮ್ಮೆ ಅದು ಒಡೆದು ಹೋದರೆ ನೀವು ಅದನ್ನು ಸರಿಪಡಿಸಬಹುದಾದರೂ, ಹೂದಾನಿ ಎಂದಿಗೂ ಮೊದಲಿನಂತೆ ಆಗುವುದಿಲ್ಲ

Nambikeyu hoodhaaniyanthe

Omme adu odeduhodare neevu adannu saaripadisabahudaadaru hoodhaani endigu modalinante aguvudilla.

ಸ್ಥಿರತೆಯು ನಂಬಿಕೆಯ ನಿಜವಾದ ಅಡಿಪಾಯವಾಗಿದೆ.  ಒಂದೋ ನಿಮ್ಮ ಭರವಸೆಗಳನ್ನು ಉಳಿಸಿಕೊಳ್ಳಿ ಅಥವಾ ಭರವಸೆಯನ್ನು ಕೊಡಬೇಡಿ.

Sthirateyu nambikeya nijavaada adipaayavaagide. Ondo nimma bharavasegalannu ulisikolli athavaa bharavasegyannu kodabedi.

ಮುಗ್ಧರ ನಂಬಿಕೆಯು ಸುಳ್ಳುಗಾರನ ಅತ್ಯಂತ ಉಪಯುಕ್ತ ಸಾಧನ

Mughdara nambikeyu sullugaarana atyanta upayukta saadhana

ನಂಬಿಕೆ ಸಾಯುತ್ತದೆ ಆದರೆ ಅಪನಂಬಿಕೆ ಅರಳುತ್ತದೆ

Nambike saayuttade aadare apanambike araluttade

ನೀವು ಎಲ್ಲಾ ಸಮಯದಲ್ಲೂ ಕೆಲವರನ್ನು ಮೂರ್ಖರನ್ನಾಗಿ ಮಾಡಬಹುದು, ಮತ್ತು ಎಲ್ಲಾ ಜನರನ್ನು ಕೆಲವು ಬಾರಿ ಮೂರ್ಖರನ್ನಾಗಿ ಮಾಡಬಹುದು, ಆದರೆ ನೀವು ಎಲ್ಲ ಜನರನ್ನು ಎಲ್ಲಾ ಸಮಯದಲ್ಲೂ ಮರುಳು ಮಾಡಲು ಸಾಧ್ಯವಿಲ್ಲ

 

Neevu yella samayadallu kelavarannu moorkarannaagi maadabahudu mattu yella janarannu kelavu baari moorkharannaagi maadabahudu. Aaadare neevu yella janarannu yella samayadallu maralu maadalu saadyavilla.

ನೀನು ನನಗೆ ಸುಳ್ಳು ಹೇಳಿದ್ದಕ್ಕೆ ನನಗೆ ಬೇಸರವಿಲ್ಲ, ಇಂದಿನಿಂದ ನಾನು ನಿನ್ನನ್ನು ನಂಬಲು ಸಾಧ್ಯವಿಲ್ಲ ಎಂದು ನಾನು ಅಸಮಾಧಾನಗೊಂಡಿದ್ದೇನೆ.

Ninu nanage sullu helidakke nanage besaravilla, indininda nanu ninnannu nambalu saadhyavilla endu nanu asamaadhaanagondiddene.

ನೀವು ಏನನ್ನು ನಂಬುತ್ತೀರಿ ಎಂದು ನಿಮಗೆ ತಿಳಿದಿಲ್ಲದಿದ್ದರೆ ನಂಬಿಕೆ ತುಂಬಾ ಕಷ್ಟ.

Neevu yenannu nambutteeri endu nimage tilidilladiddare nambike tumba kashta

ನಂಬಿಕೆ ಕಷ್ಟ.  ಯಾರನ್ನು ನಂಬಬೇಕೆಂದು ತಿಳಿಯುವುದು ಇನ್ನೂ ಕಷ್ಟ.

Nambike kashta. Yaarannu nambabekendu tiliyuvudu innu kashta.


ಈ ಮೇಲಿನ kannada quotes about trustಗಳ ಮೂಲಕ ನೀವು ಇತರರನ್ನು ಮತ್ತು ನಿಮ್ಮನ್ನು ನಂಬಲು ಸಿದ್ಧರಿದ್ದೀರಿ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ:

ನಿಮ್ಮ ಸ್ನೇಹ, ಪ್ರಣಯ ಸಂಬಂಧಗಳು ಮತ್ತು ಕೆಲಸದ ಸ್ಥಳದ ಸಂಪರ್ಕಗಳ ಉಳಿವೆಗೆ ನಂಬಿಕೆಯು ಅತಿ ಮುಖ್ಯ . ನಂಬಿಕೆಯಿಲ್ಲದೆ, ಸಂಬಂಧಗಳು ವಿಫಲಗೊಳ್ಳುತ್ತವೆ ಏಕೆಂದರೆ ಒಬ್ಬರು ಅಥವಾ ಇಬ್ಬರೂ ಅಸುರಕ್ಷಿತ ಅಥವಾ ನಿರಾಸೆ ಅನುಭವಿಸುತ್ತಾರೆ.

ಪ್ರಾರಂಭದಲ್ಲಿ ಮುಕ್ತ ಮತ್ತು ಪಾರದರ್ಶಕವಾಗಿರುವ ಮೂಲಕ ನಂಬಿಕೆಯನ್ನು ಬೆಳೆಸಿಕೊಳ್ಳಿ. ನಂಬಿಕೆಯು ನಿಮಗೆ ಆಂತರಿಕ ಮತ್ತು ವೈಯಕ್ತಿಕ ವಿಷಯವಾಗಿದೆ, ಮತ್ತು ನೀವು ನಿಜವಾಗಿಯೂ ಸಂಬಂಧದಲ್ಲಿ ಬೇರೊಬ್ಬರನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.

ನಮ್ಮಈ Kannada quotes about trust ಸಂಗ್ರಹ ನಿಮಗೆ ಇಷ್ಟ ಆಯಿತು ಎಂದು ಭಾವಿಸುತ್ತೇನೆ. ನೆನಪಿಡಿ, ನಾವು ಈ ಪೇಜ್ ಅನ್ನು ಇನ್ನು ಹೆಚ್ಚಿನ trust quotes in kannada ದ ಮೂಲಕ ಅಪ್ಡೇಟ್ ಮಾಡುತ್ತಲೇ ಇರುತ್ತೇವೆ. ಹಾಗಾಗಿ ಈ ಪೇಜ್ ಅನ್ನು ಸದಾ ವೀಕ್ಷಿಸುತ್ತೀರಿ. 

ಒಂದು ವೇಳೆ ನಮ್ಮ ಈ ನಂಬಿಕೆ Quotes ಗಳ ಸಂಗ್ರಹ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಪೇಜ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯದಿರಿ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.