Kuvempu Books in Kannada with Links (ಕುವೆಂಪು ಪುಸ್ತಕಗಳು)

Kuvempu Books in Kannada with Links

ಕುವೆಂಪು ಅವರ ಪುಸ್ತಕಗಳನ್ನು (kuvempu books in kannada) ಹುಡುಕುತ್ತಿದ್ದೀರಾ? ಕುವೆಂಪು ಅವರು ಬರೆದ ನಾಟಕ, ಕೃತಿ, ಕಾದಂಬರಿ, ಕವಿತೆ, ಇತರ ಸಂಗ್ರಹಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವೇ? ಹಾಗಿದ್ದರೆ ಈ ಲೇಖನ ನಿಮಗಾಗಿ. 

ಈ ಲೇಖನದಲ್ಲಿ ನಾವು ರಾಷ್ಟ್ರಕವಿ ಕುವೆಂಪು ಅವರ ಎಲ್ಲಾ ಪುಸ್ತಕಗಳನ್ನು (kuvempu famous books in kannada) ಅವುಗಳನ್ನು ಖರೀದಿಸುವ ಲಿಂಕ್ ನ ಜೊತೆ ನೀಡಿದ್ದೇವೆ. ಅವರ ಅದ್ಭುತ ಪುಸ್ತಕಗಳ ಬಗ್ಗೆ ತಿಳಿದುಕೊಳ್ಳಿ, ಪುಸ್ತಕಗಳನ್ನು ಕೊಳ್ಳಿರಿ ಹಾಗೂ ಓದಲು ಮರೆಯದಿರಿ.

ಕುವೆಂಪು ಎಂಬ ಕಾವ್ಯನಾಮದಿಂದ ಕರೆಯಲ್ಪಡುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಗೌರವಾನ್ವಿತ ಬರಹಗಾರ ಮತ್ತು ಕವಿ. ಅವರ ಸರಳತೆ ಮತ್ತು ಆಳವಾದ ವಿಷಯಗಳಿಂದ ನಿರೂಪಿಸಲ್ಪಟ್ಟ ಅವರ ಬರಹಗಳು ತಲೆಮಾರುಗಳಾದ್ಯಂತ ಓದುಗರನ್ನು ಆಕರ್ಷಿಸಿವೆ. ಈ ಲೇಖನದಲ್ಲಿ ನಾವು ಕುವೆಂಪು ಅವರ ಕಾದಂಬರಿಗಳ ವಿಸ್ತಾರವಾದ ಪಟ್ಟಿಯನ್ನು ಪ್ರಸ್ತುತಪಡಿಸುತ್ತೇವೆ, ಅವರು ಬಿಟ್ಟುಹೋದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಅನ್ವೇಷಿಸಲು ನಿಮಗೆ ಆಹ್ವಾನವನ್ನು ನೀಡುತ್ತೇವೆ. ನೀವು ಅತ್ಯಾಸಕ್ತಿಯ ಓದುಗರಾಗಿರಲಿ ಅಥವಾ ನಿಮ್ಮ ಸಾಹಿತ್ಯದ ಅನ್ವೇಷಣೆಯನ್ನು ಪ್ರಾರಂಭಿಸುತ್ತಿರಲಿ, ಈ ಪುಸ್ತಕಗಳು ಕುವೆಂಪು ಅವರ ಸಾಹಿತ್ಯ ಪ್ರಪಂಚಕ್ಕೆ ದಾರಿದೀಪವಾಗಿದೆ. ಈ ಉತ್ತಮ ಸಂಗ್ರಹದ (kuvempu books list in kannada) ಮೂಲಕ ಕುವೆಂಪು ಅವರ ಬರಹಗಳ ಶ್ರೀಮಂತ ಮತ್ತು ಸ್ಪೂರ್ತಿದಾಯಕ ಕ್ಷೇತ್ರವನ್ನು ಪರಿಶೀಲಿಸುವ ಪ್ರಯಾಣವನ್ನು ಪ್ರಾರಂಭಿಸೋಣ.

Table of Contents

All Kuvempu Books in Kannada with Links | ಕುವೆಂಪು ಅವರ ಪುಸ್ತಕಗಳು

ಮಲೆಗಳಲ್ಲಿ ಮದುಮಗಳು

ಪ್ರಕಟಿತವಾದ ವರ್ಷ: 1967

ಮಲೆಗಲಲ್ಲಿ ಮದುಮಗಳು ನಿಜಕ್ಕೂ ಅದ್ಭುತವಾದ ಕಾದಂಬರಿ ಮತ್ತು ಓದಲು ಇಷ್ಟಪಡುವ ಪ್ರತಿಯೊಬ್ಬರೂ ಓದಲೇಬೇಕಾದ ಕಾದಂಬರಿ. ಕುವೆಂಪು ಅವರು ಪ್ರತಿಯೊಂದನ್ನೂ ಚಿತ್ರಿಸಿದ ರೀತಿ ಸರಳವಾಗಿ ಅದ್ಭುತವಾಗಿದೆ. ಓದುಗನಿಗೆ ತಾನು ನಿಜವಾಗಿ ಕಥೆ ನಡೆಯುವ ಸ್ಥಳದಲ್ಲಿ ಇದ್ದಂತೆ ಭಾಸವಾಗುತ್ತದೆ. ಮಳೆಯ ಗಾಳಿ, ಗಿರಿಧಾಮಗಳ ತಂಪಾದ ವಾತಾವರಣವನ್ನು ಓದುವವರು ಅನುಭವಿಸುತ್ತಾರೆ. ಒಟ್ಟಾರೆಯಾಗಿ ಈ ಕಾದಂಬರಿ ನಿಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ. 

ಕುವೆಂಪು ಅವರು ಪ್ರತಿ ಪಾತ್ರದ ಜೀವನದ ಕಥೆಯನ್ನು ಚಿತ್ರಿಸಿದ ಮತ್ತು ಎತ್ತರಿಸಿದ ರೀತಿ ಸರಳವಾಗಿ ಅದ್ಭುತವಾಗಿದೆ. ನಯೀ ಗುತ್ತಿ, ಹುಲಿಯ, ಚಿನ್ನಮ್ಮ, ನಾಗಕ್ಕ, ಧರ್ಮು, ಮುಕ್ಕುಂದಯ್ಯ, ಸಾಬರು, ಗಡ್ಡದಯ್ಯ ಈ ಪಾತ್ರಗಳ ನಿರೂಪಣೆ ಓದುವವರ ಹೃದಯ ಕಡಿಯುತ್ತದೆ. ಈ ಪುಸ್ತಕವು 710+ ಪುಟಗಳನ್ನು ಹೊಂದಿದ್ದರೂ, ಇದನ್ನು ಓದುವಾಗ ನೀವು ಬೇಸರಗೊಳ್ಳುವುದಿಲ್ಲ.

ನೆನಪಿನ ದೋಣಿಯಲ್ಲಿ

ಪ್ರಕಟಿತವಾದ ವರ್ಷ: 1980

ನೆನಪಿನ ದೋಣಿಯಲ್ಲಿ ಇದು ಕುವೆಂಪು ಅವರ ಆತ್ಮಚರಿತ್ರೆಯಾಗಿದೆ. ಕವಿಯು ಈ ಪುಸ್ತಕದ ಮೊದಲನೆಯ ಪುಟದಲ್ಲಿ “ತೇಲಿ ಸಾಗಲಿ ಆ ಹೊಳೆಯಲ್ಲಿ ನಮ್ಮ ನೆನಪಿನ ದೋಣಿ!, ಇಲ್ಲದೆ ಚುಕ್ಕಾಣಿ, ನೆನಪಿನ ದೋಣಿ, ತೇಲಿ ತೇಲಿ ತೇಲಿ, ಅಲೆ ಅಲೆ ಅಲೆ ಕೇಲಿ, ಅಲೆಯುತ್ತಿದೆ ಪೋಲಿ!” ಎಂದು ಬರೆಯುತ್ತಾರೆ. 

ಸುಮಾರು 1284 ಪುಟಗಳಿರುವ ಈ ಪುಸ್ತಕವು ಕುವೆಂಪು ಅವರ ಜೀವನ ಚರಿತ್ರೆ ಓದಲು ಇಷ್ಟಪಡುವವರಿಗೆ ಉತ್ತಮ ಪುಸ್ತಕ.

