50+ Anna Thangi Quotes in Kannada | ಅಣ್ಣ ತಂಗಿ ಬಾಂಧವ್ಯ ಕೋಟ್ಸ್ಗಳು

ಅಣ್ಣ-ತಂಗಿಯ ಸಂಬಂಧವು ಪ್ರೀತಿಯ, ನಂಬಿಕೆಯ ಮತ್ತು ಅರ್ಥಪೂರ್ಣತೆಯ ಸಂಕೇತವಾಗಿದೆ. ಈ ಸಂಬಂಧವು ಜೀವಿತದಲ್ಲಿ ಅನೇಕ ಹಂತಗಳಲ್ಲಿ ಬೆಳೆದು, ಪರಸ್ಪರ ಸಹಾಯ ಮತ್ತು ಪ್ರೋತ್ಸಾಹ ನೀಡುವ ಮೂಲಕ ವಿಶೇಷವಾಗಿರುತ್ತದೆ. ಅಣ್ಣನ ಪ್ರೀತಿ ತಂಗಿಯ ಮೇಲೆ ತಂದೆಯಂತೆ, ತಂಗಿಯ ಪ್ರೀತಿ ಅಣ್ಣನ ಮೇಲೆ ತಾಯಿಯಂತೆ ಕಾಣಿಸುತ್ತದೆ. ಈ ಸಂಬಂಧವು ಕೇವಲ ಕುಟುಂಬದ ಗಡಿಗಳನ್ನು ಮೀರಿ, ಜೀವನದ ಪ್ರತಿಯೊಂದು ಹಂತದಲ್ಲಿ ನಮ್ಮನ್ನು ಬೆಂಬಲಿಸುತ್ತದೆ.

ಅಣ್ಣ-ತಂಗಿಯ ಸಂಬಂಧವನ್ನು ಬಿಂಬಿಸುವ ಹಲವಾರು ಸುಂದರವಾದ ಬರಹಗಳು ಕನ್ನಡದಲ್ಲಿ ಲಭ್ಯವಿವೆ. ಈ ಬರಹಗಳು ಸಂಬಂಧದ ಆಳವನ್ನು, ಭಾವನೆಗಳನ್ನು ಮತ್ತು ಅದರಲ್ಲಿ ಇರುವ ಪ್ರೀತಿಯನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸುತ್ತವೆ. “ಅಣ್ಣ”ನಿಂದ ತಂಗಿಗೆ ಸಿಗುವ ರಕ್ಷಣೆ, ಪ್ರೋತ್ಸಾಹ, ಮತ್ತು “ತಂಗಿ”ಯಿಂದ ಅಣ್ಣನಿಗೆ ಸಿಗುವ ಪ್ರೀತಿ, ಕಾಳಜಿ ಈ ಬರಹಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಈ ಲೇಖನದಲ್ಲಿ, ಕನ್ನಡದಲ್ಲಿ ಲಭ್ಯವಿರುವ ಅಣ್ಣ-ತಂಗಿಯ ಸಂಬಂಧವನ್ನು ಬಿಂಬಿಸುವ ಸುಂದರವಾದ ಕ್ವೋಟ್ಸ್‌ಗಳನ್ನು (anna thangi quotes in kannada) ಸಂಗ್ರಹಿಸಲಾಗಿದೆ. ಈ ಅಣ್ಣನ ಕುರಿತ ಕ್ವೋಟ್ಸ್‌ಗಳ ಸಂಗ್ರಹ (anna quotes in kannada) ನಿಮ್ಮ ಹೃದಯವನ್ನು ಸ್ಪರ್ಶಿಸುವಂತಹವು ಮತ್ತು ಈ ಅಪರೂಪದ ಸಂಬಂಧದ ಮಹತ್ವವನ್ನು ಮನವರಿಕೆ ಮಾಡುತ್ತವೆ. ಅಣ್ಣ-ತಂಗಿಯ ಸಂಬಂಧದ ಮೌಲ್ಯವನ್ನು ಅರಿಯಲು ಈ ಸಂಗ್ರಹವು ಸಹಾಯ ಮಾಡುತ್ತದೆ.

 beautiful collection of Anna Thangi quotes in Kannada about sibling love and bonding

Anna Thangi Quotes in Kannada | ಅಣ್ಣ ತಂಗಿ ಬಾಂಧವ್ಯ ಕೋಟ್ಸ್ಗಳು

 

ಅಭಿಮಾನದಲ್ಲಿ ಅಮ್ಮ,

ಅಧಿಕಾರದಲ್ಲಿ ಅಪ್ಪ.

