ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ (wedding anniversary wishes in kannada) ನಮ್ಮ ಹೃದಯಸ್ಪರ್ಶಿ ಸಂಗ್ರಹಕ್ಕೆ ಸುಸ್ವಾಗತ! ವಿವಾಹ ವಾರ್ಷಿಕೋತ್ಸವವು ಪ್ರೀತಿ ಮತ್ತು ಒಗ್ಗಟ್ಟಿನ ಸುಂದರ ಪ್ರಯಾಣವನ್ನು ಆಚರಿಸುವ ವಿಶೇಷ ಮೈಲಿಗಲ್ಲು.
ಮದುವೆ ವಾರ್ಷಿಕೋತ್ಸವವು ದಂಪತಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಏಕೆಂದರೆ ಇದು ಜೀವನದ ಮೂಲಕ ಅವರ ಹಂಚಿಕೊಂಡ ಪ್ರಯಾಣದ ಮತ್ತೊಂದು ವರ್ಷವನ್ನು ನೆನಪಿಸುತ್ತದೆ. ಈ ದಿನವು ಅವರು ಒಟ್ಟುಗೂಡಿದ ನೆನಪುಗಳು, ಬೆಳವಣಿಗೆ ಮತ್ತು ಅನುಭವಗಳನ್ನು ಒಟ್ಟುಗೂಡಿಸುತ್ತದೆ. ಇದು ನಿಜವಾದ ಅನನ್ಯ ಮತ್ತು ಭಾವನಾತ್ಮಕ ಕ್ಷಣವಾಗಿದೆ.
ವಿವಾಹ ವಾರ್ಷಿಕೋತ್ಸವದಂದು ಕುಟುಂಬ ಅಥವಾ ಸ್ನೇಹಿತರನ್ನು ಹಾರೈಸುವುದು ಅವರ ಸಂಬಂಧಕ್ಕೆ ನಿಮ್ಮ ಬೆಂಬಲ ಮತ್ತು ಮೆಚ್ಚುಗೆಯನ್ನು ತೋರಿಸುವ ಹೃತ್ಪೂರ್ವಕ ಮಾರ್ಗವಾಗಿದೆ. ಹೃತ್ಪೂರ್ವಕ ಶುಭಾಶಯಗಳನ್ನು ಕಳುಹಿಸುವ ಮೂಲಕ ಅವರ ಸಂತಸದ ದಿನದಲ್ಲಿ ನೀವು ಪಾಲುದಾರರಾಗಬಹುದು.
ಇದಲ್ಲದೆ, ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು (marriage anniversary wishes in kannada) ಕಳುಹಿಸುವುದು ಅಥವಾ ಶೇರ್ ಮಾಡುವುದು ಕೇವಲ ದಂಪತಿಗಳ ಬಗ್ಗೆ ಅಲ್ಲ; ಇದು ನಿಮ್ಮ ಸ್ವಂತ ಸಂಪರ್ಕಗಳನ್ನು ಬಲಪಡಿಸುತ್ತದೆ. ನಿಮ್ಮ ಹೃತ್ಪೂರ್ವಕ ಶುಭಾಶಯಗಳು ಅವರ ವಿಶೇಷ ದಿನಕ್ಕೆ ಸಂತೋಷ ಮತ್ತು ಸಂತೋಷವನ್ನು ತರುತ್ತವೆ. ಹಂಚಿಕೊಂಡ ಸಂತೋಷದ ಬಂಧವನ್ನು ಸೃಷ್ಟಿಸುತ್ತವೆ.
ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರನ್ನು ಹಾರೈಸುವುದು ಬಲವಾದ ಸಂಪರ್ಕಗಳನ್ನು ಬೆಳೆಸುವ ಮೂಲಕ ಅವರ ಪ್ರಯಾಣವನ್ನು ಗೌರವಿಸುವ ಒಂದು ಸುಂದರ ಮಾರ್ಗವಾಗಿದೆ.
ಇದು ನಿಮ್ಮ ಸ್ವಂತ ಮದುವೆ ವಾರ್ಷಿಕೋತ್ಸವವಾಗಲಿ ಅಥವಾ ನಿಮ್ಮ ಜೀವನದಲ್ಲಿ ಆತ್ಮೀಯ ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ನೀವು ಹುರಿದುಂಬಿಸುತ್ತಿರಲಿ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ರಚಿಸಲಾದ ಈ ಶುಭಾಶಯಗಳು ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಇನ್ನಷ್ಟು ಸ್ಪರ್ಶಿಸುತ್ತದೆ.
ಈ ಲೇಖನದಲ್ಲಿ ಪ್ರೀತಿ, ಒಡನಾಟ ಮತ್ತು ನಿರಂತರ ಪಯಣದ ಸಾರವನ್ನು ಸಂಪೂರ್ಣವಾಗಿ ಸೆರೆಹಿಡಿಯುವ ವಿವಿಧ ಹೃತ್ಪೂರ್ವಕ ವಿವಾಹ ವಾರ್ಷಿಕೋತ್ಸವದ ಸಂದೇಶಗಳನ್ನು (happy wedding anniversary wishes in kannada) ನಾವು ಸಂಗ್ರಹಿಸಿದ್ದೇವೆ. ಹಂಚಿದ ನಗುವಿನಿಂದ ಹಿಡಿದು ಎದುರಿಸಿದ ಸವಾಲುಗಳವರೆಗೆ, ಪ್ರತಿ ಹಾರೈಕೆಯು ಪ್ರತಿ ವರ್ಷವೂ ಗಟ್ಟಿಯಾಗುವ ವಿಶಿಷ್ಟ ಬಂಧವನ್ನು ಪ್ರತಿಬಿಂಬಿಸುತ್ತದೆ. ಮತ್ತು ಅದಕ್ಕಿಂತ ಹೆಚ್ಚಾಗಿ, ನಾವು ಈ ಶುಭಾಶಯಗಳನ್ನು ಈ ಸಂದರ್ಭದ ಸಂತೋಷದಾಯಕ ಮನೋಭಾವದೊಂದಿಗೆ ಅನುರಣಿಸುವ ಆಕರ್ಷಕ ಚಿತ್ರಗಳೊಂದಿಗೆ ಜೋಡಿಸಿದ್ದೇವೆ.
ನೀವು ಸಿಹಿ ಭಾವನೆಗಳು, ತಮಾಷೆಯ ವಿಶ್ ಗಳನ್ನು ಅಥವಾ ಪ್ರಾಮಾಣಿಕ ಆಶೀರ್ವಾದಗಳನ್ನು ಹುಡುಕುತ್ತಿರಲಿ, ನಿಮ್ಮ ಭಾವನೆಗಳನ್ನು ತಿಳಿಸಲು ನಮ್ಮ ಸಂಗ್ರಹಣೆಯು ಹಲವಾರು ಆಯ್ಕೆಗಳನ್ನು ನೀಡುತ್ತದೆ. ಪ್ರತಿ ವಾರ್ಷಿಕೋತ್ಸವದ ಕ್ಷಣವನ್ನು ನಿಜವಾಗಿಯೂ ಹೃದಯದಿಂದ ಬರುವ ಪದಗಳೊಂದಿಗೆ ಇನ್ನಷ್ಟು ಸ್ಮರಣೀಯವಾಗಿಸಲು ನಮ್ಮೊಂದಿಗೆ ಸೇರಿ.
