ಕೆ.ಎಸ್. ನಿಸಾರ್ ಅಹಮದ್ ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಕವಿ, ಚಿಂತಕ ಮತ್ತು ವಿಮರ್ಶಕರಾಗಿದ್ದಾರೆ. ನಿತ್ಯೋತ್ಸವ ಕವನ ಸಂಕಲನದ “ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ” ಎಂಬ ಪದ್ಯವು ಅತ್ಯಂತ ಜನಪ್ರಿಯವಾಗಿದ್ದು, ಈ ಕೃತಿಯ ಮೂಲಕವೇ ಅವರು “ನಿತ್ಯೋತ್ಸವ ಕವಿ” ಎಂದೂ ಕರೆಯಲ್ಪಡುತ್ತಿದ್ದರು. 1936ರಲ್ಲಿ ಜನಿಸಿದ ಅವರು, ತಮ್ಮ ಸಾಹಿತ್ಯ ಸಾಧನೆಗಳ ಮೂಲಕ ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿದರು.
ಈ ಕೆ.ಎಸ್. ನಿಸಾರ್ ಅಹಮದ್ ಜೀವನಚರಿತ್ರೆಯು (ks nisar ahmed biography in kannada) ಅವರ ಬಾಲ್ಯದಿಂದ ಹಿಡಿದು ಶಿಕ್ಷಣ, ವೃತ್ತಿ ಜೀವನ, ಸಾಹಿತ್ಯ ಸಾಧನೆಗಳು, ಪ್ರಶಸ್ತಿಗಳು ಮತ್ತು ಅಂತಿಮ ದಿನಗಳವರೆಗೆ ಎಲ್ಲಾ ವಿವರಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಕನ್ನಡ ಸಾಹಿತ್ಯವನ್ನು ಪ್ರೀತಿಸುವ ಯಾರಿಗಾದರೂ ಈ ಪರಿಚಯ ಬಹಳ ಉಪಯುಕ್ತವಾಗುತ್ತದೆ. ನೀವು ಕೆ. ಎಸ್. ನಿಸಾರ್ ಅಹಮದ್ ಕವಿಯ ಬಗ್ಗೆ ತಿಳಿಯಬೇಕಾದ ಪ್ರತಿಯೊಂದು ಮಾಹಿತಿಯನ್ನೂ (complete information about ks nisar ahmed in kannada) ಇಲ್ಲಿ ಕಾಣಬಹುದು.
Table of Contents
ಕೆ ಎಸ್ ನಿಸಾರ್ ಅಹಮದ್ ಅವರ ಜೀವನ ಚರಿತ್ರೆ | KS Nisar Ahmed Information in Kannada
ಕೆ ಎಸ್ ನಿಸಾರ್ ಅಹಮದ್ ಕವಿ ಪರಿಚಯ | KS Nisar Ahmed Kavi Parichaya in Kannada
ಹೆಸರು | ಕೆ.ಎಸ್. ನಿಸಾರ್ ಅಹಮದ್ |
ಜನನ ದಿನಾಂಕ | 5 ಫೆಬ್ರವರಿ 1936 |
ಜನ್ಮ ಸ್ಥಳ | ದೇವನಹಳ್ಳಿ, ಬೆಂಗಳೂರು |
ತಂದೆಯ ಹೆಸರು | ಕೆ.ಎಸ್. ಹೈದರ್ |
ತಾಯಿಯ ಹೆಸರು | ಹಮೀದಾ ಬೇಗಂ |
ಕೃತಿಗಳು | ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ |
ಪ್ರಶಸ್ತಿಗಳು | ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ ಪದವಿ, ಪದ್ಮಶ್ರೀ ಪ್ರಶಸ್ತಿ |
ನಿಧನ ದಿನಾಂಕ | 3 ಮೇ 2020 |
ಬಾಲ್ಯ
ಕೆ.ಎಸ್. ನಿಸಾರ್ ಅಹಮದ್, ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್, 1936ರ ಫೆಬ್ರವರಿ 5ರಂದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕೆ.ಎಸ್. ಹೈದರ್ ಸರಕಾರಿ ಅಧಿಕಾರಿ ಹಾಗೂ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಪಂಡಿತರಾಗಿದ್ದರು. ತಾಯಿ ಹಮೀದಾ ಬೇಗಂ. ತಂದೆಯ ಪಾಂಡಿತ್ಯ ಮತ್ತು ಕುಟುಂಬದ ಸಾಹಿತ್ಯಪ್ರಿಯ ವಾತಾವರಣವು ನಿಸಾರ್ ಅಹಮದ್ ಅವರ ಬಾಲ್ಯದ ಮೇಲೆ ದೊಡ್ಡ ಪ್ರಭಾವ ಬೀರಿತು.
