ಈ ಲೇಖನದಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಮತ್ತು ದ.ರಾ. ಬೇಂದ್ರೆ ಅವರ ಆಳವಾದ ಚಿಂತನೆಯನ್ನು ಸೆರೆಹಿಡಿಯುವ ಉಲ್ಲೇಖಗಳನ್ನು (dara bendre quotes in kannada) ನಾವು ಸಂಗ್ರಹಿಸಿ ನಿಮಗಾಗಿ ನೀಡಿದ್ದೇವೆ.
ಕನ್ನಡ ಕಾವ್ಯದ ನವೋದಯ ಕಾಲವು ಕನ್ನಡಿಗರಿಗೆ ಮಹತ್ವದ ಕಾಲವಾಗಿತ್ತು. ಈ ಯುಗದಲ್ಲಿ ಕವಿಗಳಾದ ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶ್ರೀಕಂಠಯ್ಯ, ಕುವೆಂಪು ಮುಂತಾದವರು ಕನ್ನಡ ಕಾವ್ಯವನ್ನು ಪುನರುಜ್ಜೀವನಗೊಳಿಸಿದರು. ಹಳೆಯ ನಿಯಮಗಳಿಂದ ಹೊರಬಂದು ಹೊಸ ವಿಷಯಗಳನ್ನು ಅನ್ವೇಷಿಸಿದರು. 1896 ಜನವರಿ 31 ರಂದು ಕರ್ನಾಟಕದ ಧಾರವಾಡದಲ್ಲಿ ಜನಿಸಿದ ಬೇಂದ್ರೆಯವರು ಈ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.
ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಬೇಂದ್ರೆ ಅವರು ನಂತರ ಗೌರವಾನ್ವಿತ ಕವಿಯಾದರು. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಸರಳವಾದ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ಅವರು ನಂತರದಲ್ಲಿ ಸಂಕೀರ್ಣವಾದ ಸಾಮಾಜಿಕ ಸಮಸ್ಯೆಗಳು ಮತ್ತು ಮಾನವ ತತ್ತ್ವಶಾಸ್ತ್ರಗಳನ್ನು ಕುರಿತು ಬರೆಯಲಾರಂಬಿಸಿದರು. ದರಾ ಬೇಂದ್ರೆಯವರ ಕವನಗಳು ಜೀವನದ ಬಗೆಗಿನ ಅವರ ವಿಭಿನ್ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ.
ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ, ಮತ್ತು ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾಕು ತಂತಿ ಕೃತಿಗೆ 1974 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಅವರ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ.
1981 ರಲ್ಲಿ ಅವರು ನಿಧನರಾದರು ಸಹ ಕನ್ನಡ ಕಾವ್ಯ ಮತ್ತು ಸಾಹಿತ್ಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳು, ಮತ್ತು ಅವರ ದಿಟ್ಟ ಬರವಣಿಗೆಯ ಮೂಲಕ ಅವರ ಪರಂಪರೆ ಇಂದಿಗೂ ಜೀವಂತವಾಗಿದೆ.
ದ.ರಾ. ಬೇಂದ್ರೆ ಅವರ ಉಲ್ಲೇಖಗಳು (da ra bendre quotes in kannada) ಜೀವನ, ಪ್ರಕೃತಿ ಮತ್ತು ಭಾವನೆಗಳಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿವೆ. ಸರಳ ಪದಗಳಲ್ಲಿ ಅಮೂಲ್ಯವಾದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತವೆ.
ಈ ಲೇಖನವು ನಿಮಗೆ ದರಾ ಬೇಂದ್ರೆಯವರ ಕೆಲವು ಆಯ್ದ ಅತ್ಯುತ್ತಮ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಉಲ್ಲೇಖಗಳನ್ನು (quotes by dara bendre in kannada) ಪರಿಚಯಿಸುತ್ತದೆ.
Table of Contents
Best Dara Bendre Quotes in Kannada (ದ ರಾ ಬೇಂದ್ರೆ ಅವರ ಕವನಗಳು, ಉಲ್ಲೇಖಗಳು)
ನಾಳೆ ಎಂಬುವುದು ನಿನ್ನಿನ ಕನಸು.
ಮುಂದೆ ಎಂಬುವುದು ಇಂದಿನ ಕನಸು.
ಸಾವಿಗೆ ನಾ ಹೆದರುವುದಿಲ್ಲ.
ಯಾಕೆಂದರೆ ನಾ ಇರೋತನಕ ಅದು ಬರೋದಿಲ್ಲ.
