100+ Emotional Quotes in Kannada

ಭಾವನೆಗಳು ಜೀವನದ ಒಂದು ಭಾಗ. ಅವು ನಮ್ಮ ಅನುಭವಗಳನ್ನು ರೂಪಿಸುತ್ತವೆ, ನಮ್ಮನ್ನು ಇತರರೊಂದಿಗೆ ಹತ್ತಿರ ಮಾಡುತ್ತವೆ ಮತ್ತು ನಮ್ಮ ಜೀವನಕ್ಕೆ ದಾರಿ ನೀಡುತ್ತವೆ.

ನಮ್ಮ ಇಂದಿನ ವೇಗವಂತ ಜೀವನದಲ್ಲಿ, ನಾವು ಭಾವನೆಗಳನ್ನು ಹೇಳಿಕೊಳ್ಳಲು ಸರಿಯಾದ ಪದಗಳನ್ನು ಹುಡುಕುವುದು ಹೆಚ್ಚು ಕಷ್ಟಸಾಧ್ಯವಾಗಬಹುದು. ಇಂತಹ ಸಂದರ್ಭಗಳಲ್ಲಿ ಭಾವನೆಗಳನ್ನು ವರ್ಣಿಸುವ ಸುಂದರ ಉಲ್ಲೇಖಗಳು ನಮ್ಮ ನೆರವಿಗೆ ಬರುತ್ತವೆ. 

ಈ ಕನ್ನಡದ ಭಾವನಾತ್ಮಕ ಉಲ್ಲೇಖಗಳ ಸಂಕಲನ ನಿಮ್ಮ ಭಾವನೆಗಳಿಗೆ ಪ್ರತಿಧ್ವನಿಯಾಗಿ, ಅವುಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಪ್ರತಿ ಉಲ್ಲೇಖವು ಹೊಸ ಆರಂಭದ ಸಂತೋಷ, ವಿದಾಯದ ನೋವು, ಅಥವಾ ಪ್ರೀತಿಯ ಮತ್ತು ಸ್ನೇಹದ ಸೌಂದರ್ಯದಂತಹ ಜೀವನದ ಏಳು-ಬೀಳನ್ನು ಪ್ರತಿಬಿಂಬಿಸುತ್ತದೆ.

ಆದ್ದರಿಂದ, ನೀವು ಯಾರಿಗಾದರೂ ಸಾಂತ್ವನ ಹೇಳಲು, ನೋವನ್ನು ವ್ಯಕ್ತಪಡಿಸಲು, ಅಥವಾ ನಿಮ್ಮದೇ ಭಾವನೆಯನ್ನು ಹೊರಹಾಕಲು emotional quotes in kannada ಹುಡುಕುತ್ತಿದ್ದರೆ, ಈ ಸಂಕಲನ ನಿಮ್ಮ ಸಂಗಾತಿಯಾಗಿ ಕಾರ್ಯನಿರ್ವಹಿಸುತ್ತದೆ. 

Emotional Quotes in Kannada

Emotional Quotes in Kannada

ಪ್ರಪಂಚದಲ್ಲಿ ತುಂಬಾ ಕೆಟ್ಟ ವಸ್ತು ಎಂದರೆ ನಮ್ಮಲ್ಲಿರೋ ಒಳ್ಳೆತನ ಯಾಕಂದ್ರೆ ಅದನ್ನು ಖರ್ಚು ಮಾಡಿದಷ್ಟು ನಮಗೆ ಸಿಗೋ ಲಾಭ ಕಣ್ಣೀರು ಮತ್ತು ನೋವು ಮಾತ್ರ…

 

ಕಣ್ಣೀರು ಹಾಕಿ ಅಳ್ತೀವಲ್ಲ ಅದು ನೋವಲ್ಲಾ…

ನಗು ಮುಖ ಹಾಕಿಕೊಂಡು ಕಣ್ಣೀರು ತಡೀತೀವಲ್ಲಾ ಅದು ನಿಜವಾದ ನೋವು…

 

ಮೌನಕ್ಕೆ ಮಾತನಾಡಲು ಬರುವುದಿಲ್ಲ ನಿಜ.

ಮೌನ ಮಾತಾಡಿದ್ದೇ ಆದರೆ ಆ ಮಾತುಗಳನ್ನ ಕೇಳಿ ಸಹಿಸುವಷ್ಟು ಶಕ್ತಿ ಯಾವ ವ್ಯಕ್ತಿಗೂ ಇರುವುದಿಲ್ಲ.

 

ಕೆಲವೊಮ್ಮೆ ಏನು ಇರದೆ ಒಂಟಿಯಾದರೆ ,ಇನ್ನೂ ಕೆಲವೊಮ್ಮೆ ಎಲ್ಲಾ ಇದ್ದು ಒಂಟಿಯಾಗುತ್ತೇವೆ. 

