50+ Happy Father’s Day Quotes in Kannada with Images

Happy Fathers Day Quotes in Kannada Language

ಅಪ್ಪಂದಿರ ದಿನಾಚರಣೆ ಹತ್ತಿರದಲ್ಲಿದೆ. ಇದು ಪ್ರೀತಿ, ಮತ್ತು ಮಾರ್ಗದರ್ಶನಗಳಿಂದ ನಮ್ಮ ಜೀವನವನ್ನು ತುಂಬಿದ ಅಸಾಮಾನ್ಯ ವ್ಯಕ್ತಿಗೆ ನಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಸೂಚಿಸುವ ಸಮಯ. 

ಈ ಲೇಖನದಲ್ಲಿ ಪಿತೃತ್ವದ ಸಾರವನ್ನು ಒಳಗೊಂಡಿರುವ ಅತ್ಯುತ್ತಮ ಉಲ್ಲೇಖಗಳನ್ನು ನಾವು ಸಂಗ್ರಹಿಸಿದ್ದೇವೆ. ಈ fathers day kannada quotesಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ನಮ್ಮ ಅಪ್ಪಂದಿರು ವಹಿಸುವ ಗಮನಾರ್ಹ ಪಾತ್ರದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಈ ತಂದೆಯ ದಿನದಂದು ಕೆಲವು ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಳ್ಳಲು ಮತ್ತು ಶಾಶ್ವತವಾದ ನೆನಪುಗಳನ್ನು ರಚಿಸಲು ಸಿದ್ಧರಾಗಿ.

ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ – ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ. ಈ ಜಗತ್ತು ನಡೆಯುತ್ತಿರುವುದೇ ಅವರಿಂದ. 

ನೀವು ವಾಟ್ಸಪ್ಪ್ ನಲ್ಲಿ ಕಳುಹಿಸಲು fathers day wishes in kannada ಅನ್ನು ಹುಡುಕುತ್ತಿರಲಿ, ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತಿರಲಿ, ಈ happy fathers day quotes in kannada language collection ನಿಮಗೆ ಅಪ್ಪಂದಿರ ದಿನವನ್ನು ವಿಶೇಷವಾಗಿಸಲು ಖಂಡಿತ ಸಹಾಯ ಮಾಡುತ್ತವೆ.

ಈ ಲೇಖನದಲ್ಲಿ ಪಿತೃತ್ವದ ಸಾರವನ್ನು ಸುಂದರವಾಗಿ ಸೆರೆಹಿಡಿಯುವ ಪದಗಳ ಸ್ವರಮೇಳವನ್ನು ನೀವು ಕಂಡುಕೊಳ್ಳುವಿರಿ. ತಂದೆಯ ಜೋಕ್‌ಗಳನ್ನು ನೆನಪಿಸುವ ಹಾಸ್ಯದ ಒನ್-ಲೈನರ್‌ಗಳಿಂದ ಹಿಡಿದು ತಂದೆಯ ಪ್ರೀತಿಯ ಆಳವಾದ ಪ್ರಭಾವದ ಆಳವಾದ ಪ್ರತಿಬಿಂಬಗಳವರೆಗೆ, ಈ ಉಲ್ಲೇಖಗಳು ನಿಮ್ಮನ್ನು ನಗುವಂತೆ ಮಾಡುತ್ತದೆ, ಅಳಿಸುತ್ತದೆ ಮತ್ತು ನಮ್ಮ ಅಪ್ಪಂದಿರು ನಮಗೆ ನೀಡುವ ಅಸಾಧಾರಣ ತ್ಯಾಗ ಮತ್ತು ಮಿತಿಯಿಲ್ಲದ ಪ್ರೀತಿಯನ್ನು ಪ್ರಶಂಸಿಸುತ್ತದೆ.

Best Happy Father’s Day Quotes in Kannada Language

Happy Father’s Day ನನ್ನ ಮುದ್ದು ಅಪ್ಪ 

ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀವು

ಮುಂದಿನ ಭವಿಷ್ಯದ ದಾರಿದೀಪ ನೀವು

ನನ್ನ ಎಲ್ಲಾ ಕನಸಿನ ಹಿಂದಿನ ಸ್ಪೂತಿ೯ ನೀವು

ನಿಮ್ಮೆಲ್ಲ ಕನಸುಗಳು ನನಸಾಗಲಿ

ಎಂದೆಂದೂ ಸದಾ ಕಾಲ ಹೀಗೆ ನಗುತಲಿರಿ.

ಮುಕ್ಕೋಟಿ ದೇವರುಗಳ ಆಶೀವಾ೯ದ ನಿಮಗಿರಲಿ.

 

ನಿನ್ನಂಥ ಅಪ್ಪಾ ಇಲ್ಲಾ!!

ಬಾಳಲ್ಲಿ ನೀವೇ ಎಲ್ಲಾ !!

ಐ ಲವ್ ಯೂ ಅಪ್ಪ.

ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.

 

ತನಗಿಲ್ಲದಿದ್ದರೂ ಸಾಲದೆಂದು ತಿಳಿದು ಬೇಯಿಸಿದ ಅಡುಗೆಗೆ ಮನಸ ಪೂರ್ತಿ ಮಮತೆ ಸೇರಿಸಿ ಹೊಟ್ಟೆ ತುಂಬಾ ಉಣಿಸುವವಳು ಅಮ್ಮ.

ಕೈಯಲ್ಲಿ ದುಡ್ಡಿಲ್ಲದಿದ್ದರೂ ಸಾಲ ಮಾಡಿಯಾದರೂ ದಿನಸಿ ತಂದು ಮಡದಿ ಮಕ್ಕಳ ಸಾಕುವನು ಅಪ್ಪ. Happy Father’s Day Appa.

 

ನನ್ನಪ್ಪ ಗುರು ಅಲ್ಲ ಆದ್ರೆ ಜವಾಬ್ದಾರಿಯಿಂದ ಬದುಕಲು ಕಲಿಸಿದ ಮಹಾನ್ ವ್ಯಕ್ತಿ.

ನನ್ನಪ್ಪ ದೇವರಲ್ಲ ಆದ್ರೆ ಇಷ್ಟ ಪಟ್ಟಿರುವುದೆಲ್ಲಇಲ್ಲ ಅನ್ನದೆ ಕೊಟ್ಟಿರುವ ಮಹಾನ್ ವ್ಯಕ್ತಿ.

ನನ್ನಪ್ಪ ಶ್ರೀಮಂತನಲ್ಲ ಆದ್ರೆ ಶ್ರೀಮಂತಿಕೆಯಿಂದ ಜೀವಿಸಲು ಶ್ರೀಮಂತ ಗುಣಗಳನ್ನು ತಿಳಿಸಿಕೊಟ್ಟ ಮಹಾನ್ ವ್ಯಕ್ತಿ.

ನನ್ನಪ್ಪ ಸಮಯವಲ್ಲಆದ್ರೆ ಸಮಯಕ್ಕೆ ತಕ್ಕ ಹಾಗೆ ಸಂಬಂಧ ಗಳು ಬದಲಾದಾಗ ಧೈರ್ಯ ಹಾಗೂ ಸ್ವಾಭಿಮಾನದಿಂದ ಬದುಕಲು ಕಲಿಸಿ ಕೊಟ್ಟ ಮಹಾನ್ ವ್ಯಕ್ತಿ.

ಮಿಸ್ ಯು ಅಪ್ಪ.

ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.

 

ಬದುಕು ರೂಪಿಸಿದ, ಜೀವನದ ಪಾಠ ಕಲಿಸಿ ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ನನ್ನ ಕೃತಜ್ಞತೆ ಹಾಗೂ ವಿಶ್ವ ಅಪ್ಪಂದಿರ ದಿನಾಚರಣೆ ಶುಭಾಶಯಗಳು.

 

ಇಂದು ವಿಶ್ವ ಅಪ್ಪಂದಿರ ದಿನಾಚರಣೆ. ಅಪ್ಪ ಎಂಬ ಆಲದ ಮರದ ನೆರಳಿನಲ್ಲಿ ಬಾಳಿ ಬದುಕುತ್ತಿರುವ ನಮ್ಮಂಥವರ ಪಾಲಿಗೆ ಆತನೇ ಸರ್ವಸ್ವ. ಅಪ್ಪ ಎಂದರೆ ಪ್ರೀತಿ, ಗೌರವ, ಭಯ ಎಲ್ಲ ಭಾವನೆಗಳು ಒಟ್ಟಿಗೆ ಉಮ್ಮಳಿಸುವ ಅಪರೂಪದ ಜೀವ.ಇಂತಹ ಪವಿತ್ರ ಜೀವಕ್ಕೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. 

 

ನನ್ನ ಅಪ್ಪನಿಗೆ, ಆತನ ತ್ಯಾಗಗಳಿಗೆ, ನೀಡಿದ ಪ್ರೀತಿಗೆ, ಬೈದ ಮಾತುಗಳಿಗೆ, ಜೀವನದಲ್ಲಿ ಉತ್ತಮ  ಬಾಳ್ವೆ ನಡೆಸಲು ಕಲಿಸಿದ ಪಾಠಗಳಿಗೆ, ದೀರ್ಘದಂಡ ನಮಸ್ಕಾರ. Happy Father’s Day ಅಪ್ಪ.

 

ಜೀವನದಲ್ಲಿ ಅಪ್ಪ ಎಂಬ ಆಲದ ಮರದ ನೆರಳಲ್ಲಿ ಬಾಳಿ ಬದುಕುತ್ತಿರುವ ನಮ್ಮಂತವರ ಪಾಲಿಗೆ ಆತನೇ ಸರ್ವಸ್ವ. ಅಪ್ಪ ಎಂದರೆ ಪ್ರೀತಿ, ಗೌರವ, ಭಯ ಎಲ್ಲ ಭಾವನೆಗಳೂ ಒಟ್ಟಿಗೆ ಉಮ್ಮಳಿಸುವ ಅಪರೂಪದ ಜೀವ.ಅಪ್ಪಂದಿರು ಮಾಡುವ ದಾನ ಧರ್ಮದ ಫಲಗಳು ಒಳ್ಳೆಯ ಕೆಲಸಗಳು ಮಕ್ಕಳಿಗೆ ಲಭಿಸುತ್ತವೆ ಪ್ರತೀ ಕ್ಷಣದಲ್ಲಿಯೂ ಬೇರೆಯವರಿಗಾಗಿಯೇ ಬದುಕುವ ಜೀವ ಹಾಗೂ ಯಾವಾಗ್ಲೂ ಮಕ್ಕಳನ್ನು ಬೆಂಬಲಿಸುವ ಇಂತಹ ಪವಿತ್ರ ಜೀವಕ್ಕೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

 

ಹಸಿವಾದಾಗ ಅಮ್ಮ 

ಕಷ್ಟ ಬಂದಾಗ ದೇವರು

ಪ್ರತಿಯೊಂದು ಹೆಜ್ಜೆಯಲ್ಲಿ ಕಷ್ಟ-ಸುಖ ನೋವಿನಲ್ಲೂ ನಾನಿದ್ದೀನಿ ಎಂದು ಹೇಳುವ ಜೀವ ಅದೇ ಅಪ್ಪ. ವಿಶ್ವ ತಂದೆಯವರ ದಿನಾಚರಣೆ ಶುಭಾಶಯಗಳು.

 

“ಅಪ್ಪ”ನ ದಿನಾಚರಣೆ ಎಂದು Status ಹಾಕೋದು ಮುಖ್ಯವಲ್ಲ. ಅಪ್ಪನ Status ಕಡಿಮೆ ಆಗದ ರೀತಿಯಲ್ಲಿ ನೋಡ್ಕೊಳ್ಳೋದು ಮುಖ್ಯ.

 

ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿರುವ ನಿಮಗೆ ನಾನು ಸದಾ ಚಿರಋಣಿ. ನನಗೆ ದೇವರು ಕೊಟ್ಟ ದೊಡ್ಡ ಉಡುಗೊರೆ ನೀವು. ವಿಶ್ವ ತಂದೆಯವರ ದಿನಾಚರಣೆ ಶುಭಾಶಯಗಳು ಅಪ್ಪಾ ಲವ್ ಯು.

 

ಪ್ರಪಂಚಕ್ಕೆ ನಮ್ಮನ್ನ ಪರಿಚಯ ಮಾಡಿಸುವುದು ಅಮ್ಮ

ನಮಗೆ ಪ್ರಪಂಚವನ್ನ ಪರಿಚಯ ಮಾಡಿಸುವುದು ಅಪ್ಪ

ಜೀವ ಅಮ್ಮಂದು/ಜೀವನ ಅಪ್ಪಂದು

ಜಗತ್ತಿನಲ್ಲಿ ಅಮ್ಮ ಎಷ್ಟೂ ಶ್ರೇಷ್ಠನೋ ಅಷ್ಟೇ ಶ್ರೇಷ್ಠ ಅಪ್ಪನ ಋಣ

ತಂದೆ ಒಂದು ದೊಡ್ಡ ನಿಧಿ. ತಂದೆಯ ಬೆವರಿನ ಒಂದು ಹನಿಕೂಡ ಮಕ್ಕಳಿಗೆ ತೀರಿಸಲು ಸಾಧ್ಯವಿಲ್ಲ.

