Ediga caste history in kannada, Ibildiga community history in kannada, Arya Ediga Caste History in Kannada, Idigaru yaaru in kannada, Idiga samudayada itihasa in kannada, Idiga community origin in kannada, Idiga caste details in kannada, Idiga community population in Karnataka in kannada, Idiga caste occupation history in kannada, Idiga community famous personalities in kannada, Idiga samudaya mahiti in kannada.
ಕರ್ನಾಟಕದ ಅತ್ಯಂತ ಜನಪ್ರಿಯ ನಟ, ಡಾ. ರಾಜ್ಕುಮಾರ್ ಅವರ ಹೆಸರು ಗೊತ್ತಿಲ್ಲದವರು ಯಾರೂ ಇಲ್ಲ. ಆದರೆ ಒಂದು ಕಾಲದಲ್ಲಿ, ಅದೇ ಕುಟುಂಬದ ಹಿರಿಯರು ತಾಳೆ ಅಥವಾ ಈಚಲು ಮರಗಳ ಮೇಲೆ ಹತ್ತಿ, ಕಳ್ಳು ತೆಗೆಯಲು ಮಡಕೆ ಕಟ್ಟಿ, ಜೀವ ಪಣಕ್ಕಿಟ್ಟು ದುಡಿಯುತ್ತಿದ್ದರು ಎಂಬುದು ಎಷ್ಟು ಜನಕ್ಕೆ ಗೊತ್ತಿದೆ?
ಒಂದು ಕಾಲದಲ್ಲಿ ಸಮಾಜದ ಅಂಚಿನಲ್ಲಿ ನಿಂತಿದ್ದ ಈಡಿಗ ಸಮುದಾಯ, ಇಂದು ಸಿನಿಮಾ, ರಾಜಕೀಯ, ಉದ್ಯಮ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದು ಹೇಗೆ? ಈಡಿಗ ಸಮುದಾಯದ ಉಗಮದ ಹಿಂದಿರುವ ಪುರಾಣ ಕಥೆಗಳೇನು, ಈ ಸಮುದಾಯದ ಮೂಲ ಯಾವುದು, ಮರ ಹತ್ತಿ ಕಳ್ಳು ಇಳಿಸುವ ಕಸುಬು ಈಡಿಗರಿಗೆ ಹೇಗೆ ಬಂತು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಕರ್ನಾಟಕದ ಏಳನೇ ಅತಿ ದೊಡ್ಡ ಸಮುದಾಯ ಎಂದು ಕರೆಯಲ್ಪಡುವ ಈಡಿಗ ಸಮುದಾಯದ ಸಂಪೂರ್ಣ ಇತಿಹಾಸವನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
Table of Contents
ಈಡಿಗರು ಯಾರು? ಈಡಿಗ ಸಮುದಾಯದ ಸಂಪೂರ್ಣ ಇತಿಹಾಸ | Ediga Caste History in Kannada
ಈಡಿಗರು ಯಾರು?
ಈಡಿಗ ಎಂಬುದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕಂಡುಬರುವ ಒಂದು ಹಿಂದೂ ಸಮುದಾಯ.
ಸಾಂಪ್ರದಾಯಿಕವಾಗಿ ಈ ಸಮುದಾಯದ ಮೂಲ ಕಸುಬು ಕಳ್ಳು ಇಳಿಸುವುದು. ಅಂದರೆ ತಾಳೆ ಮತ್ತು ಈಚಲು ಮರಗಳಿಂದ ರಸ ತೆಗೆದು ಅದನ್ನು ಮಾರಾಟ ಮಾಡುವುದಾಗಿತ್ತು.
ಕರ್ನಾಟಕದಲ್ಲಿ ಈಡಿಗರು ಮುಖ್ಯವಾಗಿ ಮಲೆನಾಡು ಪ್ರದೇಶ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಆದರೆ ಇವರ ಜೊತೆಗೇ, ಇದೇ ರೀತಿಯ ಕಸುಬು ಮಾಡುತ್ತಿದ್ದ ಆದರೆ ಸಂಸ್ಕೃತಿಯಲ್ಲಿ ಪ್ರತ್ಯೇಕವಾದ ಸಮುದಾಯಗಳೂ ಇವೆ.
ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ದೀವರು ಎಂಬ ಸಮುದಾಯ ಇದೇ ರೀತಿಯ ಕಸುಬು ಮಾಡುತ್ತಿದ್ದರೂ, ಇವರೆಲ್ಲ ಒಂದೇ ಜಾತಿ ಅಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.
ಈಡಿಗ ಹೆಸರಿನ ಮೂಲ
“ಈಡಿಗ” ಎಂಬ ಹೆಸರಿನ ಮೂಲದ ಬಗ್ಗೆ ಕುತೂಹಲಕಾರಿ ವಿಷಯವಿದೆ.ಈ ಹೆಸರು ತೆಲುಗು ಭಾಷೆಯ “ಇಡುಚು” ಎಂಬ ಪದದಿಂದ ಬಂದಿರಬಹುದು ಎಂದು ಒಂದು ಐತಿಹಾಸಿಕ ಉಲ್ಲೇಖ ಹೇಳುತ್ತದೆ.
ತೆಲುಗು ಭಾಷೆಯಲ್ಲಿ ಇಡುಚು ಎಂದರೆ “ಎಳೆಯುವುದು” ಅಥವಾ “ಸೆಳೆಯುವುದು” ಎಂದರ್ಥ. ಮರದಿಂದ ರಸ ತೆಗೆಯುವ ಕ್ರಿಯೆಯನ್ನೇ ಈ ಹೆಸರು ಸೂಚಿಸುತ್ತದೆ ಎಂಬುದು ಒಂದು ವಾದ.
ಪ್ರದೇಶದಿಂದ ಪ್ರದೇಶಕ್ಕೆ ಇದೇ ಸಮುದಾಯದ ಹೆಸರುಗಳು ಬದಲಾಗುತ್ತವೆ. ಆಂಧ್ರಪ್ರದೇಶದ ರಾಯಲಸೀಮಾ ಭಾಗದಲ್ಲಿ ಇವರನ್ನು ಈಡಿಗ ಎಂದೇ ಕರೆದರೆ, ಕೃಷ್ಣ, ಗುಂಟೂರು ಜಿಲ್ಲೆಗಳಲ್ಲಿ ಗಮಲ್ಲ ಅಥವಾ ಗೌಂಡ್ಲ ಎಂದೂ, ಗೋದಾವರಿ ಜಿಲ್ಲೆಗಳಲ್ಲಿ ಸೆಟ್ಟಿಬಲಿಜ ಎಂದೂ, ವಿಶಾಖಪಟ್ಟಣದಲ್ಲಿ ಯಾತ ಎಂದೂ ಕರೆಯಲಾಗುತ್ತದೆ.
ಈಡಿಗ ಸಮುದಾಯದ ಮೂಲ
ಈಡಿಗ ಸಮುದಾಯದ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಹಲವು ಅಭಿಪ್ರಾಯಗಳಿವೆ. ಒಂದು ಪ್ರಮುಖ ಸಿದ್ಧಾಂತದ ಪ್ರಕಾರ, ಈಡಿಗರು ಮೂಲತಃ ತೆಲುಗು ಮಾತನಾಡುವ ಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದವರು ಎನ್ನಲಾಗುತ್ತದೆ.
ಇನ್ನೊಂದು ಐತಿಹಾಸಿಕ ಉಲ್ಲೇಖ, ಈಡಿಗರು ಬಲಿಜ ಸಮುದಾಯದ ಒಂದು ಶಾಖೆಯಾಗಿದ್ದು, ಕಸುಬಿನ ಕಾರಣದಿಂದಾಗಿ ಪ್ರತ್ಯೇಕವಾದರು ಎಂದೂ ಹೇಳುತ್ತದೆ.
ಇನ್ನೂ ಕರ್ನಾಟಕದ ಈಡಿಗ ಸಮುದಾಯದೊಳಗೆ ಈಡಿಗರು ಗೌಡ ಸಮುದಾಯದ ವಂಶಸ್ಥರು ಎಂಬ ನಂಬಿಕೆಯೂ ಸಹ ಬಲವಾಗಿ ಬೇರೂರಿದೆ. ಈ ಪ್ರಕಾರ, ಗೌಡ, ಗೌಳ ಮತ್ತು ಈಡಿಗ ಎಂಬ ಪದಗಳು ಒಂದೇ ಮೂಲದಿಂದ ಬಂದವು ಎಂದು ಸಮುದಾಯದ ಸಂಘಟನೆಗಳು ಪ್ರತಿಪಾದಿಸುತ್ತವೆ.
