200+ Kannada Love Kavanagalu | ಪ್ರೀತಿಯ ಕವನಗಳು

ಪ್ರೇಮವನ್ನು ಅಭಿವ್ಯಕ್ತಿಸುವ ಕನ್ನಡ ಕವನಗಳು (kannada love kavanagalu) ಪ್ರೀತಿ, ಭಾವನೆ ಮತ್ತು ಸಂಬಂಧಗಳ ಆಳವನ್ನು ಸುಂದರವಾಗಿ ಹಿಡಿದಿಡುತ್ತವೆ. 200ಕ್ಕೂ ಹೆಚ್ಚು ಹೃದಯಸ್ಪರ್ಶಿ ಕವನಗಳೊಂದಿಗೆ ಈ ಕವನಗಳು ಪ್ರೀತಿಯ ಸಾರ್ಥಕತೆಯನ್ನು ಅನುಭವಿಸಲು ಅಥವಾ ಅದನ್ನು ವ್ಯಕ್ತಪಡಿಸಲು ಇಚ್ಛಿಸುವ ಎಲ್ಲರಿಗೂ ಅಮೂಲ್ಯ ಸಂಪತ್ತಾಗಿದೆ. 

ನೀವು ಪ್ರೀತಿಯ ಸಿಹಿ ಕ್ಷಣಗಳನ್ನು ಸಂಭ್ರಮಿಸುತ್ತಿದ್ದೀರಾ, ಪ್ರಿಯತಮರಿಗಾಗಿ ಹಂಬಲಿಸುತ್ತಿದ್ದೀರಾ ಅಥವಾ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕವನಗಳನ್ನು ಹುಡುಕುತ್ತಿದ್ದೀರಾ ? ಹಾಗಿದ್ದರೆ ಈ ಕವನಗಳು ಪ್ರೀತಿಯ ಪ್ರತಿಯೊಂದು ಛಾಯೆಯನ್ನು ಸ್ಪರ್ಶಿಸುತ್ತವೆ ಮತ್ತು ನಿಮ್ಮ ಹೃದಯದ ಮಾತುಗಳನ್ನು ಸುಂದರವಾಗಿ ಹೇಳಲು ಸಹಾಯ ಮಾಡುತ್ತವೆ.

ಈ ಪ್ರೀತಿಯ ಕನ್ನಡ ಕವನಗಳು (kannada Kavanagalu about love) ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಅಥವಾ ಕ್ಯಾಪ್ಶನ್‌ಗಳಾಗಿ ಬಳಸಲು ಅತ್ಯುತ್ತಮವಾಗಿದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು, ಪ್ರೀತಿಯ ಕಥೆಯನ್ನು ಸಂಭ್ರಮಿಸಲು ಅಥವಾ ಸ್ನೇಹಿತರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯನ್ನು ಹಂಚಿಕೊಳ್ಳಲು ಈ ಕವನಗಳು ಅತ್ಯುತ್ತಮ ಆಯ್ಕೆಯಾಗಿದೆ. 

Best Kannada Love Kavanagalu

200+ ಪ್ರೀತಿಯ ಕವನಗಳು | Best Kannada Love Kavanagalu 

ಹೇಳದೆ ಎದೆಯಲ್ಲೆ ಉಳಿದ ಒಲವಿದು ಪರಿಶುದ್ಧ

ನೀ ಸಿಕ್ಕಿದರೂ ಸಿಗದಿದ್ದರೂ ಈ ಪ್ರೀತಿ ನಿನಗೆ ಮಾತ್ರ ಬದ್ಧ

ಪ್ರೀತಿಯ ಹಸಿರಲ್ಲಿ ಮೈ ಮುಟ್ಟುವವರ ನಡುವೆ

ನಿನ್ನ ದನಿ ಕೇಳಿಯೆ ಖುಷಿಪಡುವವನು ನಾನು

ಕಾಲಹರಣಕ್ಕೆ ಪ್ರೀತಿ ಮಾಡುವವನ ನಡುವೆ

ಏಳು ಜನಮವನ್ನೇ ನೀನೆ ಬೇಕೆನ್ನುವ ಪ್ರೇಮಿಯು ನಾನು

ಸಿಗದ ಮರೀಚಿಕೆಯೋ ಕಳೆದುಕೊಳ್ಳುವ ಭೀತಿಯೋ

ಅದೇಕೋ ದೈರ್ಯ ಸಾಲಲಿಲ್ಲ ನನ್ನ ಪ್ರೀತಿ ಹೇಳಲಿಲ್ಲ

ಆದರೂ ನನ್ನ ಪ್ರೀತಿಯ ಸೋಲಲಿಲ್ಲ ಪ್ರೀತಿಗೆ ಸಾವಿಲ್ಲ

ಹೇಳದೆ ಎದೆಯಲ್ಲೆ ಉಳಿದ ಒಲವಿದು ಪರಿಶುದ್ಧ

ನೀ ಸಿಕ್ಕಿದರೂ ಸಿಗದಿದ್ದರೂ ಈ ಪ್ರೀತಿ ನಿನಗೆ ಮಾತ್ರ ಬದ್ಧ

 

ಮನವ ಸೆಳೆದ

ಮಾಟಗಾರನೋ ….

ಪ್ರೀತಿ ಕಲಿಸಿದ

ಆಟಗಾರನೋ…..

ಮಿಡಿವ ಹೃದಯದ

ಏರಿಳಿತವ ಹೆಚ್ಚು ಮಾಡಿದ

ಓಟಗಾರನೋ..

ಓಟದಲ್ಲೂ

ಸಿಹಿ ಬುಗ್ಗೆಯನು

ಸೂಸಿದ ರಸಿಕನೋ…, 

 

ಹೂವೇ ಹೂವೇ ನಗುವ ಮಾತೇ ನೀನು

ಹೊರಳಿದ ಗುಲಾಬಿ ಬಣ್ಣ

ಸುಂದರ ಸುಕೋಮಲ

ನಿನ್ನ ನೆನಪೇ ಒಂದು ಕವನ

ನೀನು ಒಂದು ಸುಂದರ ಭಾವ

ನಿನ್ನ ಪ್ರೀತಿ ಒಂದು ಕಥನ, ನೀನೊಂದು ಸುಂದರ ಕವನ

ನೀನು ಬಂದ ಮೇಲೆ ಸದಾ ಸದಾ ನಗುತ್ತಿದೆ ನನ್ನಿ ಮನ

ಇರಬೇಕು ನಮ್ಮಿಬ್ಬರ ಪ್ರೀತಿ ಚಿರ #ಯೌವನ ನೆನೆಯದೆ ಇರಲಾರೆ ನಿನ್ನ ಪ್ರತಿ ಕ್ಷಣ ಕ್ಷಣ, 

 

ನೀ ಎದುರಿಗೆ ಬಂದಾಗ

ಎಲ್ಲವನ್ನೂ ಹೇಳಿಬಿಡಬೇಕೆಂಬ

ಹುಂಬ ಧೈರ್ಯವೂ

ಇಂದು ಇಲ್ಲದಾಗಿದೆ

 

ಖಾಲಿ‌ ಹಾಳೆಯಲಿ

ನನ್ನೆದೆಯ ಮಾತುಗಳು

ಅಕ್ಷರ ರೂಪ ತೆಳೆದು

ನಿನ್ನ ಸೇರಲು ಪ್ರಯತ್ನ ನಡೆದಿದೆ

 

ಎಂದೂ ಏನನ್ನೂ ಬರೆಯದವನಿಗೆ

ಮಧುರ ಭಾವಗಳು

ನಾನೂ ಬರೆಯಬಲ್ಲೆನು

ಎಂಬುದನ್ನು ಪ್ರೀತಿ ಕಲಿಸಿದೆ

 

ನಿಜ ಪ್ರೀತಿಯಲ್ಲಿ

ಎಲ್ಲರೂ‌ ಕವಿಗಳಾಗುತ್ತಾರೆ.

 

ನಿನ್ನ ಹೃದಯದ ಪುಟಕೆ

ಮನದ ಭಾವನೆ ಬೆರೆಸಿ

ಬರೆದೆ ಒಲುಮೆಯ ಕವನ

ನಿನ್ನ ಒಲವನು ಬಯಸಿ,

ಮಾತು ಮೌನವಾಗುವ ತನಕ

ಹೃದಯ ಬಡಿತ ನಿಲ್ಲುವ ತನಕ

ಈ ಜೀವ ಮಣ್ಣಿಗೆ ಸೇರುವ ತನಕ

ಕೊಡಲಿ.. ನಿನ್ನ ಪ್ರೀತಿ ನನ್ನ

ಮನದಲಿ ಪುಳಕ… 

 

 ನಮಗಾಗಿ ಮಿಡಿದ ಹೃದಯವೇ

ಪ್ರಾರಂಭದಲ್ಲಿ ನಮ್ಮಗಿಂತ

ಹೆಚ್ಚಿನ ಕಾಳಜಿಯನ್ನು ವಹಿಸುವುದು,.

ಆ ಮಿಡಿದ ಹೃದಯಕ್ಕೆ

ನಾವು ಕಾಳಜಿ ತೋರುವ ಹೊತ್ತಿಗೆ

ಮಿಡಿದ ಹೃದಯವು

ನಮ್ಮನ್ನು ತೊರೆದು ಹೋಗಿರುತ್ತೆ……

“ಪ್ರೀತಿಸಿದವರು ಶಾಶ್ವತವಲ್ಲಾ,

ಪ್ರೀತಿ ಶಾಶ್ವತ”

 

ತಂಪೇರಿಸುವ ಮೈತುಂಬಿದ ಕೆರೆಗಳು

ಭೂವಿಯೆಲ್ಲ ಹಸಿರಾಗಿರಸುವ ಗಿಡ ಮರಗಳು

ಸಂಗೀತಮಯ ನಾದಮಯವಾಗಿಸುವ ಚಿಲಿಪಿಲಿ ಹಕ್ಕಿಗಳು

ಅನನ್ಯ ಪ್ರೀತಿಯ ಅನ್ಯೊನ್ಯತೆಯ #ಅವಿಭಕ್ತ ಕುಟುಂಬಗಳು

ಮನುಜನ ನಿಸ್ವಾರ್ಥ ಪ್ರೀತಿ ಸ್ನೇಹಮಯಿ ಸಂಬಂಧಗಳು

 

ಭುವಿ ಕೆನ್ನೆ ತುಂಬ

ಮುಗಿಲು ಸುರಿದ ಮುತ್ತಿನ ಗುರುತು

ನನ್ನ ಎದೆಯ ತುಂಬ

ಅವಳು ಬಂದ ಹೆಜ್ಜೆಯ ಗುರುತು

ಹೆಜ್ಜೆ ಗೆಜ್ಜೆಯ ಸವಿ ಸದ್ದು

ಪ್ರೇಮನಾದವೋ

ಎದೆ ಮುಗಿಲಿನಲ್ಲಿ

ರಂಗು ಚೆಲ್ಲಿ ನಿಂತಳು ಅವಳು

ಬರೆದು ಹೆಸರ ಕಾಮನ ಬಿಲ್ಲು

ಏನು ಮೋಡಿಯೋ

 

