ನವರಾತ್ರಿ, ಭಾರತದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ಸಂತೋಷ, ಭಕ್ತಿ ಮತ್ತು ಒಗ್ಗಟ್ಟಿನ ಸಮಯವಾಗಿದೆ. ಈ ಒಂಬತ್ತು ದಿನಗಳು ಮತ್ತು ರಾತ್ರಿಗಳಲ್ಲಿ, ಭಕ್ತರು ದುರ್ಗಾ ದೇವಿಯನ್ನು ಗೌರವಿಸುತ್ತಾರೆ ಮತ್ತು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಗಾಗಿ ಅವಳ ಆಶೀರ್ವಾದವನ್ನು ಕೋರುತ್ತಾರೆ.
ನವರಾತ್ರಿಯ ಸಮಯದಲ್ಲಿ ಒಂದು ಸುಂದರವಾದ ಸಂಪ್ರದಾಯವೆಂದರೆ ಪ್ರೀತಿಪಾತ್ರರ ಜೊತೆ ಹೃತ್ಪೂರ್ವಕ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು. ಈ ಲೇಖನದಲ್ಲಿ, ನೀವು ಕುಟುಂಬದವರಿಗೆ ಮತ್ತು ನಿಮ್ಮ ಪ್ರೀತಿ-ಪಾತ್ರರಿಗೆ ನಿಮ್ಮ ಶುಭಾಶಯಗಳನ್ನು ಮತ್ತು ಆಶೀರ್ವಾದಗಳನ್ನು ತಿಳಿಸಲು ನಿಮಗೆ ಸಹಾಯ ಮಾಡಲು ನಾವು ಉತ್ತಮ ನವರಾತ್ರಿ ಶುಭಾಶಯಗಳ ಸಂಗ್ರಹವನ್ನು (happy navratri wishes in kannada) ಒಟ್ಟುಗೂಡಿಸಿದ್ದೇವೆ. ಈ ವಿಶೇಷ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ನಮ್ಮ ಈ ನವರಾತ್ರಿ ಶುಭಾಶಯಗಳ (navratri wishes in kannada) ಸಂಗ್ರಹ ನಿಮಗೆ ಸಹಾಯ ಮಾಡುತ್ತದೆ.
Table of Contents
Happy Navratri Wishes in Kannada | ನವರಾತ್ರಿ ಶುಭಾಶಯಗಳು
ಅಶ್ವಯುಜ ಮಾಸ ಶುಕ್ಲ ಪಕ್ಷದ ಮೊದಲನೆಯ ದಿನದಿಂದ 9 ದಿನಗಳ ವರೆಗೆ ನವರಾತ್ರಿ ಆಚರಿಸಲಾಗುತ್ತದೆ. ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು. ಈಕೆಯೇ ಪಾರ್ವತಿ. ಪರ್ವತರಾಜ ಹಿಮವಂತನ ಮಗಳು ಶೈಲಪುತ್ರಿ. ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು.
ನವರಾತ್ರಿ ಎಂದರೆ ಕರುನಾಡಿಗರಿಗೆ ಮೊದಲು ನೆನಪಾಗೋದು ಮೈಸೂರು & ಚಾಮುಂಡೇಶ್ವರಿ ಅಮ್ಮನವರು. ನವರಾತ್ರಿಯ ಸಂದರ್ಭದಲ್ಲಿ ನನ್ನದೊಂದು ಪ್ರೀತಿ ಪೂರ್ವಕ ಶುಭಾಶಯ.
ನವ ರಾತ್ರಿಯ ಪ್ರಾರಂಭದ ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ತಾಯಿ ದುರ್ಗಾದೇವಿ ಆಯಸ್ಸು ಆರೋಗ್ಯ ಸಕಲ ಐಶ್ವರ್ಯ ನೀಡುವ ಮೂಲಕ ಇಂದು ಕಂಟಕ ಪ್ರಾಯವಾಗಿರುವ ಕೊರೋನಾ ನಿರ್ಮೂಲನವಾಗಲಿ ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತೇನೆ ನಾಡಿನ ಜನತೆಗೆ ನವರಾತ್ರಿ ಮತ್ತು ವಿಜಯ ದಶಮಿಯ ಶುಭಾಶಯ ಗಳು
ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯ ನವರಾತ್ರಿಯ ಮೂರನೆ ದಿನವಾದ ಇಂದು ಚಂದ್ರಘಂಟ ರೂಪದಲ್ಲಿ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ಚಂದ್ರಘಂಟ ದೇವಿಯು ಎಲ್ಲರ ನೋವುಗಳನ್ನು ದೂರಮಾಡಿ ಸುಖಾರೋಗ್ಯ, ಸಮೃದ್ಧಿ ನೀಡಿ ಕರುಣಿಸಲಿ.
“ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯ” ನವರಾತ್ರಿಯ ಆರನೇ ದಿನವಾದ ಇಂದು ಕಾತ್ಯಾಯಿನಿ ರೂಪದಲ್ಲಿ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ಯೋಧದೇವತೆ ಕಾತ್ಯಾಯಿನಿ ದೇವಿಯು ಸರ್ವರ ಕಷ್ಟ- ಕಾರ್ಪಣ್ಯಗಳನ್ನು ದೂರ ಮಾಡಿ, ಸುಖ-ಶಾಂತಿಯ ಜೀವನ ನೀಡಲಿ.
ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯ. ನವರಾತ್ರಿಯ ಏಳನೇ ದಿನವಾದ ಇಂದು “ಕಾಳರಾತ್ರಿ” ರೂಪದಲ್ಲಿ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ಕಾಳರಾತ್ರಿ ದೇವಿಯು ಎಲ್ಲರ ನೋವುಗಳನ್ನು ದೂರ ಮಾಡಿ, ಸಂತೋಷ-ಸಮೃದ್ಧಿ ಪ್ರಾಪ್ತಿ ಮಾಡಲಿ.
“ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯ” ನವರಾತ್ರಿಯ ಎಂಟನೆಯ ದಿನವಾದ ಇಂದು ಮಹಾಗೌರಿ ರೂಪದಲ್ಲಿ ತಾಯಿ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ಮಹಾಗೌರಿ ದೇವಿಯು ಸರ್ವರ ಕಷ್ಟ- ಕಾರ್ಪಣ್ಯಗಳನ್ನು ದೂರ ಮಾಡಿ, ಸುಖ-ಶಾಂತಿಯ ಜೀವನ ನೀಡಲಿ.
ನವರಾತ್ರಿ ದಸರಾ ಹಬ್ಬದ ಶುಭಾಶಯ ಗಳು
ಯಾದೇವಿ ಸರ್ವಭೂತೇಷು ಶಕ್ತಿ ರೂಪೇಣೆ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್…ಯೈ ನಮೋ ನಮಃ||
ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸನ್ಮಂಗಳನ್ನೂಂಟು ಮಾಡಲಿ.
ನವರಾತ್ರಿ ಹಬ್ಬದ ಶುಭಾಶಯ
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕು ನವರಾತ್ರಿ ಶುಭಾಶಯ.
ಸರ್ವಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ, ಶರಣ್ಯೆ ತ್ರಯಂಬಕೆ ದೇವಿ ನಾರಾಯಣಿ ನಮೋಸ್ತುತೆ. ಎಲ್ಲರಿಗೂ ನವರಾತ್ರಿ ಉತ್ಸವದ ಶುಭಾಶಯ.
ಅಂಧಜಾತಿಪ್ರೇಮ, ಅಹಂಕಾರ, ದ್ವೇಷಗಳನ್ನೆಲ್ಲ ಸೋಲಿಸಿ ಮನುಷ್ಯತ್ವ ಗೆಲುವು ಸಾಧಿಸಲಿ. ನವರಾತ್ರಿ ಶುಭಾಶಯ
ನವರಾತ್ರಿ ಶುಭದಿನಗಳಲ್ಲಿ ಭಗವತಿಯ ಕೃಪೆ ಇದ್ದು ಎಲ್ಲವೂ ಅವರ ಅಭಿಲಾಷೆಯಂತೆ ಈಡೇರಲಿ ಸಮೃದ್ದಿಯಾಗಲಿ.
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ.
ನವರಾತ್ರಿ ಪ್ರಯುಕ್ತ ನಿಮಗೂ, ನಿಮ್ಮ ಕುಟುಂಬದವರಿ ತಾಯಿ ಚಾಮುಂಡೇಶ್ವರಿ ತಮ್ಮಲ್ಲರಿಗೂ ಶಾಂತಿ, ಸುಖ, ಸಮ್ರಧ್ಧಿ ಕೊಡಲಿ
॥ನವರಾತ್ರಿಯ ಶುಭಾಶಯ॥
ಅತ್ಮಿಯ ನನ್ನ ಹಿತೈಷಿಗಳೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿ ಯಲ್ಲಿ ನವದುರ್ಗಿ ದೇವತೆಗಳು ತಮ್ಮ ಮನಸ್ಸಿನ ಇಷ್ಟಾರ್ಥವನ್ನು ಸಂಪೂರ್ಣ ಅನುಗ್ರಹಿಸಲಿ.
