“ನೀರು ಕೊಡದ ನಾಡಿನಲ್ಲಿ” (Neeru Kodada Nadinalli) ಪಾಠವು 8ನೇ ತರಗತಿಯ ಕನ್ನಡ ಪಠ್ಯದಲ್ಲಿ ಅತ್ಯಂತ ಮುಖ್ಯವಾದ ಅಧ್ಯಾಯವಾಗಿದೆ. ಈ ಪಾಠವು ನೀರಿನ ಮಹತ್ವ, ಮಾನವೀಯತೆ ಮತ್ತು ಪ್ರವಾಸದ ವೇಳೆಯಲ್ಲಿ ಹೆಚ್ಚುತ್ತಿರುವ ಬದಲಾವಣೆಗಳನ್ನು ಕುರಿತು ಅರ್ಥಪೂರ್ಣ ಸಂದೇಶವನ್ನು ಒದಗಿಸುತ್ತದೆ. ಈ ಪಾಠದ ಪ್ರಶ್ನೋತ್ತರಗಳಲ್ಲಿ ನೀರಿನ ಆವಶ್ಯಕತೆಯ ಬಗ್ಗೆ ದೀರ್ಘ ಚರ್ಚೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ನೈತಿಕ ದೃಷ್ಠಿಕೋನದಲ್ಲಿ ಚಿಂತನೆಗೆ ಪ್ರೇರಣೆ ನೀಡುತ್ತದೆ. ಈ ಪಾಠಕ್ಕೆ ಸಂಬಂಧಿಸಿದ 8ನೇ ತರಗತಿ “ನೀರು ಕೊಡದ ನಾಡಿನಲ್ಲಿ” ಪಾಠದ ನೋಟ್ಸ್, ಪ್ರಶ್ನೋತ್ತರಗಳು ಮತ್ತು ವ್ಯಾಕರಣ ಚಟುವಟಿಕೆಗಳನ್ನು ಪುಟದಲ್ಲಿ ಸರಳವಾಗಿ ವಿವರಿಸಲಾಗಿದೆ.
ಈ ಪಾಠದ ಮೂಲಕ, ವಿದ್ಯಾರ್ಥಿಗಳಿಗೆ ಜೀವನದ ಮೂಲ ಆಧಾರವಾಗಿರುವ ನೀರಿನ ಮಹತ್ವವನ್ನು ತಿಳಿಸಿಕೊಡಲಾಗುತ್ತದೆ. ಲೇಖಕಿ ಶ್ರೀಮತಿ ನೇಮಿಚಂದ್ರ ಅವರ ಈ ಕುತೂಹಲಕಾರಿ ಬರಹವು ಸಮಾಜದಲ್ಲಿ ನೀರಿನ ತಮ್ಮತ್ವದ ಅನುಭವವನ್ನು ಒಳಗೊಂಡಿರುತ್ತದೆ. “neeru kodada nadinalli 8th std kannada lesson” ನೋಟ್ಸ್ ಮತ್ತು ಪ್ರಶ್ನೋತ್ತರಗಳನ್ನು ಗಮನಿಸುತ್ತಾ, ವಿದ್ಯಾರ್ಥಿಗಳಿಗೆ ಪಾಠದ ಅರ್ಥವನ್ನು ಅಧಿಕವಾಗಿ ಮನಸುಗಾಣಿಸುವ ಪ್ರಯತ್ನ ಮಾಡಲಾಗಿದೆ. “8th Standard Niru Kodada Nadinalli Notes” ವಿದ್ಯಾರ್ಥಿಗಳ ಪಾಠಾಭ್ಯಾಸವನ್ನು ಸುಲಭಗೊಳಿಸುತ್ತದೆ ಮತ್ತು ಪಾಠದ ಒಳಗಿನ ತತ್ವಗಳನ್ನು ಹೆಚ್ಚು ಸಮರ್ಥವಾಗಿ ಅರ್ಥೈಸಲು ನೆರವಾಗುತ್ತದೆ.
