ಮುರಿದು ಹೋದ ಅಥವಾ ಮುನಿಸಿಕೊಂಡ ಗಂಡನಿಗಾಗಿ quotesಗಳನ್ನು ಹುಡುಕುತ್ತಿದ್ದೀರೇ? ಹಾಗಿದ್ದರೆ ಈ ಪತ್ನಿಯನ್ನು ನಿರ್ಲಕ್ಷಿಸಿದ ಪತಿ ಉಲ್ಲೇಖಗಳ (husband neglecting wife quotes in kannada) ಸಂಗ್ರಹ ನಿಮಗಾಗಿ.
ಗಂಡ ಹೆಂಡತಿ ಸಂಬಂಧ ಬಾಳಸಂಗಾತಿಗಳ ನಡುವೆ ನಂಬಿಕೆ ಸಂಬಂಧದ ಬಲವಾದ ನೆಲೆಯಾಗಿದೆ. ಯಾವುದೇ ಸಂದೇಹ ಅಥವಾ ಅನಿಶ್ಚಿತತೆಯನ್ನು ಚರ್ಚಿಸಿ ನಿವಾರಣೆ ಮಾಡುವುದು ಮುಖ್ಯ. ಪ್ರೀತಿ ಮಾತ್ರ ಮಾತಿನಲ್ಲಿ ಮಾತ್ರವಲ್ಲ, ವರ್ತನೆಗಳಲ್ಲಿ ಹಾಗೂ ಕಾಳಜಿಯ ಮೂಲಕ ವ್ಯಕ್ತವಾಗಬೇಕು. ಸಣ್ಣ-ಸಣ್ಣ ವಿಷಯಗಳಲ್ಲಿ ಕೂಡ ಕಾಳಜಿಯನ್ನು ತೋರಿಸೋದು ಸಂಬಂಧವನ್ನು ಬಲಪಡಿಸುತ್ತದೆ. ಗಂಡ-ಹೆಂಡತಿಯರು ಜೀವನದ ಗುರಿಗಳನ್ನು ಹೊಂದಿಕೊಂಡು, ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಾಗ ಸಂಬಂಧ ಹೆಚ್ಚು ಬಲವಾಗುತ್ತದೆ. ಜೀವನದ ಸಣ್ಣ-ಸಣ್ಣ ಸಂತೋಷದ ಕ್ಷಣಗಳನ್ನು ಒಟ್ಟಿಗೆ ಸಂಭ್ರಮಿಸಲು ಹಾಸ್ಯಭಾವ ಇಟ್ಟುಕೊಳ್ಳುವುದು ಸಂಬಂಧವನ್ನು ಸುಂದರವಾಗಿಸುತ್ತದೆ.
ನಿಮ್ಮ ಗಂಡ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ ಅಥವಾ ಪ್ರೀತಿಯನ್ನು ಕಡಿಮೆ ತೋರಿಸುತ್ತಿದ್ದಾರೆ ಈ ಕೆಳಗಿನ ಹೆಂಡತಿಯನ್ನು ನಿರ್ಲಕ್ಷಿಸಿದ ಗಂಡ ಉಲ್ಲೇಖಗಳು (husband hurting wife quotes) ನಿಮಗಾಗಿ.
Table of Contents
Husband Neglecting Wife Quotes in Kannada | ಹೆಂಡತಿಯನ್ನು ನಿರ್ಲಕ್ಷಿಸಿದ ಪತಿ ಉಲ್ಲೇಖಗಳು
ಗಂಡನಾದವನು ಹೆಂಡತಿಯ ಆಸೆ ಕನಸುಗಳಿಗೆ ಎಷ್ಟು ಬೆಲೆ ಕೊಡುತಾನೋ ಅಷ್ಟೇ ಬೆಲೆ ಹೆಂಡತಿಯಾದವಳು ಗಂಡನ ಆಸೆ ಕನಸುಗಳಿಗೆ ಬೆಲೆ ಕೊಡಬೇಕು. ಆಗಲೇ ಅವರ ಸಂಬಂಧ ಗಟ್ಟಯಾಗಿ ಜೀವನ ಪರ್ಯಂತ ಸುಖವಾಗಿ ಇರುತ್ತದೆ.
