ಕನ್ನಡ ರಾಜ್ಯೋತ್ಸವದ ಶುಭಾಶಯಗಳು | Kannada Rajyotsava Wishes in Kannada

Kannada Rajyotsava Wishes in Kannada

ಈ ಲೇಖನದಲ್ಲಿ ನಾವು ಕನ್ನಡ ರಾಜ್ಯೋತ್ಸವದ ಸಂದೇಶಗಳು (happy kannada rajyotsava wishes in kannada) ಅಥವಾ ಶುಭಾಶಯಗಳ ಅದ್ಭುತ ಸಂಗ್ರಹವನ್ನು ನಿಮಗಾಗಿ ನೀಡಿದ್ದೇವೆ. 

ಕರ್ನಾಟಕ ಸಂಸ್ಥಾಪನಾ ದಿನ ಅಥವಾ ಕರ್ನಾಟಕ ದಿನ ಎಂದು ಕರೆಯಲ್ಪಡುವ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಈ ಮಹತ್ವದ ದಿನವು 1956ರಲ್ಲಿ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು ಒಗ್ಗೂಡಿ ಒಂದು ರಾಜ್ಯವನ್ನು ರಚಿಸಿದ ದಿನ. ಆರಂಭದಲ್ಲಿ ಮೈಸೂರು ರಾಜ್ಯ ಎಂದು ಇದ್ದ ಹೆಸರನ್ನು ನಂತರ ಕರ್ನಾಟಕ ಎಂದು ಬದಲಾಯಿಸಲಾಯಿತು.

ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು (karnataka rajyotsava wishes kannada) ಕಳುಹಿಸುವುದು ಸಂತೋಷವನ್ನು ಹಂಚಿಕೊಳ್ಳಲು ಮತ್ತು ಬಂಧಗಳನ್ನು ಬಲಪಡಿಸುವ ಅದ್ಭುತ ಮಾರ್ಗವಾಗಿದೆ. ಅದು ನಿಮ್ಮ ಕುಟುಂಬ, ಸ್ನೇಹಿತರು ಅಥವಾ ಸಹೋದ್ಯೋಗಿಗಳಾಗಿರಲಿ, ಹೃತ್ಪೂರ್ವಕ ಹಾರೈಕೆ ಅವರ ಕನ್ನಡ ರಾಜ್ಯೋತ್ಸವದ ಆಚರಣೆಗಳನ್ನು ಇನ್ನಷ್ಟು ಸಂತೋಷಕರವಾಗಿಸುತ್ತದೆ.

Happy Kannada Rajyotsava Wishes in Kannada | ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ಬರಿ ರಾಜ್ಯೋತ್ಸವ ಶುಭಾಶಯ ಕೋರುವ ಭಾಷೆಯಾಗದಿರಲಿ. ಕೃಷ್ಣ, ತುಂಗಭದ್ರೆ, ಕಾವೇರಿಯರ ಧಾರೆಯಂತೆ ತುಂಬಿ, ಶುದ್ಧ ಸುಲಲಿತ ಜಲದಂತೆ ಹರಿಯಲಿ ಶ್ರೀಗಂಧದ ಕಂಡಿನಂತೆ ಎಲ್ಲಡೆ ಹರಡಲಿ.

 

ಸಮಸ್ತ ಕನ್ನಡ ನಾಡಿನಲ್ಲಿ ಇರುವವರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ.

 

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು. ಕನ್ನಡ ರಾಜ್ಯೋತ್ಸವ ಶುಭಾಶಯ.

 

ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯ.

 

‘ಕನ್ನಡ’ ಕರುನಾಡಿನ ಸ್ವಾಭಿಮಾನದ ಸಂಕೇತ. ಕನ್ನಡದ ತೇರನ್ನು ಎಳೆಯೋಣ, ಕನ್ನಡ ಪ್ರೀತಿಸೋಣ, ಬೆಳೆಸೋಣ. ಜೈ ಕನ್ನಡಾಂಬೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯ.

