100+ Heart Touching Love Quotes in Kannada | ಹೃದಯಸ್ಪರ್ಶಿ ಪ್ರೇಮ ಉಲ್ಲೇಖಗಳು

ಪ್ರೀತಿಯು ಹೃದಯಗಳನ್ನು ಸಂಪರ್ಕಿಸುವ ಮತ್ತು ಜೀವನವನ್ನು ಸುಂದರವಾಗಿಸುವ ವಿಶೇಷ ಭಾವನೆ. ಕೆಲವೊಮ್ಮೆ ಪದಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದು ಕಷ್ಟ. ಆದರೆ ಹೃದಯಸ್ಪರ್ಶಿ ಪ್ರೇಮ ಉಲ್ಲೇಖಗಳು (heart touching love quotes in kannada) ಈ ಆಳವಾದ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಸರಳ ಮತ್ತು ಚಿಂತನಶೀಲ ಪದಗಳು ಹೃದಯವನ್ನು ಸ್ಪರ್ಶಿಸುತ್ತವೆ ಮತ್ತು ಯಾರನ್ನಾದರೂ ವಿಶೇಷವಾಗಿ ಭಾವಿಸಬಹುದು.

ಈ ಉಲ್ಲೇಖಗಳನ್ನು ನೀವು ಕಾಳಜಿವಹಿಸುವ ಯಾರೊಂದಿಗೂ ಹಂಚಿಕೊಳ್ಳಬಹುದು. ಈ ಸರಳವಾದ ಉಲ್ಲೇಖವು ನಿಮ್ಮ ನೋವನ್ನು ಹೊರಹಾಕುತ್ತವೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಸುತ್ತಲಿನ ಜನರು ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆದ್ದರಿಂದ ಈ ಹೃದಯಸ್ಪರ್ಶಿ ಪ್ರೀತಿ ಉಲ್ಲೇಖಗಳ ಸಂಗ್ರಹಣೆಯನ್ನು (collection of heart touching sad love quotes in kannada) ಅನ್ವೇಷಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಭಾವನೆಗಳಿಗೆ ಹೊಂದಿಕೆಯಾಗುವ ಉಲ್ಲೇಖಗಳನ್ನು ಹುಡುಕಿ ಮತ್ತು ಅವುಗಳನ್ನು ವಿಶೇಷ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ.

Heart Touching Love Quotes in Kannada

Heart Touching Love Quotes in Kannada | ಹೃದಯಸ್ಪರ್ಶಿ ಪ್ರೇಮ ಉಲ್ಲೇಖಗಳು

ಪ್ರೀತಿ ದೂರವಾದಾಗ ಆಗುವುದಕ್ಕಿಂತ ಹೆಚ್ಚು ನೋವು, ಪ್ರೀತಿಸಿದವರು ದೂರ ಆದಾಗ ಆಗುತ್ತದೆ!

 

ಇಲ್ಲಿ ಎಲ್ಲರಲ್ಲೂ ಪ್ರೀತಿ ಹುಡುಕದಿರಿ ಪ್ರೀತಿಗೂ ವಿಷ ಬೆರೆಸುವವರಿದ್ದಾರೆ… ಅತಿಯಾಗಿ ನಂಬದಿರು ಒಲವ ಅವ ಈಗ ಮುಂಚಿನಂತಿಲ್ಲ ಬದಲಾಗಿದ್ದಾನೆ… ಬಯಸಿದ್ದೆ ಸಿಗಬೇಕಂದರೆ ಹೇಗೆ ಇಲ್ಲಿ ಕೊಟ್ಟದ್ದನ್ನೆ ಕೊಡುವವರಿಲ್ಲ ಪ್ರೀತಿ ಪಡೆದು ನೋವು ನೀಡುವವರಿದ್ದಾರೆ…

 

ಜೀವ ಹೋದ್ರೆ ಮಾತ್ರ ಸಾವಲ್ಲ… ನಾವು ಬಯಸಿದ ಸ್ನೇಹ ಪ್ರೀತಿ ನಮಗೆ ಸಿಗದೇ ಇದ್ದಾಗ ಅಗೋ ನೋವು ಇದ್ಯಲ್ವ ಅದೇ ನಿಜವಾದ ಸಾವು….

 

ಪ್ರೀತಿ ಅಂದ್ರೆ ಮೂಡ್ ಬಂದಾಗ ಮುತ್ತು ಕೊಟ್ಟು ಮೈ ಹಂಚ್ಕೋದಲ್ಲಾ ಕಣ್ರೋ. ಪ್ರೀತಿಸಿದವರನ್ನಾ ಕೊನೆವರೆಗೂ ಕೈ ಹಿಡಿದು ಅವ್ರ್ ಕಷ್ಟಾ ಸುಖದಲ್ಲಿ ಬಾಗಿಯಾಗೋದೆ ನಿಜವಾದ ಪ್ರೀತಿ. ಪರಸ್ಪರ ನೋವು ನಲಿವುಗಳ ಹೊಂದಾಣಿಕೆಯೆ ಪ್ರೀತಿ

 

ಪ್ರೀತಿ ತುಂಬಿದ ಹೃದಯವನ್ನು ಹೊಂದಿರುವವರು ನೋವು ಕೂಡಿದ ಹೃದಯವನ್ನೂ ಹೊಂದಿರುತ್ತಾರೆ…!

 

ದೊರೆತ ಅವಳ ಪ್ರೀತಿ ಮಿಂಚಂತೆ ಮಿಂಚಿ ಮಾಯವಾಯಿತು ಆದರೆ ಕೊಟ್ಟ ನೋವು ಅಳಿಸಿದ ನೆನಪುಗಳನ್ನು ಮೂಡಿಸಿತು.

