ರಕ್ಷಾ ಬಂಧನದ ದಿನ ಸಮೀಪಿಸುತ್ತಿದ್ದಂತೆ ನಿಮ್ಮ ಭಾವನೆಗಳನ್ನು ತೋರಿಸಲು ಉತ್ತಮ ಮಾರ್ಗ ಯಾವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ರಕ್ಷಾ ಬಂಧನದ ಉಲ್ಲೇಖಗಳ (raksha bandhan quotes in kannada) ಸಂಗ್ರಹವು ನಿಮಗಾಗಿ.
ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ ನಮ್ಮ ಕುಟುಂಬದೊಂದಿಗೆ ನಾವು ಹೊಂದಿರುವ ಬಲವಾದ ಸಂಪರ್ಕಗಳನ್ನು ನೆನಪಿಸುವ ಕ್ಷಣಗಳಿವೆ. ರಕ್ಷಾ ಬಂಧನವು ಪ್ರಮುಖ ಹಿಂದೂ ಹಬ್ಬವಾಗಿದ್ದು ಅದು ಸಹೋದರ ಸಹೋದರಿಯರ ನಡುವಿನ ವಿಶೇಷ ಬಾಂಧವ್ಯವನ್ನು ಆಚರಿಸುತ್ತದೆ. ಈ ಹಬ್ಬವು ಕೇವಲ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಒಡಹುಟ್ಟಿದವರ ನಡುವಿನ ಆಳವಾದ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ.
ಸಹೋದರಿಯರು ತಮ್ಮ ಸಹೋದರರ ಕೈಗೆ “ರಾಖಿ” ಎಂಬ ರಕ್ಷಣಾತ್ಮಕ ದಾರವನ್ನು ಕಟ್ಟಿದಾಗ, ಅದು ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ. ಈ ಹಬ್ಬವು ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಈ ಬಂಧವು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುವ ಸಂಪ್ರದಾಯಗಳು ಮತ್ತು ಕಥೆಗಳಿಂದ ತುಂಬಿದೆ. ಒಡಹುಟ್ಟಿದವರ ನಡುವಿನ ಪ್ರೀತಿ ಮತ್ತು ಒಗ್ಗಟ್ಟಿನ ಆಚರಣೆಯಾದ ರಕ್ಷಾ ಬಂಧನದ ಈ ದಿನದಂದು ಅದ್ಬುತವಾದ ಹೃದಯಸ್ಪರ್ಶಿ ರಕ್ಷಾ ಬಂಧನದ ಉಲ್ಲೇಖಗಳು (Raksha Bandhan Quotes in Kannada) ಇಲ್ಲಿವೆ ನೋಡಿ.
ರಕ್ಷಾ ಬಂಧನದ ಜನಪ್ರಿಯತೆಯು ಸಹೋದರ-ಸಹೋದರಿ ಸಂಬಂಧದ ವಿಶಿಷ್ಟ ಆಚರಣೆಯಿಂದ ಹುಟ್ಟಿಕೊಂಡಿದೆ. ಈ ಹಬ್ಬವು ಕೇವಲ ಆಚರಣೆಗಳನ್ನು ಮೀರಿದೆ; ಇದು ಒಡಹುಟ್ಟಿದವರ ನಡುವಿನ ಆಳವಾದ ಬೇರೂರಿರುವ ಸಂಪರ್ಕವನ್ನು ಒತ್ತಿಹೇಳುತ್ತದೆ, ಪ್ರೀತಿ, ಕಾಳಜಿ ಮತ್ತು ಪರಸ್ಪರ ಬೆಂಬಲವನ್ನು ಬೆಳೆಸುತ್ತದೆ. ರಾಖಿ ದಾರವನ್ನು ಕಟ್ಟುವ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಹೋದರ ಸಹೋದರಿಯರನ್ನು ಒಟ್ಟಿಗೆ ಬಂಧಿಸುವ ಭಾವನಾತ್ಮಕ ಸಂಬಂಧಗಳನ್ನು ಸಂಕೇತಿಸುತ್ತದೆ. ಈ ಭಾವನಾತ್ಮಕ ಹಬ್ಬವು ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಜನರೊಂದಿಗೆ ಅನುರಣಿಸುತ್ತದೆ.
ರಕ್ಷಾ ಬಂಧನದ ಮೂಲವು ಶತಮಾನಗಳ ಹಿಂದೆಯೇ, ರಕ್ಷಾ ಬಂಧನವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಇದನ್ನು ಭಾರತದಾದ್ಯಂತ ವಿವಿಧ ಧಾರ್ಮಿಕ ಹಿನ್ನೆಲೆಯ ಜನರು ಆಚರಿಸುತ್ತಾರೆ. ಈ ಆಚರಣೆಯು ಅದರ ಜನಪ್ರಿಯತೆಯನ್ನು ಏಕೀಕರಿಸುವ ಹಬ್ಬವಾಗಿ ಸೇರಿಸುತ್ತದೆ, ಅಲ್ಲಿ ವಿವಿಧ ಹಂತಗಳ ಜನರು ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಆಚರಿಸಲು ಒಟ್ಟಿಗೆ ಸೇರುತ್ತಾರೆ.
ಜೀವನದಲ್ಲಿ ಸಂಬಂಧಗಳ ವಿಷಯಕ್ಕೆ ಬಂದರೆ, ಕೆಲವರು ಒಡಹುಟ್ಟಿದವರ ನಡುವಿನ ಬಾಂಧವ್ಯದಷ್ಟು ಗಟ್ಟಿಯಾಗಿರುತ್ತಾರೆ ಮತ್ತು ಶಾಶ್ವತವಾಗಿರುತ್ತಾರೆ. ವಿಶೇಷ ಹಬ್ಬವಾದ ರಕ್ಷಾ ಬಂಧನವು ಪ್ರೀತಿ, ತಿಳುವಳಿಕೆ ಮತ್ತು ಹಂಚಿದ ಕ್ಷಣಗಳಿಂದ ತುಂಬಿದ ಈ ಅದ್ಭುತ ಸಂಪರ್ಕವನ್ನು ಆಚರಿಸುವುದು.
