ಅಮ್ಮನ ಕುರಿತು ಪ್ರೀತಿಯ ಕವನಗಳ ಸಂಕಲನ. ತಾಯಿ ಎಂಬ ಪದವೇ ಪ್ರೀತಿಯ ಸಂಕೇತ. ಅವಳ ಮಡಿಲು, ಅವಳ ಪ್ರೀತಿ, ಮತ್ತು ಅವಳ ತ್ಯಾಗವು ನಮ್ಮ ಜೀವನದ ಅಡಿಗಲ್ಲುಗಳಾಗಿ ನಿಂತಿವೆ. ಅಮ್ಮನ ಪ್ರೀತಿ ಶ್ರೇಷ್ಠ, ಅವಳ ತ್ಯಾಗ ಅಪ್ರತಿಮ, ಮತ್ತು ಅವಳ ಮಮತೆ ಅಮೂಲ್ಯ. ಈ ಪ್ರಪಂಚದಲ್ಲಿ ಯಾರನ್ನೂ ಮೀರಿಸುವ ಶ್ರೇಷ್ಠತೆಯು ತಾಯಿಯ ಹೃದಯದಲ್ಲಿದೆ. ಅಮ್ಮನ ಪ್ರೀತಿಗೆ ಹೋಲಿಕೆ ಇಲ್ಲ, ಅವಳ ಮಡಿಲು ಸ್ವರ್ಗದ ತಾಣ, ಮತ್ತು ಅವಳ ಮಾತುಗಳು ಶಾಂತಿಯ ಸಂಗೀತ.
ಈ ಲೇಖನದಲ್ಲಿ ತಾಯಿಯ ಮಹತ್ವವನ್ನು ಕೊಂಡಾಡುವ 50ಕ್ಕೂ ಹೆಚ್ಚು ಕವನಗಳ ಸಂಗ್ರಹವನ್ನು (collection of amma kavanagalu in kannada) ನಿಮ್ಮ ಮುಂದೆ ತಂದಿದ್ದೇವೆ. ಪ್ರತಿ ಕವನವು ತಾಯಿಯ ಪ್ರೀತಿ, ಅವಳ ತ್ಯಾಗ, ಮತ್ತು ನಮ್ಮ ಜೀವನದ ಮೇಲೆ ಅವಳ ಪ್ರಭಾವವನ್ನು ಸಾರುತ್ತದೆ. ಈ ಕವನಗಳು ನಿಮ್ಮ ಹೃದಯವನ್ನು ಸ್ಪರ್ಶಿಸುತ್ತವೆ ಮತ್ತು ತಾಯಿಯ ಮಹತ್ವವನ್ನು ಮತ್ತಷ್ಟು ಮನಗಾಣಿಸುತ್ತವೆ.
Table of Contents
50+ ಅಮ್ಮನ ಬಗ್ಗೆ ಕವನಗಳು | Best Amma Kavanagalu in Kannada
ತಾಯಿಯ ಬಗ್ಗೆ ಕವನಗಳು | Taayi Kavanagalu in Kannada
ಅಮ್ಮನ ಮಡಿಲು ಸ್ವರ್ಗವೆಂದರು,
ಅಲ್ಲಿ ನೆಲೆಸುವ ಪ್ರೀತಿ ಎಂದಿಗೂ ನಶಿಸದು.
ನಾನು ಅತ್ತಾಗ ಅವಳು ಅತ್ತಳು,
ನಾನು ನಕ್ಕಾಗ ಅವಳು ನಕ್ಕಳು.
ಅವಳ ಮಡಿಲಲ್ಲಿ ನಾ ಮಲಗಿದಾಗ,
ಬಿಸಿಲು, ಚಳಿ ಎಲ್ಲವೂ ಮರೆಯಾದವು.
ಅಮ್ಮನ ಪ್ರೀತಿ, ಅವಳ ತಾಯಿತನ,
ಎಂದಿಗೂ ಮರೆಯಲಾಗದು.
ತಾಯಿ ಎಂಬ ಪದವೇ ದೇವರ ಹೆಸರೇ,
ಅವಳ ಮಮತೆಗೆ ಹೋಲಿಕೆ ಇಲ್ಲವೇ.
ಸಾವಿರ ಜನ್ಮ ಬಂದರೂ ತೀರಿಸಲಾಗದು ಋಣವ,
ಅವಳ ಪ್ರೇಮವೇ ನನ್ನ ಜೀವನದ ಧ್ಯಾನವ.
ತನ್ನ ನೋವು ಮರೆತು ನನ್ನ ಹಾಸುಹೊಕ್ಕಿದಳು,
ನನ್ನ ಕನಸುಗಳಿಗೆ ಬಾಳು ಕೊಟ್ಟಳು.
ಎಲ್ಲಾ ದೇವರಿಗಿಂತ ಶ್ರೇಷ್ಠ, ತಾಯಿಯ ಪ್ರೀತಿ,
ಅವಳಿಂದಲೇ ಸೃಷ್ಟಿಯ ಈ ಸ್ಪೂರ್ತಿ.
ಅಮ್ಮನೇ ನನ್ನ ಮೊದಲ ಗುರು,
ಅವಳ ಪಾಠವೇ ಜೀವನದ ದಾರಿ.
ಕಷ್ಟ ಬಂದಾಗ ಅವಳ ಮಾತೇ ಶಾಂತಿ,
ನೀಡಿದ ಪ್ರೋತ್ಸಾಹವೇ ನನ್ನ ಗೆಲುವಿನ ಬಿಂದು.
ಅಮ್ಮನ ಪ್ರೀತಿ ಬೆಲೆ ಕಟ್ಟಲಾಗದು,
ಅವಳ ತ್ಯಾಗಕ್ಕೆ ಸಮಾನವೆಂದೂ ಇಲ್ಲ.
ಅವಳ ಕೈಯ ತುತ್ತಿಗೆ ಹೋಲಿಕೆ ಇಲ್ಲ,
ಅವಳ ಪ್ರೇಮವೇ ನನ್ನ ಜೀವದ ಬಲಿ.
ಮಾತೃಪ್ರೇಮವೆಂದರೆ ಸೂರ್ಯನ ಬೆಳಕು,
ಎಲ್ಲ ಕತ್ತಲನು ದೂರ ಮಾಡುವ ಪ್ರಕಾಶ.
ತಾಯಿಯ ಹೃದಯದಲ್ಲಿ ಇರುವ ದಯೆ,
ಜಗತ್ತಿನ ಎಲ್ಲ ಚಿನ್ನಕ್ಕೂ ಮಿಗಿಲಾದ ಮೌಲ್ಯ.
ತಾಯಿ, ನೀನು ನನ್ನ ದಾರಿ ತೋರಿಸಿದೆ,
ನಿನ್ನ ಆಶೀರ್ವಾದದಿಂದ ನಾನು ಬೆಳೆಯುವೆ.
ಎಂದಿಗೂ ನಿನ್ನ ಋಣ ತೀರಿಸಲಾಗದು,
ಏಳು ಜನ್ಮಗಳಿಗೂ ನೀನೆ ನನ್ನ ತಾಯಿ.
ಉಸಿರು ಕೊಟ್ಟು ಜನ್ಮ ನೀಡಿದಳು,
ರಕ್ತ ಬಸಿದು ಹಾಲುಣಿಸಿದಳು,
ಹೆಸರನ್ನಿಟ್ಟು ಜಗವ ತೋರಿದಳು,
ಮುತ್ತು ಕೊಟ್ಟು ತುತ್ತು ತಿನಿಸಿದಳು, ಸಾಕಿ ಸಲುಹಿ ಬೆಳೆಸಿದಳು.
ಅಮ್ಮ ನಿನಗೆ ಕೋಟಿ ಕೋಟಿ ನುಡಿ ನಮನಗಳು
ಅಮ್ಮನ ಮಡಿಲು ಸ್ವರ್ಗದ ತಾಣ,
ಅವಳ ಪ್ರೀತಿ ಚಂದಿರದ ತೇಜೋಮಯ ಕಿರಣ.
ನಗುವ ನಿನ್ನದು ನನ್ನ ಬಾಳಿನ ಬೆಳಕು,
ಅಮ್ಮನೇ ನೀನು ನನ್ನ ಜೀವನದ ದಿಕ್ಕು.
ತಾಯಿ ಎಂಬ ಪದವೇ ದೇವರ ರೂಪ,
ಅವಳ ಪ್ರೀತಿ ಎಂದಿಗೂ ಅಸಾಧಾರಣ ಸ್ವರೂಪ.
ನಿನ್ನ ಕೈಯ ತುತ್ತಿಗೆ ಹೋಲಿಕೆ ಇಲ್ಲ,
ಅಮ್ಮನೇ, ನಿನ್ನ ಪ್ರೀತಿಯು ಅಮೃತದ ಬಿಲ್ಲ.
ನೀನು ನನ್ನ ಮೊದಲ ಗುರು,
ಅವಳ ಪಾಠವೇ ಜೀವನದ ದಾರಿ ಸದುರು.
ಕಷ್ಟ ಬಂದಾಗ ನಿನ್ನ ಮಾತೇ ಶಾಂತಿ,
ಅಮ್ಮನೇ ನೀನು ನನ್ನ ಬಾಳಿನ ಭ್ರಾಂತಿ.
ಕಷ್ಟವೇ ಬಂದ್ರು, ಸುಖನೆ ಇದ್ರೂ
ನಿನ್ನೊಂದಿಗಿರುವವಳು ನೆರಳಿನಂತೆ…
ನೀ ಓಡಿದರು, ನೀ ನಡೆದರು
ನಿನ್ನ ಹಿಂದೆಯೇ ಬರುವಳು
ಹೆಜ್ಜೆ ಗುರುತಿನಂತೆ
ತಾಯಿಯ ಹೃದಯದಲ್ಲಿ ದಯೆಯ ಸಾಗರ,
ಅವಳ ಪ್ರೀತಿ ಎಂದಿಗೂ ಅಗಾಧ ಗಂಗೆಯ ಹರಿವರ.
ನೀನು ನನ್ನ ಕನಸುಗಳನ್ನು ಬೆಳೆಸಿದವಳು,
ನನ್ನ ಬಾಳಿಗೆ ಬೆಳಕು ತಂದವಳು.
ಅಮ್ಮನ ಪ್ರೀತಿ ಬೆಲೆ ಕಟ್ಟಲಾಗದು,
ಅವಳ ತ್ಯಾಗಕ್ಕೆ ಸಮಾನವೆಂದೂ ಇಲ್ಲದು.
ನೀನು ನನ್ನ ಮೊದಲ ಗೆಳೆತೆಯಾದೆ,
ಎಂದಿಗೂ ನನ್ನ ಹೃದಯದಲ್ಲಿ ನೆಲೆಸಿದೆಯಾದೆ.
ನೀನು ನನಗೆ ದಾರಿ ತೋರಿಸಿದವಳು,
ಬಾಳಿನ ಕಷ್ಟಗಳಲ್ಲಿ ಬೆಳಕು ತಂದವಳು.
ಅಮ್ಮನೇ ನೀನು ದೇವತೆಯ ರೂಪ,
ನಿನ್ನ ಪ್ರೀತಿಯು ಎಂದಿಗೂ ಶ್ರೇಷ್ಠ ಸ್ವರೂಪ.
ಅಕ್ಕರೆಯಿಂದ ಆಶೀರ್ವದಿಸಿ ಆನಂದಿಸಿ ಅಪ್ಪಿಕೊಳ್ಳುವವಳೇ ಅಮ್ಮ…
ನನ್ನೆಲ್ಲ ನೋವಿಗೆ ನಗುವಾಗಿ ನನ್ನೆಲ್ಲ ಗೆಲುವಿಗೆ ಗುರುವಾಗಿ ನನ್ನೆಲ್ಲ ಭಾವಕ್ಕೆ ಮಗುವಾಗಿ ಸ್ಪಂದಿಸುವವಳೇ ಅಮ್ಮ…
ನನ್ನೆಲ್ಲ ನೆನಪುಗಳಲ್ಲಿ ಅಚ್ಚಳಿಯದೆ ಅಚ್ಚಾಗಿರುವವಳು ನನ್ನಮ್ಮ…
ನನ್ನೆಲ್ಲ ಕನಸನ್ನ ನನಸಾಗಿಸುವ ಹಾದಿಯಲ್ಲಿ ಕಠೋರತೆಯ ಮೆಟ್ಟಿಲನ್ನ ಮೆಟ್ಟಿ ನಿಂತವಳು ನನ್ನಮ್ಮ…
ಗುರುವಾಗಿ, ಗೆಲುವಾಗಿ, ವರವಾಗಿ, ಪರವಾಗಿ, ನನಗೆ ಸರಿಯಾಗಿ ನಿಂತವಳವಳೇ ನನ್ನಮ್ಮ…
ಅಮ್ಮನ ಮಡಿಲಲ್ಲಿ ನೆಲೆಸುವ ಶಾಂತಿ,
ಅಲ್ಲಿ ಮರೆಯುತ್ತೇನೆ ಜಗತ್ತಿನ ಭ್ರಾಂತಿ.
ನಿನ್ನ ಮಮತೆ ನನಗೆ ಶಾಶ್ವತ ಆಶ್ರಯ,
ಅಮ್ಮನೇ ನೀನು ನನ್ನ ಜೀವದ ಆಧಾರ.
ಅಮ್ಮನ ಪ್ರೀತಿಗೆ ಆಕಾಶದಷ್ಟು ಮಿತಿಯುಂಟೆ?
ಅಮ್ಮನ ಕರ್ತವ್ಯಕ್ಕೆ ದೇವರೇ ಕೈ ಮುಗಿದದ್ದು ಗೊತ್ತೇ?
ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ಅಮ್ಮ,
ಅವಳಿಂದಾನೇ ಜೀವರಾಶಿಗಳ ವಂಶ ಬೆಳೆಯುವುದಮ್ಮ,
ಭದ್ರತೆಯ ಭಾವ ನಿರಾಳ ಮನಸ್ಸು ಭವಿಷ್ಯದ ಕನಸು,
ಸುಗಮ ಉಸಿರಾಟಕ್ಕೆ ಅವಳ ಪ್ರೀತಿಯೇ ಸೊಗಸು,
ಈ ಪ್ರತಿ ಉಸಿರಿಗೂ ಅಮ್ಮನ ಋಣವಿದೆ,
ಅಮ್ಮನಿದ್ದರೆ ಯೋಧನಷ್ಟು ಶಕ್ತಿ ಇದೆ,
ಆ ದೇವರಿಗೂ ಅಮ್ಮ ಬೇಕು,
ಆ ಅಪ್ಪುಗೆಯ ತಲೆ ನೇವರಿಸುವ ಕೈಗಳು ಬೇಕು,
ಅಮ್ಮನ ಮಾತು ಸುಳ್ಳನ್ನು ಸತ್ಯ ಮಾಡೀತು!
ನಂಬಿಕೆಯ ಆತ್ಮಕೆ ಬುನಾದಿ ಆದೀತು!
ನೋವಿನಲ್ಲೂ ದೇವರಿಗಿಂತ ಮೊದಲು ಅಮ್ಮ ಬಂದಾಳ,
ಇದು ಮನುಷ್ಯ ಸಂಕುಲದ ಎಲ್ಲಾ ಜೀವಿಗಳ ಜೀವಾಳ..
ತಾಯಿ ಎಂಬ ಪದವೇ ಪ್ರೀತಿಯ ಸಂಕೇತ,
ಅವಳ ಪ್ರೀತಿ ಎಂದಿಗೂ ಶಾಶ್ವತನೆಂಬ ಸತ್ಯ.
ನೀನು ನನ್ನ ಕನಸುಗಳಿಗೆ ಬಾಳು ಕೊಟ್ಟೆ,
ಎಂದಿಗೂ ನನ್ನ ಹೃದಯದಲ್ಲಿ ನೆಲೆಸಿದ್ದೆ.
ಅಮ್ಮನೇ ನೀನು ನನ್ನ ಜೀವದ ಬೆಳಕು,
ನಿನ್ನ ಪ್ರೀತಿಯು ನನಗೆ ಶಾಶ್ವತ ದಿಕ್ಕು.
ಎಲ್ಲಾ ದೇವರುಗಳಿಗಿಂತ ಶ್ರೇಷ್ಠವಾದವಳು ನೀನೆ,
ಪ್ರತಿಯೊಂದು ಜನ್ಮದಲ್ಲೂ ನನ್ನ ತಾಯಿಯಾದೆ.
ಅಮ್ಮನ ಕೈಯಲ್ಲಿ ಬಾಳಿನ ಮುಗುಳ್ನಗೆ,
ಅವಳ ಮಾತಿನಲ್ಲಿ ಹೃದಯದ ಸಂಗೀತದ ರಾಗ.
ನಿನ್ನ ಪ್ರೀತಿಯು ಎಂದಿಗೂ ಅಮೃತದ ಸರೋವರ,
ಅಮ್ಮನೇ ನೀನೆ ನನ್ನ ಜೀವದ ಮೂಲಧಾರ.
ತಾಯಿ ಎಂಬುದು ತ್ಯಾಗದ ಪ್ರತೀಕ,
ಅವಳ ಜೀವನವೇ ನಮ್ಮ ಬಾಳಿಗೆ ದೀಪ.
