ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ವಿಸ್ತರಣೆ | Kumbaranige Varusha Donnege Nimisha

Kumbaranige Varusha Donnege Nimisha Gadhe Vistarane in Kannada

ಗಾದೆಮಾತುಗಳು ಜನಮಾನಸದಲ್ಲಿ ಸ್ಥಾಯಿಯಾಗಿ ನಿಂತ ಅನುಭವದ ನುಡಿಗಳು. ತಲೆಮಾರುಗಳ ಮೂಲಕ ರವಾನಿಸಲ್ಪಟ್ಟಿರುವ ಬುದ್ಧಿವಂತಿಕೆಯ ಸಂಕ್ಷಿಪ್ತ ಸಾಲುಗಳು. ಇಂದಿನ ಈ ಲೇಖನದಲ್ಲಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ (Kumbaranige Varusha Donnege Nimisha) ವಿಸ್ತರಣೆಯನ್ನು ಮಾಡಲಿದ್ದೇವೆ. 

ಗಾದೆಗಳು ಒಳನೋಟದ ಸಣ್ಣ ದಾರಿದೀಪಗಳಂತೆ, ಜೀವನವೆಂಬ ಚಕ್ರವ್ಯೂಹವನ್ನು ಸಲೀಸಾಗಿ ದಾಟಲು ನಮಗೆ ಮಾರ್ಗದರ್ಶನ ನೀಡುತ್ತವೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಈ ಗಾದೆಯು ಸಹ ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ. 

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ kumbaranige varusha donnege nimisha gadhe vistarane ಲೇಖನದಲ್ಲಿ ನೀವು ತಿಳಿಯಲಿದ್ದೀರಿ.

Kumbaranige Varusha Donnege Nimisha Gadhe Vistarane | ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ವಿಸ್ತರಣೆ

ಪೀಠಿಕೆ: ಗಾದೆಗಳು ವೇದಗಳಿಗೆ ಸಮ. “ವೇದ ಸುಳ್ಳಾದರು ಗಾದೆ ಸುಳ್ಳಾಗದು“. ಹಿರಿಯರ ಅನುಭವದ ನುಡಿಮುತ್ತುಗಳೇ ಈ ಗಾದೆಗಳು. ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥ ಅಡಗಿರುತ್ತದೆ. ಅಂತಹ ಹಲವಾರು ಕನ್ನಡದ ಸುಪ್ರಸಿದ್ದ ಗಾದೆಗಳಲ್ಲಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯು ಒಂದು. 

ವಿಷಯ ವಿವರಣೆ: ಕುಂಬರನು ಮಡಿಕೆ ಮಾಡಲು ಸೂಕ್ತವಾದ ಮಣ್ಣನ್ನು ಹುಡುಕಿ ತಂದು, ಹದಗೊಳಿಸಿ, ಕಲಸಿ, ಚಕ್ರಕ್ಕೆ ಹಾಕಿ, ತಿರುವಿ ಬೇಕಾದ ಆಕಾರಗಳಲ್ಲಿ ನೂರಾರು ಮಡಿಕೆಗಳನ್ನು ತಯಾರಿಸುತ್ತಾನೆ. ಅವುಗಳನ್ನು ಮಾಡಲು ಹಲವು ಸಮಯ ಬೇಕಾಗುತ್ತದೆ. ಆದರೆ ಹಾಗೆ ತಯಾರಿಸಿದ ಮಡಿಕೆಗಳನ್ನು ಒಡೆದು ಹಾಳುಮಾಡಲು ಒಂದೆರಡು ನಿಮಿಷಗಳು ಸಾಕಾಗುತ್ತದೆ. ಇದೆ ರೀತಿ ಒಂದು ಮನೆಯನ್ನು ಕಟ್ಟಲು ವರ್ಷಾನುಗತ್ತಲೆ ಸಮಯ ಬೇಕಾಗುತ್ತದೆ. ಆದರೆ ಅದನ್ನು ಕೆಡುವಲು ಒಂದೆರಡು ಗಂಟೆಗಳು ಸಾಕಾಗುತ್ತದೆ.

ಮನುಷ್ಯನು ಒಳ್ಳೆಯ ಹೆಸರನ್ನು, ಹಣ, ಖ್ಯಾತಿ, ಇವೆಲ್ಲವನ್ನೂ ಸಂಪಾದಿಸಲು ಹಲವು ವರ್ಷಗಳ ಕಾಲ ಶ್ರಮಿಸಬೇಕಾಗುತ್ತದೆ. ಆದರೆ ಇವೆಲ್ಲವನ್ನೂ ಹಾಳು ಮಾಡಿಕೊಳ್ಳಲು ಕೆಲವೇ ಕ್ಷಣಗಳು ಸಾಕು. ಕಟ್ಟುವುದು ಕಠಿಣ. ಕೆಡಗುವುದು ಸುಲಭ ಎಂಬ ಅರ್ಥವನ್ನು ಈ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಮಾತು ನೀಡುತ್ತದೆ..

