100+ Teachers Day Quotes in Kannada (ಶಿಕ್ಷಕರ ದಿನಾಚರಣೆ Wishes)

Teachers Day Quotes in Kannada

ಈ ಲೇಖನದಲ್ಲಿ ನಮ್ಮ ಶಿಕ್ಷಕರಿಗೆ ಧನ್ಯವಾದ ಮತ್ತು ಗೌರವಿಸುವ ಸರಳ ಮತ್ತು ಹೃತ್ಪೂರ್ವಕ ಉಲ್ಲೇಖಗಳನ್ನು (happy teachers day quotes in kannada) ನಾವು ಸಂಗ್ರಹಿಸಿದ್ದೇವೆ.

ನಮ್ಮೆಲ್ಲರ ಯಶಸ್ವಿ ಜೀವನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಗುರುಗಳಿಗೆ ನಮನ ಸಲ್ಲಿಸಲು ಶಿಕ್ಷಕರ ದಿನಾಚರಣೆಯು ಒಂದು ಅತ್ಯುತ್ತಮ ದಿನವಾಗಿದೆ. 

ಶಿಕ್ಷಕರು ನಮಗಾಗಿ ಮಾಡುವ ಎಲ್ಲಾ ಮಹತ್ತರವಾದ ಕೆಲಸಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ಉಲ್ಲೇಖಗಳ ಸಂಗ್ರಹ (collection of teachers day wishes in kannada) ನಿಮಗೆ ಖಂಡಿತ ಸಹಾಯ ಮಾಡುತ್ತವೆ. 

ನಮ್ಮ ಜೀವನದಲ್ಲಿ ಶಿಕ್ಷಕರು ಬಹಳ ಮುಖ್ಯ. ಅವರು ಕೇವಲ ಪುಸ್ತಕಗಳಿಂದ ನಮಗೆ ವಿಷಯವನ್ನು ಕಲಿಸುವುದಿಲ್ಲ. ಪ್ರಮುಖ ಕೌಶಲ್ಯಗಳನ್ನು ಕಲಿಯಲು ನಮಗೆ ಸಹಾಯ ಮಾಡುತ್ತಾರೆ. ಅವರು ಹೇಗೆ ಬಲಶಾಲಿಯಾಗಬೇಕು ಮತ್ತು ಇತರರನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ತೋರಿಸುತ್ತಾರೆ.

ಶಿಕ್ಷಕರು ನಮಗೆ ಇನ್ನಷ್ಟು ಕಲಿಯಲು ಕುತೂಹಲ ಮೂಡಿಸುತ್ತಾರೆ. ಕಠಿಣ ವಿಷಯಗಳನ್ನು ಎದುರಿಸಲು ನಮಗೆ ಆತ್ಮವಿಶ್ವಾಸವನ್ನು ನೀಡುತ್ತಾರೆ ಮತ್ತು ಉತ್ತಮ ವ್ಯಕ್ತಿಯಾಗಲು ನಮಗೆ ಸಹಾಯ ಮಾಡುತ್ತಾರೆ.

ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ಪ್ರಮುಖ ಪಾತ್ರವನ್ನು ಗೌರವಿಸಲು ಮತ್ತು ಪ್ರಶಂಸಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಧನ್ಯವಾದ ಹೇಳುವ ದಿನವಿದು. ಅನೇಕ ದೇಶಗಳಲ್ಲಿ, ಶಿಕ್ಷಕರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಹೆಸರಾಂತ ಶಿಕ್ಷಣತಜ್ಞ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ.

ಈ ದಿನವು ನಮ್ಮ ಶಿಕ್ಷಕರನ್ನು ನಾವು ಎಷ್ಟು ಗೌರವಿಸುತ್ತೇವೆ ಎಂಬುದನ್ನು ತೋರಿಸುವ ವಿಶೇಷ ದಿನವಾಗಿದೆ. ಜೀವನದಲ್ಲಿ ನಮಗೆ ಸಹಾಯ ಮಾಡುವ ಅನೇಕ ವಿಷಯಗಳನ್ನು ಶಿಕ್ಷಕರು ನಮಗೆ ಕಲಿಸುತ್ತಾರೆ. 

ವಿಶೇಷ ಶಿಕ್ಷಕರ ದಿನದ ಉಲ್ಲೇಖಗಳ ಸಂಗ್ರಹದೊಂದಿಗೆ (teachers day quotes kannada) ನಮ್ಮ ಅದ್ಭುತ ಶಿಕ್ಷಕರನ್ನು ನೆನೆಸಿಕೊಂಡು ಈ ದಿನವನ್ನು ಆಚರಿಸಲು ಸಿದ್ಧರಾಗಿ.