Table of Contents
ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್ | Neeru Kodada Nadinalli Kannada Notes
8ನೇ ತರಗತಿ “ನೀರು ಕೊಡದ ನಾಡಿನಲ್ಲಿ” ಪಾಠದ ನೋಟ್ಸ್ ಮತ್ತು ಪ್ರಶ್ನೋತ್ತರಗಳನ್ನು PDF ರೂಪದಲ್ಲಿ ಡೌನ್ಲೋಡ್ ಮಾಡುವ ವ್ಯವಸ್ಥೆಯೂ ಇದೆ. “Neeru Kodada Nadinalli Kannada Notes” ಅಧ್ಯಾಯವು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತದೆ. ಈ ಪಾಠದ ನೋಟ್ಸ್, ವಿದ್ಯಾರ್ಥಿಗಳಿಗೆ ಕೇವಲ ಅಧ್ಯಾಯದ ಸಾರಾಂಶವನ್ನೇ ಅಲ್ಲ, ಭಾಷಾ ವ್ಯಾಕರಣದ ದೃಷ್ಟಿಯಿಂದಲೂ ಚಿಂತನೆಗೆ ಕೊಡುಗೆ ನೀಡುತ್ತದೆ. ಇದನ್ನು “Class 8 Kannada Chapter 2 Notes” ಎಂಬಂತೆ ಕೂಡ ಮಾಡಲಾಗಿದೆ, ಇದು ವಿದ್ಯಾರ್ಥಿಗಳು ಸುಲಭವಾಗಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.
8th Standard Kannada Notes – Neeru Kodada Nadinalli
ನೇಮಿಚಂದ್ರ ಕವಿ ಪರಿಚಯ
ಹೆಸರು | ಶ್ರೀಮತಿ ನೇಮಿಚಂದ್ರ |
ಜನ್ಮ ದಿನ | ಜುಲೈ 16, 1959 |
ಜನ್ಮ ಸ್ಥಳ | ಚಿತ್ರದುರ್ಗ |
ತಾಯಿ-ತಂದೆ | ಜಿ. ಗುಂಡಪ್ಪ ಮತ್ತು ತಿಮ್ಮಕ್ಕ |
ಪ್ರಮುಖ ಕೃತಿಗಳು | ಯಾದ್ ವಶೇಮ್ – ಕಾದಂಬರಿ, ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೇ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ (ಪ್ರವಾಸ ಕಥನ) |
ಪ್ರಶಸ್ತಿ ಮತ್ತು ಪುರಸ್ಕಾರಗಳು | ಕರ್ನಾಟಕ ಸಾಹಿತ್ಯ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ |
ಪ್ರಸ್ತುತ ಕೃತಿ | ‘ನೀರು ಕೊಡದ ನಾಡಿನಲ್ಲಿ’ ಅಂಕಣ ಬರೆಹವು ಬದುಕು ಬದಲಿಸಬಹುದು ಕೃತಿಯ ಭಾಗವಾಗಿದೆ. |
ನೀರು ಕೊಡದ ನಾಡಿನಲ್ಲಿ ಗದ್ಯದ ಪ್ರಶ್ನೋತ್ತರಗಳು | Neeru Kodada Nadinalli Question Answer
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?
ಉತ್ತರ: ಯುರೋಪ್ ರಾಷ್ಟ್ರಗಳಲ್ಲಿ ಮತ್ತು ಅಮೇರಿಕಾದಲ್ಲಿ ಎಲ್ಲಿಯೂ ನೀರು ಕೊಡುವ ಸಂಪ್ರದಾಯವಿಲ್ಲ.
ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
ಉತ್ತರ: ಮನೆಗೆ ಬಂದವರನ್ನು ತಣ್ಣನೆಯ ನೀರು ತಂದು ಕೊಟ್ಟು ಉಪಚರಿಸುವ ಅಥವಾ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ.
ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
ಉತ್ತರ: ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಕೋಲಾ ಸಿಗುತ್ತದೆ.
ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ?
ಉತ್ತರ: ಭಾರತದಲ್ಲಿ ಇತ್ತೀಚೆಗೆ ಬಾಟಲಿಯಲ್ಲಿ ನೀರನ್ನು ಕೊಂಡು ಕುಡಿಯುವ ಹುನ್ನಾರ ನಡೆದಿದೆ.
ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
ಉತ್ತರ: ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲೆಂಟೈನ್ಸ್ ಡೇ ಆಚರಣೆಯಲ್ಲಿ ಗಿಫ್ಟ್ ಮತ್ತು ಗ್ರೀಟಿಂಗ್ ಕಾರ್ಡ್ ಮಾರಾಟ ಮಾಡುವ ಹೊಸ ಹುನ್ನಾರ ಎಂಬ ಅಂಶಗಳು ಸರ್ವರಿಗೂ ವೇದ್ಯವಾಗಿದೆ.
ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು?
ಉತ್ತರ: ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರಿ ಬಾಯಲ್ಲ, ಮನಸ್ಸೂ ತಂಪಾದ ಅನುಭವವಾಯಿತು.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
ಉತ್ತರ : ನಮ್ಮ ದೇಶದಲ್ಲಿ ಸಿಗುವಂತೆ ಬಾಯಾರಿಕೆಯಾದಾಗ ನೀರು ಸಿಗುವುದಿಲ್ಲ. ಮತ್ತು ನೀರು ಕೊಡುವ ಸಂಪ್ರದಾಯವಿಲ್ಲ. ವಿದೇಶಗಳಲ್ಲಿ ಬಾಯಾರಿಕೆಗೆ ಕೋಲಾಗಳು, ಫ್ರೆಂಚ್ ವೈನ್, ಬಿಯರ್, ಬಾಟಲಿಯಲ್ಲಿ ಹಣ್ಣಿನ ರಸ ಧಾರಾಳವಾಗಿ ದೊರೆಯುತ್ತವೆ.
ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು?
ಉತ್ತರ : ಲೇಖಕಿಯವರು ವಿದೇಶಕ್ಕೆ ಹೋಗಲು ದೆಹಲಿಗೆ ಬಂದಿದ್ದರು. ರೋತಕ್ ರಸ್ತೆಯ ಅವರ ಅತ್ತೆಯ ಮನೆಗೆ ಹೋಗುವಾಗ ಗುರುದ್ವಾರಗಳ ಬಳಿ ನೀರಿನ ದೊಡ್ಡ ಕೊಳಾಯಿ ಹಿಡಿದು ನಿಲ್ಲಿಸಿದ ಆಟೋ, ಬಸ್ ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ತುಂಬಿ ಕುಡಿಸುತ್ತಿದ್ದರು.
ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
ಉತ್ತರ : ಕೋಲಾಗಳ ಆಸೆಯಿಂದ ನಾವು ಮುಖ್ಯವಾಗಿ ನೀರು ಕುಡಿಯುವುದನ್ನೇ ತೊರೆಯುತ್ತಿದ್ದೇವೆ. ಏಕೆಂದರೆ ಕೋಲಾಗಿಂತ ನೀರಿಗೆ ಹೆಚ್ಚು ಬೆಲೆ ಕೊಡಬೇಕು. ಅದರೊಂದಿಗೆ ರುಚಿಯಾದ ಮಜ್ಜಿಗೆ ಪಾನಕ, ಎಳನೀರು ಪಾನಕ, ಕಬ್ಬಿನಹಾಲು, ತಾಜಾ ಹಣ್ಣನ ರಸ ಎಲ್ಲವನ್ನು ತೊರೆದ ಕೋಲಾಗಳಿಗೆ ಮುಗಿ ಬೀಳುತ್ತಿದ್ದಾರೆ.
ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು?
