ಈ ಲೇಖನದಲ್ಲಿ ಮಾಡಿದ್ದುಣ್ಣೋ ಮಾರಾಯ (madiddunno maharaya gade in kannada) ಈ ಗಾದೆಮಾತಿನ ವಿಸ್ತರಣೆಯ ಮೂಲಕ ಗಾದೆಯ ಅರ್ಥವನ್ನು ನೋಡೋಣ.
Table of Contents
ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
ಗಾದೆಗಳು ವೇದಗಳಿಗೆ ಸಮಾನ. ಇವು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ‘ಮಾಡಿದ್ದುಣ್ಣೋ ಮಾರಾಯ’ ಇದು ಕನ್ನಡದ ಅತ್ಯಂತ ಜನಪ್ರೇಯ ಗಾದೆಗಳಲ್ಲಿ ಒಂದಾಗಿದೆ.
ಮಾಡಿದ್ದು ಉಣ್ಣುವುದು ಎಂದರೆ ಕೇವಲ ನಾವು ತಯಾರಿಸಿದ ಅಡುಗೆ ಸೇವಿಸುವುದು ಎಂಬ ಅರ್ಥ ಮಾತ್ರವಲ್ಲ. ನಾವು ಮಾಡಿದ ಕಾರ್ಯಕ್ಕೆ ತಕ್ಕ ಪ್ರತಿಫಲ ಪಡೆಯುತ್ತವೆ ಎಂದು ಅರ್ಥ. ಒಳ್ಳೆಯ ಕಾರ್ಯ ಮಾಡಿದರೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ. ಕೆಟ್ಟ ಕಾರ್ಯ ಮಾಡಿದಾರೆ ಕೆಟ್ಟ ಪ್ರತಿಫಲ ದೊರೆಯುತ್ತದೆ. ದಾನ, ಧರ್ಮ ಮುಂತಾದ ಕಾರ್ಯಗಳಿಂದ ಗೌರವ, ಆದರಗಳು ದೊರೆಯುತ್ತವೆ. ಮೋಸ, ದರೋಡೆ ಮಾಡುವುದರಿಂದ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ. ಬಿತ್ತಿದ್ದನ್ನೇ ಕೊಯ್ಯುತ್ತೇವೆ ಎಂಬ ಗಾದೆಯು ಸಹ ಇದೆ ಅರ್ಥವನ್ನು ನೀಡುತ್ತದೆ.
ಮಾಡಿದ್ದುಣ್ಣೋ ಮಾರಾಯ ಗಾದೆ ವಿಸ್ತರಣೆ | Madiddunno Maharaya Gade Vistarane in Kannada
ಗಾದೆಗಳನ್ನು ವೇದಗಳಿಗೆ ಹೋಲಿಸಲಾಗಿದೆ. ಇವು ನಮ್ಮ ಹಿರಿಯಎಯ ಅನುಭವದ ಮಾತುಗಳು. ಗಾದೆಗಳಿಂದ ಕೇವಲ ಅರ್ಥ ವೈಶಿಷ್ಟ್ಯವಲ್ಲ. ನೀತಿಯು ಸಹ ಸಿಗುತ್ತದೆ. ಆದ್ದರಿಂದಲೇ ಜೀವನದಲ್ಲಿ ಗಾದೆಗಳು ಮಹತ್ವವನ್ನು ಪಡೆದಿದೆ.
ಅಡುಗೆಯಲ್ಲಿ ನಾವು ತಿಂಡಿ-ತಿನಿಸುಗಳನ್ನು ಹೇಗೆ ತಯಾರಿಸುತ್ತೇವೆಯೋ, ಅದರ ರುಚಿ ಹೇಗಿರುತ್ತದೆಯೋ ಅದನ್ನೇ ನಾವು ತಿನ್ನಬೇಕಾಗುತ್ತದೆ. ಅದನ್ನೇ ತಿನ್ನುವುದು ನಮ್ಮ ಹಣೆಯಲ್ಲಿ ಬರೆದಿರುತ್ತದೆ. ಅಂದರೆ ನಾವು ಮಾಡಿದ ಪಾಪ ಮತ್ತು ಪುಣ್ಯ ಎರಡನ್ನೂ ಅನುಭವಿಸಬೇಕಾಗಿರುವವರು ನಾವೇ ಎಂಬ ಹಿರಿಯರ ಉಪದೇಶದಂತೆ ನಡೆಯದವ ಮುಂದೊಂದು ದಿನ ಕಷ್ಟದಲ್ಲಿ ಸಿಕ್ಕಿ ಒದ್ದಾಡುತ್ತಾನೆ. ಉಪದೇಶವು ಆ ಕಾಲಕ್ಕೆ ಅವನಿಗೆ ನಾಟದಿರಬಹುದು. ಪಾಪದ ಕೂಪದಲ್ಲಿ ಹರಿದಾಡುವವನನ್ನು ನೋಡುವ ಅನುಭವಿಗಳು ಮಾಡಿದ್ದು ಎಲ್ಲಿ ಹೋಗಬೇಕು ಅನುಭವಿಸುತ್ತಿದ್ದಾನೆ ಎನ್ನುತ್ತಾರೆ.