ನಮ್ಮ ಈ ರಕ್ಷಾ ಬಂಧನದ ಉಲ್ಲೇಖಗಳ ಸಂಗ್ರಹವು ನಿಮಗೆ ಭಾವನೆಗಳಿಂದ ತುಂಬಿದ ನಿಧಿಯಂತಿದೆ. ಈ raksha bandhan quotes for sister in kannada ಸಂಗ್ರಹವು ಸಹೋದರ ಸಹೋದರಿಯರ ನಡುವಿನ ಸಂಬಂಧದ ನಿಜವಾದ ಅರ್ಥವನ್ನು ಸೆರೆಹಿಡಿಯುತ್ತದೆ. ನೀವು ಶುಭಾಶಯ ಪತ್ರವನ್ನು ಬರೆಯುತ್ತಿರಲಿ ಅಥವಾ ಯಾರೊಬ್ಬರ ಮುಖದಲ್ಲಿ ನಗು ತರಲು ಪ್ರಯತ್ನಿಸುತ್ತಿರಲಿ, ಈ ರಕ್ಷಾ ಬಂಧನದ ಉಲ್ಲೇಖಗಳು (raksha bandhan quotes in kannada) ವಿವಿಧ ಸಂದರ್ಭವನ್ನು ಪರಿಪೂರ್ಣವಾಗಿಸುತ್ತದೆ.
Table of Contents
Happy Raksha Bandhan Quotes in Kannada
ನನ್ನೆಲ್ಲಾ ಸಹೋದರಿ, ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು. ರಕ್ಷೆಯು ನಮ್ಮೆಲ್ಲರ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿ.
ನನ್ನನ್ನು ಸಹೋದರ ಎಂದು ತಿಳಿದ ಶುದ್ಧ ಮನಸ್ಸಿನ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು.
ಭ್ರಾತೃತ್ವದ ಸಂಕೇತವಾಗಿರುವ ರಕ್ಷೆಯು ಎಲ್ಲರ ಜೀವನದಲ್ಲಿ ಯಶಸ್ಸು ತರಲಿ, ಸಮಾಜದಲ್ಲಿ ಸೌಹಾರ್ದತೆಯ ಭಾವನೆ ಜಾಗೃತವಾಗಲು ಶ್ರೀ ರಕ್ಷೆ ಹರಸಲಿ.
ಸರ್ವರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ರಕ್ಷಾ ಬಂಧನವು ಸೋದರ – ಸೋದರಿಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಮಧುರತೆ, ತ್ಯಾಗ, ಸಂರಕ್ಷಣೆ ಮತ್ತು ಸಮರ್ಪಣೆ ಸಮಾವೇಶಗೊಂಡಿದೆ.
ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ.
ಆತ್ಮೀಯರಿಗೆ ರಕ್ಷೆಯ ಪ್ರತೀಕ “ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು”.
ಸಮಸ್ತ ಜನತೆಗೆ ರಕ್ಷೆಯ ಪ್ರತೀಕವಾದ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
ರಕ್ಷೆ ಎಂಬುದು ಎಲ್ಲರಿಗೂ ಅಗತ್ಯವಿದೆ, ಒಂದು ದೇಶ ಸುರಕ್ಷಿತವಾಗಿ ಇದೆ ಎಂದಾಗ ಮಾತ್ರ ಎಲ್ಲವೂ ಸುರಕ್ಷಿತವಾಗಿ ನಡೆಯಲು ಸಾಧ್ಯ. ರಕ್ಷಾ ಬಂಧನದ ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸುವ ಸೈನಿಕರನ್ನು ಗೌರವದಿಂದ ನೆನೆಯುತ್ತಾ, ಮತ್ತೊಮ್ಮೆ ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
ಪವಿತ್ರವಾದ ರಕ್ಷಾ ಬಂಧನವು ಸ್ನೇಹ, ಸಹಕಾರ, ಸ್ವಾಭಿಮಾನದ ಸಂಕೇತ. ಸೋದರತೆ ಬೆಸೆಯುವ ಈ ಬಂಧವು ಕೇವಲ ಅಣ್ಣ- ತಂಗಿಯ ಸ್ನೇಹಕ್ಕೆ ಸೀಮಿತವಾಗದಿರಲಿ. ನಮ್ಮೆಲ್ಲರನ್ನೂ ಒಂದುಗೂಡಿಸಿ ಪ್ರೀತಿ ತುಂಬಿದ ನಂಬಿಕೆಯನ್ನು ಗಟ್ಟಿಗೊಳಿಸಲಿ.
ನನ್ನೆಲ್ಲ ಸಹೋದರಿ, ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು.
ನನ್ನ ಸಮಸ್ತ ಅಕ್ಕ-ತಂಗಿಯರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು
ರಕ್ಷಾ ಬಂಧನವು ಸೋದರ – ಸೋದರಿಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಇನ್ನು ಬೃಹದಕಾರವಾಗಿ ಮತ್ತು ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸುತ್ತೆನೆ.
ನನ್ನ ಪ್ರೀತಿಯ ಎಲ್ಲ ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು.
ಎಲ್ಲರಿಗೂ “ರಕ್ಷಾಬಂಧನ ಹಬ್ಬದ” ಶುಭಾಶಯಗಳು ಶುಭವಾಗಲಿ .
