ನಮ್ಮ ಜೀವನದಲ್ಲಿ ಹಣವು ಪ್ರಮುಖ ಪಾತ್ರವಹಿಸುತ್ತದೆ. ಅದು ನಾವು ಜೀವನವನ್ನು ಸುಖಕರವಾಗಿ ನಡೆಸಲು, ನಮ್ಮ ಆಕಾಂಕ್ಷೆಗಳನ್ನು ಸಾಧಿಸಲು, ಮತ್ತು ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾಗುತ್ತದೆ. ಆದರೆ ಕೆಲವೊಮ್ಮೆ ಹಣವು ಪ್ರೀತಿ, ಸಂಬಂಧಗಳು ಮತ್ತು ಶಾಂತಿಯಂತಹ ಜೀವನದ ನಿಜವಾದ ಮೌಲ್ಯಗಳನ್ನು ಮರೆಸುತ್ತದೆ.
ಹಣವು ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದ್ದರೂ, ಇದು ಕೊಡುವ ನೋವುಗಳನ್ನು ಮರೆಮಾಚಲು ಸಾಧ್ಯವಿಲ್ಲ. ಪ್ರಪಂಚದ ಬಹುತೇಕರು ಒಪ್ಪುವಂತದ್ದು, ಹಣವು ಕೇವಲ ಜೀವನವನ್ನು ಸುಧಾರಿಸುತ್ತದೆ, ಆದರೆ ಇದರಿಂದ ಜೀವನದ ಸಂಪೂರ್ಣತೆಯನ್ನು ಅಥವಾ ಶ್ರೇಷ್ಟತೆಯನ್ನು ಪಡೆಯಲು ಸಾಧ್ಯವಿಲ್ಲ.
ಈ ಲೇಖನದಲ್ಲಿ ನಾವು ಹಣವು ಜೀವನದಲ್ಲಿ ಯಾವ ರೀತಿಯ ಸಂತೋಷ ಮತ್ತು ನೋವನ್ನು ತರಬಹುದು ಎಂಬುದನ್ನು ವಿವಿಧ sad quotes about money in kannadaಗಳ ಮೂಲಕ ಮನವರಿಕೆ ಮಾಡಲಿದ್ದೇವೆ. ಈ ಹಣ ಮತ್ತು ಸಂಬಂಧದ ದ ಕುರಿತ ಸಂದೇಶಗಳು (relationship and money quotes in kannada) ನಿಮಗೆ WhatsApp, Instagram, Facebook, ಅಥವಾ ಇನ್ಯಾವುದೇ ನಿಮ್ಮ ಪ್ರೀತಿಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಉತ್ತಮವಾಗಿದೆ.
Table of Contents
Sad Quotes About Money in Kannada
ಹಣ ಇದ್ದರೆ ಗುರುತಿಸುತ್ತಾರೆ,
ನಡತೆ ಮತ್ತು ಗುಣ ಇದ್ದರೆ ಸಮಾಜ ಗೌರವಿಸುತ್ತದೆ.. .
“ಎಲ್ಲಿ ಹಣವಿರುತ್ತದೋ ಅಲ್ಲಿ ಮಿತ್ರ”
“ಎಲ್ಲಿ ಹಣವಿರುತ್ತದೋ ಅಲ್ಲಿ ಬಂಧುಗಳು”
“ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು”
“ಹಣವಿದ್ದವನು ಎಲ್ಲರನ್ನು ಆಕರ್ಷಿಸುತ್ತಾನೆ”
“ಹಣವಿದ್ದವನು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾನೆ”.
– ಚಾಣಕ್ಯ
ಪ್ರಾಮಾಣಿಕತೆಯಿಂದ ಹಣ ಸಂಪಾದಿಸುವ ವ್ಯಕ್ತಿಗಳು ಯಾವಾಗಲೂ ಬಡತನದಲ್ಲೇ ಉಳಿಯುತ್ತಾರೆ
ಹಣ ಮಾತನಾಡುತ್ತದೆ ಎಂದು ಜನರು ಹೇಳುತ್ತಾರೆ, ಆದರೆ ಹಣ ಮಾತನಾಡುವುದನ್ನು ನಾವು ನೋಡಿಲ್ಲ. ಹೌದು, ಅನೇಕ ಜನರು ಮೌನವಾಗಿರುವುದನ್ನು ನಾನು ನೋಡಿದ್ದೇನೆ.
ಇದು ದುಡ್ಡಿಗೆ ಪ್ರಾಮುಖ್ಯತೆ ನೀಡುವ ಸಮಾಜ.
ಸ್ನೇಹ ಪ್ರೀತಿ ನಂಬಿಕೆ ನೋಡೋ ಮಂದಿ ಕಡಿಮೆ..!
ದುಡ್ಡಿದ್ರೆ ಸಕ್ಕರೆಗೆ ಇರುವೆ ಮುತ್ತಿದ ಹಾಗೇ ಎಲ್ಲರೂ ಇರ್ತಾರೆ.
ಅಪ್ಪ ಅಮ್ಮ ವಯಸ್ಸು ಇರುವ ತನಕ …
ಅಣ್ಣ, ಅಪ್ಪ ಅಮ್ಮ ಇರು ತನಕ…
ತಂಗಿ ಮದುವೆ ಆಗೋ ತನಕ..
ಇನ್ನು ಪ್ರೀತಿ ನಮ್ಮ ಕೈ ಅಲ್ಲಿ ಎಷ್ಟು ಹಣ ಇದೆ ಅಲ್ಲಿಯ ತನಕ..
ಇನ್ನು ಸ್ನೇಹ ಕಷ್ಟ ಬರೋ ತನಕ..
