ನಾಯಿಗಳು ಮನುಷ್ಯನ ಅತ್ಯಂತ ನಿಷ್ಠಾವಂತ ಮತ್ತು ಪ್ರಾಮಾಣಿಕ ಸ್ನೇಹಿತರೆಂದು ಹೇಳಬಹುದು. ಅವುಗಳ ನಿಸ್ವಾರ್ಥ ಪ್ರೀತಿ, ನಂಬಿಕೆ, ಮತ್ತು ನಿಷ್ಠೆ ಮನುಷ್ಯನಿಗೆ ಮಾದರಿಯಾಗಿದೆ. ಒಂದು ಹೊತ್ತಿನ ಊಟ ಕೊಟ್ಟರೆ ಸಾಕು, ಅವುಗಳು ಜೀವಪರ್ಯಂತ ಆ ಉಪಕಾರವನ್ನು ಮರೆಯುವುದಿಲ್ಲ. ನಾವು ಎಷ್ಟು ಪ್ರೀತಿ ತೋರಿಸಿದರೂ, ಅದರ ಹತ್ತು ಪಟ್ಟು ಪ್ರೀತಿಯನ್ನು ನಾಯಿಗಳು ತೋರಿಸುತ್ತವೆ. ಅವುಗಳಿಗೆ ನಮ್ಮಿಂದ ಏನನ್ನೂ ನಿರೀಕ್ಷೆ ಇಲ್ಲ, ಆದರೆ ನಾವು ನೀಡಿದ ಸಣ್ಣ ಸಹಾಯವನ್ನೂ ಜೀವಪರ್ಯಂತ ಮೆಚ್ಚಿಕೊಳ್ಳುತ್ತವೆ. ನಾವು ಬೈದರೂ, ಹೊಡೆದರೂ, ನಾಯಿಗಳ ಮೇಲೆ ಇರುವ ಪ್ರೀತಿ ಮತ್ತು ನಂಬಿಕೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ.
ನಾಯಿಗಳು ಮನುಷ್ಯರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಮೌನವಾಗಿದ್ದರೂ, ಅವುಗಳ ಕಣ್ಣುಗಳು ಮತ್ತು ನಡೆ-ನುಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಮನುಷ್ಯನಿಗೆ ಯಾವಾಗಲೂ ತನ್ನೊಂದಿಗೆ ಇರುವ ನಿಷ್ಠಾವಂತ ಸ್ನೇಹಿತ ಬೇಕಾದರೆ, ಅದು ನಾಯಿ ಮಾತ್ರ. ಅವು ತಮ್ಮ ಮಾಲೀಕರನ್ನು ರಕ್ಷಿಸಲು, ಸಂತೋಷಪಡಿಸಲು, ಮತ್ತು ಅವರೊಂದಿಗೆ ಸಮಯ ಕಳೆಯಲು ಸದಾ ಸಿದ್ಧವಾಗಿರುತ್ತವೆ. ಪ್ರೀತಿ ಮತ್ತು ನಂಬಿಕೆಯಲ್ಲಿ ನಾಯಿಗಳಷ್ಟು ಶುದ್ಧತೆಯನ್ನು ಇತರ ಪ್ರಾಣಿಗಳಲ್ಲಿ ಕಂಡುಹಿಡಿಯುವುದು ಕಷ್ಟ.
ನಾಯಿಗಳ ಈ ಅದ್ಭುತ ಗುಣಗಳನ್ನು ಕುರಿತು ಕನ್ನಡದಲ್ಲಿ ಹಲವಾರು ಅರ್ಥಪೂರ್ಣ ಮಾತುಗಳು ಮತ್ತು ನುಡಿಗಳು ಪ್ರಸಿದ್ಧವಾಗಿವೆ. “ನಿಯತ್ತಿಗೆ ನಾಯಿ” ಎಂಬ ಮಾತು ಮಾತ್ರವೇ ನಾಯಿಗಳ ನಿಷ್ಠೆಯನ್ನು ವಿವರಿಸಲು ಸಾಕ್ಷಿಯಾಗುತ್ತದೆ. ಈ ಲೇಖನದಲ್ಲಿ ನಾಯಿಗಳ ಕುರಿತ ಉಲ್ಲೇಖಗಳು ಮತ್ತು ನುಡಿಗಳನ್ನು (dog quotes in kannada) ಸಂಗ್ರಹಿಸಲಾಗಿದೆ. ಇವು ನಿಮಗೆ ನಿಮ್ಮ ನಾಯಿಯ ಜೊತೆಗಿನ ಭಾವಚಿತ್ರಕ್ಕೆ ಕ್ಯಾಪ್ಶನ್ ಆಗಿ ಬಳಸಲು ಅಥವಾ ನಾಯಿಯ ಮೇಲಿನ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಹಾಯ ಮಾಡುತ್ತದೆ.