Table of Contents
Happy Wedding Anniversary Wishes in Kannada with Images
Wedding Anniversary Wishes for Wife in Kannada
ಇವತ್ತು ನಮ್ಮ ಮದುವೆ ಆಗಿ ಮೊದಲ ವರ್ಷಕ್ಕೆ ಪಾದಾರ್ಪಣೆ 😘❤️ಮೊನ್ನೆ ಮೊನ್ನೆ ಮದುವೆಯಾದ ಹಾಗಿದೆ. ಆಗಾಗ ಜಗಳ ಇದ್ದೆ ಇರುತ್ತೆ ಆದರೂ ಸಮಾಧಾನವಿದೆ ಸಂತೋಷವಿದೆ. ಜೀವನದ ಏಳು ಬೀಳುಗಳ ಮದ್ಯೆ ಭರವಸೆಯೊಂದಿಗೆ ಜೊತೆಗಿದ್ದು ಧೈರ್ಯ ತುಂಬಿದ ಜೀವ ನೀನು.ಮನೆವರನ್ನು ಕಷ್ಟಪಟ್ಟು ಒಪ್ಪಿಸಿ ಮದುವೆ ಅದ ಸುಂದರ ದಿನವಿದು❤️ ನನ್ನನು ಅರ್ಥ ಮಾಡಿಕೊಂಡು ಸುಖ ದುಃಖ ಹಂಚಿಕೊಂಡು ನನ್ನ ಜೊತೆರುವ ನನ್ನ ಮುದ್ದು ಶ್ರೀಮತಿ ಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು 😘 ನೂರು ಜನುಮ ಕುಡಿ ಬಾಳುವ ಜೋಡಿ ನಮ್ಮದು.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಪ್ರೀತಿಯ ಹೆಂಡತಿ. ಕಾರೇಶು ದಾಸಿ ಕರುಣೇಶು ಮಂತ್ರಿ ಭೋಜೇಶು ಮಾತ ರೂಪೇಶು ಲಕ್ಷ್ಮಿ ಕ್ಷಮಯಾಧರಿತ್ರಿ ಶಯನೇಶು ರಂಭ ಎಂಬ ಪದಗಳಿಗೆ ಪರಿಪೂರ್ಣ ಅರ್ಥವನ್ನು ಕಲ್ಪಿಸಿದ ವ್ಯಕ್ತಿ ನೀನು.
ಜೀವನದಲ್ಲಿ ಮದುವೆ ಅನ್ನುವ ಬಂದಕ್ಕೆ ಇಂದು 10 ವರ್ಷಗಳು ತುಂಬಿವೆ. ಸದಾ ನನ್ನನ್ನು ಪ್ರೀತಿಸುವ, ನನ್ನ ಬಗ್ಗೆ ಕಾಳಜಿ ವಹಿಸಿದ ನನ್ನ ಮಡದಿ ನನ್ನೊಂದಿಗೆ ಸಪ್ತಪದಿ ತುಳಿದು ಹತ್ತು ವರ್ಷಗಳಾಗಿವೆ. ಮಮತೆಯ ಹೃದಯಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
ಒಂದನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💐 My Dear Lovely Wife ❤️
“ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ ಹರುಷತಂದಿದೆ. ಇಂದು ನಮ್ಮ ಬಾಳಿಗೆ ನಮ್ಮಿಬ್ಬರ ಪ್ರೆಮೋತ್ಸವ ಮನೆ ತುಂಬೆಲ್ಲಾ ತುಂಬಿದೆ ಉಲ್ಲಾಸದ ಉತ್ಸಾಹ, ಕೋರುವೆ ಆ ದೇವರಲ್ಲಿ ಮನ ಬಿಚ್ಚಿ ಹಾಗೆ ಹಾರಾಡಿ,ನಾವು ಆಕಾಶದೆತ್ತರ ಹಕ್ಕಿಯಂತೆ ರೆಕ್ಕೆ ಬಿಚ್ಚಿ, ಇಂದು ನಮ್ಮ ಮದುವೆಯ ಎರಡನೇ ವಾರ್ಷಿಕೋತ್ಸವ. ನಮ್ಮ ಪ್ರೀತಿಗೆ ದಿನವೂ ನಿತ್ಯೋತ್ಸವ. ಹೀಗೆ ನಮ್ಮ ಜೀವನ ಕೊನೆಯಿಲ್ಲದೆ ಸಾಗಲಿ ಗೆಳತಿ” ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು ನನ್ನ ಪ್ರೀತಿಯ ಹೆಂಡತಿ.
ಬದುಕಿನ ಪಯಣದಲ್ಲಿ ಸೋತಾಗ ಹೆಜ್ಜೆಗೆ ಹೆಜ್ಜೆ ಇಟ್ಟು ಕೈಯಲ್ಲಿ ಕೈ ಇಟ್ಟು ನೋಡಿ. ನೀನೇನು ಭಯಪಡಬೇಡಿ ನಾ ಇದ್ದೀನಿ ನಿ ಮೈ ಜೊತೆ ಕಷ್ಟವೇ ಬರಲಿ ಸುಖವೇ ಬರಲಿ ಕೊನೆವರೆಗೂ ನಿಮ್ಮ ಜೊತೆ ಇರ್ತೀನಿ ಅಂತ ಧೈರ್ಯ ಹೇಳಲು ಹೆಂಡತಿ ಇರಬೇಕು ನನ್ನ ಬಾಳಸಂಗಾತಿಯಾಗಿ ಮನದ ಮನೆಗೆ ನೀ ಬಂದು ಇಂದಿಗೆ ಐದು ವರುಷ ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು ಅಧಿನೈದಾನೆ ವರುಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯ ಮಡದಿ ಮುದ್ದು ಹೆಂಡತಿ💐
ತುಂಬಾನೆ ಇಷ್ಟ ನೀನು ನನಗಾಗೆ ಬಂದೆ ಏನು? ಎದೆಗೂಡಿನ ದೇವಿ ನೀನು. ಪ್ರೇಮದೂರಿಗೆ ರಾಣಿಯೇ ಬಾಳ ಬೆಳಗೊ ಜ್ಯೋತಿಯೇ ಉಸಿರಿಗೆ ಹೆಸರಾಗಿ ಹೃದಯಕೆ ಮಿಡಿತವಾಗಿ ಬಾಳಿಗೆ ಜೊತೆಯಾಗಿ ಅನುದಿನ ಅನುಕ್ಷಣ ಅನವರತ ನಾ ಪ್ರೀತಿಸೊ ಅವತಾರಿಣಿ ನೀನು. ಈ ಜಗದೊಳಗೆ ನನ್ನ ಪ್ರತಿ ಘಳಿಗೆ ನಾ ಕಾಣೊ ಸಿಹಿಗನಸು ನೀನು. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡತಿ.
ಹದಿಮೂರು ವರ್ಷಗಳ ಬಾಳ ಪಯಣದಲ್ಲಿ ಜೊತೆ ಜೊತೆಯಾಗಿ ನೆಡೆಯುತ್ತಿರುವ ನನ್ನ ಮುದ್ದು ಸಂಗಾತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💐 ❤️😘
ಓ ನನ್ನ ಪ್ರೀತಿಯೇ … ಅನುರಾಗದ ಅನುಭಂದದ ನಮ್ಮ ಪ್ರೀತಿ ಮದುವೆ ಎಂಬ ಬಂಧನದಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಪ್ತಪದಿ ತುಳಿದು ಜೀವನ ಎಂಬ ಸಂಸಾರದ ಸಾಗರವನ್ನು ದಾಟಲು ಮುನ್ನುಡಿ ಬರೆದು ಇಂದಿಗೆ ಎರಡು ಸಂವತ್ಸರವಾಯಿತು ನಮ್ಮಿಬ್ಬರ ಮಿಲನದ ಈ ಸುಂದರ ಗಳಿಗೆ ನಮ್ಮ ಜೀವನದಲ್ಲಿ ಅತೀ ಸುಂದರ ಗಳಿಗೆಯಲ್ಲೊಂದು . ನನ್ನ ಬಾಳಲ್ಲಿ ಬಂದು ನನ್ನ ಮನೆಯನ್ನು ಬೆಳಗಿ ನನ್ನ ಜೀವನಕ್ಕೆ ಹೊಸ ಭಾಷ್ಯ ಬರೆದ ಆನಂದದ ಚಿತ್ತಾರ ನೀನು ಮದುವೆ ಎಂಬ ನಮ್ಮ ಮಿಲನದ ವಾರ್ಷಿಕೋತ್ಸವದ ಶುಭಾಶಯಗಳು ಸಖಿ.