ಎಲ್ಲಾ ನೋವು ಮರೆತು ನಗುವ
ತಾಯಿಯ ಪ್ರೀತಿ ಎಂದಿಗೂ ಶಾಶ್ವತ
ಅಮ್ಮ ಎಂದರೆ ಆಸೆಯ ತಾಣ,
ಅಮ್ಮ ಎಂದರೆ ಹಸಿವಿನ ದೀಪದ ಪಾಠ.
ಅಮ್ಮ ಎಂದರೆ ಔಷಧಿ ಶಾಂತಿ,
ಅಮ್ಮ ಎಂದರೆ ನೆಮ್ಮದಿ ಕಾಂತಿ.
ಪ್ರೀತಿ ದಿನಾನೂ ಹುಟ್ಟೋಕೆ ಆಗದು,
ಎಷ್ಟೇ ದುಡ್ಡು ಇದ್ದರೂ ಬೆಲೆ ಕಟ್ಟೋಕೆ ಆಗದು.
ತಪ್ಪ ಮಾಡಿದರೂ ಒಳ್ಳೇದೇ ಬಯಸುವಳು,
ಅವಳ ಪ್ರೀತಿಗೆ ಸಮಾನವೇನೂ ಇಲ್ಲವಳು.
ಯಾವ ದೇವರನ್ನು ಅವಳಿಗೆ ಮೀರಿಸೋಕೆ ಆಗದು,
ನನ್ನ ಅಮ್ಮನ ಪ್ರೀತಿ ಎಂದಿಗೂ ಶ್ರೇಷ್ಠವು.
ಈ ಜನ್ಮದಲ್ಲಿ ಅವಳ ಋಣ ತೀರಿಸಲಾಗದು,
ಅವಳ ಪ್ರೀತಿಯೇ ನನ್ನ ಜೀವದ ಆಧಾರವು.
ನೋವುಂಡು ನಲಿವು ನೀಡಿದವಳು ನನ್ನಮ್ಮ
ನನ್ನ ನಗುವ ಕಂಡು, ಜಗವ ಮರೆತಳು ನನ್ನೊಲವಿನಮ್ಮ
ಸ್ವಾರ್ಥವೇ ಇಲ್ಲದ ಸ್ಫೂರ್ತಿಯ ಒಡತಿ
ಆ ನನ್ನ ಚಿಲುಮೆಯ ಅಮ್ಮ
ಕಂಡ ಕನಸೆಲ್ಲವ ನನಗೆಂದೆ ಧಾರೆ ಎರೆದ ನನ್ನೊಲವಿನ ಅಮ್ಮ
ತನ್ನ ಬೆವರಿನೊಳಗೆ
ಭಾವನೆಗಳನ್ನು ತುಂಬಿ ಸುರಿದವಳು ನನ್ನಮ್ಮ
ಪ್ರತೀ ಹೆಜ್ಜೆ ನಾ ನಡೆದ ಜಾಗದಲ್ಲೇ
ತನ್ನ ಜಗವ ಕಾಣುವಳು ನನಮ್ಮ
ಆಸೆಗಳೊಂದಿಗೆ ಅವಕಾಶಗಳನ್ನು
ಆಮಂತ್ರಣವಾಗಿ ಕೊಡುತಿಹಾಳು ನನ್ನಮ್ಮ
ಸರ್ವಸ್ವವನೆ ಸಾಂಗವಾಗಿ
ಸಮರ್ಪಿಸಿದವಳು ನನ್ನಮ್ಮ
ಅಣಕಿಸಿದವರ ಮುಂದೆಯೇ
ಅರಳುವ ಹೂವಗ ಬೇಕೆಂದು
ಹರಸಿದವಳು ನನ್ನಮ್ನ
ಹಡೆದವಳಾಗಿ, ಗೆಳತಿಯಾಗಿ,
ಮನೆಯ ಒಡತಿಯಾಗಿ,
ಅಂದಿಗೂ, ಇಂದಿಗೂ, ಎಂದೆಂದಿಗೂ ಇರುವೇ
ನನ್ನ ನಲ್ಮೆಯ ತಾಯಿಯಾಗಿ.
ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ,
ಸಂಕಟಗಳನ್ನೆಲ್ಲಾ ಅನುಭವಿಸಿ,
ಹಾರೈಕೆ ಮಾಡಿ ಜನ್ಮ ಕೊಟ್ಟಳು,
ನನ್ನ ಬದುಕಿಗೆ ಬೆಳಕು ತಂದಳು.
ಅವಳ ಮಡಿಲು ನನಗೆ ಸ್ವರ್ಗದ ತಾಣ,
ಅತ್ತಾಗ ಲಾಲಿಸಿ ಮುದ್ದಾಡುವ ಪ್ರಾಣ.
ನಾನು ನಕ್ಕಾಗ ತನ್ನ ನೋವು ಮರೆತು,
ಮಗುವಾಗಿ ನನ್ನ ಜೊತೆ ಆಟವಾಡಿತು.
ತುತ್ತು ನಿಟ್ಟು ಜೋಪಾನವಾಗಿ ನೋಡಿದಳು,
ನನ್ನ ಮೊದಲ ಗುರುವಾಗಿಯೇ ಬೆಳೆಸಿದಳು.
ಸಾವಿರ ಜನ್ಮ ಬಂದರೂ ತೀರಿಸಲಾಗದು ಋಣ,
ನನ್ನ ದೇವತೆ ಎಂದಿಗೂ ನನ್ನ ಅಮ್ಮ.
ಕನ್ನಡ ಸಾಹಿತ್ಯದಲ್ಲಿ ತಾಯಿಯನ್ನು ಕುರಿತು ಕವನಗಳು
ಹುಟ್ಟಿದೆ ಅಮ್ಮನ ಗರ್ಭದಿಂದ,
ಬೆಳೆದೆ ಅಮ್ಮನ ಮಡಿಲಿನಿಂದ.
ತುತ್ತಿಟ್ಟು ಪ್ರೀತಿಯಿಂದ ಬೆಳೆಸಿದಳು,
ನಾನು ನಕ್ಕಾಗ ನಗುವ ಕಿರಣವನು ತಂದಳು.
ಪ್ರತಿ ಕ್ಷಣವೂ ನನ್ನಿಗಾಗಿ ಬದುಕಿದಳು,
ಅವಳ ಋಣ ತೀರಿಸಲು ಸಾಧ್ಯವೇ ಇಲ್ಲವನು.
ಏಳೇಳು ಜನ್ಮಕ್ಕೂ ಅವಳ ಮಡಿಲು ಬೇಕು,
ಅವ್ವನೇ ನನ್ನ ಜೀವನದ ದೀಪವೆಂದು.
ಮಳೆಯಲ್ಲಿ ಕೊಡೆಯಾಗಿ ನಿಂತೆ,
ಚಳಿಯಲ್ಲಿ ಹೊದಿಕೆ ನೀಡಿದೆ.
ಬಿಸಿಲಲ್ಲಿ ನೆರಳಾಗಿ ಉಳಿಸಿದೆ,
ಕಣ್ಣ ರೆಪ್ಪೆಯಾಗಿ ಕಾಪಾಡಿದೆ.
ನೀ ಕೊಟ್ಟ ಜೀವವೇ ನನಗೆ ವರ,
ಇಡುವೆ ನಿನ್ನ ಮುಡಿಪಾಗಿ ಸದಾ ಪ್ರೀತಿಯ ಕುವರ.
ಅವ್ವ ಮನೆಗಾಗಿ ಮಾಡುತಿಹ ಚಿಂತೆ,
ಜಗದಾಗ ಎಲ್ಲರಿಗೂ ಒಂದಲ್ಲೊಂದು ಕಂತೆ.
ಮನೆ ಗಂಡ ಮಕ್ಕಳಿಗಾಗಿ ನೀ ಬಾಳ ಚಿಂತಿ,
ದೇವರು ನೋಡುತ್ತಾನೆ ನಿನ್ನ ಸಹನೆ ಶ್ರುತಿ.
ಹಲವಾರು ದೇವರಿಗೆ ಹರಕೆಯಿತ್ತೆ ನೀನು,
ಕಷ್ಟಗಳ ನಡುವೆ ಸಹನೆ ತೋರಿದೀನು.
ಒಮ್ಮೆ ದೇವರು ಅಭಯ ಹಸ್ತ ತೋರಿಸಿದಾಗ,
ಮರೆಯದಿರು ಅವನ ಪಾದ ಕಮಲದ ಭಾಗ.
ಮನುಜರನ್ನು ನಂಬಿ ಕೆಟ್ಟವರು ಜಗದಲ್ಲಿದ್ದಾರೆ,
ದೇವರನ್ನು ನಂಬಿ ಕೆಡುವವರು ಇಲ್ಲವೆಂದಿದ್ದಾರೆ.
ನಿನ್ನ ನಂಬಿಕೆಗೆ ಫಲ ಸಿಗುವುದು ಸತ್ಯವೇನು!
