100+ Love Failure Quotes in Kannada

ಪ್ರೀತಿ ಎಂಬ ಸುಂದರ ಭಾವನೆ ಪ್ರತಿಯೊಬ್ಬರ ಜೀವನದಲ್ಲೂ ಸಂತೋಷದಿಂದ ಕೊನೆಗೊಳ್ಳುವುದಿಲ್ಲ. ಕೆಲವೊಮ್ಮೆ ಪ್ರೀತಿಯು ನೋವು ಮತ್ತು ಕಷ್ಟವನ್ನು ತರುತ್ತದೆ. ಇಷ್ಟಪಟ್ಟ ಸಂಬಂಧವು ಕೈಗೂಡದಿದ್ದರೆ ಅದು ವಿವರಿಸಲೂ ಆಗದ ನೋವನ್ನು ಜೀವನದಲ್ಲಿ ತರುತ್ತದೆ.

ಪ್ರೇಮ ವೈಫಲ್ಯದ ಕ್ಷಣಗಳಲ್ಲಿ ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಂದೇಶಗಳನ್ನು ಹುಡುಕುತ್ತಾರೆ. ಅಂತಹ ಸಮಯದಲ್ಲಿ ಪ್ರೇಮ ವೈಫಲ್ಯದ ಉಲ್ಲೇಖಗಳು (love failure quotes in kannada) ಸಹಾಯ ಮಾಡಬಹುದು.

ಈ ಪ್ರೇಮ ವೈಫಲ್ಯದ ಉಲ್ಲೇಖಗಳ ಈ ಸಂಗ್ರಹವು (heart touching love failure quotes in kannada) ನಿಮ್ಮ ಪ್ರೀತಿ ವೈಫಲ್ಯದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆ ನೋವನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

Love Failure Quotes in Kannada

Best Love Failure Quotes in Kannada

ಮೂರು ನಿಮಿಷದಲ್ಲೀ ಮೂರು ಗಂಟು ಹಾಕಿದ ಅವನು ಯಜಮಾನನಾದರೆ ವರ್ಷಾನುಗಟ್ಟಲೆ ಎದೆಯಲ್ಲಿ ಪ್ರೀತಿ ಮಾಡಿದ ನಾನು ಯಾರು…

 

ಈಗಿನ ಕಾಲದ ಪ್ರೀತಿ ಹೇಗೆ ಅಂದರೆ? ಜೊತೇಲಿ ಇದ್ದಾಗ ನೀನೂ ಚೆನ್ನಾಗಿ ಇರಬೇಕು …. ನಿನ್ನದು ಹಾಲಿನಂತಹ ಮನಸ್ಸು… Breakup ಆದ ಮೇಲೆ ಹಾಳಾಗಿ ಸತ್ತೊಗೂ…. ನೀನು ಹಾಗೆ ಹೀಗೆ ನಿನ್ನದು ಕೊಳೆತ ಹೃದಯ….

 

ಕೆಲವೊಂದನ್ನ ಪಡೆದುಕೊಳ್ಳಲು ಯೋಗ್ಯತೆ ಗಳಿಸಬೇಕಾಗುತ್ತದೆ. ಇಲ್ಲವಾದರೆ ಮನಸ್ಸಲ್ಲಿ ಪ್ರೀತಿ ಇಟ್ಟುಕೊಂಡು ಸುಮ್ಮನಿರಬೇಕಷ್ಟೆ.

 

ನಾನು ಭಾವಿಸಿದ್ದೆ ಪ್ರೀತಿ ಒಂದು ಪವಿತ್ರ ಬಂಧನ ಅಂತ.. ಆದ್ರೆ ಅದು ಒಂದು ಭ್ರಮೆ ಅಂತಾ ಅನುಭವ ಆದ ಮೇಲೆ ತಿಳೀತು… 

 

ನಾವು ನಮ್ಮ ಜೀವನದಲ್ಲಿ ಬಯಸೊ ಪ್ರೀತಿ ಅನ್ನೋ ಒಂದೇ ಒಂದು ಖುಷಿ ಸಾವಿರಾರು ನೋವುಗಳಿಗೆ ಕಾರಣ ಆಗುತ್ತೆ.

 

ಯಾರಿಗೂ ಸಹ ಗೊತ್ತಿರುವುದಿಲ್ಲ ಸಿಗಲಾರದ ಪ್ರೀತಿಯನ್ನು ಹುಡುಕುತ್ತಿವಿ ಆದರೆ ಸಿಗುವ ಪ್ರೀತಿಯನ್ನು ದೂರ ಮಾಡುತ್ತೆವೆ ಪ್ರೀತಿ ಎಂದರೆ ಪರಸ್ಪರ ಒಬ್ಬರೊನ್ನು ಒಬ್ಬರು ಅರ್ಥ ಮಾಡಿಕೊಂಡು ಜೊತೆಯಲ್ಲಿ ಇರಬೇಕು ಸುಮ್ಮನೇ ತಮ್ಮ ಸುಖಕೊಸ್ಕರ ಪ್ರೀತಿ ಎಂಬ ನಾಟಕ ಮಾಡಿ ಸ್ವಾರ್ಥಿ ಯಾಗಬಾರದು ನಾನು ಹೇಳುವುದು ಇಷ್ಟೇ ನಾವು ಪ್ರೀತಿಸುವುದು ಮುಖ್ಯ ಅಲ್ಲ ನಮ್ಮನ್ನು ಎಷ್ಟು ಇಷ್ಟ ಪಡುತ್ತಾರೆ ಅನ್ನುವುದು ಮುಖ್ಯ

 

ಪ್ರೀತಿಸೋ ಪ್ರತಿಯೊಂದು ಹೃದಯವು ತಾನು ಮೆಚ್ಚಿದ ಹೃದಯದ ಜೊತೆ ಇರಬೇಕೆಂದು ಬಯಸುತ್ತದೆ ಆದರೆ ಒಟ್ಟಾಗಿ ಜೀವಿಸಲು ಸಾಧ್ಯವಿಲ್ಲ ಅಂತ ಗೊತ್ತಿದ್ರೂ ಮನಸಾರೆ ಪ್ರೀತಿಸುತಾರಲ್ಲಾ ಅದೇ ನಿಷ್ಮಲವಾದ ಪ್ರೀತಿ

 

ಎಂದಿಗೂ ಸಿಗದ ಪ್ರೀತಿ ನಿನ್ನದು, ಆದರೂ ನಿನ್ನನೇ ಪ್ರೀತಿಸುವ ಹೃದಯ ನನ್ನದು…. . . . 

 

ಪ್ರೀತಿ ಎರಡಕ್ಷರದ ಪದವಲ್ಲ ಪದಗಳಿಗೆ ಸಿಲುಕದ ಭಾವವದು,,, ಜೀವನದಲ್ಲಿ ದಾರಿ ತಪ್ಪಿದಾಗ ಬೆಳಕು ನೀಡುವ ಸ್ಫೂರ್ತಿ ಅದು,,,, ಭಾರ ತುಂಬಿದ ಹೃದಯದಿಂದ ಕಣ್ಣಲ್ಲಿ ನೀರು ಬಂದಾಗ ಒರೆಸುವ ಕೈ ಅದು,,, ಜೀವನದ ಹೋರಾಟ ಸಾಕಾಗಿ ಜೀವವೇ ಬೇಡ ಎಂದು ಹೇಳುವಾಗ,,,, ನೀನೇ ನನ್ನ ಜೀವ ಎಂದು ಹೇಳುವ ಆತ್ಮ ಅದು…. 

 

ಪ್ರೀತಿಯನ್ನು ಎಂದೂ ಮರೆಯಲಾಗುವುದಿಲ್ಲ ಮರೆಯವಂತಿದ್ದರೆ ಅದು ಪ್ರೀತಿ ಆಗಿರಲು ಸಾಧ್ಯವಿಲ್ಲ ಮರೆತಿದ್ದರೆ ಅದು ಪ್ರೀತಿಯೇ ಅಲ್ಲ..

 

ಬಡಪಾಯಿ ಹೃದಯ ಇದು ಮೋಸ ಎಂಬ ಕೊಳೆ ಗೊತ್ತಿಲ್ಲ ನಂಬಿಕೆ ಎಂಬ ಹೊಳೆ ಬತ್ತಿಲ್ಲ ನಿಷ್ಕಲ್ಮಶ ಪ್ರೀತಿ ಇದು ಯಾವ ಸ್ವಾರ್ಥ ವು ನನ್ನಲ್ಲಿಲ್ಲ ಎಲ್ಲವೂ ನಿನ್ನದೇ ಅಂದುಕೊಂಡ ನಾನು ನಿಂಗೆ ಕೆಟ್ಟದನ್ನು ಎಂದು ಬಯಸಿಲ್ಲ ಅರ್ಥ ಮಾಡಿಕೊ ಮನದರಸಿ…

 

ಭ್ರಮೆಯಲ್ಲಿರುವ ಪ್ರೀತಿ ಮಸಣವನ್ನು ಸೇರಿತು 

ಕಳೆದುಕೊಂಡೆ ಎನ್ನುವಷ್ಟರಲ್ಲಿ ಕಾಣದೇ ಕಣ್ಮರೆಯಾಯಿತು…

 

ಕಲಿಯಾಗಿರುವ ಹೃದಯದಲ್ಲಿ ನಿನ್ನ ನೆನಪುಗಳನ್ನು ಬರೆದಿರುವೇನು, ನಿನ್ನು ಬಿಟ್ಟು ಹೋದರು ನಿನ್ನ ನೆನಪುಗಳು ಹಾಗೇ ಉಳಿದಿರುವುದು, ಪ್ರೀತಿ ಯೆಂಬ ಸಾಲದಲ್ಲಿ ಬಡ್ಡಿಯೇ ಪಾವತಿಯಾಗುತ್ತಿದೆ ಹೊರತು, ಅಸಲು ಪಾವತಿಸಲು ನಿನ್ನೇ ಬೇಕು ಎನ್ನುತ್ತಿದೆ ನನ್ನ ಮನಸ್ಸು…

