ಕುವೆಂಪು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? “ರಾಷ್ಟ್ರಕವಿ” ಎಂಬ ಗೌರವಕ್ಕೆ ಪಾತ್ರರಾದ ಅವರ ಕೃತಿಗಳು ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಪಾದಿಸುತ್ತವೆ. “ಶ್ರೀ ರಾಮಾಯಣ ದರ್ಶನಂ” ಎಂಬ ಮಹಾಕಾವ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಅವರ ಈ ಸಾಧನೆ ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣವಾಯಿತು.
ಕುವೆಂಪು ಅವರ ಕವನಗಳು (kuvempu avara kavanagalu in kannada) ಸರಳವಾದ ಭಾಷೆಯಲ್ಲಿಯೇ ಆಳವಾದ ಅರ್ಥವನ್ನು ಹೊಂದಿವೆ. ಪ್ರಕೃತಿ, ಮಾನವೀಯ ಸಂಬಂಧಗಳು, ಮತ್ತು ಸಮಾಜದ ಸಮಸ್ಯೆಗಳ ಕುರಿತು ಅವರು ಬರೆದಿರುವ ಕವನಗಳು ಓದುಗರ ಹೃದಯವನ್ನು ಸ್ಪರ್ಶಿಸುತ್ತವೆ.
ಕುವೆಂಪು ಅವರ ಸಾಹಿತ್ಯವು ನವೋದಯ ಚಲನೆಯನ್ನು ಮುನ್ನಡೆಸಿದ ಪ್ರಮುಖ ಭಾಗವಾಗಿದೆ. ಈ ಸಂಕಲನವು 20ಕ್ಕೂ ಹೆಚ್ಚು ಕುವೆಂಪು ಅವರ ಅತ್ಯುತ್ತಮ ಕನ್ನಡ ಕವನಗಳನ್ನು (best kuvempu kavanagalu in kannada language) ಒಳಗೊಂಡಿದೆ. ಈ ಕವನಗಳು ನಿಮ್ಮ ಮನಸ್ಸಿಗೆ ಸ್ಪೂರ್ತಿ ನೀಡುವುದಷ್ಟೇ ಅಲ್ಲ, ಸಮಾಜದ ಬಗ್ಗೆ ಆಳವಾದ ಚಿಂತನೆಗೆ ಪ್ರೇರಣೆ ನೀಡುತ್ತವೆ. ಕುವೆಂಪು ಅವರ ಸಾಹಿತ್ಯ ನಮ್ಮ ಭಾಷಾ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿದೆ. ಅವರ ಕವನಗಳನ್ನು ಓದುತ್ತಾ, ನಾವು ಕನ್ನಡದ ವೈಭವವನ್ನು ಅನುಭವಿಸೋಣ!
Table of Contents
ಕುವೆಂಪು ಕವನಗಳು | Kuvempu Kavanagalu in Kannada
ಕುವೆಂಪು ಅವರ ಸಣ್ಣ ಕವನಗಳು | Short Kuvempu Avara Kavanagalu in Kannada
ಹೋಗುವೆನು ನಾ
ಹೋಗುವೆನು ನಾ
ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ,
ಮಳೆಯ ಬೀಡಿಗೆ,
ಸಿರಿಯ ಚೆಲುವಿನ ರೂಢಿಗೆ
ಜೇನಾಗುವಾ
ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ, ಹಣ್ಣಾಗುವ, ಪ್ರತಿರೂಪಿ ಭಗವತಿಗೆ ಮುಡಿಪಾಗುವ
ಶಿವನೆನ್ನ ಸುಖಕೆ ಸುಖಿ ಶಿವನಿನ್ನ ಸುಖಕೆ ಸುಖಿ
ಶಿವ ಶಿವೆಯರ ಸುಖವ ಸವಿವಖಿಲ ಲೋಕ ಸುಖಿ
ಬಾ ಬಾರ ಬಾರಾ ಸಖಿ
ವಿರಹದುರಿಯನು ಕುದಿಸಿ ಹಾಲು ಪುಣ್ಯವ ಹಾಸಿ
ಹೂವು ಸುಖವನೆ ಹೊದಿಸಿ ಮಿಲನ ಮಧುವನು ಸೂಸಿ
ಬಾ ಬಾರ ಬಾರಾ ಸಖಿ
ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ, ಹಣ್ಣಾಗುವ, ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ
ನಡೆ ಮುಂದೆ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ
ನನ್ನ ಹಿತ ಎಂದು,
ಭಾರತ ಮಾತೆಯ ಮತವೇ
ನನ್ನ ಮತ ಎಂದು.!
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು.
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ.
ಅಖಂಡ ಕರ್ಣಾಟಕ
ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ!
ಹರಸುತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
ಅವಂಧ್ಯೆ ಕವಿಯ ಕಲ್ಪನೆ!
ಒರ್ವನಾದೊಡೋರ್ವನಲ್ತು
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು
ತಡೆವುದೇನೋ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ , ಕೇಳ್ , ಅವಂಧ್ಯೆ
ಕವಿಯ ವಿಂಧ್ಯ ಕಲ್ಪನೆ!
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!
ಅಖಂಡ ಕರ್ಣಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರ ವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ !
ರನ್ನ ಜನ್ನ ನಾಗವರ್ಮ
ರಾಘವಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ :
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ !
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !
ಬರಿಯ ಹೊಟ್ಟೆ ಬಟ್ಟೆಗಲ್ತೊ ;
ಪಕ್ಷ ಜಾತಿ ಕಲಹಕಲ್ತೊ ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ ;
ಬಣ್ಣ ಚಿಟ್ಟೆ ಬಾಳಿಗಲ್ತೊ ;
ಜೋಳವಾಳಿ ಕೂಳಿಗಲ್ತೊ ;
ದರ್ಪ ಸರ್ಪ ಕಾರ್ಕೋಟಕ
ಸ್ವಾರ್ಥ ಫಣಾ ಕ್ರೀಡೆಗಲ್ತೊ
ರಾಜಕೀಯ ಪೇಟಕ
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ :
ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !
ಮೆರೆಯಲಾತ್ಮ ಸಂಸ್ಕೃತಿ ;
ಬೆಳಗೆ ಜೀವ ದೀಧಿತಿ ;
ಪರಮಾತ್ಮನ ಚರಣ ದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ ;
ಬಾಳ ಸೊಡರ್ ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಪೂರ್ತಿ
ಭಗವಂತನ ಕಣ್ಣಿಗೆ ;
ಹಾಡುತಿಹೆನು ಕಂಡ ನಾನು
ದಿಟ್ಟಿಗೇಡೊ ? ಹುಟ್ಟು ಕುರುಡೋ ?
ಬುದ್ಧಿ ಬರಡೋ ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು !
ಹೇಳು ! ತಪ್ಪು ನನ್ನದೇನು ?
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ ! ಶಕ್ತಿ ಕಣಾ !
ತಾಯಿ ಕಣಾ ! ದೇವಿ ಕಣಾ !
ಬೆಂಕಿ ಕಣಾ ! ಸಿಡಿಲು ಕಣಾ !
ಕಾವ ಕೊಲುವ ಒಲವ ಬಲವ
ಪಡೆದ ಚಲವ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ !
ವಿರೋಧಿಗಾಸ್ಫೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !
ವಿರೋಧಿಗಾಸ್ಫೋಟಕ,
ಅಖಂಡ ಕರ್ಣಾಟಕ :
ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ
ಅಖಂಡ ಕರ್ಣಾಟಕ !
ಅಖಡಂ ಕರ್ಣಾಟಕ !
ಜಯ್ ಜಯ್ ಜಯ್ ಅಖಂಡ ಕರ್ಣಾಟಕ !
ನೇಗಿಲ ಯೋಗಿಯೆ
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲಿಯೆ ನಿಂತಿದೆ ಧರ್ಮ
ಕನ್ನಡಮ್ಮನ ಹರಕೆ
ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ.
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ
ಮೊಲೆಯ ಹಾಲೆಒಂತಂತೆ
ಸವಿಜೆನು ಬಾಯ್ದೆ,
ತಾಯಿಯಪ್ಪುಗೆಯಂತೆ
ಬಾಳಸೊಗಸು ಮೆಯ್ಕೆ.
ಗುರುವಿನೊಲ್ಲುದಿಯಂತೆ
ಶ್ರೇಯಸ್ಸು ಬಾಳೆ
ತಾಯಿನುಡಿಗೆ ದುಡಿದು ಮಾಡಿ
ಇಹಪಾರಗಳೇಲ್‌ಗೆ
ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ,
ಕನ್ನಡಮ್ಮನ ಹರಕೆ ,
ಮರೆಯದಿರು, ಚಿನ್ನಾ
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ,ರನ್ನಾ.
ಮಲೆಗಳಲ್ಲಿ ಮದುಮಗಳು
ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ !
ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ !
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!
ಮಲೆನಾಡಮ್ಮನ ಮಡಿಲಿನಲಿ
ಮಲೆನಾಡಮ್ಮನ ಮಡಿಲಿನಲಿ
ಕರ್ಮುಗಿಲೊಡಲಿನಲಿ
ಮನೆಮಾಡಿರುವೆನು ಸಿಡಿಲಿನಲಿ
ಮಿಂಚಿನ ಕಡಲಿನಲಿ!
ಬನಗಳ ಬೀಡು
ಚೆಲ್ವಿನ ನಾಡು
ಮೋಹನ ಭೀಷಣ ಮಲೆನಾಡು!
ನವಿಲುಗರಿಗಳ ಬಣ್ಣಗಣ್ಣು
ನವಿಲುಗರಿಗಳ ಬಣ್ಣಗಣ್ಣು
ಅವಳ ಬಿಂಕದ ಸೀರೆಯು!
ಕಂಡು ಹೇಳುವೆ, ಕೊಂಚ ನಿಲ್ಲು
ಏಳುಬಣ್ಣದ ಮಳೆಯ ಬಿಲ್ಲು
ಅವಳ ಕೊರಲಿನ ಹಾರವು!
ಎಂದೆಂದಿಗೂ ನೀ ಕನ್ನಡವಾಗಿರು
ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ
ಕಲ್ಪತರು!
ನೀ ಮೆಟ್ಟುವ ನೆಲ – ಅದೇ ಕರ್ನಾಟಕ
ನೀ ನೇರುವ ಮಾಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರು – ಕಾವೇರಿ
ಪಂಪನನೋಡುವ ನಿನ್ನ ನಾಲಿಗೆ
ಕನ್ನಡವೇ ಸತ್ಯ ,
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ
ಹರಿಹರ ರಾಘವರಿಗೆ ಎರಗುವ ಮನ ,
ಹಾಳಾಗಿಹ ಹಂಪೆಗೆ ಕೊರಗುವ ಮನ ,
ಪೆಂಪಿನ ಬನವಾಸಿಗೆ ಕೊರಗುವ ಮನ ,
ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ ,
ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ ,
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್
ಕನ್ನಡವೇ ಸತ್ಯ !
ಕನ್ನಡವೇ ನಿತ್ಯ !
ಅನ್ಯವೆನಳದೆ ಮಿಥ್ಯಾ !
ಜಯ ಹೇ ಕರ್ನಾಟಕ ಮಾತೆ
ಜೈ ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||
ಜೈ ! ಸುಂದರ ನದಿ ವನಗಳ ನಾಡೆ
ಜಯಹೇ ರಸ ಋಷಿಗಳ ಬೀಡೆ ,
ಗಂಧದ ಚಂದದ ಹೊನ್ನಿನ ಗಣಿಯೇ ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜನನಿ ಜೋಗುಳದ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಸ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಾಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಪತಿ ಜನ್ನ
ಕಬ್ಬಿಗ ನುಡಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಾಕರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.
ತೈಲಪ ಹೊಯ್ಸಲರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರರಂಗ
ಚೈತನ್ಯ ಪರಮಹಂಸ ವೀವೆಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.
ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಣಗಳ ಸೆಳೆಯುವ ನೋಟ
ಕ್ರಿಶ್ಚಿಯನ್ ಮುಸಲ್ಮಾನ
ಪಾರಸಿಕ ಜೈನರ ಉದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾ ಧಾಮ.
ಕನ್ನಡ ನುಡಿ ಕುಣಿದಾಡುತ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.
ಭಾರತ ತಪಸ್ವಿನಿ
ವೇದರುಶಿ ಭೂಮಿಯಲಿ ನಾಕನರಕಗಳಿಂದ
ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ
ಸಂದಿಸಿವೆ , ಮಾನವನೆಡೆಯ ಕಾಳಕೂಟದಲಿ
ಅಮೃತವನ ಹಾರಿಸಿ ಬಲಿರಕ್ತದಲಿ ಮಿಂದು
ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು
ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ
ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ ಸವೆಯುತಿದೆ ,
ಇಂದಿನ ಮಹಾ ತಪಸ್ಸಿನ ಚಿತೆಯ ರಕ್ತಮ ವಿಭೂತಿಯೊಳೆ
ಮುಂದಿನ ನವೋದಯದ ಧವಳಿಮ ಪಿನಾಕಾದಾರನೈಥಹನು ,
ಮತ್ತೊಮ್ಮೆ ಭಾರತಾಂಬೆಯು ಜಗದ ಬೆಳಗಾಗುವುದು ,
ಹೆಮ್ಮೆ ಗೌರವಗಳಿಂದ ಜನಗಣದ ಕಟು ನಿರ್ಧಯದ
ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ ಮೆರೆವಳು
ತಪಸ್ವಿನಿಯೆ ಚಕ್ರವರ್ತಿನಿಯಾಗಿ !
ಕುವೆಂಪು – ಪೂವು
ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು||
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು|| ಪಲ್ಲವಿ ||
ಮಜ್ಜನವ ಮಂಜಿನೊಳು|
ನೀ ಮಾಡಿ ನಲಿವಾಗ|
ಉಜ್ಜುಗದಿ ಸಂಜೆಯೊಳು|
ನರರೆಲ್ಲ ಬರುವಾಗ||
ತಳಿರೊಳಗೆ ಕೋಕಿಲೆಯು|
ಕೊಳಲನು ನುಡಿವಾಗ|
ಎಳೆದಾದ ರವಿಕಿರಣ|
ಇಳೆಯನ್ನು ತೊಳೆವಾಗ||
ಕವಿವರನು ಹೊಲಗಳಲಿ|
ತವಿಯಿಂದ ತೊಳಗುತಿಹ|
ಭುವನವನು ಸಿಂಗರಿಸಿ|
ಸವಿಯಾಗಿ ಬೆಳಗುತಿಹ||
ಅಲರುಗಳ ಸಂತಸದಿ|
ತಾ ನೋಡಿ ನಲಿವಾಗ|
ನಲಿ ಪೂವೆ ಎನ್ನುತ್ತಲಿ|
ರಾಗದಿಂ ನುಡಿವಾಗ||
ಗೀತವನು ಗೋಪಾಲ|
ಏಕಾಂತ ಸ್ಥಳದೊಳು|
ಪ್ರೀತಿಯಿಂ ನುಡಿವಾಗ|
ನಾಕವನು ಸೆಳೆಯುತ್ತ||
ವನದಲ್ಲಿ ಪಕ್ಷಿಗಳು|
ಇನನನ್ನು ಸವಿಯಾಗಿ|
ಮನದಣಿವ ಗೀತದಿಂ|
ಮನದಣಿಯೆ ಕರೆವಾಗ||
ಮೋಡಗಳು ಸಂತಸದಿ|
ಮೂಡುತಿಹ ಮಿತ್ರನನು|
ನೋಡಿ ನೋಡಿ ನಲಿಯಲು
ನಾಡ ಮೇಲ್ ನಡೆವಾಗ||
ಮುಂಜಾನೆ ಮಂಜಿನೊಳು|
ಪಸುರಲ್ಲಿ ನಡೆವಾಗ|
ಅಂಜಿಸುವ ಸಂಜೆಯೊಳು|
ಉಸಿರನ್ನು ಎಳೆವಾಗ||
ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು|
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು||
ಶಶಿಯ ದೋಣಿ
ನೀಲಧಿಯಲಿ ಶಶಿಯ ದೋಣಿ
ಈಸುತಿತ್ತು;
ಮಂದಾನಿಲಂ ಮಂದಮಂದಂ
ಬೀಸುತಿತ್ತು;
ತೇನೆ ಹಕ್ಕಿಯೊಂದು ವಾಣಿ
ಕೇಳುತಿತ್ತು ;
ಮುಗಿಲಿನಿಂದ ಜೊನ್ನ ಜೇನು
ಬೀಳುತಿತ್ತು !
ಕುಳಿತು ಶಶಿಯು ದೋಣಿಯಲಿ
ಮುಗಿಲ್ದೆರೆಯ ಬಾನಿನಲ್ಲಿ
ಈಸಿ ಈಸಿ ,
ಬೆರೆತು ತಂಪುಗಾಳಿಯಲಿ
ಮಲೆಯ ಬನ ಬನಂಗಳಲಿ
ಬೀಸಿ ಬೀಸಿ,
ಮಲೆ = ಬೆಟ್ಟ ,ಜೊನ್ನ = ಬೆಳದಿಗಂಗಳು .
ಕುವೆಂಪು – ಪಕ್ಷಿಕಾಶಿ
ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:
ಇದು ಪಕ್ಷಿಕಾಶಿ!
ದೇವನದಿಯಲ್ಲಿ ದ್ವೀಪಕೃಪೆಯಲ್ಲಿ
ಭಾವತರುವಾಸಿ
ಪ್ರಾಣಪಕ್ಷಿಕುಮಿಹುದು ರಕ್ಷೆಯಲ್ಲಿ
ನಿತ್ಯಮವಿನಾಶಿ:
ಶಕ್ತಿ ಸುತ್ತಲೂ ಕಾವಲಿಹುದು ಕಾಣ್
ಅಗ್ನಿಜಲರಾಶಿ:
ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು
ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
ಎಲ್ಲ ಬಿಟ್ಟು ಬಾ;
ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,
ಹಮ್ಮನುಳಿದು ಬಾ:
ಇಕ್ಷು ಮಧುರಮನೆ ಮೋಕ್ಷ ಪಕ್ಷಿಯುಲಿ
ನಾಡಿನಾಡಿಯಲಿ ಹಾಡಿ ಹರಿದು ನಲಿ
ದಾಡಬಹುದು ಬಾ!
ಕನ್ನಡ ಡಿಂಡಿಮ
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!
ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ:
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!
ನನ್ನ ಮನೆ ಕವನ
ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ !
ನನ್ನ ತಾಯಿಯೊಲಿದ ಮನೆ,
ನನ್ನ ತಂದೆ ಬೆಳೆದ ಮನೆ:
ನನ್ನ ಗೆಳೆಯರೊಡನೆ ಕೂಡಿ
ಮುದ್ದು ಮಾತುಗಳನು ಆಡಿ
ಮಕ್ಕಳಾಟಗಳನು ಹೂಡಿ
ನಾನು ನಲಿದ ನನ್ನ ಮನೆ !
ನನ್ನ ಗಿರಿಜೆಯಿದ್ದ ಮನೆ,
ನನ್ನ ವಾಸುವಿದ್ದ ಮನೆ:
ಮನೆಯ ಮುತ್ತಿ ಬರಲು ಚಳಿ
ಆಳು ಮಂಜ ಒಲೆಯ ಬಳಿ
ನಮ್ಮನೆಲ್ಲ ಕತೆಗಳಲಿ
ಕರಗಿಸಿದ್ದ ನನ್ನ ಮನೆ !
ತಾಯಿ ಮುತ್ತು ಕೊಟ್ಟ ಮನೆ,
ತಂದೆ ಎತ್ತಿಕೊಂಡ ಮನೆ:
ಮನೆಗೆ ಬಂದ ನಂಟರೆಲ್ಲ
ಕೂಗಿ ಕರೆದು ಕೊಬ್ಬರಿ ಬೆಲ್ಲ –
ಗಳನು ಕೊಟ್ಟು, ಸವಿಯ ಸೊಲ್ಲ –
ನಾಡುತ್ತಿದ್ದ ನನ್ನ ಮನೆ !
ನಾನು ನುಡಿಯ ಕಲಿತ ಮನೆ,
ನಾನು ನಡಿಗೆಯರಿತ ಮನೆ:
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗು ಹಾಡಿ ಹಾಡಿ
ಮಲೆಯನಾಡ ಸಗ್ಗಮಾಡಿ
ನಲಿಸುತ್ತಿದ್ದ ನನ್ನ ಮನೆ !
ನಾನು ಬಿದ್ದು ಎದ್ದ ಮನೆ,
ಮೊದಲು ಬೆಳಕು ಕಂಡ ಮನೆ:
ತಿಪ್ಪ ತಿಪ್ಪ ಹೆಜ್ಜೆಯಿಟ್ಟು
ಬಿಸಿಲ ಕೋಲ ಹಿಡಿದು ಬಿಟ್ಟು
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ !
ಇದನ್ನೂ ಓದಿ: –
- Kuvempu Information in Kannada (ರಾಷ್ಟ್ರಕವಿ ಕುವೆಂಪು ಅವರ ಜೀವನಚರಿತ್ರೆ)
- 100+ Kuvempu Quotes in Kannada (ಕುವೆಂಪು ನುಡಿಮುತ್ತುಗಳು)
- Kuvempu Books in Kannada with Links (ಕುವೆಂಪು ಪುಸ್ತಕಗಳು)
ಕುವೆಂಪು ವೈಚಾರಿಕ ಕವನಗಳು | Vaicharika Kavanagalu by Kuvempu in Kannada
ದೋಣಿ ಸಾಗಲಿ, ಮುಂದೆ ಹೋಗಲಿ
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ.
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||ದೋಣಿ ಸಾಗಲಿ||
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ||ದೋಣಿ ಸಾಗಲಿ||
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ||ದೋಣಿ ಸಾಗಲಿ||
ಓ ನನ್ನ ಚೇತನ
ಓ ನನ್ನ ಚೇತನ
ಆಗು ನೀ ಅನಿಕೇತನ.
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ.!
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವವನೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ.!
ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ.!
ಅನಂತ ತಾನ್ ಅನಂತವಾಗಿ
ಅಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು
ಓ ನನ್ನ ಚೇತನ
ಆಗು ನೀ ಅನಿಕೇತನ.!
ಈ ಲೇಖನದಲ್ಲಿ ಕುವೆಂಪು ಅವರ 20ಕ್ಕೂ ಹೆಚ್ಚು ಕನ್ನಡ ಕವನಗಳ ಸಂಕಲನವನ್ನು (kuvempu kavanagalu in kannada collection) ಪರಿಚಯಿಸಲು ಪ್ರಯತ್ನಿಸಿದ್ದೇವೆ. ಕುವೆಂಪು ಅವರ ಕವನಗಳು ಕನ್ನಡ ಸಾಹಿತ್ಯದ ಆಭರಣವಾಗಿದ್ದು, ಪ್ರತಿ ಓದುಗರ ಮನಸ್ಸಿಗೆ ಸ್ಪೂರ್ತಿ ನೀಡುತ್ತವೆ. ಅವರ ಕಾವ್ಯಗಳಲ್ಲಿ ವ್ಯಕ್ತವಾಗುವ ಪ್ರಕೃತಿಯ ಸೌಂದರ್ಯ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಸಂದೇಶಗಳು ನಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತವೆ.
ನೀವು ಈ ಸಂಕಲನವನ್ನು ಓದಿ ಆನಂದಿಸಬಹುದು ಎಂಬ ವಿಶ್ವಾಸವಿದೆ. ಈ ಕವನಗಳು ನಿಮ್ಮ ಮನಸ್ಸಿಗೆ ಸ್ಪೂರ್ತಿ ನೀಡಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ. ಕನ್ನಡ ಸಾಹಿತ್ಯದ ಇನ್ನಷ್ಟು ಅಪರೂಪದ ರತ್ನಗಳನ್ನು ಅನುಭವಿಸಲು ನಮ್ಮ ಬ್ಲಾಗ್‌ಗೆ ಮತ್ತೊಮ್ಮೆ ಭೇಟಿ ನೀಡಿ! ನಮ್ಮ ಭಾಷೆ, ನಮ್ಮ ಸಾಹಿತ್ಯ – ನಮ್ಮ ಹೆಮ್ಮೆ!
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.