ಅಲ್ಲಿಯೇ Kannada Quotes About Life ಸಂಗ್ರಹವು ಉಪಯೋಗಕ್ಕೆ ಬರುತ್ತವೆ. ನಮ್ಮನ್ನು motivate ಮಾಡುತ್ತವೆ. ಇಲ್ಲಿ ಸಂಗ್ರಹಿಸಿರುವ quotes about life in kannadaಗಳು ಸತ್ಯ ಮತ್ತು ಒಳನೋಟದ ಗಟ್ಟಿಗಳನ್ನು ನೀಡುತ್ತವೆ, ಅದು ಜೀವನದ ಆಗಾಗ್ಗೆ ಸವಾಲಿನ ಹಾದಿಯಲ್ಲಿ ದಾರಿ ತೋರಲು ನಮಗೆ ಸಹಾಯ ಮಾಡುತ್ತದೆ.
ನಾವು ನೊಂದಿರಲಿ, ಕಷ್ಟ ಅನುಭವಿಸುತ್ತಿರಲಿ ಅಥವಾ ನಿಮಗೆ ಸ್ವಲ್ಪ ಪ್ರೇರಣೆಯ ಅಗತ್ಯವಿರಲಿ ನಮ್ಮೊಂದಿಗೆ ಮಾತನಾಡಲು ಮತ್ತು ನಮಗೆ ಹೊಸ ದೃಷ್ಟಿಕೋನವನ್ನು ನೀಡುವಂತಹ ಅನೇಕ best kannada quotes about lifeಗಳಿವೆ.
ನಿಜವಾಗಿಯೂ ಶ್ರೇಷ್ಠವಾದ ಉಲ್ಲೇಖವು (good kannada quotes about life) ನಮ್ಮೊಳಗೆ ಏನನ್ನಾದರೂ ಬೆರೆಸುವ ಶಕ್ತಿಯನ್ನು ಹೊಂದಿದೆ, ನಮ್ಮ ಹೃದಯ ಮತ್ತು ಆತ್ಮಗಳನ್ನು ಸ್ಪರ್ಶಿಸಲು ಮತ್ತು ನಮ್ಮ ಅತ್ಯುತ್ತಮ ವ್ಯಕ್ತಿಗಳಾಗಿರಲು ನಮ್ಮನ್ನು ಪ್ರೇರೇಪಿಸುತ್ತದೆ.
ಅದಕ್ಕಾಗಿಯೇ ನಾವು ಚಿತ್ರಗಳೊಂದಿಗೆ ಜೀವನದ ಕುರಿತಾದ ಈ ಉಲ್ಲೇಖಗಳ ಸಂಗ್ರಹವನ್ನು (collection of kannada quotes about life with images) ಒಟ್ಟುಗೂಡಿಸಿದ್ದೇವೆ. ನಾವು ಅತ್ಯಂತ ಶಕ್ತಿಶಾಲಿ, ಸ್ಪೂರ್ತಿದಾಯಕ ಮತ್ತು ಚಿಂತನೆಗೆ ಪ್ರಚೋದಿಸುವ ಉಲ್ಲೇಖಗಳನ್ನು ಆಯ್ಕೆ ಮಾಡಿ ನಿಮಗಾಗಿ ಸಂಗ್ರಹಿಸಿದ್ದೇವೆ. ಮತ್ತು ಅವುಗಳನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ಮಾಡಲು, ನಾವು ಪ್ರತಿಯೊಂದನ್ನು ಅದರ ಸಾರವನ್ನು ಸೆರೆಹಿಡಿಯುವ ಅದ್ಭುತ ಚಿತ್ರದೊಂದಿಗೆ ಜೋಡಿಸಿದ್ದೇವೆ.
ಮಹಾನ್ ದಾರ್ಶನಿಕರು ಮತ್ತು ಕವಿಗಳ ಮಾತುಗಳಿಂದ ಆಧುನಿಕ ಚಿಂತಕರು ಮತ್ತು ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖಗಳಿಂದ ಹಿಡಿದು ನಮ್ಮ ಸಂಗ್ರಹವು ಎಲ್ಲರಿಗೂ ಏನನ್ನಾದರೂ ಹೊಂದಿದೆ. ನಿಮ್ಮ ಕನಸುಗಳನ್ನು ಬೆನ್ನಟ್ಟಲು ನಿಮ್ಮನ್ನು ಪ್ರೇರೇಪಿಸಲು, ಸ್ವಯಂ ಪ್ರೀತಿಯ ಪ್ರಾಮುಖ್ಯತೆಯನ್ನು ನಿಮಗೆ ನೆನಪಿಸಲು ಅಥವಾ ನಿಮ್ಮನ್ನು ನಗಿಸಲು ನೀವು ಉಲ್ಲೇಖವನ್ನು ಹುಡುಕುತ್ತಿದ್ದೀರಾ, ನೀವು ಅದನ್ನು ಇಲ್ಲಿ ಕಂಡುಕೊಳ್ಳುವುದು ಖಚಿತ.
ಆದ್ದರಿಂದ ನಮ್ಮ ಸಂಗ್ರಹವನ್ನು ಪರಿಶೀಲಿಸಲು ಕೆಲವು ಕ್ಷಣಗಳನ್ನು ತೆಗೆದುಕೊಳ್ಳಿ ಮತ್ತು ಚಿತ್ರಗಳೊಂದಿಗೆ ಜೀವನದ ಕುರಿತು ಈ ಉಲ್ಲೇಖಗಳು ನಿಮ್ಮೊಂದಿಗೆ ಮಾತನಾಡಲಿ. ನಾವು ಜೀವನ ಎಂದು ಕರೆಯುವ ಈ ಪ್ರಯಾಣದ ಸೌಂದರ್ಯ ಮತ್ತು ಅದ್ಭುತವನ್ನು ಅವರು ನಿಮಗೆ ನೆನಪಿಸಲಿ ಮತ್ತು ಪ್ರತಿ ಕ್ಷಣವನ್ನು ಹೆಚ್ಚು ಮಾಡಲು ನಿಮ್ಮನ್ನು ಪ್ರೇರೇಪಿಸಲಿ.
Table of Contents
Best Kannada Quotes About Life | ಜೀವನದ ಹಿತನುಡಿಗಳು
ಸಿಗದ ಖುಷಿಗೆ ನನಸಾಗದ ಕನಸಿಗೆ ಆಸೆ ಪಡುವುದು ಮೂರ್ಖತನ
ಸಿಗುವ ಖುಷಿಯಲ್ಲೇ ನನಸಾಗುವ ಕನಸು ಕಟ್ಟಿ ಬದುಕುವುದೇ ಜೀವನ..
ನಿನ್ನೆ ಮತ್ತೆ ಬರುವುದಿಲ್ಲ. ನಾಳೆ ನಮ್ಮದಲ್ಲವೋ ಗೊತ್ತಿಲ್ಲ. ಆದರೆ ಈ ದಿನ ಈ ಕ್ಷಣ ನಮ್ಮದೇ. ಮರೆಯದಿರೋಣ ನಗುತ್ತಿರೋಣ.
ಒಂದು ಸುಳ್ಳಿನಿಂದ ಕಳೆದು ಹೋದ ನಂಬಿಕೆ ಸಾವಿರ ನಿಜ ಹೇಳಿದರು ಬರುವುದಿಲ್ಲ.
ಬೆಂದಾಗಲೇ ಅಡುಗೆಗೆ ರುಚಿ ಬರೋದು. ನೊಂದಾಗಲೇ ಜೀವನದಲ್ಲಿ ಬುದ್ಧಿ ಬರೋದು.
ಬದುಕಲ್ಲಿ ನಾವು ಏನು ಬೇಕಂತ ಬಯಸ್ತೀವೋ ಅದು ಎಂದು ಸಿಗದು. ನಾವು ನಮ್ಮವರಿಗೆ ಎಷ್ಟೇ ಪ್ರೀತಿ ತೋರಿಸಿದರು ಅದು ವ್ಯರ್ಥ ಆಗುತ್ತೆ. ಇದೆ ಜೀವನ.
ಹುಡುಕಿದರೆ ದೇವರೇ ಸಿಗುವ ಈ ಲೋಕದಲ್ಲಿ ಸಮಸ್ಯೆಗಳಿಗೆ ಪರಿಹಾರ ಯಾವ ಲೆಕ್ಕ. ಸಲ್ಪ ತಾಳ್ಮೆ ಮತ್ತು ಪ್ರಯತ್ನ ಬೇಕು ಅಷ್ಟೇ .
ತಡವಾಗಿಯೇ ಆದರೂ ಸರಿ ನಮ್ಮವರಂತೆ ನಟಿಸುವವರ ಎಲ್ಲರ ನಿಜವಾದ ಮುಖಗಳು ಸಮಯ ಕಳೆದಂತೆ ನಮ್ಮ ಅರಿವಿಗೆ ಬಂದೆ ಬರುತ್ತದೆ.
ಜೀವನದಲ್ಲಿ ಯಾರು ಯಾವಾಗ ಯಾಕೆ ಸಿಕ್ತಾರೆ ಅಂತ ಹೇಳೋಕೆ ಆಗಲ್ಲ. ಸಿಕ್ಕಿದವರು ಯಾಕೆ ಯಾವಾಗ ಬಿಟ್ಟು ಹೋಗ್ತಾರೆ ಅಂತ ಗೊತ್ತೇ ಆಗಲ್ಲ.
ಬಯಸಿದ್ದು ಸಿಗಬೇಕೆಂದರೆ ಯೋಗವಿರಬೇಕು. ಸಿಕ್ಕಿದ್ದನ್ನು ಉಳಿಸಿಕೊಳ್ಳಲು ಯೋಗ್ಯತೆ ಇರಬೇಕು.