 

ಬದುಕಲ್ಲಿ ಎಲ್ಲದಕ್ಕೂ ಆಯ್ಕೆ ಸಿಗುತ್ತದೆ , ಆದರೆ ಸಾವಿಗಿಲ್ಲ…. ಪ್ರೀತಿ , ದ್ವೇಷಕ್ಕೂ ಆಯ್ಕೆಗಳಿವೆ, ಆದರೆ ನೋವಿಗಿಲ್ಲ… ಸಾವು ನೋವು ನಾವು ನೀವು ಇರುವವರೆಗೂ ಬರುವುದೆಂದಾರೆ , ಪ್ರೀತಿಯಿಂದ ಬದುಕುವ ಆಯ್ಕೆ ಮಾಡುವುದುತ್ತಮ….

 

ಪ್ರೀತಿ ಒಲಿದರೆ ಹೂವಂತೆ ಮುನಿದ ಮರುಕ್ಷಣ ಸಾವಂತೆ

 

ನೀನು” ನನ್ನವಳಲ್ಲ” ಅಂತ ಅಂತರಾತ್ಮಕ್ಕೆ ಅರಿವಾಗಿದ್ದರು… ಅಂತರಂಗದಲ್ಲಿ ನಿನ್ನನ್ನು ಆರಾಧಿಸುವುದರಲ್ಲಿ ಅದೇನು ಆನಂದವಿದೆ…. ಇದ್ದಷ್ಟು ದಿನ ನಿನ್ನ ಮೇಲಿನ ನನ್ನ ಪ್ರೀತಿ ದೇವರ ಪೂಜೆಯಷ್ಟೇ ಪವಿತ್ರವಾಗಿರಲಿ ಅಷ್ಟೇ ಸಾಕು ಈ ಬದುಕಿಗೆ…

 

ಓ ಒಲವೇ ನೀನೆಷ್ಟು ದೂರವಾದರೂ ಇನ್ನೊಮ್ಮೆ ಹತ್ತಿರವಾಗುವೆ ಅನ್ನೋ ನಂಬಿಕೆಯೇ ಪ್ರೀತಿ ನಿನಗಾಗಿ ಕಾಯುವೆ.

 

ಪ್ರೀತಿ ಏಷ್ಟೊಂದು ವಿಚಿತ್ರ ಅಲ್ವಾ…! ಈ ಹಿಂದೆ ಅತಿಯಾಗಿ ಪ್ರೀತಿಸಿದವರನ್ನೇ ಇಂದು ಅತಿಯಾಗಿ ದ್ವೇಷಿಸುವಂತೆ ಮಾಡುತ್ತದೆ ಒಂದು ಸಮಯದಲ್ಲಿ ದೇವರಂತೆ ಕಾಣುವ ಅವರು, ಇಂದು ಜಗತ್ತಿನ ಅತ್ಯಂತ ಕೆಟ್ಟ ವ್ಯಕ್ತಿಗಳಾಗಿ ಕಾಣುತ್ತಾರೆ. ಕೇವಲ ಅವರು ನಿಮಗೆ ದಕ್ಕಲಿಲ್ಲವೆಂದು ನಿಮ್ಮೆಲ್ಲಾ ಭಾವನೆಗಳು ಬದಲಾದಾರೆ ಅದು ಪ್ರೀತಿಯೇ ಅಲ್ಲ..!

 

ದೇವರ ಭಕ್ತರ ನಡುವಿನ ಭಕ್ತಿಯೇ ಪ್ರೀತಿ ತಂದೆ ತಾಯಿ ಮಕ್ಕಳ ನಡುವಿನ ಮಮತೆಯೇ ಪ್ರೀತಿ ಇನ್ನುಳಿದ ಸಂಬಂಧಗಳೆಲ್ಲವೂ ಕ್ಷಣಿಕ ಕ್ಷುಲ್ಲಕದ ರೀತಿ ……….. 

 

ಇತಿಹಾಸ ಹೇಳುತ್ತೆ ಮೊದಲ ಪ್ರೀತಿ ಯಾವತ್ತು ಯಶಸ್ಸು ಆಗಲ್ಲ ಅಂತ ಆದರೆ ಮೊದಲ ಪ್ರೀತಿಗೇ ಕಾಯುತ್ತಾ ಕುಳಿತಿರುವೆ ನಾ!!

 

ದ್ವೇಷ ಕೊಟ್ಟ ನೋವಿಗಿಂತ ಪ್ರೀತಿ ಕೊಡುವ ನೋವು ಮಣಭಾರ. 

 

ಬಚ್ಚಿಡುವ ಪ್ರೀತಿ ಹೃದಯಕ್ಕೆ ಸ್ವಂತ ಬರೆದಿಡುವ ಪ್ರೀತಿ ಕಾಗದಕ್ಕೆ ಸ್ವಂತ ಕಾಡುವ ಪ್ರೀತಿ ನೋವಿಗೆ ಸ್ವಂತ ಕಾಯುವ ಪ್ರೀತಿ ಜೀವಕ್ಕೆ ಸ್ವಂತ..

 

ಒಬ್ಬರನ್ನು ಪಡೆದುಕೊಳ್ಳಬೇಕು ಅನ್ನೋದು ಪ್ರೀತಿ ಅಲ್ಲ ಅವರು ಎಷ್ಟೇ ದೂರ ಇದ್ದರೂ ಪ್ರತಿ ಕ್ಷಣ ಅವರ ನೆನಪಿನಲ್ಲಿ ಇರುವುದೇ ನಿಜವಾದ ಪ್ರೀತಿ….!! ಸಮಯ ಸಂದರ್ಭ ಹೇಗೆ ಇರಲಿ ಕೆಲವು ವ್ಯಕ್ತಿಗಳು ಜೊತೆಯಲ್ಲಿ ಇದ್ದರೆ ಎಲ್ಲವೂ ಸುಂದರ…..

 

ಪ್ರೀತಿ ಮಾಡೋದು ದೊಡ್ಡದಲ್ಲ ಕೊನೆವರೆಗೂ ಆ ಪ್ರೀತಿನಾ ಕಾಪಾಡ್ಕೋಬೇಕು 

 

ಕಲಿಯಾಗಿರುವ ಹೃದಯದಲ್ಲಿ ನಿನ್ನ ನೆನಪುಗಳನ್ನು ಬರೆದಿರುವೇನು, ನಿನ್ನು ಬಿಟ್ಟು ಹೋದರು ನಿನ್ನ ನೆನಪುಗಳು ಹಾಗೇ ಉಳಿದಿರುವುದು, ಪ್ರೀತಿ ಯೆಂಬ ಸಾಲದಲ್ಲಿ ಬಡ್ಡಿಯೇ ಪಾವತಿಯಾಗುತ್ತಿದೆ ಹೊರತು, ಅಸಲು ಪಾವತಿಸಲು ನಿನ್ನೇ ಬೇಕು ಎನ್ನುತ್ತಿದೆ ನನ್ನ ಮನಸ್ಸು…

 

ಪ್ರೀತಿ ಎಂಬ ಹೂ ತರಲು ಹೋದ ಬಡ ಪ್ರೇಮಿ ನಾನು… 

ಬರಲು ತಡವಾದಾಗ ತೋಟದ ಮಾಲೀಕನಿಗೆ ಮನಸೋತ ಹುಡುಗಿ ನನ್ನವಳು……. 

 

ಒಮ್ಮೊಮ್ಮೆ ನಮ್ಮ ಅತಿಯಾದ ಪ್ರೀತಿ ಅಭಿಮಾನ ಕೂಡ ನಮ್ಮನ್ನು ಕೆಟ್ಟವರಾಗಿ ಮಾಡುವುದಲ್ಲದೆ ನಮ್ಮನ್ನು ಅವರಿಂದ ದೂರ ಇರಿಸುತ್ತದೆ

 

ಪ್ರೀತಿಗಾಗಿ ಒತ್ತಾಯ ಯಾವುದೇ ಕಾರಣಕ್ಕೂ ಮಾಡಬೇಡಿ ಕಾರಣ ಇಷ್ಟೇ… ಒತ್ತಾಯ ಇರುವಲ್ಲಿ ಪ್ರೀತಿ ಇರುವುದಿಲ್ಲ ಪ್ರೀತಿ ಇರೋಕಡೆ ಒತ್ತಾಯ ಅಗತ್ಯ ವಿರೋದಿಲ್ಲ…

 

ಅವತ್ತು ಅವಳನ್ನು ಹೆಚ್ಚಾಗಿ ಪ್ರೀತಿ ಮಾಡಿದ್ದಕ್ಕೆ ಇವತ್ತು ಈ ರೀತಿ ಹುಚ್ಚುನ ತರ ಆಗಿರೋದು…

 

ವ್ಯಕ್ತಿ ಪ್ರೀತಿ ಕಡಿಮೆ ಆಗೀದೆ ವಸ್ತು ಹಣ ದ ಮೇಲಿನ ಪ್ರೀತಿ ಜಾಸ್ತಿ ಆಗಿದೆ

 

ನೀನು ನೆನಪು ಆಗಲೇ ಬಾರದು ಎಂದು ನಿರ್ಧರಿಸಿದೆ ಆದರೆ ನೆನಪು ಮಾಡಿಕೋ ಎಂದೇ ನೀ ತುಂಬಾ ಪ್ರೀತಿ ಕೊಟ್ಟಿರುವೆ.

 

ಪ್ರೀತಿ ಹುಟ್ಟಲು ಕ್ಷಣ ಸಾಕಂತೆ ಪ್ರೀತಿಸಿದವರು ಸಿಗಲು ಋಣ ಇರಬೇಕಂತೆ…! 

