100+ Appa Quotes in Kannada

“ಅಪ್ಪ” ಎಂಬ ಪದದಲ್ಲಿ ಏನೋ ಒಲವು! ನಮ್ಮ ಬದುಕಿನ ಮೊದಲ ಹೀರೋ, ಪ್ರೇರಣೆ, ಮತ್ತು ಶಕ್ತಿಯ ಚಿಹ್ನೆಯಾದ ಅಪ್ಪನ ಬಗ್ಗೆ ಬರೆದಷ್ಟೂ ಸಾಲದು. ಕಷ್ಟದ ಸಂದರ್ಭಗಳಲ್ಲಿ ಹಿತೋಪದೇಶ ನೀಡುವವ, ಜೀವನದ ಪಾಠ ಕಲಿಸುವವನು ಅಪ್ಪ. ಈ ಲೇಖನದಲ್ಲಿ ತಂದೆಯ ಮಹತ್ವವನ್ನು ವ್ಯಕ್ತಪಡಿಸುವ ಹಲವು ಪ್ರೇರಣಾದಾಯಕ ಸಂದೇಶಗಳನ್ನು (best appa quotes in kannada) ನಿಮಗಾಗಿ ಸಂಗ್ರಹಿಸಿ ನೀಡಿದ್ದೇವೆ.

ತಂದೆ ತಾಯಿ ಎಂತಹ ಶ್ರೇಷ್ಠ ಜೀವಗಳೆಂದರೆ ಅವರು ಪಟ್ಟಿರುವ ಕಷ್ಟದ ಬೆವರಿನ ಒಂದು ಹನಿಯ ಬೆಲೆಯನ್ನು ಕೂಡ ಮಕ್ಕಳಿಂದ ತೀರಿಸಲು ಸಾಧ್ಯವಿಲ್ಲ. ಮಕ್ಕಳ ನಗು ಹಾಗು ಸಂತೋಷಕ್ಕೆ ತಮ್ಮೆಲ್ಲ ನೋವುಗಳನ್ನು ನುಂಗಿಕೊಳ್ಳುವವರೇ ಅಪ್ಪ ಅಮ್ಮ. ಇರುವುದರಲ್ಲೇ ಅಮೃತ ತಿನ್ನಿಸುವವಳು ಅಮ್ಮ ಇರುವುದರಲ್ಲೇ ಅಂಬಾರಿ ತೋರುಸುವವನು ಅಪ್ಪ.

ಅಪ್ಪನ ಮಾತುಗಳಲ್ಲಿ ಒಂದು ವಿಶೇಷ ಶಕ್ತಿಯಿದೆ. ಅವು ನಮಗೆ ಆತ್ಮಸ್ಥೈರ್ಯವನ್ನು ನೀಡುತ್ತವೆ, ಜೀವನದಲ್ಲಿ ಏನಾದರೂ ಸಾಧಿಸಲು ಪ್ರೇರೇಪಿಸುತ್ತವೆ. ಅವರ ಅನುಭವದಿಂದ ತೋರುವ ಪಾಠಗಳು ಅನನ್ಯವಾಗಿರುತ್ತವೆ. ಅಪ್ಪನ ಆದರ್ಶಗಳು ಮತ್ತು ಮಾರ್ಗದರ್ಶನ ನಮ್ಮನ್ನು ಜೀವನದ ಯಾತನೆಯಲ್ಲಿ ಕಂಗೊಳಿಸಲು ಸಹಾಯ ಮಾಡುತ್ತವೆ.

ಈ ತಂದೆಯ ಕುರಿತ ಉಲ್ಲೇಖಗಳ ಸಂಗ್ರಹ ಲೇಖನವು (appa quotes in kannada) ನಿಮಗೆ ಪ್ರೀತಿಯ ಆ ಕಾಳಜಿ, ಶ್ರದ್ಧೆ ಮತ್ತು ಬುದ್ಧಿಮತ್ತೆಯ ಸ್ಪರ್ಶವನ್ನು ನೆನಪಿಸುತ್ತವೆ.

ಈ ಉಲ್ಲೇಖಗಳನ್ನು ಓದಿ. ನಿಮಗೆ ಅಪ್ಪನ ಪ್ರೀತಿಯೆಲ್ಲಾ ನೆನಪಾಗಬಹುದು. ಈ ಲೇಖನ ನಿಮ್ಮ ಜೀವನದಲ್ಲಿ ಬೆಳಕು ಚೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ!

