In this article, we will guide you on how to write tandege patra in Kannada in detail. We will show you 5 ಶೈಕ್ಷಣಿಕ ಪ್ರವಾಸದ ಬಗ್ಗೆ ತಂದೆಗೆ ಪತ್ರ samples. So, if you are writing letters to your father asking for money for a school or college trip, this article will surely help you.
With the below 5 kannada patra lekhana samples you will understand kannada letter writing format, ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ, and ತಂದೆಗೆ ಪತ್ರ ಬರೆಯುವ ವಿಧಾನ.
Table of Contents
ಶೈಕ್ಷಣಿಕ ಪ್ರವಾಸದ ಬಗ್ಗೆ ತಂದೆಗೆ ಪತ್ರ (Shaikshanika Pravaasada Bagge Tandege Patra)
ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ ಕೋರಿ ತಂದೆಗೆ ಪತ್ರ ಬರೆಯಿರಿ
ಕ್ಷೇಮ ಶ್ರೀ ಇಂದ
ವಿದ್ಯಾಧರ,
SKM ಪ್ರೌಢ ಶಾಲೆ
ಶಿಕಾರಿಪುರ
ಶಿವಮೊಗ್ಗ 577427
ತೀರ್ಥರೂಪ ತಂದೆಯವರಿಗೆ ನಿಮ್ಮ ಮಗನಾದ ರಾಜೇಶನು ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು.
ನಾನು ಇಲ್ಲಿ ಕ್ಷೇಮವಾಗಿದ್ದೇನೆ. ತಾವು ಕೂಡ ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ.
ಈ ಪತ್ರ ಬರೆಯುತ್ತಿರುವ ಉದ್ದೇಶವೇನೆಂದರೆ ಇದೆ ಬರುವ ಮಾರ್ಚ್ ನಲ್ಲಿ ನಮ್ಮ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದ್ದು ಹಂಪಿ, ಬೇಳೂರು, ಹಳೇಬೀಡು, ಬೆಂಗಳೂರು, ಮುರ್ಡೇಶ್ವರ ಇನ್ನೂ ಹಲವಾರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ನನ್ನ ಸ್ನೇಹಿತರೆಲ್ಲರೂ ಈ ಪ್ರವಾಸಕ್ಕೆ ಹೊರಟಿದ್ದು ಶಿಕ್ಷಕರು ಸಹ ಕಡ್ಡಾಯವಾಗಿ ಬರಬೇಕೆಂದು ಹೇಳಿದ್ದಾರೆ. ಆದ್ದರಿಂದ ತಾವು ನನಗೆ ಪ್ರವಾಸಕ್ಕೆ ಹೋಗಲು ಅನುಮತಿ ಮತ್ತು ಅದಕ್ಕೆ ತಗಲುವ ವೆಚ್ಚವಾದ ಒಂದು ಸಾವಿರ ರೂಪಾಯಿಗಳನ್ನು ಕಳುಹಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ
ಮನೆಯಲ್ಲಿ ಎಲ್ಲರಿಗೂ ನನ್ನ ಸವಿ ನೆನಪುಗಳು.
ಇಂತಿ ನಿಮ್ಮ ಪ್ರೀತಿಯ ಮಗ
ಗೆ,
ಪುರಂದರ ಕೆ
ರಾಜಾಜಿನಗರ
ಬೆಂಗಳೂರು – ೫೮೧೩೨೭
ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ತಂದೆಯ ಅನುಮತಿ ಕೋರಿ ಪತ್ರ
ಕ್ಷೇಮ
ಪೂಜ್ಯ ತಂದೆಯವರಿಗೆ,
ನಿಮ್ಮ ಮಗಳಾದ ಪೂಜಾಳು ಮಾಡುವ ನಮಸ್ಕಾರಗಳು
ನಾನು ಇಲ್ಲಿ ಕ್ಷೇಮವಾಗಿರುವೆ. ನಿಮ್ಮ ಕ್ಷೇಮ ತಿಳಿಸಿ. ಪ್ರಥಮ ಹಂತದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವೆ. ಕಳೆದ ವರ್ಷಕ್ಕಿಂತ ಈ ವರ್ಷದ್ದ ಅಂಕಗಳು ಹೆಚ್ಚಾಗಿದ್ದು ಗುರುಗಳು ಸಹ ಸಾಧನೆ ಚೆನ್ನಾಗಿದೆ ಎಂದು ಹೇಳಿದ್ದಾರೆ ಈಗ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದೇನೆ.
ಅಕ್ಟೋಬರ್ ತಿಂಗಳಲ್ಲಿ ನಮ್ಮಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದ್ದಾರೆ. ಶೃಂಗೇರಿ, ಹೊರನಾಡು, ಗೋಕರ್ಣ, ಮುರ್ಡೇಶ್ವರ ಮುಂತಾದ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದಾರೆ. ನಾನು ಈ ಎಲ್ಲಾ ಸ್ಥಳಗಳ ಆಗ್ಗೆ ಬಹಳಷ್ಟು ಕೇಳಿದ್ದೇನೆ ಮತ್ತು ಹೋಗಬೇಕೆಂಬ ಆಸೆಯೂ ತುಂಬಾ ಇದೆ
ಪ್ರವಾಸದ ವೆಚ್ಚಕ್ಕಾಗಿ ಪ್ರತಿ ವಿಧ್ಯಾರ್ಥಿಗೆ ೫೦೦ ಊಪಾಯಿಗಳನ್ನು ನಿಗದಿಪಡಿಸಿದ್ದಾರೆ. ಪ್ರವಾಸದ ಶುಲ್ಕ ೫೦೦ ರುಪಾಯಿಯ ಜೊತೆಗೆ ನನ್ನ ಇತರ ಖರ್ಚುಗಳಿಗೆ ೨೦೦ ಊಪಾಯಿಗಳನ್ನು ನನಗೆ ಕಳುಹಿಸಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಮನೆಯಲ್ಲಿ ಮಾತೃಶ್ರೀಯವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪುಟ್ಟ ತಂಗಿಗೆ ಶುಭ ಹಾರೈಕೆಗಳು.
ಇಂತಿ ನಿಮ್ಮ ಪ್ರೀತಿಯ ಮಗಳು
ಗೆ,
ಹನುಮಂತ ಆರ್
ಉಡುಪಿ – 576225
ನೀವು ಕೈಗೊಳ್ಳಲಿರುವ ಶಾಲಾ ಪ್ರವಾಸಕ್ಕಾಗಿ ಹಣ ಕಳುಹಿಸುವಂತೆ ಪ್ರಾರ್ಥಿಸಿ ನಿಮ್ಮ ತಂದೆಗೆ ಒಂದು ಪತ್ರ ಬರೆಯಿರಿ.
ಸರ್ಕಾರಿ ಪದವಿಪೂರ್ವ ಕಾಲೇಜು,
ಮೈಸೂರು – ೫೬೦೦೦೧
ತೀರ್ಥರೂಪರಿಗೆ,
ನಿಮ್ಮ ಮಗ ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮ.
ಅಲ್ಲಿ ನೀವು ಕ್ಷೇಮವಾಗಿದ್ದೀರೆಂದು ಪ್ರವಾಸ ಹೋಗಬೇಕೆಂದು ಇಚ್ಚಿಸುತ್ತಿದ್ದೇನೆ. ನಾನು ಮುಂದೆ ಬರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆಸುತ್ತಿದ್ದೇನೆ ಮತ್ತು ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗುತ್ತೇನೆಂಬ ನಂಬಿಕೆ ಇದೆ. ಅದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದೇನೆ.
ನಾನು ಈ ಪತ್ರ ಬರೆಯುತ್ತಿರುವ ಮುಖ್ಯ ಉದ್ದೇಶವೇನೆಂದರೆ ನಮ್ಮ ಕಾಲೇಜಿನಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸವನ್ನು ಹಮ್ಮಿಕೊಂಡಿದ್ದು ನಾನೂ ಸಹ ನನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬೇಕೆಂದು ಬಯಸಿದ್ದೇನೆ.
ಅಧ್ಯಯನ ದೃಷ್ಟಿಯಿಂದ ಸಹ ಈ ಪ್ರೇಕ್ಷಣೀಯ ಸ್ಥಳಗಳು ಮುಕ್ತವಾಗಿದೆ. ಆದ ಕಾರಣ ತಾವು ನನ್ನ ಈ ಪ್ರವಾಸಕ್ಕೆ ಹೋಗಲು ಅನುಮತಿ ನೀಡಬೇಕೆಂದು ಕೋರುತ್ತೇನೆ. ಜೊತೆಗೆ ಪ್ರವಾಸದ ವೆಚ್ಚವಾದ ೧೦೦೦ ರೂಪಾಯಿಗಳನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ನಮಸ್ಕಾರಗಳೊಂದಿಗೆ,
ಇಂತಿ ,
ನಿಮ್ಮ ಪ್ರೀತಿಯ ಮಗ
ಹೊರವಿಳಾಸ
ನಂಜುಂಡಪ್ಪ ಕೆ ಎಸ್
ರಾಜಾಜಿನಗರ, ಬೆಂಗಳೂರು – ೫೬೦೦೯೧
ಪ್ರವಾಸಕ್ಕೆ ಹೋಗಲು 500 ರೂಪಾಯಿಗಳನ್ನು ಬೇಡಿ ತಂದೆಗೊಂದು ಪತ್ರ ಬರೆಯಿರಿ.
ದಿನಾಂಕ ೨೩/೧೦/೨೦೨೨
ಇವರಿಂದ,
ಸತೀಶ ಎಸ್
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಶಿರಸಿ, ಉತ್ತರ ಕನ್ನಡ
ತೀರ್ಥರೂಪ ತಂದೆಯವರಿಗೆ,
ನಿಮ್ಮ ಮಗ ಮಾಡುವ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮವಾಗಿದ್ದೇನೆ. ನಿಮ್ಮ ಮತ್ತು ತಾಯಿಯವರ ಕ್ಷೇಮಕ್ಕೆ ಪತ್ರ ಬರೆಯಿರಿ.
ಈ ಪತ್ರ ಬರೆಯುತ್ತಿರುವ ಮುಖ್ಯ ಉದ್ದೇಶವೇನೆಂದರೆ ನಮ್ಮ ಶಾಲೆಯಲ್ಲಿ ಶಿಕ್ಷಕರು ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದ್ದಾರೆ.
ಐಹೊಳೆ, ಹಂಪಿ, ಶ್ರವಣ ಬೆಳಗೊಳ, ಗೋಲ್ ಗುಂಬಜ್ ಸೇರಿ ಇತರ ಸ್ಥಳಗಳಿಗೆ ಐದು ದಿನಗಳ ಪ್ರವಾಸ ನಿಗದಿಯಾಗಿದೆ. ನನಗೂ ನನ್ನ ಸ್ನೇಹಿತರೊಂದಿಗೆ ಈ ಪ್ರವಾಸದಲ್ಲಿ ಭಾಗವಹಿಸುವ ಆಸೆ ಇದ್ದು, ತಾವು ದಯಮಾಡಿ ಒಪ್ಪಿಗೆ ನೀಡಿ, ಪ್ರವಾಸ ಶುಲ್ಕ ಐದುನೂರು ರೂಪಾಯಿಯ ಜೊತೆ ನನ್ನ ಇತರೆ ಖರ್ಚಿಗೆ ಸ್ವಲ್ಪ ಹಣವನ್ನು ಕಳುಹಿಸಿಕೊಡಬೇಕಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇನೆ.
ನನ್ನ ವಿದ್ಯಾಭ್ಯಾಸದಲ್ಲಿ ಯಾವುದೆ ರೀತಿಯ ತೊಂದರೆ ಮಾಡಿಕೊಳ್ಳುವುದಿಲ್ಲವೆಂಬ ಭರವಸೆಯನ್ನು ನೀಡುತ್ತೇನೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುವೆ,
ನಮಸ್ಕಾರಗಳೊಂದಿಗೆ,
ತಮ್ಮ ಪ್ರೀತಿಯ ಮಗ,
ಸಹಿ
ಪ್ರವಾಸಕ್ಕೆ ಹಣ ಕಳುಹಿಸುವಂತೆ ತಂದೆಗೆ ಮಗನ ಪತ್ರ
ರಮೇಶ
ಕುಶಾಲನಗರ
ಕೊಡಗು 571234
ತೀರ್ಥರೂಪ ತಂದೆಯವರಿಗೆ,
ನಿಮ್ಮ ಚಿರಂಜೀವಿ ರಮೇಶನು ಮಾಡುವ ವಂದನೆಗಳು. ಇಲ್ಲಿ ನನ್ನ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿದೆ. ಬರುವ ಬೇಸಿಗೆ ಬಿಡುವಿನಲ್ಲಿ ನಮ್ಮ ಶಾಲೆಯ ವತಿಯಿಂದ ಮಕ್ಕಳಿಗೆ ಹಂಪಿ, ಪಟ್ಟದಕಲ್ಲು, ಐಹೊಳೆ, ಮೈಸೂರು, ಶ್ರವಣ ಬೆಳಗೊಳ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸವನ್ನು ಏರ್ಪಡಿಸುತ್ತಿದ್ದಾರೆ. ಪ್ರವಾಸಕ್ಕೆ ತಗಲುವ ವೆಚ್ಚ ರೂಪಾಯಿ ೫೦೦. ಈ ಪ್ರವಾಸವು ಶೈಕ್ಷಣಿಕ ಪ್ರವಾಸವಾಗಿದ್ದು ನನಗೂ ಹೋಗುವ ಬಯಕೆ. ಇದು ನನ್ನ ಕೊನೆಯ ವರ್ಷದ ಶಾಲಾ ಅವಧಿ ಆಗಿರುವುರಿಂದ ನನಗೂ ನನ್ನ ಸಹಪಾಠಿಗಳೊಂದಿಗೆ ಹೋಗುವ ಆಸೆ ಹೆಚ್ಚಾಗಿದೆ. ಕಾರಣ ಪತ್ರ ತಲುಪಿದ ಕೂಡಲೇ ಹಣವನ್ನು ಕಳುಹಿಸಿ ಕೊಡಲು ವಿನಂತಿ. ಇದರೊಂದಿಗೆ ನಿಮ್ಮ ಆಶೀರ್ವಾದವು ಬೇಕು.
ಮಾತೋಶ್ರೀ ತಾಯಿಯವರಿಗೆ ನನ್ನ ನಮಸ್ಕಾರ ಹಾಗೂ ತಮ್ಮನಿಗೆ ಪ್ರೀತಿಯ ಹಾರೈಕೆಗಳನ್ನೂ ತಿಳಿಸಿ.
ತಮ್ಮ ಪ್ರೀತಿಯ,
ರಮೇಶ
ಗೆ,
ಶ್ರೀ ರವಿ ಕುಮಾರ್ ಎಂ
ಜಮಖಂಡಿ, ಬಾಗಲಕೋಟ
Tandege patra bareyuvudu tumba sulabha embuvudannu naavu ee melina 5 kannada patra lekhana samplegala moolaka tilisuva prayatna maadiddeve endu bhaavisuttene.
I hope this article helped you to write a letter to your father asking for money for a trip of school or college. If we missed anything to add on any of these ಶೈಕ್ಷಣಿಕ ಪ್ರವಾಸದ ಬಗ್ಗೆ ತಂದೆಗೆ ಪತ್ರಗಳು then please tell us in the comments section below.