ಒಲವ ಚಂದಮಾಮ

ನಗುತ ಬಂದ ಮನದಂಗಳಕೆ

ಪ್ರೀತಿ ಬೆಳಕಿನಲ್ಲಿ

ಹೃದಯ ಹೊರಟಿದೆ ಮೆರವಣಿಗೆ, ಮುದ್ದು ಮನಸ್ಸೆ ಪೆದ್ದು ಮನಸ್ಸೆ

ಬುದ್ದಿ ಇಲ್ಲದ ಮನಸ್ಸೆ…

 

ಸದ್ದು ಮಾಡದೆ ಸುದ್ದಿ ಮಾಡಿದೆ

ಪ್ರೀತಿ ಬಂದಿದೆ ವಯಸ್ಸೇ…

 

ಸೂಚನೆ ನೀಡದೆ ಬರುವುದೇ ಪ್ರೇಮಾ

ಕುಂತರೂ ನಿಂತರು ಕುಣಿಸುವ ಪ್ರೇಮ…

 

ಇದು ಮೊದಲ ಸಲದ ಮಿಲನ

ಪದ ವಿರದ ಮೌನ ಕವನ…

 

ಮಳೆಯಲ್ಲಿ ನೆನೆಯುವಾಗ

ಮೊದಲ ನೆನಪು ನಿನ್ನದೇ

ಸೂರ್ಯನು ಉದಯಿಸುವಾಗ

ಮೊದಲ ನೆನಪು ನಿನ್ನದೇ

ನಾನು ಬರೆಯುವ ಮೊದಲ ಕವನ ನಿನ್ನದೆ ನನ್ನ ಮೊದಲ ಪ್ರೀತಿ ನಿನಗೆ ನನ್ನ ಸರ್ವಸ್ವವೂ ನಿನಗೆ 

 

ಹೇಳಲು ಆಗದ ಅನುಬಂಧವಿದು

ಬೆರೆತು ಹೋಗಿದೆ ಆತ್ಮದಲ್ಲಿ

 

ಹತ್ತಿರ ವಿರಲಾಗದ ಅಪರಿಚಿತೆ ನಾನು

ಪರಾಜಿತಳಾಗಿರುವೆ ನಿನ್ನ ಪ್ರೀತಿಯಲಿ

 

ದೂರದಿಂದಲೇ ಅನುಭಾವಿಸುವೆ ನಿನ್ನನ್ನು

ನಿನ್ನ ಆಲೋಚನೆಯೊಂದಿಗೆ ಹುಟ್ಟಿ

ಮುಗಿಯುವುದು ದಿನ ನಿನ್ನ ನೆನಪಲ್ಲಿ

 

ಆಗಸದಷ್ಟು ಪ್ರೀತಿ ಮನದಲ್ಲಿ

ತೋರಿಸಲಾಗದ ವಂಚಿತೆ ನಾನ್ನಿಲ್ಲಿ, ಹಚ್ಚಿ ಬಿಟ್ಟಿ ಗೆಳತಿ ನೀ ನನಗ ಪ್ರೀತಿ ಥಂಡೀನ,

ನಾ ನಿನಗ ತರಬೇಕಂತ ಕಾಯಕತ್ತೀನಿ ದಂಡೀನ,

ಒಮ್ಮೊಮ್ಮೆ ನಕ್ಕು ನನ್ನ ಹ್ರದಯ ಹೊಕ್ಕು,

ನಾನ್ಯಾರು ಅನ್ನೋದ ನನಗ ಮರಸಿ,

ನನಗನ ಅರಿವಿಲ್ದ ನೂರೊಂದು ಕವನ ಬರಸಿ,

ಮತ್ತೊಮ್ಮೆ ನೋಯಿಸಿ ಕಣ್ಣೀರ ತರಸಿ,

ಇನ್ನೊಮ್ಮೆ ಏನೇನ ಹೇಳ್ತಾ ನಗಸಿ,

ನೀನಾದಿ ನನ್ನ ಎದಿಯ ನಿವಾಸಿ,

ಮನಸ ಬಾಗಲಕೋಟೆಯ ತಗಿಸಿ…..

ನಿನ್ನ ನೆನಪಿನಲ್ಲಿ ಗೀಚಲು

ಹೊರಟಿದ್ದೆ ಒಂದು ಕವನ

ಮುಂದೆ ಸಾಗುತ್ತಿಲ್ಲ ಬರವಣಿಗೆ..।

 

ಪ್ರೀತಿ ಸತ್ತ ಊರಿನಲ್ಲಿ

ನಡೆಯುವುದಾದರೂ ಹೇಗೆ

ಕನಸುಗಳ ಮೆರವಣಿಗೆ..!!

 

ನೀನು ಮತ್ತು ನಾನು;

ಮಾತು ಮತ್ತು ಮೌನ

ಕಥೆ ಮತ್ತು ಕವನ

ಪ್ರೀತಿ ಮತ್ತು ಯೌವನ

ಹೋಮ ಮತ್ತು ಹವನ

ವಾಸ್ತವ ಮತ್ತು ಕಲ್ಪನಾ…, ರಾತ್ರಿಯಿಡೀ ಮಗ್ಗಲು ಬದಲಿಸುವ ಮೌನ

ಹಂಬಲಿಸಿ ಜಿನುಗುಡುವ ಕಣ್ಣಂಚಿನ ಕವನ…

ಹೀಗೆ ನರಳಿದರೆ ಪ್ರೀತಿ

ಹೃದಯ ಅರಳುವುದಿಲ್ಲವೆ ಗೆಳತಿ…, 🎶ಪ್ರೀತಿ ಎಂದರೆ ವಿಷಾದ ಅಂದುಕೊಂಡರೆ

ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ

ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ

ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ…

ನನ್ನ ಸೇರದ ನಿನ್ನ ಪ್ರೀತಿಗೆ ತುಸು ಆರೈಕೆ ಹೆಚ್ಚೇನೆ ಇರಲಿ

ಮನಸು ಮುರಿದ ಪಯಣ

ಇದುವೇ ಕೊನೆಯ ಕವನ

ಒಲವ ಮೊದಲ ಮರಣ..

 

ಪ್ರೀತಿ-ಪ್ರೇಮದ ಅರುಹಿಲ್ಲದವಳು ನೀನು

ಅದರಲ್ಲೇ ತೇಲುವವನು ನಾನು

ಅರ್ಥವಾಗದು ನಿನಗೆ ಏನೇ ಬರೆದರೂ ನಾನು

 

ಕೇಳಬಹುದೇನೋ ಎಂಬ ಆಶಯ ಒಂಚೂರು

ಬಿಡುವು ಮಾಡಿಕೊಂಡು ಹತ್ತಿರ ಕೂರು

ಹೃದಯದಲ್ಲಿವೆ ಪಿಸುಮಾತು ನೂರಾರು

 

ನನಗರಿವಿಲ್ಲದೆಯೇ ಪ್ರೀತಿಸಿದೆ ನಿನ್ನನು

ನಿನ್ನವನ್ನಾಗಿ ಮಾಡಿಕೊ ನನ್ನನು

ಆ ದೇವನಲ್ಲಿ ಬೇಡೆನು ಇನ್ನೇನು

 

ಎಲ್ಲಿಯೂ ಹೋಗದ ಬಸ್ನಲ್ಲಿ ಕುಳಿತವನು ನಾನು..

ಕೈಯಲ್ಲಿ  ಕಾಸು ಇಲ್ಲದಿದ್ದರೂ ಟಿಕೇಟು ಕೇಳಿವೆನು..

ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸುವ ಹುಚ್ಚ ನಾನು .

ಈ ಹುಚ್ಚನಲ್ಲೂ ಬೆಚ್ಚನೆಯ ಪ್ರೀತಿ ಕಂಡವಳು ನೀನು…

ಜಟಕಾ ಗಾಡಿಯಲ್ಲಿ ಕೂರಿಸಿಕೊಂಡು ಕಿತ್ತೊದ್ ಕವನ ಹೇಳುತ್ತಿದ್ದೆ ನಾನು…

ಗೊತ್ತೇ ಆಗಲಿಲ್ಲ ಯಾವಾಗ ಇಲ್ಕೊಂಡು ಹೋದೆ ನೀನು…, ಹೃದಯದ ಕದವನು ಮೆಲ್ಲನೆ ತಟ್ಟಿ,

ಹೋದೆಯಲ್ಲ ನೀ ಕಾಯದೇ,

ಅಂದಿನಿಂದ ಹೃದಯ, ತೋರಣ ಕಟ್ಟಿ,

ನೀ ಬರುವ ಹಾದಿಯನ್ನೇ ನೋಡುತಿದೆ.

 

ತಟ್ಟಿದ ಶಬ್ದ ಇನ್ನೂ ಕಂಪಿಸುತಿದೆ,

ಹಿತವಾದ ಕಂಪನಗಳು ಅಲೆಗಳಾಗಿವೆ,

ಆಸೆಯೆಂಬ ದೋಣಿ ತೀರದಲಿ ಕಾಯುತಿದೆ,

ನೀ ಬಂದಾಗ ಹುಟ್ಟು ಹಾಕಲು ಕಾಯುತಿರುವೆ., ಪ್ರೀತಿಯಿಂದ ಸಾಕಿದ ಜೀವ…

ಕೆಲ ಸಮಯ ಬಿಟ್ಟಿರಲಾರದೆ…

ಕಣ್ಣೀರ್ ಹಾಕುತ ಇರುವಾಗ….

ಆ ಮನೆಗೆ ನಾ ಅತಿಥಿ ಆದ ದಿನ….

ಕಣ್ಣೀರಿನ ಮಳೆ ಸುರಿಯುವುದೇನೋ….

ಆ ಸಮಯ ದೂರದಿ ಇರಲಿ….