 

ನವೆಂಬರ್ ೧ ರಂದು ಮಾತ್ರ ಕನ್ನಡಿಗರು ಆಗಬೇಡಿ ಯಾವಗಲೂ ನಂಬರ್ ೧ ಕನ್ನಡಿಗರಾಗಿ. ಕನ್ನಡವನ್ನೆ ಮಾತನಾಡಿ ಕನ್ನಡ ಉಳಿಸಿ ಬೆಳಸಿ. ಕೇವಲ ಈ ದಿನ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರದೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸೋಣ ಹಾಗೂ ಕನ್ನಡ ಶಾಲೆಯನ್ನು ಮುಚ್ಚದೆ, ಮುಚ್ಚಿರುವ ಶಾಲೆಗಳನ್ನು ತೆರೆದು ಅಭಿವೃದ್ಧಿ ಮಾಡೋಣ.

 

ಕನ್ನಡ ರಾಜ್ಯೋತ್ಸವ ಶುಭಾಶಯ. ಜೈ ಕರ್ನಾಟಕ ಬಿಟಾಕಿ ಯನ್, ಯಕಡ್, ಯನಡ್ ಮಾತಾಡಿ ಮುಚ್ಚಕೊಂಡ ಕನ್ನಡ. ಜೈ ಕನ್ನಡ.

 

ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

 

ಗಂಟ್ಲು ಪೂರ್ತಿ ಹೆಂಡ ಕುಡಿದ್ರೂನು , ಮೈ ಮೇಲೆಲ್ಲಾ ಬಾಸುಂಡೆ ಬಂದ್ರೂನು ; ಪಾದ ತೆಗ್ದು ಸುಡೊ ಕೆಂಡದಲ್ ಇಟ್ರೂನು , ಕೊನೆಗ್ ನನ್ ಉಸಿರು ನಿಂತ್ ಹೋದ್ರೂನು ; ತನು – ಮನ ; ಕನಸು – ಮನಸು-ಉಸಿರು ; ಜೀವ – ಜೀವನ ಎಲ್ಲವೂ ಹೇಳುವುದೊಂದೆ ಕನ್ನಡ…ಕನ್ನಡ…ಕನ್ನಡ. ಕನ್ನಡ ರಾಜ್ಯೋತ್ಸವ ಶುಭಾಶಯ.

 

ಕನ್ನಡ ರಾಜ್ಯೋತ್ಸವ ಶುಭಾಶಯ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ.

 

ಕನ್ನಡ ರಾಜ್ಯೋತ್ಸವ ಶುಭಾಶಯ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರೆತೇವು ಮರವ ತೆರೆದೇವು ಮನವ ಎರೆದೇವು ಒಲವ ಹಿರಿನೆನಪಾ ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ. ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ ನಾಡೊಲವೆ ನೀತಿ ಹಿಡಿನೆನಪಾ ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿರಿನೆನಪಾ ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ. “ಸಮಸ್ತ ಕರುನಾಡ ಹೃದಯವಂತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾದಿ೯ಕ ಶುಭಾಷಯಗಳು” ||ಜೈ ಕನಾ೯ಟಕ ಮಾತೆ||

 

ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಗೆಲ್ಗೆ. ಮೊಳಗಲಿ ಎಲ್ಲೆಲ್ಲೂ ಕನ್ನಡದ ಕೀರ್ತಿ ಪತಾಕೆ ಜೈ ಕರ್ನಾಟಕ ಮಾತೆ. ಕನ್ನಡ ರಾಜ್ಯೋತ್ಸವ ಬಂದಾಗ ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದೆ ಎಂದು ಸಂಭ್ರಮದಿಂದ ಹೇಳುತ್ತಾ ಮೈಮರೆಯುವುದರಿಂದ ಕನ್ನಡತನ ದಕ್ಕುವುದಿಲ್ಲ. ವಾಸ್ತವದಲ್ಲಿ ಕನ್ನಡತನದ ಹೆಮ್ಮೆ ಎಲ್ಲೆಡೆ ಪಸರಿಸುವಂತೆ ಆಗಬೇಕಿದೆ. ಕನ್ನಡತನ ಎಂದರೆ ಕನ್ನಡ ನೆಲ, ಜಲ, ಭಾಷೆಗಾಗಿ ಸದಾ ಸ್ಪಂದಿಸುವ ಕನ್ನಡ ಧರ್ಮ.ಅದೇ ಕನ್ನಡಿಗರ ಅಂತರಂಗದ ದನಿ. ಅದೇ ಕನ್ನಡಿಗರನ್ನು ಮುನ್ನಡೆಸುವ ದಾರಿದೀಪ. ಕನ್ನಡತನ ಎಂದರೆ ನಮ್ಮ ಎದೆಯೊಳಗೆ ಕನ್ನಡದ ಆವಾಹನೆ. ಅದೇ ಉಸಿರು, ಅದೇ ಕನ್ನಡದ ಬದುಕು. ಹಾಗೆ ನೋಡಿದರೆ ಕನ್ನಡವನ್ನು ಯಾರೂ ರಕ್ಷಿಸಬೇಕಿಲ್ಲ. ಕನ್ನಡ ಮಾತಾಡುವವರು ಇರುವವರೆಗೂ ಕನ್ನಡ ಇದ್ದೇ ಇರುತ್ತದೆ. ಕನ್ನಡ ರಾಜ್ಯೋತ್ಸವ ಶುಭಾಶಯ‌.

 

ಹಾರಾಡಲಿ ಮನೆ ಮನೆ ಮೇಲೆ ಕನ್ನಡದ ವಿಜಯ ಪತಾಕೆ.

ಕನ್ನಡ ನಾಡಿನ ಸಮಸ್ತ ಜನತೆಗೆಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ರಾಜ್ಯೋತ್ಸವ ನವೆಂಬರ್ ೧ ಕನ್ನಡ ರಾಜ್ಯೋತ್ಸವ. ಇದು ಕನ್ನಡಾಂಬೆಯ ಮಹೋತ್ಸವ. ಕನ್ನಡ ನಾಡು ನುಡಿಯ ವೈಭವವು ವೈಶಿಷ್ಠಪೂರ್ಣವಾದುದು. 

ಇಂದು ನಾವು ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕ್ರತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು, ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ, ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. 

 

ಎಲ್ಲದರೂ ಇರು ಎಂತಾದರೂ ಎಂದೆಂದಿಗೂ ನೀ ಕನ್ನಡವಾಗಿರು . ಎಲ್ಲೆಡೆ ಮೊಳಗಲಿ.. ಕನ್ನಡದ ನಾದ..ಕನ್ನಡ ಪದ. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವನ್ನು ಬಳಸೋಣ. ಕನ್ನಡವನ್ನು ಉಳಿಸೋಣ. ಕನ್ನಡವನ್ನು ಬೆಳಸೋಣ. ಕನ್ನಡದೊಂದಿಗೆ ಬದುಕೋಣ.

Karnataka Rajyotsava Wishes in Kannada | ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ರಾಜ್ಯೋತ್ಸವದ ಶುಭಾಶಯ ಸಂದೇಶ. ಕನ್ನಡ ರಾಜ್ಯೋತ್ಸವ. ಇದು ನವಂಬರ್ ತಿಂಗಳಿಗಷ್ಟೇ ಮೀಸಲಾಗದಿರಲಿ. ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕು. ಕನ್ನಡ ಭಾಷಾಭಿಮಾನ ಎಲ್ಲರಲ್ಲೂ ಮೂಡಿ ಬರಲಿ. ಕನ್ನಡ ಭಾಷಾಭಿವೃದ್ಧಿ ಬಗೆಗೆ ಘನ ಸರಕಾರ ಇನ್ನಷ್ಟು ಗಮನ ಹರಿಸಲಿ. ಇತರ ಭಾಷೆಗಳಂತೆ ಕನ್ನಡಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕಲಿ. ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಹೆತ್ತವರು ಸೇರಿಸಲಿ. ಕನ್ನಡ ಪರ ಸಂಘಟನೆ ಸಂಘಗಳು ಇನ್ನಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಿ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಯಲಿ ಬೆಳೆಯಲಿ ಮೆರೆಯಲಿ.