Happy Teachers Day Quotes in Kannada

 

ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಗುರು ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರ||

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ನಾಡಿನ ಎಲ್ಲಾ ಗುರುವರ್ಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಗುರುವಿಂದ ದೈವಗಳು ಗುರುವಿಂದ ಬಂಧುಗಳು

ಗುರುವಿಂದಲೇ ಸಕಲ ಪುಣ್ಯಂಗಳು ಲೋಕಕ್ಕೆ

ಗುರುವೀಗ ದೈವ ಸರ್ವಜ್ಞ ||

 

ಭವಿಷ್ಯದಲ್ಲಿ ನನ್ನ ಜನ್ಮ ದಿನಾಚರಣೆ ಆಚರಿಸುವುದಾದರೆ ಅದನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದು ಸರ್ವಂಪಲ್ಲಿ ರಾಧಕೃಷ್ಣನ್ ಅವರು ಹೇಳಿದ್ದರು. ಅದನ್ನು ಅಕ್ಷರ ದಾಸೋಹ ಮೂಲಕ ಸಾರ್ಥಕಗೊಳಿಸಿದವರು ನಮ್ಮ ನಡೆದಾಡುವ ದೇವರು.

ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ನನ್ನ ಈ ಯಶಸ್ವಿ ಜೀವನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಿಳಿಸಿ ಹೇಳಿದ ಎಲ್ಲ ನನ್ನ ಗುರುಗಳಿಗೆ ಮತ್ತು ಗುರು ಮಾತೆಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ನನಗೊಂದು ಆಸೆಯಿದೆ

ನನ್ನ ವಿದ್ಯಾರ್ಥಿಯೊಬ್ಬ ವೈದ್ಯನಾದರೆ

ಅವನ ಬಳಿ ನಾನು ಚಿಕಿತ್ಸೆಗಾಗಿ ತೆರಳಬೇಕು

ನನಗೊಂದು ಆಸೆಯಿದೆ

ನನ್ನ ವಿದ್ಯಾರ್ಥಿಯೊಬ್ಬ ವಕೀಲನಾದರೆ

ನನ್ನ ಕೇಸೊಂದು ಅವನ ಬಳಿ ಇತ್ಯರ್ಥವಾಗಬೇಕು

ನನಗೊಂದು ಆಸೆಯಿದೆ

ನನ್ನ ವಿದ್ಯಾರ್ಥಿಯೊಬ್ಬ ಪೋಲೀಸನಾದರೆ

ನನ್ನ ಸಮಸ್ಯೆಯ ದೂರೊಂದನು ಅವನಿಗೆ ನೀಡಬೇಕು

ನನಗೊಂದು ಆಸೆಯಿದೆ 

ನನ್ನ ವಿದ್ಯಾರ್ಥಿಯೊಬ್ಬ ಯೋಧನಾದರೆ 

ನನ್ನ ಎದೆಯುಬ್ಬಿಸಿ ಅವನಿಗೆ ಗೌರವ ಸಲ್ಲಿಸಬೇಕು

ನನಗೊಂದು ಆಸೆಯಿದೆ

ನನ್ನ ವಿದ್ಯಾರ್ಥಿಯೊಬ್ಬ ರೈತನಾದರೆ

ಅವನು ಬೆಳೆದ ಅನ್ನದ ಕೈತುತ್ತು ತಿನ್ನಬೇಕು 

ನನಗೊಂದು ಆಸೆಯಿದೆ

ನನ್ನ ವಿದ್ಯಾರ್ಥಿಯೊಬ್ಬ ನನ್ನಂತೆಯೇ ಶಿಕ್ಷಕನಾದರೆ

ಅವನ ಬಳಿ ಕಲಿಯಲು ನನ್ನ ಮಕ್ಕಳನ್ನು ಸೇರಿಸಬೇಕು

ನನಗೊಂದು ಮಹದಾಸೆಯಿದೆ

ಈ ಭೂಮಿಯ ಮೇಲೆ ನನಗೆಷ್ಟೇ ಜನ್ಮಗಳು ಬಂದರು 

ಆ ಎಲ್ಲಾ ಜನ್ಮಗಳಲ್ಲಿಯೂ ಶಿಕ್ಷಕನಾಗಿಯೇ ಹುಟ್ಟಬೇಕು. ರಾಜು ಎಸ್ ರಾಜಣ್ಣ. 

 

ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಜೊತೆಗೆ ದೇಶದ ಭವ್ಯ ಭವಿಷ್ಯವನ್ನು ರೂಪಿಸುವವರು ಶಿಕ್ಷಕ ವೃಂದದವರು.