ಗಂಡ ಹೆಂಡತಿ ಮಧ್ಯೆ ಮಾತು ಕಡಿಮೆ ಆದ್ರೆ ಸಂಬಂಧ ಒಂಟಿ ಆಗ್ತಾ ಹೋಗುತ್ತೆ.
ಗಂಡ-ಹೆಂಡತಿಯರು ಜೀವನದ ಗುರಿಗಳನ್ನು ಹೊಂದಿಕೊಂಡು, ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಾಗ ಸಂಬಂಧ ಹೆಚ್ಚು ಬಲವಾಗುತ್ತದೆ.
ಗಂಡ ಹೆಂಡತಿ ಸಂಬಂಧ ಅನ್ನೋದು ಆ ಬ್ರಹ್ಮ ಬೆಸೆದ ಬ್ರಹ್ಮಗಂಟು.ಒಬ್ಬರಿಗೊಬ್ರು ಅರಿತು ಬೆರೆತು ನಡೆದಾಗ್ಲೆ ಜನ್ಮ ಸಾರ್ಥಕ ಆಗೋದು..
ಗಂಡ ಹೆಂಡತಿ ಸಂಬಂಧ ಹೇಗೆ ಅಂದ್ರೆ……. ಗಂಡ ಹೆಂಡತಿ ಸಂಬಂಧ ಹೇಗೆ ಇರ್ಬೇಕು ಅಂದ್ರೆ…… ಹಾಯಾಗಿ ಮಲಗಿರು ನೀನು ರಾಣಿಯ ಹಾಗೆ……….ಎಲ್ಲಾ ಕೆಲಸ ಮಾಡಿ ಮುಗಿಸುವೆ…..ನೀನೇ ಆಗ ಮೆಚ್ಚಿಕೊಳ್ಳುವೆ.
ಅದೆಷ್ಟೆ ವಿರಸವಿದ್ದರೂ ಗಂಡ ಹೆಂಡತಿ ಸಂಬಂಧಕ್ಕಿಂತ ಶಾಶ್ವತ ಸಂಬಂಧ ಯಾವುದು ಇಲ್ಲ. ನಮ್ಮನ್ನು ಈ ಜಗತ್ತಿನಲ್ಲಿ ಅತಿ ಹತ್ತಿರದಿಂದ ನೋಡಿರುವಂತ ಸಂಬಂಧವೇ ದಾಂಪತ್ಯ. ನಮ್ಮ ಸೋಲು ಗೆಲುವು ನೋವು ನಲಿವಿನ ನೇರ ಹಂಚಿಕೆಯ ಪಾಲುದಾರರು ದಂಪತಿಗಳು.
ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ಸಂಬಂಧ ಮುರಿದು ಬಿದ್ದಾಗ, ಮಾನಸಿಕ ನೋವು ಎದುರಾದಾಗ, ಮಕ್ಕಳು ಹೆತ್ತವರು ಗಂಡ-ಹೆಂಡತಿ ಸಂಬಂಧಗಳಲ್ಲಿ ತೊಡಕುಂಟಾದಾಗ ನೋವು ಕಾಡುವುದು ಸಹಜ..!! ಅಂತಹ ಸನ್ನಿವೇಶಗಳಲ್ಲಿ ಪರಿಸ್ಥಿತಿಗೆ ಬಲವಂತವಾಗಿ ಒಗ್ಗಿ ಕೊಳ್ಳಬೇಕು. ನೋವನ್ನು ಮರೆತು ನಮ್ಮನ್ನು ನಾವು ಪ್ರೀತಿಸಿ ಸ್ವಂತ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.