ಪ್ರೋತ್ಸಾಹ ದಲ್ಲಿ ಸ್ನೇಹಿತ, 

ವಿಮರ್ಶೆಯಲ್ಲಿ ಶತ್ರು

ಕಲಿಸುವುದರಲ್ಲಿ ಗುರು.

ನನ್ನ ಬದುಕಿನ ಮೊದಲ ಗೆಳೆಯ

Love You ಅಣ್ಣಾ.

 

ಒಡ ಹುಟ್ಟಲಿಲ್ಲ, 

ಬಂದುವಲ್ಲ ಬಳಗವಲ್ಲ,

ಆದರೇನಂತೆ ಸಿಕ್ಕಿರುವನು ಒಬ್ಬ ಅಣ್ಣ 

ಬರೀ ಭಾವನೆಗಳಲ್ಲಿ ಬರಹಗಳಲ್ಲಿ ಹೇಳಲಾಗದಂತೆ, 

ಎಲ್ಲರನ್ನು ತನ್ನ ಅಕ್ಕ ತಂಗಿಯರಂತೆ, 

ಬಂದು ಬಳಗದಂತೆ ಪ್ರೀತಿಸುವ ಅಣ್ಣ.

 

ಅವನೆಂದರೆ ಆಗಸದಿ ಮೋಡಗಳ ಮಡಿಲೊಳಗೆ ಮರೆಯಾದ ನಕ್ಷತ್ರಗಳ ನೋಡಲು ಹಠ ಹಿಡಿದು ಕುಳಿತ ನನ್ನ ಕಣ್ಮುಂದೆ ಮಿಣುಕು ಹುಳುಗಳ ಸೈನ್ಯವೊಂದ ಕರೆಸಿ ಹಾರಾಡುವ ಬೆಳಕಿನಲ್ಲೇ ನೃತ್ಯವಮಾಡಿಸಿದ ಜಾದುಗಾರ …!!

ಚಪ್ಪಾಳೆ ತಟ್ಟುತಾ ನಾ ನಗುವಾಗ ನನ್ನ ನಗುವಲ್ಲೆ ಅವನ ಖುಷಿಯೊಂದ ಕಣ್ತುಂಬಿಕೊಂಡು ಗುಬ್ಬಚ್ಚಿಯಂತೆ ತನ್ಮಡಿಲಲ್ಲಿ ಮಲಗಿಸಿ ತಲೆ ಸವರುತ್ತಾ ಸಿಹಿಗನಸಿನ ನಿದಿರೆಯ ಹೊದಿಸುವ ಮಾಯಗಾರ…!!

 

ಹುಸಿಮುನಿಸ ತೋರಿ ಒಳಗೊಳಗೇ ಪ್ರೀತಿಸುವ

ತಾನೇ ಬೈದರೂ ಪರರ ನಿಂದನೆಗೆ ಸಿಡಿಯುವ

ತರಲೆ,ಕೀಟಲೆಗಳಲೇ ಮುದ್ದಿಸುವ

ಬೇರಾರೂ ಅಲ್ಲ ನನ್ನ ಅಣ್ಣನಿವ”

 

ಅಮ್ಮನ ಭರಿಸದ ವಾತ್ಸಲ್ಯ

ಅಪ್ಪನ ಮಮತೆಯ ಒಲವು

ಸ್ನೇಹಿತನ ಸಲಿಗೆ

ಗುರುವಿನ ಶಿಸ್ತಿನ ಸಹನೆ

ಹೊಂದಿರುವ

ಪ್ರೀತಿಯಲ್ಲಿ ತಪ್ಪು ತಿದ್ದುವ

ಕೋಪದಲ್ಲೂ ಪ್ರೀತಿ ತೋರುವ

ಒಂದು ಜೀವ ಅಣ್ಣ

 

