100+ Motivational Quotes in Kannada

ಜೀವನದಲ್ಲಿ ನಾವು ಎದುರಿಸುವ ಅನೇಕ ಸವಾಲುಗಳು ನಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸುತ್ತವೆ. ಇಂತಹ ಸಮಯಗಳಲ್ಲಿ ಪ್ರೇರಣಾದಾಯಕ ಮಾತುಗಳು (kannada motivational quote) ಹೊಸ ಸ್ಪೂರ್ತಿಯನ್ನು, ಆತ್ಮವಿಶ್ವಾಸವನ್ನು ತುಂಬುತ್ತವೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲವೊಮ್ಮೆ ತೊಂದರೆಗಳನ್ನು ಅನುಭವಿಸುತ್ತಾರೆ, ದಾರಿ ತಪ್ಪುತ್ತಾರೆ ಅಥವಾ ನಿರಾಶೆ ಹೊಂದುತ್ತಾರೆ. ಆದರೆ, ಕೇವಲ ಒಂದು ಉತ್ತಮ ಪ್ರೇರಣೆ ನೀಡುವ ಸಂದೇಶವು ನಮ್ಮ ಮನೋಭಾವವನ್ನು ಬದಲಾಯಿಸಿ, ನಮ್ಮನ್ನು ಹೊಸ ಚೈತನ್ಯದಿಂದ ಮುನ್ನಡೆಸಬಹುದು.

ಈ ‘ಪ್ರೇರಣಾದಾಯಕ ಉಕ್ತಿಗಳ ಸಂಗ್ರಹ’ (motivational quotes in kannada) ಎಲ್ಲರಿಗೂ ಸ್ಪೂರ್ತಿ ನೀಡುವ ಉದ್ದೇಶವನ್ನು ಹೊಂದಿದೆ. ಅಕ್ಷರಗಳ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಅವುಗಳು ನಮ್ಮ ಆಂತರಿಕ ಶಕ್ತಿಯನ್ನು ಬೆಳಗಿಸಬಲ್ಲವು. ಇವು ಕೇವಲ ಉಲ್ಲೇಖಗಳಲ್ಲ, ಅವು ಜೀವನದ ವಿವಿಧ ಸಂದರ್ಭಗಳಿಗೆ ನಿಮ್ಮನ್ನು ಪ್ರೇರೇಪಿಸುವ ಶಕ್ತಿಯ ಸಾಧನ. 

ಈ ಪ್ರೇರಣಾದಾಯಕ ಸಂದೇಶಗಳ ಸಂಗ್ರಹವನ್ನು (collection of best motivational quotes in kannada) ಓದಿ, ಆಲೋಚಿಸಿ, ಮತ್ತು ಜೀವನದಲ್ಲಿ ಹೊಸ ಉತ್ಸಾಹವನ್ನು ಕಂಡುಹಿಡಿಯಿರಿ!

Motivational Quotes in Kannada

Best Motivational Quotes in Kannada

ಮರುಗದಿರು ಮನವೆ! 

ನಿನ್ನದಲ್ಲದ ಪಯಣವಿದು! 

ನಿನ್ನದಲ್ಲದ ದಾರಿ ಇದು! 

ಕಾಣದ ಕೈ ಬರೆದ ಕಥೆಗೆ ಬರಿ ಸಾಕ್ಷಿ ನೀನು… 

ಎಲ್ಲವೂ ನಾನೇ, ನನ್ನದೇ ಪಯಣ, ನನ್ನದೇ ಗುರಿ, ಸಾಧನೆ, ಬ್ರಮೆಯ ಬಿಡು….. 

ಅಚ್ಚರಿ ಮೂಡಿಸುವ ತಿರುವುಗಳೆಷ್ಟೋ,,,, 

ಬೆಚ್ಚಿ ಬೀಳಿಸುವ ಸತ್ಯದ ಅನಾವರಣಗಳೆಷ್ಟೋ,,,, 

ಇಂಚಿಂಚು ಮೂಡುವ ಪರೀಕ್ಷೆಗಳೆಷ್ಟೋ,,,,,, 

ಜಗ್ಗದೆ ಕುಗ್ಗದೆ ನಿನ್ನ ಪಾತ್ರದ ಕಡೆ ಮಾತ್ರ ಇರಲಿ ಗಮನ,,, 

ಎಲ್ಲರೂ ಪಾತ್ರದಾರಿಗಳೇ ಇಲ್ಲಿ, 

ಸರಿ ಮಾಡುವ ಅಧಿಕಾರ ನಿನಗಿಲ್ಲ,,,,,, 

ಕೊರಗದಿರು ಮನವೇ! ನೆನಪಿಡು!!!! 

ಇದು ನಿನ್ನದಲ್ಲದ ಪಯಣ! 

ನಿನ್ನದಲ್ಲದ ದಾರಿ!

 

ನಿನ್ನ ಗುರಿ ತಲುಪಲು ಕಷ್ಟಪಡುತ್ತಿರು ಶಿಸ್ತಿನಿಂದ ಇರು. ತಾಳ್ಮೆಯಿಂದ ಇರು 

ನಿನ್ನ ಸಮಯ ಬರುವತನಕ ಕಾಯುತ್ತಿರು 

ಸಾಧನೆ ನಿನ್ನ ಕೈ ಹಿಡಿಯುತ್ತೆ, ಸಾಹಸ ನಿನ್ನ ಪ್ರವೃತ್ತಿ ಆಗುತ್ತೆ.

 

ಗುಣವಿಲ್ಲದಿದ್ದರೆ, ರೂಪ ವ್ಯರ್ಥ 

ನಮ್ರತೆ ಇಲ್ಲದಿದ್ದರೆ, ವಿದ್ಯೆ ವ್ಯರ್ಥ 

ಉಪಯೋಗಿಸದಿದ್ದರೆ, ಧನ ವ್ಯರ್ಥ 

ಹಸಿವೆ ಇಲ್ಲದವನಿಗೆ, ಭೋಜನ ವ್ಯರ್ಥ 

ಪ್ರಜ್ಞೆ ಇಲ್ಲದವನಿಗೆ, ಪ್ರತಿಭೆ ವ್ಯರ್ಥ 

ಗುರಿ ಇಲ್ಲದಿದ್ದರೆ, ಸಾಧನೆ ವ್ಯರ್ಥ 

ಈ ಮಾತನ್ನು ಅರಿಯದಿದ್ದರೆ ಜೀವನ ವ್ಯರ್ಥ….

 

ಗುರಿ ಗುಪ್ತವಾಗಿರಲಿ. 

ಸಾಧನೆ ಸತತವಾಗಿರಲಿ.

ವಿಶ್ವವನ್ನು ಮರೆತರೂ ವಿಶ್ವಾಸವನ್ನು ಮರೆಯದಿರು.

 

ದೊಡ್ಡ ದೊಡ್ಡ ಸಾಧನೆಗಳಿಗೆ ಗುರಿ ಇದ್ರೆ ಸಾಲದು. 