 

“ಪ್ರೀತಿ” ನೋವು ಅಂತ ಗೊತ್ತಿದ್ರೂ ಆ ನೋವೇ ಎಲ್ಲರಿಗೂ “ಇಷ್ಟ”…….!!!!

 

 

ಅಲ್ಲೊಬ್ಬ ರಾಮ ಅನುಮಾನಿಸಿ ಬದುಕಿಗೆ ಒಂಟಿತನದ ಶಿಕ್ಷೆ ಕೊಟ್ಟು ಬಿಟ್ಟ 

ಇಲ್ಲೊಬ್ಬ ಕೃಷ್ಣ ತ್ಯಾಗಿಯಾದ ನೋಡಿ ಇವಳಿಗೆ ಅಪ(ರಾಧೆ)ಯ ಉಡುಗೊರೆ ನೀಡಿ ಹೋದ

ರಾಮನೋ… ಕೃಷ್ಣನೋ… ನೋವನುಭವಿಸಿದ ಅವಳು ಇಂದಿಗೂ ಬಯಸಿದ್ದೂ ಹಿಡಿ ಪ್ರೀತಿ ತುಸು ಒಲವು ದಕ್ಕಿದ್ದು ಮಾತ್ರ ಸಾಕೆನ್ನುವಷ್ಟು ನೋವು…

 

ನಗುವಿನ ಹಿಂದಿರುವ ನೋವು, ಕೋಪದ ಹಿಂದಿರುವ ಪ್ರೀತಿ, ಮೌನದ ಹಿಂದಿರುವ ಕಾರಣ, ಕೆಲವರಿಗೆ ಮಾತ್ರ ಅರ್ಥವಾಗುತ್ತದೆ…!!

 

ಪ್ರೀತಿಯಲ್ಲಿ ನೂರು ಬಾರಿ ಸೋತವನು ನಾನು. ಕಾಯುತ್ತಿರುವೆ ಆ ನೂರು ಸೋಲಿನ ನೋವು ಮರೆಸುವ ಪ್ರೀತಿ ಸಿಗುವುದೇದ್ದು ಏಕೆಂದರೆ ಪ್ರೀತಿಯ ನನ್ನುಸಿರು.

 

ಪ್ರೀತಿ ಕೊಟ್ಟವರಿಗೆ ಮರಳಿ ಪ್ರೀತಿ ಕೊಡಬೇಕೆ ಹೊರತು ನೋವು, ಮೋಸ, ಸುಳ್ಳುಗಳನ್ನಲ್ಲ. ನಾವು ಒಬ್ಬರಿಗೆ ಮೋಸ ಮಾಡಿದರೆ ನಮಗೆ ಇನ್ನೊಬ್ಬರು ಮೋಸ ಮಾಡುವರು ಇರುತ್ತಾರೆ ಎನ್ನುವುದನ್ನ ಮರೆಯದಿರಿ. ಪ್ರೀತಿ ಭಿಕ್ಷೆ ಬೇಡುವುದಲ್ಲ ಮನಸ್ಸಿನಿಂದ ಕೊಡುವುದೇ ಪ್ರೀತಿ. ಯಾರಿಗೂ ಮೋಸ ಮಾಡದಿರಿ.

 

ಪ್ರೀತಿ ಹೋದರೇ…. ಅವನಿಗಿಂತಾ ಚೆನ್ನಾಗಿ ಪ್ರೀತಿ ಮಾಡೋನು ಸಿಗಬಹುದು, ಆದರೇ ನೀನೇ ಹೋದರೇ…….? ನಿನ್ನೇ ಪ್ರೀತಿಸುವ ನಿನ್ನ ಕುಟುಂಬದ ಪ್ರೀತಿ ಕಳೆದುಕೊಳ್ಳುವೆ. ನೋವು ಮರೆಸುವ ಇನ್ನೊಂದು ಮನಸ್ಸು ಸಿಗುವುದು, ನಿನ್ನ ಹತ್ತಿರದವರೇ ನಿನ್ನ ಮರೆಯೋ ಅವಕಾಶ ಮಾಡಿಕೊಡದಿರು.

 

ಸಿಗದ ಪ್ರೀತಿ ಪದೇ ಪದೇ ಎದುರುಗಡೆ ಬಂದಾಗ ಆಗುವ ನೋವು ಇದೆಯಲ್ಲ ಅದು ನಮ್ಮ ಶತ್ರುಗಳಿಗೂ ಬೇಡ ಗುರು…..

 

ಪ್ರೀತಿಲಿ ಮೋಸ ಹೋದೋರಿಗೆ ಗೊತ್ತು ಆ ಪ್ರೀತಿ ನೀಡಿರೋ ನೋವು ಯಾತರ ಅಂತ ನಗ್ತಿದಿವಿ ಅಂದ್ರೆ ಏನು ಆಗಿಲ್ಲ ಅಂತೆ ಅಲ್ಲ ಆತರ ಇರ್ಲೇಬೇಕು.

 

ಇಷ್ಟ ಇಲ್ಲಾ ಅಂದಿದ್ರೆ ಮೊದಲೇ ಹೇಳಬಹುದಿತ್ತಲ್ವಾ ಮನಸ್ಸಿಗೆ ಇಷ್ಟೊಂದು ಹತ್ರ ಆಗಿ, ಹಿಡಿಸಲಾರದಷ್ಟು ಪ್ರೀತಿ ಕೊಟ್ಟು, ಈಗ ಇಷ್ಟು ನೋವು ಕೊಡೊ ಅವಶ್ಯಕತೆ ಏನಿತ್ತು? ನಾನು ನೋಡು ನೋಡುತ್ತಲೇ ಬದಲಾದ ನಿನ್ನ ಪ್ರೀತಿ ದೂರವಿದ್ದು ನೋವು ಅನುಭವಿಸೋದಕ್ಕಿಂತ ಹತ್ತಿರವಾಗಿ ಇದ್ದು ಜೀವನ ಎಂಬ ಸಾಗರದಲ್ಲಿ ಗೆದ್ದು ತೊರ್ಸ್ಬೋದಿತ್ತು.

