history of castes in karnataka in kannada, origin of castes in kannada, karnataka caste history in kannada, vokkaliga caste history in kannada, lingayat religion history in kannada, kuruba caste history in kannada, different castes in karnataka in kannada, history of gowda caste in kannada, karnataka communities history in kannada, list of castes in karnataka in kannada
ಇವತ್ತಿನ ಕಾಲದಲ್ಲಿ ನಾವು ಯಾರನ್ನೇ ಭೇಟಿಯಾದರೂ, ಅವರ ಹೆಸರಿನ ಜೊತೆಗೆ ಒಂದು ಜಾತಿಯ ಹೆಸರು ಅಂಟಿಕೊಂಡಿರುತ್ತದೆ. ಗೊಲ್ಲ, ಒಕ್ಕಲಿಗ, ಕುರುಬ, ಗಾಣಿಗ, ಈಡಿಗ, ಶೆಟ್ಟಿ, ಗೌಡ, ಬೆಸ್ತ, ಬಿಲ್ಲವ… ಉಪ್ಪಾರ ಹೀಗೆ ನೂರಾರು ಜಾತಿಗಳು ನಮ್ಮ ಕರ್ನಾಟಕದಲ್ಲಿವೆ.
ಆದರೆ, ಎಂದಾದರೂ ಯೋಚನೆ ಮಾಡಿದ್ದೀರಾ? ಸಾವಿರಾರು ವರ್ಷಗಳ ಹಿಂದೆ ಈ ಜಾತಿಗಳು ಇರಲಿಲ್ಲ! ಹಾಗಾದರೆ, ಈಗಿರುವ ಈ ವಿವಿಧ ಜಾತಿಗಳು ಹುಟ್ಟಿದ್ದು ಹೇಗೆ? ಮೊದಲು ಇವರೆಲ್ಲ ಏನಾಗಿದ್ದರು? ಇವರ ಮೂಲ ಕಸುಬು ಏನಾಗಿತ್ತು?
ಈ ಲೇಖನದಲ್ಲಿ ನಾವು ಕರ್ನಾಟಕದ ಪ್ರಮುಖ ಸಮುದಾಯಗಳ ರೋಚಕ ಇತಿಹಾಸವನ್ನು ನಿಮ್ಮ ಮುಂದಿಡಲಿದ್ದೇವೆ. ಇದು ಮೇಲು-ಕೀಳು ಎನ್ನುವ ಬರಹವಲ್ಲ, ಬದಲಾಗಿ ನಮ್ಮ ನಾಡಿನ ಪ್ರತಿಯೊಂದು ಸಮುದಾಯವೂ ಈ ನಾಡಿಗೆ, ಈ ಮಣ್ಣಿಗೆ ನೀಡಿದ ಕೊಡುಗೆಯನ್ನು ನೆನಪಿಸುವ ಲೇಖನ.

Table of Contents
ಕರ್ನಾಟಕದ ಪ್ರಮುಖ ಸಮುದಾಯಗಳ ರೋಚಕ ಇತಿಹಾಸ | Real History of How Castes Originated in Karnataka!
ಪ್ರಾಚೀನ ಕಾಲದಲ್ಲಿ ‘ಜಾತಿ’ ಎಂಬ ಪದವೇ ಇರಲಿಲ್ಲ. ಇದ್ದದ್ದು ಕೇವಲ ‘ವರ್ಣ’ ಮತ್ತು ‘ಕಾಯಕ’.
ಒಬ್ಬ ಮನುಷ್ಯ ತಾನು ಮಾಡುವ ಕೆಲಸದ ಆಧಾರದ ಮೇಲೆ ಗುರುತಿಸಿಕೊಳ್ಳುತ್ತಿದ್ದ. ಯಾರು ಸಮಾಜವನ್ನು ರಕ್ಷಿಸುತ್ತಿದ್ದರೋ ಅವರು ಕ್ಷತ್ರಿಯರಾದರು, ಯಾರು ಮಣ್ಣನ್ನು ನಂಬಿ ಕೃಷಿ ಮಾಡುತ್ತಿದ್ದರೋ ಅವರು ರೈತರಾದರು, ಯಾರು ವ್ಯಾಪಾರ ಮಾಡುತ್ತಿದ್ದರೋ ಅವರು ವೈಶ್ಯರಾದರು.
ಕಾಲಕ್ರಮೇಣ, ಅಪ್ಪ ಮಾಡುವ ಕೆಲಸವನ್ನು ಮಗ ಮಾಡಲು ಶುರು ಮಾಡಿದ. ಆ ಕಸುಬುಗಳು ಆಯಾ ಕುಟುಂಬದ ಪಾಲಿಗೆ ಖಾಯಂ ಆದವು. ಅದೇ ಮುಂದೆ ‘ಜಾತಿ’ಯಾಗಿ, ‘ಉಪಜಾತಿ’ಯಾಗಿ ಒಡೆದುಹೋಯಿತು.