ಹೆಂಡತಿಗೆ ಸಮಾನ ಮಿತ್ರನಿಲ್ಲ, ದಯೆಗೆ ಸಮಾನ ಧರ್ಮವಿಲ್ಲ, ಸ್ವಾತಂತ್ರಕ್ಕೆ ಸಮಾನ ಸುಖವಿಲ್ಲ, ಗೃಹಸ್ಥಾಶ್ರಮಕ್ಕಿಂತ ಸಮಾನ ಆಶ್ರಮವಿಲ್ಲ ಹೆಂಡತಿಗೆ ಸಮಾನ ಮಿತ್ರನಿಲ್ಲ, ದಯೆಗೆ ಸಮಾನ ಧರ್ಮವಿಲ್ಲ, ಸ್ವಾತಂತ್ರಕ್ಕೆ ಸಮಾನ ಸುಖವಿಲ್ಲ, ಗೃಹಸ್ಥಾಶ್ರಮಕ್ಕಿಂತ ಸಮಾನ ಆಶ್ರಮವಿಲ್ಲ
ಹೆಣ್ಣು ಗಂಡಿನ ಪರಿಸ್ಥಿತಿ, ಮನೆಸ್ಥಿತಿ, ಮನಸ್ಥಿತಿ, ಆರ್ಥಿಕಸ್ಥಿತಿ ಎಲ್ಲವನ್ನು ಅರ್ಥೈಸಿಕೊಂಡು ಜೊತೆಯಾಗಿರುತ್ತಾಳೆ…. ಗಂಡು ಕೇವಲ ಅವಳ ಮನಸ್ಥಿತಿಯೊಂದನ್ನು ಅರ್ಥಮಾಡಿಕೊಂಡರೆ ಸಾಕು ಅವಳ ಜೀವನ ಸುಖಮಯವಾಗಿರುತ್ತದೆ….
Husband Hurting Wife Quotes | ಪತ್ನಿಯನ್ನು ನೋಯಿಸಿದ ಪತಿ ಉಲ್ಲೇಖಗಳು
ಸಂತೋಷದ ದಾಂಪತ್ಯಕ್ಕೆ ಒಂದೇ ವ್ಯಕ್ತಿಯೊಂದಿಗೆ ಹಲವು ಬಾರಿ ಪ್ರೀತಿಯಲ್ಲಿ ಬೀಳುವ ಅಗತ್ಯವಿದೆ.
ಗಂಡ ಹೆಂಡತಿ ಸಂಬಂಧ ಶಾಶ್ವತವಾಗಿ ಗಟ್ಟಿ ಇರಬೇಕೆಂದರೆ…. ಇಬ್ಬರೂ ಮನಸ್ಸಲ್ಲಿರೊ ಅನುಮಾನ ಎಂಬ ಕಪ್ಪುಪಟ್ಟಿಯನ್ನ ತೆಗಿಬೇಕು…. ಜಗಳದಲ್ಲಿ ಅವರಿಬ್ಬರಿಗೂ ಸೋಲೋ ಗುಣ ಇರಬೇಕು…. ಒಬ್ಬರನ್ನೊಬ್ಬರ ಬಿಟ್ಟಕೊಡದಷ್ಟು ನಂಬಿಕೆ ಅಂತೂ ಇರ್ಲೇಬೇಕು….
ಗಂಡ ಹೆಂಡತಿ ಎಂದಾಗ ಮನಸ್ತಪಗಳು ಸಹಜ. ಯಾರಿಂದಲೇ ತಪ್ಪಾದರೂ, ಕ್ಷಮಿಸಿ ತಿದ್ದಿಕೊಂಡು ಜೊತೆ ಸಾಗಬೇಕು…. ಜೀವನದ ಕಟ್ಟಕಡೆಯಲ್ಲಿ ಜೊತೆಯಾಗಿ ಉಳಿಯುವುದು ಗಂಡ ಹೆಂಡತಿಯೇ.. ವಿನಃ ಯಾವ ತಂದೆ-ತಾಯಿ, ಮಕ್ಕಳು, ಸಹೋದರ/ರಿಯರು, ಬಂಧುಮಿತ್ರರಲ್ಲ, ಸಮಾಜವಂತೂ ಮೊದಲೇ ಅಲ್ಲ…. ಜಗತ್ತಿನ ಅತೀ ಅದ್ಭುತ ಬಂಧ-ಅನುಬಂಧ ಗಂಡ-ಹೆಂಡತಿ ಸಂಬಂಧ.
ಗಂಡ ಮತ್ತು ಹೆಂಡತಿ ನಡುವಿನ ಸಂಬಂಧ ಹೇಗಿರಬೇಕೆಂದರೆ ಮೀನು ಮತ್ತು ನೀರಿನ ಹಾಗಿರಬೇಕೇ ಹೊರತು ಮೀನು ಮತ್ತು ಮೀನುಗಾರನ ಹಾಗಲ್ಲ.
