ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ | Gidavagi Baggadu Maravagi Baggite

Gidavagi Baggadu Maravagi Baggite Gaade in Kannada

ಈ ಲೇಖನದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ (Gidavagi Baggadu Maravagi Baggite) ಈ ಗಾದೆಯ ವಿಸ್ತರಣೆಯನ್ನು ನೋಡೋಣ. 

ಈ ಗಾದೆ ವಿಸ್ತರಣೆಗಳು ನಿಮಗೆ ಎಕ್ಸಾಮ್ ನಲ್ಲಿ ಬರೆಯಲು ಅಥವಾ ಇತರ ಯಾವುದೇ ಪ್ರಬಂಧ ಅಥವಾ ಭಾಷಣ ಸ್ಪರ್ಧೆಗಳಿಗೆ ಸಹಾಯ ಮಾಡುತ್ತವೆ. ಅನೇಕ ಮಾದರಿಯ ಗಾದೆಯ ಅರ್ಥವನ್ನು ನಾವು ಇಲ್ಲಿ ನೀಡಿದ್ದೇವೆ.

Gidavagi Baggadu Maravagi Baggite | ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಗಾದೆ ವಿಸ್ತರಣೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಕನ್ನಡದಲ್ಲಿ | Gidavagi Baggadu Maravagi Baggite Meaning in Kannada

ಪೀಠಿಕೆ: ಜಾನಪದ ಸಾಹಿತ್ಯ ಪ್ರಕಾರದಲ್ಲಿ ಗಾದೆಗಳು ಮಹತ್ವದ ಸ್ಥಾನ ಪಡೆದಿವೆ. ಬಾಲ್ಯದಲ್ಲಿಯೇ ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ ಎಂಬುದು ಪ್ರಸ್ತುತ ಗಾದೆಯ ಅರ್ಥವಾಗಿದೆ.

ವಿವರಣೆ: ಗಿಡ ಚಿಕ್ಕದಿರುವಾಗ ಅದನ್ನು ಹೇಗೆ ಬೇಕಾದರೂ ಬಾಗಿಸಬಹುದು. ಆದರೆ ಮರವಾದ ಬಳಿಕ ಬಾಗಿಸಲು ಹೋದರೆ ಮುರಿದು ಹೋಗುತ್ತದೆ. ಅಂತೆಯೇ ಚಿಕ್ಕವರಿದ್ದಾಗಲೇ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ರೂಡಿಸಿದರೆ ಜೀವನ ಪರ್ಯಂತ ತಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯತನ ಅಳವಡಿಸಿಕೊಂಡು ಬಾಳುತ್ತಾರೆ. ಬಲೈಗೆ ಚಿಕ್ಕ ವಯಸ್ಸಿನಲ್ಲಿಯೇ ಹಾದಿ ತಪ್ಪಿದ ಮಕ್ಕಳನ್ನು ದೊಡ್ಡವರಾದಮೇಲೆ ತಿದ್ದುವುದು ಬಹಳ ಕಷ್ಟವಾಗುತ್ತದೆ. ಕೆಲವೊಮ್ಮೆ ತಿದ್ದಲು ಸಾಧ್ಯವಾಗದೆ ಸಮಾಜಕ್ಕೆ ಕಂಟಕರಾಗಿ ಬೆಳೆಯಲೂಬಹುದು. 

ಉಪಸಂಹಾರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಗುಣಗಳನ್ನು ಬೆಳೆಸಬೇಕು ಎಂಬುದನ್ನೂ ಈ ಗಾದೆ ಸೂಚಿಸುತ್ತದೆ. 

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಪ್ರಬಂಧ | Gidavagi Baggadu Maravagi Baggite Prabandha

ಪೀಠಿಕೆ: ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಹಿರಿಯರ ಅನುಭವದ ನುಡಿಮುತ್ತುಗಳೇ ಈ ಗಾದೆಗಳು. ಬಿಂದುವಿನಂತಹ ಗಾದೆಯಲ್ಲಿ ಸಿಂಧುವಿನಂತಹ ವಿಶಾಲಾರ್ಥವು ಅಡಗಿರುತ್ತದೆ. ಅಂತಹ ಕನ್ನಡದ ಹಲವಾರು ಸುಪ್ರಸಿದ್ಧ ಗಾದೆಗಳಲ್ಲಿ ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ?’ ಎಂಬ ಗಾದೆಯು ಸಹ ಒಂದಾಗಿದೆ.