ಶಿಕ್ಷಣ
ನಿಸಾರ್ ಅಹಮದ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಾಲೆಯಲ್ಲಿ ಮುಗಿಸಿದ ಅವರು ನಂತರ ತಮ್ಮ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದರು. ಅವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1959ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ತಮ್ಮ ಪದವಿ ಪೂರ್ಣಗೊಳಿಸಿದರು. ಈ ಶಿಕ್ಷಣವು ಅವರಿಗೆ ಕೇವಲ ವೃತ್ತಿಜೀವನಕ್ಕಾಗಿ ಮಾತ್ರವಲ್ಲ, ಅವರ ಕಾವ್ಯ ಚಿಂತನೆಗಳಿಗೆ ಸಹ ಆಧಾರವಾಗಿತ್ತು.
ವೃತ್ತಿ
ಪದವಿಯನ್ನು ಪಡೆದ ನಂತರ, ನಿಸಾರ್ ಅಹಮದ್ ಅವರು ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಭೂವಿಜ್ಞಾನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1994ರವರೆಗೆ ಅವರು ಈ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪಯಣವನ್ನು ಮುಂದುವರಿಸಿದರು.
ಸಾಹಿತ್ಯಯಾತ್ರೆ
ಅವರ ಕಾವ್ಯಯಾತ್ರೆ ಬಾಲ್ಯದಲ್ಲಿಯೇ ಆರಂಭವಾಯಿತು. “ಜಲಪಾತ” ಎಂಬ ಕವನವು ಕೈಬರಹ ಪತ್ರಿಕೆಯಲ್ಲಿ ಪ್ರಕಟವಾದಾಗ, ಅವರ ಸಾಹಿತ್ಯ ಜೀವನವು ಪ್ರಾರಂಭವಾಯಿತು. ನಿಸಾರ್ ಅಹಮದ್ ತಮ್ಮ ಕಾವ್ಯಗಳಲ್ಲಿ ಸರಳ ಭಾಷೆ, ಆಳವಾದ ಭಾವನೆ ಮತ್ತು ಸಾಮಾಜಿಕ ಚಿಂತನೆಗಳನ್ನು ಪ್ರತಿಬಿಂಬಿಸಿದರು. ಅವರ ಕವನಗಳು ಕನ್ನಡಿಗರ ದೈನಂದಿನ ಬದುಕಿನ ಸೌಂದರ್ಯವನ್ನು ಹಿಡಿದಿಡುತ್ತವೆ.
ಕೃತಿಗಳು
ಕೆ.ಎಸ್. ನಿಸಾರ್ ಅಹಮದ್ ಅವರ ಪ್ರಮುಖ ಕೃತಿಗಳು ಈ ಕೆಳಗಿನಂತಿವೆ:
ಕವನ ಸಂಕಲನಗಳು
- ಮನಸು ಗಾಂಧಿ ಬಜಾರು (1960)
- ನೆನೆದವರ ಮನದಲ್ಲಿ (1964)
- ಸುಮಹೂರ್ತ (1967)
- ಸಂಜೆ ಐದರ ಮಳೆ (1970)
- ನಾನೆಂಬ ಪರಕೀಯ (1972)
- ಆಯ್ದ ಕವಿತೆಗಳು (1974)
- ನಿತ್ಯೋತ್ಸವ (1976)
- ಸ್ವಯಂ ಸೇವೆಯ ಗಿಳಿಗಳು (1977)
- ಅನಾಮಿಕ ಆಂಗ್ಲರು (1982)
- ಬರಿರಂತರ (1990)
- ಸಮಗ್ರ ಕವಿತೆಗಳು (1991)
- ನವೋಲ್ಲಾಸ (1994)
- ಆಕಾಶಕ್ಕೆ ಸರಹದ್ದುಗಳಿಲ್ಲ (1998)
- ಅರವತ್ತೈದರ ಐಸಿರಿ (2001)
- ಸಮಗ್ರ ಭಾವಗೀತೆಗಳು (2001)
- ಪ್ರತಿನಿಧಿಕ ಕವನಗಳು (2001)
ವಿಮರ್ಶೆ ಮತ್ತು ವಿಚಾರ ಸಾಹಿತ್ಯ
- ಇದು ಬರಿ ಬೆಳಗಲ್ಲೋ ಅಣ್ಣ (1980)
- ಮನದೊಂದಿಗೆ ಮಾತುಕತೆ (1991)
- ಹಿರಿಯರು ಹರಸಿದ ಹೆದ್ದಾರಿ (1992)