ಮಕ್ಕಳ ಬದುಕಿನ ಕೊನೆಯವರೆಗೆ ತಂದೆ ತಾಯಿ ಇರುವುದಿಲ್ಲ ಆದ್ದರಿಂದ ಗಂಡ ಹೆಂಡತಿ ಎಂಬ ಪವಿತ್ರ ಸಂಬಂಧ ಕರುಣಿಸಿದ್ದಾನೆ ಇದುವೆ ಜೀವನ ಚಕ್ರ.
ಸಂಬಂಧ ಗಳು ಹೇಗಾಗಿದೆ ಅಂದ್ರೆ.. ಮೊದಲೆಲ್ಲ ಒಳ್ಳೆ ಗಂಡ, ಒಳ್ಳೆ ಹೆಂಡತಿ ಸಿಗಲಪ್ಪ…ಅಂತಿದ್ರು ಆಮೇಲೆ ಮದುವೆಗೆ ಮುಂಚೆ ಏನಾದ್ರು ಆಗಿರಲಿ ಮದುವೆ ಆದ ಮೇಲೆ ಸರಿಗಿದ್ರೆ ಸಾಕು… ಈಗ ಎಲ್ಲಿ ಎಂಗಾದ್ರು ಇರು ಮನೆಲಿ ಮಾತ್ರ ಗಂಡನಿಗೆ ಹೆಂಡತಿ ಆಗಿರು..ಹೆಂಡತಿ ಗೆ ಗಂಡ ಆಗಿರು ಅಷ್ಟೇ.. ಕಾಲ ಚಕ್ರ..
ಪ್ರೀತಿಯ ವಿಷಯ.
ಗಂಡ ಹೆಂಡತಿ ಮಧ್ಯ ಮೂರನೇ ವ್ಯಕ್ತಿ ಬಂದಾಗ ಸಂಬಂಧ ಹಾಳಾಗುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮೂರನೇ ವ್ಯಕ್ತಿ ಮಾತನ್ನು ನಂಬಿ ಪ್ರಾಣ ಅಂತ ಪ್ರೀತೋ ವ್ಯಕ್ತಿ ಮೇಲೆ ನಂಬಿಕೆ ಕಳೆದುಕೊಂಡಾಗ ಎಷ್ಟೇ ಸುಂದರವಾದ ಸಂಸಾರ ಇದ್ರುನು ಹಾಳಾಗುತ್ತದೆ ಎನ್ನುವುದು ಅಷ್ಟೇ ಸತ್ಯ..
ತಾಯಿ ಹಾಗೂ ಮಕ್ಕಳ ಸಂಬಂಧದಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ.. ಹಾಗೆ ತಂದೆ ಮತ್ತು ಮಕ್ಕಳ ಸಂಬಂಧ ಕೂಡ.. ಗಂಡ ಹೆಂಡತಿ ಸಂಭಂಧದಲ್ಲೂ ಸ್ವಾರ್ಥ ಇರುವುದಿಲ್ಲ.. ಸ್ವಾರ್ಥಕ್ಕಾಗಿ ಜೊತೆಗಿರುವವರು ಯಾವತ್ತೂ ಸಂಬಂಧಿ ಅಲ್ಲ..
ಒಂದು ಹೆಣ್ಣಗೇ ಏಷ್ಟೆ ನೋವು ಆದರು ಗಂಡನ ಜೊತೆ ಇರುತ್ತಾಳೆ. ಅದೇ ಗಂಡ ಹೆಂಡತಿಗೆ ನೋವು ಕೊಟ್ಟರೆ ಆ ಹೆಣ್ಣು ಜೀವಂತ ಶವ ಆಗಿರ್ತಾಳೆ.
Husband and Wife Misunderstanding Quotes | ಗಂಡ ಹೆಂಡತಿ ಮನಸ್ತಾಪ ಉಲ್ಲೇಖಗಳು
ರಕ್ತ ಹಂಚಿಕೊಂಡು ಹುಟ್ಟಿದ ಮಗನ ಎಂಜಲು ತಟ್ಟೆ ತೊಳೆಯುವ ತಾಯಿ ದೇವತೆಯಾದರೆ.. ಯಾವ ರಕ್ತ ಸಂಬಂಧವಿಲ್ಲದೆ “ತಾಳಿ” ಅನ್ನುವ ಬಂಧಕ್ಕೆ ಶರಣಾಗಿ ನಮ್ಮ ಮನೆಗೆ ಬಂದು ನಾವು ತಿಂದ ಎಂಜಲು ತಟ್ಟೆ ತೊಳೆಯುವ ಹೆಂಡತಿ ಕೂಡಾ ದೇವತೆಯೆ….!
