100+ Friendship Quotes in Kannada with Images

Best Friendship Quotes in Kannada Collection

ನಮಸ್ಕಾರ ಮತ್ತು ಸ್ನೇಹದ ಉಲ್ಲೇಖಗಳ (friendship quotes in kannada) ನಮ್ಮ ಸಂಗ್ರಹಕ್ಕೆ ಸುಸ್ವಾಗತ! ಸ್ನೇಹ ನಿಜವಾಗಿಯೂ ವಿಶೇಷವಾದದ್ದು. ಸ್ನೇಹಿತರು ನಮ್ಮ ದಿನಗಳನ್ನು ಉತ್ತಮಗೊಳಿಸುತ್ತಾರೆ ಮತ್ತು ನಮ್ಮ ಹೃದಯವನ್ನು ಸಂತೋಷಪಡಿಸುತ್ತಾರೆ. ಈ ಲೇಖನದಲ್ಲಿ ಸ್ನೇಹದ ಅದ್ಭುತತೆಯ ಬಗ್ಗೆ ಮಾತನಾಡುವ ಕೆಲವು ಸುಂದರವಾದ ಉಲ್ಲೇಖಗಳನ್ನು ನಾವು ಸಂಗ್ರಹಿಸಿದ್ದೇವೆ. ಈ ಉಲ್ಲೇಖಗಳು ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭ. 

ಸ್ನೇಹವು ಎಲ್ಲರ ಜೀವನದ ಒಂದು ಅತ್ಯುತ್ತಮ ಭಾಗ. ಏಕೆಂದರೆ ಅದು ಜೀವನಕ್ಕೆ ಹೊಳಪನ್ನು ನೀಡುತ್ತದೆ. ಉತ್ತಮ ಸ್ನೇಹಿತರು ಉತ್ತಮ ನಮ್ಮ ಕಷ್ಟದ ಸಮಯದಲ್ಲಿ ಬೆಂಬಲ, ತಿಳುವಳಿಕೆ ಮತ್ತು ಸಂತೋಷವನ್ನು ನೀಡುತ್ತಾರೆ. ಅವರು ನಮ್ಮೊಂದಿಗೆ ನಿಲ್ಲುತ್ತಾರೆ, ನಮ್ಮನ್ನು ಹುರಿದುಂಬಿಸುತ್ತಾರೆ ಮತ್ತು ನಾವು ಕೆಳಗೆ ಬಿದ್ದಾಗ ನಮ್ಮನ್ನು ಮೇಲಕ್ಕೆತ್ತುತ್ತಾರೆ. ಅವರು ನಮಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸುತ್ತಾರೆ ಕಷ್ಟದ ದಿನಗಳಲ್ಲಿ ನಮಗೆ ಸಾಂತ್ವನವನ್ನು ನೀಡುತ್ತಾರೆ. ಸ್ನೇಹವು ಸಂತೋಷ ಮತ್ತು ಯೋಗಕ್ಷೇಮದ ಪ್ರಮುಖ ಮೂಲವಾಗಿದೆ. ಅದು ನಮ್ಮ ಜೀವನವನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಶ್ರೀಮಂತಗೊಳಿಸುತ್ತದೆ ಮತ್ತು ಜೀವನದ ಪ್ರಯಾಣವನ್ನು ಅರ್ಥಪೂರ್ಣಗೊಳಿಸುತ್ತದೆ.

ಈ ಲೇಖನದಲ್ಲಿ ಗೆಳೆತನದ ಕುರಿತ ಅದ್ಭುತ ಉಲ್ಲೇಖಗಳನ್ನು (best friendship lines in kannada) ಸಂಗ್ರಹಿಸಿ ನಿಮಗೆ ನೀಡಿದ್ದೇವೆ. 

Best Friendship Quotes in Kannada

ಯಾವ ಜನ್ಮದ ಬಂಧು ಗೊತ್ತಿಲ್ಲ… ಈ ಜನುಮದಲ್ಲಿ ಗೆಳೆಯನಾಗಿ ಬಂದ ನನ್ನ ಆಪ್ತಮಿತ್ರ… “ಗೆಳೆತನ, ಕರ್ತವ್ಯ ನಿಷ್ಠೆ, ನಂಬಿಕೆ, ಮೇಧಾವಿತನ” ಇವುಗಳ ಒಟ್ಟು ಮಿಶ್ರಣವೇ ನನ್ನ ಗೆಳೆಯ. ಅವನ ಗೆಳೆತನದ ಸ್ವಾದ ಬಹಳ ಶ್ರೇಷ್ಠ ಸವಿದವರೇ ಬಲ್ಲರು ಅದರ ಮಹತ್ವ ಹಾಗೂ ರುಚಿಯನ್ನು. 

 

ದೋಸ್ತಿ ಅಂದ್ರೆ ಬರಿ ಟೀ, ಕಾಫಿ, ಎಣ್ಣೆ ಅಲ್ಲರಿ. ಕಷ್ಟ ಅಂತ ಬಂದಾಗ ನಮ್ಮ ಹಿಂದೆ ಬಂದು ನಿಂತು ಬೆನ್ನು ತಟ್ಟಿ ನಮ್ ನಿಲ್ತಾರಲ್ಲ, ಅದು ನಿಜವಾದ ಗೆಳೆತನ. ನನ್ನ ಜೀವನದಲ್ಲಿ ನಾ ನಂಬಿದ ಏಕೈಕ ವ್ಯಕ್ತಿ ಈ ನನ್ನ ಗೆಳೆಯ.