- ಅಚ್ಚುಮೆಚ್ಚು (1995)
- ವಿಚಾರ ವಿಹಾರ (1998)
- ಸಮಗ್ರ ಗದ್ಯ ಬರಹಗಳು (2002)
- ಅಚ್ಚುಮೆಚ್ಚು (ಆಯ್ದ ಲೇಖನಗಳು) (2004)
- ಸ-ರಸೋಕ್ತಿಗಳ ಸಂಗಾತಿ (2004)
- ಸಪ್ತ ಸಂಪನ್ನರು (2009)
ಅನುವಾದಗಳು
- ಎ ಮಿಡ್ ಸಮ್ಮರ್ ನೈಟ್ ಡ್ರೀಮ್ (1974)
- ಒಥೆಲೋ (1977)
- ಹೆಜ್ಜೆ ಗುರುತು (1987)
- ಬರೀ ಮರ್ಯಾದಸ್ಥರೇ (ಲ್ಯಾಟಿನ್ ಅಮೆರಿಕಾದ ಸ್ಟ್ಯಾನಿಶ್ ಕವಿ ಪಾಬ್ಲೊನರೈಡಾ)
ಇತರೆ
- ಹಕ್ಕಿಗಳು (1978)
- ಶಿಲೆಗಳು, ಖನಿಜಗಳು (1978)
- ಬರ್ಡ್ಸ್ (1978)
- ರಾಕ್ಸ್ ಅಂಡ್ ಮಿನರಲ್ಸ್ (1978)
- ಪುಟ್ಟ ಸಂತರು ಮತ್ತು ಕವಿಗಳು (1978)
ಸಂಪಾದನೆಗಳು
- ಅವಲೋಕನ
- ಚಂದನ (ತ್ರೈಮಾಸಿಕ)
- ದಶವಾರ್ಷಿಕ ಕವಿತೆಗಳು (1974–83)
- ದಶವಾರ್ಷಿಕ ವಿಮರ್ಶೆ (1974–83)
- ದಶವಾರ್ಷಿಕ ಪ್ರಬಂಧಗಳು (1974–83)
- ಟೆನ್ ಇಯರ್ಸ್ ಆಫ್ ಕನ್ನಡ ಪೊಯಟ್ರಿ (1974–83)
- ರತ್ನ ಸಂಪುಟ (1982)
- ಮಾಸ್ತಿಯವರ ಚಿಕವೀರ ರಾಜೇಂದ್ರ – ಒಂದು ವಿವೇಚನೆ
ಕ್ಯಾಸೆಟ್/ಸಿಡಿಗಳಲ್ಲಿ
- ನಿತ್ಯೋತ್ಸವ (1978)
- ಅಪೂರ್ವ (ಕವನೋತ್ಸವ)
- ಸುಮಧುರ
- ನವೋಲ್ಲಾಸ
- ಅಭಿಷೇಕ
- ಹೊಂಬೆಳಕು
- ಮಿಲನೋತ್ಸವ (2007)
ಪ್ರಶಸ್ತಿ ಮತ್ತು ಗೌರವಗಳು
ಕೆ. ಎಸ್. ನಿಸಾರ್ ಅಹಮದ್ ಅವರ ಸಾಹಿತ್ಯ ಸಾಧನೆಗಳಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಪ್ರಮುಖವಾದವು:
- ರಾಜ್ಯೋತ್ಸವ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಪಂಪ ಪ್ರಶಸ್ತಿ
- ನಾಡೋಜ ಗೌರವ ಪದವಿ
- ಪದ್ಮಶ್ರೀ ಪ್ರಶಸ್ತಿ
ಅವರ ಸಾಹಿತ್ಯ ಸಾಧನೆಗೆ ೧೯೮೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ೧೯೯೩ರಲ್ಲಿ ಡಾ|| ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ೧೯೯೪ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿಯನ್ನು ಲಭಿಸಿವೆ. ೧೯೯೬ರಲ್ಲಿ ಡಾ|| ದೇ.ಜ.ಗೌ ಟ್ರಸ್ಟಿನ ‘ವಿಶ್ವಮಾನವ ಪ್ರಶಸ್ತಿ’ ದೊರೆತಿದೆ. ೨೦೦೧ರಲ್ಲಿ ಅ.ನ.ಕೃ ನಿರ್ಮಾಣ ಪ್ರಶಸ್ತಿ ಮತ್ತು ಕನ್ನಡ ಕಂಪು ಪುರಸ್ಕಾರ, ೨೦೦೨ರಲ್ಲಿ ಭೌತ ವಿಜ್ಞಾನಿ ಡಾ|| ತಾತಾಚಾರಿ ಸಾಹಿತ್ಯ ಪುರಸ್ಕಾರ, ಸಹಕಾರ ರತ್ನ ಪುರಸ್ಕಾರ, ‘ಭಾಗೀರಥಿ ಬಾಯಿ ಪ್ರಪ್ರಥಮ ಪ್ರಶಸ್ತಿ’ ಸೇರಿದಂತೆ ಅನೇಕ ಪುರಸ್ಕಾರಗಳು ದೊರೆತಿವೆ.
೨೦೦೩ರಲ್ಲಿ ಮಂಗಳೂರು ‘ಸಂದೇಶ ಸಾಹಿತ್ಯ ಪ್ರಶಸ್ತಿ’, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ‘ಚುಂಚ ಪ್ರಶಸ್ತಿ’ (ಆದಿಚುಂಚನಗಿರಿ ಮಠದಿಂದ), ಹಾಗೂ ‘ಆದರ್ಶ ಸುಗಮ ಸಂಗೀತ ಪ್ರಶಸ್ತಿ’ಗಳನ್ನು ಪಡೆದಿದ್ದಾರೆ. ೨೦೦೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ೨೦೦೬ರಲ್ಲಿ ಪ್ರತಿಷ್ಟಿತ ‘ಮಾಸ್ತಿ ಪ್ರಶಸ್ತಿ’, ಸಂಗೀತ ಗಂಗಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಿ.ಜವರೇಗೌಡ ಅರಸು ಪ್ರಶಸ್ತಿ ದೊರೆತಿವೆ. ೨೦೦೭ರಲ್ಲಿ ‘ಕನ್ನಡ ರತ್ನ ತಿಲಕ’ ಪುರಸ್ಕಾರ (ಕರ್ನಾಟಕ ರಕ್ಷಣಾ ವೇದಿಕೆಯಿಂದ) ಹಾಗೂ ೨೦೦೮ರಲ್ಲಿ ಭಾರತದ ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಾಮಾಜಿಕ ಚಿಂತನೆಗಳು
ನಿಸಾರ್ ಅಹಮದ್ ಅವರ ಕಾವ್ಯವು ಮಾನವೀಯತೆ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಬಿಂಬಿಸುತ್ತದೆ. “ಜೋಗದ ಸಿರಿ ಬೆಳಕಿನಲ್ಲಿ” ಮತ್ತು “ಭಾರತವು ನಮ್ಮ ದೇಶ” ಮುಂತಾದ ಕವಿತೆಗಳು ಇವರ ಸಾಮಾಜಿಕ ಜಾಗೃತಿಯ ದೃಷ್ಟಿಕೋನವನ್ನೂ ತೋರಿಸುತ್ತವೆ.
ನಿಧನ
2020ರಲ್ಲಿ ತನ್ನ ಮಗನನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡ ನೋವು ಹಾಗೂ ಪತ್ನಿ ಶಹನವಾಜ್ ಬೇಗಂ ಅವರನ್ನು 2019ರಲ್ಲಿ ಕಳೆದುಕೊಂಡ ದುಃಖ, ಇವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಕೆ ಎಸ್ ನಿಸಾರ್ ಅಹಮದ್ ಅವರು ಮೇ 3, 2020ರಂದು ಅವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕೆ.ಎಸ್. ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ನಿತ್ಯೋತ್ಸವದಂತೆ ಪ್ರಕಾಶಮಾನರಾಗಿದ್ದಾರೆ. ಅವರ ಕೃತಿಗಳು ಕನ್ನಡಿಗರ ಬದುಕಿಗೆ ಹೊಸ ದಿಕ್ಕುಗಳನ್ನು ತೋರಿಸುವ ಮೂಲಕ ಸದಾ ಜೀವಂತವಾಗಿವೆ.
ಕೆ.ಎಸ್. ನಿಸಾರ್ ಅಹಮದ್ ಅವರ ಜೀವನಚರಿತ್ರೆ (ks nisar ahmed information in kannada language) ಮತ್ತು ಸಾಹಿತ್ಯ ಸಾಧನೆಗಳನ್ನು ಈ ಲೇಖನದಲ್ಲಿ ವಿವರವಾಗಿ ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಈ ಮಹಾನ್ ಕವಿ, ತಮ್ಮ ಕಾವ್ಯಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಕೃತಿಗಳು ಮತ್ತು ಪದ್ಯಗಳು ನಮ್ಮ ಜೀವನದ ವಿವಿಧ ಆಯಾಮಗಳಿಗೆ ಸ್ಪೂರ್ತಿಯ ಮೂಲವಾಗಿವೆ. “ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ” ಎಂಬ ಪದ್ಯದಿಂದಲೇ ಅವರು ಕನ್ನಡಿಗರ ಹೃದಯಕ್ಕೆ ಹತ್ತಿರವಾದರು.