ರಕ್ಷೆ ಸ್ನೇಹದ ಸಂಕೇತ, ರಕ್ಷೆ ಸಹಕಾರದ ಸಂಕೇತ, ರಕ್ಷೆ ಸ್ವಾಭಿಮಾನದ ಸಂಕೇತ, ಭ್ರಾತೃತ್ವದ ಪ್ರತೀಕವಾದ ರಕ್ಷೆಯನ್ನು ಧರಿಸೋಣ ರಾಷ್ಟ್ರ ರಕ್ಷಣೆಗೆ ಮುಂದಾಗೋಣ.
ಸರ್ವರಿಗೂ ರಕ್ಷಾ ಬಂಧನದ ಶುಭಾಶಯಗಳು
ಸಮಸ್ತ ಜನತೆಗೆ ರಕ್ಷೆಯ ಪ್ರತೀಕವಾದ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
ರಕ್ಷೆ ಎಂಬುದು ಎಲ್ಲರಿಗೂ ಅಗತ್ಯವಿದೆ, ಒಂದು ದೇಶ ಸುರಕ್ಷಿತವಾಗಿ ಇದೆ ಎಂದಾಗ ಮಾತ್ರ ಎಲ್ಲವೂ ಸುರಕ್ಷಿತವಾಗಿ ನಡೆಯಲು ಸಾಧ್ಯ.
ರಕ್ಷಾ ಬಂಧನದ ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸುವ ಸೈನಿಕರನ್ನು ಗೌರವದಿಂದ ನೆನೆಯುತ್ತಾ, ಮತ್ತೊಮ್ಮೆ ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
Best Raksha Bandhan Quotes For Brother in Kannada
ಅಣ್ಣ ಎಂದರೆ ಅನುದಿನವು ಸ್ವರ್ಗ. ಅಕ್ಕರೆಯ ಅಣ್ಣನಿಗೆ ರಕ್ಷಾಬಂಧನದ ಶುಭಾಷಯಗಳು. ನಿನ್ನ ಶ್ರೀ ರಕ್ಷೆ ಈ ಮುದ್ದಿನ ತಂಗಿಯ ಮೇಲಿರಲಿ.
ನನ್ನ ನಗು ನೀನು. ನನ್ನ ಖುಷಿ ನೀನಿ. ನನ್ನೆಲ್ಲಾ ಆಯಸ್ಸು ನಿನ್ನದಾಗಲಿ. ನಿನ್ನ ಪ್ರತಿ ಹೆಜ್ಜೆಯೂ ನೂರು ಜನರಿಗೆ ಬೆಳಕಾಗಲಿ. ರಾಖಿ ಹಬ್ಬದ ಶುಭಾಷಯಗಳು.
ಒಡ ಹುಟ್ಟಿದವರು ಮಾತ್ರ ಅಣ್ಣ-ತಂಗಿ, ಅಕ್ಕ-ತಮ್ಮ ಅಲ್ಲ. ಶುದ್ಧ ಮನಸ್ಸಿನ ಭಾವನೆಯಿಂದ ಕರೆಯುವ ಪ್ರತಿಯೊಬ್ಬರು ಅಣ್ಣ-ತಂಗಿ, ಅಕ್ಕ-ತಮ್ಮ.ಪವಿತ್ರವಾದ ರಕ್ಷ ಬಂಧನದ ಶುಭಾಷಯಗಳು.
ನನ್ನ ಎಲ್ಲಾ ಮುದ್ದಾದ ಪ್ರೀತಿಯ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು… ನನ್ನ ಈ ರಾಖಿಯನ್ನು ಪ್ರೀತಿಯಿಂದ ಸ್ವೀಕರಿಸಿ ಆಶೀರ್ವಾದಿಸಿ..
ಅಣ್ಣ ,ಅಕ್ಕ ತಂಗಿಯರ ಈ ಬಂಧ
ಜನುಮ ಜನುಮದ ಅನುಬಂಧ…
ಜೀವಕ್ಕೆ ಕೊರಳು, ದೇಹಕ್ಕೆ ನೆರಳು
ನೀವಾಗಿರಿ ಎಂದು ಹರಸುತಿದೆ
ಈ ರಕ್ಷಾ ಬಂಧನ.
ಮನುಷ್ಯನನ್ನು ಜೀವನ ಮೌಲ್ಯದಲ್ಲಿ ಬಂಧಿಸುವ ಪ್ರೀತಿಯ ಸಂಕೇತವೇ ರಕ್ಷಾ ಬಂಧನ. ಶ್ರಾವಣ ನೂಲಹುಣ್ಣಿಮೆ ದಿನದಲ್ಲಿ ಆಚರಿಸುವ ರಕ್ಷಾ ಬಂಧನ ಹಬ್ಬದಲ್ಲಿ ಸಹೋದರಿಯರು ತನ್ನ ಸಹೋದರನಿಗೆ ರಾಖಿ ಕಟ್ಟುವ ಮೂಲಕ ಪ್ರೀತಿ, ಆತ್ಮೀಯತೆ ಮತ್ತು ವಾತ್ಸಲ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಡಗರ,ಸಂಭ್ರಮದ ಹಬ್ಬವೇ ಈ ರಕ್ಷಾ ಬಂಧನ.
ಸಹೋದರರಿಗೆ ಕಟ್ಟುವ ರಾಖಿ ಮೌಲ್ಯಕ್ಕಿಂತ ರಾಖಿಯಲ್ಲಿರುವ ಭಾವನೆಗಳು ಮುಖ್ಯವಾಗಿರುತ್ತದೆ. ರಕ್ಷಾ ಬಂಧನದ ಶುಭಾಶಯಗಳು.