 

ಬಾಲ್ಯದ ಗೆಳೆತನ… ನೆನಪುಗಳ ಸಿರಿತನ… ನಿನ್ನೋಡನಿರುವ ಪ್ರತಿಕ್ಷಣ… ಅದೊಂದು ಹೊಸತನ… ಸದಾ ನಿನ್ನ ಶ್ರೇಯಾಭಿವೃದ್ದಿ ಬಯಸುವ ನಿನ್ನ ಗೆಳೆಯ….

 

ಗೆಳತನ ಅಂದರೆ ಸತ್ತಾಗ ಶ್ರದ್ಧಾಂಜಲಿ ಬ್ಯಾನರ್ ಹಾಕಿ ಮತ್ತೆ ಹುಟ್ಟಿ ಬಾ ಗೆಳಯ ಅಂತ ಹಾಕೋದಲ್ಲ. ಇದ್ದಾಗ ಕಷ್ಟ ಸುಖದಲ್ಲಿ ಪರಸ್ಪರ ಗೌರವ ತನು ಮನ ಧನದಿಂದ ಸಲಹೆ ಸಹಕಾರ ನೀಡುವುದೆ ನಿಜವಾದ ಗೆಳತನ ದೋಸ್ತಿ.

 

ಒಡಹುಟ್ಟಿದವರಲ್ಲ… ಜೀವ ಕೊಡುವವರು ನೀವು… ಸ್ನೇಹ…..ಗೆಳೆತನ…..ದೋಸ್ತಿ….

 

ಗೆಳೆತನ ಅನ್ನೋದು ಆಡೋ ಮಾತಲ್ಲಿ ನಡೆಯೋ ನಡತೇಲಿ, ಬಡಿಯೋ Heart ನಲ್ಲಿಇದ್ರೆ ಸಾಲ್ದು, ಹರಿಯೋ blood ನಲ್ಲೂ ಇರ್ಬೇಕು.. ದೋಸ್ತಿ ದುನಿಯ 

 

ಹುಡುಕುವ ಪ್ರೀತಿಗಿಂತ, ಜೊತೆಗಿರುವ ಸ್ನೇಹ ಚಂದ. ಕಾಣುವ ಕನಸಿಗಿಂತ, ಕಾಣದಿರುವ ಕಲ್ಪನೆ ಚಂದ.. ಬರೆಯುವ ಬರಹಕ್ಕಿಂತ, ಅಳಿಸಲಾಗದ ನೆನಪು ಚಂದ.. ಎಷ್ಟು ಸಮಯದಿಂದ ಪರಿಚಯವಿದ್ದೀರಿ ಎನ್ನುವುದು ಗೆಳೆತನವಲ್ಲ, ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದೇ ನಿಜವಾದ ಗೆಳೆತನ……..

 

ಗುಂಡಿಗೆಗೆ ಗುರಿ ಇಟ್ಟು ಗುನ್ನ ಹೊಡೆದ್ರೂನು….. ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು. ದೋಸ್ತಿ ದರ್ಬಾರ್

 

ಸಾವು ” ಎಲ್ಲಿ ಹೋದ್ರು ಹಿಂಬಾಲಿಸುತ್ತೆ.. ” ಪ್ರೀತಿ” ಎಲ್ಲಿ ?ಹೋದ್ರು ನೋಯಿಸುತ್ತೆ ಆದ್ರೆ ” ಗೆಳೆತನ” ಎಲ್ಲೆ ಹೋದ್ರು ನಮ್ಮನ್ನ ರಕ್ಷಿಸುತ್ತೆ.. ದೋಸ್ತಿ ನೇ ಆಸ್ತಿ .

 

“ಕೆಲವೊಮ್ಮೆ ಕಾಲೆಳೆದು ಕಷ್ಟದಲ್ಲಿ ಕೈ ಹಿಡಿದು ಬೆನ್ನು ತಟ್ಟಿ ಹುರಿದುಂಬಿಸಿ ಮೈ ತಬ್ಬಿ ಅಭಿನಂದಿಸಲು ತಿ* ಮುಚ್ಚಪ್ಪ ಸಾಕು ಅಂತ ಉರಿಸಿದ್ರೂ ನಿತ್ಯ ನೂತನ ಈ ಗೆಳೆತನ”

 

ಗೆಳೆತನ ಅನ್ನೋದು ಈ ಸಂಸಾರದ ಎಲ್ಲ ಸಂಬಂಧಗಳಿಗೂ ಮಿಗಿಲಾದದ್ದು….. ಚಡ್ಡಿ ಬಿದ್ದರೂ ಚಡ್ಡಿ ದೋಸ್ತ ಬಿಳಬಾರದು ಅನ್ನೋ ಅಷ್ಟು ಮೊಂಡು ವಾದದ್ದು…. ನನ್ನ ಚಡ್ಡಿ ಹಾಕೋಂಡು ಗಪ್ಪ ಚಿಪ್ಪ ಆಫಿಸಿಗೆ ಹೋದ ಚಡ್ಡಿ ದೋಸ್ತ ರೂಮಮೇಟಗಳಿಗೆ ಸಮರ್ಪಿತವಾದದ್ದು.

 

ಅಪರಿಚಿತರ ಗೆಳೆತನ ಕಷ್ಟವೇನಲ್ಲ. ಆದರೆ ಇರುವ ಗೆಳೆಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು.

 

ದೋಸ್ತಿ ಅಂದ್ರೆ ನಮ್ಮ ಹಾಗೆ ಇರ್ಬೇಕು ಜೀವಕ್ಕೆ ಜೀವ ಸ್ನೇಹಕ್ಕೆ ಸ್ನೇಹ ಏನೇ ……. ಆದ್ರೂ ಏನೇ ಬಂದರು ನಮ್ಮಿಬ್ಬರ.  ಗೆಳೆತನ ಯಾವತ್ತೂ ಕಡಿಮೆಯಾಗಲ್ಲ That is ದೋಸ್ತಿ ದರ್ಬಾರ್. ಆಟ ಶುರು.

 

ಮದುವೆ ಯಾಗೋಕೆ ಬೇಕು ಮನೆತನ.ಆದರೆ ಕೂಡಿ ಜೀವಿಸಲು ಬೇಕು ಒಳ್ಳೆ ಗೆಳತನ.

 

ನೂರು ಕಾಲ ಇರಲಿ ಗೆಳೆತನ ಬರದಿರಲಿ ನಮ್ಮ ದೋಸ್ತಿ ಮೇಲೆ ಹಗೆತನ

 

ನಮ್ಮ ಗೆಳೆತನ ನೋಡಿ ಉರ್ಕೊಳ್ಳೊರೆ ಜಾಸ್ತಿ ಬದುಕಿದರೆ “ಹುಲಿ” ತರ ಬದುಕೊಣ ಏಕೆಂದರೆ ಹುಲಿ “ಹಸಿವು” ಆಗಿದೆ ಎಂದು ಹುಲ್ಲು ತಿನ್ನಲ್ಲ, ನಾವು ಕೂಡ ಯಾರು ಏನೊ ಹೇಳಿದರೂ ಎಂದು “ದೋಸ್ತಿ”ನಾ ಬಿಡೊದಿಲ್ಲ.

 

ಗೆಳೆತನ ಅನ್ನೊದು ಕೈಗೂ ಕಣ್ಣಿಗೂ ಇರೋ ಸಂಬಂಧದ ತರ ಇರಬೇಕು. ಕೈಗೆ ಪೆಟ್ ಆದರೆ ಕಣ್ಣು ಅಳುತ್ತೆ. ಕಣ್ಣು ಅಳುತ್ತಾ ಇದ್ದರೆ ಕೈ ಕಣ್ಣೀರು ಓರಿಸುತ್ತೇ. ಇದೇ ನಿಜವಾದ ದೋಸ್ತಿ.

 

ಮನಸ್ಸಿದರೆ ಬರ್ತಿನಿ ಅನ್ನೋದು ಪ್ರೀತಿ, ದುಡ್ಡಿದರೆ ಬರ್ತಿನಿ ಅನ್ನೋದು ಸಂಬಂಧ, ಏನೂ ಬೇಡ ನಾ ಇದಿನಿ ಬಾ ಅನ್ನೋದು ಗೆಳೆತನ.

 

ಜೀವನದಲ್ಲಿ ಇದ್ರೆ ಇಂತಾ ಒಬ್ಬ ಗೆಳೆಯ ಇರಬೇಕು ಅನೋ ಉದಾಹರಣೆ ಗೆಳೆಯ ನೀನು. ನಿನ್ನ ಅಂತಾ ಗೆಳೆಯ ಪಡೆದ ನಾನೆ ಧನ್ಯ. ಈ ನಮ್ಮ ಚಡ್ಡಿ ದೋಸ್ತಿ ಗೆಳೆತನ ಹೀಗೆ ಹಸಿರಾಗಲಿ. ಜೀವ ಇರೋವರೆಗೂ ಈ ದೋಸ್ತಿಗೆ ಕೊನೆ ಅನೋದೇ ಇರದಿರಲಿ.

 

ನಮೆಲ್ಲರ ಉಸಿರಲಿ ಸ್ನೇಹ ಅಮರವಾಗಲಿ… ಸ್ನೇಹ ಗೆಳೆತನ ದೋಸ್ತಿ… ಎಲ್ಲಾ ಸಂಬಂಧಗಳಿಗೂ ಮೀರಿದ ಬಂಧ ಇದರ ಮೌಲ್ಯ ತಿಳಿದರೆ ಸಾಕು ನಿಮ್ಮ ಜೀವನನ್ನು ರೂಪಿಸುತೆ… ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ.

 

ರಕ್ತ ಹಂಚಿಕೊಂಡ ಹುಟ್ಟಿಲ್ಲಾಆಸ್ತಿನು ಹಂಚಿಕೊಂಡಿಲ್ಲ. ಆದರೆ ಕಷ್ಟ ಸುಖಾನಹಂಚಿಕ್ಳೋಕೆ ಇರೋ ಸಂಬಂದನೇ ದೋಸ್ತಿ..(ಗೆಳೆತನ).

 

ದುಷ್ಮನ್ ಜಾಸ್ತಿ ಉರ್ಕೊಳ್ಳೋದು ನಮ್ಮನ್ ನೋಡಿ ಅಲ್ಲಾ. ನಮ್ ಹಿಂದೇ ಇರೋ ದೋಸ್ತಿ ನೋಡಿ ಸಾವ್ನಲ್ಲು ಜೊತೆಯಾಗಿರೋದು ಗೆಳೆತನ ಯಾವ್ದೇ ಪ್ರೀತಿ ಅಲ್ಲಾ.

 

Feeling Friendship Quotes in Kannada

ಜಾತಿ ಸಲುವಾಗಿ ಪ್ರೀತಿ ಬಿಡೋಕ್ಕಾಗಲ್ಲ ದುಶ್ಮನ್ ಸಲುವಾಗಿ ದೋಸ್ತಿ ಬಿಡೋಕ್ಕಾಗಲ್ಲ ಯಾರೋ ನಮ್ ದೋಸ್ತಿ ಬಗ್ಗೆ ಮಾತನಾಡುತ್ತಾರೆಂದು ನಮ್ಮ ಗೆಳೆತನನಾ ಬಿಡೋಕ್ಕಾಗಲ್ಲ.

 

ಗೆಳೆತನ ಹೇಗಿರಬೇಕೆಂದರೆ ತನ್ನ ಗೆಳೆಯನ ಗೆಲುವು ತನ್ನ ಗೆಲುವು ಎಂಬಂತೆ ಸಂಭ್ರಮಿಸುವಂತಿರಬೇಕು

 

ಸ್ನೇಹಿತ ಬಾಯ್ಬಿಟ್ಟು ಹೇಳುವ ಮೊದಲೇ ಅವನ ಕಷ್ಟವನ್ನ ಅರಿತು ಅವನ ಜೊತೆಗೆ ನಿಲ್ಲುವುದು ನಿಜವಾದ ಗೆಳೆತನ ಅಂದ್ರೆ.

 

ಗಳಿಸಬೇಕು ಅಂತ ಇದ್ರೆ ಮಾನವೀಯತೆ, ಪ್ರಾಮಾಣಿಕತೆ, ಗೆಳೆತನ ಮತ್ತು ಪ್ರೀತಿಗಳಿಸಿ, ಹಣವನ್ನು ಭಿಕ್ಷುಕ ಸಹ ಗಳಿಸುತ್ತಾನೆ…

 

ಇಂದು ಗೆಳೆತನ-ಸಂಬಂಧ-ಭಾವನೆಗಳನ್ನು ಮಾನವ ಉಳಿಸಿಕೊಂಡಿದ್ದಕ್ಕಿಂತ ಪ್ರಾಣಿಗಳು ಉಳಿಸಿಕೊಂಡಿದ್ದೆ ಜಾಸ್ತಿ “ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು…” 

 

ಇನ್ನೊಮ್ಮೆ ಹೇಳ್ತೀನಿ ರಾಜಕೀಯ ಮಾಡೋರೆಲ್ಲಾ ಒಂದೇ ಜಾತಿ, ರಾಜಕಾರಣಿಗಳು ಅನ್ನೋ ಜಾತಿ. ಅವರವರು ಒಂದಾಗ್ತಾರೆ ,ಬೇರೆಯಾಗ್ತಾರೆ, ನಾವು ನೀವುಗಳು ಇವರ ಗಲಾಟೆಯಲ್ಲಿ ನಮ್ಮತನ,ನಮ್ ಗೆಳೆತನ ಇವುಗಳಿಗೆ ದಕ್ಕೆ ಬರದಂತೆ ಇರಿ.

 

ಬಯಸದೆ ಬಂದ ಗೆಳೆತನ ತುಂಬಿತು ನನ್ನ ಮನ ನೋಡಿ ನಿಮ್ಮ ಹೃದಯದ ಸಿರಿತನ

 

ಕಷ್ಟಗಳನ್ನು ಆಲಿಸುವ ಸುಖವನ್ನು ಸಂಭ್ರಮಿಸುವ ಸವಾಲಿಗೆ ಉತ್ತರಿಸುವ ಎದುರಾಳಿಯಿಂದ ರಕ್ಷಿಸುವ ಒಡ ಹುಟ್ಟಿದವರಿಗಿಂತ ಮೀರಿ ಪ್ರೀತಿಸುವ ಗುರಿಗೆ ಸಲಹೆ ಸೂಚನೆ ನೀಡುವ ನಿನ್ನಂಥ ಸಂಬಂದ ಇನ್ನೊಂದಿಲ್ಲ “ಗೆಳೆತನ”

 

ಒಂದು ಹುಡುಗಿ ಹೇಳಿದಳು. ಹೀಗೆ ನನ್ನ ನೋಡಬೇಡ ಕಣೋ. ನನ್ನ ಅಣ್ಣನಿಗೆ ಗೊತ್ತಾದ್ರೆ ನಿನ್ನ ಕಣ್ಣುಗಳೇ ಇರಲ್ಲ. ಹುಡುಗ ಹೇಳಿದ, ಮೆಲ್ಲಗೆ ಮಾತಾಡೇ. ನನ್ನ ಗೆಳೆಯರು ಕೇಳಿಸಿಕೊಂಡರೆ ನಿಮ್ಮ ಅಣ್ಣಾನೆ ಇರೊಲ್ಲ. ಆಸ್ತಿಗಿಂತ ದೋಸ್ತಿ ಮುಖ್ಯ. ಪ್ರೀತಿಗಿಂತ ಸ್ನೇಹ ಮುಖ್ಯ.

