100+ Jeevana Life Quotes in Kannada with Images (ಜೀವನ Quotes)

Best Jeevana Life Quotes in Kannada with Images

ಆಳವಾದ ಮತ್ತು ಒಳನೋಟವುಳ್ಳ ಜೀವನ ಉಲ್ಲೇಖಗಳ (jeevana life quotes in kannada) ಜಗತ್ತಿಗೆ ಸುಸ್ವಾಗತ! ಇಲ್ಲಿ ನೀವು ಬುದ್ಧಿವಂತಿಕೆ, ಸ್ಫೂರ್ತಿ ಮತ್ತು ಮಾರ್ಗದರ್ಶನದ ನಿಧಿಯನ್ನು ಕಂಡುಕೊಳ್ಳುವಿರಿ. ಅದು ನಿಮ್ಮನ್ನು ಜೀವನದ ವಿವಿಧ ಅಂಶಗಳ ಬಗ್ಗೆ ಯೋಚಿಸಲು, ಪ್ರತಿಬಿಂಬಿಸಲು ಮತ್ತು ಆಲೋಚಿಸಲು ಮಾಡುತ್ತದೆ.

ಜೀವನವು ಒಂದು ಸುಂದರವಾದ ಪಯಣವಾಗಿದೆ. ಏರಿಳಿತಗಳು, ತಿರುವುಗಳು, ಸಂತೋಷಗಳು ಮತ್ತು ದುಃಖಗಳು ಎಲ್ಲವೂ ಇರುವ ಜಾರು ಬಂಡಿಯ ಸವಾರಿಯಾಗಿದ್ದು ಅದು ನಮ್ಮ ಪ್ರಜ್ಞೆಯನ್ನು ಬೆಳೆಯಲು, ವಿಕಸನಗೊಳಿಸಲು, ಕಲಿಯಲು ಮತ್ತು ವಿಸ್ತರಿಸಲು ನಮಗೆ ಸವಾಲು ಹಾಕುತ್ತದೆ.

ಈ jeevana kannada quotesಗಳು ನಾವು ಜೀವನದಲ್ಲಿ ಎಲ್ಲೇ ಇದ್ದರೂ ನಮ್ಮನ್ನು ಮೇಲಕ್ಕೆತ್ತುವ, ಪ್ರೇರೇಪಿಸುವ, ಪ್ರೋತ್ಸಾಹಿಸುವ ಮತ್ತು ಪ್ರಬುದ್ಧಗೊಳಿಸುವ ಶಕ್ತಿಯನ್ನು ಹೊಂದಿವೆ.

ನೀವು ಕಳೆದುಹೋದ, ಗೊಂದಲಕ್ಕೊಳಗಾದ ಅಥವಾ ಜೀವನದಲ್ಲಿ ಸಿಲುಕಿಕೊಂಡಿದ್ದರೆ ಅಥವಾ ನಿಮ್ಮ ಕನಸುಗಳನ್ನು ಮುಂದುವರಿಸಲು ನೀವು ಸ್ಫೂರ್ತಿಗಾಗಿ ಹುಡುಕುತ್ತಿದ್ದೀರಾ ಅಥವಾ ಜೀವನದ ಆಳವಾದ ಅರ್ಥವನ್ನು ಪ್ರತಿಬಿಂಬಿಸಲು ನೀವು ಬಯಸಿದರೆ, ಈ 100+ ಜೀವನ ಉಲ್ಲೇಖಗಳ ಸಂಗ್ರಹವು (jeevana quotes in kannada) ನಿಮ್ಮ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ.