ಜನ್ಮ ಕೊಟ್ಟೋಳು ಅಮ್ಮ ಆದ್ರೆ ಮಕ್ಕಳ ಬೇಕು ಬೇಡಗಳನ್ನೂ ನೋಡುತ್ತಾ ನಾವು ಏಗಿದ್ರೂ ಪರವಾಗಿಲ್ಲ ಮಕ್ಕಳು ಚೆನ್ನಾಗಿರ್ಬೇಕು ಅಂತಾ ಎಲ್ಲಾ ತ್ಯಾಗ ಮಾಡೋದು ಅಪ್ಪ.

ಎಲ್ಲಾ ಅಪ್ಪಂದರಿಗೂ  “ಅಪ್ಪಂದಿರ ದಿನಾಚರಣೆ”ಯ ಹಾರ್ಧಿಕ ಹಾರ್ಧಿಕ ಶುಭಾಶಯಗಳು.

 

ನನ್ನಪ್ಪ ನನ್ನವ್ವ ನನಗೆ ಸ್ಪೂರ್ತಿ. ಬದುಕು ಕಟ್ಟಿಕೊಳ್ಳಲು, ಕಷ್ಟದಲ್ಲೂ ಗೆಲುವಿಗಾಗಿ ಹಂಬಲಿಸುವ ನಡೆ ಕಲಿಸಿಕೊಟ್ಟವರು. ಓದಿದ್ದು ಕಡಿಮೆ ಆದ್ರೂ.. ನಮ್ಮ ಬದುಕು ರೂಪಿಸಿದ ಪರಿ ಅವರ್ಣೀಯ. 

ಅಪ್ಪಂದಿರ ದಿನಾಚರಣೆ ಶುಭಾಶಯಗಳು ಅಪ್ಪ.

 

Happy Father’s day ನನ್ನ ಪ್ರೀತಿಯ ಅಪ್ಪ. ನನ್ನ ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ತಂದೆಯಾಗಿ ನಿಮ್ಮ ಕೊಡುಗೆ ಅಪಾರ. ನಾನು ಕಿಂಚಿತ್ತಾದರೂ ಆದರ್ಶ, ಕರ್ತವ್ಯಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರೆ ಅದು ನನ್ನ ತಂದೆಯ ಮಾರ್ಗದರ್ಶನವೇ ಕಾರಣ. ಎಂತಹುದೇ ಸಂದಿಗ್ಧ ಪರಿಸ್ಥಿತಿ ನನಗೆ ಎದುರಾಗದಗಲೆಲ್ಲಾ ನನಗೆ ಧೈರ್ಯ ತುಂಬಿ ಮುನ್ನುಗ್ಗುವಂತೆ ಇಂದಿಗೂ ಸ್ಫೂರ್ತಿ ತುಂಬುತ್ತಿರುವುದು ನನ್ನ ಅಪ್ಪ. ಅಂತಹ ದೇವಮಾನವಗೆ ಮತ್ತು ನಾಡಿನ ಎಲ್ಲ ತಂದೆಯಂದಿರಿಗೂ ವಿಶ್ವ “ಫಾದರ್ಸ್ ಡೇ”ಯ ಹಾರ್ದಿಕ ಶುಭಾಶಯಗಳು.

 

ಅಪ್ಪ- ನಿಮ್ಮ ಕೋಪ ಕಂಡು ಹೆದರಿದ್ದೆ

ನಿಮ್ಮ ಪ್ರೀತಿಗೆ ನಾ ಕರಗಿದ್ದೆ.

ಎಲ್ಲಾ ಏಳು ಬೀಳುಗಳಲ್ಲೂ ನನ್ನ ಜೊತೆಗಿದ್ದು 

ಬಲ ತುಂಬಿದ ನಿಮಗೆ ಹ್ಯಾಪಿ ಫಾದರ್ಸ್ ಡೇ.

 

ಕೇಳಿದ್ದನ್ನೆಲ್ಲಾ ಆ ದೇವರು ಕೊಡದೇ ಇರಬಹುದು,

ಆದರೆ ಕೇಳಿದ್ದನ್ನೆಲ್ಲಾ ಕೊಡ್ಸೋ ಅಪ್ಪ ಇದ್ದಾನೆ

ವಿಶ್ ಯು ಹ್ಯಾಪಿ ಫಾದರ್ಸ್ ಡೇ ಅಪ್ಪ 

 

ಎದುರಿಗೆ ಎಷ್ಟೇ ಕೋಪ ತೋರಿಸಿದರು, ಮನಸ್ಸಿನಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವವೇ ತಂದೆ. ಆ ಪುಟ್ಟ ಜೀವಕ್ಕೆ happy father’s day.