 

ಪ್ರೀತಿ,ಪ್ರೇಮ,ಸ್ನೇಹ, ಎಲ್ಲವು ಎರಡೇ ಅಕ್ಷರ . ಇವೆಲ್ಲ ಸಿಕ್ಕ ಮೇಲೆ ಕೊನೆಗೂ ಸಿಗುವುದೇ ಎರಡಕ್ಷರ ಅದು ಯಾವುದೆಂದರೆ ಮೋಸ, ನೋವು, ಸಾವು….

 

ಕಾಲಾಯ ತಸ್ಯೆ ನಮಃ ‘ ನೀ ಮಾಡಿದ್ದೆಲ್ಲವೂ ನೀ ಅನುಭವಿಸಲೇಬೇಕು ದ್ವೇಷಿಸಿದ್ದರೆ ದ್ವೇಷ ಪ್ರೀತಿಸಿದ್ದರೆ ಪ್ರೀತಿ ನೋಯಿಸಿದ್ದರೆ ನೋವು”…

 

ಜೀವನದಲ್ಲಿ ಇಬ್ಬರನ್ನು ಸಾಯೋವರೆಗೂ ಮರೆಯೋಕೆ ಆಗಲ್ಲ ಒಂದು ತುಂಬಾ ಪ್ರೀತಿ ಕೊಟ್ಟವರನ್ನು ಇನ್ನೊಂದು ತುಂಬಾ ನೋವು ಕೊಟ್ಟವರನ್ನು. ಮೋಡ ಕವಿದಾಗ ಮಳೆ ಮೀನು .. ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ನಿನ್ನ ನೆನಪಾದಾಗ ಕಣ್ಣಲ್ಲಿ ನೀರು ಮಾತ್ರ ಖಂಡಿತ ಬರುತ್ತೆ

ನೋವಿನ ಅನುಭವ ತುಂಬಾ ಇದೆ ಅದಕ್ಕೆ ಮತ್ತೊಬ್ಬರಿಗೆ ನೋವು ಕೊಡುವ ಮನಸಿಲ್ಲ.. 

 

ನೀ ಪ್ರೀತಿ ಕೊಟ್ಟರೂ ಸರಿಯೇ ನೋವು ಕೊಟ್ಟರೂ ಸರಿಯೇ.. ನಾ ನಿನ್ನ ಪ್ರೇಮ ಸಂತೆಯ ಖಾಯಂ ಗ್ರಾಹಕ……

 

Heart Touching Love Failure Quotes in Kannada | ಹೃದಯಸ್ಪರ್ಶಿ ಪ್ರೇಮ ವೈಫಲ್ಯ ಉಲ್ಲೇಖಗಳು 

ಬಯಸಿದ್ದೆ ಸಿಗಬೇಕಂದರೆ ಹೇಗೆ ಇಲ್ಲಿ ಕೊಟ್ಟದ್ದನ್ನೆ ಕೊಡುವವರಿಲ್ಲ ಪ್ರೀತಿ ಪಡೆದು ನೋವು ನೀಡುವವರಿದ್ದಾರೆ…

 

ಅರ್ಥವಾಗದ ಪ್ರೀತಿ ನಗುವಲ್ಲಿ ಮಾಯವಾಯಿತು, ಹೇಳಲಾಗದ ನೋವು ಕಣ್ಣೀರಿಂದ ಜಾರಿ ಹೋಯಿತು.

 

ಕಣ್ಣಿಗೆ ಕಾಣಿಸದ ಆ “ಪ್ರೀತಿ”…..!!!! ಕಾರಣವಿಲ್ಲದೆಯೇ… ಮನಸ್ಸಿಗೆ ನೋವು ಕೊಡುತ್ತದೆ……!!!!!

 

ಜೀವನ ಎಷ್ಟು ವಿಚಿತ್ರ ಕೆಲವರು ಎಷ್ಟೇ ನೋವು ಕೊಟ್ಟರು ಅವರಿಗೆ ಪ್ರೀತಿ ಸಿಗುತ್ತದೆ, ಕೆಲವರು ಜೀವನ ಪೂರ್ತಿ ಪ್ರೀತಿ ಕೊಟ್ಟರು ಅವರಿಗೆ ನೋವೇ ಸಿಗುತ್ತದೆ.

 

ಪ್ರೀತಿಸಿದವರು ಜೊತೆಗಿದ್ದ ಕ್ಷಣ ಸವಿ ಅನುಭವ ನೀಡಿದರೆ, ಪ್ರೀತಿ ಕಳೆದುಕೊಂಡ ಮೇಲೆ ಕಾಡುವ ನೋವು ಕೂಡ ಭಯಂಕರವಾಗಿರುತ್ತದೆ

 

ಪ್ರೀತಿಸಲು ಕಾರಣಗಳು ಬೇಕಿಲ್ಲ ನಿಷ್ಕಲ್ಮಶ ಭಾವದಿಂದ ಮನಸ್ಸನ್ನು ಅರಿತರೆ ಸಾಕು. ಬಿಟ್ಟು ಹೋಗಲು ಮಾತ್ರ ಕಾರಣಗಳು ಬೇಕು

 

ಕೆಲವರು ತುಂಬ ಅದೃಷ್ಟವಂತರು ..” ನೂರಾರು ನೋವು ಕೊಟ್ಟರು ಅವರಿಗೆ ತುಂಬ ಪ್ರೀತಿ ಸಿಗುತ್ತದೆ. ಇನ್ನು ಕೆಲವರು ತುಂಬ ದುರದೃಷ್ಟವಂತರು ಅವರ ಜೀವನವಿಡೀ ಪ್ರೀತಿ ಕೊಟ್ಟರು ಅವರಿಗೆ ಸಿಗೋದು ಬರೀ ಜೀವನವಿಡೀ ನೆನಪುಗಳು ಮಾತ್ರ…”

 

ಪ್ರತೀ ಬಾರಿ ನನಗಾಗೋ ನೋವು ಇಂತದೇ… ನನ್ನವಳೇ ಎನ್ನುವಾಗ, ಇನ್ನಾರೋ ಬಂದು ದೂರಮಾಡಿ ಹೋಗುವರು ನನ್ನಿಂದ… ಪ್ರೀತಿ ಎಂಬುದು ಕೈಗೆಟುಕದ ದ್ರಾಕ್ಷಿ

 

ನನ್ನ ಜೀವನದಲ್ಲಿ ಪ್ರೀತಿ  ಕೊಟ್ಟವಳು ನೀನೆ. ನೋವು ಕೊಟ್ಟವಳು ನೀನೆ. ಎಲ್ಲ ನೀನೇ ಆಗಿರಬೇಕು, ಅನ್ನೋ ಬಯಕೆನಾ ನೆರವೇರಿಸ್ತಾ ಇದ್ದೀಯಾ ನನ್ನವಳು

 

ಜೀವವ ಹಿಡಿದು ಕುಳಿತೆ ನಿನಗಾಗಿ ಹೊಡೆದು ಕೊಳ್ಳುತ್ತಿದೆ ಈ ಹೃದಯ ಪ್ರತಿಕ್ಷಣ ನಿನಗಾಗಿ ಸರಿದಿದೆ ಸಮಯ ಅರಿಯದ ಹಾಗೆ ಕಳೆದಿದೆ ದಿನ ನಿನ್ನದೇ ಆಲೋಚನೆಯಲ್ಲೇ ಹಗಲು ಇರುಳು ಒಂದಾಗಿದೆ ನೀನಿಲ್ಲದೆ ಬದುಕು ಬರಿದಾಗಿದೆ ಮನದಾಳದ ಒಲವು ಅರಿತು ಅರಿಯದಾದೆ ನಿನಗಾಗಿ ಹಂಬಲಿಸಿ ಮೌನದಲಿ ಪ್ರಕ್ಷಣ ಕಾದೆ

 

ಅತಿಯಾದ ಪ್ರೀತಿ ಮತ್ತು ಕಾಳಜಿಯು ಅತಿ ಶೀಘ್ರದಲ್ಲೇ ಅತೀವ ನೋವು ಕೊಟ್ಟು, ನಮ್ಮನ್ನು ಒಂಟಿ ಮಾಡಿ ಹೋಗುತ್ತೇ.

 

ನೊಂದ ಮನಸು ಪ್ರೀತಿ ಮಾಡೋದು ತುಂಬಾ ಸುಲಭ ಕಣ್ರೀ.. ಅದೇ ಪ್ರೀತಿ,ಪ್ರೀತಿಸಿದೋರು ದೂರಾದಾಗ ಆಗುವ ನೋವು ತುಂಬಾ ತುಂಬಾ ಕಷ್ಟ ಕಣ್ರೀ …

 

ಬಯಸಿ ಬಂದ ಪ್ರೀತಿ ಸದಾ ನಮಗೆ ಖುಷಿ ಕೊಡುತ್ತೇ ಆದರೆ, ನಾವು ಬಯಸಿ ಹೋದ ಪ್ರೀತಿ ಸದಾ ನೋವು ಕೊಡುತ್ತೆ ಅದಕ್ಕೆ ಬಯಸಿ ಬಂದ ಪ್ರೀತಿನಾ ದೂರ ಮಾಡಬೇಡಿ. ಬಯಸಿ ಬಯಸಿ ಯಾರನ್ನೂ ಪ್ರೀತಿ ಮಾಡಬೇಡಿ.

 

ಹುಚ್ಚಿಯಂತೆ ಹಚ್ಚಿಕೊಂಡಿರುವೆ ನಾ ನಿನ್ನ….. ಯಾವುದೇ ಕಾರಣಕ್ಕೂ ಬಿಟ್ಟು ಹೋಗದಿರು ನೀ ನನ್ನ…..

 

ಯಾವುದೋ ಇಳಿಯಬಾರದ ಇಳಿಜಾರಿನಲ್ಲಿ ಇಳಿದು, ಹತ್ತಲು ಆಗದೆ ಮತ್ತೆ ಅಳಕ್ಕೆ ಇಳಿಯಲೇ ಬೇಕಾದ ಪರಿಸ್ಥಿತಿಯಂತಹದು ಈ ಪ್ರೀತಿ……..

 

ಪ್ರೀತಿ ಸಿಗಲು ಕ್ಷಣ ಸಾಕಂತೆ, ಪ್ರೀತಿಸಿದವರು ಸಿಗಲು ಋಣ ಬೇಕಂತೆ… ವಾಕ್ಯ ನನ್ನದಲ್ಲ, ಭಾವನೆ ನನ್ನದು.. ಅವಳು ನನ್ನವಳಲ್ಲ, ಈ ನೋವು ನನ್ನದು..

 

ಹಾರ್ಟ್ ನಲ್ಲಿ ಇರೋ ಪ್ರೀತಿ ಮನಸ್ಸಿನಲ್ಲಿ ಇರೋ ನೋವು ಉಸಿರಿನಲ್ಲಿ ಇರೋ ಜೀವ ಮುಖದಲ್ಲಿ ಇರೋ ನಗು ಕಣ್ಣಲ್ಲಿ ಇರೋ ಕಂಬನಿ ತಿಳಿಯೋದು ನಿಜವಾಗಿ ಪ್ರೀತಿ ಮಾಡಿದವರಿಗೆ ಮಾತ್ರ ಅರ್ಥ ಆಗೋದು

 

ಪ್ರೀತಿ ಎಂಬ ನ್ಯಾಯಾಲದಿಂದ ನೋವು ಎಂಬ ಜೈಲಿಗೆ ಬಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಿರಪರಾಧಿ ಪ್ರೇಮಿ ನಾನು ……

 

ಪರಿಶುದ್ದ ಪ್ರೀತಿಗೆ…. ವಿಷದ ನೋವು ಯಾಕೆ.. 

 

ನಿನ್ನನ್ನ ನಿನ್ನ ಪಾಡಿಗೆ ಇರೋಕೆ ಬಿಟ್ಟಿದೀನಿ ಅಂದ್ರೆ ನಿನ್ನ ಮೇಲೆ ಪ್ರೀತಿಕಡಿಮೆ ಆಗಿದೆ ಅಂತಲ್ಲ ನನ್ನ ಅತಿಯಾದ ಪ್ರೀತಿ ನಿಂಗೆ ಹಿಂಸೆ ಆಗಬಾರದು …!!ಸುಮ್ಮನೆ ಇದ್ದ “ಮನಸ್ಸಿಗೆ” ಇಲ್ಲದ. ಆಸೆಗಳನ್ನು ತೋರಿಸಿ ಕೊನೆಗೆ…. ತಡ್ಕೊಳೋಕೆ ಆಗದೆ ಇರೋಅಷ್ಟು.. ನೋವು ಕೊಟ್ಟು ಹೋದೆ ಅಲ್ವಾ… ನಿನ್ನ ಪ್ರೀತಿಗೋಸ್ಕರ ಬೇಡದೆ ಇರೋ ದೇವರಿಲ್ಲ, ಕಟ್ಟದೆ ಇರೋ ಹರಕೆ ಇಲ್ಲ, ಮಾಡದೇ ಇರೋ ಹರಕೆಗಳಿಲ್ಲ ಆದರೂ ನೀನು ನಂಗೆ ಸಿಗುತ್ತಿಲ್ಲ !…..ಸೀತೆ ಆಗುವ ಅವಕಾಶ ನನಗಿಲ್ಲದಿದ್ದರೂ… ರಾಧೆ ಹಾಗೆ ಸದಾ ನಿನ್ನ ಆರಾಧಿಸುವೆ.

 

ಪ್ರೀತಿ ನೀಡುವುದು ತಪ್ಪಲ್ಲ… ನೀಡಿದ ಪ್ರೀತಿನ ಮರಳಿ ನಿರೀಕ್ಷಿಸುವುದು ತಪ್ಪು…!! ಒಮ್ಮೊಮ್ಮೆ ಒಂಟಿಯಾಗಿ ಕೂತಾಗ ಮನಸ್ಸು ಹೇಳುತ್ತದೆ ನಿನ್ನ ನೋವು ಕೇಳುವವರು ಇಲ್ಲಿ ಯಾರು ಇಲ್ಲ ಎದ್ದು ನಡಿ ಎಂದು.

 

ಜೀವನದಲ್ಲಿ ಪ್ರೀತಿ ಒಂದು ಭಾಗ ಅಷ್ಟೇ ಆದರೆ ಅದಕ್ಕಾಗಿ ಜೀವನಪೂರ್ತಿ ನೋವು – ಅಳುವು ಸಾಧನೆಯಲ್ಲ.ಮತ್ತು ಅದೊಂದು ಜೀವನವೇ ಅಲ್ಲ. ಮರೆತು ಹೋದ ಪ್ರೀತಿ ಮರದ ಎಲೆ ಇದ್ದಾಗೆ ಅಂತ ಹೇಳ್ತಾರೆ..ನೋವಿನ ಕಡಲನ್ನು ದಾಟಿ ನಗುವೆಂಬ ದಡವನ್ನು ಸೇರಿ ಆಗಾ ಜೀವನ ಸುಂದರ.

 

ಪ್ರೀತಿ ಮರೆಯಾಗಿದೆ ಮಾತು ಬರಿದಾಗಿದೆ ಮನ ಮರುಗಟ್ಟಿದೆ ಮೌನ ಬರೆಯಾಗಿದೆ ನಗು ಮರಿಚಿಕೆಯಾಗಿದೆ ನೆನಪು ಅಚಲವಾಗಿದೆ ನೋವು ಉಡುಗೊರೆಯಾಗಿದೆ.

Heart Touching Sad Love Quotes in Kannada 

ನಿಮ್ಮ ಪ್ರೀತಿ ಎಷ್ಟು ಸುಂದರವಾಗಿರುತ್ತದೆಯೋ, ನಿಮಗೆ ಕಾಯುತ್ತಿರುವ ನೋವು ಕೂಡ ಅಷ್ಟೇ ಹೆಚ್ಚಾಗಿರುತ್ತದೆ…!!