ಹತ್ತಿರ ಬರುವುದಕ್ಕೆ ಸಮಯ ತೆಗೆದುಕೊಳ್ಳಲಿ, ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ

ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ

ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

 

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ

ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು

ಅವನ ಚೆಲುವ ಹೇಳುವೇ ನೀನು ನಾಚಬಾರದು, ಪರಿತಪಿಸುವ ಮನದೊಳಗೆ

ಪ್ರತೀಕ್ಷೆಯ ತಾಪ

ಪ್ರತಿಕ್ಷಣ ಬಿಡದೆ ಸುಡುತ್ತಿದೆ ಒಡಲ

 

ಅಲೆದಾಡಿದೆ ಮನ

ಅಲೆಮಾರಿಯ ಹಾಗೆ

ಆಲಿಸಬಾರದೆ ಈ ಹೃದಯದ ಕರೆ

ಅರಿಯದಾಗಿದೆ ನಿನ್ನ ಅಂತರಾಳದ ಬಗೆ

 

ಕಾಣಲು ನಿನ್ನನು

ಚಡಪಡಿಸಿದೆ ಮನ

ಹುಡುಕಲಿ ನಿನ್ನನು  ಹೇಗೆ

ತಿಳಿಯದೆ ತಲ್ಲಣಿಸಿದೆ ನಾ, ಪದವಾಗು ನೀನು

ಕಾವ್ಯವಾಗಿ ಜೊತೆಯಿರುವೆ ನಾನು

ಸಾಗರವಾದರೆ ನೀನು

ನದಿಯಾಗಿ ನಿನ್ನ ಸೇರುವೆ ನಾನು

ಕಣ್ಣಾಗು ನೀನು

ದೃಷ್ಟಿಯಾಗುವೆ ನಾನು

ಭಾವವಾಗು ನೀನು

ಮಾತಾಗುವೆ ನಾನು

ಹೆಜ್ಜೆಯಾಗು ನೀನು

ಅದರ ಸದ್ದಾಗುವೆ ನಾನು

ಉಸಿರಾದೇ ನೀನು

ಬದುಕಿಹೆನು ನಾನು

 

ಕೆಲವೊಂದು ಆಯ್ಕೆ ನನ್ನದೇ ತಪ್ಪು ಯಾರದೆಂದು ಹೇಳಲಿ

ಕೆಲವೊಂದು ನಿರ್ಧಾರ ನನ್ನದೇ ಯಾರನ್ನ ಅಪಾರ್ಥ ಮಾಡಿಕೊಳ್ಳಲಿ

ಕೆಲವೊಂದು ಕನಸು ನನ್ನದೇ ಯಾರಿಗೋಸ್ಕರ ಕಣ್ಣೀರು ಹಾಕಲಿ

ಕೆಲವೊಮ್ಮೆ ಅತಿಯಾದ ಪ್ರೀತಿ ನನ್ನದೇ ಯಾರಿಗೆಂದು ನಾ ತೋರಿಸಲಿ 

 

ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! 

ನನ್ನ ಹೃದಯದಲ್ಲಿ ಶೇಕರಿಸಿದ್ದೆ 

ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ… 

ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿ…

ಪ್ರೀತಿ ಇರುವುದು ನಂಬಿಕೆ ಇರುವ ತನಕ

ಕನಸು ಬೀಳುವುದು ಏಳುವ  ತನಕ 

ಪ್ರಾಣ  ಇರುವುದು ಆತ್ಮ  ಇರುವ  ತನಕ

ಸ್ನೇಹ  ಇರುವುದು ಉಸಿರು ಇರುವ  ತನಕ

 

ಅಳಿಸಲಾಗದೆ ಸೋತಿಹ ಹೃದಯ..

ಅಳಿದರೂ ತೊರೆಯದಿ ಮನವ..

ಸ್ಮೃತಿಯ ಕೋಣೆಗಳಲ್ಲಿ ಅಡಗಿಹ..

ಕಳೆದ ಕ್ಷಣಗಳು ಮೂಡಿಸಿದ ಛಾಪುವೆ…ನೆನಪು.., ಅವಳಿಗೇಳುವ ಮಾತುಗಳಾದವು ಕವನ..

ಕಾರಣ, ನನ್ನಲ್ಲಿ ಅವಳ ಪ್ರೀತಿಯ ಸಂಚಲನ..

ಯಾಕೆ ದೂರ ಮಾಡುತಿದೆಯೋ ಅವಳ ಮನ..

ಇರಬಹುದೇನೋ ನನ್ನ ಪ್ರೀತಿ ಮೇಲೆ ಅನುಮಾನ..

ಕಾಯುವೆ, ಎಂದಾದರಾಗಲಿ ಆಕೆಯ ಆಗಮನ., ಕಲ್ಪನೆಯ  ಕವನ…

 

ಅರ್ಥ  ಆಗಲಿಲ್ಲ ಅವಳಿಗೆ  ನನ್ನಈ  ಪ್ರೀತಿ..

ಭವಿಷ್ಯ. ಸರಿಯಾಗಿ  ಇರಲಿಲ್ಲವೆನೊ ನಾನು ತೋರಿಸುವ ರೀತಿ…

ಇರುವುದು ಒಂದೇ ಜೀವನ

ಮಾಡಿಕೊಳ್ಳೋಣ ಪಾವನ

ಮಾಡಲೇಬೇಕು ಪ್ರೀತಿನ…?

ಪ್ರೀತಿ ಮಾಡಿಲ್ಲ ಅಂದ್ರೆ ಮಾಡಲ್ವಾ ಮದುವೆನಾ..?

ಅದಕ್ಕೆ ಇಲ್ಲಿಗೆ ಬಿಟ್ಟುಬಿಡೋಣ ಪ್ರೀತಿ-ಪ್ರೇಮ ಎಂಬ ಕವನ

 

ಅವಳು  ಕಣ್ಣಿದ್ದರು

ಕುರುಡಿಯ  ಹಾಗೆ..!

ನಾನು ಬಾಯಿ ಇದ್ದರು

ಮೂಗನ  ಹಾಗೆ ..!

ಕಾರಣ

ಅವಳಿಗೆ  ನನ್ನ. ಪ್ರೀತಿ

ಕಾಣಿಸದೆ  ಕುರುಡಿಯಾದಳು..!

ನನಗೆ  ಅದೇ ಪ್ರೀತಿ  ಹೇಳೋಕೆ

ಆಗದೆ  ಮೂಗನದೆ …!

 

ನಿನಗಾಗಿ ಕಾಯುತಿರುವೆ

ನೀ ಬಂದಾಗ ಅದೇನೋ ವಿಸ್ಮಯ

ನೀ ನಕ್ಕಾಗ ಅದೇನೋ ಖುಷಿ ನನಗೆ

ನೀ ಅತ್ತಾಗ ಅದೇನೋ ದುಃಖ ನನಗೆ..

 

ನಿನ್ನ ಹೊಸತನ ನನ್ನಲ್ಲಿ ಚೇತನ

ನಿನ್ನ ಪ್ರೀತಿ ವಿಶ್ವ ವಿನೂತನ

ನೀ ಕರೆದೆ ನನ್ನನ್ನು ಕಂದ

ನೀ ಕರೆದಾಗ ನನ್ನ ನಗು ಚಂದ..

 

ನಿನ್ನ ಹೂ ನಗೆ ನನಗೆ ಮುಗುಳ್ ನಗೆ

ನೆನಪಿಡುವೆ ನಿನ್ನ ನಗೆಯನ್ನ

ಮರೆಯ ಬೇಡ ನನ್ನ ನೆನಪಿನ ಈ ಕವನ..

 

ನೋಟಗಳೆರಡು ಬೆರೆತಾಗ

ಸಿಕ್ಕಿತು ಹೊಸ ನಂಟಿಗೆ ಜಾಗ

ಪ್ರೀತಿಯು ದಕ್ಕಿದ ಸುಯೋಗ

ಎರಡು ಹೃದಯಗಳ ಸಂಯೋಗ

 

ಮೌನವೇ ಇಲ್ಲಿ ಪೂಜೆಯಂತೆ

ನಗುವೆ ಇಲ್ಲಿ ಧ್ಯಾನವಂತೆ

ಹೃದಯಗಳ ಪ್ರೀತಿ ಮಾತೆ

ಮೌನರಾಗದ ಕವಿತೆ

 

ಹರಿಯದ ಈ ಕೊಡುಗೆ

ಮನಸು ಮನಸುಗಳ ಬೆಸುಗೆ

ರತಿ ಮನ್ಮತರಂತ ಮಿಲನ

ಪ್ರೀತಿ ತುಂಬಿದ ಕವನ

 

ಬಾಳ ನಭದಲಿ

ರೆಕ್ಕೆ ಬಿಚ್ಚಿವೆ ಹಕ್ಕಿಗಳು

ಒಲವ ನಶೆಯಲ್ಲಿ ನಿಂತು

ಮಿನುಗುತ್ತಿದೆ ಜೋಡಿ ಚುಕ್ಕಿಗಳು

 

ಕಾರಣವೂ ಬೇಕಿಲ್ಲ

ಪ್ರಣಯ ಪಕ್ಷಿಗಳ ಭೇಟಿಗೆ

ಪ್ರೇರಣೆಯು ಜಗವೆಲ್ಲ

ಬಾಳಿ ಬದುಕಲು ಒಟ್ಟಿಗೆ

 

ನಿನ್ನ ನೆನಪಿನಿಂದ

ಹುಟ್ಟಿದ ಈ

ಕವನ

ನಿನ್ನದೋ

ನನ್ನದೋ ..

ಗೊಂದಲವಿದೆ!

 

ನಿನ್ನ ಎದೆಯಾಳದ

ಹಂದರಕ್ಕೆ

ಈಜು ಬಾರದೆ

ಇಳಿದು

ದಿಕ್ಕಾಪಾಲಾದ

ನನ್ನ ಸ್ಥಿತಿಗೆ

ಪರಿಭ್ರಮಿಸುತ್ತೇನೆ…

ಕೆಲವೊಮ್ಮೆ

ಸಂಭ್ರಮಿಸುತ್ತೇನೆ..!

 

ನೀ ನನಗೆ

ನಷ್ಟವಾಗಬಹುದು ..

ಎಂದಲ್ಲ..

ನಾನಿನಗೆ

ನಷ್ಟವಾದರೆ

ನನ್ನಷ್ಟು ನಿನ್ನ

ಯಾರು ತಾನೇ

ಪ್ರೀತಿ ಮಾಡಿಯಾರು

ಎಂಬ ಭಯವಿದೆ….!

 

ನಿನ್ನೊಲುಮೆಯ

ರಾಗವನ್ನು

ಪದಗಳಲ್ಲಿ

ಕಟ್ಟಿ ಹಾಕುವ

ವ್ಯರ್ಥ ಪ್ರಯತ್ನ

ಈ ಕವನ

 

ನಿನ್ನ ಕಾಡುವ

ನೆನಪುಗಳಿಗೆ

ಲಗಾಮು ಹಾಕುವ

ಪ್ರಯತ್ನದಲ್ಲಿ

ಪ್ರತೀ ಬಾರಿ

ಸೋಲುತ್ತಿದ್ದೇನೆ..

 

ಅವಳಿಗೆ ನನ್ನ ಪ್ರೀತಿ ಏನೆಂದು ತಿಳಿಸಬೇಕಿತ್ತು

ಮನಸ್ಸಲ್ಲಿ ಬಚ್ಚಿಟ್ಟ ಎಷ್ಟೋ ಆಸೆಗಳಿಗೆ ಅತಿಥಿ ಅದವಳು

ಹುಡುಕಿದರೂ ಸಿಗದಷ್ಟು ದೂರ ಇದ್ದವಳು

ಅವಳ ಹೃದಯವೆಂಬ ಮನೆಯಲ್ಲಿ ನಾ ರಾಜ ಆಗುವ ಆಸೆ ಕಂಡವನು

ದುರ್ವಿಧಿಯೂ ಕೂಡ ನನ್ನ ಪ್ರೀತಿಗೆ ಅಡ್ಡ ಆಯ್ತು

ನನ್ನ ಮನಸ್ಸಿನಲ್ಲಿ ಕೂಡ ಅವಳಿಗೆ ಬಿಟ್ಟರೆ ಬೇರೆ ಯಾರಿಗೂ ಜಾಗವಿಲ್ಲ

ಆದರೆ ಅವಳ ಮನಸ್ಸಿನಲ್ಲಿ ನಾನೇ ಇಲ್ಲ 

ಆ ವಿಷಯ ಕೇಳಿ ನನ್ನ ಮನಸ ಕೂಡ ಚೂರು ಚೂರು ಆಯ್ತು.. 