 

Heart Touching Love Failure Quotes in Kannada

ನನಗೆ ಪ್ರೀತಿನು ಜಾಸ್ತಿನೇ ಕೋಪನು ಜಾಸ್ತಿನೇ ನನ್ನ ಅರ್ಥಮಾಡಿಕೊಂಡವರಿಗೆ ನನ್ನೊಳಗಿನ ಪ್ರೀತಿ ಕಾಣಿಸುತ್ತೆ ಅರ್ಥ ಮಾಡಿಕೊಳ್ಳದವರಿಗೆ ನನ್ನೊಳಗಿನ ಕೋಪ ಕಾಣಿಸುತ್ತೆ

 

ತೊರೆದವಳ ಪ್ರೀತಿ ಸುಳ್ಳಾಗಿರಬಹುದು ಕೊರಗಿದವನ ಪ್ರೀತಿ ಸುಳ್ಳಾಗಿರುವುದಿಲ್ಲ. Dont play With love..

 

ದೇಹಕ್ಕೆ ಅದ ಗಾಯ ಮರಿಯಬಹುದು ಅದರೆ ಮಾನಸಿಗೆ ಅದ ಗಾಯ ಜೀವಾ ಇರೊವರೆಗು ಮರಿಯೊಕೆ ಆಗೋಲ್ಲ ಆದರೇ ನಾವು ಪ್ರೀತಿ ಮಾಡಿದ ವ್ಯಕ್ತಿ ನೇ ಗಾಯ ಮಾಡಿದರೆ ಇನ್ನು ಜೀವಂತ ಶವ ಆಗೋದೇ ಗ್ಯಾರಂಟಿ 

 

ಪ್ರೀತಿ ದೂರವಾದಾಗ ಆಗುವುದಕ್ಕಿಂತ ಹೆಚ್ಚು ನೋವು, ಪ್ರೀತಿಸಿದವರು ದೂರ ಆದಾಗ ಆಗುತ್ತದೆ!

 

ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ, ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು.

 

ಪ್ರೀತಿಯ ಮಾಧುರ್ಯವನ್ನು ತಿಳಿಯಲು ಪ್ರೇಮಿಗಳು ಪ್ರಾಮಾಣಿಕವಾಗಿರಬೇಕು. ಯಾಕೆಂದರೆ.. ಪ್ರಾಮಾಣಿಕರನ್ನು ಪ್ರೀತಿ ದೂರ ಮಾಡುವುದಿಲ್ಲ… !!

 

ಮನಸಲಿದ್ದರು ಹೇಳದ ಪ್ರೀತಿ ಹೀಗ್ಯಾಕೆ? ಕಣ್ಣಲಿದ್ದರು ಕಾಣದ ಪ್ರೀತಿ ಹೀಗ್ಯಾಕೆ? ಹೇಳಿದ ಈ ಪ್ರೀತಿ ಹೀಗ್ಯಾಕೆ? ದೂರ ಇದ್ದರು ಕಾಡುವ ಪ್ರೀತಿಯ ನೆನಪುಗಳು ಹೀಗ್ಯಾಕೆ?

 

ಬಯಸಿ ಬಂದ ಪ್ರೀತಿ ಸದಾ ನಮಗೆ ಖುಷಿ ಕೊಡುತ್ತೆ ಆದ್ರೆ ನಾವು ಬಯಸಿ ಹೋದ ಪ್ರೀತಿ ಸದಾ ನೋವು ಕೊಡುತ್ತೆ ಅದಕ್ಕೆ ಬಯಸಿ ಬಂದ ಪ್ರೀತಿನಾ ದೂರ ಮಾಡ್ಬೇಡಿ ಬಯಸಿ ಬಯಸಿ ಯಾರನ್ನೂ ಪ್ರೀತಿ ಮಾಡ್ಬೇಡಿ.

 

ಪ್ರೀತಿ ಅಂದ್ರೆ ಒಂದು ತಪ್ಪು ಹುಡುಕಿ ದೂರ ಆಗೋದಲ್ಲ….!!! ನೂರು ತಪ್ಪು ಇದ್ರು ಕ್ಷಮಿಸಿ ಜೊತೆಯಲ್ಲಿ ಇರುವುದು…..!!!

 

ಪ್ರೀತಿ……… 

ಮುಖ ನೋಡಿ ಹುಟ್ಟಿದ ಪ್ರೀತಿ ಸುಖ ಕೊಡಲ್ಲ. 

ಹಣ ನೋಡಿ ಹುಟ್ಟಿದ ಪ್ರೀತಿ ಗುಣ ಕೊಡಲ್ಲ. 

ಮನಸು ನೋಡಿ ಹುಟ್ಟಿದ ಪ್ರೀತಿ ಯಾವತ್ತು ಮನಸಿನಿಂದ ದೂರ ಹೋಗಲ್ಲ.

 

ಒಂಟಿತನವೆಂಬ ಬಿರುಬಿಸಿಲಿಗೆ ಬಾಡಿಹೋದ ನಿನ್ನ ಜೊತೆ ಕಳೆದ ಸವಿ ಕ್ಷಣಗಳು… ಗಂಟಲು ಕಟ್ಟಿ ಕರುಳ ಹಿಂಡಿ ಕಣ್ಣಂಚ ಒದ್ದೆಯಾಗಿಸೋ ಅದೇ ಹಳೇ ನೆನಪುಗಳು…..

 

ನನ್ನಿಂದ ನೀ ದೂರ ಆಗಿರಬಹುದು ಆದರೆ ನೀನು ಕೊಟ್ಟ ಆ ಪ್ರೀತಿ ನನ್ನ ಹೃದಯದಲ್ಲಿ ಅಳಿಸಲಾಗದ್ದು ಮುಂದಿನ ಜನ್ಮ ಅಂತ ಇದ್ರೆ ಅಲ್ಲಿ ಮತ್ತೆ ಒಂದಾಗೋಣ ನೀ ಎಲ್ಲೇ ಇರು ಹೇಗೆ ಇರು ಯಾವಾಗಲೂ ನಗುತಾ ಚೆನ್ನಾಗಿರು

 

ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ

 

ದೇವರು ಹೃದಯ ಕೊಟ್ಟ ಹೃದಯದಲ್ಲಿ ಪ್ರೀತಿ ಇಟ್ಟು, ಮನಸಾರೆ ಪ್ರೀತಿಸಿದವರನ್ನ ದೂರ ಇಟ್ಟಾ!

 

ಸಿಗದ ನಗುವನ್ನು ಹುಡುಕಲು ಹೋಗಿ ಇದ್ದ ನಗುವನ್ನೇ ಕಳೆದುಕೊಂಡೆ. ಅತಿಯಾದ ಪ್ರೀತಿ ಅತಿಯಾಗಿ ಪ್ರೀತಿಸಿದವರನ್ನೇ ದೂರ ಮಾಡಿ ಬಿಡುತ್ತೆ.

 

ಜೊತೇಲಿ ಇದ್ದೋರೆ ನಮಗೆ ಮೋಸ ಮಾಡೋದು ದೂರ ಇದ್ದೋರೆ ನಮಗೆ ಪ್ರೀತಿ ಕೊಡದು

 

ನಮ್ಮ ಪ್ರೀತಿ ಕಾಳಜಿಯನ್ನು ಕಿರಿ ಕಿರಿ ಅಂದುಕೊಳ್ಳುವವರಿಂದ ದೂರ ಇರುವುದೇ ಒಳ್ಳೆಯದು

 

ಎಲ್ಲರ ಪ್ರೀತಿ ನಿಜವಾಗಿರಲ್ಲ… ನಿಜವಾಗಿರೋ ಪ್ರೀತಿ ಎಂದಿಗೂ….. ದೂರ ಆಗಲ್ಲ

 

ಆ ಬಂಧನದಿಂದ ಈ ಬಂಧನದವರೆಗೂ ಮುಗಿಯದಿರಲಿ ಆ ಬಂಧನ.

 

ಅತಿಯಾದ “ಪ್ರೀತಿ”…..! ಅತಿಯಾದ “ಮಾತು”….! ಸಂಬಂಧಗಳನ್ನು ಬೇಗ ದೂರ ಮಾಡ್ಬಿಡುತ್ತದೆ…!!

 

ಕಲ್ಲಿನ ಹಾದಿಯಲ್ಲಿ ನಡೆದರೆ ಕಾಲುಗಳು ಸವೆದಿತ್ತು… ಹೊರತು ಕಲ್ಲಿನ ಹಾದಿ ಸವಿಯದು… ನೆನಪುಗಳ…ಹಾದಿಯಲ್ಲಿ…ಸಾಗಿದರೆ ಸಮಯ ಸವೆದಿತ್ತು… ಹೊರತು ನೆನಪುಗಳು ಸವೆಯದು…

 

ನಿನ್ನ ನೆನಪುಗಳ ಜೊತೆ ಕಾಯುವೆ ನಿನಗಾಗಿ ಪ್ರತಿಕ್ಷಣ ನೀನಿರದ ಘಳಿಗೆ…… ಆ ನೆನಪುಗಳೇ ನನ್ನ ಜೊತೆಗಾರ…..

 

ಕೊಲ್ಲುತ್ತಿರುವೆ ನೀ ನನ್ನನು., 

ಸಾವಿಂದ ದೂರ ಇಡುತ್ತಿರುವೆ ನನ್ನನು., 

ಇದೇ ಇರಬಹುದೇನೋ ಪ್ರೀತಿ.. 

 

ಕಾರಣ ಇಲ್ಲದೇನೆ ಕೆಲವರು ಇಷ್ಟ ಆಗ್ತಾರೆ 

ಕಾರಣ ಹೇಳದೇನೆ ಕೆಲವರು ದೂರ ಆಗ್ತಾರೆ 

ಪ್ರೀತಿ ಮಾಡೋದಕ್ಕೆ ಕಾರಣ ಇರಲ್ಲ 

ಬಿಟ್ಟು ಹೋಗೋದಕ್ಕೂ ಕಾರಣ ಇರಲ್ವಾ..