 

ತಮ್ಮ ಜ್ಞಾನ, ಪಾಂಡಿತ್ಯ, ಸಹನೆ- ದೂರದೃಷ್ಟಿಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರ ಗುರಿ ತಲುಪಲು ಮಾರ್ಗದರ್ಶಕರಾಗಿ ಬಾಳನ್ನು ಬೆಳಗುವಂತಹ ಗುರುಗಳಿಗೆ ಪ್ರಣಾಮಗಳು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

“ಮುಗ್ಧ ಮನದಲ್ಲಿ ಅಕ್ಷರವ ಭಿತ್ತಿ ,

ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,

ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು…”

ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಉಸಿರು ಕೊಡುವವಳು ತಾಯಿ ಹೆಸರು ಕೊಡುವವನು ತಂದೆ ಆ ಹೆಸರನ್ನು ಉಸಿರು ಇರುವವರೆಗೂ ಕಾಪಾಡಿಕೊಂಡು ಹೋಗುವ ವಿದ್ಯೆ ಕೊಡುವವನು ಗುರು. ಎಲ್ಲರಿಗೂ ಶಿಕ್ಷಕರ ದಿನಾಚಣೆಯ ಶುಭಾಶಯಗಳು.

 

“ಗುರು ” ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ.

ಕತ್ತಲೆಯಿಂದ ನಮ್ಮನ್ನು ಬೆಳಕಿನಡೆಗೆ ಕರೆದುಕೊಂಡು ಹೋಗುವ ಏಕೈಕ ವ್ಯಕ್ತಿ “ಶಿಕ್ಷಕ” ಸದಾಕಾಲ ನಮಗೆ ಆದರ್ಶಗಳನ್ನ ಭೋದಿಸುತ್ತಾ, ಆದರ್ಶ ವ್ಯಕ್ತಿಗಳಾಗಿ ವಿಧ್ಯಾರ್ಥಿಗಳ ಜೀವನ ಮೆರುಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ನಿಮಗೆಲ್ಲರಿಗೂ “ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

“HAPPY TEACHER’S DAY”

 

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ  

ಮಕ್ಕಳ ಭವಿಷ್ಯಕ್ಕೆ ಬೆಳಕನ್ನು

 ಚೆಲ್ಲಿ ಸುಂದರ ನಾಡ ಕಟ್ಟುವ  

ಶಿಲ್ಪಿಗಳು ಶಿಕ್ಷಕರು.

 

ಗುರುಬ್ರಹ್ಮ ಗುರು ವಿಷ್ಣು 

ಗುರುದೇವೋ ಮಹೇಶ್ವರ

 ಗುರು ಸಾಕ್ಷಾತ್ ಪರಬ್ರಹ್ಮ 

ತಸ್ಮೈಶ್ರೀ ಗುರುವೇ ನಮಃ

 

ಎನ್ನನ್ನು ಅಜ್ಞಾನವೆಂಬ ಕತ್ತಲೆಯಿಂದ, ಸುಜ್ಞಾವೆಂಬ ಬೆಳಕಿನೆಡೆಗೆ, ಹೆಜ್ಜೆ ಹೆಜ್ಜೆಗೂ ಕೈಯಿಡಿದು ನೆಡಸಿ ಇಲ್ಲಿಯವರೆಗೂ ಕರೆತಂದ ಎಲ್ಲ ನನ್ನ ಗುರುವೃಂದಕ್ಕೆ ಅನಂತ ನಮನಗಳು. ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸದಾ ಹೀಗೆ ಇರಲಿ.

     

       

ಗುರುವಿಂದ ದೈವಗಳು ಗುರುವಿಂದ ಬಂಧುಗಳು

ಗುರುವಿಂದಲೇ ಸಕಲ ಪುಣ್ಯಂಗಳು ಲೋಕಕ್ಕೆ

ಗುರುವೀಗ ದೈವ ಸರ್ವಜ್ಞ ||

 

ಸಾವಿರ ದಿನಗಳ ಸುದೀರ್ಘ ಓದಿಗಿಂತಲೂ ಶ್ರೇಷ್ಠ ಶಿಕ್ಷಕರ ಜೊತೆ ಕಳೆದ ಒಂದು ದಿನದಿಂದ ದೊರೆವ ಜ್ನಾನವೇ ಲೇಸು. ಶಿಕ್ಷಕರ ದಿನಾಚರಣೆಯ ಶುಭಾಷಯಗಳು.

 

ಅರಿಯದ ಕಲ್ಲಿಗೆ ಜ್ನಾನವನ್ನಿತ್ತು ಮೂರ್ತಿಯ ಮಾಡಿದ ವಿದ್ಯ ಚೇತನರಿಗೆ ನನ್ನ ನಮನ. ವಿದ್ಯೆಯ ನೀಡಿದ ಎಲ್ಲಾ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು.

 

ಸಿಕ್‌ಸಿಕ್ಕೋರ‌ ದಿನಾಚರಣೆ ಆಚರಿಸೋದಕ್ಕಿಂತ ಶಿಕ್ಷಕರ ದಿನಾಚರಣೆ‌ ಆಚರಿಸೋದು ಅರ್ಥಪೂರ್ಣ. ಹ್ಯಾಪಿ ಟೀಚರ್ಸ್ ಡೆ.

