100+ Hurt Sad Quotes in Kannada with Images

ನೋವು ಮತ್ತು ದುಃಖ ಜೀವನದ ಅವಿಭಾಜ್ಯ ಅಂಗಗಳು. ಪ್ರತಿ ಹೃದಯವೂ ನೋವಿನ ಕಥೆಯನ್ನು ಹೊತ್ತಿರುತ್ತದೆ, ಮತ್ತು ಈ ನೋವುಗಳನ್ನು ವ್ಯಕ್ತಪಡಿಸಲು ಪದಗಳು ಅತೀ ಮುಖ್ಯವಾಗುತ್ತವೆ. ಕನ್ನಡದಲ್ಲಿ ನೋವು, ಬೇಸರ ಮತ್ತು ಹೃದಯವಿದ್ರಾವಕ ಕ್ಷಣಗಳನ್ನು ವ್ಯಕ್ತಪಡಿಸುವ ಕವಿತೆಗಳು ಮತ್ತು ಉಲ್ಲೇಖಗಳು ನಮ್ಮ ಭಾವನೆಗಳಿಗೆ ಶಬ್ದ ನೀಡುತ್ತವೆ. ಈ ಉಲ್ಲೇಖಗಳು ನಮ್ಮ ಆಂತರಿಕ ನೋವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ, ನಮ್ಮ ಮನಸ್ಸಿಗೆ ಸಾಂತ್ವನ ನೀಡುತ್ತವೆ ಮತ್ತು ಇತರರೊಂದಿಗೆ ಸಂಬಂಧ ಬೆಳೆಸಲು ಸಹಾಯ ಮಾಡುತ್ತವೆ.

ಈ ಲೇಖನದಲ್ಲಿ 100ಕ್ಕೂ ಹೆಚ್ಚು ಕನ್ನಡದ ನೋವು ಹಾಗೂ ದುಃಖದ ಉಲ್ಲೇಖಗಳನ್ನು (hurt sad quotes in kannada) ಸಂಗ್ರಹಿಸಲಾಗಿದೆ.

Hurt Sad Quotes in Kannada

Best Hurt Sad Quotes in Kannada

Alone Hurt Sad Quotes in Kannada

ಭಾವನೆಗೆ ದುಃಖಕ್ಕೆ ಏನೇ ಸಮಸ್ಯೆ ಇರಲಿ ಸ್ಪಂದಿಸುವ ಒಂದೇ ಒಂದೇ ಹೃದಯ ಅಂದ್ರೆ ಅದು ಕಣ್ಣೀರು.

 

ಮುಗ್ದ ಮನಸು ಇರೋರಿಗೆ ಏನಾದ್ರೂ ಆದ್ರೆ ಬೇಗ ಕಣ್ಣೀರು ಬರುತ್ತೆ

ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು 

ಏಕೆಂದರೆ ಈಗಿನ ಕಲಿಯುಗದಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ.

 

ಕಣ್ಣೀರು ತರಿಸೋ

ಸಾವಿರ ಕೆಟ್ಟ ಮನಸ್ಸುಗಳ ನಡುವೆ

ಕಣ್ಣೀರು ವರೆಸೋ

ಒಂದು ಮುಗ್ಧ ಜೀವ ಇದ್ದೆ ಇರತ್ತೆ

 

ಅವರಿವರು ಪುಕ್ಕಟೆಯಾಗಿ ಉಪದೇಶ ನೀಡುತ್ತಿದ್ದರು.

ಆದರೆ, ಸೋಲಿಗೆ ಹೆಗಲಾಗಲಿಲ್ಲ,

ಸಾವಿಗೆ ಕಣ್ಣೀರು ಸುರಿಸಿದರು.

 

ಬಿಕ್ಕಿ ಬಿಕ್ಕಿ ಅಳುವಷ್ಟು ಮನಸ್ಸಿನಲ್ಲಿ ನೋವು ನನ್ನಲ್ಲು ಇದೆ..

ಆದರೆ ಎಷ್ಟೇ ಅತ್ತರು ಉಪಯೋಗವೇನು ಇಲ್ಲ!!!

ಭಾವನೆಗಳಿಗೆ ಬೆಲೆ ಕೊಡದವರ ಮುಂದೆ ಅಳುವುದರಿಂದ

ಕಣ್ಣೀರು ವ್ಯರ್ಥವಾಗುತ್ತದೆಯೇ ವಿನಃ ಏನು ಬದಲಾವಣೆಯಾಗುವುದಿಲ್ಲ

 

ನಕ್ಕರೆ ಪನ್ನೀರು

ಅತ್ತರೆ ಕಣ್ಣೀರು

ಕಷ್ಟ ಕೊಡುವವರು ನನ್ನವರು. 