ಉತ್ತರ : ಕೊಳ್ಳುಬಾಕತನ, ಲಾಭಕೋರತನದ ರೋಗಗಳು ಸಾಂಕ್ರಾಮಿಕವಾಗಿ ಎಲ್ಲ ಕಡೆಯೂ ಹರಡಿ, ಭಾರತಕ್ಕೂ ಲಗ್ಗೆಯಿಟ್ಟು ‘ಸಂಸ್ಕೃತಿಯ ಮೇಲೆ ದಾಳಿ’ ಮಾಡುತ್ತಿವೆ. ನಾಗರಿಕತೆ ಸಂಸ್ಕೃತಿಯ ದಾಳಿಯಿಂದ ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲೇಂಟೈನ್ ಡೇ ಆಚರಿಸುವುದು ಪ್ರೀತಿಯ ದ್ಯೋತಕದಿಂದ ಅಲ್ಲ. ಗಿಫ್ಟ್, ಗ್ರೀಟಿಂಗ್ ಕಾರ್ಡ್, ಮಾರುವ ಹೊಸ ಹುನ್ನಾರಕ್ಕಾಗಿ ಈ ಆಚರಣೆ ಲಾಭಕೋರತನ ಇದರ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಮಾರುಕಟ್ಟೆಗೆ ಬಂದ ವಸ್ತುಗಳೆಲ್ಲವೂ ಬೇಕೇಬೇಕು ಎಂಬ ದುರಾಸೆ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತವೆ.
ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪುಪಾನೀಯ ಕಂಪನಿ ಹೇಳಿದ್ದೇನು?
ಉತ್ತರ : ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪು ಪಾನೀಯದ ಕಂಪನಿಯೊಂದು ಆತನನ್ನು ಸಂಪರ್ಕಿಸಿ ‘ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ, ಇಷ್ಟು ಹಣ ಕೊಡುವುದಾಗಿ’ ಹೇಳಿತ್ತು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.
ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉತ್ತರ :
ನಮ್ಮ ನಾಡಿನಲ್ಲಿ ರೈಲು ನಿಲ್ದಾಣಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲೂ ‘ದುಡ್ಡಿಲ್ಲದೆ ಕುಡಿಯಬಲ್ಲ’ ನೀರನ್ನು ಇರಿಸುತ್ತಿದ್ದರು. ಬಾಯಾರಿದಾಗ ಈಗಲೂ ಹೋಟೆಲು ಒಂದಕ್ಕೆ ಹೋಗಿ ನೀರು ಕುಡಿದು ಬರಬಹುದು. ಮನೆಯ ಹೊರಗೆ ಕಾಂಪೌಂಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ “ದನಕರಗಳು ನೀರು ಕುಡಿದು ಹೋಗಲಿ” ಎಂದು ನೀರು ತುಂಬಿಡುತ್ತಿದ್ದರು. ಅಲ್ಲಲ್ಲಿ ಅಂಗಡಿಗಳಲ್ಲಿಯೂ ಸಹ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಡುತ್ತಿದ್ದರು. ಅನೇಕ ಗುರುದ್ವಾರದ ಬಳಿ ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು, ನಿಲ್ಲಿಸಿದ ಆಟೋ, ಬಸ್, ಹಾಗೂ ದಾರಿಹೋಕರಿಗೆಲ್ಲ ಉಚಿತವಾಗಿ ನೀರು ತುಂಬಿ ಕುಡಿಸುತ್ತಿದ್ದರು. ಇವೆಲ್ಲವನ್ನು ನಾವು ಕೇವಲ ಭಾರತದಲ್ಲಿ ಕಾಣುತ್ತೇವೆ. ಆದರೆ ವಿದೇಶಗಳಲ್ಲಿ ದುಡ್ಡು ಕೊಟ್ಟರೂ ಸಹ ನೀರು ಸಿಗುವುದಿಲ್ಲ.
ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ ಹೇಗೆ ಬಿಂಬಿಸುತ್ತಿವೆ?