 

“ನಿನ್ನನ್ನೇ” ನಂಬಿ ಬಂದ ನಂಗೆ, ನೀ ತೋರಿದೆ ಬೆಟ್ಟದಷ್ಟು ಪ್ರೀತಿ, ಊಹಿಸಲಾರದಷ್ಟು ನೋವು…!!!

 

ಮನಸ್ಸಿಗೆ ಇಷ್ಟವಾದರೆ ಪ್ರೀತಿ ಖಚಿತ, ಜೋತೆಗೆ ನೋವು ಉಚಿತ.

 

ಬಯಸಿದೆ ಮನಸ್ಸು ನಿಮ್ಮಂತಾಗಲು…… ಎಷ್ಟೇ ನೋವು ತಿಂದರು ತೋರಿಸಿಕೊಳ್ಳದಂತೆ, ಎಷ್ಟೇ ಪ್ರೀತಿ ಇದ್ದರು ತೊರ್ಪಡಿಸದಂತೆ……

 

ಸೂರ್ಯನಿಲ್ಲದೆ ಕಳೆಯಿಲ್ಲ ಇಳೆಗೆ. ನೀನಿಲ್ಲದೆ ಬದುಕಿಲ್ಲ ನನಗೆ

 

ಚಳಿಗಾಲದಲ್ಲಿ ಸಂಗಾತಿಯಂತೆ ನಿನ್ನ ನೆನಪಿನ ಕಾವು ಎಷ್ಟು ಕಾಲವುರುಳಿದರೂ ತುಂಬಲಾರದ ನೋವು.. ಪುಸ್ತಕಕ್ಕೆ ಧೂಳು ಹತ್ತಿದರೆ ಕಥೆಯು ಬದಲಾದೀತೇ? ನೀ ದೂರವಾದ ಮಾತ್ರಕ್ಕೆ ಪ್ರೀತಿ ಕೊನೆಯಾದೀತೇ!!

 

ನೀ ಹೊರಟ ಮೇಲೆ….. ಹೃದಯದ ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ…. ಮನ ಮಂಜುಗಟ್ಟಿದಂತೆ…. ನೆನಪು, ನೋವು, ಪ್ರೀತಿ ಎಲ್ಲಾ…. ಒಟ್ಟಿಗೆ ಉಮ್ಮಳಿಸಿ ಬಂದಂತೆ…..

 

ನನ್ನ ತಪ್ಪು ಕಾಣಿಸುತ್ತೆ ನಿಂಗೆ.. ನನ್ನ ಮುನಿಸು ಕೂಡ.. ನನ್ನ ಮಾತಿನಲ್ಲಿರೋ ನೋವು ಕೂಡ ಬಲ್ಲೆ ನೀನು.. ನನ್ನ ಅಸೂಯೆ ಕೂಡ ಅರ್ಥ ಆಗುತ್ತೆ ನಿನಗೆ.. ಆದರೆ … ಆದರೆ ನನ್ನ ಮನಸ್ಸಿನಲ್ಲಿರೋ ಪ್ರೀತಿ ಮಾತ್ರ ಕಾಣಿಸಲ್ಲ ನಿಂಗೆ..

 

ಸಿದ್ದನಿರು ಪ್ರೀತಿ ಮಾಡಿದ ಮೇಲೆ ಅನುಭವಿಸಲು ನೋವು-ಭಾಧೆ ಸಾಮಾನ್ಯ ಮಾನವರ ಕಷ್ಟ ಬಿಡು ಕೃಷ್ಣನಿಗೂ ಸಿಗಲಿಲ್ಲ ಅವನ ರಾಧೆ…

 

ನಾಲ್ಕು ದಿನದ ಜೀವನ.. ಒಂದು ದಿನದ ಪ್ರೀತಿ.. ಬಾಕಿ ಮೂರು ದಿನ ಅವಳು ಬಿಟ್ಟುಹೋಗಿದ್ದಕ್ಕೆ ವಿಧವಿಧವಾಗಿ ನೋವು ಪಡುವ ರೀತಿ..ಅ ಷ್ಟೇ.

 

ಹೇಳುವಷ್ಟು ಸುಲಭವಲ್ಲ ಅನುಭವಿಸುವುದು ಈ ನೋವು.. ಪ್ರೀತಿ ಬರಿದಾದ ಹೃದಯದಲ್ಲಿ ಬದುಕಿದ್ದಾಗಲೇ ಬಂದಿರುತ್ತೆ ಸಾವು..

 

ವಿಪರೀತ ನೋವು ಕೊಡುವವರು ಅತಿಯಾದ ಪ್ರೀತಿ ಕೊಟ್ಟವರೇ.

 

ನಾವು ಯಾರನ್ನ ತುಂಬಾ ಪ್ರೀತಿ ಮಾಡ್ತೀವೋ ಯಾರನ್ನ ನಮ್ಮ ಸರ್ವಸ್ವ ಅನ್ನೊಂಡಿರ್ತೀವೋ ಯಾರ ಜೊತೆ ಜೀವನದ ಬಗ್ಗೆ ಯೋಚಿಸಿರ್ತೀವೋ ಅವರೇ ಕೊನೆಲಿ ನಮ್ಮನ್ನ ನೋವಲ್ಲಿ ಬಿಟ್ಟು ಹೋಗೋದು…ಆ ನೋವು ಹೇಗಿರುತ್ತೆ ಅಂದ್ರೆ… ಹತ್ತು ಜನ್ಮದ ನರಕ ಒಟ್ಟಿಗೆ ನೋಡಿದ ಹಾಗೆ.

 

ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ. ಆದರೇ ಸಾಯೋತ್ತರ ಮಾಡ್ತಾರೆ.ಅದು ಈ ಉಸಿರು ಇರೋ ತನಕ ಮಾತ್ರ..ಮನಸ್ಸಲಿ ನೋವು ಅನುಭವಸಿ ಆತರ ನೋವು ಯಾರ್ಗೂ ಬರ್ಬಾರ್ದು

 

ನನ್ನ ಬಂಡವಾಳ ಪ್ರೀತಿ, ಆದರೆ ಸಿಕ್ಕ ಆದಾಯ ನೋವು. 

 

ಸಾವಾಗಲಿ ಪ್ರೀತಿ ಆಗಲಿ ಇವು ಎರಡು ಕರೆಯದೆ ಬರೋ ಅತಿಥಿಗಳು, ಎರಡಕ್ಕೂ ವ್ಯತ್ಯಾಸ ಇಷ್ಟೇ. ಪ್ರೀತಿ ಹೃದಯವನ್ನ ಕದಿಯತ್ತೆ ಸಾವು ಹೃದಯದ ಬಡಿತವನ್ನ ಕದಿಯತ್ತೆ. ಪ್ರೀತಿ ನೋವು ಕೊಡತ್ತೆ, ಸಾವು ಆ ನೋವನ್ನ ಶಾಶ್ವತವಾಗಿ ಸ್ತಬ್ದಗೊಳಿಸತ್ತೆ.

 

ಮಾಡಿದ ಪ್ರೀತಿ ಸುಡುಗಾಡು ಸೇರಿತು, ಕಣ್ಣೀರು ಕೂಡ ಬೇಸತ್ತು ಹೋಯಿತು, ಗೋರಿಯ ಒಳಗಡೆ ಕನಸೊಂದು ಬೀಳಲಿ ಆ ಕನಸಲಿ ನೀನು ನನ್ನ ಸಂಗಾತಿಯಾಗಲಿ. ಪ್ರೀತಿ ಕಳಕೊಂಡ ನೋವು ಆ ಬ್ರಹ್ಮನಿಗೆ ಗೊತಿಲ್ವಾ? ಗೊತಿದ್ರೆ ನನ್ ಹಣೆಬರಹ ಈ ರೀತಿ ಗೀಚ್ತಿದ್ನ ಹೆಸರಿಲ್ಲದ ನೋವೊಂದು ನನ್ನ ಹೃದಯ ಸೇರಿರಲು, ಹುಚ್ಚು ಪ್ರೀತಿಯ ಅಮಲು ಜೀವ ನುಂಗಿರಲು ನಲ್ಲೆ ನೀ ಹಾಗಿಯೇ ನನ್ನ ಬದುಕಿಗೆ ಕಾರ್ಮಾಗಿಲು.

 

ಮನಸ್ಸು ಓದಲು ನಿನಗೆ ತಿಳಿಯದಿದ್ದರೆ.ಮನಸ್ಸಲ್ಲಿನಿದೆ ಎನ್ನುವದು ತಿಳಿದು ಹೇಳು ನೋಡೋಣ.ಅಂತರಳಾದ ಪ್ರೀತಿ ಅಂತರಾಳದ ನೋವು ಎರಡು ಸರಿದೋಗುವದಾ.ದೇವರ ಆಟಕ್ಕೆ ಗೊಂಬೆಯಾಗಿ ನಂಬಿಕೆಯ ಜನರ ಮೋಸಕ್ಕೆ ಬಲಿಯಾಗಿ.ಆದರು ದಡ ಸೇರುವೇನು ಎನ್ನುವ ಮನದ ಮಾತು ಕೊನೆಗಾಣುವದೇ ದೇವನೆ.ನೀನೆ ಸವ೯ಸ್ವ ಎನ್ನುವ ನಂಬಿಕೆ ಕಳೆದು ತನ್ನ ತಾನೇ ಜಾರುತೀದೆ.ಇಂದು ಕೊನೆಯಾಗುವದೇ ನಾಳೇ ಕೊನೆಯಾಗುವದೇ ಎನ್ನ ನೋವು.ಕಾಣದಾಗಿದೇ ದೇವನೆ ನಿನ್ನ ಈ ಆಟವಾ.

 

ಅವರಿವರಲ್ಲಿ ಪ್ರೀತಿ ಹುಡುಕಿ ನೋವು ಪಟ್ಟು ಸಾಕಾಯ್ತು ಇನ್ನೂ ನನ್ನ ನಾ ಪ್ರೀತಿಸುವ ಸಮಯ ಬಂದಾಯಿತು ಕಾರಣ ಇಲ್ಲಿ ಒಳ್ಳೆಯದು ಬಯಸಿದಷ್ಟು ಕೆಟ್ಟದ್ದಾಗುತ್ತಿದೆ ಎಂಬ ಅರಿವಾಯಿತು ಅವರಷ್ಟಕ್ಕೆ ಅವರನ್ನು ಬಿಟ್ಟು ನನ್ನ ನಾನೇ ತಿದ್ದಿ ನಡೆಯುದೆ ಸರಿ ಎನಿಸಿತು

 

ನಿನ್ನ ಜೊತೆ ಕಳೆದ ದಿನಗಳನ್ನೆಲ ಮರೆಯೋಕೆ ಆದೀತೇ.. ನೆನಪುಗಳು ಅಳಿಸಿತೇ.. ಎದೆಯಲ್ಲಿನ ನೋವು ಮಾಸಿತೇ… ಪ್ರೀತಿ ಉಸಿರಾಯಿತೆ ನಂಗೆಲ್ಲ….

 

ಕೋಟಿ ನೋವನ್ನು ಮೀರಿದಂತಹ ಒಂದೇ ಒಂದು ನೋವು ಪ್ರೀತಿ.

 

ಪ್ರೀತಿ…. ಪ್ರೀತಿಲೀ ಏಳು ಬೀಳು ನೋವು ನಲಿವು ಸಹಜ… ಹಾಗಂತ ಮದ್ವೆ ಆದ್ರೆ ಅಷ್ಟೇ ಪ್ರೇಮಿಗಳು ಆಗಲ್ಲ… ಪ್ರೀತಿಲೀ ಸೋತವರು ಕೂಡ ಕೊನೆವರೆಗೂ ಪ್ರೀತಿಸ್ತಾನೇ ಇರ್ತಾರೆ… .. ಹ…!! ಒಂದಂತೂ ನಿಜ… ಎಲ್ಲಿ ಅತಿಯಾದ ನಂಬಿಕೆ ವಿಶ್ವಾಸ ಅನ್ನೋ ಪ್ರೀತಿ ಇರುತ್ತೋ ಅಲ್ಲಿ ಅರ್ಧಕ್ಕೆ ಮುರಿದು ಹೋಗೋ ಸನ್ನಿವೇಶಗಳು ಕೂಡ ಬಂದುಬಿಡ್ತವೆ…. ರಾಧಾ ಕೃಷ್ಣರಾ ಪ್ರೀತಿಯ ಹಾಗೆ…. ಮನಸ್ಸಿಂದ ಪ್ರೀತಿಸಿ ನೋಡಿ… ಪ್ರೀತಿ ಮಾಡಿದವರು ನಮ್ ಕಣ್ಣಿಂದ ದೂರ ಇದ್ರು… ದೇಹಕ್ಕೂ ಮನಸ್ಸಿಗೂ ಯಾವಾಗಲೂ ಹತ್ತಿರನೇ ಇರ್ತಾರೆ…..

 

ಬಿಟ್ಟುಕೊಡುವ ಮನಸ್ಸು ಯಾರಿಗೂ ಇರುವುದಿಲ್ಲ ಎಲ್ಲರದಲ್ಲೂ ಪ್ರೀತಿ ಇರುತ್ತೆ ಆದರೆ ಅದನ್ನು ಉಳಿಸಿಕೊಳ್ಳುವ ಮನಸ್ಸು ನಮ್ಮ ಎದುರಿಗಿನ ಹೃದಯಕ್ಕೆ ಇರಬೇಕು ಅದು ದೂರಾದಾಗ ಪಡುವ ನೋವು ಸಂಗತ ಅವರಿಗೆ ತಿಳಿಯುತ್ತದೆ

 

ನಿಜವಾದ ಪ್ರೀತಿ ಯಾವುದು ಗೊತ್ತಾ. ಎಷ್ಟೇ ನೋವು ಆದ್ರು ಅವರನ್ನೇ ಇಷ್ಟಪಡೋದು

 

ಅತಿಯಾದ ಪ್ರೀತಿ… ಅತಿಯಾದ ಕಾಳಜಿ… ಅತಿಯಾದ ನಂಬಿಕೆ… ಒಂದಲ್ಲ ಒಂದು ದಿನ… ನೋವು ಕೊಟ್ಟೆ ಕೊಡುತ್ತೆ…

 

ಮೊದ ಮೊದಲು ಪ್ರೀತಿಯ ಸುರಿಮಳೆ… ದಿನ ಕಳೆದಂತೆ ಪ್ರೀತಿ ಸೊರಗಿ ಹೋದಂತೆ.. ನೋವು ಕೊಟ್ಟೋಗೋ ಮನಸಾದರೆ ಪ್ರೀತಿ ಯಾಕೆ ಬೇಕು. .

 

ಹೆಚ್ಚು ಪ್ರೀತಿ ಕೊಟ್ಟಿದ್ದು ನೀನೆ ಹೆಚ್ಚು ನೋವು ಕೊಟ್ಟಿದ್ದು ನೀನೆ ನೀ ಕೊಟ್ಟ ನೋವಿನಿಂದ ಕಾರಣ ಹೇಳಿ ನಾ ತಾತ್ಕಾಲಿಕವಾಗಿ ದೂರವಾದೆ.. ನೀ ಕಾರಣ ತಿಳಿಸದೆ ಶಾಶ್ವತವಾಗಿ ದೂರವಾದೆ.. ನಿನ್ನ ಈ ಅಗಲಿಕೆ ತಡೆಯಲಾಗುತ್ತಿಲ್ಲ. ಯಾರ ಬಳಿ ಹೇಳಬೇಕು ತಿಳಿಯುತ್ತಿಲ್ಲ. ಮರು ಮಾತನಾಡದೆ ಒಮ್ಮೆ ನೀನೆ ಬಂದುಬಿಡು ನನ್ನ ನೋವನ್ನೆಲ್ಲ ನಿನ್ನಲ್ಲಿ ತೋಡಿಕೊಳ್ಳುವೆನು.. 

ಇದನ್ನೂ ಓದಿ: –

ಉತ್ತಮ ಹೃದಯಸ್ಪರ್ಶಿ ಪ್ರೀತಿಯ ಉಲ್ಲೇಖಗಳು (best heart touching love quotes in kannada) ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಇತರರೊಂದಿಗೆ ಸಂಪರ್ಕಿಸಲು ಒಂದು ಸುಂದರ ಮಾರ್ಗವಾಗಿದೆ. ನಮ್ಮ ಸಂಗ್ರಹವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ! ಈ ಹೃದಯಸ್ಪರ್ಶಿ ಉಲ್ಲೇಖಗಳನ್ನು (heart touching love failure quotes in kannada) ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ ಮತ್ತು ಪ್ರೀತಿಯ ಸಂತೋಷವನ್ನು ಹರಡಿ. 

Heart Touching Love Quotes In Kannada Images