ಬೆರಳ್‍ಗೆ ಕೊರಳ್

ಪ್ರಕಟಿತವಾದ ವರ್ಷ: 1947

ನಾಟಕ ಬೆರಳ್‍ಗೆ ಕೊರಳ್ ನಾಟಕ ಕೃತಿಯಲ್ಲಿ ಗುರು, ಕರ್ಮ ಮತ್ತು ಯಜ್ಞ ಎಂಬ ಮೂರು ದೃಶ್ಯಗಳಿವೆ. ಏಕಲವ್ಯ, ಅಬ್ಬೆ, ಅಶ್ವತ್ಥಾಮ ಹಾಗೂ ದ್ರೋಣಾಚಾರ್ಯರ ಪಾತ್ರಗಳನ್ನು ಹೊಂದಿರುವಂತಹ ಈ ನಾಟಕದ ನಿರೂಪಣೆಯು ಮಹಾಭಾರತದಲ್ಲಿ ಬರುವ ಏಕಲವ್ಯನ ಕಥಾನಕವನ್ನು ವಿವರಿಸುತ್ತದೆ. ಬಿಲ್ವಿದ್ಯೆಯಲ್ಲಿ ತನ್ನ ಗುರುವಾದ ದ್ರೋಣಾಚಾರ್ಯರು ಶಬ್ದವೇದಿ ವಿದ್ಯೆಯಲ್ಲಿ ಸಹ ಪ್ರಾವೀಣ್ಯವನ್ನು ಪಡೆದ ಸಂದರ್ಭದಲ್ಲಿ ಗುರು ದಕ್ಷಿಣೆಯಾಗಿ ಏಕಲವ್ಯನ ಹೆಬ್ಬೆರಳನ್ನು ಕೇಳುವ ಕಥಾನಕವನ್ನು ಅತ್ಯಂತ ಸ್ವಾರಸ್ಯಕರವಾಗಿ ಈ ಪುಸ್ತಕದಲ್ಲಿ ವರ್ಣಿಸಲಾಗಿದೆ. 

ಗುರುವಿಗಾಗಿ ಏನನ್ನಾದರೂ ಮಾಡಲು ಸಿದ್ಧನಿದ್ಧ ಏಕಲವ್ಯನ ನಿಷ್ಟೆಯನ್ನು ಈ ನಾಟಕದಲ್ಲಿ ನೋಡಬಹುದು. ಇದರಲ್ಲಿನ ಅನೇಕ ದೃಶ್ಯಗಳು ಅತ್ಯಂತ ಭಾವುಕತೆಯಿಂದ ಕೂಡಿದ್ದು ಓದುಗರಲ್ಲಿ ಕುತೂಹಲವನ್ನು ಉಂಟು ಮಾಡುತ್ತದೆ.

ಕಾನೂರು ಹೆಗ್ಗಡಿತಿ

ಪ್ರಕಟಿತವಾದ ವರ್ಷ: 1936

ಕಾನೂರು ಹೆಗ್ಗಡಿತಿ ಕೃತಿಯು ಮಾಯವಾಗುತ್ತಿರುವ ಜಗತ್ತನ್ನು ದಾಖಲಿಸುವ ಆಧುನಿಕ ಕಾದಂಬರಿಯ ಹೆಗ್ಗುರುತಾಗಿದೆ. ಸ್ವಾತಂತ್ರ್ಯ ಪೂರ್ವ ಭಾರತದ ಸಮಯದ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನಲೆಯನ್ನು ಈ ಕಾದಂಬರಿಯು ಓದುಗರಿಗೆ ತಿಳಿಸಿಕೊಡುತ್ತದೆ. ಈ ಕಾದಂಬರಿಯನ್ನು ಆಧರಿಸಿದ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಕನ್ನಡ ಚಲನಚಿತ್ರ ಕಾನೂರು ಹೆಗ್ಗಡಿತಿ 1999 ರಲ್ಲಿ ಬಿಡುಗಡೆಯಾಗಿದೆ.

ಈ ಕಾದಂಬರಿಯು ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಪರಿಸರದ ಪ್ರದೇಶವನ್ನು ಒಳಗೊಂಡಿದೆ. ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಲೋಕ ಸೃಷ್ಟಿಸುತ್ತದೆ. ಕುವೆಂಪು ಅವರ ಅದ್ಭುತ ಕಲ್ಪನೆ, ಒಳನೋಟ, ಪ್ರೀತಿ ಇದೆಲ್ಲದರ ಮಿಶ್ರಣ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ಬಂದಷ್ಟು ನೈಜತೆ ಮತ್ತು ಖುಷಿ ಕೊಡುತ್ತದೆ.

ಶೂದ್ರ ತಪಸ್ವಿ

ಪ್ರಕಟಿತವಾದ ವರ್ಷ: 1944

ಕುವೆಂಪುರವರ ಪ್ರಸಿದ್ಧ ನಾಟಕ ಕೃತಿಗಳಲ್ಲಿ ಒಂದಾದ ಶೂದ್ರ ತಪಸ್ವಿಯ ಮೂಲ ರಾಮಾಯಣದ ಕಥೆಯಾಗಿದ್ದರೂ ಅಲ್ಪ ಸ್ವಲ್ಪ ಬದಲಾವಣೆಗಳನ್ನು ನಾವು ಕಾಣಬಹುದು. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸಬೇಕೆಂಬುದನ್ನು ಸಾರುವ ಈ ನಾಟಕವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿದೆ ಮತ್ತು ಕೆಳವರ್ಗದ ಜನರ ಆತ್ಮಸ್ಥೈರ್ಯವಾಗಿದೆ.

ನನ್ನ ದೇವರು ಮತ್ತು ಇತರ ಕಥೆಗಳು

ಪ್ರಕಟಿತವಾದ ವರ್ಷ: 1940

ಒಟ್ಟು ಎಂಟು ಸಣ್ಣ ಕಥೆಗಳಿಂದ ಕೂಡಿರುವ ಈ ಕೃತಿಯು ಅಳತೆ ಮೀರಿದ ಔದಾರ್ಯವನ್ನು ಯಾರಿಗೂ ತೋರಿದರೆ ಅದು ನಮಗೆ ಉರುಳಾಗುವ ಸಾಧ್ಯತೆ ಜಾಸ್ತಿ ಎಂದು ತಿಳಿಸಿ ಹೇಳುತ್ತದೆ

ಸಂವೇದನಾಶೀಲತೆಯನ್ನು ಕಳೆದುಕೊಂಡ ಸಮಾಜದ ಅಧಃಪತನವನ್ನು ತೋರಿಸುವ ಈ ಕಥೆ ಇಂದಿಗೂ ಪ್ರಸ್ತುತವಾಗಿದ್ದು ಮತ್ತು ಲೇಖಕರ ಕಾಲಘಟ್ಟಕ್ಕೂ ಇಂದಿನ ಜಗತ್ತಿಗೂ ಅದು ಸರಿಹೊಂದುತ್ತಿರುವುದು ವಿಪರ್ಯಾಸ. 

ಪ್ರತಿ ಕುಟುಂಬದಲ್ಲಿನ ಕಷ್ಟ ಸುಖಗಳ ಕುರಿತಾಗಿ ಸ್ವಾರಸ್ಯಕರವಾಗಿ ಬರೆದಿರುವ ಕುವೆಂಪು ಅವರು ಸಂಸಾರದಲ್ಲಿರುವ ವ್ಯಕ್ತಿಗಳ ನಡುವಿರುವ ಸಂಬಂಧಗಳ ಭಾವನೆಯನ್ನು ಅಚ್ಚುಕಟ್ಟಾಗಿ  ವರ್ಣಿಸಿದ್ದಾರೆ. ಇತರ ಕೃತಿಗಳಂತೆ ಈ ಕೃತಿಯಲ್ಲೂ ಸಹ ಕುವೆಂಪು ಅವರ ಪ್ರಕೃತಿಯ ಅದ್ಭುತ ವಿವರಣೆಯನ್ನು ನೀವು ಈ ಕೃತಿಯಲ್ಲಿ ಕಾಣಬಹುದು.

ಮಲೆನಾಡಿನ ಚಿತ್ರಗಳು

ಪ್ರಕಟಿತವಾದ ವರ್ಷ: 1933

ಮಲೆನಾಡಿನ ಸೊಬಗನ್ನು ಮತ್ತು ಸೌಂದರ್ಯವನ್ನು ಚಿತ್ರಿಸುವ ಈ ಕೃತಿಯು ಕುವೆಂಪು ಅವರ ಬಾಲ್ಯದ ಅನುಭವಗಳನ್ನು ಸಹ ಒಳಗೊಂಡಿವೆ. ರಮ್ಯ-ಭೀಕರ ದೃಶ್ಯಗಳನ್ನು ಕಣ್ಮುಂದೆ ತರುವ ಅವರ ಬರಹವು ಮಲೆನಾಡಿನ ಮಡಿಲಲ್ಲಿ ಇದ್ದ ಕುಪ್ಪಳಿ ಮನೆ, ಕವಿಶೈಲ, ನವಿಲುಕಲ್ಲು, ಮನೆಯ ದಕ್ಷಿಣಕ್ಕಿರುವ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗದಲ್ಲಿರುವ ಬೆಟ್ಟ ಹಾಗೂ ಪೂರ್ವಕ್ಕೆ ಹರಡಿ ನಿಂತಿರುವ ಅಡಿಕೆ ತೋಟಗಳ ವರ್ಣನೆಯನ್ನು ಅದ್ಭುತವಾಗಿ ಮಾಡಿದ್ದಾರೆ. ಪ್ರಕೃತಿ ಪ್ರೇಮಿಗಳಿಗೆ ಇದೊಂದು ಅತ್ಯುತ್ತಮ ಕೃತಿ ಎಂದರೆ ತಪ್ಪಿಲ್ಲ.