ಇದೊಂದು ಕುತೂಹಲಕಾರಿ ಸಂಗತಿ ಏನೆಂದರೆ, ಕರ್ನಾಟಕದೊಳಗೇ ಈಡಿಗ ಸಮುದಾಯ 26ಕ್ಕೂ ಹೆಚ್ಚು ಉಪ-ಪಂಗಡಗಳಾಗಿ ಹಂಚಿಹೋಗಿದೆ. ಪ್ರತಿಯೊಂದು ಉಪ-ಪಂಗಡಕ್ಕೂ ತನ್ನದೇ ಆದ ಪದ್ಧತಿ, ಆಚರಣೆ, ಪ್ರಾದೇಶಿಕ ಗುರುತುಗಳಿವೆ.
ಇಷ್ಟೊಂದು ಉಪಪಂಗಡಗಳಿರುವ ಕಾರಣದಿಂದಲೇ ಕರ್ನಾಟಕ ಸರ್ಕಾರ, ಈ 26 ಗುಂಪುಗಳನ್ನೂ ಈಡಿಗ ಎಂಬ ಒಂದೇ ಹೆಸರಿನಡಿಯಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗುತ್ತದೆ.
ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ
ಈಡಿಗ ಸಮುದಾಯದ ಹುಟ್ಟಿನ ಬಗ್ಗೆ ಎರಡು ಪ್ರಮುಖ ಪುರಾಣ ಕಥೆಗಳು ನಮ್ಮ ನಡುವೆ ಚಾಲ್ತಿಯಲ್ಲಿವೆ. ಮೊದಲನೆಯದಾಗಿ, ಅತ್ರಿ ಮಹರ್ಷಿ ಮತ್ತು ಕೌಂಡಿನ್ಯ ಮುನಿಯ ಸೃಷ್ಟಿಯ ಕಥೆ.
‘ರುದ್ರಭಾರತ’ ಗ್ರಂಥದಲ್ಲಿ ಉಲ್ಲೇಖಿಸಿರುವಂತೆ, ಅತ್ರಿ ಮಹರ್ಷಿಯು ಉಚ್ಚರಿಸಿದ, ‘ಗೌಡಮಂತ್ರ’ದ ವಿಶೇಷ ಪ್ರಭಾವದಿಂದ ಈಡಿಗ ವಂಶದ ಮೂಲ ಪುರುಷ ಉದ್ಭವಿಸಿದನೆಂಬ ನಂಬಿಕೆ ಇದೆ. ಈ ಮಂತ್ರದ ಶಕ್ತಿಯಿಂದಲೇ ಕೌಂಡಿನ್ಯನೆಂಬ ಮುನಿಯ ಸೃಷ್ಟಿಯಾಯಿತು.
ಕೌಂಡಿನ್ಯ ಮಹರ್ಷಿಯು ತನ್ನ ಅಗಾಧ ತಪಶ್ಯಕ್ತಿಯ ಬಲದಿಂದ ಹಣ್ಣು ನೀಡುವ ವೃಕ್ಷಗಳನ್ನೂ ಹಾಗೂ ಅಪರೂಪದ ಗಿಡಮೂಲಿಕೆಗಳನ್ನೂ ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಆ ಮರಗಳ ಮಧುರವಾದ ರಸದಿಂದ ‘ಸೋಮರಸ’ವನ್ನು ತಯಾರಿಸಿದ ಕೌಂಡಿನ್ಯ ಮುನಿಯು, ಆ ಮೂಲಕ ಅಂದಿನ ಕಾಲದಲ್ಲಿ ಮಾನವರ ಮಾರಕ ರೋಗಗಳನ್ನು ನಿವಾರಿಸಿದನೆಂಬ ಪ್ರತೀತಿ ಇದೆ. ಹೀಗಾಗಿಯೇ ಕೌಂಡಿನ್ಯ ಮಹರ್ಷಿಯನ್ನು ಈಡಿಗ ವಂಶದ ಮೂಲ ಪುರುಷ ಎಂದು ಪರಿಗಣಿಸಲಾಗುತ್ತದೆ.
ಕಳ್ಳು ಇಳಿಸುವ ಕಸುಬಿನ ಜನಪದ ಕಥೆ
ಈಡಿಗರ ಕಸುಬಿನ ಆರಂಭದ ಬಗ್ಗೆ ಮತ್ತೊಂದು ರೋಚಕ ಜನಪದ ಕಥೆಯು ಇದೆ. ಒಮ್ಮೆ ಪಾರ್ವತಿ ಮತ್ತು ಪರಮೇಶ್ವರರು ಲೋಕ ಸಂಚಾರಕ್ಕಾಗಿ ಭೂಲೋಕಕ್ಕೆ ಬಂದಿದ್ದಾಗ, ಬಾಯಾರಿಕೆಯಿಂದ ಬಳಲಿದ ಪಾರ್ವತಿದೇವಿಗೆ ಸುತ್ತಮುತ್ತ ನೀರಿನ ಮೂಲಗಳು ಕಾಣಲಿಲ್ಲ.
ಆಗ ಅಲ್ಲೇ ಸಮೃದ್ಧವಾಗಿ ಬೆಳೆದಿದ್ದ ತಾಳೆ ಮತ್ತು ಈಚಲು ಮರಗಳ ಗುಂಪನ್ನು ಕಂಡ ಪಾರ್ವತಿಯು, ಆ ಮರಗಳ ಕಾಂಡದಿಂದ ಸ್ರವಿಸುವ ರಸದಿಂದ ತನ್ನ ತೃಷೆ ನೀಗಿಸಿಕೊಳ್ಳಲು ಇಚ್ಛಿಸಿ, ಅದನ್ನು ತಂದುಕೊಡುವಂತೆ ತನ್ನ ಪತಿಯಲ್ಲಿ ವಿನಂತಿಸಿದಳು.
ಅದೇ ಸಮಯಕ್ಕೆ ಸರಿಯಾಗಿ ಆ ದಾರಿಯಲ್ಲಿ ಬರುತ್ತಿದ್ದ ಬಳೆಗಾರ ಬಣಜಿಗನೊಬ್ಬನನ್ನು ಕರೆದ ಪರಮೇಶ್ವರನು, ಒಂದು ಸಣ್ಣ ಚೂಪನೆಯ ಆಯುಧವನ್ನು ನೀಡಿ ಆ ಮರದಿಂದ ರಸ ತರುವಂತೆ ಸೂಚಿಸಿದನು.
ಆ ಬಳೆಗಾರ ಭಕ್ತಿಯಿಂದ ತಂದುಕೊಟ್ಟ ಈಚಲ ರಸವನ್ನು ಸೇವಿಸಿ ಸಂತುಷ್ಟರಾದ ಶಿವ-ಪಾರ್ವತಿಯರು, ‘ನೀನು ಇಂದಿನಿಂದ ಇದೇ ಉದ್ಯೋಗವನ್ನು ಮುಂದುವರಿಸು, ಇದರಿಂದ ನಿನ್ನ ಮುಂದಿನ ಪೀಳಿಗೆಯವರ ಜೀವನ ಉತ್ತರೋತ್ತರ ಅಭಿವೃದ್ಧಿ ಹೊಂದಲಿ’ ಎಂದು ಆತನಿಗೆ ಆಶೀರ್ವದಿಸಿದರು.
ಅಂದಿನಿಂದಲೇ ಈಡಿಗರ ವಂಶ ಮತ್ತು ಅವರ ಈ ಸಾಂಪ್ರದಾಯಿಕ ವೃತ್ತಿ ಆರಂಭವಾಯಿತು ಇಂದು ಈ ಜನಪದ ಕಥೆ ಹೇಳುತ್ತದೆ.
ತಲೆತಲಾಂತರಗಳಿಂದ ಬಂದ ಕಷ್ಟದ ವೃತ್ತಿ
ಈ ಸಮುದಾಯದ ಜೀವನಾಡಿಯಾಗಿದ್ದ ಕಳ್ಳು ಇಳಿಸುವ ಕಸುಬಿನ ಬಗ್ಗೆ ಹೇಳುವುದಾದರೆ, ಪ್ರತಿ ದಿನ ಬೆಳಗಿನ ಜಾವ, ಸೂರ್ಯ ಹುಟ್ಟುವ ಮೊದಲೇ, ಈಡಿಗ ಕುಟುಂಬದ ಗಂಡಸರು ಮನೆಯಿಂದ ಹೊರಡುತ್ತಿದ್ದರು. ಸೊಂಟಕ್ಕೆ ಕತ್ತಿ, ಹಗ್ಗ ಮತ್ತು ಮಡಕೆ ಕಟ್ಟಿಕೊಂಡು, ಬರಿಗಾಲಿನಲ್ಲಿ ಎತ್ತರದ ತಾಳೆ ಮರ, ಈಚಲು ಮರ ಅಥವಾ ತೆಂಗಿನ ಮರವನ್ನು ಹತ್ತುತ್ತಿದ್ದರು.