ಜಗತ್ಕಾರಿಣಿ ಬ್ರಾಹ್ಮಣಿ ಜಗತ್ಪಾಲಿನಿ ನಾರಣಿ ಜಗತ್ಪೂರಿಣಿ ಕಪಾಲಿನಿ ಪೊರೆಯೆ ಸರ್ವರನು ಜಗತ್ ಜನನಿ…… ನವರಾತ್ರಿ ಶುಭಾಶಯ.
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ. ಪ್ರಸಾದಂ ತನುತೇ ಮಹ್ಯಂ ಚನ್ದ್ರಘಂಟೇತಿ ವಿಶ್ರುತಾ.
ನವರಾತ್ರಿ ಶುಭಾಶಯ.
ಸರ್ವರಿಗೂ ಶ್ರೀಮಾತಾ ಸರಸ್ವತಿ ವಿದ್ಯಾ,ಬುದ್ಧಿ , ಜ್ಞಾನ ಸಂಪತ್ತನ್ನ ದಯಪಾಲಿಸಲಿ. “ವಿದ್ಯಾರಶ್ಮಿ” ಪಸರಿಸುವ ಶಕ್ತಿಯನ್ನು ಪ್ರತಿಯೊಬ್ಬರಿಗೂ ದಯಪಾಲಿಸಲಿ.
ಎಲ್ಲಾ ಗೆಳಯರಿಗೂ ನವರಾತ್ರಿ ಹಬ್ಬದ ಶುಭಾಶಯ.
ದುರ್ಗಾ ಮಾತೆ ಮುಂದೆಂದು ಯಾವ ಕಷ್ಟವೂ ಬಾರದಂತೆ ಎಲ್ಲಾ ಸಜ್ಜನರನ್ನು ಅನುಗ್ರಹಿಸಲಿ.
ನವರಾತ್ರಿಯ ಹಾರ್ದಿಕ ಶುಭಾಶಯಗಳು! ಶ್ರೀ ದೇವಿಯು ನಿಮ್ಮ ಮುಂದಿನ ದಿನಗಳಿಗೆ ಹೊಸ ಶಕ್ತಿ ನೀಡಲಿ.
ನವರಾತ್ರಿ ಹಬ್ಬವನ್ನು ಸ್ವಾಗತಿಸಿ. ದೇವಿ ದುರ್ಗೆಯ ಆಶೀರ್ವಾದಗಳಿಂದ ನಿಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗಲಿ.
ನವರಾತ್ರಿ ಹಬ್ಬದ ಶುಭಾಶಯಗಳು! ನವರಾತ್ರಿಯ ಈ ಸಮಯದಲ್ಲಿ ನಿಮ್ಮ ಕೌಟುಂಬಿಕ ಸಂಬಂಧಗಳು ಬಲವಾಗಲಿ. ನವರಾತ್ರಿಯ ಆಗಮನದಿಂದ ನಿಮ್ಮ ಜೀವನ ಕುತೂಹಲಕರವಾಗಲಿ, ಆನಂದಕರವಾಗಲಿ.
ನವರಾತ್ರಿಯ ಈ ಸಂದರ್ಭದಲ್ಲಿ ನಿಮ್ಮ ಇಷ್ಟದ ದೇವತೆಗೆ ಪೂಜೆ ಮಾಡಿ ಆನಂದಿಸಿ. ನಿಮ್ಮ ಕೆಲಸಗಳೆಲ್ಲವು ಸಫಲಗೊಳ್ಳಲಿ. ನಿಮ್ಮ ಕಷ್ಟಗಳೆಲ್ಲವು ನಿರ್ಮೂಲನೆಯಾಗಿ ಬದುಕಿನ ಹೊಸ ಅಧ್ಯಾಯ ಪ್ರಾರಂಭಗೊಳ್ಳಲಿ.
ನವರಾತ್ರಿ ಹಬ್ಬದ ಈ ಅದ್ಭುತ ಸಮಯದಲ್ಲಿ ದೇವಿ ದುರ್ಗೆಯ ಆಶೀರ್ವಾದ ನಿಮ್ಮ ಮೇಲೆ ಬೀಳಲಿ. ನಿಮ್ಮ ಜೀವನ ಸುಖಮಯವಾಗಲಿ.
ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲಿ ನಿಮ್ಮ ಸಂಬಂಧಗಳು ಸ್ಥಿರವಾಗಲಿ. ಬಾಳು ಬಂಗಾರವಾಗಲಿ.
ನವರಾತ್ರಿಯ ದಿನಗಳಲ್ಲಿ ದೇವಿ ದುರ್ಗೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ. ಆ ದೇವರು ನಿಮ್ಮ ಬದುಕಿಗೆ ಶಕ್ತಿ ಮತ್ತು ಆನಂದ ನೀಡಲಿ.
ನವರಾತ್ರಿಯ ಶುಭಾಶಯಗಳು. ನಿಮ್ಮ ಸಂಕಲ್ಪಗಳೆಲ್ಲವು ನೆರವೇರಲಿ ಎಂದು ಈ ಮೂಲಕ ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ.
ಇದನ್ನೂ ಓದಿ:
- 100+ Dasara Wishes in Kannada (ದಸರಾ ಹಬ್ಬದ ಶುಭಾಶಯಗಳು)
- 100+ Vijayadashami Wishes in Kannada | ವಿಜಯದಶಮಿ ಶುಭಾಶಯಗಳು
Navratri Wishes Images in Kannada
ನಾವು ನಮ್ಮ ನವರಾತ್ರಿ ಶುಭಾಶಯಗಳ (navratri wishes in kannada) ಸಂಗ್ರಹದ ಅಂತ್ಯಕ್ಕೆ ಬರುತ್ತಿದ್ದಂತೆ, ಈ ಹಬ್ಬದ ಅರ್ಥ ಮತ್ತು ಮಹತ್ವವನ್ನು ಪ್ರತಿಬಿಂಬಿಸುವುದು ಅತ್ಯಗತ್ಯ. ನವರಾತ್ರಿ ಎಂದರೆ ಕೇವಲ ಆಚರಿಸುವ ಹಬ್ಬ ಮಾತ್ರವಲ್ಲ; ನಾವು ನಮ್ಮ ಬೇರುಗಳು, ನಮ್ಮ ಸಂಸ್ಕೃತಿ ಮತ್ತು ನಮ್ಮ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಸಾಧಿಸುವ ಸಮಯ. ದುರ್ಗಾ ಮಾತೆಯ ಶಕ್ತಿ ಮತ್ತು ರಕ್ಷಣೆಗಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಮಯ ಇದು.
ನಾವು ಹಂಚಿಕೊಂಡಿರುವ ಈ ಸರಳ ಮತ್ತು ಹೃತ್ಪೂರ್ವಕ ಶುಭಾಶಯಗಳು ನಮ್ಮ ಪ್ರೀತಿಪಾತ್ರರಿಗೆ ನಮ್ಮನ್ನು ಸಂಪರ್ಕಿಸುವ ಸೇತುವೆಗಳಾಗಿವೆ. ನಮ್ಮ ದೈನಂದಿನ ಜೀವನದ ಗಡಿಬಿಡಿಯಲ್ಲಿ, ನಮ್ಮ ಪ್ರೀತಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ನಾವು ಆಗಾಗ್ಗೆ ಮರೆತುಬಿಡುತ್ತೇವೆ. ಆ ಬಂಧಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಸಂತೋಷವನ್ನು ಹರಡಲು ನವರಾತ್ರಿಯು ನಮಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.
ನವರಾತ್ರಿಯ ಒಂಬತ್ತು ರಾತ್ರಿಗಳು ಕೊನೆಗೊಂಡರೂ, ಈ ಹಬ್ಬದ ಉತ್ಸಾಹವು ವರ್ಷವಿಡೀ ನಮ್ಮೊಂದಿಗೆ ಇರಬೇಕು. ನವರಾತ್ರಿ ಪ್ರತಿನಿಧಿಸುವ ಪ್ರೀತಿ, ಏಕತೆ ಮತ್ತು ಭಕ್ತಿಯ ಮೌಲ್ಯಗಳು ನಿಮ್ಮ ದೈನಂದಿನ ಜೀವನದಲ್ಲಿ ನಿಮಗೆ ಮಾರ್ಗದರ್ಶನ ನೀಡಲಿ.
ನಮ್ಮ ನವರಾತ್ರಿ ಶುಭಾಶಯಗಳ ಸಂಗ್ರಹ (happy navratri wishes in kannada) ನಿಮ್ಮ ಹೃದಯವನ್ನು ಮುಟ್ಟಿವೆ ಎಂದು ಭಾವಿಸುತ್ತೇವೆ. ನಿಮ್ಮೆಲ್ಲರಿಗೂ ನವರಾತ್ರಿಯ ಶುಭಾಶಯಗಳು.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.