ಉತ್ತಮ ನಿರ್ಧಾರ ಕೈಗೊಳ್ಳುವ ಶಕ್ತಿ ಇರಬೇಕು

 

ಬದುಕಿನಲ್ಲಿ ಗುರಿ ಮತ್ತು ಗೆಲುವು, ಸಾಧನೆ ಬಹು ಮುಖ್ಯ. ಆದರೆ ಇಡಿ ಪ್ರಪಂಚವನ್ನೇ ಗೆಲ್ಲತ್ತಿನಿ ಅನ್ನೋ ಮೂರ್ಖತನ ಇರಬಾರದು. ಯಾವುದು ಶಾಶ್ವತವಲ್ಲ..

 

ನಿನ್ನ ಸಾಧನೆಯ ಶೀಖರದೊಂದಿಗೆ ಪರಿಚಯವಾಗುವಂತಿರು

ಹುಚ್ಚನಂತಿರು.

ಮುಗ್ಗನಂತಿರು.

ಪದ್ದೆನಂತಿರು.

ನೀನು ನಿನಾಗಿರು.

ನೀನ್ನದು ನಿನ್ನದಾಗಿರಲಿ.

ನಿನ್ನವರು ಇಲ್ಲಿ ಯಾರುಯಿಲ್ಲ. 

ನೀನೊಬ್ಬ ಏಕಾಂಗಿ.

ನಿನ್ನ ಸಾಧನೆಯ ಗುರಿ ನಡೆಕಡಿಗೆ ಧಿಟ ಹೆಜ್ಜೆ ಹಾಕುತ್ತಿರು.

ನಿನ್ನ ಅರಿಯದವರಿಗೆ. 

ನಿನ್ನತನದ ಹಂಬವಿಲ್ಲದವರಿಗೆ ನೀನು ಏಕೆ ಬೇಕು.

ಮೊದಲು ನಿನ್ನತನದ ಮಾನವಿಯತೆ ತೋರುತ.

ಆ ಮನಸ್ಸುನ್ನ ಸೆಳೆತದಿಂದ ಕಟ್ಟಿ ಹಾಕು.

ನಿನ್ನ ಸಾಧನೆ ಶೀಖರದೊಂದಿಗೆ ಪರಿಚಯವಾಗುವಂತಿರು.

 

ಸಾಧನೆ ಮಾಡಿದ್ರೆ ನೀನು ನಮ್ಮವನು. ಇಲ್ಲಾ ಅಂದ್ರೆ ನೀನು ಯಾವನು ಅನ್ನುವ ಜಗತ್ತು ಇದು. ಅದ್ಕಕೆ ಗುರಿ ಮುಟ್ಟುವರೆಗೂ ನಿಲ್ಲದಿರು .

 

ಸಾಧನೆ ದಾರಿಯಲ್ಲಿ ಹೊರಟಾಗ ತುಂಬಾ ಜನ ನಿಮ್ಮನ್ನು ನೋಡಿ ಕೆಟ್ಟದಾಗಿ ಮಾತನಾಡುತ್ತಾರೆ. ಯಾವುದಕ್ಕೂ ತಲೆ ಕೆಡಿಸ್ಕೋಬೇಡಿ ಮುಂದೆ ಸುಮ್ಮನೆ ನುಗ್ಗಿ. ನಿಮ್ಮ ಗುರಿ ಮುಟ್ಟಿ ಸಾಧಿಸಿದ ನಂತರ ಅವರೇ ನಿಮ್ಮ ಮೊದಲನೇ ಅಭಿಮಾನಿ ಆಗಿರುತ್ತಾರೆ 

 

ಮನೆ ಕಟ್ಟುವಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ ನಂತರ ಗೃಹಪ್ರವೇಶಕ್ಕೆ ಎಲ್ಲರೂ ಬಂದು ಹಾರೈಸಿ ಉಡುಗೊರೆ ನೀಡುತ್ತಾರೆ. ಹಾಗೆ ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರೂ ಸಹಾಯ ಮಾಡುವುದಿಲ್ಲ. ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ.

 

ವ್ಯಕ್ತಿ ಎಷ್ಟೇ ಬಿಡುವಿಲ್ಲದ ಮನುಷ್ಯನಾದರೂ ಗುರಿಯ ಕಡೆ ಪ್ರಜ್ಞೆ ವಹಿಸುವುದು ಸೂಕ್ತ. ಇಟ್ಟ ಗುರಿ ತೊಟ್ಟ ಬಾಣ ಯಾವತ್ತೂ ತಪ್ಪಾಗಬಾರದು…. ಅಂತೆ ಕಂತೆಗಳಿಗೆ ಬಂತೆ ಕಟ್ಟಿ ಬಿಸಾಡಿ ಹೋಗ್ತಾ ಇರಬೇಕು ಅಷ್ಟೇ ಜೀವನ..

 

ಜೀವನದಲ್ಲಿ ನೀವೂ ಏನೂ ಸಾಧಿಸಿದೆ ಇದ್ರು ಪರ್ವಾಗಿಲ್ಲ. ಇನ್ನೊಬ್ರಿಗೆ ನೋವು ಕೊಡಬೇಡಿ ಅದೇ ದೊಡ್ಡ ಸಾಧನೆ 

 

ಗುರಿ ತಲುಪುವ ಕಡೆಗೆ ಪ್ರಯತ್ನ ಸತತವಾಗಿ ನಡೆಸಿ.. ಫಲ ತಾನಾಗಿಯೇ ನಿಮ್ಮನ್ನು ಯಶಸ್ಸಿನ ಕಡೆಗೆ ನಡೆಸಿಕೊಂಡು ಹೋಗುತ್ತದೆ

 

ಹೆಜ್ಜೆಗಳು ದಾರಿ ತೋರಿಸಿದರೆ, ಕಷ್ಟಗಳು ಗುರಿ ತಲುಪಿಸುತ್ತದೆ.

 

ಗೆಲುವಿನ ಗುರಿ.. 

ಕೆಲವರಿಗೆ ಉರಿ.. 

NO WORRY,.. 

ನೀ ಮುಂದುವರಿ

 

ಸಾಧನೆ ಸಮಯ ತಗೊಳೋತ್ತೆ. ಒಂದೇ ದಿನದಲ್ಲಿ ಯಾವ ಅರಮನೆನು ಕಟ್ಟೋಕಾಗಲ್ಲ

 

ಮುಂದೆ ನುಗ್ಗು ಸ್ವಚ್ಚ ಮನಸ್ಸಿಂದ. ಸಾಧನೆ ನಿನ್ನದೇ..

 

ನಮ್ಮನ್ನು ನಾವು ಪ್ರೀತಿಸುವುದೇ ಈ ಬದುಕಿನ ಅಂತಿಮ ಗುರಿ.