 

ನಿನ್ನೊಳಗೆ ಒಳಗೆ

ಹುದುಗಿರುವ ಎದೆಗೆ

ನಾ ಬಿಡದೆ ಬಿಡಲೇ

ಹೂ ಬಾಣ

 

ನಿನ್ಮನಸಿನೊಳಗೆ

ಹೊಸ ಭಾವ ಬೆಸೆದು

ನಾ ಮಾಡಿಬಿಡುವೆ

ಹೊಸ ತಾಣ

 

ನಿನ್ನ ನೋಡು ನೋಡುತಲೇ

ಪ್ರೀತಿ ಗರಿ ಚಿಗುರಿ

ಗೀಚಿ ಬಿಡುವೆ

ಪ್ರಣಯ ಕವನ

 

ನಿನ್ನ ಪ್ರೀತಿ ರಾಗಕೆ

ಮೋಹ ಪಾಶಕೆ

ಸಿಲುಕಿ ಸವಿವೆ

ಮಧು ಪಾನ

 

ನಿನ್ನ ಸನಿಹ ಬಯಸುತಾ

ಹಾತೊರೆದು ಬರುವೆ

ಆವರಿಸು ಕೊಟ್ಟು

ಹೃದಯದಲಿ ಸ್ಥಾನ

 

ನಿನ್ನ ಜನುಮ ಜನುಮದಲಿ

ಪ್ರೀತಿ ಮಾಡುವೆ

ದಾಖಲೆ ಯಾಗಲಿ

ನಮ್ಮೀ ಪಯಣ

 

ಪ್ರೀತಿ ಅತೀ ಮಧುರ

ಪ್ರೀತಿಯ ಅಡಿಪಾಯ ಅದರದೇ  ಇದ್ದಾರೆ

ಪ್ರೀತಿ ಎಂದು ಅತೀ ಮಧುರ…ಅಮರ…

ಪ್ರೀತಿಯ ಗುಡಿ ಕಟ್ಟುವ ಮುನ್ನ

ಅಡಿಪಾಯವ ನೋಡಿ ಬಿಡು ಇನ್ನ

 

ಸಲಿಗೆಯ ಪ್ರೀತಿ ಸರ್ವ ನಾಶಕ್ಕೆ ಆಹ್ವಾನ

ಗೌರವದ ಪ್ರೀತಿ ಅಂತ್ರಕ್ಕೆ ಆಹ್ವಾನ

ಉಸಿರನ್ನೇ ನಾ ಪ್ರೀತಿಸಿದೆ..

 

ರುಜುವಾತು ಬೇರೆ ಬೇಕೆ ಪ್ರೀತಿ ಹೇಳೋಕೆ,

ಲೋಕಕ್ಕೆಲ್ಲಾ ನಾವೇ ಸಾಕು ಪ್ರೀತಿ ಹಂಚೋಕೆ..

 

ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ

ಧ್ಯಾನಿಸೋ ದೇವರೇ ಸೋಲುವ ರೀತಿ

ಬಾಗಲೀ ಮಾಗಲೀ ಜೀವ ಇನ್ನೊಮ್ಮೆ, ಮನದ ಕುರ್ಚಿ ಮೇಲೆ ಏಕಾಂಗಿಯಾಗಿ

ಕೂತು

ಮೌನದ ಮಾತುಗಳನ್ನು ನಿನ್ನೊಂದಿಗೆ

ಹಚ್ಚಿಕೊಂಡಿರುವೆ

ಒಮ್ಮೆ ಮುಗುಳುನಗೆಯಿಂದ

ಒಮ್ಮೆ ಕಂಬನಿಯ  ಸರಮಾಲೆಯಿಂದ

 

ಹೀಗೊಂದು ಬರೆದಾ ಕವನ

ನಿನ್ನ ಮೌನವ ಸಹಿಸಲಾಗದೆ ಸಣ್ಣಪುಟ್ಟ ಆಸೆಗಳೆಲ್ಲಾ ಸತ್ತು ಸಮಾದಿಯಾಗಿವೆ

ತುಂಬಾ ಇಷ್ಟಾ ಪಟ್ಟು ಕಟ್ಟಿಕೊಂಡಾ ಕನಸುಗಳೆಲ್ಲಾ ಕರಗಿ ಹೊಗಿವೆ

ಎದೆಯೊಳಗಿನ ಮಾತುಗಳೆಲ್ಲಾ ನಿನ್ನಲ್ಲಿ ಹೇಳದೆ ಕತ್ತಲೆಯಲ್ಲೆ ಅಡಗಿ ಕೂತಿವೆ

ನಿನ್ನಾ ಒಲವಲ್ಲಿ ಮುಳುಗಿದ ಒಂದೊಂದು ಭಾವನೆಗಳೆಲ್ಲಾ ಪ್ರೇಮಕವಿತೆಗಳಾಗಿ ಹೊರ ಹೊಮ್ಮಿತಲಿವೆ

ಹೃದಯದಲ್ಲಿ ಮಿಡಿಯುವ ಪ್ರತಿಯೊಂದು ಮಿಡಿತಗಳು ನಿನ್ನನೆ ನೆನೆಯುತಲಿವೆ

ನೀ ಕೊಟ್ಟಾ ನೆನಪುಗಳು ಮಾತ್ರ ಇಂದಿಗೂ  ಬಿಡದಂತೆ ನನ್ನಾ ಕಾಡುತಲಿವೆ

ನೀ ಎಷ್ಟೇ ದೂರಾ ಹೋದರೂ ನಿನ್ನ ಪ್ರೀತಿಸಿದ ಮನಸಿದು ನಿನ್ನ ಹಿಂದೆಯೇ ಹಿಂಬಾಲಿಸುತಲಿದೆ

ನನ್ನ ಜಗವೆ ನೀನೆಂದು ನಂಬಿದ್ದಾ ಈ ಜೀವಕೆ ಈಗಲೂ ಸಹ ನಿನ್ನದೊಂದೆ ಪ್ರೀತಿ ಬೇಕಾಗಿದೆ

ಬೆಟ್ಟದ ತುದಿಯಲ್ಲಿ ನಿಂತು ನೀನಂದ್ರೆ ನನ್ನ ಪ್ರಾಣ ಎಂದು ಕೂಗಿ ಹೇಳುವ ಆಸೆಯೊಂದು ಹೆಚ್ಚಾಗಿದೆ

ಸಖಿ ಜನುಮ ಜನುಮ ಕಳೆದರೂ ನಾ ನಿನ್ನಾ ಪ್ರೀತಿಸುತ್ತಾ ಆರಾದಿಸುವುದೊಂದೆ ನನ್ನ ಕೊನೆಯಾಸೆಯಾಗಿದೆ

 

ಒಲವ ಧಾರೆ ಸುರಿಸುವಂತೆ

ಎದೆಯಾಳದಿ ನಿಂತೆ ನೀ

ತುಂಬು ಮೊಗವ ಬೊಗಸೆ ಹಿಡಿದು

ಮುತ್ತು ಮಳೇಲಿ ತೊಯಿಸು ನೀ

 

ಪ್ರೀತಿ ಕಾವ್ಯ  ತುಂಬುವಂತೆ

ಗುಬ್ಬಿ ನಾನು ಗೂಡು ನೀ

ಕಣ್ಣ ರೆಪ್ಪೆಯಲ್ಲಿ ಮುಚ್ಚಿ ಹಿಡಿದು

ಬೆಚ್ಚ  ಕಾವ  ನೀಡು ನೀ

 

ಪ್ರೇಮ ಕಡಲ ಅಲೆಯಂತೆ

ತಟಕೆ ಬರೆಯೋ ಕಾವ್ಯ ನೀ

ಭಾವ ಮೊರೆತ ಮನದಿ ಹಿಡಿದು

ಜೀವ ಕಣವ  ಹರಿಸು ನೀ

 

ಬೆಸುಗೆ ಬಂಧ ನಿನ್ನ ತೋಳು

ಬೇಕು ಇನ್ನೂ ನನಗೆ ನೀ

ನನ್ನ ಬಾಳ ಬೆಸೆದು ಹಿಡಿದು

ಆಸೆ ಹೊನಲು ಸುರಿಸು ನೀ

 

ಮಾತಲ್ಲಿರುವ  ಸೌಮ್ಯತೆ

ಮನದಲ್ಲಿಯೂ ಇದ್ದಿದ್ದರೆ

 

ಮೊಗದಲ್ಲರಳುವ ನಗೆಹೂ

ಎದೆಯಲ್ಲೂ ಅರಳಿದ್ದರೆ

 

ಕವನ ಬರಹಗಳ ಸಾಲೊಳು ಸ್ಪುರಿಸುವ ಪ್ರೀತಿ

ಜೀವನದ ಗಾಲಿಯೊಳೂ ಒಸರುತ್ತಿದ್ದರೆ

 

ಬುದ್ದನೆಂಬುವ ಇಲ್ಲೇ ಇದ್ದುಬಿಡುತ್ತಾನೆ..

ಅಶಾಂತಿ ಅಸಹಿಷ್ಣುತೆಯ ಕದ್ದುಬಿಡುತ್ತಾನೆ..

 

ನಿನ್ನ ಕಂಡಾಗ ತಾನೇ…..

ಪ್ರೀತಿ ಹುಟ್ಟಿದ್ದು ಮನಸು ಸೇರಿದ್ದು

ನೀನು . . ನಕ್ಕಾಗ ತಾನೇ ನಾನು

ಇಷ್ಟ ಪಟ್ಟಿದ್ದು  ನಿನ್ನ ಬಳಿ ಸೇರಿದ್ದು

ನಿನ್ನ ಜೊತೇಯಲಿ ಎಂದು ನಾನು

ಜೀವನ ನಡಿಸುವೇನು

ಆಹಾ ಕಷ್ಟವೇ ಬರಲಿ ಯೇನೇ ಆಗಲಿ 

ಜೀವನ ನಡಿಸೋಣ

ನಗುತ ನಗುತಾ ಎಂದು ಹೀಗೇ ಇರುವ ನಾವು

 

ಕೊರೆವ ಸುಳಿಗಾಳಿ

ಸುಮ್ಮನೆ ನಾಟ್ಯವಾಡುಸುತ್ತಿದೆ

ತುದಿ ಬೆರಳ ಸ್ಪರ್ಶ

ಮೈಪೂರ ಓಡಾಡಬೇಕಿದೆ

ಅವನ ಬಿಸಿಯುಸಿರು

ಅಪ್ಪುಗೆ ನನಗೆ ಬೇಕಾಗಿದೆ

ಅಧರಗಳಿಗಧರ

ಬೆರೆಸಿ ಮುತ್ತುಗಳ

ಕೊಟ್ಟು ಪಡೆಯಬೇಕಿದೆ

ಮಾತು ಮೌನ

ಸುರಿಸೆ ಪ್ರೀತಿ ಪ್ರೇಮ

ತನು ಸುಮದಂತೆ ಅರಳಿದೆ

ಮಧು ಹೀರುತ್ತ

ಬಾಹುಬಂದನದಿ ಬಿಗಿದು

ಕೊರೆವ ಚಳಿಗೆ

ಬೆಂಕಿಯ ಬಿಸಿ ಕಾಯಿಸು ಬಾರೊ

 

ನನ್ನಂತ  ನನ್ನನ್ನು ಆಗಾಗ ತಡೆದು ನಿಲ್ಲಿಸಿದ್ದು …

ಇದೇ ನಿನ್ನ ಪ್ರೀತಿ ಶಾಯಿರಿ.!