ರಕ್ಷಾಬಂಧನಕ್ಕೆ ಸಜ್ಜಾಗಿರುವ ಹೆಣ್ಣು ಮಕ್ಕಳಲ್ಲಿ ಒಂದು ವಿನಂತಿ. ಉಡುಗೊರೆ ಏನು ಬೇಕೆಂದು ನಿಮ್ಮ ಸಹೋದರ ಕೇಳಿದಾಗ ಇಷ್ಟು ಕೇಳಿ ನನಗೆ ಕೊಡುವಷ್ಟೇ ಮರ್ಯಾದೆಯನ್ನು ಬೇರೆ ಸಹೋದರಿಯರಿಗೆ ಕೊಡಿ ಎಂದು.. ನನ್ನ ಪ್ರೀತಿಯ ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ ರಾಖಿ ಹಬ್ಬದ ಹಾರ್ದಿಕ ಶುಭಾಶಯಗಳು.
ನನ್ನ ಪ್ರೀತಿಯ ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ ರಾಖಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮಗೆ ಸುಖ, ಶಾಂತಿ, ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಮತ್ತು ನಿಮ್ಮ ಜೀವನದಲ್ಲಿ ಎಲ್ಲವೂ ಒಳಿತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ರಾಖಿ ಹಬ್ಬದ ಶುಭಾಶಯಗಳು.
ಸಾಮರಸ್ಯ, ಸಹೋದರತ್ವದ ಪ್ರತೀಕ ರಕ್ಷಾ ಬಂಧನ. ಇದು ಸಹೋದರ-ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ. ಈ ದಿನ ಎಲ್ಲ ಭೇದ-ಭಾವಗಳನ್ನು ಮರೆತು ಸೋದರತೆಯಿಂದ ಬಾಳೋಣ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ಆತ್ಮೀಯ ಸಹೋದರ ಸಹೋದರಿಯರೆ, ತಮ್ಮೆಲ್ಲರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.
ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ, ವಸುದೈವ ಕುಟುಂಬಕಂ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ. ಶ್ರೀದೇವರು ಮತ್ತು ಶ್ರೀ ಗುರುವಿನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ.
ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ರಕ್ಷಾ ಬಂಧನದ ಶುಭಾಶಯಗಳು
ರಕ್ಷಾಬಂಧನ ಇದು ಕೆವಲ ಒಂದು ಹಬ್ಬ ಅಲ್ಲಾ ಇದು ಒಂದು ಪ್ರತಿಜ್ನೆ ಮಾಡುವುದು. ಅಕ್ಕ ಜೀವನ ಪೂರ್ತಿಯಾಗಿ ನನ್ನ ರಕ್ಷಣೆ ಮಾಡು ತಮ್ಮ ಅಂಥಾ ರಾಖಿ ಕಟ್ಟುತ್ತಾರೆ. ಹಾಗಂತ ಬೆರೆಯವರ ಅಕ್ಕ ತಂಗಿಯರನ್ನು ಕೆಟ್ಟದಾಗೆ ನೊಡದೆ ಅವರನ್ನು ನಿಮ್ಮ ಸ್ವಂತ ಅಕ್ಕ ತಂಗಿಯರು ಹಾಗೆ ನೋಡಿ. ಹುಡುಗಿಯರ ಸಿಕ್ಕಿ ಸಿಕ್ಕಿದವಗೆ ರಾಖಿ ಕಟ್ಟಿ ಈ ಪವಿತ್ರ ಹಬ್ಬಕ್ಕೆ ಅವಮಾನ ಮಾಡಬೇಡಿ. ಎಲ್ಲಾ ಅಕ್ಕ ತಂಗಿಯರಿಗೆ ರಕ್ಷಾ ಬಂಧನದ ಶುಭಾಶಯಗಳು
ಪವಿತ್ರವಾದ ರಕ್ಷಾ ಬಂಧನವು ಸ್ನೇಹ, ಸಹಕಾರ, ಸ್ವಾಭಿಮಾನದ ಸಂಕೇತ. ಸೋದರತೆ ಬೆಸೆಯುವ ಈ ಬಂಧವು ಕೇವಲ ಅಣ್ಣ- ತಂಗಿಯ ಸ್ನೇಹಕ್ಕೆ ಸೀಮಿತವಾಗದಿರಲಿ. ನಮ್ಮೆಲ್ಲರನ್ನೂ ಒಂದುಗೂಡಿಸಿ ಪ್ರೀತಿ ತುಂಬಿದ ನಂಬಿಕೆಯನ್ನು ಗಟ್ಟಿಗೊಳಿಸಲಿ. ನನ್ನೆಲ್ಲ ಸಹೋದರಿ, ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು.
ಸಮಸ್ತ ಹಿಂದೂ ಬಾಂಧವರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಇಂದಿನ ಶುಭದಿನದಂದು ನಮ್ಮ ಸಹೋದರಿಯರು, ಮಾತೆಯರು, ಭಾರತ ಮಾತೆಯ ರಕ್ಷಣೆಯ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡೋಣ.