ವಿಷಯ ವಿವರಣೆ: ಯಾವುದೇ ಗಿಡವನ್ನು ಚಿಕ್ಕದಿರುವಾಗ ಬಗ್ಗಿಸಬಹುದು. ಅದು ಮರವಾದ ಮೇಲೆ ಬಗ್ಗಿಸಲು ಹೋದರೆ ಅದು ಬಗ್ಗುವುದಿಲ್ಲ. ಹಾಗೆಯೇ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಒಳಿತು-ಕೆಡುಕುಗಳ ಬಗ್ಗೆ ತಿಳಿಸಿ, ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳುವ ಹಾಗೆ ಮಾಡಬೇಕು. 

‘ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷದ ತನಕ’ ಎನ್ನುವ ಮಾತಿನಂತೆ ಬಾಲ್ಯದಲ್ಲಿಯೇ ಕಾಲ ಕಾಲಕ್ಕೆ ತಕ್ಕ ಬುದ್ಧಿ ಮಾತುಗಳನ್ನು ಹೇಳಿ ಅವರು ದಾರಿ ತಪ್ಪಿದಾಗ ತಿದ್ದಿ, ಬುದ್ಧಿ ಹೇಳಿದರೆ, ತಮ್ಮ ತಪ್ಪುಗಳನ್ನು ತಿಡ್ಡಿಕೊಂಡು ಬೆಳೆಯುತ್ತಾ ಅವರು ಉತ್ತಮ ಪ್ರಜೆಗಳಾಗುತ್ತಾರೆ. 

ಆದರೆ ಮಕ್ಕಳು ಚಿಕ್ಕವರು ಎಂದು ಅವರು ಮಾಡುವ ತಪ್ಪುಗಳನ್ನು ತಿದ್ದಿ ತಿಳುವಳಿಕೆ ಹೇಳದೇ ಇದ್ದರೆ, ದೊಡ್ಡವರಾದ ಮೇಲೆ ಯಾವುದೇ ಪ್ರಯೋಜನಕ್ಕೆ ಬಾರದೇ ಬಾಳಬೇಕಾಗಿ ಬರಬಹುದು. ಆಮೇಲೆ ಅವರನ್ನು ತಿದ್ದಲು ಆಗದೆ ಪಶ್ಚಾತಾಪ ಪಡುವ ಸ್ಥಿತಿ ನೀರ್ಮಾನವಾಗಭೂದು ಎಂಬ ಅರ್ಥ ಈ ಗಾದೆಯಲ್ಲಿ ಅಡಗಿದೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಗಾದೆ | Gidavagi Baggadu Maravagi Baggite Gade in Kannada

ಪೀಠಿಕೆ: ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಯ ಮಹತ್ವವನ್ನು ಬಹು ಸುಂದರವಾಗಿ ಅರ್ಥೈಸುತ್ತದೆ.

ಪ್ರಸ್ತುತ ಗಾದೆ ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ’ ಇದು ಮನುಷ್ಯನ ಜೀವನ ಕ್ರಮಕ್ಕೆ ನೇರವಾಗಿ ಸಂಬಂಧಿಸಿದೆ. 

ವಿಷಯ ವಿವರಣೆ: ಯಾವುದೇ ಗಿಡವನ್ನು ಚಿಕ್ಕದಾಗಿದ್ದಾಗ ಬಗ್ಗಿಸಬಹುದು. ಆದರೆ ಅದು ಮರವಾದ ಮೇಲೆ ಬಗ್ಗಿಸಲು ಹೋದರೆ ಅದು ಬಗ್ಗುವುದಿಲ್ಲ. ಬಲವಂತವಾಗಿ ಬಗ್ಗಿಸಲು ಹೋದರೆ ಅದು ಮುರಿದು ಹೋಗುತ್ತದೆ.