 

ಈ ಬದುಕಿನ ಅತಿ ದೊಡ್ಡ ಗುರಿ… “ಬದುಕುವುದು” – ಕುವೆಂಪು 

 

ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ. ಬಿಲ್ಲಿನಿಂದ ಬಾಣ ಬಿಡಬೇಕಾದರೆ, ಅದನ್ನು ಹಿಂದಕ್ಕೆ ಎಳೆದೇ ಬಿಡಬೇಕು. ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ….

 

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ …..

 

ಸಾಧಿಸಬೇಕು ಅನ್ನೋ ಛಲ ಎಲ್ಲರಿಗೂ ಇದೆ. ಎಷ್ಟೋ ಜವಾಬ್ದಾರಿಗಳ ಮುಂದೆ ಸಾಧನೆ ಸಾವಾಗಿದೆ..!!

 

ಸಮಯ ಬರುತ್ತೆ ಅಂತ ಯಾವತ್ತೂ ಇರುವ ಸಮಯ ಹಾಳು ಮಾಡಿ ಬರುವ ಸಮಯಕ್ಕಾಗಿ ಕಾಯಬೇಡ…. ಸಾವು ಬರುವ ಮುನ್ನ ನಿನ್ನ ಸಾಧನೆ ನಿಂದನೆ ಮಾಡುವವರಿಗೆ ತೋರಿಸಿಕೊಡಬೇಕು… ಇಲ್ಲವಾದರೆ ನಿನ್ನ ಸಾವಿನ್ನೂ ಸಂಭ್ರಮಿಸುವವರಿದ್ದಾರೆ….!! 

 

ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ ..,!

 

ಅನೇಕರಿಗೆ ಯಶಸ್ಸು ಸುಲಭವಾಗಿ ಒಲಿಯುತ್ತದೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಬೇಗನೇ ಸಿಗುತ್ತದೆ. ಆದರೆ ಕೆಲವರಿಗೆ ಗುರಿ ತಲುಪುವುದು ಸ್ವಲ್ಪ ತಡವಾಗಬಹುದು. ಅವರು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದರೂ ಕನಸು ನನಸಾಗುವ ಸಮಯ ಬಂದಿರದೇ ಇರಬಹುದು. ಆದರೆ ವ್ಯಕ್ತಿಗಳು ಹೊಂದಿರುವ ಕೆಲ ಸಂಕೇತಗಳು ಅಥವಾ ಗುಣಗಳು ಭವಿಷ್ಯದಲ್ಲಿ ಅವರ ಯಶಸ್ಸನ್ನು ಸೂಚಿಸುತ್ತವೆ

 

ಒಬ್ಬ ಸಾಧನೆ ಮಾಡಲು ಹೊರಟರೆ ಅವನನ್ನು ಮೇಲೆ ಏರಸದೆ, ಕೆಳಗೆ ಜಗ್ಗುವ ಜನರು ನಮ್ಮವರೇ ಮತ್ತೆ ನಕ್ಕು ರಿಯಾಕ್ಟ್ ಮಾಡುವವರು ನಮ್ಮವರೇ…. ಇದೇ ಈಗಿನ ಜನರ ಕಾಯಕ

 

ಇನ್ನೊಬ್ಬರಿಗಿಂತ ನಾನು ಉತ್ತಮನಾಗಬೇಕು ಎಂಬುದು ನನ್ನ ಗುರಿಯೇ ಅಲ್ಲ. ಇದಕ್ಕೆ ಬದಲಾಗಿ ನಾನು ಹಿಂದೆ ಹೇಗಿದ್ದೇನೋ ಅದಕ್ಕಿಂತ ಉತ್ತಮನಾಗಬೇಕು ಎಂಬುದಷ್ಟೇ ನನ್ನ ಗುರಿ.

 

ಗುರಿ ಮುಟ್ಟುವವರೆಗೂ ಕೆಣಕುವವರನ್ನು ಇಣುಕಿ ಸಹ ನೋಡಬಾರದು..! 

 

ಬದುಕು ನಿಂತರು ಹೆಸರು ಶಾಶ್ವತವಾಗಿರಬೇಕು ಕನಸು ನಿಂತರು ಗುರಿ ಶಾಶ್ವತವಾಗಿರಬೇಕು. ನಿಂತ ನೀರಲ್ಲಿ ಕಪ್ಪೆ ಆಗುವುದಕ್ಕಿಂತ ಹರಿವ ನೀರಲ್ಲಿ ಮೀನಾಗಿರಬೇಕು

 

ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ. ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ..

 

ಹಿಂದಕ್ಕೆ ನೋಡಿದರೆ ಅನುಭವ ಸಿಗುತ್ತೆ… 

ಮುಂದಕ್ಕೆ ನೋಡಿದರೆ ಭವಿಷ್ಯ ಸಿಗುತ್ತೆ… 

ಸುತ್ತಲೂ ನೋಡಿದರೆ ಸತ್ಯ ಅರಿವಾಗುತ್ತೆ.. 

ನಮ್ಮೊಳಗೆ ನಾವು ನೋಡಿದಾಗ… 

ಆತ್ಮ ವಿಶ್ವಾಸ ಹೆಚ್ಚಾಗುತ್ತೆ …

ಹೆಜ್ಜೆಗಳು ದಾರಿ ತೋರಿದರೆ, ಕಷ್ಟಗಳು ಗುರಿ ಮುಟ್ಟಿಸುತ್ತೆ..

 

ನಗುವ ಮುಖದಲ್ಲಿ ಬೆಟ್ಟದಷ್ಟು ನೋವಿದೆ, ನೋವಿರುವ ಮನಸಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವನದಲ್ಲಿ ಗುರಿ ಮುಟ್ಟುವ ಬಲವಿದೆ…. ಕಣ್ಮಣಿ…. 

 

ರೂಪಾಯಿ ಆದ್ರೂ ರೂಪ ಆದ್ರೂ ತುಂಬಾ ದಿನ ಇರೋದಿಲ್ಲ. ಮನುಷ್ಯನ ಒಳ್ಳೆತನ ಅನ್ನೋದು ಚಿರಕಾಲ ನೆನಪಿನಲ್ಲಿ ಉಳಿಯುತ್ತೆ. ತುಟಿಗೆ ತುಪ್ಪ ಸವರಿ ಊಟಕ್ಕೆ ವಿಷ ಹಾಕೋ ಕಾಲ ಇದು ನಾವು ಯಾರಿಗೆ ಜಾಸ್ತಿ ಗೌರವ ಕೊಡ್ತಿವೂ ಅಂತವರ ದೃಷ್ಟಿಯಲ್ಲಿ ನಾವು ತುಂಬಾ ಕೆಳಮಟ್ಟದವರಾಗಿರುತ್ತೇವೆ. ಅದ್ಕೆ ಜೀವನದಲ್ಲಿ ಗುರಿ ಇಟ್ಕೊಂಡು ಬದುಕ್ಬೇಕು. ಬಕೆಟ್ ಇಟ್ಕೊಂಡು ಅಲ್ಲ..