ಏನೇ ಆಗಲಿ, ಒಳಿತಾಗಲಿ, ಕೇದಾಗಲಿ, ಪಾಪವಾಗಲಿ, ಪುಣ್ಯದ ಕೆಲಸವಾಗಲಿ, ಉಪಕಾರವಾಗಲಿ, ಅಪಕಾರವಾಗಲಿ, ಸಿಹಿಯಾಗಲಿ, ಕಹಿಯಾಗಲಿ, ರುಚಿಯಾಗಿರಲಿ, ಶುಚಿಯಾಗಿರಲಿ ಏನಿದ್ದರೂ ಅದು ಅವನ ಪಾಲಿನದೆ; ಅದನ್ನು ಅನುಭವಿಸುವವನು ಅವನೇ ಎಂಬ ಅರ್ಥವನ್ನು ಈ ಗಾದೆ ಸಾರುತ್ತದೆ.
ಮಾಡಿದ್ದುಣ್ಣೋ ಮಾರಾಯ ಗಾದೆ ಮಾತು | Madiddunno Maharaya Gade Matu in Kannada
ಪೀಠಿಕೆ: ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಾಗಾಡು ಎಂಬ ಮಾತಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು ಚಿಕ್ಕ ವಾಕ್ಯದಲ್ಲೇ ಹಿರಿದಾದ ಅರ್ಥವನ್ನು ನೀಡುತ್ತದೆ.
ಕನ್ನಡದ ಹಲವಾರು ಪ್ರಸಿದ್ಧ ಗಾದೆಗಳಲ್ಲಿ “ಮಾಡಿದ್ದುಣ್ಣೋ ಮಾರಾಯ” ಈ ಗಾದೆಯು ಕೂಡ ಒಂದು.
ವಿಷಯ ವಿವರಣೆ: ಪ್ರತಿಯೊಬ್ಬರು ಮಾಡುವ ಕಾರ್ಯಕ್ಕೆ ಅವರವರ ಮಾಡಿದ ಒಳ್ಳೆಯ ಕೆಲಸಕ್ಕೆ ಅನುಸಾರವಾಗಿ ಪ್ರತಿಫಲ ದೊರೆಯುತ್ತದೆ, ಭತ್ತ ಬಿತ್ಥಿದರೆ ಭತ್ತ ಬೆಳೆಯುತ್ತದೆ. ಜೋಳದ ಬೀಜ ಬಿಟ್ಟಿದರೆ ಜೋಳದ ಗಿಡ ಬೆಳೆಯುತ್ತದೆ. ಅದೇ ರೀತಿ ನಾವು ಏನು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಪ್ರತಿಫಲವನ್ನು ನಾವು ಪಡೆಯುತ್ತೇವೆ.
ಆದ್ದರಿಂದ ನಾವು ಜೀವನದ ತುಂಬಾ ಕೆಟ್ಟ ಕೆಲಸವನ್ನೆ ಮಾಡಿ ಕೆಟ್ಟ ಫಲವನ್ನು ಅನುಭವಿಸಿ ಸಂಕಟಪಡುವುದಕ್ಕಿಂತ ಉತ್ತಮ ಕೆಲಸವನ್ನು ಮಾಡಿ ನಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು.
ದಾನ-ಧರ್ಮ ಮಾಡಿದಾತನಿಗೆ ಒಳ್ಳೆಯ ಗೌರವಾದರಗಳು, ಪುಣ್ಯವು ದೊರೆಯುತ್ತದೆ. ಕಳ್ಳತನ, ಕೊಲೆ, ಮೋಸ, ದಾಂಧಲೆ ಮಾಡಿದ ದುಷ್ಟಾನು ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಲೇಬೇಕಾಗುತ್ತದೆ.