 

ದುಃಖ ತುಂಬಾ ಇದೆ ಆದರೆ ಹೇಳಿಕೊಳ್ಳಲು ನಮ್ಮವರು ಅಂತ ಯಾರು ಇಲ್ಲ .

 

ಕಣ್ಣಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ

ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ.

 

ಮಾತು ಸಂಬಂಧವನ್ನು ಕೂಡಿಸುವಂತೆ ಇರಬೇಕೆ ಹೊರತು ಸಂಬಂಧವನ್ನು ಹಾಳುಮಾಡುವಂತಲ್ಲ

 

ಖುಷಿ ಇಲ್ಲದ ಜೀವನ 

ಸಾವಿಗೆ ಸಮಾನ

 

ಕೆಲವೊಂದು ಸಂಬಂಧಗಳು ಬಾಡಿಗೆಯ ಮನೆಯ ಹಾಗೆ

ಎಷ್ಟೇ ಶೃಂಗರಿಸಿದರು ನಮ್ಮದಾಗುವುದಿಲ್ಲ

 

ನಾನು ಮನುಷ್ಯನೇ ಅಲ್ವಾ. 

ನನಗೂ ಒಂದು ಮನಸ್ಸು ಇದೆ ಅಲ್ವಾ ಅದಕ್ಕೂ ನೋವು ಆಗುತ್ತೆ ಅಲ್ವಾ 

ಇದನ್ನು ಅರ್ಥ ಮಾಡಿಕೊಳ್ಳದೆ ಬಿಟ್ಟು ಹೊರಟು ಹೋದೆ ಅಲ್ವಾ 

ಮತ್ತೆ ನಿನ್ನ ನೋಡಿದಾಗ ಖುಷಿಗಿಂತ ಅಳು ನೇ ಜಾಸ್ತಿ ಬರುತಿದೆ ಕಣೆ.

 

ಬದುಕಲು ಸಾಕಲ್ಲವೇ..? 

ಹತ್ತಿರ ಇಲ್ಲದಿದ್ದರೇನಂತೆ ದೂರವಿದ್ದೂ ಮನದಲ್ಲಿ ನೆನೆದರೆ ಸಾಕಲ್ಲವೆ? 

ಮನಸ್ಸು ತುಂಬಾ ನೋವು ತುಂಬಿದ್ದರೇನಂತೆ ನಗುಮುಖದಿಂದಿದ್ದರೆ ಸಾಕಲ್ಲವೇ..? 

ಮಾತಿನಲ್ಲಿ ಹೇಳಿಯೂ ಅರ್ಥವಾಗದಿದ್ದರೇನಂತೆ ಮೌನದಿ ಸುಮ್ಮನಿದ್ದರೆ ಸಾಕಲ್ಲವೆ..? ಬಯಸಿದವರು ಜೊತೆ ಇಲ್ಲದಿದ್ದರೇನಂತೆ ಜೊತೆರಲು ಬಯಸ್ಸುವ ಮನದವರೊಂದಿಗಿದ್ದರೆ ಸಾಕಲ್ಲವೆ..?

 

ನೋವು ಹೆಚ್ಚಾದಂತೆ ಮನಸ್ಸು ಮೌನವಾಗುತ್ತದೆ..

 

ಹೃದಯದಕ್ಕೆ ನೋವು ಹೆಚ್ಚಾದಾಗ, ಮನಸ್ಸು ಹುಚ್ಚ ಆಗುತ್ತದೆ.

 

ಮನಸ್ಸು ಹೊಡೆದ ಹೋದ ಮೇಲೆ ಮೌನ ಅಲ್ಲದೆ ಮಾತಿಗೆ ಜಾಗ ಇರೋದಿಲ್ಲ…! ನೋವು ಮನಸ್ಸನ್ನಷ್ಟೇ ಅಲ್ಲ ಮನುಷ್ಯನನ್ನು ಬದಲಾಯಿಸುತ್ತದೆ…!! 

 

ಹೆಣ್ಣಿನ ಮನಸ್ಸು ತುಂಬಾ ಸೂಕ್ಷ್ಮವಾದದ್ದು…. 

ಸಾದ್ಯವಾದರೆ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲ್ಲೂ ಪ್ರಯತ್ನ ಮಾಡಿ…. 

ಆಗಲಿಲ್ಲ ಎಂದರೆ…. ಅವಳ ಪಾಡಿಗೆ ಅವಳನ್ನು ಇರಲು ಬಿಟ್ಟು ಬಿಡಿ…. 

ಅವಳ ಭಾವನೆಗಳಿಗೆ ನೋವು ಕೊಡುವ ಪ್ರಯತ್ನ ಮಾಡಬೇಡಿ.

Emotional Love Quotes in Kannada

ಮನಸ್ಸು ಬಿಚ್ಚಿ ನಗ್ತಾ ಇದ್ದೆ 

ಬದುಕು ಅಳೋದ್ನ ಕಲಿಸಿತು, 

ಎಲ್ಲರೊಂದಿಗೆ ಬೆರೆಯುತ್ತಿದ್ದೆ 

ನೋವು ಒಂಟಿಯಾಗಿರುವುದನ್ನು ಕಲಿಸಿತು, 

ತುಂಬಾ ಮಾತಾಡ್ತಿದ್ದೆ 

ಒಂಟಿತನ ಮೌನಿ ಆಗಿರುವುದನ್ನು ಕಲಿಸಿತು..

 

ಬಯಸಿದೆ ಮನಸ್ಸು ನಿಮ್ಮಂತಾಗಲು…… 

ಎಷ್ಟೇ ನೋವು ತಿಂದರು ತೋರಿಸಿಕೊಳ್ಳದಂತೆ, 

ಎಷ್ಟೇ ಪ್ರೀತಿ ಇದ್ದರು ತೊರ್ಪಡಿಸದಂತೆ…… 

 

ತಿಳಿಯಾಗಿದೆ ಮನಸ್ಸು ಕಲ್ಲೆಸೆಯಬೇಡ. 

ಹಳೆಯದಾಗಿದೆ ನೋವು ಮತ್ತೆ ಮತ್ತೆ ಕೆದಕಬೇಡ..

 

ಒಮ್ಮೊಮ್ಮೆ ಒಂಟಿಯಾಗಿ ಕೂತಾಗ ಮನಸ್ಸು ಹೇಳುತ್ತೆ… 

ನಿನ್ನ ನೋವು ಕೇಳುವವರು ಇಲ್ಲಿ ಯಾರು ಇಲ್ಲ ಎದ್ದು ನಡಿ ಎಂದು…

 

ಈ ಮನಸ್ಸು ಎಷ್ಟು ವಿಚಿತ್ರ ಅಲ್ವಾ… 

ಖುಷಿ ಪಡಿಸಿದವರಿಗಿಂತ ಒಮ್ಮೆ ನೋವು ಕೊಟ್ಟವರನ್ನೆ ಪದೇ ಪದೇ ನೆನಪಿಸಿಕೊಳ್ಳುತ್ತಾ . 

 

ನಿಯತ್ತಾಗಿ ಪ್ರೀತಿಸ್ಸೋ ಪ್ರತಿ ಮನಸ್ಸು, ಪ್ರತಿ ಹೃದಯ ಪ್ರತಿ ಕ್ಷಣ ಆ ವೇದನೆಯಿಂದ ನೋವು ಅನುಭವಿಸುತ್ತಾ ಇರುತ್ತೆ…. 

ಯಾಕೆ ಗೊತ್ತಾ,,,? ತಾನು ಇಷ್ಟಪಟ್ಟಿರೋ ಜೀವ ತನ್ನಿಂದ ಎಲ್ಲಿ ದೂರವಾಗಿ ಬಿಡುತ್ತೋ ಅನ್ನೋ ಸಣ್ಣ ಭಯದಿಂದ….

 

ನೋವು ಭಯ ಹತಾಶೆ ಚಿಂತೆ ಇವುಗಳೆಲ್ಲ ಒಂದು ಕ್ಷಣದಲ್ಲಷ್ಟೇ ಕಾಡುತ್ತದೆ ಆ ಕ್ಷಣವನ್ನು ಹೇಗೋ ಮಾಡಿ ಧಾಟಿ ಬಿಡಬೇಕು.. 

ನಂತರದ ಕ್ಷಣ ಬೇರೆಯೇ ಆಗಿರುತ್ತದೆ ಹಿಂದಿನ ಭಾವನೆ ಬದಲಾವಣೆ ಆಗಿರುತ್ತದೆ ಭಾವನೆ ಬದಲಾದಾಗ ಮನಸ್ಸು ಬದಲಾಗುತ್ತದೆ ಮನಸ್ಸು ಬದಲಾದರೆ ಬದುಕು ಬದಲಾಗುತ್ತದೆ…!! 