ಅವ್ವನೇ ದೇವತೆ ಈ ಜಗದ ಪ್ರೀತಿಯ ಧನು.
ನೀನು ನನ್ನ ದೇವರು
ನಮಗಾಗೇ ಸುರಿಸುವೆ ಬೇವರು
ನಮನ್ನು ಕಾಯಲು ನೀನು ಯಾವಾಗಲು ತಯಾರು
ನೀನೇ ನಮಗೆ ಪವರು
ಅಮ್ಮಂದಿರ ದಿನದಲೀ ಕಟುತ್ತೆವೇ ನಿಮಗೆ ಪ್ರೀತೀಯ ತೇರು
ಹೊರುವಳು ನಿನ್ನ ಗರ್ಭದಲಿ ನವಮಾಸ,
ಕಾಣಹೊರಟಳು ನಿನ್ನೆಡೆಗೆ ನೊರೆಂಟು ಕನಸ,
ಮರೆವಳು ಅವಳ ನೋವ ನೋಡಿ ನಿನ್ನ ನಗುವಿನ ಮಂದಹಾಸ,
ಅರ್ಥೈಸುವಳು ಪ್ರಪಂಚವ ಸಮಾಜದೊಂದಿಗ ಸೆಣೆಸಾಡುತ,
ಬೆಂಬಲಿಸುವಳು ನಿನ್ನ ಕನಸುಗಳಿಗೆ ರೆಕ್ಕೆಯ ಕಟ್ಟುತ,
ಪ್ರತಿ ಕ್ಷಣವು ನಿನಗಾಗಿ ಚಡಪಡಿಸುತಾ,
ಸ್ವಾರ್ಥಿಗಳ ಪ್ರಪಂಚದಲಿ ನಿನಗಾಗಿ ಪ್ರಾರ್ಥಿಸುತ…..
ಅಮ್ಮ ಈ ಪದವೇ ಒಂದು ಅದ್ಬುತ..
ಹೆತ್ತಾಗ ಗೊತ್ತಿರಲಿಲ್ಲ ನೀ ನನಗೆ ಯಾರೆಂದು
ಅಪ್ಪಿದ ಮೊದಲ ಕ್ಶಣದಿ ಅರಿತೆ ನೀ ದೇವರೆಂದು
ಜಗತ್ತಿಗೆ ಅರಿವಿದೆ ತಾಯಿಯೇ ಮೊದಲ ಗುರುವೆಂದು
ನೀ ಕಳಿಸಿದ ಪಾಟಗಳೇ ಜೀವನದ ದಾರಿ ದೀಪವಿಂದು
ಹೇಳು ತಾಯಿ ನಿಮ್ಮ ಪ್ರೀತಿಯ ಅಳೆಯೋ ಸಾದನ ಯಾವುದೆಂದು
ಸಾಗರದಶ್ಟು ಪ್ರೀತಿಯಕೊಟ್ಟು ನಿಂತಿರುವೆ ಮಮತೆಯ ದೇವತೆಯಾಗಿಂದು
ಕಲಿಸಿರುವೆ ಕಶ್ಟಗಳ ಎದುರಿಸುವ ಬಗೆ ಹೇಗೆಂದು
ಜೊತೆಗಿರುವೆ ಜೀವನದ ಪ್ರತಿ ಹಾದಿಯಲ್ಲು ನೀ ಸ್ಪೂರ್ತಿಯಾಗಿರೆಂದು
ನೋವು ನೂರಿದ್ದರೂ ನಗುತ್ತಿರುವೆ ಏನೂ ಆಗಿಲ್ಲವೆಂದು
ನನಗೆ ತಿಳಿದಿಲ್ಲ ಏನೂ ಹೇಳಬೇಕೆಂದು
ಗೊತ್ತಿಲ್ಲ ನನಗೆ ಸಮಸ್ತ ಲೋಕದಲ್ಲಿ ಎಷ್ಟು ದೇವರಿರಬಹುದೆಂದು
ಮನಕ್ಕೆ ಅರಿವಿದೆ ನನ್ನ ದೇವತೆ ನನ್ನಮ್ಮ ಜೊತೆಗಿರುವಳೆಂದು
ನಿಮ್ಮ ವರ‍್ಣಿಸಲು ಪದವು ಸಾಲದು ನನ್ನಲ್ಲಿ ಇಂದು
ಅಮ್ಮ, ಸ್ತ್ರೀ ಕುಲಕ್ಕೆ ತಲೆ ಬಾಗಿ ನಮಸ್ಕರಿಸಿದೆ ನನ್ನ ಜೊತೆ ನನ್ನ ಹೃದಯವಿಂದು
ಅರಿವಿಲ್ಲದೆ ಅಂದಿರುವೆ ಎದುರು ಮಾತುಗಳನ್ನ ನಿನ್ನೆದುರಿಗೆ ನಿಂದು
ದಯಮಾಡಿ ಕ್ಶಮಿಸಿ ಬಿಡಿ ನಿಮ್ಮ ಪಾದಕ್ಕೆ ಶರಣಾಗುವೆ ಇಂದು
ಅಂದುಕೊಂಡೆ ನೀ ಕೊಟ್ಟ ಜನ್ಮಕ್ಕೆ ಕ್ರುತಜ್ನತೆ ಹೇಳಬೇಕೆಂದು
ದಡ್ಡ ನಾನು, ತಿಳಿದಾಗ ತಾಯಿಯ ರುಣ ತೀರಿಸಲಾಗದೆಂದು
ಜಗತ್ತಿಗೆ ಕೂಗಿ ಹೇಳುವೆ ಅದ್ರುಶ್ಟವಂತ ನಾನೆಂದು
ಕಾರಣ, ನಿಮ್ಮಂತ ತಾಯಿಯ ಮಕ್ಕಳಾಗಿದ್ದಕ್ಕೆ ಜೀವನ ಸಾರ‍್ತಕವಿಂದು
ನಿಮಗಿದೋ ನನ್ನ ಶರಣು
ಜೀವದಾತೆಗೆ, ಜಗನ್ಮಾತೆಗೆ
ದೇವರು ಇಲ್ಲ
ಎಂದವಗೆ ಕಾಣಳು
ತಾಯಿ ದೇವರು
ಮಾನವ ಜನ್ಮ
ಕೋಟಿ ಜನ್ಮಕೂ ಶ್ರೇಶ್ಟ
ಕೊಟ್ಟಳಾ ತಾಯಿ
ದೇವರ ಆಟ
ಬದುಕ ಜಂಜಾಟದಿ
ಸೋತು ಗೆದ್ದಳು
ಬರಲಿ ಬಿಡು
ನೂರು ಸಂಕಶ್ಟಗಳು
ತಾಯಿ ಇಲ್ಲವೇ
ಹಗಲಿರುಳೂ
ಮಕ್ಕಳಿಗಾಗಿ ಚಿಂತೆ
ಬೂತಾಯಿಯಂತೆ
ನವಮಾಸ ಗರ್ಭದರಿಸಿ
ಕರುಳ ಬಳ್ಳಿಯ ಕತ್ತರಿಸಿ
ನೆತ್ತರ ಮುದ್ದೆಯ ಸ್ಪರ್ಶಿಸಿದ ಕುಲ ದೇವತೆ
ನೋವಲ್ಲೇ ನಗೆಸುರಿಸಿ
ನಿನ್ನುಸಿರ ನನಗರಿಸಿ
ಹ್ರುದಯಕ್ಕೆ ಉಸಿರನ್ನಿಟ್ಟ ಸೃಷ್ಟಿದೇವತೆ
ಹಾಲು ಉಣಿಸಿ
ಅರಿವು ಬೆಳೆಸಿ
ಬಾಳಲ್ಲಿ ನೀನಾದೆ ಅದೃಷ್ಟದೇವತೆ
ಜೀವ ನೀಡಿ
ಹರಕೆ ಮಾಡಿ
ಹರುಶದಿ ಹೊತ್ತು ಮೆರೆದ ಇಷ್ಟದೇವತೆ
ದೈರ್‍ಯ ನೀಡಿ
ಗೆಲುವ ಬೆೇಡಿ
ಬಾಳ ಪಾಟ ಕಲಿಸಿದ ಜ್ಞಾನದೇವತೆ
ಮಾತು ಚೆನ್ನ
ನೀತಿ ಚೆನ್ನ
ಎಂದು ತೋರಿದ ಮಾತೃದೇವತೆ
ತಪ್ಪುಗಳ ತಿದ್ದಿ ತೀಡಿ
ಮೊಗಕೆ ಕಾಡಿಗೆಯ ಚಂದ ಮಾಡಿ
ಬಾಳಿನ ದ್ರುಶ್ಟಿ ತೆಗೆದ ದೃಷ್ಟಿ ದೇವತೆ
ಪ್ರತಿ ಕ್ಶಣವೂ ಮುದ್ದು ಮಾಡಿ
ಪ್ರತಿ ದಿನವೂ ಶುದ್ದ ಮನದಿ
ಜುಟ್ಟು ಕಟ್ಟಿ ಹಿಟ್ಟನಿಟ್ಟ ಅನ್ನದೇವತೆ
ಶಿರವ ಬಾಗಿ
ಕರವ ಮುಗಿದು
ನಮಿಸಿ ನಮಿಸಿ ನಲಿಯುವೆ
ದರಣಿಯೊಳಗೆ
ವರವು ನೀನು
ಮೆರೆದು ಮೆರೆದು ಸ್ಮರಿಸುವೆ
ಹೆತ್ತವಳವಳಲ್ಲವೇ
ಹೊತ್ತವಳವಳಲ್ಲವೇ
ತುತ್ತಿಟ್ಟವಳವಳಲ್ಲವೇ
ಮುತ್ತಿಟ್ಟವಳವಳಲ್ಲವೇ
ಹಾಲುಣಿಸಿದವಳವಳಲ್ಲವೇ
ಲಾಲಿ ಹಾಡಿದವಳವಳಲ್ಲವೇ
ಜೋಲಿ ತೂಗಿದವಳವಳಲ್ಲವೇ
ಲಾಲಿಸಿ ಪಾಲಿಸಿದವಳವಳಲ್ಲವೇ
ಹಡೆದವಳವಳಲ್ಲವೇ
ಒಡಹುಟ್ಟಿದವಳವಳಲ್ಲವೇ
ಒಡನಾಡಿಯಾದವಳವಳಲ್ಲವೇ
ನಡೆನುಡಿ ಕಲಿಸಿದವಳವಳಲ್ಲವೇ
ಮನೆಯ ದೀಪವಳವಳಲ್ಲವೇ
ಮನೆಯ ಬೆಳಗುವಳವಳಲ್ಲವೇ
ಮನೆಗೆ ಮಹಾಲಕ್ಶ್ಮೀ ಅವಳಲ್ಲವೇ
ಮನೆತನ ವ್ರುಕ್ಶಕ್ಕೆ ಬೇರವಳಲ್ಲವೇ.