 

ದುಃಖ ಯಾವಾಗಲೂ ಕಣ್ಣೀರು ಮತ್ತು ಕೋಪದಲ್ಲಿ ಇರುವುದಿಲ್ಲ..

ಕೆಲವೊಮ್ಮೆ ನಗುವಿನಲ್ಲೂ ಸಹ ಇರುತ್ತದೆ… 

 

ಮನುಷ್ಯನ ಶ್ರೇಷ್ಠತೆ ಅನ್ನೋದು ಇನ್ನೊಬ್ಬರ ನೋವು ನಿವಾರಣೆ ಮಾಡುದರಲ್ಲಿ ಇರಬೇಕೆ ಹೊರತು ಇನ್ನೊಬ್ಬರಿಗೆ  ಮೋಸ ಮಾಡಿ ಕಣ್ಣೀರು ಹಾಕಿಸಿ ನೋವು ನೀಡುದರಲಲ್ಲ…

 

ಸೋತಾಗ ನಿಮ್ಮ ಕಣ್ಣೀರು ಒರೆಸಲು ಇಲ್ಲದ ಕೈಗಳು, 

ನೀವು ಗೆದ್ದಾಗ ಬೆನ್ನು ತಟ್ಟಲು ಬೇಗ ಮುಂದೆ ಬರುತ್ತದೆ..

 

ಇನ್ನೊಬ್ಬರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ನೀವು

ಸಮಯ, ಪ್ರೀತಿ, ಗೌರವ ಕೊಡುವುದಾದರೆ,

ಬದಲಾಗಿ ನಿಮಗೆ ಸಿಗುವ ಫಲಿತಾಂಶ ಕೇವಲ

ನೋವು ಅವಮಾನ ಕಣ್ಣೀರು ..!

 

ಪ್ರೀತಿ ಇಲ್ಲದ ಮೇಲೆ ಹೂವು ಅರಳಿದರೇನು…….?

ತಾರೆಗಳು ಮೀನುಗಿದರೇನು…..??

ಗಾಳಿ ಕಂಪು ಸುಸಿದರೇನು…..??

ಮೊಸಳೆ ಕಣ್ಣೀರು ಹಾಕಿದರೇನು….?

ಎಲ್ಲವೂ ಸಂತೆಯಲ್ಲಿನ ಪಿಸು ಮಾತಿನಂತೆ

ಬರಡು ಭೂಮಿಯಂತೆ………, ದೇಹ….?

ಬಯಸಿದವನಿಗೆ ಪ್ರೀತಿ ಸಿಗುತ್ತೆ.

ಪ್ರೀತಿ …?

ಬಯಸಿದವಣಿಗೆ ಕಣ್ಣೀರು ಸಿಗುತ್ತೆ..!

 

ಅರಮನೆ ಕಟ್ಟುವಂತ ಸಿರಿತನ

ಇಲ್ಲದಿದ್ದರೆನಂತೆ…!!

ಕಣ್ಣೀರು ವರೆಸುವ ಗೆಳೆತನ

ಇದ್ರೆ ಸಾಕು ದೇವರೇ 

 

Life Hurt Sad Quotes in Kannada

ಅವನೇ ಸರ್ವಸ್ವ ಅಂದುಕೊಂಡ ನನಗೆ ಕಡೆಗೆ ಸಿಕ್ಕಿದ್ದು ಅವನ ಜೊತೆಗೆ ಕಳೆದ ನೆನಪುಗಳು ಎಷ್ಟೇ ಅತ್ತರು ಮುಗಿಯದ ಕಣ್ಣೀರು..

 

ನನ್ನ ನಂಬಿಕೆ ಇಂದು ನನಗೆ ಮೋಸ ಮಾಡಿರಬಹುದು

ಆದರೆ, ನನ್ನ ಒಳ್ಳೆತನ ನಿನಗೊಂದು ದಿನ ಪಶ್ಚಾತ್ತಾಪದ ಕಣ್ಣೀರು ಹಾಕಿಸುತ್ತದೆ…

 

ಪ್ರೀತಿ ಅಂದರೆ ಕಣ್ಣಲ್ಲಿ ಹುಟ್ಟಿ ಕಣ್ಣೀರು ಹಾಕೋದಲ್ಲ..!! 

ಮನಸಲ್ಲಿ ಹುಟ್ಟಿ ಮಸಣ ಆಗೋದು ಅಲ್ಲ..!!

ಅದೇನೇ ಆಗಲಿ ನಾನು ನಿನಗೋಸ್ಕರ ನಿನ್ನ ಜೊತೆ ಬದುಕ್ತಿನಿ ಅನ್ನೋದು..!!

 

ಕಲ್ಲಾಗಿ ಬಿಡು ಓ ಮನವೇ

ಯಾವುದಕ್ಕೂ, ಯಾರ ಮಾತಿಗೂ ಕುಗ್ಗದಂತೆ :

ಮೌನಿ ಆಗಿ ಬಿಡು ಓ ಧ್ವನಿಯೇ

ಯಾರ ಮಾತಿಗೂ ನೀ ತಿರುಗಿ ಮಾತಾಡದಂತೆ :

ಮರೆತು ಬಿಡು ಓ ಮಿದುಳೇ

ಸಿಹಿ ನೆನಪಿನ ಜಾಲವ ನೆನೆದು ಮರುಗದಂತೆ :

ಬರಿದಾಗಿ ಬಿಡು ಓ ಕಣ್ಣೀರೇ

ಮತ್ತೆ ಮತ್ತೆ ಅದೆ ವಿಷಯಕ್ಕೆ ಕಣ್ಣೀರು ಸುರಿಸದಂತೆ :, ಅತ್ತಾಗ ಕಣ್ಣೀರು ವರೆಸೆದವಳು

ಸತ್ತಾಗ ಕಣ್ಣೀರು ಸುರಿಸುವಳೇನು

 

ಒಬ್ಬ ವ್ಯಕ್ತಿ ದೇವರ ಮುಂದೆ ನಿಂತು

ಕಣ್ಣೀರು ಹಾಕುವಷ್ಟು

ಯಾರ ಮನಸ್ಸನ್ನು ನೋಯಿಸಬೇಡಿ

ಯಾಕಂದ್ರೆ  ಕರ್ಮ ಕಾಣಲ್ಲ ಕಾಡುತ್ತೆ ಮುಂದೆ…

 

ಮಸಣದ ಮೌನ ಮನದೊಳಗೆ

ನೆನಪಿನ ಹೆಣದ ಮೆರವಣಿಗೆ

ಭಾವನೆಗಳ ಅಂತ್ಯಸಂಸ್ಕಾರ

ನೆನೆದರೂ ಬಾರದ ಕಣ್ಣೀರು

ಕಣ್ಮರೆಯಾದ ಸಾಂತ್ವನದ ಕೈಗಳು

ಬೆಲೆಯಿಲ್ಲದ  ದೂರದ ಸಂಬಂಧಗಳು

ವ್ಯರ್ಥವಾಗುಳಿದ ಬದುಕಿನಲಿ

ಒಲವು ಕಾಣೆಯಾಗಿದೆ

ಜೀವನದುದ್ದಕ್ಕೂ  ಕಾಡುವ ಪ್ರಶ್ನೆ

ಒಲವ ಹುಡುಕಿಸುವ ಠಾಣೆ ಯಾವುದು..!!

 

ಕಣ್ಣೀರು ಸ್ವಂತದ್ದಲ್ಲ ಅದನ್ನು ಬರಿಸುವವರು ಮತ್ತೊಬ್ಬರು

 

ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆ ಬೆಲೆ ಇರುತ್ತಿರಲಿಲ್ಲ

ಕಣ್ಣೀರು ಬಾರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ

ಕಷ್ಟಗಳು ಎದುರಾದಾಗಲೇ ಜೀವನದ ಮೌಲ್ಯ ತಿಳಿಯುತ್ತದೆ.

 

ಪ್ರೀತಿ ಸಿಗಲಿಲ್ಲವೆಂದು ಕಣ್ಣೀರು ಹಾಕುತ್ತ status ಹಾಕಿದರೆ ಪ್ರೀತಿಸಿದವರಿಗೆ ಅರ್ಥವಾಗುತ್ತೆ ಎನ್ನುವ ಭ್ರಮೆ ಬೇಡ. ಏಕೆಂದರೆ ಮನಸ್ಸನ್ನೇ ಅರ್ಥ ಮಾಡಿಕೊಳ್ಳದವರು status ಹೇಗೆ ಅರ್ಥ ಮಾಡಿಕೊಳ್ತಾರ..??

 

ಇದನ್ನೂ ಓದಿ: 

Broken Heart Hurt Sad Quotes in Kannada

ಮನಸು ಗಾಢವಾಗಿ ನಿನ್ನ ನಂಬಿತ್ತು.

ಸುಳಿವೆ ಕೊಡಲಿಲ್ಲ ಮೋಸದ ಬಲೆಯಲ್ಲಿರುವೆ ಎಂದು,

ಆದರೆ ನಾ ನಿನ್ನ  ಇಸ್ಟೊಂದು ಹಚ್ಚಿಕೊಂಡಮೇಲೆ ಸುಳಿವು ಕೊಟ್ಟರೆ 

ನೀ ಇದ್ದರೂ ಕಣ್ಣಿರು, ಇರದಿದ್ದರೂ ಕಣ್ಣೀರು..

 

ಒಲವಿನ ಮಾರುಕಟ್ಟೆಯಲಿ  ಕುಸಿದು ಬಿದ್ದ ಹಿಡಿ ಪ್ರೀತಿಗೆ 

ನೀ ಎಷ್ಟೇ ಕಣ್ಣೀರು ಚೆಲ್ಲಿದ್ದರು ನಿನ್ನ ಕಣ್ಣೀರಿಗೆ

ಯಾವ ತೂಕದ ಬೆಲೆಯೂ ಇಲ್ಲ,

ಖರೀದಿಸುವವರಂತು ಇಲ್ಲವೇ ಇಲ್ಲ,

ಸುಮ್ಮನೆ ಇನ್ನೊಬ್ಬರ ಕಾಲಡಿಯಲ್ಲಿ ಬದುಕುವುದಕ್ಕಿಂತ ಸ್ವಾಭಿಮಾನಕ್ಕಾದರು

ಬದುಕನ್ನ ಪ್ರೀತಿಸುವುದೆ ವಾಸಿ..

 

ಮನಸ್ಸಿಗೆ ನೋವು ಆದ್ರೆ ಊಟನು ಸೇರೋದಿಲ್ಲ ನಿದ್ದೇನು ಬರೋದಿಲ್ಲ. 

ಆದರೆ ಈ ಕಣ್ಣೀರು ಮಾತ್ರ ಬೇಡ ಅಂದ್ರು ಬರುತ್ತೆ

 

ನಾವು ಹೊಸ ಬಟ್ಟೆ ಹಾಕಬೇಕು ಅಂದ್ರೆ ಹಳೆ ಬಟ್ಟೆಯಲ್ಲಿ ನಮ್ಮ ಕಣ್ಣೀರು ಸುರಿದಿರಬೇಕು.

ಕಂಡವರ ಕಣ್ಣೀರು ಅಲ್ಲ.. 

 

ನೆನಪಿಟ್ಟುಕೋ ನೀನು ಬೇರೆಯವರ ಕಣ್ಣುಗಳಲ್ಲಿ ತರಿಸಿದ ಕಣ್ಣೀರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬಂದೆ ಬರುತ್ತೆ.

 

ಒಬ್ಬ ಹುಡುಗ  ತನ್ನ ನೋವನ್ನು

ಒಂದು ಹುಡುಗಿಯ ಬಳಿ ಹೇಳಿ

ಕಣ್ಣೀರು ಹಾಕ್ತಾನೆ ಅಂದ್ರೆ,

ಅವನು ಅವಳಿಗೆ  ತನ್ನ ಹೃದಯದಲ್ಲಿ

ತಾಯಿಯ  ಸ್ಥಾನ ಕೊಟ್ಟಿರುತ್ತಾನೆ ಅಂತ ಅರ್ಥ….

ಕಣ್ಮಣಿ… 

 

ಸಮಯ ಕಳೆದು ಹೋಗುತ್ತೆ

ಆದರೆ ನೆನಪುಗಳು ಹಾಗೇ

ಉಳಿದು ಬಿಡುತ್ತವೆ.

ಆಡಿದ ಹಳೆಯ ದಿನಗಳ

ಮಾತುಗಳು ಮತ್ತೆ ಮತ್ತೆ

ನೆನಪಿಗೆ ಬರುತ್ತವೆ.

ಒಂಟಿಯಾಗಿರಲಿ ಅಥವಾ

ಗುಂಪಿನಲ್ಲಿರಲಿ ಇವು

ಯಾವಾಗಲೂ ನಮ್ಮನ್ನು

ಕಾಡುತ್ತಲೇ ಇರುತ್ತವೆ.

ಕೆಲವು ನೆನಪುಗಳು

ಖುಷಿ ಕೊಡುತ್ತವೆ,

ಇನ್ನೂ ಕೆಲವು

ಕಣ್ಣೀರು ತರಿಸುತ್ತವೆ.!!

 

ಸೋತಾಗ ನಿಮ್ಮ ಕಣ್ಣೀರು ಒರೆಸಲು ಇಲ್ಲದ ಕೈಗಳು

ನೀವು ಗೆದ್ದಾಗ ಬೆನ್ನು ತಟ್ಟಲು ಬೇಗ ಮುಂದೆ ಬರುತ್ತದೆ..

 

“ನಿನ್ನ ಬಳಿ ಮಾತನಾಡದ ಪದಗಳನ್ನು ಕಾಗದದ ಮೇಲೆ ಚೆಲ್ಲಿದೆನೆ ದಯವಿಟ್ಟು ಓದಿ ಬಿಡು. ಕೆಲವು ಕಡೆ ಪದಗಳಿಲ್ಲ ನನ್ನ ಕಣ್ಣೀರು ಇದೆ. ಅದನ್ನ ಅಲ್ಲಿ ಆದರೂ ಮರಿಯದೇ ಒರೆಸಿಬಿಡು”

 

ಸುಳ್ಳಾಗಿ ನಟನೆ ಮಾಡಲು ಗೊತ್ತಿಲ್ಲದವರು, ಮೊದಲು ವ್ಯಕ್ತಪಡಿಸುವುದು ಕಣ್ಣೀರು & ಕೋಪ.