 

ಸಾಧನೆಗೆ ಅವಮಾನ ಕಾರಣ ಆಗುತ್ತೆ

 

ಬರೆಯುವ ಪೆನ್ನು ನಿನಾದರೆ ಬರೆದಿರುವ ಅಕ್ಷರಗಳು ಜೀವನ ಸೃಷ್ಟಿಸಬೇಕು. ಬಿತ್ತುವ ಬೀಜಗಳು ಯಾವದಾದರೇನು ಭೂಮಿತಾಯಿ ಫಲ ಕೊಟ್ಟೇಕೊಡುತ್ತಾಳೆ. ಜೀವನದಲ್ಲಿ ಎಷ್ಟೇಕಷ್ಟಗಳು ತೊಂದರೆಗಳು ಬಂದರು ಅದನ್ನಹೆದರಿಸುತ್ತಾ ನಾವು ಅಂದುಕೊಂಡ ಗುರಿ ತಲುಪಬೇಕು…

 

ಗುರಿ ತಲುಪಲು ದಾರಿ ಬೇಕಾದರೆ ಬದಲಿಸಿ… ಯಾವುದೇ ಕಾರಣಕ್ಕೂ ಗುರಿಯನ್ನು ಬದಲಾಯಿಸಬೇಡಿ..

 

ಮೊದಲು ಅವರು ನಮ್ಮನ್ನು ನೋಡಿ ನಗುತ್ತಾರೆ… ನಂತರ ಅವರೇ ನಮ್ಮ ಸಲಹೆಯನ್ನು ಕೇಳುತ್ತಾರೆ, ತಾಳ್ಮೆಯಿಂದ ಸಾಧನೆ ಸಾಧ್ಯ…!

 

ಈ ನಶ್ವರ ಜಗದಲ್ಲಿ ಎಲ್ಲವೂ ಮಾಯೆ ಅಂತ ಗೊತ್ತಿದ್ದರೂ ಬದುಕೋದಕ್ಕೋಸ್ಕರ ಗೋಸುಂಬೆತರ ಗಳಿಗೆಗೊಂದು ಬಣ್ಣ ಬದಲಾಯಿಸೋ ಕಳ್ಳ, ಸುಳ್ಳ ಮೋಸಗಾರರೂ, ನಾಲಿಗೆ ಮಾರಿ ಬದುಕೋರು ಅಹಂಕಾರದಿಂದ,ಮೋಹದಿಂದ ಮೆರಿಯೋರ ಮಧ್ಯ ನಾವು ನಮ್ಮತನನಾ ಉಳಿಸ್ಕೊಂಡು ನಾವು ನಾವಾಗಿರೋದೆ ಒಂದು ದೊಡ್ಡ ಸಾಧನೆ…!!

 

ಸಾಧನೆ ಎಂದರೇನು…!! 

ಜೀವನದಲ್ಲಿ ಬೇರೇನೂ ಬೇಡ ನಿನ್ನ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ‘ಸಾರ್ಥಕವಾಯಿತು ಎಂದೆನಿಸಿಕೋ ಸಾಕು ಅದೇ ನಿನ್ನ ಅದ್ಭುತ ಸಾಧನೆ..!

 

ಜೀವನದಲ್ಲಿ ಖುಷಿಯಾಗಿ ಇರಬೇಕು ಅಂದ್ರೆ, ಬಂ

ದಂತೆ ಬದುಕಬೇಕು, 

ನುಡಿದಂತೆ ನಡೆಯಬೇಕು, 

ಗೆದ್ದರೂ ಬಾಗಬೇಕು, 

ನಮ್ಮ ವಾದ ಸರಿ ಇದ್ದರೂ ಸುಮ್ಮನಾಗಬೇಕು, 

ನಮ್ಮ ತಪ್ಪು ಇಲ್ಲದಿದ್ದರೂ ಕ್ಷಮೆ ಕೇಳಬೇಕು, 

ಮನಸಿನಲ್ಲಿ ನೋವಿದ್ದರೂ ಮುಖದಲ್ಲಿ ಮಂದಹಾಸ ಇರಬೇಕು, 

ಸೋತರೂ ಮತ್ತೆ ಪ್ರಯತ್ನಿಸಬೇಕು, 

“ಆಸೆ” ಗುರಿಯನ್ನು ಮುಟ್ಟುವಂತಿರಬೇಕು! 

“ಗುರಿ” ಜೀವನವನ್ನು ಕಲಿಸುವಂತಿರಬೇಕು

 

ಗುರಿಯಿದ್ಧು ಪ್ರಯತ್ನಿಸದೇ ಇದ್ದರೆ ಅದು ಬರೀ ಕನಸು. ಗುರಿಯಿಲ್ಲದೆ ಪ್ರಯತ್ನಿಸುವುದು ಟೈಮ್ ಪಾಸ್. ಗುರಿ ಹಾಗೂ ಪ್ರಯತ್ನ ಎರಡು ಇದ್ದರೆ ನೀವು ಜಗತ್ತನ್ನೇ ಬದಲಾಯಿಸಬಹುದು.

 

ದುಡ್ಡಿಲ್ಲದವ ಬಡವನಲ್ಲ. ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ.

 

ಬಂಡಿಯಿಂದ ಬೆಂದು ಹೊರಬಂದಾಗ ಮಾತ್ರ ಊಟ ಎಂದು ಪರಿಗಣಿಸಲಾಗುವುದು… 

ಹಂಗೆನೇ ಸೋತು ಗೆದ್ದಾಗ ಮಾತ್ರ ಸಾಧನೆ ಎಂದೆನಿಸುವುದು.

 

ಕನಸು ಕಾಣಲು ಚಿಂತೆಯಿಲ್ಲದ ನಿದ್ದೆ ಬೇಕು, 

ಗುರಿ ಸೇರಲು ನಿದ್ದೆಯ ಚಿಂತೆ ಬಿಡಬೇಕು. 

ಇದೇ ಕನಸಿಗೂ, ಗುರಿಗೂ ಇರುವ ವ್ಯತ್ಯಾಸ.

 

“ಸಮಯ” ಯಾರ ಕೈಯಲ್ಲೂ ಇಲ್ಲ. 

ಇವತ್ತು ಅವರದ್ದು ನಾಳೆ ಇನ್ನೊಬ್ಬರದ್ದು. 

ಸಂಯಮದಿಂದ ಸಮಯವನ್ನು ಹಿಂಬಾಲಿಸಿ ಬದುಕು ಸಾಗಿಸುವುದೇ “ಸಾಧನೆ”…!

 

ನಂಬಿಕೆಯಿಡು ನಿನ್ನ ಬಲದಲ್ಲಿ.. 

ಬೆಳಕು ಕಾಣುವುದು ಅಂತರಂಗದ ಆಳದಲ್ಲಿ..‌‌ 

ಭರವಸೆಯಿಡು ನಿನ್ನ ಛಲದಲ್ಲಿ.. 

