Informal Letter Format in Kannada | ಅನೌಪಚಾರಿಕ ಪತ್ರಗಳು

ಈ ಮಾರ್ಗದರ್ಶಿಯಲ್ಲಿ, ಅನೌಪಚಾರಿಕ ಪತ್ರಗಳನ್ನು ಸರಳ ಮತ್ತು ಸ್ನೇಹಪರ ರೀತಿಯಲ್ಲಿ ಬರೆಯುವುದು ಹೇಗೆ (informal letter format in kannada) ಎಂದು ನಾವು ನಿಮಗೆ ತೋರಿಸುತ್ತೇವೆ. ನೀವು ಈ ಪತ್ರಗಳ ಕುರಿತು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ನಾವು ನಿಮಗೆ ಉದಾಹರಣೆಗಳನ್ನು ನೀಡುತ್ತೇವೆ. 

Informal Letter Format in Kannada Examples

ಅನೌಪಚಾರಿಕ ಪತ್ರಗಳು (informal letters in kannada) ಕಾಗದದ ಮೇಲಿನ ಸ್ನೇಹಪರ ಚಾಟ್‌ಗಳಂತೆ. ಅವು ಔಪಚಾರಿಕ ಪತ್ರಗಳಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ಅವುಗಳು ಹೆಚ್ಚು ವೈಯಕ್ತಿಕವಾಗಿರುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಅನೌಪಚಾರಿಕ ಪತ್ರಗಳನ್ನು ಬರೆಯುವುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ವಿಶೇಷ ಮಾರ್ಗವಾಗಿದೆ.

ನೀವು ಕಾಳಜಿವಹಿಸುವ ಜನರೊಂದಿಗೆ ಸಂಪರ್ಕದಲ್ಲಿರಲು ಅನೌಪಚಾರಿಕ ಪತ್ರಗಳನ್ನು ಬರೆಯುವುದು ಹೇಗೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅದು ಸ್ನೇಹಿತರನ್ನು ಸಂಪರ್ಕಿಸುತ್ತಿರಲಿ ಅಥವಾ ನಿಮ್ಮ ತಂದೆ/ತಾಯಿ, ಪೋಷಕರೊಂದಿಗೆ ಸುದ್ದಿಯನ್ನು ಹಂಚಿಕೊಳ್ಳುತ್ತಿರಲಿ, ಅನೌಪಚಾರಿಕ ಪತ್ರಗಳು ನಿಮ್ಮನ್ನು ನಿಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುತ್ತವೆ.

ಅನೌಪಚಾರಿಕ ಪತ್ರಗಳನ್ನು ಬರೆಯುವ ಕಲೆ ಇತರರ ಭಾವನೆಗಳನ್ನು ಸಂವಹನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಮತ್ತು ಇತರರೊಂದಿಗೆ ಆಳವಾದ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಸಹಾಯ ಮಾಡುವ ಅಭ್ಯಾಸದಂತಿದೆ.

ನೀವು ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಬರೆಯುತ್ತಿರಲಿ, ಈ anoupacharika patragalu ಮಾರ್ಗದರ್ಶಿ ನಿಮಗೆ ಸ್ವಾಭಾವಿಕವಾಗಿ ಧ್ವನಿಸುವ ಮತ್ತು ನಿಮ್ಮ ಸಂದೇಶವನ್ನು ಸ್ಪಷ್ಟಪಡಿಸುವ ಅನೌಪಚಾರಿಕ ಪತ್ರಗಳನ್ನು(informal letter writing format in kannada) ಬರೆಯಲು ಸಹಾಯ ಮಾಡುತ್ತದೆ.

ಅನೌಪಚಾರಿಕ ಪತ್ರಗಳು ಎಂದರೇನು? | Informal Letters in Kannada

ಅನೌಪಚಾರಿಕ ಪತ್ರಗಳು ವೈಯಕ್ತಿಕ ಸಂಬಂಧವನ್ನು ಹೊಂದಿರುವ ಜನರ ನಡುವೆ ವಿನಿಮಯವಾಗುವ ಲಿಖಿತ ಸಂದೇಶಗಳಾಗಿವೆ. ಅನೌಪಚಾರಿಕ ಪತ್ರಗಳನ್ನು ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರೊಂದಿಗೆ ಶಾಂತ ಮತ್ತು ಸ್ನೇಹಪರ ರೀತಿಯಲ್ಲಿ ಸಂವಹನ ಮಾಡಲು ಬಳಸಲಾಗುತ್ತದೆ. 

ಅವು ಸಾಮಾನ್ಯವಾಗಿ ವೈಯಕ್ತಿಕ ಉಪಾಖ್ಯಾನಗಳು, ದೈನಂದಿನ ಜೀವನದ ಕುರಿತು, ಭಾವನೆಗಳ ಅಭಿವ್ಯಕ್ತಿಗಳು ಮತ್ತು ಸ್ವೀಕರಿಸುವವರ ಯೋಗಕ್ಷೇಮದ ಬಗ್ಗೆ ವಿಚಾರಣೆಗಳನ್ನು ಒಳಗೊಂಡಿರುತ್ತವೆ. ಅವರು ಸಂಪರ್ಕದಲ್ಲಿರಲು, ಸುದ್ದಿ ಹಂಚಿಕೊಳ್ಳಲು, ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಔಪಚಾರಿಕ ಸಂವಹನವನ್ನು ಅನುಮತಿಸುವುದಕ್ಕಿಂತ ಹೆಚ್ಚು ನಿಕಟ ರೀತಿಯಲ್ಲಿ ಸಂಬಂಧಗಳನ್ನು ನಿರ್ವಹಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