 

ಸಣ್ಣವರಿದ್ದಾಗ 22 ರೂಪಾಯಿ ಚೆಂಡು ತರಲು 11 ಮಂದಿ ಗೆಳೆಯರು ಒಟ್ಟಾಗಿ ಹಣ ಕೂಡಿಸುತ್ತಿದ್ದೆವು. ಈಗ ಚೆಂಡು ಒಬ್ಬನೇ ತರುತ್ತಾನೆ. ಆಡಲು 11 ಗೆಳೆಯರು ಮಾತ್ರ ಒಟ್ಟುಗೂಡಿಸಲು ಆಗುತ್ತಿಲ್ಲ. 

 

ಗೆಳೆತನ ಮಾಡುವುದಲ್ಲ. ಗೆಳೆತನ ನಿಭಾಯಿಸುವುದು ಕಲಿಯಿರಿ.

ಗೆಳೆತನ ಎಂದರೆ ಕೃಷ್ಣ ಹಾಗೂ ಸುಧಾಮನಂತಿರಬೇಕು. ಒಬ್ಬರೂ ಏನನ್ನೂ ಕೇಳಬೇಕೆಂದರೂ ಕೇಳಲಿಲ್ಲ. ಇನ್ನೊಬ್ಬರು ಕೇಳದಿದ್ದರೂ ಎಲ್ಲವನ್ನೂ ಕೊಟ್ಟು ಕೂಡಾ ಹೇಳಲಿಲ್ಲ.

 

ನಮ್ಮಲ್ಲಿ ಬದುಕಲ್ಲಿ ಗೆಳೆತನವಿದ್ದರೆ ಕರ್ಣ ದುರ್ಯೋಧನರ ಹಾಗೆ ಇರಬೇಕು. ವಿಕಟ ಪರಿಸ್ಥಿತಿಯಲ್ಲೂ ಜೊತೆಗೆ ನಿಲ್ಲುವಂತಾ ಗೆಳೆಯನಿರಬೇಕು. 

 

ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಸಿಕ್ಕ ಸ್ನೇಹಿತರನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಯಾಕಂದ್ರೆ ಅವರು ಯಾರೂ ಕೂಡ ಯಾರಲ್ಲಿ ಏನಿದೆ ಅಂತಾ ಅಂತಸ್ತು ನೋಡಿ ಗೆಳೆತನ ಮಾಡಿದವರಲ್ಲ.

 

ಬಡತನ ಸಿರಿತನಗಳ ನಡುವೆ ಮಾಸಿ ಹೋಗದ ಸಂಬಂಧವೆ ಗೆಳೆತನ.

 

ಅಂದು ಹೆಸರು ಕೇಳಿ ಪರಿಚಯ ಮಾಡಿಕೊಂಡಿದ್ದೆವು. ಇಂದು ಜೀವಕ್ಕೆ ಜೀವ ಕೊಡುವಷ್ಟು ಸ್ನೇಹವನ್ನು ಬೆಳೆಸಿಕೊಂಡಿದ್ದೇವೆ. “ಈ ಬದುಕಿನಲ್ಲಿ ನಿನ್ನ ಜೊತೆಗಿನ ಸ್ನೇಹವೇ ವಿಶೇಷ”

 

ಕೈ ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು.

 

ಒಂದಿನಾನೂ ಸಂಸ್ಕೃತ ಇಲ್ಲದೆ ಮಾತೇ ಆಡದವರು. ಕಲಿಸಬಾರದ ಕೆಟ್ಟ ಚಟವನ್ನೆಲ್ಲಾ ಕಲಿಸಿದವರು. ನಮಗ್ ಕಷ್ಟ ಅಂತಾ ಬಂದರೆ ಮಾತ್ರ ಕಲ್ಲು ಬಂಡೆಯಂಗೆ ನಿಲ್ಲೋರು. ಸ್ವಾರ್ತಾನೆ ಇಲ್ಲದಿರೂ ದಬ್ಬಾ ನನ್ನ್ ಮಕ್ಕಳು. ಈ ನನ್ನ್ ದೋಸ್ತರು.

 

ಎಲ್ಲೋ ಇದ್ದ ನಾನು, ಎಲ್ಲೋ ಇದ್ದ ನೀನು, ಸೇರಿದೆವು ಜೊತೆಯಾಗಿ, ಗೆಳೆತನದ ಈ ಹೆಸರಿನಲ್ಲಿ.

 

ಹಣ ಕೊಟ್ಟು ಹಾಳು ಮಾಡಿಕೊಂಡೆ ಚೆನ್ನಾಗಿದ್ದ ನಮ್ಮ “ಗೆಳೆತನ”

 

‘ಜೀವ’ ಎಂಬ 2 ಅಕ್ಷರ ಪಡೆದು, ‘ವಿದ್ಯೆ’ ಎಂಬ 2 ಅಕ್ಷರ ಕಲಿತು, ‘ಪ್ರೀತಿ’ ಎಂಬ 2 ಅಕ್ಷರದಲ್ಲಿ ಬೆರೆತು, ‘ಸಾವು’ ಎಂಬ 2 ಅಕ್ಷರ ಬರುವತನಕ, ‘ಸ್ನೇಹ’ ಎಂಬ 2 ಅಕ್ಷರ ಮರೆಯದಿರಿ.

ಲೈಫ್ ಅಲ್ಲಿ ಹಣ ಎಷ್ಟು ಇಂಪಾರ್ಟೆಂಟೋ ಫ್ರೆಂಡ್ಸು ಅಷ್ಟೇ ಇಂಪಾರ್ಟೆಂಟು.

 

ನಿಂಗೆ ಯಾರು ದುಷ್ಮನ್ ಆದ್ರೂ

ಅವ್ರು ನಂಗೆ ದುಷ್ಮನ್ ನೆನೆ

ನಿನ್ನ ಪರವಾಗಿ ತೊಡೆ ತಡ್ತೀನಿ ನಾನು…

ನೀ..ನನ್ ಬೆಸ್ಟ್ ಫ್ರೆಂಡು…

 

ಸುಖವಿರಲಿ, ಕಷ್ಟವಿರಲಿ, ಸರಿಯರಲಿ, ತಪ್ಪಿರಲಿ, ಎಲ್ಲಾ ಸಂದರ್ಭದಲ್ಲಿ ಜೊತೆ ಇರುವವರೆ ನಿಜವಾದ ಸ್ನೇಹಿತರು.

 

ಸ್ನೇಹ ಎಂಬ ಸಂಬಂಧ ಬೆಳೆಯೋಕೆ ಜಾತಿ, ಮತ, ಧರ್ಮ, ಆಸ್ತಿ, ಬಣ್ಣ, ಸ್ಟೇಟಸ್, ವಯಸ್ಸು, ಉದ್ಯೋಗ ಯಾವುದು ಲೆಕ್ಕಕ್ಕೆ ಬರೋದಿಲ್ಲ. ಸ್ವಚ್ಛ ಮನಸ್ಸೊಂದಿದ್ದರೆ ಸಾಕು.

 

ಅರಮನೆ ಕಟ್ಟುವಂತಹ ಸಿರಿತನವಿಲ್ಲದಿದ್ದರೇನಂತೆ, ಕಣ್ಣೀರು ಒರೆಸುವಂತಹ ಗೆಳೆತನ ಇದ್ದರೆ ಸಾಕು.

 

ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ. ಆದರೆ ನಂಬಿಕೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ.

 

ನಮ್ಮ ಜೀವನದಲ್ಲಿ ಎಲ್ಲಾ ಸಂಬಂಧ ಕಳೆದುಕೊಳ್ಳಬಹುದು. ಆದರೆ ಸ್ನೇಹಿತರ ಸಂಬಂಧ ಕಳೆದುಕೊಳ್ಳಬಾರದು.

 

ಹುಟ್ಟಿ ಸಾಯುವುದು ಮನುಷ್ಯ. ಹುಟ್ಟದೆ ಸಾಯುವವರಿ ದೇವರು. ಬೇರೆಯವರನ್ನು ಸಾಯಿಸುವುದು ಪ್ರೀತಿ. ಆದರೆ ಅವರನ್ನೂ ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ.

 

ಗೆಳೆಯಾ, ಒಂದ್ಸಲ ದೋಸ್ತಿ ಅಂತಾ ಆದ್ರೆ ಮುಗೀತು. ಬಿಡೋ ಮಾತೆ ಇಲ್ಲ.

 

ಸ್ನೇಹಕ್ಕಾಗಿ ಪ್ರಾಣ ಕೊಡೋದು ಕಷ್ಟವಲ್ಲ. ಪ್ರಾಣ ಕೊಡುವಂತ ಸ್ನೇಹ ಸಿಗೋದು ತುಂಬಾ ಕಷ್ಟ.

 

ಎಷ್ಟು ಜನರ ಜೊತೆ ಸ್ನೇಹದಿಂದ ಇರ್ತೀವಿ ಅನ್ನೋದು ಮುಖ್ಯವಲ್ಲ. ನಮ್ಮನ್ನ ಅರಿತವರ ಜೊತೆ ಎಷ್ಟು ಕಾಲ ಇರ್ತೀವಿ ಅನ್ನೋದು ಮುಖ್ಯ.

 

ದೋಸ್ತಾ, ಸತ್ತಮೇಲೆ ಅಂತೂ ನಾವಿಬ್ರು ಸ್ವರ್ಗಕ್ಕೆ ಹೋಗಲ್ಲ. ಅದಕ್ಕೆ ಬದುಕಿದ್ದಾಗ ಈ  ದೋಸ್ತಿಲೇ ಸ್ವರ್ಗ ಸುಖ ಅನುಭವಿಸೋಣ.

 

ರಾಜ ಇಷ್ಟಪಟ್ಟಿದ್ದು ರಾಜ್ಯನಾ. ಶ್ರೀಮಂತ ಇಷ್ಟಪಟ್ಟಿದ್ದು ಚಿನ್ನನಾ, ಬಡವ ಇಷ್ಟಪಟ್ಟಿದ್ದು ಅನ್ನನಾ, ನಾನು ಇಷ್ಟಪಟ್ಟಿದ್ದು ನಿನ್ನ ಗೆಳೆತನ.

 

ನೂರಾರು ಜನರ ನಡುವಳು ನೀ ನನ್ನ ಸೆಳೆದೆ. ಮುಗುಳುನಗೆಯೊಂದಿದೆ ಸ್ನೇಹ ಹಸ್ತ ಚಾಚಿದೆ. ನನ್ನೊಂದಿಗೆ ಹೆಜ್ಜೆ ಇರಿಸುತ್ತಾ ಒಡನಾಡಿಯಾದೆ, ನನ್ನೆಲಾ ನೋವು ನಗುವಿನಲ್ಲೂ ಆಸರೆ ನಿನ್ನದೆ ಮಡಿಲು. ನಮ್ಮ ಸ್ನೇಹವಿಂದು ಪರಿಧಿಯಿಲ್ಲದ ವಿಶಾಲ ಮುಗಿಲು. ಉಳಿಸಿಕೊಳ್ಳುವೆ ಈ ಸ್ನೇಹಸಂಬಂಧ ಇನ್ನೆಲ್ಲಾ ಜನ್ಮದಲು.

 

ಓ ನನ್ನ ಗೆಳೆಯ. ನೀ ಬಾಚಿದೆ ಗೆಳೆತನದ ಹಸ್ತ ಅಂದು. ಬಿಟ್ಟರು ಬಿಡಲಾಗದ ಸ್ನೇಹ ನಮ್ಮದು ಇಂದು. ನಿನ್ನೊಡನಿರುವಾಗಲೆಲ್ಲಾ ನಾನು ಹಸನ್ಮುಖಿ. ನಿನ್ನ ಮುದ್ಧು ಪೆದ್ದು ತುಂಟಾಟ ನೋಡುತ್ತಾ ನಾನು ಸುಖಿ. ದಿನಗಳು ಹಲವು ಸರಿದು ಹೋದವು. ನಮ್ಮ ಬಾಂಧವ್ಯವೂ ಇನ್ನೂ ಬಲಗೊಳ್ಳುತ್ತಲೇ ಇರುವುದು. ನಿಜ ಹೇಳಬೇಕೆಂದರೆ ನೋಡಿಲ್ಲಾ ನನ್ನ ನೀನು. ಆದರೂ ಅದೆಷ್ಟು ಗಾಢ ಮಿತ್ರರಾದೆವು ನಾವು. ನಂಬಿಕೆ ವಿಶ್ವಾಸಕ್ಕೆ ಮುನ್ನುಡಿ ಬರೆದವು. ಆತ್ಮೀಯರಾಗುತ್ತಾ ಸಾಗುತ್ತಾ ಮುಂದೆ ನಡೆದವು. ಭಾವನಾತ್ಮಕ ಬಂಧುವಾಗಿ ಜೊತೆ ನಿಂತಿರುವೆ ಎಲ್ಲಾ ಬಂಧಗಳ ಮೀರೊ ಪ್ರೀತಿ ಹಂಚಿರುವೆ. ಎಲ್ಲ ಸಂಬಂಧಗಳ ನಿಲ್ಲಲ್ಲೆ ಕಂಡೆನು. ನನ್ನೆಲ್ಲಾ ಹುಚ್ಚು ಕನಸುಗಳಿಗೆ ಸಾಥ್ ಕೊಟ್ಟೆ ನೀನು. ಎಲ್ಲಾರ ಕಣ್ಣುಕುಕ್ಕುವ ಗೆಳೆತನ ನಮ್ಮದು ಅಲ್ಲವೇನು? ಪ್ರತಿ ಜನ್ಮಕ್ಕು ಹೀಗೆ ಸಾಗಲಿ ನಮ್ಮ ಸ್ನೇಹವಿನ್ನು.

 

ನಾನೇ ನಿನ್ನ ಪ್ರಪಂಚ ಆಗಿರಬೇಕು ಅನ್ನೋ ಸ್ವಾರ್ಥ ನನಗಿಲ್ಲ. ಆದರೆ ನಿನ್ನ ಪ್ರಪಂಚದಲ್ಲಿ ನನಗೆ ಕೊಟ್ಟಿರೋ ಸ್ಥಾನನ ಬೇರೆ ಯಾರಿಗೂ ಕೊಡಬಾರದು ಅನ್ನೋ ಸ್ವಾರ್ಥ ನನ್ನದು.

 

ಸುಮ್ಮ್ ಸುಮ್ನೆ ಹೊಗಳೋಕೆ ಸಾವಿರ ಜನ ಸಿಗ್ತಾರೆ,

ಆದರೆ ತಪ್ಪು ಮಾಡಿದಾಗ ತಿದ್ದೋಕೆ ಒಬ್ಬ ಗೆಳೆಯ ಮುಖ್ಯ. ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ.

 

ಸುಮ್ನೆ ನೋಡಿದ್ರೆ ಸಿಂಪಲ್ಲಾಗ್ ಕಾಣ್ತೀನಿ, ಕೆಣಕಿ ನೋಡಿದ್ರೆ ಕರಾಬ್ ಆಗಿ ಕಾಣ್ತೀನಿ,

ಪ್ರೀತಿಯಿಂದ ನೋಡುದ್ರೆ ಒಳ್ಳೆ ದೋಸ್ತಿ ಆಗಿರ್ತೀನಿ.