ಪ್ರೀತಿಯ ಆಳದಿಂದಲ್ಲ,

ನನ್ನೆದೆಯಲಿ ಸದ್ದಾಗುವ ನಿನ್ನ ನೆನಪಿಂದ.

 

ನನ್ನಂತ ನನ್ನನ್ನು ಹಾಗೆ ಸ್ಥಬ್ದವಾಗಿಸಿದ್ದು….,

ಇದೇ ನಿನ್ನ ಅಸಹಾಯಕ ಪ್ರೀತಿ ವೈಖರಿ.!

ಕೋಪದ ಕೂಗಾಟದಿಂದಲ್ಲ,

ಬೇಸರದಲ್ಲೂ ಮೂಡುವ ಪುಟ್ಟ ನಗುವಿನಿಂದ.

 

ಹಾಂ….!

ನನ್ನಂತ ನನ್ನನ್ನು ಬೆಚ್ಚಿ ಬೀಳಿಸಿದ್ದು….,

ಅದೇ,,,ನಿನ್ನ ಅಂತರಂಗದ ಮೌನದೈಸಿರಿ…

ಹೇಳಲಾಗದ ಜೀವನ ಪಾಠದಿಂದಲ್ಲ,

ಹಾಗೆ ಬೆರೆತ ಕವಿತೆಯ ಸಾಲಿನಿಂದ..

 

ಮೌನಿ ನೀನು,

ಮಾತು ನಾನು,

ಉಳಿದೆ ಹೋಗಿವೆ ಭಾವಗಳು…

ಓ ಹುಡುಗ,

ಬೆಚ್ಚಗಿದೆ ನನ್ನೊಳಗೆ,

ನಿನಗಾಗಿಯೇ ನನ್ನೆಲ್ಲ ನಾಳೆಗಳು 

 

ಮರೆತರು ಮರಳಿ ಮೂಡುವ ಮರುಳು ಸಾಲುಗಳ ಮೌನ ಅಭಿಸಾರಿಕೆ ನಾ….

 

ಪೂರ್ಣವಾಗುವ ಮೊದಲೇ ನಿನ್ನ

ಸಂಕಲನದಲ್ಲಿ  ಸೇರಿಸಿದ ಅಪರಾಧಕ್ಕೆ,

ಇನ್ನೂ ಕೆಲವು ಸಾಲು

ಕಾಯಬೇಕಿತ್ತು ನಾನು.

 

ಹೂವುಗಳೇ,

ಪೂರ್ತಿ ಅರಳುವ ಮುನ್ನವೇ

ನಿಮ್ಮನ್ನ ಕಿತ್ತದ್ದಕ್ಕಾಗಿ,

ಸೂರ್ಯನ ಬೆಳಕು

ನಿಮ್ಮ ಎಲೆಗಳ ಮೇಲೆ ಪ್ರಾರ್ಥನೆ

ಮಾಡುವಷ್ಟು ಹೊತ್ತಾದರೂ

ಕಾಯಬೇಕಿತ್ತು ನಾನು.

 

ಪ್ರೀತಿಯ ಗೆಳೆಯ

ಕೊನೆವರೆಗೂ,

ಎಲ್ಲಿಯವರೆಗೆ  ‘ಪ್ರೀತಿ’ ಶಬ್ದದ ಬಗ್ಗೆ

ಯಾರಿಗೂ ಏನೂ ಅನ್ನಿಸುವುದಿಲ್ಲವೋ

ಅಲ್ಲಿಯವರೆಗೆ

ನಿನ್ನ ಪ್ರೀತಿಸುತ್ತೇನೆ ನಾನು.

 

ಆದರೆ ಕ್ಷಮಿಸು

ಸಿದ್ಧಳಿರಲಿಲ್ಲ ನಾನು

ಇನ್ನೂ ಸ್ವಲ್ಪ ಕಾಯಬೇಕಿತ್ತು

ನೀನು.

 

ಬಾಳ ಸಂಜೆಯಲಿ ಬಿರುಗಾಳಿ ಎದ್ದಿಹುದು

ಯಾರಲ್ಲಿ ಬಿಚ್ಚಿಡಲಿ ಭಾವ?

ನಗೆಯ ಮುಖವಾಡ ಎಳೆದೆಳೆದು ಹರಿಯುತಿದೆ

ಎಷ್ಟೆಂದು ಬಚ್ಚಿಡಲಿ ನೋವ ?

 

ಕರೆದರೂ ಬಾರದೆಯೇ  ಕಾಡುವವರ ನಡುವೆ

ಕೇಳುವರಾರು ನನ್ನ ಮಾತ

ತಿರುಗಿ ನೋಡುವುದಿಲ್ಲ ಮುಸುರೆ ಹೊತ್ತೊಯ್ಯುವ

ಹಿರಿಯ ತಾಯಿಯು ಸಹಿತ

 

ಕೂಗುವ ಸದ್ದಿನಲೇ ಬೆಳಗಾಗಿಸುತ್ತಿದ್ದ ಹುಂಜ

ಮಸುಕಾಗಿದೆ ಹಿಂದಿನ ಚಿತ್ರ

ನಡುಕ ನಡಿಗೆಗೆ ಊರುಗೋಲಾಗಿ ಒದಗಿ

ಆಧರಿಸುವವರಿಲ್ಲ ವಿಚಿತ್ರ!

 

ತೆರೆದ ಹಿರಿ ಹೃದಯವನು ಸೋಕದೆಯೆ ಇರಬಹುದೆ

ಪ್ರೀತಿ, ಕರುಣೆಯ ಸಿರಿ ಹೊನ್ನು

ತೆರೆಯಬಹುದೆಂದಾದರೂ ತುಸು ಬೆಳಕಿನ ಕಿಟಕಿ

ಭರವಸೆಯು ಉಳಿದಿಹುದು ಇನ್ನೂ

 

ಚಟ್ಟವೇರಿದಾಗ ಮಾತ್ರ ಕಣ್ಣೀರಿನ ಜನನ,

ಚಿತೆವರೆಗೆ ಅಷ್ಟೇ ನಿನ್ನ ನೋಡಿ ಅತ್ತವರ ಪಯಣ!

 

ನೆನಪಗಳು ಮಾಸುವವರೆಗೆ ಹೊಗಳುವರು ನಿನ್ನ ಗುಣವನ್ನ,

ಕೊನೆಗೆ ಕೊನೆಸಿರೆಳದಾಗ ನಿನ್ನವರೆ ನೆನೆಯುವುದಿಲ್ಲ  ನಿನ್ನ!

 

ಬೆಂಕಿ ಇಡುವ ಮುನ್ನವೇ ನಿಲ್ಲುವರು ದೂರ,

ಮನಸ್ಸಿನಲ್ಲಿ ಇಲ್ಲದಿದ್ದರೂ ಹಾಕುವರು ದುಃಖದ ಬಾರ!

 

ಜೀವ ಇದ್ದಾಗ ಯಾರು ಬರಲಿಲ್ಲ ಹತ್ತಿರ, ಎಲ್ಲರೂ ದೂರ-ದೂರ,

ಸತ್ತಾಗ ಹೆಣಕ್ಕೆ ತಮಟೆ, ಸಂಭ್ರಮದ ಜೊತೆಗೆ ಹೂವಿನ ಅಲಂಕಾರ

 

ಎಲ್ಲರ ಜೊತೆಗೆ ಇರಬಹುದು ನಿನ್ನ ನೆನಪು ನೂರು ನೂರು,

ಆದೆ ಮೂರು-ಆರು ದಿನವಷ್ಟೇ ಆಮೇಲೆ ಬಿಡುವರು ಎಳ್ಳು-ನೀರು!.

 

ಬೆಂಕಿ ಹಾಕುವ ಮುನ್ನವೇ ಹೋಗುವರು ಬಿಟ್ಟು,

ಇಷ್ಟೇ ಅರಿತುಕೋ ಯಾರು ನಮ್ಮವರಲ್ಲ! ಇದೆ ಜೀವನದ ಗುಟ್ಟು!!

 

ಹೀರಬೇಕು

ನಿನ್ನನ್ನೊಮ್ಮೆ

ತುಟಿಗಾನಿಸಿ

ನಾಲಿಗೆಗೆ

ರುಚಿ ನೋಡಿಸಿ…

 

ಬರೆಯಬೇಕು

ನಿನ್ನ ಮೇಲೆಯೇ

ನಾ ಕವಿತೆ

ಬೆಚ್ಚಗೆ ನಿನ್ನ ಮೈ ಬಳಸಿ

ಮೆತ್ತಗೆ ಪದ ಘಮಲ ಹಚ್ಚಿಸಿ…

 

ಫಿಲ್ಟರ್ ಕಾಫಿ ವಿತ್

ಲವ್ವಿಂಗ್ ಟಾಫಿ…

 

ಅದರ ಜೊತೆ

ಪ್ರೀತಿ ಪುಡಿಯ ಮಿಕ್ಸು

ಮತ್ತು ಎರಡು ರಸ್ಕು..

