100+ Yoga Day Quotes in Kannada with Images (2023)

Best International Yoga Day Quotes in Kannada

ಅಂತರಾಷ್ಟ್ರೀಯ ಯೋಗ ದಿನಾಚರಣೆಗಾಗಿ ನಮ್ಮ ಸ್ಪೂರ್ತಿದಾಯಕ ಉಲ್ಲೇಖಗಳ ಸಂಗ್ರಹಕ್ಕೆ ಸುಸ್ವಾಗತ! ಈ ವಿಶೇಷ ಸಂದರ್ಭದಲ್ಲಿ ಯೋಗದ ಸಾರವನ್ನು ಒಳಗೊಂಡಿರುವ international yoga day quotes in kannada ವನ್ನು ನಾವು ಸಂಗ್ರಹಿಸಿದ್ದೇವೆ. 

ಯೋಗ ಕೇವಲ ದೈಹಿಕ ಅಭ್ಯಾಸವಲ್ಲ; ಇದು ಆರೋಗ್ಯ, ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಮಗ್ರ ವಿಧಾನವಾಗಿದೆ. ಈ yoga thoughts in kannadaಗಳು ಯೋಗದ ಪರಿವರ್ತಕ ಶಕ್ತಿ ಮತ್ತು ಮನಸ್ಸು, ದೇಹ ಮತ್ತು ಆತ್ಮದ ಮೇಲೆ ಅದರ ಆಳವಾದ ಪ್ರಭಾವದ ಒಳನೋಟಗಳನ್ನು ನೀಡುತ್ತವೆ.

ಈ ಲೇಖನದಲ್ಲಿ ಸ್ವಯಂ ಅನ್ವೇಷಣೆ, ಸಾವಧಾನತೆ ಮತ್ತು ಆಂತರಿಕ ಶಾಂತಿಯ ಪ್ರಾಮುಖ್ಯತೆಯನ್ನು ಹೈಲೈಟ್ ಮಾಡುವ ಅತ್ಯುತ್ತಮ yoga day quotes in kannadaಗಳನ್ನು ನೀವು ಕಾಣಬಹುದು. ನೀವು ಅತ್ಯಾಸಕ್ತಿಯ ಯೋಗ ಅಭ್ಯಾಸಗಾರರಾಗಿರಲಿ ಅಥವಾ ಯೋಗದ ಜಗತ್ತಿಗೆ ಹೊಸಬರಾಗಿರಲಿ, ಈ international yoga day wishes in kannada ಮಾರ್ಗದರ್ಶಿ ಬೆಳಕಿನಂತೆ ಕಾರ್ಯನಿರ್ವಹಿಸುತ್ತವೆ, ಯೋಗವು ನಮ್ಮ ಜೀವನದಲ್ಲಿ ಮಾಡಬಲ್ಲ ನಂಬಲಾಗದ ಪ್ರಯೋಜನಗಳನ್ನು ನಿಮಗೆ ನೆನಪಿಸುತ್ತದೆ.

Best International Yoga Day Quotes in Kannada

ಎಷ್ಟಿದ್ದರೇನು ಐಶ್ವರ್ಯ,

ಸರಿಯಿರದಿರಲು ಆರೋಗ್ಯ.

ಯೋಗದಿಂದಲೇ ಆರೋಗ್ಯ ಸಿದ್ಧಿ,

ಈಗಲಾದರೂ ಕಲಿ ನೀ ಬುದ್ಧಿ.

 

ದಿನನಿತ್ಯ ಮಾಡಿದರೆ ಯೋಗ,

ಹರುಷದಿಂದಿರುವುದು ಮೊಗ.

ವಿಶ್ವ ಯೋಗ ದಿನದ ಹಾರ್ದಿಕ ಶುಭಾಶಯಗಳು.

 

ಮಾಡಿದರೆ ಯೋಗ,

ಓಡುವುದು ರೋಗ.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

 

ಆರೋಗ್ಯವಾಗಿರಲು ಮಾಡಬೇಕಿಲ್ಲ ಭೋಗ, 

ನಿತ್ಯ ಯೋಗ ಮಾಡಿದರೆ ಸಾಕು ಯೋಗ.