Appa Quotes in Kannada

Best Appa Quotes in Kannada

ಅಪ್ಪನ ಪ್ರತಿ ಮಾತು ನಿಮ್ಮ ಕಿವಿಗೆ ಕೇಳದೆ ಹೋದ್ರು ಪರವಾಗಿಲ್ಲ ನಿಮ್ಮ ಮನಸ್ಸಿಗೆ ಒಪ್ಪಿಸಿ. ಇಂದಲ್ಲಾ ನಾಳೆ ಅಪ್ಪನ ಮಾತು ಕೇಳ್ಬೇಕಿತ್ತು ಅನ್ನೋ ಸಮಯದಲ್ಲಿ ಅವನು ನಿಮ್ಮೊಟ್ಟಿಗಿರುವುದಿಲ್ಲ. ಅಪ್ಪನ ಪ್ರತಿ ಮಾತು ನಿಮ್ಮನ್ನು ಆ ದಿನ ಕದಡುತ್ತದೆ. ದಾರಿಯುದ್ದಕ್ಕು ಕಣ್ಣೀರಿಟ್ಟು ಅಪ್ಪನ ಕಾಲು ತೊಳೆದು ಒದ್ದೆಯಾಗುವಷ್ಟು ಕಣ್ಣೀರಿದ್ದರು ನಡೆಯಲು ಅಪ್ಪನ ಹೆಜ್ಜೆ ಆ ದಾರಿಗೆ ಇಳಿಯದಷ್ಟು ದೂರ ಸಾಗಿರುತ್ತದೆ. ಅಪ್ಪನೆಂಬ ಆಲದ ಮರವು ಅಪೇಕ್ಷೆಗಳೇ ಇಲ್ಲದೆ ತಾನು ಸುಡುತ್ತಾ ನಮ್ಮನ್ನು ಬಿಸಿಲಿಗಿಡದೆ ತನ್ನ ಒಡಲೊಳಗಿಟ್ಟು ಕಾಯುತ್ತಿರುವವ ಜಗತ್ತಿನ ಏಕೈಕ ನಿಸ್ವಾರ್ಥ ಜೀವ.

 

ಅಪ್ಪನ ಮಾತು…!!

ನೂರಾರು ಕನಸುಗಳನ್ನು ಧಾರೆ ಎರೆದು ನನ್ನ ಬಣ್ಣದ ಕನಸಾಗಿದ್ದ ಜೀವದ ಮಗಳನ್ನು ಮದುವೆ ಮಾಡಿ ಕಳುಹಿಸುತ್ತಿದ್ದೇನೆ…!! ಕೇಳಿದ್ದನ್ನೆಲ್ಲ ಕೊಟ್ಟೆ, ನನ್ನ ಮಗಳ ಬದುಕಲ್ಲಿ ಕೊರತೆ ಕೊಟ್ಟಿಲ್ಲ… ನಮ್ಮ ಮನೆಯ ದೀಪ ನಿಮ್ಮ ಮನೆಯನ್ನು ಬೆಳಗಲು ನೀಡುತ್ತಿದ್ದೇನೆ… ಜೋಪಾನ ಮಾಡಿ…!! ಅವಳು ಮಗಳುಮಾತ್ರ ಅಲ್ಲ ನನ್ನ ತಾಯಿ ಕೂಡಾ…!! ಅವಳು ಹೇಳಿದ್ದು ನಡೆಯಲ್ಲ, ಕೇಳಿದ್ದು ಸಿಗಲ್ಲ… ಸಹಿಸಿಕೊಂಡು ಹೊಂದಿಕೊಂಡು ಹೋಗಬೇಕು… ಮಗಳ ಬದುಕು ಹೀಗೇ..

 

ಅಪ್ಪನ ಕಿವಿ ಮಾತು… 

ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ಮಗಳಿಗೆ ಅಪ್ಪ ಒಂದು ಮಾತು ಹೇಳಿದ.!!

 ‘ಗಂಡನ ಜೊತೆ ಪ್ರತಿ ಜಗಳದಲ್ಲೂ, ಮೊದಲು ನೀನೇ ಸೋಲು.ಯಾಕಂದ್ರೆ, ಜೀವನದಲ್ಲಿ ನೀನೇ ಗೆಲ್ಲುತಿಯಾ ಅಂತ…!!!

 

ಒಂದೊಳ್ಳೆಯ ಮಾತು…… 

ತಂದೆ ಎಂದರೆ ಹೆಬ್ಬೆರಳು ಇದ್ದ ಹಾಗೆ, ಆ ಹೆಬ್ಬೆರಳು ಇಲ್ಲದೆ ಉಳಿದ ನಾಲ್ಕು ಬೆರಳುಗಳಿಂದ ಯಾವುದೇ ಕೆಲಸ ಮಾಡೋದು ಆಗುಸುದಿಲ್ಲ ಮಾಡುವುದು ತುಂಬ ಕಷ್ಟ. ಅಪ್ಪ ಅಂದರೆ ವಿಶ್ವಾಸ, ಪ್ರತಿಯೊಬ್ಬ ಅಪ್ಪನ ಮುಗುಳುನಗೆಯ ಹಿಂದೆ ಪುಣ್ಯವಂತಿಯಾದ ಮಗಳ ನಗು ಕೂಡ ಅಡಗಿರುತ್ತದೆ. 

 

ಮಾತಿಗೆ ಮಾತು ಬೆಳೆಸುತ್ತಾ ನೋವು ಮಾಡಿಕೊಂಡು ದೂರವಾಗಿ, ಮೌನಿಯಾಗುವ ಬದಲು; ಮಾತೇ ಆಡದೆ ಮೌನಿಯಾಗಿ ಸುಮ್ಮನಿರುವುದೇ ಒಳ್ಳೆಯದು..!

 

ಬರೆದಿಟ್ಟಂತೆ ಬದುಕಲು ಸಾಧ್ಯವಿಲ್ಲ ಆದರೆ ಬರೆದಿಡುವಂತೆ ಬದುಕಬಹುದು..! 

 

ಎಷ್ಟೇ ಓದಿ ಪದವಿ ಗಳಿಸಿದರು, ನಮ್ಮ ಮಾತು ಮತ್ತು ನಡವಳಿಕೆ ನಾವು ಕಲಿತ ನಿಜವಾದ ವಿದ್ಯೆ ತಿಳಿಸಿಕೊಡುತ್ತದೆ..!!

 

ತುಂಬಾ ನೋವು ಕಂಡವನಿಗೇನೇ.. ತಾಳ್ಮೆಯಿಂದ ಇರೋದಕ್ಕಾಗೋದು.. ಏನೇ ಆದರೂ ಎದುರಿಸೋಕೆ ಆಗೋದು ದೇವರ ಇರುವಿಕೆ ಅರಿಯೋಕಾಗೋದು.. ಸಮಯ ಬರೋವರೆಗೂ ಕಾಯೋಕಾಗೋದು.. ವಿಧಿಯ ಆಟಗಳು ಅರ್ಥ ಆಗೋದು..!! 

 

ಒಳ್ಳೆ ಮನಸ್ಸಿದ್ದವರಿಗೆ ತುಂಬಾ ಕಷ್ಟ ಸಿಗುತ್ತದೆ.. ಆದರೆ ಕೊನೆಗೆ ಖಂಡಿತಾ ಒಳ್ಳೆಯದೇ ಆಗುತ್ತದೆ ಅದಕ್ಕೆ ಇತಿಹಾಸವೇ ಸಾಕ್ಷಿ..!! 

 

ಅಂದುಕೊಳ್ಳದೇನೇ ಎಲ್ಲಾ ಆಗುತ್ತದೆ ಏನೇ ಆದರೂ ತಲೆ ಕೆಡಿಸಿಕೊಳ್ಳಬಾರದು.. ಭರವಸೆಯೇ ಇಲ್ಲವೆಂದಾಗ ಯಾರ ಮುಖಾಂತರವಾದರೂ ಭಗವಂತ ಬದುಕಿಗೆ ದಾರಿ ತೋರಿಸುತ್ತಾನೆ ಧೈರ್ಯವಾಗಿರಬೇಕು ಹಾಗೂ ಪ್ರತೀ ಕ್ಷಣವನ್ನು ಉತ್ತಮ ರೀತಿಯಲ್ಲಿ ಜೀವಿಸಬೇಕು…!! -ಆತ್ಮೀಯಾ ಮಾತು

 

ದಿನಕ್ಕೊಂದು ಬಣ್ಣ ಕ್ಷಣಕ್ಕೊಂದು ಮಾತು ಬದಲಾಯಿಸಿ ಬದುಕುವವರಿಗೆ ಈ ಪ್ರಪಂಚದಲ್ಲಿ ಬೆಲೆ ಜಾಸ್ತಿ 

 

ನನ್ನ ಪ್ರಪಂಚ ನೀನು ಅಪ್ಪ ಎಷ್ಟು ಹೊಗಳಿದರು ಸಾಲದು ನಿನ್ನ ತಾಗ್ಯಕ್ಕೆ ನಿನ್ನ ವರ್ಣಿಸಲು ಪದಗಳೇ ಸಾಲುತ್ತಿಲ್ಲ, ಏನೆಂದು ಹೇಳಲ್ಲಿ ನಾ, ನೀ ಕೊಟ್ಟ ಭಿಕ್ಷೆ ಈ ಜನುಮ, ಅಪ್ಪ i love you.

 

ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೂ ಜಾದೂಗಾರ ಅಪ್ಪ! ಹಗಲು ಬೆವರಿನ ಕೂಲಿಕಾರ ರಾತ್ರಿ ಮನೆಯಲಿ ಚೌಕಿದಾರ ಎಲ್ಲ ಕೊಡಿಸುವ ಸಾಹುಕಾರ ಅಪ್ಪ! ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ ನಿಮ್ಮ ಪ್ರೀತಿ ಮುಂದೆ ಏನಿಲ್ಲಾ….. ಅಪ್ಪ i love you ಪ!

 

Love you pappa. You’re my favorite superhero.You’re my first love. ಅಪ್ಪ ನೀನೇ ಎಲ್ಲ.. ನನ್ನ ಕನಸು, ಕಲ್ಪನೆ, ಆಸೆ, ಆಕಾಂಕ್ಷೆ ಎಲ್ಲಾ ನೀನೇ…

 

ನನ್ ಅಪ್ಪಾ ಹೇಳಿದ್ದು ಒಂದ್ ಮಾತು….. ಬದುಕು ಬೇಸರ ಆಗೋ ರೀತಿ ಬದುಕಬೇಡ… ಮಗನೇ. ! ನಿನ್ನ ಹಣೆಬರಕೂ ಬೇಸರ ಆಗೋ ರೀತಿ ಮುಂದೇ ಸಾಗುತ್ ಇರಲಿ ಎಂದು… Love  you ಅಪ್ಪ. 

 

ಇರುವುದರಲ್ಲೇ ಅಮೃತವನ್ನು ತಿನ್ನಿಸುವವಳು ಅಮ್ಮ

ಇರುವುದರಲ್ಲೇ ಅಂಬಾರಿ ತೋರಿಸುವುದು ಅಪ್ಪ

LOVE YOU MOM DAD

 

ಅಪ್ಪ ಅಂದರೆ ಗಂಭೀರತೆಯ ಪ್ರತಿರೂಪ. 

ಭರವಸೆ ತುಂಬಿದ ಮೊದಲ ಸ್ನೇಹಿತ

ಹೀರೋ ಬದುಕು ಕಲಿಸಿ ಕೊಟ್ಟ ಮಾರ್ಗದರ್ಶಕ

ತನ್ನ ಅಗತ್ಯತೆಗಳನ್ನ ಮರೆತು ಮಕ್ಕಳ ಭವಿಷ್ಯಕ್ಕೆ ಪ್ರತಿ ಕ್ಷಣವು ಹೋರಾಡುವ ತ್ಯಾಗ ಪುರುಷ.

ಸ್ನೇಹ, ಶಿಸ್ತು, ಅಕ್ಕರೆ, ಆದರ್ಶಗಳನ್ನ ಕಲಿಸಿಕೊಟ್ಟ ನನ್ನ ಪ್ರೀತಿಯ ತಂದೆಯವರಿಗೆ ಪ್ರೀತಿ ಪೂರ್ವಕ ಕೃತಜ್ಞತೆಗಳು.

 

ಕಣ್ಣಿಗೆ ಕಾಣುವ ನಿನ್ನನ್ನ ಬಿಟ್ಟು ಕಂಡ ಕಂಡ ಕಲ್ಲಿಗೆ ಕೈ ಮುಗಿದು ಕೈ ಚಾಚಿ ಬೇಡಿದೆ… ಏನನ್ನು ಕೇಳದ ನೀನು ನನಗಾಗಿ ನಿನ್ನ- ಜೀವವನ್ನೇ ಮುಡಿಪಾಗಿಟ್ಟೆ.. ಏಷ್ಟು ನೋವು ಇದ್ದರೂ ಕೂಡ ನೀನು ನಿನ್ನ ಕಣ್ಣೀರನ್ನು ಮರೆಮಾಚಿಬಿಟ್ಟೆ…

 

ಅಪ್ಪನ ಪುಟ್ಟ ಜಗತ್ತು ನಾನಾದರೆ ನನ್ನ ವಿಶಾಲ ಜಗತ್ತು ಅಪ್ಪಾ.

 

ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾದ ಅಪ್ಪ ನಿಮಗೆ ನಾನು ಸದಾ ಋಣಿ. ನನ್ನ ಪಾಲಿಗೆ ದೇವರು ಕೊಟ್ಟ ದೊಡ್ಡ ಉಡುಗೊರೆ ನೀವು 

 

ಬಡವನಾಗಿ_ಹುಟ್ಟಿಸಿದ್ದು ಆ ಬ್ರಹ್ಮ ಆದರೆ ರಾಜನಾಗಿ ಬೆಳೆಸಿದ್ದು ನಮ್ ಅಪ್ಪ ಅಮ್ಮ 

 

ಮುಂದೆ ಎಷ್ಟೇ ಕೋಪ ತೋರಿಸಿದರು, ಮನಸಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವ ನಮ್ ಅಪ್ಪ ಅಮ್ಮ love youu .

 

ಅಪ್ಪ ಎಂದರೆ ಆ ಶಬ್ದ ನನ್ನ ನಾಲಿಗೆಯಲ್ಲಿ ಯವಗಲು ಇರುತ್ತೆ

ಅಪ್ಪಾ ಅಂದ್ರೆ ತನ್ನ ಸುಖ ದುಃಖ್ಖ ಇಲ್ಲಾವನ್ನು ಬಿಟ್ಟು ತನ್ನ ಮಕ್ಕಳಿಗಾಗಿ ಇಲ್ಲಾ ಸರ್ವಸ್ವ ತ್ಯಾಗ ಮಾಡುತ್ತಾನೆ. ತನ್ನ ಜೀವನವನ್ನೇ ಮುಡಿಪಾಗಿ ಇಡುತ್ತಾನೆ. ಹೊಟ್ಟೆಯ ಒಳಗೆ ತಾಯಿ ಕಾಯುತಾಳೆ ಅದರೆ ಹೇಗೇಲ ಮೇಲೆ ಕೂರಿಸಿ ಕಾಯಿವವನೇ ಅಪ್ಪ .. ತಾನು ನೋಡದಿಲ್ಲದ್ದನ್ನು ತೋರಿಸುವವನೇ ಅಪ್ಪ .. 

 

ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯ, ಕರುಣೆ, ಇವೆಲ್ಲವುಗಳ ಸಮಾನಾರ್ಥಕ ಪದವೇ “ಅಪ್ಪ”

 

ಹೆಣ್ಣು ಮಕ್ಕಳು ಅತಿಯಾಗಿ ತಂದೆಯನ್ನು ಪ್ರೀತಿಸುತ್ತಾರೆ ಏಕೆ ಎಂದರೆ ಈ ಪ್ರಪಂಚದಲ್ಲಿ ತನ್ನನ್ನು ನೋಯಿಸದ ಏಕೈಕ ಪುರುಷ ಎಂದರೆ ಅದು ತಂದೆ ಮಾತ್ರ ಲವ್ ಯು ಅಪ್ಪ 

 

ಅಪ್ಪ ಅನ್ನೋ ಅದ್ಬುತ ಸಾಲು 

ತಪ್ಪು ಮಾಡಿದಾಗ ತಿದ್ದಿ ನಡೆಸಿದ ಕಾರುಣ್ಯಮೂರ್ತಿ

ನನ್ನ ಕನಸಿಗೆ ಕಾವಲಾಗಿ ನಿಂತಿರುವೆ ನನಗೆ ನೀನೇ ಸ್ಫೂರ್ತಿ

ನಿರಾಕಾರವಾದದನ್ನು ಕಣ್ಣೆದುರು ತಂದು ಕೊಡುವ ಸಾಕಾರ ಮೂರ್ತಿ

ನಿನ್ನ ಮನದ ಪ್ರೀತಿಯ ಭಾವಕೆ ನಾ ತಂದು ಕೊಡುವೆ ಸದಾ ಕೀರ್ತಿ

ಎಷ್ಟು ಬರೆದರೂ ಪದಗಳೇ ಸಾಲುತ್ತಿಲ್ಲ ಅಪ್ಪ ನಾ ನಿನ್ನ ಪ್ರೀತಿ.

 

ಅಪ್ಪ ಅನ್ನೋ ಧೈರ್ಯ ಜೊತೆಗೆ ಇದ್ದಾಗ, ಅಹಂಕಾರ ಅನ್ನೋ ಆತ್ಮವಿಶ್ವಾಸ ಕೂಡ ಅತಿಯಾಗಿಯೇ ಕಾಣಿಸುತ್ತೆ! 

 

Miss U Appa Quotes in Kannada

ತಾಯಿ ಇರುವರೇಗು ಹಸಿವು ಗೊತ್ತಾಗುವದಿಲ್ಲ ತಂದೆ ಇರುವ ತನಕ ಜವಾಬ್ದಾರಿ ಗೊತ್ತಾಗುವದಿಲ್ಲ. ಐ ಲವ್ ಯೂ ಅಪ್ಪ ಅಮ್ಮ Miss you ಅಪ್ಪ.

 

ಅಪ್ಪ ಅಂದರೆ ಬೆನ್ನೆಲುಬು , ಅಪ್ಪ ಅಂದರೆ ಆಸರೆ , ಅಪ್ಪ ಅಂದರೆ ಆಕಾಶ. . . ಅಪ್ಪನ ಬಗ್ಗೆ ಹೇಳಹೊರಟರೆ ಅದು ಮುಗಿಯದ ಪುಸ್ತಕ. I LOVE YOU APPA.

 

ಹರಸಿ ಹಾರೈಸಿ ಮುದ್ದಿಸಿದ್ದು ಅಮ್ಮನಾದರೂ ಪ್ರೀತಿ ವ್ಯಕ್ತಪಡಿಸಲಾಗದೆ ಮೂಕನಾಗಿದ್ದು ಅಪ್ಪ! ನಾನು ಕಂಡ ದೇವರು ಅಮ್ಮನಾಗಿದ್ದರು ಆ ದೇವರಿಗೂ ದೇವರಾಗಿದ್ದವನು ಅಪ್ಪ! I LOVE YOU AND MISS U APPA.

 

ಅಪ್ಪ… 

ತಾನು ಕಾಣದ ಜಗವನ್ನು ತನ್ನ ಮಕ್ಕಳಿಗೆ ತೋರಿಸಿದವನು…

LOVE YOU APPA…

 

ಬೇಡಿದ್ದಿನ್ನೆಲ್ಲ ಕೊಡುವವನು ದೇವರಾದರೆ…. ಬೇಡದೆ ಬಯಸಿದ್ದೆಲ್ಲವ ಕೊಡುವವನು ಅಪ್ಪ 

ಅನಿಸಬಹುದು ಇವರಿಗೆ ಕೋಪ ಎನ್ನುವ ರೀತಿ ಮನದಲ್ಲಿ ಹೊತ್ತಿರುವರು ಸಮುದ್ರದಷ್ಟು ಪ್ರೀತಿ !! 

ಅದರೆ ಪ್ರಪಂಚಕ್ಕೆ ನೀವು ಎಲ್ಲರಂತೆ ಒಬ್ಬ ಅಪ್ಪ ಅದರೆ ನನಗೇ ನೀವೇ ಪ್ರಪಂಚ.

ಅಪ್ಪ I love you appa.