ಕಂಡ ಕನಸು ನನಸು…

ಮುಂಜಾನೆಗೂ ಮುಸುಕೆಳೆದು

ಮುದ್ದಿಸುವ ಈ ಸಾಲುಗಳನ್ನು

ನೀನೊಮ್ಮೆ ರಮಿಸು…

 

ಕಣ್ಣಂಚಿನ ಸನ್ನೆ ನೀನು

ತುಟಿಯಂಚಿನ ನಗು ನೀನು

ಎದೆ ಬಿರಿಯುವ ನೆನಪು ನೀನು

ಮನದಾಳದ ಕವನ ನೀನು

ಮಾತಾಗದಾ ಮೌನ ನೀನು

ಕೊನೆವರೆಗೂ ನಿನ್ನ ನೆನಪಿನಲ್ಲಿ ಸಂತೃಪ್ತಳೂ ನಾನು

 

ಕ್ಷಮಿಸು ಬಾ ಗೆಳೆಯ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ಸಾವಿರ ಕನಸುಗಳ ಹೊತ್ತು ಬಾ

ಎಲ್ಲಾ ಗೋಡೆಗಳ ಒದ್ದು ಬಾ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ಎಲ್ಲಾ ನೋವುಗಳ ಮರೆಸು ಬಾ

ಸ್ವರ್ಗವ ಭೂಮಿಗೆ ಇಳಿಸು ಬಾ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ಪ್ರೀತಿ ಪಲ್ಲಕ್ಕಿಯ ಏರಿ ಬಾ

ಕಣ್ಣಿನಲೇ ಜಗವ ತೋರು ಬಾ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ಎಲ್ಲಾ ಕಟ್ಟಳೆಗಳ ತೊರೆದು ಬಾ

ಒಲವ ಸುಧೆಯಾಗಿ ಹರಿದು ಬಾ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ನನ್ನ ಕನಸಿಂದ ಎದ್ದು ಬಾ

ಆಸೆ ಶಿಖರವ ಹೊದ್ದು ಬಾ

 

ಕ್ಷಮಿಸು ಬಾ ಗೆಳೆಯ ರಮಿಸು ಬಾ

ನನ್ನೊಳಗೇ ನೀನಾಗು ಬಾ

ನನ್ನಲ್ಲೇ ನೀ ನಿಲ್ಲು ಬಾ

 

ಓಡಿ ಬಾ ನನಗಾಗಿ ಬಾ

ಬದುಕಲ್ಲಾದರೂ ಬಾ, ಕನಸಲ್ಲಾದರೂ ಬಾ.

ಕನಸಲ್ಲಾದರೂ ಕನಸ ನೆರವೇರಿಸಲು ಒಮ್ಮೆ ಬಾ

ಕ್ಷಮಿಸು ಬಾ ಗೆಳೆಯ ರಮಿಸು ಬಾ

 

ಈ ಹೃದಯ ಅನ್ನೋ ಪುಟ್ಟ ಗೂಡಲ್ಲಿ ನಿನ್ನನ್ನ ಬಿಟ್ಟರೆ ಬೇರೆಯಾರೂ ಹೆಜ್ಜೆ ಇಟ್ಟಿಲ್ಲ

ಮನಸಿನ ಪುಟದ ಮೇಲೆ ನಿನ್ನ ಹೆಸರ ಹೊರತಾಗಿ ಇನ್ನಾರ ಹೆಸರನ್ನೂ ನಾ ಬರೆದಿಲ್ಲ

ಮೆದುಳಿನ ತುಂಬಾ ನಿನ್ನ ನೆನಪೇ ತುಂಬಿದೆಯಲ್ಲ ನಿನ್ನನ್ನು ಅಗಲಿ ನಾ ಹೇಗಿರಲಿ ನನ್ನ ನಲ್ಲ

 

ಮೌನ ಸಂಭಾಷಣೆಯೊಂದು ಆಗಲಿಕ್ಕಿದೆ ಗೆಳೆಯ

ಮಾತಿನ ಅಸಹಾಯಕತೆಯನ್ನು ಹೊರದೂಡಲಿಕ್ಕೆ

ಮೌನದಲೇ ನಿಶಬ್ದದಾ ಗೋಡೆ ಒಡೆಯಲಿಕ್ಕೆ

ನನ್ನ ಮೌನವ ನೀನು, ನಿನ್ನ ಮೌನವ ನಾನು

ಓದಲಿಕ್ಕೆ, ನಮ್ಮಿಬ್ಬರಾ ಮನಸು ಒಂದಾಗಲಿಕ್ಕೆ

ಮೌನ ಸಂಭಾಷಣೆಯೊಂದು ಆಗಲೇ ಬೇಕಿದೆ

ಒಬ್ಬರ ಮೌನದ ಅರ್ಥ ಒಬ್ಬರು ಅರಿತು ಬಾಳಲಿಕ್ಕೆ

 

ತಪ್ಪು ನನ್ನದಲ್ಲ

ಅವನೇನೂ ಸೆಳೆಯುವಷ್ಟು ಸುಂದರನಲ್ಲ

ಅದರೂ ಅವನಿಗೆ ಸೋತುಹೋದದ್ದು

ತಪ್ಪು ನನ್ನದಲ್ಲ, ಬಹುಶಃ ಕರಗಿದ ಮನಸಿನದು

 

ಚಂದಿರನಂತೆ ಹೊಳೆವ ಬಣ್ಣದವನಲ್ಲ

ಆದರೂ ಅಷ್ಟು ಚಂದವಾಗಿ ಕಂಡದ್ದು

ತಪ್ಪು ನನ್ನದಲ್ಲ, ಬಹುಶಃ ಕಪ್ಪು ಬಿಳಿ ಕಣ್ಣಿನದು

 

ಪ್ರೇಮ ಕವಿ ಅವನಾಗಿರಲೇ ಇಲ್ಲ

ಅವನ ಪ್ರತಿ ಮಾತು ಮುದಯೆನಿಸಿದ್ದು

ತಪ್ಪು ನನ್ನದಲ್ಲ, ಬಹುಶಃ  ಭಾವನೆಗಳದು

 

ಭವಿಷ್ಯದ ಮಾತೇ ಆಡಿರಲಿಲ್ಲ ಅವ

ಆದರೂ ಆಸೆ ಗೋಪುರವ ಕಟ್ಟಿದ್ದು

ತಪ್ಪು ನನ್ನದಲ್ಲ, ಬಹುಶಃ ಬೀಳುವ ಕನಸಿನದು

 

ಅವನ ನೀಳ ಮೌನ ನಿಶಬ್ಧಕ್ಕೂ

ಸವಿಭಾವದ ಅರ್ಥ ಹುಡುಕುವಾಗ

ತಪ್ಪು ನನ್ನದಲ್ಲ, ಬಹುಶಃ ಕವಿ ಕಲ್ಪನೆಯದು

 

ಪ್ರೀತಿಯ ಪರಿವೇ ಇಲ್ಲದ

ಅವನ ಪೆದ್ದುತನಕ್ಕೆ ನಕ್ಕಾಗಲೂ

ತಪ್ಪು ನನ್ನದಲ್ಲ, ಬಹುಶಃ ಆಗತಾನೆ ಹುಟ್ಟಿದ ಪೋಲಿತನದ್ದು

 

ಅವ ಬೇರೇನೋ ಮಾಡುತ್ತಿದ್ದಗಲೂ

ಕಾರಣವಿಲ್ಲದೇ ನಾಚಿ ನೀರಾದದ್ದು

ತಪ್ಪು ನನ್ನದಲ್ಲ, ಬಹುಶಃ ಹಾಳು ಹರೆಯದ್ದು

 

‌ಅವನ ಆ ಮುದ್ದು ಮೌನದಲ್ಲಿ

ನನ್ನಿಷ್ಟದ ರಾಗ ಕೇಳಿಸಿದ್ದು

ತಪ್ಪು ನನ್ನದಲ್ಲ, ಬಹುಶಃ ಈ ಕೊಂಕು ಕಿವಿಯದ್ದು

 

ಆ ಖಾಲಿ ರಸ್ತೆ ನಡಿಗೆಯಲ್ಲಿ ಅವನ

ಕೈಗೆ ಕೈ ತಾಕಿಸಿ ರೋಮಾಂಚನಳಾದದ್ದು

ತಪ್ಪು ನನ್ನದಲ್ಲ, ಬಹುಶಃ ತುಂತುರು ಮಳೆಯದ್ದು

 

ಮುಕ್ತ ಪ್ರೇಮಿಯ ನಿಶ್ಕಲ್ಮಷ

ಪ್ರೀತಿಯ ಒಪ್ಪಿ ಅಪ್ಪಿಕೊಂಡಿದ್ದು

ತಪ್ಪು ನನ್ನದಲ್ಲ, ಬಹುಶಃ ಪ್ರೀತಿಸಿದ ಹೃದಯದ್ದು

 

ಮದುವೆಯ ದಿನ ನಾ ಬಿಕ್ಕಿ

ಅತ್ತು ನೀ ಕಂಗಾಲಾದದ್ದು

ತಪ್ಪು ನನ್ನದಲ್ಲ, ಬಹುಶಃ ಉಕ್ಕಿ ಬಂದ ಖುಶಿಯದ್ದು

 

ಪ್ರೀತಿ ಹಳೆಯದಾಗಲೇ ಇಲ್ಲ

ಆದರೂ ಸಂಬಂಧಕ್ಕೆ ವಯಸ್ಸಾದದ್ದು

ತಪ್ಪು ನಮ್ಮಿಬ್ಬರದೂ ಅಲ್ಲ, ಬಹುಶಃ ಉರುಳಿಹೋಗುವ ಕಾಲದ್ದು

 

ಕಣ್ಣ್ ಸೆಳೆಯುವ ಕನಸು ನೀನು

ಮನ ಸೆಳೆಯುವ ನೆನಪು ನೀನು

 

ನನ್ನ ಹೃದಯವೆಂಬ ನಾಡಿನ ಅರಸ ನೀನು

ಪ್ರತಿಕ್ಶನ ನನ್ನ ನೆನಪಲ್ಲಿ ಇರೊ ಮದುರ ನಗು ನೀನು

ಆದರೂ ಸುರಿವ ಮಳೆಯಲ್ಲಿ ನಡುಗುವ ನನ್ನ ಕೈಯ್ಯ ನೀನೊಮ್ಮೆ ಹಿಡಿಯಬಾರದೇನು

ಮರಳಿ ನನ್ನ ಬದುಕಲಿ ನೀನೊಮ್ಮೆ ಬರಬಾರದೇನು

 

ಇದನ್ನೂ ಓದಿ:

Best Kannada Kavanagalu About Love | ಲವ್ ಕವನಗಳು

ನೀನೆಂದರೆ

ನನ್ನೆಲ್ಲಾ ಕನಸುಗಳಿಗೆ

ನಾನಿಟ್ಟ ಹೆಸರು

 

ಕಣ್ಣ ಗುಡ್ಡೆಯ ಮೇಲಿರುವ ಬಿಂಬ ನಿನ್ನದು

ನನ್ನ ನೆನಪಲ್ಳಿರುವ ಸಿಹಿ ನಗು ನಿನ್ನದು

ಕನಸಲ್ಲೂ ನಿನ್ನೆ ಬೇಡುವ ಬಯಕೆ ನನ್ನದು

ನಿನ್ನ ನೆನಪಾದಾಗ ಸಿಗುವ ಖುಷಿ ನನ್ನದು

ನಿನ್ನೊಡನೆ ಬಾಳುವ ಹಂಬಲ ನನ್ನದು

ನೀ ನನ್ನವನಾಗ ಬೇಕೇಂಬ ದುರಾಸೆ ನನ್ನದು

ಬಯಕೆ ತೋಟದಿ ಅಲೆದಾಡುವ ಪಾಡು ಮಾತ್ರ

ಎಂದೆಂದೂ ನನ್ನದು

 