ಪ್ರಕ್ರುತಿಯ ಪ್ರತಿರೂಪ ಅವಳಲ್ಲವೇ
ಸಂಸ್ಕ್ರುತಿಯ ಜ್ಯೋತಿ ಅವಳಲ್ಲವೇ
ಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇ
ಅವಳ ರಕ್ಶಣೆ ಹೊಣೆ ನಮ್ಮದಲ್ಲವೇ
ಅಮ್ಮ ಅಮ್ಮ ನೀ ನನ್ನ ಅಮ್ಮ
ಬಯಸಿ ಬಯಸಿ ನೀ ಪಡೆದೆ ನನ್ನ
ಕಣ್ಣು ತೆರೆದಾಗ, ನಾ ಜಗವ ಕಂಡೆ
ಆ ಜಗವೆ ನೀನೆಂದು ಕೊನೆಗೆ ಅರಿತೆ
ನಿನ ನಿದ್ದೆಯ ತೊರೆದು ನೀ ಆಡಿಸಿದೆ ನನ್ನ
ನಿನ ಎದೆ ಹಾಲುಣಿಸಿ, ಬೆಳೆಸಿದೆ ನನ್ನ
ನಾ ತೊದಲು ನುಡಿವಾಗ, ನಿನಗೆ ಅದು ಚೆಂದ
ನಿನ ದನಿಯೇ ನನಗಂದು ಸುರಿವ ಮಕರಂದ
ನೀ ಮುನಿಸಿಕೊಂಡಾಗ, ನನ ಲೋಕ ಮಂಕಾಗೆ
ನೀ ಚೆಲುವ ನಗೆ ಬೀರೆ, ಮಂಕು ಮಾಸುವುದು ಹಾಗೆ
ತಾಯೇ…. ನಿನ್ ಉಸಿರ್ ಬಸಿದವಳೇ….
ನಿನ್ನ ಮಡಿಲಲ್ಲೇ ,ನನ ಬೆಳೆಸಿದೆಯಲ್ಲೇ
ಇಂದು ನೀ ಹಾಡೋ ಲಾಲಿಗೆ, ನಾ ಮಲಗಬೇಕು
ನಾ ಕೇಳೋ ದನಿ, ಅದು ದಿನ ನಿನದಾಗಬೇಕು
ನನ ತುಂಟಾಟ, ಹುಡುಗಾಟ ನೀ ಸಹಿಸಿದೆಯಲ್ಲೇ
ಅದರಲ್ಲೇ ನೆಮ್ಮದಿ ನೀ ಕಂಡೆಯಲ್ಲೇ
ನನ್ ಕನಸ ಹಂದರಕೆ, ನೀನೇನೆ ಒತ್ತಾಸೆ
ಎನ್ ಪ್ರತಿ ಗೆಲುವ ಮೆಟ್ಟಿಲಿಗೆ, ನಿನ ತ್ಯಾಗವೇ ಅಡಿಪಾಯ
ನಮ ಸಾಕು ಬೇಕುಗಳಲ್ಲೇ, ನಿನ ಪ್ರತಿ ದಿನವ ನೀ ಕಳೆದೆ
ಇನ್ನಾದರೂ ಬದುಕು ನೀ, ನಿನಗಾಗೆ ನನ್ನಮ್ಮ
ಜೋಳಿಗೆಯ ತುಂಬಾ ನಿನ ಒಲವ ಸಾಲವಿರಲು
ತೀರಿಸಲಾರೆನು ನಾ ಅದನ ಜನುಮ ಜನುಮದಲು..
ಅಳುವಾಗ ಆಲಂಗಿಸಿ
ಹಸಿದಾಗ ಉಣಬಡಿಸಿ
ಮುನಿದಾಗ ಸಂತೈಸಿ
ಕಂದಮ್ಮನ ಹರಸುವಳು ತಾಯೆಂಬ ಅರಸಿ
ಸನ್ಮಾರ್ಗವನ್ನು ತೋರಿಸುತ್ತಾ
ಸದ್ಬುದ್ದಿಯನ್ನು ಕಲಿಸುತ್ತಾ
ನೋವನ್ನು ಮರೆಸುತ್ತಾ
ರಕ್ಷೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ
ಮಮತೆಯ ಕರುಣಾಮಯಿ
ಪ್ರೀತಿಯ ಸಹ್ರುದಯಿ
ಆನಂದದ ಚಿನ್ಮಯಿ
ಸದಾ ಮಿಡಿಯುವ ದೈವವೇ ತಾಯಿ
ತೊದಲು ನುಡಿಯ ಅರಿತಿಹಳು
ಪ್ರಥಮ ಗುರು ಆಗಿಹಳು
ಬದುಕೆಂಬ ವಿದ್ಯೆಯ ಕಲಿಸಿಹಳು
ಸ್ಪೂರ್ತಿಯ ಸೆಲೆಯಾಗಿಹ ಮಾತೆಗೆ ನಮನಗಳು
ಅಮ್ಮಾ ಮತ್ತೊಮ್ಮೆ ನಿನ್ನಾ
ಮಡಿಲಲಿ ಮಗುವಾಗಿ ಬಳಿ ಸೇರುವಾಸೆ
ಬದುಕಿನಾ ವನವಾಸದಲಿ
ಬಳಲಿದೆ ಜೀವ
ನಿನ್ನೊಡಲ ಗರ‍್ಬದಲಿ
ಜಗದ ಸುಕವೆಲ್ಲಾ ಮಲಗಿದೆ
ಕರೆದುಬಿಡೆ ಒಮ್ಮೆ
ಬಾ ಮಗುವೇ
ಬಂದು ನನ್ನೊಡಲ
ಸೇರಿಕೊ ಎಂದು
ತಪ್ಪುಗಳ ಸರಿಪಡಿಸುತ್ತಾ
ಸೋಲುಗಳ ಗೆಲ್ಲಿಸುತ್ತಾ
ಜೀವನದ ತುದಿಯ
ಅರಸುತ್ತಾ ನಿಟ್ಟುಸಿರು ಗಳ ನಡುವೆ
ಕಳೆದು ಹೋಗಿರುವೆನಮ್ಮಾ
ನೂರು ಕನಸುಗಳ
ಮಹಡಿಯನೇರಿ
ಆಸೆಗಳ ದೀಪ ಹಚ್ಚಿ
ಗೆಲುವಿನಾ ತಾರೆಯ
ಎಟುಕಿಸಲು ಕೈ ಚಾಚಿ
ಸೋತಿರುವೆನಮ್ಮಾ
ನಿನ್ನಾ ಪ್ರೇಮದ ಸುದೆಯೊಂದೆ
ಬದುಕಿನ ನಿಜಚೇತನ
ತವಕಿಸುತಿದೆ ಮನ
ಕೈ ಚಾಚಿ ಬಳಿಗೆಳೆದು
ಎದೆಗಪ್ಪಿ ಮೃದುವಾಗಿ
ನೇವರಿಸಿ ಸಂತೈಸಿಬಿಡು ಸಾಕು
ಎಲ್ಲಾ ಜಂಜಡಗಳ ತೊರೆದು
ಮೈಮರೆತು ಮಗುವಾಗಿ
ಮುದುಡಿ ನಿನ್ನೊರಗಿ ಬಿಡುವೆ
ಸುಕವಾಗಿ ಹಿತವಾಗಿ ಕರಗಿ ಬಿಡುವೆ
ಒಮ್ಮೆ ನಿನ್ನ ಬಳಿ ಕರೆದುಕೊಳ್ಳೆ ಅಮ್ಮಾ
ಕಣ್ ಬಿಟ್ಟ ಕೂಡಲೇ ಕಂಡವಳು
ನೀನಲ್ಲವೇ ಅಮ್ಮಾ… ನಿನ್ನ
ಕಣ್ ತಂಪಿನಲಿ ಬೆಳೆದವಳು
ನಾನಲ್ಲವೇ ಅಮ್ಮಾ
ಜಗದಾ ಸುಕವೆಲ್ಲಾ ನನಗೆ ಸಿಗಲೆಂದು
ಹಾರೈಸಿದವಳು ನೀನಲ್ಲವೇ ಅಮ್ಮಾ
ನಿನ್ನಾ ಪ್ರೀತಿಯ ಸುದೆಯಾ ಸವಿಯುಂಡು
ನಲಿದವಳು ನಾನಲ್ಲವೇ ಅಮ್ಮಾ
ನೆತ್ತಿಗೆ ಎಣ್ಣೆ ತೋಯಿಸಿ
ಮೆತ್ತಗೆ ಬಿಸಿನೀರಲಿ ಮೀಯಿಸಿ
ಬೆಚ್ಚಗೆ ಬಟ್ಟೆ ತೊಡಿಸಿ
ನಿನ್ನ ಕಾಡಿಗೆ ಕಣ್ಣಿಂದ ದ್ರುಶ್ಟಿ ಬೊಟ್ಟಿರಿಸಿ
ಲಾಲಿ ಜೋಗುಳ ಹಾಡಿದವಳು
ಅಂಬೆಗಾಲನಿಕ್ಕಿ ಹೊಸಿಲ ದಾಟಿ
ಹೊರಗೆ ದ್ರುಶ್ಟಿ ನೆಟ್ಟ ನನ್ನ
ಕಣ್ಣಗಾವಲ ಕವಚ ತೊಡಿಸಿದವಳು
ಅನ್ನವ ತುಪ್ಪದಿ ಮಿದ್ದಿಸಿ
ಸಕ್ಕರೆ ಬೆರಸಿದ ಹಾಲು ಕುಡಿಸಿ
ಪುಟ್ಟ ಹೆಜ್ಜೆಯ ಇರಿಸಿ ಹೊರಟ
ನನ್ನ ಕೈಹಿಡಿದು ನಡೆಸಿದವಳು
ನಿದಿರೆಯೊಳಗೆ ತುಸು ನಕ್ಕ
ಮುದ್ದು ಮೊಗವ ಕಂಡು
ದ್ರುಶ್ಟಿ ನೆಟ್ಟಿಗೆ ಮುರಿದು
ಸೆರಗ ಮೈತುಂಬಾ ಹೊದ್ದಿಸಿ
ಬೆಚ್ಚಗೆ ತಬ್ಬಿದವಳು
ಅತ್ತಾಗ ನೀನಿತ್ತ ಪ್ರೀತಿಯ ಹೂಮುತ್ತ
ಹಸಿದಾಗ ನೀನಿತ್ತ ಸವಿಯಾದ ತುತ್ತ
ನೊಂದಾಗ ನಿನ್ ಮಡಿಲಾ ಸಂತೈಸಿದ ಪರಿಯ
ನಾ ಹೇಗೆ ಮರೆಯಲಮ್ಮಾ
ಅಮ್ಮಾ ನಾ ಹೇಗೆ ಮರೆಯಲಮ್ಮ
ನವಮಾಸ ನೋವುಂಡು
ಜೀವ ಕೊಟ್ಟಾಕಿ
ಹೊತ್ತೊತ್ತು ಮುತ್ತಿಕ್ಕಿ
ಎದಿಹಾಲ ಕೊಟ್ಟಾಕಿ
ಮೂರ‍್ಕಾಲ ಮಡಿಲಾಗ
ಬೆಚ್ಚಗ ಇಟ್ಟಾಕಿ
ತೊದಲ್ನುಡಿಯ ತಿದ್ದಿ
ಮಾತುಗುಳ ಕಲಿಸ್ದಾಕಿ
ಜೋಗುಳದ ಹಾಡೇಳಿ
ಸುಕನಿದ್ದಿ ತಂದಾಕಿ
ಅಂದಚಂದ ಮಾಡಿ
ನಸುನಗಿಯ ನಕ್ಕಾಕಿ
ಹೊತ್ತೊತ್ತಿಗೆ ಶುದ್ದಿಡಲು
ಕಸವನ್ನ ತೆಗೆದಾಕಿ
ಮನಿಮಂದಿ ಮನಸೊಳಗ
ನನ ಹೆಸರ ಇಟ್ಟಾಕಿ
ಜಗತ್ತನ್ನ ಬದಿಗೊತ್ತಿ
ಪುಲ್ ಪ್ರೀತಿ ಕೊಟ್ಟಾಕಿ
ಪ್ರತಿದಿನವೂ ನನ ಮ್ಯಾಲ
ಕನಸನ್ನ ಕಂಡಾಕಿ
ಸುಕವಾಗಿ ಇರ‍್ಲೆಂತ
ದೇವ್ರತ್ರ ಕೇಳ್ದಾಕಿ
ನೂರ‍್ಕಾಲ ಬಾಳ್ಬೇಕು
ನನ್ನವ್ವ ಹಡೆದಾಕಿ
ದೇವರೇ, ಬರೆಯುವೆ ನಿನಗೆ ಪತ್ರವನ್ನು
ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು
ಬಂದೊಡನೆ ಅವಳನ್ನು ತಬ್ಬುವಾಸೆ
ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ
ಅವಳ ಕೈ ತುತ್ತಿನ ರುಚಿ ನೋಡುವಾಸೆ
ಲಾಲಿಹಾಡ ಕೇಳಿ ಮಡಿಲಲ್ಲಿ ಮಲಗುವಾಸೆ
ಚಿಕ್ಕ ಮಗುವಂತೆ ಅವಳೊಂದಿಗೆ ಆಡುವಾಸೆ
ಮನಬಿಚ್ಚಿ ಅವಳಲ್ಲಿ ಮಾತನಾಡುವಾಸೆ
ನನ್ನ ಆಸೆ ಈಡೇರಿಸಿ ಕರೆದುಕೊ ಅವಳನ್ನು
ನಿನ್ನ ನಿಯಮಕ್ಕೆ ಅಡ್ಡಿ ಮಾಡೆನು ನಾನು
ಒಮ್ಮೆ ಕಳುಹಿಸು ನನ್ನ ಅಮ್ಮನನ್ನು
ಕರುಣಾಮಯಿ, ತೋರು ಕರುಣೆಯನ್ನು
ಅಮ್ಮನೆಂಬ ನೆರಳಿನ
ಅಡಿಯಲಿ ನಾನೊಂದು ಚಿಗುರು
ಈ ಬದುಕು ಕೊಟ್ಟ ದೇವತೆಗೆ
ನಾವಿಟ್ಟಿಹೆವು ಅಮ್ಮ ಎಂಬ ಹೆಸರು
ಎಲ್ಲಾ ನೋವು ತಾನೆ ನುಂಗಿ
ನಗುತಲಿರುವ ಮಗುವಿನಂತಹವಳು
ತನ್ನ ಹಸಿವ ತೋರಗೊಡದೆ
ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು
ಏನೇ ಕಷ್ಟ ಬಂದರೂ ಮೊದಲು
ನುಡಿವ ಮಾತೇ ಅಮ್ಮ
ಬೇಗ ಎದ್ದು ಕೊನೆಗೆ ಮಲಗುವ
ನಿಸ್ವಾರ್ಥದ ಕೆಲಸಗಾರ್ತಿ ಅಮ್ಮ
ಗಂಡ ಮನೆ ಮಕ್ಕಳನ್ನು
ಸಲಹುವ ಶಕ್ತಿಯೇ ಅಮ್ಮ
ಬಡತನವಿರಲಿ ಸಿರಿತನವಿರಲಿ
ಅವಳದೊಂದೇ ರೀತಿಯ ಪ್ರೇಮ
ಬೆಟ್ಟದಂತ ಕಷ್ಟವನ್ನು ಕರಗಿಸುವುದು
ಅಮ್ಮನೊಲುಮೆಯ ಮಡಿಲು
ಅವಳ ಪ್ರೀತಿಯ ವಿಸ್ತಾರ ಕಂಡು
ಚಿಕ್ಕದಾಯ್ತು ಆ ಮಹಾ ಕಡಲು
ಅಮ್ಮನಂತಹ ದೇವತೆ ಇರಲು
ಬೇರೆ ದೇವರ ಬೇಡುವುದೇಕೆ
ಅಮ್ಮನನ್ನೊಮ್ಮೆ ಖುಷಿ ಪಡಿಸಲು
ಸಾಕವಳಿಗೆ ಅದುವೆ ಕಾಣಿಕೆ.
ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ
ನಿನ್ನ ಕಂದನ ತೊರೆದು ನೀ ಹೇಗೆ ಇರುವೆ?
ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ
ನಿನ್ನಿಂದ ಈ ತರದ ಮೋಸ ತರವಲ್ಲ
ಬ್ರೂಣದಲ್ಲಿದ್ದಾಗ ನೀ ನನ್ನ, ನಾ ನಿನ್ನ ನೋಡಲಿಲ್ಲ
ಹೊರಗೆ ಬಂದಾಗ ನಿನ್ನ ನನ್ನ ನಂಟು ಬಿಡಿಸಲಾಗಲಿಲ್ಲ
ಕ್ರೂರಿ ದೇವರಿಗೆ ನಂಟು ನೋಡಿ ಸಹಿಸಲಾಗಲಿಲ್ಲ
ಹಾಗಾಗಿ ಇಂದು ನೀನು ನನಗೆ ಕಾಣುತ್ತಿಲ್ಲ
ನೀನಿದ್ದರೆ ಮನೆ ಸ್ವರ‍್ಗ, ಇಲ್ಲದಿದ್ದರೆ ಅದು ನರಕ
ನೀ ಸ್ವಲ್ಪ ತೋರಿಸು ಎನ್ನ ಮೇಲೆ ಮರುಕ
ಈ ರಕ್ತ, ಈ ಪ್ರಾಣ ನೀನು ಕೊಟ್ಟ ಬಿಕ್ಷೆ
ನಿನ್ನ ಆಶೀರ್ವಾದವೆ ಎನಗೆ ಶ್ರೀರಕ್ಷೆ
ಬರೆಯುತಿರುವೆ ನಾನು ಪದಗಳಲ್ಲಿ
ಅಮ್ಮ ಎಂಬ ಅದ್ಬುತವ ಕುರಿತು
ನಾ ಗರ್ಭದಲಿ ಕುಣಿಯುತಿರಲು
ಅವಳು ನನ್ನ ಹೊತ್ತು ನಲಿಯುತ್ತಿದ್ದಳು
ನನ್ನ ಆಗಮನ ಕಾಯುತ್ತಲೇ
ನೋವನ್ನು ಸಹಿಸಿಕೊಳ್ಳುತ್ತಿದ್ದಳು
ನಾ ಬರುವ ಸಮಯ
ನನ್ನಮ್ಮನಿಗದು ಪುನರ್ ಜನ್ಮ
ಅದೆಷ್ಟೋ ನೋವ ಸಹಿಸಿಕೊಂಡು
ನನ್ನ ಈ ಲೋಕಕ್ಕೆ ಆಹ್ವಾನಿಸಿದಳು
ನಾ ಅಳುತಿರಲು ಎತ್ತಿ ಮುದ್ದಾಡಿದಳು
ಹಾಲುಣಿಸಿ ನನ್ನ ಹಸಿವ ತಣಿಸಿದಳು
ಅದೆಷ್ಟೋ ಮಾಸದ ನಿದ್ರೆಗಳ
ನನ್ನಮ್ಮ ನನಗಾಗಿ ತೊರೆದಳು
ಗುಮ್ಮ ಬಂತೆಂದು ಬೆದರಿಸಿ
ನನಗುಣಿಸುವುದೆ ಅವಳಿಗೆ ಕಶ್ಟದ ಹೊತ್ತು
ಅವಳಿಂದ ಕೈ ತುತ್ತು,ಸಿಹಿ ಮುತ್ತು
ಪಡೆಯುವುದೇ ಒಂದು ಗಮ್ಮತ್ತು
ಜೀವನ ಸಾಗಿಸುವ ದಾರಿ ತೋರಿಸಿ
ನಯ-ವಿನಯವ ತಿಳಿಪಡಿಸಿ
ಕಷ್ಟಗಳನ್ನೆಲ್ಲಾ ದೂರ ಸರಿಸಿ
ಕಾಪಾಡುವವಳು ನನ್ನ ತಾಯಿ
ನನ್ನ ನೋವಿಗವಳು ಕಣ್ಣೀರು ಸುರಿಸುವಳು
ನಾ ನಗುತಿರಲು ಮನದಲ್ಲೇ ಕುಣಿವಳು
ದೇವರು ನನಗೆ ಕೊಟ್ಟ ಅದ್ಬುತವೇ
ನನ್ನವ್ವ, ಹಡೆದವ್ವ
ತೀರಿಸಲಾಗದು ಈ ಜನ್ಮದಲ್ಲಿ ಅವಳ ಋಣ
ಕಾಯುವೇ ನಾನು ಅವಳನ್ನು ಪ್ರತಿಕ್ಷಣ
ಎಲ್ಲಾ ದೇವರಿಗಿಂತ ಮಿಗಿಲು
ಹೆತ್ತ ತಾಯಿಯ ಪ್ರೀತಿ ನೆರಳು
ನವ ಮಾಸ ನೋವ ಉಂಡು
ಜೀವತುಂಬಿ ಹಡೆದಳು
ಮಡಿಲ ಮಗುವ ನಗುವ ಕಂಡು
ನೋವನೆಲ್ಲಾ ಮರೆತಳು
ಪುಟ್ಟ ಮಗುವಿನ ಭವ್ಯ ಭವಿಷ್ಯದ
ನೂರು ಕನಸು ಕಂಡಳು
ಎಲ್ಲಾ ಕಶ್ಟದ ನೊಗವ ಹೊತ್ತು
ಹಗಲು ರಾತ್ರಿ ದಣಿವಳು
ಹೆಜ್ಜೆ ಇಡಲು ಬರದೆ ಬಿದ್ದರೆ
ಬಿಕ್ಕಿ ತಾನು ಅಳುವಳು
ತೊದಲ ನುಡಿಯ ಮಾತು ಕೇಳಿ
ಜಗವ ಮರೆತು ನಗುವಳು
ಎಲ್ಲಾ ಜನರ ಕಷ್ಟ ಕಾಯಲು
ದೇವರಿಂದ ಆಗದು
ತಾಯಿ ಅನುವು ಜೊತೆಯಿದ್ದರೆ
ಏನೂ ಕಷ್ಟಬಾರದು
ಹೆತ್ತವಳು ಅವಳೇ, ಹೊತ್ತವಳು ಅವಳೇ
ಹೊರೆಯಾಕೆ ಆಗುತಿ ಅವಳಿಗೆ?
ಬಡಿಯುವವಳು ಅವಳೇ, ಬಡಿಸುವವಳು ಅವಳೇ
ಬಾರ ಯಾಕ ಆಗುತಿ ಅವಳಿಗೆ?
ಬಣ್ಣದ ಆಟ ಅವಳಿಗೆ ಗೊತ್ತಿಲ್ಲ
ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ
ಹಸಿದಾಗ ಊಟ ಹೊಟ್ಟೆತುಂಬಾ ಬಡಿಸ್ತಾಳ
ನಡಿಯೋದು ಕಲಿಸಿ, ನಕ್ಕು ನಲಿತಾಳ
ಯಾರೇನೆ ಹೇಳಿದರು ನನ
ಮಗನೆ ಬಾರೀ ಅಂತಾಳ
ಕೊನೆಗೊಮ್ಮೆ ಉಸಿರು ನಿಂತರೂ
ನಿನ್ನ ಮನದಲ್ಲೆ ಉಳಿತಾಳ
ತಾಯಿ ಎಂದರೆ ಪ್ರೀತಿ
ಅವಳಿದ್ದರೆ ಇರುವುದಿಲ್ಲ ಭೀತಿ
ಬದುಕಲು ಕಲಿಸುವ ಅವಳ ರೀತಿ
ಯಾರಿಲ್ಲ ಅವಳಿಗೆ ಸರಿಸಾಟಿ..