 

ಕಳದೋಗೋ ಮುಂಚೆ ಕಲಿಯೋ ನೀ ಕನ್ನಡ…. ಕಲಿತುಕೊಂಡ ಮೇಲೆ ನೀ… ಬಾರೋ ನಮ್ಮ ಸಂಗಡ!!!! ಕನ್ನಡ ಕನ್ನಡ… ಕೂಗಿ ಹೇಳೋ ಕನ್ನಡ ನಾಡು ನಂದೇ ನುಡಿಯು ನಂದೇ ನಿಮ್ಮದೇನಿದೆ ಬೊಂಬಡ… ಕರುನಾಡಲ್ಲಿ ಅನ್ನ ಕೇಳಿದ್ರೆ ಮೃಷ್ಟಾನ್ನ ನೀಡುವೆವು… ಕೈ ಎತ್ತಿ ಮುಗಿದ್ರೆ ಮೆರವಣಿಗೆ ಮಾಡುವೆವು ಕನ್ನಡತಾಯಿ ಮಕ್ಕಳು ನಾವು ಪ್ರಾಣನೆ ನೀಡುವೆವು… ಎನ್ನಡ,ಎಕ್ಕಡ ವಣಕ್ಕಂ ,ವಾಂಗ ಇಕ್ಕಡ ಭೇದವಿಲ್ಲ… ದ್ವೇಷವಿಲ್ಲ ನೀವೂ ಬನ್ನಿ ನಮ್ಮ ಸಂಗಡ ಕೈಲಿಡಿದು ಬಾವುಟವ ಕೂಗಿಕೂಗಿ ಹೇಳಿ ಸಿರಿಗನ್ನಡ!!! ಒಂದೇ ನಾಡು ಒಂದೇ ನುಡಿ ಒಂದೇ ಭಾಷೆ ಕನ್ನಡ ಮೈ ಮರೆತು ಮಲಗದಿರು ,,, ತಾಯಿ ಭಾಷೆ ಇದು ಕನ್ನಡ!!! ಕನ್ನಡ ರಾಜ್ಯೋತ್ಸವ ಶುಭಾಶಯ.

 

ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡ್ಬೇಕು….ಗಡಿಗಳನ್ನ ಮೀರಿ ಗರಿಗೆದರ್ಬೇಕು… ಸಾಗರದಾಚೆಗೂ ಚಾಚಿ ನಿಲ್ಬೇಕು….ಕನ್ನಡ ಅಂದ್ರೆ ಮೈ ರೋಮ ಎದ್ದೇಳ್ಬೇಕು…ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು…. ಕನ್ನಡ ಉಳಿಸಿ ಬೆಳಸಿ ಅಂತ ಬೇಡ್ಕೋಳೋ ಕಾಲ ಹೋಯ್ತು….ಈಗೇನಿದ್ರು ಕನ್ನಡ ಕಲಿತು, ಕಲಿಸಿ, ಬಳಸಿ… ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ….ಸಿರಿಗನ್ನಡಂ ಬಾಳ್ಗೆ….

 

ಕನ್ನಡ ರಾಜ್ಯೋತ್ಸವ ಶುಭಾಶಯ ಸದಾ ಕನ್ನಡ ಮಾತಾಡಲಿ ಆಶಯ ಕನ್ನಡವೇ ನಮ್ಮುಸಿರು ಆಗಿರಲಿ ಕರುನಾಡಿನಲ್ಲಿ ಉಸಿರು ತುಂಬಿರಲಿ. ಕನ್ನಡವನ್ನು ಸಾರುತ್ತಾ ಬೆಳೆಸೋಣ ಎಲ್ಲೆಡೆಯೂ ಪಸರಿಸಿ ಉಳಿಸೋಣ ಮೊದಲ ಸ್ಥಾನ ನೀಡಿ ಕನ್ನಡ ಭಾಷೆಗೆ ಹಚ್ಚಬನ್ನಿರಿ ದೀಪವನ್ನು ಕರುನಾಡಿಗೆ. ಕೆಂಪು ಹಳದಿ ಬಾವುಟ ಹಾರುತ್ತಿದೆ ರಾಜ್ಯೋತ್ಸವ ಹಬ್ಬವನು ಸಾರುತ್ತಿದೆ ಚಿನ್ನದ ನಾಡಿನ ಮಹಿಮೆ ಎಲ್ಲೆಡೆ ಪಸರಿಸಿ ವೈಭವದಿ ಮೆರೆದಿಹಳು ಕನ್ನಡ ಭುವನೇಶ್ವರಿ. 