 

ತಮ್ಮ ಜೀವನವಿಡಿ ನಿಸ್ವಾರ್ಥದಿಂದ ದುಡಿದು ಸಾವಿರಾರು ಮಕ್ಕಳ ಜೀವನ ಹಾಸನಾಗಿಸುವ ಗುರು ದೇವ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಷಯಗಳು.

 

ಭವಿಷ್ಯದಲ್ಲಿ ನನ್ನ ಜನ್ಮ ದಿನಾಚರಣೆ ಆಚರಿಸುವುದಾದರೆ ಅದನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದು ಸರ್ವಂಪಲ್ಲಿ ರಾಧಕೃಷ್ಣನ್ ಅವರು ಹೇಳಿದ್ದರು. ಅದನ್ನು ಅಕ್ಷರ ದಾಸೋಹ ಮೂಲಕ ಸಾರ್ಥಕಗೊಳಿಸಿದವರು ನಮ್ಮ ನಡೆದಾಡುವ ದೇವರು.

ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಅಕ್ಷರ ಎಂಬ ಬೀಜವ ಬಿತ್ತಿ

ಜ್ನಾನ ಎಂಬ ಬೆಳಕು ಚೆಲ್ಲಿ

ಬಾಳಿಗೊಂದು ಅರ್ಥ ಕಲ್ಪಿಸಿದ ಎಲ್ಲಾ ಪ್ರೀತಿಯ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.

 

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ, ಗುರು ಸಮಾನರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಂದಿರೇ ಮಗುವಿಗೆ ಮೊದಲ ಗುರುಗಳು! ಜೀವನದ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಕಲಿಕೆಯ ತೇರನೇರಿಸಿದವರು

ಅಂಧಕಾರವ ಕೆಡವಿದವರು

ಜ್ನಾನವನ್ನು ಹಸಿವಾಗಿಸಿದವರು

ಕಲ್ಲನ್ನು ಮೂರ್ತಿಯಾಗಿಸಿದವರು

ಅಖಂಡ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಷಯಗಳು.

 

ಮುಗ್ಧ ಮನದಲ್ಲಿ ಅಕ್ಷರವ ಬಿತ್ತಿ ,

ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,

ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು.

ಸಮಸ್ತ ಶಿಕ್ಷಕರ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.‌.

 

“ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”

 

ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

Best Teachers Day Wishes in Kannada

ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ .

ಮೊದಲ ಅಕ್ಷರ ತಿದ್ದಿದ ಅಪ್ಪ ಅಮ್ಮನಿಂದ ಹಿಡಿದು

ವಿದ್ಯಾ ಬುದ್ಧಿ ಕಲಿಸಿ ಬದುಕಿಗೆ ದಾರಿ ದೀಪವಾಗಿರುವ

ಎಲ್ಲಾ ಗುರು ಹಿರಿಯರಿಗೂ ನನ್ನ ಕೋಟಿ ನಮನ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

ಬಹಳ ಒಳ್ಳೇರ್ ನಮ್ಮ್ ಮಿಸ್ಸು ….

ಏನ್ ಕೇಳಿದ್ರು yes ಯೆಸ್ಸು ….

ನಗ್ತಾ ನಗ್ತಾ ಮಾತಾಡ್ತಾರೆ 

ಸ್ಕೂಲಿಗೆಲ್ಲಾ famous…

ಚಿಕ್ಕವಳಿದ್ದಾಗ ನನಗೆ ಈ ಹಾಡು ತುಂಬಾ ಇಷ್ಟ …

ಇಂದು ಈ ಹಾಡು ನೆನಪಾಯ್ತು 

ಗುರಿ ತೋರಿದ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

“ಶಿಕ್ಷಣ ಎಂಬುದು ಕೇವಲ ಪಠ್ಯಕ್ರಮವಾಗಿರದೆ, ಮಕ್ಕಳಲ್ಲಿ ಧನಾತ್ಮಕ ಚಿಂತನೆಯುಂಟುಮಾಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಜೀವನ ಶೈಲಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕಲಿಸುವವರೇ ನಿಜವಾದ ಶಿಕ್ಷಕರು”. 

 

ಸಮಸ್ತ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.  

 

ಗುರುವಿಗೆ ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ  ಬಾಳಿಗೆ ಭವ್ಯ ಬೆಳಕು‌ ನೀಡಿದ  ಪರಮ ಗುರುಗಳಿಗೆ ಗುರುಸಮಾನರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

ಎಲ್ಲ ಶಿಕ್ಷಕರಿಗೂ ಹಾಗೂ ನನಗೂ ಕೂಡಾ ವಿದ್ಯಾದಾನ ಮಾಡಿದ ಶಿಕ್ಷಕರಿಗೂ ಸರ್ವಪಲ್ಲಿ ರಾಧಾಕೃಷ್ಣ ರವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಜ್ಞಾನದ ಬೆಳಕನ್ನು ನೀಡಿ, ಮಾನವೀಯ ಮೌಲ್ಯಗಳನ್ನು ಹೇಳಿಕೊಟ್ಟು ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಲು ಕಾರಣರಾದ ನನ್ನೆಲ್ಲಾ ಗುರುವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಹೋಂ ವರ್ಕ್ ಮಾಡದಿದ್ದರೂ, ಮಾಡಿದ್ದೆ ಪಟ್ಟಿ ಮನೆಲಿ ಬಿಟ್ ಬಂದನೆ ಅಂದಾಗ ನಂಬುವ ಎಲ್ಲಾ ಅಕ್ಕೋರು, ಸರ್ ಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಕರಿಲ್ಲದೆ ವ್ಯಕ್ತಿತ್ವ ವಿಕಸನವಾಗುವುದಿಲ್ಲ, ಶಿಕ್ಷಕರಿಲ್ಲದೆ ಉತ್ತಮ ಸಮಾಜ ನಿರ್ಮಾಣವಾಗುವುದಿಲ್ಲ. ತಿದ್ದಿ ತೀಡಿ ವಿದ್ಯೆ ಮತ್ತು ಬುದ್ಧಿ ಕಲಿಸುವ ಪೂಜ್ಯ ಸಮಾನರಾದ ಸಮಸ್ತ ಶಿಕ್ಷಕರಿಗೆ ‘ಶಿಕ್ಷಕ ದಿನಾಚರಣೆ’ಯ ಶುಭಾಶಯಗಳು.

 

ಪ್ರತ್ಯಕ್ಷವಾಗಿ ಪರೋಕ್ಷವಾಗಿ ಜೀವನದ ಪಾಠಗಳನ್ನು ಕಲಿಸಿ ಕೊಟ್ಟ ಎಲ್ಲಾ ನನ್ನ ನೆಚ್ಚಿನ ಗುರುಗಳಿಗೆ , ಶಿಕ್ಷಕರ ದಿನಾಚರಣೆಯ ಶುಭಾಶಯಗಳು. Wishing all the teacher’s of my life “Happy Teachers’ day” . 

 

ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

“ಸಾಧಾರಣ ಶಿಕ್ಷಕ ಹೇಳುತ್ತಾನೆ, 

 ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ, 

ಉನ್ನತ ಶಿಕ್ಷಕನು ಪ್ರದರ್ಶಿಸುತ್ತಾನೆ,

 ಮಹಾನ್ ಶಿಕ್ಷಕರು ಸ್ಫೂರ್ತಿ ನೀಡುತ್ತಾರೆ. ”

ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

ಅಕ್ಷರ ಕಲಿಸಿ,ತಿಳುವಳಿಕೆ ನೀಡಿ ಬದುಕಿನ ದಾರಿಯಲ್ಲಿ ಕೈ ಹಿಡಿದು ನಡೆಸಿದ ನನ್ನೆಲ್ಲ ಶಿಕ್ಷಕರಿಗೆ ನನ್ನ ಸಾಷ್ಟಾಂಗ ನಮನಗಳು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ವಿದ್ಯಾರ್ಥಿ ಭಾವನೆಗಳ ಹೇಳದೆ ಅರ್ಥೈಸುವ, 

ತಪ್ಪು – ಸರಿಗಳ, ಸಹನೆಯೊಂದಿಗೆ ಸರಿದೂಗಿಸುವ, 

ಶಿಕ್ಷಣವನ್ನು ಆರಾಧಿಸಿ ಪೋಷಿಸುವ ಏಕೈಕ ಜೀವಿ, 

ಅದು ಗುರು ಮಾತ್ರ.

ನನ್ನ ಎಲ್ಲಾ ಗುರು ವೃಂದಕ್ಕೆ , ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

ಪೂಜ್ಯ ಸ್ಥಾನದಲ್ಲಿರುವ ನನ್ನ ಪ್ರೀತಿಯ  ಗುರುಗಳಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು  ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

Best Teachers Day Thoughts in Kannada

ಎಂತಹ ಸಮಸ್ಯೆ ಎದುರಾದರು ಸಮಯದ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಶಿಕ್ಷಕರಿರುವುದರಿಂದ ಮಕ್ಕಳ ಕಲಿಕೆ ಎಂದಿಗೂ ನಿಲ್ಲುವುದಿಲ್ಲ. 