Kumbaranige Varusha Donnege Nimisha Kannada Gadhe | ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಕನ್ನಡ ಗಾದೆ

ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಈ ಗಾದೆಯು ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ. ಕುಂಬಾರನು ಮಡಕೆ ಮಾಡಲು ಸಾಕಷ್ಟು ಕಷ್ಟಪಡುತ್ತಾನೆ. ಆದರೆ ದೊಣ್ಣೆ ಪೆಟ್ಟಿನಿಂದ ನಿಮಿಷ ಮಾತ್ರದಲ್ಲಿ ಮಡಕೆಗಳನ್ನು ನಾಶಗೊಳಿಸಬಹುದು. 

ಸಾಧನೆಗೆ ಹಲವಾರು ವರ್ಷಗಳು ಬೇಕು. ಆದರೆ ನಾಶ ಮಾಡಲು ನಿಮಿಷ ಸಾಕು. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆಅನೇಕ ಸಮಯ ಹಿಡಿಯುತ್ತದೆ.. ಕೆಡಿಸುವುದಕ್ಕೆ ನಿಮಿಷ ಸಾಕು. 

ಒಳ್ಳೆಯವನೆನೆಸಿಕೊಳ್ಳಲು ಜೀವಮಾನವಿಡಿ ಹೆಣಗಬೇಕು. ಅದೇ ಕೆಟ್ಟವನೆನೆಸಿಕೊಳ್ಳಲು ಕ್ಷಣ ಸಾಕು. ಇದೆ ಈ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತಿನ ಅರ್ಥ. 

Kumbaranige Varusha Donnege Nimisha in Kannada | ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ

ಗಾದೆ ವೇದಕ್ಕೆ ಸಮಾನ. ವೇದ ಸುಳ್ಳದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ.  ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಈ ಗಾದೆಯು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ. 

ವ್ಯಕ್ತಿ ಅತಿ ಪರಿಶ್ರಮದಿಂದ  ಮಾಡಿದ ಕೆಲಸವನ್ನು ಇತರರು ನಿಮಿಷ ಮಾತ್ರದಲ್ಲಿ ಹಾಲು ಮಾಡಿದ ಸಂದರ್ಭದಲ್ಲಿ ಈ ಗಾದೆಯು ಹುಟ್ಟಿಕೊಂಡಿರಬಹುದು.

ಕುಂಬಾರ ಮಡಕೆ ಮಾಡಲು ಸಾಕಷ್ಟು ಶ್ರಮಪಡುತ್ತಾನೆ. ಆದರೆ ಕೇವಲ ಒಂದು ದೊಣ್ಣೆಯ ಪೆಟ್ಟಿನಿಂದ ನಿಮಿಷದೊಳಗೆ ಮಡಿಕೆಯನ್ನು ನಾಶಗೊಳಿಸಬಹುದು. ಮೇಲ್ನೋಟಕ್ಕೆ ಈ ಅರ್ಥವಿದ್ದರೂ ಸಹ ಈ ಗಾದೆಯ ಒಳಾರ್ಥ ಬೇರೆಯೇ ಇದೆ. 

ಸಾಧನೆಗೆ ಹಲವಾರು ವರ್ಷಗಳೇ ಬೇಕು. ಆದರೆ ಅದನ್ನು ನಾಶ ಮಾಡಲು ನಿಮಿಷ ಸಾಕು. ಮರಾಠಿ ಕವಿಯೊಬ್ಬರು ಹೇಳುವಂತೆ ಇರುವೆ ಹಲವಾರು ದಿನಗಳ ಪರಿಶ್ರಮದಿಂದ ಧಾನ್ಯವನ್ನು ಸಂಗ್ರಹಿಸುತ್ತದೆ. ಆದರೆ ಆನೆಗೇನು ಅದರ ಬೆಲೆ ಗೊತ್ತು? ಅದು ಒಂದೇ ತುಳಿತಕ್ಕೆ ಅವನ್ನೆಲ್ಲ ನಾಶ ಮಾಡುತ್ತದೆ. 