ನೀವು ಈ ಲೇಖನವನ್ನು ಮೆಚ್ಚಿದ್ದೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇನ್ನಷ್ಟು ಮಾಹಿತಿಗಾಗಿ ನಮ್ಮ ಬ್ಲಾಗ್‌ಗೆ ಮತ್ತೆ ಭೇಟಿ ನೀಡಿ.
Frequently Asked Questions (FAQs)
ಕೆ.ಎಸ್. ನಿಸಾರ್ ಅಹಮದ್ ಅವರ ಪೂರ್ಣ ಹೆಸರು ಏನು?
ಕೆ.ಎಸ್. ನಿಸಾರ್ ಅಹಮದ್ ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್.
ಕೆ.ಎಸ್. ನಿಸಾರ್ ಅಹಮದ್ ಅವರು ಯಾವಾಗ ಮತ್ತು ಎಲ್ಲಿ ಜನಿಸಿದರು?
ಅವರು 1936ರ ಫೆಬ್ರುವರಿ 5ರಂದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು.
ಕೆ ಎಸ್ ನಿಸಾರ್ ಅಹಮದ್ ಅವರ ತಂದೆ ಮತ್ತು ತಾಯಿಯ ಹೆಸರು ಏನು?
ಅವರ ತಂದೆ ಕೆ.ಎಸ್. ಹೈದರ್ ಮತ್ತು ತಾಯಿ ಹಮೀದಾ ಬೇಗಂ.
ಕೆ ಎಸ್ ನಿಸಾರ್ ಅಹಮದ್ ಅವರು ಯಾವ ಕ್ಷೇತ್ರದಲ್ಲಿ ಶಿಕ್ಷಣ ಪಡೆದಿದ್ದರು?
ಕೆ.ಎಸ್. ನಿಸಾರ್ ಅಹಮದ್ ಅವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ನಿತ್ಯೋತ್ಸವ ಕವಿ ಎಂದು ಯಾರನ್ನು ಕರೆಯುತ್ತಾರೆ?
ನಿತ್ಯೋತ್ಸವ ಕವಿ ಎಂದು ಕೆ ಎಸ್ ನಿಸಾರ್ ಅಹಮದ್ ಅವರನ್ನು ಕರೆಯುತ್ತಾರೆ..
ಕೆ ಎಸ್ ನಿಸಾರ್ ಅಹಮದ್ ಅವರ ಪ್ರಮುಖ ಕೃತಿಗಳು ಯಾವುವು?
ಕೆ ಎಸ್ ನಿಸಾರ್ ಅಹಮದ್ ಅವರ ಪ್ರಮುಖ ಕೃತಿಗಳು ಮನಸು ಗಾಂಧಿ ಬಜಾರು, ನಿತ್ಯೋತ್ಸವ, ಸಂಜೆ ಐದರ ಮಳೆ, ಅನಾಮಿಕ ಆಂಗ್ಲರು, ಸ್ವಯಂ ಸೇವೆಯ ಗಿಳಿಗಳು ಸೇರಿದಂತೆ ಅನೇಕ ಕವನ ಸಂಕಲನಗಳು.
ಕೆ ಎಸ್ ನಿಸಾರ್ ಅಹಮದ್ ಅವರು ಯಾವ ಪ್ರಶಸ್ತಿಗಳನ್ನು ಪಡೆದಿದ್ದರು?
ಕೆ.ಎಸ್. ನಿಸಾರ್ ಅಹಮದ್ ಅವರು ಪದ್ಮಶ್ರೀ (2008), ರಾಜ್ಯೋತ್ಸವ ಪ್ರಶಸ್ತಿ (1981), ಪಂಪ ಪ್ರಶಸ್ತಿ (2017), ಮತ್ತು ನಾಡೋಜ ಗೌರವ ಪದವಿ (2003) ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕೆ.ಎಸ್. ನಿಸಾರ್ ಅಹಮದ್ ಅವರು ಯಾವಾಗ ನಿಧನರಾದರು?
ಕೆ.ಎಸ್. ನಿಸಾರ್ ಅಹಮದ್ ಅವರು 2020ರ ಮೇ 3ರಂದು ಬೆಂಗಳೂರಿನಲ್ಲಿ ನಿಧನರಾದರು.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.