 

ಹೆತ್ತದ್ದು ಅಮ್ಮನಾದರೂ ಒಳಗೊಳಗೆ ಅತ್ತದ್ದು ಅಪ್ಪ! 

ಹುಟ್ಟಿದಾಗ ಕೂಗಿದ್ದು ಅಮ್ಮನಾದರೂ ಬಿಗಿದಿಟ್ಟ ಉಸಿರು ಬಿಟ್ಟದ್ದು ಅಪ್ಪ! 

ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ ಹೊಟ್ಟೆ ಕಟ್ಟಿ ದುಡಿದು ತಂದಿದ್ದು ಅಪ್ಪ! 

ಕೇಳಿ ಕೇಳಿದ್ದನ್ನ ಕೊಡಿಸಿದ್ದು ಅಮ್ಮನಾದರೂ ಕೊಡಿಸಲು ಕಾಸು ಗಳಿಸಿದವನೆ ಅಪ್ಪ! 

ಹರಸಿ ಹಾರೈಸಿ ಮುದ್ದಿಸಿದ್ದು ಅಮ್ಮನಾದರೂ ಪ್ರೀತಿ ವ್ಯಕ್ತಪಡಿಸಲಾಗದೆ ಮೂಕನಾಗಿದ್ದು ಅಪ್ಪ! 

ನಾನು ಕಂಡ ದೇವರು ಅಮ್ಮನಾಗಿದ್ದರು ಆ ದೇವರಿಗೂ ದೇವರಾಗಿದ್ದವನು ಅಪ್ಪ! 

I LOVE YOU AND MISS U APPA.

 

ಅಪ್ಪ ಎಂದಾಕ್ಷಣ ಪ್ರೀತಿ, ಮಮತೆ, ದೃಢತೆ, ಸ್ಥಿರತೆ, ನೆಮ್ಮದಿ. ಜಗತ್ತನ್ನು ಗೆಲ್ಲೂತೀನಿ ಎಂಬ ನಂಬಿಕೆ. I love you Appa 

 

ಅಮ್ಮ 9 ತಿಂಗಳು ಹೊತ್ತು ಎತ್ತು ಸಾಕುವರು, ಆದರೆ ಅಪ್ಪ ನಾವು ಹುಟ್ಟಿದಾಗಿನಿಂದ ನಾವು ಸಯೋವರ್ಗು ಒಂದು ಕಷ್ಟನು ಬರ್ದೇ ಇರೋ ತರ ನೋಡ್ಕೋತಾರೆ,, ಅಮ್ಮ ಕೈ ತುತ್ತು ಕೊಟ್ಟು ಊಟ ಮಾಡಿಸಿದ್ರೆ, ಅಪ್ಪ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಪ್ರಪಂಚನೆ ತೋರ್ಸ್ತಾರೆ.. 

ಅಪ್ಪನ ಬಗ್ಗೆ ಹೇಳಲು ಪದಗಳೇ ಸಾಲೋದಿಲ್ಲ.. I love you appa

 

ದೇವರೂ ಮತ್ತು ಅಪ್ಪನ ನಡುವೆ ಎರಡೂ ವ್ಯತ್ಯಾಸಗಳಿವೆ. ಒಂದನೇದು ದೇವರು ಕಾಣಿಸುವುದಿಲ್ಲ, ಅಪ್ಪ ಕಾಣುವ ದೇವರು ಎರಡನೇದು ದೇವರು ಬೇಡಿದ್ರೆ ಮಾತ್ರ ಕೊಡ್ತಾನೆ, ಅಪ್ಪ ಕೇಳುವ ಮುಂಚೆನೇ ಕೊಡ್ತಾರೆ. Love you PAPPA

 

ಅಪ್ಪ ಅಪ್ಪ ತನ್ನ ಸಂಸಾರಕ್ಕಾಗಿ ದಿನವಿಡೀ ದುಡಿಯುತ್ತಾರೆ ತನಗೆ ಎಷ್ಟೇ ನೋವಿದ್ದರೂ ಯಾರಿಗೂ ಹೇಳುವುದಿಲ್ಲ ತನ್ನ ಮಕ್ಕಳನ್ನು ಸದಾ ಖುಷಿಯಾಗಿ ನೋಡಿಕೊಳ್ಳುವುದೇ ಅವರ ಜೀವನದ ಗುರಿಯಾಗಿರುತ್ತದೆ. I love and Miss u appa.