ಸಾಲ ಮಾಡಿ ಸಾಲ ತೀರಿಸದಿದ್ದಾಗ ತಿಳಿಯುತ್ತೆ ದುಡ್ಡಿನ ಬೆಲೆ.
ಜೋರಾಗಿ ಅಳಬೇಕು ಅಂತನಿಸಿದರು ಮೌನವಾಗಿ ಒಳಗೆ ಅತ್ತಿದ್ದೆ ಜಾಸ್ತಿ.
ಕುದುರೆ ಎಷ್ಟೇ ಚೆನ್ನಾಗಿ ಗಾಡಿ ಎಳೆದರು ಚಾಟಿ ಏಟು ತಪ್ಪಿದ್ದಲ್ಲ. ಮರ ಎಷ್ಟೇ ರುಚಿಯಾಗಿರುವ ಹಣ್ಣು ಕೊಟ್ಟರು ಕಲ್ಲು ಏಟು ತಪ್ಪಿದ್ದಲ್ಲ.
ಮನುಷ್ಯ ಎಷ್ಟೇ ಶ್ರೇಷ್ಠ ವ್ಯಕ್ತಿಯಾದರು ಜನರ ನಿಂದನೆ ತಪ್ಪಿದ್ದಲ್ಲ.
ಎಲ್ಲಿಯ ತನಕ ಎಲ್ಲವನ್ನು ಸಹಿಸಿ ಸುಮ್ಮನಿರುತ್ತೇವೆಯೋ ಅಲ್ಲಿಯ ತನಕ ನಾವು ಇರುತ್ತೇವೆ. ಒಂದು ವೇಳೆ ಅನ್ಯಾಯವನ್ನು ಬಾಯಿ ಬಿಟ್ಟೇವಿ ಆಗ ಎಲ್ಲರಿಗಿಂತ ನಾವೇ ಹೆಚ್ಚು ಕೆಟ್ಟವರಾಗುತ್ತೇವೆ.
ಅತಿಯಾದ ರೂಪ ಸೀತೆಗೆ ಮುಳುವಾಯಿತು.
ಅಟೊಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು.
ಅತಿಯಾದ ಸತ್ಯ ಹರಿಶ್ಚಂದ್ರನಿಗೆ ಪರೀಕ್ಷೆ ಮಾಡಿತು.
ಆದುದರಿಂದ ಯಾವುದು ಅತಿಯಾಗಬಾರದು.
ನೋವು ನೂರಿದೆ, ಪರವಾಗಿಲ್ಲ. ನನ್ನ ಹತ್ರ ನಗುವಿದೆ.
ಜಗತ್ತಿನಲ್ಲಿ ಮೋಸಕ್ಕೆ ಬೆಲೆ ಜಾಸ್ತಿ ನೀಯತ್ತಾಗಿ ಇರುವವರಿಗೆ ನೋವು ಜಾಸ್ತಿ.
ಜೀವನದಲ್ಲಿ ಜವಾಬ್ದಾರಿ ಅನ್ನೋ ಪದ ಬಂದಾಗ ಮಾತ್ರ ಜೀವನ ಏನು ಎಂಬುದು ಅರ್ಥವಾಗುವುದು.
ತ್ಯಾಗ ಎನ್ನುವ ಎರಡಕ್ಷರದ ಹಿಂದೆ ಸಾವಿರಾರು ಆಸೆಗಳ ಸಮಾಧಿ ಇರುತ್ತೆ.
ನನ್ನ ಬದುಕಿನಲ್ಲಿ ಬರೋರಿಗೆ ಅದ್ಧೂರಿ ಸ್ವಾಗತ. ನನ್ನ ಬಿಟ್ಟು ಹೋಗೋರಿಗೆ ಭರ್ಜರಿ ಬೀಳ್ಕೊಡುಗೆ. ಜೀವನಾಣೆ ಹಾಗೆ. ಎಲ್ಲದಕ್ಕೂ ಹಾಜರಿರಬೇಕು. ಕಾಲಾಯ ತಸ್ಮಯ್ ನಮಃ.
ಅಗತ್ಯಕ್ಕಿಂತ ಜಾಸ್ತಿ ಒಳ್ಳೆಯವಾಗಲು ಹೋಗ್ಬೇಡಿ. ನಿಮ್ಮನ್ನು ಲಿಂಬೆ ಹಣ್ಣಿನಂತೆ ಹಿಂಡಿ ಬಿಡ್ತಾರೆ.
ಮನುಷ್ಯ ಎಂದೆನಿಸಿಕೊಳ್ಳಲು ಈ ಆಶ್ಚರ್ಯಕರವಾದ ಜೀವಿ ಅರ್ಧ ಭಾಗ ಜೀವಿ ಅರ್ಧ ಭಾಗ ದೈವಾಂಶವಾಗಿಯೂ ಮತ್ತು ಇನ್ನರ್ಧ ಭಾಗ ಅಸುರಶನಾಗಿಯೂ ಇದ್ದಾನೆ. ಇಂತಹ ಮನುಷ್ಯನ ಹೃದಯವೇ ಇವರಿಬ್ಬರ ರಣರಂಗ. ಪರದೆಯ ಹಿಂದೆ ಬಚ್ಚಿಟ್ಟುಕೊಂಡಿರುವ ಇವರು ಸಭ್ಯವೇಶವನ್ನು ಹಾಕಿಕೊಂಡಿರುವ ಮನುಷ್ಯಬ ಸಂಚುಗಖನ್ನು ಬಯಲು ಪಡಿಸುತ್ತಾರೆ.
ದುಡ್ಡೇ ಎಲ್ಲಾ ಅಲ್ಲ. ಆದರೆ ದುಡ್ಡಿಲ್ಲದೆ ಏನು ಇಲ್ಲ.
ಸುಳ್ಳಿನ ಹಾರವ ಕೊರಳಿಗೆ ಸೂಡಿ
ಕಳ್ಳನೊಬ್ಬನನ್ನು ಗುರುವನು ಮಾಡಿ
ಬಡವರ ಹಣವನ್ನು ಕಾಣಿಕೆ ನೀಡಿ
ಧರ್ಮವ ಮೆರೆದರು ನೋಡಯ್ಯ. – ಕುವೆಂಪು
ಕನಸುಗಳು ಎಷ್ಟೇ ಇದ್ದರು ಪರಿಸ್ಥಿತಿಗೆ ತಲೆ ಬಾಗಲೇ ಬೇಕು
ಆಸೆಗಳು ಎಷ್ಟೇ ಇದ್ರೂ ಅನುಕೂಲಕ್ಕೆ ಶರಣಾಗಲೇ ಬೇಕು.
ಬಯಕೆಗಳು ಎಷ್ಟೇ ಇದ್ರೂ ಅವಕಾಶಕ್ಕೆ ಕಾಯಲೇಬೇಕು
ಕಷ್ಟಗಳು ಎಷ್ಟೇ ಇರಲಿ ನಮ್ಮ ಸಮಯವೇ ಅವುಗಳಿಗೆ ಪರಿಹಾರ ನಿರ್ಧರಿಸಬೇಕು.
ಎಷ್ಟೇ ಪರೀಕ್ಷೆಗಳು ಎದುರಾದರು ಕುಗ್ಗದೆ ಅವುಗಖ ಭೂ ಎದುರಿಸಲೇಬೇಕು.
ಆಗಲೇ ನೀ ಕಟ್ಟಿಕೊಳ್ಳಬಲ್ಲೆ ಒಂದು ಉತ್ತಮ ಬದುಕು.
ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ.
ನೀ ಬದುಕಿರುವವರೆಗೆ ಮಾತ್ರ ನಿನ್ನ ಸ್ಥಾನಮಾನ
ನೀ ಸತ್ತಾಗ ಮುಟ್ಟಿದರೆ ಮಾಡಬೇಕು ಸ್ನಾನ
ಇಷ್ಟೇ ತಿಳಿಯೋ ಈ ಆಡಂಬರದ ಜೀವನ
ಜೀವನದಲ್ಲಿ ಒಂದೇ ನಿಯಮ ಇಟ್ಟುಕೋ.
ನೇರವಾಗಿ ಮಾತನಾಡು
ಸತ್ಯವನ್ನೇ ಮಾತನಾಡು.
ಮುಖಕ್ಕೆ ಮುಖ ಕೊಟ್ಟು ಮಾತನಾಡು,
ನಿನ್ನವರೆಂದು ಕರೆಸಿಕೊಳ್ಳುವವರು ಅರ್ಥ ಮಾಡಿಕೊಳ್ಳುತ್ತಾರೆ ಹೆಸರಿಗೆ ಮಾತ್ರ ನಿನ್ನವರೆಂದು ಕರೆಸಿಕೊಳ್ಳುವವರು ನಿನ್ನಿಂದ ದೂರವಾಗುವವರು, ಅಷ್ಟೇ,
ಜನಿಸಿದಾಗಲೂ ಎತ್ತಬೇಕು ನಿನ್ನ
ಮರಣ ಹೊಂದಿದಾಗಲೂ ಎತ್ತಬೇಕು ನಿನ್ನ
ಮಧ್ಯೆ ಸಲ್ಪ ನಡೆದಾಡುತ್ತಿರುವೆ ಅನ್ನುವ ಕಾರಣಕ್ಕೆ ಅಹಂಕಾರ ಯಾಕೆ ಮಾನವ.
ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲೂ ಒಂದೇ ತರಾ ಇರ್ತಾರೆ ಅನ್ನೋದು ನಮ್ಮ ತಪ್ಪು ಕಲ್ಪನೆ
ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು, ಆಲೋಚನೆ ಮಾತ್ರ.
ಕರ್ಮ ಹೇಳುತ್ತದೆ ಇವತ್ತು ನೀನು ಏನು ಮಾಡುತ್ತಿದ್ದಿಯೋ ಅದನ್ನೇ ಮುಂದೊಂದು ದಿನ ನಾನು ನಿನಗೆ ಹಿಂದಿರಿಗುಸುತ್ತೇನೆ ಅಂತ.