ಬದುಕನ್ನು ಕಲಿತು ಬದುಕುವುದನ್ನು ಕಲಿಸುತ್ತಿರುವ ಗುರು ಶ್ರೇಷ್ಠರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!

 

ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

 

ಸುಶಿಕ್ಷಿತ ಸಮಾಜವನ್ನು ರೂಪಿಸುವ ಕೈಂಕರ್ಯದಲ್ಲಿ ತಮ್ಮ ಅತ್ಯಮೂಲ್ಯ ಸೇವೆಯ ಧಾರೆಯೆರೆಯುವ ಎಲ್ಲಾ ಶಿಕ್ಷಕ ವೃಂದದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಶಿಕ್ಷಕರ ದಿನಾಚರಣೆ ಶುಭಾಶಯಗಳು ಶಿಕ್ಷಣದಿಂದಲೇ ಬಾಳು ಬಂಗಾರ “ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ” ನಮನಗಳು.

 

ಶಿಕ್ಷಕ ವೃತ್ತಿ ಇತರ ವೃತ್ತಿಯನ್ನು ಹುಡುಕಲು ಸಹಾಯ ಮಾಡುವ ವೃತ್ತಿ..!! ಶಿಕ್ಷಕರ ದಿನಾಚರಣೆ ಶುಭಾಶಯಗಳು.

 

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಜ್ಞಾನ,ಸುಜ್ಞಾನವನ್ನು ಧಾರೆಯರೆದು, ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಎಲ್ಲ ಶಿಕ್ಷಕರಿಗೂ ನನ್ನ ಗೌರವಪೂರ್ವಕ ನಮನಗಳು ಮತ್ತು ಶುಭಾಶಯಗಳು.

 

ನಮ್ಮಲ್ಲಿನ ಅಜ್ಞಾನದ ಅಂಧಕಾರವನ್ನು ತಮ್ಮ ಜ್ಞಾನ ದೀವಿಗೆಯ ಮುಖಾಂತರ ತೊಲಗಿಸಿ, ಬದುಕುವ ದಾರಿ ಮತ್ತು ಗುರಿ ತೋರಿದ ಗುರುವೃಂದಕ್ಕೆ ಸಾವಿರ ಸಾವಿರ ವಂದನೆ. ಶಿಕ್ಷಕರ ದಿನಾಚರಣೆ ಹಾರ್ದಿಕ ಶುಭಾಶಯಗಳು.

 

‘ನಹೀ ಜ್ಞಾನೇನ ಸದೃಶಮ್’ ಜ್ಞಾನಕ್ಕೆ ಸಮನಾದದ್ದೂ ಯಾವುದೂ ಇಲ್ಲ..ಅಜ್ಞಾನವೆಂಬ ಕತ್ತಲನ್ನು ಜ್ಞಾನದ ಬೆಳಕಿನಿಂದ ದೂರ ಮಾಡುವ..ಭೋದನೆಯ ಮೂಲಕ ಸಾಧನೆಯ ಹಾದಿ ತೋರಿಸುವ.. ದೈವ ಸಮಾನರಾದ ಸಮಸ್ತ ಗುರುವೃಂದಕ್ಕೆ ‘ಶಿಕ್ಷಕರ ದಿನಾಚರಣೆ’ಯ ಶುಭಾಶಯಗಳು. “ಗುರುದೇವೋ ಭವ”

 

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು. ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಶಿಕ್ಷಕರ ದಿನದ ಶುಭಾಶಯಗಳು. ವಿದ್ಯಾರ್ಥಿಗಳಿಗೆ ತಮ್ಮ ರೆಕ್ಕೆಗಳನ್ನು ಪಡೆಯಲು ಸಹಾಯ ಮಾಡುತ್ತಾ, ಎಲ್ಲರಿಗಿಂತ ಎತ್ತರಕ್ಕೆ ಏರುತ್ತಾರೆ ಎಂದು ಅವರಲ್ಲಿ ಆತ್ಮವಿಶ್ವಾಸ ತುಂಬುವವರೇ ನಿಜವಾದ ಶಿಕ್ಷಕರು.

 

ಗುರುವಿಂದ ಬಂಧುಗಳು, ಗುರುವಿಂದ ಪರದೈವ ಗುರುವಿಂದಲಾದುದು ಪುಣ್ಯ ಲೋಕಕ್ಕೆ ಗುರುವಿಂದ ಮುಕ್ತಿ – ಸರ್ವಜ್ಞ. ಸಮಸ್ತ ಗುರುಕುಲಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವವಾಗಿದೆ. ಜೀವನದ ಪ್ರತಿಯೊಂದು ತಪ್ಪುಗಳನ್ನು ತಿದ್ದಿ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಶಿಕ್ಷಣ ತಜ್ಞರು ಹಾಗೂ ಮಾಜಿ ರಾಷ್ಟ್ರಪತಿಗಳಾದ ಡಾ.ಎಸ್ ರಾಧಾಕೃಷ್ಣನ್ ಅವರ ಜನ್ಮದಿನದಂದು ಗೌರವದ ನಮನಗಳು.