ಇನ್ನು ಚಪ್ಪಲಿ ಸವೆದೂ ಹೋಗುವ ತನಕ
ಆದರೆ ನಮ್ಮ ಆತ್ಮ ಕೊನೆ ಉಸಿರು ಇರುವವರೆಗೂ ಇರುತ್ತೆ….!
“ನೀನು” ಎಲ್ಲಿಯವರೆಗೂ ಉಪಯೋಗಕ್ಕೆ ಬರುತ್ತಿಯೋ, ಅಲ್ಲಿಯವರೆಗೂ ಜನ ನಿನ್ನನ್ನು ಪ್ರೀತಿಸುತ್ತಾರೆ.
ನೀನು ಉಪಯೋಗಕ್ಕೆ ಬರುವುದಿಲ್ಲ ಎಂದ ತಕ್ಷಣವೇ ನಿನ್ನನ್ನು ಬಿಟ್ಟು, ಹಣ ಇರುವವರ ಬಳಿ ಅಥವಾ ಉಪಯೋಗ ಇರುವವರ ಬಳಿ ಓಡಿ ಹೋಗುತ್ತಾರೆ. ನೆನಪಿಟ್ಟುಕೋ.
ಹಣ ಕಷ್ಟದಿಂದ ಮಾತ್ರ ಗಳಿಸಬಹುದು.
ಸಾವಿನಿಂದ ಅಲ್ಲ.
ಈಗಿನ ಕಾಲದಲ್ಲಿ ಹಣ ಮತ್ತು ಸೌಂದರ್ಯವಷ್ಟೇ ಮುಖ್ಯ ಒಳ್ಳೆಯ ನಡತೆ ಮುಖ್ಯವಲ್ಲ.
ಜನರು ನಿಮ್ಮ ಭಾವನೆಗಿಂತ ನಿಮ್ಮ ಹಣದ ಸ್ಥಿತಿಯನ್ನು ನೋಡುತ್ತಾರೆ.
ಕಲಿಯುಗ ಅನ್ನೋದು ಇದಕ್ಕೇನೇ ಅಲ್ವಾ.
ಹಣ ಎಷ್ಟಿದ್ದರೇನು?
ಋಣ ಇದ್ದಷ್ಟೇ ಜೀವನ.
ಗುಣಕ್ಕೆ ಇಲ್ಲಿದೆ ಮೌಲ್ಯ,
ಉಳಿದುದವೆಲ್ಲ ಮೌನ.
ಹಣವೇ ಎಲ್ಲಾ
ಹಣ ಇಲ್ಲದೇ ಏನು ಇಲ್ಲಾ.
ಹಣ ಆಸ್ತಿ ನೋಡಿ ಬಂದವಳು, ಅವೆರಡು ಇರೋವರೆಗೇ ಮಾತ್ರ ಜೊತೆ ಇರ್ತಾಳೆ
ಪರಿಸ್ಥಿತಿ ನೋಡಿ ಬಂದವಳು ಕೊನೆವರೆಗೂ ಜೊತೆ ಇರ್ತಾಳೆ.
ಹಣದಿಂದ ನೆಮ್ಮದಿ ಹುಡುಕಲು ಹೋಗಬೇಡಿ.
ಪ್ರೀತಿ ವಿಶ್ವಾಸದಲ್ಲಿ ನೆಮ್ಮದಿ ಹುಡುಕಿ.
ನೆಮ್ಮದಿ ಇಲ್ಲದ ಜೀವನ ಎಷ್ಟೇ ಹಣವಿದ್ದರೂ ವ್ಯರ್ಥ.
ಹಣ ಇದ್ದವನೇ ದೊಡ್ಡಪ್ಪ.
ಏನು ಹೇಳಲಿ ನಾ ಹಣವೆ ನಿನ್ನಯ ಗುಣವ
ಹಣ ಇಲ್ಲದವ ನಿಜ ಹೆಣವೆ ಆಗುವ.
Peaceful ಲೈಫ್ ಗಿಂತ ಹಣ , ಅಂತಸ್ತು ಯಾವುದು ದೊಡ್ಡದಲ್ಲ
ಹಣನ ಎಣಿಸಬಹುದು
ಆದ್ರೆ ಗುಣನ ಎಣಿಸಕ್ಕೆ ಸಾಧ್ಯವಿಲ್ಲ.
ಹಣ ಸಂಪಾದನೆಗಿಂತಾ, ಜನ ಸಂಪಾದನೆ ಇರಬೇಕು.
ಹಣ ಇದ್ದವ ಶ್ರೀಮಂತ…
ಗುಣ ಇದ್ದವ ಬಡವ…
ಹಣಕ್ಕಿರುವ ಬೆಲೆ…
ಒಳ್ಳೆಯ ಗುಣಕ್ಕೆ ಇಲ್ಲ.
ಬದುಕಲ್ಲಿ ಹೇಗಿರಬೇಕು ಅನ್ನೋದು ದೇವರಿಗೆ ಬಿಟ್ಟ ವಿಷಯ ನಮ್ಮ ಕೈಯಲ್ಲಿ ಏನೂ ಇಲ್ಲ. ಇವತ್ತು ಊಟ ಕೊಟ್ರೆ ಊಟ ಅಷ್ಟರಲ್ಲಿ ತೃಪ್ತಿ ನಾಳೆ ಊಟ ಇಲ್ವಾ ಬೇಡ ಅನ್ನುವ ಮಟ್ಟಕ್ಕೆ ಬದಲಾಗಬೇಕು. ಯಾವುದರ ಮೇಲೂ ಬದುಕು ಅವಲಂಬನೆಯಾಗಿರಬಾರದು. ಪ್ರೀತಿ ಸಂಬಂಧ ಸ್ನೇಹ ಹಣ ಹೀಗೆ ಯಾವುದರ ಮೇಲೂ ಹಂಬಲವಿರಬಾರದು. ಇರುವುದು ದೇವರು ಕೊಟ್ಟದ್ದು. ಇಲ್ಲದೇ ಇರುವುದಕ್ಕಾಗಿ ಆಸೆಪಟ್ಟು ನೊಂದುಕೊಳ್ಳುವುದಕ್ಕಿಂತ ಇರುವುದರಲ್ಲೇ ತೃಪ್ತಿಯಾಗಿರುವುದು ಒಳ್ಳೇದು…
ಹೆಣ್ಣು ಸೌಂದರ್ಯಕ್ಕೆ ಹಣ ಕರ್ಚು ಮಾಡಬೇಕು.