ಮರದ ತುದಿಯಲ್ಲಿ ಗರಿಗಳ ನಡುವೆ ಇರುವ ಹೂಗೊಂಚಲನ್ನು ನಾಜೂಕಾಗಿ ಕತ್ತರಿಸಿ, ಅದರಿಂದ ಸೋರುವ ರಸವನ್ನು ಮಡಕೆಯಲ್ಲಿ ಸಂಗ್ರಹಿಸುತ್ತಿದ್ದರು. ಈ ಕೆಲಸ ಬೆಳಗ್ಗೆ ಮತ್ತು ಸಂಜೆ ಒಟ್ಟು ಎರಡು ಬಾರಿ ನಡೆಯುತ್ತಿತ್ತು.
ನೆಲದಿಂದ 40-50 ಅಡಿ ಎತ್ತರದ ಮರವನ್ನು, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ, ಕೇವಲ ಕಾಲುಗಳ ಬಲದಿಂದ ಹತ್ತಬೇಕಿತ್ತು.
ಎಷ್ಟೋ ಕುಟುಂಬಗಳಲ್ಲಿ, ಮನೆಯ ಯಜಮಾನ ಮರದಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಹೀಗೆ ಸಂಗ್ರಹಿಸಿದ ರಸವನ್ನು ಸಿಹಿಯಾಗಿ ಮಾರುತ್ತಿದ್ದರು ಅಥವಾ ಹುದುಗಿಸಿ ಕಳ್ಳಾಗಿ ಪರಿವರ್ತಿಸಿ ಮಾರುತ್ತಿದ್ದರು.
ಮರ ಆಯ್ಕೆ ಮಾಡುವುದರಿಂದ ಹಿಡಿದು, ಎಷ್ಟು ಆಳವಾಗಿ ಕೊಯ್ಯಬೇಕು, ಯಾವ ಕಾಲದಲ್ಲಿ ಎಷ್ಟು ರಸ ಸಿಗುತ್ತದೆ, ಮರವನ್ನು ಮುಂದಿನ ವರ್ಷಕ್ಕೂ ಬದುಕಿಸುವಂತೆ ಹೇಗೆ ಜೋಪಾನ ಮಾಡಬೇಕು ಎಂಬ ಈ ಇಡೀ ಪ್ರಕ್ರಿಯೆ ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗುತ್ತಿದ್ದ ಸೂಕ್ಷ್ಮ ಜ್ಞಾನವಾಗಿತ್ತು.
ಗ್ರಾಮೀಣ ಆರ್ಥಿಕತೆಯಲ್ಲಿ ಈಡಿಗರ ಪಾತ್ರ
ಗ್ರಾಮೀಣ ಆರ್ಥಿಕತೆಯಲ್ಲಿ ಈಡಿಗರ ಪಾತ್ರ ಬಹಳ ಮುಖ್ಯವಾಗಿತ್ತು. ಕಳ್ಳು ಕೇವಲ ಒಂದು ಪೇಯವಾಗಿರಲಿಲ್ಲ, ಬಡ ಕೃಷಿ ಕಾರ್ಮಿಕರಿಗೆ, ಬಿಸಿಲಿನಲ್ಲಿ ದುಡಿಯುವ ಜನರಿಗೆ ಅದೊಂದು ಪೌಷ್ಟಿಕ ಪೇಯವೂ ಆಗಿತ್ತು.