 

ಮುಖ ನೋಡಿದರೆ ಗಾಂಭೀರ್ಯ,

ಆದರೆ ಮನಸ್ಸು ಮಗುವಿನ ತರ ನಿನ್ನದು

ಲವ್ ಯು ಅಪ್ಪ. Happy father’s day.

 

ಈಗಿನ ಬದುಕಿನ ಜಂಜಾಟದಲ್ಲಿ,

ಬಸವಳಿದು ಕುಳಿತಾಗ,

ನೆನಪಾಗೋದು ನೀನು ನಮಗಾಗಿ ಪಟ್ಟ ಕಷ್ಟ.

ಪ್ರೀತಿಯ ಅಪ್ಪನಿಗೆ happy fathers day.

 

ನೀ ಹೆಗಲ ಮೇಲೆ ಹೊತ್ತು ತೋರಿಸಿದ ಜಾತ್ರೆಯ ತೇರು,

ನಿನ್ನ ಜೊತೆಯಿದ್ದ ಸಮಯವು ನೆನಪುಗಳೀಗ ಜೋರು,

ಮಿಸ್ಸ್ ಯೂ ಅಪ್ಪ. ಹ್ಯಾಪಿ ಫಾದರ್ಸ್ ಡೇ ಅಪ್ಪ 

 

ತಂದೆಯ ಪ್ರೀತಿಯು ನಮ್ಮ ಜೀವನವನ್ನು ರೂಪಿಸುವ ಮತ್ತು ಜೀವಮಾನವಿಡೀ ಉಳಿಯುವ ಮೌಲ್ಯಗಳನ್ನು ತುಂಬುವ ಮಾರ್ಗದರ್ಶಿ ಶಕ್ತಿಯಾಗಿದೆ.

 

ತಂದೆಯ ತ್ಯಾಗ ಮತ್ತು ನಿಸ್ವಾರ್ಥತೆಯು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ ಆದರೆ ಅವರ ಮಕ್ಕಳ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ.

 

ತಂದೆಯ ಪ್ರೀತಿಯು ಸ್ಫೂರ್ತಿಯ ನಿರಂತರ ಮೂಲವಾಗಿದೆ. ಅದು ಅವರ ಮಕ್ಕಳನ್ನು ಅವರ ಕನಸುಗಳನ್ನು ತಲುಪಲು ಶಕ್ತಗೊಳಿಸುತ್ತದೆ.

Top Fathers Day Quotes in Kannada Images

ಈ ಅಪ್ಪಂದಿರ ದಿನಾಚರಣೆ ಶುಭಾಶಯಗಳ ಸಂಗ್ರಹವು (happy fathers day quotes in kannada collection) ನಮ್ಮ ಜೀವನದ ಮೇಲೆ ತಂದೆಯ ಆಳವಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಅವರ ಅಚಲವಾದ ಪ್ರೀತಿ ಮತ್ತು ಬೆಂಬಲದಿಂದ ಅವರ ಅಮೂಲ್ಯವಾದ ಮಾರ್ಗದರ್ಶನ ಮತ್ತು ಬುದ್ಧಿವಂತಿಕೆಯವರೆಗೆ, ನಮ್ಮ ತಂದೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. 

ಈ fathers day kannada quotes ಪಿತೃತ್ವದ ಸಾರವನ್ನು ಸುಂದರವಾಗಿ ಸೆರೆಹಿಡಿಯುತ್ತದೆ ಮತ್ತು ನಮ್ಮನ್ನು ರೂಪಿಸಿದಪುರುಷರನ್ನು ಗೌರವಿಸಲು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ ವಿಶ್ವ ತಂದೆಯ ದಿನಾಚರಣೆ ದಿನವು ಸಮೀಪಿಸುತ್ತಿರುವಂತೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಮ್ಮ ಜೀವನದ ಸೂಪರ್ಹೀರೋಗಳನ್ನು ಖುಷಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ. ಈ fathers day wishes in kannada collection ನಿಮಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಲು ಮತ್ತು ನಿಮ್ಮ ತಂದೆಯೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಸ್ಫೂರ್ತಿ ನೀಡಲಿ ಎಂಬುದು ನಮ್ಮ ಆಸೆ. ತಂದೆಯ ದಿನಾಚರಣೆಯ ಶುಭಾಶಯಗಳು!


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.