Hanuman Jayanti Wishes in Kannada | ಹನುಮ ಜಯಂತಿಯ ಶುಭಾಶಯಗಳು

ನಮ್ಮ ಹನುಮಾನ್ ಜಯಂತಿ ಶುಭಾಶಯಗಳ (hanuman jayanti wishes in kannada) ಸಂಗ್ರಹಕ್ಕೆ ಸ್ವಾಗತ! 

Hanuman Jayanti Wishes in Kannada

ಈ ವರ್ಷ ಏಪ್ರಿಲ್ 23 ರಂದು ಹನುಮಾನ್ ಜಯಂತಿಯನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ, ಈ ಹಿಂದೂ ಹಬ್ಬದ ಸಾರವನ್ನು ಅರ್ಥಮಾಡಿಕೊಳ್ಳಲು ಇದು ಸೂಕ್ತ ಸಮಯ. ಹನುಮಾನ್ ಜಯಂತಿಯು ಹನುಮಂತ ಅಥವಾ ಮಾರುತಿ ಎಂದು ಕರೆಯಲ್ಪಡುವ, ಭಕ್ತಿ ಮತ್ತು ಶಕ್ತಿಗೆ ಹೆಸರುವಾಸಿಯಾದ ಹಿಂದೂ ಪುರಾಣಗಳಲ್ಲಿ ಪೂಜ್ಯ ವ್ಯಕ್ತಿಯಾದ ರಾಮ ಭಕ್ತ ದೇವರ ಹುಟ್ಟುಹಬ್ಬ. ಈ ವಿಶೇಷ ದಿನವು ಹಿಂದೂ ಚಂದ್ರನ ತಿಂಗಳ ಚೈತ್ರದಲ್ಲಿ ಶುಕ್ಲ ಪಕ್ಷದ ಹದಿನೈದನೆಯ ದಿನದಂದು (ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ) ಬರುತ್ತದೆ. 

ಮಹಾಕಾವ್ಯ ರಾಮಾಯಣದಲ್ಲಿ ಕೇಂದ್ರ ಪಾತ್ರವಾದ ಭಗವಾನ್ ಹನುಮಂತನು ಅಚಲ ನಿಷ್ಠೆ ಮತ್ತು ನಿಸ್ವಾರ್ಥತೆಯನ್ನು ಉದಾಹರಣೆ. ರಾಕ್ಷಸ ರಾಜ ರಾವಣನ ಹಿಡಿತದಿಂದ ರಾಮನ ಪತ್ನಿ ಸೀತೆಯನ್ನು ರಕ್ಷಿಸಲು ಅವರ ದಣಿವರಿಯದ ಪ್ರಯತ್ನಗಳಲ್ಲಿ ಪ್ರದರ್ಶಿಸಿದ ಭಗವಾನ್ ರಾಮನ ಮೇಲಿನ ಅವನ ಭಕ್ತಿಯು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.

ಹನುಮಾನ್ ಜಯಂತಿಯಂದು, ಹನುಮಾನ್ ದೇವರಿಗೆ ಸಮರ್ಪಿತವಾದ ದೇವಾಲಯಗಳಿಗೆ ಭಕ್ತರು ಸೇರುತ್ತಾರೆ, ಅಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಆಚರಣೆಗಳನ್ನು ಮಾಡಲಾಗುತ್ತದೆ. ಇದು ಉಪವಾಸ, ಪ್ರತಿಬಿಂಬ ಮತ್ತು ಶಕ್ತಿ ಮತ್ತು ರಕ್ಷಣೆಗಾಗಿ ಆಶೀರ್ವಾದ ಪಡೆಯುವ ಸಮಯ. ನಮ್ಮ ಹನುಮಾನ್ ಜಯಂತಿ ಶುಭಾಶಯಗಳ ಸಂಗ್ರಹವು ಈ ಸಂತೋಷದಾಯಕ ಸಂದರ್ಭಕ್ಕೆ ಸಂಬಂಧಿಸಿದ ಭಕ್ತಿ, ಕೃತಜ್ಞತೆ ಮತ್ತು ಗೌರವದ ಮನೋಭಾವವನ್ನು ತಿಳಿಸುವ ಗುರಿಯನ್ನು ಹೊಂದಿದೆ. 

ಪ್ರೀತಿಯ ವಾನರ ದೇವರ ಜನ್ಮದಿನವನ್ನು ಆಚರಿಸುವಾಗ ನಿಮ್ಮ ಪ್ರೀತಿಪಾತ್ರರೊಂದಿಗೆ ಈ ಉತ್ತಮ ಹನುಮಾನ್ ಜಯಂತಿ ಶುಭಾಶಯಗಳನ್ನು (hanuman jayanti shubhashayagalu in kannada) ಹಂಚಿಕೊಳ್ಳಿ.