ಬನ್ನಿ, ಈಗ ಕರ್ನಾಟಕದ ಪ್ರಮುಖ ಸಮುದಾಯಗಳು ಮೊದಲು ಏನಾಗಿದ್ದವು ಎಂದು ನೋಡೋಣ.
ಒಕ್ಕಲಿಗ
ಮೊದಲನೆಯದಾಗಿ, ಒಕ್ಕಲಿಗ ಸಮುದಾಯ. ‘ಒಕ್ಕಲು’ ಎಂದರೆ ಕೃಷಿ ಅಥವಾ ಒಕ್ಕಲುತನ ಮಾಡುವವನು. ಅಂದರೆ ಭೂಮಿಯನ್ನು ನಂಬಿ ಬದುಕುವವನು ಒಕ್ಕಲಿಗ.
ಇವರ ಮೂಲ ಕಸುಬು ಕೃಷಿ. ಆದರೆ ಕೇವಲ ಕೃಷಿಯಲ್ಲ, ನಾಡಿಗೆ ಆಪತ್ತು ಬಂದಾಗ ನೇಗಿಲು ಬಿಟ್ಟು ಕತ್ತಿ ಹಿಡಿದು ಹೋರಾಡಿದ ವೀರರು ಇವರು. ಗಂಗ ಸಾಮ್ರಾಜ್ಯದ ಅರಸರು, ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು ಇದೆ ಒಕ್ಕಲಿಗ ಸಮುದಾಯದವರು.
ಗೌಡ
ಇದೇ ಒಕ್ಕಲಿಗ ಸಮುದಾಯದಲ್ಲಿ ಅತಿ ಹೆಚ್ಚು ಕೇಳಿಬರುವ ಮತ್ತು ಕರ್ನಾಟಕದಾದ್ಯಂತ ಪ್ರಖ್ಯಾತವಾಗಿರುವ ಹೆಸರು ‘ಗೌಡ’. ಪ್ರಾಚೀನ ಶಾಸನಗಳಲ್ಲಿ ಈ ಪದವನ್ನು ‘ಗಾವುಂಡ’ ಎಂದು ಕರೆಯಲಾಗುತ್ತಿತ್ತು. ‘ಗಾವುಂಡ’ ಎಂದರೆ ಒಂದು ಹಳ್ಳಿಯ ಅಥವಾ ನಾಡಿನ ಮುಖಂಡ, ಅಥವಾ ಆಡಳಿತಗಾರ.
ಊರಿನ ಕಂದಾಯ ವಸೂಲಿ ಮಾಡುವುದು, ಕೆರೆ-ಕಟ್ಟೆಗಳನ್ನು ಕಟ್ಟಿಸುವುದು, ಊರಿನ ನ್ಯಾಯ ತೀರ್ಮಾನ ಮಾಡುವುದು ಮತ್ತು ಆಪತ್ತು ಬಂದಾಗ ಸೈನ್ಯ ಕಳುಹಿಸುವುದು ಇವರ ಮುಖ್ಯ ಕಾಯಕವಾಗಿತ್ತು. ಕಾಲಕ್ರಮೇಣ ಗಾವುಂಡ ಎಂಬ ಪದ ‘ಗೌಡ’ ಆಯಿತು.
ಕೇವಲ ಒಕ್ಕಲಿಗರು ಮಾತ್ರವಲ್ಲದೆ, ಕುರುಬರು, ಈಡಿಗರು, ಹಾಗೂ ಕರಾವಳಿಯ ಅರೆಭಾಷೆ ಸಮುದಾಯಗಳಲ್ಲೂ ಗೌಡ ಎಂಬ ಬಿರುದು ಅಥವಾ ಜಾತಿ ಇರುವುದನ್ನು ನಾವು ಇಂದಿಗೂ ನೋಡಬಹುದು.
ಲಿಂಗಾಯತ
ಇನ್ನು ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದಲ್ಲಿ ಅತಿ ದೊಡ್ಡ ಸಮುದಾಯವಾಗಿರುವ ‘ಲಿಂಗಾಯತ’ ಸಮುದಾಯದ ಇತಿಹಾಸ ಬಹಳ ವಿಶಿಷ್ಟವಾಗಿದೆ.
ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಹುಟ್ಟುಹಾಕಿದ ಕ್ರಾಂತಿಯ ಪ್ರತಿರೂಪವೇ ಈ ಲಿಂಗಾಯತ ಧರ್ಮ. ಮೂಲತಃ ಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಅದೊಂದು ಸಮಾನತೆಯ ಜೀವನ ವಿಧಾನ. ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ಎಲ್ಲಾ ಕಸುಬಿನ ಜನರೂ ಸೇರಿ, ಇಷ್ಟಲಿಂಗ ಧರಿಸಿ ಸಮಾನತೆಯಿಂದ ಬದುಕಲು ಶುರುಮಾಡಿದ ಸಮುದಾಯ ಇದು.