ಅದೆಷ್ಟು ಬೇಗ ದಿನಗಳು ಕಳಿತಾ ಇದೀವಿ ಅಂದ್ರೆ ಹಬ್ಬ ಸಂಭ್ರಮಗಳು ಬಂದಾಗಲೇ ನೆನಪಾಗೋದು ಅನ್ಸತ್ತೆ ಅಯ್ಯೋ ಇಷ್ಟು ಬೇಗ ಒಂದು ವರ್ಷ ಆಯ್ತಾ ಅಂತ ಇಂದಿಗೆ ಮಂತ್ರಮಾಂಗಲ್ಯ ಮದುವೆ ಆಗಿ ಎರಡು ವರ್ಷಗಳೇ ಕಳಿದಿವೆ ಎನಿವೇ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.
ನನ್ನೊಂದಿಗೆ ಮದುವೆಯಾಗಿ ಐದು ಸಂವತ್ಸರಗಳನ್ನು ಪೂರೈಸಿದ, ಎಲ್ಲ ಏಳು ಬೀಳುಗಳಲ್ಲಿ ಸಹವರ್ತಿಯಾಗಿ ಭಾಗಿಯಾದ ಮುದ್ದಿನ ಹೆಂಡತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.
ಏನೆಂದು ಹೇಳಲಿ, ಏನಂತ ಕರೆಯಲಿ, ನನ್ನ ಬಾಳಿನ ಗೆಳತಿ.. ಹಿರಿಯರ ಅನುಮತಿಯೊಂದಿಗೆ ಆಗಿ ನನ್ನ ಶ್ರೀಮತಿ. ನನ್ನ ಪ್ರೇಮಲೋಕದ ಸಂಸಾರವೆಂಬ ಸಾರೋಟಿನ ಸಾರಥಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.
ನನ್ನ ಕಷ್ಟ ಸುಖದಲ್ಲಿ ಭಾಗಿಯಾಗಿ ನನ್ನ ಬಾಳನ್ನು ಬೆಳಗಿದೆ ನನ್ನ ಮಡದಿಗೆ ವಾರ್ಷಿಕೋತ್ಸವದ ಶುಭಾಶಯಗಳು. _ ನೇ ವರ್ಷದ ಮದುವೆ ವಾರ್ಷಿಕೋತ್ಸವ.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಮೈ ಡಿಯರ್ ವೈಫ್ 💐
ಏನೆಂದು ಹೇಳಲಿ, ಏನಂತ ಕರೆಯಲಿ, ನನ್ನ ಬಾಳಿನ ಗೆಳತಿ.. ಹಿರಿಯರ ಅನುಮತಿಯೊಂದಿಗೆ ಆಗಿ ನನ್ನ ಶ್ರೀಮತಿ. ನನ್ನ ಪ್ರೇಮಲೋಕದ ಸಂಸಾರವೆಂಬ ಸಾರೋಟಿನ ಸಾರಥಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.
ಜೀವನದಲ್ಲಿ ಮದುವೆ ಅನ್ನುವ ಬಂದಕ್ಕೆ ಎರಡು ವರುಷ ವಾರ್ಷಿಕೋತ್ಸವದ ಸಂಭ್ರಮ ಸದಾ ನನ್ನನ್ನು ಪ್ರೀತಿಸುವ, ನನ್ನ ಬಗ್ಗೆ ಕಾಳಜಿ ವಹಿಸುವ ನನ್ನ ಸಂಗಾತಿ ನನ್ನೊಂದಿಗೆ ಹೆಜ್ಜೆ ಹಾಕಿದ ದಿನವಿಂದು ಕಷ್ಟ ಸುಖದಿಂದ ಕೂಡಿದ ಬದುಕಿನಲ್ಲಿ ಸದಾ ಬೆನ್ನೆಲುಬಾಗಿ ನಿಂತ ಮಮತೆಯ ಮಡದಿ ನನ್ನ ಬಾಳಪಯಣದಲ್ಲಿ ಜೊತೆಯಾಗಿ ಮುನ್ನಡೆಯಲು ಒಂದಾದ ದಿನವಿಂದು ಮಮತೆಯ ಹೃದಯಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ❤️😘🥰🌍
ಅರ್ಥವಿಲ್ಲದೀ ಅರ್ಧ ಜೀವಕೆ ಅರ್ಥ ನೀಡಿದ ಅರ್ಧಾಂಗಿ ನೀನು… ಬದುಕಿಗೆ ಅರ್ಥ ಕೊಟ್ಟವಳು ಬದುಕಲು ಛಲ ಕಲಿಸಿದವಳು. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡ್ತಿ.
“ಒಂಟಿಯಿಂದ ಜಂಟಿಯಾಗಿ, ಸಪ್ತಪದಿಯ ತುಳಿದಿಗಿಂದು ವರುಷ ಕಳೆದರೂ, ಜನ್ಮಾಂತರದ ಬಂಧವಿದು ಪ್ರೇಮವೆಂದೂ ಕಳೆಯದು. ಸೀತೆಗೊಬ್ಬ ರಾಮನಂತೆ, ರಾಧೆಗೊಲಿದ ಕೃಷ್ಣನಂತೆ, ನನ್ನ ಜೊತೆಯಲ್ಲಿ ಸಾಗುತ್ತಿರುವ ನಿಮಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಪ್ರೀತಿಯ ಹೆಂಡತಿ. ಕಾರೇಶು ದಾಸಿ ಕರುಣೇಶು ಮಂತ್ರಿ ಭೋಜೇಶು ಮಾತ ರೂಪೇಶು ಲಕ್ಷ್ಮಿ ಕ್ಷಮಯಾಧರಿತ್ರಿ ಶಯನೇಶು ರಂಭ ಎಂಬ ಪದಗಳಿಗೆ ಪರಿಪೂರ್ಣ ಅರ್ಥವನ್ನು ಕಲ್ಪಿಸಿದ ವ್ಯಕ್ತಿ ನೀನು.
ಬದುಕಿಗೆ ಬಣ್ಣತುಂಬಿದ ನನ್ನೆದೆಯ ಬೆಳದಿಂಗಳಿಗೆ, ಉತ್ತಮ ಪ್ರಪಂಚವನ್ನು ನನಗಾಗಿ ಕೊಟ್ಟ ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
ಏನೆಂದು ಹೇಳಲಿ, ಏನಂತ ಕರೆಯಲಿ.. ನನ್ನ ಬಾಳಿನ ಗೆಳತಿ.. ಹಿರಿಯರ ಅನುಮತಿಯೊಂದಿಗೆ ಆಗಿ ನನ್ನ ಶ್ರೀಮತಿ.. ನನ್ನ ಪ್ರೇಮಲೋಕದ ಸಂಸಾರವೆಂಬ ಸಾರೋಟಿನ ಸಾರಥಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..