Table of Contents
Beautiful Dog Quotes in Kannada
ಸ್ನೇಹ ಮಾಡಲು ವ್ಯಕ್ತಿಯೇ ಬೇಕೆಂದಿಲ್ಲ.
ಸರಿ ಹೊಂದುವ ಮನಸ್ಸು ಸಿಕ್ಕರೆ ಸಾಕು.
ನಾವು ತೋರಿದ ಪ್ರೀತಿಯನ್ನು ಜನರು ಮರೆತರೂ ಮೂಕ ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ
ಹಳಸಿದ ಅನ್ನ ತಿನ್ನುವ ನಾಯಿಗೆ ಇರುವ ನೀಯತ್ತು ಬಿಸಿ ಅನ್ನ ತಿನ್ನುವ ಮನುಷ್ಯನಿಗೆ ಇಲ್ಲ.
ಮಾತು ಬಾರದ ನಾಯಿಯನ್ನು ನಂಬು
ಆದರೆ ಮಾತಿನಲ್ಲೇ ಮರಳು ಮಾಡುವ ಮನುಷ್ಯನನ್ನು ನಂಬಬೇಡ
ಭಾವನೆಗಳೇ ಇಲ್ಲದ ಈ ಲೋಕದಲ್ಲಿ ನೀ ಏನನ್ನು ನಿರೀಕ್ಷಿಸಬೇಡ
ನೀಯತ್ತಿಗೆ ಬೆಲೆ ಸಿಗುವಂತಿದ್ದಾರೆ ನಾಯಿಯೂ ಕೋಟ್ಯಾಧಿಪತಿಯಾಗಿರುತಿತ್ತು
ಪ್ರೀತಿ ನೀಡಿದರೆ ನಾಯಿ ಕೂಡಾ ಬಾಲ ಅಲ್ಲಾಡಿಸಿ ಕೃತಜ್ಞತೆ ಸಲ್ಲಿಸುತ್ತೆ ಆದ್ರೆ ಕೆಲವು ಮನುಷ್ಯರಿಗೆ ಪ್ರೀತಿ ಸ್ವಾರ್ಥ ಸಾಧನೆಗೆ ಮಾತ್ರ ಬಳಕೆಯಾಗುತ್ತೆ….!!
ಮನೆಯ ಒಳಗೆ ಬರೋಕೆ ಬಿಡದಿದ್ದರು ನಾಯಿ ತನ್ನ ನಿಯತ್ತು ಬಿಡುವುದಿಲ್ಲ.. ಅದೇ ಮನುಷ್ಯನನ್ನು ಮನಸ್ಸಿನ ಒಳಗೆ ಬಿಟ್ಟು ಕೊಂಡರು ನಿಯತ್ತಿನಿಂದ ಇರುವುದಿಲ್ಲ.. ಇದೇ ಪ್ರಪಂಚ ಇದೇ ಈಗಿನ ಕಾಲದ ನಿಯತ್ತು.
ನಂಬೋದು ತಪ್ಪ ಅಥವಾ ನಂಬಿಕೆನೇ ತಪ್ಪ
ನಾಯಿ ತರ ನಿಯತ್ತು ಇರ್ಬೇಕು ಇಲ್ಲ
ಎಲ್ಲ ತಾಯಿ ತರ ತ್ಯಾಗ ಇರ್ಬೇಕು
ಮೋಸದ ಪ್ರಪಂಚ
ನಂಬಿಕೆ ಇಲ್ಲದ ಹಿತ ಶತ್ರುಗಳು, ನೋಡ ರಾಜಾ!
ಬೊಗಳದ ನಾಯಿ ಇಲ್ಲ
ಹಿಂದೆ ಮಾತನಾಡದ ಬಾಯಿ ಇಲ್ಲ
ಇವಕ್ಕೆಲ್ಲಾ ಅಂಜಿದ್ರೆ ಊರಲ್ಲಿ ಬಾಳೇ ಆಗಲ್ಲ….
ನಿಯತ್ತಲ್ಲಿ ನಾಯಿ ಬಿಟ್ರೆ ಬೇರೆ ಯಾವ್ದು ಇಲ್ಲ ಅನ್ಸತ್ತೆ ಅಲ್ವಾ.
ನಾಯಿಗಿರುವ ನಿಯತ್ತು ಮನುಷ್ಯನಿಗೆ ಜಗತ್ತಿನ ಇದ್ದಿದ್ದರೆ ಯಾವ ಸಂಬಂಧಗಳು
ಹಾಳಾಗುತ್ತಿರಲಿಲ್ಲ.
ನಂಬೋದು ತಪ್ಪಾ ? ಅಥವಾ ನಂಬಿಕೆನೇ ತಪ್ಪಾ?
ನಾಯಿ ತರ ನಿಯತ್ ಇರಬೇಕು ಇಲ್ಲ
ಎಲ್ಲ ತಾಯಿ ತರ ತ್ಯಾಗ ಇರಬೇಕು.!!
ನಾಯಿ ನಿಯತ್ತು ಮತ್ತು ನಂಬಿಕೆಗೆ ಉತ್ತಮ ಉದಾಹರಣೆ..!!
ನಿನ್ನ ಸಾಕು ನಾಯಿ ನಿನ್ನನ್ನು ನೋಡಿ ಬೊಗಳುತ್ತಿದೆಯೆಂದರೆ…..!!!
ಇನ್ಯಾವನೋ ಅದಕ್ಕೆ ತಿಂಡಿ …….!!!!
ತಿನಿಸುತ್ತಿದ್ದಾನೆ ಎಂದರ್ಥ……:
ಕ್ಷಮಿಸಿ, ಇದು ನಾಯಿಗಳ ಬಗ್ಗೆ ಅಲ್ಲ …..??
ಜನರ ಬಗ್ಗೆನೇ ಹೇಳ್ತಾ ಇರೋದು….!!!!💯
ಮನೆಯೊಳಗೆ ಬಿಟ್ಟಿಲ್ಲ ಅಂದ್ರು…
ನಾಯಿ, ಅದರ ನಿಯತ್ತು ಬಿಡಲ್ಲ…
ಆದ್ರೆ ಈ ಮನುಷ್ಯನಿಗೆ…
ಮನಸ್ಸಲ್ಲಿ ಜಾಗ ಕೊಟ್ಟರು…
ನಿಯತ್ತಿನಿಂದ ಇರಲ್ಲ…
ವ್ಯಕ್ತಿತ್ವ ನೋಡಿ ಅಭಿಮಾನಿ ಆಗಿ,
ವ್ಯಕ್ತಿಯನ್ನು ನೋಡಿ ಅಲ್ಲ.
ಅಭಿನಯಕ್ಕೇನು “ಚಾರ್ಲಿ” ಸಿನಿಮಾದಲ್ಲಿ ನಾಯಿ ಸಹ ಮಾಡಿದೆ…
ನಿಯತ್ತು ನಿನ್ನ ಕಾಯೋ ಹಾಗಿದ್ರೆ
ನಾಯಿ ಯಾಕೆ ಬೀದಿ ಹೆಣ ಆಗತಿತ್ತು. 😔
ನಿಯತ್ತಾಗಿ ಇದ್ರೆ ನಾಯಿ ಅಂತಾರೆ ..🐕
ನಿಯತ್ತು ತಪಿದ್ರೆ ದ್ರೋಹಿ ಅಂತಾರೆ..🙃
ಗೆದ್ದರೆ ಬೇರೆಯವರ ಸಹಾಯದಿಂದ ಅಂತಾರೆ..😳
ಸೋತರೆ ಅವನೇ ಮಾಡಿಕೊಂಡ ತಪ್ಪಿನಿಂದ ಅಂತಾರೆ …🤦♀️
ಒಟ್ನಲ್ಲಿ ನಾವು ಏನೇ ಮಾಡಿದ್ರು ಈ ಜನ ಮಾತಾಡ್ತಾನೆ ಇರ್ತಾರೆ ..☹️
ಈ ಕೆಲಸಕ್ಕೆ ಬರದೇ ಇರೋರ್ ಬಗ್ಗೆ ತಲೆ ಕೆಡುಸ್ಕೊಬಾರ್ದು..🤙🤙
ಯಾಕಂದ್ರೆ ನಮ್ ಗತ್ತು ನಮಿಗ್ ಮಾತ್ರ ಗೊತ್ತು…..😎😎
ಹಳಸಿದ ಅನ್ನವನ್ನೇ ಬಿಡದ ಹಸಿದ ನಾಯಿಗಳ ಮುಂದೆ ಸ್ವಾಭಿಮಾನವನ್ನ ಎಂದೂ ಅಡವಿಡಬಾರದು.
Dog God ಅಕ್ಷರಗಳು ಆಚೆ ಈಚೆ ಅರ್ಥ ಬೇರೆ, ಪ್ರಥಮಾರ್ಥ ನಾಯಿ ದ್ವಿತಿಯದ್ದು ದೇವರು, ನಾರಾಯಣನ ವಾಹನ
” ನಾಯಿ” ನಾರಾಯಣ ಈಶ್ವರ ಅದಕ್ಕೆ ಹೇಳುವುದು ಹರಿಹರದಲ್ಲಿ ಪರಿಭೇಧವಿಲ್ಲದ ಮೇಲೆ ಶೈವ ವೈಷ್ಣವರಲ್ಲಿ ಯಾಕೀ ಮನಸ್ತಾಪ
ನೀರಿನಲ್ಲಿ ದೋಣಿ ಇರಬೇಕು …
ಆದರೆದೋಣಿಯಲ್ಲಿ ನೀರು ಇರಬಾರದು..
ಬದುಕಿನಲ್ಲಿ ನೆನಪು ಇರಬೇಕು…
ಆದರೆ ನೆನಪುಗಳೇ ಬದುಕು ಆಗಬಾರದು..ಒಂದು ತುತ್ತು ಅನ್ನ ಹಾಕಿದರೆ ಸಾಕು ನಾಯಿ ಕೂಡ ನನ್ನ ಹಿಂದೆಯೇ ಬರುವುದು ಆದರೇ ಜೀವನದಲ್ಲಿ ಕೆಲವು ವ್ಯಕ್ತಿಗಳಿಗೆ ಸ್ನೇಹ ಪ್ರೀತಿ ಕೊಟ್ಟರೂ ಅರ್ಧದಲ್ಲಿ ಬಿಟ್ಟು ಹೋಗುವವರೇ ಜಾಸ್ತಿ….!! ☮️
ನಾಯಿ ಕೂಡ ನನ್ನ ಬೈಯೋ ತರ ಆಗೋಯ್ತು ಯಾರಿಗ್ ಬೇಕು ಈ ಜೀವನ ಪ್ರೆಂಡ್ಸ್ 🤣😜
ಆದ್ರೂ ನನ್ನ ತುಂಬಾ ಹಚ್ಚಿಕೊಂಡಿವೆ ಪ್ರಾಣಿ ಪ್ರೀತಿ ನಿಯತ್ತಿನ ಮುಂದೆ ಮನುಷ್ಯನ ಸ್ವಾರ್ಥ ಪ್ರೀತಿ ಬೇಕು ಅಂತ ನಂಗೆ ಯಾವತ್ತೂ ಅನಿಸಿಲ್ಲ ಪ್ರಾಣಿ ಪಕ್ಷಿ ಪ್ರಕೃತಿಯಲ್ಲಿ ತುಂಬಾ ಖುಷಿ ನೆಮ್ಮದಿ ಕಾಣೋದು ಮಾತ್ರ ಅದ್ಬುತ ಅಲ್ವಾ🥰🤩😍
💫ಪ್ರಾಣಿಗಳಷ್ಟು ಪ್ರೀತಿ, ನಂಬಿಕೆ, ಸ್ನೇಹ ಮನುಷ್ಯನಲ್ಲಿ ಹುಡುಕಿದರೂ ಸಿಗುವುದಿಲ್ಲ
ಅದಕ್ಕೆ ನಮ್ಮ ಹಿರಿಯರು ಹೇಳುವುದು
ನಿಯತ್ತಿಗೆ ನಾಯಿ
ಮಮತೆಗೆ ಗೋ ಮಾತೆ
ಪ್ರಾಣಿಗಳು ಯಾರಿಗೆ ಏನು ಕೇಡು ಬಯಸುವುದಿಲ್ಲ
ಹಾಗೆಯೇ ಬೇರೆಯವರಿಂದ ಏನನ್ನು ನಿರೀಕ್ಷಿಸುವುದಿಲ್ಲ
ಅವುಗಳಿಗೆ ಕೊಡುವುದಷ್ಟೇ ಗೊತ್ತಿರುವುದು…!🖤
ಪ್ರೀತಿ ಎಂಬ ಪದದ ಅರ್ಥಕ್ಕೆ. ಪ್ರಾಣಿಗಳಿಗೂ ಅಣ್ಣ ತಮ್ಮಂದರ ತರ ಪ್ರೀತಿ ಎಂಬ. ತೋರಿಸಿಕೊಟ್ಟ ಮುದ್ದು ನಾಯಿ ಮರಿಗಳು.🙏
ನಾಯಿ ಪ್ರೀತಿ, ತಾಯಿ ಪ್ರೀತಿ ❤️
ನಂಬಿದವರಿಗೆ ಪ್ರಾಣ ಕೂಡ ಅಗತ್ಯವಿಲ್ಲ ಪ್ರಾಣ ಇರೋವರೆಗೂ ನಂಬಿಕೆ ದ್ರೋಹ ಮಾಡದೆ ಇದ್ರೆ ಸಾಕು ನಿಜ ಅಲ್ವಾ ಅದುವೇ ನಿಜವಾದ ಪ್ರೀತಿ 🫶🫶🥰🥰🥰, ಅಣ್ಣ ತಮ್ಮರ ಪ್ರೀತಿ ಅನುಭವ. ಚಿಕ್ಕ ನಾಯಿ ಮರಿಗಳ ಗುಣ.🙏
ನಂಬಿಕೆಗೆ ಇನ್ನೊಂದು ಹೆಸರೇ ನಾಯಿ🐶
ಪ್ರೀತಿ ಜೊತೆ ಸ್ವಲ್ಪ ಊಟ ಕೊಡಿ ಆಮೇಲೆ ನಿಯತ್ತು ನೋಡಿ
Best Kannada Quotes on Dogs
💚ನಾಯಿ ಸಾಕುವ ಯೋಗ್ಯತೆ ಇಲ್ಲ ಅಂದ್ರೆ ಸಾಕಿ ಹೀಗೆ ಅವುಗಳನ್ನ ಬೀದಿ ಪಾಲು ಮಾಡಬಾರದು ಅದು ನನ್ನ ಅಭಿಪ್ರಾಯ 💚
❤️🩹 ನಾಯಿ ಇರುವ ನಿಯತ್ತು ಮನುಷ್ಯನಿಗೆ ಇಲ್ಲ ನಾಯಿಗೆ ಒಂದು ತುತ್ತು ಊಟ ಹಾಕಿದ್ರೆ ಮಾಲೀಕ ನನ್ನು ಪ್ರೀತಿ ಮತ್ತು ವಾತ್ಸಲ್ಯ ದಿಂದ ರಾತ್ರಿ ಹಗಲು ಮನೆಯ ಮುಂದೆ ಕಾಯುತ್ತಾ ನಿಂತಿರುತ್ತದೆ❤️🩹
🤎 ಆದರೆ ಮನುಷ್ಯನಿಗೇ ದಿನ ನಿತ್ಯ ಊಟ ತಿಂಡಿ ಹಾಕಿ ಮತ್ತು ಹಣ ಕೊಟ್ಟರೂ ಸಹಾ ನಿಯತ್ತು ಇಲ್ಲದೇ. ನಮ್ಮ ಮುಂದೆಯೇ ಶಾಪ ಹಾಕಿಕೊಂಡು ತಿರುಗುತ್ತಾರೆ 🌺.
ನಾಯಿ
ಎಲ್ಲರಂತಲ್ಲ
ಜಾಡಿಸಿ ಒದ್ದರೂ ಹತ್ತಿರ ಬರುತ್ತದೆ
ನೀವು ಪ್ರೀತಿ ಪಾತ್ರರಾಗಿರಬೇಕಷ್ಟೇ
ನಾಯಿ
ಎಲ್ಲರಂತಲ್ಲ
ನೀವು ಮುದ್ದು ಮಾಡಲು ಹೋದರೂ ಕಚ್ಚುತ್ತದೆ
ನೀವು ಪ್ರೀತಿ ಪಾತ್ರರಲ್ಲದಿದ್ದರೆ
ನಾಯಿ
ಎಲ್ಲರಂತರಲ್ಲ
ಏನೂ ಕೊಟ್ಟರೂ ತಿನ್ನುತ್ತದೆ
ಅದು ಹಸಿದಿರಬೇಕಷ್ಟೇ
ನಾಯಿ
ಎಲ್ಲರಂತಲ್ಲ
ತಾನು ಕಂಡಿದ್ದನ್ನೆಲ್ಲ ಮೂಸುತ್ತದೆ
ತನಗೆ ಬೇಡವಾದುದಾರೆ
ಅದರ ಮೇಲೆಯೇ ಉಚ್ಚೆ ಹುಯ್ದು ಬಿಡುತ್ತದೇ
ನಾಯಿ
ಎಲ್ಲರಂತಲ್ಲ
ತನಗೆ ಭಯವಾಗಿ ರಾತ್ರಿ ಬೊಗಳುತ್ತದೆ
ಆದರೆ ನಾವು ಭಯವಾಗದಿರಲೆಂದು
ನಾಯಿ ಕಟ್ಟಿಕೊಂಡಿದ್ದೇವೆ
ನಾಯಿ ಹಸಿವಾದರೂ ಬೊಗಳುತ್ತದೆ
ಸಿಟ್ಟು ಬಂದರೂ ಬೊಗಳುತ್ತದೆ
ಭಯವಾದರೂ ಬೊಗಳುತ್ತದೆ
ಪಾಪ ನಾಯಿ
ನಾವು
ಎಲ್ಲರಂತೆಯೇ
ನಾಯಿ ಯಾವುದಕ್ಕೇ ಬೊಗಳಿದರೂ
ನಮ್ಮ ಮನಸ್ಥಿತಿಯನ್ನು ಅವಲಂಬಿಸಿ
ಅದಕ್ಕೆ ಪ್ರತಿ ಕ್ರಿಯಿಸುತ್ತೇವೆ
ಕಂತ್ರಿತನಕ್ಕೂ, ನಿಯತ್ತಿಗೂ
ಈ ಕವಿಗಳು ನಾಯಿಯನ್ನೇ ಉಪಮೆಯಾಗಿಸಿದ್ದಾರೆ
ಒಳ್ಳೆಯವನನ್ನು
ಅವನದು ನಾಯಿ ನಿಯತ್ತು ಎಂದರೆ
ಕೆಟ್ಟವನನ್ನು ಅವನೊಬ್ಬ ಕಂತ್ರಿ ನಾಯಿ ಎನ್ನುತ್ತಾರೆ
ಹಾಗೆ ನೋಡಿದರೆ
ನಾಯಿಯಂತಿರುವುದು
ನಾಯಿಯಾಗಿರುವುದು
ಅಷ್ಟು ಸುಲಭವಲ್ಲ
ಅಷ್ಟು ಕಷ್ಟವೂ ಅಲ್ಲ
ಇದು ಜಾತಿನಾಯಲ್ಲ…
ಪ್ರೀತಿ ನಾಯಿ.😍
ಪ್ರೀತಿಗೆ ಜಾತಿಯಿಲ್ಲ.🥰😊
ಚಾರ್ಲಿ ಸಿನಿಮಾ ನೋಡಿ ನಾಯಿ ಪ್ರೀತಿ ಜಾಸ್ತಿ ಆಗಿದೆ ಕಂಡಲ್ಲಿ ಕಲ್ಲು ಹೊಡೆದು ನೋಯಿಸಿದ ಜನಕ್ಕೆ ಸಾದ್ಯವಾದರೆ ಮನೆಯಲ್ಲಿ ಒಂದು ನಾಯಿ ಸಾಕಿ ಗೊತ್ತಾಗುತ್ತೆ ಅದರ ನಿಜವಾದ ಪ್ರಾಮಾಣಿಕ ಪ್ರೀತಿ.🐕
ನಾಟಕೀಯ ಪ್ರೀತಿ ತೋರಿ ಕೈ ಕುಲುಕುವ ಬೇವರ್ಸಿಗಳಿಗಿಂತ ದಿನಾ ನಮ್ಮನ್ನ ನೋಡಿ ಬಾಲ ಅಲ್ಲಾಡಿಸುವ ನಾಯಿ ಪ್ರೀತಿ ಶ್ರೇಷ್ಠವಾದದ್ದು…..
ಪ್ರೀತಿಗೆ ಭಾಷೆ ಇಲ್ಲ, ಮನುಷ್ಯ ನಾಯಿ ಎನ್ನುವ ಭೇದವಿಲ್ಲ, ಪ್ರೀತಿ ಜೀವ ಜೀವಗಳ ನಡುವೆ ಹುಟ್ಟುವುದು ನಿಮಗೆ ಯಾರೇ ಪ್ರೀತಿ ಕೊಟ್ಟರು ಅನುಭವಿಸಿ ಅಷ್ಟೇ. ಮನುಷ್ಯನ ಅತ್ಯಂತ ನಿಯತ್ತಿನ ಪ್ರಾಣಿ ನಾಯಿ ಒಂದಷ್ಟು ಅನ್ನ ಜೊತೆಗೊಂದಷ್ಟು ಪ್ರೀತಿ ಕೊಟ್ಟರೇ ಸಾಕು.
“ಮೋಸ ಮಾಡದ ಪ್ರೀತಿ, ಮೋಸ ನೀಡದ ಪ್ರೀತಿ, ಮೋಸವನ್ನರಿಯದ ಪ್ರೀತಿ ನಾಯಿ ಪ್ರೀತಿ. ನಾಯಿಗಿದೆ ನಿಯತ್ತು, ನಿನಗೇನಿದೆ”.
🙏ನಾಯಿ ಪ್ರೀತಿ ಶಾಶ್ವತ 🙏
ಮಗು ಮುಗ್ಧತೆಯ ಮೃಗ ನೀನು ಹೆಸರಿಗಷ್ಟೇ ಬರಿ ನಾಯಿ…!!
ಪ್ರೀತಿ ಕಾಳಜಿಯಲ್ಲಿ ನೀ ಮತ್ತೊಂದು ತಾಯಿ…
ನಂಗೆ ನಾಯಿ🥰 ಮೇಲಿರುವ
ಪ್ರೀತಿ❤️ ಮನುಷ್ಯರ ಮೇಲೆ ಇಲ್ಲ😡..