ಕುರುಬ
ಮುಂದಿನದ್ದು ಕುರುಬ ಸಮುದಾಯ. ಕುರುಬ ಎಂದರೆ ಕೇವಲ ಕುರಿ ಕಾಯುವವರು ಮಾತ್ರವಲ್ಲ. ಪ್ರಾಚೀನ ಕಾಲದಲ್ಲಿ ಪಶುಪಾಲನೆ ಎಂಬುದು ಅತಿ ದೊಡ್ಡ ಸಂಪತ್ತಾಗಿತ್ತು.
ದಕ್ಷಿಣ ಭಾರತದ ಅತಿದೊಡ್ಡ ಸಾಮ್ರಾಜ್ಯವಾದ ‘ವಿಜಯನಗರ ಸಾಮ್ರಾಜ್ಯ’ವನ್ನು ಸ್ಥಾಪಿಸಿದ ಹರಿಹರ ಮತ್ತು ಬುಕ್ಕರಾಯರು ಇದೇ ಸಮುದಾಯಕ್ಕೆ ಸೇರಿದವರು. ಭಕ್ತಿ ಚಳುವಳಿಯ ದಾಸ ಶ್ರೇಷ್ಠ ಕನಕದಾಸರು ಕೂಡ ಇದೇ ಸಮುದಾಯದವರು.
ಗೊಲ್ಲ
ಹಾಗೆಯೇ, ‘ಗೊಲ್ಲ’ ಸಮುದಾಯಕ್ಕೆ ಬಂದರೆ ಇವರ ಮೂಲ ಕಸುಬು ಗೋವುಗಳನ್ನು ಸಾಕುವುದು. ಶ್ರೀಕೃಷ್ಣನ ವಂಶಸ್ಥರು ಎಂದು ಕರೆದುಕೊಳ್ಳುವ ಇವರು, ಆ ಕಾಲದಲ್ಲಿ ಎಷ್ಟು ನಂಬಿಕಸ್ತರು ಎಂದರೆ, ರಾಜರ ಖಜಾನೆಗಳನ್ನು ಕಾಯುವ ಜವಾಬ್ದಾರಿಯನ್ನು ಗೊಲ್ಲರಿಗೆ ನೀಡಲಾಗುತ್ತಿತ್ತು!
ನಾಯಕ
ಇನ್ನು ‘ನಾಯಕ’ ಅಥವಾ ‘ನಾಯ್ಕ್’ ಸಮುದಾಯದ ಇತಿಹಾಸ ರೋಮಾಂಚನಕಾರಿಯಾಗಿದೆ. ನಾಯಕ ಎಂದರೆ ಲೀಡರ್ ಅಥವಾ ಸೇನಾಪತಿ. ಇವರ ಮೂಲ ವೃತ್ತಿ ಬೇಟೆಗಾರಿಕೆ ಮತ್ತು ಸೈನ್ಯದ ಸೇವೆ.
ಪ್ರಾಚೀನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಗಡಿಗಳನ್ನು ಕಾಯುತ್ತಿದ್ದ ಯೋಧರು ಇವರು. ಸಾಮ್ರಾಜ್ಯದ ಪತನದ ನಂತರ ಇವರು ಪ್ರಬಲ ಪಾಳೆಗಾರರಾಗಿ ಬೆಳೆದರು. ಚಿತ್ರದುರ್ಗದ ಮದಕರಿ ನಾಯಕ, ಸುರಪುರದ ನಾಯಕರು, ಹಲಗಲಿ ಬೇಡರು ಇವರೆಲ್ಲ ಬ್ರಿಟಿಷರ ನಿದ್ದೆ ಗೆಡಿಸಿದ ಅಪ್ಪಟ ಹೋರಾಟಗಾರರು. ‘ವಾಲ್ಮೀಕಿ’ ಸಮುದಾಯವೂ ಇದೇ ಮೂಲದಿಂದ ಬಂದದ್ದಾಗಿದೆ.
ನಾಡವರು
ಇನ್ನು ಕರಾವಳಿಯ ಕಡೆ ಬಂದರೆ ನಮಗೆ ‘ನಾಡವರು’ ಎಂಬ ಪ್ರಮುಖ ಕೃಷಿಕ ಮತ್ತು ಹೋರಾಟಗಾರ ಸಮುದಾಯ ಸಿಗುತ್ತದೆ. ಇವರ ಹೆಸರು ‘ನಾಡು’ ಎನ್ನುವುದರಿಂದ ಬಂದಿದೆ. ಪ್ರಾಚೀನ ಕಾಲದಲ್ಲಿ ಜೈನ ಅರಸರ ಮತ್ತು ಕೆಳದಿ ನಾಯಕರ ಸೈನ್ಯದಲ್ಲಿ ಪ್ರಮುಖ ಸೇನಾಪತಿಗಳಾಗಿ, ಭೂಮಿಯ ಒಡೆಯರಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆಯ ಇತಿಹಾಸ ಈ ನಾಡವರದ್ದಾಗಿದೆ.