ಉತ್ತರ : ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು, ನಂಬಿಕೆಗಳನ್ನು, ಮೌಲ್ಯಗಳನ್ನು, ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ಕೊಳ್ಳುಬಾಕತನ’. ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು, ಇಂದು ‘ಬೇಕು’ಗಳ ಬಲೆಗೆ ಬಿದ್ದಿದೆ. ಮಾರುಕಟ್ಟೆಗೆ ಬಂದದ್ದೆಲ್ಲವು ಬೇಕು. ಬೇಕುಗಳನ್ನು ‘ಅಗತ್ಯ’ಗಳಾಗಿ, ಜಾಹೀರಾತಿನಲ್ಲಿ ಕೊಳ್ಳುವಂತೆ ಬಿಂಬಿಸುತ್ತವೆ. ಆರಾಮ, ಐಷಾರಾಮದ, ಅಪ್ಪಟ ಅನಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ ಬಿಂಬಿಸುತ್ತಾರೆ. ‘ಡಿಓಡರೆಂಟ್’ ಹಾಕಿಕೊಳ್ಳದೆ ಇದ್ದರೆ ‘ತಾನು ನಾತ ಬಡಿಯುತ್ತೇನೆ’ ಎಂಬಷ್ಟು ಕೀಳಿರುಮೆಯನ್ನು ಹುಟ್ಟಿಸಬಲ್ಲರು. ಕೊನೆಗೆ ಎಲ್ಲವೂ ನಿಮ್ಮನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ.
ಲೇಖಕಿಗೆ ಬೆಂಗಳೂರಿನಲ್ಲಿ ‘ನೀರು ಕೊಡದ ಸಂಸ್ಕೃತಿಯ’ ಬಗ್ಗೆ ಆದ ಅನುಭವವನ್ನು ಬರೆಯಿರಿ.
ಉತ್ತರ : ಲೇಖಕಿ ಮತ್ತು ಅವರ ಮಗಳು ಮಹಾತ್ಮಗಾಂಧಿ ರಸ್ತೆಯ ‘ಬಾಂಬೆ ಬಜಾರ್’ ಎದುರಿನ ಪುಟ್ಟ ಜಾಯಿಂಟ್ನಲ್ಲಿ ಹೋಗಿ ಕುಳಿತರು. ಇಲ್ಲಿ ನೀರು ತಂದಿಡಲಿಲ್ಲ. ಐಸ್ಕ್ರೀಂ ತಿಂದ ಇವರು ‘ನೀರು ಬೇಕು’ ಎಂದು ಕೇಳಿದರು. ‘ಮಿನಿರಲ್ ವಾಟರ್?’ ವೇಟರ್ ಪ್ರಶ್ನಿಸಿದನು. ‘ಇಲ್ಲಪ್ಪ ಸಾಮಾನ್ಯ ನೀರು’ ಎಂದರು. ಮಾಯವಾದ ವೇಟರ್ ಹದಿನೈದು ನಿಮಿಷ ಕಾದರೂ ಬರಲೇ ಇಲ್ಲ. ಕಾದು ಕಾದು ಸುಸ್ತಾಗಿ ಕೊನೆಗೆ ಕೌಟರಿಗೇ ಹೋಗಿ, ಬಿಲ್ಲು ಕೊಟ್ಟು ಹೊರಬಿದ್ದರು. ಅದೇ ವೇಟರ್, ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುವುದು ಕಂಡಿತು. ‘ಮಿನರಲ್ ವಾಟರ್?’ ಎಂದವರು ಕೇಳುವ ಭಂಗಿ ಭಾವ ಹೇಗಿರುತ್ತದೆ ಎಂದರೆ ನಿಮಗೆ ‘ಆರ್ಡಿನರಿ ವಾಟರ್’ ಎಂದು ಹೇಳಲೂ ಹಿಂಜರಿಕೆಯಾಗಬೇಕು. ಮತ್ತೊಂದು ದಿನ ಮಾಲತಿಯೊಡನೆ ಇಂದಿರಾನಗರದ ಪುಟ್ಟ ಜಾಯಿಂಟ್ಗೆ ಹೋಗಿ ‘ಮಿಸಿಸಿಪಿ ಮಡ್ ಪೀ’ ಆರ್ಡರ್ ಮಾಡಿದರು. ದೊಡ್ಡ ಬಿಳಿ ಪಿಂಗಾಣಿ ತಟ್ಟೆಯಲ್ಲಿ ಕೇಕ್ ಮತ್ತು ಐಸ್ಕ್ರೀಂ ಇರಿಸಿ, ಮೇಲೆ ಕೋಕೋ ಪುಡಿ ಉದುರಿಸಿ ಆಕರ್ಷಕವಾಗಿ ತಂದಿಟ್ಟರು. ಇಲ್ಲೂ ನೀರು ಕೊಟ್ಟಿರಲಿಲ್ಲ. ‘ನೀರು ಕೊಡಿ’ ಎಂದರು ‘ಮಿನಿರಲ್ ವಾಟರ್?’ ಎಂದಳು ಸರ್ವ್ ಮಾಡುತ್ತಿದ್ದ ಹುಡುಗಿ. ‘ಇಲ್ಲ ಸಾಧಾರಣ ನೀರು’ ಎಂದರೆ, ನಮ್ಮಲ್ಲಿ ಸಾಧಾರಣ ನೀರು ಇಲ್ಲ ಎಂದಳು.