ಹನುಮಾನ್ ಜಯಂತಿ ಶುಭಾಶಯಗಳು | Hanuman Jayanti Wishes in Kannada

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಭಗವಾನ್ ಆಂಜನೇಯ ಶಕ್ತಿ, ಭಕ್ತಿ, ಸಮರ್ಪಣೆಯ ಸಂಕೇತ. ಆತನ ಬದುಕು ಭಾರತೀಯ ಮೌಲ್ಯಗಳ ದೊಡ್ಡಭಾಗ. ಹನುಮನ ಆಶೀರ್ವಾದ ಸದಾ ತಮ್ಮ ಮೇಲಿರಲಿ. ಈ ಸಲ ಮನೆಯಲ್ಲೇ ಇದ್ದು ಹನುಮ ಜಯಂತಿಯನ್ನು ಆಚರಿಸೋಣ

 

ಹನುಮ ಜಯಂತಿ ಶುಭಾಶಯ..! 

ಪೂರೈಸಲಿ ನಮ್ಮೆಲ್ಲರ ಆಶಯ..!! 

ಭಗವಂತನ ಕೃಪೆಯಲ್ಲಿ ಇರಬೇಕು ಆಶ್ರಯ..!!! 

ನಮಗೆ ನಮ್ಮ ಮನಸ್ಸೆ ಎಂದಿಗೂ ಆತ್ಮೀಯ..!!!!

 

ಹನುಮ ಜಯಂತಿಯ ಶುಭಾಶಯಗಳು 

ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ವರಿಷ್ಟಂ ವಾತಾತ್ಮಜಂ ವಾನರಯೂತ ಮುಖ್ಯಂ ಶ್ರೀ ರಾಮಧೂತಂ ಶಿರಸಾ ನಮಾಮಿ.

 

ಹನುಮ ಜಯಂತಿ ಯ ಹಾರ್ದಿಕ ಶುಭಾಶಯಗಳು.

ಹೇ ಪವನ ತನಯ ಸಂಕಟ ಹರಣ ಮಂಗಳಮೂರುತಿ ಹೇ ಹನುಮಂತ .. ವಂದಿಸುವೇ ಮಾರುತಿ ನೆಲೆಯಾಗು ಹೃದಯದಲ್ಲಿ ಶ್ರೀರಾಮ ಲಷಮಣ ಸೀತಾ ಸಮೇತ….

 

ಹನುಮ ಜಯಂತಿ ಶುಭಾಶಯಗಳು. ಎಲ್ಲರಿಗು ಅ ಭಗವಂತನು ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ.

 

|| ಮನೋಜವಂ ಮಾರುತ ತುಲ್ಯ ವೇಗಂ 

ಜೀತೇಂದ್ರೀಯಂ ಬುದ್ಧಿಮತಾಂ ವರಿಷ್ಟಂ 

ವಾತಾತ್ಮಜಂ ವಾನರ ಯೂತ ಮುಖ್ಯಂ 

ಶ್ರೀ ರಾಮ ಧೂತಂ ಸಿರಸಾ ನಮಾಮಿ || 

||ಓಂ ಶ್ರೀ ವೀರಾಂಜನೇಯಂ ನಮಃ|| 

ಹನುಮ ಜಯಂತಿ ಶುಭಾಶಯ ಗಳು 🚩🚩🚩🙏🙏🙏

 

ಹನುಮ ಜಯಂತಿ ಶುಭಾಶಯ ಗಳು ಎಲ್ಲರಿಗು ಅ ಭಗವಂತನು ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ

 

ಕನ್ನಡ ನಾಡಿನ ಕುಲದೈವ ಹನುಮ ಜಯಂತಿ ಯ ಹಾರ್ದಿಕ ಶುಭಾಶಯ ಗಳು.

 

ಸರ್ವರಿಗೂ ಶ್ರೀ ರಾಮನ ಬಂಟ ಹನುಮ ಜಯಂತಿ ಶುಭಾಶಯಗಳು.

 

ಎಲ್ಲರಿಗು ಹನುಮ ಜಯಂತಿ ಯ ಶುಭಾಶಯಗಳು. ಹನುಮ ನಮ್ಮೆಲ್ಲರ ಆಪ್ತಮಿತ್ರ.ಕಷ್ಟ ಕಾಲದಲ್ಲಿ ಕರೆದಾಗ ಕಾಪಾಡುವ ಸಹ್ರುದಯಿ. ಓದಿ ಹನುಮ ನ ಕವನ. ಹ- ಹಂದರ ಹಾಕಿರುವೆ ವೀಳೆದೆಲೆಯ, ‌ ನನ್ನ ಮನದ ಗುಡಿಯಲ್ಲಿ. ನು- ನಂದಾದೀಪ ಹಚ್ಚಿರುವೆ,ಭಕ್ತಿ ಎಂಬ ಎಣ್ಣಿ ಯಲಿ. ಮ- ಮಂಟಪ ಕಟ್ಟಿ ರುವೆ, ನಿನ್ನ ನೆನೆಯಲು. ಮನವೆಂಬ ಸಿಂಹಾಸನದ ಲಿ ನೀನೆಲಸು ನಿನ್ನೊಳಗಿನ ರಾಮಸೀತರು ನಮ್ಮ ವರೇ ತಾನೇ ಹನುಮ. ಹಣೆಬರಹ ಬದಲಾಯಿಸು, ಹೊಸ ಬೆಳಕು ಮೂಡಿಸು,ನಮ್ಮ ಜೀವನದ ಲಿ, ಹಳೆನೀರು ಹೋಗಿ ಹೊಸ ನೀರು ಬಂದು ಶುದ್ಧ ವಾದಂತೆ, ಕಷ್ಟ ಗಳನ್ನೆಲ್ಲಾ ತೊಳೆದು ಸುಂದರ ನೆಮ್ಮದಿಯ ಜೀವನ ಕೊಡು ಎಲ್ಲರಿಗೂ ಹನುಮ.

 

ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು ಸರ್ವ ಜನತೆಗೆ ಹನುಮನ ಆಶೀರ್ವಾದ ಇರಲಿ..! 

 

ಶ್ರೀ ಹನುಮದ್ ಜಯಂತಿ. ಚೈತ್ರ ಶುದ್ಧ ಪೂರ್ಣಿಮಾ. ಬಲು ಬಲವಂತ. ಅತಿ ಧೀಮಂತ. ಶ್ರೀರಾಮನ ನಿಜ ದೂತ. ಶ್ರೀರಾಮ ಈಶ. ಹನುಮನು ಶ್ರೀರಾಮನ ದಾಸ. ಹನುಮನ ಮತವೆ ಹರಿಯಾ ಮತವು, ಹನುಮನು ಒಲಿದರೆ ಹರಿತಾನೊಲಿವನು. ಸರ್ವೋತ್ತಮನಾದ ಶ್ರೀಹರಿಯ ಅನುಗ್ರಹ ಪಡೆಯಲು ಜೀವೋತ್ತಮರಾದ ಪ್ರಾಣಿಗಳ ಪ್ರಾಣರು ಶ್ರೀ ವಾಯುದೇವರ ಹಾಗೂ ಅವತಾರ ರೂಪಗಳಾದ ಹನುಮ-ಭೀಮ-ಮಧ್ವರಾಯ ಪಾದಪದ್ಮಗಳಲ್ಲಿ ಸೇವೆಯನ್ನು ‌ಮಾಡುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ಜೀವ ಇರುವವರೆಗೂ ಜೀವೋತ್ತಮರ ಮೂಖೇನ ಸರ್ವೋತ್ತಮನ ಭಜಿಸುತ ಜೀವಿಸೋಣ. ಜೈ ಹನುಮಾನ್. ಜೈ ಶ್ರೀರಾಮ. ಹನುಮ ಜಯ೦ತಿ ಶುಭಾಶಯ ಗಳು 

 

ನಂಬಿದ ಭಕ್ತರನ್ನು ಯುಗ ಯುಗಗಳಿಂದ ಕಾಪಾಡುತ್ತಿರುವ ಶ್ರೀ ಹನುಮಂತನ ಆಶೀರ್ವಾದದಿಂದ ಎಲ್ಲರಿಗೂ ಸನ್ಮಂಗಳವಾಗಲಿ.🙏🏿 ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು. 

 

ಎಲ್ಲಿ ರಾಮನು ಅಲ್ಲೆ ಹನುಮನು ಎಲ್ಲಿ ಹನುಮನು ಅಲ್ಲಿರಾಮನು ರಾಮನಭಂಟ ಹನುಮ ಶುಭರಾತ್ರಿ ನಮಸ್ತೆ ಸ್ನೇಹಿತರೆ ನಿಮಗೇಲ್ಲ ಹನುಮ ಜಯಂತಿ ಯ ಶುಭಾಶಯಗಳು.

 

ಜೈ ಶ್ರೀ ರಾಮ್, ಎಲ್ಲರಿಗೂ ಶ್ರೀ ಹನುಮ ಜಯಂತಿ ಶುಭಾಶಯಗಳು 🙏

 

ಕೇಸರಿ ನಂದನ, ಪವನಸುತ, ಮಹಾಕಾಯ ವೀರ, ವಜ್ರದೇಹಿ, ಭೂತ ಪ್ರೇತಗಳ ಒಡೆದೋಡಿಸಿದ ರುದ್ರವತಾರ ನಮ್ಮ ಹನುಮಂತ🙏ಇದೆಲ್ಲದನ್ನು ಮೀರಿದ ಮುಖ್ಯ ಪ್ರಾಣ ಶ್ರೀ ರಾಮನ ಭಂಟ❣️ ವೀರಾಂಜನೆಯ ನಮ್ಮ ಹನುಮನ ಪಾದಕ್ಕೆ ಶಿರಸಾ ನಮಾಮಿ🙏 ಜೈ ಹನುಮಾನ್

ಹನುಮ ಜಯಂತಿ ಶುಭಾಶಯಗಳು💐🙏

 

ಶ್ರದ್ಧೆ, ಭಕ್ತಿ ಧೈರ್ಯದ ಪ್ರತಿರೂಪ, ಶ್ರೀರಾಮನ ಪರಮಭಕ್ತ, ಆರಾಧ್ಯ ದೈವ ಅಂಜನಿ ಪುತ್ರ ಹನುಮ ಜಯಂತಿ ಇಂದು. ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.🙏🙏

 

ಹನುಮದ್ ವೃತ, ಮಾರ್ಗಶಿರ ಮಾಸದ ತ್ರಯೋದಶಿಯಾದ ಇಂದು ಹನುಮರೂಪಿಯಾದ  ಶ್ರೀ ವಾಯುದೇವನನ್ನು ಸ್ಮರಿಸಿ ಆರಾಧಿಸುವ ಪಾವನ ಪುಣ್ಯ ಪರ್ವಕಾಲ. ಶ್ರೀ ರಾಮಭಕ್ತ, ಜೀವೋತ್ತಮನ ಅವತಾರ, ಹನುಮನ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾಥನೆ. ಜೈ ಭಜರಂಗಿ

 

ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

 

ಶ್ರೀರಾಮಚಂದ್ರ ದೇವರ ಪರಮಭಕ್ತರಾದ ಶ್ರೀ ಹನುಮ ದೇವರು ಭಕ್ತಿ, ಶ್ರದ್ಧೆ, ಧೈರ್ಯ ಮತ್ತು ಅಚಲತೆಯ ಪ್ರತೀಕ. ಆ ವಾಯುಪುತ್ರನ ತತ್ವಾದರ್ಶಗಳೇ ನಮಗೆ ಆದರ್ಶ ಮತ್ತು ದಾರಿದೀಪ. ಆ ಮಹಾಮಹಿಮನ ಕರುಣೆ, ಕೃಪೆ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.

Hanuman Jayanti Images in Kannada

ಈ ಹನುಮಾನ್ ಜಯಂತಿ ಹೃತ್ಪೂರ್ವಕ ಸಂದೇಶಗಳು (hanuman jayanti wishes in kannada), ನಿಮ್ಮ ಆಚರಣೆಗಳಿಗೆ ಸಂತೋಷ ಮತ್ತು ಆಶೀರ್ವಾದವನ್ನು ತಂದಿವೆ ಎಂದು ನಾವು ಭಾವಿಸುತ್ತೇವೆ. ಭಗವಾನ್ ಹನುಮಂತನು ಮೂರ್ತಿವೆತ್ತಿರುವ ಭಕ್ತಿ ಮತ್ತು ಶಕ್ತಿಯ ಚೈತನ್ಯವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರನ್ನು ವರ್ಷಪೂರ್ತಿ ಪ್ರೇರೇಪಿಸಲಿ. ಹನುಮ ಜಯಂತಿಯ ಬೋಧನೆಗಳನ್ನು ನಮ್ಮೊಂದಿಗೆ ಕೊಂಡೊಯ್ಯೋಣ. ನಮ್ಮ ಜೀವನದಲ್ಲಿ ಪ್ರೀತಿ, ದಯೆ ಮತ್ತು ಧೈರ್ಯವನ್ನು ಹರಡೋಣ. ನಿಮ್ಮೆಲ್ಲರಿಗೂ ಶಾಂತಿ, ಸಮೃದ್ಧಿಯಿಂದ ತುಂಬಿದ ಹನುಮಾನ್ ಜಯಂತಿಯ ಶುಭಾಶಯಗಳು. ಜೈ ಹನುಮಾನ್!

1 Comment

Leave a Reply

Your email address will not be published. Required fields are marked *