 

ಒಂದು ಹೆಣ್ಣಿಗೆ ಯಾರು ಮೋಸ ಮಾಡುತ್ತಾರೋ…

ಕಣ್ಣಲ್ಲಿ ನೀರು  ತರಿಸುತ್ತಾರೋ..

ಅವರು ಜೀವನದಲ್ಲಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ..

ಅವರ ಸಾಧನೆಯೊ ಫಲಿತ ಗೊಳ್ಳುವುದಿಲ್ಲ..

ಅವರ ಅವನತಿ ವಿನಾಶ ತುಂಬಾ ಭಯಂಕರ ವಾಗಿರುತ್ತೆ….

 

ಈ ಹೃದಯ ನಿಂತರು ಅವಳ ಹೆಸರು ಹಾಗೆ ಇರಲಿ 

ನನ್ನ ಚಿತೆ ಉರಿದರು ಅವಳ ಕಣ್ಣೀರು ಜಾರದಿರಲಿ

 

Pain Hurt Sad Quotes in Kannada

ಎಲ್ಲರಿಂದ ಎಲ್ಲವುಗಳಿಂದ ದೂರವೇ ಉಳಿಯುವ ಮನಸ್ಸಾಗಿದೆ..

ಏಕಾಂತವೆ ಜೊತೆಯಾಗಿದೆ….

ಮಾತೇ ಬೇಡವಾಗಿದೆ..

ಮೌನವೇ ಮನೆ ಮಾಡಿದೆ….

ಆಡದೆ ಉಳಿದಿರುವ ಮಾತುಗಳು ಸಹ 

ಪ್ರೀತಿ ಎಂಬ ಮಾಯೆ ಅಲ್ಲಿ ಮರೆಯಾಗಿದೆ..

ಕಣ್ಣಂಚಿನ ಕಣ್ಣೀರು ಮೌನವಾಗಿಯೇ ಜಾರುತ್ತಲೇ ಇದೇ

ಕಾರಣ ಮಾತ್ರ ಶೂನ್ಯ ವಾಗಿದೆ….

 

ಅವನೆಂದರೆ!!

ಕತ್ತಲಲ್ಲಿ ಹುಣ್ಣಿಮೆಯ ಚಂದಿರನಂತೆ ಕಾಣುವನು !!

ಕೋಪದಲ್ಲಿ ನಗುವಾಗಿ ನೆನಪಾದವನು!!

ನೋವಿನಲ್ಲಿ ಬಾಗಿಯಾಗುವವನು !!

ಕಷ್ಟದಲ್ಲಿ ಜೊತೆಯಾಗಿ ನಿಲ್ಲುವವನು !!

ಭಯ ಎಂದಾಗ ದೈರ್ಯ ತುಂಬುವವನು !!

ಅಳುವಾಗ ಕಣ್ಣೀರು ಒರೆಸುವವನು!!

ನಗುವಾಗ ಮತ್ತಷ್ಟು ನಗಿಸುವವನು !!

ಕಲ್ಪನೆಯಲ್ಲಿ ನಗುಮುಖದ ರಾಜನಂತೆ ಕಾಣುವವನು !!

ಕತ್ತಲಲ್ಲಿ ಬೆಳಕಾಗಿ ನಿಲ್ಲುವವನು !!

ಕೃಷ್ಣನಂತೆ ಅತಿಯಾಗಿ ಪ್ರೀತಿಸುವವನು !!

ಒಟ್ಟಾರೆ ಮಗುವಿನಂತ ಪರಿಶುದ್ಧ ಮನಸ್ಸಿನವನು !!

 

ಕಣ್ಣಲ್ಲಿ ಎಷ್ಟೇ ಕಣ್ಣೀರು ಇದ್ದರು ತುಟಿ ಮೇಲಿನ ಆ ಮೌನದ ನಗು ಸಾವಿರ ಪ್ರಶ್ನೆಗೇ ಉತ್ತರವಾಗಿರುತ್ತದೆ…

 

ನನಗಾಗಿ ನಾನು ನಿನ್ನಲ್ಲಿ ಬಯಸಿದ್ದು ಬರಿ ಕರುಣೆ 

ನನ್ನ ನೋಡಿ ಕರುಣೆ ಇಂದ ಎರಡೂ ಹನಿ ಕಣ್ಣೀರು ಹಾಕಿದ್ರು ಅದು ಕೋಟಿಗೆ ಸಮಾನ ಆಗಿರೋದು.

 

ಕಣ್ಣೆದುರು ಇದ್ದಾಗ ಬರದೇ ಹೋದ ಭಾವನೆ

ಕಣ್ಮರೆಯಾದ ಮೇಲೆ ಬರುವುದೇ..

ಅದೆಷ್ಟು ಕಾಡಿದರೂ ಕನಿಕರಿಸದ ಮನಸಿಗೆ

ಕಮರಿ ಹೋದ ಕನಸುಗಳ ಕಣ್ಣೀರು ಕಾಣುವುದೇ…

 

ನೆನ್ನೆಯ ನಿನ್ನ ನೆನಪುಗಳನ್ನು  ಮೆಲುಕು ಹಾಕುತ್ತಿತುವಾಗ..

ಕಣ್ಣಂಚಲಿ ಬಂದಾ ಕಣ್ಣೀರು ಹೇಳಿತು..

ನೆನಪಿಸಿಕೂ ನಿನಗೆ  ಸಾಧ್ಯವಾದರೆ..

ಮರೆತು  ಮುಂದೆ ಸಾಗು  ನಿನಗೆ ಧೈರ್ಯವಿದ್ದರೆ.

 

ಕಣ್ಣೀರು ಹಾಕಿಸೋ ವ್ಯಕ್ತಿಗಿಂತ

ಕಣ್ಣೀರ ಒರೆಸೋ ವ್ಯಕ್ತಿ ಜೊತೆಯಾದರೆ

ಜೀವನ ಚನ್ನಾಗಿರುತ್ತೆ…!

 

ಕಣ್ಣೀರನ್ನ ಕಣ್ಣಲ್ಲಿಯೇ ಹಾಳು ಮಾಡುವ ವಿದ್ಯೆ ಕಲಿಸಿದ್ದು  ಬದುಕು…

 

ಒಬ್ಬರಿಗಾಗಿ ನಮ್ಮ ಹೃದಯ ಕಣ್ಣೀರು ಹಾಕ್ತಿದೆ ಅಂದ್ರೆ ಅದು ಬರೀ ಪ್ರೀತಿ ಅಲ್ಲ ನೀವು ಅಂದ್ರೆ ಹುಚ್ಚು ಪ್ರೀತಿ ಅಂತ.

 

ಒಲವೆಂದರೆ….

ಬೆಟ್ಟದಷ್ಟು ನಂಬಿಕೆ

ಒಂದಷ್ಟು ಹುಸಿಮುನಿಸು

ಚೂರು ಮೊಸಳೆ ಕಣ್ಣೀರು

ಬೊಗಸೆಯಷ್ಟು ಪ್ರೀತಿ

ಜೀವ ನೀಡುವಷ್ಟು ಅಕ್ಕರೆ, ಕಣ್ಣೀರು ಜಾರಿ ಹೋದ ಮೇಲೆ

ಮತ್ತೆ ಕಣ್ಣು ಸೇರಲ್ಲ

ಪ್ರೀತಿ ಮರೆತು ಹೋದ ಮೇಲೆ

ಮತ್ತೆ ಹೃದಯ ಸೇರಲ್ಲ

ಸ್ನೇಹಿತರು ಎಷ್ಟೇ ದೂರ ಹೋದರು

ನೆನಪು ಮಾತ್ರ ಹೋಗಲ್ಲ.

 

ಪ್ರೀತಿ ಎಂಬ ಸಾಲ ಪಡೆದ ಮೇಲೆ

ಕಣ್ಣೀರು ಎಂಬ ಬಡ್ಡಿ ಕಟ್ಟಲೇಬೇಕು, ಪ್ರೀತಿ ಕಾರಣ ಇಲ್ಲದೇ ಹುಟ್ಟುತ್ತೆ

ಪ್ರೀತಿ ಸ್ವಾರ್ಥ ಇಲ್ಲದೆ ಬೆಳೆಯುತ್ತೆ

ನಿಜವಾದ ಪ್ರೀತಿ ಕ್ಷಣಮಾತ್ರದಲ್ಲಿ

ಪ್ರೀತಿಸುವ ಹೃದಯಕ್ಕೆ ಬೆಟ್ಟಿಯಾಗುತ್ತೆ

ಮುಂದೊಂದು ದಿನ ಹೃದಯದಿಂದ

ಕಣ್ಣಿನೆಡೆಗೆ ಸಾಗಿ ಕಣ್ಣೀರು ತರಿಸುತ್ತೆ

 