 

ಸಿಗಲಾರದ ಹುಡುಗಿ ನೀನು 

ಬಿಡಲಾರದ ಹುಡುಗ ನಾನು 

ಸಿಕ್ಕರು ಸಿಗಲಾರದಷ್ಟು ದೂರ ಹೋದ ಪವಿತ್ರವಾದ ಪ್ರೀತಿ ನೀನು….

 

ಎಷ್ಟೇ ನೋಯಿಸಿದರು ನೀನು ಪ್ರೀತಿಸುವೆ ನಿನ್ನನ್ನೇ ನಾನು ಹಿತವಿದ್ದ ಪ್ರೀತಿ ಮಿತಿಯಾಗಿಹುದು ಆದರೂ ಪ್ರೀತಿಸುವೆ ಮೀರದಂತೆ ಪರಿಧಿಯನು ನಗುವ ಕ್ಷಣಗಳು ತುಂಬಿದ್ದವು ಮನದಲ್ಲಿ ಮೌನವಾಗಿ ಹೋಗಿದೆ ಮಾತುಗಳು ಉತ್ತರವಿರದ ಪ್ರಶ್ನೆಯಲ್ಲಿ ಯಾವ ಮಾಯೆಗೆ ಸೋತಿತು ಮನವು ಅರಿಯದ0ತೆ ಈ ನಿಷ್ಮಲ್ಮಶ ಒಲವನ್ನು ನೀ ದೂರ ಸರಿದರು ಪ್ರೀತಿಸುವೆ ನಿನ್ನೆ ಎಂದೆ0ದು

 

ಪ್ರೀತಿಯ ಬಲೆಗೆ ಸಿಲುಕದಿರದಂತೆ ಕಾದಿರಿಸಿದ್ದ ಮನವ, 

ಬೆನ್ನ ಹಿಂದೆ ಬಿದ್ದು ಕಾಡಿಸಿ ಪೀಡಿಸಿ ಒಲಿಸಿಕೊಂಡು, 

ಪ್ರೀತಿ ಚಿಗುರಿದಾಗ ದೂರ ದೂಡುವುದು ಸರಿಯ?

 

ಅದೇನೋ ಗೊತ್ತಿಲ್ಲ ನಿನ್ನಿಂದ ನಾನು ಎಷ್ಟು ದೂರ ಹೋಗ್ಬೇಕು ಅನ್ಕೊಂಡಾಗೆಲ್ಲ ಮತ್ತೆ ಮತ್ತೆ ಹತ್ರಾ ಆಗ್ತಿದೀನಿ 

ನೀನ್ ಅನ್ಕೊಬೋದು ನನಗೆ ನಿನ್ನ ಬಿಟ್ಟು ಇರೋಕೆ ಆಗಲ್ಲ ಅಂತ 

ಕಾರಣ ಅದಲ್ಲ ನಾ ಕೊಟ್ಟ ಪ್ರೀತಿ ನನ್ನಿಂದ ನಿನ್ನ ದೂರ ಮಾಡಲು ಬಿಡ್ತಿಲ್ಲ ಅಷ್ಟೇ 

ಪ್ರೀತ್ಸೀದಿನಿ ಸಾಯೋವರೆಗೂ ನೀನೇ ಸಾಕು ಅನ್ನುವಷ್ಟು ಪ್ರೀತಿಸ್ತಾನೇ ಇರ್ತೀನಿ.

 

ದೂರ ತಳ್ಳಿದರೂ ಹತ್ತಿರ, ಹತ್ತಿರ ಸೆಳೆದರೂ ದೂರ. 

ಪ್ರೀತಿ ಇದ್ದಲ್ಲಿ ಕೋಪ ಜಾಸ್ತಿ, ಕೋಪದಿಂದ ದೂರ ಮಾಡುತ್ತೇವೆ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. 

ಅನವಶ್ಯಕತೆಗೆ ಹತ್ತಿರ ಇಟ್ಟುಕೊಳ್ಳುತ್ತೇವೆ, ಎಂದಿಗೂ ಹೃದಯಕ್ಕೆ ಹತ್ತಿರವಾಗುವುದಿಲ್ಲ.

 

ಯಾಕಿಷ್ಟು ಮುನಿಸು ಮನಸ್ಸಿಗೆ ಇಷ್ಟವಾದರ ಮೇಲೆ. 

ಮಾತು ಬಯಸುತ್ತಿದ್ದರೂ ಒಳಗೇನೊ ಒಣ ಜಂಭ. 

ದೂರ ಇರಲಾರದಿದ್ದರೂ ದೂರುಗಳಿಗೇನು ಕಡಿಮೆ ಇಲ್ಲ. 

ಆ ದೂರುಗಳಲ್ಲೂ ಅದೆಂತ ಕಾಳಜಿ. 

ನನ್ನಿಂದ ಯಾಕಿಷ್ಟು ದೂರವೆಂದು. 

ಪ್ರೀತಿ ಎಂದರೆ ಹೀಗೇ ಏನೊ ನನ್ನ ಕಡೆಗಣಿಸಿದನೆಂಬ ಭಯದಲ್ಲಿಯೆ ಚಡಪಡಿಸುವುದು. 

ನನಗಿಂತ ಇನ್ನೇನಿದೆ ಮುಖ್ಯ ಎಂಬ ಪಟ್ಟು ಹಿಡಿಯುವುದು.

ಯಾಕಿಷ್ಟು ಹಠಕ್ಕೆ ಬಿದ್ದೆ ಎಂದು ನಾವೇ ಕೊರಗುವುದು. 

ಪ್ರೀತಿ ಬರೀ ಖುಷಿಯಷ್ಟೆ ಅಲ್ಲ. ಸಣ್ಣ ಸಣ್ಣ ಕೋಪ. 

ಕೋಪಕ್ಕೂ ಮೀರಿದ ನಂಬಿಕೆ ರಾತ್ರಿಯ ಜಗಳ ಹಗಲಿನ ನಿರೀಕ್ಷೆ.

ಮತ್ತದೇ ನಿನ್ನೆಯ ಧ್ಯಾನವೇ ಪ್ರೇಮಾ.

 

ಅರಿಯದ ಪೆದ್ದತನವ ಕಡೆಗಣಿಸಿ ಬಿಡು… 

ತಪ್ಪು ಒಪ್ಪುಗಳ ಮನ್ನಿಸಿಬಿಡು… 

ಬೇಸರದ ಮೌನವ ತೊರೆದು ಬಿಡು… 

ಮೃಧುವಾಗಿ ಒಂದು ಮಾತಾಡಿಬಿಡು… 

ಮನದ ದುಗುಡ ದೂರ ಮಾಡಿಬಿಡು… 

ಕಣ್ಗಳಲ್ಲಿನ ಈ ಪ್ರೀತಿಯ ಅರಿತುನೋಡು… 

ಒಂಚೂರು ಪ್ರೀತಿ ನೀಡಿಬಿಡು…. 

ಕಾದಿದೆ ನಿನಗಾಗಿ ಮನವು.

 

ದೂರ ಇದ್ದಷ್ಟು ಪ್ರೀತಿ ಹೆಚ್ಚಾಗುವುದೋ ಇಲ್ಲವೋ ಆದರೆ ಅಂತರವ ನೆನೆದಾಗೆಲ್ಲಾ ಕಣ್ಣುಗಳು ತುಂಬಿಕೊಳ್ಳುತ್ತದೆ…

 

ಪ್ರೀತಿಸಿದವಳು ಪ್ರೀತಿ ಬಿಟ್ಟು ದೂರ ಹೋದಳು… 

ಸುಖ ಕೊಡುವುದೆಂದು ಬಯಸಿದುದೆಲ್ಲ ಬಿಟ್ಟು ಹೋಗಿದ್ದರಿಂದಲೇನೋ…

ಇಂದು ಏಕಾಂತವೇಕೋ ಇಷ್ಟವಾಗುತ್ತಿದೆ…

 

ಒಂದೇ ಒಂದು ನಿಮಿಷ ನಾ ದೂರ ಇರೆನು ಒಲವೇ

ಯಾಕಾದರೂ ಹೀಗೆ ನೀ ನನ್ನನು ಸೆಳೆವೆ 

ಏನೇ ಹೇಳು ಕೊಡುವೇ 

ನಿನ್ನ ಪ್ರೀತಿ ಮುಂದೇ ಪದವೇ 

ಏನಾದರೂ ಸರಿಯೇ 

ನಿನಗೆಂದಿಗೂ ನಾನಿರುವೇ 

ಜೊತೆಯಿರಲು ನಿನ್ನ ಮುಡುಪಾಗಿದೆ ನನ್ನ 

ಈ ಜೀವನವಿನ್ನೂ ನಿನಗಾಗಿಯೇ

ನಮ್ಮ ಪ್ರೇಮ ವೈಫಲ್ಯದ ಉಲ್ಲೇಖಗಳ ಸಂಗ್ರಹವನ್ನು (love failure quotes in kannada collection) ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ನಿಮಗೆ ಸಾಂತ್ವನ ನೀಡಲು ಮತ್ತು ಕಠಿಣ ಸಮಯಗಳು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ನಿಮಗೆ ನೆನಪಿಸುವುದೇ ಈ ಲೇಖನದ ಉದ್ದೇಶ.

ಈ ಉಲ್ಲೇಖಗಳಲ್ಲಿ ಯಾವುದಾದರೂ ನಿಮ್ಮ ಹೃದಯವನ್ನು ಸ್ಪರ್ಶಿಸಿದರೆ, ಅವುಗಳನ್ನು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ಓದಿದ್ದಕ್ಕಾಗಿ ಧನ್ಯವಾದಗಳು, ಮತ್ತು ಪ್ರೇಮವೈಫಲ್ಯದ ನೋವನ್ನು ಮರೆತು ಖುಷಿಯಾಗಿರಿ!

ಇದನ್ನೂ ಓದಿ: –

Love Failure Quotes in Kannada Images