 

ತಂದೆ ಪ್ರೀತಿ  

ಅಪ್ಪ ಎಂದರೆ ಭಯ.! 

ಅಪ್ಪ ಎಂದರೆ ಹುದುಗಿದ ಪ್ರೀತಿ..!! 

ಏನನ್ನಾದರೂ ಕೇಳಲು ಹಿಂಜರಿಕೆ, ಬೈಯುವರೋ ಎನ್ನುವ ಆತಂಕ…!!! 

ಅವರ ಮುಂದೆ ಧ್ವನಿ ಎತ್ತಲು ನಡುಕ….!!!! 

ಅವರು ಒಮ್ಮೆ ನಕ್ಕು ಮಾತಾಡಿದಾಗ ತಿಳಿಯುವುದು ಇದೆಲ್ಲಾ ಭಯವಲ್ಲ ಅವರ ಮೇಲಿರುವ ಗೌರವ ಎಂದು….!!!!! Love u paaa…

 

ಪ್ರತಿ ತಂದೆಗೆ ತನ್ನ ಮಗಳೆ ಬಂಗಾರ ಹಲವಾರು ಸಲ ತನ್ನ ಪತ್ನಿಯ ಮೇಲೆ ತೋರಿಸುವ ಪ್ರೀತಿಗಿಂತೆ ಮಗಳ ಮೇಲೆ ಅಪಾರ ಪ್ರೇಮ ಹಂಚುವುದು ತಂದೆಗೆ ಮಾತ್ರ ಸಾಧ್ಯ…. ಮಗಳು ಏನಾದರೂ ಕೇಳಿದರೆ ಇಲ್ಲ ಎಂದು ಹೇಳದ ಏಕೈಕ ಜೀವಿ ತಂದೆ…… Love  you and Miss you ಅಪ್ಪ. 

 

ನಂಗೆ ದೇವ್ರು ಕೋಟ ವರ ಅಂದ್ರೆ ನೀವೇ ಈ ಜನ್ಮದಲ್ಲಿ ನಿಮ್ ಋಣ ತೀರಿಸಲು ಅಗಲ್ಲ ಅಪ್ಪ. ನಂಗೆ ಒಂದೇ ಆಸೆ ನನ್ ಕೊನೆ ಕ್ಷಣದಲ್ಲಿ ನಿಮ್ ಜೋತೆ ಇರ್ಬೇಕು Love u lots pappa.

ಇದನ್ನೂ ಓದಿ:

“ಅಪ್ಪ” ಎಂಬ ಸಂಬಂಧವನ್ನು ಶಬ್ದಗಳಲ್ಲಿ ಸೀಮಿತಗೊಳಿಸಲು ಸಾಧ್ಯವಿಲ್ಲ. ಆದರೆ ಈ ತಂದೆಯ ಕುರಿತ ಉಲ್ಲೇಖಗಳು (appa quotes in kannada) ಮೂಲಕ ಆ ಭಾವನೆಗೆ ಸ್ವಲ್ಪ ಹತ್ತಿರವಾಗಲು ಪ್ರಯತ್ನಿಸಿದ್ದೇವೆ. ಅಪ್ಪನ ಪ್ರೀತಿ, ತ್ಯಾಗ, ಮತ್ತು ಮಾರ್ಗದರ್ಶನ ನಮ್ಮ ಬದುಕಿನ ಮೂಲಸ್ಥಂಭಗಳಾಗಿವೆ. ಅವರ ಮಾತುಗಳು ಕೇವಲ ಮಾತಲ್ಲ, ಬಾಳನ್ನು ಬದಲಾಯಿಸುವ ದೀಪಸ್ತಂಭಗಳಂತೆ ನಮ್ಮನ್ನು ಸತತವಾಗಿ ಪ್ರೇರೇಪಿಸುತ್ತವೆ.

ಈ ಲೇಖನ ನಿಮಗೆ ಅಪ್ಪನ ಮಾತುಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿರುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಜೀವನದಲ್ಲಿಯೂ ಅಪ್ಪನ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸೋಣ!

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.