ಜಲಗಾರ

ಪ್ರಕಟಿತವಾದ ವರ್ಷ: 1931

1931ರಲ್ಲಿ ಮೊದಲ ಮುದ್ರಣ ಕಂಡ ಜಲಗಾರ ಕೃತಿಯು ಸಾಮಾಜಿಕ ನಾಟಕದಂತಿದ್ದರೂ, ಅದರಲ್ಲಿ ಒಂದು ಪುರಾಣದ ಸೃಷ್ಟಿ ಇದೆ. ಪುರೋಹಿತಶಾಹಿ ಮತ್ತು ಅಸ್ಪೃಶ್ಯತೆ ಆಚರಣೆಯನ್ನು ಖಂಡಿಸುವ ಈ ಕನ್ನಡದ ಪ್ರಥಮ ನಾಟಕದಲ್ಲಿ ವೈದಿಕರು, ರೈತ, ಭಿಕ್ಷುಕ ಮತ್ತು ಜಲಗಾರ ಎಂದರೆ ಪೌರಕಾರ್ಮಿಕರ ಪಾತ್ರಗಳನ್ನು ಮುಖ್ಯವಾಗಿ ಚಿತ್ರಿಸಲಾಗಿದೆ. ಇದರಲ್ಲಿನ ಜಲಗಾರನ ಪಾತ್ರವು ಕಾಯಕದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಇಷ್ಟೇ ಅಲ್ಲದೆ ಕುವೆಂಪು ಅವರು ಈ ನಾಟಕದಲ್ಲಿ ವೈದಿಕರ ಢಂಬಾಚಾರವನ್ನು ಬಹಿರಂಗಪಡಿಸುತ್ತಾರೆ. 

ಇನ್ನೊಂದು ಮಹತ್ವದ ಅಂಶವೆಂದರೆ ಜಲಗಾರ ಕೃತಿಯನ್ನು ಕುವೆಂಪುರವರು ತಮ್ಮ ಕೇವಲ 24 ನೇ ವಯಸ್ಸಿನಲ್ಲಿ ರಚಿಸಿದ್ದರು ಎಂಬುದು. ಕಿರಿಯ ವಯಸ್ಸಿನಲ್ಲೇ ಅವರ ಆಲೋಚನಾ ಶಕ್ತಿ ಮತ್ತು ಬರವಣಿಗೆ ಹೇಗಿತ್ತೆಂದು ಈ ನಾಟಕ ಓದಿದರೆ ಅರ್ಥವಾಗುತ್ತದೆ. 

ಜನಪ್ರಿಯ ವಾಲ್ಮೀಕಿ ರಾಮಾಯಣ

ಜನಪ್ರಿಯ ವಾಲ್ಮೀಕಿ ರಾಮಾಯಣ ಕೃತಿಯು ಗದ್ಯರೂಪದಲ್ಲಿರುವ ವಾಲ್ಮೀಕಿ ರಾಮಾಯಣದ ಕುವೆಂಪು ಅವರ ಅನುವಾದ. ಈ ಕೃತಿಯಲ್ಲಿನ ಪಾತ್ರಗಳ ಸೃಷ್ಟಿ, ಅರಣ್ಯಕಾಂಡದಲ್ಲಿ ವಿವಿಧ ವೃಕ್ಷ, ಹೂಬಳ್ಳಿ ಸಸ್ಯಗಳ ವರ್ಣನೆ ಅದ್ಭುತವಾಗಿದೆ. ಮೂಲ ಕೃತಿಯ ನಂತರ ಬಂದ ರಾಮಾಯಣ ಕೃತಿಗಳಲ್ಲಿ ಅನೇಕ ಬದಲಾವಣೆಗಳಿವೆ. 

ಹಾಗೆಯೇ ಜನಪ್ರಿಯ ವಾಲ್ಮೀಕಿ ರಾಮಾಯಣ ಕೃತಿಯಲ್ಲಿ ರಾಮನ ಪಟ್ಟಾಭಿಷೇಕದೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಬಹುತೇಕ ರಾಮಾಯಣ ಚಿತ್ರ, ಪುಸ್ತಕ, ನಾಟಕಗಳಲ್ಲಿ ಕಾಣಸಿಗುವ ಸೀತಾ ವನವಾಸ, ಲವ-ಕುಶರ ಜನನ, ಅಶ್ವಮೇಧಗಳೆಲ್ಲಾ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುವುದಿಲ್ಲ.

ಜೇನಾಗುವ

ಪ್ರಕಟಿತವಾದ ವರ್ಷ: 1964

1964 ರಲ್ಲಿ ಮೊದಲ ಮುದ್ರಣ ಕಂಡ ಕುವೆಂಪುರವರ ಜೇನಾಗುವ ಕಾವ್ಯ ಕೃತಿಯು ಸುಮಾರು 81 ಪೂತಳನ್ನು ಹೊಂದಿದೆ. 

ಇಲ್ಲಿನ ಕವಿತೆಗಳ ವಸ್ತು ಪ್ರೀತಿ, ವಾತ್ಸಲ್ಯ ಮತ್ತು ವಿರಹ. ಕುವೆಂಪು ಅವರು ಈ ಕೃತಿಯಲ್ಲಿ ತನ್ನ ಜೀವನದ ಮುಖ್ಯ ಘಟ್ಟಗಳ ನೋವು ನಲಿವನ್ನು ಅದ್ಭುತವಾದ ಕಾವ್ಯದಿಂದ ವರ್ಣಿಸಿದ್ದಾರೆ. ಮದುವೆಯ ಆರಂಭದ ದಿನಗಳು, ಮೊದಲನೆಯ ಮಗುವಿನ ಸುದ್ದಿಯ ಖುಷಿ, ಮಗುವಿನ ಕಾಯುವಿಕೆ, ಮಗುವಿನ ಬೆಳವಣಿಗೆ, ಮಗು ಅಮ್ಮಳ ಜೊತೆ ಅಜ್ಜಿಯ ಮನೆಗೆ ಹೋದಾಗ ಕವಿ ಅನುಭವಿಸಿದ ವಿರಹ ಎಲ್ಲವೂ ಕಾವ್ಯ ರೂಪದಲ್ಲಿ ಮೂಡಿಬಂದಿದೆ. 

ಇಲ್ಲಿ ತುಂಟತನವಿದೆ, ತಂದೆಯ ಪ್ರೀತಿಯಿದೆ, ಹಸುಗೂಸಿನ ಚೆಲುವಿದೆ, ಮಗುವಿನ ಜೊತೆಗೆ ತಂದೆಯು ಬೆಳೆಯುವ ಕ್ರಿಯೆವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಕ್ರೂರ ಬೆಳವಣಿಗೆಗೆ ವಕ್ರವಿನೋದದ ಪ್ರತ್ಯುತ್ತರವೂ ಇದೆ. ಮಗುವಿನ ಜೊತೆಗೆ ತಂದೆ ಬೆಳೆಯುವುದನ್ನು ಕುವೆಂಪು ಅವರು ಈ ಪುಸ್ತಕದಲ್ಲಿ ಮನೋಹರವಾಗಿ ವರ್ಣಿಸಿದ್ದಾರೆ.

ಕಾವ್ಯವಿಹಾರ

ಪ್ರಕಟಿತವಾದ ವರ್ಷ: 1946

1946ರಲ್ಲಿ ತೆರೆಕಂಡ ಕುವೆಂಪು ಅವರ ಕಾವ್ಯವಿಹಾರವು ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಇದರಲ್ಲಿಮೂರು ವಿಮರ್ಶಾ ಲೇಖನಗಳಿದ್ದು, ’ಕಾವ್ಯವಿಹಾರ’ದಲ್ಲಿ ಲಕ್ಷ್ಮೀಶನ ಸೀತಾವನವಾಸ, ಕುಮಾರವ್ಯಾಸನ ದುರಂತಕರ್ಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ ಎಂಬ ಲೇಖನಗಳಿವೆ.

ನನ್ನ ಗೋಪಾಲ

ನೀವು ಮಕ್ಕಳ ನಾಟಕಗಳ ಉತ್ತಮ ಪುಸ್ತಕಕ್ಕಾಗಿ ಹುಡುಕುತ್ತಿದ್ದಾರೆ ಇದೊಂದು ಅತ್ಯುತ್ತಮ ಆಯ್ಕೆ ಆಗಿದೆ. “ನನ್ನ ಗೋಪಾಲ” ಇದು ಕುವೆಂಪುರವರ ಪ್ರಸಿದ್ಧ ಮಕ್ಕಳ ನಾಟಕಗಳ ಪುಸ್ತಕವಾಗಿದ್ದು ಅದರಲ್ಲಿನ ವಸ್ತು ವಿಚಾರವು ಇಂದಿಗೂ ಪ್ರಸ್ತುತವಾಗಿದೆ. 

ನನ್ನ ಗೋಪಾಲದಲ್ಲಿ ಚಿಕ್ಕ ಮಗು ನಂಬಿಕೆಯಿಂದ ದೇವರನ್ನು ಕರೆದಾಗ ಆ ಕೃಷ್ಣ ಪರಮಾತ್ಮನೇ ಧರೆಗಿಳಿದು ಬರುತ್ತಾನೆ. ಕೊನೆಯಲ್ಲಿ ಗುರುಗಳಿಗೆ ಕಾಣಿಸಿಕೊಂಡರೂ ಕೃಷ್ಣ ಮಗುವಿನೆಡೆಗೆ ತನ್ನ ಒಡನಾಟವನ್ನು ಬೆಳೆಸಿಕೊಳ್ಳುತ್ತಾನೆ. ಇದು ಕವಿಯ ಅರ್ಥಪೂರ್ಣ ಮತ್ತು ಸೊಗಸಾದ ಪರಿಕಲ್ಪನೆಯಾಗಿದೆ.