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ, ಭ್ರಾತೃತ್ವದ ಸಂಭ್ರಮಾಚರಣೆಯಾಗಿರುವ ರಕ್ಷಾ ಬಂಧನ ಎಲ್ಲರ ಸುಖ ಸಂತೋಷಗಳನ್ನು ನೂರ್ಮಡಿಗೊಳಿಸಲಿ
ರಾಷ್ಟ್ರˌ ಧರ್ಮ ಸಂರಕ್ಷಣೆಯ ಸಂಕಲ್ಪದೊಂದಿಗೆ ರಕ್ಷೆ ಧರಿಸೋಣ. ಸರ್ವರಿಗೂ ರಕ್ಷಾ ಬಂಧನದ ಶುಭಾಶಯಗಳು
ಅಣ್ಣ-ತಂಗಿ, ಅಕ್ಕ-ತಮ್ಮ ಜಗತ್ತಿನ ಶ್ರೇಷ್ಠ ಸಂಬಂಧಗಳು, ಇಂತಹ ಸಂಬಂಧಗಳನ್ನು ಬೆಸೆಯುವ ಸುದಿನವೇ ರಕ್ಷಾ ಬಂಧನ. ಎಲ್ಲರಿಗೂ “ರಕ್ಷಾ ಬಂಧನದ” ಶುಭಾಶಯಗಳು.
ರಕ್ಷೆಯನ್ನು ಧರಿಸಿ, ಸ್ನೇಹ-ಸಹಕಾರ-ಸ್ವಾಭಿಮಾನದಿಂದ ಬಾಳೋಣ. ರಾಷ್ಟ್ರ ರಕ್ಷಣೆಗೆ ಮುಂದಾಗೋಣ. ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ವಸುದೈವ ಕುಟುಂಬಕಂ ತತ್ತ್ವದಂತೆ ಎಲ್ಲ ಬೇಧಗಳನ್ನು ಮರೆತು ಸೋದರರಂತೆ ಬಾಳೋಣ. ಸಮಸ್ತ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು.
ಪರಸ್ಪರ ಸಹೋದರತ್ವವೇ ಈ ದೇಶವನ್ನು ಇಲ್ಲಿಯವರೆಗೂ ಮುನ್ನೆಡೆಸುತ್ತಾ ಬಂದಿದೆ.ಮುಂದೆಯೂ ನಾವು ಸಾಮರಸ್ಯ ಪ್ರೀತಿಯಲಿ ಸೌಹಾರ್ದ ರೀತಿಯಲಿ ಸಹೋದರರಾಗಿ ಹೆಜ್ಜೆಯಿಡೋಣ.ಎಲ್ಲರಿಗೂ ಭಾತೃತ್ವದ ಹೆಮ್ಮೆಯ ದ್ಯೋತಕ ರಕ್ಷಾ ಬಂಧನದ ಶುಭಾಶಯಗಳು.
“ಕನಸುಗಳು ನೂರು ಇರಲಿ, ಸಂರಕ್ಷಣೆಯ ಹೊಣೆ ನನಗಿರಲಿ”. ಎಂಬ ಸಂದೇಶ ಸಾರುವ ರಕ್ಷಾ ಬಂಧನದ ಶುಭಾಶಯಗಳು…… ನನ್ನೆಲ್ಲ ಪ್ರೀತಿಯ ಸಹೋದರಿಯರಿಗೂ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.
ಅಣ್ಣ-ತಂಗಿಯರ ಬಾಂಧವ್ಯದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಕ್ಷಾ ಬಂಧನದ ಶುಭಾಶಯಗಳು.
ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಹಾಗು ಗೌರವದ ವಿಶೇಷ ಮತ್ತು ಆಳವಾದ ಬಾಂಧವ್ಯದ ಸಂಭ್ರಮಾಚರಣೆ.
ರಕ್ಷಾಬಂಧನದಿ ಸಹೋದರಿ ಸಹೋದರನ ಹಣೆಗಿಟ್ಟ ತಿಲಕ ಸ್ತ್ರೀ ಕುಲದ ರಕ್ಷಣೆಯ ಹೊಣೆ ಹೊತ್ತ ಪ್ರತೀಕ, ಭಾತೃತ್ವದ ಸುಮುಧರ ಬಾಂಧವ್ಯದ ದ್ಯೂತಕ. ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಹೊಣೆಗಾರಿಕೆ ನಿಭಾಯಿಸುವ ಸ್ತ್ರೀ ನಾಮದ ಶಕ್ತಿ ಮಾತೆ, ಮನುಕುಲದ ರಕ್ಷಣೆಗಾಗಿ ಧರೆಗಿಳಿದ ಕಲ್ಪವೃಕ್ಷದಾತೆ. ರಕ್ತ ಸಂಬಂಧವ ಮೀರಿ ಪ್ರೀತಿ ಸ್ನೇಹದ ಶೆಲೆಯಾಗಿ ಮಮತೆಯ ಮಡಿಲಾಗಿ ಕರುಣೆಯ ಕಡಲಾಗಿ ತ್ಯಾಗದ ಪ್ರತೀಕವಾಗಿ ಹುಟ್ಟಿದ ಮನೆ ಕೊಟ್ಟ ಮನೆಯ ಕೀರ್ತಿ ಬೆಳಗುವ ಉದಾರ ಮಾತೆ, ನಿನಗೆ ಕೋಟಿ ಕೋಟಿ ನಮನಗಳು. ಎಲ್ಲಾ ಮಾತೃ ಹೃದಯ ಸಹೋದರರೆಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು.
ಅಣ್ಣ ತಂಗಿಯರ ಬಾಂಧವ್ಯದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿಯರು ಸಹೋದರರಿಗೆ ಪೂಜೆ ಮಾಡಿ ಕೈಗೆ ಕೇಸರಿ ದಾರ ಕಟ್ಟುತ್ತಾರೆ. ಅದು ಬರೀ ದಾರವಲ್ಲ, ಅದು ರಕ್ಷೆಯ ಪ್ರತೀಕ…
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು…
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ.
ಸಮಸ್ತ ಭಾರತಿಯ ಅಕ್ಕ ತಂಗಿಯರಿಗೆ ರಕ್ಷಾಬಂದನ ಹಬ್ಬದ ಶುಭಾಷಯಗಳು.