ಗೊಂಡರು
ಇದೇ ಸಾಲಿನಲ್ಲಿ ಬರುವ ಮತ್ತೊಂದು ಅತಿ ಪ್ರಾಚೀನ ಸಮುದಾಯ ‘ಗೊಂಡರು’ . ಇವರು ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಒಂದು. ಕರ್ನಾಟಕದಲ್ಲಿ ಇವರು ಅರಣ್ಯಗಳ ರಾಜರಾಗಿದ್ದರು. ಪ್ರಕೃತಿಯನ್ನು, ಮರ-ಗಿಡಗಳನ್ನು ಪೂಜಿಸುವ ಈ ಸಮುದಾಯ ಮೂಲತಃ ಕಾಡಿನ ಸಂಪತ್ತನ್ನು ರಕ್ಷಿಸುತ್ತಿದ್ದವರು.
ಬಂಟ, ಶೆಟ್ಟಿ
ಕರಾವಳಿಯ ಶೂರರು ಮತ್ತು ವ್ಯಾಪಾರಿಗಳು: ಬಂಟ, ಶೆಟ್ಟಿ, ಶೇಟ್, ಮತ್ತು ಬಿಲ್ಲವ
ಕರಾವಳಿ ಕರ್ನಾಟಕ ಅಥವಾ ತುಳುನಾಡಿನ ಕಡೆ ಬಂದರೆ, ‘ಬಂಟ’ ಸಮುದಾಯದ ಮೂಲ ಕಸುಬು ಕೃಷಿ ಮತ್ತು ಯುದ್ಧ. ‘ಬಂಟ’ ಎಂದರೆ ತುಳು ಭಾಷೆಯಲ್ಲಿ ಬಲಿಷ್ಠ ಯೋಧ ಅಥವಾ ರಕ್ಷಕ ಎಂದರ್ಥ. ಆಳುವ ಅರಸರ ಸೈನ್ಯದಲ್ಲಿ ಪ್ರಮುಖ ಸೇನಾಪತಿಗಳಾಗಿ ಇವರು ಕೆಲಸ ಮಾಡುತ್ತಿದ್ದರು.
ಬಂಟರು ಮತ್ತು ಇತರ ಜೈನ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಕಂಡುಬರುವ ಜಾತಿ ‘ಶೆಟ್ಟಿ’ . ಈ ಪದ ಸಂಸ್ಕೃತದ ‘ಶ್ರೇಷ್ಠಿ’ ಎಂಬ ಪದದಿಂದ ಬಂದಿದೆ. ಶ್ರೇಷ್ಠಿ ಎಂದರೆ ಅತಿದೊಡ್ಡ ವ್ಯಾಪಾರಿ. ಕರಾವಳಿಯ ಆರ್ಥಿಕತೆಯನ್ನು ನೂರಾರು ವರ್ಷಗಳಿಂದ ಮುನ್ನಡೆಸಿಕೊಂಡು ಬಂದ ಕೀರ್ತಿ ಶೆಟ್ಟಿ ಸಮುದಾಯಕ್ಕೆ ಸಲ್ಲುತ್ತದೆ.
ಶೇಟ್
ಇದೇ ರೀತಿ, ಕೊಂಕಣಿ ಮಾತನಾಡುವ ಕರಾವಳಿ ಭಾಗದಲ್ಲಿ ‘ಶೇಟ್’ ಎಂಬ ಸಮುದಾಯವಿದೆ. ಇವರು ಮುಖ್ಯವಾಗಿ ಚಿನ್ನದ ವ್ಯಾಪಾರ, ರೇಷ್ಮೆ ಮತ್ತು ಆಭರಣಗಳ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾರೆ.
ಬಣಜಿಗ ಮತ್ತು ಬಲಿಜ
ಇನ್ನು ನಾಡಿನ ಒಳಭಾಗದ ಅತಿ ದೊಡ್ಡ ವ್ಯಾಪಾರಿ ಸಮುದಾಯಗಳೆಂದರೆ ‘ಬಣಜಿಗ’ ಮತ್ತು ‘ಬಲಿಜ’ . ‘ವಾಣಿಜ್ಯ’ ಎಂಬ ಪದದಿಂದ ‘ಬಣಜಿಗ’ ಎಂಬ ಹೆಸರು ಬಂತು. ಪ್ರಾಚೀನ ಕಾಲದಲ್ಲಿ ಬೃಹತ್ ವ್ಯಾಪಾರಿ ಸಂಘಗಳನ್ನು ಕಟ್ಟಿ, ದೇಶ-ವಿದೇಶಗಳಲ್ಲಿ ರೇಷ್ಮೆ, ಮುತ್ತು-ರತ್ನಗಳ ವ್ಯಾಪಾರ ಮಾಡುತ್ತಿದ್ದ ವಾಣಿಜ್ಯ ದಿಗ್ಗಜರು ಇವರು.