ಈ) ಖಾಲಿ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ:
- ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು ನೀರು ಕೊಡದ ನಾಡುಗಳು
- ಈ ದೇಶಗಳಲ್ಲಿ ಮನೆಯ ನಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ.
- ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ ಹುನ್ನಾರ ಗಳೆಂದು ಸರ್ವರಿಗೂ ವೇದ್ಯವಾಗಿದೆ.
- ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ಕೋಲಾ ನೀಡುತ್ತಾರೆ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಗಳು:
೧. ಗುಣಿತಾಕ್ಷರ ಎಂದರೇನು?
ಉತ್ತರ: ವ್ಯಂಜನಕ್ಕೆ ಸ್ವರ ಸೇರಿದಾಗ ಉಂಟಾಗುವ ಅಕ್ಷರವೇ ಗುಣಿತಾಕ್ಷರ.
೨. ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ.
ಉತ್ತರ: ಎರಡು ಅಥವಾ ಎರಡುಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಉಂಟಾಗುವ ಅಕ್ಷರವೇ ಸಂಯುಕ್ತಾಕ್ಷರ.
ಉದಾಹರಣೆ: ಅಪ್ಪ, ಅಮ್ಮ, ಅಕ್ಷರ, ಅಸ್ತ್ರ.
೩. ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ.
ಉತ್ತರ: ದೇಶ್ಯ ಪದಗಳು: ಕೈ, ಕಾಲು, ಬಾಯಿ, ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ಅಣ್ಣ.
ಅನ್ಯ ದೇಶ್ಯ ಪದಗಳು: ಕೋರ್ಟು, ಬ್ಯಾಂಕು, ಹಾರ್ಮೋನಿಯಂ, ಹೋಟೆಲು, ಅಲಮಾರು, ಸಾಬೂನು, ಮೇಜು.
೪. ಕನ್ನಡದಲ್ಲಿರುವ ಯಾವುದಾದರೂ ಐದು ತದ್ಭವ ಪದಗಳನ್ನು ಪಟ್ಟಿ ಮಾಡಿ.
ಉತ್ತರ: ತದ್ಭವ ಪದಗಳು: ಬಸದಿ, ಬೇಸಗೆ, ಕೊಡಲಿ, ಬಸವ, ಬಿನ್ನಣ.
