100+ Happy Friendship Day Quotes in Kannada (ಸ್ನೇಹಿತರ ದಿನದ ಶುಭಾಶಯಗಳು)

Best Happy Friendship Day Quotes in Kannada

ಸ್ನೇಹವು ನಮ್ಮ ಜೀವನವನ್ನು ಪ್ರೀತಿ, ನಗು ಮತ್ತು ಅಚಲವಾದ ಬೆಂಬಲದಿಂದ ಸಮೃದ್ಧಗೊಳಿಸುವ ಅಮೂಲ್ಯವಾದ ಬಂಧವಾಗಿದೆ. ಇದು ಯಾವುದೇ ಗಡಿಗಳನ್ನು ಹೊಂದಿಲ್ಲ ಮತ್ತು ನಮ್ಮ ಹೃದಯಗಳಿಗೆ ಅಪಾರ ಸಂತೋಷವನ್ನು ತರುವಂತಹ ಸಮಯಾತೀತ ಸಂಪರ್ಕವಾಗಿದೆ. ನಾವು ಸ್ನೇಹ ದಿನದ ವಿಶೇಷ ಸಂದರ್ಭವನ್ನು ಆಚರಿಸುತ್ತಿರುವಾಗ, ಸ್ನೇಹದ ಸೌಂದರ್ಯವನ್ನು ಪ್ರತಿಬಿಂಬಿಸಲು ಮತ್ತು ನಮ್ಮ ಜೀವನವನ್ನು ಪ್ರಕಾಶಮಾನವಾಗಿ ಮಾಡುವವರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯವಾಗಿದೆ.

ಈ ಲೇಖನದಲ್ಲಿ ಈ ಅಸಾಮಾನ್ಯ ಸಂಬಂಧದ ಸಾರವನ್ನು ಸೆರೆಹಿಡಿಯುವ ಸ್ನೇಹಿತರ ದಿನಾಚರಣೆಯ ಶುಭಾಶಯಗಳ ಉಲ್ಲೇಖಗಳ ಸಂತೋಷಕರ ಸಂಗ್ರಹವನ್ನು (happy friendship day quotes in kannada) ನಾವು ಪ್ರಸ್ತುತಪಡಿಸುತ್ತೇವೆ. ಈ ಸ್ನೇಹಿತರ ದಿನದ ಶುಭಾಶಯಗಳ ಉಲ್ಲೇಖಗಳು ನಮ್ಮ ಜೀವನದಲ್ಲಿ ಸ್ನೇಹಿತರು ವಹಿಸುವ ಅಮೂಲ್ಯ ಪಾತ್ರವನ್ನು ನೆನಪಿಸುತ್ತವೆ, ಕಠಿಣ ಸಮಯದಲ್ಲಿ ಅವರು ನೀಡುವ ಪ್ರೋತ್ಸಾಹವನ್ನು ಜ್ಞಾಪಿಸುತ್ತದೆ ಮತ್ತು ಗೆಲುವಿಗೆ ಅವರ ಶ್ರಮವನ್ನು ನೆನಪಿಸುತ್ತವೆ.

ನೀವು ದೀರ್ಘಕಾಲದ ಸ್ನೇಹಕ್ಕಾಗಿ ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತಿರಲಿ ಅಥವಾ ಹೊಸ ಸ್ನೇಹವನ್ನು ಆಚರಿಸಲು ಪರಿಪೂರ್ಣ ಪದಗಳನ್ನು ಹುಡುಕುತ್ತಿರಲಿ, ಈ happy friendship day messages in kannada ಸಂಗ್ರಹವು ವೈವಿಧ್ಯಮಯ ಉಲ್ಲೇಖಗಳನ್ನು ನೀಡುತ್ತದೆ. 

ಈ ಸ್ನೇಹಿತರ ದಿನದಂದು, ನಮ್ಮ ಜೀವನದ ಅತ್ಯುತ್ತಮ ಸ್ನೇಹವನ್ನು ಗೌರವಿಸೋಣ ಮತ್ತು ಅವರು ತರುವ ಪ್ರೀತಿ ಮತ್ತು ಒಡನಾಟಕ್ಕೆ ನಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

ಸ್ನೇಹ ದಿನವು ಸ್ನೇಹದ ಮೂಲತತ್ವ ಮತ್ತು ಅದು ಸೃಷ್ಟಿಸುವ ಪಾಲಿಸಬೇಕಾದ ಬಂಧಗಳನ್ನು ಗೌರವಿಸಲು ವಿಶ್ವಾದ್ಯಂತ ಆಚರಿಸಲಾಗುವ ವಿಶೇಷ ಸಂದರ್ಭವಾಗಿದೆ. ಫ್ರೆಂಡ್‌ಶಿಪ್ ಡೇ ಇತಿಹಾಸವನ್ನು 20 ನೇ ಶತಮಾನದ ಆರಂಭದಲ್ಲಿಅಂದರೆ 1919 ರಲ್ಲಿ ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕರಾದ ಜಾಯ್ಸ್ ಹಾಲ್ ಅವರು ಮೊದಲು ಪ್ರೆಂಡ್ಶಿಪ್ ಡೇ ಪ್ರಸ್ತಾಪಿಸಿದರು. ಆದಾಗ್ಯೂ, ಈ ಪರಿಕಲ್ಪನೆಯು 1930 ರ ದಶಕದಲ್ಲಿ ಹೆಚ್ಚು ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಿತು.

2011 ರಲ್ಲಿ ಯುನೈಟೆಡ್ ನೇಷನ್ಸ್ ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹ ದಿನವೆಂದು ಅಧಿಕೃತವಾಗಿ ಗುರುತಿಸಿದಾಗ ಸ್ನೇಹವನ್ನು ಆಚರಿಸಲು ಒಂದು ದಿನವನ್ನು ಮೀಸಲಿಡುವ ಕಲ್ಪನೆಯು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು. ಆದಾಗ್ಯೂ, ಪ್ರಪಂಚದಾದ್ಯಂತದ ವಿವಿಧ ದೇಶಗಳು ವಿಭಿನ್ನ ದಿನಾಂಕಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸುತ್ತವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸ್ನೇಹಿತರ ದಿನದ ಉದ್ದೇಶವು ಸ್ನೇಹದ ಮಹತ್ವವನ್ನು ಒತ್ತಿಹೇಳುವುದು ಮತ್ತು ಜನರ ನಡುವೆ ಬಲವಾದ ಬಂಧಗಳನ್ನು ಬೆಳೆಸುವುದು. ಸ್ನೇಹಿತರು ಕೃತಜ್ಞತೆಯನ್ನು ವ್ಯಕ್ತಪಡಿಸಲು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅವರ ಸ್ನೇಹವನ್ನು ಆಚರಿಸಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಟ್ಟಿಗೆ ಸೇರುವ ಸಮಯ ಇದು. ಜನರು ಸಾಮಾನ್ಯವಾಗಿ ಈ ದಿನದಂದು friendship ಬ್ಯಾಂಡ್‌ಗಳನ್ನು ಕಟ್ಟುತ್ತಾರೆ ಅಥವಾ ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ತಮ್ಮ ಪ್ರೀತಿ ಮತ್ತು ನಿಷ್ಠೆಯ ಸಂಕೇತಗಳಾಗಿ ವಿನಿಮಯ ಮಾಡಿಕೊಳ್ಳುತ್ತಾರೆ.

ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಫ್ರೆಂಡ್‌ಶಿಪ್ ಡೇ ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಜನರು ಹಳೆಯ ಸ್ನೇಹಿತರೊಂದಿಗೆ ಮರುಸಂಪರ್ಕಿಸಲು ಮತ್ತು ಅವರ ಜೀವನದಲ್ಲಿ ಅವರು ವಹಿಸುವ ಪಾತ್ರವನ್ನು ಪ್ರಶಂಸಿಸಲು ಇದು ಅವಕಾಶವನ್ನು ಒದಗಿಸುತ್ತದೆ. 

ಈ ಲೇಖನದಲ್ಲಿ ಭಾವನೆಗಳ ಆಳ, ಹಂಚಿಕೊಂಡ ನಗು, ಬಾಲ್ಯದ ದಿನಗಳು, ಮತ್ತು ಕಳೆದ ಖುಷಿಯದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಲು happy friendship day wishes in kannada ಉಲ್ಲೇಖಗಳನ್ನು ನಿಮಗಾಗಿ ಸಂಗ್ರಹಿಸಲಾಗಿದೆ.

Best Happy Friendship Day Quotes in Kannada

ತಮ್ಮಂಥಹ ಒಳ್ಳೆಯ ಫ್ರೆಂಡ್ಸನ್ನು ಹೊಂದಿರುವ ನನಗೆ ಪ್ರತಿದಿನವೂ ಫ್ರೆಂಡ್ಶಿಪ್ ಡೇ.

 

ನಮಗೆ ಅನುದಿನವೂ ಫ್ರೆಂಡ್ಶಿಪ್ ಡೇ,

ಪರ್ಸ್ ಕಾಲಿಯಾದಾಗ

ಅರ್ಜೆಂಟ್ ಕಾಸ್ ಬೇಕಾದಾಗ

ಎಣ್ಣೆ ಹೊಡೆಯೋ ಮನಸ್ಸಾದಾಗ

ಯಾವುದೋ ಕ್ರಷ್ ಆದಾಗ

ಏನೋ ಕಿರಿಕ್ ಆದಾಗ 

ಏಕಾಂತ ಕಾಡಿದಾಗ

ಹೀಗೆ ಇತ್ಯಾದಿ ಸಂದರ್ಭದಲ್ಲಿ ಮೊದಲು ಮನಸ್ಸು ವಾಲುವುದು ಮತ್ತು ಅವಲಂಬಿಸುವುದು ಸ್ನೇಹಿತರೆಡೆಗೆ.  

ಬದುಕು ಹೆಚ್ಚಾಗಿ ಸಂಭ್ರಮಿಸುವುದು ಸ್ನೇಹಿತರೊಡನೆಯೇ.

 

ಇವತ್ತು ಫ್ರೆಂಡ್ಶಿಪ್ ಡೇ ಅಂತೆ ಯಾರೋ ನಾಲಕ್ಕು ಜನರನ್ನ ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ರೆ ಇನ್ನುಳಿದವರೆಲ್ಲಾ ದುಸ್ಮನ್ಗಳೇ ಆಗ್ತಾರೆ.

 

ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು. 

ಹ್ಯಾಪಿ ಫ್ರೆಂಡ್‌ಶಿಪ್ ಡೇ

 

ಹ್ಯಾಪಿ ಫ್ರೆಂಡ್ಶಿಪ್ ಡೇ

ಕಲ್ಪನೆಯ ಕಲೆಯಾಗಿ

ನಲ್ಮೆಯ ಜೊತೆಯಾಗಿ

ಬಿಡಿಸದ ಬಂಧವಾಗಿ

ಬಹುಜನ್ಮದ ಗೆಳೆಯ(ತಿ)ರಾಗಿ

ಕಷ್ಟಗಳ ಸುಖಿಗಳಾಗಿ

ನೆನಪುಗಳ ನೆನಪಾಗಿ

ಮನಸುಗಳ ಮಿಲನವಾಗಿ.

ಜನುಮ ಜನುಮ ಇರುವರೆಗೆ ಕಾಯುವೇ ನಿಮ್ಮ ಗೆಳೆತನಗಾಗಿ

ನೋವು ಕೊಟ್ಟರೆ ಮರೆತುಬಿಡಿ

ಖುಷಿ ಕೊಟ್ಟರೆ ನೆನಪಿಸಿ

ಮತ್ತೊಮ್ಮೆ, ಮಗದೊಮ್ಮೆ ಗೆಳೆತನ ಎಂಬ ದೋಣಿಯಲ್ಲಿ ಬಾಳ ಪಯಣಿಗನಾಗಿ ಸಾಗುವ ಜೀವನ ದಡ ಸೇರುವ………!!!!

ಗೆಳತನದ ಸವಿ ನೆನಪಿನ ಶುಭಾಶಯಗಳು

 

ಹ್ಯಾಪಿ ಫ್ರೆಂಡ್ಶಿಪ್ ಡೇ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು

ನಮ್ಮ ಜೀವನದಲ್ಲಿ ಅಪರಿಚಿತರಾಗಿ ಒಮ್ಮೆ ಬಂದು ಚಿರಪರಿಚಿತರಾಗಿ 

ಶಾಶ್ವತವಾಗಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವ ಸುಂದರವಾದ ಸಂಬಂಧವೇ ಸ್ನೇಹ.

 

ಅಪರಿಚಿತ ಗೆಳೆತನ ಕಷ್ಟವಲ್ಲ. ಆದರೆ ಪರಿಚಿತರು ಅಪರಿಚಿತರಾಗದಂತೆ ನೋಡಿಕೊಳ್ಳಿ. ಹ್ಯಾಪಿ ಫ್ರೆಂಡ್ಶಿಪ್ ಡೇ.

 

ಹ್ಯಾಪಿ ಫ್ರೆಂಡ್‌ಶಿಪ್ ಡೇ

ಎಲ್ಲ ರಿಲೇಷನ್ಶಿಪ್ ಗೂ ಮೀರಿದ್ದು ಪ್ರೆಂಡ್ಶಿಪ್. 

 

ಹೆತ್ತ ತಾಯಿಗೆ ಹೆಗ್ಗಣ ಕೂಡ ಮುದ್ದು ಅಂತೇ. ಹಾಗೆ ನಾವು ಇಷ್ಟ ಪಡೋ ಪ್ರೆಂಡ್ಸ್ ಕೂಡ ಅಷ್ಟೇ ಮುದ್ದು ಆಗಿರಬೇಕು ಅಲ್ವಾ. 

ಅಂದ ಚೆಂದ ದುಡ್ಡು ಲೆವೆಲ್ ಬಣ್ಣ ನೋಡಿ ಗೆಳೆತನ ಮಾಡಬಾರದು. ಒಳ್ಳೆಯ ಸ್ನೇಹ ಒಳ್ಳೆ ಮನಸ್ಸು ನಂಬಿಕೆಗೆ ಅವರು ಯೋಗ್ಯರು ಅನಿಸಿದ್ರೆ ಸಾಕು. ಅದಕ್ಕೆ ತಂದೆ ತಾಯಿಯರ ನಂತರದ ಸ್ಥಾನ ಸ್ನೇಹಿತರೆ ಆಗಿರ್ತಾರೆ ಅಲ್ವಾ.

 

ವರ್ಷಕ್ಕೊಂದ್ಸಲ ಫ್ರೆಂಡ್‌ಶಿಪ್ ಡೇ ಆಚರಿಸೋ ಈ ಕಾಲದಲ್ಲಿ,

ನಿಮ್ಮಂತ ಸ್ನೇಹಿತ್ರನ್ನ ಪಡೆದ ನನಗೆ ಪ್ರತೀ ದಿನ ಫ್ರೆಂಡ್‌ಶಿಪ್ ಡೇ ನೇ

ನಮ್ಮ ಸ್ನೇಹ ಕೊನೆವರೆಗೂ ಹೀಗೇ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.

 

ಪ್ರಪಂಚದಲ್ಲಿ ಜಾತಿ ಧರ್ಮಗಳಿಗೆ ಬೆಲೆ ಕೊಡದೆ ಇರೋದು ಗೆಳೆತನ ಮಾತ್ರ. ಸ್ನೇಹಿತರ ದಿನದ ಶುಭಾಶಯಗಳು.

 

ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಗೆಳೆಯರಿಗೆ ಮಾತ್ರ. ನಗುವಾಗ ಜೊತೆಗೂಡುವ ಅಳುವಾಗ ಹೆಗಲು ಕೊಡುವ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು. ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

 

ರಕ್ತ ಸಂಬಂಧಗಳ ಮೀರಿದ ಬಂಧವಿದು

ಯಾವ ಬಿಂದುವಿನಲ್ಲು ಸಂದಿಸಿಹುವುದು…!

ಹ್ಯಾಪಿ ಫ್ರೆಂಡ್ಶಿಪ್ ಡೇ ಫ್ರೆಂಡ್ಸ್.

 

ನಮ್ಮಿಬ್ಬರ ಗೆಳೆತನದಲ್ಲಿ ನನಗೆ ಏನು ಕೊಟ್ಟಿದ್ದೀಯ ಎಂದು ಕೇಳಬೇಡ. ಬೆಲೆ ಕಟ್ಟಲಾಗದ ಸಮಯ ಕೊಟ್ಟಿದ್ದೇನೆ. ನಾ ನಿನ್ನ ಜೊತೆ ಇರುವೆ ಎಂಬ ಧೈರ್ಯ ತುಂಬಿದ್ದೇನೆ. 

ನನ್ನೆಲ್ಲಾ ದೋಸ್ತರಿಗೂ ಸ್ನೇಹಿತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

 

ಖುಷಿಯಲ್ಲಿ ಜತೆಯಾಗಿದ್ದೆ, ಅತ್ತಾಗ ಕಣ್ಣೀರು ಒರಸಿದ್ದೆ, ಬಿದ್ದಾಗ ಕೈ ಹಿಡಿದು ಬಲ ತುಂಬಿದ್ದೆ, ಗೆದ್ದಾಗ ಬೆನ್ನು ತಟ್ಟಿದ್ದೆ. ಸುಂದರ ಸ್ನೇಹಕ್ಕೆ ನೀ ಅನ್ವರ್ಥ. ನಿನ್ನೊಂದಿಗಿದ್ದ ಒಂದೊಂದು ಕ್ಷಣವೂ ಸುಂದರ. 

ನನ್ನೆಲ್ಲಾ ಸ್ನೇಹಿತರಿಗೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.

 

ಲವರ್ ಹಿಂದೆ ನಾಯಿ ತರ ಅಲೆಯೋದಕ್ಕಿಂತ ಫ್ರೆಂಡ್ಸ್ ಜೊತೆ ಹುಲಿ ತರ ಮೆರೆಯೋದು ಬೆಸ್ಟ್. ಸ್ನೇಹಿತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

 

ಜೀವಕ್ಕೆ ಜೀವ ಕೊಡೊ 

ಸ್ನೇಹ ಕ್ಕಿದ್ರು.

ಜೀವಕ್ಕೆ ಜೀವ ಕೊಡೊ 

ಪ್ರೀತಿ ಸಿಗಲ್ಲ 

ಯಾವುದೇ ಪ್ರೀತಿಗೆ ದೋಸ್ತಿ ಜಾಸ್ತಿ 

ಸ್ನೇಹಕೆ ನಂಬಿಕೆ ಜಾಸ್ತಿ.

ಹ್ಯಾಪಿ ಫ್ರೆಂಡ್ಶಿಪ್ ಡೇ.

 

ನನ್ನ ಎಲ್ಲ ಪ್ರೀತಿಯ ಸ್ನೇಹಿತರಿಗೆ ಸ್ನೇಹಿತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೋಸ್ತಿನೇ ನಮ್ಮ ಅಸ್ತಿ.

 

ನನ್ನ ಪ್ರೀತಿಯ ಗೆಳೆಯರೆ  ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳು ನೆನಪು ಸದಾ ಹಚ್ಚಹಸಿರು. ನಿಮ್ಮ ಸ್ನೇಹ, ಪ್ರೀತಿಗೆ ಹೋಲಿಕೆಯೇ ಇಲ್ಲ ಹ್ಯಾಪಿ ಫ್ರೆಂಡ್‌ಶಿಪ್ ಡೇ.

 

ನಿರ್ಮಲ, ನಿಸ್ವಾರ್ಥ ಸ್ನೇಹ ಸುಲಭವಾಗಿ ಸಿಗುವುದಿಲ್ಲ. ಅದನ್ನು ನಾವು ಪ್ರೀತಿಯಿಂದ ಸಂಪಾದಿಸಿಕೊಳ್ಳಬೇಕು. ಅದು ಹೃದಯಾಂತರಾಳದ ಬಾಂಧವ್ಯ. ನಿಮ್ಮ  ಸ್ನೇಹವನ್ನು ನಾನು ಗಳಿಸಿದ್ದೇನೆ ಎಂಬ ಖುಷಿ ನನ್ನದು. 

ಹ್ಯಾಪಿ ಫ್ರೆಂಡ್‌ಶಿಪ್ ಡೇ.

 

ಸ್ನೇಹ ಎಂಬುದು ಪವಿತ್ರವಾದ ಬಂಧ

ಫ್ರೆಂಡ್ಸ್‌‌ಗಳು ಎಲ್ಲರಿಗೂ ಇರುತ್ತಾರೆ…

ಆದರೆ ತಮ್ಮ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾದವರು ಮಾತ್ರ ನಿಜವಾದ ಸ್ನೇಹಿತರು ಎನಿಸಿಕೊಳ್ಳುತ್ತಾರೆ

ಗೆದ್ದಾಗ ಗಮನಿಸುವ ಸ್ನೇಹಿತೆ 

ಸೋತಾಗ ಸಂತೈಸುವ ಸ್ನೇಹಿತೆ 

ಹ್ಯಾಪಿ ಫ್ರೆಂಡ್ಶಿಪ್ ಡೇ

 

Hey Bestie,,, ನಮ್ಮ ಈ ಪುಟ್ಟ ಸ್ನೇಹ ಇದೆ ತರಾ ನೂರು ವರುಷ ಸಂತೋಷದಿಂದ ಇರಲಿ. ಹ್ಯಾಪಿ ಫ್ರೆಂಡ್ಶಿಪ್ ಡೇ.

 

ನನ್ನ ಎಲ್ಲ ಉಡಾಳ ದೋಸ್ತರಿಗೆ Happy Friendship Day.

 

ಪ್ರತಿ ಸಂಬಂಧಗಳ ನಡುವೆ ಸುಂದರವಾದ ಸೇತುವೆ  ಇರುತ್ತದೆ. 

ನೊಂದ ಮನಕೆ ಸಾಂತ್ವನವೇ ಸೇತುವೆ

ನೊಂದ ಹೃದಯಕೆ ಪ್ರೀತಿಯೇ ಸೇತುವೆ

ಮುಪ್ಪಿನ ಜೀವಕೆ ಆಸರೆಯೇ ಸೇತುವೆ

ಅಳುವ ಕಣ್ಣಿಗೆ  ಒರೆಸುವ ಕೈ ಸೇತುವೆ.

ಸೇತುವೆಗಳು ಚೆನ್ನಾಗಿರುವಷ್ಟು ದಿನ ಸಂಬಂಧಗಳು ಹಿತವಾಗಿರುತ್ತವೆ.

ಹ್ಯಾಪಿ ಫ್ರೆಂಡ್ಶಿಪ್ ಡೇ.

 

ವಿಶ್ವ ಸ್ನೇಹಿತರ ದಿನಾಚರಣೆ.

ಜಾತಿಗಿಂತ ಪ್ರೀತಿ ದೊಡ್ಡದು. 

ಆಸ್ತಿಗಿಂತ ದೋಸ್ತಿ ದೊಡ್ಡದು. 

 

ಸ್ನೇಹಿತರ ದಿನದ ಶುಭಾಶಯಗಳು.

ಮನಸ್ಸು ಎಂಬ ಮಂದಿರದಲ್ಲಿ

ಕನಸು ಎಂಬ ಸಾಗರದಲ್ಲಿ

ನೆನಪು ಎಂಬ ಅಲೆಗಳಲಿ

ಚಿರಕಾಲ ಮಿನುಗುತಿರಲಿ

ನಮ್ಮ ಈ ಅಮರ ಸ್ನೇಹ. 

 

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಸಂಬಂಧ ಎಂದರೆ ಅದು ಸ್ನೇಹ.

ರಕ್ತ ಸಂಬಂಧವನ್ನು ಸಹ ಮೀರಿಸುವ ಅನುಬಂಧ ಸ್ನೇಹ.

ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಸಂಪಾದಿಸುವ ಬೆಲೆ ಕಟ್ಟಲಾಗದ ಆಸ್ತಿ ಸ್ನೇಹ. 

ಜೀವನ ನಡೆಸಲು ಸ್ಪೂರ್ತಿ ಸ್ನೇಹ. 

ಸಾವಿನಲ್ಲೂ ಜೊತೆಗೆ ಇರುವೆ ಎಂದು ಹೇಳುವ ಬಂಧವೇ ಸ್ನೇಹ. 

ಎಲ್ಲರಿಗೂ ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಶುಭಾಶಯಗಳು.

 

ನೆನಪಿಸಿಕೊಳ್ಳುವುದಲ್ಲ ಸ್ನೇಹ

ಮರೆಯದೇ ಇರುವುದೇ ಸ್ನೇಹ.

ವಿಶ್ವ ಸ್ನೇಹಿತರ ದಿನದ ಶುಭಾಶಯಗಳು.

 

ಸ್ನೇಹ ಎಂಬುದು ಅನನ್ಯ. ನಿನ್ನನ್ನು ಫ್ರೆಂಡ್ ಆಗಿ ಪಡೆದ ನಾನೇ ಧನ್ಯ.

 

ಇದನ್ನೂ ಓದಿ:

  1. 100+ Happy Birthday Wishes in Kannada for Brother (ಅಣ್ಣ/ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು)
  2. 100+ Birthday Wishes for Wife in Kannada (ಹೆಂಡತಿ ಹುಟ್ಟು ಹಬ್ಬದ ಶುಭಾಶಯಗಳು)
  3. 100+ Happy Birthday Wishes for Father in Kannada
  4. Happy Birthday Wishes for Mother in Kannada with Images
  5. 100+ Happy Birthday Wishes for Sister in Kannada
  6. 150+ Lover Birthday Wishes in Kannada with Images

Funny Friendship Day Quotes in Kannada

ಪ್ರಪೋಸ್ ಮಾಡಿದಾಗ “ನಾ ನಿನ್ನ ಆ ಥರ ನೋಡೇ ಇಲ್ಲ. ವಿ ಆರ್ ಬೆಸ್ಟ್ ಫ್ರೆಂಡ್ಸ್ ಕಣೋ” ಅಂದ ಎಲ್ಲಾ 224 ಹುಡುಗೀರ್ಗೆ ಹ್ಯಾಪಿ ಫ್ರೆಂಡ್ಶಿಪ್ ಡೇ.

 

ಇವತ್ತು ಫ್ರೆಂಡ್ಶಿಪ್ ಡೇ ಅಂತ ಒಬ್ರದ್ರೂ ನನ್ ಪೋಟ ಹಾಕ್ ವಿಶ್ ಮಾಡಿದ್ರ.. ನಿಮ್ಗೆಲ್ಲಾ ದೇವ್ರು ಒಳ್ಳೆದ್ ಮಾಡ್ತಾನ.

 

ಇವತ್ತು ಫ್ರೆಂಡ್ಶಿಪ್ ಡೇ. ಯಾರಾದರೂ 5 ರೂಪಾಯಿ ಸಾಲ ಕೊಡಿ ಪಾರ್ಟಿ ಮಾಡಬೇಕು

 

ಹ್ಯಾಪಿ ಫ್ರೆಂಡ್ಶಿಪ್ ಡೇ ಅಂತ ನನ್ ಫ್ರೆಂಡ್ ವಿಶ್ ಮಾಡ್ದ Rs 5000 ಅಮೌಂಟ್ ಕೇಳ್ದೆ. ಮೆಸೇಜ್ ನೋಡಿದ್ರು ಇನ್ನು ರಿಪ್ಲೈ ಮಾಡಿಲ್ಲ.!! Anyway happy friendship Day

 

ನಮ್ಕಡೆ ಫ್ರೆಂಡ್ಶಿಪ್ ಡೇ, 

ಆ ಡೇ, ಈ ಡೇ ಅಂತ ಏನೂ ಇಲ್ಲ ಒಂದ್ಸಲ ದೋಸ್ತ್ ಅಂದ್ರ ಮುಗೀತು ಅವ ಕಡೀತನನು ದೋಸ್ತ.

 

ಆಕಡೆನು ಡವ್ ಮಾಡ್ಕೊಂಡು ….

ಈಕಡೆನು ಡವ್ ಮಾಡ್ಕೊಂಡು ….

ಇಬ್ಬರ ಮಧ್ಯೆ ತಂದಿಕ್ಕೋ ಡವ್ ನನ್ ಮಕ್ಕಳಿಗೆ ಹ್ಯಾಪಿ ಫ್ರೆಂಡ್ಶಿಪ್ ಡೇ.

 

ಫ್ರೆಂಡ್ಸು ಅನ್ನೋ ಹೆಸ್ರಲ್ಲಿ ನನ್ನ್ ಜೊತೆ ಇರೋ ಡಬ್ಬಾ ನನ್ನ್ ಮಕ್ಳ,,

ಹ್ಯಾಪಿ ಫ್ರೆಂಡ್ಶಿಪ್ ಡೇ

 

ಫೋನ ಹಚ್ಚೇದ್ರು ಫೋನ್ ಎತ್ತಲ್ಲಾರದ ಫ್ರೆಂಡ್ ಗಳಿಗೂ ಹ್ಯಾಪಿ ಫ್ರೆಂಡ್ಶಿಪ್ ಡೇ.

 

ಫ್ರೆಂಡ್ಶಿಪ್ ಡೇ ನಿಮ್ photo ಹಾಕಿಲ್ಲ ಅಂತ ಯಾರೂ ಬೇಜಾರ್  ಮಾಡ್ಕೋಬೇಡಿ. ಯಾಕಂದ್ರೆ ಒಂದಿನ ಹಾಕಿ NEXT ತೆಗೆಯೋಕೆ ನೀವು ನನ್ನ ಸ್ಟೇಟಸ್ ನಲ್ಲಿ ಇಲ್ಲ. ನನ್ನ ಹೃದಯದಲ್ಲಿ ಇದ್ದೀರಾ.

 

ನೋಡ್ರಪ್ಪಾ.. ನನ್ನ ಫ್ರೆಂಡ್ಸ್ ಬಾಳ್ ಜನ ಅದೀರಿ. ಒಬ್ಬಂದ್ ಫೋಟೋ ಹಾಕಿ ಒಬ್ಬಂದ್ ಹಾಕಿಲ್ಲ ಅಂತ ಜಗಳ ಪಕ್ಕ ತೆಗಿತೀರಿ. ಅದ್ಕೆ ಫೋಟೋ ಹಾಕೋ ಉಸಾಬರಿನೇ ಬ್ಯಾಡ. ನನ್ನ ಕಡೆಯಿಂದ ಗೆಳೆಯ ಗೆಳತಿಯರಿಗೆ Happy Friendship Day.

Friendship Day Quotes in Kannada Images

ಈ happy friendship day kannada quotes ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಿಮಗೆ ತಿಳಿದಿರುವ ಉತ್ತಮ happy friendship day wishes in kannadaಅನ್ನು ಕಾಮೆಂಟ್ ಮಾಡಿ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.

Leave a Reply

Your email address will not be published. Required fields are marked *