 

ನೋವು ಒಂದು ದಿನದ್ದು ಆದ್ರೆ ಕಣ್ಣಲ್ಲಿ ನೀರು ಬರುತ್ತೆ… 

ಎರಡು ದಿನದ್ದು ಆದ್ರೆ… ಕಣ್ಣೀರು ಬತ್ತಿಹೋಗಿ ಮನಸ್ಸು ಕೊರಗುತ್ತೆ… 

ನೋವೇ ಜೀವನ ಆದ್ರೆ ಅಭ್ಯಾಸವಾಗಿಬಿಡುತ್ತೆ… 

ಮುಖದ ಮೇಲೆ ಎಲ್ಲವನ್ನೂ ಮರೆಮಾಚುವ ಅಸ್ವಾಭಾವಿಕವಾದ ನಗು ಮೂಡುತ್ತದೆ..

 

ಒಂದು ಹೆಣ್ಣಿನ ಮನಸ್ಸು ಪುಸ್ತಕದ ಹಾಗೆ ಒಂದು ಪುಟ ಓದಿದರೆ ಅರ್ಥ ಆಗಲ್ಲ, ಎಲ್ಲಾ ಪುಟನು ಒದ್ಬೇಕು. 

ಆವಾಗ್ಲೇ ಗೊತ್ತಾಗೋದು ಅವಳ ಮನಸಿನ ಭಾವನೆಗಳ ಲೋಕ, ಒಳ್ಳೆತನ, ಕೆಟ್ಟತನ, ನೋವು, ಖುಷಿ, ದುಃಖ ಎಲ್ಲಾ ತಿಳಿಯೋದು

 

ಆಸೆ ನಮ್ಮದಾದರೆ ಆಯಸ್ಸು ದೇವರದ್ದು. 

ಕೊಟ್ಟಾಗ ಸ್ವೀಕರಿಸಬೇಕು ಕಿತ್ತು ಕೊಂಡಾಗ ಯಾರಿಗೂ ಹೇಳದೆ ಹೋಗಬೇಕು ಇಷ್ಟೇ ಜೀವನ. 

 

ಮನಸ್ಸು ದುರ್ಬಲವಾಗಿರುವಾಗ ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತವೆ. ಮನಸ್ಸು ಸಮತೋಲನದಲ್ಲಿದ್ದಾಗ ಸನ್ನಿವೇಶಗಳು ಸವಾಲುಗಳಾಗುತ್ತವೆ.

 

ನಮ್ಮವರು ಅನ್ನೊಂಡು ಹೋದಷ್ಟು ನೋವು ಜಾಸ್ತಿ ನಂಪಾಡಿಗೆ ನಾವು ಇದ್ದಷ್ಟು ನೆಮ್ಮದಿ ಜಾಸ್ತಿ.

 

ಮನಸ್ಸು ಹೇಳಿತು.., ಎಷ್ಟೇ ನೋವಿದ್ದರೂ ನಗುತ್ತಿರು ನೀನು, ನೋವಿಸಿದರು ಕೂಡ ..! ನಿನು ನಗುವುದ ನೋಡಿ.., ತಲೆ ತಗ್ಗಿಸುವಂತೆ ….! ಏಕೆಂದರೆ ..! ನೋವು ಹೊಸದೇನಲ್ಲ, ನಿನ್ನ ನಗುವು ನೋವಿಗಿಂತ , ಕನಿಷ್ಠವಲ್ಲ..!

 

ಪ್ರೀತಿ ನೀಡುವುದು ತಪ್ಪಲ್ಲ… ನೀಡಿದ ಪ್ರೀತಿನ ಮರಳಿ ನಿರೀಕ್ಷಿಸುವುದು ತಪ್ಪು…!! ಒಮ್ಮೊಮ್ಮೆ ಒಂಟಿಯಾಗಿ ಕೂತಾಗ ಮನಸ್ಸು ಹೇಳುತ್ತದೆ ನಿನ್ನ ನೋವು ಕೇಳುವವರು ಇಲ್ಲಿ ಯಾರು ಇಲ್ಲ ಎದ್ದು ನಡಿ ಎಂದು.ಹೇಳುತ್ತಾರೆ.

 

ಕಣ್ಣು ನಿದ್ರೆಗಾಗಿ ಕಾದರೆ ನಿದ್ರೆ ನಮ್ಮನ್ನ ಅಳಿಸುವುದಕ್ಕಾಗಿ ಕಾದಿತ್ತಂತೆ… ನೋವು ನೆಮ್ಮದಿಯನ್ನು ಹಾಳು ಮಾಡಿದರೆ.. ಮನಸ್ಸು ನೀನು ಮಣ್ಣು ಸೇರಬಾರದೆ ಎಂದು ಬಯಸಿತ್ತಂತೆ…..