ಬಿಲ್ಲವ
ಕರಾವಳಿಯ ಇತಿಹಾಸದಲ್ಲಿ ‘ಬಿಲ್ಲವ’ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಿಲ್ಲವ ಎಂದರೆ ‘ಬಿಲ್ಲು’ ಹಿಡಿದವನು ಅಥವಾ ಬಿಲ್ವಿದ್ಯೆಯಲ್ಲಿ ಪರಿಣಿತ ಎಂದರ್ಥ. ಇವರ ಮೂಲ ಕಸುಬು ಕೃಷಿ, ಮತ್ತು ಆಯುರ್ವೇದ ವೈದ್ಯ, ತ್ತಂತೆ.
ಆದರೆ ಇವರು ಕೇವಲ ಶ್ರಮಿಕರಲ್ಲ, ಅಪ್ಪಟ ಯೋಧರು. ತುಳುನಾಡಿನ ಗರಡಿ ಮನೆಗಳಲ್ಲಿ ಕುಸ್ತಿ, ಕತ್ತಿವರಸೆ ಕಲಿಸುತ್ತಿದ್ದ ಪರಂಪರೆ ಇವರದ್ದು. ನಾರಾಯಣ ಗುರುಗಳ ತತ್ವಗಳಿಂದ ಪ್ರಭಾವಿತರಾಗಿ ಈ ಸಮುದಾಯ ಇಂದು ಶಿಕ್ಷಣ ಮತ್ತು ಉದ್ಯಮದಲ್ಲಿ ಮುಂಚೂಣಿಯಲ್ಲಿದೆ.
ಬ್ರಾಹ್ಮಣ
ಬ್ರಾಹ್ಮಣ ಸಮುದಾಯದ ಮೂಲ ಕಸುಬು ಅಧ್ಯಯನ, ವೇದ ಪಠಣ, ಮತ್ತು ಸಮಾಜಕ್ಕೆ ಮಾರ್ಗದರ್ಶನ. ಪ್ರಾಚೀನ ಕಾಲದಲ್ಲಿ ರಾಜರಿಗೆ ಮಂತ್ರಿಗಳಾಗಿ, ದಿವಾನರಾಗಿ ಇವರು ಕೆಲಸ ಮಾಡುತ್ತಿದ್ದರು. ಶಿಕ್ಷಣವನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಇವರ ಪಾತ್ರ ದೊಡ್ಡದು.
ದೈವಜ್ಞ ಬ್ರಾಹ್ಮಣ
ಕರಾವಳಿಯ ಭಾಗದಲ್ಲಿ ‘ದೈವಜ್ಞ ಬ್ರಾಹ್ಮಣ’ ಎಂಬ ವಿಶಿಷ್ಟ ಸಮುದಾಯವಿದೆ. ‘ದೈವಜ್ಞ’ ಎಂದರೆ ದೈವದ ಇಚ್ಛೆಯನ್ನು ಬಲ್ಲವರು. ಚಿನ್ನ-ಬೆಳ್ಳಿಯ ಆಭರಣಗಳನ್ನು ತಯಾರಿಸುವಲ್ಲಿ ಇವರ ಕರಕುಶಲತೆ ಅದ್ಭುತವಾದದ್ದು.
ದೇವಾಡಿಗ
ದೇವಸ್ಥಾನಗಳ ಸೇವೆಗೆ ಮೀಸಲಾದ ಮತ್ತೊಂದು ಸಮುದಾಯವೆಂದರೆ ‘ದೇವಾಡಿಗ’ . ‘ದೇವರಿಗೆ ಸೇವೆ ಮಾಡುವವನು ಎಂಬುದು ಇದರ ಅರ್ಥ. ಕರಾವಳಿಯ ದೇವಸ್ಥಾನಗಳಲ್ಲಿ ಪೂಜೆಯ ಸಮಯದಲ್ಲಿ ಶಂಖ ಊದುವುದು, ವಾದ್ಯ ನುಡಿಸುವುದು ಮತ್ತು ದೇವಸ್ಥಾನದ ಸಂರಕ್ಷಣೆ ಮಾಡುವುದು ಇವರ ಪವಿತ್ರ ಕಾಯಕವಾಗಿತ್ತು.