ಹಾಗೆಯೇ ಮಕ್ಕಳು ಚಿಕ್ಕವರಿರುವಾಗಳೇ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ಮನದಟ್ಟು ಮಾಡಿಸಿ, ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳುವ ಹಾಗೆ ಮಾಡಬೇಕು. ಚಿಕ್ಕಂದಿನ ರೂಡಿಗಳು ದೊಡ್ಡವಾರದ ಮೇಲೂ ಹಾಗೆಯೇ ಇರುತ್ತದೆ. ಚಿಕ್ಕಂದಿನಿಂದಲೇ ಕೆಟ್ಟ ಅಭ್ಯಾಸಗಳನ್ನು, ಚಟಗಳನ್ನು ಮೈಗೆ ಹತ್ತಿಸಿಸಿಕೊಂಡರೆ ಅವುಗಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಆಗ ತಿದ್ದಲು ಹೋದರೆ ಅನಾಹುತಗಳೇ ಹೆಚ್ಚಾಗುತ್ತವೆ. 

ಆದ್ದರಿಂದ ಬಾಲ್ಯದಲ್ಲಿರುವಾಗಲೇ ಮಕ್ಕಳಿಗೆ ಅವರು ಮಾಡುವು ಕೆಟ್ಟ ಕೆಲಸಗಳಿಗೆ ಪ್ರೋತ್ಸಾಹ ನೀಡದೆ, ತಿದ್ದಿ ಬುದ್ದಿ ಹೇಳಿ ಒಳ್ಳೆಯ ಮಾರ್ಗದಲ್ಲಿ ನಡೆಯುವ ಹಾಗೆ ಮಾಡಬೇಕು. ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳುವುದನ್ನು ಬಾಲ್ಯದಿಂದಲೂ ರೂಡಿಸಕೊಳ್ಳಬೇಕು. ಬಾಲ್ಯದಲ್ಲಿಯೇ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂಬುದು ಈ ಗಾದೆಯ ಆಶಯವಾಗಿದೆ. 

ಇದನ್ನೂ ಓದಿ: 

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಗಾದೆ ಅರ್ಥ ವಿವರಣೆ | Gidavagi Baggaddu Maravagi Baggithe Gaade Vistarane

ಗಾದೆಗಳು ನಮ್ಮ ಜಾನಪದ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದೆ. ಗಾದೆಗಳು ವೇದಗಳಿಗೆ ಸಮಾನ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. 

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಈ ಗಾದೆಯು ಗಿಡ-ಮರಗಳಿಗೆ ಮತ್ತು ಮನುಷ್ಯನಿಗೆ ಇರುವ ಹೋಲಿಕೆಯನ್ನು ವರ್ಣಿಸುತ್ತದೆ. 

ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಗುಣಗಳನ್ನು ಕಲಿಯದವರು ದೊಡ್ಡವರಾದ ಮೇಲೆ ಕಲಿಯಲಾರರು” ಎಂಬುದು ಈ ಗಾದೆಯ ಅರ್ಥ. ಗಿಡವು ಚಿಕ್ಕದಾಗಿರುವಾಗಲೇ ಅದನ್ನು ಯೋಚನೆ ಮಾಡಿ ಬೆಳೆಸಬಹುದು. ಗಿಡವು ಮನೆಯ ಗಾಳಿ ಬೆಳಕಿಗೆ ಅಡ್ಡಿ ಉಂಟು ಮಾಡುತ್ತದೆಯೋ ಅಥವಾ ಇನ್ಯಾವುದೋ ರೀತಿಯಲ್ಲಿ ಅಡಚಣೆ ಉಂಟು ಮಾಡಬಹುದೆಂದು ಯೋಚಿಸಿ ಅದನ್ನು ಗಿಡವಾಗಿದ್ದಾಗಲೇ ಮುಂದೆ ತೊಂದರೆ ಮಾಡದಂತೆ ಬಗ್ಗಿಸಿ ಸರಿಯಾದ ದಿಕ್ಕಿನಲ್ಲಿ ಬೆಳೆಸಬಹುದು. ಆದರೆ ಅದೇ ಗಿಡವು ದೊಡ್ಡ ಮರವಾಗಿ ಬೆಳೆದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಿಲ್ಲ.

ಅಂತೆಯೇ ಮಗು ಚಿಕ್ಕದಿರುವಾಗಲೇ ಅದಕ್ಕೆ ಸರಿಯಾದ ನಡೆ-ನುಡಿಯನ್ನು ಕಲಿಸಬೇಕು. ನ್ಯಾಯ, ನೀತಿ, ಧರ್ಮ, ಸತ್ಯ, ಮುಂತಾದ ಸದ್ಗುಣಗಳ ಬಗ್ಗೆ ಮಗು ಚಿಕ್ಕದಿರುವಾಗಲೇ ತಿಳಿಸಬೇಕು. ಸರಿಯಾದ ದಾರಿಯಲ್ಲಿ ಬೆಳೆಸಬೇಕು. ಸ್ವೇಚ್ಛೆಯಾಗಿ ಬೆಳೆಯಲು ಬಿಟ್ಟರೆ ಸಮಾಜಘಾತುಕ ಶಕ್ತಿಯಾಗಿ ಆ ಮಗುವು ಬದಲಾಗಬಹುದು. ದೊಡ್ಡವನಾದ ಮೇಲೆ ಅವರನ್ನು ತಿದ್ದಲು ಹೊರಟರೆ ಅದು ಅಸಾಧ್ಯ. 

ಮಗು ಚಿಕ್ಕವನಿರುವಾಗಲೇ ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಪ್ರೀತಿ, ವಾತ್ಸಲ್ಯ, ಗೌರವ ಮತ್ತು ಅವರ ಮಾತನ್ನು ಪಾಲಿಸುವ ಗುಣ ಕಲಿಸಬೇಕು. ಬಲಿತ ಮರವನ್ನು ಹೇಗೆ ಬಗ್ಗಿಸಲು ಸಾಧ್ಯವಿಲ್ಲವೋ, ಹೆಚ್ಚು ಬಲ ಪ್ರಯೋಗ ಮಾಡಿದರೆ ಮುರಿದು ಬೀಳಬಹುದೂ, ಹಾಗೆ ದೊಡ್ಡವನಾದ ಮೇಲೆ ಒಬ್ಬ ವ್ಯಕ್ತಿಯನ್ನು ತಿದ್ದಲು ಹೊರಟರೆ ಆ ವ್ಯಕ್ತಿಯು ತಿರುಗಿ ಬೀಳಬಹುದು ಮತ್ತು ಅನಾಹುತಕ್ಕೆ ಕಾರಣವಾಗಬಲ್ಲರು. 

ಬಾಲ್ಯದಲ್ಲಿಯೇ ಸದ್ಗುಣಗಳನ್ನು ಧಾರೆ ಎರೆದು ಬೆಳೆಸಬೇಕು. ಆಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ದೇಶದ ಉತ್ತಮ ನಾಗರಿಕನಾಗಿ ಆ ವ್ಯಕ್ತಿಯು ಬೆಳೆಯಲು ಸಾದ್ಯ ಎಂಬುದೇ ಈ ಗಾದೆಯ ಅರ್ಥ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಗಾದೆಯ ಅರ್ಥ | Gidavagi Baggadu Maravagi Baggite in Kannada

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಜೀವನವನ್ನು ಹಸನಾಗಿಸುವ ಶಕ್ತಿ ಹೊಂದಿದೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯು ಒಂದಾಗಿದೆ. 

ವ್ಯಕ್ತಿಯು ಚಿಕ್ಕ ವಯಸ್ಸಿನಲ್ಲಿ ಬೇರು ಬಿಟ್ಟು ಹೆಮ್ಮರವಾದ ದುರ್ಗುಣಗಳನ್ನು ಕಂಡಾಗ ಈ ಗಾದೆಯು ಹುಟ್ಟಿಕೊಂಡಿದೆ. ಗಿಡವು ಚಿಕ್ಕದಾಗಿರುವಾಗ ಅದನ್ನು ಬಾಗಿಸಬಹುದು. ಅದೇ ಅದು ಬೆಳೆದು ಬೃಹತ್ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ. ಮನೆಯ ಮುಂದೆ ಆಲಂಕಾರಿಕ ಗಿಡವಾದರೂ ಸಹ ಅದು ಚಿಕ್ಕದಿರುವಾಗಲೇ ನಮಗೆ ಬೇಕಾದ ಆಕಾರಕ್ಕೆ ಬಗ್ಗಿಸಬೇಕು. ಅದು ದೊಡ್ಡದಾಗಿ ಬೆಳೆದ ಮೇಲೆ ನಮಗೆ ಬೇಕಾದ ಆಕಾರಕ್ಕೆ ಅದನ್ನು ತರಲು ಸಾಧ್ಯವಾಗುವುದಿಲ್ಲ. 

ಬಾಳಬೇಕಾದ ಮಕ್ಕಳಿಗೆ ಚಿಕ್ಕವರಿರುವಾಗಲೇ ಜೀವನ ಮೌಲ್ಯಗಳನ್ನು ರೂಡಿಸುವ ಕಾರ್ಯವಾಗಬೇಕು. ಅವರಿಗೆ ಚಿಕ್ಕವರಿರುವಾಗಲೇ ಬುದ್ಧಿ ಹೇಳಬೇಕು. ತಪ್ಪು ಮಾಡಿದರೆ ತಿದ್ದಿ ತಿಳುವಳಿಕೆ ನೀಡಬೇಕು. ಆದರೆ ಅವರು ಚಿಕ್ಕವರು ಎನ್ನುವ ಕಾರಣಕ್ಕೆ ಅವರ ತಪ್ಪುಗಳನ್ನು ತಿದ್ದದೇ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ದೊಡ್ಡವರಾದಂತೆ ಅದೇ ತಪ್ಪುಗಳೆ ಅವರ ಪಾಲಿಗೆ ಒಪ್ಪುಗಳಾಗಿ ಮಾರ್ಪಟ್ಟು ಮುಂದೆ ತಿದ್ದ ಹೊರಟರೂ ಪ್ರಯೋಜನವಾಗುದಿಲ್ಲ.

ಮನೆಯಲ್ಲಿ ಮಕ್ಕಳು ಎಷ್ಟು ಪ್ರೀತಿಸಿದರೂ ಮುದ್ದಿಸಿದರೂ ಸರಿ. ಆದರೆ ತಪ್ಪುಗಳ ಪ್ರಶ್ನೆ ಬಂದಾಗ ಅವರ ತಪ್ಪುಗಳನ್ನು ಅವರಿಗೆ ಮನಗಾಣಿಸಿ ಅವರನ್ನು ತಿದ್ದುವುದು ದೊಡ್ಡವರ ಕರ್ತವ್ಯವಾಗಿದೆ. ಮಗುವಿನ ತಪ್ಪು ನಡುವಳಿಕೆಯನ್ನು, ಕೆಟ್ಟ ಸಹವಾಸಗಳನ್ನು ಬಾಲ್ಯದಿಂದಲೇ ತಿಳಿಸಿ ಸರಿಪಡಿಸಬೇಕು. ಇಲ್ಲದಾದರೆ ದೊಡ್ಡವರಾದ ಮೇಲೆ ಅವರು ಸಮಾಜದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದವರಾಗಿ ಬಾಳಬೇಕಾಗುತ್ತದೆ. ಆಮೇಲೆ ಅವರನ್ನು ಸರಿಪಡಿಸಲು ಸಾಧ್ಯವಾಗದೆ ಪಶ್ಚಾತಾಪ ಪಡುವ ಕಷ್ಟ ದೊಡ್ಡವರದಾಗುತ್ತದೆ ಎಂಬುದೇ ಈ ಗಾದೆಯ ಅರ್ಥವಾಗಿದೆ.