ಶ್ರೀ ರಾಮಾಯಣ ದರ್ಶನಂ

ಶ್ರೀ ರಾಮಾಯಣ ದರ್ಶನಂ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಕುವೆಂಪು ಅವರ ಅತ್ಯಂತ ಜನಪ್ರಿಯ ಮತ್ತು ಶ್ರೇಷ್ಠ ಕೃತಿಯಾಗಿದೆ. ಇದು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ತಂದುಕೊಟ್ಟಿತು.

ವಾಲ್ಮೀಕಿಯ ರಾಮಾಯಣದಲ್ಲಿ ರಾಮನ ಪ್ರಸಿದ್ಧ ಕಥೆಯು ಕವಿಯ ದೃಷ್ಟಿಯಲ್ಲಿ ರೂಪಾಂತರಗೊಂಡಿದೆ. ಕುವೆಂಪು ಅವರ ಈ ಶ್ರೇಷ್ಠ ಕೃತಿ ಬರೆಯಲು ಒಂಬತ್ತು ವರ್ಷಗಳು ತೆಗೆದುಕೊಂಡಿತ್ತು.

ಕಥಾ ಹಂದರಕ್ಕೆ ಬರುವುದಾದರೆ, ಕವಿ ಕುವೆಂಪು ಅವರ ರಾಮಾಯಣದ ದೃಷ್ಟಿಕೋನವು ಮೂರೂ ದೇಶಗಳ ರಾಮಾಯಣ ಕಥೆಯ ಸಂಗಮದಂತೆ ತೋರುತ್ತದೆ. ಆದರೆ ಇದರಲ್ಲಿ ರಾಮನನ್ನು ಅತಿಮಾನುಷ ಶಕ್ತಿ ಅಥವಾ ಅತಿಮಾನುಷ ಗುಣಗಳಿಂದ ತೋರಿಸಲಾಗಿಲ್ಲ. ಬದಲಾಗಿ ರಾಮನನ್ನು ರಾಜ್ಯದ ಕಿರೀಟ ರಾಜಕುಮಾರ ಎಂದು ತೋರಿಸಲಾಗಿದೆ. ಇಲ್ಲಿ ನಾಟಕವನ್ನು ಗೆಲ್ಲುವುದು ದೈವತ್ವವಲ್ಲ, ರಾಮನು ವಿಧೇಯ ಪುತ್ರ, ಪರಿಶುದ್ಧ ಸೀತೆ, ಭರತನ ರೂಪದಲ್ಲಿನ ಕರ್ತವ್ಯನಿಷ್ಠ ಸಹೋದರ ಇತ್ಯಾದಿ ದೈವಿಕ ಗುಣಗಳು. ಒಬ್ಬನು ನಿಜವಾಗಿಯೂ ಶ್ರೇಷ್ಠ ಜೀವನವನ್ನು ಹೇಗೆ ನಡೆಸಬಹುದು ಮತ್ತು ಉದಾಹರಣೆಯಿಂದ ಮುನ್ನಡೆಸಬಹುದು ಎಂಬುದನ್ನೂ ಈ ಕೃತಿ ತೋರಿಸುತ್ತದೆ.

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

ಇಂದಿನ ಯುವ ಜನತೆಗೆ ಅಧ್ಯಾತ್ಮ, ವೈಜ್ಞಾನಿಕ ದೃಷ್ಟಿ, ಮತ್ತು ವಿಚಾರ ಬುದ್ಧಿಗಳನ್ನು ಪ್ರಚೋದಿಸುವ ಕುವೆಂಪು ಅವರ 4 ಪ್ರಬಂಧಗಳ ಸಂಕಲನವಾದ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಬೌದ್ಧಿಕ ಚಿಂತನೆಗಳಿಗೆ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ. ಯುವ ಪೀಳಿಗೆಗೆ ಅಗತ್ಯವಿರುವ ನಾಲ್ಕು ಚಿಂತನೆಗಳ ಕುರಿತು ವಿಚಾರ ಸಂಕಿರಣ ಎಂದರೆ ತಪ್ಪಲ್ಲ.

ಮಂತ್ರಾಕ್ಷತೆ

ಪ್ರಕಟಿತವಾದ ವರ್ಷ: 1966

1966ರಲ್ಲಿ ಮೊದಲ ಮುದ್ರಣ ಕಂಡ ಮಂತ್ರಾಕ್ಷತೆ ವಿರಚಿತ ಕವನಗಳ ಸಂಕಲನವು ಭಕ್ತನ ಭಾಷೆಯಲ್ಲೇ ದೇವರಿಗೆ ಏಕೆ ಪೂಜಿಸಬಾರದು? ಕನ್ನಡದಲ್ಲೂ ಪೂಜೆ ಮಾಡುವುದಕ್ಕೆ ಸಾಧ್ಯ ಎಂಬುದನ್ನೂ ಒತ್ತಿ ಹೇಳುತ್ತದೆ.

ರಕ್ತಾಕ್ಷಿ

ಪ್ರಕಟಿತವಾದ ವರ್ಷ: 1932

ಷೇಕ್ಸ್ ಪಿಯರನ ಹ್ಯಾಮ್ಲಟ್ನ ನಾಟಕವನ್ನು ಮೂಲವಾಗಿರಿಸಿಕೊಂಡು ರಚಿಸಿದ ಈ ನಾಟಕ ಕೃತಿಯಲ್ಲಿ ಕುವೆಂಪುರವರು ಬಿದನೂರಿನ ಸಂಸ್ಠಾನದ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಷೇಕ್ಸ್ ಪಿಯರನ ಹ್ಯಾಮ್ಲಟ್ನಲ್ಲಿ ನಾಯಕ ಹ್ಯಾಮ್ಲ್ ಟ್ ಪ್ರಧಾನವಾಗಿದ್ದರೆ ಕುವೆಂಪು ಅವರ ರಕ್ತಾಕ್ಷಿಯಲ್ಲಿ ರುದ್ರಾಂಬೆಯ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮಹಾರಾತ್ರಿ

ಪ್ರಕಟಿತವಾದ ವರ್ಷ: 1931

1931ರಲ್ಲಿ ಮೊದಲ ಮುದ್ರಣಗೊಂಡ ಸಿದ್ದಾರ್ಥನು ಬುದ್ಧನಾಗಿ ಪರಿವರ್ತನೆಯಾಗಲು ಹೊರಟ ರಾತ್ರಿಯ ಕಥೆಯನ್ನು ಕುವೆಂಪು ಅವರು ಹತ್ತು ಅದ್ಭುತ ದೃಶ್ಯಗಳಲ್ಲಿ ವರ್ಣಿಸಿದ ನಾಟಕ ಇದಾಗಿದೆ.

ಇದರಲ್ಲಿ ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧ, ದುಃಖ ಖಿನ್ನತೆಗಳನ್ನು ದೈರ್ಯವಾಗಿ ಎದುರಿಸುವ ಪ್ರಸಂಗವನ್ನು ವಿವರಿಸಲಾಗಿದೆ. 

ಸಿದ್ದಾರ್ಥ ಬುದ್ದನಾಗಲು ಹೊರಟನೆಂಬ ಸುದ್ದಿಯನ್ನು ಜಗತ್ತಿನ ಉದ್ದಗಲಕ್ಕೂ ಸಾರಲು ಹೊರಟ ಕಿನ್ನರಿಗಳಿಂದ ಪ್ರಾರಂಭವಾಗುವ ಈ ನಾಟಕ ಸಿದ್ದಾರ್ಥನಿಗೆ ಹುಟ್ಟಿರುವ ಗಂಡು ಮಗುವಿನ ಶುಭ ಸಮಾಚಾರದೊಂದಿಗೆ ಮುಂದುವರೆಯುತ್ತದೆ. 

ಚಿತ್ರಾಂಗದ

ಕುವೆಂಪು ಅವರ ಮಹಾಭಾರತ ಆಧರಿತ ಕಿರುಕಾವ್ಯ ಚಿತ್ರಾಂಗದ. ವ್ಯಾಸಭಾರತದ ಮಹಾಸಾಗರದಲ್ಲಿ ಚಿತ್ರಾಂಗದೆಯ ಕಥೆ ಕೇವಲ ಸಾಸಿಮೆಯಷ್ಟಿದೆ. ಲಕ್ಷ್ಮೀಶನು ತನ್ನ ‘ಕನ್ನಡ ಜೈಮಿನಿ ಭಾರತ’ ದಲ್ಲಿ ಅರ್ಜುನ ಬಬ್ರುವಾಹನರ ಕಾಳಗವನ್ನು ವರ್ಣಿಸುವಾಗ ಪ್ರಾಸಂಗಿಕವಾಗಿ ಆಕೆಯ ಪಾತ್ರವನ್ನು ನಮ್ಮ ಮುಂದೆ ತರುತ್ತಾನೆ. 

ವಂಗ ಕವಿ ರವೀಂದ್ರನಾಥ ಠಾಕೂರರ ಇಂಗ್ಲೀಷಿಗೆ ಭಾಷಾಂತರಗೊಂಡಿರುವ ‘ಚಿತ್ರಾ’ ನಾಟಕದಲ್ಲಿ ಚಿತ್ರಾಂಗದೆಯ ಪೂರ್ವಜೀವನವನ್ನು ಚಿತ್ರಿಸಿದ್ದಾರೆ. ಅಲ್ಲಿ ಆಕೆಯನ್ನು ಶೃಂಗಾರದ ಪರಿಪೂರ್ಣತೆಯಲ್ಲಿ ಸ್ಥಿರವನ್ನಾಗಿ ಮಾಡಿದ್ಧಾರೆ. ಈ ಕನ್ನಡ ಕಾವ್ಯದಲ್ಲಿ ಸೃಷ್ಟಿಯಾಗಿರುವ ಚಿತ್ರಾಂಗದೆಯ ಮೈಯ್ಯಲ್ಲಿ ಲಕ್ಷ್ಮೀಶನ ಹಾಗು ಠಾಕೂರರ ಚಿತ್ರಾಂಗದೆಯರ ನೆತ್ತರು ಕೊಂಚಮಟ್ಟಿಗೆ ಹರಿಯುತ್ತಿದೆಯಾದರೂ ವಂಶಪಾರಂಪರ್ಯವೇ ವಿನಾ ಮತ್ತೆ ಬಹು ವಿಷಯಗಳಲ್ಲಿ ಈಕೆ ಬೇರೆಯಾಗಿದ್ದಾಳೆ. 

ಹಾಳೂರು

ಪ್ರಕಟಿತವಾದ ವರ್ಷ: 1926

ಕೇವಲ 238 ಸಾಲುಗಳ ’ಹಾಳೂರು’ ನೀಳ್ಗವನವನ್ನು ಕುವೆಂಪುರವರು ರಚಿಸಿದ್ದು ಮತ್ತು ಮೊದಲ ಮುದ್ರಣ ಕಂಡಿದ್ದು 1926ರಲ್ಲಿ. ಮೊದಲ ಮುದ್ರಣ 1926ರಲ್ಲಿ, ನಂತರ ಉದಯರವಿ ಪ್ರಕಾಶನದಿಂದ  ಮೊದಲ ಬಾರಿಗೆ ಈ ನೀಳ್ಗವನವು 1962ರಲ್ಲಿ ಪ್ರಕಟವಾಗಿತ್ತು.

ಚಂದ್ರಮಂಚಕೆ ಬಾ ಚಕೋರಿ

ಪ್ರಕಟಿತವಾದ ವರ್ಷ: 1957

ಚಂದ್ರಮಂಚಕೆ ಬಾ ಚಕೋರಿ ಕುವೆಂಪುರವರ ಪ್ರೇಮ ಕವಿತೆಗಳ ಸಂಕಲನವಾಗಿದ್ದು, ಇದರಲ್ಲಿ 59 ಪ್ರೇಮಗೀತೆಗಳಿವೆ. ಸರಳ ಹಳೆಗನ್ನಡ ಪದಗಳಿಂದ ಹೆಸರುವಾಸಿಯಾಗಿದ್ದ ಕುವೆಂಪುರವರು ಅತ್ಯುತ್ತಮ ಕನ್ನಡ ಗೀತೆಗಳಲ್ಲಿ ‘ಬಾ ಚಕೋರಿ ಚಂದ್ರಮಂಚಕೆ’ ಕೂಡ ಒಂದು.

ಈ ಕವಿತೆಯಲ್ಲಿ ನಲ್ಲನು ರಸವತ್ತಾದ ವಿಶೇಷಣಗಳೊಂದಿಗೆ ರಾತ್ರಿಯನ್ನು, ಆತನ ನಲ್ಲೆಯನ್ನು ಹಾಗೂ ತಮಗೆ ಒದಗಿ ಬಂದಿರುವ ಸಂದರ್ಭವನ್ನು ವರ್ಣಿಸುವ ಪರಿಯನ್ನು ವಿವರಿಸಿರುವ ಕುವೆಂಪುರವರು ತಮ್ಮ ಕಾವ್ಯಪ್ರೌಢಿಮೆಯನ್ನು ಮೆರೆದಿದ್ದಾರೆ.

ಕುತೂಹಲಕಾರಿ ವಿಷಯವೇನೆಂದರೆ ಈ ಕವನವನ್ನು ಕನ್ನಡ ಚಲನಚಿತ್ರದಲ್ಲಿ ಒಂದೇ ವರ್ಷ ಎರಡು ಬಾರಿ ಚಿತ್ರಗೀತೆಗಳಲ್ಲಿ ಬಳಸಿಕೊಳ್ಳಲಾಗಿದೆ.

ಗುರುವಿನೊಡನೆ ದೇವರಡಿಗೆ

ಎರಡು ಭಾಗಗಳಲ್ಲಿ ಪ್ರಕಟಗೊಂಡಿದ್ದ ಕುವೆಂಪು ಅವರ ’ಗುರುವಿನೊಡನೆ ದೇವರಡಿಗೆ’ ಗ್ರಂಥವು ಶ್ರೀರಾಮಕೃಷ್ಣರ ಶಿಷ್ಯ ಮತ್ತು ಕುವೆಂಪುರವರ ದೀಕ್ಷಾ ಗುರುಗಳೂ ಆದ ಶ್ರೀ ಸ್ವಾಮಿ ಶಿವಾನಂದರ ಮಾತು ಕತೆಗಳನ್ನು ಒಳಗೊಂಡಿದೆ. ಕುವೆಂಪು ಅವರು ಈ ಕೃತಿಯನ್ನು ಅನುವಾದ ಮಾಡಿದ್ದರು. 

ಮನುಜ ಮತ ವಿಶ್ವ ಪಥ

ಮನುಜ ಮತ ವಿಶ್ವ ಪಥ ಇದು ಕುವೆಂಪುರವರ ಕೆಲ ಲೇಖನಗಳು ಮತ್ತು ಅವರಿಗೆ ಜ್ಞಾನಪೀಠ, ಗೌರವ ಡಾಕ್ಟರೇಟ್ ಮತ್ತು ಇತರೆ ಗೌರವ ಸಮಾರಂಭಗಳಲ್ಲಿ ಮಾಡಿದ ಭಾಷಣಗಳ ಸಂಕಲನವಾಗಿದ್ದು ಕುವೆಂಪುರವರ ಆಳ ಮತ್ತು ವಿಸ್ತಾರವಾದ ವಿಚಾರಧಾರೆಯನ್ನು ನೆನೆಸಿಕೊಳ್ಳುವಂತೆ ಮಾಡುತ್ತದೆ. 

ವಿಚಾರ ಕ್ರಾಂತಿಗೆ ಆಹ್ವಾನ

ವಿಚಾರ ಕ್ರಾಂತಿಗೆ ಆಹ್ವಾನ ಕುವೆಂಪು ಅವರು ಬರೆದ ಒಂದು ವೈಚಾರಿಕ ಕೃತಿ. ಮೂಢನಂಬಿಕೆ, ಮಡಿವಂತಿಕೆ, ಎಲ್ಲವನ್ನೂ ಪ್ರಶ್ನಿಸದೆಯೇ ಒಪ್ಪುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಕೃತಿಯಲ್ಲಿದೆ.

ಚಂದ್ರಹಾಸ

1963ರಲ್ಲಿ ಪ್ರಕಟಗೊಂಡ ಚಂದ್ರಹಾಸ ನಾಟಕವು ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗ ಎಂಬ ಮೂರು ಭಾಗಗಳನ್ನು ಒಳಗೊಂಡಂತೆ ಒಟ್ಟು 20 ದೃಶ್ಯಗಳನ್ನು ಹೊಂದಿದೆ. ಈ ದೃಶ್ಯಗಳಲ್ಲಿ ಜೈಮಿನಿ ಭಾರತದ ಚಂದ್ರಹಾಸನ ಕಥೆಯನ್ನು ಸೊಗಸಾಗಿ ಕುವೆಂಪು ವರ್ಣಿಸಿದ್ದಾರೆ.

ಅನಿಕೇತನ

ಅನಿಕೇತನ ಇದು 1963ರಲ್ಲಿ ಬಿಡುಗಡೆಗೊಂಡ ಕುವೆಂಪುರವರ ಕೃತಿ.

ಬೊಮ್ಮನಹಳ್ಳಿ ಕಿಂದರಿಜೋಗಿ

1928ರಲ್ಲಿ ಮೊದಲ ಮುದ್ರಣಗೊಂಡ ಬೊಮ್ಮನಹಳ್ಳಿ ಕಿಂದರಿಜೋಗಿ ಕವಿತೆಗಳು ರಾಬರ್ಟ್ ಬ್ರೌನಿಂಗ್ ಅವರ ‘ದಿ ಪೈಡ್ ಪೈಪರ್ ಆಫ್ ಹ್ಯಾಮೆಲಿನ್’ನ (The Pied Piper of Hamelin by Robert Browning) ಅನುವಾದವಾಗಿದೆ. ಈ ಕೃತಿ 1945ರಲ್ಲಿ ಚಿತ್ರಗಳೊಂದಿಗೆ ಅಚ್ಚಾಯಿತು. 