ಮೋಸ ಮಾಡೋ ಸಾವಿರ ಮನುಷ್ಯರಿಗಿಂತ
ನಿಯತ್ತಿಂದ ಇರೋ ಒಂದು ಶ್ವಾನ ಎಷ್ಟೋ ಲೇಸು..😊❤🩹
ನಾಯಿ ಪ್ರೀತಿಗೆ ಸಮನಾದ ಪ್ರೀತಿ ಮತ್ತೊಂದು ಇಲ್ಲ
ಅನ್ಸುತ್ತೆ ನನಗೆ, ನನ್ನ ಕಣ್ಣುಗಳ ಧಿಟ್ಟಿಸೋ ಪರಿಗೆ
ಜಗತ್ತಿನ ಅತೀ ಬುದ್ದಿವಂತ ಪ್ರಾಣಿ ಮನುಷ್ಯರಲ್ಲಿ ನಾನೊಬ್ಬ,
ನನ್ನ ಬಳಿ ಯಾವ ಉತ್ತರ ಇರಲಿಲ್ಲ ❤
A dog will never break your heart ❤
ನಿಯತ್ತಿಗೆ ಇನ್ನೊಂದು ಹೆಸರೇ ಅದು ನಾಯಿ ನಾವು ಎಸ್ಟು ಪ್ರೀತಿ ತೋರಿಸ್ತಿವೋ ಅದಕ್ಕಿಂತ 100 ಪಟ್ಟು ಪ್ರೀತಿ ತೋರಿಸ್ತವೆ . ಒಂದು ಹೊತ್ತಿನ ಊಟ ಕೊಟ್ರೆ ಅವುಗಳ ಜೀವ ಇರೋವರ್ಗು ಮರೆಯೋಲ್ಲ .. ನಾವು ಹೊಡೆದ್ರು ಅಷ್ಟೇ ಬೈದ್ರು ಅಷ್ಟೆ ನಮ್ಮ ಮೇಲೆ ಇರೋ ಪ್ರೀತಿ ಸ್ವಲ್ಪನೂ ಕ ಆಗಲ್ಲ, ನಾಯಿ ಎಂದು ಮೂದಲಿಸಿ ಮುಖ ಮುರಿವವರಿಗೆೇನು ಗೊತ್ತು ಅದರ ಬೆಚ್ಚಗಿನ ಪ್ರೀತಿ 😍😍😍😍
ಮೂಕ ಪ್ರಾಣಿಗಳಿಗೆ ಒಮ್ಮೆ ಪ್ರೀತಿ ತೋರಿಸಿದರೆ ಸಾಕು, ಅವುಗಳು ಮತ್ತೆ ತಾವಾಗಿಯೇ ಆಪ್ತವಾಗುತ್ತವೆ. ಅವುಗಳಲ್ಲಿ ತನಗೆ ಒಳಿತನ್ನು ಬಯಸುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣಗಳಿವೆ. ಹಾಗಾಗಿ ಇತರೆಲ್ಲಾ ಪ್ರಾಣಿಗಳಿಗಿಂತ ನಾಯಿಗಳು ಮನುಷ್ಯನಿಗೆ ಬೇಗ ಹತ್ತರಿವಾಗುತ್ತವೆ.
ಯಾವುದೇ ನಿರೀಕ್ಷೆ ಇಲ್ಲದೆ ತನ್ನವರ ಗಾಗಿ ಎಲ್ಲವನ್ನೂ ಮಾಡುವ ಈ ಶ್ವಾನಕ್ಕೆ ಒಮ್ಮೊಮ್ಮೆ ಎಷ್ಟು ಪ್ರೀತಿ ತೋರಿಸಿದರೂ ಕಮ್ಮಿನೆ ಅಂತ ಅನ್ನಿಸುತ್ತದೆ.
ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು, ಬೆಟ್ಟದಷ್ಟು ಪ್ರೀತಿ ನೀಡುತ್ತದೆ. ಯಜಮಾನಿಕೆ ಮಾಡಲು ಸಾಧ್ಯ ಎಂದು ತೋರಿದಾಗ ಅವನೂ ಇವನೂ ಇಬ್ಬರೂ ಸಮಾನರು ಎಂದು ಬಿಡುತ್ತೇವೆ. ಒಬ್ಬರು ಮತ್ತೊಬ್ಬರ ಮೇಲೆ ಯಜಮಾನಿಕೆ ಮಾಡಬಾರದೆಂದೇ ಸಮಾನತೆಯನ್ನು ಸಾರುವುದು. ಯಾವತ್ತೂ ನಾಯಿ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ತೊಂದರೆಯಾದರೇ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡುವುಕ್ಕೂ ಹಿಂದೆ ಮುಂದೆ ನೋಡಲ್ಲ. ಅದು ನಾಯಿಗಳಿಗೆ ಇರುವ ಕೃತಜ್ಙತ ಗುಣಗಳು.
ಸಂಬಂಧಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಆ ಸಂಬಮಧಗಳಿಗೆ ವಿದೇಯರಾಗಿರುವ ಗುಣ ಮನುಷ್ಯರಿಗಿಂತ ನಾಯಿಗಳಲ್ಲೇ ಹೆಚ್ಚಿದೆ ಎಂದರೇ ತಪ್ಪಿಲ್ಲ.
ಪ್ರೀತಿ ಮತ್ತು ನಿಯತ್ತಿಗೆ ನಾಯಿ ಮುಂದೆ ದೇವರು ಸೋಲಬಹುದು ಅನಿಸುತ್ತದೆ. 💞🐕
ನೀವು ಹೆಚ್ಚು ಹಣ ವಿನಿಯೋಗಿಸಿ ದುಬಾರಿ ನಾಯಿ ಕೊಳ್ಳಬಹುದು, ಆದರೆ ಎಲ್ಲಾ ನಾಯಿಗಳು ನೀಡುವ ಪ್ರೀತಿ ಒಂದೇ ಆಗಿರುತ್ತದೆ.
ನಾಯಿ ಬೆಕ್ಕುಗಳ ಬಗ್ಗೆ ಅತಿಯಾದ ಪ್ರೀತಿ ಇದ್ದೋರಿಗಷ್ಟೇ ಅಪರಿಚಿತ ನಾಯಿ ಏನೂ ಮಾಡೋಲ್ಲ. ನಾಯಿ ಹತ್ತಿರ ಹೋಗೋವಾಗ ಜಾಗ್ರತೆ 🎷🙏🏻🙏🏻❤️🥰
ನಾಯಿಪ್ರೇಮಿ ❤️
ನಿಯತ್ತಿಗೆ ಇನ್ನೊಂದ್ ಹೆಸರೆ ನಾಯಿ🐶
ಅದ್ಕೆ ಕಾಣುತ್ತೆ ಪ್ರೀತಿ ಮಾಡೊ ಹುಡ್ಗುರ್ನ ಹುಡ್ಗಿರು
ನಾಯಿ ತರ ನೊಡೊದು.!😂
ನಾವ್ ಇಷ್ಟಪಟ್ಟು ಹುಡುಗಿ ಬಿಟ್ಟು ಹೋಗಬಹುದು ಆದರೆ ನಾಯಿ ಪ್ರೀತಿ ಕೊನೆ ಉಸಿರುಮಂಟ ಪ್ರೀತಿ ತೋರಿಸುತ್ತದೆ🐕❤️🥰
ನಾಯಿ ಪ್ರೀತಿ ಮಾಡಿ ನೋಡಿ ಎಂದಿಗೂ ಮರೆಯುವುದಿಲ್ಲ. 💞
ಆದರೆ ಹುಡುಗಿಗೆ ಪ್ರೀತಿ ಮಾಡಿದರೆ ಅರ್ಧದಲ್ಲಿ ಕೈಕೊಟ್ಟು ಹೋಗುತ್ತಾಳೆ 💔
ನನಗೆ ನಾಯಿ ಎಂದರೆ ತುಂಬಾ ಇಷ್ಟ ಬಹಳ ಪ್ರೀತಿ, ವಿಶ್ವಾಸ ಮೂರು ಹೊತ್ತು ಊಟ ಹಾಕಿ ಸಾಕಿದ ನಾಯಿ ಯಾವತ್ತು ಮನುಷ್ಯನಿಗೆ ಮೋಸ ಮಾಡೋದಿಲ್ಲ ನಾಯಿಗಿರುವ ವ್ಯಾಲ್ಯೂ ಈಗಿನ ಕಾಲದಲ್ಲಿ ಮನುಷ್ಯರಿಗಿಲ್ಲ ಹಾಗಾಗಿ ನನಗೆ ನಾಯಿ ಅಂದ್ರೆ ತುಂಬಾ ಪ್ರೀತಿ 🥰🐕🐕🦺🐶🐕🦺🥰
Dog Quotes in Kannada Images
ನಾಯಿಗಳ ಬಗ್ಗೆ ಕನ್ನಡದಲ್ಲಿ ಸಂಗ್ರಹಿಸಿದ ಈ ಮಾತುಗಳು (dog quotes in kannada) ನಾಯಿಗಳ ನಿಷ್ಠೆ, ಪ್ರೀತಿ, ಮತ್ತು ನಂಬಿಕೆಯನ್ನು ಸುಂದರವಾಗಿ ವಿವರಿಸುತ್ತವೆ. ಈ ಸಂಗ್ರಹವನ್ನು ನೀವು ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಸಂಗ್ರಹವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಸುಂದರ ಸಂಗ್ರಹಗಳಿಗಾಗಿ ನಮ್ಮ ಬ್ಲಾಗ್‌ಗೆ ಮರು ಭೇಟಿ ನೀಡಿರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted, and copying is not allowed without permission from the author.