ಪ್ರಪಂಚದ ಅರ್ಥವನ್ನು ಮಾಡಲು ಸಹಾಯ ಮಾಡುತ್ತದೆ ಮತ್ತು ಜೀವನದ ಸೌಂದರ್ಯವನ್ನು ನಿಮಗೆ ನೆನಪಿಸುತ್ತದೆ. ಉತ್ತಮ ಜೀವನವನ್ನು ನಡೆಸಲು ಮತ್ತು ನಿಮ್ಮ ಹೃದಯದ ಆಸೆಗಳನ್ನು ಅನುಸರಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಆದ್ದರಿಂದ ಕುಳಿತುಕೊಳ್ಳಿ. ವಿಶ್ರಾಂತಿ ಪಡೆಯಿರಿ ಮತ್ತು ಈ ಸುಂದರವಾದ ಜೀವನ ಉಲ್ಲೇಖಗಳ ಸಂಗ್ರಹದಲ್ಲಿ (collection of jeevana quotes in kannada) ಮುಳುಗಿರಿ. ಅವರು ನಿಮ್ಮ ಹೃದಯ ಮತ್ತು ಆತ್ಮದೊಂದಿಗೆ ಮಾತನಾಡಲಿ, ಮತ್ತು ಹೆಚ್ಚು ಪೂರೈಸುವ, ಸಂತೋಷದಾಯಕ ಮತ್ತು ಅರ್ಥಪೂರ್ಣ ಜೀವನದ ಕಡೆಗೆ ನಿಮ್ಮನ್ನು ಮಾರ್ಗದರ್ಶನ ಮಾಡಿ. ನೆನಪಿಡಿ, ಜೀವನವು ಉಡುಗೊರೆಯಾಗಿದೆ ಮತ್ತು ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಅದನ್ನು ಪಾಲಿಸಿ, ಬದುಕಿ ಮತ್ತು ಎಂಜಾಯ್ ಮಾಡಿ.

Best ಜೀವನ Quotes | Jeevana Life Quotes in Kannada

ನೀವು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೆಲವರಿಗೆ ನಿಮ್ಮ ಭಾವನೆಗಳು ಯಾವತ್ತೂ ಅರ್ಥ ಆಗುವುದಿಲ್ಲ.

 

ಜಗತ್ತಿನ ಅತಿ ದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ.

 

ಒಂಟಿಯಾಗಿರು. ತಾಳ್ಮೆಯಿಂದ ಇರು. ಯಾರಿಗಾಗಿಯು ಗೋಗರೆಯದಿರು. ಯಾರ ಹಿಂದೆಯೂ ಜಾರದಿರು. ನಾವೇ ಬೇಕನ್ನುವವವರು ಬರಲಿ. ಬೇಡದವರು ದೂರವೇ ಇರಲಿ.

 

ಯಾರನ್ನೂ ದುರ್ಬಲ ಎಂದು ಭಾವಿಸಬೇಡಿ. ಏಕೆಂದರೆ ಅದೃಷ್ಟ ಬದಲಾಗಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ.

 

ಎಲ್ಲರ ಪ್ರೀತಿ ನಿಜವಾಗಿರಲ್ಲ. ನಿಜವಾಗಿರೋ ಪ್ರೀತಿ ಎಂದಿಗೂ ದೂರ ಆಗಲ್ಲ.

 

ಕಾಣಬಾರದು ಎಂದು ಕಣ್ಣು ಮುಚ್ಚಿ ಕೊಳ್ಳಬಹುದು. ಆದರೆ ನೆನಪಾಗಬಾರದೆಂದು ಮನಸ್ಸು ಮೆಚ್ಚಿಕೊಳ್ಳಲು ಸಾಧ್ಯವಿಲ್ಲ.

 

ಎಲ್ಲರಲ್ಲಿಯೂ ಒಂದು ಹೇಳಲಾಗದ ನೋವಿನ ಕಥೆ ಇರುತ್ತೆ. ಅದು ರಾತ್ರಿಯಲ್ಲಿ ನಮ್ಮ ಮೌನದೊಂದಿಗೆ ಮಾತಾಡುತ್ತದೆ.

 

ಜೀವನದಲ್ಲಿ ಮೊದಲು ಕೆಟ್ಟ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತೇವೆ. ನಂತರ ಒಳ್ಳೆಯ ವ್ಯಕ್ತಿ ಬರುವಾಗ ನಂಬುವುದನ್ನೆ ಬಿಟ್ಟು ಬಿಡುತ್ತೇವೆ.

 

ಸಮಯ ಕಳೆದಂತೆ ಎಲ್ಲರ ಪ್ರೀತಿ ದೂರವಾಗುತ್ತೆ.

 

ಜೀವನದಲ್ಲಿ ಯಾವತ್ತೂ ನೀವು ಮತ್ತೊಬ್ಬರ ಮೇಲೆ ಅತಿ ಹೆಚ್ಚು ನಂಬಿಕೆ ಇಡುತ್ತಿರೋ ಅಲ್ಲಿ ನಿಮಗೆ ನಂಬಿಕೆಗೂ ಮೀರಿದ ಮೋಸ ನಡೆದೇ ನಡೆಯುತ್ತದೆ. ಇದು ಬದುಕು.

 

ಪ್ರತಿ ದಿನ ಮಾತನಾಡುವುದಕ್ಕಿಂತ ಅಪರೂಪಕ್ಕೆ ಮಾತನಾಡಿದರೆ ಬೆಲೆ ಜಾಸ್ತಿ.