ಅಕಸ್ಮಾತ್ ಎಂಬ ಪದದಿನ್ನೆಲೆಯಲಿ 

ಬದುಕಿಗೆ ಬಂದು ಅನಿರೀಕ್ಷಿತವಾಗಿ ಹನಿಯೊಲವ ನೀಡಿ 

ಸಾಗರವನೆ ಮೊಗೆದು ಕೊಟ್ಟಂತೆ ಭಾವಿಸುವ ತಾತ್ಕಾಲಿಕ ಮನುಜರ ನಡುವೇ , 

ಬಾಲ್ಯಂದಿದ ನಿನ್ಮನದ ಶರಿಧಿಯಲಿ ಪ್ರತಿಹಂತದಲು , 

ದುರಂತದಲು ಅಚಲ ಅನುರಾಗವ ಪರೋಕ್ಷವಾಗಿ ತೊರುವ ನೀನೂ ನನ್ಬದುಕಿನ ನಿಜಾತ್ಮಿಯ!! 

 

ನನ್ನ ಮುದ್ದು ಅಣ್ಣನ ಗೋಸ್ಕರ

ಈ ಮುದ್ದು ತಂಗಿಯ ಒಂದು ಪುಟ್ಟ ಕವನ

ಪ್ರೀತಿಗೆ ನೀನು ಕೊಪ್ಪಕ್ಕೆ ನಾನು

ಸ್ನೇಹಕ್ಕೆ ನೀನೂ ಹಠಕ್ಕೆ ನಾನು

ನನ್ನ ಮುದ್ದು ಅಣ್ಣ ನೀನು

ನಿನ್ನ ಪೆದ್ದು ತಂಗಿ ನಾನು

 

ಅಣ್ಣ, ಮೈ ಬಣ್ಣ ಸೇಬು ಅಣ್ಣ..

ಹತ್ಯಾಳೋ ಬೆನ್ನ.. 

ಫೋನ ಹಚ್ಚಿ ಕಾಡ್ತಾಳೆ..

ಒಂದ ಸವನ… 

ನನ್ನ ಮುದ್ದು ಮಾಡಿ…

ಅನತಿಯಳು ಚಿನ್ನ ರನ್ನ… 

 

ಅವನು ಒಂತರ ಮಗುವಿನ ಮನಸ್ಸಿನವನು 

ನನಗೆ ಎರಡನೇ ತಂದೆಯಾಗಿ

ನನ್ನ ಜೀವನಕ್ಕೆ ಬಂದವನು

ಪ್ರೀತಿಯ ವಿಷಯದಲ್ಲಿ ನನ್ನ ತಂದೆಗೆ ಸರಿಸಮಾನವಾದವನು

ಅವನೇ ನನ್ನ ಮುದ್ದಿನ ಅಣ್ಣ

 

ಸೂರ್ಯನಿಗಿಂತ ಅವನು ಪ್ರಕಾಶಮಯ

ಬಿಸಿಲಲ್ಲಿ ಅವನು ಬೆಂಕಿ

ಗುಣದಲ್ಲಿ ಇವನು ಬೆಂಕಿ

ಅವನಿಗೆ ಸಾವಿಲ್ಲ

ಇವನಿಗೆ ಸೋಲಿಲ್ಲ

ಅದೇ ಅವನ ಗೋಲು

ನನ್ನ ಪ್ರೀತಿಯ ಅಣ್ಣ……..

 

ಇದನ್ನೂ ಓದಿ: 

  1. 100+ Happy Birthday Wishes in Kannada for Brother (ಅಣ್ಣ/ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು)
  2. 100+ Happy Birthday Wishes for Sister in Kannada

Anna Quotes in Kannada | ಅಣ್ಣನ ಕುರಿತು ಕೋಟ್ಸ್ಗಳು

 

ತನ್ನ ಖುಷಿಯನ್ನ ನನ್ನಲ್ಲಿ ಕಾಣುತ್ತಿರುವ ನನ್ನ ಅಣ್ಣ (My strength)

ಯಾರೇ ಬಂದ್ರು ನಿನ್ನ ಬಿಟ್ಟಕೊಡೋ ಮಾತೇ ಇಲ್ಲ ಅಣ್ಣಯ್ಯ 

 

ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು, ಸ್ನೇಹ ಪ್ರೀತಿಯಲ್ಲಿ ನಿನಗೆ ಸರಿಸಾಟಿಯಾರಿಲ್ಲ, ಮುಗ್ಧ ಮನಸ್ಸಿರುವ ನಿನ್ನಲ್ಲಿ ದ್ವೇಷಕ್ಕೆ ಜಾಗವಿಲ್ಲ. Love You ನನ್ನ ಪ್ರೀತಿಯ ಅಣ್ಣ

 

ನಾನು ಹುಟ್ಟಿದಗಿಂದ ಜೊತೆಯಾಗಿ ಆಡಿ ಬೆಳೆದಿರುವ ಇಂದಿಗೂ ಜಗಳವಾಡುತ್ತಾ , ಪ್ರೀತಿ ಮಾಡುತ್ತಾ , ಕಷ್ಟ ಸುಖ ಗಳನ್ನು ಹಂಚಿ ಕೊಳ್ಳುತ್ತಾ ಜೊತೆಯಾಗಿ ನಿಂತಿರುವ ನನ್ನ ಅಣ್ಣ…

 

ಕಾಮನಬಿಲ್ಲಿನ ಬಣ್ಣ…..

ನನ್ನ ಜೀವದ ಅಣ್ಣ….. 

ಪ್ರೀತಿಯಲ್ಲಿ ಶ್ರೀಮಂತ

ಅವನೇ ನನ್ನ ಹೃದಯವಂತ 

ನೋಡಿಕೊಳ್ಳುವನು ಮುತ್ತಿನಂತೆ 

ಕೊನೆಯವರೆಗೂ…. 

ಮರೆಯಲಾಗದಂತ 

ಮುದ್ದಿನ ಮಾಣಿಕ್ಯವಂತ……. ಅಣ್ಣ 

 

ನನ್ನ ನೆಚ್ಚಿನ ಅಣ್ಣ……

ತನ್ನ ಆಸೆಗಳನ್ನು ಬದಿಗೊತ್ತಿ ಜವಾಬ್ದಾರಿ ಎನ್ನುವ ಮೂಟೆಯನ್ನು ಹೆಗಲೇರಿಸಿಕೊಂಡಿದ್ದಾನೆ  ನನ್ನ ಅಣ್ಣನ ಎಲ್ಲಾ ಕನುಸುಗಳು ನನಸಾಗಲಿ ಎಂದು ದೇವರನ್ನು ಪ್ರಾರ್ಥಿಸಿಕೊಳ್ಳುತ್ತೇನೆ …..

I love you anna 

ಯಾರೇ ಬಿಟ್ಟು ಹೋದರೂ ನೀನು ನನ್ನ ಬಿಟ್ಟು ಹೋಗಬೇಡ ಅಣ್ಣ 

ನನ್ನ ಜೀವನದಲ್ಲಿ ಸಿಕ್ಕಿರುವ ಅಪರೂಪ ಮಾಣಿಕ್ಯ ಅಣ್ಣ ನೀನು ನನ್ನ ಬಿಟ್ಟು ಹೋಗಬೇಡ ಅಣ್ಣ 

 

ಅಣ್ಣ-ತಂಗಿ ಸಂಬಂಧಕ್ಕಿಲ್ಲ ಯಾವ ನಿರ್ಬಂಧ,

ಮನದಲ್ಲಿ ಮೂಡುವುದು ಆ ಅನುಬಂಧ,

ಅಣ್ಣ-ತಂಗಿಯಾಗಲೂ ಒಂದೆ ತಾಯಿಯ ಒಡಲೆ ಆಗಬೇಕಿಲ್ಲಾ,

ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲ,

ಜಾತಿ ಧರ್ಮವೆಂಬ ಬೇದ ಭಾವವಿಲ್ಲ,

ನನ್ನ ಪ್ರೀತಿಯ ಸಹೋದರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು, ನೂರಾರು ಕಾಲ ಸುಖವಾಗಿ ಬಾಳು ನಿ ಕಂಡಂತ ಕನಸುಗಳು ನನಸಾಗಲಿ.

 

ಹುಟ್ಟಿನಿಂದಲೇ ಬಂದ ಸಂಬಂಧವಿದು

ಪ್ರೀತಿ ವಿಶ್ವಾಸದಿಂದಲೇ ತುಂಬಿಹುದು

ಸಿಹಿ ಕಹಿ ಭಾವ ಬಂಧದಲಿ ಬೆಸೆದಿಹುದು

ಅಣ್ಣ ತಂಗಿ ಸಂಬಂಧ ಬೆಲೆ ಕಟ್ಟಲಾಗದದು

ನನ್ನ ಪ್ರೀತಿಯ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯಗಳು..!!