ನನ್ನ ಕೈ ಹಿಡಿದು ಸಪ್ತಪದಿ ತುಳಿದು ನನ್ನ ಬಾಳಿಗೆ ಬೆಳಕಾಗಿ ಬಂದು ಇವತ್ತಿಗೆ 10 ವರ್ಷ ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಾ ಖುಷಿ ಖುಷಿಯಾಗಿ ಸಾಗಲಿ ನಮ್ಮ ಈ ಪಯಣ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಗೆಳತಿ❤️💞
😊ನನ್ನ ಬಾಳಪಯಣದಲ್ಲಿ ಜೊತೆಯಾಗಿ ಮುನ್ನಡೆಯಲು ಒಂದಾದ ದಿನ… ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾರೈಕೆ ಇರಲಿ🙏 ನನ್ನ ಕೆಲಸಗಳಿಗೆ ಯಾವತ್ತೂ ಬೇಡ ಅನ್ನದೆ ಬೆಂಬಲಿಸುವ, ಸಾಧ್ಯವಾದಷ್ಟು ಸಹಾಯ ಮಾಡೋಣ ಅನ್ನೋ ನನ್ನ ಭಾವನೆ ಈಕೆಯ ಭಾವನೆ ಎರಡು ಒಂದೇ ಇಂತಹ ಹೃದಯವಂತಿಕೆಯ ನನ್ನ ಪತ್ನಿ ನನಗೆ ಸಿಕ್ಕಿದ್ದು ನನ್ನ ಅದೃಷ್ಟ…. ವಿವಾಹ ವಾರ್ಷಿಕೋತ್ಸವ ಇಂದು…❤️
ಜೀವನದಲ್ಲಿ ಮದುವೆ ಅನ್ನುವ ಬಂದಕ್ಕೆ ಇಂದು 10 ವರ್ಷಗಳು ತುಂಬಿವೆ. ಸದಾ ನನ್ನನ್ನು ಪ್ರೀತಿಸುವ, ನನ್ನ ಬಗ್ಗೆ ಕಾಳಜಿ ವಹಿಸಿದ ನನ್ನ ಮಡದಿ ನನ್ನೊಂದಿಗೆ ಸಪ್ತಪದಿ ತುಳಿದು ಹತ್ತು ವರ್ಷಗಳಾಗಿವೆ. ಮಮತೆಯ ಹೃದಯಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
ಬದುಕಿನ ಭಾಗವಾಗಿ ಬಂದು ಬದುಕಿಗೆ ಭಾಗ್ಯವಾಗಿರುವ ನನ್ನ ನಲ್ಮೆಯ ಮಡದಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಅರ್ಧಾಂಗಿಯಾಗಿ ಪ್ರತಿ ಹೆಜ್ಜೆಯಲ್ಲೂ ಜೊತೆ ನಡೆಯುವ ನಿನ್ನ ಪ್ರೀತಿಗೆ ನಾನು ಸದಾ ಸೋಲುವೆ.
ಅಯ್ಯೋ ಎರಡು ವರ್ಷವಾಯ್ತು…? ಆಗಲೇ ಮದುವೆಯ ದಿನಾಂಕ ಮರೆತುಹೋಗಿದೆ. ಬೆಳಗೆದ್ದ ಕೊಡಲೆ ಹಾಲು ತರಕಾರಿ ತರೊದಾಗಿದೆ. ಕೆಲವೊಮ್ಮೆ ಮರೆತುಹೋಗಿ ಬೈಯಿಸಿಕೊಳ್ಳೂದಾಗಿದೆ. ವಾರಕ್ಕೊಮ್ಮೆ ಶಾಪಿಂಗ್ ಗೆ ಸುತ್ತಾಡಿಸೊದಾಗಿದೆ. ತಿಂಗಳಿಗೊಮ್ಮೆ ತವರುಮನೆಗೆ ಹೋಗೂದಾಗಿದೆ. ಆದರೂ…..? ಬಗೆ ಬಗೆ ಭಕ್ಷಗಳ ನನಗೆ ಮಾಡುವುದು ಅವಳ ಇಷ್ಟವಾಗಿದೆ. ರಾತ್ರಿಯ ಊಟಕೆ ನನಗೆ ಕಾಯುವುದು ಜೋಪಾನವಾಗಿದೆ. ಒಂಚೂರು ಮುನಿಸು ಒಂಚೂರು ಕಾಳಜಿ ಹೀಗೆ ಹಾಯಾಗಿದೆ….? ನನ್ನೂಲವಲಿ ಅವಳು ಅವಳೂಲವಲಿ ನಾನು….ಏನೋ ಒಂಥರಾ ಜೀವನ ಮಜವಾಗಿದೆ….! ದೇವು ಪೇಟೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡ್ತಿ.
ವಿವಾಹ ವಾರ್ಷಿಕೋತ್ಸವ ದಿನ❤️ ಬಾಳ ಪಯಣದಲ್ಲಿ ಜೊತೆಯಾದ ದಿನ.. ಕಷ್ಟ ಸುಖ ನೋವು ನಲಿವು ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಬಂದಿದ್ದೇವೆ.. ಇರುವಷ್ಟು ದಿನ ಸಮಾಜಕ್ಕಾಗಿ ಏನಾದ್ರು ಒಳ್ಳೆಯದು ಮಾಡಬೇಕೆನ್ನುವುದು ನನ್ನ ಪ್ರಾಮಾಣಿಕ ಆಶಯ.. ಇದಕ್ಕೆ ಪೂರ್ಣ ಬೆಂಬಲ ನೀಡಿ ಸಹಕರಿಸಿ ಜೊತೆಯಾಗಿ ನಿಲ್ಲುವ ಇಂತಹ ಬಾಳಸಂಗತಿ ಪಡೆದಿದ್ದು ನನ್ನ ಪುಣ್ಯವೇ ಸರಿ.. ಯಾವುದೇ ಭೇದಭಾವ ಮಾಡದೆ ಸಮಾಜದ ಎಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಸದಾ ಜೀವಿಸುತ್ತಿರುತ್ತದೆ… ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ಸದಾ ಬಯಸುವೆವು..
ಪ್ರೀತಿಯ ಸಂಗಾತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐 ಇಂದು ನಮ್ಮ ಮದುವೆಯಾಗಿ 3 ನೇ ವರ್ಷಕ್ಕೆ ಕಾಲಿಟ್ಟ ದಿನ ಈ 3 ವರ್ಷದಲ್ಲಿ ನಮ್ಮಿಬ್ಬರ ನಡುವೆ ಬಂದಹೋದ ಚಿಕ್ಕಪುಟ್ಟ ಮುನಿಸು, ಕೋಪ, ನೋವು, ನಲಿವು ಹೀಗೆ ಎಲ್ಲದರ ನಡುವೆಯೂ ನಮ್ಮ ಸಂಸಾರ ಈಗಲೂ ನೋಡಿದವರೆಲ್ಲ ಹೊಟ್ಟೆಕಿಚ್ಚು ಪಡುವಂತಿದೆ. 3 ವರ್ಷದ ಈ ಸುಖೀ ಸಂಸಾರದಲ್ಲಿ ಅದೆಷ್ಟು ನೋವು ನಲಿವುಗಳು ಬಂದು ಹೋದರೂ ನಮ್ಮಿಬ್ಬರ ಬೆಸುಗೆ ಮಾತ್ರ ಹೃದಯದ ಗೂಡಿನಲ್ಲಿ ಬೆಚ್ಚಗೆ ಇನ್ನೂ ಹಾಗೆ ಉಳಿದಿವೆ, ಬಂಗಾರವಿಲ್ಲದ ಈ ಬಡತನದಲ್ಲಿ ಬಂಗಾರವಾಗಿ ನೀ ಬಂದು ನನ್ನಳೊಗೆ ಸೇರಿ ಗಿರಿಗಳ ಹತ್ತಿ ಗುರಿಗಳ ಮುಟ್ಟಲು ನನ್ನ ಜೊತೆ ಹೆಗಲಾಗಿ ನಿಂತಿರುವೆ🙏 ❤️ ❤️
ನಮ್ಮ ಮನಸಿನಲ್ಲಿ ಸದಾ ಬಂಧುತ್ವ ಪ್ರೀತಿಯ ಚೆಲ್ಲಿದವಳು ನೀನು… ಗಂಡನ ಮನೆಯಲ್ಲಿ ಬಾಂಧವ್ಯ ಬೆಳಕು ನೀಡುತ್ತಿರುವವಳು ನೀನು .. ದಾಂಪತ್ಯಕ್ಕೆ ಕಾಲಿಟ್ಟು ಇಂದಿಗೆ 10ನೇ ವರ್ಷ ಕಳೆದಿದೆ… ನಿನ್ನ ಖುಷಿಯಲ್ಲಿಯೇ ನನ್ನ ಖುಷಿಯನ್ನು ಕಾಣುತ್ತಿರುವೆನು.. ನನ್ನ ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ಪ್ರತಿಯೊಬ್ಬ ಪುರುಷನ ಜೀವನದಲ್ಲಿ ತಾಯಿ ಮತ್ತು ಹೆಂಡತಿ ಪ್ರಮುಖ ಪಾತ್ರ ವಹಿಸುತ್ತಾರೆ. ತಾಯಿ ಜೀವ ಕೊಟ್ಟರೆ, ಹೆಂಡತಿ ಆ ಜೀವಕೆ ಆಸರೆಯಾಗಿ ನಿಲ್ಲುತ್ತಾಳೆ. 12 ವರ್ಷಗಳ ಕಾಲ ನನ್ನೆಲ್ಲ ಕಷ್ಟ, ಸುಖ-ದುಖಗಳಲ್ಲಿ ಬಾಗಿಯಾಗಿ ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಡೆದ ನಿನಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐💐 ಈ ಜನ್ಮ ಮಾತ್ರ ಅಲ್ಲ, ನನ್ನ ಪ್ರತಿ ಜನ್ಮದಲ್ಲೂ ನೀನೆ ನನ್ನ ಹೆಂಡತಿಗಿಯಾಗಿ ಸಿಗಬೇಕು ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏 ನಿನ್ನನ್ನು ಹೆಂಡತಿಯಾಗಿ, ಗೆಳತಿಯಾಗಿ ನೀಡಿದ ಆ ದೇವರಿಗೆ ಧನ್ಯವಾದಗಳು🙏🙏
ಇಂದಿಗೆ 9 ವರ್ಷ… ನಿನ್ನೊಂದಿಗೆ ಬಾಳಿನ ಸವಿಯನ್ನು ಸವೆದಿರುವೆ….ನನ್ನ ಬಾಳಿನ ಸಂಗತಿಯಾಗಿ 9ನೇ ವರ್ಷದ… ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು… ನನ್ನ ಪ್ರೀತಿಯ ಮಡದಿ….. ಲವ್ ಯು ಮೈ ಡಿಯರ್ ಶ್ರೀಮತಿ….❤🥰❤💐💐💐
ನಲ್ಲೆಯ ಜೊತೆಗೆ ಸಪ್ತಪದಿ ತುಳಿದು ಆರು ವರ್ಷಗಳೇ ಕಳೆದ ಸಂತಸ ಸುಖ-ದುಃಖ ಸವಿದು ಸಾಗುತಿಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕದೆ, ಹೊಯ್ದಾಡದೆ ಮುನ್ನಡೆಸು ದೇವ ಎಂದು ಪ್ರಾರ್ಥಿಸುತ್ತಾ ನನ್ನ ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
ಜೀವನದಲ್ಲಿ ಮದುವೆ ಅನ್ನುವ ಬಂದಕ್ಕೆ 5 ವರುಷ ವಾರ್ಷಿಕೋತ್ಸವದ ಸಂಭ್ರಮ ಸದಾ ನನ್ನನ್ನು ಪ್ರೀತಿಸುವ, ನನ್ನ ಬಗ್ಗೆ ಕಾಳಜಿ ವಹಿಸುವ ನನ್ನ ಸಂಗಾತಿ ನನ್ನೊಂದಿಗೆ ಹೆಜ್ಜೆ ಹಾಕಿದ ದಿನವಿಂದು ಕಷ್ಟ ಸುಖದಿಂದ ಕೂಡಿದ ಬದುಕಿನಲ್ಲಿ ಸದಾ ಬೆನ್ನೆಲುಬಾಗಿ ನಿಂತ ಮಮತೆಯ ಮಡದಿ ನನ್ನ ಬಾಳಪಯಣದಲ್ಲಿ ಜೊತೆಯಾಗಿ ಮುನ್ನಡೆಯಲು ಒಂದಾದ ದಿನವಿಂದು ಮಮತೆಯ ಹೃದಯಕ್ಕೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ❤️😘🥰🌍
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ… ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಶ್ರೀಮತಿ.
ವರ್ಷದ ಹಿಂದೆ ಕಳೆದ ಆ ಸುಂದರ ಘಳಿಗೆ, ಹರುಷ ತಂದಿದೆ ನಮ್ಮಯ ಬಾಳಿಗೆ, ನಮ್ಮಿಬ್ಬರ ಈ ಪ್ರೇಮೊತ್ಸವ, ಮನೆ ತುಂಬೆಲ್ಲ ತುಂಬಿದೆ ಉತ್ಸಾಹ, ಬೇಡಿಕೊಳ್ಳುವೆ ಆ ದೇವರಲ್ಲಿ ದೀಪಹಚ್ಚಿ, ಆಶೀರ್ವದಿಸು ಹಕ್ಕಿಯಂತೆ ಹಾರಾಡಲು ರಕ್ಕೆಬಿಚ್ಚಿ. ಮೊದಲನೇ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು ಮೈ ಡಿಯರ್ ವೈಫ್.
ಸಾಗಿ ಬಂದಾಯ್ತು 12 ವರುಷ ಮೆಟ್ಟಿ ನಿಂತು ಹಲವು ಸಂಘರ್ಷ ಕಳೆದೆವು ಹರುಷದಿ ಪ್ರತಿ ನಿಮಿಷ ಹೀಗೆ ಇರಲಿ ಬಾಳ ಸಂತೋಷ.💞 ವಿವಾಹ ವಾರ್ಷಿಕೋತ್ಸವದ ಶುಭಾಶಯ ಮಡದಿ 💐
Wedding Anniversary Wishes for Husband in Kannada
__ ವರ್ಷದ ಸಹ ಬಾಳ್ವೆ, ಎಳು ಬಿಳುಗಳಲ್ಲಿ ಜೊತೆಯಾಗಿ ಸುಖ ದುಃಖಗಳನ್ನು ಹಂಚಿ ಕೊಂಡು ನೋವು ನಲಿವಿನಲ್ಲಿ ಒಂದಾಗಿ ಜೀವನದ ಎಲ್ಲಾ ಸಮಯದಲ್ಲೂ ನನಗೆ ಧೈರ್ಯ ತುಂಬುತ್ತಾ ಸಾಗುತ್ತಿರುವ ನಿಮಗೆ ಹಾಗೂ ನನಗೂ ಇಂದು ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐
ನಲ್ಮೆಯ ಗೆಳಯನಿಗೆ 24 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…ಅಬ್ಬಾ ಎಷ್ಟು ಬೇಗ ವರ್ಷಗಳು ಉರುಳ್ತಾ ಇರೋದೆ ಗೊತ್ತಾಗ್ತಾ ಇಲ್ಲ ನಮ್ಮಿಬ್ಬರ ಬಾಳ ಪಯಣದಲ್ಲಿ… ಅದಕ್ಕೆಲ್ಲ ಕಾರಣ ದಿನಕ್ಕೆ 10 ಸಾರಿ ಜಗಳ ಮಾಡೋದು 5 ನಿಮಿಷದಲ್ಲೆ ಇಬ್ಬರಿಗೂ ನೆನಪು ಇಲ್ಲದೇ ಇರೋದೆ ಅನ್ಸುತ್ತೆ 😅..ಹೀಗೆ ಜೀವನಪೂರ್ತಿ ಖುಷಿ ಖುಷಿಯಾಗಿ ಮಕ್ಕಳ ತರಾನೆ ಇದ್ಬಿಡೋಣ ಬಸು ..ಲವ್ ಯು. ಸ್ನೇಹಿತರೆ ನಿಮ್ಮೆಲ್ಲರ ಆಶೀರ್ವಾದ ,ಹಾರೈಕೆ ಸದಾ ನಮ್ಮ ಮೇಲಿರಲಿ.