 

ನಿಜವಾದ ನೆಮ್ಮದಿ ಎಂಬುದು  ಸರಳತೆ ಎಂಬ ಬಡತನದಲ್ಲಿ ಇರುವುದೇ ಹೊರತು ಆಡಂಬರ ಎಂಬ ಶ್ರೀಮಂತಿಕೆಯಲ್ಲಿ.

 

ಜೀವನದಲ್ಲಿ ನಾವು ಎಷ್ಟೇ ಬದಲಾದರೂ ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತೂ ಬದಲಾಗಲ್ಲ

 

ಬದುಕಿನುದ್ದಕ್ಕೂ ಪಯಣಿಸುವ ಆಸೆ. ಒಂದೇ ಕಡೆ ನೆಲೆ ಊರಲು ಮನಸ್ಸಾಗುವುದಿಲ್ಲ. ಈ ಜೀವನ ಎಂಬ ಪಯಣದಲ್ಲಿ ಅಲೆಮಾರಿ ಬದುಕು ಹೊಟ್ಟೆಯ ಪಾಡಿಗಾಗಿ ಇಲ್ಲದ ಆಸೆಗಳನ್ನು ನೆರವೇರಿಸಿ ಕೊಳ್ಳಲು ಮತ್ತೆ ಇನ್ಯಾವುದಕ್ಕೊಸ್ಕರ ಒಂದೂರಿನಿಂದ ಇನ್ನೊಂದು ಊರಿಗೆ ಜೀವನ ಸಾಗುತ್ತಾ ಇರುತ್ತೆ. ಒಂದೇ ಕಡೆ ನೆಲೆಯೂರಿ ಹೊಟ್ಟೆ ತುಂಬಿಸಿಕೊಳ್ಳಲು ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದ ಕಾರಣ ಒಂದು ಕಡೆ ನಿಲ್ಲದೆ ಪಯಣ ಸಾಗುತ್ತಿರುತ್ತದೆ. ಹರಿಯುವ ನದಿಯಂತೆ ಸಮುದ್ರ ಸೇರುವುದು ಅಂದರೆ ಜೀವನ ಕೊನೆಯಾದ ಮೇಲೆ ಎಂದರ್ಥ.

 

ಸುಳ್ಳು ಅನ್ನೋ ಅರಮನೆಯನ್ನು ಎಷ್ಟೇ  ಚೆನ್ನಾಗಿ ಕಟ್ಟಿದರು ಸತ್ಯ ಅನ್ನೋ ಸುನಾಮಿ ಬಂದಾಗ ಬೀಳಲೇಬೇಕು.

 

ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ.

 

ಹಣತೆ ಹೇಳಿದ ಕಥೆ.

ನಿನ್ನ ಕೆಳಗೆ ನೋವೆಂಬ ಕತ್ತಲು ಎಷ್ಟೇ ಇರಲಿ. ನಗುವೆಂಬ ಬೆಳಕು ಪ್ರಕಾಶವಾಗಿರಲಿ. 

 

ಒಂದು ಎಲೆ ಉದುರುತ್ತ ಹೇಳಿತು.

ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಅರಿತು ನಡೆ ಇದೆ ಜೀವನ. 

 

ಹುಟ್ಟಿದಾಗ ಹೆಸರು ಇರುವುದಿಲ್ಲ. ಉಸಿರು ಮಾತ್ರ ಇರುತ್ತದೆ. ಮರಣ ಹೊಂದಿದಾಗ ಉಸಿರು ಇರುವುದಿಲ್ಲ. ಹೆಸರು ಮಾತ್ರ ಉರುತ್ತದೆ. ಇವೆರಡರ ಮದ್ಯೆ ಇರುವುದೇ ಜೀವನ.

 

ಗೊಂಬೆ ಆಡಿಸೋನು ಮೇಲೆ ಒಬ್ಬ ಇದ್ರೆ ಕಡ್ಡಿ ಆಡಿಸೋರು ನಮ್ಮ ಸುತ್ತ ನೂರೆಂಟು ಜನ ಇರ್ತಾರೆ. 

