100+ Sad Quotes in Kannada (ದುಃಖ ಕ್ವೋಟ್ಸ)

Feeling Sad Quotes in Kannada

ನಮ್ಮ ದುಃಖದ ಉಲ್ಲೇಖಗಳ ಸಂಕಲನಕ್ಕೆ (sad quotes in kannada) ಸುಸ್ವಾಗತ. ಇಲ್ಲಿ ನಾವು ದುಃಖದ ಆಳವನ್ನು ಪ್ರತಿಧ್ವನಿಸುವ 100 ಕ್ಕೂ ಹೆಚ್ಚು ಉಲ್ಲೇಖಗಳನ್ನು ಸಂಗ್ರಹಿಸಿದ್ದೇವೆ. 

ದುಃಖ, ನೋವು ಯಾರಿಗಿಲ್ಲ ಹೇಳಿ? ಅವು ನಮ್ಮ ಈ ಜೀವನದ ಭಾಗವಾಗಿಬಿಟ್ಟಿದೆ. ಪ್ರೀತಿಯಲ್ಲಿ ಮುಳುಗಿದವರಂತೂ ಪ್ರತಿದಿನ ಜೀವನದ ನೋವಿನ ಪಾಠ ಕಲಿಯುತ್ತಲೇ ಇರುತ್ತಾರೆ. 

ಜೀವನವು ಆಗಾಗ್ಗೆ ದುಃಖ, ಹೃದಯ ನೋವು ಮತ್ತು ಹಾತೊರೆಯುವ ಕ್ಷಣಗಳನ್ನು ತರುತ್ತದೆ ಮತ್ತು ಈ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. 

ಈ ಲೇಖನದಲ್ಲಿ ನಿಮ್ಮ ಮನಸ್ಸಿಗೆ ಸಾಂತ್ವನ ನೀಡುವಂತಹ ಅನೇಕ ಉತ್ತಮ ದುಃಖಕರ ಉಲ್ಲೇಖಗಳನ್ನು ನಿಮಗಾಗಿ ಸಂಗ್ರಹಿಸಿ ನೀಡಿದ್ದೇವೆ. 

ಈ ನೋವಿನ ಉಲ್ಲೇಖಗಳು (hurt sad quotes in kannada) ನಿಮ್ಮಿಂದ ದೂರಾದವರಿಗೆ ಹಾಗೂ WhatsApp, Facebook, Instagram ಇತರೆ ಜಾಳತಾಣಗಳಲ್ಲಿ ನಿಮ್ಮ ನೋವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ.

Sad Quotes in Kannada (ದುಃಖ ಉಲ್ಲೇಖಗಳು)

ಬೇಜಾರ್ ಅಂತ ಎನ್ ಇಲ್ಲ ಗುರು. ಆದರೆ ನನ್ನವರೇ ನನ್ನ ಅರ್ಥ ಮಾಡ್ಕೊಂಡಿಲ್ಲಅಂತ ಮನಸ್ಸಿಗೆ ತುಂಬಾ ನೋವಾಗುತ್ತೆ.

 

ಕೋಪ ಇರಬೇಕು. ಆದರೆ ತಾನು ಪ್ರೀತಿಸುವ ಮನಸ್ಸನ್ನೇ ಕೀಳಾಗಿ ನೋಡಿ ದೂರ ಮಾಡಿಕೊಳ್ಳೋ ಅಷ್ಟು ಇರಬಾರದು.

 

ಜೊತೆಗಿರದಿದ್ದರೂ ಜೊತೆಗಿರುವಷ್ಟು ನೆನಪುಗಳನ್ನು ಬಿಟ್ಟು ಹೋದಳು.

 

ಅವಳು ಕೂಡ ಸಮುದ್ರದ ಅಲೆಗಳ ತರಹ. ನನ್ನ ಜೀವನದಲ್ಲಿ ಬಂದು ಹೋದಳು ಅಷ್ಟೇ.

 

ಒಂದು ದಿನದ ಸಾವಿಗೆ ಜೀವನಪೂರ್ತಿ ಬದುಕಬೇಕು.

 

ಅವಶ್ಯಕತೆ ಇದ್ದಾಗ ಮಾತ್ರ ನಾವು ಇಷ್ಟ ಆಗ್ತೀವಿ. ಅವಶ್ಯಕತೆ ಮುಗಿದ ಮೇಲೆ ನಾವು ಕಷ್ಟ ಆಗ್ತೀವಿ.

 

ಒಪ್ಪಿಗೆ ಇಲ್ಲದ ಪ್ರೀತಿಗೆ ಒತ್ತಾಯ ಬೇಡ. ಯಾಕೆಂದರೆ ಅಲ್ಲಿ ನಮಗೆ ಬೆಲೆ ಇರಲ್ಲ. ತುಂಬಾ ಕೀಳಾಗಿ ನೋಡುತ್ತಾರೆ.

 

ಇಷ್ಟು ದಿನ ನನ್ನ ಪ್ರೀತಿನ ಅರ್ಥ ಮಾಡಿಕೊಳ್ತೀಯಾ ಅಂತಾ ನಿನ್ನ ಜೊತೆ ವಾದ ಮಾಡುತ್ತಿದ್ದೆ. ಆದರೆ ನಾನು ಸತ್ತಾರು ನೀನು ನನ್ನ ಪ್ರೀತಿನ ಅರ್ಥ ಮಾಡಿಕೊಳ್ಳೋದಿಲ್ಲ ಅಂತ ಗೊತ್ತಾಯ್ತು.

 

ಮರೆತವರನ್ನು ಮರೆತಿಲ್ಲ. ಕ್ಷಮಿಸಲಾಗಿದೆ.

 

ಮರೆತ ಮನಸ್ಸಿಗೂ., ಸೋತ ಕನಸಿಗೂ ವಿದಾಯ ಹೇಳುವುದೇ ಉತ್ತಮ.

 

ದೇಹಕ್ಕಾಗಿ ಮೂಡಿದ ಪ್ರೀತಿ ದೇಹದ ದಾಹ ತೀರುವ ತನಕ. ಮನಸ್ಸು ನೋಡಿ ಮೂಡಿದ ಪ್ರೀತಿ ಉಸಿರು ನಿಲ್ಲುವ ತನಕ.

 

ಕೈ ಮೀರಿ ಹೋದ ಕನಸನ್ನು ಮಿತಿ ಮೀರಿ ಪ್ರೀತಿಸಿದ್ದೆ.

ಯಾಕೋ ಮನಸ್ಸೇ ಸರಿ ಇಲ್ಲ. ಆಸೆ ಆಗಿದೆ ಯಾರಿಲ್ಲದ ಊರಿಗೆ ಹೋಗಬೇಕೆಂದು. ಯಾರೂ ಎಷ್ಟೇ ಹುಡುಕಿದರೂ ಕೈಗೆ ಸಿಗದ ಹಾಗೆ.

 

ದೇವರೇ ಕೊಟ್ಟು ಕಿತ್ಕೋಳ್ಳೋ ಹಾಗಿದ್ರೆ ಯಾವುದನ್ನೂ ಕೊಡಬೇಡ. ಯಾಕಂದ್ರೆ ನೀನು ಕೊಟ್ಟಾಗ ಆಗೋ ಖುಷಿಗಿಂತ ಕಿತ್ಕೊಂದಾಗ ಆಗೋ ನೋವೇ ಜಾಸ್ತಿ.

 

ಇವತ್ತು ಒಬ್ನೆ ಕುಂತಾಗ ಎಷ್ಟು Alone ಫೀಲ್ ಆಯ್ತು ಅಂದ್ರೇ ಯಾರೋ ನನ್ನ ಮಣ್ಣಲ್ಲಿ ಮುಚ್ಚಿ ಮೇಲೆ ಹೂ ಇಟ್ಟು ಹೊರಟುಹೋಗಿದ್ದಾರೆ ಅನಿಸೊವಷ್ಟು.

 

Hurt Sad Quotes in Kannada (ನೋವು ಉಲ್ಲೇಖಗಳು)

ಅಳು ಮನವೆ ನಗು ಸಿಗುವವರೆಗೂ.

 

ಲೇ ಮುದ್ದು ಅನ್ನೋದಲ್ಲ. ಲೇ ಮುದ್ಕಿ ಅನ್ನೂ ತಾಣ ಜೊತೇಲಿರಬೇಕು.

 

Call ಮಾಡೋಕೆ ಇಷ್ಟ ಇಲ್ವಾ? ಪರವಾಗಿಲ್ಲ. Message ಮಾಡೋಕು ಇಷ್ಟ ಇಲ್ವಾ? ಪರವಾಗಿಲ್ಲ. ನನ್ನ್ ಪ್ರೀತಿ ಮಾಡೋಕೂ ಇಷ್ಟ ಇಲ್ವಾ? ಪರವಾಗಿಲ್ಲ. ಈ‌ಗ ನನ್ನ್ ಬಿಟ್ ಹೋಗ್ತೀಯಾ ಹೋಗು. ಆದರೆ ಯಾವತ್ತಾದ್ರು ಒಂದ್ ದಿನ ನಿಂಗ್ ಟೈಮ್ ಸಿಕ್ಕಿದ್ರೆ ಒಂದೇ ಒಂದ್ ಸಲ Call ಮಾಡಿ ಹೇಳು. ನಾನೆನಾದ್ರೂ ತಪ್ಪು ಮಾಡಿದ್ನಾ ಅಥವಾ ನನ್ನ ಪ್ರೀತಿಲೀ ಏನಾದ್ರೂ ಕಡಿಮೆ ಅಗಿತ್ತಾ ಅಂತಾ. 

 

Sorry. ನಿನಗೆ ಯಾವತ್ತೂ ತೊಂದರೆ ಕೊಡಲ್ಲ. ಖುಷಿಯಾಗಿರು.

 

ಆನ್ಲೈನ್ ಅಲ್ಲಿ ಇದ್ರೂನು ನಿಮ್ ಮೆಸೇಜ್ ಗೆ ರಿಪ್ಲೈ ಕೊಡ್ತಿಲ್ಲ ಅಂದ್ರೇ ಅರ್ಥ ಮಾಡ್ಕೊ ಬಿಡಿ. ಅವ್ರು ನಿಮ್ಗೆ ಕೋಡ್ಬೆಕಾಗಿರೋ ಟೈಮ್ ನ ಬೇರೇವ್ರಿಗೆ ಕೊಡ್ತಾ ಇದ್ದಾರೆ ಅಂತ. 

 

ನಮ್ಮಂಥ ಹುಡ್ಗ್ರದ್ದು ಒಂದೇ ಒಂದು ಆಸೆ ಇರತ್ತೆ. ನಮ್ಮ್ ಫ್ರೆಂಡ್ಸ್ಗಳ ಮುಂದೆ ಇವ್ಳ್ ನನ್ನ್ ಹುಡ್ಗಿ ಇವ್ಳ್ ನನ್ನ ಬಿಟ್ರೆ ಬೇರೆ ಯಾರ್ ಹತ್ರಾನು ಮಾತ್ ಕೂಡ ಆಡಲ್ಲ ಅಂತಾ. ಆದ್ರೆ ನಮ್ಮ್ ಆಸೆ ಯಾವತ್ತೂ ಪೂರ್ತಿ ಆಗಲ್ಲ.

 

ಅವನ ಹೆಸರಿನ ಜೊತೆ ನನ್ನ ಹೆಸರು ಇರೋ ಕನಸು ಕಾಣುತ್ತಾ ಇದ್ದೇ. ಆದರೆ ನನಗೆ ಸುಳಿವೇ ಸಿಗಲಿಲ್ಲ ಅವನ ಹೆಸರಿನ ಮುಂದೆ ಬೇರೆಯವರ ಹೆಸರಿದೆ ಅಂತಾ.

 

ಇಷ್ಟಪಟ್ಟಿರೂ ಬದುಕು ಬದುಕೋಕೆ ಆಗ್ತಿಲ್ಲಾ ಅಂತ ಒಂದ್ ಕಡೆ ಬೇಜಾರ್ ಆದ್ರೆ ಎಷ್ಟೇ ಬೇಡ್ಕೊಂಡ್ರು ಇಂತಾ ಬದುಕು ಬೇಡ ಅಂತ, ಅದೇ ಬದುಕನ್ನೆ ಬದುಕ್ತ ಇದ್ದೀವಿ. ಏನಿಲ್ಲ. Family Commitments.

 

ನೀನ್ ಬರಲ್ಲ ಅಂತಾ ಗೊತ್ತು. ಆದ್ರೂ ನಿನಗೋಸ್ಕರ ಕಾಯ್ತೀನಿ.  ನನಗ್ ಆದ್ರಲ್ಲಿ ಖುಷಿ ಇದೆ.

 

ಪ್ರೀತ್ಸೋರು ನಮ್ಮ ಜೊತೆ ಇಲ್ಲಾಂದ್ರು ಅವರ ನೆನಪಲ್ಲಿ ಬದುಕೋದೆ ನಿಜವಾದ ಪ್ರೀತಿ. 

 

ನಾವ್ ಹಚ್ಕೊಂಡಿರೋರು ನಮ್ಮ್ ಜೀವನ ಪೂರ್ತಿ ನಮ್ಮ್ ಜೊತೆ ಇರ್ತಾರೆ ಅಂತಾ ಮಾತ್ರ ಅಂದ್ಕೋಳ್ಳೋಕೆ ಹೋಗ್ಬೇಡಿ. ಅವ್ರ್ ಮಾತು ಕೇಳುವಾಗ ಮಾತ್ರ ನಾವು ಅವರಿಗೆ ಒಳ್ಳೆವ್ರು. ಏನಾದ್ರೂ ಸಲ್ಪ ವಿರೋಧ ಮಾಡದ್ರಿ ಅಂದ್ಕೊಳಿ. ಎಷ್ಟು ಕೆಟ್ಟವ್ರಾಗ್ತೀವಿ ಅಂತ ಹೇಳೋಕೆ ಆಗಲ್ಲ.

 

ನಿನ್ನ್ ಮರೀಬೇಕು ಅಂತಾ ಕುಡಿಯೋಕೆ ಶುರು ಮಾಡದೆ ಕಣೇ. ಎಷ್ಟು ಕುಡಿದ್ರೂ ನಿನ್ನ ನೆನಪು ಜಾಸ್ತಿನೇ ಆಗ್ತಿದೆ.

 

ಒತ್ತಾಯದಿಂದ ನಿನ್ನ ಮನಸ್ಸು ಗೆಲ್ಲಲು ನಾನು ಸಿದ್ಧನಿಲ್ಲ ಗೆಳತಿ. ನನ್ನ ಇಷ್ಟಾನ ನಾನು ಹೇಳ್ಕೊಂಡೆ. ಇವಾಗ ನಿನ್ನ ಕಳ್ಕೊಂಡೆ. ಅಷ್ಟೇ.

 

ನನಸಾಗದ ಪ್ರೀತಿ ಯಾಕೋ ಬೇಜಾರು. ನಿನ್ನ ಬಿಟ್ಟಿರಕ್ಕೆ ಆಗ್ತಿಲ್ಲ ನಿನ್ನ ನೆನಪುಗಳು.

 

ಎಷ್ಟು ವಿಚಿತ್ರವಾಗಿದೆ ನನ್ನ್ ಪ್ರೀತಿ ಅಲ್ವಾ? ನಿನ್ನ್ ಪಡ್ಕೋಳ್ಳೋಕು ಅಳ್ತಿದ್ದೆ. ನಿನ್ನ್ ಕಳ್ಕೊಂಡಮೇಲು ಅಳ್ತಿದ್ದೀನಿ.

 

Feeling Sad Quotes in Kannada (ದುಃಖಕರ ಉಲ್ಲೇಖಗಳು)

ಈ ಲವ್ ಒಂಥರಾ ಕ್ಯಾನ್ಸರ್ ಇದ್ದಂಗೆ. ಹೇಳ್ದೆ ಕೇಳ್ದೆ ಬರತ್ತೆ. ಹೋಗ್ಬೇಕಾದ್ರೆ ಜೀವ, ಜೀವನ ಎರಡನ್ನೂ ತಕೋಂಡ್ ಹೋಗತ್ತೆ.

 

ನಾವು ಪ್ರೀತಿಸುವವರು ನಮ್ಮ ಹೃದಯದಲ್ಲಿದ್ದರೆ ಸಾಲದು. ನಮ್ಮ ಹಣೆಬರಹದಲ್ಲೂ ಇರಬೇಕು.

 

ದೇವರೇ ಯಾವತ್ತೂ ನನ್ನ Birthday ಬರತ್ತೋ ಅವತ್ತು ನಂಗೆ ಸಾವು ಕೊಟ್ಟ್ಬಿಡು.

 

ಹುಚ್ಚಾಟದ ಪ್ರೀತಿಯನು ಮೆಚ್ಚಿ ಕುಣಿದಳು ಅಂದು. ಕುಣಿಸೋನು ಅವನೆಂದು ಮರೆತು ಹೋದಳು ಇಂದು.

 

ಮೊದಲ್ಲಿದ್ದ ಪ್ರೀತಿ ಕಾಳಜಿ ಕೊನೆ ತನಕ ಇರಲ್ಲ ಮಾತಿಗೆ ಹೇಳ್ತಾರೆ ಅಂದ್ಕೊಂಡಿದ್ದೆ. ಆದರೆ ಅದು ನನ್ನ ಜೀವನದಲ್ಲಿ ನಡೆದಾಗ್ಲೆ ಸತ್ಯ ಅಂತಾ ಗೊತ್ತಾಗಿದ್ದು.

 

ನಿನ್ನ ದೇಹಕ್ಕೆ ಇಷ್ಟಪಟ್ಟಿದ್ದರೆ ಯಾವತ್ತೋ ಮರೆತು ಬಿಡಬಹುದಾಗಿತ್ತು. ಆದರೆ ನಿನ್ನ ಮನಸ್ಸನ್ನು ಇಷ್ಟಪಟ್ಟಿದ್ದೇನೆ ಮರೆಯಲು ಸಾಧ್ಯವಿಲ್ಲ.

 

ಯಾವತ್ತಾದ್ರು ಟೈಮ್ ಸಿಕ್ರೆ ಯೋಚನೆ ಮಾಡು. ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಎನ್ ಕೇಳಿದೆ ನಿನ್ ಹತ್ರ ಅಂತಾ.

 

ನಿನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆ ಆಗೋದಿಲ್ಲ. ಆದರೆ ಕಳೆದುಹೋಗಿರುವ ನಂಬಿಕೆ ನಿನ್ನ ಮೇಲೆ ಯಾವತ್ತೂ ಮತ್ತೆ ಬರುವುದಿಲ್ಲ.

 

ಇದೇ ಜಗತ್ತು. ಎಲ್ಲರೂ ಅವರವರ ಪರಿಸ್ಥಿತಿಗೆ ತಕ್ಕಂತೆ ಮಾತನಾಡುತ್ತಾರೆ ಹೊರತು ಯಾರು ನಮ್ಮ ಜಾಗದಲ್ಲಿ ನಿಂತು ನಮ್ಮ ಪರಿಸ್ಥಿತಿಯನ್ನು ಯೋಚಿಸುವುದಿಲ್ಲ.

 

ಇಂದಿಗೂ ಕಾಯುತ್ತಿರುವೆ. ಆ ಒಂದು ಕರೆಗಾಗಿ… ಮೊಬೈಲ್ಗಳು ಬದಲಾದವು. ಆದರೆ ನಿನಗಾಗಿ ನನ್ನ ನಂಬರ್ ಇವತ್ತಿಗೂ ಬದಲಾಯಿಸಿಲ್ಲ. ಒಂದಲ್ಲ ಒಂದು ದಿನ ನೀ ಕರೆ ಮದುವೆಯೆಂಬ ನಿರೀಕ್ಷೆಯಿಂದ.

 

ನಾವ್ ಮಾಡೋ ದೊಡ್ಡ್ ತಪ್ಪೇನೂ ಗೊತ್ತಾ? ಯಾರು ನಮ್ಮನ್ care ಮಾಡಲ್ವೋ, ಯಾರು ನಮಗೆ importance ಕೊಡಲ್ವೋ ಅವರನ್ನೇ ಪ್ರೀತಿ ಮಾಡೋದು.

 

ಯಾರನ್ನಾದ್ರು ಹಚ್ಚ್ಕೊಂಡ್ರೆ ಹುಚ್ಚು ಹಿಡಿಯುತ್ತೇ ಅಂತಾ ಗೊತ್ತಿದ್ದೂ ಹಚ್ಚ್ಕೋಳ್ಳೋ ನಮ್ಮಂತಹ ಹುಚ್ಚರಿಗೆ ಎನ್ ಹೇಳೋದೂ!!!

 

ಕೆಲವೊಮ್ಮೆ ಕೋಪದಲ್ಲಿ ಆಡಿದ ಮಾತುಗಳು ಸತ್ಯ ಮತ್ತು ಮನಸ್ಸಿನಿಂದ ಬಂದ ಮಾತುಗಳಾಗಿರುತ್ತವೆ.

 

ಹೊಸ ನೀರು ಬಂದಾಗ ಹೊಸ ನೀರು ಚೆಲ್ಲುವುದು ಎಷ್ಟು ಸತ್ಯವೋ ಹಾಗೆ ಹೊಸಬರು ಸಿಕ್ಕಾಗ ಹಳಬರನ್ನು ನಿರ್ಲಕ್ಷಿಸುವುದು ಅಷ್ಟೇ ಸತ್ಯ.!

 

ಇಲ್ಲಿ ಎಲ್ಲರಲ್ಲೂ ಪ್ರೀತಿ ಹುಡುಕದಿರಿ ಪ್ರೀತಿಗೂ ವಿಷ ಬೆರೆಸುವವರಿದ್ದಾರೆ… ಅತಿಯಾಗಿ ನಂಬದಿರು ಒಲವ ಅವ ಈಗ ಮುಂಚಿನಂತಿಲ್ಲ ಬದಲಾಗಿದ್ದಾನೆ… ಬಯಸಿದ್ದೆ ಸಿಗಬೇಕಂದರೆ ಹೇಗೆ ಇಲ್ಲಿ ಕೊಟ್ಟದ್ದನ್ನೆ ಕೊಡುವವರಿಲ್ಲ ಪ್ರೀತಿ ಪಡೆದು ನೋವು ನೀಡುವವರಿದ್ದಾರೆ…

 

ಕಣ್ಣಿಗೆ ಕಾಣದ ಪ್ರೀತಿ ಕಾರಣವಿಲ್ಲದೆ ನೋವು ಕೊಡುತ್ತೆ…

 

Pain Sad Quotes in Kannada (ನೋವು ಬೇಸರ ಉಲ್ಲೇಖಗಳು)

 

ಎದುರು ನಿಂತು ಹೇಳಿಕೊಳ್ಳಲಾಗದ ಪ್ರೀತಿ, ನೋವು, ಸಿಟ್ಟುಗಳೆ “ವಾಟ್ಸಾಪ್ ಸ್ಟೇಟಸ್” ಗಳು!!

 

ನಗುವಿನ ಹಿಂದಿರುವ ನೋವು, ಕೋಪದ ಹಿಂದಿರುವ ಪ್ರೀತಿ, ಮೌನದ ಹಿಂದಿರುವ ಕಾರಣ, ಕೆಲವರಿಗೆ ಮಾತ್ರ ಅರ್ಥವಾಗುತ್ತದೆ…!! 

 

ನೀ ಹೊರಟ ಮೇಲೆ….. ಹೃದಯದ ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ…. ಮನ ಮಂಜುಗಟ್ಟಿದಂತೆ…. ನೆನಪು, ನೋವು, ಪ್ರೀತಿ ಎಲ್ಲಾ…. ಒಟ್ಟಿಗೆ ಉಮ್ಮಳಿಸಿ ಬಂದಂತೆ…..

 

“ಪ್ರೀತಿ”ಯಿಂದ ಪಡೆಯೋ “ಸಂತೋಷ” ಶಾಶ್ವತವೋ….ಅಲ್ಲವೋ ಗೊತ್ತಿಲ್ಲ ಆದ್ರೆ….. “ಪ್ರೀತಿ”ಯಿಂದ ಆಗೋ “ನೋವು” ಮಾತ್ರ “ಶಾಶ್ವತ”

 

ಕೆಲವರು ತುಂಬಾ ಅದೃಷ್ಟವಂತರು ನೂರು ನೋವು ಕೊಟ್ಟರು ಅವರಿಗೆ ತುಂಬಾ ಪ್ರೀತಿ ಸಿಗುತ್ತೆ. ಇನ್ನು ಕೆಲವರು ತುಂಬಾ ದುರಾದೃಷ್ಟವಂತರು ಜೀವನವಿಡಿ ಪ್ರೀತಿ ಕೊಟ್ಟರು ಅವರಿಗೆ ಸಿಗೋದು ನೋವು ಮಾತ್ರ.

 

ಹಾರ್ಟಲ್ಲಿ ಇರೋ ಪ್ರೀತಿ, ಮನ್ಸಲ್ಲಿರೋ ನೋವು, ಉಸ್ರಿನಲ್ಲಿರೋ ಜೀವ, ಮುಖದಲ್ಲಿರೋ ನಗು, ಕಣ್ಣಿನಲ್ಲಿರೋ ಕಂಬನಿ, ತಿಳಿಯುವುದು ನಿಜವಾಗಿ ಪ್ರೀತಿಸಿದವರಿಗೆ ಮಾತ್ರ.

 

ಮನಸ್ಸಿಗೆ ಅತಿಯಾಗಿ ನೋವು ಆಗುವುದು, ಶತ್ರುಗಳಿಂದಲ್ಲ.. ಅತಿಯಾಗಿ ಯಾರ ಮೇಲೆ ನಂಬಿಕೆ ಪ್ರೀತಿ ಇಟ್ಟಿರುತ್ತೆವೇಯೋ ಅವರಿಂದಲೇ.

 

ಪ್ರೀತಿ ಮಾಡೋದು ತುಂಬಾ ಸುಲಭ, ಆದರೆ ಅದೇ ಪ್ರೀತಿ , ಪ್ರೀತಿಸಿದವರು ದೂರವಾದಾಗ ಆಗುವ ನೋವು ತುಂಬಾ ಕಷ್ಟ ಕಣ್ರೀ.

 

ಸತ್ತೋದ ‘ಪ್ರೀತಿ’ಗಿಂತ ಕೊಲೆಯಾದ ‘ಪ್ರೀತಿ’ ಹೆಚ್ಚು ನೋವು ಕೊಡುತ್ತೆ.

 

ಪ್ರೀತಿನಾ ಯಾವತ್ತೂ ಬಲವಂತವಾಗಿ ಪಡೆಯೋ ಪ್ರಯತ್ನ ಮಾಡಬಾರ್ದು. ಹಾಗೊಂದು ವೇಳೆ ಮಾಡಿದ್ರೆ ಸಿಗೋದು ಪ್ರೀತಿ ಅಲ್ಲ. ನೋವು, ಹತಾಶೆ ಮಾತ್ರ.

 

ಪ್ರೀತಿ ತಾತ್ಕಾಲಿಕವಾಗಿದೆ, ನೋವು ಶಾಶ್ವತವಾಗಿದೆ

 

ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ಕೊಡುತ್ತವೆ ಮೂಕ ಪ್ರಾಣಿಗಳು ಬೆಟ್ಟದಷ್ಟು ಪ್ರೀತಿ ತೋರಿಸಿದರು ಸಮುದ್ರದಷ್ಟು ನೋವು ಕೊಡುವವರು ಮನುಷ್ಯರು

 

ಬಯಸಿದ್ದು ವಿಶ್ವಾಸ, ನಂಬಿಕೆ ,ಪ್ರೀತಿ …. ಆದರೆ ಸಿಕ್ಕದ್ದು ಸುಳ್ಳು, ಮೋಸ, ನೋವು ..

 

Ignore ಮಾಡ್ತಾ ಇದ್ದೀಯಾ ಮಾಡು ಆದ್ರೇ ಒಂದು ಮಾತು ನೀನು ಹಿಂಗೇ ignore ಮಾಡ್ತಾ ಇದ್ರೇ ಬೇರೆ ಏನು ಆಗೋಲ್ಲ ನೀನು ಇಲ್ದೇ ಬದುಕೋದನ್ನ ಕಲಿತ್ತಿನಿ ಅಷ್ಟೇ. ಪ್ರೀತಿ ಮಾಡೋವರಿಗೆ ಯಾರು ನೋವು ಮಾಡ್ಬೇಡಿ ಆಮೇಲೆ ನಿಮ್ಮನ್ನ ಪ್ರೀತ್ಸೋವರನ್ನ ನೀವೇ ಹುಡುಕೊಂಡು ಬಂದ್ರು ಸಿಗೋದು ಕಷ್ಟ

 

Sad Quotes About Life in Kannada (ಜೀವನದ ನೋವು ಉಲ್ಲೇಖಗಳು)

ಸ್ನೇಹ ಇದ್ದಾಗ ಖುಷಿ ಇರುತ್ತೇ ಪ್ರೀತಿ ಇದ್ದಾಗ ನೋವು ಇರುತ್ತೇ ನೋವು ಬಂದಾಗ ಬದುಕು ಏನು ಅಂತಾ ಅರ್ಥ ಆಗುತ್ತೆ ಬದುಕಿಗಾಗಿ ಪ್ರೀತಿಸಿ

 

ಪ್ರೀತಿ ಕೊಟ್ಟವರಿಗೆ ಮರಳಿ ಪ್ರೀತಿ ಕೊಡಬೇಕೆ ಹೊರತು ನೋವು, ಮೋಸ, ಸುಳ್ಳುಗಳನ್ನಲ್ಲ…. ನಾವು ಒಬ್ಬರಿಗೆ ಮೋಸ ಮಾಡಿದರೆ,ನಮಗೆ ಇನ್ನೊಬ್ಬರು ಮೋಸ ಮಾಡುವವರು ಇರುತ್ತಾರೆ ಎನ್ನುವುದನ್ನ ಮರೆಯದಿರಿ. ಪ್ರೀತಿ ಭಿಕ್ಷೆ ಬೇಡುವುದಲ್ಲ,ಮನಸ್ಸಿನಿಂದ ಕೊಡುವುದೇ ಪ್ರೀತಿ… ಯಾರಿಗೂ ಮೋಸ ಮಾಡದಿರಿ.

 

ನಾ ಸತ್ತುಹೋದರು ನನ್ನ ಪ್ರೀತಿ ಸಾಯದು ಅವಳು ಕೊಟ್ಟ ಆ ನೋವು ಮರೆಯಲಾಗದು ಆ ಪ್ರೀತಿ ನಾ ನಂಬಿ ಸೋತುಹೋದೆನು ಅವಳ ನೆನಪಲ್ಲೇ ಇಂದು ಸತ್ತು ಬಿದ್ದೇನು……

 

ಸಿಕ್ಕಿದು….ಸ್ನೇಹ ಮಾಡಿದ್ದು…..ಪ್ರೀತಿ ಅನುಭವಿಸಿದ್ದು… ನೋವು ಕಳೆದುಕೋಂಡಿದ್ದು… ನಗು ಕೋನೆಗೆ ಉಳಿದಿದ್ದು… ನೆನಪು ಮಾತ್ರ ಇದೆ ನಿಜವಾದ ಜೀವನ

 

ಮನಸು ಮಡಲಿನ ಕಡಲು ಬೆಂದಿದೆ ಎದೆ ಒಡಲು ನಿಜವೆಂದ ಪ್ರೀತಿ ಸುಳ್ಳು ಹೂಗರಿ ನೋವು ಮುಳ್ಳು ನಂಬಿಕೆಯೇ ಸೋತಿದೆ ಬರೆನು ಎಂದು ನಾನು ನಿನ್ನ ಕಥೆಯಲಿ ನಿನ್ನ ಜೊತೆಯಲಿ

 

ಕಣ್ಣಿನಲ್ಲೇ ಕತ್ತಿ, ನನ್ನ ಹೃದಯವನ್ನು ಚುಚ್ಚಿ, ಎಲ್ಲಿಗೆ ಮಾಯವಾದಳು, ನ ಸತ್ತು ಹೋದರು ನನ್ನ ಪ್ರೀತಿ ಸಾಯದು, ನೀನು ಕೊಟ್ಟ ಆ ನೋವು ಮರೆಯಲಾಗದು, ಆ ಪ್ರೀತಿ ನಾ ನಂಬಿ ಸೋತು ಹೋದೆನು, ಅವಳ ನೆನಪಲ್ಲೇ ನಾನು ಸತ್ತು ಬಿದ್ದೇನು. ಕಣ್ಣಿನಲ್ಲೇ ಕತ್ತಿ, ನನ್ನ ಹೃದಯವನ್ನು ಕಿತ್ತಿ, ಎಲ್ಲಿಗೆ ಮಾಯವಾದಳು…

 

ನಿಷ್ಕಲ್ಮಷ ಪ್ರೀತಿ ತುಂಬಿದ ಹೃದಯ, ಪ್ರೀತಿಯಿಂದ ವಂಚಿತವಾಗಿತ್ತು. ಪ್ರೀತಿಯ ನಿಜ ಅರ್ಥ ಅರಿಯದ ಹೃದಯ, ನಿಷ್ಕಲ್ಮಷ ಪ್ರೀತಿಯನ್ನ ಪಡೆದಿತ್ತು.

 

ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ

 

ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕ್ನಲ್ಲಿ ಭದ್ರವಾಗಿ ಇಟ್ಟಿದ್ದೆ. ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕ್ ಅನ್ನೇ ಲೂಟಿ ಮಾಡಿದಳು.!

 

ಒಂದು ಸಣ್ಣ ಆಸೆ ಬದುಕ ನುಂಗಿತೆ‌. ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ.. ಒಂದು ಸಣ್ಣ ಆಸೆ ಬದುಕ ನುಂಗಿತೆ ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ. ಕಂಡ ಕನಸು ಕಣ್ಣಿನಲ್ಲಿ ಕರಗಿತೆ .. ಕಂಡ ಕನಸು ಕಣ್ಣಿನಲ್ಲಿ ಕರಗಿತೆ … ಯಾವ ಶಾಪ ಬೆನ್ನ ಬಿಡದೆ ಕಾಡಿದೆ ಒದುಗಲಾರದಂತ ನೋವೂ ಎದೆಯಲ್ಲಿ.. ತುಂಬಿ ಕಣ್ಣ ನೀರೇ ಸೂಜಿಯಾಗಿದೆ..

 

ಪ್ರೀತಿ-ಗೌರವ ವಿಶ್ವಾಸ ,ಆತ್ಮೀಯತೆ ಆಪ್ತತೆ ಪರಸ್ಪರ ಹೆಚ್ಚಿದ್ದಾಗಲೆ, ಸಣ್ಣ ಪುಟ್ಟ ವಿಷಯಗಳು ಅತಿಯಾಗಿ ಸಹಿಸಲಾದಷ್ಟು ನೋವುಂಟು ಮಾಡುತ್ತದೆ. ಅದಕ್ಕಾಗಿಯೇ ಸಾಧ್ಯವಾದಷ್ಟು ದೂರವೇ ಉಳಿದು ಬಿಡಬೇಕು, ಅತಿ ಹತ್ತಿರವಾದಷ್ಟು ನೋವು ಅತಿಯಾಗಿ ಹತ್ತಿರವಾಗುತ್ತದೆ.

 

ಕಣ್ಣೀರು ಒರೆಸಿ ಪ್ರೀತಿ ಮಾಡಿದರೆ ಅಂತಹ ಪ್ರೀತಿ ಶಾಶ್ವತವಾಗಿ ಉಳಿಯುತ್ತೆ. ಆದರೆ ಕಣ್ಣೀರು ಬರಿಸಿ ಪ್ರೀತಿಸಿದರೆ ಆ ಪ್ರೀತಿ ಕಣ್ಣೀರಲ್ಲೇ ಜಾರಿ ಹೋಗುತ್ತೆ. ಮಾತಾಡಿ ಕೆಟ್ಟವರಾಗೋಕ್ಕಿಂತ ನೋವು ಅನುಭವಿಸಿ ಸುಮ್ಮನಿರುವುದೇ ಒಳ್ಳೆಯದು. ನಿಜವಾದ ಪ್ರೀತಿಗೆ ಯಾವಾಗ್ಲೂ ಮೋಸ ಆಗೋದು. ಮನಸಾರೆ ಪ್ರೀತಿ ಮಾಡುವವರನ್ನ ಯಾವತ್ತೂ ಕಳ್ಕೊಬೇಡಿ. 

 

ಒಂದು ವೇಳೆ ಅಪರಿಚಿತರಿಂದ ಮೋಸ ಹೋದಾಗ ನಮಗೇನೂ ಅಷ್ಟೆನು ಬೇಜರ್ ಅನ್ಸಲ್ಲ ಅದೇ ನಮ್ಮವರು ಅನ್ಕೊಂಡಿರುವವರು ನಮಗೆ ಮೋಸ ಮಾಡ್ತ ನಂಬಿಕೆ ದ್ರೋಹಿಗಳಾಗಿ ಬಿಟ್ರೇ ಸತ್ಯ ಅದರಷ್ಟು ಮನಸ್ಸಿಗೆ ನೋವು ಮತ್ತೊಂದಿರಲಾರದು , ನಂಬಿದವರಿಗೆಂದೀಗೂ ಮೋಸ ಮಾಡದಿರಿ ಮೊಸ ಹೋಗದಿರಿ.

 

ಪ್ರೀತಿ ನೀಡುವುದು ತಪ್ಪಲ್ಲ… ನೀಡಿದ ಪ್ರೀತಿನ ಮರಳಿ ನಿರೀಕ್ಷಿಸುವುದು ತಪ್ಪು…!! ಒಮ್ಮೊಮ್ಮೆ ಒಂಟಿಯಾಗಿ ಕೂತಾಗ ಮನಸ್ಸು ಹೇಳುತ್ತದೆ ನಿನ್ನ ನೋವು ಕೇಳುವವರು ಇಲ್ಲಿ ಯಾರು ಇಲ್ಲ ಎದ್ದು ನಡಿ ಎಂದು.

Sad Kannada Quotes Images

ಇದನ್ನೂ ಓದಿ:-

ನೆನಪಿಡಿ, ನೋವನ್ನು ಅನುಭವಿಸುವುದು ಪರವಾಗಿಲ್ಲ. ಸಂತೋಷದಾಯಕ ಮತ್ತು ದುಃಖದ ಭಾವನೆಗಳು ನಮ್ಮ ಜೀವನ ಪ್ರಯಾಣದ ಭಾಗವಾಗಿದೆ. ನಿಮ್ಮ ದುಃಖದಲ್ಲಿ ನೀವು ಎಂದಿಗೂ ಒಬ್ಬಂಟಿಯಾಗಿಲ್ಲ ಎಂಬುದನ್ನು ಈ ಉಲ್ಲೇಖಗಳು (sad quotes in kannada) ನಿಮಗೆ ನೆನಪಿಸಲಿ. 

ನಮ್ಮ ಈ ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ದುಃಖಕರ ಉಲ್ಲೇಖಗಳ (hurt sad quotes in kannada) ಮೂಲಕ ಜೀವನ ಪಾಠಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ಅದರಿಂದ ಕಲಿಯಿರಿ ಮತ್ತು ಜೀವನದ ಈ ಪ್ರಯಾಣ ಮುಂದುವರಿಸಿರಿ.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.