1st Year Wedding Anniversary Wishes in Kannada
ಈ ಸುಂದರ ಭಾಂದವ್ಯಕ್ಕೆ ಇಂದಿಗೆ ಒಂದು ವರ್ಷ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡ್ತಿ. ನಿನ್ನ ಆಗಮನದಿಂದ ನನಗಾಗಿದೆ ಆನಂದ ನಿನ್ನೊಂದಿಗಿನ ಪ್ರತಿ ಕ್ಷಣವೂ ನನಗೆ ಪರಮಾನಂದ ಎಂದೆಂದಿಗೂ ನಾನಿರುವೆ ಜೊತೆಯಲಿ ನಿ ನನಗೆ ಸಿಕ್ಕಿದ್ದೇ ಜನುಮ ಜನುಮದ ಅನುಬಂಧ. ನಿಮ್ಮೆಲ್ಲರ ಆಶೀರ್ವಾದ ಸದಾಕಾಲ ಇರಲಿ.
ವಿವಾಹ ವಾರ್ಷಿಕೋತ್ಸವದ ಶುಭಾಶಯ 💐💐💐 ನಿಮ್ಮ ಬದುಕು ಬಂಗಾರವಾಗ್ಲಿ..
ಮೊದಲ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.
ಪ್ರೀತಿ ತುಂಬಿದ ನಿಸ್ವಾರ್ಥ ಜೀವನದಲ್ಲಿ ಉರುಳಿದ ವರುಷಗಳು ಹಲವು, ಜೊತೆಯಾದ ಜೀವನದಲಿ ತುಂಬಿದ ಹರುಷಗಳು ಇನ್ನೂ ಹಲವು. ಹೀಗೆ ಸುಖವಾಗಿ ಸಾಗಲಿ ನಿಮ್ಮ ದಾಂಪತ್ಯ ನೂರ್ಕಾಲವು. ಎಂದು ಹಾರೈಸುವೆನು.
ಪ್ರಥಮ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಜೀವನದ ಪಯಣದಲ್ಲಿ ಬರುವ ಏರಿಳಿತ, ಸುಖ-ದುಃಖ, ಸೋಲು-ಗೆಲುವು ಪ್ರತಿ ಕ್ಷಣದ ಪ್ರತಿ ಘಟ್ಟದಲ್ಲು ಜೊತೆಯಲ್ಲೇ ಎದುರಿಸುವ ಸಂಬಂಧ ದಾಂಪತ್ಯ…ನಿಮ್ಮ ಈ ದಾಂಪತ್ಯದಲ್ಲಿ ಸದಾಕಾಲ ಖುಷಿ ತುಂಬಿರಲಿ ಎಂದು ಹಾರೈಸುತ್ತೇವೆ.
Wedding Anniversary Wishes for Parents
ಪ್ರೀತಿ ವಿಶ್ವಾಸಗಳಿಗೆ ಅರ್ಥಪೂರ್ಣ ಹೃದಯ ತಮ್ಮದು, ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಬೆರೆಯುವ ಅನುಬಂಧ ತಮ್ಮದು, ನಗು ನಗುತ್ತಲೇ ಜನತೆಯ ಪ್ರೀತಿ ಸಂಪಾದಿಸಿದ ಕೀರ್ತಿ ತಮ್ಮದು, ತಾಳ್ಮೆ, ತ್ಯಾಗಗಳಿಗೆ ಸ್ವರೂಪವಾದ ರೂಪ ತಮ್ಮದು. ಎಲ್ಲರೊಡಣೆ ಒಂದಾಗಿ ಎಲ್ಲರೂ ನಮ್ಮವರೆ ಎಂಬುವ ಸಮಾನ ಮನಸ್ಕ ಗುಣ ತಮ್ಮದು.ನಿಮ್ಮ ಕನಸುಗಳೆಲ್ಲ ನನಸಾಗಿ, ಜೀವನದ ಸಿಹಿ ಪಾಲು ತಮ್ಮದಾಗಿ, ನೀವಿಟ್ಟ ಹೆಜ್ಜೆಯ ಪ್ರತಿಸಾಲುಗಳು ಗೆಲುವಾಗಿ ನೆರವೇರಲಿ ಎಂದು ತುಂಬು ಮನಸ್ಸಿಂದ ಹಾರೈಸುತ್ತೇನೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💛❤️
ದೇವರ ಆಶೀರ್ವಾದದೊಂದಿಗೆ ಮದುವೆ ವಾರ್ಷಿಕೋತ್ಸವದ ಆಚರಿಸಿಕೊಳ್ಳುತ್ತಿರುವ ಪ್ರೀತಿಯ ಅಪ್ಪ-ಅಮ್ಮನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು…💐💐ನಿಮ್ಮ ಜೀವನ ಯಾವಾಗಲೂ ಸುಖಮಯವಾಗಿರಲಿ ಎಂದು ಪ್ರಾರ್ಥನೆ.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ💐💐 ನೀವೇ ನಮಗೆ ಸ್ಫೂರ್ತಿ. ನೀವೇ ನಮಗೆ ಗುರು ದೈವ ರೋಲ್ ಮಾಡೆಲ್. ನಿಮ್ಮ ಮಕ್ಕಳಾಗಿ ಹುಟ್ಟಿದ್ದು ನಮ್ಮ ಪುಣ್ಯ .
ವರ್ಷಗಳ ಸುದೀರ್ಘ ಪಯಣ ನಿಮ್ಮದು. ಕಷ್ಟ ಸುಖ, ಏಳು ಬೀಳುಗಳಲ್ಲಿ ಒಂದಾಗಿ ಬಾಳುವ ನಿಮ್ಮ ಜೀವನ ನಮಗೆ ಆದರ್ಶಪ್ರಾಯ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ. 💐💐 ಇನ್ನೂ ನೂರು ಕಾಲ ಜೊತೆಯಾಗಿ ಸಂತೋಷವಾಗಿ ಬಾಳಿ, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
38 ವರ್ಷ ಕಳೆದರೆ ಏನಂತೆ? ಇನ್ನೂ 88 ವರ್ಷಗಳು ಜೊತೆಯಾಗಿ ಖುಷಿಯಾಗಿ ಬಾಳಲೆಂದು ಆಶಿಸುತ್ತೇನೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು🎊
ತಂದೆ – ತಾಯಿನೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಅಂತಾರೆ ಜನ್ಮ ಕೊಟ್ಟ ದೇವರಿಗೆ, 🙏💐 ಮದುವೆ_ವಾರ್ಷಿಕೋತ್ಸವದ ಶುಭಾಶಯಗಳು..🎈 ದೇವರ ಆಶೀರ್ವಾದ ಅವರಮೇಲೆ ಸದಾ ಇರಲಿ, ನೂರು ಕಾಲ ಸುಖವಾಗಿ ಜೊತೆಯಾಗಿ ಬಾಳಲಿ ಅಂತ ಆಶಿಸುತ್ತೇನೆ….!!💙
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಆ ತಾಯಿ ಚಾಮುಂಡೇಶ್ವರಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಹೀಗೆ ಇರಲಿ ಹಾಗೂ ದೇವರ ಆರ್ಶೀವಾದ ಕೂಡ ಸದಾ ಕಾಲ ನಿಮ್ಮ ಮೇಲೆ ಹೀಗೆ ಇರಲಿ.
__ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಮತ್ತು ಅಮ್ಮ. ಪದಗಳೇ ಸಿಗದು ಶುಭಾಶಯ ಕೋರಲು ಎಷ್ಟು ಬರೆದರು ಅದಿಷ್ಟೆ ಆಗುತ್ತದೆ.
Happy Anniversary Wishes in Kannada for Friends and Family Members
ಈ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮದುವೆ ಎಂಬ ಸಂಬಂಧ ,ಏಳೇಳು ಜನುಮಕು ಬಿಡಿಸದ ಬಂದ.. ದಿನ ದಿನಕು ಹೊಸ ಸಂಬಂಧ, ಅದುವೆ ಈ ಮದುವೆಯ ಅನುಬಂಧ. ನೂರ್ಕಾಲ ಒಟ್ಟಿಗೆ ಬಾಳಿ ನೀವು ಸುಖ ಸಂತೋಷ ನೆಮ್ಮದಿಯಿಂದ. ನಿಮ್ಮಿಬ್ಬರಿಗೂ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಹೃದಯದಿಂದ.
ನಮ್ಮ ಬಾಸ್ ಅವರಿಗೆ __ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..💐💐 ಭಗವಂತನ ಅನುಗ್ರಹ ಸದಾ ತಮ್ಮ ಮೇಲೆ ಇರಲಿ, ನೂರಾರು ವರ್ಷಗಳ ಕಾಲ ಹೀಗೆ ಖುಷಿ ಖುಷಿಯಾಗಿ ಇರಿ, ಉತ್ತಮ ಆರೋಗ್ಯ, ದೀರ್ಘಾಯುಷ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ.🎂💐
ನಮ್ಮ ಪ್ರೀತಿಯ “ಅತ್ತೆ ಮಾವ”ನವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನನಗೆ ಸದಾ ಸ್ಪೂರ್ತಿಯಾಗಿ, ಪ್ರೇರಣೆಯಾಗಿ, ತಂದೆ ತಾಯಿಯ ರೀತಿ ಪ್ರೀತಿ ಮಮಕಾರವನ್ನು ನೀಡುವ ನನ್ನ ಅತ್ತೆ ಮಾವ. ನೀವು ನೂರು ಕಾಲ ಸದಾ ಖುಷಿಯಿಂದ ಬಾಳಿ, ನಮಗೆಲ್ಲಾ ಮಾರ್ಗದರ್ಶನ ನೀಡಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ..
ಮಾತೃ ಸಮಾನರಾದ ಅಣ್ಣ ಅತ್ತಿಗೆಗೆ __ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು… ದೇವರು ಸುಖ, ಸಂತೋಷ,ಆರೋಗ್ಯ, ಭಾಗ್ಯ, ಶ್ರೇಯಸ್ಸು ಎಲ್ಲವನ್ನೂ ನೀಡಿ ಕಾಪಾಡಲಿ…
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇನ.. _ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.. 💐💐 ಅಣ್ಣಾ ಮತ್ತು ಅತ್ತಿಗೆ.. ದೇವರು ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ಎಂದು ಆಶಿಸುತ್ತೇನೆ.. ನಿಮ್ಮ ಈ ಜೋಡಿ ಸದಾ ನೆಮ್ಮದಿಯಿಂದ ಕೂಡಿರಲಿ ಎಂದು ಬಯಸುತ್ತೇನೆ..
ಅಣ್ಣಾ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನೂರ್ಕಾಲ ಸುಖವಾಗಿ ಬಾಳಿ ಎಂದು ಮನಃಪೂರ್ವಕವಾಗಿ ಶುಭ ಹಾರೈಸುವೆ.💐
ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಭಗವಂತ ತಮಗೆ ದೀರ್ಘಾಯುಷ್ಯ ಕರುಣಿಸಿ ನೂರಾರು ವರುಷ ಜೊತೆ ಜೊತೆಯಾಗಿ ಸಾಗಲಿ ನಿಮ್ಮ ಪಯಣ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🎉
ಇಂದಿಗೆ __ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. ನನ್ನ ಅಣ್ಣ ಮತ್ತು ಅತ್ತಿಗೆಯ ಸುಖ-ಸಂತೋಷ ಸಂಪತ್ತು ಹಾಗೂ ಆರೋಗ್ಯದಿಂದ ನೂರು ವರ್ಷ ಆಯುಷ್ಯ ನೀಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಪ್ರೀತಿಯ ಅತ್ತೆ ಮತ್ತು ಮಾವನವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನೂರಾರು ಕಾಲ, ಖುಷಿ ಮತ್ತು ಆರೋಗ್ಯದಿಂದ ಬಾಳಿ ಎಂದು,ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
💐🎉 ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. ಆ ರಾಯರು ಆರೋಗ್ಯ ಐಶ್ವರ್ಯ ಕೊಟ್ಟು ನೂರಾರು ವರ್ಷಗಳ ಕಾಲ ಕಾಪಾಡಲಿ 🎊
ಇವತ್ತು ನನ್ನ ಸಹೋದರೀಯ ಮೊದಲನೆಯ ಮದುವೆ ವಾರ್ಷಿಕೋತ್ಸವ ಇವತ್ತಿಗೆ ಮದುವೆ ಆಗಿ ವರ್ಷವೇ ಕಳೆದಿದೆ ವರ್ಷ ಕಳೆಯಲು ಬಹಳ ಸಮಯ ಬೇಕಾಗಿಲ್ಲ ಹೀಗೆ ನೂರಾರು ವರ್ಷ ಅವರು ಚನ್ನಾಗಿ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ, ಮದುವೆ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.
ಅಣ್ಣಾ ಅತ್ತಿಗೆ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ ಸುಖ ಶಾಂತಿ ನೆಮ್ಮದಿಯ ಜೀವನ ನಿಮ್ಮಿಬರದಾಗಿರಲಿ ❤ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣಾ ❤
ಸ್ನೇಹ, ಪ್ರೀತಿ, ಸಹನೆ,ನಂಬಿಕೆ, ಗೌರವ, ತ್ಯಾಗ, ಸಂಯಮವೇ ಮದುವೆ.. ಈ ಎಲ್ಲಾ ಪದಗಳಿಗೂ ಉದಾಹರಣೆಯಾಗಿ ಇರುವ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು🎁
ಆದರ್ಶ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..💐💐
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು Best Wishes. ಅಣ್ಣ-ಅತ್ತಿಗೆ ಹೀಗೆ ನೂರು ವರುಷ ಖುಷಿ ಖುಷಿಯಾಗಿರಿ. ನಿಮ್ಮಲ್ಲಿರುವ ಒಳ್ಳೆಯ ತನವನ್ನು ಸ್ವಲ್ಪ ನಮ್ಮಂತವರಿಗೆ ಕಲಿಸಿಕೊಡಿ. 😍😍❤❤
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ತಮ್ಮ ಜನಪ್ರಿಯತೆ, ಹಸನ್ಮುಖಿ ಜೀವನ ಹೀಗೆ ಮುಂದುವರೆಯಲಿ ಎನ್ನುವುದೇ ನಮ್ಮ ಆಸೆಯಾಗಿದೆ. ತಮಗೆ ದೇವರು ಉತ್ತಮ ಆರೋಗ್ಯ ಸಂಪತ್ತು ಹಾಗೂ ಉನ್ನತ ಮಟ್ಟದ ಹುದ್ದೆಗಳು ಕರುಣಿಸಲಿ ಎನ್ನುವುದೇ ನಮ್ಮ ಪ್ರಾರ್ಥನೆ.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐💐🎉🎊🎊 ಸರಳ, ತೀರ ಅತಿ ಎನಿಸುವ ಬಯಕೆಗಲಿಲ್ಲದ, ಇರುವುದರಲ್ಲಿ ಖುಷಿ ಪಡುವ, ಊಟದಲ್ಲಿ ಅನ್ನಪೂರ್ಣೇಶ್ವರಿ ಆಗಿ, ಆರೋಗ್ಯದ ವಿಚಾರದಲ್ಲಿ ಧನ್ವಂತರಿ ಆಗಿ __ವರ್ಷ ಜೊತೆಗೆ ನಿಂತ ನಿಮಗೆ ನಿಮ್ಮ ಮನೆಯವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ😍
34ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತಾ, ಖುಷಿ ಖುಷಿಯಾಗಿ ಸಾಗಲಿ ನಿಮ್ಮ ಪಯಣ, ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ, ತುಂಬು ದಾಂಪತ್ಯ ನಿಮ್ಮದಾಗಲಿ. ಮದುವೆಯ ದಿನದಂದು ಶುಭಾಶಯಗಳು!💐💐💕
ಸುಮಧುರ ದಾಂಪತ್ಯ ಜೀವನದ ನಮ್ಮೆಲ್ಲರ ಆದರ್ಶ ಹಾಗೂ ನಲ್ಮೆಯ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. ನಿಮ್ಮ ದಾಂಪತ್ಯ ಜೀವನ ನಮ್ಮೆಲ್ಲರಿಗೂ ಆದರ್ಶ ಹಾಗೂ ಪ್ರೇರಣಾದಾಯಕವಾಗಿದೆ.
❤❤ ಗಂಡ ಹೆಂಡತಿ ಹೀಗೆ ಖುಷಿ ಖುಷಿಯಾಗಿ ಮಜಾ ಮಾಡ್ಕೊಂಡ್ ಇರಿ 😄😀 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 😍😘 ಹೀಗೆ ಪ್ರತೀ ವರ್ಷ ಊಟಕ್ಕೆ ಕರೆಯೋದು ಮಾತ್ರ ಮರೀಬೇಡಿ 😜
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ. ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ . ವರುಷಗಳು ಎಂಟಾಗಲಿ ಮೂವತ್ತೆಂಟಾಗಲಿ ಅದೇ ನಗು ಅದೇ ಪ್ರೀತಿ ನಮ್ಮ ಈ ಅನುಬಂಧ ಸದಾ ಹೀಗೆ ಇರಲಿ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು . 💐💐❤️
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಬಾಸ್ 💞 ಅತ್ತಿಗೆ 💐 😊 ಪ್ರಕೃತಿ ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ಸದಾಕಾಲ ಈಗೇ ಅನೂನ್ಯವಾಗಿ ನಗುನಗುತಾ ಇರಿ 💙 🙏
ಎರಡು ಮನಸಿಗೆ ಒಲವಿನ ಬೆಸುಗೆ ಎರಡುಬಾಳಿನ ಬಂಧನ ಬೆಸುಗೆ ಎರಡು ಮನಸಿಗೆ ಒಲವಿನ ಬೆಸುಗೆ ಎರಡುಬಾಳಿನ ಬಂಧನ ಬೆಸುಗೆ ಮಧುರ ಮಿಲನಕೆ ಪ್ರೀತಿಯ ಬೆಸುಗೆ ಜನುಮ ಜನುಮಕು ಆತ್ಮದ ಬೆಸುಗೆ… ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣಾ. ನೂರು ಕಾಲ ಹೀಗೆ ಸಂತೋಷವಾಗಿರಿ.. ಶ್ರೀ ಶ್ರೀ ಸದ್ಗುರುಗಳ ಆಶೀರ್ವಾದ ಯಾವತ್ತೂ ನಿಮ್ಮ ಮೇಲಿರಲಿ💐🎉 ಈ ಶುಭ ದಿನದಂದು ದೇವರ ಅನುಗ್ರಹ ಸಂಪೂರ್ಣವಾಗಿ ಆಗಿ ಇಷ್ಟಾರ್ಥ,ಆರೋಗ್ಯ, ಐಶ್ವರ್ಯ ನಿಮಗೆ ಕರುಣಿಸಿಲಿ ಎಂದು ಹಾರೈಸುವ…ನಿನ್ನ ಪ್ರೀತಿಯ ತಮ್ಮ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು 💑 🌹
ಕನಸುಗಳ ಮಲೆಯಾಗಿ ಮನಸ್ಸುಗಳ ಮಿಲನವಾಗಿ ಮಧುರ ಮೈತ್ರಿಯಾ ಅಂಗಳದಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದಂಪತಿಗಳಿಗೆ ಶುಭ ಹಾರೈಕೆಗಳೊಂದಿಗೆ 🌹🌹
ನಿಮ್ಮ ಜೀವನ ಹಾಲು ಜೇನಿನಂತೆ ಸಿಹಿಯಾಗಿರಲಿ, ಎಂದು ಆರದ ನಂದಾದೀಪದಂತೆ ಸದಾ ಬೆಳಗುತ್ತಿರಲಿ ಎಂಬುದೇ ನಮ್ಮ ಪ್ರಾರ್ಥನೆ 🙏🙏
ನಿಮ್ಮ ಜೀವನ ಸದಾ ಹಾಲು ಜೇನಿನಂತೆ ಎಂದೆಂದಿಗೂ ಗಟ್ಟಿಯಾಗಿರಲಿ ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ ಯಶಸ್ಸು ಸದಾ ನಿಮ್ಮದಾಗಿರಲಿ ✨🥰💞 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣ 💞 ಅತ್ತಿಗೆ ✨🥰
ನನ್ನ ಮಗಳ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಆಯುರಾರೋಗ್ಯಭಾಗ್ಯ ಸದಾ ಇರಲಿ, ನೂರ್ಕಾಲ ಸುಖವಾಗಿ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯ ಬ್ರದರ್.. ನಿಮ್ಮ ದಾಂಪತ್ಯ ಜೀವನ ಹೀಗೆ ನಗು ನಗುತ್ತ ಸಾಗಲಿ 💐💐🎂🙏🙏
ವಿವಾಹ ವಾರ್ಷಿಕೋತ್ಸವದ ಶುಭಾಶಯ ..ಏಳು ವಸಂತ ಕಂಡ ನಿಮ್ಮ ಬಾಳ್ಗೆ. ಪ್ರತಿ ವಿಷಯದಲ್ಲಿ ಏಳ್ಗೆ ಹೊಂದಲಿ ಎಂದು ಹಾರೈಸುತ್ತೇನೆ..💐💐💐💐
ಎಂಟರ ಈ ನಂಟು ಎಂಬತ್ತಾದರೂ ಹೀಗೆ ಮುಂದುವರೆಯಲಿ.ಆರೋಗ್ಯ ಅಂತಸ್ತು,ಆಯುಷ್ಯ,ಆತ್ಮೀಯತೆ ಸಮೃದ್ದವಾಗಿರಲಿ💐🙏 ವಿವಾಹ ವಾರ್ಷಿಕೋತ್ಸವದ ಶುಭಾಶಯ.
ಇದನ್ನೂ ಓದಿ:
- 100+ Birthday Wishes for Wife in Kannada (ಹೆಂಡತಿ ಹುಟ್ಟು ಹಬ್ಬದ ಶುಭಾಶಯಗಳು)
- 100+ Happy Birthday Wishes in Kannada for Brother (ಅಣ್ಣ/ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು)
- 100+ Happy Birthday Wishes for Sister in Kannada
- 100+ Happy Birthday Wishes for Father in Kannada
- Happy Birthday Wishes for Mother in Kannada with Images
- 150+ Lover Birthday Wishes in Kannada with Images
Marriage Anniversary Wishes in Kannada Images
ನಮ್ಮ ಈ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ ಸಂಗ್ರಹವನ್ನು (collection of happy wedding anniversary wishes in kannada) ನೀವು ಇಷ್ಟಪತ್ತಿದ್ದೀರಿ ಎಂದು ಭಾವಿಸುತ್ತೇವೆ. ಮದುವೆ ವಾರ್ಷಿಕೋತ್ಸವವೂ ನಿಮ್ಮದೇ ಆಗಿರಲಿ, ನಿಮ್ಮ ಹೆತ್ತವರು, ಸ್ನೇಹಿತರು ಅಥವಾ ಕುಟುಂಬದ ಸದಸ್ಯರದಾಗಿರಲಿ. ಪ್ರೀತಿಯಿಂದ ವಾರ್ಷಿಕೋತ್ಸವ ಆಚರಿಸಿ, ವಿವಾಹ ವಾರ್ಷಿಕೋತ್ಸವದ ಪ್ರೀತಿಯ ಸಂದೇಶಗಳನ್ನು (marriage anniversary wishes in kannada) ಗಳನ್ನು ಶೇರ್ ಮಾಡಿ ಮತ್ತು ಸಂತೋಷದಾಯಕ ನೆನಪುಗಳನ್ನು ಹಂಚಲು ಮರೆಯದಿರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.