 

ಎಷ್ಟಿದ್ದರೇನು  ಇಲ್ಲದಿದ್ದರೇನು. ದೇವರು ಹಾಜರಾತಿ ಕೂಗಿದ ಮೇಲೆ ಎಲ್ಲವನ್ನು ಬಿಟ್ಟು ಎಲ್ಲರನ್ನು ಬಿಟ್ಟು ಹೊರಡಲೇಬೇಕು ಇದ್ದರಲ್ಲಿ ನೀನು ಹೊರತಲ್ಲ. ನಾನು ಹೊರತಲ್ಲ. ಮುನಿಸೇಕೆ ಮನವೇ. ಈ ನಾಲ್ಕು ದಿನದ ಬದುಕಿನಲಿ. 

 

ಬದುಕಿನಲ್ಲಿ ನಾಳೆ ಎಂಬ ಅವಕಾಶ ಯಾವತ್ತೂ ಇರುತ್ತದೆ. ಆದರೆ ನಿನ್ನೆ ಎಂಬುದರಲ್ಲೇ ನಾವು ಕಳೆದು ಹೋಗಬಾರದಷ್ಟೇ. ಜೀವನದ ಪ್ರತಿ ಕ್ಷಣವೂ  ಮೃದುತನದಿಂದ ಇರುವುದಿಲ್ಲ. ಕನಸು ಕಂಡವರಿಗಿಂತ ಕಷ್ಟ ಪಟ್ಟವರಿಗೆ ಬೇಗ ಅರ್ಥ ಆಗುತ್ತದೆ. 

 

ಕಾಡಿನಲ್ಲಿ ಹೂವಿನ ಸೌಂದರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲು ಯಾರು ಇಲ್ಲದಿದ್ದರೂ ಹೂವುಗಳು ಅರುಳುವುದನ್ನು ನಿಲ್ಲಿಸುವುದಿಲ್ಲ. 

ಹಾಗೆ ನಮ್ಮ ಕೆಲಸದ ಬಗ್ಗೆ ಯಾರೊಬ್ಬರೂ ಪ್ರಶಂಸೆ ವ್ಯಕ್ತಪಡಿಸದಿದ್ದರೂ ಅದನ್ನು ನಾವು ನಿಷ್ಠೆ ಇಂದ ಮುಂದುವರೆಸಬೇಕು. 

 

ಹಣ ಇದೆ ಅಂತಾನೂ ಅದ್ರಷ್ಟ ಕೂಡಿ ಬಂತು ಅಂತಾನೋ ದುರಹಂಕಾರದಿಂದ ಇನ್ನೊಬ್ಬರನ್ನು ಕೀಳಾಗಿ ನೋಡಬೇಡಿ. ಮನುಷ್ಯ ನೂರು ವರುಷ ಬದುಕಿದರು ಸ್ಮಶಾನಕ್ಕೆ. ನೂರು ಕೋಟಿ ಕೂಡಿಟ್ಟರು ಸ್ಮಶಾನಕ್ಕೆ ಅನ್ನೋದನ್ನ ಮರೀಬೇಡಿ. 

 

ಹೆಚ್ಚು ತಿಳಿದವನು ಕಡಿಮೆ ಮಾತನಾಡುತ್ತಾನೆ. ಕಡಿಮೆ ತಿಳಿದವನು ಹೆಚ್ಚು ಮಾತನಾಡುತ್ತಾನೆ. ಪದಗಳು ಮುಖ್ಯವಲ್ಲ. ಹೇಳುವ ಸಂದರ್ಭ ಮುಖ್ಯ.

 

ಕೋಟಿ ಇದ್ದರೇನು? ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನಧರ್ಮ ಎಂಬ ಹುಟ್ಟು ಅವಶ್ಯಕ. 

 

ಶ್ರೀಮಂತರ ಬದುಕು ಹಣ ಗಳಿಸುವುದರಲ್ಲಿಯೇ ಮುಗಿದು ಹೋಗಿರುತ್ತದೆ 

ಬಡವರ ಬದುಕು ಹೊಟ್ಟೆ ತುಂಬಿಸುವುದರಲ್ಲಿಯೇ ಮುಗಿದು ಹೋಗಿರುತ್ತದೆ.

ಮಧ್ಯಮ ವರ್ಗದವರ ಬದುಕು ಮಾನ ಮರ್ಯಾದೆಗೆ ಅಂಜಿ ಬಾಳುವುದರಲ್ಲಿಯೇ ಮುಗಿದು ಹೋಗಿರುತ್ತದೆ.