೫. ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಉತ್ತರ:
ಹೋಟೆಲ್: ಹ್ + ಓ + ಟ್ + ಎ +ಲ್
ಮಾಲೀಕ: ಮ್ + ಆ + ಲ್ + ಈ + ಕ್ + ಅ
ರಸ್ತೆ: ರ್ + ಸ್ + ತ್ + ಎ
ಗ್ರಾಹಕ: ಗ್ + ರ್ + ಆ + ಹ್ + ಅ + ಕ್ + ಅ
ಇವರು: ಇ + ವ್ + ಅ + ರ್ + ಉ
ಪುಣ್ಯಾತ್ಮ: ಪ್ + ಉ + ಣ್ + ಯ್ + ಆ + ತ್ + ಮ್ + ಅ
೬. ಕೊಟ್ಟಿರುವ ಪದಗಳಲ್ಲಿರುವ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ಪದಗಳು: ದಿನಪತ್ರಿಕೆ, ಅಗತ್ಯ, ಅಮ್ಮ, ವಸ್ತು, ಪುಕ್ಕಟೆ, ಹಣ್ಣಿನರಸ, ನಿಲ್ದಾಣ, ಮಣ್ಣು, ಸಂಪ್ರದಾಯ, ಶುದ್ಧ, ಅಗ್ಗ, ಸಂಸ್ಕೃತಿ, ಪ್ರವಾಸ, ಶಕ್ತಿ, ಹುನ್ನಾರ.
ಉತ್ತರ:
- ಸಜಾತೀಯ ಸಂಯುಕ್ತಾಕ್ಷರಗಳಾಗಿರುವ ಪದಗಳು: ಅಮ್ಮ, ಪುಕ್ಕಟೆ, ಹಣ್ಣಿನರಸ, ಮಣ್ಣು, ಶುದ್ಧ, ಅಗ್ಗ, ಹುನ್ನಾರ, ಶಕ್ತಿ.
- ವಿಜಾತೀಯ ಸಂಯುಕ್ತಾಕ್ಷರಗಳಾಗಿರುವ ಪದಗಳು: ದಿನಪತ್ರಿಕೆ, ಅಗತ್ಯ, ವಸ್ತು, ನಿಲ್ದಾಣ, ಸಂಪ್ರದಾಯ, ಸಂಸ್ಕೃತಿ, ಪ್ರವಾಸ.
ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ
ವರ್ಷ, ಪ್ರಾಣ, ಶಕ್ತಿ, ಪುಣ್ಯ.
ಉತ್ತರ:
- ವರ್ಷ → ವರುಷ
- ಪ್ರಾಣ → ಹರಣ
- ಶಕ್ತಿ → ಶಕುತಿ
- ಪುಣ್ಯ → ಹೂನ.
ಕೊಟ್ಟಿರುವ ಪದಗಳಲ್ಲಿರುವ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಆರಿಸಿ ಬರೆಯಿರಿ
ದೊಡ್ಡದು, ಬಸ್ಸು, ಬರ್ಗರ್, ಪಾನಕ, ವಾಟರ್, ಸಣ್ಣ, ಹುನ್ನಾರ
ಉತ್ತರ:
- ದೇಶೀಯ ಪದಗಳು: ದೊಡ್ಡದು, ಪಾನಕ, ಸಣ್ಣ, ಹುನ್ನಾರ.
- ಅನ್ಯ ದೇಶೀಯ ಪದಗಳು: ಬರ್ಗರ್, ಬಸ್ಸು, ವಾಟರ್.
“ನೀರು ಕೊಡದ ನಾಡಿನಲ್ಲಿ” ಪಾಠವು ಮಾನವೀಯ ಮೌಲ್ಯಗಳು ಮತ್ತು ನೀರಿನ ಮಹತ್ವವನ್ನು ಮನದಟ್ಟುಗೊಳಿಸುವುದರಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತದೆ. 8ನೇ ತರಗತಿಯ ಈ ಪಾಠವು ಕೇವಲ ಆನಂದಕರ ಓದುದಾಗಿ ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಪರಿಪೂರ್ಣವಾದ ನೈತಿಕ ಮತ್ತು ಸಾಮಾಜಿಕ ಸಂದೇಶವನ್ನು ಒದಗಿಸುತ್ತದೆ. ನಮ್ಮ “ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್” ಮತ್ತು “Neeru Kodada Nadinalli Kannada Notes” ವಿದ್ಯಾರ್ಥಿಗಳು ಪಾಠದ ಅರ್ಥವನ್ನು ಸುಲಭವಾಗಿ ಗ್ರಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ನಮಗೆ ಈ ಲೇಖನದಿಂದ ನಿಮ್ಮ ಪಾಠಾಭ್ಯಾಸ ಸ್ಪಷ್ಟವಾಗಲು ಮತ್ತು ಪರೀಕ್ಷಾ ತಯಾರಿಗೆ ಸಹಾಯವಾಗಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ. ಈ ಲೇಖನ ಉಪಯುಕ್ತವಾಗಿದೆ ಎಂದು ನೀವು ಭಾವಿಸಿದರೆ, ದಯವಿಟ್ಟು ಈ ನೋಟ್ಸ್ಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. “8th Standard Neeru Kodada Nadinalli Notes Question Answer PDF Download in Kannada” ಪಿಡಿಎಫ್ ಲಿಂಕ್ಗಳ ಮೂಲಕ, ನೀವು ಪಾಠವನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು ಬಳಸುವಂತೆ ವಿನಂತಿಸುತ್ತೇವೆ.
ಇದನ್ನೂ ಓದಿ: 8th ಮಗ್ಗದ ಸಾಹೇಬ ಕನ್ನಡ ನೋಟ್ಸ್ | Maggada Saheba Kannada Notes
DearKannada.com ವೆಬ್ಸೈಟ್ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠಗಳು, ಪದ್ಯಗಳು, ಪಠ್ಯಪುಸ್ತಕಗಳ ನೋಟ್ಸ್ ಮತ್ತು ಪ್ರಶ್ನೋತ್ತರಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಈ ಜಾಲತಾಣವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡದ ಪಾಠಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ, ಕನ್ನಡ ವ್ಯಾಕರಣದ ಸಂಪೂರ್ಣ ವಿವರಣೆ ಮತ್ತು ಪಾಠ, ಪದ್ಯಗಳ ಕುರಿತಾದ ಪ್ರಶ್ನೋತ್ತರಗಳ ಮಾಹಿತಿಯೂ ಇಲ್ಲಿ ಲಭ್ಯವಿದೆ.
ಇದಲ್ಲದೆ, DearKannada.com ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಕನ್ನಡ ಗಾದೆಗಳು, ವಚನಗಳು, ಪ್ರಬಂಧಗಳು, ಭಾಷಣಗಳು, ಕವನಗಳು, ಓಗಟುಗಳು ಮತ್ತು ಹಾರೈಕೆ ಸಂದೇಶಗಳಂತಹ ವಿಷಯಗಳನ್ನು ಇಲ್ಲಿ ಓದಿ ತಿಳಿಯಬಹುದು. ಕನ್ನಡ ಕವಿ ಪರಿಚಯ, ಕವನಗಳ ವಿಶ್ಲೇಷಣೆ ಮತ್ತು ಗೀತೆಗಳ ಸಾಹಿತ್ಯ ಕೂಡ ಈ ವೆಬ್ಸೈಟ್ನಲ್ಲಿ ಲಭ್ಯವಿದೆ.
ಕನ್ನಡದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಸಾಹಿತ್ಯಾಸಕ್ತರು ಈ ಜಾಲತಾಣವನ್ನು ಬಳಸಿಕೊಂಡು ಕನ್ನಡ ಭಾಷೆಯ ವಿವಿಧ ಅಂಶಗಳನ್ನು ಆಳವಾಗಿ ತಿಳಿಯಬಹುದು. ಜೊತೆಗೆ ಕನ್ನಡ ಪುಸ್ತಕಗಳು ಮತ್ತು ಇತರ ಉಪಯುಕ್ತ ಮಾಹಿತಿಯೂ ಈ ವೆಬ್ಸೈಟ್ನಲ್ಲಿ ಲಭ್ಯವಿದೆ. DearKannada.com ನಿಮ್ಮ ಕನ್ನಡ ಅಧ್ಯಯನಕ್ಕೆ ಅತ್ಯುತ್ತಮ ಪೂರಕವಾಗಲಿದೆ!