ವ್ಯಕ್ತಿಯು ಪರಿಶ್ರಮದ ಬೆಲೆ ತಿಳಿಯದೆ ಇದ್ದರೆ ಯಾವುದನ್ನೂ ಬೇಕಾದರೂ ನಾಶಗೊಳಿಸಬಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸಹ “ಕೋಪದಿಂದ ಬುದ್ಧಿನಾಶ” ಎಂದಿದ್ದಾನೆ. 

ಹಲವಾರು ವರ್ಷಗಳ ಸಾಧನೆಯನ್ನು ಒಂದು ಕ್ಷಣದ ಕೋಪ ಹಾಳುಮಾಡುತ್ತದೆ. ಕೌಶಿಕನ ತಪಸ್ಸಿನ ಫಲವೆಲ್ಲ ನಿಮಿಷ ಮಾತ್ರದ ಕೋಪದಿಂದ ಹಾಳಾಯಿತು. ರಾಮಾಯಣದ ಕೈಕೆಯಿ ಹಲವಾರು ದಿನಗಳಿಂದ ಕಂಡ ಕನಸು ಶ್ರೀರಾಮನ ಫಟ್ಟಾಭಿಷೇಕ ಮಂತರೆಯ ಕುಯುಕ್ತಿಯಿಂದಾಗಿ ಅದು ನಿಮಿಷ ಮಾತ್ರದಲ್ಲಿ ಚೂರಾಯಿತು. ಸಾಧನೆಗೆ ಸಾಕಷ್ಟು ವರ್ಷಗಳ ಶ್ರಮ ಬೇಕು. ಆದರೆ ಅದನ್ನು ಹಾಲುಗೆದವಳು ನಿಮಿಷ ಸಾಕು. ಇದೆ ಈ ಗಾದೆಯ ಅರ್ಥ. 

Kumbaranige Varusha Donnege Nimisha Essay in Kannada | ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ಸಂದೇಶ

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರಗಳಾಗಿವೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ. ಅದರಲ್ಲಿ ಕುಂಬರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವುದು ಒಂದು ಪ್ರಸಿದ್ದ ಗಾದೆ ಮಾತಾಗಿದೆ. 

ಒಳ್ಳೆಯದನ್ನು ಮಾಡುವುದು ಕಷ್ಟ. ಕೆಟ್ಟದ್ದನ್ನು ಮಾಡುವುದು ಸುಲಭ. ಯಾವುದೇ ಒಂದನ್ನು ಸೃಷ್ಟಿ ಮಾಡುವುದು ಕಷ್ಟ ಮಾತ್ರವಲ್ಲ, ಸಾಕಷ್ಟು ಸಮಯ ಬೇಕಾಗುತ್ತದೆ. ನಾಶ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬ ವಿಚಾರವನ್ನು ಈ ಗಾದೆ ಸ್ಪಷ್ಟಪಡಿಸುತ್ತದೆ. 

ಪ್ರಾಕೃತಿಕ ಸಂಪತ್ತುಗಳು ರೂಪುಗೊಂದು ಸಮೃದ್ಧವಾಗಿ ಬೆಳೆಯಲು ಕೋಟ್ಯಂತರ ವರ್ಷಗಳೇ ಬೇಳು. ಇಂತಹ ಪೃಕೃತಿ ಸಂಪನ್ಮೂಲಗಳನ್ನು ಮನುಷ್ಯ ತನ್ನ ದುರಾಸೆಯಿಂದ ಕೆಲವೇ ವರ್ಷಗಳಲ್ಲಿ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾನೆ. 

ವರ್ಷಗಟ್ಟಳೆ ಕಷ್ಟ ಪಟ್ಟು ಬೆಳೆಸಿದ ಗಿಡ-ಮರಗಳು, ಆರೋಗ್ಯಕರ ಗಾಳಿ, ಹಣ್ಣನ್ನು ಕೊಡುವ ಪ್ರಕೃತಿಯನ್ನು ಹಾಳುಗೆಡವಲು ಒಂದು ನಿಮಿಷದ ಕಾಡ್ಗಿಚ್ಚು, ಜಲಪ್ರಳಯ, ಇಲ್ಲವೇ ಮನುಷ್ಯನೆ ಕೊಡಲಿ ಏಟೆ ಸಾಕು. 

ಕುಂಬಾರ ಕಷ್ಟಪಟ್ಟು ಮಣ್ಣಿನ ಮಡಿಕೆ-ಕುಡಿಕೆ ತಯಾರಿಸುತ್ತಾನೆ. ಅವನಿಗೆ ಅವುಗಳನ್ನು ತಯಾರು ಮಾಡಲು ಸಮಯದೊಂದಿಗೆ ಶ್ರಮವು ಬೇಕಾಗುತ್ತದೆ. ಆದರೆ ಅಷ್ಟು ಸಮಯ ವ್ಯಯಿಸಿ, ಕಷ್ಟಪಟ್ಟು ತಯಾರಿಸಿದ ಮಡಿಕೆಗೆ ಒಂದು ದೊಣ್ಣೆ ಏಟು ಸಾಕು. ಅದು ಒಡೆದು ಹೋಗುತ್ತದೆ. ಕುಂಬಾರಣ ಶ್ರಮ, ಸಮಯ ಎಲ್ಲವು ವ್ಯರ್ಥವಾಗುತ್ತದೆ. 

ಯಾವುದೇ ಕೆಲಸವಾದರೂ ಅಷ್ಟೇ. ಅದು ಒಮ್ಮೆಯೇ ಪೂರ್ಣಗೊಳ್ಳುವುದಿಲ್ಲ. ಆ ಕೆಲಸಕ್ಕೆ ಸಾಕಷ್ಟು ಸಮಯ ಮತ್ತು ಸಮಯದವ ಅವಶ್ಯಕತೆ ಇರುತ್ತದೆ. ಆದರೆ ಅದನ್ನು ಹಾಳುಗೆಡವಲು ಕೆಲವೇ ನಿಮಿಷ ಸಾಕು. 

ಹಾಗೆಯೇ, ಒಳ್ಳೆಯ ಸಾಧನೆ ಮಾಡಲು ಒಳ್ಳೆಯ ಹೆಸರು ಗಳಿಸಲು ತುಂಬಾ ಶ್ರಮ ಅಗತ್ಯ. ಆದರೆ ಸಾಧನೆಯನ್ನು ಮಣ್ಣುಪಾಲು ಮಾಡಲು, ಹೆಸರು ಕೆಡಿಸಿಕೊಳ್ಳಲು ನಿಮಿಷ ಸಾಕು. ಇದೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತಿನ ಅರ್ಥ.

Kumbaranige Varusha Donnege Nimisha Gade Mathu Vistarane in Kannada

ಕುಂಬಾರ ಎಂದರೆ ಮಡಿಕೆ ಮಾಡುವವ. ಆಟ ಮಣ್ಣು ಹದಮಾಡಿ ಕಲಸಿ, ಮಡಿಕೆ ಮಾಡಲುವರುಷ ಬೇಕಾಗುತ್ತದೆ. ಆದರೆ ಅದನ್ನು ಹಾಲುಗೆಡವಲು ನಿಮಿಷ ಸಾಕು. ಪಾತರಗಿತ್ತಿ ಹೂಗಳಿಂದ ಹೂಗಳಿಗೆ ಹಾರಿ ಮಕರಂದ ಹೀರಿ ಸಂಗ್ರಹಿಸಲು ದಿನವಿಡೀ ಬೇಕಾಗುತ್ತದೆ. ಅದನ್ನು ಕಿತ್ತೆಸೆಯಲು ನಿಮಿಷ ಸಾಕು.

ಒಳ್ಳೆಯ ಜನ ಎನಿಸಲು ಅನೇಕ ಒಳ್ಳೆಯ ಕಾರ್ಯ ಮಾಡಬೇಕು. ಆ ಖ್ಯಾತಿ ಅಳಿಸಲು ಜೀವನದಲ್ಲಿ ನಡೆದ ಯಾವುದೋ ಘಟನೆ ಸಾಕು. ಇದರಿಂದ ತಿಳಿಯುವುದೇನೆಂದರೆ ಕಟ್ಟುವುದು ಸುಲಭದ ಕಾರ್ಯವಲ್ಲ. ಆದರೆ ಹಾಳುಗೆಡವುದು ಅತಿ ಸುಲಭ. ಈ ಗಾದೆಯ ಅರ್ಥ ಬಹು ವಿಸ್ತಾರವಾಗಿದೆ.

ಗಾದೆ ವಿಸ್ತರಣೆ: ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ | Gade Vistarane – Kumbaranige Varusha Donnege Nimisha

ಯೋಗ್ಯವಾದ ಮಣ್ಣನ್ನು ತಂದು, ಹರಳುಗಳಿಂದ ಬೇರ್ಪಡಿಸಿ, ಹದಮಾಡಿ, ತಿಗರಿಗೆ ಹಾಕಿ, ಅನೇಕ ಆಕಾರಗಳಲ್ಲಿ ಪಾತ್ರೆಗಳನ್ನು ಮಾಡಿ ಚೆನ್ನಾಗಿ ಬೇಯಿಸಿ, ಜಾತ್ರೆಗೋ ಸಂತೆಗೋ ಒಯ್ಯಲು ಅನೇಕ ದಿನಗಳ ಕಾಲ ಅವುಗಳನ್ನು ಕುಂಬಾರನು ತಯಾರಿಸುತ್ತಾನೆ. 

ಯಾರೋ ದುಷ್ಟ ಕುಂಬಾರನು ಏಳಿಗೆ ಸಹಿಸದೆ ಅವನು ಹೊರಗೆ ಹೋದಾಗ ನಿಮಿಷದೊಳಗೆ ದೊಣ್ಣೆಯಿಂದ ಹೊಡೆದು ಮಡಿಕೆಗಳನ್ನು ನಾಶಗೊಳಿಸಬಹುದು. 

ಇದರರ್ಥ ಒಳ್ಳೆಯ ಕಾರ್ಯಗಳನ್ನು ಮಾಡುವುದು ಅನೇಕ ಸಮಯ ಹಿಡಿಯುತ್ತದೆ. ಕೆಡಿಸುವುದಕ್ಕೆ ನಿಮಿಷ ಸಾಕು. ಮನುಷ್ಯ ಒಳ್ಳೆಯವನೆನೆಸಿಕೊಳ್ಳಲು ಜೀವಮಾನವಿಡಿ ಹೆಣಗಬೇಕು. ಅದೇ ಕೆಟ್ಟವನೆನೆಸಿಕೊಳ್ಳಲು ಕ್ಷಣ ಸಾಕು. 

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ಸಂದೇಶ |  Kumbaranige Varusha Donnege Nimisha Gaade Maathina Sandesha

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವುದು ಪ್ರಸಿದ್ದವಾದ ಗಾದೆ ಮಾತಾಗಿದೆ. ನಮಗೆಲ್ಲ ಗೊತ್ತಿರುವಂತೆ ಮಡಿಕೆ ಮಾಡುವುದು ಸುಲಭವಾದ ಕೆಲಸವಲ್ಲ. ಅನೇಕ ಸಮಯ ಮತ್ತು ಶ್ರಮದ ಅಗತ್ಯವಿರುತ್ತದೆ. ಹೀಗೆ ತಯಾರಾದ ಮಡಿಕೆಯನ್ನು ಹಾಳು ಮಾಡುವುದು ಅತೀ ಸುಲಭದ ಕೆಲಸ. ದೊಣ್ಣೆಯಿಂದ ಒಂದು ಪೆಟ್ಟು ಕೊಟ್ಟರೆ ಸಾಕು, ಮಡಿಕೆಯು ಪುಡಿಪುಡಿಯಾಗುತ್ತದೆ.

ಈ ಗಾದೆಮಾತಿನ ತಾತ್ಪರ್ಯ ತಿಳಿಯುವುದಾದರೆ ನಾವು ಜೀವನದಲ್ಲಿ ಹಣ, ಹೆಸರು ಗಳಿಸುವುದು ತುಂಬಾ ಕಷ್ಟ. ಆದರೆ ಗಳಿಸಿದ್ದನ್ನು ಅಳಿಸುವುದು ಬಹಳ ಸುಲಭ. 

ಕಷ್ಟಪಟ್ಟು ದುಡಿದು ಹೆಸರು, ಹಣ ಎಲ್ಲವನ್ನು ಸಂಪಾದಿಸಲು ಜೀವನದಲ್ಲಿ ಸದಾ ಪ್ರಯತ್ನಿಸುತ್ತೇವೆ.. ಹಗಲಿರುಳೆನ್ನದೆ ಕಷ್ಟಪಟ್ಟು ಅಂದುಕೊಂಡ ಗುರಿಯನ್ನು ತಲುಪುತ್ತೇವೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಮಾಡುವ  ತಪ್ಪು ನಿರ್ಧಾರದಿಂದ ಜೀವನದಲ್ಲಿ ಗಳಿಸಿದ ಹಣ, ಯಶಸ್ಸು, ಹೆಸರು ಎಲ್ಲವೂ ಕ್ಷಣಮಾತ್ರದಲ್ಲಿ ಹಾಳಾಗುತ್ತದೆ. 

ಜೀವನದಲ್ಲಿ ಒಳ್ಳೆಯವನೆಂದು ಎಲ್ಲರಿಂದ ಕರೆಸಿಕೊಳ್ಳಲು ತುಂಬಾ ಕಠಿಣ. ಆದರೆ ಕೆಟ್ಟವನೆಂದೆಸಿಕೊಳ್ಳಲು ಕೇವಲ ಒಂದು ಕ್ಷಣ ಸಾಕು. ಇದೆ ಈ ಗಾದೆಯ ಅರ್ಥವಾಗಿದೆ. 


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.