ಅನೌಪಚಾರಿಕ ಪತ್ರಗಳು | Informal Letter Format in Kannada

ಗೆಳೆಯ/ಗೆಳತಿಗೆ ಪತ್ರ

Anopcharik patra in kannada

ನಿಮ್ಮ ಶಾಲಾ ಪ್ರವಾಸದ ಕುರಿತು ನಿಮ್ಮ ನೆಚ್ಚಿನ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ

 

ನಿಮ್ಮ ಹೆಸರು

ಊರು

ದಿನಾಂಕ

 

ಪ್ರೀತಿಯ ಗೆಳೆಯ/ಗೆಳತಿ,

                                                                    ನಾನು ಇಲ್ಲಿ ಕ್ಷೇಮವಾಗಿದ್ದೇನೆ. ನೀನು ಕೂಡ ಕ್ಷೇಮ ಎಂದು ಭಾವಿಸುತ್ತೇನೆ. ನಿನ್ನ ಪತ್ರ ತಲುಪಿತು. ಓದಿ ಸಂತೋಷವಾಗಿದೆ. ಕಳೆದ ವಾರ ನಾವೆಲ್ಲಾ ವಿಧ್ಯಾರ್ಥಿಗಳು ಸೇರಿ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡಿದ್ದೆವು. ಇತಿಹಾಸ ಪ್ರಸಿದ್ಧವಾದ ಐಹೊಳೆ, ಪಟ್ಟದಕಲ್ಲು, ಹಂಪಿ, ಬಾದಾಮಿ ಪ್ರದೇಶಗಳಿಗೆ ಭೇಟಿಕೊಟ್ಟು ಅಲ್ಲಿನ ಶಿಲ್ಪಕಲೆಗಳನ್ನು ಕಣ್ತುಂಬಿಕೊಂಡೆವು ಮತ್ತು ಅದರ ಕುರಿತಾದ ಮಾಹಿಗಳನ್ನು ಉಪನ್ಯಾಸಕರಿಂದ ಪಡೆದವು. ಈ ಪ್ರವಾಸವು ನಮಗೆ ತುಂಬಾ ಖುಷಿ ಮತ್ತು ಜ್ಞಾನವನ್ನು ತಂದುಕೊಟ್ಟಿದೆ. ನೀನು ಕೂಡ ನಮ್ಮ ಜೊತೆ ಬಂದಿದ್ದಾರೆ ಚೆನ್ನಾಗಿರುತ್ತಿತ್ತು. 

ಇಲ್ಲಿ ನಾನು ಚೆನ್ನಾಗಿ ವ್ಯಾಸಂಗ ಮಾಡುತಿದ್ದೇನೆ. ನೀನು ನಿನ್ನ ಓದಿನ ಕಡೆಗೆ ಹೆಚ್ಚಿನ ಗಮನವಹಿಸು.

ನಿನ್ನ ನೆನಪುಗಳೊಂದಿದೆ, 

ನಿನ್ನ ಪ್ರೀತಿಯ ಗೆಳೆಯ/ಗೆಳತಿ

ನಿಮ್ಮ ಹೆಸರು

ಇವರಿಗೆ,

        ಗೆಳೆಯ/ಗೆಳೆತಿಯ ಹೆಸರು

        ವಿಳಾಸ

          

ತಾಯಿಗೆ ಪತ್ರ 

ನಿಮ್ಮ ತಾಯಿಯವರಿಗೆ ನಿಮ್ಮ ಕುಶಲವಾರ್ತೆಯ ಬಗ್ಗೆ ಪತ್ರ ಬರೆಯಿರಿ

ಹತ್ತನೆಯ ತರಗತಿ ‘ಸಿ’

ಸರ್ಕಾರಿ ಪ್ರೌಢಶಾಲೆ

ಉತ್ತರ ಕನ್ನಡ

ಏಪ್ರಿಲ್ 4, 2024 

       ಮಾತೃಶ್ರೀಯವರ ಪಾದಕಮಲಗಳಲ್ಲಿ ಸಂದೀಪನ ಸಾಷ್ಟಾಂಗ ಪ್ರಣಾಮಗಳು. 

ತಮ್ಮ ಆಶೀರ್ವಾದದಿಂದ ನಾನು ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಕುಶಲ ವಿಚಾರಹಾಳಿಗೆ ಬರೆಯುತ್ತಿರಬೇಕಾಗಿ ಕೇಳಿಕೊಳ್ಳುತ್ತೇನೆ. 

     ನಿಮ್ಮ ಹಿಂದಿನ ಪತ್ರದಲ್ಲಿ ತಿಳಿಸಿದಂತೆ ಆರೋಗ್ಯದ ಕಡೆ ಗಮನಿಸುವಂತೆ ತಿಳಿಸಿದ್ದೀರಿ. ನೀವು ಚಿಂತಿಸಬೇಡಿ. ನಾನು ಸಾಕಷ್ಟು ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ಶಾಲೆಯಲ್ಲಿ ಎಲ್ಲಾ ಉಪಾಧ್ಯಾಯರೂ ಚೆನ್ನಾಗಿ ಅರ್ಥವಾಗುವಂತೆ ಪಾಠ ಮಾಡುತ್ತಿದ್ದಾರೆ. ಸಂಶಯಗಳನ್ನು ಪರಿಹರಿಸುತ್ತಿದ್ದಾರೆ. ಅರ್ಧವಾರ್ಷಿಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನಾನು ಉತ್ತಮ ಅಂಕಗಳನ್ನು ಪಡೆದಿದ್ದೇನೆ. ಸಾರ್ವತ್ರಿಕ ಪರೀಕ್ಷೆಯಲ್ಲೂ ಉತ್ತಮ ಶ್ರೇಣಿಯನ್ನು ಪಡೆಯಬಹುದೆಂಬ ನಂಬಿಕೆಯಿದೆ. ಆ ಬಗ್ಗೆ ದಯಮಾಡಿ ಯೋಚಿಸಬೇಡಿ. 