ಹಣಕ್ಕಾಗಿ ಸೌಂದರ್ಯವನ್ನು ಖರ್ಚು ಮಾಡಬಾರದು.
ಹಣ ಇದ್ದರೆ ನಿನ್ನ ಗುರುತಿಸದವರು ಯಾರು ಇಲ್ಲ ಇಲ್ಲಿ.
ಇಲ್ಲದಿದ್ದರೆ ಸ್ಮಶಾನವು ಕೇಳುವುದು
ಬಂದಿರುವ ನೀನು ಯಾರೆಂದು.
ವ್ಯಕ್ತಿ ಬದುಕಿದ್ದಾಗ ಆತನ ಕೆಟ್ಟ ಗುಣಗಳನ್ನು ಹೊರಹಾಕುವ ಸಮಾಜ
ಸತ್ತಾಗ ಅವನ ಒಳ್ಳೆ ಗುಣಗಳನ್ನು ಹೊರಹಾಕುತ್ತದೆ..
ತೇವಗೊಂಡಾಗ ಮಾತ್ರ ಮರಳು ಪಾದಕ್ಕೆ ಅಂಟುವುದು.
ಅವಶ್ಯಕತೆ ಇದ್ದಾಗ ಮಾತ್ರ ಸ್ವಾರ್ಥಿಗಳಿಗೆ ನಮ್ಮ ನೆನಪಾಗೋದು…….
ನನ್ನ ಹತ್ರ ಅಷ್ಟೊಂದು ಹಣ ಇದೆ ಆಸ್ತಿ ಇದೆ car ಇದೆ ಬಂಗಲೆ ಇದೆ, ಅದು ಇದೆ, ಇದು ಇದೆ ಅಂತ ಜಂಬ ಕೊಚ್ಚಿಕೊಳ್ತಾರೆ ಹೊರತು ನನ್ನ ಹತ್ರ ನೆಮ್ಮದಿ ಇದೆ ಅಂತ ಹೇಳಲ್ಲ.
According to me ನೆಮ್ಮದಿಗಿಂತ ಹೆಚ್ಚು ಬೆಲೆ ಬಾಳೋದು ಈ ಜಗತ್ತಲ್ಲಿ ಯಾವದು ಇಲ್ಲ. ಎಷ್ಟೇ ಸಾಹುಕಾರನಾಗಿದ್ದು ನೆಮ್ಮದಿ ಇಲ್ಲ ಅಂದ್ರೆ ಅವನೊಬ್ಬ ಬಡವಾನೆ… ಇದ್ದಸ್ಟರಲ್ಲೇ adjust ಮಾಡಿಕೊಂಡು ಯಾವುದಕ್ಕೂ ಆಸೆ ಪಡದೆ ಯಾರ ಹಂಗು ಇಲ್ಲದೆ, ಸು:ಖವಾಗಿ ನೆಮ್ಮದಿ ಜೀವನ ನಡೆಸ್ತಾರಲ್ಲ ಅವರೇ ನಿಜವಾದ ಸಾಹುಕಾರು…
ಕಷ್ಟ ಸುಖ ನೋವು ದುಃಖ ಅವಮಾನ ಎಲ್ಲವನ್ನು ಒಂದೇ ರೀತಿ ಸ್ವೀಕರಿಸಿ ಜೀವನ ನಡೆಸಿ
ಇಷ್ಟು ದೂರಕ್ಕೆ ಬಂದು ತಲುಪಿದ ನನಗೆ ಕೊನೆಯಲ್ಲಿ ಅರಿವಾದ ಕಟುಸತ್ಯ
ಅಂದರೆ ಈ ಪ್ರಪಂಚದಲ್ಲಿ ಹಣಕ್ಕೆ ಮಾತ್ರ ಬೆಲೆ.
ಹಣ ಇದ್ದವರಿಗೆ ಮಾತ್ರ ಬೆಲೆ.ಹಣ ಇಲ್ಲದವರು ಹೆಣಕ್ಕೂ ಸಮಾನವಲ್ಲ.
ಆದರೆ ಏನೂ ಮಾಡಲು ಸಾಧ್ಯವಿಲ್ಲ.
ನಮ್ಮ ಸುತ್ತ ಮುತ್ತ ಜನರು ಹಾಗೂ ಈ ಇಡೀ ವಿಶ್ವ ಇರುವುದೇ ಹಾಗೆ.
ಬದಲು ಮಾಡಲು ಸಾಧ್ಯವಿಲ್ಲ.
ದಿನದ ಪ್ರಾರಂಭದಲ್ಲಿ ಅನಿಸುತ್ತೆ,, ಹಣ ಇದ್ರೇನೇ ಜೀವನ ಅಂತ.
ಸಂಜೆ ಮನೆಗೆ ಬಂದಾಗ ಅನಿಸುತ್ತೆ,, ನೆಮ್ಮದಿ ಇದ್ರೇನೇ ಜೀವನ ಅಂತ,
ಜೀವನ, ಹಣ, ಕೆಲಸ ಅಂತ ಊರು ಬಿಟ್ಟೆವು.
ಆದರೆ ಅದ್ಯಾಕೋ ಇಗೀಗ ಮೊದಲಿನಂಗೆ ನಗುವುದೇ ಮರೆತುಬಿಟ್ಟೆ…..
Money Quotes in Kannada
ಒಂದೊಳ್ಳೆ ಮಾತು……
ಬಯಸಿದ್ದೆಲ್ಲಾ ಸಿಗುವಂತಿದ್ದರೆ “ಬಯಕೆಗೆ” ಬೆಲೆ ಇರುತ್ತಿರಲಿಲ್ಲ…!
ಅನಿಸಿದ್ದೆಲ್ಲಾ ಹೇಳುವಂತಿದ್ದರೆ “ಮೌನಕ್ಕೆ” ಅರ್ಥ ಇರುತ್ತಿರಲಿಲ್ಲ…!!
ತಪ್ಪುಗಳೆ ಆಗದಿದ್ದರೆ “ಹೊಸ ಪ್ರಯತ್ನ” ಪಡುತ್ತಿರಲಿಲ್ಲ..!!!
ಕಣ್ಣೀರೆ ಬರದಿದ್ದರೆ “ನಗುವಿನ ಆನಂದ” ತಿಳಿಯುತ್ತಿರಲಿಲ್ಲ..!!!!
ಕಷ್ಟಗಳು ಎದುರಾಗದಿದ್ದರೆ “ಜೀವನದ ಮೌಲ್ಯ” ಗೊತ್ತಾಗುತ್ತಿರಲಿಲ್ಲ…..!!!!!
“ಮೊದಲ ಸಂಪತ್ತನ್ನು ಕಾಪಾಡಲು, ಜನರನ್ನು ಮೆಚ್ಚಿಸಲು ಹಣವನ್ನು ಖರ್ಚು ಮಾಡಬೇಡಿ!
ನಿಜವಾದ ಸಂಪತ್ತು ಯಾವಾಗಲೂ ಹಣದಿಂದ ಬರುವುದಿಲ್ಲ, ನಿಮ್ಮ ಮಾನಸಿಕ ಶಾಂತಿಯಿಂದ ಬರುತ್ತದೆ.
ಜೀವನ ಸತ್ಯ….
“ಜೀವನದಲ್ಲಿ ಹಣ ಆಸ್ತಿ ಅಂತಸ್ತು ಇವು ಮನುಷ್ಯನನ್ನು ಶ್ರೀಮಂತರಾಗಿಸುವುದಿಲ್ಲ !
ಒಳ್ಳೆಯ ಗುಣ . ಒಳ್ಳೆಯ ನಡತೆ, ಒಳ್ಳೆಯ ಸಂಸ್ಕಾರ ಇವು ಮನುಷ್ಯನ ನಿಜವಾದ ಶ್ರೀಮಂತಿಕೆ !!
ಜೀವನ ಇಷ್ಟೇ ಹಣ ಇದ್ದ ಕಡೆ ನೆಮ್ಮದಿ ಇರಲ್ಲ
ನೆಮ್ಮದಿ ಇದ್ದ ಕಡೆ ಹಣ ಇರಲ್ಲ
ಹಣ, ನೆಮ್ಮದಿ ಎರಡು ಸಿಗೋವಷ್ಟರಲ್ಲಿ ನಾವೇ ಇರಲ್ಲ
ಜೀವನ ಮಾಡೋಕೆ ಅತೀಯಾದ ಹಣ ಏನು ಬೇಕಾಗಿಲ್ಲ, ಅದೇ ಬೇರೆಯವರನ್ನು ನೋಡಿ ಅವರಂತೆ ನಾವಿರಬೇಕೆಂದು ಯೋಚಿಸಿ ಜೀವನ ಸಾಗಿಸಿದರೆ, ಎಷ್ಟು ದುಡ್ಡಿದರು ಸಾಲೋದಿಲ್ಲ.
ಈ ಹಣದ ಮರ್ಮನೆ ಅರ್ಥ ಆಗೋದಿಲ್ಲ..
ಹಣ ಇದ್ದೋರಿಗೆ ಗುಣ ಇರೋದಿಲ್ಲ…
ಗುಣ ಇದ್ದೋರಲ್ಲಿ ಹಣ ಇರೋದಿಲ್ಲ..
ಹಣ ಗುಣ ಎರಡು ಇದ್ದೋರಿಗೆ.. ಈ ಭೂಮಿಯ ಋಣಾ ಇರೋದಿಲ್ಲ..
ಇಷ್ಟೇ ಜೀವನ ಎಲ್ಲ ಆಯೋ ಮಾಯಾ..
ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ,
ಸಂಪಾದನೆ ಅವಶ್ಯ ಹಣ ಬೇಕು.
ಆದರೆ ಅದೇ ಜೀವನ ಆಗಬಾರದು ಹಾಗೆ ಹಣ ಗಳಿಸಿ….
ಇಲ್ಲಿ ಗುಣಕ್ಕಾಗಲಿ ಒಳ್ಳೆಯ ಮನಸ್ಸಿಗೆ ಆಗಲಿ ಬೆಲೆ ಇಲ್ಲ……….
ಆದರೆ ಹಣ ಒಂದಿದ್ದರೆ ಸಾಕು …….
ಎಲ್ಲವೂ ಇದ್ದಂತೆ..!!!!!!!!!..
ಜೀವನದಲ್ಲಿ ಯಾವತ್ತೂ ಇನ್ನೊಬ್ಬರ ಹೊಗಳಿಕೆ, ಇನ್ನೊಬ್ಬರ ತೆಗಳಿಕೆ, ಮತ್ತೊಬ್ಬರ ಹೋಲೈಕೆ,ಮ ತ್ತೊಬ್ಬರ ಹಾರೈಕೆ, ಮಗದೊಬ್ಬರ ಹೆಸರು ಗಳಿಕೆ, ಮಗದೊಬ್ಬರ ಹಣ ಗಳಿಕೆಯ ಹೋಲಿಕೆ ಮಾಡಿ ಜೀವನ ಸಾಗಿಸದೆ ನಮ್ಮಷ್ಟಕ್ಕೆ ನಮ್ಮ ಜೀವನ ಉತ್ಸವಕ್ಕೆ ನಮ್ಮನ್ನು ನಾವು ಹಣಿ ಮಾಡಿಕೊಂಡು ನೆಮ್ಮದಿ ಜೀವನ ರೂಪಿಸಿಕೊಂಡು ನಿರಂತರ ಸಾಗಬೇಕು ಅದುವೇ ಸುಂದರ ಜೀವನ.
ಬಡವ ಪಡೆದ ನೆಮ್ಮದಿ, ಶ್ರೀಮಂತನಿಗೆ ದೊರೆಯಲಿಲ್ಲ….
ಶ್ರೀಮಂತನ ಕೈ ಹಿಡಿದ ಹಣ, ಬಡವರ ಕೈ ಹಿಡಿಯಲಿಲ್ಲ..
ಹಣದ ಹಿಂದೆ ಹೋದರೆ ಮರಣ… ನೆಮ್ಮದಿ ಇಂದ ಬಾಳುವುದೇ ಜೀವನ…
ಅವಾಗಿನ ತರಹ ಗುಣ ನೋಡಿ ಬೆಲೆ ಕೊಡೋ ಕಾಲ ಹೋಯ್ತು
ಇವಾಗೇನಿದ್ರೂ ಹಣ , ಅಂತಸ್ತು ನೋಡಿ ಅಳೆಯೋ ಕಾಲ.
ಜೀವನ ಸತ್ಯ…
ರೂಪಾಯಿ ಎಷ್ಟೇ ಬಾರಿ ಕೆಳಗಡೆ ಬಿದ್ದರೂ ಅದರ ಬೆಲೆ ಕಡಿಮೆ ಆಗುವುದಿಲ್ಲ
ಆದರೆ ಮನುಷ್ಯ ಜೀವನದಲ್ಲಿ ಒಮ್ಮೆ ಕೆಳಗಡೆ ಬಿದ್ದರೆ ಅವನಿಗೆ ಬೆಲೆ ಸಿಗುವುದು ಬಹಳ ಕಷ್ಟ.
ಹಣ ನೋಡಿ ಕೊಡುವ ಬೆಲೆ ಅಂದ ನೋಡಿ ಹುಟ್ಟೋ ಪ್ರೀತಿ ಆಸ್ತಿ ನೋಡಿ ಒಂದಾಗೋ ಬಂಧುಗಳು ಹೆಚ್ಚು ಕಾಲ ಉಳಿಯುವುದಿಲ್ಲ ….
ಒಳ್ಳೆಯ ವಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ …
ಜೀವನ ಒಂದು ಸುಂದರ ನೋಟ ಅದನ್ನು ಅನುಭವಿಸಿಯೇ ತೀರಬೇಕು ಹೊರತು ನಾವು ಜೀವನವನ್ನು ಹಾಳು ಮಾಡಿಕೊಳ್ಳ ಬಾರದು. ಜೀವನದಲ್ಲಿ ನೆಮ್ಮದಿ ಮುಖ್ಯ, ಹಣ ಸಂಪತ್ತು ಅಲ್ಲ.
ಜೀವನ ತುಂಬಾ ಚಿಕ್ಕದು ಅಂದ ಚಂದ ಹಣ ಆಸ್ತಿ ನೋಡಿ ಬರುವವರಿಗಿಂತ ನೀವು ಇರುವ ಹಾಗೆ ನಿಮ್ಮನ್ನು ಒಪ್ಪಿಕೊಂಡು ನಿಮ್ಮ ಕನಸುಗಳಿಗೆ ಬೆಂಬಲವಾಗಿ ನಿಲ್ಲುವವರನ್ನು ಪ್ರೀತಿಸಿ.
Money Thoughts in Kannada
ಹಣ ಮತ್ತು ಗುಣಕ್ಕೆ ಭಾರಿ ವ್ಯತ್ಯಾಸ.
ಹಣದಿಂದ ಸಂಪಾದಿಸಿದ ಜನ, ನಮ್ಮಲ್ಲಿ ಹಣ ಇರುವವರಿಗೆ ಮಾತ್ರ ಬೆಲೆ ನೀಡುತ್ತಾರೆ.ಆದರೆ ಒಳ್ಳೆತನದಿಂದ ಗುಣದಿಂದ,ಜನ ಸಂಪಾದಿಸಿದರೆ ನಾವು ಸಾಯುವವರೆಗೂ ಮತ್ತು ನಾವು ಸತ್ತಮೇಲೂ ಬೆಲೆ ನೀಡುತ್ತಾರೆ. ಜೀವನದಲ್ಲಿ ಒಳ್ಳೆಯತನ ಅತಿಮುಖ್ಯ.
ಓದುವ ಸಮಯದಲ್ಲಿ ನಿಯತ್ತಾಗಿ ಓದ್ರಾಪ್ಪಾ..
ಕಳೆದು ಹೋದ ಟೈಮ್ ಮತ್ತೆ ಬರಲ್ಲ..
ವಯಸ್ಸು ಮುಗಿಯೋದೊಳಗೆ ನೌಕರಿ ಹಿಡೀರಪ್ಪ..
ಇಲ್ಲ ಅಂದ್ರೆ ನಿಮ್ಮೆ ಯಾರೂ ಬೆಲೆ ಕೊಡಲ್ಲ..
ಪ್ರೀತಿ ಪ್ರೇಮ ಆಮೇಲಪ್ಪ..ಅಪ್ಪ ಅಮ್ಮನ ನಂಬಿಕೆ ಯಾವತ್ತೂ ಬದಲಾಗಲ್ಲ..