ನನ್ನ ಹೃದಯ ಮುಷ್ಟಿಯಷ್ಟಿದ್ದರು, ಈ ನನ್ನ ತಂಗಿ ಮೇಲೆ ಪ್ರೀತಿ ಬೆಟ್ಟದಷ್ಟಿದೆ. ರಕ್ಷಾ ಬಂಧನದ ಶುಭಾಶಯಗಳು
ನನ್ನ ಪ್ರೀತಿಯ ಅಣ್ಣಂದಿರಗೆ ನಿಮ್ಮ ಪುಟ್ಟ ತಂಗಿಯ ಕಡೆಯಿಂದ ರಕ್ಷಾ ಬಂಧನದ ಶುಭಾಶಯಗಳು.
ನನ್ನ ಎಲ್ಲಾ ಅಕ್ಕ ತಂಗಿಯರಿಗೆ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು
ಸಹೋದರ-ಸಹೋದರಿಯರ ನಡುವಿನ ಪ್ರೀತಿ, ನಂಬಿಕೆ, ಪವಿತ್ರ ಸಂಬಂಧದ ಪ್ರತೀಕವಾಗಿ ಆಚರಿಸುವ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ಅಮೂಲ್ಯ ರಕ್ಷಾಬಂಧನ ಪವಿತ್ರ ದಿನದ ಈ ಸುದಿನದಲ್ಲಿ ನನ್ನ ಒಡಹುಟ್ಟದಿದ್ದರು, ಬಾಲಪಯಣದಲ್ಲಿ ಜೊತೆಯಾಗಿ ತಮ್ಮನ ಸ್ಥಾನ ಕೊಟ್ಟು ನನ್ನ ಪ್ರತಿಯೊಂದು ಹೆಜ್ಜೆಗಳಿಗೂ ಬೆಂಬಲವಾಗಿ ನಿಲ್ಲುವ ಪ್ರೀತಿಯ ಅಕ್ಕನಿಗೆ ರಕ್ಷಾಬಂಧನ ದಿನದ ಶುಭಾಶಯ.
ಸಾಮರಸ್ಯ, ಸಹೋದರತ್ವದ ಪ್ರತೀಕ ರಕ್ಷಾ ಬಂಧನ. ಇದು ಸಹೋದರ-ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ. ಈ ದಿನ ಎಲ್ಲ ಭೇದ-ಭಾವಗಳನ್ನು ಮರೆತು ಸೋದರತೆಯಿಂದ ಬಾಳೋಣ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ರಕ್ಷಾ ಬಂಧನ ಹಬ್ಬದ ದಿನದಂದು ಸಹೋದರಿಯರು ತಮ್ಮ ಸಹೋದರನ ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ,ಸಹೋದರನ ಆಶಿರ್ವಾದವನ್ನು ಬೇಡುತ್ತಾರೆ.ತಂಗಿಯ ರಕ್ಷಣೆ ಅಣ್ಣ ನಿಂದ ಅಣ್ಣನ ರಕ್ಷಣೆ ತಂಗಿ ಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಗಟ್ಟಿ ಗೊಳಿಸುವ ಹಬ್ಬ ಈ ರಕ್ಷಾಬಂಧನ ಹಬ್ಬ ಎಲ್ಲಾ ನನ್ನ ಅಕ್ಕ ತಂಗಿಯರಿಗೆ ರಕ್ಷಾ ಬಂಧನದ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡಿನ ಸಮಸ್ತರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
ಅಣ್ಣ ತಂಗಿಯರ ಬಾಂಧವ್ಯವನ್ನು ಹೆಚ್ಚಿಸುವ, ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ, ರಕ್ಷಾ ಬಂಧನದ ಶುಭ ಹಾರೈಕೆಗಳು.
ನಾಡಿನ ಸಮಸ್ತ ಜನತೆಗೆ “ರಕ್ಷಾ ಬಂಧನ”ದ ಶುಭಾಶಯಗಳು.
ಅಣ್ಣ-ತಂಗಿಯರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.ಅಣ್ಣ-ತಂಗಿ, ಅಕ್ಕ-ತಮ್ಮಂದಿರರ ನಡುವಿನ ಪವಿತ್ರವಾದ ಪ್ರೀತಿಗೆ, ಈ ದಿನ ಸಮರ್ಪಣೆಯಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಆಚರಣೆಯಲ್ಲಿದ್ದ, ಈ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.
ಈ ದಿನ, ಸಹೋದರಿ ತನ್ನ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಸಂಕೇತ. ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಪರಸ್ಪರ ಬಾಂಧವ್ಯವನ್ನು ಸಾರುವ ಹಾಗೂ ಪ್ರತಿಯೊಬ್ಬರ ಬಾಲ್ಯದ ನೆನಪುಗಳಿಗೆ ಸಾಕ್ಷಿಯಾಗಿರುವ ಈ ಪವಿತ್ರವಾದ ರಕ್ಷಾ ಬಂಧನ ಹಬ್ಬದಂದು ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ರಕ್ಷಾಬಂಧನ ಇದು ಕೇವಲ ಹಬ್ಬವಲ್ಲ ಇದೊಂದು ಸಹೋದರ ಸಹೋದರಿ ನಡುವಿನ ಬಾಂಧವ್ಯದ ಸುಂದರ ಬೆಸುಗೆ.
ಅಮೃತಸಂಜೀವಿನಿ ಯ ಸರ್ವ ಸಹೋದರ ಸಹೋದರಿಯರಿಗೂ ರಕ್ಷಾಬಂಧನದ ಶುಭಾಶಯಗಳು. ನಮ್ಮ ಸಹೋದರತೆ ಪ್ರೀತಿ, ಬಾಂಧವ್ಯ ಇದೇ ರೀತಿ ಇರಲಿ ಎಂದು ಗುರು ದತ್ತಾತ್ರೇಯರಲ್ಲಿ ಕೇಳಿಕೊಳ್ಳುತ್ತೇವೆ..