ಯಶಸ್ಸು ಅಡಗಿಹುದು, ಬದುಕಿನ ಗುರಿ ತಲುಪುವ ಖುಷಿಯಲ್ಲಿ.. 

 

ಹಣೆಬರಹಕೆ ಹೊಣೆ ಯಾರು ಎಂದು ಕುಳಿತರೆ ಜೀವನ ನಡೆಸುವುದು ಕಷ್ಟ ಸಾಧ್ಯ. ಬಿದ್ದವನೆ ಮೇಲೇಳಲು ಸಾಧ್ಯ ಸೋತವನೆ ಗೆಲುವ ಬೆನ್ನತ್ತಬೇಕು ಒಂದು ಕನಸು ಒಂದು ಗುರಿ ಮನಸಲಿ ಇದ್ದರೆ ಸಾಕು ಸಾಧಿಸಲು ಅಸಾಧ್ಯ ಯಾವುದಿಲ್ಲ. ಗುರಿ ಇಲ್ಲದಿರೆ ಛಲವಿಲ್ಲದಿರೆ ಈ ಜೀವನ ಪೂರ್ತಿ ಸಾಲದು ದೂರಲು ಹಣೆಬರಹವ ಕಾರಣಗಳ ನೆಪ ಬೇಡ ಸಾಧನೆಯ ಹಾದಿಯಲಿ… ಸಾಧಿಸಿದವನಿಗೆ ಸಾವಿಲ್ಲ ಜಗದಲಿ.

 

ಯಶಸ್ಸು ಗಳಿಸಿರುವ ವ್ಯಕ್ತಿ ಯಾವತ್ತೂ ಸುಖ ಬೇಕು, ಖುಷಿ ಬೇಕು ಅಂತಾ ಅವನ ಕೆಲಸ ಪ್ರಾರಂಬಿಸಿರಲ್ಲ. ಅವನ ಮುಂದೆ ಒಂದು ಸ್ಪಷ್ಟವಾದ ಗುರಿ ಇರುತ್ತೆ, ಅದನ್ನೇ ತಪಸ್ಸಿನಂತೆ ಆಚರಿಸಿ ಯಶಸ್ಸು ಪಡೆದಿರುತ್ತಾನೆ. ನೀವು ಮತ್ತು ನಿಮ್ಮ ಗುರಿ, ಅಷ್ಟೇ ಮುಖ್ಯ.

 

నిల్లದಿರು ಗುರಿ ಮುಟ್ಟುವತನಕ. 

ಅವಮಾನ ಮಾಡಿರುವವರೆಲ್ಲಾ ಎದ್ದುನಿಂತು ಚಪ್ಪಾಳೆ ತಟ್ಟುವ ತನಕ.

 

ಗುರಿ ಮುಟ್ಟುವ ಹತ್ತಿರ ಬಂದಾಗಲೇ ಕಿರಿಕಿರಿ ಹೆಚ್ಚು. 

ಹಿಂದಿರುಗಿ ಓಡಿದರೆ ಸಾಗಿದ್ದಷ್ಟೂ ವ್ಯರ್ಥ. 

 

ಮಾರ್ಗ ನಾವೇ ಆರಿಸಿಕೊಂಡ ಮೇಲೆ ನಾವೇ ಹೆಜ್ಜೆ ಹಾಕಬೇಕು. ಗುರಿ ಮುಟ್ಟಲೇಬೇಕಲ್ಲ..

 

ಜೀವನದಲ್ಲಿ ಸಾಧನೆ ಎಂಬ ಶಿಲೆಯ ಕೆತ್ತಲು, ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವು ಒಂದೊಂದು ಉಳಿಪೆಟ್ಟು ಇದ್ದಂತೆ….. ಸಾಧಿಸುವ ತನಕ ಇದೆಲ್ಲದಕ್ಕೂ ಒಂದೇ ಉತ್ತರ ನಗು.

 

ಬದುಕಿನಲ್ಲಿಯು ನಿರಂತರತೆ ತುಂಬಾ ಮುಖ್ಯ ಸಾಧನೆ ಮಾಡಲು.

 

ಛಲ ಬಿಡದೆ ಶ್ರಮಿಸು, 

ತಪ್ಪದೆ ಗುರಿ ಸಾಧಿಸು, 

ನೀ ವ್ಯಯಿಸುವ ಹಣ ನಿನ್ನ ಶ್ರಮದಿಂದ ಬಂದದ್ದಾಗಿರಲಿ,

 

ಪ್ರಗತಿಯ ದಾರಿಯಲ್ಲಿ ನಡೆಯಿರಿ.. 

ಸೋಲುಗಳನ್ನು ಉದಾಸೀನ ಮಾಡದಿರಿ.. 

ಮರಳಿ ಯತ್ನ ಮಾಡಿ, ಶ್ರಮದಿ ಗುರಿ ಸೇರಿ.. 

ಕೈಕೊಟ್ಟ ಪ್ರೀತಿ ನೆನೆದು ಕೊರಗುತ್ತಾ, 

ಭಗ್ನ ಪ್ರೇಮಿಯಾಗಿ ನರಳದಿರಿ.. 

ವಿಫಲತೆಯನ್ನು ಅರಿತು, 

ತಿದ್ದಿ ತೀಡಿ,ಜೀವನದಲ್ಲಿ ತಲೆ ಎತ್ತಿ ಮುನ್ನಡೆಯಿರಿ ಕುಟುಂಬದ ಖುಷಿಗಾಗಿ…. 

 

ಜನನಕ್ಕೆ ಮರಣ ಇದ್ದೀರುತ್ತೆ ಸಾವಿಗೆ ಅಂಜುವುದೆಂದರೆ ಬದುಕಿನ ಅರ್ಥವನ್ನು ಕಳೆದುಕೊಂಡಂತೆ, ಹುಟ್ಟಿದವರಿಗೆಲ್ಲ ಸಾವು ನಿಶ್ಚಿತವೆಂಬ ಅರಿವಿದ್ದರೆ ಬದುಕಿಗೊಂದು ಹೊಸ ಆಯಾಮ ದೊರೆಯುತ್ತದೆ. ಹಾಗಾಗಿ ಸಾಧನೆ ಮಾಡಿದ್ರೆ ಹೆಸರು ಉಳಿಯುತ್ತದೆ.

 

ಜೀವನದಗ್ ಯಾವದರ ಹಿಂದೆ ಬಾಳ್ ಹೋಗಬ್ಯಾಡ್ರಿ…… ಸಾಧನೆ ಮಾಡ್ರಿ ಎಲ್ಲಾ ನಿಮ್ಮ ಹಿಂದ್ ಬರುತ್ತೆ……… 

 

ಒಬ್ಬರ ನೋಡಿ ಇನ್ನೊಬ್ಬರಿಗೆ ಜನರು ಹೇಳುವ ಮಾತುಗಳು ನೋಡಿ ಅವರು ಹೇಗೆ ಇವರು ಹೇಗೆ ಸಾಧನೆ ಮಾಡಿದ್ದಾರೆ ಎಂದು..,! 