ಕೆಲವರು ಎಷ್ಟೇ ಕೆಡುಕು ಬಯಸಿದರು ನಮ್ಮಷ್ಟಕ್ಕೆ ಬದುಕೋಣ. ಅವರ ಕೆಟ್ಟ ಆಲೋಚನೆಗಳು ಕೊನೆಗೆ ವರನ್ನೇ ನಾಶ ಮಾಡುತ್ತವೆ.
ನಿನ್ನವರಿದ್ದಾರೆ ಎಂದು ಬದುಕುವುದಕ್ಕಿಂತ ನಿನ್ನ ದುಡಿಮೆಯನ್ನು ನಂಬಿ ಬದುಕುವುದು ಉತ್ತಮ.
ಬಂದಿದ್ದು ಎದುರಿಸಿ ಮುನ್ನಡೆಯಬೇಕು. ಅವರು ಹಾಗೆಂದರೂ ಇವರು ಹೀಗೆಂದರು ಎಂದು ತಲೆ ಕೆಡಿಸಿಕೊಂಡು ಕೂತರೆ ಜೀವನ ಮುಂದೆ ಸಾಗದು. ಜಗತ್ತು ಹೇಗಿದ್ದರೂ ಅನ್ನುತ್ತದೆ ನಾವು ಮುಗುಳ್ನಕ್ಕು ಮುಂದೆ ಸಾಗುತ್ತಿರಬೇಕಷ್ಟೆ.
ಮರಣ ಹೊಂದಿಂದ ಮೇಲೆ ಶವದ ಮೇಲೆ ಬಿದ್ದು ಬಿದ್ದು ಅಳುವ ಸಂಬಂಧಗಳಿಗಿಂತ ಬದುಕಿರುವಾಗ ಜೀವನದಲ್ಲಿ ಕೆಳಗಡೆ ಬೀಳದಂತೆ ಜೊತೆಯಾಗಿ ನಿಲ್ಲುವ ಸಂಬಂಧಗಳೇ ನಿಜವಾದ ಸಂಬಂಧಗಳು.
ಮೊಸಳೆಗೆ ನಾಲಿಗೆ ಇಲ್ಲ
ಆಮೆಗೆ ಕೂಡಲಿಲ್ಲ
ಏಡಿಗೆ ತಲೆಯಿಲ್ಲ
ಮೀನಿಗೆ ಜೀರ್ಣಶಕ್ತಿ ಇಲ್ಲ
ನಾಯಿಗೆ ಭಾಷೆಯಿಲ್ಲ
ಬೆಕ್ಕಿಗೆ ಭಾವನೆಯಿಲ್ಲ
ಮನುಷ್ಯನಿಗೆ ಇವೆಲ್ಲವೂ ಇದೆ ಆದರೇನು ಪ್ರಯೋಜನ? ಮುಖ್ಯವಾಗಿ ನೀಯತ್ತೇ ಇಲ್ಲ.
ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರೇನು ಅದು ನೀಡುವುದು ಬೇವಿನ ಕಹಿಯೇ ಹೊರತು ಬೆಲ್ಲದ ರುಚಿಯನ್ನಲ್ಲ.
ಒಳ್ಳೆಯತನ ಬಹಳ ಹೆಚ್ಚಾದರೆ ನಮ್ಮವರೇ ನಮಗೆ ಶತ್ರುಗಳು ಆಗುತ್ತಾರೆ.
ಒಬ್ಬ ವ್ಯಕ್ತಿ ನಿನ್ನ ಹಿಂದೆ ಹೇಗಿದ್ದಾನೆ ನ್ನೊಂದು ನಿಜವಲ್ಲ. ನಿನ್ನ ಹಿಂದೆ ಹೇಗಿದ್ದಾನೆ ಅನ್ನೊದು ಮುಖ್ಯ.
ಹಣ ಇಲ್ಲದೆ ಒಂದು ತಪ್ಪು ಮಾಡಿ ನೋಡು. ತುಂಬಾ ಅಮಾನುಷವಾಗಿ ನೋಡುತ್ತಾರೆ. ಹಣ ಮಾಡಿ ನೂರು ತಪ್ಪು ಮಾಡಿ ನೋಡು ಕ್ಷಮೆ ನೀಡುತ್ತಲೇ ಇರುತ್ತಾರೆ.
ತಾಳ್ಮೆ ಎಂಬುದು ಆಯುಧ
ಮೌನವೆಂಬ ಕಿರೀಟ
ನಗುವೆಂಬ ಆಭರಣ
ಇವುಗಳನ್ನೆಲ್ಲ ಅನುಸರಿಸಿದವರಿಗೆ ಸೋಲೇ ಇಲ್ಲ.
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ
ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ
ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡ.
ಪ್ರಶ್ನಿಸುವ ಗುಣ ನಮ್ಮಲ್ಲಿ ಹೆಚ್ಚಾದಷ್ಟು ನಮ್ಮ ಹತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದೇ ಬದುಕಿನ ಕಠೋರ ಸತ್ಯ.
ನಾಲ್ಕು ದಿನ ದೂರ ಹೋಗಿ ನೋಡಿ
ಜನ ನಿಮ್ಮನ್ನ ಮರೆತೇ ಬಿಡ್ತಾರೆ
ಜೀವನವಿಡೀ ಮನುಷ್ಯ ತಾನು ಎಲ್ಲರಿಗೂ ಬೇಕಾದವನು ಎಂಬ ಭ್ರಮೇಲಿ ಇರ್ತಾನೆ.
ಆದರೆ ನಿಜ ಏನು ಅಂದ್ರೆ ಜನರಿಗೆ ನೀವು ಇದ್ದರೂ ಇಲ್ಲದಿದ್ದರೂ ಏನು ವ್ಯತ್ಯಾಸ ಆಗುವುದಿಲ್ಲ.
ನಿಮ್ಮ ವಶ್ಯಕತೆ ಇದ್ದಾಗ ಮಾತ್ರ ನಿಮ್ಮನ್ನು ಎನ್ಪಿಸಿಕೊಳ್ಳುತ್ತಾರೆ ದಕ್ಕೆ ನೀವು ಇಮಗೋಸ್ಕರ ಬದುಕಿ. – ಕುವೆಂಪು
ಸುಲಭವಾದ ಹಾದಿ ಇಗಬೇಕೆಂದರೆ ಕಷ್ಟ ಪಡಲೇಬೇಕು.
ಎಲ್ಲ ಗಳಿಸಿದಮೇಲೆ ಬರುವ ಜನಗಳಿಗಿಂತ ನಮ್ಮ್ ಹತ್ತ್ರ ಏನು ಇಲ್ದಾಗ ನಮ್ಮ್ ಜೊತೆ ಯಾರ್ ಇರ್ತಾರೋ ಅವರು ಮುಖ್ಯ.
ಯಾರ ಜೀವನದಲ್ಲೂ ಆತ ಆಡೋದಕ್ಕೆ ಹೋಗ್ಬೇಡಿ. ಭಗವಂತ ನಿಮ್ಮ ಜೀವನದಲ್ಲಿ ಆತ ಡೋದಕ್ಕೆ ಪ್ರಾರಂಭಿಸಿದರೆ ಸಹಾಯಕ್ಕೆಂದು ಭಗವಂತನು ಸಹ ಇರೋದಿಲ್ಲ.
ನಿನ್ನ ಸಂಬಂಧಿಕರೇ ನಿನ್ನ ಮೊದಲ ಶತ್ರುಗಳು.
ನಾವು ಒಬ್ಬರಿಗೆ ಕಷ್ಟ ಆಗ್ತಿದ್ರೆ ವರಿಂದ ದೂರ ಇರುವುದೇ ಒಳ್ಳೆಯದು.
ಕಷ್ಟ ಬಂದ್ರೆ ಗಾಬರಿ ಬೇಡ ಗುಳ್ಳೆ ಅರಿಗಳ ಅಂಗ ಬೇಡ ಬೆಲೆಯಿಲ್ಲದ ಕಡೆ ಕಾಲಿಡಬೇಡ. ಊಸರವಳ್ಳಿ ಬುದ್ಧಿಯವರ ಸಂಬಂಧ ಬೇಡ.
ನಗ್ತಾ ಇದ್ದಿವಿ ಅಂದ್ರೆ ಸಮಸ್ಯೆಗಳು ಇಲ್ಲ ಅಂತಲ್ಲ.
ದೊರೆತ ಜೀವನ ಅದೃಷ್ಟ ಅಂತ ವಿಧಿಯ ಮೇಲೆ ಕೈ ಹಾಕಿ ಹಾಗೆ ಸಾಗಬೇಕು.
ಆಯಸ್ಸು ಇದ್ದಾಗ ಆಸೆಗಳು ಈಡೇರುವುದಿಲ್ಲ ಆಸೆಗಳು ಈಡೇರುವಾಗ ಅನುಭವಿಸಲು ಆಯಸ್ಸು ಇರುವುದಿಲ್ಲ. ಇಷ್ಟೇ ಜೀವನ.
ಮೌನಕ್ಕಿಂತ ಬೇರೆ ಉತ್ತರವಿಲ್ಲ
ಕ್ಷಮೆಗಿಂತ ಬೇರೆ ಶಿಕ್ಷೆಯಿಲ್ಲ.
ಎಷ್ಟು ಕೋಟಿ ಹಣವಿದ್ದರೇನು ದೇವರು ಕೊಟ್ಟಿರೋ ಆಯಸ್ಸು ಮೀರಿ ಒಂದು ಕ್ಷಣ ಹೆಚ್ಚಿಗೆ ಬದುಕೋಗಲ್ಲ.