 

ಓ ಅಣ್ಣಯ್ಯ

ನಮ್ಮ ಇಬ್ಬರಲ್ಲಿ ಹರಿಯುತ್ತಿರುವುದು ಬೇರೆ ಬೇರೆ ರಕ್ತವಯ್ಯ.//

ಆದರೂ ನಾವಿಬ್ಬರೂ ಅಣ್ಣ ತಮ್ಮರಯ್ಯ.//

ನನ್ನ ಪ್ರತಿಯೊಂದು ಸೀಕ್ರೆಟ್ ನಿನಗೆ ಗೊತ್ತಯ್ಯ.//

ನಾನು ತಪ್ಪು ದಾರಿ ಹಿಡಿದರು ಒಳ್ಳೆ ಮಾರ್ಗ ನಿರ್ದೇಶಕ ನನಗೆ ನೀನಯ್ಯ.//, ಜೊತೇಲಿ ಹುಟ್ಟದೆ ಇದ್ದರು,,,,,

ಅಪ್ಪನ ಆಗೇ ಕಾಳಜಿ ಮಾಡೋ ಅಣ್ಣಂದಿರಿಗೆ,,,

ಅಮ್ಮ ಮತ್ತು ಸ್ನೇಹಿತರ ಆಗೇ ಪ್ರೀತಿ ತೋರಿಸೋ

ತಮ್ಮಂದಿರಿಗೂ,,,,,

ನನ್ನ ಎಲ್ಲಾ ಅಣ್ಣ ತಮ್ಮಂದಿರಿಗೆ

ರಕ್ಷಾ ಬಂದನಾ ಹಬ್ಬದ ಶುಭಾಶಯಗಳು 

ನಿಮ್ಮ ಪ್ರೀತಿ, ಕಾಳಜಿ ಯಾವಾಗ್ಲೂ ನನ್ನ ಮೇಲೆ ಹೀಗೆ ಇರಲಿ

 

ನನ್ನವನು

ನನ್ನ ಜೊತೆ ಇದ್ದು ಅಣ್ಣ ಎಂಬ ಅತಿ ದೊಡ್ಡ ಬಿರುದನ್ನು ಪಡೆದುಕೊಂಡವನು

ನಾನು ಹಾಕುವ ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಗೆ ಇರುವವನು

ಕಷ್ಟ ಅಂತ ಬಂದರೆ ಜೊತೆಗೆ ನಿಂತವನು 

ತಾಯಿಯ ಪ್ರೀತಿ ತೋರಿಸಿದವನು

ತಂದೆ ಧೈರ್ಯ ಹೇಳುತ್ತಿರುವವನು

ನನ್ನೊಟ್ಟಿಗೆ ಇರುವವನು ನನ್ನವನು

ನನ್ನ ಮುದ್ದಿನ ಅಣ್ಣನು 

ಇವತ್ತು ಅವನ ಜನ್ಮದಿನವನ್ನು ಅದಕ್ಕಾಗಿ ಕೋರುತ್ತಿರುವೆ ಒಂದು ಶುಭಾಶಯವನ್ನು

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ಲೋಕದ ಸುಖವೆಲ್ಲ ನಿನಗಾಗಿ ಕಾದಿರಲಿ ನೀ ಕಂಡ ಕನಸು ನನಸಾಗಲಿ ಎಂದು ಹಾರೈಸುವ 

 

ಕೋಟಿ ಜನ್ಮ ಹುಟ್ಟಿ ಬಂದ್ರು ನೀನೇ ನನ್ನ ಅಣ್ಣ ನಾಗಬೇಕೆಂದು ಆಸೆ ಈ ಜೀವಕ್ಕೆ

 