 

ದೇಹವನ್ನು ಎಷ್ಟು ಶೃಂಗರಿಸಿದರೇನು ಒಳ ಮನಸ್ಸು ಸತ್ತು ಹೆಣವಾಗಿರುವಾಗ.. ಕಣ್ಣು ಹೂವಂತೆ ಹರಲಿದರೇನು ಕನಸು ಸುಟ್ಟು ಭೂದಿಯಾದಾಗ.. ತುಟಿಯಲ್ಲಿ ನಗು ಚಿಮ್ಮುತ್ತಿದ್ದರೇನು ಅಂತರಾಳದಲ್ಲಿ ನೋವು ಬೇಯುತಿರುವಾಗ.. ಹೆಜ್ಜೆ ಮುನ್ನಡೆಯುತ್ತಿದೆ ಅಷ್ಟೇ ಭವನೆಗಳೆಲ್ಲ ಎಂದೋ ನಸುನೀಗಿವೆ… 

 

ಯಾರಲ್ಲಿ ಹೇಳಿಕೊಳ್ಳಲಾಗದ ನೋವನ್ನು ಅವಳಲ್ಲಿ ಹೇಳಿಕೊಂಡೆ ಮನಸ್ಸು ಹಗುರಾಯಿತು. ಆದರೆ ಅವಳು ಕೊಟ್ಟ ಹೋದ ನೋವು ಹೇಳಿಕೊಳ್ಳಲು ಯಾರು ಇಲ್ಲದೇ ಮತ್ತೆ ಮನಸ್ಸು ಕಲ್ಲಾಯಿತು.

Emotional Quotes On Husband Wife Relationship in Kannada

ಮನಸ್ಸು ಕೇಳೋ ಪ್ರಶ್ನೆಗೆ ಉತ್ತರವಿಲ್ಲ, 

ಕಣ್ಣು ಸುರಿಸೋ ಕಣ್ಣೀರಿಗೆ ತಡೆಯಿಲ್ಲ, 

ನೀನು ಬಂದು ಸಾಂತ್ವನ ಹೇಳದ ಹೃದಯಕ್ಕೆ ನೋವು ತಪ್ಪಿದ್ದಲ್ಲ.

 

ತಪ್ಪು ನನ್ನದಲ್ಲ ಗೆಳತಿ ನಿನ್ನ ಮೇಲಿನ ಅತಿಯಾದ ಮೋಹ 

ಎಲ್ಲಿ ನೀನು ಸಿಗದೇ ಹೋಗುವೆ ಅನ್ನುವ ಭಾವ 

ಅದಕ್ಕೊಸ್ಕರನೆ ಕಾಡಿಸಿದೆ ಪೀಡಿಸಿದೆ ಸತಾಯಿಸಿದೆ 

ನಿನ್ನ ನೋವು ನನಗೆ ಕಾಣಿಸಲಿಲ್ಲ. 

ನಿನ್ನ ಪಡೆಯಬೇಕೆಂಬ ಹಟದಲಿ ನನ್ನತನವ ಮರೆತು ಬಿಟ್ಟಿದ್ದೆ. 

ಹಟ ಮುಗಿದು ಸಿಟ್ಟು ತಣಿದು ಅರಿವಾದಗ ನಿನ್ನ ಹೃದಯದಲಿ ನಾನು ಒರಟನಾಗಿರುವೆ. 

ಅದೆಷ್ಟು ದೂರ ನಿನ್ನ ಮನಸ್ಸು ನನ್ನ ಬಿಟ್ಟು ಹೊರಟಿರಬಹುದೇನೋ ಮತ್ತೆ ಮಮತೆಯಲಿ ಇಲ್ಲಿಗೆ ತಂದು ನಿಲ್ಲಿಸಿದ್ದು ಅದೇ ಪ್ರೀತಿಯಲ್ಲವೇ.

 

ನೋವು ತುಂಬಿರೋ ಹೃದಯ ಕನಸ್ಸು ತುಂಬಿರೋ ಮನಸ್ಸು ಇವೆರಡು ಭಾಡಿದ ಹೂವು

 

ನೋವು ಯಾವಾಗಲೂ ಕಣ್ಣೀರಿನಿಂದಲೇ ಗೊತ್ತಾಗುವುದಿಲ್ಲ. 

ಕೆಲವೊಮ್ಮೆ ನಗುವಿನಲ್ಲೂ ನೋವಿರುತ್ತದೆ, ಮನಸ್ಸು ಇರುವವರು ಮಾತ್ರ ಗುರುತಿಸಬಲ್ಲರು

 

ಒಂಟಿತನ ಯಾವತ್ತಿಗೂ ನೋವಲ್ಲ ಗೆಳತಿ, 

ಒಂಟಿತನ ಮರೆಸುವ ಮನಸ್ಸು ದೂರಾದಾಗ ನೋವು ಅತೀ ಕ್ರೂರ.