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ಆಚರಿಸಬೇಕಾದ ಸಂಸ್ಕಾರಯುತವಾದ ಆಚರಣೆಯೇ ರಕ್ಷಾ ಬಂಧನ. ಇದೊಂದು ಮಹತ್ವ ಪೂರ್ಣ ಆಚರಣೆ. ನಮ್ಮಲ್ಲಿ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ತಮ್ಮ ರಕ್ಷಣೆಯ ಸಲುವಾಗಿ ಸುಂದರವಾದ ದಾರ ಕಟ್ಟುವ ದಿನವೇ ರಕ್ಷಾಬಂಧನ ಎಂಬ ಭಾವನೆಯಿದೆ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು.
ರಕ್ಷಾಬಂಧನ ಉತ್ಸವದ ಈ ಪಾವನ ಪುಣ್ಯ ಪರ್ವಕಾಲದಲ್ಲಿ ಸಹೋದರಿಯರ ರಕ್ಷಣೆ, ರಾಷ್ಟ್ರ ರಕ್ಷಣೆ, ರಾಷ್ಟ್ರ ನಿರ್ಮಾಣ ಹಾಗೂ ಗೋ ರಕ್ಷಣೆಯ ಪ್ರತಿಜ್ಞೆ ಮಾಡೋಣ. ಭೇದ-ಭಾವ ತೊರೆದು ಬಲಾಢ್ಯ ರಾಷ್ಟ್ರ ಕಟ್ಟಲು ಭ್ರಾತೃತ್ವದ ಸೆಲೆಯಲ್ಲಿ ಒಂದಾಗೋಣ, ಭಾರತವನ್ನು ವಿಶ್ವಗುರುವಾಗಿಸೋಣ. ನನ್ನೆಲ್ಲಾ ಸಹೋದರ ಸಹೋದರಿಯರಿಗೆ “ರಕ್ಷಾ ಬಂಧನ” ಹಬ್ಬದ ಶುಭಾಶಯಗಳು.
ರಕ್ಷಾ ಬಂಧನ ಅಂದರೆ ರಕ್ಷೆ (ರಕ್ಷಣೆ) ಮತ್ತು ಬಂಧನದ (ಸಂಬಂಧ) ಮಹತ್ವ ಸಾರುವ ಹಬ್ಬ. ರಕ್ಷಾ ಬಂಧನ ಭ್ರಾತೃತ್ವದ, ಸಹೋದರತ್ವದ ಸಂಕೇತ. ಇದು ಸಹೋದರ-ಸಹೋದರಿಯರ ಅವಿನಾಭಾವ ಪ್ರೀತಿಯ ಸಂಕೇತ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು.
ಸಾಮಾಜಿಕ ಜಾಲತಾಣದ ನನ್ನೆಲ್ಲ ಪ್ರೀತಿಯ ಸೋದರ-ಸೋದರಿಯರಿಗೆ ಪ್ರೀತಿ ವಾತ್ಸಲ್ಯದ ಸಂಕೇತವಾದ ರಕ್ಷಾಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.ಇದರ ಜೊತೆಗೆ ರಾಷ್ಟ್ರ ರಕ್ಷಣೆಗೆ ಸಿದ್ದರಾಗೋಣ, ರಾಷ್ಟ್ರ ಕಾರ್ಯಕೆ ನಮ್ಮನು ನಾವು ಸಮರ್ಪಿಸೋಣ.
ಕನಸುಗಳು ನೂರಿರಲಿ ಸಂರಕ್ಷಣೆಯ ಹೊಣೆ ನನಗಿರಲಿ, ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬ ರಕ್ಷಾಬಂಧನ. ಅಣ್ಣ ತಂಗಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು..
ಶ್ರಾವಣ ಮಾಸದ ಹುಣ್ಣಿಮೆಯ ಶುಭದಿನ
ಆಚರಿಸುವ ಒಲವಿನ ಹಬ್ಬವೇ ರಕ್ಷಾಬಂಧನ
ಅಣ್ಣ ತಂಗಿಯರ ಮಮತೆಯ ಸಲುಗೆಯು
ಶ್ರೀ ರಕ್ಷೆಯಾಗಿ ಬೆಳಗಲು ಕವಚದ ನೆಲೆಯು…!
ಒಡಹುಟ್ಟಿನ ಪಾವಿತ್ರತೆಯ ನೆನಪಿಗೆ ರಕ್ಷೆಯಿದು
ಸಹೋದರತೆ ಎತ್ತಿ ಹಿಡಿಯುವ ಸಂಕೇತವಿದು
ಅನುಬಂಧದ ಸವಿಯನು ತೋರಿಪ ಈ ಬಂಧ
ಜಗದಗಲದಲೇ ಶ್ರೇಷ್ಠತೆ ಸಾರುವ ಸಂಬಂಧ…!
ಮನೆ ಮನ ಬೆಳಗಲು ಸಹೋದರಿ ವರವಾಗಿ
ಜೊತೆಯಲಿ ಬೆಳೆಯುತ ಜೀವನದಿ ಗೆಲುವಾಗಿ
ರಕ್ಷಣೆ ಮಾತಿಗೆ ಒತ್ತಾಗಿ ಬಲ ತುಂಬುತ ನಿಂತು
ರಕ್ಷಾಬಂಧನದ ಸಿಹಿಯ ಹಂಚುವ ಹೊತ್ತು…!