ಪಾಂಚಜನ್ಯ

ಕುವೆಂಪುರವರ ಪಾಂಚಜನ್ಯ ಸಂಕಲನವು 1933ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದು ಒಟ್ಟು 19 ಹೋರಾಟದ ಕುರಿತ ಕವಿತೆಗಳನ್ನೇ ಒಳಗೊಳಗೊಂಡಿದೆ. 

ಭಾರತದ ಸ್ವಾತಂತ್ರ್ಯ ಹೋರಾಟವು ರೂಪುಗೊಂಡಿದ್ದ ದಿನಗಳಲ್ಲಿ ರಚಿತವಾದ ಕವಿತೆಗಳನ್ನು ಇದು ಒಳಗೊಂಡಿದೆ. ಹೋರಾಟ, ಪ್ರತಿಭಟನೆಯ ಧಾಟಿಯಲ್ಲಿರುವ ಬಹುತೇಕ ಕವಿತೆಗಳು ಹೋರಾಡುವಂತೆ ಪ್ರೇರೇಪಣೆ ನೀಡುವಂತಿವೆ. 

ಕೋಗಿಲೆ ಮತ್ತು ಸೋವಿಯಟ್‌ ರಷ್ಯ

1954ರಲ್ಲಿ ಮೊದಲ ಮುದ್ರಣಗೊಂಡ 43 ಕ್ರಾಂತಿ ಕವಿತೆಗಳಿರುವ ಕವನ ಸಂಕಲನ “ಕೋಗಿಲೆ ಮತ್ತು ಸೋವಿಯಟ್‌ ರಷ್ಯ” ಸುಮಾರು 70 ಪುಟಗಳನ್ನು ಹೊಂದಿದೆ.

ಕಾನೀನ

ಮಹಾಭಾರತದ ಕರ್ಣನ ಕಥೆಯನ್ನು ಆಧರಿಸಿದ ಕಾನೀನ ವಿರಚಿತ ನಾಟಕವು 1974 ರಲ್ಲಿ ಮೊದಲ ಮುದ್ರಣಗೊಂಡಿತ್ತು. ಹದಿನಾರು ಪಾತ್ರ ಮತ್ತು ಐದು ದೃಶ್ಯಗಳಲ್ಲಿ ಮೂಡಿರುವ ಈ ಕತೆಯಲ್ಲಿ ದುರಂತ ನಾಯಕ ಕರ್ಣನ ಕತೆಯನ್ನು ಎದೆಗೆ ತಟ್ಟುವಂತೆ ವರ್ಣಿಸಲಾಗಿದೆ.

ಬಲಿದಾನ

1948ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡು ನಂತರ ನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣಗೊಂಡಂತಹ ಬಲಿದಾನ ನಾಟಕವು ಮೂರು ದೃಶ್ಯಗಳನ್ನು ಒಳಗೊಂಡಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿರುವ ಈ ನಾಟಕ ಅತ್ಯಂತ ಜನಪ್ರೇಯ ನಾಟಕಗಳಲ್ಲೊಂದು. ಪರಕೀಯರ ಆಳ್ವಿಕೆಯಲ್ಲಿ ಭಾರತದ ಶೋಷಣೆಯ ಕರಾಳತೆಯನ್ನು ಓದುಗರಿಗೆ ಮನ ಮುಟ್ಟುವಂತೆ ಈ ನಾಟಕ ತಿಳಿಸುತ್ತದೆ.

ಶ್ಮಶಾನ ಕುರುಕ್ಷೇತ್ರಂ

ಮಹಾಭಾರತದ ಕಥಾ ವಸ್ತುವನ್ನು ಆಧಾರಿಸಿದ ಕುವೆಂಪುರವರ ಶ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ 10 ದೃಶ್ಯಗಳಿದ್ದು ಇವು ಯುದ್ಧದ ಭೀಕರ ಕರಾಳತೆಯನ್ನು ನಮಗೆ ತಿಳಿಸುತ್ತದೆ. 

ಯುದ್ಧದಿಂದಾಗುವ ಪರಿಣಾಮಗಳನ್ನು, ಕೃಷ್ಣ, ಪಾಂಡವರು, ಕೌರವರು ಮತ್ತು ಅವರ ಸುತ್ತಮುತ್ತಲಿನವರ ನಡುವೆ ನಡೆಯುವಂತಹ ಸನ್ನಿವೇಷಗಳನ್ನು ವಿವರಿಸಿ, ಕುರುಕ್ಷೇತ್ರ ಯುದ್ಧದಲ್ಲಿ ಈ ಪಾತ್ರಗಳು ಯಾವ ರೀತಿ ಪಾತ್ರ ವಹಿಸುತ್ತವೆ ಮತ್ತು ಯುದ್ದದ ನಂತರ ಆ ಪಾತ್ರಗಳು ಅನುಭವಿಸುವ ವೇದನೆಯನ್ನು ಈ ನಾಟಕ ವಿವರಿಸುತ್ತದೆ. ಯುದ್ದದಲ್ಲಿ ನಡೆಯುವ ಕ್ರೌರ್ಯ, ಅನ್ಯಾಯ, ವಿನಾಶ, ಅವಿವೇಕ, ವಿಧಿ, ವಿಫಲತೆ, ಹತಾಶೆ, ಸಾವು ನೋವುಗಳನ್ನು ಎದೆಗೆ ನಾಟುವಂತೆ ಕುವೆಂಪು ಅವರು ವರ್ಣಿಸಿದ್ದಾರೆ. 

ಸನ್ಯಾಸಿ ಮತ್ತು ಇತರ ಕಥೆಗಳು

1936ರಲ್ಲಿ ಮೊದಲ ಬಾರಿಗೆ ಪ್ರಕಟಣೆಗೊಂಡ ಸನ್ಯಾಸಿ ಮತ್ತು ಇತರ ಕಥೆಗಳು ಪುಸ್ತಕವು ಒಟ್ಟು ಎಂಟು ಕಥೆಗಳನ್ನು ಒಳಗೊಂಡಿದೆ. ಇದರಲ್ಲಿರುವ ಸನ್ಯಾಸಿ, ಕ್ರಿಸ್ತನಲ್ಲ ಪಾದ್ರಿಯ ಮಗಳು, ಈಶ್ವರನೂ ನಕ್ಕಿರಬೇಕು, ಆರಾಣೆ ಮೂರು ಕಾಸು, ಯಾರೂ ಅರಿಯದ ವೀರ, ಹೋಳಿಗೆ ಪ್ರತಿಜ್ಞೆ, ಮಾಯದ ಮನೆ, ದೆವ್ವದ ಕಾಟ ಹಾಗೂ ಶ್ರೀಮನ್ಮೂಕವಾಗಿತ್ತು ಕಥೆಗಳು ಜೀವನದಲ್ಲಿ ಭಾವನೆಗಳ ಭಾವವನ್ನು, ಭಾವನೆಗಳ ಮಿಳಿತವನ್ನು ತಿಳಿಸುತ್ತದೆ. ಕುವೆಂಪು ಅವರ ಇತರ ಕೃತಿಗಳಂತೆ ಇಲ್ಲಿಯೂ ಸಹ ನಿಸರ್ಗದ ವರ್ಣನೆ ಮನಸ್ಸಿಗೆ ನಾಟುವಂತಿದೆ.

ಪಕ್ಷಿಕಾಶಿ

1946ರಲ್ಲಿ ಮೊದಲ ಮುದ್ರಣ ಕಂಡ ಪಕ್ಷಿಕಾಶಿ ಸಂಕಲನವು ಪ್ರಕೃತಿ ಪ್ರಧಾನವಾಗಿದ್ದು ಇದರಲ್ಲಿ 47 ಕವನಗಳಿವೆ. ಅವುಗಳನ್ನು ಆಶಯಕ್ಕೆ ತಕ್ಕಂತೆ ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ದ್ರೌಪದಿಯ ಶ್ರೀಮುಡಿ

ಕುವೆಂಪು ಅವರು ದ್ರೌಪದಿಯ ಶ್ರೀಮುಡಿ ಲೇಖನದಲ್ಲಿ ಪಂಪನ-ಕೇಶಪಾಶ ಕುಮಾರವ್ಯಾಸನ-ಶ್ರೀಮುಡಿಯ ಮಹತ್ವವನ್ನು ಚರ್ಚಿಸುತ್ತಾರೆ. ಈ ಕೃತಿಯು 1960ರಲ್ಲಿ ಮೊದಲ ಮುದ್ರಣಗೊಂಡಿತ್ತು.

ಅಗ್ನಿಹಂಸ

45 ಕವಿತೆಗಳನ್ನು ಒಳಗೊಂಡ ಅಗ್ನಿಹಂಸ ಸಂಕಲನದಲ್ಲಿರುವ ಬಹುತೇಕ ಕವಿತೆಗಳು ಆಧ್ಯಾತ್ಮಿಕತೆಗೆ ಸಂಬಂಧಿಸಿದ್ದಾಗಿದೆ. ಈ ಸಂಕಲನವನ್ನು ಕುವೆಂಪು ಅವರು ಶ್ರೀ ಸ್ವಾಮಿ ಸಿದ್ಧೇಶ್ವರಾನಂದರಿಗೆ ಅರ್ಪಿಸಿದ್ದಾರೆ. 