ಬೆಲೆ ಬಾಳುವ ವಸ್ತುಗಳು ತುಂಬಾ ಜನರಲ್ಲಿ ಇರಬಹುದು ಆದರೆ ಬೆಲೆ ಕಟ್ಟಲಾಗದ ಗುಣ ಕೆಲವೇ ಕೆಲವು ಜನರಲ್ಲಿ ಇರುತ್ತದೆ.
ಮೋಸ ಮಾಡಿದವರ ಮೇಲೆ ಪ್ರತಿಕಾರ ತೀರಿಸಕೊಳ್ಳಲು ಹೋಗಬೇಡ
ನೆನಪಿರಲಿ ಕೊಳೆತ ಹಣ್ಣುಗಳು ತಾನಾಗಿಯೇ ಉದುರುತ್ತದೆ.
ನಮ್ಮ ಪಾಡಿಗೆ ನಾವು ಇದ್ದಷ್ಟು ನೆಮ್ಮದಿ ಅಸ್ತಿ
ನಮ್ಮವರು ಅಂದ್ಕೊಂಡು ಹೋದಷ್ಟು ನೋವು ಜಾಸ್ತಿ.
ಮನುಷ್ಯನಿಗೆ ದುಡ್ಡು ಎಷ್ಟು ಧೈರ್ಯ ಕೊಡುತ್ತೋ ಗೊತ್ತಿಲ್ಲ. ಆದರೆ ಮನುಷ್ಯನಿಗೆ ಮನುಷ್ಯ ಕೊಡುವ ಧೈರ್ಯನೆ ತುಂಬಾ ದೊಡ್ಡದು.
ಹಸಿವು ಅನ್ನೋದೇ ಹಾಗೆ ಸಾವಿಗಿಂತ ಕ್ರೂರಿ.
ಸುಡುವ ಹೊಟ್ಟೆಗೆ ಕಷ್ಟದ ಬೆಲೆ
ಒಂಟಿತನದಲಿ ಸಂಬಂಧಗಳ ಎಲೆ
ಅವಕಾಶ ಕೈ ಜಾರಿದಾಗ ಸಮಯದ ಬೇಳೆಕಾಯಿಯಲ್ಲಿ ಬಿಡಿಕಾಸು ಇಲ್ಲದಾಗ ಮನುಷ್ಯನ ಬೆಲೆ ತಿಳಿಯುತ್ತದೆ.
ಎಂತಹ ಬಲಶಾಲಿ ಆದರೂ ವಶ್ಯಕತೆ ಬಿದ್ದಾಗ ಬಾಗಲೇ ಬೇಕು.
ಮೈಲಿಗೆ ಅಂತ ಸತ್ತ ಅಪ್ಪನ ಶವದ ಜೊತೆ ಹಾಸಿಗೆ ದಿಂಬು ಕಂಬಳಿಯನ್ನು ಸುಟ್ಟರು. ಆದರೆ ಅಪ್ಪ ಗಳಿಸಿಟ್ಟ ಆಸ್ತಿಯನ್ನು ಮಾತ್ರ ಹೊಡೆದಾಡಿಕೊಂಡು ಹಂಚಿಕೊಂಡರು.
ಸಾಗುತ್ತಿದೆ ಜೀವನ ಕತ್ತಲಾದಾಗ ಕಣ್ಣೀರಿನ ಜೊತೆ.
ಎಲ್ಲವೂ ಕ್ಷಣಿಕ. ತಿಳಿದು ಬದುಕು ನೀ ಇರುವ ತನಕ.
ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ. ಏಕೆಂದರೆ ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು.
ಬದುಕು ಕ್ರಿಕೆಟ್ ಇದ್ದಂತೆ. ಸುತ್ತಲೂ ಇಂತವರು ನಮ್ಮಂತವರಂತೆ ಕಂಡರೂ ನಮ್ಮ ಸೋಲಿಗಾಗಿ ಕಾದುಕುಳಿತಿರುತ್ತಾರೆ ಅನ್ನೋದು ಸತ್ಯ
ನಗುತ್ತಿರು. ನೋವು ಹೊಸದೇನಲ್ಲ.
ಈ ಜಗತ್ತೇ ಒಂತರ ವಿಚಿತ್ರ ಇಲ್ಲಿಯ ಜನರದ್ದು ಬಣ್ಣ ಬಣ್ಣದ ಮುಖವಾಡಗಳು ಇಲ್ಲಿ ಯಾರು ನಮ್ಮವರು ಯಾರು ವಿರೋಧಿಗಳು ಎಂದು ಗೊತ್ತೇ ಆಗುವುದಿಲ್ಲ.
ಜೀವನದ ಪಾಠ ತುಂಬಾ ಕಷ್ಟ.
ಮಾತಾಡಿ ಮುಳ್ಳಾಗುವ ಬದಲು ಮೌನವಾಗಿದ್ದು ಕಲ್ಲು ಬಂಡೆಯಂತಿರುವುದೇ ಒಳ್ಳೆಯದು.
ತಪ್ಪು ಅನ್ನುವುದು ಜೀವನದ ಒಂದು ಪುಟ ಮಾತ್ರ
ಸಂಬಂದಗಳು ಅನ್ನುವುದು ಪೂರ್ತಿ ಪುಸ್ತಕ
ದಯವಿಟ್ಟು ಆ ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ.
ಜನರ ಎಲ್ಲಾ ಟೀಕೆಗಳಿಗೆ ನಾವೇ ಉತ್ತರ ಕೊಡಬೇಕಾಗಿಲ್ಲ. ಕೆಲವೊಂದಕ್ಕೆ ಕಾಲವೇ ಉತ್ತರ ಕೊಡುತ್ತದೆ.
ಏನೂ ಲ್ಲದೆ ಇದ್ದಾಗ ಗಳಿಸಿಕೊಂಡು ಹೋಗು. ಎಲ್ಲವೂ ದ್ದಾಗ ಉಳಿಸಿಕೊಂಡು ಹೋಗು. (ಪ್ರೀತಿ ನಂಬಿಕೆ ವಿಶ್ವಾಸ)
ಜೀವನ ತುಂಬಾ ಚಿಕ್ಕದು ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯಿರಿ. ಏಕೆಂದರೆ ಕಳೆದು ಹೋದ ಸಮಯ ತಿರುಗಿ ಬಾರದು.
ಕೆಲವೊಮ್ಮೆ ಚರ್ಚೆಯೇ ನಡೆಯದೆ ದೊಡ್ಡ ದೊಡ್ಡ ಕೆಲಸಗಳು ಆಗಿಬಿಡುತ್ತವೆ ಇನ್ನೂ ಕೆಲವೊಮ್ಮೆ ದಿನಗಟ್ಟಲೆ ಚರ್ಚೆ ನಡೆದೂ ಕೆಲಸ ಮಾತ್ರ ಶೂನ್ಯವಾಗಿರುತ್ತದೆ.
ಬದುಕು ಒಂದು ಕನಸಿನ ಮೂಟೆ ಇದ್ದಂತೆ. ಕಟ್ಟುವುದು ಸುಲಭ ಜೀವನ ಸಾಗಿಸುವುದು ಕಷ್ಟ.
ಜೀವನದಲ್ಲಿ ಪ್ರೀತಿ ಸ್ನೇಹ ಬಂಧು ಬಳಗ ಎಲ್ಲ ನಮ್ಮ ಯೋಚನೆ ಅಷ್ಟೇ. ಆದರೆ ಯಾರ ಮನಸ್ಸಿನಲ್ಲಿ ನಾವು ಒಳ್ಳೆಯ ನೆನಪಾಗಿ ಇರುತ್ತೇವೆಯೋ ಅವರೇ ನಮ್ಮ ನಿಜವಾದ ಆತ್ಮೀಯರು.
ಉಪ್ಪಿಗೆ ನೀರಿನಿಂದಲೇ ಜನನ
ನೀರಿನಿಂದಲೇ ಅರನ
ಜೀವನವು ಹಾಗೆಯೇ
ನಮ್ಮವರಿಂದಲೇ ಸನ್ಮಾನ
ನಮ್ಮವರಿಂದಲೇ ಅವಮಾನ.
ಕಷ್ಟಗಳು ಚಲಿಸುವ ರೈಲಿನಿಂದ ಕಾಣುವ ಮರಗಳಂತೆ
ಹತ್ತಿರ ಹೋದಷ್ಟು ಅವು ಒಡ್ಡದಾಗಿ ಕಾಣುತ್ತವೆ. ನೀವು ಚಲಿಸುತ್ತ ಹೋದಂತೆ ಅವು ಚಿಕ್ಕದಾಗುತ್ತಾ ಹೋಗುತ್ತದೆ. ಇಷ್ಟೇ ಜೀವನ.
ಜೀವನವೆಂದರೆ ಇಷ್ಟೇ
ಬಯಸಿದಾಗ ಬಯಸಿದ್ದು ಇರುವುದಿಲ್ಲ
ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ.
ಜೀವನದಲ್ಲಿ ಎಷ್ಟೇ ಕಷ್ಟ ಬಂದರು ನಮಗೆ ನಾವೇ ಅನುಭವಿಸಬೇಕು ಅವರಿದ್ದಾರೆ ಇವರಿದ್ದಾರೆ ಅಂತೆಲ್ಲ ಅಂದುಕೊಳ್ಳುವುದು ಭ್ರಮೆ. ಎಲ್ಲರೂ ಇದ್ದಾರೆ. ಹೆಸರಿಗಷ್ಟೇ.
ಜೀವನವೆಂದರೆ ಇನ್ನೊಬ್ಬರನ್ನು ಮೆಚ್ಚಿಸಲು ಆಡುವ ನಾಟಕವಾಗರಬಾರದು.
ಅದೊಂದು ಬದುಕುವ ರೀತಿಯಾಗಿರಬೇಕು.