 

ಛಲ ಸ್ವಾಭಿಮಾನವೆಂಬ ಗುಣದಿಂದ ಮನುಷ್ಯ ಸಾಧಿಸಬೇಕಾದ ಗುರಿ ಮುಟ್ಟುವವರೆಗೆ ಹಿಂದೆ ತಿರುಗಿ ನೋಡುವುದೇ ಇಲ್ಲ. ಸೇಡು ದುರಹಂಕಾರ ಗುಣದಿಂದ ಮನುಷ್ಯ ಎಷ್ಟೇ ಮೇಲಿದ್ದರೂ ಕೆಳಗೆ ಬರಲೇಬೇಕು. 

 

ಅನುಭವಿಸಿದ ಕಷ್ಟನ ಇನ್ನೊಬ್ಬರಿಗೆ ಹೇಳಿಕೊಂಡರೆ ಬರೀ ಸಮಾಧಾನ ಅಷ್ಟೇ. ಅದೇ ಕಷ್ಟನ ಒಂದು ಗುರಿಯಾಗಿ ನೋಡಿದರೆ ಆ ಗುರಿ ನಮಗೆ ಒಂದು ದಿನ ಸಾಧನೆಯ ಕಿರೀಟವಾಗುತ್ತದೆ. 

 

ಬೆಲೆ ಕಟ್ಟಲಾಗದ ವಸ್ತು ಅಂತ ಏನಾದ್ರು ಭೂಮಿ ಮೇಲೆ ಇದ್ರೆ ಅದು ಒಳ್ಳೆಯತನ ಮಾತ್ರ. ಅದೊಂದೇ ನಾವು ಉಳಿಸಿಕೊಂಡು ಹೋಗುವ ಬೆಲೆ ಕಟ್ಟಲಾಗದ ಆಸ್ತಿ. 

 

ಅರಳಿದ್ದಾಗ ದೇವರ ಗುಡಿಗೋ. ಹೆಣ್ಣಿನ ಮುಡಿಗೂ ಸೇರುವ ಹೂವು ಬಾಡಿದ ಮೇಲೆ ಯಾರಿಗೂ ಬೇಡವಾಗುತ್ತದೆ. ಇದೆ ಜೀವನದ ನಿಜ ಸ್ವರೂಪ. 

 

ಯಾರು ಇನ್ನೊಬ್ಬರ ಅಡಿಯಾಳಾಗಿ ಬಾಳುವುದಿಲ್ಲವೋ ವಾರ ಜನ್ಮವೇ ಸಫಲವಾದ ಜನ್ಮ. ಯಾರು ಪರಾಧೀನರಾಗಿ ಬದುಕುತ್ತಿದ್ದಾರೋ ಅವರು ಸತ್ತವರಿಗೆ ಸಮಾನ.

 

ನೀರು ನಿಂತರೆ ಕೊಳೆತು ನಾರುತ್ತದೆ. ಹರಿದು ಹೋದರೆ ತೊರೆದು ತಿಳಿಯಾಗುತ್ತದೆ. ನಮ್ಮ ಜೀವನವು ನಿಂತ ನೀರಾಗಬಾರದು. ಅದು ಹರಿಯುವ ಹೊಳೆಯಾಗಬೇಕು. 

 

ಬೆವರು ಸುರಿಸಿ ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದವನು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಒಂದು ವೇಳೆ ಸೋತರೂ ಅದೃಷ್ಟ ಕೈಕೊಟ್ಟು ಸೋತ್ತಿರುತ್ತಾನೆಯೇ ಹೊರತು ಪ್ರಯತ್ನದಿಂದಲ್ಲ. 

 

ದುಷ್ಟರ ಸವಿ ಮಾತಿನಜಾಲಕ್ಕೆ ಸಿಲುಕಬೇಡ. ಅವರ ನಾಲಗೆಯಲ್ಲಿ ಜೇನು ತುಪ್ಪವಿದ್ದರೂ ಹೃದಯದಲ್ಲಿ ವಿಷ ತುಂಬಿರತ್ತೆ. 

 

ಬಟ್ಟೆ ಆಭರಣ ರೂಪ ಇತ್ಯಾದಿಗಳನ್ನು ನಮಗೊಪ್ಪುವಂತೆ ಎಷ್ಟೇ ಬದಲಾಯಿಸಿಕೊಂಡರು ನಮ್ಮನ್ನು ನಾವು ಬದಲಾಯಿಸಿಕೊಳ್ಳದೆ ಹೋದರೆ ಎಲ್ಲವೂ ವ್ಯರ್ಥ. 