 

ಜೀವನದ ಪಾಠ ಹೇಳಿಕೊಡೋ ಪ್ರತಿಯೊಬ್ಬನು ಶಿಕ್ಷಕನೇ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ವಿದ್ಯೆ ಕಲಿಸಿದ ಗುರುವಿಗೆ ಹಾಗೂ ಜೀವನದ ಪಾಠ ಹೇಳಿಕೊಟ್ಟ ಗುರುವಿಗೂ “ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

 

ನನ್ನ ಗುರುಗಳು ಕಲಿಸಿದ ಜೀವನಾನುಭವಗಳನ್ನು ಮತ್ತೊಮ್ಮೆ ಮಗದೊಮ್ಮೆ ಕೆದಕಿ ಗತವೈಭವದ ಸಂತಸವನ್ನು ಸವಿಯಲು ನಾನು ಸರಿದು ಹೋದ ಕಾಲದೊಳಕ್ಕೆ ಆಗಾಗ ಹೊಕ್ಕಿ ಬರುತ್ತಿರುತ್ತೇನೆ. ಈಗ ನಾನೇನಾಗಿದ್ದೇನೋ, ಮುಂದೇನಾಗುತ್ತೇನೋ ಅದಕ್ಕೆ ಅವರು ಕಲಿಸಿದ ಪಾಠವೂ ಕಾರಣ.ಎಲ್ಲಾ ನನ್ನ ಗುರು ಹಿರಿಯರಿಗೆ ಶಿಕ್ಷಕರ ದಿನದ ಶುಭಾಶಯಗಳು..

 

‘‘ಒಂದು ವೇಳೆ ನನ್ನ ತಲೆಯನ್ನು ಕತ್ತರಿಸಿದರೆ, ಅದನ್ನು ಗುರುವಿನ ಪಾದದಡಿಗೆ ಸಮರ್ಪಿಸುತ್ತೇನೆ. ಗುರುವಿಗೆ ನನ್ನ ಈ ಕಾಣಿಕೆಯೂ ಅತ್ಯಲ್ಪವಾದುದು,’’ ಈ ಮಾತನ್ನು ಹೇಳಿದ್ದು ಸಂತ ಕಬೀರರು. ಜ್ಞಾನದೀಪವಾದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು.

 

ಅಮೂಲ್ಯವಾದ ಜ್ಞಾನದ ಬೆಳಕಿನಿಂದ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿ, ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು. ಸುಶಿಕ್ಷಿತ ಸಮಾಜ ಕಟ್ಟಲು ಶಿಕ್ಷಕರ ಕೊಡುಗೆ ಅವಿಸ್ಮರಣೀಯವಾದುದು. ನನ್ನ ಜೀವನದಲ್ಲಿ ಜ್ಞಾನದ ಬೆಳಕು ನೀಡಿದ ಎಲ್ಲಾ ಗುರುಗಳಿಗೂ ಗೌರವಪೂರ್ವಕ ನಮನಗಳು.

 

ಶಿಕ್ಷಣವೆಂಬ ಹುಲಿಯ ಹಾಲನ್ನು ಯಾವುದೇ ಬೇಧವಿಲ್ಲದೇ ಉಣಿಸುತ್ತಿರುವ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಜೀವನದಲ್ಲಿ ಗುರಿ, ಸಾಧನೆಯ ಹಠ, ಶಿಸ್ತು ಇವೆಲ್ಲಾ ಕಲಿಸಿದ ಎಲ್ಲಾ ಗುರು ಹಿರಿಯರಿಗೆ‌ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ನನ್ನನ್ನು ಜೀವನದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗೆ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ – ನನ್ನ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

 

ಗುರುವೆ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆಯಿದೆ ಸೊನ್ನೆ ಹಿಂದೆ ಇದ್ದರಂಕಿ ಸೊನ್ನೆಗಾಗ ಬೆಲೆಯಿದೆ….. ನಿಮ್ಮನ್ನುಳಿದ ನನ್ನ ಬದುಕು ನಿಮ್ಮಾಣೆಗು ಶೂನ್ಯವು ಅಲ್ಪಬುದ್ಧಿ ಅತಿಯಾಸೆ ಅಹಂಕಾರ ಭರಿತವು….. ಗುರುವಿಲ್ಲದ ಬಾಳು ಗುರಿಯಿಲ್ಲದ ಜನುಮ ವ್ಯರ್ಥ ನನ್ನೆಲ್ಲ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಅಕ್ಷರ,,ವಿದ್ಯೆ,,ಕಲಿಕೆ,, ಶಿಸ್ತು,,ಪ್ರಾರ್ಥನೆ,,ನಡವಳಿಕೆ ಕನ್ನಡ ,, ಜ್ಞಾನ ,, ವಿಜ್ಞಾನ ,, ಲೆಕ್ಕ ,,ಬಣ್ಣ ,, ಬದುಕು ಪೆಟ್ಟುಕೊಟ್ಟು,,ಮನಸುಕೊಟ್ಟು ..ನಮ್ಮನ್ನು ಏನೇನೋ ಮಾಡಿ .. ಅವರು ಅವರಾಗೆ ಉಳಿಯುವ ಗುರುಗಳಿಗೆ … “ಶಿಕ್ಷಕರ ದಿನದ ಶುಭಾಶಯಗಳು”