ಕಲ್ಲು ಬಂಡೆ ನಾನು

ನನ್ನ ನೆನಪೆಂಬ ಸಮುದ್ರದ

ಬಳಿ ದೂಡಿ ಹೋದೆ ನೀನು

ನಿನ್ನನೆನಪಿನ ಅಲೆಗಳಲ್ಲೇ

ಕರಗಿ ಹೋಗಿದ್ದೆ ನಾನು

 

ಬಹು ದಿನಗಳ ಅಂತರದಲ್ಲಿ

ಯಾರದೋ ಸಹಾಯಕ್ಕೆ

ಇನ್ಯಾರದೋ ಕಾಳಜಿಗೆ ಮರುಗಿ

ಮತ್ತೆ ತೀರದತ್ತ ಮುಖಮಾಡಿದೆ ನಾನು

ಎರಡನೇ ಹೆಜ್ಜೆ ಇಡೋ ಅಷ್ಟರಲ್ಲಿ

ಎದುರಾದೆ ನೀನು ಹೆಜ್ಜೆ ಕುಸಿಯಿತು

ಮತ್ತೊಮ್ಮೆ ಜೋರಾಗಿ ಅಲೆ ರಪ್ಪ್ ಎಂದು ಬಡಿಯಿತು

 

ಹೃದಯಕೆ ಚೂರಿಯಿಂದ ಇರಿದಂತಾಯ್ತು

ಮತ್ತೆ ನಿನ್ನ ನೆನಪಿನ ಕಡಲಲ್ಲಿ ನಾನು

ಮತ್ತೆಂದೂ ತೀರದ ಕಡೆಗೆ ನೋಡಲಾಗದಷ್ಟು ಆಳದಲ್ಲಿ

ನಿನ್ನ ನೆನಪಿನ ನೋವಿನಲ್ಲಿ

ಹಿಂತಿರುಗಲಆಗದ ಸಂತೆಯಲ್ಲಿ

ಕಳೆದು ಹೋಗಿರುವೆ ಅರಿಯದ ಮರುಳಲ್ಲಿ

ಎಲ್ಲ ಅರುಳು ಮರುಳು ನನಗಿಲ್ಲಿ

 

ಮತ್ತೆ ನಿನ್ನ ಕಂಡಾಗ ಮನ

ನಿಂತಲ್ಲೇ ಚೂರಾದೆ ನಾ

ಮರೆಯಾಗಲೇನು ಮರುಳಾಗೋ ಮುನ್ನ

ದೂರಗಲೇನು ಸೆರೆಯಾಗೋ ಮುನ್ನ

 

ಮಡುವುಗಟ್ಟಿದೆ ಮೌನ

ಕಾಮನೆಗಳು ಈಡೇರದೆ

ಭಾವನೆಗಳು ಮಾತಗದೆ

 

ಇರುವುದೆಲ್ಲವ ಬಿಟ್ಟು ಇರದುದರೆಡೆಗೇ ತುಡಿವುದೇ ಜೀವನಾ

 

ಇದ್ದರೂ ಇಲ್ಲದಂತಿರುವ

ನಿನ್ನ ಇರುವಿಕೆಯ ಹೊಗಳಲು

ಪದ ಸಾಲುತಿಲ್ಲ

ಪ್ರಾಸ ಸಿಗುತ್ತಿಲ್ಲ

 

ನೀನಿದ್ದೂ ಒಂಟಿ ನಾನು

ನೀರಿದ್ದೂ ಬರಡು ನಾನು

ಮರೆತರೂ ಮರೆಯಲಾಗದ ನೆನಪು ನೀನು

ಸದಾ ನಿನಗಾಗೇ ಕಾಯುವ ಗೆಳತಿ ನಾನು

 

ನಾನೊಂದು ಹೆಣ್ಣು ಕಟ್ಟುಪಾಡುಗಳೇ ನನಗೆ ಹುಣ್ಣು

ಬದುಕಲು ಬಿಡಿ ನನ್ನ ಜೀವನವ ನನ್ನ ಖುಷಿಯಂತೆ

ಮನ ಒಪ್ಪುವಂತೆ ಹೃದಯ ಉಕ್ಕುವಂತೆ

 

ಬದುಕಲು ಬಿಡಿ ನನ್ನ ಜೀವನವ ನನ್ನ ಇಚ್ಛೆಯಂತೆ

ಸಣ್ಣ ಖುಷಿಗಳೇ ನನ್ನ ಬದುಕು ಅದು ಕುಸಿಯದಂತೆ

 

ಬದುಕಲು ಬಿಡಿ ನನ್ನ ಜೀವನವ ನನ್ನ ಕನಸಂತೆ

ಕನಸ ಬೆಸೆಯುವ ಕೆಲಸ ನನಗಿರಲಿ ಅಂತೆ

 

ಬದುಕಲು ಬಿಡಿ ನನ್ನ ಜೀವನವ ಭಾವನೆಗಳ ಜೊತೆ

ಭಾವನೆಯಲ್ಲಿದೆ ನನ್ನ ಉಸಿರು ಅದು ನಿಲ್ಲದಂತೆ

 

ಮರೆಯಹೊರಟಿರುವೆ ನಿನ್ನನು

ಮರಳಿ ಬಾರದಿರು ನೆನಪಿಗೆ

ಅಂತಿಮ ಚುಕ್ಕೆ ಇಡುತಿರುವೆ

ನನ್ನ ಕನಸಿನ ಯಾನಕೆ

 

ಕಾಲ ಇಡಾದಿರು ನೀನು

ನನ್ನ ಭಾವನೆಯ ಅಂಗಳಕೆ

ಏಕೆಂದರೆ ನನಗೆ ಗೊತ್ತು

ನೀನವಕ್ಕೆ ಸ್ಪಂದಿಸಲಾರೆ

 

ನನ್ನಿಂದ ತುಂಬಾ ದೂರ

ಹೊರಟಿರುವ ನೀನು ಮರಳಿ

ನನ್ನತ್ತ ನೋಡಲಾರೆ

ಪ್ರೀತಿಯಂತೂ ಮಾಡಲಾರೆ

 

ವಿಧಾಯದಾ ಸಾಲುಗಳಿವು

ಪ್ರೀತಿ ಪ್ರೇಮದಾಟಕೆ

ಮರಳಿ ಬಾರದಿರು ನೆನಪಿಗೆ

 

ನನ್ನನ್ನ ಕೊಲ್ಲುತ್ತಿರೊ ಆ ಖುಷಿ ಕ್ಷಣಗಳು

ಕಿತ್ತು ತಿನ್ನುತ್ತೀರೋ ನೆನಪುಗಳು

ಕಿವಿಯಲ್ಲೇ ಗುನುಗುತ್ತೀರೋ ಸಿಹಿ ನಗು

ಹುಚ್ಚು ಹಿಡಿಸೋ ಪ್ರೀತಿ

ಹಚ್ಚಿಕೊಂಡ ಹೃದಯ

ಹಂಚಿಕೊಂಡ ಮಾತು

ಎಲ್ಲ ನಿನ್ನ ಬಳಿ ಮಾತ್ರ ಯಾಕೆ ಸುಳಿತಾ ಇಲ್ಲ

 

ಹಿಂದೆ ಹಿಂದೆ ಬರಲು ನೀನು

ಖುಷಿಯ ಮೆರೆದು ನಡೆವೆ ನಾನು

ದಿಟ್ಟಿಸಿ ನನ್ನೇ ನೋಡಲು ನೀನು

ಜಗವ ಮರೆತು ಬಿಡುವೆ ನಾನು

 

ಚಿಪ್ಪಿನೊಳಗಿನ ಮುತ್ತಿನಂತೆ

ಹೃದಯದಿ ಪ್ರೀತಿ ಬಚ್ಚಿಟ್ಟು

ನಿನ್ನ್ ತಲೆಕೆಡಿಸುವ ಆಟ ಇಸ್ಟವಾಗಿದೆ

ಹುಚ್ಚು ಹೆಚ್ಚಾಗಿ ಕನಸಿಗೆ ರಂಗು ಬಳಿದಿದೆ

ಆಟ ಹೆಚ್ಚಾದರೆ ತಪ್ಪು ತಿಳಿಯ ಬೇಡ ಗೆಳೆಯ

ನೀ ನನಗಾಗಿ ಪರಿತಪಿಸುವುದ ನೋಡಿ ಕುಣಿವುದು ಹೃದಯ

 

ಕಾದಿಹೆನು ನಾನು ಎಲ್ಲ ಪ್ರೀತಿಯ ಒಟ್ಟುಗೂಡಿಸಿ

ನನ್ನ ನೀ ಬಂದು ಕೇಳುವ ಘಳಿಗೆಗೆ

ಎಲ್ಲ ಹುಚ್ಚಿಗೆ ಮುಟ್ಟುಗೋಲು ಹಾಕಿ

ಹೃದಯ ಬಿಚ್ಚುವ ಸವಿ ಸಮಯಕೆ

 

ಪುಸ್ತಕದ ಗುಂಪಿನಲ್ಲಿ ಮದುರಿದ್ದ 

ಒಂದು ಪುಸ್ತಕದಲ್ಲಿದ್ದ 

ಒಂದು ಮುದ್ದಾದ ಕವನ 

ಹುಚ್ಚು ಬಾವನೆ

 

ಪ್ರೀತಿಯ ಕವನ

ನೀ ತೊರೆದ ಗಳಿಗೆಯಲಿ ನನ್ನೆದೆಯ ತುಂಬಾ ನಿನ್ನಾ ಗುರುತು

ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು

ಒಂಟಿ ಮೋಡದ ಕಣ್ಣ ಹನಿಯ ದೂರದಿಂದಲೇ ನೋಡು ಗೆಳೆಯ

ಕಾಣದಿದ್ದರೂ ಕಾಡುತಿರುವ

ಕೇಳದಿದ್ದರೂ ಹೇಳುತಿರುವ

ಹೃದಯದ ತಾಳಕೆ ಹಾಡುತಿರುವ ಹಾಡುತಿರುವ ನೀ ಯಾರು ಯಾರು ಯಾರು

ನೀನು ಮರೆಯದ ಮರುಘಳಿಗೆ ಮನಸು ಬಯಸಿದೆ ಸಾನಿಥ್ಯ

ಮತ್ತೆ ಸೇರಲು ನಿನ್ನೊಳಗೆ ರಾಜಿಯಾಗುತಿದೆ ಆಂತರ್ಯ

ನಾವಿಕನಿಲ್ಲದ ದೋಣಿಯಿದು ಒಂಟಿ ಸಾಗುವ ಯಾತನೆಯು

ನೆರಳನು ಹಿಡಿಯುವ ಆಟವಿದು ಇನ್ನೂ ಸಾಕೆನುವ ಪ್ರಾರ್ಥನೆಯು

ನೀ ತೊರೆದ ಘಳಿಗೆಯಲಿ ನನ್ನೆದೆಯ ತುಂಬಾ ನಿನ್ನಾ ಗುರುತು

ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು

 

ಮುಂಜಾನೆಯ ಸೂರ್ಯ ಬೆಳಕ ಚಿಮ್ಮುತ್ತಿದ್ದಂತೆ ಗೆಳೆಯ

ಜನರೆಲ್ಲಾ ಎದ್ದು ಗಡಿಬಿಡಿಯಲಿ ಸಾಗುತ್ತಿದ್ದಾರೆ

ನಿತ್ಯದ ಕೆಲಸಕ್ಕೆ ಅವರವರ ದಿನವೂ ಎಂದಿನಂತೆ ನಡೆಯುತ್ತಿದೆ

ಆದರೆ ನನಗೆ ಮಾತ್ರ ಕಣ್ ತೆರೆಯಲು ಭಯವಾಗುತಿದೆ ಗೆಳೆಯ

ನಿನ್ನದೇ ಕನಸಿನಲ್ಲಿ ಮುಳುಗಿರುವ ನನಗೆ ಕಣ್ ತೆರೆಯಲು ಭಯವಾಗಿದೆ

ಕಣ್ ತೆರೆದರೆ ನೀನಿಲ್ಲ ನನ್ನ ಪಕ್ಕದಲ್ಲಿ ಎಂಬ ಸತ್ಯ ತಿಳಿದರೆ ಲೋಕ ಬೇಡವೆನಿಸುತ್ತದೆ

ಕನಸೇ ಸಿಹಿ ಎನಿಸಿ ಮತ್ತೆ ನಿದ್ರಿಸುವ ಮನಸಾಗುತ್ತದೆ ಗೆಳೆಯ

ನೀನಿರದ ಮುಂಜಾವಿಗಿಂತ ಕನಸಿನ ಕತ್ತಲೆ ಲೆಸಾಗಿದೆ ಗೆಳೆಯ

 

ಗೆಳೆಯ, ಮಳೆ ಹನಿಯೊಡನೆ ಆಟ ಕಲಿಸಿದವ ನೀನು

ಇಬ್ಬನಿಯ ಅಂದ ತಿಳಿಸಿದವ ನೀನು

ಪ್ರೀತಿಯ ಸಿಹಿ ತಿನಿಸಿದವ ನೀನು

ನನ್ನ ನಾಚಿಕೆಗೆ ನೆಪ ನೀನು

ಹೃದಯದ ಮೊದಲ ಪ್ರೀತಿ ನೀನು

ಸಿಟ್ಟು ಕರಗಿಸೋ ಮನಸ್ಸು ನೀನು

ಖುಷಿಯ ನೀಡೋ ನಶೆ ನೀನು

ಆದರೆ ಈಗ ನೀನು ನನ್ನ ಬಿಟ್ಟು ಹೋಗಿಬಿಟ್ಟಿದ್ದೀಯ

ನಿನಗೆ ನಾನು ಬೇಡವಾಗಿದ್ದೇನೆ

ಮಳೆ ಹನಿಯಲ್ಲಿ ಈಗಲೂ ನೆನೆಯುತ್ತೇನೆ

ಗೆಳೆಯ ಆದರೆ ಕಣ್ಣೀರು ಮತ್ತೊಬ್ಬರಿಗೆ ಕಾಣದಿರಲಿ ಎಂದಷ್ಟೇ

 

ಈಗಲೂ ನಿನ್ನನ್ನು ಪ್ರೀತಿಸುತ್ತೇನೆ ಆದರೆ

ನಿನಗೆ ಕಾಣುತ್ತಿಲ್ಲವಷ್ಟೇ

ನೆನಪುಗಳು ನನ್ನ ಕೊಳ್ಳುತ್ತಿದ್ದರು ನಾನು ಬದುಕಿದ್ದೇನೆ

ಮರಳಿ ನೀನು ಬರುತ್ತೀಯಾ ಎಂಬ ನಂಬಿಕೆಯಿಂದಷ್ಟೆ

ಆದರೂ ಕಣ್ ತೆರೆಯಲು ಭಯವಾಗಿದೆ

ಒಂಟಿಯಾಗಿ ಇಬ್ಬನಿಯ ನೋಡಬೇಕಲ್ಲ ಎಂದು

 

ಪ್ರೀತಿಯ ಕವನ

ಮನವು ಅಳುತಿದೆ ಕಾರಣ ತಿಳಿಯದಲೇ

ಗೊಂದಲ ಸೃಸ್ಟಿಸಿದೆ ನನ್ನ ಕೆಳದಲೇ

ಬಡಿತ ಕುಗ್ಗುತಿದೆ ಹಿಡಿತವಿಲ್ಲದಲೇ

ಕನಸು ಜಾರುತದೆ ಒಮ್ಮೆ ಕಣ್ಣ್ ಮುಚ್ಚಲೇ

ಹೃದಯ ಬಯಸಿದೆ ನಿನ್ನ ಪ್ರೀತಿಸಲೇ

ತಂದೆ ತಾಯಂದಿರ ಒಮ್ಮೆ ನೆನೆಯಲೇ

ನನ್ನ ನಾನೇ ಕೊಂಚ ತಡೆದಿದಲೆ

ಕ್ಷಮಿಸಿ ಬಿಡು ನನ್ನ ನಿನ್ನ ಮನಸಲ್ಲಿ ನನ್ನ ನೆನಪಿತ್ತೆ ನನಗೆ ತಿಳಿಯದಲೇ

ಬೇಡುವೆನು ನಿನ್ನ ನನ್ನ ಮನದಿಂದ ನಿನ್ನ ನೆನಪ ತೆಗೆ ನನಗೆ ತಿಳಿಸದಲೇ

 

ಪ್ರೀತಿಯ_ಕವನ

ಕ್ಷಮಿಸಿಬಿಡಲೇ ನಾನೇ ಸೋತು 

ಕೈ ಚಾಚಲೆ ಎಲ್ಲ ಮರೆತು

ಹಿಂತಿರುಗಿ ಹೋಗುವ ದಾರಿಯಲಿ ಮಲಗಿದೆ

ನನ್ನೆದೆಯ ಮೊದಮೊದಲ ಮಾತು

ಕಾಡುತಿದೆ ನೆನೆಪೊಂದು ಕುಳಿತು

ನೀ ಬಿಟ್ಟು ಹೋದಂತ ಕುಂಟು ಕನಸೊಂದನು

ಕೈ ಚಾಚಲೆ ಎಲ್ಲ ಮರೆತು

ಕಾಡುತಿದೆ ನೆನಪೊಂದು ಕುಳಿತು 

 

ಬದುಕಲು ಕಾರಣ ಒಂದೂ ಸಿಗುತಿಲ್ಲ

ಸಾವು ಇಂದು ನನ್ನ ಬಳಿ ಬರುತ್ತಿಲ್ಲ

ಸಾವ ಹುಡುಕುವ ಧೈರ್ಯ ನನಗಿಲ್ಲ

ನಾ ನಂಬೀದಿವರು ಅದನು ಉಳಿಸಿಕೊಳ್ಳಲಿಲ್ಲ

ನನ್ನ ನಂಬೀವವರು ಯಾರು ಉಳಿದಿಲ್ಲ

ತಪ್ಪನು ನಾನೆಂದೂ ಮಾಡಿಲ್ಲ

ಹೇಳಿದ್ದು ಕೇಳುವ ತಾಳ್ಮೆ ಇಲ್ಲರಿಗೂ ಇಲ್ಲ

 

ಬದುಕಲು ಕಾರಣ ಒಂದೂ ಸಿಗುತಿಲ್ಲ

ಸಾವು ಇಂದು ನನ್ನ ಬಳಿ ಬರುತ್ತಿಲ್ಲ

ತಪ್ಪ ಹುಡುಕುವವರೇ ಜಗದಿ ತುಂಬಿಹರಲ್ಲ

ಸಿಹಿಯ ನೀಡಿದರೂ ಕಹಿಯ ಕೊಡುತಿರುವರಲ್ಲ

ಬರೀ ಕಹಿಯನೇ ತಿಂದು ನಾಲಿಗೆ ಹಾಳಾಯಿತಲ್ಲ

ಪ್ರೀತಿ ಆದರತೆ ಬಾರಿ ಮೇಲಿನ ಮಾತಾಯ್ತು

ಅಸೂಯೆ ತಾರತಮ್ಯ ಕಣ್ಣಂಚಿನ ನೀರಾಯ್ತು

ನನ್ನ ಸಾವಿಗೆ ಕಾರಣವಾಯ್ತು.

 

ಪ್ರೀತಿಯ_ಕವನ

ಇವನ್ಯಾರೋ ತಿಳಿದಿಲ್ಲ

ಪರಿಚಯವೂ ಹೊಸತಲ್ಲ

ಇನಿಯ ಇವನಲ್ಲ

ಬಂಧು ಬಳಗಕೆ ಸೇರಿಲ್ಲ

ಆದರೂ ಮನಸ ಸೆಳೆಯುತಿರುವನಲ್ಲ

ಪ್ರೀತಿಯೂ ನನಗೆ ತಿಳಿದಿಲ್ಲ

ಸ್ನೇಹದ ಬಯಕೆ ನನದೆಲ್ಲ

 

Heart Touching Kannada Love Kavanagalu Images

ಈ ಹೃದಯಸ್ಪರ್ಶಿ ಪ್ರೀತಿಯ ಕನ್ನಡ ಕವನಗಳ ಸಂಗ್ರಹವು (heart touching love kavanagalu in Kannada) ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಹೃದಯವನ್ನು ತಟ್ಟಿದೆ ಎಂದು ನಾವು ಭಾವಿಸುತ್ತೇವೆ. ಪ್ರೀತಿ, ಭಾವನೆ ಮತ್ತು ಕಾವ್ಯದ ಮಧುರ ಮಿಶ್ರಣದಿಂದ ಈ ಕವನಗಳು (kannada love kavanagalu) ನಿಮ್ಮ ಜೀವನದ ಪ್ರೀತಿಯ ಕ್ಷಣಗಳಿಗೆ ಹೊಸ ಅರ್ಥವನ್ನು ನೀಡುತ್ತವೆ. ಈ ಸಂಗ್ರಹವನ್ನು ನಿಮ್ಮ ಸ್ನೇಹಿತರು, ಪ್ರಿಯತಮರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ ಮತ್ತು ಪ್ರೀತಿಯ ಸುಂದರತೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡಿ.

ನಮ್ಮ ಬ್ಲಾಗ್‌ಗೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು! ಇನ್ನಷ್ಟು ಕನ್ನಡ ಕವನಗಳು, ಪ್ರೀತಿಯ ಬರಹಗಳು ಮತ್ತು ಹೃದಯಸ್ಪರ್ಶಿ ವಿಷಯಗಳಿಗಾಗಿ ನಮ್ಮ ಬ್ಲಾಗ್‌ಗೆ ಮತ್ತೆ ಮತ್ತೆ ಭೇಟಿ ನೀಡಿ. ನಿಮ್ಮ ಬೆಂಬಲ ನಮ್ಮನ್ನು ಇನ್ನಷ್ಟು ಉತ್ತಮ ವಿಷಯಗಳನ್ನು ತಲುಪಿಸಲು ಪ್ರೇರೇಪಿಸುತ್ತದೆ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.