 

ಇದ್ದದನ್ನು ಇದ್ದ ಹಾಗೆ ಹೇಳೊವ್ರು ಎಲ್ಲರ ಮನಸ್ಸಲ್ಲೂ ಕೆಟ್ಟವರು.

ಬಣ್ಣ ಬಣ್ಣದ ಮಾತು ಅಡೋವ್ರು ಎಲ್ಲರ ಮನಸ್ಸನ್ನು ಗೆದ್ದೋರು. ಇದುವೇ ಜೀವನ.

 

ಜನತೆಗೆ ವಾಸ್ತು ಹೇಳುವವನಿಗೆ ತಾನಿದ್ದ ಸ್ಥಳದ ವಾಸ್ತು ಹೇಗಿದೆ ಅಂತ ಗೊತ್ತಾಗಲಿಲ್ಲ. ವಾಸ್ತು ವಾಸ್ತು ಎಂದು ಸುಸ್ತಾಗುವ ನಾವುಗಳು ಮನೆಯ ಅಡಿಪಾಯ ಬದಲಿಸುವುದಕ್ಕಿಂತ ಮನದ ಅಡಿಪಾಯ ಬದಲಿಸಿದರೆ ಜೀವನ ಬದಲಾಗುವುದೇನೋ. 

 

ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ. ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೆ ಇರುತ್ತದೆ.

 

ಸಾವು ಮತ್ತು ವಿಶ್ವಾಸ ಎರಡಕ್ಕೂ ಒಂದೇ ಅರ್ಥ. ಅವು ಒಂದು ಸಲ ಕಳೆದುಹೋದರೆ ಮತ್ತೆ ಸಿಗುವುದಿಲ್ಲ. 

 

ದೊಡ್ಡವರ ಮಾತು ಕೇಳಿ ಉದ್ದಾರ ಆದವರಿಗಿಂತ ಬೇಡದವರ ಮಾತು ಕೇಳಿ ತಲೆ ಕೆಡೆಸಿಕೊಂಡು ಹಾಳಾದವರೇ ಹೆಚ್ಚು. 

 

ಬಿಲ್ಲಿನಿಂದ ಬಿಟ್ಟ ಬಾಣ

ಬಾಯಿಯಿಂದ ಹೊರಟ ಮಾತು

ಕಳೆದು ಹೋದ ಸಮಯ 

ಕಳೆದುಕೊಂಡ ನಂಬಿಕೆ 

ಕಳೆದುಕೊಂಡ ಯವ್ವನ್ನ ಮತ್ತೆ ತಿರುಗಿಬಾರದು. 

 

ಸ್ವಾರ್ಥದಿಂದ ಬದುಕಿದರೆ ಒಬ್ಬಂಟಿಯಾಗುವೆ.

ನಿಸ್ವಾರ್ಥದಿಂದ ಬದುಕಿದರೆ ಜನನಾಯಕನಾಗುವೆ.

 

ಎಷ್ಟು ವರ್ಷ ಜೊತೆಗಿದ್ದರೇನು ಅಂತರಾಳವ ಅರಿಯದ ಮೇಲೆ.

 

ಬೇಕಾಗಿಲ್ಲ ಯಾರು ನನಗೆ

ಬದುಕಬಲ್ಲೆ ನಾನು ನನಗಾಗಿಯೇ. 

 

ಎಷ್ಟು ಓದಿದ್ದೇವೆ ಯಾವ ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ನಿಜವಾದ ಶಿಕ್ಷಣ ಎಂದರೆ ಬೇರೆಯವರೊಂದಿಗಿನ ನಮ್ಮ ಮಾತು ಸಂಸ್ಕಾರ ಮತ್ತು ನಡವಳಿಕೆ. ಇವೆ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ.

 

ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದು ಅರ್ಥ

ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ. 

 

ಜೀವನದ ಉದ್ದೇಶ ಅರಿಯಬೇಕೆಂದರೆ ಮನಸ್ಸು ಮತ್ತು ದೇಹವನ್ನು ಮೀರಿ ಯೋಚನೆ ಮಾಡಬೇಕಾಗುತ್ತದೆ.

 

ಜೀವನವಿರುವುದು ಅಲ್ಪಕಾಲ. ಆದ್ದರಿಂದ ನಗು, ಮಮತೆ, ಹೃಯದಯವಂತಿಕೆ ತುಂಬಿದ ಜನರ ಬಳಿ ಸಮಯ ಕಳೆಯಿರಿ. 

 

ನಮ್ಮ ಸಂತೋಷಕ್ಕೆ ಸುತ್ತ ನಡೆಯುವ ವಿದ್ಯಮಾನಗಳಿಗಿಂತ ಅಂತರಂಗದಲ್ಲಿ ನಡೆಯುವ ಬದಲಾವಣೆಯೇ ಕಾರಣವಾಗಬೇಕು. ಆ ಖುಷಿಗೆ ಆಯಸ್ಸು ಜಾಸ್ತಿ

 

ಮೊದಲು ಹಂಗಿಸುತ್ತಾರೆ 

ಆಮೇಲೆ ಹೆದರಿಸುತ್ತಾರೆ

ನೀವು ಬಗ್ಗಲಿಲ್ಲವೆಂದರೆ 

ನಿಮ್ಮನ್ನೇ ಅನುಸರಿಸುತ್ತಾರೆ.

 

ಹಗೆತನ ಬೇಡ. ಪಾಪದ ಕೊಡ ತುಂಬಿದ ಮನಸ್ಸುಗಳು, ಕೊಳೆತ ಹಣ್ಣುಗಳು ಉದುರಲೇಬೇಕು ಮಣ್ಣಾಗಲೇ ಬೇಕು.

 

ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ. ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು. 

 

ಹೊರಗಿನಿಂದ ಕಾಲವು ನಮ್ಮನ್ನು ಬದಲಾಯಿಸಿದರೆ ಒಳಗಿನಿಂದ ಜನರೇ ನಮ್ಮನ್ನು ಬದಲಾಯಿಸುತ್ತಾರೆ. 

 

ಈ ಜಗತ್ತಿನಲ್ಲಿ ಎಲ್ಲವೂ ಬೆಲೆ ಬಾಳುವಂತದ್ದೇ. ಒಂದು ಸಿಗುವ ಮೊದಲು ಮತ್ತು ಕಳೆದುಕೊಂಡ ನಂತರ. 

 

ಬೇಡುವ ಮನ ಶುದ್ಧವಾಗಿದ್ದರೆ ಕೊಡುವ ದೇವರು ಕೂಡ ಕೊಡಲಾರೆ ಎನ್ನಲಾರ. 

 

ಮಾತಾಡಿದಂತೆ ಜೀವಿಸಲು ಆಗೋದಿಲ್ಲ. ಬರೆದಿಟ್ಟಂತೆ ಬದುಕಲು ಆಗೋದಿಲ್ಲ. ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ಬದುಕಿದರೆ ಸಾಕು ಅದೇ ಸಂತೃಪ್ತ ಬದುಕು. 

 

ಕಳೆದು ಹೋದ ಘಟನೆಯು ಮರಳಿ ಬರುವುದೇ?

ಮುಗಿದು ಹೋದ ಸಮಯವೂ ಮತ್ತೆ ಬರುವುದೇ?

ಆಡಿ ಹೋದ ಮಾತು ಹಿಂಪಡೆಯಲಾಗುವುದೇ?

ಭೂತಕಾಲದ ಪಾಶದಲ್ಲಿ ಸಿಲುಕಿ ವರ್ತಮಾನದ ಸುಖವ ಮರೆತು ನಿರಾಶಾವಾದಿಗಳಾಗುವಿರೇ? 

ಭವಿಷ್ಯದ ಚಿಂತನೆಯೊಂದಿಗೆ ಬೆಳೆದು ಮಾದರಿಯಾಗುವಿರೇ?

 

ನಮ್ಮ ಜೀವನದಲ್ಲಿ ನಾವು ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅಲೆಯುವುದು  ಯಾವಾಗ ಎಂದರೆ ಅವರು ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ. 

Jeevana Life Quotes in Kannada Images

ಇದನ್ನೂ ಓದಿ: 

  1. 150+ Kannada Quotes About Life with Images
  2. 100+ Believe Quotes in Kannada (ನಂಬಿಕೆ ಉಲ್ಲೇಖಗಳು)
  3. 100+ Attitude Quotes in Kannada
  4. 100+ Kannada Quotes About Trust (ನಂಬಿಕೆ Quotes ಕನ್ನಡದಲ್ಲಿ)
  5. 100+ Good Night Quotes in Kannada with Images

100+ ಜೀವನ ಉಲ್ಲೇಖಗಳ ಮೂಲಕ ನಾವು ಈ ಪ್ರಯಾಣದ ಅಂತ್ಯಕ್ಕೆ ಬರುತ್ತಿದ್ದಂತೆ, ನಿಮ್ಮದೇ ಆದ ಅನನ್ಯ ಪ್ರಯಾಣದಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಸ್ಫೂರ್ತಿ, ಬುದ್ಧಿವಂತಿಕೆ ಮತ್ತು ಮಾರ್ಗದರ್ಶನವನ್ನು ನೀವು ಕಂಡುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ.