ಕುಟೀಚಕ

48 ಅನುಭಾವ ಪ್ರಧಾನವಾದ ಕವಿತೆಗಳ ಸಂಕಲನವಾದ ಕುಟೀಚಕ, ಕುವೆಂಪು ಅವರು ಕಾವ್ಯಕ್ಕೆ ಕೊಟ್ಟ ಮಹತ್ವವನ್ನು ಮನಗಾಣಿಸುವ ಇನ್ನೊಂದು ಸಂಕಲನ.

ಕೊಳಲು

1930ರಲ್ಲಿ ತೆರೆಕೆಂಡ ಕುವೆಂಪು ಅವರ ಮೊದಲನೆಯ ಕವನ ಸಂಕಲನ ಕೊಳಲು ಒಟ್ಟು 70 ಕವಿತೆಗಳನ್ನು ಒಳಗೊಂಡಿದೆ. ಕರ್ನಾಟಕದ ನಾಡಗೀತೆ ‘ಜಯಹೇ ಕರ್ನಾಟಕ ಮಾತೆ’ ಹಾಗೂ ರೈತಗೀತೆಯಾದ ‘ನೇಗಿಲಯೋಗಿ’ ಕವಿತೆಗಳು ಕೊಳಲು ಸಂಕಲನದಲ್ಲಿವೆ. 

ತಪೋನಂದನ

1950ರಲ್ಲಿ ಪ್ರಕಟಗೊಂಡ ತಪೋನಂದನವು ಮಹಾಶ್ವೇತೆಯ ತಪಸ್ಸು, ಪ್ರತಿಮಾ ಮತ್ತು ಪ್ರಕೃತಿ, ಪಂಪನಲ್ಲಿ ಭವ್ಯತೆ, ಮಹೋಪಮೆ, ಸರೋವರದ ಸಿರಿಗನ್ನಡಿಯಲ್ಲಿ, ನಾಟಕ ಕಲೆಯಲ್ಲಿ ಪ್ರತಿಕೃತಿ ಮತ್ತು ಪ್ರತಿಮಾ ವಿಧಾನಗಳು, ಋಷಿ ವಾಲ್ಮೀಕಿಯ ಕಾವ್ಯ ಜಾಹ್ನವಿ, ಕಾವ್ಯ ವಿಮರ್ಶೆಯಲ್ಲಿ ಪೂರ್ಣದೃಷ್ಟಿ ಎಂಬ ಎಂಟು ವಿಮರ್ಶಾ ಬರಹಗಳನ್ನು ಒಳಗೊಂಡಿದೆ.

ನವಿಲು

ಕುವೆಂಪು ಅವರ ಕವನ ಸಂಕಲನ “ನವಿಲು” ಪ್ರಕೃತಿ ಪ್ರಧಾನವಾದ 42 ಕವನಗಳನ್ನು ಒಳಗೊಂಡಿದೆ.

ಕೃತ್ತಿಕೆ

75 ಹದಿನಾಲ್ಕು ಸಾಲುಗಳ ಸಾನೆಟ್ ಗಳನ್ನು ಹೊಂದಿರುವ ಕುವೆಂಪುರವರ ಕೃತ್ತಿಕೆ ಸಂಕಲನವು ಕನ್ನಂಬಾಡಿಯ ಕುರಿತು ಆರು, ಕವಿಶೈಲದ ಕುರಿತು ಐದು, ಹೋಮರ್, ವರ್ಡ್ಸ್ ವರ್ತ್, ಪಂಜೇಮಂಗೇಶರಾಯರು, ಚಂದ್ರಗ್ರಹಣ, ಪ್ರಕೃತಿ ಇತ್ಯಾದಿಗಳ ಸಾನೆಟ್ ಗಳನ್ನು ಒಳಗೊಂಡಿದೆ. ಇದರಲ್ಲಿರುವ ಪ್ರಕೃತಿ ವರ್ಣನೆ, ರಾಷ್ಟ್ರಭಕ್ತಿ ಕುರಿತ ಸಾನೆಟ್ ಗಳು ಓದುಗರನ್ನು ಸೆಳೆಯುತ್ತವೆ.

ಬಿರುಗಾಳಿ

1930ರಲ್ಲಿ ಮೊದಲ ಮುದ್ರಣಗೊಂಡ ಕುವೆಂಪು ಅವರ ಬಿರುಗಾಳಿ ನಾಟಕವು ಷೇಕ್ಸ್ ಪಿಯರ್ ಇಂಗ್ಲೀಷ್‍ನಲ್ಲಿ ಬರೆದಂತಹ ಟೆಂಪೆಟ್ಸ್ ನಾಟಕದ ಕನ್ನಡ ರೂಪಾಂತರವಾಗಿದೆ. ಅನುವಾದವಾಗದೇ ಭಾವಾನುವಾದಗಿರುವುದು ಇದರ ವಿಶೇಷ. ಇದನ್ನು ಮಾತಿನ ರೂಪದಲ್ಲಿರುವ ಕವಿತೆಯೆಂದು ಬಣ್ಣಿಸಲಾಗಿದೆ.

ಕಲಾಸುಂದರಿ

ಕವಿತೆಗಳ ಸಂಕಲನವಾದ ಕಲಾಸುಂದರಿಯಲ್ಲಿ ’ಕಲಾಸುಂದರಿ ಆತ್ಮಾಹ್ಲಾದಕಾರಿಣಿಯೂ ಹೌದು, ಆತ್ರೋದ್ದಾರಕಾರಿಣಿಯ ಹೌದು ಎಂಬ ತತ್ವ’ವನ್ನು ಆಧರಿಸಿದ ಪ್ರಕೃತಿ ಪ್ರಧಾನ 43 ಕವನಗಳಿವೆ. 

ಇತ್ಯಾದಿ

ಇತ್ಯಾದಿ ಇದು ಕುವೆಂಪು ಅವರು ಬರೆದ ಆರು ಲೇಖನಗಳ ಸಂಕಲನವಾಗಿದೆ.

ರಸೋ ವೈ ಸಃ

ಕವಿ ನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ, ರಸಾನುಭವದ ಅಲೌಕಿಕತೆ, ಸಾಹಿತ್ಯದಲ್ಲಿ ಪ್ರತಿಮಾ, ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮೀಮಾಂಸೆ, ರಸೋ ವೈ ಸಃ ಎಂಬ ಐದು ಕುವೆಂಪು ಅವರು ಬರೆದ ಪ್ರಬಂಧಗಳು ಇಲ್ಲಿವೆ.

ಕಥನ ಕವನಗಳು

ಕುವೆಂಪು ಅವರ 11 ಕಥನ ಕವನಗಳ ಸಂಗ್ರಹ 1937ರಲ್ಲಿ ಮೊದಲು ಪ್ರಕಟಿತಗೊಂಡಿತ್ತು.

ಇಕ್ಷು ಗಂಗೋತ್ರಿ

ಕುವೆಂಪು ಅವರ 25 ಕವನಗಳ ಸಂಗ್ರಹವೇ ಇಕ್ಷು ಗಂಗೋತ್ರಿ.

ವಿಭೂತಿ ಪೂಜೆ

16 ಲೇಖನಗಳಿರುವ ವಿಮರ್ಶಾ ಬರಹಗಳ ಸಂಕಲನವು  ಕವಿಯಲ್ಲಿ ವಿಭೂತಿ, ಶಕ್ತಿ ಕವಿ ರನ್ನ, ಕಲಿಯದವರಿಗೂ ಕಾಮಧೇನು, ಇಂದಿನ ಹೊಸಗನ್ನಡ ಕವಿತೆ ಮತ್ತು ಅದರ ಮುಂದಿನ ನಡೆ, ಕವಿಯ ದೃಷ್ಟಿಯಲ್ಲಿ ಪ್ರಕೃತಿ, ಮಲೆನಾಡಿನ ನಿಸರ್ಗ ವಿಭೂತಿ, ವಚನಕಾರ ಬಸವೇಶ್ವರರು, ಲೌಕಿಕ ಭಾರತಕ್ಕೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶ, ಪರಮಹಂಸರ ವಚನಾಮೃತದಲ್ಲಿ ದೃಷ್ಟಾಂತ ಕಥಾವಿಧಾನ, ದಿವಂಗತ ರಾಷ್ಟ್ರಪಿತ ಬಾಪೂಜಿಗೆ ಬಾಷ್ಪಾಂಜಲಿ, ಪೂರ್ಣದೃಷ್ಟಿಗೆ ಗಾಂಧೀಜಿ, ಕವಿ ರವೀಂದ್ರರು, ಶ್ರೀ ಅರವಿಂದರು, ಪ್ರಖ್ಯಾತ ಪೌರಾಣಿಕ ಯುದ್ಧಗಳು, ಶ್ರೀ ರಾಮಾಯಣ ದಿವ್ಯ ಶಿಲ್ಪಿ ಎಂಬ ವಿಮರ್ಶೆಯ ಲೇಖನಗಳನ್ನು ಒಳಗೊಂಡಿದೆ.

ಅನುತ್ತರಾ

ಕುವೆಂಪು ಅವರ 21 ಪ್ರೇಮಗೀತೆಗಳ ಸಂಗ್ರಹ ಇರುವ ಅನುತ್ತರಾ ಕವನ ಸಂಕಲಕ್ಕೆ ಪ್ರೇಮೋಪನಿಷತ್ತು’ ಎಂಬ ಹೆಸರು ಹಲವು ಕವಿಗಳಿಂದ ದೊರೆತಿದೆ. 

ಪ್ರೇತ – ಕ್ಯೂ

1967ರಲ್ಲಿ ಇದು ಪ್ರಕಟಿತಗೊಂಡಿದ್ದ ಪ್ರೇತ – ಕ್ಯೂ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗಳ ಕುರಿತು ಕುವೆಂಪು ಅವರು ಬರೆದ 40 ಕವಿತೆಗಳನ್ನು ಒಳಗೊಂಡಿದೆ.

ಯಮನ ಸೋಲು

ಕುವೆಂಪುರವರ ವಿಶಿಷ್ಟ ಕೃತಿಗಳಲ್ಲಿ ಒಂದಾದ ಯಮನಸೋಲು, ಮಹಿಳೆಯರ ಮನಮಾನಸದಲ್ಲಿ ನೆಲೆಗೊಂಡಿರುವ ಕಥೆಗಳಲ್ಲಿ ಒಂದಾಗಿರುವ ಸತ್ಯವಾನ್-ಸಾವಿತ್ರಿಯ ಕಥೆ ಭಾರತದ ಸಂಸ್ಕೃತಿಯಲ್ಲಿ ಗಂಡ ಹೆಂಡತಿಯ ನಡುವಿನ ಪವಿತ್ರ ಸಂಬಂಧ; ಪತಿಯನ್ನು ದೈವವೆಂದು ಪೂಜಿಸುವ ಮತ್ತು ಆತನಿಗಾಗಿ ಹಂಬಲಿಸುವ ಪರಿಯನ್ನು ಹೃದಯಂಗಮವಾಗಿ ಚಿತ್ರಿಸುವ ಕಥೆಯಾಗಿದೆ. ಇದು ಕುವೆಂಪು ಅವರ ಅತ್ಯುನ್ನತ ಕೃತಿಗಳಲ್ಲಿ ಒಂದು.

ಮರಿ ವಿಜ್ಞಾನಿ

ಇದು ಕುವೆಂಪುರವರ ಕವನ ಸಂಕಲನವಾಗಿದೆ.

ಸಾಹಿತ್ಯ ಪ್ರಚಾರ

1930ರಲ್ಲಿ ಪ್ರಕಟವಾಗಿದ್ದ ಸಾಹಿತ್ಯ ಪ್ರಚಾರವು ಕುವೆಂಪು ಅವರ ಭಾಷಣಗಳ ಸಂಗ್ರಹ ಲೇಖನವಾಗಿದೆ.

ಕಿಂಕಿಣಿ

1946ರಲ್ಲಿ ಮೊದಲು ಪ್ರಕಟವಾಗಿದ್ದ ಕಿಂಕಿಣಿ ಕವನ ಸಂಕಲನವು 60 ಭಾವಗೀತೆಯ ಶೈಲಿಯಲ್ಲಿರುವ ವಚನ ಕವನಗಳನ್ನು ಒಳಗೊಂಡಿದೆ.

ವಾಲ್ಮೀಕಿಯ ಭಾಗ್ಯ

ವಾಲ್ಮೀಕಿಯ ಭಾಗ್ಯ ಇದು ಕುವೆಂಪು ಅವರ ವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ. ಕೇವಲ ಮೂರೇ (ಸೀತಾ, ಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ) ಪಾತ್ರಗಳನ್ನು ಈ ನಾಟಕ ಹೊಂದಿದ್ದರೂ ಆ ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತವಾಗಿದೆ.

ಷೋಡಶಿ

45 ಪ್ರೇಮ ಕವಿತೆಗಳ ಸಂಕಲನ ಇದಾಗಿದೆ.

ಹೊನ್ನ ಹೊತ್ತಾರೆ

1976ರಲ್ಲಿ ಮುದ್ರಣಗೊಂಡ ಹೊನ್ನ ಹೊತ್ತಾರೆ ಕವನ ಸಂಗ್ರಹವು ಪ್ರಸಿದ್ಧ ಭಾವಗೀತೆಯಾಗಿರುವ ಬಂದಿಹನು ಎನ್ನಿನಿಯ ! ಬಂದಿಹನು ಎನ್ನಿನಿಯ ಇಂದೆನ್ನ ಎದೆಯ ಬನಕೆ ! ಪದ್ಯವನ್ನು ಒಳಗೊಂಡಿದೆ.

ಕದರಡಕೆ

1967ರಲ್ಲಿ ಪ್ರಕಟವಾದ ಕವಿತೆಗಳ ಸಂಗ್ರಹವಾದ ಕದರಡಕೆಯು ನಿಸರ್ಗದ ಕುರಿತ 46 ಹಾಗೂ ಬಿಡಿ ಬಿಡಿಯಾದ 42 ಕವನಗಳನ್ನು ಒಳಗೊಂಡಿದೆ. 

ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ

ಕುವೆಂಪುರ ಕೊನೆಯ ಹೊತ್ತಗೆ “ಕೊನೆಯ ತೆನೆ ಹಾಗು ವಿಶ್ವ ಮಾನವ ಸಂದೇಶ”

ಮೇಘಪುರ

ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ ಅಂದರೆ 1947ರಲ್ಲಿ ಇದು ಪ್ರಕಟವಾಗಿದ್ದ ಮೇಘಪುರವು ಕುವೆಂಪು ಅವರ ಬರೆದ ಹನ್ನೆರಡು ಮಕ್ಕಳ ಹಾಡುಗಳನ್ನು ಒಳಗೊಂಡಿದೆ.

ಷಷ್ಟಿ ನಮನ

ಇದು ಕುವೆಂಪು ಅವರ 20 ಲೇಖನಗಳ ಸಂಕಲನವಾಗಿದೆ.

ಮೋಡಣ್ಣನ ತಮ್ಮ

ಮಕ್ಕಳ ಗೀತ ನಾಟಕ ‘ಮೋಡಣ್ಣನ ತಮ್ಮ’. ಐದು ಪಾತ್ರ ಮತ್ತು ಒಂದೇ ಒಂದು ದೃಶ್ಯದಲ್ಲಿ ಸಾಗುತ್ತದೆ. ಗೀತೆಯ ರೂಪದಲ್ಲಿರುವ ಈ ನಾಟಕ ಮಕ್ಕಳ ನಾಟಕದ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರದರ್ಶನವಾಗುವ ನಾಟಕಗಳಲ್ಲೊಂದು.

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಕುರಿತು ಕುವೆಂಪುರವರು ಬರೆದ ಕೃತಿ ಇದಾಗಿದೆ.

ಶ್ರೀರಾಮಕೃಷ್ಣ ಪರಮಹಂಸ

ಶ್ರೀರಾಮಕೃಷ್ಣ ಪರಮಹಂಸರ ಕುರಿತು ಕುವೆಂಪುರವರು ಬರೆದ ಕೃತಿ ಇದಾಗಿದೆ.

ಇದನ್ನೂ ಓದಿ:

ಕುವೆಂಪು ಅವರ ಪುಸ್ತಕಳನ್ನು (kuvempu books list in kannada) ಅನ್ವೇಷಿಸುವುದು ಕನ್ನಡ ಸಾಹಿತ್ಯದ ಒಂದು ಪಯಣ. ಕುವೆಂಪುರವರ ಪುಸ್ತಕಗಳು (kuvempu books in kannada) ಸರಳತೆ ಮತ್ತು ಆಳದ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ನಾವು ಕುವೆಂಪು ಅವರ ಕಾದಂಬರಿಗಳನ್ನು ಸಂಗ್ರಹಿಸಿದ್ದೇವೆ, ಅವರು ಸೃಷ್ಟಿಸಿದ ಪ್ರಪಂಚಗಳನ್ನು ಅನ್ವೇಷಿಸಲು ನಿಮಗೆ ಅವಕಾಶವನ್ನು ಒದಗಿಸಿದ್ದೇವೆ. ನೀವು ಉತ್ಸಾಹಭರಿತ ಓದುಗರಾಗಿರಲಿ ಅಥವಾ ಪ್ರಾರಂಭಿಸುತ್ತಿರಲಿ, ಪ್ರತಿ ಪುಸ್ತಕವು ನಿಧಿಯಾಗಿದೆ. ಈ ಪುಸ್ತಕಗಳನ್ನು ಕೊಂಡು ಓದಿರಿ ಮತ್ತು ಸಾಹಿತ್ಯಿಕ ಸಾಹಸಕ್ಕೆ ಬಾಗಿಲು ತೆರೆಯಿರಿ.

ನಮ್ಮ ಈ ಪ್ರಸಿದ್ಧ ಕುವೆಂಪು ಪುಸ್ತಕಗಳ ಸಂಗ್ರಹ (famous books of kuvempu in kannada) ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಾವು ಯಾವುದಾದರೂ ಪುಸ್ತಕವನ್ನು ಮಿಸ್ ಮಾಡಿದ್ದಲ್ಲಿ ಅವುಗಳ ಹೆಸರನ್ನು ಕಾಮೆಂಟ್ ಮಾಡಿ. 

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.