ಗ್ರಾಮದ ಜಾತ್ರೆ, ಹಬ್ಬ, ಸಂತೆಗಳಲ್ಲಿ ಈಡಿಗರ ವ್ಯಾಪಾರ ಒಂದು ಮುಖ್ಯ ಭಾಗವಾಗಿತ್ತು. ಕೆಲವು ಕುಟುಂಬಗಳು ಕೂಲಿಯಾಗಿ ದುಡಿದರೆ, ಇನ್ನು ಕೆಲವರು ಮರಗಳ ಗುತ್ತಿಗೆ ಪಡೆದು ಸ್ವತಂತ್ರವಾಗಿ ವ್ಯಾಪಾರ ಮಾಡುತ್ತಿದ್ದರು.
ಈ ವೃತ್ತಿ ಈಡಿಗರಿಗೆ ಹೇಗೆ ಅಂಟಿಕೊಂಡಿತು?
ಆ ಕಾಲದಲ್ಲಿ ಕರ್ನಾಟಕ ಮತ್ತು ಆಂಧ್ರದ ಪ್ರದೇಶಗಳಲ್ಲಿ ತಾಳೆ ಹಾಗೂ ಈಚಲು ಮರಗಳು ಯಥೇಚ್ಛವಾಗಿ ಬೆಳೆಯುತ್ತಿದ್ದವು. ಗ್ರಾಮೀಣ ಆರ್ಥಿಕತೆಯಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ನಿರ್ದಿಷ್ಟ ಕಸುಬು ನಿಗದಿಯಾಗಿತ್ತು.
ಕುಂಬಾರರಿಗೆ ಮಡಕೆ, ಕಮ್ಮಾರರಿಗೆ ಕಬ್ಬಿಣದ ಕೆಲಸ, ಹಾಗೆಯೇ ಈಡಿಗರಿಗೆ ಕಳ್ಳು ಇಳಿಸುವ ಕಸುಬು. ಈ ವ್ಯವಸ್ಥೆಯಲ್ಲಿ ಒಂದು ಕಸುಬು ಒಂದು ಸಮುದಾಯದ ಜೊತೆ ಒಮ್ಮೆ ಥಳಕು ಹಾಕಿಕೊಂಡರೆ, ಅದು ತಲೆಮಾರುಗಳ ಕಾಲ ಮುಂದುವರೆಯುತ್ತಿತ್ತು.
ಅರಸೊತ್ತಿಗೆಗಳೂ ಕೂಡ ಕಳ್ಳಿನ ಮೇಲೆ ಸುಂಕ ವಿಧಿಸಿ, ಈ ವ್ಯಾಪಾರವನ್ನು ಆರ್ಥಿಕ ವ್ಯವಸ್ಥೆಯ ಭಾಗವನ್ನಾಗಿ ಮಾಡಿಕೊಂಡಿದ್ದವು. ಹೀಗಾಗಿ, ಭೌಗೋಳಿಕ ಅನುಕೂಲ, ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ಬೇಡಿಕೆ ಈ ಮೂರೂ ಒಟ್ಟಾಗಿ ಈಡಿಗರ ಕಸುಬನ್ನು ಶತಮಾನಗಳ ಕಾಲ ಸ್ಥಿರಗೊಳಿಸಿದವು.
ರಾಜರ ಕಾಲದಲ್ಲಿ ಈಡಿಗರ ಬದುಕು
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಪಾಳೆಗಾರರ ವ್ಯವಸ್ಥೆ ಬಲಗೊಂಡಾಗ, ಈಡಿಗ ಸಮುದಾಯದ ಕೆಲವರು ಕೇವಲ ಕಳ್ಳು ಇಳಿಸುವುದಕ್ಕೆ ಸೀಮಿತವಾಗದೆ, ಪಾಳೆಗಾರರಾಗಿಯೂ, ಸ್ಥಳೀಯ ಆಡಳಿತಗಾರರಾಗಿಯೂ ಬೆಳೆದರು. ಮೈಸೂರು ಒಡೆಯರ ಕಾಲದಲ್ಲಿ ಕೂಡ, ಕಳ್ಳಿನ ಮೇಲಿನ ಸುಂಕ ರಾಜ್ಯದ ಆದಾಯದ ಒಂದು ಭಾಗವಾಗಿತ್ತು. ಈ ವ್ಯಾಪಾರದ ಮೂಲಕ ಈಡಿಗ ಕುಟುಂಬಗಳು ಗ್ರಾಮೀಣ ಆರ್ಥಿಕತೆಯ ಜೊತೆ ಬಿಗಿಯಾಗಿ ಬೆಸೆದುಕೊಂಡಿದ್ದವು.