ಇರೋದ್ ಒಂದೇ ಜೀವನ ಏನಾದ್ರೂ ಸಾಧಿಸಪ್ಪ..
ಇಲ್ಲ ಅಂದ್ರೆ ನಿಮ್ ಹೆಸ್ರು ಹೇಳೋರ್ ಯಾರೂ ಇರಲ್ಲ…
ಈ ಪ್ರಪಂಚದಲ್ಲಿ ಬಹು ಮುಖ್ಯವಾದದ್ದು ಹಣ
ಹಣಕ್ಕೆ ಇರುವ ಬೆಲೆ ನಂಬಿಕೆ ಎಂಬ ಪದಕ್ಕೆ ಇಲ್ಲ.
ಈ ಜೀವನ ನಿನ್ನ ಹತ್ತಿರವಿರುವ ಹಣ ನೋಡುತ್ತೆ
ನಿನ್ನ ಶ್ರಮ ಅಲ್ಲ….
ಮೂರು ದಿನದಾ ಜೀವನ, ಶಾಶ್ವತನಾ?
ಆಸ್ತಿ ಹಣ, ಹೇಳದೇ ಬರುವ ಮರಣ,
ಹೆಣ ಆಗೋ ಯವ್ವನ…!!
ಹೇಳಿ ಹೋದೆಯಾ ಕಾರಣ,
ಮರಳಿ ಬಾರದಾ ಪಯಣ…!!!
ವೈಯಕ್ತಿಕ ಹಣಕಾಸು ಒಂದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದಿಲ್ಲ!
ನಿಮ್ಮ ಗುರಿಗಳು, ಮೌಲ್ಯಗಳು, ಮತ್ತು ಜೀವನಶೈಲಿ ವಿಭಿನ್ನವಾಗಬಹುದು.
ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮ್ಮ ಪಥವನ್ನು ನೀವು ಮಾತ್ರ ರೂಪಿಸಬಹುದು!
“ನಿಮ್ಮ ಹಣ ನಿಮ್ಮ ಆಯ್ಕೆ”,
“ಅದನ್ನು ಹೇಗೆ ಬಳಸೋದು ನಿಮ್ಮ ಶಕ್ತಿ”,
“ನಿಮ್ಮ ಜೀವನ, ನಿಮ್ಮ ನಿರ್ಧಾರ”.
ಭಾವನೆಗಳಿಗೆ ಬೆಲೆ ಕೊಡದೆ ಕೇವಲ ನಾಣ್ಯಗಳಿಗೆ ಬೆಲೆ ಕೊಡುವ ಮುಂಚೆ ಒಮ್ಮೆ ಆಲೋಚಿಸಿ..
ಜೀವನ ಘಳಿಗೆ ಮುಗಿದಾಗ ಸುರಿಯುವುದು ನಾಣ್ಯಗಳ ಮಳೆಯಲ್ಲ..
ಬದಲಾಗಿ ಕಣ್ಣೀರಿನ ಭಾವದ ಸೆಲೆ..
ಒಳ್ಳೆತನ ದಲ್ಲಿ ನಂಬಿಕೆ ಇರುವವರು ದುಡ್ಡಿಗೆ ಬೆಲೆ ಕೊಡುವುದಿಲ್ಲ.
ಜೀವನಕ್ಕೆ ಹಣ ಅವಶ್ಯಕ ಹಣವೇ ಜೀವನವಲ್ಲ…..
ತೊಂದರೆ ಬಂದಾಗ ಪ್ರಾಮಾಣಿಕರಾಗಿರಿ, ಹಣ ಬಂದಾಗ ಸರಳವಾಗಿರಿ, ಅಧಿಕಾರ ಬಂದಾಗ ವಿನಯವಾಗಿರಿ, ಕೋಪ ಬಂದಾಗ ಶಾಂತವಾಗಿರಿ. ಇದೆ ಜೀವನ ನಿರ್ವಹಣೆ – ಅಬ್ದುಲ್ ಕಲಾಂ
ನೆನಪಿರಲಿ…….
ನಮಗೆ ಎಷ್ಟೇ ಕೋಟಿ ಕೋಟಿ ಆಸ್ತಿ ಇದ್ರೂ 100 ವರ್ಷ ಬದುಕಲಾರೇವು,
ನಾವು 10 ಮನೆ ಕಟ್ಟಿಕೊಂಡರು ಇರುವುದು ಮಾತ್ರ ಒಂದೇ ಮನೆಯಲ್ಲಿ..!!
ಹಣ ಸಂಪಾದಿಸುವುದು ಮಾತ್ರ ಮುಖ್ಯ ಅಲ್ಲಾ,
ಜೊತೆಗೆ ಮನುಷ್ಯರ ಸಂಬಂಧ ಕೂಡ ಅಷ್ಟೇ ಮುಖ್ಯ.!!
ವಿನಯವಿಲ್ಲದ ವಿದ್ಯೆ,
ಹಸಿವಿಲ್ಲದ ಊಟ,
ಹರಿತ ವಿಲ್ಲದ ಆಯುಧ,
ಉಪಕಾರ ವಿಲ್ಲದ ಜೀವನ,
ಗುಣವಿಲ್ಲದ ರೂಪ,
ಉಪಯೋಗಕ್ಕೆ ಬಾರದ ಹಣ,
ಎಲ್ಲವೂ ವ್ಯರ್ಥ..!!
ಜೀವ ಇರೋ ಮನುಷ್ಯನಿಗೆ ಬೆಲೆ ಕೊಡಿ.
ಜೀವ ಇರೋ ತನಕ ನಿಮ್ಮನ್ನು ಆಶಿರ್ವಾದ ಮಾಡುತ್ತದೆ.