ಬೆರೆತು, ಅರಿತು, ಮರೆತು ಬದುಕುವುದೇ ಜೀವನ.
ಬರುವುದೆಲ್ಲವ ಸ್ವೀಕರಿಸು
ಬಂದದ್ದೆಲ್ಲವ ಅನುಭವಿಸು
ನಮ್ಮ ಪಾಲಿನದಷ್ಟೇ ನಮಗೆ ಸಿಗುವುದು
ನಮ್ಮದಲ್ಲದ್ದು ನಮ್ಮಿಂದ ಖಂಡಿತ ದೂರಾಗುವುದು
ಇರುವಷ್ಟು ದಿನ ನೆಮ್ಮದಿಯಾಗಿರು ಇಷ್ಟೇ ಜೀವನ.
ಸಿರಿತನ ಬದುಕನ್ನು ಬದಲಿಸುತ್ತೆ ಆದರೆ ಬಡತನ ಬದುಕನ್ನು ಕಲಿಸುತ್ತದೆ.
ಇಲ್ಲಿ ಯಾರಿಗೂ ಯಾರಿಲ್ಲ
ನೆಪ ಮಾತ್ರ ಎಲ್ಲರೂ
ಬದುಕಿನ ಬಂಡಿಗೆ ತಿರುವಿಲ್ಲ
ನಿಲ್ದಾಣ ಬಂದರೆ ಇಳಿಯಲೇಬೇಕು.
ಜೀವನದಲ್ಲಿ ಯಾರನ್ನು ತುಂಬಾ ನೋಯಿಸಿ ದೂರ ಮಾಡಬೇಡಿ
ಯಾಕಂದರೆ ಸಮಯ ಕಳೆದಂತೆ ಅವರೇ ನಿಮ್ಮ ಮರೆತು ಬಿಡುತ್ತಾರೆ ಕೋಪದಲ್ಲಿ ಹೋದವರು ಮತ್ತೆ ಬರಬಹುದು ಆದರೆ ನೋವಿನಿಂದ ಹೋದವರು ಮತ್ತೆ ವಾಪಾಸ್ ಬರುವುದಿಲ್ಲ.
ನನಗೆ ಯಾರು ಇಲ್ಲ ಎಂದು ಚಿಂತಿಸುವುದಕ್ಕಿಂತ ನನಗೆ ಯಾರು ಬೇಕಾಗಿಲ್ಲ ಎಂದು ಬದುಕುವುದೇ ಒಳ್ಳೆಯದು.
ಹೆತ್ತ ಕರುಳು ಹೊತ್ತ ಹೆಗಲು ಸುಖದಿ ಇಟ್ಟರೆ ದೇವರೇ ನಿಮ್ಮಲ್ಲಿಗೆ ಬರುವನು.
ಜೀವನ ಕಲಿಸಿದ ಪಾಠ ಇಷ್ಟೇ ಕೆಲವರ ಗುಣ ಏನು ಅಂತ ಗೊತ್ತಾದಾಗ ನಮ್ಮಲ್ಲಿ ನಾವೇ ಬದಲಾವಣೆ ಮಾಡ್ಕೊಂಡು ನಾವೂಯ್ ಖುಷಿಯಾಗಿರಬೇಕೇ ಹೊರತು ಅವರನ್ನು ಬದಲಾಯಿಸಲು ಸುಮ್ಮನೆ ನಮ್ಮ ಸಮಯ ವ್ಯರ್ಥ ಮಾಡಬಾರದು.
ಮನುಷ್ಯ ಮನೆ ಮನೆಯಲ್ಲಿ ಜನಿಸುತ್ತಾನೆ ಆದರೆ ಮನುಷ್ಯತ್ವ ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ.
ಶೋಕಿ ಜೀವನ ನಡೆಸಿ ಇನ್ನೊಬ್ಬರನ್ನು ಮರಳು ಮಾಡೋದಕ್ಕಿಂತ ನೀಯತ್ತಾಗಿ ಮೂರು ದಿನ ಬಾಳೋದು ಉತ್ತಮ.
ಇದೆ ಜೀವನ. ಕಷ್ಟ ಎಷ್ಟೇ ಇದ್ದರು ಹೊತ್ತು ಸಾಗಬೇಕು. ಇನ್ನೊಬ್ಬರಿಗೆ ಹೇಳಿಕೊಳ್ಳಲು ಆಗಲ್ಲ ಹಂಚಿಕೊಳ್ಳಲು ಆಗಲ್ಲ. ಬಂದಿದ್ದು ಅನುಭವಿಸಬೇಕು.
ಕಾಯಬೇಕು ಅಷ್ಟೇ. ಕಷ್ಟಗಳಿಗೂ ಸಾವಿದೆ.
ಸಂಪಾದನೆ ಇಲ್ಲದಿದ್ದರೆ ನಿನ್ನನ್ನು ಹೆತ್ತ ತಂದೆ ತಾಯಿ ನೀನು ಕಟ್ಟಿಕೊಂಡ ಹೆಂಡತಿ ನಿನ್ನನ್ನು ಲೆಕ್ಕ ಮಾಡುವುದಿಲ್ಲ. ನಿಜ ಹೇಳಬೇಕೆಂದರೆ ಹಣ ಇಲ್ಲದಿದ್ದರೆ ನಿನ್ನ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ.
ಬದಲಾವಣೆ ಜೀವನಕ್ಕೆ ತುಂಬಾ ಮುಖ್ಯ. ಅದರೆ ನಿಮ್ಮ ಬದಲಾವಣೆ ಒಬ್ಬರ ನಂಬಿಕೆ ಮುರಿಯದೆ ಇರಲಿ. ಒಬ್ಬರ ಹೃದಯ ಒಡೆಯದೆ ಇರಲಿ.
ನಾವು ಹೊರುವ ಅತ್ಯಂತ ಭಾರವಾದ ಹೊರೆ ನಮ್ಮ ತಲೆಯಲ್ಲಿರುವ ಆಲೋಚನೆಗಳು.
ಸಿಹಿ ನೆನಪುಗಳನ್ನು ಉಪ್ಪಿನಕಾಯಿ ಹಾಕಿ ವರ್ಷಗಟ್ಟಲೆ ತಿನ್ನಬೇಕು. ಕಹಿ ನೆನಪುಗಳನ್ನು ಚಟ್ನಿ ಮಾಡಿ ಒಂದೇ ದಿನಕ್ಕೆ ತಿಂದು ಮುಗಿಸಬೇಕು.
ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಹೊತ್ತು ಬೆಳಕನ್ನು ಕೊಡುತ್ತೋ ಬಡವನ ಮನೆಯಲ್ಲೂ ಅಷ್ಟೇ ಬೆಳಕನ್ನು ಕೊಡುತ್ತೆ. ನಮ್ಮ ಸ್ವಭಾವ ಕೂಡ ಈ ದೀಪದಂತೆ ಇರಬೇಕು. ಎಲ್ಲಿ ಹೋದರು ನಮ್ಮತನ ಯಾವತ್ತೂ ಬಿಟ್ಟು ಕೊಡಬಾರದು.
ಕ್ಷಣಿಕ ಜೀವನದಲ್ಲಿ ನಗುವಿನ ಪ್ರಯಾಣ.
ಜೀವನದಲ್ಲಿ ಹಸಿದವನಿಗೆ ಒಂದು ಹಿಡಿ ಅನ್ನ ನೀಡಿದಾಗ ಸಿಗೋ ಸಂತೋಷ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದಾಗ ಸಿಗುವ ತೃಪ್ತಿ. ಎಷ್ಟೇ ನೋವಿದ್ದರೂ ಒಂದು ಸಣ್ಣ ನಗುವಿನಲ್ಲಿ ಸಿಗೋ ನೆಮ್ಮದಿ ಎಷ್ಟೇ ಹಣ ಅಂತಸ್ತು ಗಳಿಸಿದರು ಸಿಗುವುದಿಲ್ಲ.
ಕಳೆದು ಹೋದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ
ಕಳೆದು ಹೋದ ಕೆಟ್ಟ ಸಮಯ ಬದುಕಿನಲ್ಲಿ ಪಾಠವಾಗುತ್ತದೆ.
ಜೀವನದಲ್ಲಿ ಯಾವತ್ತಾದರೂ ಸೋತೆನೆಂದು ಅನಿಸಿದಲ್ಲಿ ಯಾವ ಮಾರ್ಗವು ಕಾಣದೆ ಕಂಗಾಲಾಗಿ ಹೋದಲ್ಲಿ ಅವಶ್ಯವಾಗಿ ಭಗವದ್ಗೀತೆಗೆ ಶರಣಾಗಿ. ಅಲ್ಲೊಂದು ಬೆಳಕು ಕಾಣುವುದು.
ನಾಲ್ಕು ಜನ ನಿನ್ನನ್ನಿ ನೋಡುತ್ತಾರೆ ಎಂದು ಬದುಕಬೇಡ
ನಿನ್ನನ್ನು ತಿರಸ್ಕರಿಸಿ ಬಿಟ್ಟು ಹೋದ ನಾಲ್ಕು ಜನ ತಿರುಗಿ ನೋಡುವಂತೆ ಬದುಕು.
ತನ್ನ ಗುಟ್ಟನ್ನು ಯಾರೊಡನಿಗೂ ಹಂಚಿಕೊಳ್ಳಬೇಡಿ. ಯಾಕೆಂದರೆ ಜೀವನದಲ್ಲಿ ಯಾವ ಮಿತ್ರ ಯಾವಾಗ ಶತ್ರುವಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ಸಂಬಂಧಿಕರ ಹತ್ತಿರ ನಮ್ಮ ಕಷ್ಟ ಹೇಳಿಕೊಳ್ಳುವುದು ಸಂತೆಯಲ್ಲಿ ನಮ್ಮ ಮಾನವನ್ನು ನಾವೇ ಹರಾಜು ಇಟ್ಟಂತೆ.
ಸೋಲಲು ಧೈರ್ಯ ಇರುವವರೇ ಗೆದ್ದಿರುವುದು. ಸೋಲಿನ ಭಯದಿಂದ ಬಿದ್ದುಹೋದವರೇ ಹೆಚ್ಚು.
ಕನಸು ಕಾಣುತ್ತ ಜೀವಿಸುವುದು ಸುಲಭ. ಆದರೆ ಕನಸು ಕಂಡಂತೆ ಜೇವಿಸುವುದು ಕಷ್ಟ.
ಯಾರ ಅಸಹಾಯಕತೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು.
ಎಲ್ಲರ ಜೀವನದಲ್ಲೂ ಕಷ್ಟಗಳಿವೆ. ಆದರೆ ಪ್ರತಿಯೊಬ್ಬರೂ ಅದನ್ನು ಸ್ವೀಕರಿಸುವ ರೀತಿ ಬೇರೆ ಇದೆ.
ಒಂದು ದಿನ, ಒಂದೇ ಒಂದು ದಿನವಾದರೂ ಆ ಹಳೆಯ ಬಾಲ್ಯ ತಿರುಗು ಬಂದರೆ ನೋವೆಲ್ಲಾ ಮರೆತು ಜೀವನ ಸಾಗಿಸಬಹುದಿತ್ತು.
ಸಂತೋಷಗಳನ್ನು ಹಂಚಿಕೊಳ್ಳುವ ಹಾಗೆ ದುಖ್ಖವನ್ನು ಹಂಚಿಕೊಳ್ಳದಿರಿ. ಗೆದ್ದಾಗ ಜೊತೆಗಿದ್ದವರೆಲ್ಲ ಬಿದ್ದಾಗ ಇರಬೇಕೆಂದಿಲ್ಲ.
ಸಾಗುವ ಬದುಕಿಗೆ ಸಾವಿರ ಚಿಂತೆ
ಕರಗಿ ಹೋಗುವ ದಿನಗಳಿಗೆ ಆ ನೆನಪುಗಳೇ ಸಂತೆ.
ಜೀವನ, ಆಗದ್ದು ಆಗಲಿ, ಜೀವನ ಸಾಗುತಿರಲಿ.
ಜೀವನ ಅನ್ನೋದು ಸುಂದರವಾದ ಸಂತೆ
ಸಂತೆಯೊಳಗೆ ಇರುವುದು ನೂರಾರು ಚಿಂತೆ
ಆದರೂ ಬದುಕಬೇಕು ನಾವು ನಗುತಲಿ ಎಲ್ಲರಂತೆ.
ಜೀವನ ಅನ್ನೋದು ಕಾಣುವ ಕನಸು ಹಾಗು ಊಹಿಸಿಕೊಳ್ಳುವ ಕಲ್ಪನೆಯಷ್ಟು ಸುಂದರವಾಗಿರುವುದಿಲ್ಲ.
ಅರ್ಥ ಸಿಗದೇ ಬಂದು ಹೋಗುವ ಹಬ್ಬ ಹರಿದಿನಗಳು
ನನ್ನದಲ್ಲದ ಊರಿನಲ್ಲಿ ಉರುಳುತ್ತಿದೆ ಅನಾಮಧೇಯ ದಿನಗಳು
ದುದ್ದೆಂಬ ಕಾಗದದ ಕಂತೆಗಳ ಶೇಖರಿಸಲು ಮುನ್ನುಗ್ಗುತ್ತಿವೆ ನಿನ್ನೆಯ ನೆನಪುಗಳನ್ನು ಮೆರೆಸಿ ನಾಳೆಯ ಕನಸುಗಳು.
ಇನ್ನೊಬ್ಬರಿಂದ ಪಡೆದ ಜೀವನ ಸ್ಪೂರ್ತಿ ಕ್ಷಣಿಕ
ನಿನ್ನ ಬದುಕಿಗೆ ನೀ ತಂದುಕೊಂಡ ಜೀವನ ಸ್ಪೂರ್ತಿ ಅಗಣಿತ.
ಜೀವನವನ್ನು ಕೇವಲ ಜೀವಿಸುವುದಕ್ಕೂ ಮತ್ತು ಅನುಭವಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಜೀವನದಲ್ಲಿ ಹಣದ ಕೊರತೆ ಇದ್ದರು ಗುಣದ ಕೊರತೆ ಇರಬಾರದು
ಯಾಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು
ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಜೀವನಾನುಭವ ಎಂಬುದು ಅದು ಇಂದಿಗೂ ಶ್ರೇಷ್ಠವೇ
ಅದು ಪರಿಪಕ್ವಾವಾದಾಗ ಮಾತ್ರ ದಕ್ಕಲು ಸಾಧ್ಯ.
ಕೆಲವು ನೆನಪುಗಳು ಮಧುರ ಯಾತನೆ, ಕೆಲವು ನರಕಯಾತನೆ.. ಮುಂದೆ ಸಾಗಲಿ ಜೀವನ, ಹಾದಿ ಇರುವುದಿಲ್ಲ ಎಂದು ಸುಗಮ.. ಗಟ್ಟಿಯಾಗಿ ನಿಲ್ಲು ಮನುಜ.. ಸಾಟಿ ಇಲ್ಲ ನಿನಗೆ ಯಾರು.. ನಿನ್ನ ಬದುಕಿಗೆ ನೀನೇ ಹೊಣೆ, ನಿನ್ನದೇ ಬವಣೆ..
ಬೇಡಿದರೆ ಸಿಗುವುದು ಕಷ್ಟ
ಆಜ್ಞೆ ಮಾಡಿದರೆ ಸಿಗುವುದೇ ಜೀವನ
ಅಂದುಕೊಂಡಂತಲ್ಲಾ ಜೀವನ ಹೊಂದಿಕೊಂಡು ಹೋಗುವುದೇ ಜೀವನ.
ಜೀವನ ಎಷ್ಟೇ ಕಷ್ಟವಾದರೂ ಸರಿ.
ಭರವಸೆ ಕಳೆದುಕೊಳ್ಳದೆ….
ಮುನ್ನೆಡೆಯುವುದೊಂದೇ ನಮ್ಮ ಗುರಿಯಾಗಿರಲಿ.
ಜೀವನ ಮುಗಿಯದ ಸಂತಿ;
ಕೊಂಡಿದ್ದೇಷ್ಟೋ? ಮಾರಿದ್ದೇಷ್ಟೊ?
ಮಡಿವಾಳ ಮಾಚದೇವಾ, ಜೀವಿಸಿದ ಅನುಭಾವ ಮಾತ್ರ ನನ್ನದು.
ಆ ಬಿಳಿಯ ಮೋಡಗಳಿಗೆ
ಬಣ್ಣ ಬಳಿದವರಾರೋ..?
ನನಸಾಗದ ಕನಸುಗಳಿಗೆ
ಆಸೆ ತುಂಬಿದವರಾರೋ..?
ಜೀವನದಲ್ಲಿ ಜಾಗರೂಕನಾಗಿರು
ಜಗತ್ತ ಕಿಲಾಡಿಗಳಿರುವರು ಇಲ್ಲಿ
ಎಚ್ಚರ ತಪ್ಪಿದರೆ ಜಾಡಿಸಿ
ಒದ್ದುಬಿಡುವರು..
ಜೀವನದ ದಾರಿಯಲ್ಲಿ
ಸಹನೆ ಇರಬೇಕೇ
ಹೊರತು ಸಹಿಸಿಕೊಳ್ಳುವುದೇ
ಜೀವನ ಆಗಬಾರದು.
ಮನುಷ್ಯನ ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ
ಸಾಯುತ್ತಾನೆ. ಆದರೂ ಕೂಡ ಜೀವನ
ಪಾರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ.
ಜೀವನ ಗೋಣಿ ಚೀಲದಂತೆ..
ಚಂದ ಇದ್ದಾಗ ಎಲ್ಲರೂ ತುಂಬುವರು, ಕಟ್ಟಿಟ್ಟು ಅಟ್ಟಕೆ ಎರಿಸುವರು.
ಅಲ್ಲಲ್ಲಿ ಹರಿದಾಗ, ಕಾಲ ಅಡಿಗೆ ಹಾಕುವರು.
ಜೀವನ ನನಗೆ ಕಲಿಸಿದ್ದು ಇಷ್ಟೆ….
ನಾವು ಇನ್ನೊಬ್ಬರ ಕಷ್ಟಕ್ಕೆ ಆಗಬೇಕೇ ಹೊರತು ನಾವೇ ಇನ್ನೊಬ್ಬರ ಕಷ್ಟಕ್ಕೆ,ಕಾರಣವಾಗಬಾರದು.
ಕಷ್ಟದಲ್ಲಿ ಇದ್ದಾಗ ಕರಗದ ಜನರು ಕಟ್ಟಿಗೆಯಲ್ಲಿ ಇಟ್ಟಾಗ ಬಂದು ಕರಗಿ ಅಳುತ್ತಾರೆ. ಇಷ್ಟೆ ಜೀವನ
ಸಾಧಿಸುವ ಮುನ್ನ ಅಸಹ್ಯವಾಗಿ ನೋಡ್ತಾರೆ
ಸಾಧಿಸಿದ ನಂತರ ವಿಶೇಷವಾಗಿ ನೋಡ್ತಾರೆ.
ಜನನ : Login
ಮರಣ : Log out
ಬದುಕು : Password
“ಇಷ್ಟೆ ಜೀವನ“
ಇಷ್ಟೆ ಜೀವನ….. ಪೇಸ್ಬುಕ್ ಅಲ್ಲಿ ಗೆಳೆಯರನ್ನ ಸಂಪಾದಿಸೋದು ದೊಡ್ಡ ವಿಷಯ ಅಲ್ಲ.. ನಿಜ ಜೀವನದಲ್ಲಿ ಎಷ್ಟು ಜನ ಗೆಳೆಯರು ನಮ್ಮ ಜೊತೆ ಕೊನೆವರೆಗೂ ಇರ್ತಾರೆ ಅನ್ನೋದು ಮುಖ್ಯ.
ಏನೂ ಗೊತ್ತಿಲ್ಲದ ವಯಸ್ಸಿನಲ್ಲಿ ಸಣ್ಣ ಪುಟ್ಟ ವಿಷಯದಲ್ಲೂ ತುಂಬಾ ಸಂತೋಷವಾಗಿರುತ್ತೇವೆ.
ಅದೇ ಎಲ್ಲಾ ಗೊತ್ತಾದ ವಯಸ್ಸಿನಲ್ಲಿ ಸಣ್ಣ ಪುಟ್ಟ ಸಂತೋಷಕ್ಕಾಗಿ ಹುಡುಕಾಟ ನಡೆಸುತ್ತೇವೆ ಇಷ್ಟೆ ಜೀವನ!!
ಭಯ, ಭಕ್ತಿ ಎಲ್ಲಿ ಇರುತ್ತೋ ಅಲ್ಲಿ ಪ್ರೀತಿ, ನಂಬಿಕೆ ಇರುತ್ತೆ
ಪ್ರೀತಿ ನಂಬಿಕೆ ಎಲ್ಲಿ ಇರುತ್ತೋ ಅಲ್ಲಿ ಭಯ ಭಕ್ತಿ ಇದ್ದೇ ಇರುತ್ತೆ
ಒಂದೊಳ್ಳೆ ಜೀವನ ಅಂದ್ರೆ ಇಷ್ಟೆ.
ನಾವು ಈ ಭೂಮಿಗೆ ಬಂದ ಅತಿಥಿಗಳೇ ಹೊರತು ಮಾಲೀಕರಲ್ಲ. ಬರುವಾಗ ಖಾಲಿ ಹೋಗುವಾಗ ಕೂಡ ಖಾಲಿ ಹೋಗಬೇಕು. ಯಾವುದೂ ನಮ್ಮ ಜೋತೆ ಬರುವುದಿಲ್ಲ ನಾವು ಮಾಡಿದ ಪಾಪ ಪುಣ್ಯ ಮಾತ್ರ ನಮ್ಮ ಜೋತೆ ಬರುತ್ತೆ ಇಷ್ಟೆ ಜೀವನ..
ಜೀವನ ಅಂದ್ರೆ ಇಷ್ಟೆ ಸ್ನೇಹಿತರೇ, ಹತ್ತಿ ಕಿವಿಲೀ ಇಟ್ಟರೆ ಶೀತ ಅಂತ, ಅದೇ ಮೂಗಿನಲ್ಲಿ ಇಟ್ಟರೆ ಗೋತ ಅಂತ, ಹತ್ತಿ ಕಿವಿಯಿಂದ ಮೂಗಿಗೆ ಬರುವಷ್ಟ್ರಲ್ಲಿ ಜೀವನ ಅನುಭವಿಸಿ..
ಜೀವನ ಬೇಕು ಎನ್ನುವವರಿಗೆ ಸಾವು ಬೇಗ ಬಂದು ತುಂಬ ನೋವು ಕೊಡುತ್ತೆ…
ಜೀವನ ಬೇಡ ಎನ್ನುವವರಿಗೆ ಸಾವು ಬೇಗ ಬರದೆ ತುಂಬ ನೋವು ಕೊಡುತ್ತೆ..
ಸಾವು ಬೇಕು ಎಂದಾಗ ಬರಲ್ಲ..
ಬೇಡ ಎಂದಾಗ ಬರದೆನು ಇರಲ್ಲ..
ಜೀವನ ಇಷ್ಟೆ…..
ಜೀವನವೆಂಬುದೇ ಹಾಗೆ
ಇಷ್ಟಪಟ್ಟಿದ್ದು ಸಿಗೋದಿಲ್ಲ
ಇಷ್ಟವಿಲ್ಲದೇ ಇರೋದೆ ಪದೇ ಪದೇ ಸಿಗುತ್ತದೆ
ಈ ಮನುಷ್ಯರು
ಆಧುನಿಕ ಸಮಾಜಕ್ಕೆಅಂಟಿಕೊಂಡು
ಆಸೆ.ಮನಸ್ಸು,ಮಮತೆ,ಪ್ರೀತಿ ,ಕರುಣೆ, ಭಾವನೆಗಳನ್ನು ಮರೆತು ಯಂತ್ರಗಳಂತೆ ಬದುಕುವುದು
ಜೀವನ ಇಷ್ಟೆ ಇವತ್ತು ಇರುತ್ತೇವೆ
ನಾಳೆ?
ಇದ್ದಷ್ಟು ದಿನ ಖುಷಿಯಾಗಿರಿ
ನಗುವೇಜೀವನ
ಜೀವನ ಇಷ್ಟೆ.
ಒತ್ತಡ ವಿಲ್ಲದ ಉದ್ಯೋಗವಿಲ್ಲ
ಕಷ್ಟ ವಿಲ್ಲದ ವ್ಯವಸಾಯ ಇಲ್ಲ
ನೋವಿಲ್ಲದ ಸಂಸಾರವಿಲ್ಲ
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ
ಇವೆಲ್ಲವನ್ನು ಜಯಿಸಿದರೆ ಜೀವನ…
ಜೀವನ ಇಷ್ಟೆ ಯಾರಿಗೆ , ಯಾವಾಗ, ಏನು ತಿಳಿಯದು, ಇನ್ನು ಮು೦ದಾದರೂ ಎಲ್ಲರೂ ದ್ವೇಷ , ಅಸೂಯೆ , ದುರಾಸೆ ಪಡದೆ ಅನ್ಯೊನತೆ ಬಾಳುವುದನ್ನು ಕಲಿಯ ಬೇಕಷ್ಟೆ.
ನಮಗೆ ಬೆಲೆ ಕೊಡುವವರ ಜೊತೆ ಸಮಯ ಕಳೆಯೋಣ .. ಬೆಲೆಯೇ ಸಿಗದಂತ ಕಡೆ ನಾವು ಎಷ್ಟೇ ಮೇಲೆ ಬಿದ್ದು ಹೋದರು …ನಮ್ಮ ಸಮಯ ವ್ಯರ್ಥನೆ .
ಹುಟ್ಟುವಿನ ಸಮಯ ಖಚಿತ ..ಸಾಯುವ ಸಮಯ ನಿಶ್ಚಿತ ಇವೆರಡರ ಮಧ್ಯೆ ಸುಂದರ ಜೀವನ ..ಇಷ್ಟೆ ಮನುಷ್ಯನ ಜೀವನ.
ಹುಟ್ಟು, ಕಣ್ಣು ಬಿಟ್ಟು ಜಗತ್ತು ನೋಡಿದಾಗ ನಾನು ಅಳುತಿದ್ದೆ,ನನ್ನವರು ನಗುತಿದ್ದರು.
ಸಾವು, ಕಣ್ಣು ಮುಚ್ಚಿ ಜಗತ್ತಿನಿಂದ ನಾನು ನಗುನಗುತ್ತ ಹೋಗಬೇಕಾದರೆ ನನ್ನವರು ಅಳುತ್ತಿದ್ದರು…
ಇಷ್ಟೆ ಜೀವನ….. ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ …ಕಾಲ ಕ್ಷಣಿಕ ಕಣೋ…
ಒಲಿದು ಬರುವ ಭಾಗ್ಯಕ್ಕೆ ಉದ್ರೇಕಿತನಾಗದೆ, ಕೈಗೆಟುಕದ ವಿಧಿಯಾಟಕ್ಕೆ ವಿಚಲಿತನಾಗದೆ ಸ್ಥಿತಪ್ರಜ್ಞನಾಗಿರು.
ಜೀವನ ಪಾಠ ಕಲಿಸೋದು ಕೆಲವೇ ಸಂದರ್ಭದಲ್ಲಿ. ಅದು ಹೊಟ್ಟೆ ಹಸಿವಾದಾಗ, ಕೈಯಲ್ಲಿ ಹಣ ಇಲ್ಲದೆ ಇದ್ದಾಗ, ಮನಸ್ಸು ಒಡೆದು ಹೋದಾಗ, ಮಾತ್ರ. ಬಹುಶಃ ಎಲ್ಲಾ ಸಂಬಂಧಗಳು ಅನಾವರಣ ಆಗೋದು ಇಂತಹ ಸಂದರ್ಭದಲ್ಲಿ ಮಾತ್ರ..
ಓದಿದವನಿಗೆ ಒಂದು ಕೆಲಸ.
ಅದ್ರೆ ಓದದವನಿಗೆ ಸಾವಿರ ಕೆಲಸ.
ಯಾರನ್ನು ಕೀಳಾಗಿ ನೋಡೋ ಅವಶ್ಯಕತೆ ಇಲ್ಲಾ.
ಯಾಕೆಂದರೆ ಓದಿದವನು ಪುಸ್ತಕದ ಪಾಠ ಕಲ್ತಿದ್ರೆ ಓದದವನು ಜೀವನ ಪಾಠ ತಿಳ್ಕೊಂಡಿರ್ತಾನೆ…
ಜೀವನ ಎಂಬ ತರಗತಿಯಲ್ಲಿ ಗಂಟೆಗೊಂದು
ಪಾಠ, ನಿಮಿಷಕ್ಕೊಂದು ಅನುಭವ…!
ಒಳ್ಳೆಯವರು ಸಂತಸ ಕೊಡುತ್ತಾರೆ.
ಕೆಟ್ಟವರು ಅನುಭವ ನೀಡುತ್ತಾರೆ.
ದುಷ್ಟರು ಪಾಠ ಕಲಿಸುತ್ತಾರೆ.
ಉತ್ತಮರಾದವರು ಸವಿನೆನಪು ಕೊಡುತ್ತಾರೆ.
ಆದ್ದರಿಂದ ಎಂಥಾ ಜನರನ್ನು ನಾವು ದೂಷಿಸಬಾರದು.ಎಲ್ಲರಿಂದಲೂ ಒಂದಲ್ಲಾ ಒಂದು ರೀತಿಯ ಜೀವನ ಪಾಠ ಕಲಿಯಬಹುದು.
ನಾವೇ ಕಲಿಯಬೇಕು. ಇಲ್ಲವಾದರೆ ಜೀವನ ಪಾಠ ಕಲಿಸುತ್ತದೆ – ಮಾತು ಆಡಿಯಲ್ಲ, ಏಟು ಕೊಟ್ಟು.
ಕಳೆದು ಹೋದ ಸಮಯದ ಬೆಲೆ ನಮಗೆ ಅರಿವಾಗುವ ಮುಂಚೆ,ಅರ್ಧ ಜೀವನವೇ ಕಳೆದು ಹೋಗಿ ಬಿಡುತ್ತದೆ.ಇನ್ನೂ ಓಡಲೂ ಆಗುವುದಿಲ್ಲ,ನಡೆಯಲು ಆಗುವುದಿಲ್ಲ. ಜೀವನ ಪಾಠ
ಜೀವನದಲ್ಲಿ ಹಾಗೇ ಸುಮ್ಮನೆ ಬಂದು ಹೋಗುವವರು ಕೂಡಾ, ಶಾಶ್ವತವಾದ ಪಾಠ ಕಲಿಸಿ ಹೋಗುತ್ತಾರೆ.ಅಂತಹ ಅನುಭವಗಳೇ,ವ್ಯಕ್ತಿಗಳನ್ನು ಪಕ್ವಗೊಳಿಸುವುದು.ಹಾಗಾಗಿ ನಾವು ಅದನ್ನು ಜೀವನ ಪಾಠ ಎಂಬ ಧೃಷ್ಠಿಕೋನದಿಂದ ನೋಡುವುದು ಉತ್ತಮ.
“ಕಣ್ಣು” ಇರುವ ತನಕ “ನೋಟ”
“ಕೈ” ಇರುವ ತನಕ “ಊಟ”
“ಕಾಲು” ಇರುವ ತನಕ “ಓಟ”
“ಸಾವು” ಮತ್ತು “ಬದುಕಿನ” “ಆಟ”
ಕೊನೆಗೆ ಹೇಳಿ ಹೋಗೋದು “ಟಾಟಾ”
ಇದೇ ಅಲ್ವಾ “ಜೀವನ ಪಾಠ”
ನೋವು ಮನುಷ್ಯನ ಜೀವನ
ಬದಲಾಯಿಸುತ್ತೋ ಇಲ್ವೋ ಗೊತ್ತಿಲ್ಲ.
ಆದರೆ, ಜೀವನ ಪಾಠ ಅಂತೂ ಕಲಿಸುತ್ತೆ.
ನಾನು ನಂಬಿಕೆಯಲ್ಲಿ ಮೋಸ
ಹೋಗಿರಬಹುದು. ಆದರೆ
ಜೀವನದಲ್ಲಿ ಯಾವತ್ತು ಸೋಲಲ್ಲ.
ನಾನು ಪರಿಸ್ಥಿತಿಗಳಿಗೆ ತಲೆ
ತಗ್ಗಿಸಿರಬಹುದು.
ಆದರೆ ಕಷ್ಟಬಂದಾಗ ಹೆದರಿ ಓಡಿ ಹೋಗಲ್ಲ.
ನಾನು ಸಂಬಂಧಗಳನ್ನ ಉಳಿಸಿಕೊಳ್ಳದೆ ಇರಬಹುದು. ಆದರೆ ಇನ್ನೊಬ್ಬರ ಜೀವನದ ಜೋತೆ ಆಟವಾಡಲ್ಲ. ಇದು ನಮಗೆ ಜೀವನ ಕಲಿಸಿದ ಪಾಠ.
ಪುಸ್ತಕ, ಪಠ್ಯಕ್ರಮವಿಲ್ಲದೇ ಪಾಠ ಕಲಿಸುವುದು ಜೀವನ ಮಾತ್ರ.
Life is an adventure! So live it up!
ಗೆದ್ದಿರುವ ಕಥೆಯಲ್ಲಿ
ಗೆದ್ದವರ ಹೆಸರು ಇರುತ್ತದೆ….
ಸೋತಿರುವ ಕಥೆಯಲ್ಲೂ
ಸೋತವರ ಹೆಸರು ಇರುತ್ತದೆ….
ಅದರೆ ಸೋಲುವವರು ಜೀವನ ಪಾಠ ಕಲಿಯುತ್ತಾರೆ….
ಗೆದ್ದವರು ದಾರಿ ಮರೆಯುತ್ತಾರೆ…
ಜೀವನ ನಾವು ಪಾಠ ಕಲಿಯುವವರೆಗೂ ಪಾಠಗಳನ್ನು ಪುನರಾವರ್ತಿಸುತ್ತಲೇ ಇರುತ್ತದೆ.
ಬಾಳಿನ ದಾರಿಯಲ್ಲಿ
ಜೀವನ ಪಯಣದಲ್ಲಿ
ಅನುದಿನವು ಯಾವುದಾದರೊಂದು ರೂಪದಲ್ಲಿ ಜೀವನ ಪಾಠ ಕಲಿಸುವ ಪ್ರತಿ ಜೀವಿಯು ಕೂಡ ಗುರುವೇ.
ಜೀವನ ಎಂಬ ನಮ್ಮ ಹೋರಾಟ
ಸಿಗುವ ಸಾವಿರಾರು ಜನ ಮನದ ಆಟ
ನೀಡುವುದು ಜೀವನದಿ ಅನುಭವದ ಪಾಠ
ಎಂದಿಗೂ ಸೋಲು ಕಾಣದ ನಮ್ಮಯ
ಪ್ರಗತಿಯ ಓಟ..
ಇದನ್ನೂ ಓದಿ:
- 100+ Kannada Quotes About Trust (ನಂಬಿಕೆ Quotes ಕನ್ನಡದಲ್ಲಿ)
- 100+ Believe Quotes in Kannada (ನಂಬಿಕೆ ಉಲ್ಲೇಖಗಳು)
- 100+ Attitude Quotes in Kannada
Kannada Quotes About Life Images | ಜೀವನ ಕ್ವೋಟ್ಸ ಕನ್ನಡ ದಲ್ಲಿ
ನಾವು ಜೀವನದ ಕುರಿತಾದ ಈ ಉಲ್ಲೇಖಗಳ Kannada Quotes About Life ಸಂಗ್ರಹದ ಅಂತ್ಯಕ್ಕೆ ಬರುತ್ತಿದ್ದಂತೆ, ನೀವು ಬಯಸುತ್ತಿರುವ ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ಅದು ನಿಮಗೆ ಒದಗಿಸಿದೆ ಎಂದು ನಾವು ಭಾವಿಸುತ್ತೇವೆ. ಜೀವನವು ಸಾಮಾನ್ಯವಾಗಿ ಅನಿರೀಕ್ಷಿತ ಮತ್ತು ಸವಾಲಿನ ಪ್ರಯಾಣವಾಗಿದೆ. ಆದರೆ ನಮಗೆ ಮಾರ್ಗದರ್ಶನ ನೀಡುವ ಇತರರ ಬುದ್ಧಿವಂತಿಕೆಯೊಂದಿಗೆ, ಜೀವನದ ಹಿತನುಡಿಗಳು ಮತ್ತು ನುಡಿಮುತ್ತುಗಳೊಂದಿಗೆ ನಾವು ಅದರ ತಿರುವುಗಳನ್ನು ಹೆಚ್ಚು ಸುಲಭವಾಗಿ ದಾಟಬಹುದು.
ಜೀವನವು ಉಡುಗೊರೆಯಾಗಿದೆ ಮತ್ತು ಪ್ರತಿ ಕ್ಷಣವೂ ಕಲಿಯಲು, ಬೆಳೆಯಲು ಮತ್ತು ಬದಲಾವಣೆಯನ್ನು ಮಾಡಲು ಒಂದು ಅವಕಾಶ ಎಂದು ನೆನಪಿಡಿ.
ನೀವು ಎಂದಾದರೂ ಸ್ವಲ್ಪ ಸ್ಫೂರ್ತಿ ಅಥವಾ ಮಾರ್ಗದರ್ಶನದ ಅಗತ್ಯವನ್ನು ಕಂಡುಕೊಂಡರೆ, ನಮ್ಮ ಈ ಜೀವನದ ಕುರಿತು ಉಲ್ಲೇಖಗಳ ಸಂಗ್ರಹಕ್ಕೆ (best quotes about life in kannada) ಹಿಂತಿರುಗಿ. ಈ beautiful kannada quotes about life ಸಂದೇಶಗಳು ಮತ್ತು ನುಡಿಮುತ್ತುಗಳು ನಿಮ್ಮೊಳಗೆ ಇರುವ ಶಕ್ತಿ, ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿಮಗೆ ನೆನಪಿಸಲಿ ಮತ್ತು ಮುಂದುವರಿಯಲು ನಿಮ್ಮನ್ನು ಪ್ರೇರೇಪಿಸಲಿ.
ನಮ್ಮೊಂದಿಗೆ ಈ meaningful kannada quote about life ಸಂಗ್ರಹಣೆಯನ್ನು ಅನ್ವೇಷಿಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು. ಇನ್ನು ಹೆಚ್ಚಿನ ಕನ್ನಡ ಕ್ವೋಟ್ಸ, ನುಡಿಮುತ್ತುಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತೀರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.