ನದಿಗಳು ಹರಿಯುತ್ತೀವೆ, ಬೆಟ್ಟ ಗುಡ್ಡಗಳು ನಿಂತಿವೆ, ಗಿಡ ಮರಗಳು ಫಲ ಕೊಡುತ್ತಿವೆ….! 

ಇವೆಲ್ಲ ಸಾಧನೆ ಮಾಡೇ ಈ ಪ್ರಕೃತಿಯಲ್ಲಿ ಇವೇಯೆ..,?

 

ಕಳೆದ ಬಾರಿ ಆದ ತಪ್ಪನ್ನು ತಿದ್ದುಕೋ.

ಗೆದ್ದಾಗ ಅಹಂ ಪಟ್ಟವನ್ನು ಯಾವತ್ತು ಉಳಿಯಲ್ಲ ಸೋತಾಗ ಕುಸಿದು ಬೀಳುವವನು ಯಾವತ್ತು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರಿದಿರಲಿ ಸೋಲಿನ ನೋವು ಮನಸ್ಸಿಗೆ ತಾಕದಿರಲಿ. ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ನೀನು ನಿನ್ನ ಸೋಲಿಗೆ ಧೃತಿಗೆಡದೆ ಸೋಲಿನಿಂದ ಆದ ತಪ್ಪನ್ನು ತಿದ್ದುಕೋ , ಆ ತಪ್ಪು ಇನ್ನೆಂದು ಮರುಕಳಿಸದೆ ಗೆಲುವಿಗಾಗಿ ಹೋರಾಡಿ ಗುರಿ ಮುಟ್ಟುವ ಪ್ರಯತ್ನ ನಾವೆಲ್ಲ ಮಾಡಬೇಕು.

 

ಜಗತ್ತಿನಲ್ಲಿ ನಾವೂ ಏನು ಅನ್ನೋದು ಗೊತ್ತ ಆಗ್ಬೇಕು ಅಂದ್ರೆ ಏನಾದ್ರೂ ಒಂದು ಸಾಧನೆ ಮಾಡ್ಬೇಕು. ಆವಾಗಲೇ ಈ ಭೂಮಿ ಮೇಲೆ ಹುಟ್ಟಿದಕ್ಕೆ ಸಾರ್ಥಕ ವಾಗುವುದು ನಮ್ಮ ಜೀವನ.

 

Life Motivational Quotes in Kannada

ತಡವಾದರೂ ಪರವಾಗಿಲ್ಲ ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಇರಬೇಕು ಅದನ್ನು ಪೂರ್ಣಗೊಳಿಸಬೇಕು ಏಕೆಂದರೆ ಜನರು ನಿನ್ನ ಬಗೆಗಿಂತ ನಿನ್ನ ಯೋಗ್ಯತೆಯ ಬಗ್ಗೆನೆ ಜಾಸ್ತಿ ಕೇಳ್ತಾರೆ…

 

ಕೆಲವೊಬ್ಬರು ಬಕೆಟ್ ಹಿಡ್ಕೊಂಡೆ ಎಲ್ಲನೂ ಪಡ್ಕೊಂಬಿಟ್ಟಿರ್ತಾರೆ ಅದೇ ದೊಡ್ಡ ಸಾಧನೆ ಅನ್ಕೊಂಡಿರ್ತಾರೆ. ಪಾಪ ಅವರಿಗೆ ಗೊತ್ತಿಲ್ಲ ಅದು ನೀರಿನ ಮೇಲಿನ ಗುಳ್ಳೆಹಾಗೆ ಯಾವಾಗಾದ್ರೂ ಠುಸ್ ಅನ್ನಬಹುದು ಅಂತ..

 

ಅಸ್ಪಷ್ಟ ಗುರಿ ಇರುವ ವ್ಯಕ್ತಿ ಬಹುಬೇಗ ಗುರಿಯಿಂದ ಬೇರೆ ಕಡೆಗೆ ವಾಲುವ ಸಾಧ್ಯತೆ ಇದೆ. ಕಾರಣ, ಗುರಿಯ ಬಗ್ಗೆ ಯೋಚಿಸದೇ ಸದಾ ಸುಖ ಮತ್ತು ಮೋಜಿನ ಬಗ್ಗೆ ಯೋಚಿಸುತ್ತಿರುತ್ತಾನೆ. 

 

ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎಂಬ ಹಿರಿಯರ ತತ್ವವದ ಪ್ರಕಾರ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತೆ.

 

ಏನೋ ಗೆದ್ದು ಭೀಗಿ ಒಂದಷ್ಟು ದುಡ್ಡು ಸಂಪಾದಿಸಿ ದೌಲತ್ತಲ್ಲಿ ಓಡಾಡಿ ಸಿರಿ ಸಂಪತ್ತಲ್ಲಿ ನಾವೇನ್‌ ಕಮ್ಮೆ ಇಲ್ಲ ಅಂತ ಇನ್ನೊಬ್ಬರಿಗೆ ತೋರಿಸೋದೇ ಸಾಧನೆ ಅನ್ನೊಂಡಿದ್ದೆ… 

ಆದರೆ ಈಗ ಅನ್ನಿಸ್ತಿದೆ ನಿಯತ್ತಾಗಿ ಬದುಕಿ ನೆಮ್ಮದಿಯಾಗಿದ್ದು ಈ ಅದ್ಭುತವಾದ ಬದುಕನ್ನು ಸಂಪೂರ್ಣವಾಗಿ ಅನುಭವಿಸಿ ಒಳ್ಳೆಯತನವನ್ನು ಉಳಿಸಿ ಹೋಗುವುದೇ ನಿಜವಾದ ಸಾಧನೆ ಅಂತ..!!

 

ಮೌನವಾಗಿ ಪರಿಶ್ರಮಪಡಿ. ಮಾತನಾಡಬೇಕಾಗಿರುವುದು ನೀವಲ್ಲ ನಿಮ್ಮ ಸಾಧನೆ.

 

ಭವಿಷ್ಯದ ಬಗ್ಗೆ ಹೆದರಬಾರದು. ಕನಸುಗಳನ್ನು ನನಸ್ಸು ಮಾಡಲು, ಸದಾ ಕಾರ್ಯೋನ್ಮುಖರಾಗಿ, ಪ್ರಯತ್ನಿಸುತ್ತಿರಲೇಬೇಕು. ನಮ್ಮ ಗುರಿ ಮುಟ್ಟಲು,ಅಡ್ಡವಾಗಿ ಬರುವ ಎಲ್ಲಾ ತೊಂದರೆಗಳು,ಕಷ್ಟ ಕಾರ್ಪಣ್ಯಗಳನ್ನು ಎದೆ ಗುಂದದೆ,ಮೆಟ್ಟಿ ನಿಲ್ಲಬೇಕು. ನಾವು ಮಾಡುವ ಕೆಲಸಗಳು,ಎಂದಿಗೂ ನಮ್ಮ ಜೊತೆ ಇದ್ದು,ಕೈ ಹಿಡಿಯುತ್ತವೆ.

 

ನಿನ್ನಿಂದ ಅಸಾಧ್ಯ ಅಂದವ್ರ ಮುಂದೆ ನಿನ್ನಿಂದ ಸಾಧ್ಯ ಅನ್ನೋ ಹಾಗೆ ಬದುಕಬೇಕು ಅದೇ ನಮ್ಮ ಜೀವನದ ಮುಖ್ಯ ಗುರಿ ಆಗಬೇಕು.

 

ನಿಂದನೆಗೆ ಹೆದರಿ ನಿಮ್ಮ ಗುರಿ ಮರೆಯಬೇಡಿ…. 

ಯಾಕೆಂದರೆ ಗುರಿ ತಲುಪಿದೊಡನೆ ನಿಂದೆ ಮಾಡುವವರ ವರಸೆ ಬದಲಾಗುತ್ತದೆ.

 

ಕಣ್ಣು ಚದುರಿದರೆ ಗುರಿ ಮಾತ್ರ ತಪ್ಪುತ್ತದೆ.. 

ಮನಸ್ಸು ಚದುರಿದರೆ ಜೀವನದ ಹಾದಿ ತಪ್ಪುತ್ತದೆ.

 

ಫಲ ತುಂಬಿದ ಮರಕ್ಕೆ ಹೆಚ್ಚು ಕಲ್ಲು ಬೀಳುತ್ತೆ… ಬೆಳೆಯುವವನ ಕಾಲು ಎಳೆಯೋರು, ಟೀಕೆ ಮಾಡೋರು ಅನೇಕರಿದ್ದಾರೆ. ಯಾವದಕ್ಕೂ ಅಂಜದೇ ಗುರಿ ಸಾಧಿಸಿದ್ರೆ ಬದುಕು..!.

 

ಗುರಿ ತಲುಪಲು ಗೊಂದಲದ ಮನಸ್ಥಿತಿಯಲ್ಲಿ ಓಡುವುದಕ್ಕಿಂತ ನಿಧಾನವಾಗಿ ಎಲ್ಲರಿಂದಲೂ ಅನುಭವ ದಕ್ಕಿಸಿಕೊಳ್ಳುತ್ತ ದೃಢ ಹೆಜ್ಜೆಗಳನ್ನಿಡುವುದು ಜಾಣತನ!

 

ನಿಮಗೆ ನೀವೇ ಸವಾಲಾಗಬೇಕು. ಎತ್ತರದ ಗುರಿ ತಲುಪಲು ಇದಕ್ಕಿಂತ ಸೂಕ್ತ ಮಾರ್ಗ ಮತ್ತೊಂದಿಲ್ಲ.

 

ಗೆಲುವು ಮತ್ತು ಯಶಸ್ಸು ಎನ್ನುವುದು ನೆರಳಿನ ತರಹ. ಅದನ್ನು ಹಿಡಿಯಲು ಪ್ರಯತ್ನಿಸಬಾರದು. ನಮ್ಮ ದಾರಿಯಲ್ಲಿ ನಾವುಗಳು,ನಮ್ಮ ಪ್ರಖರ ಗುರಿ ಮತ್ತು ಧ್ಯೇಯದೊಂದಿಗೆ ಸಾಗುತ್ತಿದ್ದರೆ,ಅವುಗಳು ತನ್ನಷ್ಟಕ್ಕೆ ತಾವುಗಳು,ನಮ್ಮ ಹಿಂದೆ ಬರುತ್ತವೆ.

 

ಬದುಕೆಂದರೆ ಹೋರಾಟವೇ, ಗೆಲುವೇ ಗುರಿ. ಸೋಲನ್ನೇ ಮರೆತು ಮುನ್ನುಗ್ಗುತ್ತಿರಿ.

 

Motivational Quotes in Kannada For Students

ಸಂತೋಷವೇ ಯಶಸ್ಸಿನ ಕೀಲಿಕೈ. ಸಂತೋಷವೇ ಬೀಜ, ಯಶಸ್ಸು ಗಿಡ, ಸಂತೋಷವು ಜೀವನದ ಕೀಲಿಕೈ. ಮನಸ್ಸು ಶಾಂತವಾಗಿದ್ದರೆ ಯಾವುದೇ ಗುರಿ ಸಾಧ್ಯ. ಸಂತೋಷವೇ ಜೀವನದ ಅತ್ಯುತ್ತಮ ಸಾಧನೆ.

 

ಗುರಿ ಏನೇ ಇರಲಿ, ಪ್ರಯತ್ನಕ್ಕೆ ಹಿಂಜರಿಕೆ ಬೇಡ. ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆ, ಯಶಸ್ಸು ಎಂಬುದು ಯಾರ ಸೊತ್ತೂ ಅಲ್ಲ. ಅದಕ್ಕೆ ಗ್ರಾಮೀಣ, ಬಡತನ ಎಂಬ ಯಾವ ಭೇದಭಾವವೂ ಇಲ್ಲ. ಮೂದಲಿಕೆಯ ಮಾತುಗಳನ್ನೇ ಯಶಸ್ಸಿಗೆ ಬಳಸಿಕೊಳ್ಳಿ. ಸಾಧನೆಗೆ ನೋವನ್ನೇ ಶಕ್ತಿಯಾಗಿ ಮಾಡಿಕೊಳ್ಳಿ.

 

ಗುರಿ ಗುಪ್ತವಾಗಿರಲಿ, ಸಾಧನೆ ಸತತವಾಗಿರಲಿ..  

ಸತ್ತ ಮೇಲೆ ಮಲಗುವುದು ಇದ್ದಿದ್ದೆ. ಬದುಕಿರುವಾಗ ಏನಾದರೂ ಸಾಧನೆ ಮಾಡೋಣ.

 

ಗುರಿ ಮಾತಿನಲ್ಲಿ ಇರುವುದಕ್ಕಿಂತ ಕೆಲಸದಲ್ಲಿ ಇರಬೇಕು! ಬಾಯಿ ಬಡಾಯಿ ಸಾಧನೆ ಶೂನ್ಯ

 

ನೀವು ಹೊರಟ ಸಾಧನೆಯ ಪಥದಲ್ಲಿ ಅನೇಕ ಅಡ್ಡಿ-ಆತಂಕಗಳಿವೆ ಅಂದ್ರೆ ಗುರಿ ಸಾಧನೆ ಅಸಾಧ್ಯ ಎಂದಲ್ಲ. ಅಡ್ಡಿ-ಆತಂಕಗಳನ್ನು ನಿವಾರಿಸಿಕೊಂಡರೆ ಗುರಿ ತಲುಪಬಹುದು. ಕಷ್ಟಗಳ ಬಗ್ಗೆ ಯೋಚಿಸಿದರೆ ಅದೊಂದೇ ಕಾಣುತ್ತದೆ. ಪರಿಹಾರದ ಬಗ್ಗೆ ಯೋಚಿಸಿದರೆ ದಾರಿ ತೆರೆದುಕೊಳ್ಳುತ್ತಾ ಹೋಗುತ್ತದೆ.!!

 

ಈ ಭಯ ಅನ್ನೋದು ವೈರೆಸ್ ಇದ್ದ ಹಾಗೆ.

ನಮ್ಮಲ್ಲಿರುವ ಆತ್ಮವಿಶ್ವಾಸ,ಧೈರ್ಯವನ್ನು ಸಾಯಿಸಿ ನಮ್ಮ ಜೀವನದ ಗುರಿ ತಲುಪುವ ಹಾದಿಯನ್ನುಕಠಿಣಗೊಳಿಸುತ್ತದೆ. ಯಾವಾಗ ಮನುಷ್ಯ ತನ್ನಲ್ಲಿನ ಭಯವನ್ನು ನಿಯಂತ್ರಿಸಲು ಕಲಿಯುತ್ತಾನೋ, ಅಂದು ಆತ ಸಾಧನೆ ಎಂಬ ಮೆಟ್ಟಿಲನ್ನು ಸುಲಭವಾಗಿ ಏರಬಹುದು.

 

ಗೆದ್ದಿರುವ ಕಥೆಯಲ್ಲಿ ಗುರಿ ಹಾಗೂ ಸಾಧನೆ ಇರುತ್ತೆ, ಸೋತ ಕಥೆಯಲ್ಲಿ ಜೀವನ ಇರುತ್ತದೆ…

 

ಹೊಸ ವರ್ಷ ಅಂತ ತುಂಬಾ ಉತ್ಸಾಹ ಪಡುವ ಅವಶ್ಯಕತೆಯಿಲ್ಲ. ಬದಲಾಗುತ್ತಿರೋದು ಕ್ಯಾಲೆಂಡರ್ ಅಷ್ಠೆ ಜೀವನದ ಗುರಿ, ಸಾಧನೆ, ಸಂಬಂಧಗಳೆಲ್ಲಾ ಯಥಾಸ್ಥಿತಿಯಲ್ಲೇ ಇರತ್ತೆ. ಒಂದು ದಿನ ಖುಷಿಪಡೋಕೆ ಹೊಸವರ್ಷ ಅಂತ ಆಚರಿಸುವ ಬದಲು ಜೀವನವಿಡೀ ಖುಷಿಯಾಗಿರೋಕ್ಕೆ ಹೊಸ ಹೊಸ ಆಲೋಚನೆಗಳನ್ನು ಮಾಡುವುದು ಒಳ್ಳೆಯದು…

 

ಬೇಡದ ಮಾತುಗಳಿಗೆ ಕಿವಿಗೊಟ್ಟರೆ, ಕಣ್ಣಿನ ಗುರಿ ತಪ್ಪುತ್ತದೆ.. ಒಳ್ಳೆಯತನ ಮನಸ್ಸಿನಲ್ಲಿರಲಿ.. ಪ್ರತಿಯೊಂದು ಹೆಜ್ಜೆ ಗುರಿ ಸಾಧನೆ ಕಡೆಗಿರಲಿ.. 

 

ಅವಮಾನ,ನಿಂದನೆ, ಟೀಕೆ, ವಿಮರ್ಶೆ ಇವೆಲ್ಲವುಗಳನ್ನು ತಾಳ್ಮೆಯಿಂದ ಸಹಿಸಿ ನಗುಮುಖದಿಂದ ಸ್ವಾಗತಿಸಿ ಮುನ್ನಡೆದರೆ ಮಾತ್ರ ಗುರಿ ಸಾಧನೆ ಸಾಧ್ಯ .

 

ನಿಮ್ಮ ಗುರಿಗಳಿಗೆ ಹೊಂದಿಕೆಯಾಗದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ತಪ್ಪು ದಿಕ್ಕಿನಲ್ಲಿಟ್ಟ ಏಣಿ ಏರಿದರೆ ತಪ್ಪು ಸ್ಥಳ ತಲುಪುವುದು ಖಚಿತ. ಹಾಗಾಗಿ ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ಅರಿತು, ಅವುಗಳಿಗೆ ಪೂರಕವಾಗುವ ಕೆಲಸಗಳನ್ನು ಮಾಡಿ. ಇತರರ ಕನಸುಗಳನ್ನು ಬೆನ್ನಟ್ಟುವ ಬದಲು ನಿಮ್ಮ ಸ್ವಂತ ಕನಸುಗಳನ್ನು ನನಸಾಗಿಸುವತ್ತ ಗಮನ ಹರಿಸಿ. ನಿಮ್ಮನ್ನು ಗುರಿಯಿಂದ ದೂರ ಸರಿಸುವ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಗುರಿ ಸಾಧನೆಗೆ ಸಹಾಯಕವಾಗುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

ಮೊದಲಿಗೆ ನಿಮ್ಮ ಗುರಿ ಏನು, ನೀವೇನು ಮಾಡಬೇಕೆಂದು ಬಯಸುತ್ತೀರಿ ಎಂಬುದು ನಿಮಗೆ ಸ್ಪಷ್ಟವಾಗಬೇಕು. ಒಮ್ಮೆ ನಿಮ್ಮ ಗುರಿ ಮತ್ತು ದಾರಿ ಏನು ಎಂಬುದು ಸ್ಪಷ್ಟವಾದರೆ, ಆ ಗುರಿಗೆ ಹತ್ತಿರವಾಗುವುದಕ್ಕೆ ಪ್ರಯತ್ನಿಸುತ್ತೀರಿ. ಇದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಕೆಲವೊಮ್ಮೆ ಯಶಸ್ವಿಯಾಗಬಹುದು, ಕೆಲವೊಮ್ಮೆ ಸೋಲನ್ನೂ ಕಾಣಬಹುದು. ಹಾಗಂತ ಎದೆಗುಂದಬಾರದು. ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ನಿಮ್ಮ ಗುರಿ ಮುಟ್ಟುಬಹುದು. ಹಾಗಂತ ಎಲ್ಲವೂ ಮುಗಿಯಿತು ಎಂದಲ್ಲ. ಈ ಇದೊಂದು ಚಕ್ರ ಇದ್ದಂತೆ. ಸತತವಾಗಿ ತಿರುಗುತ್ತಲೇ ಇರಬೇಕು.

ನಮ್ಮ ಈ ಪ್ರೇರಣಾದಾಯಕ ಸಂದೇಶಗಳ ಸಂಗ್ರಹ ಲೇಖನ (motivational quotes in kannada) ನಿಮಗೆ ಸ್ಪೂರ್ತಿ ನೀಡಿದೆ ಎಂದು ನಾವು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಲೇಖನಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿಯಾಗುತ್ತಿರಿ.

ಇದನ್ನೂ ಓದಿ:

Motivational Quotes Images in Kannada