ವಿಶ್ವ ಯೋಗ ದಿನದ ಹಾರ್ದಿಕ ಶುಭಾಶಯಗಳು.

 

ಯೋಗವನ್ನು ನೀ ಮಾಡುತ್ತಿದ್ದರೇ,

ರೋಗವನ್ನು ನೀ ತಡೆಯಬಹುದು,

ಯೋಗ ಮಾಡಿ ಆರೋಗ್ಯದಿಂದಿರಿ,

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

 

ದೇಹದಲ್ಲಿ ರೋಗಕ್ಕೆ ಜಾಗವಿರಬಾರದು ಎಂದಾದರೆ,

ದಿನನಿತ್ಯದ ಜೀವನದಲ್ಲಿ ಯೋಗಕ್ಕೆ ಜಾಗವಿರಬೇಕು,

ವಿಶ್ವ ಯೋಗ ದಿನದ ಶುಭಾಶಯಗಳು.

 

ನಿತ್ಯ ಯೋಗದಿಂದ,

ಆರೋಗ್ಯಕರ ಜೀವನದ ಆನಂದ.

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

ಬರಬಾರದೆಂದರೇ ರೋಗ,

ಪ್ರತಿನಿತ್ಯ ಮಾಡಬೇಕು ಯೋಗ.

 

ಪ್ರತಿದಿನ ಮಾಡುತಿದ್ದರೇ ಯೋಗಾಭ್ಯಾಸ,

ಮನಸ್ಸಿನಲ್ಲಿ ಮೂಡುವುದು ಸಂತಸ.

 

ಬಂದ ರೋಗಗಳನ್ನು ಶಮನ

ಮಾಡಲು ಮಾತ್ರೆಗಳು ಬೇಕು

ರೋಗಗಳೇ ಬರದಂತೆ

ತಡೆಯಲು ಯೋಗ ಮಾಡಬೇಕು.

 

ಮಾಡು ನೀನು ಯೋಗಾಭ್ಯಾಸ,

ದೂರವಾಗುವುದು ನಿನ್ನೆಲ್ಲ ದುರಭ್ಯಾಸ.

 

ಬೇಗ ಹಾಕಿಸಿಕೊಳ್ಳಬಾರದೆಂದರೇ ಹೊಗೆ

ಅನುಸರಿಸಬೇಕು ಯೋಗಾಸನದ ಬಗೆ.

 

ದಿನಚರಿ ಇದ್ದರೆ ಯೋಗ ಯುಕ್ತ.

ಜೀವನವಿರುವುದು ರೋಗ ಮುಕ್ತ.

 

ಅರಸುವ ಮೊದಲು ಸಾಧನೆಯ ಸತ್ವ

ಅರಿತುಕೊಳ್ಳಬೇಕು ಯೋಗದ ತತ್ವ.

 

ಪ್ರತಿದಿನದ ಯೋಗ,

ಎಂದಿಗೂ ಬಾರದು ರೋಗ.

 

ಯಾಗಗಳಿಂದ ಸರಿಹೋಗದು ರೋಗ,

ಆದಷ್ಟು ಬೇಗ ಶುರುಮಾಡು ಯೋಗ.

Top International Yoga Day Wishes in Kannada

 

ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅತ್ಯುತ್ತಮ ಮಾರ್ಗವಾಗಿರುವ ಯೋಗವನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳೋಣ.

 

ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಭಾರತದ ಕೊಡುಗೆಯಾಗಿರುವ “ಯೋಗ” ನಮ್ಮ ಹಿರಿಯರು ನಮಗೆ ನೀಡಿದ ಹೆಮ್ಮೆಯ ಬಳುವಳಿ. ಇದನ್ನು ಉಳಿಸಿಕೊಳ್ಳುವ ಹಾಗು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ.

 

ವಿಶ್ವ ಯೋಗ ದಿನದ ಶುಭಾಶಯಗಳು. ಯೋಗವನ್ನು ನೀ ಮಾಡುತ್ತಿದ್ದರೇ, ರೋಗವನ್ನು ನೀ ತಡೆಯಬಹುದು, ಯೋಗ ಮಾಡಿ ಆರೋಗ್ಯವಾಗಿರಿ.