ಹಣ ಆಸ್ತಿ ಕೆಲಸ ಸಂಪತ್ತು ಯಾವುದು ಶಾಶ್ವತ ಅಲ್ಲ
ಹಣ ಆಸ್ತಿ ಸಂಬಂಧಿಕರು ಮನೆ ಹಾಳು ಮಾಡುವ ತನಕ ನಿಮ್ಮ ಬೆನ್ನ ಹಿಂದೆ ಮತ್ರ ಮನುಷ್ಯತ್ವ ಪ್ರೀತಿ ಸ್ನೇಹ ಜೀವ ಇರೋ ತನಕ ನಿಮ್ಮ ಜೊತೆ ಜೀವ ಹೋದ ಮೇಲೂ ಅವರ ಮನದಲ್ಲಿ ನಿಮ್ಮ ನೆನೆದು ಕಣ್ಣೀರು ಹಾಕುವವರನ್ನ ಸಂಪಾದಿಸಿ ಶಾಪ ಹಾಕಿಸಿಕೊಳ್ಳ ಬೇಡಿ.
I hate love
ನೀಯತ್ತಿಗೆ ಬೆಲೆ ಇಲ್ಲ
ಇಲ್ಲಿ ಹಣ ಮುಖ್ಯ
ಒಳ್ಳೆ ಮನಸ್ಸು ಅಲ್ಲ.
ಜೇವನದಲ್ಲಿ ಲೆಕ್ಕಾಚಾರ ಇರಬೇಕು. ಆದರೆ ಲೆಕ್ಕಾಚಾರನೇ ಜೇವನ ಆಗಬಾರದು. ಅದು ಜೀವನ ಆಗಲ್ಲ ಆಗೋದು ಇಲ್ಲ. ಗುಣ ಇದ್ದರೆ ಹಣ ಬರುತ್ತೆ. ಮನುಷ್ಯನ ಗುಣವನ್ನು ಹಣದಲ್ಲಿ ಅಳೆಯಬಾರದು. ಗುಣದ ಋಣ ತೀರಿಸಲು ಆಗಲ್ಲ ಆದರೆ ಹಣದ ಋಣ ತೀರಿಸಬಹುದು. ಅದುವೆ ನೀವು ಹೇಳಿದ ಜೇವನ ಲೆಕ್ಕಾಚಾರ.
ಬದುಕಿರಬೇಕಾದರೆ ಚೆನ್ನಾಗಿ ಊಟ, ನಿದ್ದೆ ಮಾಡಿ,ಒಳ್ಳೆ ಉಡುಗೆ ತೊಟ್ಟುಕೊಳ್ಳಿ.
ಸಾವು ಯಾವಾಗ ಬೇಕಾದರೂ ಬರುತ್ತೆ ಇರುವಾಗ ಇದ್ದಷ್ಟು ದಿನ ನೆಮ್ಮದಿಯಾಗಿರಿ.
ಹಣ ಜೊತೆಗಿನ ಜೀವನ,ಶ್ರೀಮಂತಿಕೆ ಜೊತೆಗಿನ ಆಡಂಬರ ತುಂಬ ದಿನ ಇರಲ್ಲ…!!
ಯವ್ವನದಲ್ಲಿರುವಾಗ ಅಧಿಕಾರ, ಹಣ, ಅಂತಸ್ತು, ಸೌಂದರ್ಯ, ಅಹಂಕಾರದಿಂದ ಮೆರೆದು ಮುಪ್ಪು ಎಂಬ ಕಾಲಗರ್ಭದಲ್ಲಿ ಹುದಿಗಿ ಹೋಗುವುದೇ ಜೀವನ…
ಹಣ್ಣ ನೋಡಿ ಪ್ರೀತಿ ಪ್ರೀತಿ ಮಾಡ್ತಾರೆ…
ಜೇಬು ಹಣದಿಂದ ತುಂಬಿರುವಾಗ ಎಲ್ಲರು ನಮ್ಮವರೇ ಆದರೆ ಯಾವಾಗ ಅದೇ ಜೇಬಲ್ಲಿ ಹಣ ಇರುವುದಿಲ್ಲವೋ ಆಗ ಎಲ್ಲರು ಒಬ್ಬೊಬ್ಬರಾಗಿ ದೂರ ಸರಿಯುತ್ತಾರೆ..!!
ಪ್ರೀತಿಗೆ ಬೆಲೆ ಇಲ್ಲ ಈವಾಗಿನ ಕಾಲದಲ್ಲಿ. ಹಣಕೇ ಬೆಲೆ ಜಾಸ್ತಿ..
ಪಾಪಿ ಜಗತ್ತು.
ಮಾನವೀಯ ಮೌಲ್ಯಗಳಿಲ್ಲ,
ಸಂಬಂಧಕ್ಕೆ ಬೆಲೆ ಇಲ್ಲ,
ಹಿರಿಯರ ಮೇಲೆ ಗೌರವವಿಲ್ಲ.
ಗಂಡ ಎಂದರೆ ಜಸ್ಟ್ ಹಣ ನೀಡುವ ಮಿಷನ್..
ಜೀವನ ಪಾಠ..
ಕೊನೆಯಲ್ಲಿ ಏನು ಗಳಿಸಿದೆ..?
ಹುಟ್ಟುವಾಗ ಬರಿಗೈಯಿಂದ ಹುಟ್ಟಿ ಸಾಯುವಾಗ ಬರಿಗೈಯಲ್ಲಿ ಹೊಗುವೆ ಜನನ-ಮರಣದ ಮಧ್ಯದ ಜೀವನದಲ್ಲಿ ಹಣ, ಸಿರಿಸಂಪತ್ತು, ಅನುಭವ, ಪ್ರೀತಿ ದಯೆ, ಕರುಣೆ ಇಲ್ಲದಮೇಲೆ ಎಲ್ಲವೂ ವ್ಯರ್ಥ.
