210+ Love Quotes in Kannada

ಪ್ರೀತಿಯು ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದಾಗಿದೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸುವುದು ಯಾವಾಗಲೂ ಸುಲಭವಲ್ಲ. ಕೆಲವೊಮ್ಮೆ, ನಮ್ಮ ಭಾವನೆಗಳ ಆಳವನ್ನು ತಿಳಿಸಲು ಸರಿಯಾದ ಪದಗಳನ್ನು ಹುಡುಕಲು ನಾವು ಹೆಣಗಾಡುತ್ತೇವೆ. ಅಲ್ಲಿ ಪ್ರೀತಿಯ ಸಂದೇಶಗಳ ಸಂಗ್ರಹ ಸಹಾಯಕ್ಕೆ ಬರುತ್ತವೆ. 

ಈ ಲೇಖನದಲ್ಲಿ ಅನೇಕ ವಿವಿಧ ಪ್ರೇಮ ಸಂದೇಶಗಳನ್ನು (love quotes in kannada) ನೀವು ಕಂಡುಕೊಳ್ಳುವಿರಿ. ನೀವು ಯಾರಿಗಾದರೂ ವಿಶೇಷ ಭಾವನೆ ಮೂಡಿಸಲು, ವಾರ್ಷಿಕೋತ್ಸವವನ್ನು ಆಚರಿಸಲು ಅಥವಾ ಯಾರೊಬ್ಬರ ದಿನವನ್ನು ಸುಂದರವಾಗಿಸಲು ಬಯಸಿದರೆ ಈ ಸಂಗ್ರಹ ನಿಮಗೆ ಖಂಡಿತ ಸಹಾಯ ಮಾಡುತ್ತದೆ.

Love Quotes in Kannada

Love Quotes in Kannada

ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿ ನೀನು. 

ನಗು ಮುಖದ ಹಸನ್ಮುಖಿ ನೀನು. 

ಎಂದಿಗೂ ಕೆಡುಕು ಬಯಸದ ಸಾವು ನೀನು. 

ನನ್ನ ನೋವನ್ನು ಮರೆಸುವ ಜಾದುಗಾರೆ ನೀನು. 

ನೋವಲ್ಲೂ ನಗುವಲ್ಲೂ ಜೊತೆಗಿದ್ದ ಏಕೈಕ ಜೀವ ನೀನು.

 

ನನ್ನ ಜೀವನದಲ್ಲಿ ನೀನು ಯಾಕೆ ಇಂಪಾರ್ಟೆಂಟ್ ಅಂದ್ರೆ, ನನ್ನೆದೆಯ ಕತ್ತಲೆಗೊಂದು ಮಿನಗೂ ಮೊಂಬತ್ತಿ ಆದೆ. 

ಏಕಾಂಗಿಯಾನದಲ್ಲಿ ನಿಲ್ದಾಣ ನಿಂದೆ… 

ನನ್ನ ಬದುಕಿಗೆ ಬಯಸದೆ ಆದ ಸುಂದರ ಪರಿಚಯ ನೀನು.. 

ನನ್ನ ಬದುಕಲ್ಲಿ ಬಯಕೆಗೂ ಮೀರಿ ನೆಮ್ಮದಿಯ ಪರಿಚಯಿಸಿದ ಪ್ರೀತಿ ನೀನು.

 

ಬಯಸಿದೆ ಈ ಹೃದಯ ನಿನ್ನ ಪ್ರೀತಿ ಸಹವಾಸ ಯಾಕೆಂದರೆ, ಈ ಹೃದಯಕೆ ನೀನೇ ತುಂಬಾ ಖಾಸ.

 

ಯಾರ ಬಳಿ ಏನು ಬಯಸದ ಈ ಜೀವ, ನಿನ್ನ ಬಳಿ ಪ್ರೀತಿ ಮಾತ್ರ ಬಯಸಿದೆ ಕಣೇ..

 

ಸಂಗಾತಿ ಜನುಮ ಜನುಮಕೂ ಜೊತೆಯ ಬೇಡಿದೆ 

ನನಗೆ ಜೊತೆಯೂ ನಿನದೆ ಮನಸು ಬಯಸಿದೆ 

ಯಾವ ಕಾಲಕೂ ನಿನ್ನ ಪ್ರೀತಿ ಆಸರೆ ನನ್ನ ಕನಸು 

ಕಣ್ಣಿನೊಳಗಡೆ ಚೆಲುವ ನಿನ್ನ ರೂಪವು ನನ್ನ ಎದೆಯಾ ಗೂಡಿನೊಳಗೆ ನಿನ್ನ 

ದೈವ ಸ್ವರೂಪವು ನೋವೇ ಇರಲಿ, ನಲಿವೆ ಇರಲಿ ಕೂಡಿ ನಡೆಯಲಿ ಬದುಕು ಗಂಜಿ ಕುಡಿಯಲಿ, ಗುಡಿಸಲಾಗಲಿ ಜೊತೆಗೆ ನೀನಿರಬೇಕು.

 

ಈ ಜೀವ ಬಯಸಿದೆ ನಿನ್ನ 

ಸನಿಹ ಬಯಸುತಿದೆ ಮನ 

ಭಾವ ನರ್ತಿಸುತಿದೆ ಕ್ಷಣ 

ನಿನ್ನ ಮಾತಿನ ನಾದ ಕೇಳುವ ಮನದಾಸೆಯು ಪರಿಪೂರ್ಣವಾಗುವುದೇ ಚಿನ್ನ 

ಮಾತು ಮನಕೆ ತಂಪೆರೆದಾಗ ಮೌನದಲ್ಲೂ ಭಾವನೆಗಳ ಬಿಂಬಿಬಿಸುತಿತ್ತು ಕಣ್ಣೋಟದ ಮಾತಲ್ಲಿ ಮನ 

ಪ್ರೀತಿಯು ಪ್ರೀತಿಯ ಬಯಸಿದಾಗ ಸಂದಿಸುವ ಆ ಕ್ಷಣ 

ಮೌನದಲ್ಲೇ ಪ್ರೀತಿ ಹಂಚುವುದೇ ಮನ

 

ಇರಲಾರೆ ನಿನ್ನ ಜೊತೆಯಾಗಿ ಆದರೂ ಪ್ರೀತಿಸುವೆ ನಿನ್ನ 

ಅತಿಯಾಗಿ ನೂರು ಜನ್ಮ ಕಳೆದರು ಈ ಬದುಕಿರುವುದೇ ನಿನಗಾಗಿ 

ನೀ ಎಲ್ಲೇ ಹೋದರು ಬರುವೆ ನಿನ್ನ 

ನೆರಳಾಗಿ ಬಯಸಿದೆ ಒಲವ ನಿಸ್ವಾರ್ಥವಾಗಿ ಅಂತರಗಳು ನೂರು ಬರಲಿ ಇರಲಿದೆ ಪ್ರೀತಿ ಸ್ಥಿರವಾಗಿ 

ಉಸಿರ ಕೊನೆವರೆಗೂ ಹೃದಯ ಮಿಡಿಯುವುದು ನಿನಗಾಗಿ 

ಪ್ರತಿಜನ್ಮದಲ್ಲೂ ಕಾಯುವೆ ನಿನ್ನೊಲವಿಗಾಗಿ ನಿನ್ನವಳಾಗಿ..

 

ಹೃದಯ ಅರಳುವುದು

ಪ್ರೀತಿಯ ಬೆಳಂದಿಗಳಲಿ.

ಅರೆಕ್ಷಣದಲ್ಲಿ ಮರೆಯಾಗುವುದು ನಾ ನಿನ್ನ ಸರ್ಶ್ವಿಸಿದಾಗ

ಅಲೆದಾಡುವವು ಮನಸ್ಸುಗಳು ಪ್ರೀತಿ ಎಂಬ ಸ್ವರ್ಗದಲ್ಲಿ.

ಬಯಸಿದೆ ನಾ ಕಾತುರದಿ ನಿನ್ನ ಆಲಿಂಗನ ಸದಾ ಕಾಯುತಿದೆ ನಿನಗಾಗಿಯೇ ನನ್ನ ಮನ

 

ನಿನ್ನ ಪ್ರೀತಿ ಬಯಸಿದೆ ಮನಸು 

ಕಣ್ಣು ಹಾತೊರೆಯುತಿದೆ ನಿನ್ನ ಕನಸು

 

ಪ್ರೀಯ ಗೆಳೆಯ ನಿನ್ನ ಓಲವಿನ ಪ್ರೀತಿಯ ಕಡಲಲ್ಲಿ ನಾನಿಗಗಲೇ ಮುಳುಗಿದ್ದೇನೆ

ದುಂಬಿಯು ಹೂವಿನ ಮಕರಂದ ಹೀರುವಂತೆ

ನದಿಯು ಸಮುದ್ರದವನ್ನು ಹುಡುಕಿ ಓಂದಾಗುವಂತೆ

ನಿನ್ನ ಬಯಸಿ ಬಂದ ಹೂವು ನಾನು

ಅನುರಾಗದ ಅಲೆಯಲ್ಲಿ ನಿನ್ನೋಡಗುಡಿ ಮರೆತೆ ನನ್ನೆ ನಾನು

ಬಯಸಿದೆ ನಾನು ನಿನ್ನಿಂದ ಪರಿಶುದ್ಧ ಪ್ರೀತಿಯನ್ನ

 

ಒಂಟಿತನದ ಬಿಸಿಯಲ್ಲಿ ಬೆಂದು, ಒದ್ದಾಡಿದೆ ಮನವು. 

ನಗಲು ಬಯಸಿದೆ ಮನವು ನೋವ ಮರೆಸಿ, 

ಕಾದು ಕುಳಿತಿದೆ ಮನವು ಪ್ರೇಯಸಿಯೇ ನಿನ್ನ ಪ್ರೀತಿ ಬಯಸಿ..

 

ಬಯಸಿದೆ ಪ್ರೀತಿ

ತೊರೆದಳು ಗೆಳತಿ 

ಪೀಡಿಸಲಾರೆ ನೀ ನನ್ನ ಪ್ರೀತಿಸು ಎಂದು 

ಆದರೆ ನಾ ಪ್ರೀತಿಸುವೆ ನಿನ್ನ ಎಂದೆಂದೂ ಮನದಲಿ…

 

ನೀ ಬಯಸಿದೆ ಭಾವನೆ 

ನಾ ಬಯಸಿದೆ ನಿನ್ನನೆ ನಿನ್ನ ಭಾವನೆಗೆ ಬರವಿಲ್ಲ…

ನನ್ನ ಬಯಕೆಗೆ ಮಿತಿಯಿಲ್ಲ ಬರುವ ನಾಳೆಗಳ ಸೂಚನೆ ನೀ ಕೊಟ್ಟರೆ…..

ಅದ ಬಯಸುತ್ತಾ ಕಾಯುವ ಈ ನಿನ್ನ ದೊರೆ ಪ್ರೀತಿ

ಸ್ನೇಹಕೆ‌ ನೀನೆ ಅಪ್ಸರೆ

ಅದ ಬೇಡುತ ಬದುಕುವೆ

ಬಯಸುತ ನಲಿಯುವೆ ಇನಿಯನಾದರೆ

 

ಪ್ರೀತಿ ಒಂದು ಯೋಗಾಯೋಗ ಬಯಸಿದೆ ನಿನ್ನ 

ಸನಿಹ ಸಂಗ ಮನವರಿತು ನಡೆದರೆ ಅನುರಾಗ 

ಕಣ್ಣುತುಂಬಿ ಕಾತರಿಸಿದರೆ ಪ್ರಣಯದ ಪ್ರೇಮಜೋಗ 

ಬೇರೇನು ಬೇಕು ನೀ ಜೊತೆ ಇರುವಾಗ.

 

Love Feeling Quotes in Kannada

ದೂರ ಹೊದಷ್ಟು ಮತ್ತೆ ಮತ್ತೆ ನಿನ್ನ ಸನಿಹ ಬಯಸಿದೆ ಈ ಜೀವ…! 

ಬೇಡ ಅಂತ ಹೇಳಿದರೂ ದೂರ ಆಗದೆ ಇರುವುದು ಈ ಹೃದಯ…! 

ಯಾರು ಬಲ್ಲವರು ಈ ಪ್ರೀತಿ ಎಂಬ ಎರಡ ಅಕ್ಷರದ ಮಾಯೆಯನ್ನಲೇ…? 

 

ಪ್ರತಿ ದಿನ, ಪ್ರತಿ ಕ್ಷಣ ಕಾದಿರುವೆ ಇಂದಲ್ಲ ನಾಳೆ ಬರುವೆಯೆಂದು 

ಪ್ರತಿ ರಾತ್ರಿ ಕನಸು ಕಾಣುತಿರುವೆ ನೀ ಒಪ್ಪಿದರೆ ಹೇಗೆ ಎಂದು 

ವರುಷಗಳೇ ಕಳೆದಿಹವು ಕಾಯುತಲಿ ನಿನಗಾಗಿ ಕಳೆದು ಹೋಗಲಿ ಇನ್ನಷ್ಟು 

ಈ ಉಸಿರೆಲ್ಲ ನಿನಗಾಗಿ ಒಂದು ವೇಳೆ ನಿನ್ನ ಪ್ರೀತಿ ಸಿಗದಿರೆ ನೀ ಒಲಿಯುವ ಮುನ್ನ ನ ಜರಿದಿರೆ ಯಾಕೋ ಏನೋ ದಿಗಿಲಾಗಿದೆ ಕೊನೆಗೊಮ್ಮೆ ಕಾಣಲು ಬಯಸಿದೆ

 

ಎದೆಯ ಪಾತಾಳದಲಿ ಪ್ರೀತಿ ಚಿಲುಮೆಯು ಜಿನುಗಿ ಹೊಳೆಯಾಗಿ ಹರಿಯಲು ಹಂಬಲಿಸುತಿದೆ ಈ ಜೀವ ಮಾಯಾಜಗದ ಕತ್ತಲೆಯೊಳು ಹೃದಯ ಕಳೆದಿದೆ ನನ್ನದು ಪ್ರೇಮದೊನಲು ಚಿಗುರಿದೆ ಮನದ ಮರುಭೂಮಿಯಲಿ ಸೇರ ಬಯಸಿದೆ ನಿನ್ನುಸಿರ ತವಕದಲಿ ಕಾದಿದೆ ಈ ಜೀವ ಹೊನ್ನ ಕಿರಣಗಳೆಲ್ಲ ನಿಶ್ಯಬ್ಧವಾಗಿವೆ ಸೋತಾಗಿದೆ ನಿನ್ನ ಕಂಗಳ ಕಾಂತಿಯ ಸೆಳೆತಕೆ

 

ನಲ್ಲನೇ ನೀ ಮೆಲ್ಲಗೆ ಬಂದು ನೀಡಿದ ಆ ಚುಂಬನ 

ದಿನರಾತ್ರಿ ಕಾಡುತ್ತಿದೆ ನಿನ್ನ ಬಲಿಷ್ಠ ಬಾಹುಗಳಲ್ಲಿ ಸಿಲುಕಿದ ಆ ಕ್ಷಣ 

ಮರೆಯದೆ ಮೈ ಕಂಪಿಸುತ್ತಿದೆ ನಿನ್ನ 

ಪ್ರೀತಿ ಪ್ರೇಮಪಾಶದಲಿಸಿಲುಕಿದ ಮನ 

ನಿನ್ನ ಚಿರಸನಿಹವ ಬಯಸಿದೆ

 

ನಾನು ಸೋತಿದ್ದೀನಿ ನಿನ್ನ ಸ್ವಚ್ಚ ಮನಸ್ಸಿಗೆ ನಿಷ್ಕಲ್ಮಶ ಪ್ರೀತಿಗೆ…

ಆದರೆ ನಿನ್ನೊಂದಿಗೆ ಬಾಳುವ ಅದೃಷ್ಟ ನನಗಿಲ್ಲ… 

ನನಗೆ ನಿನ್ನ ಮೇಲೆ ಅಗಾಧವಾದ ಪ್ರೀತಿ ಇದ್ರೂ ಕೂಡ ನಿನ್ನ ಜೊತೆ ಇರೋದಕ್ಕೆ ಆಗೊಲ್ಲ ಅಂತ ಗೊತ್ತಿದ್ರು ಕೂಡ ನಿನ್ನ ಪ್ರೀತಿಸದೇ ಇರೋದಕ್ಕೆ ಆಗಲಿಲ್ಲ..

ಕಾರಣ ನಾನು ನಿನಗೆ ಸೋತಿದ್ದೆ.

 

ಆಯ್ಕೆ ಇಟ್ಕೊಂಡು ಪ್ರೀತಿ ಮಾಡೊದಲ್ಲ, 

ಪ್ರೀತಿ ಅಂದ್ರೆ ನಿನ್ನ ಬಿಟ್ಟು ಬೇರೆ ಆಯ್ಕೆನೇ ಇಲ್ಲ ಅನ್ನೋದು ನಿಜವಾದ ಪ್ರೀತಿ. 

ಹಾಗೂ ಕೊನೆಯವರೆಗೂ ಇರೋ ಪ್ರೀತಿ.

 

ನನ್ನೊಳಗಿನ ಭಾವ ನೀನು ಬಂಧಿಯಾದಾಗ ನಾ ಪ್ರೇಮಿಯಾದೆನು 

ನನ್ನೊಳಗಿನ ಮೌನ ನೀನು ಮಾತಾದಾಗ ವಿರಹಿ ನಾನು ಕವಿಯಾದೆನು. 

ಪ್ರತಿ ಮಾತಲ್ಲೂ ಪ್ರೀತಿ ಹುಡುಕುವ ನಾನು, 

ನಿನ್ನ ಮೌನವ ಅರ್ಥೈಸಿಕೊಂಡಿದ್ದರೆ ಅದೆಷ್ಟೋ ಶೃಂಗಾರ ಕಾವ್ಯಗಳ ಸೃಷ್ಟಿಸಬಹುದಿತ್ತು.

 

ಓ ನನ್ನ ಕನಸಿನ ದೇವತೆ 

ನಿನ್ನ ನೆನಪಿನಲಿ ಬರೆದಿರುವೆ ನನ್ನ ಮನದ ಪುಟದಲಿ ಒಂದು ಪುಟ್ಟ ಕವಿತೆ 

ಈ ನನ್ನ ಹೃದಯಕೆ ನಿನ್ನ ಪ್ರೀತಿ ಬೇಕಂತೆ 

ಅದಕ್ಕಾಗಿ ಈ ನನ್ನ ಹೃದಯ ನಿನ್ನ ಅನುಮತಿ ಕೇಳುತ್ತಿದೆಯಂತೆ.

 

ಕನಸಲು ಕೂಡ ಕಾಯುವೆ ನಿನ್ನ ಪ್ರೀತಿಗೆ, ಕನಸಲಿ ಕೂಡ ನಿನ್ನ ಪ್ರೀತಿ ಕನಸಾಗದೆ ಇರಲಿ.

 

ನನ್ನ ಹೃದಯ ಮಾಡುತ್ತಿದೆ ನಿನ್ನ ನೆನಪಿನ ಮಿಮಿಕ್ರಿ 

ದಿನಾರಾತ್ರಿ ನಿನ್ನ ನೆನಪನ್ನೇ ಕಾಣುವುದುದೆ ನನ್ನ ನೌಕರಿ 

ನಿನ್ನ ಪ್ರೀತಿ ಸಿಗಲಿಲ್ಲವೆಂದರೆ ನಾನಾಗುವೆ ಬಿಕಾರಿ 

ಅರ್ಥವಾಯಿತಾ ನನ್ನ ಮನದ ಮಾತು ಹೇ ಸುಂದರಿ.

 

ಈ ಜನ್ಮವು ಒಂದೇ ಸಾಲದು ನಿನ್ನ ಪ್ರೀತಿ ಪಡೆದ ಋಣವ ತುಂಬಲು.

 

ನಾನು ನನ್ನ ಜೀವನದಲ್ಲಿ ಸಂಪಾದಿಸಿದ ಅತೀ ದೊಡ್ಡ ಸಂಪತ್ತೆಂದರೆ ಅದು ನೀನು ಹಾಗೂ ನಿನ್ನ ಪ್ರೀತಿ.

 

ಕೃಷ್ಣನ ಪ್ರೇಮಕೆ ಮೇರೆ ಏನು? 

ಕವಿತೆಯಲ್ಲಿ ನಿನ್ನ ಪ್ರೀತಿ ಬಚ್ಚಿಟ್ಟ ಮೀರೆ ನೀನು! 

ಅದೋ! ನೆನಪಿನೊಟ್ಟಿಗೆ ಬಂದನು ನಿನ್ನ ಇನಿಯ! 

ಹೇಳು ಗೆಳೆಯ, ಬಿಟ್ಟು ಹೋಗಿದ್ದು ಸರಿಯಾ? 

ಇಂದು ನೀ ಬಂದು ತಬ್ಬಲು, ಇದೋ! 

ಕರಿಗಿ ಬಿಟ್ಟು ಹೋಗುವೆ ಈ ಇಳೆಯ.

 

ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡಲೇನು ಇಂದು . 

ಏನಾಗಲಿ ನನ್ನ ಸಂಗಾತಿ ನೀ.. 

ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ. 

ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ.

 

ಮಾತಿನಿಂದ ಹಿತವೆನಿಸಿದ ಪ್ರೀತಿ ನನ್ನ ಮಾತ್ರ ಹಚ್ಚಿಕೊಂಡ ನಿನ್ನ ಹೃದಯದ ರೀತಿ ನೋಡದೆ ಒಂದಾದ ಮನಸ್ಸಿನ ಜ್ಯೋತಿ ನಿನ್ನ ಅನುಪಸ್ಥಿತಿಯಲ್ಲಿ ಹುಟ್ಟಿಸಿದ ಭೀತಿ ಇಬ್ಬರನಡುವೆ ಸೃಷ್ಠಿಯಾಯಿತು ಕಾವಲುದಾರಿಯ ರೀತಿ ಮನಸ್ಸು ಮುರಿದ ಮೇಲೆ ನಿನ್ನನ್ನು ಮೊದಲ ಬಾರಿ ನಾ ನೋಡಿದ ರೀತಿ ನೋಡದೆ ಇದ್ದರು ಪ್ರೀತಿಸೋ ಇಬ್ಬರು ನೋಡುವ ಮೊದಲೆ ದೂರಾಗಿ ಹೋದರು

 

ನಿನ್ ಪ್ರೀತ್ಸೋ ಹೃದಯಕ್ಕೆ ನಿನ್ನ ಪ್ರೀತಿ ಗೊತ್ತಿರಲ್ಲ 

ಆದರೆ ನಿನ್ನ ಪ್ರೀತ್ಸೋ ಹೃದಯಕ್ಕೆ ನಿನ್ನ ಬಿಟ್ಟು ಏನೂ ಗೊತ್ತಿರಲ್ಲ. 

 

ಮತ್ತೆ ಮತ್ತೆ ಪ್ರೀತಿ ಮಳೆ ಸುರಿಸೋಕೆ ನಿನ್ನ ಸುತ್ತ ಸುತ್ತೋ ಕರಿಮೋಡ ನಾನೇನೆ…

 

ಎರಡು ಧ್ರುವಗಳ ನಡುವೆ ಸಂಧಿಸಿದವು ಮನಗಳು ಜೊತೆಯಾಗುವುದೇ ಎಂದಾದರು ಚಾಚಿ ಕೈಯನು ಕಾಯುತ್ತಿರುವೆನು ಸೇರುವೆ ಎಂದು ದಾಟಿ ಎಲ್ಲ ಅಂತರವನು ಮನದ ಪ್ರೀತಿ ಆಗಸದಷ್ಟು ಬೆಳದಿಂಗಳಿನಂತೆ ನಿಷ್ಕಲ್ಮಶವು ತೋರಿಕೆಯಿಲ್ಲ, ಬಯಕೆಗಳೆಲ್ಲ ನಿನ್ನ ಒಲವ ಹೊರತು ಬೇರೇನು ಬಯಸೆನು….

 

ಬೆಟ್ಟದಷ್ಟು ಪ್ರೀತಿ ಅಡಗಿಸಿಟ್ಟು ಮನದಲಿ ಕಾಯುವೆ ಪ್ರತಿಕ್ಷಣ ಹಿಡಿಯಷ್ಟು ನಿನ್ನ ಒಲವಿಗಾಗಿ…

 

ಚೆಲುವನೇ ನಿನ್ನ ಮುಗುಳು ನಗೆ ಹಗಲಲೂ ಶಶಿಯು ಬೇಡುವನು ರಸಿಕನೇ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ

 

ಹಿಡಿಯಷ್ಟು ಇರುವ ಈ ಹೃದಯದಲ್ಲಿ 

ಹಿಡಿಯಲಾರದಷ್ಟು ಪ್ರೀತಿ ನಿನ್ನ ಮೇಲೆ……

 

ನಿನ್ನ ಪ್ರೀತಿ ಕದಿಯೋ ಕಳ್ಳ ನಾನು

ಬಂಧಿಸಿಕೊ ನಿನ್ನ ಹೃದಯದ ಬಂಧಿಖಾನೆಯಲ್ಲಿ ಸಾಯೂವವರೆಗೂ.

 

ಜೀವಕ್ಕೆ ಜೀವ ಕೊಡೋ ಜೀವ ಅಂತ ನಿನ್ನನ್ನ ಆರಿಸಿಕೊಂಡಿದ್ದಿನಿ 

ನನಗೆ ಜೀವ ಬೇಡ ಜೀವ ಇರೊವರೆಗೂ ನಿನ್ನ ಪ್ರೀತಿ ಕೊಡು ಸಾಕು…..

 

ಮೌನದೊಡನೆ ಮಾತು ಕಂಬನಿಯೊಡನೆ ಪ್ರೀತಿ ಏಕಾಂತದೊಡನೆ ಸಾಂಗತ್ಯ ಒಲವಿನೊಂದಿಗೆ ಸಂಘರ್ಷ ನಿನ್ನ ಅನುರಾಗ ಬಯಸಿದ ನೋವಿಗೆ ಇನ್ನೆಷ್ಟು ಕಾಲ ಈ ಬಂಧನ!

 

ಮಗುವಿನ ಹಾಗೆ ಮಲಗುವ ಆಸೆ ನಿನ್ನ ಮಡಿಲಲ್ಲಿ.. 

ನೀ ತೋರುವೆಯ ತಾಯಿಯ ಪ್ರೀತಿಯ ನನ್ನ ಬಾಳಲ್ಲಿ.. 

ಗೆಳತಿಯಾಗಿ ನೀ ಬಂದೆ ನನ್ನ ಜೀವನದಲ್ಲಿ.. 

ನಿನ್ನ ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ..

 

ಪ್ರತಿ ಸಾರಿಯೂ ನನ್ನ ಪ್ರೀತಿ ಹೀಗೆ ಅಂತ ಹೇಳೋಕೆ ಆಗಲ್ಲ. 

ಆದರೆ ಪ್ರೀತಿ ದಿನವೂ ನಿನ್ನ ಮೇಲಿನ ಪ್ರೀತಿ ಜಾಸ್ತಿ ಆದಾಗ ನನಗನಿಸುವುದು ನೀನಿಲ್ಲದೆ ಖಂಡಿತ ನನ್ನಿಂದ ಬದುಕಲು ಆಗುವುದಿಲ್ಲ ಎಂಬುದು. 

ಅದೇನೋ ನಿನ್ನೊಡನೆ ಇದ್ದಷ್ಟು ನೆಮ್ಮದಿ ಖುಷಿ ಬೇರೆ ಎಲ್ಲೂ ಸಿಗೋದೇ ಇಲ್ಲ ಅನ್ಸುವಷ್ಟು ನನ್ನೊಡನೆ ಆವರಿಸಿಬಿಟ್ಟಿದೀಯ.

 

ಸಂಧರ್ಭ ಬಂದರೆ ನಾ ನಿನ್ನ ಮೇಲೆ ಪ್ರೀತಿ ತೋರಿಸುವುದನ್ನು ನಿಲ್ಲಿಸಬಲ್ಲೆ 

ಆದರೆ ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸಲಾರೆ.

 

ನಿನ್ನ ಪ್ರೀತಿ ಜಪಿಸುತ್ತಿದೆ.. 

ನಿನ್ನ ನೆನಪೇ ಕೆಣಕುತಿದೆ..

 

ನಿನ್ನ ಕಣ್ಣಿನಲ್ಲಿ ನಾನಾ ನಗು ತುಂಬಿರಲಿ. 

ನನ್ನ ಹೃದಯದಲ್ಲಿ ನಿನ್ನ ಪ್ರೀತಿ ತುಂಬಿರಲಿ…

 

True Love Quotes in Kannada

ನನ್ನ ಆಯಸ್ಸು ಇರೋವರೆಗೂ..

ನಿನ್ನ ಪ್ರೀತಿ ಬೇಕು ಇಲ್ಲವಾದರೆ…

ನಿನ್ನ ಪ್ರೀತಿ ಇರೋವರೆಗೂ ನನ್ನ ಆಯಸ್ಸು ಸಾಕು..!

 

ನನ್ನ ಮೇಲೆ ನೀ ಮುನಿಸಿಕೊಂಡರೇನು, 

ನನಗೆ ತಿಳಿದಿದೆ ಹೇಗೆಂದು ನಿನ್ನ ಒಳಮನಸು.. 

ನನ್ನ ಬಳಿ ನೀ ಮಾತನಾಡದಿದ್ದರೇನು, 

ನನ್ನ ಕ್ಷೇಮಕ್ಕೆ ತುಡಿಯುವುದು ನಿನ್ನ ಮನಸು… 

ನನ್ನ ನೀ ನೋಡ ಬಯಸದಿದ್ದರೇನು, 

ನನ್ನ ಪ್ರತಿಚಲನೆಯ ತಿಳಿಯುವುದು ನಿನ್ನ ಮನಸು, 

ನನ್ನ ಸಂದೇಶಕ್ಕೆ ನೀ ಉತ್ತರ ನೀಡದಿದ್ದರೇನು, 

ನನ್ನ ಸಂದೇಶವ ನೋಡಿ ಒಳಗೊಳಗೆ ನಗುವುದು ಮನಸು, 

ನನ್ನ ಪ್ರೀತಿಯ ನೀ ದೂರವಿರಿಸಿದರೇನು, 

ದೂರವಿದ್ದು ನನ್ನ ಪ್ರೀತಿಸುವ ನಿನ್ನ ಪ್ರೀತಿ ಸೊಗಸು…

 

ನಿನ್ನ ಪ್ರೀತಿ ಜೇನು..

ಪಡೆಯಲಾರೆ ನಾನು…

 

ನನ್ನ ಪ್ರೀತಿಯನ್ನು ತಿರಸ್ಕರಿಸಿದೆ ಎಂದು ಕೊರಗುವವಳಲ್ಲ ನಾ. 

ನಿನ್ನ ಪ್ರೀತಿಯನ್ನು ಪಡೆಯುವ ಯೋಗ್ಯತೆ ಬಹುಷಃ ನನಗಿಲ್ಲ…!! 

ಮೊದಲಿನ ಹಾಗೆ ನಿನ್ನ ಪ್ರೀತಿ ಪಡೆಯುವ ಹಂಬಲ ಒಮ್ಮೆ ಕ್ಷಮಿಸು…. 

 

ಕಾಣದ ಪ್ರೀತಿ…… 

ಕಾಣದ ಕಡಲು ನೀನು….. 

ನಿನ್ನ ಪ್ರೀತಿ ಆರಾಧಕಿ ನಾನು….. 

ಕಂಡರೂ ನೋಡದೆ ಹೋದೆ ನೀನು….. 

ನಿನಗಾಗಿ ಕಾದು ಕುಳಿತವಳು ನಾನು……

 

ನಿನ್ನ ಸರಳತೆಯಲ್ಲೇ ಇಷ್ಟು ಸೌಂದರ್ಯವಿದೆಯೆಂದರೆ ನಿನ್ನ ಅಲಂಕಾರ ಹೇಗಿರಬಹುದು 

ನಿನ್ನ ಸಿಟ್ಟಿನಲ್ಲೇ ಇಷ್ಟು ಪ್ರೀತಿಯಿದೆಯೆಂದರೆ ನಿನ್ನ ಪ್ರೀತಿ ಹೇಗಿರಬಹುದು ಅನಾಮಿಕ.

 

ನಿನ್ನ ಪ್ರೀತಿ ಮಾಡುವವರು ನೂರಾರು ಜನ ಸಿಗಬಹುದು 

ಅದರೆ ಸಿಕ್ಕವರು ಯಾರು ನಾನಗಿರಲ್ಲ.

 

ನಿನ್ನ ಪ್ರೀತಿ ನಂಗೆ ಮಾತ್ರ ಸಿಗ್ಬೇಕು ಅನ್ನೋ ಸ್ವಾರ್ಥಿ ನಾನು.

 

ಕನಸಲ್ಲೂ ಅನಿಸಿರಲಿಲ್ಲ ನನಗೆ ನನ್ನ ಕಥೆಯಲ್ಲಿ ನಿನ್ನ ಪಾತ್ರ ಇರಬಹುದೆಂದು… 

ಯಾರ ಅನುಗ್ರಹ ವೊ ತಿಳಿಯದಾಗಿದೆ ನನಗೆ ನಿನ್ನ ಪ್ರೀತಿ, ಅಕ್ಕರೆಗೆ, ಮಾರು ಹೊದೆ ನಾ.. 

ಗೆಳೆತನದ ಹೊಸ‌ಮಜಲಿಗೆ ನಾಂದಿ ಹಾಡಿರುವೆ..‌ 

ಕಾಯುವೆ ನಾ ಈ ಗೆಳೆತನವ ರಾಯರ ಅಣತಿಯಂತೆ…

 

ಶೃಂಗಾರ ಕಾವ್ಯದ ಬಂಗಾರ ನೀನು, ಶೃಂಗಾರವಿಲ್ಲದ ಬಡವೆ ನಾನು… 

ನಿನ್ನ ಪ್ರೀತಿ ನನಗೆ ಶೃಂಗಾರವಾದರೆ, ನನ್ನ ಜೀವನ ಬಂಗಾರವಾದಂತೆ…

 

ಕಲಿಯಾಗಿರುವ ಹೃದಯದಲ್ಲಿ ನಿನ್ನ ನೆನಪುಗಳನ್ನು ಬರೆದಿರುವೆನು, 

ನಿನ್ನು ಬಿಟ್ಟು ಹೋದರು ನಿನ್ನ ನೆನಪುಗಳು ಹಾಗೇ ಉಳಿದಿರುವುದು, 

ಪ್ರೀತಿಯೆಂಬ ಸಾಲದಲ್ಲಿ ಬಡ್ಡಿಯೇ ಪಾವತಿಯಾಗುತ್ತಿದೆ ಹೊರತು, 

ಅಸಲು ಪಾವತಿಸಲು ನಿನ್ನೇ ಬೇಕು ಎನ್ನುತ್ತಿದೆ ನನ್ನ ಮನಸ್ಸು…

 

ಮನದಾಳದ ಮಾತು ಮನಸಿನವರೆಗೂ ಆ ಮನಸೇ ನೀನಾದರೆ??……. 

ಕದೆಗಾಣದ ಸೊಗಸು ನಿನ್ನ ಪ್ರೀತಿ ಆ ಪ್ರೀತಿ ನೀನಾದರೆ???…… 

ಮುತ್ತಂತೆ ಮಾತು ಆ ಮಾತು ನೀನಾದರೆ???….. 

ಸೊಗಸಂತೆ ಕನಸು ಆ ಕನಸೇ ನೀನಾದರೆ??…… 

ಕವಿಯಂತೆ ಕಲ್ಪನೆ ಆ ಕವಿತೆ ನೀನಾದರೆ???…. 

ಮಿಂಚಂತೆ ಸ್ಪರ್ಶ ಆ ಸ್ಪರ್ಶವು ನೀನಾದರೆ???….

 

ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ ವರ ಅದು ನಿನ್ನ ಜೊತೆ ಪರಿಚಯ, ನನಗೆ ಕೊಟ್ಟ ಅದೃಷ್ಟ ನಿನ್ನ ಪ್ರೀತಿ.

 

ಆಕಸ್ಮಿಕವಾಗಿ ಆದ ನಮ್ಮ ಪರಿಚಯ, ಜೀವನದಲ್ಲಿ ಎಂದಿಗೂ ಜೊತೆಯಾಗಿ ಇರಲಾರೆವು! 

ಆದರೆ ನಿನ್ನ ನೆನಪುಗಳು ಮಾತ್ರ ನಾನು ಚಿರ ನಿದ್ರೆಗೆ ಜಾರುವವರೆಗೂ ಶಾಶ್ವತ 

ಮರೆಯಲಾಗದ ನೆನಪೆ ನಿನ್ನ ಪ್ರೀತಿ

 

ಇರುವಾಗಲ್ಹೇ ಸತ್ತ ಹಾಗಿದೆ. ಈ ಹೃದಯ, ನಿನ್ನ ಪ್ರೀತಿ ಗೋಸ್ಕರ

 

ನಿರ್ಜಿವ ವಸ್ತುಗಳ ಮೇಲಿನ ವ್ಯಾಮೋಹ ನನಗ್ಯಾಕೆ ಗೆಳೆಯ… 

ನನಗಾಗಿಯೇ ಮಿಡಿಯುತ್ತಿರುವ ನಿನ್ನ ಹೃದಯ, 

ನಿನ್ನ ಪ್ರೀತಿ, ನೀನು ನನಗೆ ಸಾಕಲ್ಲವೇ ಇನಿಯ…

 

ಕಲಿಯಾಗಿರುವ ಹೃದಯದಲ್ಲಿ ನಿನ್ನ ನೆನಪುಗಳನ್ನು ಬರೆದಿರುವೇನು, 

ನಿನ್ನು ಬಿಟ್ಟು ಹೋದರು ನಿನ್ನ ನೆನಪುಗಳು ಹಾಗೇ ಉಳಿದಿರುವುದು, 

ಪ್ರೀತಿಯೆಂಬ ಸಾಲದಲ್ಲಿ ಬಡ್ಡಿಯೇ ಪಾವತಿಯಾಗುತ್ತಿದೆ ಹೊರತು, 

ಅಸಲು ಪಾವತಿಸಲು ನಿನ್ನೇ ಬೇಕು ಎನ್ನುತ್ತಿದೆ ನನ್ನ ಮನಸ್ಸು…

 

ನಿನ್ನ ಜೊತೆ ಸಪ್ತಪದಿ ತುಳಿಯುವ ಅದೃಷ್ಟ ನನಗೆ ಇಲ್ಲದೆ ಇರಬಹುದು 

ಆದರೆ..!! ಸಪ್ತಸಗಾರವನ್ನೂ ದಾಟಿ ಬರುವಷ್ಟು ಪ್ರೀತಿ ನನ್ನಲಿದೆ….!! 

 

ನನಗೆ ನಿನ್ನ ಪ್ರೀತಿ ಮಾತ್ರ ಕೊಡು ಸಾಕು 

ನಿನ್ನ ಜೊತೆ ಜೀವನ ಪೂರ್ತಿ ಮಗು ತರ ಕಾಳಜಿ ಮಾಡೋಕ್ಕೆ ನಾನು ಯಾವಾಗ್ಲು ನಿನ್ನ ಜೊತೆ ಇರ್ತೀನಿ.

 

ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ ವರ, ಅದು ನಿನ್ನ ಜೊತೆ ಪರಿಚಯ

ನನಗೆ ಆ ದೇವರು ಕೊಟ್ಟ ಅದೃಷ್ಟ ಮತ್ತು ನಿನ್ನ ಪ್ರೀತಿ

 

ಮಗುವಿನ ಹಾಗೆ ಮಲಗುವ ಆಸೆ ನಿನ್ನ ಮಡಿಲಲ್ಲಿ.. 

ನೀ ತೋರುವೆಯ ತಾಯಿಯ ಪ್ರೀತಿಯ ನನ್ನ ಬಾಳಲ್ಲಿ.. 

ಗೆಳತಿಯಾಗಿ ನೀ ಬಂದೆ ನನ್ನ ಜೀವನದಲ್ಲಿ.. 

ನಿನ್ನ ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ..

 

ನನ್ನೆಲ್ಲಾ ಕಹಿ ನೆನಪ ಮರೆಸಿ ಬದುಕಲ್ಲಿ ಹೊಸ ಸಂತಸ ತಂದವಳೇ… 

ಪುಣ್ಯ ಮಾಡಿರುವೆನೆ ನಿನ್ನ ಪ್ರೀತಿ ಪಡೆಯಲು…

ಸಾಕಗದು ಈ ಜನುಮ ನಿನ್ನ ಋಣ ತೀರಿಸಲು…

 

ಮಾಡಿದ ಪ್ರೀತಿ ಮರೆಯಕಾಗಲಾ,, ಕೂಡಿದ ಮನಸ್ಸು ಒಡೆಯಕಾಗಳಾ,,, 

ನೆನಪುಗಳು ಅಳಿಸಕ್ಕಾಗಳಾ,,,, 

ಮುದ್ದು ಮನಸ್ಸಿನ ಪೆದ್ದು ಹುಡುಗಿನ ಬಿಡಕಾಗಲ್ಲಾ,,,,, 

ನಿನ್ನ ಪ್ರೀತಿ ಬಿಟ್ಟು ಬೇರೆ ಏನು ಗೊತ್ತಿಲ್ಲ ಈ ಪ್ರೇಮಿಗೆ.

 

ನಿನ್ನ ಪ್ರೀತಿ ಹೃದಯಕ್ಕೆ ಕಾಲಿಟ್ಟಾಗ, 

ಇಡೀ ನನ್ನ ದೇಹವೇ ನಿನ್ನ ಆರಾಧನ ಮಂದಿರ ವಾಗುವುದು,, 

ನಾನು ವಿಶೇಷವೆನಿಸುವುದು ರೂಪ ಚಹೆರೆಗಳಿಂದಲ್ಲ…..

ನನ್ನ ಹೃದಯದಿ ನೆಲೆಸಿರುವ ನಿನ್ನಿಂದ

 

ನೀನು “ನನ್ನವಳಲ್ಲ” ಅಂತ ಅಂತರಾತ್ಮಕ್ಕೆ ಅರಿವಾಗಿದ್ದರು… 

ಅಂತರಂಗದಲ್ಲಿ ನಿನ್ನನ್ನು ಆರಾಧಿಸುವುದರಲ್ಲಿ ಅದೇನು ಆನಂದವಿದೆ…. ಇದ್ದಷ್ಟು ದಿನ ನಿನ್ನ ಮೇಲಿನ ನನ್ನ ಪ್ರೀತಿ ದೇವರ ಪೂಜೆಯಷ್ಟೇ ಪವಿತ್ರವಾಗಿರಲಿ ಅಷ್ಟೇ ಸಾಕು ಇ ಬದುಕಿಗೆ…

 

ನಿನ್ನ ಪ್ರೀತಿ ನೆನಪು ಸದಾ ಕಾಡುತ್ತಿದೆ ನಿನ್ನ ಆ ಪುಟ್ಟ ಹೃದಯದಲ್ಲಿ ಸದಾ ಇರಲೇಬೇಕು ಆಸೆ ಈ ಆಸೆಗೆ ಏನು ಹೆಸರು ಇಡಬೇಕು ಅಂತ ಗೋತ್ತಿಲ್ಲದೆ ಮೌನವಾಗಿದೆ.ನನ್ನ ಈ ಹೃದಯ.

 

ಜೀವಕ್ಕೆ ಜೀವ ಕೊಡೋ ಜೀವ ಅಂತ ನಿನ್ನ ಆಯ್ಕೆಮಾಡಿಕೊಂಡಿರುವೆ. ನನಗೆ ಜೀವ ಬೇಡ ಕೊನೆವರೆಗೂ ನಿನ್ನ ಪ್ರೀತಿ ಕೊಡು ಸಾಕು… 

 

ಶೃಂಗಾರ ಕಾವ್ಯದ ಬಂಗಾರ ನೀನು 

ಶೃಂಗರವಿಲ್ಲದ ಬಡವಿ ನಾನು 

ನಿನ್ನ ಪ್ರೀತಿ ನನಗೆ ಶೃಂಗಾರವಾದರೆ 

ನನ್ನ ಜೀವನ ಬಂಗಾರವಾದಂತೆ..

 

ಜನುಮ ಜನುಮಕೂ ಜೊತೆಯ ಬೇಡಿದೆ 

ನನಗೆ ಜೊತೆಯೂ ನಿನಾದೆ ಮನಸು ಬಯಸಿದೆ 

ಯಾವ ಕಾಲಕೂ ನಿನ್ನ ಪ್ರೀತಿ ಆಸರೆ ನನ್ನ ಕನಸು 

ಕಣ್ಣಿನೊಳಗಡೆ ಚೆಲುವ ನಿನ್ನ ರೂಪವು 

ನನ್ನ ಎದೆಯಾ ಗೂಡಿನೊಳಗೆ ನಿನ್ನ ದೈವ ಸ್ವರೂಪವು 

ನೋವೇ ಇರಲಿ, ನಲಿವೆ ಇರಲಿ ಕೂಡಿ ನಡೆಯಲಿ 

ಬದುಕು ಗಂಜಿ ಕುಡಿಯಲಿ, ಗುಡಿಸಲಾಗಲಿ ಜೊತೆಗೆ ನೀನಿರಬೇಕು. 

 

ಸದಾ ನನ್ನ ಮನದ ಅರಸಿ ನಿನ್ನ ಕಣ್ಣಲಿ ಕಣ್ಣನು ಬೆರೆಸಿ 

ಪ್ರೀತಿ ಪ್ರೇಮದ ಬುತ್ತಿಯ ಕಲಸಿ 

ನಿಂದೆ ನಾನು ಜಗವನು ಜಯಿಸಿ… 

ಕಾದಿರುವೆ ನಿನಗಾಗಿ.

 

ಮರೆತು ಹೋದೆ ನನ್ನೆ ನಾನು 

ಆ ನಿನ್ನ ನೋಟಕೆ ಸಿಗುವೆಯಾ ನೀನು 

ನನಗೆ ನೀ ಆ ಮರೀಚಿಕೆ 

ತಿರುಗಿ ತಿರುಗಿ ನೋಡದಿರು ನಿನಗೇಕಿಷ್ಟು ನಾಚಿಕೆ 

ತಿರುಕನಾಗಿ ಮಾಡದಿರು ಇಟ್ಟಿರುವೆನೆ ನಂಬಿಕೆ

ಗಾಯವಾಗಿದೆ ಹೃದಯ ನೀಡುವೆಯಾ ನೀ ಲಸಿಕೆ 

ನನ್ನ ಪ್ರೀತಿ ಹೇಳುತಿರುವೆ ಒಪ್ಪಿದರೆ ನೀನೇ ನನ್ನಾಕೆ

 

ಕವಿಯಾಗಿ ಕವಿತೆ ಬರೆದು ಬಿಟ್ಟೆ…. 

ಋಷಿಯಾಗಿ ತಪಸು ಮಾಡಿ ಬಿಟ್ಟೆ…

ನಾನು ನಿನ್ನ ಪ್ರೀತಿ ಪಡೆಯಲು ಪ್ರಯತ್ನ ಪಟ್ಟೆ… 

ಆದರೆ ನೀ ನನ್ನ ಮರೆತೆ ಬಿಟ್ಟೆ.. ನನ್ನ ಗೆಳತಿ…!

 

ನೀ ಸನಿಹವಿದ್ದರೆ ನನ್ನ ಸಂತೋಷಕ್ಕೆ ಲೆಕ್ಕವೇ ಇಲ್ಲ ನೀ ದೂರವಿದ್ದರೆ ನಿನ್ನ ನೆನೆಯುವ ದಿನವೇ ಎಲ್ಲ ಎಷ್ಟು ವರ್ಷಗಳಾದರೂ ಹೊಸದಾಗಿ ಶುರುವಾದ ಪ್ರೀತಿ ನಮ್ಮದು ನೀ ಕೊಡುವ ನಗುವಿನ ಉಡುಗೊರೆ ನನ್ನದು ಕೋಪ ಜಗಳ ಮಾಮೂಲಿ ಇಬ್ಬರ ಬಿಟ್ಟು ಇದ್ದ ದಿನಗಳು ಇಲ್ಲ ನಮ್ಮಲಿ ಎಂದಿಗೂ ನನ್ನ ಜೊತೆಯಾಗಿರು ನೀನು ಅರಿತು ಇರುವೆ ನಿನ್ನಾ ನಾನು.

 

ನಿನ್ನ ಒಂದು ನಗೆ ಗೆ ಬಂಧನವಾದೇ ನಿನ್ನ ಮನಸ್ಸಿಗೆ… 

ಪ್ರತಿ ಸಾರಿ ನನ್ನ ಮೇಲೆ ಪ್ರೀತಿ ಕರುಣೆಯ ತೋರಿಸಿದವಳು ನಿನ್ನಲ್ಲವೇ…. 

ನಿನ್ನ ಪ್ರೀತಿ ಸವಿಯಲು ಬಂದೆ ನಾ ಜೇನಿನಂತೆ ನಿನ್ನ ಸಿಹಿ ಮುತ್ತಹೀರಿ… 

ನಿನ್ನ ಪ್ರೀತಿಯ ಅಮಲಿನಲ್ಲಿ ತೇಲಿ ಬಿಡಲಿಲ್ಲ ನಿನ್ನ ಈ ಪೋಲಿ.

 

ನಿನ್ನ ಕಡುಗಪ್ಪು ಕಂಗಳಲ್ಲಿ ನನ್ನ ನಾ ಹುಡುಕುತಿರಲು 

ಮತ್ಯಾರದ್ದೋ ಪ್ರತಿಬಿಂಬ ಅಲ್ಲಿ ಮಿನುಗುತ್ತಿರಲು 

ಛಿದ್ರಗೊಂಡ ಮನಕೆ ನಿನ್ನ ಪ್ರೀತಿ ಹಂಗೇಕೆ 

ಬಿಟ್ಟುಬಿಡು ಕಾಡಬೇಡ ಕನಸಾಗಿ ಕೊಲ್ಲಬೇಡ ನೆನಪಾಗಿ.

 

ನಿನ್ನ ಪ್ರೀತಿ ಒಲವು ಹರಿವ ನದಿಯಂತೆ ಬೀಸು ತಂಗಾಳಿಯಂತೆ ಕೊಳಲ ನಾದದಂತೆ ವೀಣೆ ಮೀಟಿದಂತೆ ಕೋಗಿಲೆಯ ಕಂಠದಂತೆ ಶಂಖದ ನಾದದಂತೆ ನಿಷ್ಕಲ್ಮಶ, ನಿಸ್ವಾರ್ಥ ಹೊಳೆವ ವಜ್ರದಂತೆ.

 

ಮಾತು ಮೌನದ ಹಾದಿ ಹಿಡಿಯಿತು…. 

ಪ್ರೀತಿ ಮಸಣದ ಕಡೆ ಮುಖ ಮಾಡಿ ನಿಂತಿತು… 

ವ್ಯರ್ಥ ಪ್ರಯತ್ನ ಮಾಡಲಿಲ್ಲ… 

ಮಾಡಿದ್ದೂ ಪ್ರೀತಿ ಹೋರಾಟ…. 

ಜಯ ಅಪಜಯದ ಚಿಂತೆ ಇರಲಿಲ್ಲ… 

ಗೆಲ್ಲಲೇ ಬೇಕು ನಿಜ ಪ್ರೀತಿ ಅನ್ನೋ ಹುಂಬತನವಷ್ಟೆ….. 

ವಿಪರ್ಯಾಸ… ನಿನ್ನ ಪ್ರೀತಿ ಗೆ ಸೋತಿದ್ದೆ… 

ಜೀವನ ಗೆಲ್ಲುವ ಆಸೆ ಇತ್ತು… 

ಅದನ್ನು ಕೂಡ ಕಸಿದು ಮಜಾ ನೋಡಿದೆ….. 

ಪ್ರೀತಿ ಅಂದ್ರೆ ಖುಷಿ ಸಂತೋಷದ ಆಗರವಲ್ಲ…… 

ನೋವು, ಹಿಂಸೆ, ಯಾತನೆಯ ಸಾಗರ.

 

 

ನಮ್ಮ ಈ ಪ್ರೇಮ ಸಂದೇಶಗಳ ಸಂಗ್ರಹವನ್ನು (love quotes in kannada collection) ನೀವು ಆನಂದಿಸಿದ್ದೀರಿ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪರಿಪೂರ್ಣ ಸಂದೇಶಗಳನ್ನು ಕಂಡುಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ. ಈ ಉಲ್ಲೇಖಗಳು ನಿಮ್ಮ ಹೃದಯವನ್ನು ಸ್ಪರ್ಶಿಸಿದರೆ, ನೀವು ಕಾಳಜಿವಹಿಸುವ ಯಾರೊಂದಿಗಾದರೂ ಅವುಗಳನ್ನು ಹಂಚಿಕೊಳ್ಳಲು ಮರೆಯಬೇಡಿ. 

ಓದಿದ್ದಕ್ಕಾಗಿ ಧನ್ಯವಾದಗಳು. ಇನ್ನೂ ಹೆಚ್ಚಿನ ಸಂದೇಶಗಳ ಸಂಗ್ರಹಗಳಿಗಾಗಿ ನಮ್ಮ ಬ್ಲಾಗ್ ಅನ್ನು ಭೇಟಿಯಾಗುತ್ತಿರಿ.

Love Quotes in Kannada Images