 

ಪ್ರೀತಿ ಹೋದರೇ…. ಅವನಿಗಿಂತಾ ಚೆನ್ನಾಗಿ ಪ್ರೀತಿ ಮಾಡೋನು ಸಿಗಬಹುದು, ಆದರೇ ನೀನೇ ಹೋದರೇ…….? ನಿನ್ನೇ ಪ್ರೀತಿಸುವ ನಿನ್ನ ಕುಟುಂಬದ ಪ್ರೀತಿ ಕಳೆದುಕೊಳ್ಳುವೆ. ನೋವು ಮರೆಸುವ ಇನ್ನೊಂದು ಮನಸ್ಸು ಸಿಗುವುದು, ನಿನ್ನ ಹತ್ತಿರದವರೇ ನಿನ್ನ ಮರೆಯೋ ಅವಕಾಶ ಮಾಡಿಕೊಡದಿರು.

 

ಇಡೀ ಜಗತ್ತೇ ಬದಲಾದರು ನಾನ್ ಕೇರ್ ಮಾಡೋಲ್ಲ 

ಆದ್ರೆ ನಿನ್ನಲ್ಲಿ ಸ್ವಲ್ಪ ಬದಲಾವಣೆ ಅಂದ್ರು ಆ ಬದಲಾವಣೆ ಇಂದ ನಂಗೆ ನೋವು ಉಂಟಾಗುತ್ತೆ.

 

ನಿನ್ನ ಮೇಲೆ ಬೆಟ್ಟದಷ್ಟು ಭಾವಗಳಿವೆ 

ಆದರೆ ಜೊತೆಯಾಗಿ ಬಾಳುವ ಯೋಗವಿಲ್ಲ 

ಈಗಲೂ ಬೆರಳು ಚಡಪಡಿಸುತ್ತವೆ ಸಂದೇಶ ಕಳುಹಿಸಲು 

ಆದರೆ ಮನಸ್ಸು ಒಪ್ಪುವುದಿಲ್ಲ 

ನಿನ್ನಾ ಮುಂದಿನ ಜೀವನಕ್ಕೆ ನಾ ಮುಳ್ಳಗಾಬಾರದೆಂದು.. 

ನೆಲೆಯಿಲ್ಲದ ಈ ಜೀವನದಲ್ಲಿ ನೆನಪುಗಳು ಮಾತ್ರ ಶಾಶ್ವತ 

ಆದರೂ ಬರುವೆ ನಾ ನಿನ್ನಾ ಮದುವೆಗೆ 

ನೋಡಬೇಕು ಆ ಅದೃಷ್ಟವಂತೆ ಯಾರೆಂದು.

 

ಜೀವನದಲ್ಲಿ ನೆನಪುಗಳು ನೆನೆಪಗಿಯೇ ಉಳಿದುಕೊಂಡಾಗಲೇ ಮನಸ್ಸು ತುಂಬ ಬಾರ ಆಗೋದು 

 

ಪ್ರತಿ ಕೆಟ್ಟ ಕ್ಷಣವೂ ನೋವು ನೀಡುತ್ತದೆ 

ಪ್ರತಿ ನೋವು ಒಂದು ಪಾಠವನ್ನು ನೀಡುತ್ತದೆ 

ಪ್ರತಿ ಪಾಠವು ವ್ಯಕ್ತಿಯನ್ನು ಬದಲಾಯಿಸುತ್ತದೆ!

 

ನಗುತಿರು ಮನವೇ 

ನೋವು ಹೊಸದಲ್ಲ 

ಬದುಕು ಶಾಶ್ವತವಲ್ಲ …..

 

ಕಣ್ಣಿಗೆ ಸಾವಿರ ಅಂದವಾದ ಹುಡುಗಿಯರು ಕಂಡರೇನು? 

ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಒಂದು ಮುಗ್ದ ಮನಸ್ಸು ಇಲ್ಲದ ಮೇಲೆ.

 

ನಗುವ ಮನಸ್ಸು ನನ್ನದಲ್ಲ 

ನಗಿಸುವ ಹೃದಯ ನಿನ್ನದಲ್ಲ 

 

ಅತಿಯಾದ ನೋವು ಕೊಡೋರು ನನ್ನವರೇ ಆದಾಗ ಸಂತೋಷವನ್ನ ಯಾರಿಂದ ಬಯಸಲಿ….!! 

 

ಒಂದು ಸಲ ಕಾರಣ ಕೇಳೋಕೆ ತಾಳ್ಮೆ ಇರಬೇಕಿತ್ತು 

ಅದನ್ನ ಕೇಳಿ ನನ್ನ ದೂರ ಮಾಡಿದ್ರೆ ಎಷ್ಟೋ ಸಮಾಧಾನ ಸಿಗುತ್ತಿತ್ತು 

ಆದ್ರೆ ಸಾಯೋತನಕ ನೋವು ನಲ್ಲಿ ಇರೋತರ ಮಾಡಿ ಹೋದವಳು ನನ್ನವಳು.

 

ಒಳ್ಳೆಯ ಮನಸ್ಸುಗಳಿಗೆ ಎಲ್ಲದರಲ್ಲೂ ಒಳ್ಳೇದೇ ಕಾಣಿಸುತ್ತದೆ.. ಹಾಗೂ ಒಳ್ಳೆಯ ಮನಸ್ಸು ಬಹು ಬೇಗ ಕರಗುತ್ತದೆ. ಆದರೆ ಕೆಡುಕಿನ ಅನುಭವ ಹಾಗೂ ಮುಂದಿರೋ ಅಪಾಯ ಮರೆತು ಪದೇ ಪದೇ ಯಾಮಾರಬಾರದು ಅಷ್ಟೇ…!! 

 

ಜೀವನದಲ್ಲಿ ನಮ್ಮ ತಾತ್ಕಾಲಿಕ ಸುಖಕ್ಕಾಗಿ ನಮ್ಮ ಸುತ್ತಲಿನವರ ಸಿಹಿಯಾದ ನಗುವಿಗೆ ನೋವು ಮಾಡಬಾರದು. ಮನಸ್ಸಿನಲ್ಲಿ ಹಗೆತನದ ಬೇಗೆ ತುಂಬಿಕೊಂಡು ಹೊರಗಡೆ ಶ್ರೀಗಂಧದ ಹೊಗೆಬಿಟ್ಟರೆ ಸೂಕ್ಷ್ಮತೆಗೆ ತಿಳಿದೇ ತಿಳಿಯುತ್ತದೆ ಹಗೆತನ. ದುಷ್ಟತನ ಬಣ್ಣ ಬದಲಾಯಿಸೋ ಹೊತ್ತಿಗೆ ಭಗವಂತ ಸಮಯವನ್ನೇ ಬದಲಾಯಿಸಿ ಬಿಡ್ತಾನೆ. ದುಷ್ಟತನದ ಬಣ್ಣದ ಆಟ ಹೆಚ್ಚು ದಿನ ನಡಿಯಲ್ಲ ಒಳ್ಳೆತನದ ಮುಂದೆ ತಲೆಬಾಗಲೇ ಬೇಕು. ನಾವು ಒಳ್ಳೆಯದರ ಜೊತೆಗೂಡೋಣ… 

 

ಕೃಷ್ಣನ ಪ್ರೀತಿ ರಾಧೆ ಮೇಲೆ ಪವಿತ್ರವಾಗಿದ್ದರೂ ಅದರಲ್ಲಿ ಕಳಂಕ, ನೋವು ತಪ್ಪಲಿಲ್ಲ ಇನ್ನೂ ನಾವೆಲ್ಲಾ ಯಾವ ಲೆಕ್ಕ… 

 

ಮನಸ್ಸಿನ ಮೇಲಾದ ನೋವು ರೋಗಕ್ಕಿಂತ ದೊಡ್ಡದು. . 

 

ಇದ್ದು ಬಿಡು ಮನವೇ ಯಾರಿಗೂ ನೋವು ಬಯಸದೆ. 

ನೋವಿದ್ದರೂ ಯಾರಿಗೂ ತಿಳಿಸದದೇ…

 

ಎಲ್ಲಿ ನಿಯತ್ತಾಗಿ ಇರ್ತಿವೋ! ಅಲ್ಲೇ ತುಂಬಾ ನೋವು ಸಿಗೋದು

 

ಜೀವನದಲ್ಲಿ ನಿಮಗೆ ಅರ್ಥ ಮಾಡಿಸುವವರು ಸಿಗುತ್ತಾರೆಯೇ ಹೊರತು, ನಿಮ್ಮನ್ನು ಅರ್ಥ ಮಾಡಿಕೊಳ್ಳುವವರಲ್ಲ.

 

ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ಅತಿ ದೊಡ್ಡ ಮೋಸ ಎಂದರೆ ಭಾವನೆಗಳಿಗೆ ಸ್ಪಂದಿಸದ ವ್ಯಕ್ತಿಗಾಗಿ ನಮ್ಮ ಅಮೂಲ್ಯವಾದ ಸಮಯ ಮತ್ತು ಕಣ್ಣೀರನ್ನು ವ್ಯಕ್ತಪಡಿಸುವುದು.

 

ಅಗತ್ಯಕ್ಕಿಂತ ಹೆಚ್ಚಿನ ಪ್ರೀತಿ ಮತ್ತು ಸ್ನೇಹ ಯಾರಿಗೂ ತೋರಿಸಬೇಡಿ. ಅದೇ ನಮ್ಮನ್ನು ಕೆಳಮಟ್ಟಕ್ಕೆ ತರುವುದು.

 

ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮನ್ನು ಕೈ ಬಿಟ್ಟವರನ್ನು ಮತ್ತು ಆ ಪರಿಸ್ಥಿತಿಯಲ್ಲಿ ನಮ್ಮ ಕೈ ಹಿಡಿದವರನ್ನ ಯಾವತ್ತೂ ಮರೆಯಬಾರದು.

 

ಮನಸ್ಸು ಒಮ್ಮೆ ಕಲ್ಲಾದರೆ ಆ ಮನುಷ್ಯ ಮತ್ತೆ ಸಿಗಲಾರ.

 

ನಮ್ಮ ಮಾತೆ ಅರ್ಥಮಾಡಿಕೊಳ್ಳದವರು ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದುಕೊಳ್ಳುವುದೇ ದೊಡ್ಡ ಭ್ರಮೆ.

 

ಕೆಲವೊಮ್ಮೆ ಮನಸ್ಸು ಹೇಳುತ್ತದೆ. ಜನರು ನಿನ್ನೊಂದಿಗೆ ಹೇಗೆ ವರ್ತಿಸುತ್ತಾರೋ ನೀನು ಹಾಗೆ ವರ್ತಿಸು ಎಂದು. ಆದರೆ, ಹೃದಯ ಹೇಳುತ್ತೆ, ಹಾಗೇ ವರ್ತಿಸಿದರೆ ನಿನಗೂ ಅವರಿಗೂ ನಿನಗೂ ಏನು ವ್ಯತ್ಯಾಸ ಎಂದು.

ಇದನ್ನೂ ಓದಿ: 

Emotional Quotes in Kannada Images

ಭಾವನೆಗಳನ್ನು ಹಂಚಿಕೊಳ್ಳುವುದು ನಮ್ಮ ಜೀವನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಮಾಡುತ್ತದೆ. ಈ ಕನ್ನಡದ ಭಾವನಾತ್ಮಕ ಉಲ್ಲೇಖಗಳ ಸಂಕಲನವು (emotional quotes in kannada collection) ನಿಮ್ಮ ಹೃದಯದ ಮಾತುಗಳನ್ನು ವ್ಯಕ್ತಪಡಿಸಲು ಸಹಾಯಕವಾಗುತ್ತದೆ ಎಂಬುದು ನಮ್ಮ ನಿರೀಕ್ಷೆ. 

ನಿಮಗೆ ಈ ಸಂಗ್ರಹ ಇಷ್ಟವಾಗುತ್ತದೆ ಎಂದು ನಮಗೆ ಭರವಸೆಯಿದೆ. ನಿಮ್ಮ ಅನಿಸಿಕೆಗಳು ಮತ್ತು ಉಲ್ಲೇಖಗಳಿಂದ ಸ್ಪೂರ್ತಿಗೊಳ್ಳುವ ನಿಮ್ಮ ಗೆಳೆಯರೊಂದಿಗೆ ಅವುಗಳನ್ನು ಹಂಚಿಕೊಳ್ಳುವುದು ಮರೆಯದಿರಿ. ನಿಮ್ಮ ಹೃದಯದ ಮಾತುಗಳನ್ನು (emotional love quotes in kannada) ವ್ಯಕ್ತಪಡಿಸಲು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಸಹಾಯಕವಾಯಿತು ಎಂಬುದು ನಮ್ಮ ನಿರೀಕ್ಷೆ.

ನಮ್ಮ ಬ್ಲಾಗ್‌ನಲ್ಲಿ ಮತ್ತಷ್ಟು ಉತ್ಸಾಹಭರಿತ ಮತ್ತು ಹೃದಯಸ್ಪರ್ಶಿ ವಿಷಯಗಳಿಗಾಗಿ ಇನ್ನಷ್ಟು ಬರಹಗಳನ್ನು ಓದಿರಿ. ನಮ್ಮ ಬ್ಲಾಗ್‌ಗೆ ಭೇಟಿಯನ್ನು ಮುಂದುವರಿಸಿ, ನಿಮ್ಮ ಬೆಂಬಲದಿಂದಲೇ ನಾವು ಇನ್ನಷ್ಟು ಕನ್ನಡದಲ್ಲಿನ quotesಗಳ ಸಂಗ್ರಹವನ್ನು ನಿಮಗಾಗಿ ತರುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.