 

ಎಲ್ಲ ಸನ್ಮಿತ್ರರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ.

 

ನರಕಕ್ಕ್ ಇಳಿಸಿ ನಾಲಿಗೆ ಸೀಳ್ಸಿ ಬಾಯ್ ಒಲಿಸಾಕಿದ್ರೋನೆ ಮೂಗ್ನಲ್ ಕನ್ನಡ ಮಾತಾಡ್ತೀನಿ…. ನನ್ ಮನಸನ್ ನೀ ಕಾಣೆ… ಜಿ.ಪಿ.ರಾಜರತ್ನಮ್ 

ಕನ್ನಡ ರಾಜ್ಯೋತ್ಸವ ದ ಶುಭಾಶಯ ಗಳು ಕನ್ನಡದ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತ ಆಗದಿರಲಿ …. ಪ್ರತಿದಿನ ಪ್ರತಿಕ್ಷಣವೂ ಕನ್ನಡದ ದಿನವಾಗಿರಲಿ.

 

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯ ಗಳು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಉಳಿಸಿ ಕನ್ನಡ ಬೆಳಿಸಿ ನಮ್ಮ ನಾಡು ಕನ್ನಡ ನಮ್ಮ ನುಡಿ ಕನ್ನಡ ಜೈ ಕನ್ನಡಾಂಬೆ.

 

ಕನ್ನಡ ನಾಡಿನಲ್ಲಿರುವ ಎಲ್ಲ ಕನ್ನಡ ಅಭಿಮಾನಿಗಳಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಕನ್ನಡಿಗರಿಗೂ ನೂರೆಂಟು ನಮನಗಳನ್ನು ಸಲ್ಲಿಸುತ್ತ ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಲ್ಲ ಕನ್ನಡಿಗರು ಕನ್ನಡ ರಾಜ್ಯೋತ್ಸವ ಶುಭಾಶಯ.

 

ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಗಳು (ಹುಟ್ಟಿದರೆ ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟ ಬೇಕು) ನಮ್ಮ ಉಸಿರು ಕನ್ನಡ ನಮ್ಮ ಜೀವ ಕನ್ನಡ ನಮ್ಮ ತಾಯಿ ಕನ್ನಡ ಜೈ ಕರ್ನಾಟಕ ಮಾತೆ.

Karnataka Rajyotsava Wishes Kannada Images

ಕನ್ನಡ ರಾಜ್ಯೋತ್ಸವವು ಕರ್ನಾಟಕದ ಒಗ್ಗಟ್ಟಿನ ಮತ್ತು ಹೆಮ್ಮೆಯ ದಿನವಾಗಿದೆ. ಈ ದಿನದಂದು ಶುಭಾಷಯಗಳನ್ನು (karnataka rajyotsava wishes in kannada) ಹಂಚಿಕೊಳ್ಳುವುದು ಸಂತೋಷವನ್ನು ಹರಡುತ್ತದೆ ಮತ್ತು ನಮ್ಮ ಬಂಧಗಳನ್ನು ಬಲಪಡಿಸುತ್ತದೆ. ಈ ಶುಭಾಶಯಗಳ ಸಂಗ್ರಹವು (happy kannada rajyotsava wishes in kannada) ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.

Leave a Reply

Your email address will not be published. Required fields are marked *