 

Friendship Breakup Quotes in Kannada

ಗೆಳೆತನ ಅನ್ನೋ ಒಂದು ಪದ ಎಷ್ಟು ಅದ್ಭುತ ಅಲ್ವಾ. ಅಂತಾ ಗೆಳೆತನಕ್ಕೆ ದ್ರೋಹ ಮಾಡ್ಬೇಡಿ.

 

ಗೆಳೆತನ ಅನ್ನುವುದು ಅತಿ ಅಪರೂಪವಾದ ಬಂಧ. ಯಾರಲ್ಲೂ ಹೇಳೋಕೆ ಆಗದ ವಿಷಯಗಳನ್ನು ಗೆಳೆಯರ ಬಳಿ ನಂಬಿಕೆ ಇಂದ ಹೇಳಿಕೊಳ್ಳುತ್ತಾರೆ. ಅಷ್ಟು ನಂಬಿಕೆ ಅಷ್ಟು ಪ್ರೀತಿ ಆ ಬಂಧನದಲ್ಲಿ. ಅದಕ್ಕೆ ಅಷ್ಟು ವ್ಯಾಲ್ಯು ಇರೋದು ಗೆಳೆತನಕ್ಕೆ. ಅದನ್ನ ಯಾವತ್ತೂ ಕಳೆದುಕೊಳ್ಳಬೇಡಿ.

 

ನಿಜವಾದ ಗೆಳೆತನ ಎಲ್ಲಿರುತ್ತೋ ಅಲ್ಲಿ ಜಗಳಗಳು ಸಹಜ… ಮುನಿಸಿಲ್ಲದ ಗೆಳೆತನ ನಾಟಕೀಯ – Reality.

 

ಬಣ್ಣ ಹಚ್ಚಿ ಬಕೇಟ್ ಹಿಡಿದು ಬೆನ್ನ ಹಿಂದೆ ನಿಂತು ಚೂರಿ ಹಾಕೊ ಚಿಲ್ಲರ ದೋಸ್ತಿ ಇರೊದಕ್ಕಿಂತ ಕೆಟ್ಟವನಾದರೂ ಕಣ್ಮುಂದೆ ನಿಂತು ಕಡಕ್ ಆಗಿ ಎದೆಗೆ ಎದೆ ಕೊಟ್ಟು ಸೇಡಿಗೆ ಸೇಡಿಟ್ಟು ನೇರವಾಗಿ ಅಖಾಡಕ ಇಳಿದು ಅಡ್ಡ ದಾರಿ ಹಿಡಿಯದೆ ತೊಡೆ ತಟ್ಟಿ ಸವಾಲ್ ಹಾಕೊ ಶತ್ರುಗಳಿರೋದೆ ಒಳ್ಳೆದು ಸಿಂಗಲ್ ಆಗಿದ್ರೂ ಸಿಂಗಮ್ ತರಾ ಇರ್ತಿನಿ ಹೊರತು ಗುಳ್ಳೆ ನರಿಗಳ ಗೆಳತನ ಮಾತ್ರ ಯಾವತ್ತೂ ಮಾಡಲ್ಲ

 

ಕಳೆದು ಹೋದ ಕ್ಷಣವನ್ನು ನೆನೆಸಿಕೊಂಡು ಕುಳಿತಿರುವೆ!! ಇನ್ನೊಂದು ಬಾರಿ ನಾವೆಲ್ಲ ಭೇಟಿಯಾಗುವ ಆಸೆ ತುಂಬಿದೆ ಮನದಲಿ. 

 

ಒಬ್ಬರ ಗೆಳೆತನ ಮುಂದುವರೆಸಿಕೊಂಡು ಹೋಗಬೇಕೆಂದರೆ ಅವರ ಸಣ್ಣ-ಪುಟ್ಟ ತಪ್ಪುಗಳನ್ನು ಕೂಡ ಸಹಿಸಿಕೊಂಡು ಹೋಗಬೇಕು. ಆವಾಗಲೇ ಗೆಳೆತನ ಕೊನೆತನಕ ಇರೋದು.

 

ಬೆನ್ನ್ ಹಿಂದೆ ನಿಂತು ಕೈ ತೋರಿಸೋ ನೂರು ಜನ ಇದ್ರು, ಹೆಗಲ ಮೇಲೆ ಕೈ ಹಾಕಿ ನಾನಿದ್ದೀನಿ ಅನ್ನೋ ಸ್ನೇಹಿತ ಇದ್ರೆ ಸಾಕು.

Friendship Quotes in Kannada Images

ನಮ್ಮ ಈ ದೋಸ್ತಿ ಉಲ್ಲೇಖಗಳ (friendship quotes in kannada) ಸಂಗ್ರಹ ನಿಮ್ಮ ಹೃದಯವನ್ನು ಮುಟ್ಟಿವೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಸ್ನೇಹಿತರು ನಿಮ್ಮ ಜೀವನದಲ್ಲಿ ತರುವ ಪ್ರೀತಿಯನ್ನು ಗೌರವಿಸಿ. ಈ ಉಲ್ಲೇಖಗಳನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ!

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.