ಒಡಹುಟ್ಟಿದವರು ಮಾತ್ರ ಅಣ್ಣ ತಂಗಿ ಅಲ್ಲ… 

ಮನಸ್ಸಿನ ಭಾವನೆ ಇoದ ಕರೆಯುವ ಪ್ರತಿಯೊಬ್ಬರು ಅಣ್ಣ ತಂಗಿನೆ

ಅಣ್ಣ ಎಂಬ ಸ್ಥಾನ ಕೊಡಗು ಧೈರ್ಯ ಬೇಕು.. ಅದೇ ತಂಗಿ ಅನ್ನೋ ಸ್ಥಾನ ಪಡೆಯೋಕು, ಪುಣ್ಯ ಬೇಕು… ಯಾಕೆ ಅಂದ್ರೆ ಅಣ್ಣ ಅನ್ನೋ ಸ್ಥಾನ ನೇ ಒಂದು ಪ್ರಪಂಚ… ಅಣ್ಣ ಅನ್ನೋದು ಒಂದು ಪದ ಅಲ್ಲ.. ಅದು ಒಂದು ನಂಬಿಕೆ ಕಾಳಜಿ…! 

 

ನೀ ನನ್ನ ಮನಸ್ಸಿನ ಸುಂದರವಾದ ಕ್ಷಣಗಳು

ನಮ್ಮಿಬ್ಬರ ಬೆಸುಗೆ ಒಲವು ಮುಗಿಲಿಗೆ ಮುಟ್ಟಲಿ

ಅಣ್ಣ ತಂಗಿ

ನಾ ನಿನ್ನ ಬಿಡಲಾರೆ….

 

ನನ್ನ “ಪ್ರಾಣ ” ಅನ್ನೋ ಪದಕ್ಕೆ ಇನ್ನೊಂದ ಅರ್ಥನೇ ” ಅಣ್ಣ ” ..!!, ಪ್ರೀತಿಯ ಅಣ್ಣನಿಗೆ ಜನ್ಮದಿನದ ಶುಭಾಶಯಗಳು.

 

ನನ್ನ ಜೀವನದ ಅತಿ ಅಮೂಲ್ಯವಾದ ಹಾಗೂ ಅನುಕರಣೀಯ ವ್ಯಕ್ತಿ ಎಂದರೆ ಅದು ನನ್ನ ಅಣ್ಣ . ಇವತ್ತಿಗೆ ನಾನು ಇಷ್ಟಾದರೂ ಬೆಳೆದಿದ್ದೇನೆ ಎಂದರೆ ಅದಕ್ಕೆ ಅಪ್ಪ & ಅಮ್ಮನಷ್ಟೇ ನನ್ನ ಅಣ್ಣನ ಪಾತ್ರವೂ ಇದೆ. ಸದಾ ನನ್ನ ಎಲ್ಲಾ ಕೆಲಸಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿ ನನ್ನ ಪಾಲಿಗೆ ಅಣ್ಣನಿಗಿಂತ ಒಬ್ಬ ಗೆಳೆಯನಾಗಿ, ಮಾರ್ಗದರ್ಶಕನಾಗಿ, ಬದುಕಿಗೆ ಒಂದು ರೂಪ ಕೊಟ್ಟ ವ್ಯಕ್ತಿ ಎಂದರೆ ಅದು ನನ್ನ ಅಣ್ಣ. ಎಲ್ಲರಿಗೂ ಮಾರ್ಗದರ್ಶಕನಾಗಿ ಆದರ್ಶ ವ್ಯಕ್ತಿಯಾಗಿ ಸದಾ ಕುಟುಂಬದವರ ಒಳಿತನ್ನೇ ಬಯಸುವ ನಿಷ್ಕಲ್ಮಶ ಮನಸ್ಸಿನ , ನೇರನುಡಿಯ, ಯಾವುದೇ ಕೆಲಸ ಮಾಡುವ ಮುನ್ನ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡು ಅದರಂತೆ ನಡೆದುಕೊಳ್ಳುವ ವ್ಯಕ್ತಿಯಾದ ಅಣ್ಣನ ಜನ್ಮ ದಿನ ಇಂದು …. ದೇವರು ಸದಾ ಸುಖ ಸಮೃದ್ಧಿ, ಆರೋಗ್ಯವನ್ನು ನೀಡಿ ಕಾಪಾಡಲಿ ಎಂದು ಹಾರೈಸುತ್ತೇನೆ… ಕನಸುಗಳೆಲ್ಲಾ ನನಸಾಗಲಿ ….., ಅಣ್ಣನ ಪ್ರೀತಿ ಮುಂದೆ ಇನ್ನೇನು ಇಲ್ಲ ತಂಗಿಗೆ