ಸಹಕಾರ, ಪ್ರೋತ್ಸಾಹ ತುಂಬುತ ಜೊತೆಯಲಿ
ವಾತ್ಸಲ್ಯದ ಸಿಹಿ ಭಾವವು ಎಂದೆಂದೂ ಬೆಳಗಲಿ
ರಕ್ತಸಂಬಂಧದ ಮಹಿಮೆಯದು ರಸಮಯ
ರಕ್ಷೆಯು ಇರಲಿ, ಎಂದಿಗೂ ಇಲ್ಲದೆ ಭಯ…!
ರಕ್ಷಾ ಬಂಧನ ಭ್ರಾತೃತ್ವದ, ಸಹೋದರತ್ವದ ಸಂಕೇತ. ಇದು ಸಹೋದರ-ಸಹೋದರಿಯರ ಅವಿನಾಭಾವ ಪ್ರೀತಿಯ ಸಂಕೇತ. ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು.
ಕಷ್ಟ -ಸುಖ ಹಂಚಿಕೊಳ್ಳುವ ಸಹೋದರಿಯರಿಗೆ, ಏನೇ ಬರಲಿ ಜೊತೆಯಾಗಿರುವೆ ಎಂದು ಧೈರ್ಯ ತುಂಬುವ ಸಹೋದರರಿಗೆ ಪವಿತ್ರ ರಕ್ಷಾ ಬಂಧನ ಹಬ್ಬದ ಶುಭಾಶಯಗಳು!
ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಹಾಗು ಗೌರವದ ವಿಶೇಷ ಮತ್ತು ಆಳವಾದ ಬಾಂಧವ್ಯದ ಸಂಭ್ರಮಾಚರಣೆ. ಈ ಪವಿತ್ರ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪ ಮಾಡೋಣ.
ಸರ್ವರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಈ ರಕ್ಷಾ ಬಂಧನ ಹಬ್ಬ ಎಲ್ಲರಿಗೂ ಸುಖ ಸಮೃದ್ಧಿ ನೀಡಲಿ. ಬಾಂಧವ್ಯಗಳು ವೃದ್ಧಿಯಾಗಿ ಬಲವಾಗಿ ಬೇರೂರಲಿ.
ರಕ್ಷಾ ಬಂಧನದ ಶುಭಾಶಯಗಳು! ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ.
ಅಪರಾಧದಲ್ಲಿ ನನ್ನ ಪಾಲುದಾರ, ಕುಚೇಷ್ಟೆಗಳಲ್ಲಿ ನನ್ನ ಸಹಚರ ಮತ್ತು ನನ್ನ ನಗುವಿನ ಮೂಲ – ರಕ್ಷಾ ಬಂಧನದ ಶುಭಾಶಯಗಳು ಬ್ರದರ್.
Funny Raksha Bandhan Quotes in Kannada
Bro/ಅಣ್ಣಾ ಅಂತ ಕರಿಯೋ/message ಮಾಡೋ ಎಲ್ಲಾ ಹುಡುಗಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.
ಇನ್ನೊಂದ್ಸಲ ಲೈನ್ ಹೊದಿಬಾರ್ದು ಅಂತ ರಾಖಿ ಕಟ್ಟಿದ ಎಲ್ಲಾ ಹುಡುಗಿಯರಿಗೂ ರಾಖಿ ಹಬ್ಬದ ಶುಭಾಷಯಗಳು. ಸಲಾಂ ರಾಖಿ ಭಾಯ್.
5 ರೂಪಾಯಿ ರಾಖಿ ಕಟ್ಟಿ 500 ರೂಪಾಯಿ ವಸೂಲಿ ಮಾಡೋ ಅಕ್ಕ-ತಂಗಿಯರೆಲ್ಲರಿಗೆ ರಾಖಿ ಹಬ್ಬದ ಶುಭಾಷಯಗಳು.
ವರ್ಷವೆಲ್ಲಾ ಚಿಕ್ಕ ಚಿಕ್ಕ ವಿಷ್ಯಕ್ಕೆ ಕಿತ್ತಾಡಿದ್ರೂ ರಾಖಿಹಬ್ಬಕ್ಕೆ ರಾಖಿ ಕಟ್ಟಿ ಚಾಕ್ಲೆಟು ದುಡ್ಡು ವಸೂಲಿ ಮಾಡ್ಕೊಳ್ಳೋ ಅಕ್ಕ/ತಂಗಿಗೆ ರಕ್ಷಾಬಂಧನದ ಶುಭಾಷಯಗಳು.
ಇದನ್ನೂ ಓದಿ:
Raksha Bandhan Images in Kannada
ಒಟ್ಟಾರೆಯಾಗಿ ಈ ರಕ್ಷಾ ಬಂಧನದ ಉಲ್ಲೇಖಗಳ ಸಂಗ್ರಹವು (collection of raksha bandhan quotes in kannada) ಈ ವಿಶೇಷ ಹಬ್ಬದ ಸಾರವನ್ನು ಸುಂದರವಾಗಿ ಸೆರೆಹಿಡಿಯುತ್ತವೆ. ಸರಳ ಪದಗಳ ಮೂಲಕ, ಇವುಗಳು ರಕ್ಷಾ ಬಂಧನವನ್ನು ತುಂಬಾ ಅರ್ಥಪೂರ್ಣವಾಗಿಸುವ ಪ್ರೀತಿ, ಬಂಧ ಮತ್ತು ಭಾವನೆಗಳನ್ನು ತಿಳಿಸುತ್ತವೆ. ನಮ್ಮ ಈ raksha bandhan wishes in kannada ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ರಕ್ಷಾ ಬಂಧನದ ಶುಭಾಶಯಗಳು!
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.