ಕೆಲವೊಂದು ಆಯ್ಕೆ ನನ್ನದೇ ತಪ್ಪು ಯಾರದೆಂದು ಹೇಳಲಿ

ಕೆಲವೊಂದು ನಿರ್ಧಾರ ನನ್ನದೇ ಯಾರನ್ನ ಅಪಾರ್ಥ ಮಾಡಿಕೊಳ್ಳಲಿ

ಕೆಲವೊಂದು ಕನಸು ನನ್ನದೇ ಯಾರಿಗೋಸ್ಕರ ಕಣ್ಣೀರು ಹಾಕಲಿ

ಕೆಲವೊಮ್ಮೆ ಅತಿಯಾದ ಪ್ರೀತಿ ನನ್ನದೇ ಯಾರಿಗೆಂದು ನಾ ತೋರಿಸಲಿ

ಬೇಡಿದಾಗ ಸಿಗದ ನಿನ್ನ ಪ್ರೀತಿ

ಅವಶ್ಯಕತೆ ಇದ್ದಾಗ ಸಿಗದ ನಿನ್ನ ಕಾಳಜಿ,

ಬೇಕೆಂದಾಗ ಸಿಗದ ನಿನ್ನ ಸಹಾಯ,

ಬಯಸಿದಾಗ ಸಿಗದ ನೀನು

ನಾ ಸತ್ತಮೇಲೆ ಬಂದು ಒಂದು ಹಾರ ಹಾಕಿ ಕಣ್ಣೀರಾಕಿದರೆ ನಾ ಎದ್ದು ಬಂದು ಕಣ್ಣೀರು ಒರೆಸಲಾಗುವುದೇ????

 

ಬದುಕಿದ್ದಾಗ ಸಿಗದ ನಿನ್ನ ಪ್ರೀತಿ, ಕಾಳಜಿ,

ಸತ್ತಮೇಲೆ ಸಿಗುವ ಸನ್ಮಾನಕ್ಕೆ ಸಮ.

 

ನನಗೆ ದೂರವಿಟ್ಟು ನನ್ನ ಮರೆಯೋ ವಿಚಾರದಲ್ಲಿ ಅವಳು ಗೆದ್ದಳು. ಅವಳು ಎಷ್ಟೇ ನೋವು ಮಾಡಿ ಕಣ್ಣೀರು ಹಾಕಿಸಿದ್ದರು ಅವಳ ಪ್ರೀತಿ ಉಳಿಸಿಕೊಳ್ಳುವ ವಿಚಾರವಿದೆ ನಾ ಸೋತು ಹೋದೆ .

 

ಮದ್ಯ ರಾತ್ರಿಯಲ್ಲೂ ಎದ್ದು ಕುಂತು ಎದೆ ನಡುಗಿಸಿ ಕಣ್ಣೀರು ಹಾಕಿಸುವಂತಹ ಶಕ್ತಿ ಇರೋದು ನಿನ್ನ ನೆನಪುಗಳಿಗೆ ಮಾತ್ರ.

 

ಮರೆಯಲಾಗದ ಅವಳ  ಈ  ನೆನಪೇ ಪ್ರೀತಿ.

 

ತಲೆಯೆತ್ತಿ ನಡೆಯುವ ಬದುಕಿನ ನಡುವೆ

ತಲೆತಗ್ಗಿಸಿ ಕಣ್ಣೀ‌ರ್ ಹಾಕುವ ಪ್ರೀತಿ ನನ್ನವಳದು

ಬದುಕು ಬದಲಾಗಲೇ ಇಲ್ಲ .

ಕಣ್ಣೀರು ಕೊನೆಯಾಗಲೆ ಇಲ್ಲ

ಜೀವನ ಇದ್ದರೂ ನೆಮ್ಮದಿ ಇಲ್ಲ

ನಿನ್ನ ಪ್ರೀತಿಗೆ ನಾ ಸೋತು ಹೋದೆನಲ್ಲ.

 

ಮಾಡಿದ ಪ್ರೀತಿ ಸೂಡುಗಾಡು ಸೇರಿತು..

ಕಣ್ಣೀರು ಕೂಡ ಬೇಸತ್ತು ಹೋಯಿತು..

ನೋವನ್ನು ಸಂಭ್ರಮಿಸಿ ಹುಚ್ಚನಾಗಲ

ದೇವರಿಗೆ ಶಪಿಸುತ ಮಣ್ಣಲ್ಲಿ ಮಣ್ಣಾಗಲ.

 

ಪ್ರೇಯಸಿಯಾಗಿ ನಟಿಸಿ ಪಾತ್ರವ ಮುಗಿಸಿದೆಯಾ

ಆ ನಟನೆಯ ನಿಜವೆಂದು ನಂಬಿದೆ

ನನ್ನ್ ಈ ಹೃದಯ.. 

 

ನಿಜವಾದ ಪ್ರೀತಿ ಯಾವುದು ಗೊತ್ತಾ. ಎಷ್ಟೇ ನೋವು ಆದ್ರು ಅವರನ್ನೇ ಇಷ್ಟಪಡೋದು..

 

ಪ್ರೀತಿ ಎಂಬ ನ್ಯಾಯಾಲದಿಂದ ನೋವು ಎಂಬ ಜೈಲಿಗೆ ಬಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನೀರ ಪ್ರಾಧಿ ಪ್ರೇಮಿ ನಾನು.

 

ಒಳ್ಳೆ ಮನಸ್ಸಿಗೆ  ಪ್ರೀತಿ ಸಿಗಲ್ಲ.

ಬಣ್ಣ ಬಣ್ಣದ ಜೀವನಕ್ಕೆ ಮಾರಿ ಹೋಗೋ ಕಾಲ

ನೋವು ನಲಿವಿನ ಆಟ

ಹೃದಯದ  ಕಂಬನಿಯ  ಮಿಡಿತದ ಪಾಠ.

ಪ್ರೀತಿ ಪ್ರೇಮ ಎಲ್ಲ  ಮಾಯಾಲೋಕ.

ಕೊನೆಕಾಣದ  ಪ್ರೀತಿ 

ಯಾರಿಗೆ ಪಜೀತಿ.

 

ನೀನು ಚೂರಿ ಹಾಕಿದ್ದು ಬೆನ್ನಿಗೆ ಆದರೂ ..

ಅದರ ನೋವು ತಾಕಿದ್ದು ಮಾತ್ರ ಹೃದಯಕ್ಕೆ .

ಕೊಲ್ಲುವುದೆ ನಿನ್ನ ಇರಾದೆಯಾಗಿದ್ದರೆ ಚೂರಿಯನ್ನು ಸೀದಾ ಎದೆಗೆ ಇಳಿಸಬೇಕಿತ್ತು .

ಪ್ರೀತಿ ಅಷ್ಟು ಮಾತ್ರದ ಪ್ರಾಮಾಣಿಕತೆಯನ್ನು ಬಯಸುತ್ತಿರುತ್ತದೆ .

 

ಪ್ರೀತಿ ಮಾಡೋದು ತುಂಬಾ ಸುಲಭ, ಆದರೆ ಅದೇ ಪ್ರೀತಿ , ಪ್ರೀತಿಸಿದವರು ದೂರವಾದಾಗ ಆಗುವ ನೋವು ತುಂಬಾ ಕಷ್ಟ ಕಣ್ರೀ.

 

ಪ್ರೀತಿ ಮಾಡಿದ ಹುಡುಗಿ ಜೊತೇಲಿ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ ಆದ್ರೆ ಒಂದು ಹುಡ್ಗಿನ  ಪ್ರಾಮಾಣಿಕವಾಗಿ ಪ್ರೀತಿ ಮಾಡ್ದೆ ಅನ್ನೋ ಆ ಖುಷಿ ಕೊನೆಯವರೆಗೂ ಮನದಲ್ಲೇ ಇರುತ್ತೆ.

 

Hurt Sad Quotes in Kannada Images

ನೋವು ಮತ್ತು ದುಃಖವನ್ನು ವ್ಯಕ್ತಪಡಿಸಲು ಕನ್ನಡದಲ್ಲಿ ಇರುವ ಈ ಉಲ್ಲೇಖಗಳು (heart touching crying hurt sad quotes in kannada) ನಿಮ್ಮ ಮನಸ್ಸಿಗೆ ಸ್ಪಂದಿಸಿವೆ ಎಂದು ನಾವು ನಂಬುತ್ತೇವೆ. ಜೀವನದ ಕಠಿಣ ಕ್ಷಣಗಳಲ್ಲಿ ಈ ಉಲ್ಲೇಖಗಳು ನಿಮ್ಮ ಭಾವನೆಗಳಿಗೆ ಶಬ್ದ ನೀಡಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಹೃದಯಕ್ಕೆ ಸಾಂತ್ವನ ನೀಡುತ್ತವೆ.

ನಿಮಗೆ ಈ ಸಂಗ್ರಹಣೆ ಇಷ್ಟವಾಗಿದೆ ಎಂಬುದು ನಮ್ಮ ಆಶಯ. ದಯವಿಟ್ಟು ಈ ಉಲ್ಲೇಖಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ ಮತ್ತು ಇನ್ನಷ್ಟು ಪ್ರೇರಣಾದಾಯಕ ಹಾಗೂ ಹೃದಯಸ್ಪರ್ಶಿ ಉಲ್ಲೇಖಗಳಿಗೆ ನಮ್ಮ ಬ್ಲಾಗ್‌ಗೆ ಮತ್ತೆ ಭೇಟಿ ನೀಡಿ. 


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.