ಗಂಡ – ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು ಹುಟ್ಟು – ಸಾವಿನ ನಂಟು…..ಹೃದಯ ಮಿಡಿವವರೆಗೆ , ಪ್ರೇಮದ ತುತ್ತತುದಿಯವರೆಗೆ , ಬಾಳಿನ ಗುಟ್ಟು ತಿಳಿಯವರೆಗೆ..
ರಕ್ತ ಸಂಬಂಧ ಇಲ್ಲದೆ ಹೋದ್ರು ನಮಗಾಗಿ ಜೀವ ಕೊಡುವ ಜಗತ್ತಿನ ಏಕೈಕ ಜೀವ, ಹೆಂಡತಿ.
ಮೂರು ಗಂಟು ಹಾಕಿ, ಗಂಡನ ದರ್ಪ ತೋರಿಸುವುದು ಗಂಡನ ಕರ್ತವ್ಯವಲ್ಲ ತನ್ನನ್ನೇ ನಂಬಿ ಬಂದ ಹೆಣ್ಣು ತನ್ನ ತವರನ್ನು ನೆನೆಯದ ಹಾಗೆ ಪ್ರೀತಿ ತೋರಿಸುವುದು ಗಂಡನ ಕರ್ತವ್ಯ…!! ನಿಜಾ ಅಲ್ವಾ….
ತಾನು ದುಡಿದು ಹೆಂಡತಿಯನ್ನು ಸಾಕುವವನು ಗಂಡ ಇದು ಸಂಪ್ರದಾಯ. ಗಂಡ ಹೆಂಡತಿ ಇಬ್ಬರೂ ದುಡಿದು ಸಂಸಾರ ನಡೆಸುವುದು ಸಮಾನತೆ ಮತ್ತು ಸ್ವಾತಂತ್ರ್ಯ. ಹೆಂಡತಿ ದುಡಿದಿದ್ದನ್ನು ಅನುಭವಿಸಿ ಸೋಮಾರಿಯಾಗಿ ತಿರುಗುವನು ಗಂಡನಲ್ಲ ದಂಡಪಿಂಡ.
ಈ ಜಗತ್ತಿನಲ್ಲಿ ಅದೃಷ್ಟವಂತ ಪ್ರೇಮಿಗಳು ಯಾರೆಂದರೆ.! ಕಷ್ಟಕಾಲದಲ್ಲೂ ಗಂಡನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ..!! ಸಾವಿರ ಸಮಸ್ಯೆಗಳು ಇದ್ದರೂ ಹೆಂಡತಿಯನ್ನು ಬಿಟ್ಟು ಕೊಡದ ಗಂಡ…!!!
ಗಂಡ ಹೆಂಡತಿ ಪ್ರೀತಿ ಮಂಚ ಹಂಚಿಕೊಳ್ಳುವುದು ಮಾತ್ರವಲ್ಲ… ಬದುಕಿನ ಏಳು ಬೀಳಿನಲ್ಲಿ ಜೊತೆಗಿರುವುದು.
ಗಂಡ ಹೆಂಡತಿ vs ಇಡ್ಲಿ ಮತ್ತು ಚಟ್ನಿ or ಸಾಂಬಾರ್ ಸಂಬಂಧಗಳು ಬಗ್ಗೆ ಸಂಬಂಧಗಳು ಒಂದು ತರ ಇಡ್ಲಿ ಚಟ್ನಿ ಸಾಂಬಾರ್ ತರ ಇಡ್ಲಿ ಮತ್ತು ಚಟ್ನಿ or ಸಾಂಬಾರ್ individually ಎಷ್ಟೇ ಚೆನ್ನಾಗಿದ್ದರೂ ಎಲ್ಲಾ ಸೇರಿದಾಗ ಎನೂ ರುಚಿ ಬರುತ್ತದೆ ಅನ್ನೋದು ಮುಖ್ಯ ಅಲ್ಲವೇ ಒಂದಕ್ಕೊಂದು ಕಾಂಬಿನೇಷನ್ ಬಂದರೆ awesome Brakefast, ಸಂಬಂಧಗಳು ಹಾಗೆ ಬಹಳ ದಿನಗಳ ಕಾಲ ಬಾಳಿಕೆ ಬರುತ್ತವೆ ಕಾಂಬಿನೇಷನ್ ಬರಲಿಲ್ಲ ಅಂದ್ರೆ ಒಂದೂ ತಿನ್ನಬೇಕು ಇಲ್ಲಾ ಎಸೆಯಬೇಕು ಕೆಲವರು ಎನೂ ಒಂದು ಸಿಕ್ಕಿತಲ್ಲ ಬಿಡು ಅಂತ ಜೀವನದ ಬದುಕನ್ನು ತಳ್ಳಿಬಿಡುತ್ತಾರೆ ಕೆಲವರು ಒಬ್ಬರಿಗೊಬ್ಬರು ನೀನು ಸರಿ ಇಲ್ಲ ಬೈದುಕೋಂಡು ಉಪ್ಪು ಇಲ್ಲ ಕಾರ ಇಲ್ಲ.