ನೆನಪಿಡಿ ಜೀವನವು ಯಾವಾಗಲೂ ಸುಲಭವಲ್ಲ. ಆದರೆ ಅದು ಯಾವಾಗಲೂ ಯೋಗ್ಯವಾಗಿರುತ್ತದೆ. ಪ್ರತಿ ಅನುಭವ, ಪ್ರತಿ ಭಾವನೆ, ಪ್ರತಿ ಸವಾಲು ಮತ್ತು ಪ್ರತಿ ಗೆಲುವು ನಮಗೆ ಬೆಳೆಯಲು, ಕಲಿಯಲು ಮತ್ತು ವಿಕಸನಗೊಳ್ಳಲು ಸಹಾಯ ಮಾಡುವ ಅಮೂಲ್ಯ ಕೊಡುಗೆಯಾಗಿದೆ.

ನೀವು ಕಷ್ಟಕರ ಸಮಯವನ್ನು ಎದುರಿಸುತ್ತಿರುವಾಗ, ಈ Jeevana Life Quotes in Kannada Collectionಗೆ ಹಿಂತಿರುಗಿ ಮತ್ತು ನಿಮ್ಮ ಶಕ್ತಿ, ನಿಮ್ಮ ಸ್ಥಿತಿಸ್ಥಾಪಕತ್ವ ಮತ್ತು ನಿಮ್ಮ ಆಂತರಿಕ ಬುದ್ಧಿವಂತಿಕೆಯನ್ನು ನಿಮಗೆ ನೆನಪಿಸಲಿ.

ನೀವು ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುತ್ತಿರುವಾಗ ಈ jeevana quotes in kannadaಗಳು ನಿಮಗೆ ದೊಡ್ಡ ಕನಸು ಕಾಣಲು, ಆಳವಾಗಿ ಪ್ರೀತಿಸಲು ಮತ್ತು ಹೆಚ್ಚು ಸಂಪೂರ್ಣವಾಗಿ ಬದುಕಲು ಪ್ರೇರೇಪಿಸಲಿ.

ಜೀವನವು ಒಂದು ಸಾಹಸ, ನಿಗೂಢ ಮತ್ತು ಪವಾಡ, ಮತ್ತು ಪ್ರತಿದಿನ ಅದರ ಸೌಂದರ್ಯ ಮತ್ತು ಮ್ಯಾಜಿಕ್ ಅನ್ನು ಕಂಡುಹಿಡಿಯಲು ಹೊಸ ಅವಕಾಶವಾಗಿದೆ. ಆದ್ದರಿಂದ ಉತ್ತಮ ಜೀವನವನ್ನು ನಡೆಸಿ, ನಿಮ್ಮ ಕನಸುಗಳನ್ನು ಬೆನ್ನಟ್ಟಿ, ಮತ್ತು ಪ್ರತಿ ಕ್ಷಣವನ್ನು ಎಣಿಸಿ.

ನಿಮಗೆ ಎಂದಾದರೂ ಜೀವನದ ಶಕ್ತಿ, ಸೌಂದರ್ಯ ಮತ್ತು ಜೀವನದ ಅರ್ಥದ ಜ್ಞಾಪಕದ ಅಗತ್ಯವಿದ್ದರೆ ಈ ಧನಾತ್ಮಕ ಜೀವನ ಉಲ್ಲೇಖಗಳ ಸಂಗ್ರಹಕ್ಕೆ (positive jeevana life quotes in kannada) ಹಿಂತಿರುಗಿ.

ಸಂತೋಷದಾಯಕ ಮತ್ತು ಅರ್ಥಪೂರ್ಣ ಜೀವನದ ಕಡೆಗೆ ಅವು ನಿಮಗೆ ಮಾರ್ಗದರ್ಶನ ನೀಡುತ್ತವೆ ಎಂಬುದು ನಮ್ಮ ಭಾವನೆ. ಇನ್ನೂ ಹೆಚ್ಚಿನ ಕನ್ನಡ ಕ್ವೋಟ್ಸ, ಕನ್ನಡ ವಿಷಸ್ಗಳಿಗೆ ನಮ್ಮ ಬ್ಲಾಗ್ ಭೇಟಿ ಮಾಡುತ್ತೀರಿ.

ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.