‘ಉಪ್ಪು ತಿಂದವ ನೀರು ಕುಡಿಯಲೇ ಬೇಕು, ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇ ಬೇಕು’, ‘ಏನು ಬಿತ್ತುತ್ತೀಯೋ ಅದನ್ನೇ ಕೊಯ್ಯುತ್ತೀಯಾ’ ಎಂಬ ಗಾದೆಗಳು ಕೂಡ ಇದೇ ಅರ್ಥವನ್ನು ನೀಡುತ್ತವೆ.
ಉಪಸಂಹಾರ: ಇಂತಹ ಹಿರಿಯರ ಅನುಭವದ ನುಡಿಮುತ್ತುಗಳನ್ನು ವಿಧ್ಯಾರ್ಥಿಗಳಾದ ನಾವು ಜೀವನದಲ್ಲಿ ಅಳವಡಿಸಿಕೊಂಡು ನಡೆಯೋಣ.
ಗಾದೆ ಮಾಡಿದ್ದುಣ್ಣೋ ಮಾರಾಯ | Gade Madiddunno Maharaya Meaning in Kannada
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಕೆಲವೊಮ್ಮೆ ನಮ್ಮಿಂದ ಕೇವಳು ಕಾರ್ಯಗಳು ನಡೆದು ಹೋಗುತ್ತವೆ. ನಾವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ. ಹಾಗೆ ನಾವು ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ. ಅವುಗಳಲ್ಲಿ ಕೆಲವು ನಮ್ಮ ಕೈಮೀರಿ ನಡೆದವಾದರೆ ಇನ್ನೂ ಕೆಲವು ನಮಗೆ ಗೊತ್ತಿದ್ದೆ ಆಗಿರುತ್ತದೆ.
ಹೀಗೆ ನಡೆದ ಕಾರ್ಯಗಳು ಕೊಡುವ ಫಲ ಕೂಡ ಕೆಲವೊಮ್ಮೆ ಒಳ್ಳೆಯದು ಮತ್ತೆ ಕೆಲವೊಮ್ಮೆ ಕೆಟ್ಟದ್ದು ಆಗಿರುತ್ತದೆ. ಈ ಒಳಿತು ಕೆಡುಕು ಎನ್ನುವುದು ಕೇವಲ ನಮಗೆ ಸೀಮಿತವಾಗಿದ್ದಾರೆ ಹೇಗೋ ನಡೆದು ಹೋಗುತ್ತದೆ. ಆದರೆ ನಾವು ಮಾಡಿದ ಕಾರ್ಯದ ಫಲ ಇನ್ನೊಬ್ಬರ ಬದುಕಿಗೆ ತಾಗುವಂತಿದ್ದರೆ ಅದು ಒಳಿತಿಗಳ್ಳದಿದ್ದರೆ ಆಗ ನಮ್ಮಲ್ಲಿ ಸಾಮಾನ್ಯವಾಗಿ ‘ಮಾಡಿದ್ದುಣ್ಣೋ ಮಾರಾಯ’ ಎನ್ನುವ ಮಾತನ್ನು ಬಳಸುತ್ತೇವೆ.
ನಮ್ಮಿಂದ ಯಾರಿಗಾದರೂ ಕೇಡಾದರೆ ಆ ದಿನಕ್ಕೆ ನಾವು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಮುಂದೊಂದು ದಿನ ಅಕಸ್ಮಾತ್ ಏನಾದರೂ ತೊಂದರೆ ಒಳಗಾದರೂ ಕೂಡ ಈ ಮಾತನ್ನು ಬಳಸುತ್ತೇವೆ. ಈ ಗಾದೆ ಮಾತಿನ ಅರ್ಥ ಬಹಳ ಸುಲಭ. ನಾವು ಮಾಡಿದ ಕಾರ್ಯಗಳ ಫಲ ನಮ್ಮನ್ನು ಯಾವಾಗಲೂ ಬಿಡದೆ ಹಿಂಬಾಲಿಸುತ್ತದೆ ಎಂಬುದನ್ನು ಈ ಗಾದೆಮಾತು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ:
- ಮನಸಿದ್ದರೆ ಮಾರ್ಗ ಗಾದೆ ವಿಸ್ತರಣೆ | Manasiddare Marga Gaade in Kannada
- ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ವಿಸ್ತರಣೆ | Kumbaranige Varusha Donnege Nimisha
ನಮ್ಮ ಈ ಮಾಡಿದ್ದುಣ್ಣೋ ಮಾರಾಯ ಗಾದೆ ವಿಸ್ತರಣೆಯ ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.