ಕ್ಷತ್ರಿಯ
ಹಾಗೆಯೇ ಪ್ರಾಚೀನ ವರ್ಣವ್ಯವಸ್ಥೆಯಲ್ಲಿ ಸಮಾಜವನ್ನು ರಕ್ಷಿಸುವ ಮತ್ತು ರಾಜ್ಯಭಾರ ಮಾಡುವ ಹೊಣೆ ಹೊತ್ತಿದ್ದ ವೀರ ಯೋಧರ ಸಮುದಾಯವೇ ಕ್ಷತ್ರಿಯ. ಶತ್ರುಗಳಿಂದ ನಾಡನ್ನು ಕಾಪಾಡುವುದು, ಯುದ್ಧ ಮಾಡುವುದು ಮತ್ತು ಪ್ರಜೆಗಳಿಗೆ ನ್ಯಾಯ ಒದಗಿಸುವುದು ಇವರ ಮೂಲ ಕಾಯಕವಾಗಿತ್ತು.
ಕರ್ನಾಟಕವನ್ನು ಆಳಿದ ಅನೇಕ ಮಹಾನ್ ರಾಜವಂಶಗಳು, ಪಾಳೇಗಾರರು ಹಾಗೂ ಮೈಸೂರಿನ ಒಡೆಯರ್ ಮನೆತನಗಳು ಇದೇ ಕ್ಷತ್ರಿಯ ಪರಂಪರೆಗೆ ಸೇರಿದವರಾಗಿದ್ದಾರೆ.
ಕೇವಲ ಅಧಿಕಾರವಷ್ಟೇ ಅಲ್ಲದೆ, ಪ್ರಾಣವನ್ನು ಪಣಕ್ಕಿಟ್ಟು ನಾಡಿಗಾಗಿ ಬಲಿದಾನ ಮಾಡುವ ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿ ಈ ಸಮುದಾಯ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಹೆಗ್ಗಡೆ
ಕರಾವಳಿ ಭಾಗದ ‘ಹೆಗ್ಗಡೆ’ ಎಂಬ ಪದದ ಮೂಲ ‘ಪೆರ್ಗಡೆ’. ಅಂದರೆ ಒಂದು ಗ್ರಾಮದ ಅಥವಾ ಸೀಮೆಯ ಮುಖಂಡ. ಊರಿನ ನ್ಯಾಯ ತೀರ್ಮಾನ ಮಾಡುವ ಜವಾಬ್ದಾರಿ ಇವರ ಮೇಲಿತ್ತು.
ವಿಶ್ವಕರ್ಮ
ಇನ್ನು, ಬೇಲೂರು, ಹಳೇಬೀಡು, ಬಾದಾಮಿಯಂತಹ ಅನೇಕ ದೇವಾಲಯಗಳನ್ನು ಕಟ್ಟಿದ ಶಿಲ್ಪಿಗಳು, ಅಕ್ಕಸಾಲಿಗರು, ಕಮ್ಮಾರರು ‘ವಿಶ್ವಕರ್ಮ’ ಸಮುದಾಯದವರು. ಅಮರಶಿಲ್ಪಿ ಜಕಣಾಚಾರಿಯಂತಹ ಕಲಾಕಾರರನ್ನು ಕೊಟ್ಟ ಸಮುದಾಯವಿದು.
ಮೊಗವೀರ
ಇನ್ನೂ, ಜಲಮಾರ್ಗವನ್ನು ಆಳಿದ ಪ್ರಮುಖ ಸಮುದಾಯಗಳೆಂದರೆ ಮೊಗವೀರ, ಬೆಸ್ತ, ಅಂಬಿಗ, ಹರಿಕಂತ್ರ, ಮತ್ತು ಮೇಸ್ತ.
ಕರಾವಳಿಯ ‘ಮೊಗವೀರ’ ಎಂಬ ಪದದ ಅರ್ಥ ‘ಮೊಗ’ ಅಂದರೆ ಅಲೆ ಅಥವಾ ಸಮುದ್ರ ಇನ್ನೂ ‘ವೀರ’ ಎಂದರೆ ಶೂರ. ಅಂದರೆ ಸಮುದ್ರದ ವೀರರು! ಇವರ ಮೂಲ ವೃತ್ತಿ ಮೀನುಗಾರಿಕೆ ಆದರೂ ಇತಿಹಾಸದಲ್ಲಿ ಇವರು ರಾಣಿ ಅಬ್ಬಕ್ಕನಂತಹ ನೌಕಾಪಡೆಯ ಪ್ರಮುಖ ಕಮಾಂಡರ್ಗಳಾಗಿದ್ದರು. ಇಷ್ಟೇ ಅಲ್ಲದೇ, ಪೋರ್ಚುಗೀಸರ ವಿರುದ್ಧ ಸಮುದ್ರದಲ್ಲಿ ಹೋರಾಡಿದ ಅಪ್ಪಟ ಕಡಲ ವೀರರು ಇವರು.
ಅಂಬಿಗ ಮತ್ತು ಬೆಸ್ತ
ಹಾಗೆಯೇ ಒಳನಾಡಿನಲ್ಲಿ ನದಿಗಳನ್ನು ನಂಬಿ ಬದುಕುತ್ತಿದ್ದ ಸಮುದಾಯಗಳೆಂದರೆ ‘ಬೆಸ್ತ’ ಮತ್ತು ‘ಅಂಬಿಗ’. ಅಂಬಿಗ ಎಂದರೆ ದೋಣಿ ನಡೆಸುವವನು, ನದಿ ದಾಟಿಸುವವನು. ಪ್ರಾಚೀನ ಕಾಲದಲ್ಲಿ ಸೇನೆಗಳು ನದಿ ದಾಟಬೇಕಾದರೆ ಇವರೇ ಮಾರ್ಗದರ್ಶಕರಾಗಿದ್ದರು.
ಹರಿಕಂತ್ರ ಮತ್ತು ಮೇಸ್ತ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪ್ರಮುಖ ಸಮುದಾಯಗಳಾದ ‘ಹರಿಕಂತ್ರ’ ಮತ್ತು ‘ಮೇಸ್ತ’ ಸಮುದಾಯಗಳೂ ಕೂಡ ಇದೇ ರೀತಿ ಕಡಲನ್ನು ನಂಬಿ, ಮೀನುಗಾರಿಕೆ ಮತ್ತು ನೌಕಾಯಾನದ ಮೂಲಕ ಕರಾವಳಿಯ ಆರ್ಥಿಕತೆಯನ್ನು ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಜಲವೀರರು.
ಉಪ್ಪಾರ
ಯಾವುದೇ ಒಂದು ದೊಡ್ಡ ರಥ ಸಾಗಬೇಕಾದರೆ ಅದರ ಗಾಲಿಗಳು ಬಹಳ ಮುಖ್ಯ. ಹಾಗೆಯೇ ಒಂದು ಸಮಾಜ ನಿಂತಿರುವುದೇ ಶ್ರಮಿಕ ವರ್ಗದ ಮೇಲೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಉಪ್ಪಾರ ಸಮುದಾಯ. ಇವರ ಮೂಲ ವೃತ್ತಿ ಮಣ್ಣು ಮತ್ತು ನೀರಿನಿಂದ ‘ಉಪ್ಪು’ ತಯಾರಿಸುವುದು ಹಾಗೂ ಗಾರೆ, ಕಟ್ಟಡ ನಿರ್ಮಾಣದ ಕೆಲಸ ಮಾಡುವುದಾಗಿತ್ತು. ಪ್ರಾಚೀನ ಕಾಲದಲ್ಲಿ ಕೆರೆ-ಕಟ್ಟೆಗಳನ್ನು ತೋಡುವುದು, ರಾಜರ ಕೋಟೆ-ಕೊತ್ತಲಗಳು ಹಾಗೂ ಬೃಹತ್ ದೇವಾಲಯಗಳನ್ನು ನಿರ್ಮಿಸುವಲ್ಲಿ ಈ ಶ್ರಮಿಕ ವರ್ಗದ ಕರಕುಶಲತೆ ಅಡಗಿದೆ. ನಾಡಿನ ಮೂಲಸೌಕರ್ಯಗಳನ್ನು ಭದ್ರವಾಗಿ ಕಟ್ಟುವಲ್ಲಿ ಇವರ ಕೊಡುಗೆ ಅಪಾರವಾಗಿದೆ.
ಹೊಲೆಯ
ಇನ್ನೂ, ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ, ಆದರೆ ಕಡೆಗಣನೆಗೆ ಒಳಗಾದ ಸಮುದಾಯಗಳೆಂದರೆ ‘ಹೊಲೆಯ’ ಮತ್ತು ‘ಚಲವಾದಿ’ ಹಾಗೂ ಇತರ ದಲಿತ ವರ್ಗಗಳು.
‘ಹೊಲೆಯ’ ಎಂಬ ಪದ ಬಂದಿದ್ದು ‘ಹೊಲ’ ದಿಂದ. ಹೊಲವನ್ನು ಉಳುವವನು. ಇತಿಹಾಸಕಾರರ ಪ್ರಕಾರ, ಪ್ರಾಚೀನ ಕಾಲದಲ್ಲಿ ಇವರೇ ಈ ನಾಡಿನ ಅಸಲಿ ಭೂಮಾಲೀಕರು ಮತ್ತು ಮೂಲ ನಿವಾಸಿಗಳು. ಗ್ರಾಮದ ರಕ್ಷಣೆ, ವ್ಯವಸಾಯ, ಮತ್ತು ಊರಿನ ಗಡಿ ಕಾಯುವ ಕಾವಲುಗಾರರಾಗಿ ಇವರು ಕೆಲಸ ಮಾಡುತ್ತಿದ್ದರು.
ಚಲವಾದಿ
ಇನ್ನು ‘ಚಲವಾದಿ’ ಸಮುದಾಯದ ಇತಿಹಾಸವಂತೂ ಅತ್ಯಂತ ರೋಚಕವಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದಲ್ಲಿ ಇವರು ಗ್ರಾಮದ ನ್ಯಾಯತೀರ್ಮಾನ ಮಾಡುವಾಗ ಪ್ರಮುಖ ಸಾಕ್ಷಿಗಳಾಗಿದ್ದವರು. ‘ಚಲವಾದಿ ಗಂಟೆ’ ಎಂಬುದು ಇವರ ಅಧಿಕಾರದ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿತ್ತು.
ಯಾವುದೇ ದೊಡ್ಡ ವ್ಯಾಪಾರ, ಸಂತೆ, ಅಥವಾ ಜಾತ್ರೆ ನಡೆಯಬೇಕಾದರೆ ಚಲವಾದಿ ಸಮುದಾಯದ ಮುಖಂಡರ ಒಪ್ಪಿಗೆ ಮತ್ತು ಅವರ ಗಂಟೆಯ ನಾದ ಇರಲೇಬೇಕಿತ್ತು. ವ್ಯಾಪಾರಿಗಳ ರಕ್ಷಣೆ ಮಾಡುವ ಜವಾಬ್ದಾರಿ ಇವರ ಮೇಲಿತ್ತು.
ಪ್ರತಿಯೊಂದು ಜಾತಿಯ ಹಿಂದೆ ಒಂದು ಅದ್ಭುತವಾದ ಇತಿಹಾಸವಿದೆ, ಒಂದು ಕಾಯಕವಿದೆ. ಯಾರು ಮೇಲಲ್ಲ, ಯಾರು ಕೀಳಲ್ಲ. ಕೃಷಿ ಮಾಡುವ ರೈತನಿಂದ ಹಿಡಿದು, ಊರು ಕಾಯುವ ಯೋಧನವರೆಗೆ, ಗುಡಿ ಕಟ್ಟುವ ಶಿಲ್ಪಿಯಿಂದ ಹಿಡಿದು ವ್ಯಾಪಾರ ಮಾಡುವ ಶೆಟ್ಟಿಯವರೆಗೆ ಎಲ್ಲರೂ ಒಂದೊಂದು ರೀತಿಯಲ್ಲಿ ಈ ನಾಡಿನ ಅಭಿವೃದ್ಧಿಗೆ ಬೆವರು ಸುರಿಸಿದ್ದಾರೆ.
ಇಂದು ಕಾಲ ಬದಲಾದಂತೆ ವೃತ್ತಿಗಳು ಬದಲಾಗಿವೆ. ಎಲ್ಲಾ ಜಾತಿ-ಸಮುದಾಯದವರು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.
ಜಾತಿ ಎನ್ನುವುದು ಕೇವಲ ನಮ್ಮ ಇತಿಹಾಸವನ್ನು, ನಮ್ಮ ಹಿರಿಯರು ಮಾಡಿದ ವೃತ್ತಿಯನ್ನು ನೆನಪಿಸುವ ಒಂದು ಗುರುತು ಮಾತ್ರವಾಗಬೇಕು ಹೊರತು, ನಮ್ಮೊಳಗೆ ಬಿರುಕು ಮೂಡಿಸುವ ಗೋಡೆಯಾಗಬಾರದು.
ಕೊನೆಯಲ್ಲಿ ನಾವೆಲ್ಲರೂ ‘ಕನ್ನಡಿಗರು’ ಮತ್ತು ಭಾರತೀಯರು ಅಷ್ಟೇ!
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಲೇಖನವನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹಾಗೇ, ಕಾಮೆಂಟ್ ಸೆಕ್ಷನ್ನಲ್ಲಿ ನೀವು ಯಾವ ಸಮುದಾಯದವರು ಅಂತ ನಮಗೆ ತಿಳಿಸಿ. ನಿಮ್ಮ ಜಾತಿಯ ಹೆಸರು ಈ ಲೇಖನದಲ್ಲಿ ಮಿಸ್ ಆಗಿದ್ದರೆ ಕಾಮೆಂಟ್ ನಲ್ಲಿ ತಿಳಿಸಿ.
ನಾವು ಅದರ ಇತಿಹಾಸವನ್ನು ಮುಂದಿನ ಲೇಖನದಲ್ಲಿ ತಿಳಿಸುತ್ತೇವೆ. ಮತ್ತೊಂದು ರೋಚಕ ಮಾಹಿತಿಯೊಂದಿಗೆ ಸಿಗೋಣ, ನಮಸ್ಕಾರ!
