ಒಗಟುಗಳ (kannada ogatugalu with answers) ಅದ್ಭುತ ಜಗತ್ತಿಗೆ ಸುಸ್ವಾಗತ! ಒಗಟುಗಳು ಶತಮಾನಗಳಿಂದ ಮಾನವ ಸಂಸ್ಕೃತಿಯ ಭಾಗವಾಗಿದೆ ಮತ್ತು ಸಾಹಿತ್ಯ, ಜಾನಪದ ಮತ್ತು ವಿವಿಧ ರೀತಿಯ ಮನರಂಜನೆಗಳಲ್ಲಿ ಕಂಡುಬರುತ್ತದೆ.
ಒಗಟುಗಳು (ogatu in kannada) ಉದ್ದೇಶವು ಕೇಳುಗ ಅಥವಾ ಓದುಗರಿಗೆ ಉತ್ತರವನ್ನು ಕಂಡುಹಿಡಿಯಲು ಆಳವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸುವಂತೆ ಸವಾಲು ಹಾಕುವುದು. ಒಗಟುಗಳನ್ನು ಸಾಮಾನ್ಯವಾಗಿ ಮನೋರಂಜನೆಯ ಒಂದು ರೂಪವಾಗಿ ಬಳಸಲಾಗುತ್ತದೆ. ಜೊತೆಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಉತ್ತೇಜಿಸುವ ಮಾರ್ಗವಾಗಿದೆ.
ತಮಾಷೆಯ ಒಗಟುಗಳು (funny kannada ogatugalu) ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ನಮ್ಮ ಮೆದುಳಿಗೆ ಸವಾಲು ಹಾಕಲು ಮತ್ತು ಉತ್ತಮ ಸಮಯವನ್ನು ಕಳೆಯಲು ಅತ್ಯುತ್ತಮ ವಿನೋದ ಮಾರ್ಗವಾಗಿದೆ. ಕೆಲವು ಒಗಟುಗಳು ಜೋಕ್‌ಗಳಂತೆಯೇ ಇರುತ್ತವೆ. ಅವು ನಮ್ಮನ್ನು ನಗುವಂತೆ ಮಾಡುತ್ತದೆ. ಅದು ನಮ್ಮ ಮೆದುಳಿನ ಸ್ನಾಯುಗಳಿಗೆ ತಾಲೀಮು ಇದ್ದಂತೆ.
ಈ ಉತ್ತಮ ಒಗಟುಗಳ ಸಂಗ್ರಹಣೆಯಲ್ಲಿ (riddles in kannada) ನಿಮ್ಮ ಮನಸ್ಸನ್ನು ಕಚಗುಳಿಯಿಡುವ, ತಲೆ ಕೆರೆದುಕೊಳ್ಳುವಂತೆ ಮಾಡುವ ಮತ್ತು ನಿಮ್ಮನ್ನು ನಗಿಸುವಂತಹ ಒಗಟುಗಳನ್ನು ನಾವು ಸಂಗ್ರಹಿಸಿದ್ದೇವೆ. ಈ ಅದ್ಭುತ ಕನ್ನಡ ಒಗಟುಗಳನ್ನು (vagatu galu in kannada) ನೀವು ಭೇದಿಸಬಹುದೇ ಎಂದು ನೋಡಿ.
Table of Contents
Best Kannada Ogatugalu with Answers | ಒಗಟುಗಳು
ಒಂಟೆ ಕಾಲು ಕೊಕ್ಕರೆಗೆ ಸಾವಿರಾರು ದಾರಿ.
ಉತ್ತರ – ದಾರಿ
ಅಂಗೈಯಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ, ಇದೇನು?
ಉತ್ತರ – ದೀಪ.
ಸಂಜೆ ತನಕ ಬಡಿದರೂ ಸದ್ದಾಗಲ್ಲ. ಏನದು?
ಉತ್ತರ – ಕಣ್ಣಿನ ರೆಪ್ಪೆ
ಇಬ್ಬರು ಸಹೋದರರೂ ನೆರೆಕೆರೆಯವರಾದರೂ ಒಬ್ಬರನ್ನೊಬ್ಬರು ನೋಡಲಾರರು.