     ವಿದ್ಯಾರ್ಥಿನಿಲಯದಲ್ಲಿ ಒಳ್ಳೆಯ ಊಟ-ಉಪಾಹಾರ ಕೊಡುತ್ತಿದ್ದಾರೆ. ಜೊತೆಯಲ್ಲಿರುವವರೂ ಒಳ್ಳೆಯವರೇ ಆಗಿರುವುದರಿಂದ ನನಗೆ ಮನೆಯಲ್ಲೇ ಇರುವಂತೆ ಭಾಸವಾಗುತ್ತಿದೆ. ದೂರದಲ್ಲಿರುವ ನನ್ನ ಬಗ್ಗೆ ಯೋಚಿಸಿ ನಿಮ್ಮ ಆರೋಗ್ಯ ಕೆಡಿಸಿಕೊಳ್ಳಬೇಡಿ. ಇನ್ನೇನು ಪರೀಕ್ಷೆ ಸಮೀಪಿಸುತ್ತಿದೆ. ಮುಗಿದೊಡನೆ ಮನೆಗೆ ಬರುತ್ತೇನೆ. ಪಲ್ಲವಿಗೆ, ರಾಜೇಶನಿಗೆ ನನ್ನ ಆಶೀರ್ವಾದಗಳನ್ನು ತಿಳಿಸಿ. ಅವರೂ ಚೆನ್ನಾಗಿ ಓದುತ್ತಿರಬಹುದೆಂದು ಭಾವಿಸುತ್ತೇನೆ. 

     ಈ ವರ್ಷ ಈ ಕಡೆ ಮಳೆ ಚೆನ್ನಾಗಿ ಆಗಿದೆ. ಸೆಕೆಯೂ ಕಡಿಮೆ ಇದೆ. ಇನ್ನೇನೂ ವಿಶೇಷ ಕಾಣುತ್ತಿಲ್ಲ. ಬಿಡುವಾದಾಗ ಪತ್ರ ಬರೆಯಿರಿ.

ನಿಮ್ಮ ಪ್ರೀತಿಯ

ಸಂದೀಪ

 

ಇವರಿಗೆ,

 ಶ್ರೀಮತಿ ಸರೋಜಮ್ಮ

 8ನೇ ಅಡ್ಡ ರಸ್ತೆ, ಮೂರನೇ ಬ್ಲಾಕ್

 ರಾಜಾಜಿನಗರ

 ಬೆಂಗಳೂರು  

ಗೆಳೆಯ/ಗೆಳತಿಗೆ ಪತ್ರ

 

ನಿಮ್ಮ ಶಾಲೆಯಲ್ಲಿ ಆಚರಿಸಿದ ಸ್ವಾತಂತ್ರ್ಯೋತ್ಸವದ ಬಗ್ಗೆ ನಿಮ್ಮ ಗೆಳೆಯ/ಗೆಳತಿಗೆ ಒ೦ದು ಪತ್ರ ಬರೆಯಿರಿ

ಎಂಟನೇ  ತರಗತಿ ‘ಡಿ’ 

ಖಾಸಗಿ ಪ್ರೌಢಶಾಲೆ,

ಉಡುಪಿ

ದಿನಾ೦ಕ: ೦೮ ಏಪ್ರಿಲ್ ೨೦೨೪ 

                      ಪ್ರೀತಿಯ ಗೆಳೆಯ ದಯಾನಂದನಿಗೆ, ಗಣೇಶನ ಸ್ನೇಹ ಪ್ರಣಾಮಗಳು.  

 ನಿನ್ನ ಪತ್ರ ತಲುಪಿದ್ದು ಕೂಡಲೇ ಉತ್ತರ ಬರೆಯಲಾಗಲಿಲ್ಲ. ಬೇಸರ ಮಾಡಿಕೊಳ್ಳಬೇಡ.  

ಈ ತಿಂಗಳ ದಿನಾ೦ಕ 15ರಂದು ನಮ್ಮ ಶಾಲೆಯಲ್ಲಿ ಸ್ವಾತ೦ತ್ರ್ಯ ದಿನಾಚರಣೆಯನ್ನು ಅತ೦್ಯತ ವೈಭವದಿಂದ ಆಚರಿಸಿದೆವು. ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಉಪಾಧ್ಯಾಯರು.ಎಲ್ಲರೂ ಅಂದು ಬೆಳಿಗ್ಗೆ ಏಳು ಫ೦ಟೆಗೆ ರಾಷ್ಟ್ರಧ್ವಜವನ್ನು ಹಿಡಿದು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹೋಗಿ ಎಂಟು ಫ೦ಟೆಗೆ ಹಿಂದಿರುಗಿದೆವು. ನಮ್ಮ ಸ್ಥಳೀಯ ಶಾಸಕರು ಧ್ವಜಾರೋಹಣ ಮಾಡಿದರು. ಅನ೦ತರ ಶಾಲೆಯ ಸಭಾ೦ಗಣದಲ್ಲಿ ಎಲ್ಲರೂ ಸೇರಿದೆವು. ಸ್ವಾತ೦ತ್ರ್ಯ ಹೋರಾಟಗಾರರೂ ಗಾ೦ಧೀವಾದಿಗಳೂ ಆಗಿರುವ ಶ್ರೀ ಎಚ್‌.ಎಸ್‌. ದೊರೆಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಆರ೦ಭವಾದವು. ಶಾಲೆಯ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಆರಂಭವಾದವು. ಶಾಲೆಯ ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿದ ನ೦ತರ, ಮುಖ್ಯ ಅತಿಥಿಗಳಾದ ಶಾಸಕರು ಆ ಸ್ವಾತಂತ್ರ್ಯೋತ್ಸವದ ಮಹತ್ವವನ್ನುಅಚ್ಚುಕಟ್ಟಾಗಿ  ತಿಳಿಸಿದರು. ಶಾಲೆಯ ಇತಿಹಾಸದ ಅಧ್ಯಾಪಕರಾದ ಶ್ರೀ ವಿನೋದ್ ಅವರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಅದರ ಅಗತ್ಯ  ಇತರ ವಿಚಾರಗಳ ಕುರಿತು ಮಾತನಾಡಿದರು. ತಮ್ಮ ಭಾಪಣದಲ್ಲಿ ಭಾರತದ ಸ್ಮಾತ೦ತ್ರದ ಸಮಗ್ರ ಚರಿತ್ರೆಯನ್ನು ಮನಮುಟ್ಟುವಂತೆ ವಿವರಿಸುತ್ತಾ, ಅದನ್ನು ಉಳಿಸಿ ಬೆಳಸುವಲ್ಲಿ ನಾಗರೀಕರ ಮಟ್ಟೂ ವಿದ್ಯಾರ್ಥಿಗಳ ಹೊಣೆ ಏನೆಂಬುದನ್ನುಒತ್ತಿ ಹೇಳಿದರು. ಶಾಲೆಯ ವಿದ್ಯಾರ್ಥಿ-ವಿಧ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ದೇಶಭಕ್ತಿ ನಾಟಕವನ್ನು ಸಹ ಅಭಿನಯಿಸಿದರು. ಎಲ್ಲರಿಗೂ ಸಿಹಿ ಹಂಚುವ ಮೂಲಕ ಅಂದಿನ ದಿನ ಮುಗಿಯಿತು. 

ಮನೆಯಲ್ಲಿ ಎಲ್ಲರಿಗೂ ನನ್ನ ಸವಿನನಪುಗಳನ್ನು ತಿಳಿಸು. ಉಳಿದ ವಿಚಾರಗಳ ಕುರಿತು ಇನ್ನೊಮ್ಮೆ ಬರೆಯುತ್ತೇನೆ. ನಿನ್ನ ಉತ್ತರವನ್ನು ನಿರೀಕ್ಷಿಸುತ್ತೇನೆ. 

ಇಂತೀ ನಿನ್ನ ಮಿತ್ರ 

ಗಣೇಶ

ಇವರಿಗೆ

 ದಯಾನಂದ

 ಒಂಬತ್ತನೇ ತರಗತಿ

 ಡಿ.ವಿ.ಎಸ್ ವಿದ್ಯಾಲಯ,

 ಮೈಸೂರು.

 

ತಂದೆಗೆ ಪತ್ರ

 

ನಿಮ್ಮ ತ೦ದೆಯವರಿಗೆ ವಾರ್ಪಿಕ ಪರೀಕ್ಷೆಗೆ ನಿಮ್ಮ ಸಿದ್ಧತೆಯನ್ನು ಕುರಿತು ಒ೦ದು ಪತ್ರ ಬರೆಯಿರಿ. 

 

ಹತ್ತನೆಯ ತರಗತಿ

ಸರ್ಕಾರಿ ಪ್ರೌಢಶಾಲೆ, 

ಬಸವರಾಜನಗರ

ಬೆಂಗಳೂರು

ದಿನಾಂಕ : ೦೮ ಏಪ್ರಿಲ್ ೨೦೨೪

ತೀರ್ಥರೂಪರವರ ಪಾದಾರವಿಂದಗಳಿಗೆ, ಮಣಿರಾಜನ  ಸಾಷ್ಟಾಂಗ ಪ್ರಣಾಮಗಳು. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲಿ ಎಲ್ಲರ ಕ್ಷೇಮ ಸಮಾಚಾರಗಳಿಗೆ ಪತ್ರ ಬರೆಯಬೇಕಾಗಿ ಕೇಳಿಕೊಳ್ಳುವೆ. ಇಲ್ಲಿ ನನ್ನ ಅಭ್ಯಾಸವು ಚೆನ್ನಾಗಿ ನಡದಿದೆ. ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದು, ಫಲಿತಾಂಶವೂ ಬಂದಿದ್ದು, ನಾನು ನಮ್ಮ ತರಗತಿಗೆ ಎರಡನೇ ಸ್ಥಾನ ಬಂದಿದ್ದೇನೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಶೇಕಡ ೯೪ ರಷ್ಟು ಅ೦ಕಗಳು ಬಂದಿವೆ. ನಮಗೆ ಏಪ್ರಿಲ್‌ 15 ರಿಂದ ಪರೀಕ್ಷೆಗಳು ಆರ೦ಭವಾಗಲಿದ್ದು ಅದಕ್ಕಾಗಿ ಓದಿಕೊಳ್ಳುತ್ತಿದ್ದೇನೆ. ಶಾಲೆಯಲ್ಲಿ ಪಠ್ಯವನ್ನೆಲ್ಲಾ ಮುಗಿಸಿ, ನಮಗೆ ಕಷ್ಟವೆನಿಸಿದ ವಿಷಯವನ್ನು  ಪುನರಾವರ್ತನೆ ಮಾಡುತ್ತಿದ್ದಾರೆ. ನಾಸು ಹಿಂದಿನ ಕೆಲವು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸಹ ತರೆಸಿಕೊಂಡಿದ್ದೇನೆ. ಅವುಗಳಿಗೆ ಉತ್ತರ ಬರೆಯಲು ಪ್ರಯತ್ನಿಸುತ್ತಿದ್ದೇನೆ. ವಾರ್ಪಿಕ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆಯಬೇಕೆಂದಿದ್ದೇನೆ. ನನ್ನ ಓದಿನ ವಿಚಾರವನ್ನು ಮಾತೃಶ್ರೀಯವರಿಗೆ ತಿಳಿಸಿ. ನನ್ನ ಬಗ್ಗೆ ಚಿ೦ತಿಸಬಾರದೆಂದು ಹೇಳಿ. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ತಂಗಿ ಪ್ರಿಯಾಳಿಗೆ ಆಶೀರ್ವಾದಗಳು. ಪರೀಕ್ಷೆ ಮುಗಿದ ಕೂಡಲೇ ಊರಿಗೆ ಬರುತ್ತೆ. ನಿಮ್ಮೆಲ್ಲರನ್ನೂ ಯಾವಾಗ ನೋಡುವೆನೆ೦ಬ ಕಾತುರ ಕಾಡುತ್ತಿದೆ. ಪರೀಕ್ಷೆಯಲ್ಲಿ ಯಶಸ್ಸು ಸಿಗಲೆಂದು ದಯವಿಟ್ಟು ಆಶೀರ್ವದಿಸಿ. ನಿಮ್ಮ ಪತ್ರವನ್ನು ನಿರೀಕ್ಷಿಸುತ್ತಿರುವೆ. 

ಇಂತಿ ನಿಮ್ಮ ಪ್ರೀತಿಯ ಮಗ

ಮಣಿರಾಜ

ಇವರಿಗೆ, 

 ಶ್ರೀ ಚಂದ್ರಶೇಖರ

 ನಾಲ್ಕನೇ ಅಡ್ಡರಸ್ತೆ 

 ಶಿವಾಜಿನಗರ, ಬೆಂಗಳೂರು

 

Informal Letter in Kannada Format | ಕನ್ನಡ ಅನೌಪಚಾರಿಕ ಪತ್ರ ಲೇಖನ ಉದಾಹರಣೆಗಳು

Anopcharik patra in kannada example

ತಂದೆಗೆ ಪತ್ರ

ನಿಮ್ಮ ತ೦ದೆಯವರಿಗೆ ನಿಮ್ಮ ಶಾಲೆಯಲ್ಲಿ ಜರುಗಿದ ಕನಕದಾಸ ಜಯಂತಿಯ ಬಗ್ಗ, ಪತ್ರ ಬರೆಯಿರಿ. 

 

ಕೋರಮಂಗಲ

ಬೆಂಗಳೂರು

ದಿನಾಂಕ: ಮಾರ್ಚ್ 12, ೨೦೨೪

            ತೀರ್ಥರೂಪರವರಲ್ಲಿ ಮಂಜುನಾಥನು ಬೇಡುವ ಆಶೀರ್ವಾದಗಳು. ನಾನು ಇಲ್ಲಿ ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಯೋಗಕ್ಕೆಮ ಗಳಿಗೆ ಪತ್ರ ಬರೆಯಬೇಕಾಗಿ ಕೇಳಿಕೊಳ್ಳುತ್ತಾನೆ. 

 

    ಕಳೆದ ಗುರುವಾರ ನಮ್ಮ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಆರಿಸಲಾಯಿತು. ನಮ್ಮ ಜಿಲ್ಲೆಯ ಪ್ರಸಿದ್ಧ ಯೋಗ ಶಿಕ್ಷಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಕನಕದಾಸರ ಜೀವನ-ಸಾಧನೆ. ಮತ್ತು/ ಸಾಹಿತ್ಯಗಳನ್ನು ಕುರಿತು ಅದ್ಭುತವಾಗಿ ಮಾತನಾಡಿದರು. ಕನಕದಾಸರ ಕೃತಿಗಳು ಮತ್ತು ಅದರಲ್ಲಿರುವ ಸಂದೇಶಗಳನ್ನು ವಿವರಿಸಿದರು. ಕನಕದಾಸರ ಕೃತಿಗಳನ್ನು ಅಧ್ಯಯನ ಮಾಡಬೇಕೆಂಬ ಹಂಬಲವನ್ನು ನಮ್ಮಲ್ಲಿ ಮೂಡಿಸಿದರು. ಶಾಲಮಕ್ಕಳೆಲ್ಲಾ ಸೇರಿ ಕನಕದಾಸರ ಕುರಿತ ನಾಟಕವೊಂದನ್ನು ಅಭಿನಯಿಸಿದರು. ಕನಕದಾಸರ ಭಾವಚಿತ್ರಕ್ಕೆ ಪುಪ್ಪಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿಯಿತು. ಅಂದಿನ ಈ ಕಾರ್ಯಕ್ರಮ ಎಂದಂದಿಗೂ. ಮರೆಯುವಂತದ್ದಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿತು. ಮಾತೃಶ್ರೀಯವರಿಗೆ ಮತ್ತು ಅಜ್ಜಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ನಾನು ಚೆನ್ನಾಗಿ ಒದಿಕೊಳ್ಳುತ್ತಿರುವೆನೆಂದೂ ತಿಳಿಸಿ. ಉಳಿದ ವಿಚಾರಗಳ ಕುರಿತು ಇನ್ನೊಮ್ಮೆ ಬರೆಯುತ್ತೇನೆ.

 

ಇಂತೀ ನಿಮ್ಮ ಪ್ರೀತಿಯ ಮಗ

ಮಂಜುನಾಥ

ಇವರಿಗೆ,

 ಶ್ರೀ ರಮಾನಾಥ 

 ಅನುಗ್ರಹ ನಿಲಯ

 ವಿವೇಕನಗರ

 ಬೈಂದೂರು.

ಗೆಳತಿಗೆ ಪತ್ರ

ನಿಮ್ಮ ಶಾಲೆಯಲ್ಲಿ ಆಚರಿಸಿದ ಪೋಷಕರ ದಿನಾಚರಣೆಯ ಕುರಿತು ನಿಮ್ಮ ಗೆಳತಿಗೆ ಒ೦ದು ಪತ್ರ ಬರೆಯಿರಿ. 

 

ಒಂಬತ್ತನೇ ತರಗತಿ ‘ಬಿ’ 

ಸರ್ಕಾರಿ ಪ್ರೌಢಶಾಲೆ

ದಿನಾಂಕ: 1 ಮಾರ್ಚ್ ೨೦೨೪

 

ಒಲವಿನ ಗೆಳತಿ ಶುಭಾಳಿಗೆ, ನಿನ್ನ ಗೆಳತಿ ವಿಶಾಲಾಕ್ಷಿ ಮಾಡುವ ವಂದನೆಗಳು. ನಾನು ಆರೋಗ್ಯವಾಗಿದ್ದೇನೆ. ನಿನ್ನ ಹಾಗೂ ನಿನ್ನ ಮನೆಯವರ ಕೇಮ ಸಮಾಚಾರಕ್ಕೆ ಪತ್ರ ಬರೆ.  ಕಳೆದ ವಾರವಷ್ನೆ ನಮ್ಮ ಶಾಲೆಯಲ್ಲಿ ಪೋಷಕರ ದಿನಾಚರಣೆ’ನ್ನು ಆಚರಿಸಲಾಯಿತು. ಶಾಲೆಯಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ತಂದೆ-ತಾಯಿಯರನ್ನು ಶಾಲೆಗೆ ಆಹ್ವಾನಿಸಲಾಗಿತ್ತು. ಸಾಕಷ್ಟು ಜನರು ಬಂದಿದ್ದರು. ಅವರಿಗೆಲ್ಲಾ ಹೂಗುಚ್ಛ ನೀಡಿ ಸ್ವಾಗತಿಸಲಾಗಿತ್ತು. ಶಾಲೆಯ ಪಠ್ಯ-ಪಠ್ಯೆಥರ ಚಟುವಟಿಕೆಗಳ ಪರಿಚಯವನ್ನು ಶಾಲಾ ಮುಖ್ಯೋಪಾಧ್ಯಾಯರು ವಿವರಿಸಿದರು. ಪೋಷಕರ ಸಲಹೆ-ಸಹಕಾರಗಳನ್ನೂ ಕೇಳಿದರು. ಪೋಷಕರಿಂದ ಸಹ ಉತ್ತಮ ಪ್ರತಿಕ್ರಿಯೆ ಬಂದಿತು. ಮಕ್ಕಳ ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಅಂದಿನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ‘ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಪಕರ ಪಾತ್ರ’ ಎ೦ಬ ವಿಚಾರವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಲಘು. ಮನರಂಜನೆಯ ಕಾರ್ಯಕ್ರಮವೂ ನಡಯಿತು. ಅಲೋಪಹಾರದೊಂದಿಗೆ ಅಂದಿನ ಕಾರ್ಯಕ್ಷಮ ಮುಗಿಯಿತು. ಅಧ್ಯಾಪಕರು, ವಿದ್ಯಾರ್ಥಿಗಳು, ಪೋಪಕರು ಸೇರಿ ಹೀಗೆ ವಿಚಾರ ವಿನಿಯಮ ಮಾಡುವುದರಿಂದ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗುತ್ತದೆಯಂದು ಅನೇಕ ಪೋಪಕರು. ಅಭಿಪ್ರಾಯಪಟ್ಟರು. ನಿಮ್ಮ ಶಾಲೆಯಲ್ಲಿಯೂ ಈ ಬಗೆಯ. ಕಾರ್ಯಕ್ರಮಗಳು ನಡೆದಿದ್ದರೆ ಅದರ ವಿವರಗಳನ್ನು ತಿಳಿಸು. ನಿನ್ನ ಅಭ್ಯಾಸ ಹೇಗೆ ನಡದಿದೆ ಎನ್ನುವ ಬಗ್ಗೆ ಬರೆ. ನಿನ್ನ ತಂದೆ-ತಾಯಿಯವರಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ನಿನ್ನ ಉತ್ತರವನ್ನು ನಿರೀಕ್ಷಿಸುತ್ತೇನೆ. 

                                     ವಂದನೆಗಳೊಂದಿಗೆ, 

ನಿನ್ನ ಗೆಳತಿ 

ವಿಶಾಲಾಕ್ಷಿ 

 

ಇವರಿಗೆ,

 ಕುಮಾರಿ ಶುಭಾ

 ಹತ್ತನೆಯ ತರಗತಿ ‘ಡಿ’ ವಿಭಾಗ

 ಕೇಂದ್ರೀಯ ವಿಧ್ಯಾಲಯ

 ಮಂಗಳೂರು. 

 

ತಂದೆಗೆ ಪತ್ರ

ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವವನ್ನು ವಿವರಿಸಿ ತಂದೆಯವರಿಗೆ ಪತ್ರ ಬರೆಯಿರಿ 

 

ಹತ್ತನೆಯ ತರಗತಿ

ಜನತಾ ವಿಧ್ಯಾಲಯ ಪ್ರೌಢಶಾಲೆ

ಕಡತೋಕ

ದಿನಾಂಕ: ೨೧ ಮಾರ್ಚ್ ೨೦೨೪ 

 

ತೀರ್ಥರೂಪರವರಿಂದ ಬೇಡುವ ಆಶೀರ್ವಾದಗಳು. ನಾನು ಇಲ್ಲಿ ಕ್ಷೇಮವಾಗಿದೇನೆ. ಅಲ್ಲಿ ನಿಮ್ಮೆಲ್ಲರ ಕುಶಲ. ಸಮಾಚಾರಗಳಿಗೆ ಬರೆಯಬೇಕಾಗಿ ಕೇಳಿಕೊಳ್ಳುತ್ತೇನೆ. ಮೊನ್ನೆ ನಮ್ಮ ಶಾಲೆಯ ವಾರ್ಪಿಕೋತ್ಸವ ನಡೆಯಿತು. ಶಿಕ್ಷಣ ಇಲಾಖೆಯ ಜಿಲ್ಲಾ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಟೋಟ ಹಾಗೂ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೀತರಾಗಿದ್ದವರಿಗೆ ಬಹುಮಾನಗಳನ್ನು ನೀಡಿದರು. ವಿದ್ಯಾರ್ಥಿಗಳ ಕರ್ತವ್ಯಗಳ ಕುರಿತು ಮಾತನಾಡಿದ್ದರು. ನಮಗೆಲ್ಲರಿಗೂ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಂದ ಮನೋರ೦ಜನೆಯ ಕಾರ್ಯಕ್ರಮವಿತ್ತು. ನಾನೊ೦ದು ಜಾನಪದ ಗೀತೆಯನ್ನು ಹಾಡಿದೆ. ಎಲ್ಲರೂ ಮೆಚ್ಚಿ ಪ್ರಶಂಸಿದರು. ವಿದ್ಯಾರ್ಥಿಗಳಿಂದ ಹಾಸ್ಯ ನಾಟಕವಿತ್ತು. ನಾಟಕವನ್ನು ಸಹ ಎಲ್ಲರೂ ಮೆಚ್ಚಿಕೊಂಡರು. ವಾರ್ಪಿಕೋತ್ತವದ ಸಲುವಾಗಿ ನಡೆಸಿದ ಆಟೋಟ, ಸಾಹಿತ್ಯ ಸ್ಪರ್ಧೆಗಳಲ್ಲಿ ನಾನೂ ಭಾಗವಹಿಸಿದ್ದೆ. ನೂರು ಮೀಟರ್‌ ಓಟ ಮತ್ತು ಪ್ರಬಂಧ ರಚನೆ, ಮತ್ತು ಸಂಗೀತ ಸ್ಪರ್ಧೆಗಳಲ್ಲಿ ವಿಜೀತನಾಗಿ. ಬಹುಮಾನವನ್ನು ಪಡೆದಿದ್ದೇನೆ. ವಾರ್ಪಿಕೋತ್ಸವದ ಕರೆಯೋಲೆಯನ್ನು ನಿಮಗೆ. ಕಳಿಸಿದ್ದೆ. ನೀವೆಲ್ಲರೂ ಬರಬಹುದಂಬ ಆಸೆ ಇರಿಸಿಕೊಂಡಿದ್ದ ನನಗೆ ನಿರಾಶೆಯಾಯಿತು, ಮಾರ್ಚ್ ತಿಂಗಳಲ್ಲಿ ನಮ್ಮ ಪರೀಕ್ಷೆ ನಡೆಯಲಿದ್ದು ಪಾಠಗಳೆಲ್ಲವೂ ಮುಗಿಯುತ್ತ ಬಂದಿವೆ. ಓದಿಕೊಳ್ಳಲು ಸಹ ವೇಳಾಪಟ್ಟಿಯನ್ನು ಹಾಕಿಕೊಂಡಿದ್ದೇನೆ. ಅಮ್ಮನಿಗೆ ನನ್ನ ನಮಸ್ಕಾರಗ್ಗಳನ್ನು ತಿಳಿಸಿ. ನಿಮ್ಮ ಪ್ರತ್ಯುತ್ತರಕ್ಕಾಗಿ ನೋಡುತ್ತಿರುವೆ. ನಮಸ್ಕಾರಗಳೊಂದಿಗೆ,

 

ನಿಮ್ಮ ಪ್ರೀತಿಯ ಮಗ

ವಿನೋದ

 

ಇವರಿಗೆ,  

 ಶ್ರೀ ರಾಮಚಂದ್ರಪ್ಪ

 ೨ನೇ ಅಡ್ಡರಸ್ತೆ, ಕುವೆಂಪುನಗರ

ಅಜ್ಜನಿಗೆ ಪತ್ರ

ಆರೋಗ್ಯದ ಕುರಿತು ನಿಮ್ಮ ಅಜ್ಜನಿಗೆ ಪತ್ರ ಬರೆಯಿರಿ

 

ಆತ್ಮೀಯ ಅಜ್ಜನಿಗೆ,

 

                   ಈ ಪತ್ರವು ನಿಮ್ಮನ್ನು ತಲುಪಿದೆ ಎಂದು ನಾನು ಭಾವಿಸುತ್ತೇನೆ. ನಾನು ಹಿಂದಿನ ದಿನ ನಿಮ್ಮ ಬಗ್ಗೆ ಯೋಚಿಸುತ್ತಿದ್ದೆ ಮತ್ತು ನಿಮ್ಮ ಕ್ಷೇಮದ ಬಗ್ಗೆ ತಿಳಿಯಬೇಕೆಂದು  ನಿರ್ಧರಿಸಿದೆ. ನಾವು ಕೊನೆಯದಾಗಿ ಮಾತನಾಡಿ ಬಹಳ ಸಮಯವಾಗಿದೆ.

ಹೇಗಿದ್ದೀರಿ? ನಿಮ್ಮ ಬೆನ್ನಿಗೆ ಸ್ವಲ್ಪ ತೊಂದರೆಯಾಗಿದೆ ಎಂದು ನಾನು ಅಮ್ಮನಿಂದ ಕೇಳಿದೆ. ಅದನ್ನು ಕೇಳಲು ನನಗೆ ವಿಷಾದವಿದೆ. ವೈದ್ಯರು ನಿಮಗೆ ನೀಡುತ್ತಿರುವ ಚಿಕಿತ್ಸೆಗಳು ನಿಮಗೆ ಸಹಾಯ ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ. ನೀವು ಈ ಪಾತ್ರವನ್ನು ನೋಡಿದಮೇಲೆ ಎಷ್ಟು ಆನಂದಿಸುತ್ತೀರಿ ಎಂದು ನನಗೆ ತಿಳಿದಿದೆ.

ನಾನು ಚಿಕ್ಕವನಿದ್ದಾಗ ನೀವು ಹೇಳುತ್ತಿದ್ದ ಆ ಕಥೆಗಳು, ಅಜ್ಜಿಯಮನೆಯಲ್ಲಿ ಕಳೆದ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಬಾಲ್ಯದ ಆ ದಿನಗಳನ್ನು ತುಂಬಾ ಮಿಸ್ ಮಾಡಿಕೋಲುತ್ತಿದ್ದೇನೆ, ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಳಿದ್ದೇನೆ.. ಆ ವಿಶೇಷ ಕ್ಷಣಗಳನ್ನು ಮರುಸೃಷ್ಟಿಸಲು ನಾನು ಇಷ್ಟಪಡುತ್ತೇನೆ.

 

ನಿಮಗೆ ಸಾಧ್ಯವಾದಾಗಲೆಲ್ಲಾ ನನಗೆ ಕರೆ ಮಾಡಿ. ನಾನು ನಿಮ್ಮ ಧ್ವನಿಯನ್ನು ಕೇಳಲು ಇಷ್ಟಪಡುತ್ತೇನೆ.

 

ಇಂತಿ ನಿಮ್ಮ ಪ್ರೀತಿಯ,

[ನಿಮ್ಮ ಹೆಸರು]

 

ಇವರಿಗೆ,

 ಹೆಸರು

 ವಿಳಾಸ

 

ನಾವು ಅನೌಪಚಾರಿಕ ಪತ್ರ ಮೇಲಿನ ಉದಾಹರಣೆಗಳನ್ನು ನೋಡಿದಾಗ ಈ ಪತ್ರಗಳು ನಮ್ಮ ವೈಯಕ್ತಿಕ ಸಂಪರ್ಕಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಇಂದಿನ ವೇಗದ ಡಿಜಿಟಲ್ ಜಗತ್ತಿನಲ್ಲಿ ಸಹ ಪತ್ರವನ್ನು ಬರೆಯುವುದು ಮುಖ್ಯವಾಗಿದೆ.

ಈ ಮಾರ್ಗದರ್ಶಿಯ ಮೂಲಕ, ಅನೌಪಚಾರಿಕ ಪತ್ರಗಳು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟವಾಗಿರಲು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ನಾವು ಬರೆಯುವ ಪ್ರತಿಯೊಂದು ಪದವೂ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಮತ್ತು ನಮ್ಮ ಸಂಬಂಧಗಳನ್ನು ಗಟ್ಟಿಯಾಗಿರಿಸುತ್ತದೆ. ಈ ಅನೌಪಚಾರಿಕ ಪತ್ರಗಳ ಉದಾಹರಣೆಗಳ (informal letter format in kannada examples) ಲೇಖನವನ್ನು ಇತರರೊಂದಿಗೆ ಹಂಚಿಕೊಳ್ಳಿ. ಅದು ಅವರಿಗೂ ಉಪಯುಕ್ತವಾಗಬಹುದು.

Frequently Asked Questions (FAQs)

ಅನೌಪಚಾರಿಕ ಪತ್ರ ಎಂದರೇನು?

ಅನೌಪಚಾರಿಕ ಪತ್ರಗಳು ವೈಯಕ್ತಿಕ ಸಂಬಂಧವನ್ನು ಹೊಂದಿರುವ ಜನರ ನಡುವೆ ವಿನಿಮಯವಾಗುವ ಪತ್ರಗಳಾಗಿದ್ದು ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರಿಗೆ ಬರೆಯಲಾಗುತ್ತದೆ.

ಕನ್ನಡದಲ್ಲಿ ಪತ್ರ ಬರೆಯುವ ವಿಧಗಳು ಯಾವುವು?

ಕನ್ನಡದಲ್ಲಿ ಪತ್ರ ಬರೆಯುವ ಎರಡು ಬಗೆಗಳು ಇದ್ದು ಅವುಗಳನ್ನು ಔಪಚಾರಿಕ ಪತ್ರಗಳು ಮತ್ತು ಅನೌಪಚಾರಿಕ ಪತ್ರಗಳು ಎಂದು ಕರೆಯುತ್ತಾರೆ. 

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.