ಕೊನೆಯಲ್ಲಿ ನಿನ್ನ ಜೊತೆ ಬರುವುದು ಯಾವುದು ಅಲ್ಲ ಎಲ್ಲವನ್ನುಇಲ್ಲಿಯೆ ಬಿಟ್ಟುಹೋಗಬೇಕಾಗುತ್ತದೆ. ಕೊನೆಗೆ ಜೀವನದಲ್ಲಿ ನಿನ್ನ ಜೊತೆಬರುವುದು “ಹೆಸರು” ಮಾತ್ರ ಅದನ್ನು ಗಳೀಸಿಕೋ.
ಸಂಪಾದಿಸಿಕೊಳ್ಳು ಕೊನೆಯಲ್ಲಿ ಏನು ಗಳಿಸಿದ್ದೀಯಾ.? ಪ್ರಶ್ನೆಗೆ ಉತ್ತರ ಸಿಗುವಂತಾಗಿದೆ.!
ಅಣ್ಣ,ತಮ್ಮ, ಸ್ನೇಹ, ಪ್ರೀತಿ, ಬಂಧು,ಬಳಗ, is Equal to =ಹಣ
ಇದು ಎಲ್ಲಾ ಸಂಬಂಧನೂ ಮೀರಿದ್ದು
Now i realized money ಮುಂದೆ ಯಾವ ಸಂಬಂಧನೂ ಇಲ್ಲ
ಯಾವ ನಂಬಿಕೆಗು ಬೆಲೆ ಇಲ್ಲ..
ಒಬ್ಬ ಸಾಮಾನ್ಯ ಮನುಷ್ಯನ ನಡವಳಿಕೆ ಆತ ಜೀವನದಲ್ಲಿ ಸಕ್ಸಸ್ ಆಗೋಕೆ ಮುಂಚೆ, ಒಬ್ಬ ಸಾಮಾನ್ಯ ಮನುಷ್ಯನ ರೀತಿ ಸೀದಾ ಸಾದಾ. ಆದರೆ ಸಕ್ಸಸ್ ನೋಡಿದ ಮೇಲೆ ಆತನ ಗುಣ ನಡವಳಿಕೆ ಮಾತು ವೇಷ ಎಲ್ಲಾ ಬದಲಾಗಿರುತ್ತದೆ. ಸಕ್ಸಸ್ ಹಿಂದೆ ಮುಂದೆ ಇದ್ದಂತಹ ವ್ಯಕ್ತಿ ಒಬ್ಬನೇ ವ್ಯತ್ತಿತ್ವದಲ್ಲಿ ವ್ಯತ್ಯಾಸ ಇದು ಬಂದಿದ್ದು ಎಲ್ಲಿಂದ? ಹಣ ಕೀರ್ತಿ ಗೌರವ ಪ್ರತಿಷ್ಠೆ ಸಮಾಜ ವ್ಯವಸ್ಥೆ… ಪ್ರಶ್ನಾರ್ಥಕ ಅನ್ನಿಸುವುದಿಲ್ಲವೇ ಮೂಲ ಯಾವತ್ತೂ ನಿಗೂಢ!
ಇದನ್ನೂ ಓದಿ:
- 100+ Jeevana Life Quotes in Kannada with Images (ಜೀವನ Quotes)
- 100+ Baduku Kannada Quotes (ಬದುಕು Quotesಗಳು)
Sad Quotes About Money in Kannada Images
ಹಣದ ಕುರಿತಾದ ಈ ಮೇಲಿನ ಉಲ್ಲೇಖಗಳು (sad quotes about money in kannada) ನಮ್ಮ ಜೀವನದ ಆಳವಾದ ಸತ್ಯಗಳನ್ನು ನಮಗೆ ತಿಳಿಪಡಿಸುತ್ತದೆ. ಜೀವನ ನಡೆಸಲು ಹಣ ಬೇಕೆ ಹೊರತು, ಹಣವೇ ಜೀವನ ಅಲ್ಲ. ಈ ಸಂಕಲನವು ನಮ್ಮ ಜೀವನದ ಮೌಲ್ಯಗಳನ್ನು ಅರ್ಥೈಸಲು ಮತ್ತು ಹಣದ ಹಿಂದಿನ ನಿಜವಾದ ಅರ್ಥವನ್ನು ಅರಿಯಲು ಸಹಾಯ ಮಾಡಿದೆ ಎಂಬುದು ನಮ್ಮ ಭಾವನೆ.
ನಾವೆಲ್ಲರೂ ಹಣವನ್ನು ಅಗತ್ಯವಾಗಿ ಬಳಸಬೇಕಾದರೂ, ಹಣಕ್ಕಿಂತ ಬೇರೆಯಾದ ಸಂತೋಷ, ಪ್ರೀತಿ, ಮತ್ತು ನೆಮ್ಮದಿಯಂತಹ ಜೀವನದ ಮೂಲಭೂತ ಅಂಶಗಳನ್ನು ಮರೆತಲ್ಲಿ, ನಮ್ಮ ಜೀವನದ ಬಹು ಮುಖ್ಯ ಭಾಗವನ್ನು ಕಳೆದುಕೊಳ್ಳುತ್ತೇವೆ.
ನೀವು ಈ money quotes in kannada ಸಂಕಲನವನ್ನು ಮೆಚ್ಚಿದ್ದೀರಿ ಎಂಬುದು ನಮ್ಮ ನಂಬಿಕೆ. ಇದನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಮತ್ತಷ್ಟು ಮಾಹಿತಿಗಾಗಿ ಮತ್ತು ಪ್ರೇರಣಾದಾಯಕ ಲೇಖನಗಳಿಗಾಗಿ ನಮ್ಮ ಬ್ಲಾಗ್‌ಗೆ ನಿರಂತರವಾಗಿ ಭೇಟಿ ನೀಡಿ.