ಬ್ರಿಟಿಷರ ಕಾಲದಲ್ಲಿ ಬದಲಾದ ಜೀವನ
ಬ್ರಿಟಿಷ್ ಆಳ್ವಿಕೆ ಬಂದ ಮೇಲೆ ಈಡಿಗರ ಬದುಕಿನಲ್ಲಿ ದೊಡ್ಡ ಬದಲಾವಣೆಗಳಾದವು. ಬ್ರಿಟಿಷರು ಅಬಕಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು.
ಕಳ್ಳು ಮತ್ತು ಸಾರಾಯಿಯ ಮೇಲೆ ಭಾರೀ ತೆರಿಗೆ ಹೇರಿ, ಅದನ್ನು ಸರ್ಕಾರದ ಆದಾಯದ ಪ್ರಮುಖ ಮೂಲವನ್ನಾಗಿ ಮಾಡಿಕೊಂಡರು. ಇದಕ್ಕಾಗಿ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದರು. ಇದರರ್ಥ, ಒಂದು ಪ್ರದೇಶದಲ್ಲಿ ಕಳ್ಳು ಮಾರಾಟ ಮಾಡುವ ಹಕ್ಕನ್ನು ಒಬ್ಬ ಗುತ್ತಿಗೆದಾರನಿಗೆ ಹರಾಜು ಮಾಡಿ ಕೊಡಲಾಗುತ್ತಿತ್ತು.
ಇದರಿಂದ ಸಾಂಪ್ರದಾಯಿಕವಾಗಿ ಮರ ಹತ್ತಿ ದುಡಿಯುತ್ತಿದ್ದ ಸಾಮಾನ್ಯ ಈಡಿಗ ಕುಟುಂಬಗಳಿಗೆ ಕಷ್ಟ ಎದುರಾಯಿತು. ಅವರೀಗ ಸ್ವತಂತ್ರವಾಗಿ ಮಾರಾಟ ಮಾಡುವ ಬದಲು, ಗುತ್ತಿಗೆದಾರರ ಅಡಿಯಲ್ಲಿ ಕೂಲಿಯಾಗಿ ದುಡಿಯಬೇಕಾಯಿತು.
ಬ್ರಿಟಿಷರ ಅರಣ್ಯ ಕಾಯ್ದೆಗಳೂ ಈಡಿಗರ ಮೇಲೆ ಪರಿಣಾಮ ಬೀರಿದವು. ಕಾಡುಗಳ ಮೇಲಿನ ಹಿಡಿತವನ್ನು ಸರ್ಕಾರ ಬಿಗಿಗೊಳಿಸಿದಾಗ, ಮರಗಳಿಗೆ ಪ್ರವೇಶ ಪಡೆಯುವುದೇ ಕಷ್ಟವಾಗತೊಡಗಿತು.
ಸಮುದಾಯ ಎದುರಿಸಿದ ಸವಾಲುಗಳು
ಸ್ವಾತಂತ್ರ್ಯಾ ನಂತರವೂ ಈಡಿಗ ಸಮುದಾಯದ ಬಹುಪಾಲು ಜನ ಬಡತನ, ಶಿಕ್ಷಣದ ಕೊರತೆ, ಭೂಹೀನತೆ ಹೀಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು.
ಕಳ್ಳಿನ ಕಸುಬಿನ ಸಾಮಾಜಿಕ ಅಂತಸ್ತು ಕಡಿಮೆ ಎಂಬ ನೋಟದಿಂದಾಗಿ, ಸಮುದಾಯದ ಜನರಿಗೆ ಇತರ ಕ್ಷೇತ್ರಗಳಲ್ಲಿ ಅವಕಾಶ ಸಿಗುವುದೂ ಕಷ್ಟವಾಗಿತ್ತು.
ಗೇಣಿದಾರ ರೈತರ ಶೋಷಣೆಯ ವಿರುದ್ಧ ನಡೆದ ಚಳುವಳಿಯಲ್ಲಿಯು ಸಹ ಈ ಸಮುದಾಯದ ಜನ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈಡಿಗ ಸಮುದಾಯದ ಪ್ರಸಿದ್ಧ ವ್ಯಕ್ತಿಗಳು
ಈಡಿಗ ಸಮುದಾಯದ ಅತಿ ದೊಡ್ಡ ಆರಾಧ್ಯ ದೈವ ಮತ್ತು ಮಾರ್ಗದರ್ಶಕರೆಂದರೆ ಬ್ರಹ್ಮಶ್ರೀ ನಾರಾಯಣ ಗುರುಗಳು. ಒಂದು ಕಾಲದಲ್ಲಿ ಸ್ಪೃಶ್ಯತೆ, ಮೂಢನಂಬಿಕೆಗಳು ಮತ್ತು ಅ-ಸಮಾನತೆಯ ಕಂದಕದಲ್ಲಿ ಸಿಲುಕಿ, ಶಿಕ್ಷಣ ಹಾಗೂ ಹಕ್ಕುಗಳಿಂದ ವಂಚಿತರಾಗಿದ್ದ ಕೆಳವರ್ಗದವರಿಗೆ ಮೊಟ್ಟಮೊದಲ ಬಾರಿಗೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಪಾಠ ಕಲಿಸಿದವರು ನಾರಾಯಣ ಗುರುಗಳು.
ಜಾತಿ-ಮತಗಳ ಹೆಸರಿನಲ್ಲಿ ಮನುಷ್ಯರನ್ನು ಬೇರೆ ಮಾಡುವ ಅನಿಷ್ಟ ಪದ್ಧತಿಗಳ ವಿರುದ್ಧ ದನಿಯೆತ್ತಿ, ಮಾನವೀಯ ಸಂದೇಶವನ್ನು ಸಾರಿ, ತಲೆ ಎತ್ತಿ ಬದುಕುವ ಹಕ್ಕನ್ನು ಕರುಣಿಸಿದ ನಾರಾಯಣ ಗುರುಗಳನ್ನು ಇಂದಿಗೂ ಈ ಸಮುದಾಯ ಗೌರವಿಸುತ್ತದೆ.
ಕಲೆ, ರಾಜಕೀಯ ಮತ್ತು ಸಮಾಜದಲ್ಲಿ ಕೊಡುಗೆ
ಈಡಿಗ ಸಮುದಾಯವು ಕಲೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕರ್ನಾಟಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದೆ.
ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್ಕುಮಾರ್ ಮತ್ತು ಅವರ ಮಕ್ಕಳಾದ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್, ತಮ್ಮ ಸರಳತೆ ಹಾಗೂ ಅಭಿನಯದಿಂದ ಇಡೀ ರಾಜ್ಯದ ಜನರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಹಾಗೆಯೇ, ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲೂ ಈ ಸಮುದಾಯದ ಮುಖಂಡರು ಮುಂಚೂಣಿಯಲ್ಲಿದ್ದಾರೆ.
ಜನಸಂಖ್ಯೆ
ಸಮುದಾಯ ಸಂಘಟನೆಗಳ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಈಡಿಗ ಸಮುದಾಯ ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿದ್ದು, ರಾಜ್ಯದ ಏಳನೇ ಅತಿ ದೊಡ್ಡ ಸಮುದಾಯ ಎಂದು ಅಂದಾಜಿಸಲಾಗಿದೆ.
ಇದಾಗಿತ್ತು ಈಡಿಗ ಸಮುದಾಯದ ಕುರಿತ ಸಂಪೂರ್ಣ ಮಾಹಿತಿ. ಮರ ಹತ್ತಿ ಕಳ್ಳು ಇಳಿಸುವ ಕಠಿಣ ಜೀವನದಿಂದ ಹಿಡಿದು, ಕಲೆ, ರಾಜಕೀಯ ಮತ್ತು ಉದ್ಯಮದ ಎತ್ತರದ ಸ್ಥಾನಗಳವರೆಗೆ ಸಾಗಿದ ಈ ಸಮುದಾಯದ ಪಯಣ ಕರ್ನಾಟಕದ ಸಾಮಾಜಿಕ ಇತಿಹಾಸದ ಪ್ರಮುಖ ಭಾಗವಾಗಿದೆ.
ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ, ಇನ್ನಿತರ ವಿಷಯಗಳನ್ನೂ ಸಹ ನೀವು ನಮ್ಮ ಬ್ಲಾಗ್ ನಲ್ಲಿ ಓದಬಹುದು.
ಈ ಬ್ಲಾಗ್ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted, and copying is not allowed without permission from the author.