 

ಜೊತೆಯಲ್ಲಿ ಹುಟ್ಟಿಲ್ಲ, ಬೆಳೆದಿಲ್ಲ

ರಕ್ತ ಸಂಬಂಧಿ ಅವನಲ್ಲ

ಆದರೂ ಅದೇನೋ ನಮ್ಮಿಬ್ಬರ ನಡುವೆ

ಬಿಟ್ಟಿರಲಾಗದಂತಹ ಒಂದು ಬಂಧ

ಬೆಲೆ ಕಟ್ಟಲಾಗದಂತಹ ಸಂಬಂಧ

ನನ್ನ ಸುಂದರ ದಿನಚರಿಗೆ

ಅವನೊಬ್ಬ ರಾಯಭಾರಿ

ನನ್ನ ಯಾವ ಜನ್ಮದ ಪುಣ್ಯದ ಫಲವೂ

ಅವನ ನಿಷ್ಕಲ್ಮಶ ಪ್ರೀತಿಯು

ಪ್ರತಿಬಿಂಬವಾಗಿ ದೊರಕಿತು…

 

ಕದ್ದು ಕದ್ದು ನೋಡುತಿರುವನು

ಆಗೊಮ್ಮೆ ಈಗೊಮ್ಮೆ

ನನ್ನವರಿಲ್ಲ ಎನ್ನುವೊಡೆ

ನಾ ನಿನ್ನವನಲ್ಲವೇ? ಎನ್ನುವ

ಮುಗ್ಧ ಮನಸ್ಸು

ಪ್ರತಿ ಕ್ಷಣವೂ ನನ್ನ ನಿಲುವ

ದಿಟ್ಟಿಸುವ ಅವನ ಕೆಂಪಾದ ಕಂಗಳು

ಮುಗುಳು ನಗೆ ತುಂಬಿದ ಆ ಮುಖ

ಕಣ್ಣಿಗೇ ಮುತ್ತನಿಡುವ ಮುಂಗುರುಳುಗಳು

ಹುಸಿ ಕೋಪ,ತುಸು ಪ್ರೀತಿಯ ಸಮ್ಮಿಲನ

ಕೃಷ್ಣನಂತೆ ಬಲು ತುಂಟ ಅವನು

ಮಾತು,ತಮಾಷೆಗಿಲ್ಲ ಬರಗಾಲ ಅವನಿದ್ದಲ್ಲಿ

ಮಗುವಿನಂತೆ ತರಲೆ ಮಾಡುವವ

ದೊಡ್ಡವರಂತೆ ತಿಳುವಳಿಕೆ ಉಳ್ಳವ…

 

ಕಣ್ಣುಗಳಿಗೆ ಕೊಟ್ಟಿರುವೆ ಅವನನ್ನೆ

ಹುಡುಕುವ ಮೊದಲ ಕೆಲಸ

ಅದೇನೋ ತಳಮಳ ಅವನ

ನೋಡದ ಗಳಿಗೆಯಲ್ಲಿ

ಮನದಲ್ಲೊಂದು ಮೌನದ ಕತ್ತಲೆಯ

ನರ್ತನ ಅವನಿಲ್ಲದ ಕ್ಷಣದಲ್ಲಿ

ಅದೆಷ್ಟು ಜನಜಂಗುಳಿ ಇದ್ದರೂ

ನನ್ನೀ ಕಂಗಳು ಹುಡುಕುವುದು ಅವನನ್ನೆ

ಅದೇನೋ ಏಕಾಂಗಿತನ

ಅವನಿಲ್ಲದ ದಿನದಲ್ಲಿ…

 

ಅವನೊಂದಿಗೆ ಕಳೆವ ಪ್ರತಿ ಕ್ಷಣ ಕ್ಷಣವೂ

ಮಗುವಂತೆ ನನ್ನನ್ನೇ ನಾ ಮರೆತಂತ ಭಾವ

ಅವನಿರುವ ಪ್ರತಿ ನಿಮಿಷವೂ

ಬದುಕಿನ ಅಮೃತ ಘಳಿಗೆ

ಅವನ ಸನಿಹ ನೋವ ಮರೆಸುವ

ಸಿಹಿ ಹೋಳಿಗೆ…

 

ಅದೊಂತರ ಹುಸಿ ಕೋಪ ಅವನ ಮೇಲೆ

ಆ ಕೋಪಕ್ಕೆ ಅತಿ ಪ್ರೀತಿಯೇ

ಕಾರಣ ಎಂದೆನಿಸಿಕೊಂಡಿರುವೆ

ಅವನೊಂದಿಗೆ ಜಗಳವಾಡದೆ ದಿನ ಕಳೆದರೆ

ಅದನೋ ಕಳೆದು ಕೊಂಡಂತ ಅನುಭವ…

 

ಈಗ ಅವನ ಸಮದೂಗಿಸಲು

ವಸ್ತುವೇ ಇಲ್ಲದ ಸ್ಥಿತಿ

ಅದೇನೋ ಅವನ ಮೇಲೆ ಸಂಪೂರ್ಣ

ಅಧಿಕಾರವಿದೆ ಎಂದೆನ್ನುವ ದರ್ಪ

ಅಸೂಯೆಯೋ, ಅತಿ ಪ್ರೀತಿಯೋ

ಅತಿ ವ್ಯಾಮೋಹವೊ ನಾನರಿಯೆ

ಅವನು ನನ್ನವನೇ ಎಂದೆನ್ನುತ್ತಿದೆ ಮನಸ್ಸು…

 

ನಾ ಕೊಡುವ ಪ್ರತಿ ನೋವ ಮರೆಯಲ್ಲೂ

ಬೆಟ್ಟದಷ್ಟಡಗಿದೆ ಅವನೊಲವಿನ ಪ್ರೀತಿ

ಪ್ರತಿ ಕ್ಷಣವೂ ಅವನೊಂದಿಗೆ ಕಳೆಯ

ಬೇಕೆಂಬುದು ಈ ಮುದ್ದು ತಂಗಿಯ ಬಯಕೆ.

 

ಅದೇಕೊ ಕಣ್ತುಂಬಿ ಬಂತು

ಅವನ ಅನುಬಂಧವ ಪದಗಳಲಿ

ಕಟ್ಟಲು ಹೊರಟಾಗ….

Anna Thangi Quotes in Kannada Images

ಇದನ್ನೂ ಓದಿ: 

  1. 100+ Happy Raksha Bandhan Wishes in Kannada
  2. 150+ Raksha Bandhan Quotes in Kannada (ರಕ್ಷಾ ಬಂಧನದ ಶುಭಾಶಯಗಳು)

ಅಣ್ಣ-ತಂಗಿಯ ಸಂಬಂಧವನ್ನು ಬಿಂಬಿಸುವ ಈ ಸುಂದರವಾದ ಕನ್ನಡ ಕ್ವೋಟ್ಸ್‌ಗಳ ಸಂಗ್ರಹವು (anna thangi quotes in kannada collection) ನಿಮ್ಮ ಹೃದಯವನ್ನು ಸ್ಪರ್ಶಿಸಿರುವುದಾಗಿ ನಾವು ನಂಬುತ್ತೇವೆ. ಈ ಬರಹಗಳು ಸಂಬಂಧದ ಪ್ರೀತಿ, ನಂಬಿಕೆ ಮತ್ತು ಬಾಂಧವ್ಯದ ಆಳವನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸುತ್ತವೆ.

ನಮ್ಮ ಸಂಗ್ರಹವು ನಿಮ್ಮನ್ನು ಪ್ರೇರೇಪಿಸಿ, ಅಣ್ಣ-ತಂಗಿಯ ಸಂಬಂಧದ ಮೌಲ್ಯವನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶಯವಿದೆ. ಈ ಕ್ವೋಟ್ಸ್‌ಗಳು ನಿಮ್ಮ ಜೀವನದ ವಿಶೇಷ ಸಂಬಂಧಗಳನ್ನು Celebrate ಮಾಡಲು ಪ್ರೇರಣೆಯಾಗಲಿ.

ನೀವು ಈ ಸಂಗ್ರಹವನ್ನು ಇಷ್ಟಪಟ್ಟಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಬ್ಲಾಗ್‌ಗೆ ಮತ್ತೆ ಭೇಟಿ ನೀಡಿ.