 

ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

ಯೋಗೋ ಜನನೀ ಯೋಗೋ ಜನಕೋ ಯೋಗೋ ಗುರುರಪಿ ಹಿತಕಾರೀ|

ಯೋಗೋ ಬಂಧುರ್ಯೋಗೋ ಮಿತ್ರಂ ಯೋಗೋsಸ್ಮಾಕಂ ಸರ್ವಸ್ವಮ್||

ಯೋಗವೇ ತಾಯಿ, ಯೋಗವೇ ತಂದೆ, ಯೋಗವೇ ಹಿತವನ್ನುಂಟು ಮಾಡುವ ಗುರು, ಯೋಗವೇ ಬಂಧು, ಯೋಗವೇ ಮಿತ್ರ, ನಮಗೆ ಎಲ್ಲವೂ ಯೋಗವೇ.

 

ಯೋಗ ಎಂಬುದು ದೀಪ. ಒಮ್ಮೆ ಈ ದೀಪವನ್ನು ಬೆಳಗಿದರೆ ಅದೆಂದೂ ಆರಿ ಹೋಗದು. ನಿರಂತರ ಅಭ್ಯಾಸ, ನಿಮ್ಮ ಬದುಕನ್ನು ಇನ್ನಷ್ಟು ಪ್ರಕಾಶಮಾನವಾಗಿಸುತ್ತದೆ.  ಸಂತಸದಾಯಕ ಆತ್ಮ, ಉಲ್ಲಾಸಗೊಂಡ ಮನಸ್ಸು, ಆರೋಗ್ಯಕರ ದೇಹ. ಯೋಗದಿಂದ ಈ ಮೂರನ್ನೂ ಸಾಧಿಸಬಹುದು. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

 

ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ. ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

 

ಯೋಗೇನ ಚಿತ್ತಸ್ಯ ಪದೇನ ವಾಚಾ ||

ಮಲಂ ಶರೀರಸ್ಯಂಚ ವ್ಯೆದ್ಯಕೇನ||

ಯೋಪಾಕರೋತ್ತಂ ಪ್ರವರಂ ಮುನೀನಾಂ||

ಪತಂಜಲಿ ಪ್ರಾಂಜಲಿರಾನತೋಸ್ಮಿ||

ಸರ್ವರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

 

ಒತ್ತಡ ಮುಕ್ತ ಜೀವನ ಶೈಲಿಗೆ ಯೋಗ ಪ್ರಯೋಜನಕಾರಿಯಾಗಿದೆ. ನಿಯಮಿತ ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಮಾನವ ಜೀವನದಲ್ಲಿ ಯೋಗಾಭ್ಯಾಸದ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ನಿಯಮಿತ ಯೋಗ ಮಾಡಲು ನಿರ್ಧರಿಸಬೇಕು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

 

ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟಿದ್ದು ಭಾರತ .

ಯೋಗ ದೇಶದ ಹೆಮ್ಮೆ ಮತ್ತು  ನಮ್ಮ ಆರೋಗ್ಯಕ್ಕೆ ಸಂಜೀವಿನಿ.

ವಿಶ್ವ ಯೋಗ ದಿನದ ಶುಭಾಶಯಗಳು.

 

ಆರೋಗ್ಯ, ತಾರುಣ್ಯ, ಲವಲವಿಕೆ ಜೀವನ ಪಡೆಯಲು ಯೋಗ ನಮ್ಮ ಜೀವನದ ಭಾಗವಾಗಲಿ, ಎಲ್ಲರಿಗೂ “ಅಂತಾರಾಷ್ಟ್ರೀಯ ಯೋಗ ದಿನದ” ಶುಭಾಶಯಗಳು.

 

ಭಾರತದ ಪುರಾತನ ಮತ್ತು ಜಗತ್ತಿನ ಸರ್ವಶ್ರೇಷ್ಠ ವ್ಯಾಯಾಮ ಕಲೆಯಾದ “ಯೋಗ” ದಿನದ ಶುಭಾಶಯಗಳು.

 

‘ಆರೋಗ್ಯಕ್ಕಾಗಿ ಯೋಗ’, ‘ಯೋಗದಿಂದ ರೋಗ ದೂರ’, ‘ಯೋಗ ಮಾಡಿ ಆರೋಗ್ಯ ಪಡೆಯಿರಿ’

ವಿಶ್ವ ಯೋಗ ದಿನದ ಶುಭಾಶಯಗಳು. 

 

ಯೋಗೇನ ಚಿತ್ತಸ್ಯ ಪದೇನ ವಾಚಾಂ

ಮಲಂ ಶರೀರಸ್ಯ ಚ ವೈದ್ಯಕೇನ

ಯೋಪಾ ಕರೋತ್ತಮ್ ಪ್ರವರಂ ಮುನೀನಾಂ

ಪತಂಜಲಿಂ ಪ್ರಾಜಂಲಿ ರಾನತೋಸ್ಮಿ

ಸರ್ವರಿಗೂ  ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

 

” ಮಾಡು ಯೋಗ ಇರು  ನಿರೋಗ”

ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು 

 

ಯೋಗ ದಿನಾಚರಣೆಯ ಶುಭಾಶಯಗಳು/

ಯೋಗ ಒಂದು ಅಭ್ಯಾಸ ಅಥವಾ ಹವ್ಯಾಸ ಅಲ್ಲ..ಅದು ಒಂದು ಜೀವನಶೈಲಿ.

ಯೋಗ ಶರೀರದಲ್ಲಿ ಜೀವ ತುಂಬುವ ಒಂದು ಪರಿ…

 

ನಾವು ದಿನದ 24 ಗಂಟೆ ಇರುವ ಜಾಗ ಈ ದೇಹ. 

ನಮ್ಮನ್ನು ದಿನದ 24 ಗಂಟೆ ಕರೆದೊಯ್ಯುವ ವಾಹನ ಈ ದೇಹ. 

ನಾವಿರುವ ಜಾಗವನ್ನು, ನಮ್ಮ ವಾಹನವನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯೋಗ ರಹದಾರಿ. 

ಯೋಗ ದಿನದ ಶುಭಾಶಯಗಳು. 

 

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯಪೂರ್ಣ ಶರೀರ ಮತ್ತು ಮನಸ್ಸಿನ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ.

 

ಯೋಗವೇ ಆರೋಗ್ಯವಂತ ಬದುಕಿನ ಜೀವಾಳ! ನಿತ್ಯ ಯೋಗ ಮಾಡಿ ಸರ್ವ ರೋಗಗಳಿಂದ ಮುಕ್ತಿ ಪಡೆಯಿರಿ. ನಾಡಿನ ಸಮಸ್ತ ಜನತೆಗೆ  ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

 

ಅಂತರಾಷ್ಟ್ರೀಯ ಯೋಗ ದಿವಸ. ಯೋಗದಿಂದ ರೋಗವನ್ನು ಅವಳಿಸಬಹುದು. ನಮ್ಮ ಆರೋಗ್ಯವನ್ನು ಹಾಗೂ ದೇಹವನ್ನು ಅತ್ಯಂತ ಸದೃಢವಾಗಿ‌ ಇಡಲು ಯೋಗ ಸಹಕಾರಿಯಾಗುತ್ತದೆ. ಯೋಗದಿಂದ ರೋಗ ಮುಕ್ತಿ ಸಾಧ್ಯ. ಮನಸ್ಸಿನಲ್ಲಿನ ಚಂಚತೆಗಳಿಗೆ,  ವಿವಿಧ ಸಮಸ್ಯೆಗಳಿಗೆ ಯೋಗದಿಂದ ಪರಿಹಾರ ಸಾಧ್ಯ. ಪ್ರತಿಯೊಬ್ಬರು ಯೋಗವನ್ನು ಮಾಡಿ‌ . “ಯೋಗ ದಿನದ ಶುಭಾಶಯಗಳಯ ” . 