ಮನದ ಹುಡಗಿಯ ಅಂದಕ್ಕೆ ಮನಸೋತು
ಅಮ್ಮನ ಮನಸಿನ ಅಂದವನ್ನು ದೂರ ಮಾಡಿದೆವು
ಮನದ ಹುಡಗಿ ಬೇಡವೆಂದರು ಕೊಡಿಸುವೆವೂ ಕೊಡುಗೆಗಳು
ಅಮ್ಮನೆ ದುಡ್ಡು ಕೊಟ್ಟು ಸಾಸಿವೆ ತಾ ಎಂದರೆ ತರಲಾರೆವು
ಮನದ ಹುಡಗಿಗೆ ಕ್ಷಣಕೊಮ್ಮೆ ಅವಳ ಕಾಳಜಿ ವಿಚಾರಿಸುವೆವು
ಅಮ್ಮ ದಿನ ನಿತ್ಯ ಎದುರುಗಡೆಯಿದ್ದರು ತಿಂದ ಕಾಳಜಿವಹಿಸಲ್ಲ
ಕಾಳಜಿವಹಿಸಿದ ಹುಡುಗಿ ಒಂದು ದಿನ ದೂರ ಸರಿಯುತ್ತಾಳೆ
ಆದರೆ ಅಮ್ಮ ಅವಳು ಸಾವಿನವರಿಗೂ ಮಗನನ್ನು
ಗೊಂಬೆಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾಳೆ
ಅಮ್ಮನಿಗಿಲ್ಲದ ವೈಭವ ಪ್ರೀತಿಸಿದ ಹುಡುಗಿಗೆ ಯಾಕೆ
ಅಮ್ಮನಿಗಿಲ್ಲದ ಕಾಳಜಿ ಪ್ರೀತಿಸಿದ ಹುಡಗಿಗೆ ಯಾಕೆ
ಯೋಚಿಸಿ…?
ಅಮ್ಮ ನಿನಗೊಂದು ಪುಟ್ಟ ಕವಿತೆ
ಪದಗಳಿಗೂ ಸಿಗದ ಅದ್ಭುತ ದೇವತೆ
ಅದೆಷ್ಟೇ ಗೀಚಿದರು ಸಾಲುತ್ತಿಲ್ಲ ನಿನ್ನ ಮೇಲೆ ಕವಿತೆ
ಯಾರುಗೂ ಸಾಟಿಯಿಲ್ಲ ನೀ ತೋರಿಸುವ ಮಮತೆ
ನಿನಗರ್ಪಿಸುವೆ ಈ ಪುಟ್ಟ ಕವಿತೆ
ಮೋಸವಿಲ್ಲ ಆ ನಿನ್ನ ಪ್ರೀತಿಯಲಿ
ಕಪಟವಿಲ್ಲ ನೀ ತಿನ್ನಿಸುವ ತುತ್ತಿನಲಿ
ದುರಾಸೆವಿಲ್ಲ ನಿನ್ನ ತ್ಯಾಗದಲಿ
ಕೊಟಿ ನಮನ ಈ ಪುಟ್ಟ ಕವಿತೆಯಲಿ
ಇರದ ಅಮ್ಮ ಇರುವರೆನ್ನ ಚೆಲುವ ಬರಹದೆ…
ಕಂದ ಬರೆಯೋ ಬರುವೆ ನಾನು ಭಾವ ಪಯಣದೆ…!!
ಬೇಸರವಾದರೆ ಬಾನ ತಾರೆಯ ನೋಡು…
ನಾನಿರುವೆ ಓ ಕಂದ ಮಾತನಾಡು…!!
ನೀ ಮಲಗಲು ನಿನ್ನ ಕವಿತೆ ನಿನಗೆ ಜೋಗುಳ…!
ಮರೆಯದಿರು ದೈವಭಕ್ತಿ ತೊರೆಯೋ ಅಳಲ…!!
ನೆರಳಾಗಿ ನಾನಿರುವೆ ನಿನ್ನ ಕಾಯಲು…
ಸೋಲು ಗೆಲುವಿನಲ್ಲಿ ಇರುವೆ ಧೈರ್ಯ ನೀಡಲು….
ಕಲ್ಪನೆಯಲೆ ನೋಡಯ್ಯ ತಾಯಿಯ ಮಡಿಲು…!!
ಪದಗಳಿಗೆ ಸಿಗದ ಓ ನನ್ನ ದೇವತೆ
ಎಷ್ಟು ಬರೆದರು ಸಾಲದು ನಿನ್ನ ಮೇಲೆ ಕವಿತೆ
ಯಾರಿಗೂ ಸಾಟಿ ಇಲ್ಲ ನೀ ತೋರಿಸುವ ಮಮತೆ
ತಾಯಿ ನಿನಗೆ ಅರ್ಪಿಸುವೆ ಈ ನನ್ನ ಕವಿತೆ
ಮೋಸವಿಲ್ಲ ನೀ ತೋರಿಸುವ ಪ್ರೀತಿಯಲ್ಲಿ
ಕಪಟವಿಲ್ಲ ನೀ ತಿನಿಸುವ ತುತ್ತಿನಲ್ಲಿ
ದುರಾಸೆಯಿಲ್ಲ ನಿನ್ನ ಈ ತ್ಯಾಗದಲ್ಲಿ
ಕೋಟಿ ನಮನ ನಿನಗೆ ಈ ನನ್ನ ಪುಟ್ಟ ಕವಿತೆಯಲ್ಲಿ …
ಹತ್ತಾರು ಕವಿತೆ ಬರೆದಿರಬಹುದು.!!
ನೂರಾರು ಕವಿತೆ ಕೇಳಿರಬಹುದು.!!
ಕಣ್ಣಾರೆ ನೋಡಿದ ಒಂದೊಳ್ಳೇ ಕವಿತೆ ಮಾತ್ರ ಖಂಡಿತಾ ನೀನೇ..
ಅಮ್ಮ, ನೀನು ನನ್ನ ಜೀವಕೆ ಉಸಿರು ಕೊಟ್ಟ ದೇವತೆ..
ನನಗೆ ಪ್ರೀತಿ ಸಹನೆಯಿಂದ ಬದುಕಿನ ಪಾಠ ಕಲಿಸಿದ ದೇವತೆ
ಜಗತ್ತಿನಲ್ಲಿ ಬೇರೆ ಯಾರು ಕೊಡಲಾರರು ತಾಯಿಯ ಮಮತೆ
ನೀ ಸದಾ ನಗುತ್ತಿದ್ದರೆ ಬರಲಾರದು ನನಗೆ ಯಾವುದೇ ಕೊರತೆ
ಅಮ್ಮನಿನ್ನ ಪಾದಕ್ಕೆ ಸಮರ್ಪಿಸುವ ಈ ನಿನ್ನ ಮುದ್ದು ಮಗನ ಕವಿತೆ.
ಇದನ್ನೂ ಓದಿ: –
- Appa Amma Quotes in Kannada (ಅಪ್ಪ ಅಮ್ಮ Quotes)
- Happy Birthday Wishes for Mother in Kannada with Images
Amma Kavanagalu in Kannada Images
ಅಮ್ಮನ ಪ್ರೀತಿ, ತ್ಯಾಗ, ಮತ್ತು ಮಮತೆಯ ಮಹತ್ವವನ್ನು ಈ ಕವನಗಳ ಮೂಲಕ ಕೊಂಡಾಡಲು ಪ್ರಯತ್ನಿಸಿದ್ದೇವೆ. ತಾಯಿಯ ಪ್ರೀತಿ ಎಂದಿಗೂ ಶ್ರೇಷ್ಠ, ಅವಳ ತ್ಯಾಗ ಅಪ್ರತಿಮ, ಮತ್ತು ಅವಳ ಮಡಿಲು ನಮ್ಮ ಜೀವನದ ಶಾಂತಿಯ ತಾಣವಾಗಿದೆ. ಈ ಲೇಖನದಲ್ಲಿ ನೀಡಿದ 50ಕ್ಕೂ ಹೆಚ್ಚು ಕವನಗಳು (amma kavanagalu in kannada) ತಾಯಿಯ ಮಹತ್ವವನ್ನು ಮನಗಾಣಿಸಲು ಸಹಾಯಕವಾಗುತ್ತವೆ ಎಂದು ನಂಬಿದ್ದೇವೆ.
ನಿಮಗೆ ಈ ಕವನಗಳ ಸಂಗ್ರಹ ಇಷ್ಟವಾಯಿತೆಂದು ಆಶಿಸುತ್ತೇವೆ. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇನ್ನಷ್ಟು ಹೃದಯಸ್ಪರ್ಶಿ ವಿಷಯಗಳಿಗಾಗಿ ನಮ್ಮ ಬ್ಲಾಗ್‌ಗೆ ಮತ್ತೆ ಭೇಟಿ ನೀಡಿ. ನಿಮ್ಮ ಬೆಂಬಲವೇ ನಮ್ಮ ಪ್ರೇರಣೆ!
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.