ಅದು ಬಂದಾಗ ನಾ ಇರೋದಿಲ್ಲ.
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣ.
ಪ್ರೀತಿಯಿಲ್ಲದೂಡು ಬಳಗವಲ್ಲ.
ಬಿಡಿತನದ ಬಿಕ್ಕಟ್ಟಿನಲ್ಲಿ ಇಡಿತನದ ಒಕ್ಕಟ್ಟನ್ನು ಹುಟ್ಟಿಸುವ ಹುಟ್ಟೇ ಬಳಗ.
ಕಟ್ಟಲಾರದವನು ಕೆಡಿಸಬಾರದು.
ರಸವೆ ಜನನ,
ವಿರಸ ಮರಣ,
ಸಮರಸವೇ ಜೀವನ.
ಹುಟ್ಟಿನ ಹೊಟ್ಟೆಯಲ್ಲಿ ಸಾವಿನ ಸಾಮಗ್ರಿಯಿದೆ.
ತೇಜವೆಷ್ಟೋ ಬೂದಿಯೆಷ್ಟೋ
ಯಜ್ನಡಲಿ ತಿಳಿಯಬೇಕು.
ಬೆಳಕೆಬೆಳಕಿದ್ದು ಕಟ್ಟಳೆಯು ತುಂಬಿತು ಹೇಗೆ.?
ಸಣ್ಣ ಮನಕೆ ದೊಡ್ಡ ಕೆಲಸ ನೀಗದಣ್ಣ ನೀಗದು.
ಅನುಭವವೂ ಜಗತ್ತಿನ ಕಾರಣವನ್ನು ಹುಡುಕುತ್ತದೆ;
ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತದೆ.
ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು.
ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?
ಸುಖ ತಾನು ಬರುವಾಗ ಗುಳೆ ಎತ್ತಿ ಬರುವುದು.
ಬಿಟ್ಟಿದರೆ ಕಾಳು ಹನಿಹನಿಯಾಗಿ
ಬರ್ತಾಳ ತಾಯಿ ತೆನೆ ತೆನೆಯಾಗಿ.
ಯಾರೆ ಕನ್ನಡಿಯ ಕಂಡರೇನು?
ಕಾಣುವುದು ತನ್ನ ತಾನು.
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯು ಹಣಿಸು ನನಗೆ.
ನಿನ್ನೊಳಗೆ ನೀ ಹೊಕ್ಕು
ನಿನ್ನ ನೀನೇ ಕಂಡು
ನೀನು ನೀನಾಗು ಗೆಳೆಯಾ.
ಆ ರಾತ್ರಿ ಈ ರಾತ್ರಿ
ಯಾತರದು ಐತಿ ಖಾತ್ರಿ
ಶಿವರಾತ್ರಿ ಬೆಳಕೆ ಬೆಳಬೆಳಗು.
ಒಟ್ಟಿತ್ತು ಏನೋ ಹಾಸ.
ತಟ್ಟಿತ್ತು ಶಿವಭಾಸ
ಕೈಲಾಸಾನೆ ಹೊರಗೂ ಒಳಗು.
ಧರ್ಮವು ಅನುಭಾವದ ಮಾತು,
ಮತವು ಬುದ್ದಿಯದು,
ಮತವು ಸಾಧನೆ,
ಧರ್ಮವು ಸಿದ್ಧಿ.
ಬಡತನ ಒಡೆತನ ಕಡೆತನಕುಳಿದಾವೇನ
ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡೆಗೋಲು ಹಿಡಿಹುಟ್ಟ.
ಅಪರ್ಣವಿಲ್ಲದೆ ಪ್ರಸಾದವಿಲ್ಲ.
ಹೂವು ಹಡಲಿಗೆಯನ್ನು ಹೊತ್ತ
ಭೂಮಿ ತಾಯಿ ಜೋಗಿತಿ.
ಮಣ್ಣು ಕೂಡ ಮಗ ಮಗಿಸುತ್ತಿತ್ತು
ಆ ರಾಮನು ಹುಟ್ಟಿದ ದಿನ.
ನಿನ್ಹಾಂಗ ಆಡಾಕ…ನಿನ್ಹಾಂಗ ಹಾಡಾಕ… ಪಡೆದು ಬಂದವ ಬೇಕೋ ಗುರುದೇವಾ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.
ನಂಬಿಗ್ಯಾಗ ಸೇಲೀತದ ಬಲ ಎಲ್ಲಾ
ನಂಬಿಗೀನ ಸೋರಿದಾರ ಬಲ ಇಲ್ಲಾ.
ಸಪ್ಪೆ ಬಾಳುವೆಗಿಂತ
ಉಪ್ಪು ನೀರು ಲೇಸು.
ಹುಬ್ಬಿ ಮಳೆ
ಹುಬ್ಬಿ ಮಳೆ ಹುಬ್ಬ ಹಾರಿಸುತಿತ್ತು, ಕಂಚು ದಿಕ್ಕುಗೆಡೆಸುತಳಿತ್ತು.
ನೆಲಕ್ಕೆಲ್ಲ ಮೋಡ ಟೊಪ್ಪಿಗೆಯು ಹಾಕಿತ್ತು.ದಿಗ್ಮೂಡವಾಗಿತ್ತು.
ಹುಸಿ ನಗುತ ಬಂದೇವ ನಸುನಗುತ ಬಾಳೋಣ
ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರೆ ಕೆರಳೋಣ !
ನನ್ನ ಚಿತ್ದೊಳಿರುವ ಚಿತ್ರಕಾರನು ಬರೆದ ಚಿತ್ರಕೆ ಬಹುದೆಂದು ಜೀವ ಕಳೆ?
ಶ್ರಾವಣದ ಹಗಲು
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು;
ಫಲ ಏನೋ? ಬಳೆಯುತಿದೆ ಬಯಳ ಬಸಿರು!
ನೆನೆನೆನಿಸಿ ಅತ್ಯಂತೆ ಆಗಾಗ ಮಳೆಯು,
ಅನಿತರೋಲು ನಡುನಡುವೆ ಹೊಂಬಿಸಿಲ ಕಳೆಯು!
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವಡು ಒಂದೇ.
ವಿಚಾರವನ್ನು ಆನಂದ ಭೂಮಿಕೆಯ ಮೇಲಿಂದ ನೋಡಬೇಕು.
ಅನಿರ್ಬಂಧನೂ ನಿರ್ಭಯನೂ ಆದ ಜ್ನಾನುಯೇ ನಿಜವಾದ ಧಾರ್ಮಿಕನು.
ರವಿಯ ಬೆಳಕಿನಲ್ಲದಗಿಕೊಂಡು ತಾರೆಯರು ನೋಡುತಿಹರು.
ಮಳೆಗಾಲಅಡಗಿದೆ ದೃಷ್ಟಿ – ಆದರೂ ಸುರಿಯುತ್ತಿದೆ ವೃಷ್ಟಿ!
ಮೋಡದ ಮೇಲ್ ಮೋಡ; ತಿಳಿಯದು ಏನಿದೆಯೂ ಗೂಡ!
ಹಸಿರಿನ ಉಲ್ಲಾಸಕೆ ಮಿತಿಯಿಲ್ಲ; ಕೇಸರಿಗಿಲ್ಲ ಕೊರತೆ.
ಪಾತರಗಿತ್ತಿಯು ಸುಳಿದಾಡುತ್ತಿದೆ; ಮನೆ ಹಿಡಿದಳು ಗರತಿ.
ಬಾನ್ ತುಂಬಿದೆ, ಕೆರೆ ತುಂಬಿದೆ, ಹೂ ತುಂಬಿದೆ ಬೇಲಿ.
ನೀರಳದಲಿ ರಸ ತುಂಬಿದೆ, ಮಿದುವಾಗಿದೆ ಜಾಲಿ.
ಶ್ರೀನಿವಾಸನು ಕೂಡ ತಿರುಮಳೆಗೆ ನಿಂತ ಮನ್ನಲ್ಲ ಈ ಭೂಮಿ ದೇವನೋಲಮೆ.
ಮತ್ತೆ ನೆಲದ ಎದೆಯ ಮೇಲೆ ತೆನೆಯ ಧ್ವಜವು ನಿಲ್ಲಲಿ
ಸಾವಿಗಿಂತ ಬಾಳು ಮೇಲು ಎಂಬ ಮಾತು ಗೆಲ್ಲಲಿ
ವಿಷದ ಒಡಲಿನಿಂದ ರಸದ ಊಟೆ ಚಿಮ್ಮಿ ಚೆಲ್ಲಲಿ
ಪ್ರೇಮವೇ ಹಣ್ಣಾಗಿ ಬರಲಿ ಕವಿಯ ಬಲ್ಲ ಸೊಲ್ಲಲಿ
ಹೊನ್ನ ನೆಕ್ಕಿ ಬಾಳ್ವರಿಲ್ಲ ಅನ್ನ ಸೂರೆ ಮಾಡಿರಿ
ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ.
ಒಳಗೇಕೆ?
ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕೂತೇವೊ!
ಇಳಿಯೊಡನೆ ಜಗಳ ಮಾಡೋಣ! ನಾವುನು ನೋಡಗಳ ಆಟನೋಡೋಣ!
ಮರಿಗುಡುಗು ಕೆಲೆವಾಗ, ಮಲೆಗಾಳಿ ಸೆಳೆವಾಗ,
ಮರಗಿಡಗಳನ್ನು ಎಲೆವಾಗ| ನಾವ್ಯಾಕ
ಮನೆಯೊಳಗೆ ಅವಿತು ಕೂತೇವೋ!
ಕಪ್ಪು ನೆಲದಲ್ಲಿ ಹತ್ತಿ ಹೂವರಳಿ
ನಕ್ಕು ನಲಿಯುವಂತೆ
“ತಿರುತಿರುಗಿ ಹೊಸತಾಗಿರಿ”
ಎನುತಿದೆ ಋತುಗಾನ
ಈ ಹಾಡಿಗೆ ಶ್ರುತಿಹಿಡಿದಿದೆ
ಬ್ರಹ್ಮಾಂಡದ ಮೌನ.
ಕಣ್ಣು ತಿಳಿ ಅದರs ಎಲ್ಲಾ ತಿಳಿ.
ಕವಿತಾ ಕಪ್ಪು ಮಶೀಲೆ ಬರೀತಾರ
ಯುದ್ಧ ಕೆಂಪರಕ್ತದಿಂದ ಕೋರಿತಾರ.
ಸತ್ಯ ಎಂಬುದು ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ.
ಸುಗ್ಗಿ ನಗು ನಕ್ಕಾಗ
ಮೊಗ್ಗು ಬಿಚ್ಚಿತ ಒಳಗ.
ಕೊಡು-ಕೊಡುಯೆಂಬುದು ಇಮ್ಮುಖದಲಿ ಕೊಡೆ ಒಮ್ಮುಖವೆಂಬಂತೆ ತೋರುತಿದೆ.
ಮನದ ಜಮೂನೆಯ ಮಾಡುವಿನಲ್ಲಿದ್ದ ಕಾಳಿಂಗನನು ಮೆಟ್ಟಿ ಕುಣಿದ ಜಯವೇ.
ಕುದಿ ಎಸರು ಬರದಿರೆ
ಚಳಿ ಬಿಸಲು ಉಣದಿರೆ
ಪರಿಪಾಕವೆಂಬುದು ಎಂತಹದು?
ಮನನದ ಭವ್ಯತೆಗೆ ಆತ್ಮ ಹೆಚ್ಚಲ್ಲ.
ಕಲ್ಲು ಕಡಿಮೆಯಲ್ಲ.
ಜಾಣಿನ ಉಪ್ಪಿನ ಕಾಯಿಯು ನೆಕ್ಕಿ
ಕೋಣರು ಆದರು ಕೋಣೆಯೊಳು
ಭಾಷೆಗೆ ಭಾಷ್ಯವ ಬರೆಯಲ ಹಿಕ್ಕಿ
ನೊಗವನು ಹೊತ್ತರು ಗೋಣಿಯೊಳು.
ಅಶೋಕ ವೃಕ್ಷದ ನೆರಳಿನಲಿ
ಸಶೋಕ ಸೀತೆಯ ಕಂಡಿದ್ದೆ
ಅಶೋಕ ಚಕ್ರದ ದ್ವಜದಡಿಗೆ
ಸಶೋಕ ಜನತೆಯ ಕಾಣುತಿಹೆ.
ಬೃಂಗದ ಬೆನ್ನೇರಿ ಬಂತು
ಕಲ್ಪನಾ ವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು
ಸಹಜ ಪ್ರಾಸಾಮಿಂಚಿ ಮಾಯವಾಗುತ್ತಿತ್ತು
ಒಂದು ಮಂದಹಾಸ.
ತೊಡಕು ಇದರ ಬಿಡುಗಡೆ ಹೇಗೆ?
ತೊಡಕು ಇರದಿದ್ದರೆ ಬಿಡುಗಡೆ ಏನು?
ಇದೆ ತೊಡಕಿನ ತೊಡಕು.
ಮುಗ್ದತೆ ಎಂಬುದು ದುಗ್ದ ಸಾಗರವಾಹುದು!
ಲೋಕಪಾವನ ಶಕ್ತಿ ಅದರೊಳಿದೆ.
ಮಣ್ಣೆದೆಯಲಿ ಝರಿಸುವ ನೀರಿನಂತೆಯೇ
ಮಾಂಸದಿ ತಾರೆಯುವ ಹಾಳಿನೊಲು.
ಕವಿ ಜೀವದಾ ಬ್ಯಾಸರಾ ಹರಿಸಾಕ
ಹಾಡ ನುಡಿಸಾಕ
ಮತ್ತ ಏನ ಬೇಕ?
ಒಂದು ಹೂತ ಹುಣಸಿಮರ ಸಾಕ.
ಯಾವ ಗಂಡೋ ಯಾವ ಹೆಣ್ಣೋ!
ಪ್ರೀತಿಯೆಂಬ ಚುಂಬಕ…. ಇದು ಅಂತ
ಆಯ್ತನಂತ ಒಗಿತನದೀ ಒಮ್ಮುಖ.
ಹೊಳೆಯೊಳಗೆ ಹೊತ್ತಾರೆ
ಧುಮಕಿ ನಾ ಸತ್ತರೆ
ಹೊಂದೇನೇ, ‘ಅವನ’ ಹೊಂದೇನೆ?
ನೇನೋ ಅದ್ಭುತ ಜಾಣೆ; ಮುಟ್ಟದೆಯ ಮುರುಕ ತೋರಿಸಿದ ವೀಣೆ.
ಕಣ್ಣವಿ ಎತ್ತಿರದ
ಹುಣ್ಣವಿ ತೆರೆಧಾಂಗ.
ನಿನ ತೆಕ್ಕಿಯೊಳಗೆ ಸಿಕ್ಕೈತಿ
ಸುಗ್ಗಿ ಸ್ವರ್ಗಕ್ಕೆ ಸಾಕು ತೊಳೆರಡ.
ಕಾಡಿನಂದದಿ ಕರಲು, ಕಲ್ಲಿನಂದದಿ ಎದೆಯು
ಕಾಡುವುದು ಕಾಣದೇ ಹಗಲು ಇರುಳೂ
ಮಾಡಿದ್ದ ಬೇಸಾಯ ಮಣ್ಣುಗೂಡುವಡಿ ಮಾಡಬೇಕಿನ್ನೇನು ಕೈಸಾಗದಯ್ಯಾ.
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳಸರಿಸಿ
ಉದುರಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿಹಾಲಲಿತುಸುಮಜ್ಜಿಗೆ ಬೆರಸಿ
ಬೆಕ್ಕು ಹಾರುತ್ತಿದೆ ನೋಡಿದಿರಾ?
ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ.
ಇದನ್ನೂ ಓದಿ:
- ದ ರಾ ಬೇಂದ್ರೆ ಜೀವನ ಚರಿತ್ರೆ | Dara Bendre Information in Kannada
- Kuvempu Information in Kannada (ರಾಷ್ಟ್ರಕವಿ ಕುವೆಂಪು ಅವರ ಜೀವನಚರಿತ್ರೆ)
Da Ra Bendre Quotes in Kannada Images
ಈ ಮೇಲಿನ ದ.ರಾ ಬೇಂದ್ರೆಯವರ ಉಲ್ಲೇಖಗಳು (dara bendre quotes in kannada) ಜೀವನ, ಪ್ರಕೃತಿ ಮತ್ತು ಭಾವನೆಗಳ ಮೇಲೆ ಆಳವಾದ ಒಳನೋಟಗಳು ಎಲ್ಲವನ್ನೂ ನೆನೆಸಿಕೊಳ್ಳುವಂತೆ ಮಾಡುತ್ತವೆ. ಬೇಂದ್ರೆಯವರ ಚಿಂತನೆಗಳು ಸರಳವಾದರೂ ಆಳವಾದ ಅರ್ಥವನ್ನು ಹೊಂದಿವೆ. ಅವರ ಬುದ್ಧಿವಂತಿಕೆಯು ನಿಮ್ಮೊಳಗೆ ಪ್ರತಿಧ್ವನಿಸಲಿ. ಜೀವನದ ಸಾಮಾನ್ಯ ಕ್ಷಣಗಳಲ್ಲಿ ಸರಳತೆ ಮತ್ತು ಆಳವಾದ ಸೌಂದರ್ಯವನ್ನು ಕಂಡುಕೊಳ್ಳಲು ನಮಗೆಲ್ಲರಿಗೂ ಮಾರ್ಗದರ್ಶನ ನೀಡಲಿ ಎಂಬುದು ನಮ್ಮ ಆಶಯ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.