 

ಅಂತರಾಷ್ಟ್ರೀಯ ಯೋಗ ದಿನಾಚರಣೆ. ಪ್ರತಿಯೊಬ್ಬರಿಗೂ ಹಾರ್ದಿಕ ಶುಭಾಶಯಗಳು

 

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಜೀವನದ ಸಮನ್ವಯತೆಯನ್ನೂ ನಮ್ಮ ಹಿರಿಯರು ಯೋಗವೆಂದೇ ಕರೆದರು. ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯೋಗಾಭ್ಯಾಸದ ಪಾತ್ರ ಮಹತ್ವದ್ದಾಗಿದೆ. ಆರೋಗ್ಯಪೂರ್ಣ ಶರೀರ, ಮನಸ್ಸುಗಳ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ.

 

ಇಂದು ಸಂಪೂರ್ಣ ವಿಶ್ವವೇ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿ ತೊಟ್ಟು ಭಾರತ ದೇಶ ನೀಡಿದ ಯೋಗವನ್ನು ಆಚರಿಸುತ್ತಿರುವ ಸಂಧರ್ಭದಲ್ಲಿ ಸರ್ವರಿಗೂ ವಿಶ್ವ ಯೋಗ ದಿನದ ಹಾರ್ದಿಕ ಶುಭಾಶಯಗಳು.

 

ಸಧೃಡ ದೇಹದಲ್ಲಿ ಸಧೃಡ ಮನಸ್ಸಿರುತ್ತದೇ.  ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು. ಉತ್ತಮ ಆರೋಗ್ಯ ಕ್ಕಾಗಿ, ಸಧೃಡ ದೇಹಕ್ಕಾಗಿ, ಸಧೃಡ ಮನಸ್ಸಿಗಾಗಿ, ಇಂದೇ ಪ್ರಾರಂಭಿಸಿ ಯೋಗ. “ಪರಿವರ್ತನೆ ಜಗದ ನಿಯಮ” ಆರೋಗ್ಯಕ್ಕಾಗಿ ಇಂದೇ ಬದಲಾಗಿ. ಉತ್ತಮ ಆರೋಗ್ಯಕ್ಕಾಗಿ ಒಂದು ಧೃಡ ಹೆಜ್ಜೆ.

 

ಯೋಗ ಕೇವಲ ವ್ಯಾಯಾಮವಲ್ಲ, ಸ್ವಾಸ್ಥ್ಯ ಜೀವನ ಹೊಂದಲು ಇರುವ ಸಮಗ್ರ ಸಾಧನ.

ವಿಶ್ವ ಯೋಗ ದಿನದ ಶುಭಾಶಯಗಳು.

 

‘ಮಾನವೀಯತೆಗಾಗಿ ಯೋಗ’ ಇದು ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ. ಸಾಂಕ್ರಾಮಿಕ ರೋಗದಿಂದ ಉಂಟಾದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯ ಆಯ್ದುಕೊಳ್ಳಲಾಗಿದೆ. 

 

ಯೋಗ ದೇಹ-ಮನಸ್ಸಿನ ಸ್ವಾಸ್ಥ್ಯ ಕಾಪಾಡುತ್ತದೆ. ಸರ್ವತೋಮುಖ ಆರೋಗ್ಯಕ್ಕೆ ಯೋಗ ಕೀಲಿಕೈ ಇದ್ದಂತೆ. ಒತ್ತಡದ ಜೀವನದ ನಡುವೆ ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಆರೋಗ್ಯವಾಗಿರಿ. ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. 

 

ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ವಿಶ್ವದಲ್ಲಿ ಅಭಿವೃದ್ಧಿ ಹಾಗೂ ಶಾಂತಿಯನ್ನು ಮೂಡಿಸುವುದು. ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಯೋಗದ ಮೂಲಕ ಪರಿಹಾರಗಳನ್ನು ಒದಗಿಸುವುದು. ಯೋಗದ ಮೂಲಕ ಜಾಗತಿಕ ಸಮನ್ವಯ ಸಾಧಿಸಿ ಸವಾಲಿನ ರೋಗಗಳನ್ನು ನಿವಾರಿಸುವುದು ವಿಶ್ವ ಯೋಗ ದಿನದ ಉದ್ದೇಶವಾಗಿದೆ.

 

ನಿಮ್ಮ ಮನೆಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಿ ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆದುಕೊಳ್ಳೋಣ.

 

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು

ಯೋಗ ಎಂದರೆ ಒಂದು ಆಧ್ಯಾತ್ಮಿಕ ಆಚರಣೆಯೇ ಸರಿ. ಇದು ವಿಶ್ವಕ್ಕೆ ಭಾರತದ ಕೊಡುಗೆ. ವಿಶ್ವದಲ್ಲಿ ಯೋಗದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವ ಪ್ರತೀಕವೇ ಅಂತರಾಷ್ಟ್ರೀಯ ಯೋಗ ದಿನ. ಹೌದು ಆಸನ, ಪ್ರಾಣಾಯಾಮ,ದೈಹಿಕ  ಮತ್ತು ಮಾನಸಿಕ ಆರೋಗ್ಯವನ್ನು ಮೀರಿದಂತಹ ಕರ್ಮಾಚರಣೆಯೇ ಯೋಗ. ಇದು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾದುದಲ್ಲ. ದೈಹಿಕ ವ್ಯಾಯಾಮವಲ್ಲ. ಬದಲಾಗಿ ಶರೀರ ,ಮನಸ್ಸು ಮತ್ತು ಆತ್ಮದ ಕನ್ನಡಿಯಾಗಿ ವರ್ತಿಸುವ ಪ್ರಬಲ ಶಕ್ತಿ. ಯೋಗ ದಿನಾಚರಣೆ ಈ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ ಆಚರಣೆಯಲ್ಲಿರಲಿ ಎಂಬುವುದು ನನ್ನ ಆಶಯ.

‘ಮಾನವೀಯತೆಗಾಗಿ ಯೋಗ’ ಇದು ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ. ಸಾಂಕ್ರಾಮಿಕ ರೋಗದಿಂದ ಉಂಟಾದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯ ಆಯ್ದುಕೊಳ್ಳಲಾಗಿದೆ. ಯೋಗ ದೇಹ-ಮನಸ್ಸಿನ ಸ್ವಾಸ್ಥ್ಯ ಕಾಪಾಡುತ್ತದೆ. ಸರ್ವತೋಮುಖ ಆರೋಗ್ಯಕ್ಕೆ ಯೋಗ ಕೀಲಿಕೈ ಇದ್ದಂತೆ. ಒತ್ತಡದ ಜೀವನದ ನಡುವೆ ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಆರೋಗ್ಯವಾಗಿರಿ. ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. 

 

ಕನ್ನಡ ನಾಡಿನ ಸಮಸ್ತ ಜನತೆಗೆ ಅ೦ತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನಮ್ಮ ಪ್ರಧಾನಮ೦ತ್ರಿ ಶ್ರೀ ನರೇ೦ದ್ರಮೋದಿಯವರ ಒತ್ತಾಸೆಯ೦ತೆ, ವಿಶ್ವಸ೦ಸ್ಥೆಯು ಪ್ರತಿವರ್ಷ ಜೂನ್ 21ರ೦ದು “ಅ೦ತಾರಾಷ್ಟ್ರೀಯ ಯೋಗ ದಿನ”ವನ್ನು ಆಚರಿಸುತ್ತದೆ. ಪ್ರಧಾನಿ ಮೋದಿಯವರು ಹೇಳುವ೦ತೆ, “ಆರೋಗ್ಯ ಮತ್ತು ದಾರ್ಢ್ಯತೆಗಳನ್ನು ಯೋಗ ನಮಗೆ ನೀಡುತ್ತದೆ. ಯೋಗ ಕೇವಲ ವ್ಯಾಯಾಮ ಮಾತ್ರವಲ್ಲ, ಅದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಕಲ್ಪಿಸಿಕೊಡುವ ಪರಿಪೂರ್ಣ ಜೀವನ ವಿಧಾನ”. ಮತ್ತೊಮ್ಮೆ ಈ ಯೋಗ ದಿನದ೦ದು, ‘ಸದೃಡ ವ್ಯಕ್ತಿತ್ವ, ಬಲಾಢ್ಯ ಕರ್ನಾಟಕದ’ ನಮ್ಮ ಕನಸನ್ನು ಸಾಕಾರಗೊಳಿಸುವತ್ತ ದೃಡ ಹೆಜ್ಜೆಗಳನ್ನಿಡೋಣ.

 

ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಮನುಷ್ಯ ಆರೋಗ್ಯವಂತನಾಗಿ ಬದುಕಲು, ಸದಾಕಾಲವೂ ಲವಲವಿಕೆಯಿಂದ ಇರಲು ಯೋಗ ಅತ್ಯಂತ ಅವಶ್ಯಕ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವಾಗಿದೆ. ಹಾಗೆಯೇ ಯೋಗ ಮಾಡಲು ಸೂಕ್ತ ಸಮಯ, ಸೂಕ್ತ ವ್ಯವಸ್ಥೆ ಕೂಡ ಇರಬೇಕು. ಅನುಭವಿಗಳ ಹಾಗೂ ಯೋಗ ತಜ್ಞರ ಮಾಹಿತಿ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಯೋಗ ಮಾಡಿ ಆರೋಗ್ಯವಂತ ಜೀವನ ನಡೆಸೋಣ.

 

ಸರ್ವರಿಗೂ ಅಂತರರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಯೋಗಕ್ಕೆ ನಮ್ಮ ಬದುಕಿನ ಶೈಲಿಯನ್ನು ಬದಲಿಸುವ ಶಕ್ತಿ ಇದೆ.  ನಿತ್ಯದ ಒತ್ತಡ ಜೀವನದಿಂದ ಮುಕ್ತಿ ಹೊಂದಲು ಯೋಗ ಮಾಡೋಣ, ಯೋಗದ ಕುರಿತು ಜಾಗೃತಿ ಮೂಡಿಸೋಣ.

 

“ಯೋಗ ಕೇವಲ ವ್ಯಾಯಾಮ ಮಾತ್ರವಲ್ಲ, ಅದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಕಲ್ಪಿಸಿಕೊಡುವ ಪರಿಪೂರ್ಣ ಜೀವನ ವಿಧಾನ”. ನಿತ್ಯ ಯೋಗ ಮಾಡುವುದರಿಂದ ಎಲ್ಲರೂ ಆರೋಗ್ಯವಾಗಿರಬಹುದು. ಪ್ರತಿಯೊಬ್ಬರು ಯೋಗ ಮಾಡಿ ಹಾಗೂ ಇನ್ನೊಬ್ಬರನ್ನು ಪ್ರೇರೇಪಿಸಿ. ವಿಶ್ವ ಯೋಗ ದಿನದ ಶುಭಾಶಯಗಳು. 

 

ಸಮಸ್ತ ಕರುನಾಡ ಜನತೆಗೆ  ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಸದೃಢ ದೇಹ, ಆರೋಗ್ಯವಂತ ಮನಸ್ಸು, ಪರಿಪೂರ್ಣ ಜೀವನದ ಅಡಿಪಾಯ. ಶತಮಾನಗಳಿಂದ ಭಾರತೀಯರ ಜೀವನ ಪದ್ಧತಿಯೇ ಆಗಿದ್ದ ಯೋಗ, ಜಗತ್ತಿಗೆ ಭಾರತದ ಕೊಡುಗೆ. ದೇಹ ಮತ್ತು ಮನಸ್ಸಿನ ಸಾಮರಸ್ಯದ ಜೊತೆಗೆ ಅರಿವು ಹಾಗೂ ಶಕ್ತಿಯನ್ನು ನೀಡುವ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಲಿ ಮತ್ತು ಯೋಗ ಪರಂಪರೆಯನ್ನು ಬೆಳೆಸಿಕೊಂಡು ಹೋಗೋಣ.

 

ಸರ್ವರಿಗೂ ವಿಶ್ವ ಯೋಗ ದಿನದ ಶುಭಾಶಯಗಳು. ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾದದ್ದಲ್ಲ; ಬದಲಾಗಿ ಅದು ಪೂರ್ಣವಾದ ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಅದು ಸಮನ್ವಯವನ್ನು ಸಾಧಿಸುತ್ತದೆ. ಅದರಿಂದ ಶಾಂತಿ ಮತ್ತು ಆರೋಗ್ಯಕರ ಜೀವನವನ್ನು ಸಾಧಿಸಬಹುದು. ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿ ಉನ್ನತ ಸಂಸ್ಕಾರವನ್ನು ಪಡೆಯಬಹುದು.

 

ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ. ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ.

 

ವಿಶ್ವ ಯೋಗ ದಿನದ ಶುಭಾಶಯಗಳು 

 

ಯೋಗ ಮಾಡುವ ಭೋಗವ ಬಿಡುವ

ಯೋಗದಿಂದ ಆರೋಗ್ಯ ಭಾಗ್ಯ ಪಡೆಯುವ

ಯೋಗಿಯಾಗುತ ಧ್ಯಾನ ಮನದಿ ಮಾಡುವ

ಯೋಗಾಸನಗಳ ಅಭ್ಯಾಸ ಮಾಡುವ

 

ಪತಂಜಲಿ ಋಷಿಯಿಂದ ಬಂದ ಕಲೆಯಿದು

ಉತ್ತಮ ಋಷಿಗಳು ಕಂಡ ಸತ್ಯವಿದು

ನಿತ್ಯ ನೇಮದಿ ಮಾಡಲು ಸ್ವಾಸ್ಥ್ಯ ಕೊಡುವುದು

ಚಿತ್ತ ಬಂದಂತೆ ಬಾಳಿ ಕೆಡದಿರೆನುವುದು

 

ವಿಶ್ವದೆಲ್ಲೆಡೆ ಮನ್ನಣೆ ಪಡೆದ ಕಲೆಯಿದು

ವಿಶ್ವಾಸವಿಟ್ಟು ಮಾಡೆ ಬಾಧೆ ಕಳೆವುದು

ವಿಶ್ವೇಶ ಸಿರಿಹಿರಿ ಕೃಪೆಲಿ ನಮಗೆ ಸಿಕ್ಕಿಹುದು

ವಿಶ್ವಕ್ಕೆ ಗುರುವಾಗಿ ಆಯ್ಕೆ ಮಾಡಿರುವುದು.

Yoga Day Quotes in Kannada Images

ಅಂತರಾಷ್ಟ್ರೀಯ ಯೋಗ ದಿನವು ಹತ್ತಿರವಾಗುತ್ತಿದ್ದಂತೆ ಈ best international yoga day quotes in kannada ಸಂಗ್ರಹವು ನಿಮ್ಮೊಳಗೆ ಯೋಗದ ಬಗ್ಗೆ ಇರುವ ನಿಮ್ಮ ಅಭಿಮಾನ ಹೆಚ್ಚಿಸಿದೆ ಎಂದು ನಾವು ಭಾವಿಸುತ್ತೇವೆ. ಯೋಗವು ನಮಗೆ ಕಲಿಸುವ ಸಾವಧಾನತೆ, ಸಮತೋಲನ ಮತ್ತು ಸ್ವಯಂ-ಆರೈಕೆಯ ಪಾಠಗಳನ್ನು ಅಳವಡಿಸಿಕೊಳ್ಳಲು ಮರೆಯದಿರಿ ಮತ್ತು ಯೋಗದ ಬೆಳಕು ಸಾಮರಸ್ಯ, ಆರೋಗ್ಯ ಮತ್ತು ಸಂತೋಷದ ಜೀವನಕ್ಕೆ ಮಾರ್ಗದರ್ಶನ ನೀಡಲಿ. 

ಇನ್ನೂ ಹೆಚ್ಚಿನ ಇದೆ ರೀತಿಯ ಕನ್ನಡ quotes ಗಳ ಸಂಗ್ರಹಕ್ಕೆ, ಪ್ರಬಂಧಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತೀರಿ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.