 

ನಾಡಿನ ಸಮಸ್ತ ಶಿಕ್ಷಕರಿಗೆ, ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಗೌರವದ ನಮನಗಳು. ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಗೌರವ ಪೂರ್ವಕ ನಮನಗಳು.

 

ಕೇವಲ ಬೋಧಿಸಿದವರು ಶಿಕ್ಷಕರಲ್ಲ, ನಿಮ್ಮೊಳಗೆ ಒಂದು ಕಿಚ್ಚು ಹತ್ತಿಸುವವರು ನಿಜವಾದ ಶಿಕ್ಷಕರು ಶಿಕ್ಷಕರ ದಿನದ ಶುಭಾಶಯಗಳು.

 

ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ‌ಸ್ಮರಿಸುವ ಸಲುವಾಗಿ ಅವರ ಜನ್ಮದಿನದಂದು ಶಿಕ್ಷಣ ದಿನಾಚರಣೆ ಆಚರಿಸಲಾಗುತ್ತದೆ. ಸಮಸ್ತ ಜನತೆಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು.

 

ಗುರುದೇವೋಭವಃ ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷಕರ ನೆನಪಿಗಾಗಿ ಡಾ ರಾಧಾಕೃಷ್ಣ ಅವರ ಜನ್ಮದಿನ ಸೆಪ್ಟೆಂಬರ್ 5 ಅನ್ನು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಸ್ತ ಶಿಕ್ಷಕವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಪಠ್ಯಗಳನ್ನು ಬೋಧಿಸುವ ಜತೆ ಜೀವನದ ಪಾಠವನ್ನೂ ಹೇಳಿಕೊಡುವ ಹಾಗೂ ಧರ್ಮದ ದಾರಿಯಲ್ಲಿ ನಡೆಯುವುದರ ಮಹತ್ವದ ಕುರಿತು ಮಾರ್ಗದರ್ಶನ ನೀಡುವ ಶಿಕ್ಷಕರಿಗೆ ಅತ್ಯುಚ್ಛ ಗೌರವ ನೀಡುವ ಸಂಸ್ಕೃತಿ ನಮ್ಮದು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಆಗ ಮಾತ್ರ ಒಳಿತಾಗುವುದು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

 

ಶಿಕ್ಷಕರ ದಿನಾಚರಣೆಯ ಶುಭಾಶಯಗಳು! ಬಹುಶ ಶಿಕ್ಷಕರೇ ಇಂದಿನ ಯುವ ಜನಾಂಗವನ್ನು ರಕ್ಷಿಸಬಲ್ಲರು.

ಇದನ್ನೂ ಓದಿ:

Teachers Day Quotes in Kannada Images

ನಾವು ಶಿಕ್ಷಕರ ದಿನವನ್ನು ಆಚರಿಸುವಾಗ, ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಶಕ್ತಿಯುತ ಪದಗಳನ್ನು ನೆನಪಿಸಿಕೊಳ್ಳೋಣ. ಮೇಲಿನ ಉತ್ತಮ ಶಿಕ್ಷಕರ ದಿನ ಉಲ್ಲೇಖಗಳು (teachers day quotes in kannada) ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ವಿಶೇಷ ಬಂಧವನ್ನು ನಮಗೆ ನೆನಪಿಸುತ್ತವೆ. ನಮ್ಮ ಜೀವನವನ್ನು ಬೆಳಗಿಸಿದ್ದಕ್ಕಾಗಿ ನಮ್ಮೆಲ್ಲ ಗುರುಗಳಿಗೆ ದೊಡ್ಡ “ಧನ್ಯವಾದಗಳು”. ಶಿಕ್ಷಕರ ದಿನದ ಶುಭಾಶಯಗಳು!

ನಮ್ಮ ಈ teachers day wishes in kannada ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಇನ್ನೂ ಹೆಚ್ಚಿನ ಕನ್ನಡ quotes ಹಾಗೂ wishes ಸಂಗ್ರಹಕ್ಕಾಗಿ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತಿರಿ.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.