ಉತ್ತರ – ಕಣ್ಣುಗಳು
ಹೊಲಿಯಲು ಬಳಸಲಾಗದ ದಾರ.
ಉತ್ತರ – ಮಂದಾರ
ಹಗಲು ಹೊತ್ತಿನಲ್ಲಿ ಊರಿಗೆಲ್ಲ ಒಂದೇ ದೀಪ.
ಉತ್ತರ – ಸೂರ್ಯ
ಅಕ್ಕ ತಂಗಿಯರು ಚಿಂಟುಳ್ಳಿ ಮರದಾಗೆ ಚಿಗುರು ಕೊಯ್ಯುತ್ತಾರೆ.
ಉತ್ತರ – ಮೇಕೆ
ನೂರಾರು ಚಿನ್ನದ ಮಕ್ಕಳು. ಹೊಟ್ಟೆಯಲ್ಲಿ ಬೆಳ್ಳಿ ಊಟ.
ಉತ್ತರ – ಬಾಳೆಗೊನೆ
ಅಡವಿ ಕುಮಾರನಿಗೆ ಕಣ್ಣು ಕೆಂಪಗೆ, ಕಿವಿ ನೆಟ್ಟಗೆ, ಮೂಗು ಚೂಪಗೆ.
ಉತ್ತರ – ಮೊಲ
ಅಮ್ಮನ ಮುಂದೆ ಗುಮ್ಮ ಕುಣಿತದೆ.
ಉತ್ತರ – ಕಡಗೋಲು
ಮುದಿಯನ ಸಾವಿನ ಸುದ್ದಿ ಮುದಿಯನೆ ಕೊಂಡೊಯ್ಯುತ್ತಾನೆ.
ಉತ್ತರ – ಕೊಳೆತ ಹಣ್ಣು.
ಬಿಸಿಲು ಬಂದಾಗ ನಾನು ಬರ್ತೀನಿ. ನೆರಳು ಬಂದಾಗ ಸುಸ್ತಾಗ್ತೀನಿ. ಗಾಳಿ ಬಂದಾಗ ಮಾಯವಾಗ್ತೀನಿ. ನಾನ್ಯಾರು?
ಉತ್ತರ – ಬೆವರು
ಮೂಡ್ಲಿಂದ ಬಂದ್ರೂ ಮೂರು ಜನ ಮುತ್ತೈದೆಯರು ತೊಟ್ಲ ಎಸೆದರು ಮಗು ಇಟ್ಕೊಂಡ್ರು.
ಉತ್ತರ – ಬಾಳೆಹಣ್ಣು
ಮುಳ್ಳು ಮುತ್ತುಗದ ಹೂವು ಮುಡಿದವಳೆ ಜಾಣೆ.
ಉತ್ತರ – ಬೆಂಕಿ.
ಹೊಟ್ಟೆಯಲ್ಲಿ ಬೆರಳು, ತಲೆಯಲ್ಲಿ ಕಲ್ಲು.
ಉತ್ತರ – ಉಂಗುರ.
ಕಿರಿ ಮನೆಗೆ ಚಿನ್ನದ ಬೀಗ.
ಉತ್ತರ – ಮೂಗುತಿ
ಅಪ್ಪನಿಗಿಂತ ಮಗನೇ ಮೊದಲು ಹುಟ್ಟುತ್ತಾನೆ.
ಉತ್ತರ – ಹೊಗೆ
ಅಗಲವಾದ ಮಾಳಿಗೆಗೆ ಒಂದೇ ಕಂಬ
ಉತ್ತರ – ಛತ್ರಿ
ಬಿಳಿ ತೊಟ್ಟಿಯಲ್ಲಿ ಕರಿ ದ್ರಾಕ್ಷಿ.
ಉತ್ತರ – ಕಣ್ಣು
ಎರಡು ಗವಿಗಳಿಗೆ ಒಂದೇ ಗೋಡೆ.
ಉತ್ತರ – ಮೂಗು
ಅಂಬರದಲ್ಲಿ ಆಡುವುದು ಪಕ್ಷಿಯೂ ತಾನಲ್ಲ, ಕೊಂಬು ಬಾಲಗಳುಂತು ಮೃಗಾದ ಜಾತಿಯಲ್ಲ, ಬಿಲ್ಲು ಬಾಣಗಳುಂತು ಹೊಡೆಯುವವರು ಇಲ್ಲ. ನಾನ್ಯಾರು?
ಉತ್ತರ – ಗಾಳಿಪಟ
ಇದ್ದಿಲು ನುಂಗುತ್ತಾ, ಗದ್ದಲ ಮಾಡುತ್ತಾ, ಉದ್ದಕು ಓಡುತ್ತಾ, ಮುಂದಕ್ಕೆ ಸಾಗುವವನ್ಯಾರು?
ಉತ್ತರ – ರೈಲು
ಹುಡುಗಿಯಾಗಿದ್ದಾಗ ಒಗರು, ಹೆಂಗಸಾದಾಗ ಸಿಹಿ.
ಉತ್ತರ – ಮಾವಿನಕಾಯಿ
ನಾಲಿಗೆಯುಂಟು ಮಾತನಾಡುವುದಿಲ್ಲ, ಮುಳ್ಳುಂಟು ಪೊದೆಯಲ್ಲ.
ಉತ್ತರ – ಪೆನ್ನು
ದುಂಡಾದ ಮುಖ ಉಂಟು, ಕೈಗಳು ಉಂಟು, ಶಬ್ಧ ಉಂಟು, ಎಲ್ಲರಿಗೂ ನಾನು ಉಪಕಾರಿ, ಹಾಗಾದರೆ ನಾನು ಯಾರು?
ಉತ್ತರ – ಗಡಿಯಾರ
ತಲೆಯಲ್ಲಿ ಜಡೆಯುಂಟು ತಪಸ್ವಿಯಲ್ಲ, ಎದೆಯಲ್ಲಿ ಹಾಲುಂಟು ಹಸುವಲ್ಲ, ಎಲೆಯಡಿಕೆ ಉಂಟು ವೀಳ್ಯವಲ್ಲ.
ಉತ್ತರ – ಆಲದ ಮರ
ಚಿಕ್ಕ ಮನೇಲಿ ಚಕ್ಕೆ ತುಂಬಿವೆ. ಏನದು?
ಉತ್ತರ – ಹಲ್ಲುಗಳು
ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ.
ಉತ್ತರ – ಕಲ್ಲಂಗಡಿ ಹಣ್ಣು
ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ.
ಉತ್ತರ – ತೆಂಗು
ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ
ಉತ್ತರ – ನೀರು
ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ
ಉತ್ತರ – ದಾರಿ
ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.
ಉತ್ತರ – ಯುಗಾದಿ
ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ.
ಉತ್ತರ -ಬದನೆಕಾಯಿ.
ಸಾಗರ ಪುತ್ರ, ಸಾರಿನ ಮಿತ್ರ
ಉತ್ತರ – ಉಪ್ಪು
ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.
ಉತ್ತರ – ಅಕ್ಕಿ
ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.
ಉತ್ತರ – ನವಿಲು.
ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.
ಉತ್ತರ – ನದಿ
ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.
ಉತ್ತರ – ಕೋಳಿ
ಮೋಟು ಗೋಡೆ ಮೇಲೆ, ದೀಪ ಉರೀತಿದೆ.
ಉತ್ತರ – ಮೂಗು ಬೊಟ್ಟು
ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.
ಉತ್ತರ – ನೆರಳು
ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ.
ಉತ್ತರ – ಕಣ್ಣು
ಕುಡಿಕೆಯಲ್ಲಿ ಮೆಣಸು.
ಉತ್ತರ – ಪಪ್ಪಾಯ ಹಣ್ಣು
ಕಾಸಿನ ಕುದುರೆಗೆ ಬಾಲದ ಲಗಾಮು.
ಉತ್ತರ – ಸೂಜಿ ದಾರ
ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು.
ಉತ್ತರ – ಕಲ್ಲಂಗಡಿ ಹಣ್ಣು
ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ.
ಉತ್ತರ – ಗಿಳಿ
ಊರೆಲ್ಲ ಸುತ್ತಿ ಬಂದು ಮನೆ ಮೂಲೆ ಸೇರುತ್ತದೆ.
ಉತ್ತರ – ಚಪ್ಪಲಿ
ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?
ಉತ್ತರ – ಮೂಗು, ಬಾಯಿ
ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?
ಉತ್ತರ – ಮೊಟ್ಟೆ
ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?
ಉತ್ತರ – ಕೋಳಿ
ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?
ಉತ್ತರ – ರೈಲು
ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ.
ಉತ್ತರ – ಗಡಿಯಾರ
ಮಾಳಿಗೆಯ ಮೇಲೆ ಮಂಡಲದ ಹಾವು ಮಲಗಿದೆ. ಏನದು?
ಉತ್ತರ – ಪಡವಲಕಾಯಿ
ಸಮುದ್ರದಲ್ಲಿ ಹುಟ್ಟುತ್ತೇನೆ, ಆದರೂ ಎಲ್ಲರ ಮನೆತಲ್ಲಿ ಇದ್ದೇ ಇರುತ್ತೇನೆ. ಏನದು?
ಉತ್ತರ – ಉಪ್ಪು
ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ.
ಉತ್ತರ – ಗಾಣ
ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ.
ಉತ್ತರ – ಶ್ಯಾವಿಗೆ
ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ
ಉತ್ತರ – ಕಪ್ಪೆ
ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ,
ಉತ್ತರ – ಕಸಪೊರಕೆ
ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು.
ಉತ್ತರ – ಉಪ್ಪು
ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?
ಉತ್ತರ – ನಕ್ಷೆ
ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು
ಉತ್ತರ – ಬದನೆಕಾಯಿ.
ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.
ಉತ್ತರ – ನೀರು
ಕೊಳದ ಒಳಗೆ ಒಂದು ಮರ ಹುಟ್ಟಿ, ಬೇರು ಇಲ್ಲ, ನೀರು ಇಲ್ಲ.
ಉತ್ತರ – ಎಣ್ಣೆ ದೀಪ.
ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು
ಉತ್ತರ – ತೆಂಗಿನಕಾಯಿ
ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ
ಉತ್ತರ – ತಂಬೂರಿ
ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.
ಉತ್ತರ – ಬಾಳೆ ಹಣ್ಣು.
ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.
ಉತ್ತರ – ಕನ್ನಡಿ
ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?
ಉತ್ತರ – ದತ್ತುರಿಯ ಮುಳ್ಳು.
ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.
ಉತ್ತರ – ಕಮಲ.
ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.
ಉತ್ತರ – ಗಿರಣಿ
ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.
ಉತ್ತರ – ದುಡ್ಡು.
ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.
ಉತ್ತರ – ಸಗಣಿ.
ಒಬ್ಬನನ್ನು ಹಿಡಿದರೆ ಎಲ್ಲಾರ ಒಪ್ಪಿಗೆಯು ಗೊತ್ತಾಗುತ್ತದೆ.
ಉತ್ತರ – ಅನ್ನದ ಅಗುಳು.
ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ
ಉತ್ತರ – ಸಾಬೂನು.
ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.
ಉತ್ತರ – ಗರಗಸ.
ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.
ಉತ್ತರ – ಹಲ್ಲುಪುಡಿ.
ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.
ಉತ್ತರ – ಗಡಿಗೆಮಜ್ಜಿಗೆ.
ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ.
ಉತ್ತರ – ರೊಟ್ಟಿ, ದೋಸೆ
ಕೆಂದ ಕುದುರೆ, ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ,
ಉತ್ತರ – ರೊಟ್ಟಿ
ಚಿಕ್ಕ ಚಿಕ್ಕ ಪೆಟ್ಟಿಗೆ, ಚಿನ್ನದ ಪೆಟ್ಟಿಗೆ, ಮುಚ್ಚಳ ತೆಗೆದರೆ ಮುನ್ನೂರು ಪೆಟ್ಟಿಗೆ.
ಉತ್ತರ – ದಾಳಿಂಬೆ
ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ
ಉತ್ತರ – ಮಲ್ಲಿಗೆ
ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ.
ಉತ್ತರ – ಆಕಾಶ, ನಕ್ಷತ್ರ
ಸುಟ್ಟ ಹೆಣ ಮತ್ತೆ ಸುಡ್ತಾರೆ.
ಉತ್ತರ – ಇದ್ದಿಲು
ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ.
ಉತ್ತರ – ಬಾಳೆ ಹಣ್ಣು
ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.
ಉತ್ತರ – ಕಣ್ಣು.
ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.
ಉತ್ತರ – ಬೆಣ್ಣೆ ಉಂಡೆ.
ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.
ಉತ್ತರ – ಅಂಗಿ.
ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ.
ಉತ್ತರ – ಬಳೆ
ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನ, ಪ್ರಾಣ.
ಉತ್ತರ – ಬಡತನ
ಒಂದು ಹಸ್ತಕ್ಕೆ ನೂರೆಂಟು ಬೆರಳು.
ಉತ್ತರ – ಬಾಳೆಗೊನೆ
ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ.
ಉತ್ತರ – ಜರಡಿ
ಅಕ್ಕ ಎಂದರೆ ತೆರಿತಾವ, ಅಮ್ಮ ಎಂದರೆ ಮುಚ್ಚುತಾವ.
ಉತ್ತರ – ಬಾಯಿ
ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ.
ಉತ್ತರ – ಸೂರ್ಯ , ಚಂದ್ರ
ಒಂದು ಹಪ್ಪಳ ಊರಿಗೆಲ್ಲ ಊಟ.
ಉತ್ತರ – ಚಂದ್ರ
ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ.
ಉತ್ತರ – ಹುಣಸೇಹಣ್ಣು
ನೀಲಿ ಕೆರೆಯಲಿ ಬಿಳಿ ಮೀನು.
ಉತ್ತರ – ನಕ್ಷತ್ರ
ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.
ಉತ್ತರ – ವಾರ, ತಿಂಗಳು, ವರ್ಷ.
ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು.
ಉತ್ತರ – ತೆಂಗಿನ ಕಾಯಿ
ಅಕ್ಕ ಓದುತ್ತಾಳೆ ತಂಗಿ ನಡೀತಾಳೆ.
ಉತ್ತರ – ಕಣ್ಣು
ಅಮ್ಮನ ಆಕಾಶವಾಣಿ ನಾನು.
ಉತ್ತರ – ಮಗು
ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ.
ಉತ್ತರ – ಮಳೆ
ನಾ ಇರುವಾಗ ಬರುತ್ತೆ, ನಾ ಹೋದ ಮೇಲೂ ಇರುತ್ತೆ.
ಉತ್ತರ – ಕೀರ್ತಿ
ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ
ಉತ್ತರ – ಕಣ್ಣು
Top Riddles in Kannada with Answers | ಕನ್ನಡ ಒಗಟುಗಳು ಉತ್ತರದೊಂದಿಗೆ
ಅಕ್ಕನ ಮೇಲೆ ಛತ್ರಿ.
ಉತ್ತರ – ರೆಪ್ಪೆ
ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು.
ಉತ್ತರ – ಈರುಳ್ಳಿ
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ.
ಉತ್ತರ – ಬಾಳೆಹಣ್ಣು
ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ.
ಉತ್ತರ – ಕಣ್ಣು
ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ.
ಉತ್ತರ – ತೆಂಗಿನ ಕಾಯಿ
ಒಂದು ಮನೆಗೆ ಒಂದೇ ತೊಲೆ.
ಉತ್ತರ – ತಲೆ
ಕಂದ ಬಂದ ಕೊಂದ ತಂದ.
ಉತ್ತರ – ಶ್ರೀ ರಾಮ ಚಂದ್ರ
ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ.
ಉತ್ತರ – ಭೂಪಟ
ಚಿಕ್ಕಕ್ಕನಿಗೆ ಪುಕ್ಕುದ್ದ.
ಉತ್ತರ – ಸೌಟು
ಎರಡು ಮನೆಗೆ ಒಂದೇ ಕಂಬ.
ಉತ್ತರ – ಮೂಗು
ನೀರಿರೋತಾವ ನಿಲ್ಲಲೇ ಕೋಣ.
ಉತ್ತರ – ಚಪ್ಪಲಿ
ನೀನಿಲ್ಲದೆ ಊಟವಿಲ್ಲ.
ಉತ್ತರ – ಉಪ್ಪು
ಬಿಳಿ ಸರದಾರನಿಗೆ ಕರಿ ಟೋಪಿ.
ಉತ್ತರ – ಬೆಂಕಿಕಡ್ಡಿ
ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ.
ಉತ್ತರ – ಸೂಜಿ
ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ.
ಉತ್ತರ – ಹೇನು & ಕೂದಲು
ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ, ಇನ್ನೊಬ್ಬ ಇಳಿತಾನೆ.
ಉತ್ತರ – ಬೆಂಕಿ,ಬಾಣಲೆ, ದೋಸೆ
ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ.
ಉತ್ತರ – ನೆರಳು
ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ.
ಉತ್ತರ – ಮನುಷ್ಯನ ಹುಟ್ಟು ಮಗು
ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ.
ಉತ್ತರ – ಸುಣ್ಣ
ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ.
ಉತ್ತರ – ದೀಪ
ಹಸಿರು ಬಾಗಿಲು, ಕೆಂಪು ಮನೆ, ಒಳಗಡೆ ಅಡಗಿ ಕುಳಿತಿದ್ದಾರೆ ಕಪ್ಪು ಕಲ್ಲರು. ಏನದು?
ಉತ್ತರ – ಕಲ್ಲಂಗಡಿ ಹಣ್ಣು
ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ.
ಉತ್ತರ – ಅಡಿಕೆ ಮರ
ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ.
ಉತ್ತರ – ಧ್ವಜ
ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?
ಉತ್ತರ – ತಾರೆಗಳು
ಮಲಗೋಕೆ ಮಂಚ ಇಲ್ಲ, ಇರೋಕೆ ಮನೆ ಇಲ್ಲ, ಹಣ ನಾನು ನೋಡೇ ಇಲ್ಲ. ಆದರೂ ನಾನೇ ರಾಜ. ನಾನ್ಯಾರು?
ಉತ್ತರ – ಸಿಂಹ
ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?
ಉತ್ತರ – ಛತ್ರಿ
ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ.
ಉತ್ತರ – ನೊಣ
ಒಂಟಿಕಾಲಿನ ಕುಂಟ. ನಾನ್ಯಾರು?
ಉತ್ತರ – ಬುಗರಿ
ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ.
ಉತ್ತರ – ಇಲಿ
ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ.
ಉತ್ತರ – ಕಳ್ಳಿ
ಸುತ್ತ ಮುತ್ತ ಗರಿಕೆ, ನಡುವೆ ಕುಡಿಕೆ
ಉತ್ತರ – ಕಣ್ಣು
ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು.
ಉತ್ತರ – ಶ್ರೀಗಂಧ
ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು.
ಉತ್ತರ – ಪರಂಗಿ ಹಣ್ಣು
ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ.
ಉತ್ತರ – ಜಾದಳಕಾಯಿ
ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ.
ಉತ್ತರ – ಕಿವಿ
ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ.
ಉತ್ತರ – ರೊಟ್ಟಿ
ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ.
ಉತ್ತರ – ಎಲೆ ಅದಿಕೆ
ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ
ಉತ್ತರ – ಬಾಳೆಲೆ
ಎರಡು ಬಾವಿಗಳ ನಡುವೆಯೊಂದು ಸೇತುವೆ.
ಉತ್ತರ – ಮೂಗು
ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ.
ಉತ್ತರ – ಕೋಟು ಅಂಗಿ
ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು.
ಉತ್ತರ – ವಿಷ
ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು.
ಉತ್ತರ – ಅಡಿಕೆ , ಸುಣ್ಣ
ಹೋಗೋದು ಮುಳುಗೋದು ತರೋದು ಏನು?
ಉತ್ತರ – ಬಿಂದಿಗೆ
ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತತ್ತೆ ಗಡಿಯಾರವಲ್ಲ.
ಉತ್ತರ – ಕೋಳಿ
ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ.
ಉತ್ತರ – ವರ್ಷ
ಗುಂಡಾಕಾರ ಮೈಯೆಲ್ಲಾ ತೂತು.
ಉತ್ತರ – ದೋಸೆ
ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ.
ಉತ್ತರ – ಚಿಮ್ಣಿ
ಒಂದು ಮರ, ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ.
ಉತ್ತರ – ಆಕಾಶ – ನಕ್ಷತ್ರ – ಚಂದ್ರ
ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ.
ಉತ್ತರ – ಏಲಕ್ಕಿ
ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು.
ಉತ್ತರ – ತಾರೆ
ಲಟಪಟ ಲೇಡಿಗೆ ಒಂದೇ ಕಣ್ಣು.
ಉತ್ತರ – ಸೂಜಿ
ಹಸಿರು ಕೋಲಿಗೆ ಮುತ್ತಿನ ತುರಾಯಿ.
ಉತ್ತರ – ಜೋಳದ ತೆನೆ
ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ.
ಉತ್ತರ – ನಾಲಿಗೆ
ಸೂಜಿ ಸಣ್ಣಕಾಗೆ ಬಣ್ಣ.
ಉತ್ತರ – ಕೂದಲು
ಹೋದರು ಇರುತ್ತೆ ಬಂದರೂ ಕಾಡುತ್ತೆ. ಇದು ಏನು?
ಉತ್ತರ – ನೆನಪು
ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ.
ಉತ್ತರ – ನುಸಿ
ಊರಿಗೆಲ್ಲ ಒಂದೇ ಕಂಬಳಿ.
ಉತ್ತರ – ಆಕಾಶ
ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ.
ಉತ್ತರ – ಕುಂಕುಮ
ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ.
ಉತ್ತರ – ಬೈತಲೆ
ಒಂದು ಬತ್ತಿ ಮನೆಯೆಲ್ಲ ಬೆಳಕು.
ಉತ್ತರ – ಸೂರ್ಯ
ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ.
ಉತ್ತರ – ಗಾಳಿ
ಕಣ್ಣಿಗೆ ಹತ್ತಿರ ಕಾಲಿಗೆ ದೂರ.
ಉತ್ತರ – ಬೆಟ್ಟ
ಊಟಕ್ಕೆ ಮೊದಲು ಬರುತ್ತೆ.
ಉತ್ತರ – ಬಾಳೆ ಎಲೆ, ತಟ್ಟೆ
ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ.
ಉತ್ತರ – ಮಾವು
ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ.
ಉತ್ತರ – ಬೆಕ್ಕು
ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ.
ಉತ್ತರ – ಕಪ್ಪೆ.
ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು.
ಉತ್ತರ – ಸುಣ್ಣ.
ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ.
ಉತ್ತರ – ದೀಪ
ಮೇಲಕ್ಕೂ ಹೋಗುತ್ತದೆ, ಕೆಳಗೂ ಹೋಗುತ್ತದೆ, ಆದರೂ ನಿಂತಲ್ಲೆ ನಿಲ್ಲುತ್ತದೆ. ಏನದು?
ಉತ್ತರ – ಮೆಟ್ಟಿಲುಗಳು
ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ.
ಉತ್ತರ – ಚಪ್ಪಲಿ
ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು.
ಉತ್ತರ – ನದಿ
ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ.
ಉತ್ತರ – ಮೇಡು
ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ.
ಉತ್ತರ – ಆಕಾಶ
ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ.
ಉತ್ತರ – ಜೋಳದ ದಂಟು
ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?
ಉತ್ತರ – ಸಾಲಿಗ್ರಾಮ
ಕರಿ ಹುಡುಗನಿಗೆ ಬಿಳಿ ಟೋಪಿ.
ಉತ್ತರ – ಹೆಂಡದ ಮಡಿಕೆ
ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು.
ಉತ್ತರ – ನಾಣ್ಯ
ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.
ಉತ್ತರ – ತಿಗಣೆ
ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.
ಉತ್ತರ – ಸೀತಾ ಫಲ
ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.
ಉತ್ತರ – ಕಣ್ಣು
ಮನೆ ಮೇಲೆ ಮಲ್ಲಿಗೆ ಹೂವು.
ಉತ್ತರ – ಮಂಜು
ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ.
ಉತ್ತರ – ಹುರಳಿಕಾಯಿ
ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು?
ಉತ್ತರ – ಪುಸ್ತಕ ಮತ್ತು ಅಕ್ಷರಗಳು
ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು?
ಉತ್ತರ – ಭಾರತ
ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.
ಉತ್ತರ – ಪೋಸ್ಟ್ ಕಾರ್ಡ್
ಬಿಳಿ ಕುದುರೆಗೆ ಹಸಿರು ಬಾಲ.
ಉತ್ತರ – ಮೂಲಂಗಿ
ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.
ಉತ್ತರ – ಕುಂಕುಮ
ಬರೋದ ಕಂಡು ಕೈ ಒಡ್ಡ್ತಾರೆ.
ಉತ್ತರ – ಬಸ್
ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು.
ಉತ್ತರ – ಹುಂಜ
ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?
ಉತ್ತರ – ಮೆಣಸಿನಕಾಯಿ
ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು.
ಉತ್ತರ – ಬೆಳ್ಳುಳ್ಳಿ
ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?
ಉತ್ತರ – ನಕ್ಷತ್ರ
ಹಗ್ಗ ಹಾಸಿದೆ ಕೋಣ ಮಲಗಿದೆ.
ಉತ್ತರ – ಕುಂಬಳಕಾಯಿ ಬಳ್ಳಿ
ನನ್ನ ಕಂಡರೆ ಎಲ್ಲರು ಓದೀತಾರೆ.
ಉತ್ತರ – ಚೆಂಡು
ಹಳ್ಳಿ ಗಡಿಯಾರ, ಒಳ್ಳೆ ಆಹಾರ.
ಉತ್ತರ – ಕೋಳಿ
ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ.
ಉತ್ತರ – ಕಣ್ಣು.
ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು.
ಉತ್ತರ – ಗಾಂಧೀಜಿ
ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ , ತಲೆಯಲ್ಲಿ ಕೂದಲಿಲ್ಲ , ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು.
ಉತ್ತರ – ಸೊಳ್ಳೆ
ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು.
ಉತ್ತರ – ನಾಣ್ಯ
ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ ಅಲ್ಲ.
ಉತ್ತರ – ಕಂಡಕ್ಟರ್
ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು?
ಉತ್ತರ – ಆನೆ
ಅವಳಿ ಜವಳಿ ಮಕ್ಕಳು, ಒಂದೇ ಬಣ್ಣ, ಒಂದೇ ಗಾತ್ರಮ್ ಒಬ್ಬ ಎನಾದ್ರು ಕಳೆದು ಹೋದ್ರೆ ಇನ್ನೊಬ್ಬ ವೇಸ್ಟ್.
ಉತ್ತರ – ಚಪ್ಪಲಿಗಳು
ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು?
ಉತ್ತರ – ಭಾರತ
ಹಾರಿದರೆ ಹನುಮಂತ ಕೂಗಿದರೆ ಶಂಖ.
ಉತ್ತರ – ಕಪ್ಪೆ
ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.
ಉತ್ತರ – ಸುಣ್ಣ
ಚೋಟುದ್ದ ಹುಡುಗಿಗೆ ಮಾರುದ್ದ ಜಡೆ.
ಉತ್ತರ – ಸೂಜಿ ದಾರ
ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ.
ಉತ್ತರ – ಭೂಪಟ.
ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು?
ಉತ್ತರ – ಹೆಗ್ಗಣ
ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ.
ಉತ್ತರ – ದೀಪ / ಹಣತೆ
ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ,. ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ. ಬಲ್ಲವರು ಹೇಳಿ ಸರ್ವಜ್ಞ.
ಉತ್ತರ – ಸುಣ್ಣದ ಕಲ್ಲು.
ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆ ತುಂಬ.
ಉತ್ತರ – ದೀಪದ ಬೆಳಕು
ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು.
ಉತ್ತರ – ನದಿ
ನಮ್ಮ ಒಗಟುಗಳ ಸಂಗ್ರಹದ (kannada ogatugalu with answer) ಪ್ರಯಾಣದ ಅಂತ್ಯಕ್ಕೆ ಬಂದಿದ್ದೀರಿ. ಒಗಟಿನ ಜಗತ್ತಿನಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಈ ಒಗಟುಗಳು ನಿಮ್ಮ ಮುಖದಲ್ಲಿ ನಗುವನ್ನು ತಂದಿವೆ ಎಂದು ನಾವು ಭಾವಿಸುತ್ತೇವೆ.
ನಮ್ಮ ಈ ಸಂಗ್ರಹದಲ್ಲಿ ನೀವು ಎಷ್ಟು ಒಗಟುಗಳನ್ನು (riddles in kannada) ಭೇದಿಸಿದ್ದೀರಿ ಎಂದು ಕಾಮೆಂಟ್ ಮಾಡಿ. ಹಾಗೂ ನಿಮಗೆ ಇನ್ನೂ ಯಾವುದಾದರೂ ಜಾನಪದ ಒಗಟುಗಳು (janapada ogatugalu in kannada) ಗೊತ್ತಿದ್ದರೆ ಅವುಗಳನ್ನು ಕಾಮೆಂಟ್ ಮಾಡಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.