ನನ್ನ ಸರ್ವಸ್ವವೂ ನೀನೆ ಎಂದು ನಂಬಿ ನಿನ್ನೊಂದಿಗೆ ಸಪ್ತಪದಿ ತುಳಿಯುವವಳು “ಹೆಂಡತಿ” ಆ ನಂಬಿಕೆಯನ್ನ ಹುಸಿಗೊಳಿಸದೆ ನಿನ್ನ ಪಡೆದ ನಾನು ಅದೃಷ್ಟವಂತ ಎಂದು ಗರ್ವದಿಂದ ಹೇಳಿಕೊಳ್ಳುವ ಹಾಗೆ ಮಾಡುವವನು “ಗಂಡ”
ಹೆಂಡತಿಯಾದವಳಿಗೆ ಆಸೆ ಇರಬೇಕು ಆದ್ರೆ ಗಂಡನ ಶಕ್ತಿ ಮೀರಿದ ಅತಿಆಸೆ ಇರಬಾರದು… ಗಂಡನಿಗೆ ಅಹಂಕಾರ ಇರಬೇಕು ನಿಜ ಆದ್ರೆ ಹೆಂಡತಿನ ನೋವು ಮಾಡೋ ಅಷ್ಟು ದುರಹಂಕಾರ ಇರಬಾರದು… ಗಂಡ-ಹೆಂಡತಿ ಇಬ್ಬರಿಗೂ ಸ್ವಾಭಿಮಾನ ಇರಬೇಕು ಹಾಗೇ ಒಬ್ಬರಿಗೊಬ್ಬರು ತಮ್ಮವರೆಂಬ ಅಭಿಮಾನವೂ ಇರಬೇಕು……
ಗಂಡ ಹೆಂಡತಿ ಪ್ರೀತಿ…. ದುಡಿಯುವನು ದಿನ ಪೂರ್ತಿ ದಣಿವಾದರು ನಗುವನು ನಗಿಸುವನು ತನ್ನವರ ನಗುವನೇ ಬಯಸುವನು ಕೊನೆಗೊಮ್ಮೆ ಮಗುವಂತೆ ಮೌನವಾಗಿ ಹಂಬಲಿಸುವನು ಪ್ರೀತಿಗಾಗಿ ಮಗುವಾಗುವನು ಮಡದಿಯ ಮಡಿಲಲ್ಲಿ..!!
ನಗುವಳು ನೋವಲ್ಲೂ, ತನ್ನವರ ನಗುವಲ್ಲೇ ತನ್ನ ನೋವ ಮರೆವಳು, ಅಪೇಕ್ಷೆ ಮಾಡದೆ ಆಸರೆಯಾಗಿ ನಿಲ್ಲುವಳು, ಗಂಡನನ್ನೇ ದೇವರೆನ್ನುವಳು ಅವನ ಮಗುವಾಗಿಸುವಳು ತನ್ನ ಮಡಿಲಲ್ಲಿ ತಾಯಾಗಿ ನಿಲ್ಲುವಳು ಅವನ ಮನದಲ್ಲಿ..!!
ಇಬ್ಬರ ನಡುವೆ ಮೂರನೇ ವ್ಯಕ್ತಿಯಾಗಿ ಹೋಗುವುದು ಅನೈತಿಕ ಸಂಬಂಧ..!! ಆದ್ರೆ ಗಂಡನಿದ್ದು ಗಂಡನಾ ಪ್ರೀತಿ ಹೆಂಡತಿ ಇದ್ದು ಹೆಂಡತಿ ಪ್ರೀತಿ ಸಿಗದವರು ಈ ರೀತಿ ಹಾದಿ ತಪ್ಪುತ್ತಾರೆ. ಪರಸ್ಪರ ಅರ್ಥೈಸಿಕೊಂಡು ದೇಹಕ್ಕೂ ಮನಸಿಗೂ ಸುಖ ಕೊಡುವವರಿದ್ದರೆ ಯಾರೂ ಅನೈತಿಕತೆಯ ದಾರಿ ಹಿಡಿಯಲ್ಲ….!!
ಸಂಸಾರ ಅರಿತು ಬಾಳಿದರೆ ಸಸಾರ. ಗಂಡ ದುರ್ಮಾರ್ಗಿಯಾದರೆ ಅಬ್ಬಬ್ಬಾ ಅಂದರೆ ಒಂದು ಸಂಸಾರ ನಾಶವಾಗಬಹುದು. ಆದರೆ ಅದೇ ಹೆಂಡತಿ ದುರ್ಮಾರ್ಗಿಯಾದರೆ ಒಂದು ಕುಲವೇ ನಾಶಹೊಂದುತ್ತದೆ. ಗಂಡ ಮಾಡಿದ ಪುಣ್ಯ ಹೆಂಡತಿಗೆ ಸಮ ಪಾಲು.ಹೆಂಡತಿ ಮಾಡಿದ ಪುಣ್ಯ ಗಂಡನಿಗಿಲ್ಲ. ಗಂಡ ಮಾಡಿದ ಪಾಪ ಹೆಂಡತಿಯದಲ್ಲಾ… ಹೆಂಡತಿ ಮಾಡಿದ ಪಾಪ ಗಂಡನಿಗೆ. ಆ ಪಂಜರದ ಒಳಗಿರುವ ಹಕ್ಕಿ ಹೊರಬರಲು ಅವಸರಿಸುತ್ತದೆ. ಸಂಸಾರ ಎಂಬುದು ಒಂದು ಚಿನ್ನದ ಪಂಜರ,ಹೊರಗಿರುವ ಹಕ್ಕಿಗಳು ಪಂಜರದೊಳಗೆ ಬರಲು ಬಯಸುತ್ತಿರುತ್ತವೆ.ಅರಿತು ಬಾಳಿದರೆ ಈ ಸಂಸಾರವೇ ಸ್ವರ್ಗ ಸುಖ. ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ. ಮಳೆ ಸುರಿಸಿ ಹಗುರಾದ ಮುಗಿಲಿನಂತೆ.//ಜೈಶ್ರೀರಾಮ್//
ಹೆಣ್ಣನ್ನು ಪ್ರೀತಿಸು ಜೀವನ ನಿನ್ನನ್ನು ಪ್ರೀತಿಸುತ್ತೆ. ತುಂಬಾ ಜನ ಹೇಳೋದು ತಾಯಿನೇ ಹೆಚ್ಚು ಅಂತ ಆದರೆ ತಾಯಿಗಿಂತ ಹೆಚ್ಚು ಹೆಂಡತಿ ಯಾವುದೇ ರಕ್ತ ಸಂಬಂಧ ಇಲ್ಲದಿದ್ದರೂ ತನ್ನ ಗಂಡನಿಗಾಗಿ ಜೀವನನೆ ತ್ಯಾಗ ಮಾಡೋ ದೇವತೆ ಹೆಂಡತಿ ಜೀವ ಇರೋವರೆಗೂ ಗಂಡನ ಸೇವೆ ಮಾಡಿಕೊಂಡೆ ದಿನ ಕಾಳೆಯೋ ದೇವತೆ ಹೆಂಡತಿ ಸಾಧ್ಯವಾದಷ್ಟು ಅವಳಿಗೆ ಗೌರವ ಕೊಡಿ.
ಗಂಡ ಆದವನು ಹೆಂಡತಿಯ ಪ್ರೀತಿಗೆ ಹಾತೋರಿಯಬೇಕೆ ಹೊರತು ಹೆಂಡತಿ ತರುವ ಸಂಬಳಕ್ಕಲ್ಲ.
ಗಂಡ ಹೆಂಡತಿ ಪ್ರೀತಿ….. ರಕ್ತ ಹಂಚಿಕೊಂಡು ಹುಟ್ಟಿದ ಮಗನ ಎಂಜಲು ತಟ್ಟೆ ತೊಳೆಯುವ ತಾಯಿ ದೇವತೆಯಾದರೆ.. ಯಾವ ರಕ್ತ ಸಂಬಂಧವಿಲ್ಲದೆ “ತಾಳಿ” ಅನ್ನುವ ಬಂಧಕ್ಕೆ ಶರಣಾಗಿ ನಮ್ಮ ಮನೆಗೆ ಬಂದು ನಾವು ತಿಂದ ಎಂಜಲು ತಟ್ಟೆ ತೊಳೆಯುವ ಹೆಂಡತಿ ಕೂಡಾ ದೇವತೆಯೆ…. ಅದಕ್ಕೆ ಹೆಂಡತಿಯನ್ನು ಗೌರವದಿಂದ ಕಾಣಬೇಕು.
ತುಂಬಾ ಪ್ರೀತಿ ಮಾಡೋ ಗಂಡನಿಗೆ ಪ್ರೀತಿ ಮಾಡೋ ಹೆಂಡತಿ ಸಿಗಲ್ಲ ತುಂಬಾ ಪ್ರೀತಿ ಮಾಡೋ ಹೆಣ್ಣಿಗೆ ಪ್ರೀತಿ ಮಾಡೋ ಗಂಡ ಕೂಡ ಸಿಗಲ್ಲ
ನಾನೇ ನನ್ನಿಂದಾನೇ ಅಂತ ಗಂಡ ಹೆಂಡತಿ ಮಧ್ಯ ತಾರತಮ್ಯ ಇದ್ದರೆ ಸಂಸಾರ ಯಾವತ್ತೂ ಬೆಳವಣಿಗೆ ಕಾಣುವುದಿಲ್ಲ. ತಾಳ್ಮೆ ಮತ್ತು ಕ್ಷಮಿಸುವ ಗುಣ ಇದ್ದರೆ ಮಾತ್ರ ಸಂಸಾರ ಆನಂದಸಾಗರ.
ಹೆಂಡತಿ ಗಂಡನಿಗೆ ಎರಡನೇಯ ತಾಯಿಯಾಗುವಳು ಹೊರತು ಗಂಡ ಹೆಂಡತಿಗೆ ಎರಡನೇ ತಂದೆಯಾಗಲಾರ. ಹೆಣ್ಣಾಗಿ ಹುಟ್ಟಬಾರದು ಹುಟ್ಟಿದರೆ ಅತಿಯಾಗಿ ಪ್ರೀತಿಸುವ ಗಂಡನಿರಬೇಕು ಇಲ್ಲವೇ ಅತಿಯಾಗಿ ಪ್ರೀತಿಸುವ ತವರು ಮನೆಯಾದರೂ ಇರಬೇಕು. ಹೆಂಡತಿಯನ್ನು ನಾಲ್ಕು ಗೋಡೆಗಳ ಮಧ್ಯೆ ಪ್ರೀತಿಸುವುದಲ್ಲ ನಾಲ್ಕು ಜನರ ಮಧ್ಯೆ ಗೌರವಿಸಬೇಕು.
ಇದನ್ನೂ ಓದಿ: –
- 200+ Wedding Anniversary Wishes in Kannada with Images
- 100+ Birthday Wishes for Wife in Kannada (ಹೆಂಡತಿ ಹುಟ್ಟು ಹಬ್ಬದ ಶುಭಾಶಯಗಳು)
Husband Neglecting Wife Quotes in Kannada
ಈ ಮೇಲಿನ ಹೆಂಡತಿಯನ್ನು ನಿರ್ಲಕ್ಷಿಸಿದ ಪತಿ ಉಲ್ಲೇಖಗಳನ್ನು ನೀವು ನಿಮ್ಮ ಪತಿಗೆ ಕಳುಹಿಸುವ ಅಥವಾ ಸ್ಟೇಟಸ್ ಹಾಕುವ ಮೂಲಕ ಅವರಿಗೆ ಅವರ ತಪ್ಪನ್ನು ಅರ್ಥ ಮಾಡಿಸಿ. ನಮ್ಮ ಈ ಉಲ್ಲೇಖಗಳ ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ.