ಕೈ ಕೆಸರಾದರೆ ಬಾಯಿ ಮೊಸರು | Kai Kesaradare Bai Mosaru Gade in Kannada

Kai Kesaradare Bai Mosaru Gade in Kannada

ಈ ಲೇಖನದಲ್ಲಿ ಕೈ ಕೆಸರಾದರೆ ಬಾಯಿ ಮೊಸರು ಗಾದೆಯ ಸಾರಾಂಶವನ್ನು (kai kesaradare bai mosaru gade in kannada) ನೋಡೋಣ. ಚಿಕ್ಕ ವಿಸ್ತರಣೆಯಿಂದ ಹಿಡಿದು ದೊಡ್ಡ ಸಾರಾಂಶದ ವರೆಗೆ ಈ ಲೇಖನದಲ್ಲಿ ನಿಮಗಾಗಿ ಈ ಗಾದೆಯ ಅರ್ಥವನ್ನು ವಿವರಿಸಿದ್ದೇವೆ. 

Kai Kesaradare Bai Mosaru Gade in Kannada | ಕೈ ಕೆಸರಾದರೆ ಬಾಯಿ ಮೊಸರು

ಕನಕದಾಸರು ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಹಾಡಿದ್ದಾರೆ. ಎಲ್ಲರೂ ಮಾಡುವುದೂ ಬದುಕಲು ಮೂಲ ವಸ್ತುವಾದ ಊಟಕ್ಕಾಗಿಯೇ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಬರುವ ವೃತ್ತಿಯನ್ನು ಸ್ವೀಕರಿಸಿ ದುಡಿಯುವುದು ಹೊಟ್ಟೆಗಾಗಿಯೇ. 

ಕೆಲವರಿಗೆ ಮೈಮುರಿದು ದುಡಿಯುವುದೆಂದರೆ ಕಷ್ಟ. ಹಲವರಿಗೆ ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಅದರ ಪ್ರತಿಫಲವು ಅವರಿಗೆ ಸಿಕ್ಕೇ ಸಿಗುತ್ತದೆ. 

ಮಳೆಗಾಲದಲ್ಲಿ ಕೈಕಾಲು ಕೇಸರಾಗುತ್ತದೆಂದು ರೈತ ಸುಮ್ಮನೆ ಕುಳ್ಳುವುದಿಲ್ಲ. ಹೊಲಕ್ಕೆ ಹೋಗಿ ಬೀಜ ಬಿತ್ತಿ ಬೆಳೆ ಬೆಳೆಯುತ್ತಾನೆ. ಆನಂತರ ಸುಖವಾಗಿ ಹೆಂಡತಿ ಮಕ್ಕಳೊಂದಿಗೆ ಬಾಳುತ್ತಾನೆ. ಕೈ ಕೆಸರಾದರೆ ಮಾತ್ರ ಬಾಯಿ ಮೊಸರಾಗುತ್ತದೆ. 

Kai Kesaradare Bai Mosaru Meaning in Kannada |  ಕೈ ಕೆಸರಾದರೆ ಬಾಯಿ ಮೊಸರು ಗಾದೆಯ ಅರ್ಥ

ಇದೊಂದು ಅರ್ಥಪೂರ್ಣವಾದ ಎಲ್ಲರಿಗೂ ಅನ್ವಯಿಸುವ ಗಾದೆ ಮಾತು. ‘ಕಷ್ಟಪಟ್ಟರೆ ಫಲವುಂಟು’. ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎನ್ನುವ ಅರ್ಥದ ದ್ರಷ್ಟಿಯಿಂದ ಈ ಗಾದೆಗೆ ಪರ್ಯಾಯ ಗಾದೆಗಳಿವೆ. ಬದುಕು ಸಾರ್ಥಕವಾಗುವುದು ದುಡಿಮೆಯಿಂದ.. ದುಡಿಮೆಯಲ್ಲಿ ಮೇಲೂ-ಕೀಳು ಎಂಬುದಿಲ್ಲ.

ಶ್ರದ್ದೆಯಿಂದ, ಪರಿಶ್ರಮದಿಂದ ದುಡಿಮೆ ಮಾಡಿದಾಗ ಅದು ನಮಗೆ ಉತ್ತಮ ಫಲವನ್ನು ಕೊಡುತ್ತದೆ. ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಬದುಕಿನ ಕಷ್ಟ-ನಷ್ಟಗಳನ್ನು ನಮ್ಮ ಅರಿವೆಗೆ ತಂದು ನಮ್ಮನ್ನು ದೈಹಿಕನಾಗಿಯೂ, ಮಾನಸಿಕವಾಗಿಯೂ ಸದೃಡವಾಗಿ ಮಾಡುತ್ತದೆ. ಈ ಗಾದೆಯು ವ್ಯಕ್ತಿಯ ಮತ್ತು ದೇಶದ ಅಭಿವೃದ್ದಿಯ ಕೀಲಿ-ಕೈ ಆಗಿದೆ. ಶ್ರಮಪಟ್ಟು ದುಡಿಯೋಣ ಖುಷಿಯಾಗಿ ಬಾಳೋಣ.

Kai Kesaradare Bai Mosaru in Kannada |  ಕೈ ಕೆಸರಾದರೆ ಬಾಯಿ ಮೊಸರು ಗಾದೆ ಸಾರಾಂಶ

ಪೀಠಿಕೆ: ಗಾದೆಗಳಿಗೆ ನಾಣ್ಣುಡಿ ಎಂದು ಕರೆಯುತ್ತಾರೆ. ಗಾದೆಗಳು ಹಿರಿಯರ ಅನುಭವದ ಮಾತುಗಳೇ ಆಗಿವೆ. ವೇದ ಸುಳ್ಳಾದರು ಗಾದೆ ಸುಳ್ಳಗದು ಎಂಬ ಮಾತಿದೆ.

ಅರ್ಥ: ನಾವು ಇಂದು ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡಿ ಸಂಪಾದಿಸಿದರೆ ಮಾತ್ರ ಮುಂದೆ ನಾವು ರಾಜರಂತೆ ಕೂತು ಮೊಸರನ್ನು ತಿನ್ನಬಹುದು. ಹೇಗೆಂದರೆ ಇಂದು ಹೊಲದಲ್ಲಿ ದುಡಿಯುವ ರೈತನ ಕೈ ಕೆಸರಾಗಿದ್ದರೂ ಸಹ ಅವನು ಬೆಳೆ ಬೆಳೆದ ಮೇಲೆ ಅವನು ಸಂಪಾದಿಸಿದ ಹಣದಲ್ಲಿ ಆರಾಮಗಿರಬಹುದು.

Kai Kesaradare Bai Mosaru Meaning |  ಕೈ ಕೆಸರಾದರೆ ಬಾಯಿ ಮೊಸರು

ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಜೀವನದಲ್ಲಿ ಸುಖ ಸಿಗುತ್ತದೆ. ಅವನು ಬಯಸಿದ ಸಕಲ ವಸ್ತುಗಳು, ಹಣ, ಕೀರ್ತಿ, ಇಷ್ಟ ಬಂದ ವಸ್ತುಗಳನ್ನು ಕೂತು ತಿನ್ನಬಹುದು. ಬಯಸಿದ ವಸ್ತ್ರಗಳನ್ನು ಧರಿಸಬಹುದು. ಕೈಗೆ ಮೊಸರು ಮೆತ್ತಿಕೊಂಡು ದುಡಿದವನ ಬಾಯಿಗೆ ಮೊಸರು ಸಿಗುತ್ತದೆ. ಅಂದರೆ ಕಷ್ಟ ಪಡುವ ವ್ಯಕ್ತಿಗೆ ಸುಖ ಕಟ್ಟಿಟ್ಟ ಬುತ್ತಿ ಎಂಬುದೇ ಈ ಗಾದೆಯ ಅರ್ಥ. 

ಕೈ ಕೆಸರಾದರೆ ಬಾಯಿ ಮೊಸರು | Kai Kesaradare Bai Mosaru Gade in Kannada

ಇದೊಂದು ಸುಪ್ರಸಿದ್ಧ ಗಾದೆಯಾಗಿದೆ. ಗಾದೆಗಳು ಹಿರಿಯರ ಅನುಭವಗಳಿಂದ ನುಡಿದ ನುಡಿಮುತ್ತುಗಳಾಗಿದೆ. ಗಾದೆಗಳು ನಾವು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ನಮಗೆ ಸೂಚಿಗಳಾಗಿವೆ.

ವಿವರಣೆ: ಕೈ ಕೆಸರಾದರೆ  ಬಾಯಿ ಮೊಸರು ಎಂದಾಗ ಕೈಯನ್ನು ಕೆಸರಲ್ಲಿ ಅದ್ದಿ ತೆಗೆದಾಗ ಬಾಯಿ ತಾನಾಗೆ ತಾನೇ ಮೊಸರಾಗುತ್ತದೆ ಎಂಬುದು ಶಾಬ್ದಿಕ ಅರ್ಥವಾದರೂ ಅದರ ಭಾವಾರ್ಥ ಬೇರೆಯೇ ಇದೆ. 

ಕೈ ಕೆಸರಾಗುವುದು ಎಂದರೆ ಕಷ್ಟಪಟ್ಟು ದುಡಿಯುವುದು ಬಾಯಿ ಮೊಸರಾಗುವುದು ಎಂದರೆ ಹೊಟ್ಟೆ ತುಂಬಾ ಸವಿಯಾದ ಊಟ ಮಾಡಬಹುದೆಂಬುದು ಇದರ ಅರ್ಥ.

ವಿಶೇಷತೆ: ಕಷ್ಟಪಡುವುದರಿಂದ ಸುಖ ಸಿಗುತ್ತದೆ ಎಂಬುದನ್ನೂ ಈ ಗಾದೆ ಅರ್ಥೈಸುತ್ತದೆ. ಇದು ಹಿರಿಯರು ನಮಗೆ ತಿಳಿಸಿಕೊಟ್ಟಿರುವ ನೀತಿ ಸಂದೇಶವೂ ಆಗಿದೆ.

ಕೈ ಕೆಸರಾದರೆ ಬಾಯಿ ಮೊಸರು ಗಾದೆ | Kai Kesaradare Bayi Mosaru Gade in Kannada

ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಜೀವನ ಅನುಭವದ ಸಾರಗಳಾಗಿವೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಉಕ್ತಿ ಜನಪದರ ಜೀವನದ ಅನುಭವದ ನುಡಿಯಾಗಿದೆ. ಜೀವನದಲ್ಲಿ ಕಷ್ಟಪಟ್ಟರೆ ಮಾತ್ರ ಸುಖವಾಗಿ ಜೀವನ ನಡೆಸಲು ಸಾಧ್ಯ ಎಂಬುದನ್ನ ಈ ಗಾದೆಮಾತು ತಿಳಿಸುತ್ತದೆ. 

ಇಂದು ಕಷ್ಟಪಟ್ಟರೆ ನಾಳೆ ಸುಖ ಸಿಗುವುದು. ಈ ಮಾತು ಎಲ್ಲಾ ವರ್ಗದ ಜನರಿಗೂ ಅನ್ವಯವಾಗುತ್ತದೆ. ಸೋಮಾರಿಯಾಗಿ ಸುಮ್ಮನೆ ಕುಳಿತು ಕುಳ್ಳುವ ಬದಲು ಕಷ್ಟಪಟ್ಟು ದುಡಿಯಬೇಕು. ಅದರಲ್ಲಿ ಸುಖವುಂಟು. ಈ ಕೆಲಸ ಮಾಡುವುದಾದರೂ ಹೇಗೆ, ಆ ಕೆಲಸ ಯಾಕೆ ಮಾಡಬೇಕು ಎಂದು ಯೋಚಿಸುತ್ತಾ ಕುಳಿತರೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಕೆಲಸ ಮಾಡದಿದ್ದರೆ ಧನಾರ್ಜನೆಯಾಗುವುದಿಲ್ಲ. ಇದರಿಂದ ಹೊಟ್ಟೆ ತುಂಬುವುದಿಲ್ಲ.  

 ‘ಕೈ ಕೆಸರಾದರೆ ಬಾಯಿ ಮೊಸರು’ ಇದು ಚಿಕ್ಕ ವಾಕ್ಯದಂತಿದ್ದರೂ ಅರ್ಥ ವೈಶಾಲ್ಯವನ್ನು ಹೊಂದಿದೆ. ಕಷ್ಟಪಡದೆ ಸುಖ ಸಿಗುವುದಿಲ್ಲವೆಂಬ ಧ್ವನಿ ಈ ಗಾದೆಯಲ್ಲಿದೆ. ಕೈ ಕೆಸರಾಗುವುದು ದುಡಿಮೆಯ ಸಂಕೇತವಾದರೆ ಮೊಸರು ಅದರ ಪ್ರತಿಫಲವನ್ನು ಪಡೆಯುವುದನ್ನು ಸೂಚಿಸುತ್ತದೆ. ಹೊಲದಲ್ಲಿ ಕಷ್ಟಪಟ್ಟು ದುಡಿದ ರೈತನ ಬಾಳು ಹಸನಾಗುತ್ತದೆ.

ಯಾವ ರೈತ ಹೊಲ ಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಸಮೃದ್ದವಾಗಿ ಬೆಳೆ ಬೆಳೆದು ದನಕರುಗಳನ್ನು ಸಾಕಿ ಸಲಹುತ್ತಾನೆಯೊ ಅವನು ಸಂತೃಪ್ತ ಜೀವನವನ್ನು ಸಾಗಿಸುತ್ತಾನೆ. ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಅಭ್ಯಾಸ ಮಾಡಿ ಜ್ಞಾನಾರ್ಜನೆ ಮಾಡಿದರೆ ಮುಂದಿನ ಜೀವನ ಸುಖಕರವಾಗುವುದು. ಯಾವ ವಿಧ್ಯಾರ್ಥಿಗಳು ಪ್ರಾರಂಭದಿಂದಲೂ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆಯೋ ಅವರಿಗೆ ಉತ್ತಮ ಫಲಿತಾಂಶ ದೊರೆತೇ ದೊರೆಯುತ್ತದೆ.  

ಅಂತಹ ವಿಧ್ಯಾರ್ಥಿಗಳು ಜೀವನದಲ್ಲೂ ಮೇಲೆ ಬರುವುದರಲ್ಲಿ ಯಾವ ಸಂಶಯವು ಇಲ್ಲ. ಕೈ ಕೆಸರಾಗುವುದೆಂದರೆ ಸುಮ್ಮನೆ ಕೂರದೆ ಯಾವ ಕೆಲಸವಾದರೂ ಸಹ ಶ್ರಮವಹಿಸಿ ದುಡಿದರೆ ಒಳ್ಳೆಯ ಫಲ ಸಿಗುತ್ತದೆ ಎಂಬ ಅರ್ಥ ಇದರಲ್ಲಿ ಅಡಗಿದೆ. ‘ಕಷ್ಟಪಟ್ಟರೆ ಫಲವುಂಟು’ ಎಂಬ ಗಾದೆಮಾತು ಸಹ ಇದನ್ನೇ ಹೇಳುತ್ತದೆ. 

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ | Kai Kesaradare Bai Mosaru Gade in Kannada

ಗಾದೆಗಳಿಲ್ಲದ ದೇಶವಿಲ್ಲ; ಭಾಷೆಯಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ ಎಂಬ ಮಾತಿದೆ. ಗಾದೆಗಳ ಆಂತರ್ಯವನ್ನು ತಿಳಿದವನಿಗೆ ಬೇರೆ ಗ್ರಂಥಗಳ ಅವಲೋಕನ ಅವಶ್ಯಕತೆಯಿಲ್ಲ. ಅಂತಹ ಶ್ರೇಷ್ಠ ಗಾದೆಗಳಲ್ಲಿ ಕೈ ಕೆಸರಾದರೆ ಬಾಯಿ ಮೊಸರು ಗಾದೆಯು ಸಹ ಒಂದು. ದುಡಿಮೆಯ ಮಹತ್ವವನ್ನು ಈ ಗಾದೆ ಸೊಗಸಾಗಿ ವಿವರಿಸುತ್ತದೆ. 

ಈ ಗಾದೆ ಕೇವಲ ರೈತಾಪಿ ಮಂದಿಗೆ ಸೀಮಿತವಾಗಿಲ್ಲ. ದುಡಿಯುವ ಎಲ್ಲಾ ವರ್ಗದ ಜನರಿಗೂ ಅನ್ವಯವಾಗುತ್ತದೆ. ಕವಿ ಬರೆಯುತ್ತಾನೆ. ಬಡಗಿ ಮರಗೆಲಸ ಮಾಡುತ್ತಾನೆ. ಕೆಲಸ ಮಾಡುವುದರಿಂದಲೇ ಬದುಕು ಹಸನಾಗುತ್ತದೆ. 

ಯಾರು ಉದ್ಯೋಗಿಯಾಗೋ ದುಡಿಯುತ್ತಾನೋ ಆಟ ಕ್ರಿಯಾಶೀಲವಾಗಿರುತ್ತಾನೆ, ಬುದ್ಧಿವಂತನಾಗಿರುತ್ತಾನೆ. ಉದ್ಯೋಗ ಯಾವುದೇ ಆಗಿರಲಿ ಶ್ರದ್ಧೆಯಿಂದ ಮಾಡಿದರೆ ದುಡಿದವನು ದುಡ್ಡು ಗಳಿಸುತ್ತಾನೆ. 

ಕಾಯಕವೇ ಕೈಲಾಸ ಎಂಬ ಶರಣರ ಮಾತು ನೆನಪಾಗುತ್ತದೆ. ದುಡಿಮೆಯೇ ದೇವರು. ದುಡಿದರೆ ಪ್ರತಿಫಲ ದೊರೆಯುತ್ತದೆ. ಕೈ ಕೆಸರಾದರೇನೇ ಬಾಯಿ ಮೊಸರಾಗುವುದು. 

ಕೈ ಕೆಸರಾದರೆ ಬಾಯಿ ಮೊಸರು ಗಾದೆ ವಿಸ್ತರಣೆI Kai Kesaradare Baayi Mosaru Kannada Proverb

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನುಗೊಳಿಸುತ್ತದೆ. ಅಂತಹ ಅಮೂಲ್ಯವಾದ ಗಾದೆಗಳಲ್ಲಿ ಈ ಗಾದೆಯು ಒಂದಾಗಿದೆ. 

ಈ ಗಾದೆಯ ಅರ್ಥವೇನೆಂದರೆ ಕಷ್ಟಪಟ್ಟರೆ ಸುಖ ಸಿಗುತ್ತದೆ ಎಂಬುದು. ಕನಕದಾಸರು ಹೇಳಿರುವಂತೆ “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲ್ಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೇಯುವ ಕೆಲಸವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ-ನಷ್ಟಗಳು ಇರುತ್ತದೆ. ಆದರೆ ಕಷ್ಟಗಳು ಬರುವುದೆಂದು ಕೆಲಸ ಮಾಡದೆ ಹಾಗೆಯೇ ಬದುಕಲಾಗದು. 

ಕೈ ಕೇಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ? ಬೆಳೆ ಇಲ್ಲದೆ ಊಟ ಮಾಡುವುದು ಹೇಗೆ? ರೈತ ಕೈ ಕೇಸರನ್ನು ಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟಪಡಲು ಪ್ರೇರೇಪಿಸುತ್ತದೆ. 

ಬಸನವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರಮದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ. ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರು ಕಷ್ಟಪಟ್ಟು ದುಡಿಯಬೇಕು. ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯುವುದು ಸಾಧ್ಯ.

ನಮ್ಮ ಈ ಕೈ ಕೆಸರಾದರೆ ಬಾಯಿ ಮೊಸರು ಗಾದೆಯ ಅರ್ಥದ ಸಂಗ್ರಹ (kai kesaradare bai mosaru meaning in kannada) ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಕನ್ನಡ ಗಾದೆಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತಿರಿ.